fly-by-night ಹಗರಣಗಳು ಹೆಚ್ಚಾಗುತ್ತಿವೆ ಮೋಸ ಹೋಗದಿರಿ!

ಸಕರಾತ್ಮಕತೆಯಿಲ್ಲದ ವ್ಯವಹಾರ ಪದ್ಧತಿ ಸುರಕ್ಷಿತವಲ್ಲ: ಯಾವುದೇ ಒಂದು ಕಂಪನಿಯ ವ್ಯವಹಾರವು ಹೂಡಿಕೆದಾರರಿಗೂ ಮತ್ತು ಗ್ರಾಹಕರಿಗೂ ಭರವಸೆಯಾಗಿರಬೇಕು ಮತ್ತು ತನ್ನ ಆರ್ಥಿಕ ಚಟುವಟಿಕೆಗಳಲ್ಲಿ ವಿಶ್ವಾಸರ್ಹತೆಯನ್ನು ಉಳಿಸಿಕೊಳ್ಳಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ online ಮೂಲಕ ಜನರಿಂದ ಹಣ ಪಡೆದು ವಂಚಿಸುವ ಜಾಲ ಸಕ್ರೀಯವಾಗುತ್ತಿದೆ. 6000000000 ರೂಗಳಷ್ಟು ಹಣವನ್ನು ಹೂಡಿಕೆದಾರರಿಂದ ಪಡೆದು ಅಂದಾಜು ೨ಲಕ್ಷ ಹೂಡಿಕೆದಾರರಿಗೆ ವಂಚಿಸಿ ಕಣ್ಮರೆಯಾದ Adooye.com, ಮೂರು ಲಕ್ಷ ಹೂಡಿಕೆದಾರರಿಗೆ ಮೋಸಗೊಳಿಸಿದ Hoshisms.com, hitasiaonline ಮತ್ತು ಬಲೂ ಚಿಪ್ಸ್‌ ಕಂಪನಿ ಎಂದು ವಂಚಿಸಿದ EPC Wallet (Easy Pay Cash) ರೀತಿಯ ವೆಬ್‌ ಆಧಾರಿತ ಜಾಲಗಳು ಇಂತಹ ಘಟನೆಗಳಿಗೆ ಸಾಕ್ಷಿಯಾಗಿವೆ ಮತ್ತು fly-by-night ಎಂಬ ಹಗರಣಗಳು ಹೆಚ್ಚುತ್ತಿವೆ. ಈ ನೋಂದಾಯಿತವಲ್ಲದ ಕಂಪನಿಗಳ ವಿರುದ್ಧ ಪೋಲಿಸ್‌ ದೂರು ದಾಖಲಾಗಿದ್ದರೂ, ವಂಚನೆಗೆ ಒಳಗಾದವರಿಗೆ ಪರಿಹಾರ ದೊರೆತಿಲ್ಲ. ಈ ಮಧ್ಯೆ ಇತ್ತೀಚಿನ ದಿನಗಳಲ್ಲಿ ಮತ್ತೊಂದು fly-by-night ಹಗರಣವಾಗಬಲ್ಲ ಲಕ್ಷಣವುಳ್ಳ ಜಾಲವೊಂದು ಸಕ್ರೀಯವಾಗಿದೆ. ಅದೇ Crowd1.com ಜಾಲತಾಣ. ಕ್ರೌಡ್‌೧ ಸ್ವೀಡನ್‌ ಮೂಲದ ಕಂಪನಿ. ಹೂಡಿಕೆದಾರರಿಂದ ಪಡೆದ ಹಣವನ್ನು online ಆಧಾರಿತ ಜೂಜಾಟಗಳಿಗೆ ವಿನಿಯೋಗಿಸುತ್ತಿದೆ. ಆದಾಯ ತರಬಲ್ಲ ಯೋಜನೆಗಳು ಇವೆ ಎಂದು ಸದಸ್ಯತ್ವ ನೋಂದಣಿಗೆ ಅವಕಾಶವನ್ನು ಕಲ್ಪಿಸಿ ಶ್ರೇಣಿಕೃತ ಮಾದರಿಯಲ್ಲಿ (pyramid structure) ಲಾಭವನ್ನು ನೀಡುತ್ತೇವೆ ಎಂದು ಘೋಷಿಸಿಕೊಂಡಿದೆ. ಅದಾಗ್ಯೂ, ಭಾರತದಲ್ಲಿ ನೋಂದಾಯಿತವಲ್ಲದ, ರಿಸರ್ವ್‌ ಬ್ಯಾಂಕ್‌ ಮೂಲಕ ಮಾನ್ಯತೆ ಪಡೆಯದ ಯಾರೊಬ್ಬರಿಗೂ ಖಾತ್ರಿ ನೀಡಲಾರದ ಕಂಪನಿಗೆ ಹಣವನ್ನು ಹಾಕಬಾರದು. ಈಗಾಗಲೇ ವಿದೇಶಗಳಲ್ಲಿ ಈ ಕಂಪನಿಯನ್ನು ಉತ್ತೇಜಿಸಿದ್ದಕ್ಕಾಗಿ ಕೆಲವರನ್ನು ಪೋಲಿಸರು ಬಂಧಿಸಿದ್ದಾರೆ. bitcoin ಮಾದರಿಯಲ್ಲಿ ಇದರ ಹಣದ ಚಲಾವಣೆ ನಡೆಯುತ್ತದೆ. ನಮ್ಮ ರಾಜ್ಯದ ಜನರು ಕೂಡ ಈಗಾಗಲೇ ಹಣವನ್ನು ಹೂಡಿದ್ದಾರೆ, ವಿನಿಯೋಗಿಸುವಂತೆ ಮತ್ತೊಬ್ಬರಿಗೂ ಪ್ರೇರಣೆ ನೀಡುತ್ತಿದ್ದಾರೆ. ದಯವಿಟ್ಟು ಕಂಪನಿಯ ಅಸಲಿಯನ್ನು ಕಂಡು ಬಳಿಕವೇ ಹಣವನ್ನು ವಿನಿಯೋಗಿಸಿರಿ. ಕೆಲವು ಪ್ರಶ್ನೆಗಳಿಗೆ ಉತ್ತರ ಪಡೆಯಬೇಕಿದೆ! ಈ ಕಂಪನಿಯನ್ನು ಉತ್ತೇಜಿಸುವವರೂ ಇರುವಂತೆ ನಿಂದಿಸುವವರೂ ಇದ್ದಾರೆ. ಆದರೆ ಹೂಡಿಕೆದಾರರು ಈ ಕೆಲವು ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಬೇಕಿದೆ. ಅವು ಯಾವವೆಂದರೆ, ೧. ಕಂಪನಿಯ ಸೇವೆಗಳು-ಉತ್ಪನ್ನಗಳು ಸಮಾಜಕ್ಕೆ ಹಿತಕರವಾಗಿವೆಯೆ? ೨. ಹೂಡಿಕೆಯಾದ ಹಣವು ಸಕರಾತ್ಮಕ ಮತ್ತು ನೈತಿಕ ಮೌಲ್ಯದ ಚೌಕಟ್ಟಿನಲ್ಲಿ ಬಳಕೆಯಾಗುತ್ತವೆಯೆ? ೩. ಗ್ರಾಹಕರ ಮತ್ತು ಹೂಡಿಕೆದಾರರ ಕುಂದು-ಕೊರತೆಗಳನ್ನು ನಿವಾರಿಸಲು ನಮ್ಮ ದೇಶದಲ್ಲಿ ಕಛೇರಿ ಇವೆಯೆ? ೪. ಸರ್ಕಾರದಿಂದ ಪರವಾನಗಿ ಪಡೆದಿದೆಯೆ? ೫. ನಾವು ಹಾಕುವ ಹಣವು ಜಮೆಯಾಗುವ ಬ್ಯಾಂಕ್‌ ವಿವರಗಳು ನಮಗೆ ಎಲ್ಲಿ ದೊರೆಯುತ್ತವೆ? ೬. ಕಂಪನಿಯ ಸಂಸ್ಥಾಪಕ ಹಾಗೂ ಕಂಪನಿಯ ಆಡಳಿತ ಸದಸ್ಯರ ವಾಸದ ಸ್ಥಳ ಯಾವುದು? ನಿರ್ದಾರ ನಿಮಗೆ: ಈ ಕಂಪನಿಯ ಮೇಲೆ ಹಣವನ್ನು ಹೂಡುವ ಕಡೆಯ ತೀರ್ಮಾನ ನಿಮ್ಮದೇ ಆಗಿದೆ. ಅದಾಗ್ಯೂ ಎಚ್ಚರವಹಿಸಬೇಕೆಂಬ ಕಾಳಜಿ ಮಾತ್ರ ಇಲ್ಲಿ ವ್ಯಕ್ತಪಡಿಸಲಾಗಿದೆ. ಹೆಚ್ಚಿನ ವಿವರಗಳಿಗೆ: 1. ಈ ಕಂಪನಿಯನ್ನು ಉತ್ತೇಜಿಸುವ ಜಾಲತಾಣ: https://www.heroesmind.com/crowd1-review/ ೨. ಈ ಕಂಪನಿಯ ನೈಜತೆಗಾಗಿ: https://www.quora.com/Is-Crowd1-business-a-scam 3. ಈ ಕಂಪನಿಯ ಆದಾಯ ನೀತಿಯನ್ನು ತಿಳಿದುಕೊಳ್ಳಲು ಕಂಪನಿಯ ಜಾಲತಾಣವನ್ನು ನೋಡಿರಿ. https://crowd1.com/income-disclaimer

