ಮದುವೆಯಾಗುತ್ತಿರುವ ಹೆಣ್ಣು ಮತ್ತು ಗಂಡು ಮಾಡಬೇಕಾಗಿರುವ ಪ್ರಮಾಣವಚನದ ನಮೂನೆ

ಕುವೆಂಪು ರವರು ಬರೆದ ಮಂತ್ರ ಮಾಂಗಲ್ಯವನ್ನು ಓದಿದ ಬಳಿಕ ನಾ ಬರೆದಿರುವ
---
ಮದುವೆಯಾಗುತ್ತಿರುವ ಹೆಣ್ಣು ಮತ್ತು ಗಂಡು ಮಾಡಬೇಕಾಗಿರುವ ಪ್ರಮಾಣವಚನದ ನಮೂನೆ:
“- ಎಂಬ ಹೆಸರಿನ ನಾನು,
ಸಾಮಾಜಿಕ ಜೀವಿಯಾಗಿದ್ದು ಕಾನೂನಿನ ಮೂಲಕ ನೆಲೆಗೊಳಿಸಲ್ಪಟ್ಟಿರುವ ಸಾಮಾಜಿಕ ನಿಯಮಗಳ ವಿಶಯದಲ್ಲಿ ನಿಜವಾದ ಶ್ರದ್ದೆ ಮತ್ತು ನಿಶ್ಟೆಯನ್ನು ಹೊಂದಿರುತ್ತೇನೆಂದೂ;
ನಾನು ಪ್ರಾಕ್ರುತಿಕ ವಯ್ವಿದ್ಯತೆಗೆ ಮತ್ತು ಸಮನ್ವಯತೆಗೆ ದಕ್ಕೆ ತರುವುದಿಲ್ಲವೆಂದೂ;
ಹುಟ್ಟು-ಸಾವು ಇವುಗಳ ನಡುವಿನ ಜೀವಿತದ ದಿನಗಳನ್ನು ಸಂಗಾತಿಯೊಡನೆ ಸಮನ್ವಯದಲ್ಲಿ ನಾನು ಬಾಳುತ್ತೇನೆಂದೂ;
ಮಾನವೀಯ ಮವ್ಲ್ಯಗಳನ್ನು ಎಂತದ್ದೇ ಪರಿಸ್ತಿತಿಯಲ್ಲೂ ನಾನು ಎತ್ತಿ ಹಿಡಿಯುತ್ತೇನೆಂದೂ;
ಯುಕ್ತವಾಗಿ, ಶ್ರದ್ದಾಪೂರ‍್ವಕವಾಗಿ ಮತ್ತು ನನ್ನ ಸಾಮರ‍್ತ್ಯ, ತಿಳುವಳಿಕೆ ಮತ್ತು ವಿವೇಚನೆ ಯಶ್ಟರಮಟ್ಟಿಗೆ
- ಎಂಬ ಸಂಗಾತಿಯೊಡನೆ ಸಾಮಾಜಿಕ ಮತ್ತು ಸಾಂಸಾರಿಕ ಕರ‍್ತವ್ಯಗಳನ್ನು ತಾರತಮ್ಯಮಾಡದೆ, ದ್ವೇಶವಿಲ್ಲದೆ, ಕೇಡನ್ನು ಬಯಸದೆ ನೆರವೇರಿಸುತ್ತೇನೆಂದೂ;
ಈ ನಮ್ಮ ದೇಶದ ಸಂವಿದಾನವನ್ನು ಮತ್ತು ಕಾನೂನುಗಳನ್ನು ಪಾಲಿಸುತ್ತೇನೆಂದೂ;
ನಿಮ್ಮೆಲ್ಲರ ಸಮಕ್ಶಮದಲ್ಲಿ
ಪ್ರಮಾಣ ಮಾಡುತ್ತೇನೆ, ಶ್ರದ್ದಾಪೂರ‍್ವಕವಾಗಿ ಪ್ರತಿಜ್ನೆ ಮಾಡುತ್ತೇನೆ”.

ಪ್ರಮಾಣವಚನವಾದ ಬಳಿಕ ಇಬ್ಬರು ಒಟ್ಟಿಗೆ ಹೇಳುವಂತಹ ದ್ರುಡತೆಯ, ಬದ್ದತೆಯ ಮಾತು:
ಈಗಶ್ಟೇ ನಾವು ಸ್ವೀಕರಿಸಿದ ಪ್ರಮಾಣವಚನಕ್ಕನುಸಾರ
೧. ನಮ್ಮಿಂದಾಗುವ ಅನಿರೀಕ್ಶಿತ ತಪ್ಪುಗಳನ್ನು ಸುಳ್ಳು ಹೇಳದೆ ಒಪ್ಪಿಕೊಳ್ಳುತ್ತೇವೆ ಮತ್ತು ನಿರ‍್ಬೀತಿಯಿಂದ ವಾಸ್ತವ ಸ್ತಿತಿಯನ್ನು ಅರಿತು ತಪ್ಪುಗಳನ್ನು ತಿದ್ದುಕೊಂಡು ಬಾಳುತ್ತೇವೆಂದು
 ನಾವು ನಮ್ಮ ಬದ್ದತೆಯನ್ನು ಮತ್ತು ದ್ರುಡತೆಯನ್ನು ನಿಮ್ಮೆಲ್ಲರ ಸಮಕ್ಶಮದಲ್ಲಿ ವ್ಯಕ್ತಪಡಿಸುತ್ತಿದ್ದೇವೆ.
೨. ಪರವಂಚನೆ ಮತ್ತು ಆತ್ಮವಂಚನೆಯನ್ನು ಯಾವುದೇ ಕಾರಣಕ್ಕು ಮಾಡಿಕೊಳ್ಳುವುದಿಲ್ಲವೆಂದು
ನಾವು ನಮ್ಮ ಬದ್ದತೆಯನ್ನು ಮತ್ತು ದ್ರುಡತೆಯನ್ನು ನಿಮ್ಮೆಲ್ಲರ ಸಮಕ್ಶಮದಲ್ಲಿ ವ್ಯಕ್ತಪಡಿಸುತ್ತಿದ್ದೇವೆ.
೩. ಮೇಲು-ಕೀಳು, ಶ್ರೇಶ್ಟ-ಕನಿಶ್ಟ ಎನ್ನುವ ಪರಿಕಲ್ಪನೆಗಳನ್ನು ನಾವಿಬ್ಬರು ಬದುಕಿರುವಶ್ಟು ದಿನ ಯಾರೊಬ್ಬರಿಗೂ ಬಳಸುವುದಿಲ್ಲವೆಂದು
 ನಾವು ನಮ್ಮ ಬದ್ದತೆಯನ್ನು ಮತ್ತು ದ್ರುಡತೆಯನ್ನು ನಿಮ್ಮೆಲ್ಲರ ಸಮಕ್ಶಮದಲ್ಲಿ ವ್ಯಕ್ತಪಡಿಸುತ್ತಿದ್ದೇವೆ.

--
ತಿದ್ದುಪಡಿ ಮಾಡಬೇಕೆ?
ನಿಮ್ಮ ಅನಿಸಿಕೆಯನ್ನು ನೀಡಿ ದಯವಿಟ್ಟು.

ಸ್ಮಾರ್ಟ್ಕೇನ್ ಸ್ವಯಂ-ಕಲಿಕೆಯ ಕೈಪಿಡಿ

ಕನ್ನಡಕ್ಕೆ ಅನುವಾದ ಮಿತ್ರಜ್ಯೋತಿ.



© ಭಾರತೀಯ ತಂತ್ರಜ್ಞಾನ ಸಂಸ್ಥೆ, ದೆಹಲಿ.

ಸ್ಮಾರ್ಟ್‌ಕೇನ್ ಐಐಟಿ ದೆಹಲಿ, ಫ್ಯೂನಿಕ್ಸ್ ಮೆಡಿಕಲ್ ಸಿಸ್ಟಮ್ಸ್ (ಪ್ರೈ) ಲಿಮಿಟೆಡ್, ಚೆನ್ನೈ ಮತ್ತು ಸಕ್ಷಮ ಟ್ರಸ್ಟ್, ದೆಹಲಿ ಇವುಗಳ ಜಂಟಿ ಪ್ರಯತ್ನದ ಒಂದು ಫಲಿತಾಂಶವಾಗಿದೆ. ದೃಷ್ಟಿ ದೌರ್ಬಲ್ಯತೆಯನ್ನು ಹೊಂದಿರುವ ಜನರಿಗಾಗಿ ಕಾರ್ಯನಿರ್ವಹಿಸುತ್ತಿರುವ ಹಲವು ಬಳಕೆದಾರರು ಮತ್ತು ಸಂಸ್ಥೆಗಳು ಈ ಸಾಧನವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೊಡುಗೆಯನ್ನು ನೀಡಿವೆ.

