ಸಾಮಾಜಿಕವಾಗಿ ನಾವು ಒಂದಾಗಿರಲು ಕೆಲವು ಸೂತ್ರಗಳು_


 ವಿ.ಸೂ: ಈ ಲೇಖನದಲ್ಲಿ ನನ್ನಂತಿರುವ ಅಂಗವಿಕಲರನ್ನು ವಿಶಿಷ್ಟಚೇತನರಾಗಿಸುವ ಕೆಲವು ಸೂತ್ರಗಳನ್ನು ಬರೆಯುವ ಪ್ರಯತ್ನ ಮಾಡಿದ್ದೇನೆ. ಹೀಗಾಗಿ ‘ಅಂಗವಿಕಲ’ ಹಾಗೂ ‘ವಿಶಿಷ್ಟಚೇತನ’ ಈ ಎರಡು ಪದಗಳ ಅರ್ಥವನ್ನು ಈ ಕೆಳಗೆ ಓದಿಕೊಂಡು ಬಳಿಕ ಲೇಕನವನ್ನು ಅರ್ಥಮಾಡಿಕೊಳ್ಳಬೇಕೆಂದು ತಮ್ಮಲ್ಲಿ ಮನವಿ.
೧. 'ಅಂಗವಿಕಲ' ದೇಹದ ಯಾವುದಾದರು ಒಂದು ಅಥವಾ ಹೆಚ್ಚು ಅಂಗಗಳು 40 ಕ್ಕಿಂತ ಹೆಚ್ಚು ಊನವಾಗಿದ್ದು ಅದರಿಂದ ತನ್ನ ದೈನಂದಿನ ಚಟುವಟಿಕೆಗಳನ್ನು ತಾನೆ ಮಾಡಿಕೊಳ್ಳಲು ಅಸಮರ್ಥನಾಗಿದ್ದರೆ ಆ ವ್ಯಕ್ತಿಯನ್ನು ಅಂಗವಿಕಲ ಎಂದು ಕರೆಯಬಹುದು. ದೈಹಿಕ ಮತ್ತು ಮಾನಸಿಕ ಬೆಳವಣಿಗೆಯಲ್ಲಿನ ಕುಂಠಿತ ಮತ್ತು ದುರ್ಬಲತೆಯ ಕಾರಣಗಳಿಂದ ಬಳಲುವವನನ್ನೂ ಸಹ ಅಂಗವಿಕಲ ಎನ್ನಬಹುದು
೨. 'ವಿಶಿಷ್ಟಚೇತನ' ದೈಹಿಕ/ಮಾನಸಿಕ ನ್ಯೂನ್ಯತೆಯನ್ನು ಸವಾಲೆಂದು ತಿಳಿದು ತನ್ನ ಪ್ರತಿಭೆಯ ಮೂಲಕ ಅಂಗವಿಕಲೇತರರ ಸಮಾನವಾಗಿ ಬಾಳಲು ಯತ್ನಿಸುವವ ವಿಶಿಷ್ಟಚೇತನ.

ಅಂಗವಿಕಲರಾದ ನಾವು ಸಾಮಾಜಿಕವಾಗಿ ನಿಕೃಶ್ಟಕ್ಕೆ ಒಳಗಾಗಿರುವುದು ನಿಜ. ಅಂತೆಯೆ ಈ ಪರಿಸ್ಥಿತಿ ಕಡಿಮೆಯಾಗುತ್ತಿದೆ ಎಂಬುವುದೂ ಸತ್ಯ. ನಾವು ಅಂಗವಿಕಲೇತರರೊಡನೆ ಒಂದಾಗಿ ಸಮವಾಗಿ ಬದುಕ ಬೇಕೆಂದರೆ ನಮ್ಮಲ್ಲಿ ಯಾವಾಗಲು ಛಲದ ಧೋರಣೆ ಎಚ್ಚರವಾಗಿಯೇ ಇರುವಂತೆ ನೋಡಿಕೊಳ್ಳಬೇಕು. ಹೀಗೆ ಎಚ್ಚರವಹಿಸಿದರೆ ಯಾರಾದರು ನಿಂದಿಸಿದರೂ ನಮಗೆ ಮಾನಸಿಕ ಖಿನ್ನತೆ ಆವರಿಸುವುದೇ ಇಲ್ಲ ಎಂದು ನನ್ನ ಅನಿಸಿಕೆ. ಈ ಕೆಳಗೆ ನನಗೆ ತೋಚಿದ ಕೆಲವು ಸೂತ್ರಗಳನ್ನು ಬರೆದಿದ್ದೇನೆ. ತಮಗೆ ಇಷ್ಟವಾಗದಿದ್ದರೆ ತಪ್ಪನ್ನು ತಿದ್ದಿಕೊಳ್ಳಲು ಅವಕಾಶವನ್ನು ಕಲ್ಪಿಸಿ.