ಆತ್ಮನಿರ್ಭರ ಭಾರತ ಯೋಜನೆಯಡಿ ಬೀದಿ ವ್ಯಾಪಾರಿ ಸಾಲ ಪಡೆಯುವ ಕುರಿತು

(PM Street Vendor’s AtmaNirbhar Nidhi) ಮೊದಲು: www.pmsvanidhi.mohua.gov.in ಜಾಲತಾಣವನ್ನು ತೆರೆಯಬೇಕು. 2. ಅಪ್ಲೈ ಫಾರ್ ಎ ಲೋನ್  ಎಂಬ ಆಯ್ಕೆ ಮೇಲೆ ಕ್ಲಿಕ್ಕಿಸಿ. 3. ನಿಮ್ಮ ಮೊಬೈಲ್ ನಂಬರ್ ಮತ್ತು ಕ್ಯಾಪ್ಚಾವನ್ನು ದಾಖಲಿಸಿ. ಅಥವಾ ಅಂಧ ವ್ಯಕ್ತಿಗಳು  audio ಕ್ಯಾಪ್ಚಾ ನಮೂದಿಸಿ ಮೊಬೈಲ್ಗೆ  otp ಪಡೆದು ನಮೂದಿಸಿ. 4 ಕೆಟಗರಿ ಆಯ್ಕೆ ಮಾಡಿಕೊಂಡು ಅಗತ್ಯ ವಿವರಗಳನ್ನು ಭರ್ತಿ ಮಾಡಿ. ಕ್ಯಾಟೆಗರಿಗಳು ಇಂತಿವೆ... a. Street vendors in possession of Certificate of Vending (CoV) / Identity Card issued by Urban Local Bodies (ULBs)  B. Street vendors who have been identified in the survey but have not been issued Certificate of Vending / Identity Card  C. Street vendors left out of the ULB led identification survey or who have started vending after completion of the survey and have been issued Letter of Recommendation (LoR) to that effect by the ULB / Town Vending Committee (TVC)  D. Street vendors of surrounding development/ peri-urban / rural areas vending in the geographical limits of the ULBs and have been issued Letter of Recommendation (LoR) to that effect by the ULB / TVC ಅನುಮತಿಗೆ ಸಂಬಂಧಿಸಿದ ಕೆಲವು ಮಾಹಿತಿಯನ್ನು ಭರ್ತಿಗೊಳಿಸಿರಿ.  5 ಸಬ್ಮಿಟ್ ಬಟನ್ ಕ್ಲಿಕ್ ಮಾಡಿ. ಫಲಾನುಭವಿಗಳಿಗೆ 10,000 ರೂಪಾಯಿ ತನಕ ಕೆಲಸದ ಬಂಡವಾಳ ರೂಪದಲ್ಲಿ ಸಾಲ ಸಿಗಲಿದೆ. ಇದನ್ನು ಒಂದು ವರ್ಷದ ಅವಧಿಯಲ್ಲಿ ಮಾಸಿಕ ಕಂತುಗಳ ರೂಪದಲ್ಲಿ ಮರುಪಾವತಿಸಬೇಕು. ಸರಿಯಾದ ಸಮಯದಲ್ಲಿ ಅಥವಾ ಅದಕ್ಕೂ ಮುಂಚಿತವಾಗಿಯೇ ಸಾಲ ಮರುಪಾವತಿ ಮಾಡಿದರೆ ನೇರ ನಗದು ವರ್ಗಾವಣೆ ಯೋಜನೆ ಮೂಲಕ ಫಲಾನುಭವಿಯ ಬ್ಯಾಂಕ್ ಖಾತೆಗೆ ಶೇಕಡ 7 ವಾರ್ಷಿಕ ಬಡ್ಡಿಯ ಸಹಾಯಧನ ಜಮೆಯಾಗಲಿದೆ. ಮುಂಚಿತವಾಗಿ ಸಾಲ ಮರುಪಾವತಿ ಮಾಡಿದರೆ ಯಾವುದೇ ಶುಲ್ಕ ಅಥವಾ ದಂಡ ಪಾವತಿಸಬೇಕಾಗಿಲ್ಲ. ಡಿಜಿಟಲ್ ವಹಿವಾಟು ನಡೆಸಿದರೆ ಇದೇ ಯೋಜನೆಯಲ್ಲಿ ಫಲಾನುಭವಿಯ ಖಾತೆಗೆ ಪ್ರತಿ ತಿಂಗಳೂ 100 ರೂಪಾಯಿ ತನಕ ಕ್ಯಾಶ್ ಬ್ಯಾಕ್ ಇನ್ಸೆಂಟಿವ್ ಲಭ್ಯವಾಗುತ್ತದೆ. ಅರ್ಹತೆ ಏನು: ಬೀದಿಬದಿ ವ್ಯಾಪಾರಿಗಳ ಕಾಯ್ದೆ 2014ರ ಪ್ರಕಾರ ಬೀದಿಬದಿ ವ್ಯಾಪಾರಸ್ಥರು ಸ್ಥಳೀಯಾಡಳಿತದ ಪರವಾನಗಿ ಅಥವಾಗ ಗುರುತಿನ ಚೀಟಿ ಹೊಂದಿರಬೇಕು. ಅದರಲ್ಲಿ ಸರ್ವೇ ರೆಫರೆನ್ಸ್ ನಂಬರ್ ಇದ್ದು, ಅದನ್ನು ಸಾಲದ ಅರ್ಜಿಯಲ್ಲಿ ನಮೂದಿಸಬೇಕಾಗುತ್ತದೆ.

ಸುಗಮ್ಯ ಭಾರತದ ಕಟ್ಟಡಗಳಿಗೆ ಖಾಸಗಿ ಸಲಹಾ ಸಂಸ್ಥೆಯ ಪರಿಚಯ

ನಮಸ್ತೆ ಸ್ನೇಹಿತರೇ,
ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಇಲಾಖೆಯು ಕಟ್ಟಡ ಸಂಹಿತೆಯನ್ನು ೨೦೧೭ರಲ್ಲಿ ಜಾರಿಗೊಳಿಸಿದೆ. ಈ ಸಂಹಿತೆಗೆ ಅನುಸಾರವಾಗಿ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸ್ನೇಹಿ ಕಟ್ಟಡವನ್ನು ಕಟ್ಟಿಸಿಕೊಳ್ಳಲು ಪೂರಕವಾದ ಜಾಲತಾಣದ ಅವಶ್ಯಕತೆ ಇದೆ ಎಂದು ನಿಮಗೆ ಅನಿಸಿದ್ದಲ್ಲಿ ನೀವು ಖಂಡಿತವಾಗಿಯೂ Accessibility India Counsultants ಸಂಸ್ಥೆಯ 
https://www.accessibilityindia.com/
ಜಾಲತಾಣಕ್ಕೆ ಭೇಟಿ ನೀಡಬಹುದು. ಇಲ್ಲಿ ಅಂಗವಿಕಲರ ಸ್ನೇಹಿ ಕೆಲವು ಕಟ್ಟಡ ಸಾಮಾಗ್ರಿಗಳು ದೊರೆಯುತ್ತವೆ.
ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಕಾಯ್ದೆ ಮತ್ತು ಕಟ್ಟಡ ಸಂಹಿತೆಗಳಿಗೆ ತಕ್ಕಂತೆ ಈ ವಸ್ತುಗಳನ್ನು ಸಿದ್ಧಪಡಿಸಲಾಗಿದ್ದು, ಈ ಕೆಲವು ವಸ್ತುಗಳನ್ನು ನೀವು ಖರೀದಿಸಬಹುದಾಗಿದೆ.
೧. Grab Bars.
೨. Braille Singnages.
೩. Tactile Tiles SS & PU.
೪. Evacuation Layouts.
೫. Braille for Hand Rails
೬. Elevator Braille Buttons.
7. Panic Alarm.
8. Tactile wall Indicators. 
ಕಟ್ಟಡ ನಿರ್ಮಾಣ ಸಂಸ್ಥೆಗಳು ಮತ್ತು ಕಟ್ಟಡವನ್ನು ಕಟ್ಟಿಸಿಕೊಳ್ಳಬಯಸುವವರು ಈ ಜಾಲತಾಣದಿಂದ ಪ್ರಯೋಜನ ಪಡೆಯಬಹುದು ಮತ್ತು ಕಟ್ಟಡ ಸಂಹಿತೆಯ ಶಿಷ್ಠತೆಗೆ ತಕ್ಕಂತೆ ಸಿದ್ಧಪಡಿಸಿದ ಕಟ್ಟಡ ಸಾಮಾಗ್ರಿಗಳನ್ನು ಮಾರಬಹುದಾಗಿದೆ. ಸರ್ಕಾರಿ ಮತ್ತು ಖಾಸಗಿ ವಲಯಗಳೆರಡರಲ್ಲೂ ಸುಗಮ್ಯ ಪರಿಷೋಧನ (accessibl audit) ಚಟುವಟಿಕೆಗಳನ್ನು ಈ ಸಂಸ್ಥೆಯು ಕೈಗೊಳ್ಳುತ್ತಿದ್ದು, ಸುಗಮ್ಯ ಸಮಾಜಕ್ಕೆ ಸೇತುವೆಯಾಗಲು ಪ್ರಯತ್ನಿಸುತ್ತಿದೆ.
Accessibility Audit Checklist ಸಿದ್ಧಪಡಿಸಿಕೊಂಡು ದೆಹಲಿ, ಬೆಂಗಳೂರು, ಚನ್ನೈ, ಪುನಾ, ಹೈದರಬಾದ್‌ ಮತ್ತು ಇತರೇ ನಗರಗಳಲ್ಲಿ ಹಿರಿಯ ನಾಗರಿಕರ ಹಾಗೂ ಅಂಗವಿಕಲರ ಸ್ನೇಹಿ ಕಟ್ಟಡ ನಿರ್ಮಾಣ ಕಾಮಗಾರಿಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ.
ಹೆಚ್ಚಿನ ವಿವರಗಳಿಗೆ 9560737903 ಸಂಖ್ಯೆಗೆ ಕರೆಮಾಡಿರಿ.
ಹಾಗೆಯೇ, ಸುಗಮ್ಯ ಕಟ್ಟಡಕ್ಕೆ ಸಂಬಂಧಿಸಿದಂತೆ ಮಾರ್ಗದರ್ಶನಕ್ಕಾಗಿ 
https://www.accessibilityindia.com/index.php?route=extension/d_blog_module/category&category_id=8
ಕೊಂಡಿಗೆ ಭೇಟಿ ನೀಡಿರಿ.