ಪರಿವಿಡಿ:

೧. ಈ ಕೈಪಿಡಿಯ ಉದ್ದೇಶ
೨. ಸ್ಮಾರ್ಟ್‌ಕೇನ್ ಸಾಧನ ಎಂದರೇನು?
೩. ಸ್ಮಾರ್ಟ್‌ಕೇನ್ ಸಾಧನವನ್ನು ಯಾರು ಉಪಯೋಗಿಸಬಹುದು?
೪. ಸ್ಮಾರ್ಟ್‌ಕೇನ್ ಸಾಧನದೊಂದಿಗೆ ಕಾರ್ಯನಿರ್ವಹಿಸುವ ತತ್ವ
೫. ಸ್ಮಾರ್ಟ್‌ಕೇನ್ ಸಾಧನದೊಂದಿಗೆ ಪ್ರಾರಂಭಿಸುವುದು ಹೇಗೆ?
   ೫.೧ ಸ್ಮಾರ್ಟ್‌ಕೇನ್ ಸಾಧನವನ್ನು ಶೋಧಿಸುವುದು
   ೫.೨ ಸಂವೇದಕವನ್ನು ನೆಲೆಗೊಳಿಸುವುದು
   ೫.೩ ಕಂಪನದ ಮಾದರಿಗಳು
೬. ಸ್ಮಾರ್ಟ್‌ಕೇನ್ ಸಾಧನ ಉಪಯೋಗಿಸಲು ತರಬೇತಿ
   ೬.೧ ಬ್ಯಾಟರಿ ಸ್ಥಿತಿ ಮತ್ತು ವಿಧಾನಗಳನ್ನು ತಿಳಿದುಕೊಳ್ಳಲು ಬೀಪ್ ಶಬ್ಧ ಮಾದರಿಗಳು
   ೬.೨ ತ್ವರಿತವಾಗಿ ಸಮೀಪಿಸುತ್ತಿರುವ ಅಡೆತಡೆ
   ೬.೩ ಸ್ಮಾರ್ಟ್‌ಕೇನ್ ಸಾಧನವನ್ನು ಸರಿಯಾಗಿ ಮತ್ತು ಪರಿಣಾಮಕಾರಿಯಾಗಿ ಉಪಯೋಗಿಸುವುದು
೭. ಸ್ಮಾರ್ಟ್‌ಕೇನ್ ಸಾಧನವನ್ನು ನಿರ್ವಹಣೆ ಮಾಡುವುದು
   ೭.೧ ಬ್ಯಾಟರಿ ಮತ್ತು ಚಾರ್ಜಿಂಗ್
   ೭.೨ ಸಾಧನವನ್ನು ಮಡಿಸುವುದು ಮತ್ತು ಕೊಂಡೊಯ್ಯುವುದು
೮. ಸ್ಮಾರ್ಟ್‌ಕೇನ್ ಸಾಧನವನ್ನು ಉಪಯೋಗಿಸುವಲ್ಲಿ ಮುನ್ನೆಚ್ಚರಿಕೆಗಳು
೯. ಸಂಪರ್ಕ ಮಾಹಿತಿ
   ಸಕ್ಷಮ್ ಟ್ರಸ್ಟ್
೧೦. ಅನುಬಂಧ ಎ: ತಾಂತ್ರಿಕ ವಿವರಣೆಗಳು
   ೧೦.೧. ಭೌತಿಕ ವಿವರಣೆಗಳು
   ೧೦.೨ ಪರಿಸರಾತ್ಮಕ ವಿವರಣೆ
   ೧೦.೩ ಬ್ಯಾಟರಿ ವಿವರಣೆಗಳು
   ೧೦.೪ ಚಾರ್ಜರ್ ವಿವರಣೆಗಳು
   ೧೦.೫ ಪತ್ತೆಹಚ್ಚುವ ಗುಣಲಕ್ಷಣಗಳು
   ೧೦.೬ ಕಂಪನದ ಗುಣಲಕ್ಷಣಗಳು
   ೧೦.೭. ವ್ಹೈಟ್ ಕೇನ್ ವಿವರಣೆಗಳು
   ೧೦.೮. ಪ್ರಾಮಾಣೀಕರಿಸಿದ ಉಪಕರಣಗಳು
೧೧. ಅನುಬಂಧ ಬಿ: ಪದೇಪದೇ ಕೇಳಲಾಗುವ ಪ್ರಶ್ನೆಗಳು
೧೨. ಅನುಬಂಧ ಸಿ: ಸ್ಮಾರ್ಟ್‌ಕೇನ್ ಸಾಧನದ ಬಗ್ಗೆ ಜನರು ಏನು ಹೇಳುತ್ತಾರೆ.
************

. ಕೈಪಿಡಿಯ ಉದ್ದೇಶ

ಈ ಕೈಪಿಡಿಯ ಉದ್ದೇಶವು ದೃಷ್ಟಿ ದೌರ್ಬಲ್ಯತೆಯನ್ನು ಹೊಂದಿರುವ ಜನರಿಗಾಗಿ ಮೀಸಲಾದ ಸ್ಮಾರ್ಟ್‌ಕೇನ್ ಎಂದು ಕರೆಯಲಾಗುವ ಸಾಧನದ ಬಗ್ಗೆ ತಿಳಿದುಕೊಳ್ಳುವುದಾಗಿದೆ, ಮತ್ತು ಅದರ ಕಾರ್ಯನಿರ್ವಹಣೆಯ ತತ್ವ ಮತ್ತು ಒಂದು ಚಲನಶೀಲತೆಯ ಬಗ್ಗೆ ತಿಳಿದುಕೊಳ್ಳುವುದಾಗಿದೆ. ಈ ಸಾಧನವನ್ನು ಉಪಯೋಗಿಸುವ ಮೊದಲು, ಈ ಕೈಪಿಡಿಯನ್ನು ಕಾಳಜಿವಹಿಸಿ ಓದುವುದು ಮತ್ತು ಉತ್ಪನ್ನದ ಕಾರ್ಯವನ್ನು ತಿಳಿದುಕೊಳ್ಳುವುದು ಸ್ಮಾರ್ಟ್‌ಕೇನ್ ಬಳಕೆದಾರರಿಗೆ ಕಡ್ಡಾಯವಾಗಿರುತ್ತದೆ. ಕೈಪಿಡಿಯು ಸ್ವಯಂ-ಕಲಿಕೆಯ ಕೈಪಿಡಿಯಾಗಿ ಸಂಭಾವ್ಯ ಬಳಕೆದಾರರಿಂದ ಮತ್ತು ಚಲನಶೀಲತೆಯಲ್ಲಿ ದೃಷ್ಟಿದೌರ್ಬಲ್ಯತೆಯನ್ನು ಹೊಂದಿರುವ ಜನರಿಗೆ ತರಬೇತಿ ನೀಡುವ ಚಲನಶೀಲತೆಯ ಭೋಧಕರಿಂದ ಉಪಯೋಗಿಸಲ್ಪಡುವುದಕ್ಕಾಗಿ ಉದ್ದೇಶಿಸಲಾಗಿದೆ.

. ಸ್ಮಾರ್ಟ್ಕೇನ್ ಸಾಧನ ಎಂದರೇನು?