I. ವಯಕ್ತಿಕ ಬದಲಾವಣೆಗಳು_
ಸಾಮಾಜಿಕವಾಗಿ ಮಾನವೀಯ ಮೌಲ್ಯಗಳನ್ನು ಎಲ್ಲರು ಹೊಂದಿದ್ದಾರೆಂದು ಭಾವಿಸದೆ ನಮ್ಯ ಸ್ವಭಾವಕ್ಕೆ ನಾವು ನಮ್ಮ ಮನಸ್ಸನ್ನು ಅಣಿ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ
೧. ಒಳ್ಳೆಯದೆ ಆಗಲಿ ಕೆಟ್ಟದ್ದೇ ಆಗಲಿ ಎಲ್ಲವನ್ನು ಲೋಕಾನುಭವವೆಂದು ತಿಳಿದು ತನ್ನಷ್ಟಕ್ಕೆ ಸಮಾಧಾನಪಡುವ ಗುಣವನ್ನು ರೂಢಿಸಿಕೊಳ್ಳುವ ನಿಟ್ಟಿನಲ್ಲಿ ಅಳವಡಿಸಿಕೊಳ್ಳುವುದರಲ್ಲಿನ ಮಾನಸಿಕ ಸ್ಥಿತಿಯಲ್ಲಿನ ಬದಲಾವಣೆಯನ್ನು ಮಾಡಿಕೊಳ್ಳಬೇಕು.
೨. ತಿನ್ನುವ ಅಹಾರವು ಸಪ್ಪೆಯಾಗಿರಲಿ ಅಥವಾ ರುಚಿಕರವಾಗಿಯೇ ಇರಲಿ ಉತ್ತಮ ಆರೋಗ್ಯಕ್ಕೆ ಪೌಷ್ಟಿಕ ಅಹಾರ ಪದ್ಧತಿಯೆ ಮುಖ್ಯವೆಂದು ತಿಳಿದುಕೊಳ್ಳುವಲ್ಲಿನ ಜೈವಿಕ ಅವಶ್ಯಕತೆಯಲ್ಲಿನ ಬದಲಾವಣೆಯನ್ನು ಮಾಡಿಕೊಳ್ಳಬೇಕು.
೩. ಸಮ ಮನಸ್ಕರಲ್ಲಿ ಭಾವನೆಗಳಿಗೆ ಬೆಲೆ ಇರುತ್ತದೆ ಮತ್ತು ಕಾರ್ಯ ಯೋಜನೆಗೆ ಅನುಕೂಲಕರ ವಾತಾವರಣ ಸಾಧ್ಯವಾಗುತ್ತದೆ ಎಂದು ತಿಳಿದುಕೊಂಡು ಯೋಚನ ಲಹರಿಯಲ್ಲಿ ಮಾಡಿಕೊಳ್ಳಬೇಕಾಗಿರುವ ಬದಲಾವಣೆ.