ದಿವ್ಯನಯನ್ ಸಾಧನದ ಕುರಿತು

ದಿವ್ಯನಯನ್ಇದು ಕಂಪ್ಯೂಟರ್ಮತ್ತು ಮೊಬೈಲ್ಸಾಧನಗಳ ಸಹಾಯವಿಲ್ಲದೆ ಮುದ್ರಿತ ಪ್ರತಿಯಲ್ಲಿರುವ ಮಾಹಿತಿಯನ್ನು O C R ಹಾಗೂ TTS ತಂತ್ರಾಂಶಗಳ ನೆರವಿನಿಂದ ಅಂಧರಿಗೆ ವಿದ್ಯುನ್ಮಾನ ಸ್ವರೂಪದಲ್ಲಿ ಮಾಹಿತಿಯನ್ನು ತಲುಪಿಸುವ ವಿಶಿಷ್ಟ ಸಾಧನವಾಗಿದೆ.

ಇದು ಸ್ವಾವಲಂಭನೆಯನ್ನು ಪ್ರೋತ್ಸಾಹಿಸುವ, ಒಂದು ಕಡೆಯಿಂದ ಮತ್ತೊಂದು ಕಡೆಗೆ ಸುಲಭವಾಗಿ ತೆಗೆದುಕೊಂಡು ಹೋಗಬಹುದಾದ, ವೈರ್ಲೆಸ್ಜಾಲವನ್ನು ಹೊಂದಿರುವ ಸಾಧನವಾಗಿದೆ. ಕಛೇರಿ ಸಿಬ್ಬಂದಿಗಳಿಗೆ, ವಿದ್ಯಾರ್ಥಿಗಳಿಗೆ ಹಾಗೂ ಪುಸ್ತಕವನ್ನು ಓದುವ ಹವ್ಯಾಸಿ ಅಂಧ ವ್ಯಕ್ತಿಗಳಿಗೆ ಅನುಕೂಲಕ್ಕೆ ಒದಗಬಲ್ಲ ಸಾಧನವಾಗಿದೆ.

ಸಾಧನದಲ್ಲಿ ಪದದಂತೆ, ವಾಖ್ಯದಂತೆ, ಪ್ಯಾರಗ್ರಾಫ್ನಂತೆ ಹಾಗೂ ಪುಟದಂತೆ ಓದಿಕೊಳ್ಳುವ ಸವಲತ್ತು ಇದೆ. ಪ್ರಸ್ತುತ ಸಾಧನವು ಬೆಂಗಾಲಿ, ಇಂಗ್ಲಿಷ್ಹಾಗೂ ಹಿಂದಿ ಭಾಷೆಗಳಿಗೆ ನೆರವಾಗುತ್ತಿದ್ದು, ಇತರೇ ಭಾರತೀಯ ಭಾಷೆಗಳನ್ನು ಸೇರಿಸಲು ಪ್ರಯತ್ನ ಸಾಗಿದೆ.

ಅಂದಹಾಗೆ ಸಾಧನವು ಕೇಂದ್ರ ಸರ್ಕಾರದ ಸ್ವಾಯತ್ ಸಂಸ್ಥೆಯಾದ Central Scientific Instruments Organization (CSIO) ರವರಿಂದ ಅನ್ವೇಶಣೆಗೊಂಡು ಅಭಿವೃದ್ಧಿಗೊಳ್ಳುತ್ತಿದೆ.

ವಿನ್ಯಾಸದ ಕಲ್ಪನೆ:

. ಸಾಧನವು ಅಂದಾಜು ಒಂದು ಅಡಿ ಎಡದಿಂದ ಬಲಕ್ಕೆ ಹಾಗೂ ಐದು ಇಂಚು ನಾಲ್ಕು ಮೂಲೆಯ ಸುತ್ತಳತೆಯಿಂದ ಕೂಡಿದೆ. ಸುಳಿವು: ನಾಲ್ಕು ಮೂಲೆಯ, ಅರ್ಧ ಮೊಳದ ಪೋರ್ಟೇಬಲ್ಟಾರ್ಚ್ನೆನಪಿಸಿಕೊಳ್ಳಿರಿ.

. ಸಾಧನದ ಮೇಲ್ಭಾಗದ ಎಡಕ್ಕೆ ಸ್ಪೀಕರ್‌, ಅದರ ಪಕ್ಕ ಡಿಪ್ಯಾಡ್‌, ಅದರ ಪಕ್ಕ ಸ್ಪೀಕರ್‌, ಅದರ ಪಕ್ಕ ಕೀಪ್ಯಾಡ್ಇವೆ.

. ಸಾಧನದ ಎಡ ಪಕ್ಕದಲ್ಲಿ ಚಾರ್ಜಿಂಗ್ಹಾಗೂ ‌head phone ಹಾಕಲು ಅವಕಾಶವಿದೆ.

. ಸಾಧನದ ಬಲ ಪಕ್ಕದಲ್ಲಿ ಎರಡು USB ಪೋರ್ಟ್ಹಾಗೂ LAN ಸಂಪರ್ಕಕ್ಕೆ ಅವಕಾಶವಿದೆ.

5. ಸಾಧನದ ಕೆಳಭಾಗದ ಮುಂಬಾಗದಲ್ಲಿ ಎಡದಿಂದ ಬಲಕ್ಕೆ ಅಂದಾಜು ಒಂದು ಇಂಚಿನ ಅಗಲದ ಸ್ಕ್ಯಾನಿಂಗ್ಲೆನ್ಸ್ಚಾಚಿಕೊಂಡಿದೆ. ಸುಳಿವು ದೊಡ್ಡ ಡೈರಿಮಿಲ್ಕ್ಚಾಕಲೇಟ್.

. ಸ್ಕ್ಯಾನಿಂಗ್ಲೆನ್ಸ್ಕೆಳಗೆ ಐದು ರೋಲರ್ಗಳಿವೆ. ಪುಸ್ತಕದ ಮೇಲೆ ನಾವು ಸಾಧನವನ್ನು ಮೇಲಿಂದ ಕೆಳಕ್ಕೆ ಅಥವಾ ಎಡದಿಂದ ಬಲಕ್ಕೆ ಎಳೆದಾಗ ರೋಲಿಂಗ್ಗಳು ತಿರುಗುತ್ತವೆ ಮತ್ತು ಸ್ಕ್ಯಾನಿಂಗ್ಲೆಂಸ್ಗಳು ಸಕ್ರೀಯವಾಗುವುದರೊಂದಿಗೆ ಮುದ್ರಿತ ಮಾಹಿತಿಯನ್ನು ಸೆರೆಹಿಡಿಯುತ್ತದೆ.

. ಹದಿನೈದು ನಿಮಿಷಗಳ ಕಾಲ ಬಳಕೆದಾರರು ಇದನ್ನು ಬಳಸದಿದ್ದಲ್ಲಿ, ಸಾಧನವು ಬೀಪ್ಹಾಗೂ ಧ್ವನಿಯ ಸೂಚನೆಯೊಂದಿಗೆ ಶಟ್ಡೌನ್ಆಗುತ್ತದೆ.

ಗುಣಲಕ್ಷಣಗಳು:

. ಬಳಕೆದಾರರಿಗಾಗಿ 32 GB ಆಂತರಿಕ ಸಂಗ್ರಹ.

2. ತಂತ್ರಾಂಶ ಹಾಗೂ ಫ಼ರ್ಮ್ವೇರ್ಗಾಗಿ 8GB.

3. ವೈರ್ಲೆಸ್ಸಂಪರ್ಕವಿದೆ. LAN, Wi-Fi IEEE 802.11, Bluetooth 4.1.

4. ಎರಡು USB ಮೂಲಕ ವಿದ್ಯುನ್ಮಾನ ಮಾಹಿತಿಯನ್ನು ವರ್ಗಾಯಿಸಿಕೊಳ್ಳುವ ಸವಲತ್ತು.