ಸ್ಮಾರ್ಟ್‌ಕೇನ್ ಸಾಧನವು ದೃಷ್ಟಿ ದೌರ್ಬಲ್ಯತೆಯನ್ನು ಹೊಂದಿರುವ ವ್ಯಕ್ತಿಗಳಿಗಾಗಿ ವಿದ್ಯುನ್ಮಾನ ಚಲನೆಯ ನೆರವು ಆಗಿದೆ ಮತ್ತು ಚಲನಶೀಲತೆ ಹಾಗೂ ಸಂಚರಣೆಗಾಗಿ ಸಾಮಾನ್ಯವಾಗಿ ಉಪಯೋಗಿಸಲಾಗುವ ವ್ಹೈಟ್ ಕೇನ್ ಜೊತೆಯೊಂದಿಗೆ ಉಪಯೋಗಿಸಲ್ಪಡುತ್ತದೆ. ಸಾಮಾನ್ಯವಾದ ವ್ಹೈಟ್ ಕೇನ್ ಮೊಣಕಾಲಿನ ಎತ್ತರದವರೆಗೆ ಅಡೆತಡೆಗಳನ್ನು ಪತ್ತೆಹಚ್ಚುವ ಹಾಗೆಯೇ, ಈ ಸಾಧನವು ಮೊಣಕಾಲಿನಿಂದ ತಲೆಯ ಎತ್ತರದವರೆಗೆ ಅಡೆತಡೆಗಳನ್ನು ಪತ್ತೆಹಚ್ಚಲು ಸಹಾಯಕವಾಗುತ್ತದೆ. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ, ಸ್ಮಾರ್ಟ್‌ಕೇನ್ ಸಾಧನವು ವ್ಹೈಟ್‍ಕೇನ್‌ಗೆ ಬದಲಾಗಿ ಉಪಯೋಗಿಸಲು ಉದ್ಧೇಶಿತವಾದುದಲ್ಲ ಆದರೆ ಇದರ ಕಾರ್ಯವಿಸ್ತಾರವನ್ನು ವೃದ್ದಿಸಲು ಉದ್ಧೇಶಿತವಾಗಿದೆ. ಸಾಧನವನ್ನು ಸಾಮಾನ್ಯವಾಗಿ ಬಳಕೆದಾರರು ಹಿಡಿದುಕೊಳ್ಳುವ ಜಾಗದಲ್ಲಿನ ಮೇಲ್ಭಾಗದಲ್ಲಿ ವ್ಹೈಟ್‌ಕೇನ್ ಮೇಲೆ ಅಳವಡಿಸಲಾಗುತ್ತದೆ. ಇದು ಹೊರಾಂಗಣದಲ್ಲಿ ಉಪಯೋಗಿಸುವಾಗ ೩ ಮೀಟರ್‌ಗಳವರೆಗೆ ಮತ್ತು ಒಳಾಂಗಣ ಪರಿಸರದಲ್ಲಿ ಉಪಯೋಗಿಸುವಾಗ ೧.೮ ಮೀಟರ್‌ಗಳವರೆಗಿನ ಅಡೆತಡೆಗಳನ್ನು ಪತ್ತೆಹಚ್ಚಲು ಸಾಧ್ಯವಿದೆ. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ, ಇದು ಸಂಭವನೀಯ ಡಿಕ್ಕಿಹೊಡೆಯುವಿಕೆಗೂ ಮೊದಲು ಸನ್ನಿಹಿತವಾದ ಅಡೆತಡೆಗಳ ಬಗ್ಗೆ ಎಚ್ಚರಿಕೆ ನೀಡುತ್ತದೆ ಮತ್ತು ಸಂಘರ್ಷ-ಮುಕ್ತವಾದ ದಾರಿಯನ್ನು ಕಂಡುಕೊಳ್ಳಲು ಸಹಾಯಕವಾಗುತ್ತದೆ.

. ಸ್ಮಾರ್ಟ್ಕೇನ್ ಸಾಧನವನ್ನು ಯಾರು ಉಪಯೋಗಿಸಬಹುದು?

ಆತ ಅಥವಾ ಆಕೆಯ ಅಗತ್ಯತೆಗಳಿಗಾಗಿ ವ್ಹೈಟ್‌ಕೇನ್‌ನ ನಿಯತವಾದ ಬಳಕೆದಾರರಾಗಿರುವ, ದೃಷ್ಟಿ ದೌರ್ಬಲ್ಯತೆಯನ್ನು ಹೊಂದಿರುವ ಯಾವುದೇ ವ್ಯಕ್ತಿಯು ಈ ಸಾಧನವನ್ನು ಉಪಯೋಗಿಸಬಹುದು. ಇದನ್ನು ಎಲ್ಲಾ ವಯಸ್ಸಿನ ಜನರು ಉಪಯೋಗಿಸಬಹುದಾಗಿದೆ. ಸ್ಮಾರ್ಟ್‌ಕೇನ್ ಸಾಧನದ ಬಳಕೆಯನ್ನು ವ್ಹೈಟ್‌ಕೇನ್ ಅನ್ನು ಉಪಯೋಗಿಸಿ ಅನುಭವವಿರದ ಜನರಿಗೆ ಶಿಫಾರಸು ಮಾಡಲಾಗಿಲ್ಲ. ಈ ಸಾಧನವನ್ನು ಗುಡ್ಡಗಾಡು ಪ್ರದೇಶಗಳಲ್ಲಿ ಮತ್ತು ಸಮೀಪದೃಷ್ಟಿಯ ನೆರವಿಲ್ಲದ ಚಲನಶೀಲತೆಯಲ್ಲಿ ಅಧಿಕ ಜನಸಂದಣಿಯ ಪ್ರದೇಶಗಳಲ್ಲಿ ಉಪಯೋಗಿಸುವುದು ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಸಮರ್ಪಕ ತರಬೇತಿಯೊಂದಿಗೆ ಶ್ರವಣ ದೋಷವುಳ್ಳ-ದೃಷ್ಟಿಮಾಂದ್ಯತೆಯುಳ್ಳ ಜನರೂ ಸಹ ತಮ್ಮ ಚಲನಶೀಲತೆಯ ಅಗತ್ಯತೆಗಳಿಗಾಗಿ ಈ ಸಾಧನವನ್ನು ಉಪಯೋಗಿಸಬಹುದು.

. ಸ್ಮಾರ್ಟ್ಕೇನ್ ಸಾಧನದೊಂದಿಗೆ ಕಾರ್ಯನಿರ್ವಹಿಸುವ ತತ್ವ

ಸ್ಮಾರ್ಟ್‌ಕೇನ್ ಸಾಧನವು ಅಡೆತಡೆಗಳ ಉಪಸ್ಥಿತಿಯನ್ನು ಪತ್ತೆಹಚ್ಚಲು ಶ್ರವಣಾತೀತ ತರಂಗಗಳನ್ನು ಉಪಯೋಗಿಸುತ್ತದೆ. ಶ್ರವಣಾತೀತ ತರಂಗಗಳು ಮನುಷ್ಯನಿಗೆ ಕೇಳಿಸದಂತಹ ಶಬ್ಧ ತರಂಗಗಳಾಗಿವೆ. ಈ ಸಾಧನವು ಶ್ರವಣಾತೀತ ತರಂಗಗಳನ್ನು ಹೊರಗೆ ಬಿಡುವ ಮತ್ತು ಅವುಗಳನ್ನು ಸ್ವೀಕರಿಸಬಹುದಾದ ಶ್ರವಣಾತೀಯ ಸಂವೇದಕವನ್ನು ಹೊಂದಿದೆ. ಅಡೆತಡೆಗಳ ಉಪಸ್ಥಿತಿಯಲ್ಲಿ ಈ ತರಂಗಗಳು ಪ್ರತಿಫಲಿಸುತ್ತವೆ ಮತ್ತು ಅಡೆತಡೆಗಳಿಂದ ಪ್ರತಿಫಲಿಸಲ್ಪಡುವ ತರಂಗಗಳು ಸಾಧನದ ಸಂವೇದಕದಿಂದ ಪತ್ತೆಹಚ್ಚಲ್ಪಡುತ್ತವೆ. ತರಂಗಗಳು ಪ್ರತಿಫಲಿಸಿದ ಅಡೆತಡೆಗಳು ಒಂದು ನಿರ್ದಿಷ್ಟ ದಿಕ್ಕಿನಲ್ಲಿ ಮತ್ತು ಅಂತರ ವ್ಯಾಪ್ತಿಯೊಳಗೆ ಉಳಿದುಕೊಳ್ಳುತ್ತವೆ, ಎಚ್ಚರಿಕೆಗಳು ಒಂದು ಮೊಬೈಲ್ ಫೋನಿನ ಕಂಪನದ ರೀತಿಯಲ್ಲಿ ಬಳಕೆದಾರನಿಗೆ ರವಾನಿಸಲ್ಪಡುತ್ತವೆ. ಸಂವೇದಕವನ್ನು ಮುಂಬರುವ ಅಡೆತಡೆಗಳ ದಿಕ್ಕಿನಲ್ಲಿ ಮುಂಭಾಗಕ್ಕೆ ನಿರ್ದೇಶಿಸಲ್ಪಟ್ಟಿರುವ ರೀತಿಯಲ್ಲಿ ಬಳಕೆದಾರನು ಹಿಡಿದುಕೊಳ್ಳಬೇಕಾಗಿರುವುದು ಅತ್ಯಂತ ಅವಶ್ಯಕವಾಗಿರುತ್ತದೆ. ಸ್ಮಾರ್ಟ್‌ಕೇನ್ ಸಾಧನವು ಮಡಿಸಬಹುದಾದ ವ್ಹೈಟ್ ಕೇನ್‌ನ ಮೇಲ್ಭಾಗದ ಮಡಿಕೆಯ ಮೇಲೆ ಅಳವಡಿಸಲ್ಪಟ್ಟಿರುತ್ತದೆ ಮತ್ತು ವ್ಹೈಟ್ ಕೇನ್‌ಗೆ ಒಂದು ಸ್ವಾಭಾವಿಕ ವಿಸ್ತರಣೆಯಾಗಿ ಕಾರ್ಯನಿರ್ವಹಿಸುತ್ತದೆ. ಅಗತ್ಯಬಿದ್ದಾಗ ಇದನ್ನು ಬೇರ್ಪಡಿಸಬಹುದು ಮತ್ತು ಸರಳವಾಗಿ ಸೇರ್ಪಡೆಗೊಳಿಸುವ ಯಾಂತ್ರಿಕ ವ್ಯವಸ್ಥೆಯನ್ನು ಉಪಯೋಗಿಸಿ ಪುನಃ ಜೋಡಿಸಬಹುದು.