೪. "ಕಲಿಕೆ-ಸ್ಪಷ್ಟನೆ-ಕಲಿಕೆ-ಕಲಿಸುವಿಕೆ-ಮೌಲ್ಯಮಾಪನ-ಕಲಿಕೆ-ಕಲಿಸುವಿಕೆ-ಸ್ಪಷ್ಟನೆ" ಈ ಸೂತ್ರವನ್ನು ಯಾರೇ ಅಳವಡಿಸಿಕೊಂಡಲ್ಲಿ ಸಂಗತಿಯನ್ನು ಅರ್ಥಮಾಡಿಕೊಳ್ಳುವ, ಸನ್ನಿವೇಶಕ್ಕೆ ಹೊಂದಿಕೊಳ್ಳುವ, ಸನ್ನಿವೇಶವನ್ನು ಅರ್ಥಯಿಸುವ, ಸ್ವಾಭಿವೃದ್ಧಿ ಹೊಂದುವ ಕೌಶಲ್ಯಗಳನ್ನು ಸಂಶಯವಿಲ್ಲದೆ ವೃದ್ಧಿಸಿಕೊಳ್ಳಬಹುದೆಂಬ ದೃಢ ವಿಶ್ವಾಸದಲ್ಲಿನ ಬದಲಾವಣೆಯನ್ನು ಖಂಡಿತವಾಗಿಯೂ ಕಾಣಬಹುದು.

II. ವೃಂದಗಳ ಜೀವನದಲ್ಲಿನ ಸಂಬಂಧ_
೧. ಕುಟುಂಬ:
ತನ್ನ ಸದಸ್ಯನ ದೈಹಿಕ ದೌರ್ಬಲ್ಯವನ್ನು ಅರಿತು ಆ ದೌರ್ಬಲ್ಯವು ನೈಸರ್ಗಿಕ ವೈವಿಧ್ಯತೆ ಎಂದು ಭಾವಿಸುವ ಕುಟುಂಬವಾಗಿದ್ದರೆ ಅಂಗವಿಕಲರಿಗೆ ಕ್ಲಿಷ್ಟತೆ ಒದಗದು. ಆದರೆ ದೈಹಿಕ ದೌರ್ಬಲ್ಯವನ್ನು ನೈಸರ್ಗಿಕವಾದದ್ದಲ್ಲ ಯಾವುದೋ ಶಾಪ ಎಂದು ಭಾವಿಸುವ ಕುಟುಂಬವಾಗಿದ್ದರೆ ಆ ಕುಟುಂಬದ ಅಂಗವಿಕಲ ಸದಸ್ಯನಿಗೆ ಬಾಳಲು ತೊಡಕಾಗುತ್ತದೆ. ಈ ಸಮಯದಲ್ಲಿ ಅಂಗವಿಕಲ ಸದಸ್ಯನ ಮನೆಗೆ ಹತ್ತಿರ ವಾಸವಾಗಿರುವ ಅಂಗವಿಕಲೇತರ/ಅಂಗವಿಕಲ ವ್ಯಕ್ತಿಗಳ ನೆರವು ಅವಶ್ಯಕ. ಈ ವ್ಯಕ್ತಿಗಳು ಅಂಗವಿಕಲನ ಕುಟುಂಬದವರೊಡನೆ ಪರಸ್ಪರ ಚರ್ಚೆಯ ಮೂಲಕ ಅಂಗವಿಕಲನ ತರಬೇತಿ/ಜಿವನೋಪಾಯ ಮತ್ತು ಸಂದರ್ಭಕ್ಕನುಸಾರವಾಗಿ ಯಾವುದು ಅಗತ್ಯವಿರುತ್ತೋ ಅದನ್ನು ನೆರವೇರಿಸಲು ನಿರ್ಧಾರವನ್ನು ಕೈಗೊಳ್ಳುವುದು ಅಗತ್ಯ. ಅಂಗವಿಕಲರು ಸಾಧ್ಯವಾದಷ್ಟು ತಾಂತ್ರಿಕ ಸವಲತ್ತುಗಳನ್ನಾದರೂ ಬಳಸಿಕೊಂಡು ದಿನನಿತ್ಯದ ಚಟುವಟಿಕೆಗಳಲ್ಲಿ ಅವಲಂಬಿಸಿರುವ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕು.