5. .pdf ಹಾಗೂ .docx ಕಡತಗಳಿಗೆ ಪಡೆದ ಮಾಹಿತಿಯನ್ನು ಪರಿವರ್ತಿಸುವ ಸವಲತ್ತು.

6. ಮೂರು ಘಂಟೆಗಳ ಕಾಲ ಕಾರ್ಯನಿರ್ವಹಿಸುವಂತಹ, ರಿಚಾರ್ಜ್ಮಾಡಿಕೊಳ್ಳಬಹುದಾದ ಬ್ಯಾಟರಿ ಇದು ಹೊಂದಿದೆ.

7. ಎರಡು ಸ್ಪೀಕರ್ಗಳು ಮತ್ತು ಹೆಡ್ಫೋನ್ಸಂಪರ್ಕ.

9. 5(D-Pad)+12(Key-Pad).

. ಡಿ ಪ್ಯಾಡ್ನಲ್ಲಿ... ನಾವಿಗೇಷನ್ಕೀಗಳಾದ up, down, right, left ಹಾಗೂ .ಕೆ ಕೀಲಿಗಳು.

. ಕೀಪ್ಯಾಡ್ನಲ್ಲಿ... 1, 2, 3, 4, 5, 6, 7, 8, 9, *, 0,# ಕೀಲಿಗಳು.

10. ಸಾಧನವು tesseract ಎನ್ನುವ O C R ತಂತ್ರಾಂಶದ ನೆರವಿನಿಂದ ಮುದ್ರಿತ ಅಕ್ಷರವನ್ನು ವಿದ್ಯುನ್ಮಾನಕ್ಕೆ ಪರಿವರ್ತಿಸುತ್ತದೆ.

೧೧. Nuance vocalizer expressive TTS ತಂತ್ರಾಂಶವಿದೆ.

೧೨. 350 ಗ್ರಾಮ್ತೂಕವಿದೆ.

13. ಸಾಧನದ ಮೊತ್ತ 15000 ರೂಗಳು. SBI collect ಮೂಲಕ ಪಾವತಿಸಬೇಕಿದೆ.

14. online ಮೂಲಕ ಸಾಧನವನ್ನು ಸಂಪರ್ಕಿಸಿದ್ದಲ್ಲಿ ಹಲವಾರು ಭಾಷೆಗಳು ಒಂದು ಪುಟದಲ್ಲಿದ್ದರೂ ವಿದ್ಯುನ್ಮಾನ ಅಕ್ಷರಗಳಿಗೆ ಪರಿವರ್ತಿಸುತ್ತದೆ. offline ಮೂಲಕವಾದರೆ, ಪ್ರಾಥಮಿಕ ಭಾಷೆಯನ್ನು ಮಾತ್ರ ಪರಿವರ್ತಿಸುತ್ತದೆ.

೧೫. 10 ಗಾತ್ರದ ಫಾಂಟಿನ ಅಕ್ಷರಗಳನ್ನು ನಿಖರವಾಗಿ ಪರಿವರ್ತಿಸುತ್ತದೆ. 9 ಗಾತ್ರದ ಫಾಂಟಿನ ಅಕ್ಷರಗಳ ಕುರಿತು ಗಮನಹರಿಸುವುದಾಗಿ ಅಭಿವೃದ್ಧಿಗಾರರು ತಿಳಿಸಿರುತ್ತಾರೆ.

16. ಸಾಧನವನ್ನು ಕೊಳ್ಳಬಯಸುವವರು ಮೊದಲು ಜಾಲತಾಣದ ಕೊಂಡಿಯ ಮೂಲಕ ನೋಂದಾಯಿಸಿಕೊಳ್ಳಬೇಕು.

https://divyanayan.csio.res.in/registration.php

೧೭. online ಮೂಲಕ ಕೊಳ್ಳುವವರು ಜಾಲತಾಣಕ್ಕೆ ಭೇಟಿ ನೀಡಿರಿ.

https://divyanayan.csio.res.in/search.php

ನೀಡಲಾದ ಕೆಲವು ಸಲಹೆಗಳು:

ದಿನಾಂಕ: 19/01/2020ರಂದು ಆಯೋಜನೆಗೊಂಡಿದ್ದ ಪ್ರಾತ್ಯಕ್ಷಿಕೆಯಲ್ಲಿ ವ್ಯಕ್ತವಾದ ಸಲಹೆಗಳು ಇಂತಿವೆ...

. ಸಾಧನವನ್ನು ವಾಟರ್ಪ್ರೂಫ್ಗೆ ಪರಿವರ್ತನೆಗೊಳಿಸಬೇಕಿದೆ.

. ವಯೋಮಾನಕ್ಕನುಗುಣವಾಗಿ ಅಥವಾ ಹಸ್ತದ ಅಳತೆಗನುಗುಣವಾಗಿ ಅಥವಾ ಬಲಗೈ ಹಾಗೂ ಎಡಗೈ ಬಳಕೆದಾರರನ್ನು ಗಮನದಲ್ಲಿರಿಸಿಕೊಂಡು ಸಾಧನವನ್ನು ವಿನ್ಯಾಸಗೊಳಿಸಬೇಕಿದೆ.

. ಮುದ್ರಿತ ಪ್ರತಿಯಲ್ಲಿರಬಹುದಾದ ಫ಼ಾರ್ಮ್ಯಾಟ್ಗಳನ್ನು ಇರುವ ಹಾಗೆಯೇ ಸೆರೆಹಿಡಿದು ಡಿಜಿಟಲ್ಗೆ ಪರಿವರ್ತಿಸಬೇಕಿದೆ. (ಪ್ಯಾರಾಗ್ರಾಫ಼್, ಹೆಡಿಂಗ್‌, ಟೇಬಲ್‌, ಅಲೈನ್ಮೆಂಟ್ಹೀಗೆ).

. ಸಾಧನಕ್ಕೆ ಕನ್ನಡವನ್ನು ಅಳವಡಿಸುವ ಕಾರ್ಯ ಪ್ರಯೋಗದ ಹಂತದಲ್ಲಿದ್ದು, ಆದಷ್ಟು ತ್ವರಿತವಾಗಿ ಬಳಕೆಗೆ ಅನುಷ್ಠಾನಗೊಳಿಸಬೇಕಿದೆ.

5. ಮುದ್ರಿತ ಪ್ರತಿಯ ಮೇಲಿಂದ ಕೆಳಕ್ಕೆ ಸಾಧನವನ್ನು ಎಳೆಯುವಾಗ tts ತಂತ್ರಾಂಶವು ಓದುವ ಹಾಗೆ ಸವಲತ್ತನ್ನು ಅಳವಡಿಸಬೇಕಿದೆ. ಅಂದರೆ, Instant performance ಸವಲತ್ತನ್ನು ಒದಗಿಸಬೇಕಿದೆ.

6. ಸಾಧನದ ಗಾತ್ರ ಹಾಗೂ ಮೊತ್ತ ಕಡಿಮೆಯಾಗಬೇಕಿದೆ.

. ಸ್ಕ್ಯಾನ್ಮಾಡಿದ ಚಿತ್ರವು online ಹಾಗೂ offline ಎರಡೂ ವಿಧಾನದಲ್ಲಿ ಅಕ್ಷರಕ್ಕೆ ಪರಿವರ್ತನೆಗೊಳ್ಳುವುದರಲ್ಲಿ ಪ್ರಸ್ತುತ ವೆತ್ಯಾಸಗಳಿದ್ದು, ಎಲ್ಲವನ್ನು ಒಂದೇ ಕ್ಷಮತೆಯ ಪ್ರಕ್ರಿಯೆಗೆ ಒಳಪಡಿಸಬೇಕಿದೆ.


ನಾಟಕ: ಅಳಿಯುವ ಮುನ್ನ.

 

ದೃಷ್ಯ1: ಬರಗಾಲಕ್ಕಿಂತಲೂ ಘೋರ ಬಯಲು.

ಒಬ್ಬ ವಿಜ್ಞಾನಿ ಸಸ್ಯಗಳ ಅವಲಂಭನೆಯಿಲ್ಲದೆ ಮನುಷ್ಯನ ಹಸಿವನ್ನು ನೀಗಿಸಲು ಸಂಶೋಧನೆಗಾಗಿ ಪ್ರಕೃತಿಯ ಇತರೇ ಸಂಪನ್ಮೂಲಗಳನ್ನು ಹುಡುಕಾಡುತ್ತಾ, ಜನರ ಹಸಿವಿನ ಗೋಳಾಟವನ್ನು ಆಲಿಸುತ್ತಾ ಮಳೆಯಿಲ್ಲದೆ ಸೊರಗಿದ ಕೆಲವು ಮರ-ಗಿಡಗಳಿರುವ ತೋಟದ ಬಳಿ ಬಂದು ವಿಶ್ರಾಂತಿಗಾಗಿ ಮತ್ತು ಅಧ್ಯಯನಕ್ಕಾಗಿ ಕುಳಿತುಕೊಳ್ಳುತ್ತಾನೆ.