ಕಂಪನದ ಫಲಿತಾಂಶ
 ಶ್ರವಣಾತೀತ
ವ್ಯಾಪ್ತಿ
ಚಿತ್ರ ೧ Figure-1 - ಒಂದು ಮರದಿಂದ ಶ್ರವಣಾತೀತ ತರಂಗದ ಪ್ರತಿಫಲನ ಮತ್ತು ಕಂಪನಗಳ ಮೂಲಕ ಅಂತರದ ಸೂಚನೆ

ಸ್ಮಾರ್ಟ್‌ಕೇನ್ ಸಾಧನವನ್ನು ಉಪಯೋಗಿಸುವ ಪ್ರಯೋಜನಗಳು ಈ ಕೆಳಗಿನಂತಿವೆ.
ಇದು ಒಂದು ಮರದ ಕೊಂಬೆ, ಒಂದು ಕಾರಿನ ಕೆಳಬದಿ, ಬಟ್ಟೆ ಒಣಗಿಸಲು ಹಾಕಲಾಗಿರುವ ತಂತಿಗಳು, ಹೊರಚಾಚಿಕೊಂಡಿರುವ ವಿಂಡೊ ಏರ್ ಕಂಡೀಶನರ್‌ಗಳು, ಇತ್ಯಾದಿಗಳಂತಹವುಗಳನ್ನು ವ್ಹೈಟ್ ಕೇನ್ ಮೂಲಕ ಸಾಮಾನ್ಯವಾಗಿ ಪತ್ತೆಹಚ್ಚಲಾಗದಂತಹ ಮೊಣಕಾಲಿನ ಮೇಲಿನ ಅಡೆತಡೆಗಳನ್ನು ಪತ್ತೆಹಚ್ಚಲು ನೆರವಾಗುತ್ತದೆ. ಈ ಅಡೆತಡೆಗಳು ಸಾಮಾನ್ಯವಾಗಿ ತಲೆಗೆ ಮತ್ತು ದೇಹದ ಮೇಲ್ಭಾಗಕ್ಕೆ ಗಾಯವನ್ನುಂಟುಮಾಡುತ್ತವೆ ಮತ್ತು ಇವುಗಳನ್ನು ಬೇಗನೆ ಪತ್ತೆಹಚ್ಚುವುದು ನಿರ್ಣಾಯಕವಾಗಿರುತ್ತದೆ.
ಇದು ಹೊರಾಂಗಣದಲ್ಲಿರುವಾಗ ೩ ಮೀಟರ್‌ಗಳು ಮತ್ತು ಒಳಾಂಗಣದಲ್ಲಿರುವಾಗ ೧.೮ ಮೀಟರ್‌ಗಳ ಪತ್ತೆಹಚ್ಚುವಿಕೆಯ ವ್ಯಾಪ್ತಿಯನ್ನು ಹೆಚ್ಚಿಸುತ್ತದೆ. ಹೀಗೆ ಇದು ನೈಜವಾದ ಅಡೆತಡೆಯನ್ನು ಸ್ಪರ್ಶಿಸುವ ಬಹು ಮೊದಲೇ ಅಡೆತಡೆಗಳ ಉಪಸ್ಥಿತಿಯ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ದೊಡ್ಡದಾಗಿರುವ ಗೋಡೆ ಮತ್ತು ಅತ್ಯಂತ ಚಿಕ್ಕದಾದ ದಾರಗಳಂತಹ ವಸ್ತುಗಳನ್ನು ಮೇಲೆ ಉಲ್ಲೇಖಿಸಿದ ಅಂತರದಿಂದ ಪತ್ತೆಹಚ್ಚಬಹುದು. ಈ ಬೇಗನೆ ಪತ್ತೆಹಚ್ಚುವಿಕೆಯು ಅನಪೇಕ್ಷಿತ ಢಿಕ್ಕಿಹೊಡೆಯುವಿಕೆಯನ್ನು ತಪ್ಪಿಸುವಲ್ಲಿ ನೆರವಾಗುತ್ತದೆ.
ನಡೆದುಕೊಂಡು ಹೋಗುವಾಗ ಇದು ಅಡೆತಡೆಗಳನ್ನು ಪತ್ತೆಹಚ್ಚುವ ಮತ್ತು ತಪ್ಪಿಸುವ ಮೂಲಕ ಢಿಕ್ಕಿ ಹೊಡೆಯುವುದರಿಂದ ಮುಕ್ತವಾದ-ದಾರಿಗಳನ್ನು ಕಂಡುಕೊಳ್ಳುವಲ್ಲಿ ಸಹಾಯಕವಾಗುತ್ತದೆ.

. ಸ್ಮಾರ್ಟ್ಕೇನ್ ಸಾಧನದೊಂದಿಗೆ ಪ್ರಾರಂಭಿಸುವುದು ಹೇಗೆ?

ಈ ಸ್ಮಾರ್ಟ್‌ಕೇನ್ ಸಾಧನವು ಪ್ಯಾಕೇಜ್‌ನಲ್ಲಿ ಬರುತ್ತದೆ ಮತ್ತು ಈ ಕೆಳಗಿನವುಗಳನ್ನು ಒಳಗೊಂಡಿರುತ್ತದೆ:
·      ಒಂದು ವ್ಹೈಟ್ ಕೇನ್ ಮೇಲೆ ಅಳವಡಿಸಲಾದ ಸ್ಮಾರ್ಟ್‌ಕೇನ್ ಸಾಧನ
·      ಚಾರ್ಜಿಂಗ್ ಕಾರ್ಡ್ ಜೊತೆಗೆ ಪವರ್ ಚಾರ್ಜರ್
·      ಬ್ರೈಲ್ ಮತ್ತು ಸ್ಪಷ್ಟ ಮುದ್ರಣದಲ್ಲಿರುವ ಬಳಕೆದಾರರ ಕೈಪಿಡಿ
·      ಇ-ಪಠ್ಯದಲ್ಲಿರುವ ಕೈಪಿಡಿಗಳು, ಡೈಸಿ ಫಾರ್ಮ್ಯಾಟ್, ಎಂಪಿ೩ ಫಾರ್ಮ್ಯಾಟ್ (ಇಂಗ್ಲಿಷ್, ಹಿಂದಿ ಅಥವಾ ಸ್ಥಳೀಯ ಭಾಷೆ) ಮತ್ತು ತರಬೇತಿ ವಿಡಿಯೊಗಳನ್ನು ಒಳಗೊಂಡಿರುವ ಕಾಂಪ್ಯಾಕ್ಟ್ ಡಿಸ್ಕ್ (ಸಿಡಿ)