೨. ಸಮುದಾಯ:
ಸಮುದಾಯದ ಜನರೊಂದಿಗೆ ಮಾತನಾಡುವಾಗ ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡುವವರೆಂದು ಕಂಡುಬರುವವರೊಂದಿಗೆ ಮಾತ್ರ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬೇಕು. ಸಮುದಾಯದಲ್ಲಿ ಜಾತಿಗಿಂತ ಮಾನವೀಯ ಮೌಲ್ಯಗಳಿಗೆ ಹೆಚ್ಚು ಆಧ್ಯತೆ ಇದೆ ಎಂಬುವುದನ್ನು ಗಮನದಲ್ಲಿಟ್ಟುಕೊಂಡು ಎಲ್ಲರೊಡನೆ ವ್ಯವಹರಿಸಬೇಕು. ಸಹಕಾರದ ಜೀವನದ ಬದುಕನ್ನು ಅಳವಡಿಸಿಕೊಳ್ಳಬೇಕು. ಶ್ರಮರಹಿತವಾಗಿ ದುಡ್ಡನ್ನು ಸಂಪಾದಿಸುವುದನ್ನು ಮಾಡಲೇಬಾರದು. ಅಂದರೆ ಭಿಕ್ಷೆಯನ್ನು ಬೇಡಲೇಬಾರದು. ಅಂಗವಿಕಲತೆಗೆ ನಿಯೋಜಿಸಿರುವ ಮತ್ತು ಮನಸ್ಸಿಗೆ ಖೇದವನ್ನುಂಟು ಮಾಡುವ ಮಾತನ್ನು ಯಾರೇ ಆಡಿದರು ಕೆಟ್ಟದ್ದನ್ನು ಪಡೆಯದ ಯೋಗಿಯಂತೆ ಇರಬೇಕು. ಉದ್ಯೋಗದ ಸ್ಥಳದಲ್ಲಿ ಅನವಶ್ಯಕವಾಗಿ ಒಬ್ಬರ ಪರ ಮಾತನಾಡಲೇಬಾರದು ಮತ್ತು ಆದಷ್ಟು ಕೆಲಸಗಳನ್ನು ನಿರ್ವಹಿಸಬೇಕು.
೩. ಶಾಲಾ-ಕಾಲೇಜು ವೃಂದ:
ದ್ವೇಷ, ಅಸೂಹೆ, ಪ್ರಾಬಲ್ಯ ಲೈಂಗಿಕ ಬಯಕೆ ಹೀಗೆ ಇನ್ನುಮುಂತಾದ ಪ್ರವೃತ್ತಿಗಳು ಪ್ರಕೃತಿದತ್ತ ಗುಣಗಳೇ ಆದರು ಅವುಗಳಿಲ್ಲದೆ ಇರಬೇಕೆಂಬ ಮಾನವತ್ವದ ಗುಣಗಳು ಯೋಗಿಯಾದವರಿಗೆ ಮಾತ್ರ ಸಾಧ್ಯವಾಗಿರುವುದರಿಂದ ಆದಷ್ಟು ಇತರರಿಗಿಂತ ಸಹನೆಯಿಂದಿರುವುದನ್ನು ರೂಢಿಸಿಕೊಳ್ಳಬೇಕು. ತಿಳಿಗಂಪನ ಮುಖಿಯಾಗಿ, ಸ್ನೇಹ ಜೀವಿಯಾಗಿ ಕಷ್ಟವೆನಿಸಿದರೂ ಗೆಳೆಯ/ಗೆಳತಿಯರೊಡನೆ ಅನುನಯ ಸಂಬಂಧವನ್ನು ಉಳಿಸಿಕೊಳ್ಳಲೇಬೇಕು. ಜ್ಞಾನದ ಹಾಗೂ ಹಣದ ವಿಷಯದಲ್ಲಿ ಗೆಳೆತನವನ್ನು ತೂಗಿ ನೋಡಬಾರದು. ಒಳ್ಳೆಯವರು ನಮಗಾಗಿ ನೀಡಿದ್ದಾರೆ. ಅಂತೆಯೆ ನಾವೂ ಪ್ರತಿಭೆ ಉಳ್ಳವರಿಗೆ ಶ್ರಮಿಗಳಿಗೆ ಆಗುವ ನೆರವನ್ನು ಒದಗಿಸಲೇಬೇಕು.

No comments:

Post a Comment