ವಿಜ್ಞಾನಿ ಕುಳಿತ ಬಲ-ಎಡಕ್ಕೆ ಜನರ ಹಸಿವಿನ ಗೋಳಾಟ, ಮುಂಭಾಗ ರಸ್ತೆಯಲ್ಲಿ ಸರ್ಕಾರದಿಂದ ಅಹಾರ ವಿತರಣೆಯ ಗಾಡಿಗಳ ಓಡಾಟ ಮತ್ತು ಹಿಂಭಾಗಕ್ಕೆ ಸೊರಗಿದ ಮರ-ಗಿಡಗಳ ತೋಟವಿದೆ. ತೋಟದಲ್ಲಿ ಕಿಂಚಿತ್ತೂ ನೀರಿನ ಸೆಲೆ ಮತ್ತು ನೀರಿದ್ದರ ಕುರಿತು ಸುಳಿವೇ ಇಲ್ಲ. ಆದರೆ ನೀರಿನ ಹರಿವು ಕೇವಲ ಜನ ವಸತಿಯ ಕಡೆಗೆ ಮಾತ್ರ ಇದೆ.

ಸರ್ಕಾರ ವಹಿಸಿದ ಕೆಲವು ಯೋಜನೆಗಳ ರೂಪುರೇಷೆಗಳನ್ನು ತೆಗೆದು ಓದಲು ಆರಂಭಿಸುತ್ತಾನೆ. ಇದರಲ್ಲಿದ್ದ ಕೆಲವು ಅಂಶಗಳನ್ನು ಮತ್ತೊಂದು ಹಾಳೆಯಲ್ಲಿ ಬರೆದುಕೊಳ್ಳುತ್ತಾನೆ.

ಅಂಶಗಳು; . ಮರ-ಗಿಡ-ಬಳ್ಳಿಗಳ ಅವಲಂಭನೆಯಿಲ್ಲದೆ ಮಾನವನ ಹಸಿವು ನೀಗಬೇಕು. . ಆಂಬ್ಲಜನಕವನ್ನು ಒದಗಿಸಿ, ಇಂಗಾಲಡಯಾಕ್ಸೆಡ್ಹೀರಿಕೊಳ್ಳುವ ಮಾನವ ನಿರ್ಮಿತ ವ್ಯವಸ್ಥೆ ಮನೆಗಳಿಗೆ ರಸ್ತೆಗಳಿಗೆ ಒಟ್ಟಾರೆ ದೇಶಕ್ಕೆ ಅಳವಡಿಕೆಯಾಗಬೇಕು. . ಮಳೆಯ ಹನಿಗಳು ತೋಟಗಳ, ರಸ್ತೆಗಳ ಹಾಗೂ ಮನೆಗಳ ಮೇಲೆ ಬೀಳದೆ ಊರಿನ ಒಂದು ಸ್ಥಳಕ್ಕೆ ಹರಿದು ಸಂಗ್ರಹಣೆಯಾಗಬೇಕು.

ಮೂರೂ ಅಂಶಗಳನ್ನು ಬರೆದುಕೊಂಡು, ಸರ್ಕಾರ ನೀಡಿದ್ದ ರೂಪುರೇಷೆಯ ಪುಸ್ತಕವನ್ನು ಮುಚ್ಚಿಟ್ಟು, ಮತ್ತೊಮ್ಮೆ ತಾನು ಪ್ರತ್ಯೇಕವಾಗಿ ಬರೆದುಕೊಂಡ ಹಾಳೆಯನ್ನು ಹಿಡಿದುಕೊಂಡು ತೋಟದ ಮಧ್ಯಕ್ಕೆ ಹೋಗಿ ಮರವೊಂದಕ್ಕೆ ಒರಗಿಕೊಂಡು ಕಾರ್ಯ ಸಾಧನೆಗಾಗಿ ಆಲೋಚಿಸಲು ಆರಂಭಿಸುತ್ತಾನೆ.

ಕೆಲವು ನಿಮಿಷಗಳಲ್ಲಿ ವಿಜ್ಞಾನಿಗೆ ಹುಚ್ಚೆಗೆ ಅವಸರವಾಗುತ್ತದೆ. ವಿಜ್ಞಾನಿ ಮತ್ತಷ್ಟು ತೋಟದ ಒಳಕ್ಕೆ ಹೋಗಿ ಹುಚ್ಚೆ ಉಯ್ಯುತ್ತಿರುವಾಗ ಸುತ್ತಲಿದ್ದ ಮರ-ಗಿಡ-ಹುಲ್ಲು-ಬಳ್ಳಿಗಳು ದಿಗಿಲಿನ ಮತ್ತು ಬೇಸರದ ಭಾವನೆಗಳನ್ನು ಪರಸ್ಪರ ವ್ಯಕ್ತಪಡಿಸುತ್ತಿರಬಹುದೆಂಬ ಕಲ್ಪನೆ ವಿಜ್ಞಾನಿಯ ಮನಸ್ಸಿನಲ್ಲಿ ಮೂಡುತ್ತದೆ.


 

ವಿಸರ್ಜಿಸಿದ ಬಳಿಕ ಮೊದಲು ಕುಳಿತಿದ್ದ ಸ್ಥಳಕ್ಕೆ ಬಂದು ಮತ್ತೊಮ್ಮೆ ತಾನು ಬರೆದುಕೊಂಡಿದ್ದ ಮೂರು ಅಂಶಗಳ ಟಿಪ್ಪಣಿಯ ಹಾಳೆಯನ್ನು ಕೈಯಲ್ಲಿ ಹಿಡಿದುಕೊಂಡು ಪಶ್ಚಾತ್ತಾಪದ ಭಾವನೆಯಲ್ಲಿ "ಮನುಷ್ಯರಿಗೆ ಸಹಾಯಮಾಡಲು ಮನುಷ್ಯರೇನೋ ಇದ್ದಾರೆ! ಸಸ್ಯ ಸಂಕುಲಗಳಿಗೆ ಬರಗಾಲದ ಸಮಯದಲ್ಲಿ ನೀರು+ಗೊಬ್ಬರವನ್ನು ಪೂರೈಸುವುದು ಯಾರು?? ಕೆಲವು ಕಡೆ ಪ್ರಕೃತಿ ಮಾತೆಯ ಮುನಿಸು, ಕೆಲವು ಕಡೆ ಜೀವ ಸಂಕೂಲಕ್ಕೆ ಪ್ರಕೃತಿ ಮಾತೆಯ ಸಹಕಾರ ಹೀಗಿರುವಾಗ ಮನುಷ್ಯ ಎಲ್ಲವನ್ನೂ ಕೂಡ ಸರಿದೂಗಿಸಿಕೊಂಡು ಹೋಗಬಲ್ಲ. ಆದರೆ, ಸಸ್ಯ ಸಂಕುಲಗಳು ಹೇಗೆ ಪ್ರಕೃತಿ ಮಾತೆಯ ಮುನಿಸಿದ್ದಲ್ಲಿ ಸರಿದೂಗಿಸಿಕೊಳ್ಳಬಲ್ಲವು? ಪ್ರಕೃತಿ ಮಾತೆಯ ಮುನಿಸಿಗೆ ಕಾರಣ ಮನುಷ್ಯರಲ್ಲದೆ ಮತ್ತಿನ್ಯಾರು? ಮನುಷ್ಯನನ್ನು ಸಸ್ಯ ಸಂಕುಲಗಳ ಅವಲಂಭನೆಯಿಂದ ತಪ್ಪಿಸಲು ನಾನಾದರೂ ಏಕೆ ಸಂಶೋಧನೆಯನ್ನು ನಡೆಸಬೇಕು? ಸಹಕಾರ ತತ್ವವನ್ನು ಕೇವಲ ಮನುಷ್ಯರು ಮನುಷ್ಯರಿಗಾಗಿ ಮಾತ್ರ ಏಕೆ ಅಳವಡಿಸಿಕೊಳ್ಳಬೇಕು? ಪ್ರಕೃತಿಯ ಎಲ್ಲಾ ಅಂಶವೂ ಭೂಮಂಡಲದ ಅಗತ್ಯಕ್ಕಾಗಿಯೇ ಇರೋದು! ಹೌದು! ನಾನು ಮೂರು ಅಂಶಗಳ ಕುರಿತ ಸಂಶೋಧನೆ ಮಾಡುವ ಬದಲು ಸಸ್ಯ ಸಂಕುಲಗಳ ಭಾವನೆಗಳನ್ನು ಮನುಷ್ಯರಿಗೆ ತಿಳಿಸಿದರೆ, ಮನುಷ್ಯರಿಗೆ ಪಶ್ಚಾತ್ತಾಪ ಆದರೂ ಆಗಬಹುದು! ಈಗಿಂದಲೇ ಕುರಿತು ನಾನು ಸಂಶೋಧನೆಯನ್ನು ಕೈಗೊಳ್ಳಬೇಕು." ಎಂದು ನಿರ್ಣಯಿಸುತ್ತಾನೆ.