. ಸ್ಮಾರ್ಟ್ಕೇನ್ ಸಾಧನವನ್ನು ಶೋಧಿಸುವುದು

ನೀವು ಸ್ಮಾರ್ಟ್‌ಕೇನ್ ಸಾಧನವನ್ನು ಮೊದಲ ಬಾರಿಗೆ ಖರೀದಿಸಿದಾಗ ಅಥವಾ ಅದನ್ನು ಸ್ವೀಕರಿಸಿದಾಗ ಅದನ್ನು ಶೋಧಿಸುವುದಕ್ಕಾಗಿ ಈ ಕೆಳಗಿನ ಪ್ರಕ್ರಿಯೆಯನ್ನು ಅನುಸರಿಸಲು ಶಿಫಾರಸು ಮಾಡಲಾಗಿದೆ:
ಆರಾಮವಾಗಿ ಕುಳಿತುಕೊಳ್ಳಿರಿ ಮತ್ತು ಬಾಕ್ಸ್ ಅನ್ನು ನಿಮ್ಮ ತೊಡೆ ಅಥವಾ ಒಂದು ಟೇಬಲ್ ಮೇಲಿಟ್ಟು ಎರಡೂ ಕೈಗಳನ್ನು ಉಪಯೋಗಿಸಿ ಬಾಕ್ಸ್ ತೆರೆಯಿರಿ.
ಸಾಧನವನ್ನು ನಿಧಾನವಾಗಿ ಹೊರತೆಗೆಯಿರಿ. ಸಾಮಾನ್ಯವಾಗಿ ಮಡಿಸಬಹುದಾದ ವ್ಹೈಟ್‌ಕೇನ್‌ನಲ್ಲಿ ಮಾಡಲಾದಂತೆ ಒಂದು ಎಲಾಸ್ಟಿಕ್ ತಂತಿಯೊಂದಿಗೆ ಕಟ್ಟಲಾದ ಒಂದು ಮಡಿಸಿದ ವ್ಹೈಟ್ ಕೇನ್ ಮೇಲೆ ಏರಿಸಲಾಗಿರುವ ಸ್ಮಾರ್ಟ್‌ಕೇನ್ ಸಾಧನವನ್ನು ನೀವು ಕಾಣುವಿರಿ.
ತಂತಿಯನ್ನು ಬಿಚ್ಚುವ ಮೂಲಕ ಅಸೆಂಬ್ಲಿಯನ್ನು ಮಡಿಕೆಗಳನ್ನು ತೆಗೆಯಿರಿ ಮತ್ತು ಈಗ ನೀವು ಸಾಧನವನ್ನು ಶೋಧಿಸಲು ಸಿದ್ಧರಾಗಿರುವಿರಿ.

ನೀವು ಸ್ಮಾರ್ಟ್‌ಕೇನ್ ಸಾಧನವನ್ನು ಬಿಟ್ಟು ಬೇರೇನೂ ಅಲ್ಲದ ವ್ಹೈಟ್ ಕೇನ್‌ನ ಮೇಲಿನ ಮಡಿಕೆಯನ್ನು ಆವರಿಸುವ ಹಿಡಿಯ ರೂಪದಲ್ಲಿರುವ ಒಂದು ಉದ್ದವಾದ ಹಿಡಿದುಕೊಳ್ಳುವ ಭಾಗವನ್ನು ಕಂಡುಕೊಳ್ಳುವಿರಿ. ನೀವು ಸಾಮಾನ್ಯವಾಗಿ ಒಂದು ವ್ಹೈಟ್ ಕೇನ್ ಹಿಡಿದುಕೊಳ್ಳುವ ರೀತಿಯಲ್ಲಿಯೆ, ಅದರ ಮೇಲೆ ಅಳವಡಿಸಲಾದ ಸ್ಮಾರ್ಟ್‌ಕೇನ್ ಸಾಧನದೊಂದಿಗೆ ಕೇನ್ ಹಿಡಿದುಕೊಳ್ಳಲು ಪ್ರಯತ್ನಿಸಿ. ಇದು ವಿಭಿನ್ನವಾಗಿ ಹಿಡಿದುಕೊಳ್ಳುವ ಶೈಲಿಗಳಿಗೆ ಹೊಂದಿಕೊಳ್ಳಲು ಬಾಗಿರುವ ಹಿಡಿಯನ್ನು ಹಿಡಿದುಕೊಳ್ಳುವ ಭಾಗದಲ್ಲಿ ಹಿಡಿದುಕೊಳ್ಳಲಾಗುತ್ತದೆ. ಸ್ಮಾರ್ಟ್‌ಕೇನ್ ಅನ್ನು ಹಿಡಿದುಕೊಂಡಿರುವಾಗ ಯಾವಾಗಲಾದರೂ ಅಡೆತಡೆಗಳು ಪತ್ತೆಹಚ್ಚಲ್ಪಟ್ಟರೆ ಕಂಪನವು ಪ್ರಾರಂಭವಾಗುತ್ತದೆ, ಇದರ ಅನುಭವವು ಸಾಧನವನ್ನು ಹಿಡಿದುಕೊಂಡಿರುವ ಬಳಕೆದಾರನಿಗೆ ಆಗುತ್ತದೆ.
ನೀವು ಸಾಧನವನ್ನು ಹಿಡಿದುಕೊಂಡಂತೆ ಹಾಗೂ ಶೋಧಿಸಿದಂತೆ, ವಿಭಿನ್ನ ರಚನೆಗಳ ಮೂಲಕ ಗುರುತಿಸಲ್ಪಡಬಹುದಾದ ಸ್ಮಾರ್ಟ್‌ಕೇನ್ ಸಾಧನವು ಒಂದು ಮುಂಭಾಗ ಮತ್ತು ಹಿಂಭಾಗದಲ್ಲಿ ಸಂಯೋಜಿಸಲ್ಪಡುವ ಅನುಭವವನ್ನು ನೀವು ಹೊಂದಬಹುದು. ಹಿಡಿಯ ಹಿಂದಿನ ಅರ್ಧ ಭಾಗವು ಒರಟಾಗಿದ್ದರೆ ಮುಂದಿನ ಅರ್ಧ ಭಾಗವು ತುಲನಾತ್ಮಕವಾಗಿ ಮೃದುವಾಗಿರುತ್ತದೆ. ಹಿಡಿಯ ಉದ್ದವಾದ ಆಕಾರವು ನೀವು ಆರಾಮದಾಯಕವಾಗಿ ಹಿಡಿದುಕೊಳ್ಳಲು ಮತ್ತು ತಟ್ಟುವಿಕೆ ಸರಾಗವಾಗಿರುವುದನ್ನು ನಿಮಗೆ ಒದಗಿಸುವುದಕ್ಕಾಗಿ ಆಗಿದೆ. ಸಾಧನದ ಸಮರ್ಪಕವಾದ ನೆಲೆಯನ್ನು ನಿರ್ವಹಿಸಲು ನಿಮಗೆ ಸಹಾಯ ಮಾಡುವುದಕ್ಕಾಗಿ, ಇದು ಮುಂಬದಿಯಲ್ಲಿ ತಗ್ಗಾದ ಗುರುತುಗಳನ್ನು ಹೊಂದಿದೆ. ಇದು ಎಲ್ಲಾ ಸಮಯದಲ್ಲಿಯೂ ಸರಿಯಾದ ದಿಕ್ಕಿನಲ್ಲಿ ಸಾಧನವನ್ನು ಇಟ್ಟುಕೊಳ್ಳಲು ನಿಮಗೆ ಸಹಾಯಕವಾಗುತ್ತದೆ.
 
