ನಮ್ಗೆ ಅಂತ ಏನೇನ್ ಮಾಡ್ದ್ರಿ?


ನೀವೇನೆ ನಮ್ ದೇವ್ರು
ನೀವೇನೆ ನಮ್ ಬೇರು
ಅಂತ ಹೇಳಿ ನಮ್ಗೇನ್ ಮಾಡ್ದ್ರಿ?
ಹೇಳಿ ಪುಜಾರಿಗಳೆ ಈ ದೇವ್ರ‍್ಗೆ ಅಂತ ಏನೇನ್ ಮಾಡ್ದ್ರಿ?

ಜೋಳ್ಗೆಗೆ ಹೋಳ್ಗೆ ಹಾಕಿ
ಕೈಕೈಗೆ ದುಡ್ಡು ಕೊಟ್ಟು
ಚುನಾವಣೆಲಿ ಗೆದ್ದೇಬಿಡ್ತೀರಲ್ಲ?
ಅಣ್ಣಾ, ನಮ್ಗೇನೆ ಗೆದ್ಲು ತಿನ್ಸ್ತೀರಲ್ಲ?!

ರೂಲ್ಸು ಮೇಲೆ ರೂಲ್ಸು ಮಾಡಿ
ಕಾಸಿಂದ್ಲೆ ಅವನ್ನು ದೂಕಿ
ಬ್ರಷ್ಟರಿಗೆ ದೇವ್ರೆ ಆಗಿ
ಬೊಜ್ಜು ಬೆಳ್ಸಿ ನಾಡ ನಾಡಿಗಳನ್ನೆ ಪಚ್ಡಿ ಮಾಡ್ದ್ರಲ್ಲ?
ಹೇಳಿ ಪಕ್ಷ ಪಕ್ಷಿಗಳೆ ಈ ದೇವ್ರ‍್ಗೆ ಅಂತ ಏನೇನ್ ಮಾಡ್ದ್ರಿ?

-----

ನನ್ನ ಅಭಿಪ್ರಾಯ
ಇಂದು ಪ್ರಾಮಾಣಿಕರನ್ನು ಹುಡುಕುವುದು ’ಮರಳ ರಾಶಿಯಲ್ಲಿ  ಬಿದ್ದ ಸಾಸಿವೆಯೊಂದನ್ನು’ ಹುಡುಕಿದಂತೆ ಆಗಿಬಿಟ್ಟಿದೆ. ಈ ಹಿನ್ನೆಲೆಯಲ್ಲಿ ನಮ್ಮ ದೇಶದ ರಾಜಕೀಯ ವ್ಯವಸ್ಥೆಯನ್ನು ವಿಡಂಬಿಸಲೆಂದು ಬರೆಯಲಾದ ಹಾಡು ಇದಾಗಿದೆ.