ಮರವೊಂದರ ಬಳಿ ತೆರಳಿ ಕೆಳಗೆ ಕೂರುತ್ತಾನೆ. "ಜಗದೀಶ್ಚಂದ್ರ ಬೋಸ್ ರವರು ಗಿಡ-ಮರ-ಬಳ್ಳಿಗಳ ಸಂವಹನದ ಕುರಿತುಕ್ರೆಸ್ಕೋಗ್ರಾಫ್ಉಪಕರಣದ ಮೂಲಕ ಜಗತ್ತಿಗೆ ತಿಳಿಸಿದ್ದರು. ಇವರ ಸಂಶೋಧನೆ ನಡೆದು ಫಲ ನೀಡಿ ಇಂದಿಗೆ ಒಂದು ಶತಮಾನವೇ ಕಳೆದರೂ, ಸಂಶೋಧನೆ ಮುಂದುವರಿಯುವುದು ಅವಶ್ಯವಿದೆ. ಅದಕ್ಕಾಗಿ ನಾನು ಪ್ರಯತ್ನಮಾಡಬೇಕು. ಮನುಷ್ಯರಿಗೆ ಮರ-ಗಿಡ-ಬಳ್ಳಿಗಳ ಮಾತುಗಳನ್ನು ಕೇಳಿಸಬೇಕು. ಜ್ಞಾನೋದಯ ಮನುಕುಲದ ಶಾಂತಿಗಾಗಿ ಅಂದು ಬುದ್ಧನಿಗೆ ಆಯಿತು. ನಾನು ಕೈಗೊಳ್ಳುವ ಸಂಶೋಧನೆಯು ಸಮಸ್ತ ಪ್ರಕೃತಿಯ ಉಳಿವಿಗೆ ಪ್ರಯತ್ನಿಸಬೇಕು ಮತ್ತು ನಿಟ್ಟಿನಲ್ಲಿಯೇ ಮನುಕುಲಕ್ಕೆ ಜ್ಞಾನೋದಯವಾಗಬೇಕು. ಮನುಷ್ಯನು ಪ್ರಕೃತಿಯ ಮೇಲೆ ಮಾಡಿದ ದಾಳಿಗೆ ಸಮಸ್ತ ಮನುಕುಲ ಪಷ್ಚಾತ್ತಾಪಪಡಬೇಕು." ಎಂದು ಅಲ್ಲಿದ್ದ ಪ್ರತಿಯೊಂದೂ ಮರ-ಗಿಡ-ಬಳ್ಳಿಗಳಿಗೆ ಪ್ರಾಯಷ್ಚಿತ್ತದ ನಮನಗಳನ್ನು ಅರ್ಪಿಸುತ್ತಾನೆ. ಗಿಡ-ಮರ-ಬಳ್ಳಿಗಳು ವಿಜ್ಞಾನಿಯ ಕಾಳಜಿಗೆ ವಂದಿಸುತ್ತವೆ. ವಿಜ್ಞಾನಿಯು ಮರ-ಗಿಡ-ಬಳ್ಳಿಗಳಿಗೆ ನ್ಯಾನೋ ಟ್ರಾನ್ಸಿಸ್ಟರ್ಗಳನ್ನು ಅಳವಡಿಸಿ ತೋಟದಿಂದ ನಿರ್ಗಮಿಸುತ್ತಾನೆ.


 

 

ದೃಷ್ಯ : ತೋಟದ ಬಳಿ ಮರಗಳನ್ನು ಕಡಿಯಲು ಸಿದ್ಧತೆ.

 ಮರಗಳನ್ನು ಪೀಠೋಪಕರಣಗಳಿಗಾಗಿ ಕತ್ತರಿಸಲು ತೋಟದ ಮಾಲಿಕ ಕೂಲಿಗಾರರೊಂದಿಗೆ ಬಂದು ಪೀಠೋಪಕರಣಗಳಿಗೆ ಯೋಗ್ಯ ಮರಗಳನ್ನು ಅಳತೆ ಮಾಡಿಸುತ್ತಿರುತ್ತಾನೆ. ಕೂಲಿಗಾರರು ಮರಗಳನ್ನು ಗುರುತಿಸುತ್ತಿದ್ದಾರೆ. ಮಾಲಿಕ ತಗಲುವ ವೆಚ್ಛ ಮತ್ತು ಬರುವ ಲಾಭಗಳನ್ನು ಲೆಕ್ಕಮಾಡುತ್ತಿರುತ್ತಾನೆ.

ಮರಗಳನ್ನು ಅಳತೆಮಾಡಿದ ಬಳಿಕ ಒಬ್ಬೊಬ್ಬರಾಗಿ ಕೂಲಿಗಾರನು ಮಾಲಿಕನಿಗೆ ವರದಿಯನ್ನು ಒಪ್ಪಿಸುತ್ತಿರುತ್ತಾರೆ. ಮಾಲಿಕ ಕೂಲಿಗಾರರು ನೀಡುವ ಮಾಹಿತಿಯನ್ನು ಬರೆದುಕೊಳ್ಳುತ್ತಿರುತ್ತಾನೆ. ಪೀಠೋಪಕರಣಗಳಿಗೆ ಕೆಲವು ಮರಗಳನ್ನು ಗುರುತಿಸಿ ಇಬ್ಬರಿಗೆ ಒಂದೊಂದು ಮರವನ್ನು ಕತ್ತರಿಸಲು ಮಾಲಿಕ ಆಜ್ಞಾಪಿಸುತ್ತಾನೆ.

ಎಲ್ಲಾ ಕೂಲಿಗಾರರು ಮರಗಳನ್ನು ಕಡಿಯಲು ಸಲಕರಣೆಗಳನ್ನು ಹಿಡಿದು ಬರುತ್ತಿರುವಾಗ ಸಾವಿನ ಸನಿಹದ ಕ್ಷಣಗಳ ಭಾವನೆಗಳನ್ನು ಮರಗಳು ತೋರ್ಪಡಿಸುತ್ತಿರುತ್ತವೆ. ವಿಷಯ ಪ್ರಯೋಗ ಶಾಲೆಯಲ್ಲಿ ಅನ್ವೇಶಣೆಯಲ್ಲಿ ತಲ್ಲೀನನಾಗಿದ್ದ ವಿಜ್ಞಾನಿಗೆ ತಲುಪುತ್ತದೆ. ಕೂಡಲೆ ವಿಜ್ಞಾನಿ ತೋಟದ ಬಳಿ ಬಂದು, ತೋಟದ ಮಾಲಿಕನಿಗೆ ಮರಗಳನ್ನು ಕಡಿಯದಿರಲು ವಿನಂತಿಸಿಕೊಳ್ಳುತ್ತಾನೆ. ಮಾಲಿಕ ಕೋಪದಲ್ಲಿ "ನೀನ್ಯಾರು? ನಿನ್ನ ಸ್ಥಳವನ್ನು ನಾನೇನು ಅತಿಕ್ರಮಿಸಿಲ್ಲ! ನಾನು ಮರಗಳನ್ನು ಬೆಳೆಸಿದ್ದು ನೀನಲ್ಲ!" ಎನ್ನುತ್ತಾ ಜೋರಾಗಿ ಅರಚುತ್ತಾನೆ. ಆಗ ವಿಜ್ಞಾನಿ "ಸರ್‌, ನೀವು ಮರಗಳನ್ನು ಕಡಿಯಿರಿ. ನಾನು ಬೇಡಾ ಅನ್ನೋಲ್ಲ. ಇಲ್ಲಿರುವ ಎಲ್ಲಾ ಮರ-ಗಿಡ-ಬಳ್ಳಿಗಳಿಗೆ ಟ್ರಾನ್ಸಿಸ್ಟರ್ಗಳನ್ನು ಹಾಕಿದ್ದೇನೆ. ಅವುಗಳನ್ನು ಮೊದಲು ತೆಗೆದುಕೊಳ್ಳುತ್ತೇನೆ." ವಿನಯದಲ್ಲಿ ಹೇಳುತ್ತಾನೆ.

"ಹಮ್‌! ಏನ್ನೀನು ನನ್ತೋಟಕ್ಕೆ ಬಂದು ಹೀಗೆ ನನ್ಪರ್ಮಿಶನ್ಇಲ್ದೆ ಟ್ರಾನ್ಸಿಸ್ಟರ್ಗಳನ್ನ ಹಾಕ್ಬಿಟ್ಟ? ಪೋಲಿಸರಿಗೆ ತಿಳ್ಸಿ ಅರೆಸ್ಟ್ಮಾಡ್ಸ್ತೀನಿ ಹುಶಾರ್!‌ ಬೇಗ ಕಡಿರೋ ಮರಗಳನ್ನ ಟೈಮ್ಆಯ್ತು!" ಎಂದು ಮತ್ತಷ್ಟು ಕೋಪದಲ್ಲಿ ವಿಜ್ಞಾನಿಗೂ ಹಾಗೂ ಕೂಲಿಗಾರರಿಗೂ ಗದರುತ್ತಾನೆ.