ಚಿತ್ರ ೨ Figure-2 - ಸ್ಮಾರ್ಟ್‌ಕೇನ್ ಸಾಧನದ ಭಾಗಗಳು

ಸ್ಮಾರ್ಟ್‌ಕೇನ್ ಸಾಧನವು ಮುಂದಿನ ಅರ್ಧ ಮತ್ತು ಹಿಂದಿನ ಅರ್ಧದ ಎರಡು ಭಾಗಗಳಿಂದ ರಚಿಸಲ್ಪಟ್ಟಿದ್ದು, ವ್ಹೈಟ್ ಕೇನ್ ಸ್ಮಾರ್ಟ್‌ಕೇನ್ ಸಾಧನದ ಮುಂದಿನ ಮತ್ತು ಹಿಂದಿನ ಅರ್ಧ ಭಾಗಗಳ ನಡುವೆ ಬಿಗಿಯಾಗಿ ಅಳವಡಿಸಲ್ಪಟ್ಟಿರುತ್ತದೆ, ಇದನ್ನು ಒಂದು ಪೆನ್ಸಿಲ್ ಬಾಕ್ಸಿನಂತೆ ತೆರೆಯಬಹುದು ಮತ್ತು ಮುಚ್ಚಬಹುದಾಗಿದೆ. ವ್ಹೈಟ್ ಕೇನ್ ಮೇಲಕ್ಕೆ ಸಾಧನವನ್ನು ಸೇರಿಸಲು ಮತ್ತು ಬಿಚ್ಚಲು ಬಯಸಿದಾಗ ಇದನ್ನು ಮಾಡಲಾಗುತ್ತದೆ. ಸಾಧನವನ್ನು ಸೇರಿಸಲು ಅಥವಾ ಬಿಚ್ಚಲು, ಸಾಧನದ ಒಂದು ಬದಿಯಲ್ಲಿ ಎರಡು ಗ್ರಿಪ್ ಲಾಕ್‌ಗಳಿರುತ್ತವೆ. ಮೊದಲನೆಯದು ಮೇಲ್ಭಾಗದಲ್ಲಿ ಹಾಗೂ ಮತ್ತೊಂದು ಸ್ವಲ್ಪ ಕೆಳಭಾಗದಲ್ಲಿ. ಈ ಗ್ರಿಪ್ ಲಾಕ್‌ಗಳನ್ನು ಸಾಧನದ ಎರಡೂ ಅರ್ಧ ಭಾಗಗಳನ್ನು ತೆರೆಯಲು ಏಕಕಾಲದಲ್ಲಿ ಒತ್ತಬಹುದಾಗಿದೆ. ಎರಡು ಅರ್ಧ ಭಾಗಗಳನ್ನು ತೆರೆದ ನಂತರ, ವ್ಹೈಟ್ ಕೇನ್ ಅನ್ನು ಸಾಧನದಿಂದ ಹೊರತೆಗೆಯಲಾಗುತ್ತದೆ. ಪುನಃ ಸೇರಿಸಲು, ವ್ಹೈಟ್ ಕೇನ್ ಅನ್ನು ಸ್ಮಾರ್ಟ್‌ಕೇನ್ ಸಾಧನದ ಒಂದರ್ಧ ಭಾಗದ ಮೇಲೆ ಇಡಬಹುದು ಮತ್ತು ಉಳಿದ ಅರ್ಧ ಭಾಗವು ಎರಡೂ ಗ್ರಿಪ್ ಲಾಕ್‌ಗಳನ್ನು ಮುಚ್ಚಲು ಸಾಧ್ಯವಾಗುವಂತೆ ಒತ್ತಲಾಗುತ್ತದೆ.
ನೀವು ಇನ್ನೂ ಶೋಧಿಸಿದಂತೆ, ನೀವು ಸ್ಮಾರ್ಟ್‌ಕೇನ್ ಸಾಧನದ ಕೆಳಭಾಗದಲ್ಲಿ ರಚನೆಯಂತಹ ಬಾಕ್ಸ್ ಅನ್ನು ಕಂಡುಕೊಳ್ಳುವಿರಿ. ಇದು ಸಂವೇದಕ ಬಾಕ್ಸ್ ಆಗಿರುತ್ತದೆ. ಇವುಗಳಲ್ಲಿ ಒಂದು ಶ್ರವಣಾತೀತ ಕಿರಣಗಳನ್ನು ಹೊರಗೆ ಕಳುಹಿಸುವ ಹಾಗೂ ಮತ್ತೊಂದು ಪ್ರತಿಫಲಿತ ಕಿರಣಗಳನ್ನು ಸ್ವೀಕರಿಸುವ ಸಂವೇದಕಗಳಾಗಿವೆ. ಈ ಸಂವೇದಕಗಳು ಯಾವಾಗಲೂ ಪ್ರಯಾಣದ ದಿಕ್ಕಿನಲ್ಲಿ ಮುಖ ಮಾಡಿರಬೇಕು. ನಂತರದಲ್ಲಿ ನಾವು ಅವುಗಳು ಸರಿಯಾದ ದಿಕ್ಕಿನಲ್ಲಿ ಮುಖವಾಗಿರುವಂತೆ ಮಾಡಲು ಸಂವೇದಕದ ಕೋನವನ್ನು ನಿಗದಿಗೊಳಿಸುವುದು ಹೇಗೆ ಎಂಬುದನ್ನು ಕಲಿಯುತ್ತೇವೆ.
 
ಚಿತ್ರ ೩ Figure-3 - ಸ್ಮಾರ್ಟ್‌ಕೇನ್ ಸಾಧನದ ಬಲಬದಿ
ಸಂವೇದಕ ಬಾಕ್ಸ್‌ನ ಬಲ ಭಾಗದಲ್ಲಿ ನೀವು ಪವರ್ ಆನ್-ಆಫ್ ಸ್ವಿಚ್ ಕಾಣುವಿರಿ. ಇದನ್ನು ಸ್ವಿಚ್ ಆನ್ ಮತ್ತು ಆಫ್ ಮಾಡಲು ಉಪಯೋಗಿಸಲಾಗುತ್ತದೆ. ಇದು ಒಂದು ವೃತ್ತಾಕಾರದ ಆಯತದ ರೂಪದಲ್ಲಿರುತ್ತದೆ. ಪವರ್ ಸ್ವಿಚ್‌ನ ಆನ್ ಮತ್ತು ಆಫ್ ಸ್ಥಾನಗಳ ನಡುವೆ ಪ್ರತ್ಯೇಕಿಸಲು ಒಂದು ಸಾಲು ಚಿಹ್ನೆಯನ್ನು ನೀಡಲಾಗಿದೆ. ಸಾಧನವನ್ನು ಆನ್ ಮಾಡಲು, ಒಂದು ಸಾಲು ಉಪಸ್ಥಿತಿಯಲ್ಲಿರುವಲ್ಲಿನ ಸ್ಥಾನಕ್ಕೆ ಮುಂಭಾಗದ ದಿಕ್ಕಿನಲ್ಲಿ ಸ್ವಿಚ್ ಅನ್ನು ಜಾರಿಸಿ. ಸಾಧನವು ಕೆಲವು ಬಾರಿ ಬೀಪ್ ಶಬ್ಧವನ್ನು ಮಾಡುತ್ತದೆ ಮತ್ತು ಪವರ್ ಆನ್ ಆಗಿದೆ ಎಂಬುದನ್ನು ಸೂಚಿಸುವ ಕಂಪನಗಳನ್ನುಂಟುಮಾಡುತ್ತದೆ.
 
ಚಿತ್ರ ೪ Figure-4 - ಸ್ಮಾರ್ಟ್‌ಕೇನ್ ಸಾಧನದ ಆನ್-ಆಫ್ ಸ್ವಿಚ್

ನೀವು ಸಂವೇದಕ ಬಾಕ್ಸ್ ಅನ್ನು ಇನ್ನೂ ಶೋಧಿಸಿದಂತೆ, ನೀವು ಸಂವೇದಕದ ಕೆಳಬದಿಯ ಎಡಭಾಗದಲ್ಲಿ ಒಂದು ಚಾರ್ಜಿಂಗ್ ಪಾಯಿಂಟ್ ಆಗಿರುವ ಒಂದು ಚಿಕ್ಕ ರಂಧ್ರವನ್ನು ಕಾಣುವಿರಿ. ಸಾಧನದ ಚಾರ್ಜಿಂಗ್ ಯಾವುದೇ ಸೆಲ್ ಫೋನ್ ಚಾರ್ಜಿಂಗ್‌ಗಿಂತಲೂ ಚಿಕ್ಕದಾಗಿರುತ್ತದೆ. ಈ ಉದ್ದೇಶಕ್ಕಾಗಿ, ನಿಮಗೆ ಒಂದು ಚಾರ್ಜರ್ ಒದಗಿಸಲಾಗಿದೆ. ಚಾರ್ಜಿಂಗ್ ಅನ್ನು ವಿದ್ಯುತ್ ಮೂಲಕ್ಕೆ ಚಾರ್ಜರ್‌ನ ಪ್ಲಗ್ ಸಂಪರ್ಕಿಸುವ ಮೂಲಕ ಮತ್ತು ಚಾರ್ಜಿಂಗ್ ಪೋರ್ಟ್‌ನಲ್ಲಿ ಪಿನ್ ಇಡುವ ಮೂಲಕ ಮಾಡಬಹುದಾಗಿದೆ. ಬಳಕೆಯ ಅವಧಿಯಲ್ಲಿ ನೀರು ಮತ್ತು ಧೂಳಿಗೆ ಆಕಸ್ಮಿಕವಾಗಿ ಒಡ್ಡಿಕೊಳ್ಳುವುದನ್ನು ತಪ್ಪಿಸಲು ಒಂದು ಕ್ಯಾಮೆರಾ ಶಟಲ್‌ನಂತಹ ಹೆಚ್ಚುವರಿ ಕವರ್ ಅನ್ನು ಪೋರ್ಟ್ ಹೊಂದಿರುತ್ತದೆ.
 
ಚಿತ್ರ ೫ Figure-5 - ಚಾರ್ಜಿಂಗ್ ಪೋರ್ಟ್ ಮತ್ತು ಒಳಾಂಗಣ - ಹೊರಾಂಗಣ ಸ್ವಿಚ್

ಮೇಲ್ಬದಿಯತ್ತ ಸಂವೇದಕ ಬಾಕ್ಸಿನ ಒಂದೇ ಬದಿಯಲ್ಲಿ ನೀವು ಮತ್ತೊಂದು ಸ್ವಿಚ್ ಅನ್ನು ಕಾಣುವಿರಿ. ಈ ಸ್ವಿಚ್‌ನ ಉದ್ದೇಶವು ಎರಡು ಪ್ರಕಾರದ ಕಾರ್ಯಾಚರಣೆಗಾಗಿ ಸ್ಮಾರ್ಟ್‌ಕೇನ್ ಸಾಧನವನ್ನು ನಿಗದಿಪಡಿಸುವುದಾಗಿದೆ, ಅವುಗಳೆಂದರೆ ಒಳಾಂಗಣ ವಿಧಾನ ಮತ್ತು ಹೊರಾಂಗಣ ವಿಧಾನ. ಒಳಾಂಗಣ ವಿಧಾನವನ್ನು ನೀವು ಒಳಾಂಗಣದಲ್ಲಿರುವಾಗ ಹಲವು ಅಡೆತಡೆಗಳನ್ನು ಎದುರಿಸಿದಾಗ ಉಪಯೋಗಿಸಬಹುದು, ಹೊರಾಂಗಣ ವಿಧಾನವನ್ನು ನೀವು ಹೊರಾಂಗಣದಲ್ಲಿರುವಾಗ ಮತ್ತು ಅಡೆತಡೆಗಳು ಕಡಿಮೆ ಸಂಖ್ಯೆಯಲ್ಲಿರುವಾಗ ಹಾಗೂ ಒಳಾಂಗಣ ಪರಿಸರಕ್ಕೆ ಹೋಲಿಸಿದಲ್ಲಿ ಅತಿ ಹೆಚ್ಚಿನ ಅಂತರದಲ್ಲಿ ಇಡಲಾಗುತ್ತದೆ. ಒಳಾಂಗಣ ವಿಧಾನದಲ್ಲಿ ಅಡೆತಡೆಗಳು ೧.೮ ಮೀಟರ್‌ಗಳ ಅಂತರದವರೆಗೆ ಮಾತ್ರ ಪತ್ತೆಹಚ್ಚಲ್ಪಡುತ್ತವೆ. ಆದರೆ, ಹೊರಾಂಗಣ ವಿಧಾನದಲ್ಲಿ ೩.೦ ಮೀಟರ್‌ಗಳವರೆಗಿನ ಅಡೆತಡೆಗಳು ಪತ್ತೆಹಚ್ಚಲ್ಪಡುತ್ತವೆ. ಒಳಾಂಗಣ ವಿಧಾನಕ್ಕೆ ನಿಗದಿಪಡಿಸಲು, ಒಂದು ಗಿಡ್ಡ ಸಾಲು ಉಪಸ್ಥಿತಿಯಲ್ಲಿರುವಲ್ಲಿ ಸ್ಥಾನಗೊಳಿಸಲು ಮುಂಭಾಗದ ದಿಕ್ಕಿನಲ್ಲಿ ಸ್ವಿಚ್ ಅನ್ನು ಜಾರಿಸಿ. ಹೊರಾಂಗಣ ವಿಧಾನಕ್ಕೆ ನಿಗದಿಪಡಿಸಲು, ಬಾರ್‌ನೊಂದಿಗೆ ಒಂದು ಉದ್ದ ಸಾಲು ಉಪಸ್ಥಿತಿಯಲ್ಲಿರುವಲ್ಲಿ ಸ್ಥಾನಗೊಳಿಸಲು ಸ್ವಿಚ್ ಅನ್ನು ಹಿಮ್ಮುಖವಾಗಿ ಜಾರಿಸಿ. ನೀವು ಯಾವಾಗಲಾದರೂ ವಿಧಾನವನ್ನು ಬದಲಾಯಿಸುವಾಗ, ಸಾಧನವು ಕಾರ್ಯಾಚರಣೆಯು ಯಶಸ್ವಿಯಾಗಿರುವುದನ್ನು ಸೂಚಿಸುವ ಒಂದು ಚಿಕ್ಕ ಬೀಪ್ ಶಬ್ಧವನ್ನು ಮಾಡುತ್ತದೆ.
 
ಚಿತ್ರ ೬ Figure-6 - ಒಳಾಂಗಣ-ಹೊರಾಂಗಣ ವಿಧಾನದ ಸ್ವಿಚ್ ಸ್ಥಾನ ಮತ್ತು ಚಿಹ್ನೆಗಳನ್ನು ಉಬ್ಬಿಸುವುದು

. ಸಂವೇದಕವನ್ನು ನೆಲೆಗೊಳಿಸುವುದು

ಸ್ಮಾರ್ಟ್‌ಕೇನ್ ಸಾಧನವನ್ನು ಉಪಯೋಗಿಸುವ ಮೊದಲು, ಸರಿಯಾದ ಪತ್ತೆಹಚ್ಚುವಿಕೆಗಾಗಿ ಸಂವೇದಕದ ನೆಲೆಯನ್ನು ಸರಿಹೊಂದಿಸುವುದು ಅವಶ್ಯಕವಾಗಿರುತ್ತದೆ. ವಿಭಿನ್ನ  ಜನರು ವಿಭಿನ್ನ ಪ್ರಕಾರದ ಹಿಡಿಗಳನ್ನು ಹೊಂದಿರುವುದರಿಂದ, ಶ್ರವಣಾತೀತ ಸಂವೇದಕದ ನೆಲೆಗೊಳಿಸುವಿಕೆಯು ಪ್ರತಿಯೊಂದು ಪ್ರಕರಣದಲ್ಲಿಯೂ ಭಿನ್ನವಾಗಿರುತ್ತದೆ. ಈ ಉದ್ದೇಶಕ್ಕಾಗಿ ಸಂವೇದಕದ ಕೋನದ ಸರಿಹೊಂದಿಸುವಿಕೆಯ ಕಾರ್ಯವಿಧಾನವನ್ನು ಸಾಧನದಲ್ಲಿ ನೀಡಲಾಗಿದೆ. ಈ ಮೂರು ಸಂಭಾವ್ಯ ಕೋನದ ಸರಿಹೊಂದಿಕೆಗಳು ಸಾಧ್ಯವಿದೆ. ಒಬ್ಬ ವ್ಯಕ್ತಿಯ ಮುಂದೆ ನಿಂತುಕೊಳ್ಳುವಾಗ, ಸಂವೇದಕವು ನಿಮ್ಮ ಎದುರಿನಲ್ಲಿ ನಿಂತಿರುವ ವ್ಯಕ್ತಿಯ ಎದೆಯತ್ತ ಯಾವಾಗಲೂ ಗುರಿಯಾಗಿರಬೇಕು. ಸಂವೇದಕದ ನೆಲೆಗೊಳಿಸುವಿಕೆಯನ್ನು ಸಂವೇದಕದ ಸೆಟ್ಟಿಂಗ್ ಲಾಕ್ ಉಪಯೋಗಿಸಿ ಬದಲಾಯಿಸಬಹುದಾಗಿದೆ. ಇದನ್ನು ಸಂವೇದಕ ಬಾಕ್ಸಿನ ಮೇಲ್ಭಾಗದಲ್ಲಿ ಒದಗಿಸಲಾಗಿರುತ್ತದೆ ಮತ್ತು ಚಿಕ್ಕ ಆಯತಾಕಾರದ ಹೊರಚಾಚಿಕೆಯ ರೂಪದಲ್ಲಿ ಭಾವಿತವಾಗಬಹುದು. ಸಂವೇದಕದ ನೆಲೆಗೊಳಿಸುವಿಕೆಯನ್ನು ಬದಲಾಯಿಸುವುದಕ್ಕಾಗಿ, ಸಂವೇದಕದ ಸೆಟ್ಟಿಂಗ್ ಬಾಕ್ಸ್ ಅನ್ನು ಎಳೆಯಿರಿ ಅಥವಾ ತಳ್ಳಿರಿ. ಇದು ಸಂವೇದಕದ ಮೂರು ಸಂಭಾವ್ಯ ನೆಲೆಗೊಳಿಸುವಿಕೆಯನ್ನು ಸ್ಥಾಪಿಸಬಹುದಾದವುಗಳಲ್ಲಿ ಒಂದನ್ನು ಉಪಯೋಗಿಸಿ ಸಂವೇದಕಗಳು ತಿರುಗುವಂತೆ ಮಾಡುತ್ತದೆ.  ನೀವು ಸಾಧನವನ್ನು ಉಪಯೋಗಿಸಲು ಪ್ರಾರಂಭಿಸಿದ ಪ್ರತಿ ಬಾರಿಯೂ, ಸಂವೇದಕದ ಕೋನವು ಸರಿಯಾದ ಕೋನಕ್ಕೆ ಸರಿಹೊಂದಿಸಲ್ಪಟ್ಟಿದೆ ಎಂಬುದನ್ನು ಖಾತರಿಪಡಿಸಿಕೊಳ್ಳಿ.
ಚಿತ್ರ ೭ Figure-7 - ಕೋನವನ್ನು ಸರಿಹೊಂದಿಸುವ ಕಾರ್ಯವಿಧಾನದ ಮೂರು ನೆಲೆಗೊಳಿಸುವಿಕೆಗಳು