ವಿಜ್ಞಾನಿ ಸರ್ಕಾರ ನೀಡಿದ್ದ ಅನುಮತಿ ಪತ್ರವನ್ನು ಮಾಲಿಕನಿಗೆ ನೀಡುತ್ತಾ"ಸರ್‌, ನಾಡಿನಲ್ಲಿರೋ ಸರ್ಕಾರದ್ದೇ ಆಗಲಿ, ಖಾಸಗಿಯವರದ್ದೇ ಆಗಲಿ ಸಸ್ಯಗಳ ಸಂಕುಲವಿರುವ ಯಾವುದೇ ಸ್ವರೂಪದ ಸ್ಥಳಗಳಿಗೆ ಭೇಟಿ ನೀಡುವ ಅನುಮತಿ ಇದೆ. ಓದಿಕೊಳ್ಳಿ. ನೀವು ಇದರ ಮಾಲಿಕ ಅಂತ ಯಾರೂ ನನಗೆ ಹೇಳಲಿಲ್ಲ. ಮುಖ್ಯವಾಗಿ ನೀವು ಇಲ್ಲಿ ನಾಮಫಲಕವನ್ನೂ ಕೂಡ ಹಾಕಿಲ್ಲ. ಪಕ್ಕದವರನ್ನು ಕೇಳಿದೆ ಅವರು ಕೂಡ ಮಾಹಿತಿ ನೀಡಿಲ್ಲ. ನೀವು ಸ್ವಲ್ಪ ಸಮಯ ಕೊಟ್ರೆ ನಾನು ಹಾಕಿರೋ ಟ್ರಾನ್ಸಿಸ್ಟರ್ಗಳನ್ನು ತೆಗೆದುಕೊಳ್ಳುತ್ತೇನೆ. ನೀವು ಅದಾದ ಬಳಿಕ ಕೆಲಸವನ್ನು ಮುಂದುವರಿಸಿ, ನಾನೇನೂ ಅಡ್ಡಿಪಡಿಸೊಲ್ಲ." ಎಂದು ವಿನಂತಿಪೂರ್ವಕವಾಗಿ ಕೇಳಿಕೊಳ್ಳುತ್ತಾನೆ.

ಅದಕ್ಕೆ ಮಾಲಿಕ " ಬೇಗ ಎತ್ಕೊಳ್ಳಿ" ಎಂದು ತಾತ್ಸಾರದಲ್ಲಿ ಅನುಮತಿಯನ್ನು ನೀಡುತ್ತಾನೆ.

ವಿಜ್ಞಾನಿ "ಸರ್ಇದನ್ನ ಓದುತ್ತಿರಿ, ಅಷ್ಟರಲ್ಲಿ ನಾನು ಟ್ರಾನ್ಸಿಸ್ಟರ್ಗಳನ್ನು ಎತ್ತಿಕೊಂಡು ಬರುತ್ತೇನೆ." ಎಂದು ಮಾಲಿಕನಿಗೆ ತನ್ನ ಬಳಿ ಇದ್ದ ಮರ-ಗಿಡ-ಬಳ್ಳಿಗಳ ಸಂವಹನ ಪದ್ಧತಿಗಳ ಸಂಶೋಧನಾ ವರದಿಗಳನ್ನು ಹಾಗೂ ತನಗೆ ಸರ್ಕಾರ ನೀಡಿದ್ದ ಜವಬ್ದಾರಿಯ ನಕ್ಷೆಯನ್ನು ನೀಡಿ ಕೂಲಿಗಾರರು ಗುರುತು ಹಾಕಿದ್ದ ಮರಗಳ ಕಡೆಗೆ ತೆರಳಿದ.

ವಿಜ್ಞಾನಿ ನೀಡಿದ್ದ ಸಂಶೋಧನಾ ವರದಿಗಳನ್ನು ಹಾಗೂ ಜವಬ್ದಾರಿಯ ನಕ್ಷೆಗಳನ್ನು ಮಾಲಿಕ ಅಸಡ್ಡೆಯಿಂದ ಓದಲು ತೊಡಗಿದ. ಕೆಲವು ಪುಟಗಳನ್ನು ಓದುತ್ತಲೇ ಒಂದಷ್ಟು ವಾಖ್ಯಗಳನ್ನು ಜೋರಾಗಿ, ಮೆಲ್ಲನೆ ಓದಲು ಶುರುಮಾಡುತ್ತಾನೆ. ಕ್ರಮೇಣ ಮಾಲಿಕನ ಮನಸ್ಸಲ್ಲಿಯೂ ತನ್ನ ತಪ್ಪಿನ ಅರಿವು ಮೂಡುತ್ತದೆ. "ನನ್ನ ಹತ್ತಿರ ಎಷ್ಟೋ ಆಸ್ತಿ ಇವೆ. ಅವುಗಳ ಮೂಲಕ ಮನುಷ್ಯರಿಗೆ ನೆಲೆಯನ್ನು ಕಲ್ಪಿಸಿ ಅವರಿಂದ ಹಣಗಳಿಸುವುದಕ್ಕಾಗಿ ವಿನಿಯೋಗಿಸಿದ್ದೇನೆ. ಇದೊಂದು ತೋಟವನ್ನಾದರೂ ಪ್ರಕೃತಿ ಮಾತೆಯ ಋಣವನ್ನು ತೀರಿಸಲು ವಿನಿಯೋಗಿಸಬೇಕು ಮತ್ತು ಬರುವ ಆದಾಯವನ್ನು ಪ್ರಕೃತಿಯ ಐಸಿರಿಗಾಗಿ ವಿನಿಯೋಗಿಸಬೇಕು." ಎಂದು ಪಶ್ಚಾತ್ತಾಪಪಡುತ್ತಾನೆ. ಕೂಲಿಗಾರರನ್ನು ನೋಡುತ್ತಾ "ಇವರ ಬಳಿ ಸ್ವಂತ ಮನೆ ಇಲ್ಲ. ಸ್ವಂತ ದುಡಿಮೆ ಇಲ್ಲ. ಸ್ವಂತ ಸ್ಥಳ ಹೇಗಾದರೂ ಇರುವುದೋ? ಛೇ!" ಮರುಗುತ್ತಾನೆ.

ಕೂಲಿಗಾರನೊಬ್ಬ "ಅಯ್ಯಾ, ನೀವು ಓದುತ್ತಿರುವುದು ಏನೂ ಅಂತ ನಮಗೆ ಗೊತ್ತಿಲ್ಲದಿರಬಹುದು. ಆದರೆ, ನಿಮ್ಮ ಭಾವನೆ ನಮಗೆ ತಿಳಿಯಿತು. ನಮಗೆ ಮನೆ, ಸ್ವಂತ ಸ್ಥಳ ಇಲ್ಲದಿರಬಹುದು ಮತ್ತು ಸ್ವಂತ ಆದಾಯ ಇಲ್ಲದಿರಬಹುದು. ಚಿಂತೆ ಮಾಡಬೇಡಿ. ನಾವು ಮರ ಕಡಿಯದೇ ಹೊರಡುತ್ತೇವೆ." ಎನ್ನುತ್ತಾನೆ. ಆಗ ಮಾಲಿಕ "ನಿಮಗೆ ನೀಡಬೇಕಾಗಿದ್ದ ಹಣವನ್ನು ತೆಗೆದುಕೊಂಡು ಹೋಗಿ." ಎಂದು ಕೂಲಿಗಾರರಿಗೆ ಧನ್ಯವಾದವನ್ನು ತಿಳಿಸಿ, ಎಲ್ಲರಿಗೂ ನಿಗದಿಪಡಿಸಿದ್ದ ಹಣವನ್ನು ನೀಡಿ "ಮತ್ತೊಂದು ದಿನ ಕರೆಯುತ್ತೇನೆ, ದಯವಿಟ್ಟು ಬನ್ನಿ. ಆಗ ಕತ್ತರಿಸುವ ಕೆಲಸದ ಬದಲು ಸಮತೋಲನವನ್ನು+ಸಮನ್ವಯತೆಯನ್ನು ಕಾಪಾಡುವ ಕೆಲಸ ನೀಡುತ್ತೇನೆ." ಎಂದು ಅವರೆಲ್ಲರನ್ನು ಕಳುಹಿಸಿ ವಿಜ್ಞಾನಿಯ ಕಡೆಗೆ ತೆರಳುತ್ತಾನೆ.


 

ದೃಷ್ಯ : ತೋಟದ ಮಧ್ಯ ಭಾಗ.

ವಿಜ್ಞಾನಿ "ಸರ್‌, ಕೆಲವೇ ನಿಮಿಷದಲ್ಲಿ ಎಲ್ಲವನ್ನೂ ಟ್ರಾನ್ಸಿಸ್ಟರ್ಗಳನ್ನು ಎತ್ತಿಕೊಳ್ಳುತ್ತೇನೆ." ಎನ್ನುತ್ತಾನೆ. ಆಗ ಮಾಲಿಕ "ಬೇಡ ಸ್ವಲ್ಪ ಕಾಲ ನಿಮ್ಜೊತೆ ಮಾತನಾಡೋದು ಇದೆ. ದಯವಿಟ್ಟು ಬನ್ನಿ." ಎನ್ನುತ್ತಾನೆ.

ವಿಜ್ಞಾನಿ "ಸರ್‌, ನೀವು ನನ್ನನ್ನು ಕರೆದ ವಿಷಯ?" ಮಾಲಿಕ "ನೀವು ಎರಡು ವಿಷಯಗಳ ಪುಸ್ತಕವನ್ನು ನನಗೆ ನೀಡಿದ್ದೀರಿ. ಇವುಗಳಲ್ಲಿ ನೀವು ಕೈಗೊಳ್ಳುವ ವಿಷಯ ಯಾವುದು? ಎರಡು ವಿಷಯಗಳು ಪರಸ್ಪರವಾಗಿ ಪೂರಕವಾಗಿಲ್ಲ. ಎರಡೂ ಬೇರೆಬೇರೆ ದಿಕ್ಕಿಗೆ ಮನುಷ್ಯನನ್ನು ಹಾಗೂ ಮನುಷ್ಯ ಸಂಕುಲವನ್ನು ಕರೆದುಕೊಂಡು ಹೋಗಬಲ್ಲವು. ದಯವಿಟ್ಟು ತಿಳಿಸಿ ಯಾವ ದಾರಿ ನಿಮ್ಮದು ಎಂದು?" ವಿನಂತಿಪೂರ್ವಕವಾಗಿ ಕೇಳಿಕೊಳ್ಳುತ್ತಾನೆ.

ವಿಜ್ಞಾನಿ "ಮೊದಲು ನಾನು ಮರ-ಗಿಡ-ಬಳ್ಳಿಗಳ ಸಂವಹನದ ಕುರಿತು ಸಂಶೋಧನೆಯನ್ನು ಕೈಗೊಂಡು, ಅದರ ಮೂಲಕ ಅವುಗಳ ಭಾವನೆಗಳನ್ನು ಮನುಷ್ಯರಿಗೆ ತಿಳಿಸಲು ಎಮೋಷನ್ಟು ಸ್ಪೀಚ್ತಂತ್ರಜ್ಞಾನವನ್ನು ಆವಿಶ್ಕರಿಸಲು ಪ್ರಯತ್ನಿಸುತ್ತೇನೆ. ತಂತ್ರಜ್ಞಾನದ ಮೂಲಕ ಮರ-ಗಿಡ-ಬಳ್ಳಿಗಳ ಭಾವನೆಗಳನ್ನು ಮನುಷ್ಯರಿಗೆ ತಿಳಿಸಿ, ಮನುಷ್ಯರು ಪ್ರಕೃತಿ ಮೇಲೆ ನಡೆಸುತ್ತಿರುವ ದಾಳಿಗೆ ಕ್ಷಮೆಕೋರುವಂತೆ ಮಾಡಲು ಪ್ರಯತ್ನಿಸುವೆ. ಒಂದು ವೇಳೆ ಕಾರ್ಯಕ್ಕೆ ಸೋಲಾದಲ್ಲಿ ಎರಡನೇ ಕಾರ್ಯವನ್ನು ಕೈಗೆತ್ತಿಕೊಳ್ಳುವುದಿಲ್ಲ. ಮೊದಲನೇ ಕಾರ್ಯದಲ್ಲಿ ಗೆಲುವಾದರೂ ಸಮಪಾಲು ಸಮಬಾಳು ತತ್ವವನ್ನು ಪ್ರಕೃತಿಯ ಎಲ್ಲಾ ಅಂಶಗಳಿಗೂ ಅನ್ವೈಸಲು ಪ್ರಯತ್ನಿಸುವೆ." ಎನ್ನುತ್ತಾನೆ.

ಮಾಲಿಕ "ದಯವಿಟ್ಟು ಟ್ರಾನ್ಸಿಸ್ಟರ್ಗಳನ್ನು ಮತ್ತೆ ಮರಗಳಿಗೆ ಅಳವಡಿಸಿರಿ. ನನಗೂ ಅಳವಡಿಸುವುದು ಹೇಗೆ ಎನ್ನುವುದರ ಕುರಿತು ಮಾಹಿತಿ ನೀಡಿ. ನಾನು ನಿಮ್ಮ ಕೆಲಸಗಳಿಗೆ ಸಹಕಾರ ನೀಡುತ್ತೇನೆ." ಎನ್ನುತ್ತಾನೆ. ವಿಜ್ಞಾನಿ ಹಾಗೂ ಮಾಲಿಕ ಮತ್ತೆ ಮರಗಳಿಗೆ ಟ್ರಾನ್ಸಿಸ್ಟರ್ಗಳನ್ನು ಅಳವಡಿಸುತ್ತಾರೆ. ಪರಸ್ಪರ ಧನ್ಯವಾದಗಳನ್ನು ಸಮರ್ಪಿಸಿ ಪ್ರಯೋಗ ಶಾಲೆಗೆ ತೆರಳುತ್ತಾರೆ.


 

 

ದೃಷ್ಯ೪: ಪ್ರಯೋಗ ಶಾಲೆ.

ವಿಜ್ಞಾನಿ ಎಮೋಷನ್ಟು ಸ್ಪೀಛ್ತಂತ್ರಜ್ಞಾನ ವನ್ನು ಆವಿಶ್ಕರಿಸುತ್ತಾನೆ ಮತ್ತು ತಂತ್ರಾಂಶವನ್ನು ಅಭಿವೃದ್ಧಿಪಡಿಸುತ್ತಾನೆ.

ಮಾಲಿಕನ ಕೈಗೆ ರೇಡಿಯೋವನ್ನು ನೀಡಿ ಕೇಳಲು ವಿನಂತಿಸಿಕೊಳ್ಳುತ್ತಾನೆ. ಒಂದೊಂದೇ ಮರ-ಗಿಡಗಳ-ಬಳ್ಳಿಗಳ ದೃಷ್ಯ ಮತ್ತು ದ್ವನಿಯನ್ನು ಆಸ್ವಾದಿಸುವಲ್ಲಿ ಮಾಲಿಕ ತಲ್ಲೀನನಾಗುತ್ತಾನೆ. ವಿಜ್ಞಾನಿ "ತೋಟಕ್ಕೆ ಹೋಗೋಣವೆ?" ಎಂದು ಮಾಲಿಕನನ್ನು ಕೇಳುತ್ತಾನೆ. ಆಗ ಮಾಲಿಕ ಸಮ್ಮತಿಸಿ ವಿಜ್ಞಾನಿಯೊಂದಿಗೆ ತೋಟಕ್ಕೆ ಬರುತ್ತಾನೆ.

 

ದೃಷ್ಯ : ತೋಟ.

ವಿಜ್ಞಾನಿ ಹಾಗೂ ತೋಟದ ಮಾಲಿಕರಿಬ್ಬರು ಮನುಕುಲದಿಂದ ಪ್ರಕೃತಿ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಮನವರಿಕೆಯಾಗಿದ್ದರ ಕುರಿತು ಪರಸ್ಪರ ಚರ್ಚೆ ನಡೆಸುತ್ತಿರುವಾಗಲೇ, ಅಲ್ಲಿನ ಸಸ್ಯರಾಶಿಗಳು ಆನಂದಭರಿತವಾಗಿ ಭಾವನೆಗಳನ್ನು ಹೊಮ್ಮಿಸುತ್ತಿದ್ದವು. ಇವುಗಳನ್ನು ಅವಲೋಕಿಸುತ್ತಿದ್ದ ಇಬ್ಬರು ಮತ್ತೆ ಕೂಲಿಗಾರರನ್ನು ಕರೆಯಿಸಬೇಕೆಂದು ಮತ್ತು ಅವರೊಟ್ಟಿಗೆ ಸೇರಿ ಇಷ್ಟು ದಿನ ವಯಕ್ತಿಕವಾಗಿ ಪ್ರಕೃತಿಯ ಮೇಲೆ ನಡೆಸಿದ ದೌರ್ಜನ್ಯಕ್ಕಾಗಿ ಕ್ಷಮೆ ಕೋರುವ ಅಭಿಯಾನವನ್ನು ಆರಂಭಿಸಬೇಕೆಂದು ನಿಷ್ಚಯಿಸುತ್ತಾರೆ. ಅದರಂತೆ ಮಾಲಿಕ ಕೂಲಿಗಾರರನ್ನು ಕರೆದುಕೊಂಡು ತೋಟಕ್ಕೆ ಬರುತ್ತಾನೆ. ಕೂಲಿಗಾರರಿಗೂ ಎಮೋಷನ್ಟು ಸ್ಪೀಚ್ತಂತ್ರಾಂಶದ ಮೂಲಕ ಮರ-ಗಿಡ-ಬಳ್ಳಿಗಳ ಭಾವನೆಗಳನ್ನು ತಿಳಿಯಪಡಿಸುತ್ತಾರೆ.

ಹೀಗೆ ತೋಟದಲ್ಲಿನ ಸಸ್ಯಗಳ ಭಾವನೆಗಳನ್ನು ಆಸ್ವಾದಿಸುವಾಗ ಒಬ್ಬ ಕೂಲಿಗಾರ ಒಂದು ಜನಪದ ಶೈಲಿಯ ಹಾಡನ್ನು ಪ್ರಸ್ತುತಪಡಿಸುತ್ತಾನೆ. ಹಾಡಿಗೆ ವಿಜ್ಞಾನಿ, ಮಾಲಿಕ ಮತ್ತು ಅಲ್ಲಿದ್ದ ಎಲ್ಲಾ ಕೂಲಿಗಾರರು ತಲೆದೂಗುವುದಲ್ಲದೆ ತಮ್ಮೆಲ್ಲರೊಳಗೆ ಅಡಗಿದ್ದ ಮಾತೃಹೃದಯದ ಗುಣವನ್ನು ಕಂಡುಕೊಳ್ಳುತ್ತಾರೆ ಮತ್ತು ಹಿಂದೆ ಆದ ತಪ್ಪುಗಳಿಗೆ ಕ್ಷಮೇ ಕೋರುತ್ತಾರೆ.

n  -- -- ***** ***

references:

1. http://www.bbc.com/earth/story/20141111-plants-have-a-hidden-internet

 

2. https://www.smithsonianmag.com/science-nature/the-whispering-trees-180968084/

 

3. https://www.vijayavani.net/if-plant-and-trees-speak-noise-capture-using-technology-by-researcher-vijay-nishant/