. ಕಂಪನದ ಮಾದರಿಗಳು

ನಿಮ್ಮ ಚಲನೆಯ ದಿಕ್ಕಿನಲ್ಲಿ ಸ್ಮಾರ್ಟ್‌ಕೇನ್ ಸಾಧನದಿಂದ ಒಂದು ಅಡೆತಡೆಯನ್ನು ಪತ್ತೆಹಚ್ಚಿದಾಗ, ಕಂಪನದ ಸೂಚನೆಗಳ ಮೂಲಕ ಬಳಕೆದಾರನಿಗೆ ಮಾಹಿತಿಯನ್ನು ತಲುಪಿಸಲಾಗುತ್ತದೆ. ಅಡೆತಡೆಯ ಅಂತರದ ಆಧಾರದ ಮೇಲೆ ನೀವು ಹೊರಾಂಗಣ ಮಾದರಿಯಲ್ಲಿ ನಾಲ್ಕು ವಿಭಿನ್ನ ಕಂಪನದ ಮಾದರಿಗಳನ್ನು ಮತ್ತು ಒಳಾಂಗಣ ಮಾದರಿಯಲ್ಲಿ ಮೂರು ಕಂಪನದ ಮಾದರಿಗಳನ್ನು ಕಂಡುಕೊಳ್ಳುವಿರಿ. ಈ ಅಂತರದ ವ್ಯಾಪ್ತಿಗಳು ಒಳಾಂಗಣ ಮತ್ತು ಹೊರಾಂಗಣ ಸೆಟ್ಟಿಂಗ್‌ಗಾಗಿ ವಿಭಿನ್ನವಾಗಿರುತ್ತವೆ. ನಿರಂತರವಾದ ತೀವ್ರವಾದ ಕಂಪನದ ಮಾದರಿಯು (ಪ್ರತಿ ಸೆಕೆಂಡಿನ ನಾಲ್ಕು ಪಲ್ಸ್‌ಗಳು) ಅಡೆತಡೆಯು ಅತ್ಯಂತ ಸಮೀಪದಲ್ಲಿದೆ ಮತ್ತು ಒಳಾಂಗಣ ಮತ್ತು ಹೊರಾಂಗಣ ಈ ಎರಡೂ ವಿಧಾನಗಳಿಗಾಗಿ ಅರ್ಧ ಮೀಟರ್ ಒಳಗಿರುತ್ತದೆ. ಒಂದು ತಾತ್ಕಾಲಿಕ ನಿಲುಗಡೆಯೊಂದಿಗೆ ಎರಡು ಯಶಸ್ವಿಯಾದ ಕಂಪನದ ಮಾದರಿಗಳು ಒಳಾಂಗಣದಲ್ಲಿ ೧ - ೧.೮ ಮೀಟರ್ ಮತ್ತು ಹೊರಾಂಗಣ ವಿಧಾನದಲ್ಲಿ ೧ -೨ ಮೀಟರ್‌ಗಳ ವ್ಯಾಪ್ತಿಯಲ್ಲಿ ಅಡೆತಡೆಯಿದೆ ಎಂಬುದನ್ನು ಸೂಚಿಸುತ್ತದೆ. ಒಂದು ತಾತ್ಕಾಲಿಕ ತಡೆಯೊಂದಿಗೆ ಒಂದು ಕಂಪನದ ಮಾದರಿಯು  ಅಡೆತಡೆಯು ದೂರದಲ್ಲಿದೆ (೨ -೩ ಮೀಟರ್‌ಗಳು) ಆದರೆ ಪತ್ತೆಹಚ್ಚುವಿಕೆಯ ಮಿತಿಯೊಳಗಿದೆ ಎಂಬುದನ್ನು ಸೂಚಿಸುತ್ತದೆ. ಈ ನಾಲ್ಕನೇ ಮಾದರಿ ಕೇವಲ ಹೊರಾಂಗಣ ವಿಧಾನದಲ್ಲಿ ಲಭ್ಯವಿರುತ್ತದೆ ಹಾಗೂ ಒಳಾಂಗಣ ಮಾದರಿಯಲ್ಲಿ ಉಪಸ್ಥಿತಿಯಲ್ಲಿಯಲ್ಲಿರುವುದಿಲ್ಲ.

ಕಂಪನದ ಮಾದರಿ
ಮಾದರಿ ಸಂಖ್ಯೆ
ಹೊರಾಂಗಣ ವಿಧಾನದಲ್ಲಿ ಅಡೆತಡೆಯ ಅಂತರ
ಒಳಾಂಗಣ ವಿಧಾನದಲ್ಲಿ ಅಡೆತಡೆಯ ಅಂತರ
ತೀವ್ರವಾದ ಕಂಪನ (ಪ್ರತಿ ಸೆಕೆಂಡಿಗೆ ನಾಲ್ಕು ಕಂಪನಗಳು)
ಅರ್ಧ ಮೀಟರ್‌ವರೆಗೆ
ಅರ್ಧ ಮೀಟರ್‌ವರೆಗೆ
ನಿರಂತರ ಕಂಪನಗಳು (ಪ್ರತಿ ಸೆಕೆಂಡಿಗೆ ಎರಡು ಕಂಪನಗಳು)
ಅರ್ಧ ಮೀಟಾರ್‌ನಿಂದ ೧ ಮೀಟರ್
ಅರ್ಧ ಮೀಟಾರ್‌ನಿಂದ ೧ ಮೀಟರ್
ಪ್ರತಿ ಸೆಕೆಂಡಿಗೆ ಪುನರಾವರ್ತಿತವಾದ ಚಿಕ್ಕ ಅಂತರದ ಮೂಲಕ ಪ್ರತ್ಯೇಕವಾದ ಎರಡು ಕಂಪನಗಳು
೧ ರಿಂದ ೨ ಮೀಟರ್
೧ ರಿಂದ ೧.೮ ಮೀಟರ್
ಪ್ರತಿ ಸೆಕೆಂಡಿಗೆ ಪುನರಾವರ್ತಿತವಾದ ಒಂದು ಅಂತರದ ಮೂಲಕ ಪ್ರತ್ಯೇಕವಾದ ಏಕ ಕಂಪನ
೨ ರಿಂದ ೩ ಮೀಟರ್‌ಗಳು
ಅನ್ವಯಿಸುವುದಿಲ್ಲ

. ಸ್ಮಾರ್ಟ್ಕೇನ್ ಸಾಧನ ಉಪಯೋಗಿಸಲು ತರಬೇತಿ

ನೀವು ಸ್ಮಾರ್ಟ್‌ಕೇನ್ ಉಪಯೋಗಿಸುವುದನ್ನು ಪ್ರಾರಂಭಿಸುವ ಪ್ರತಿ ಬಾರಿಯೂ ಈ ಕೆಳಗಿನ ನಾಲ್ಕು ಹಂತಗಳನ್ನು ಅನುಸರಿಸಿ:
ಸಾಧನದ ಹಿಡಿಯ ಸುತ್ತಲೂ ನಿಮ್ಮ ಬೆರಳುಗಳು ಮತ್ತು ಹೆಬ್ಬೆರಳನ್ನು ಸುತ್ತಿ ಒಂದು ಕೈಯಿಂದ ಸ್ಮಾರ್ಟ್‌ಕೇನ್ ತೆರೆಯಿರಿ ಮತ್ತು ಹಿಡಿದುಕೊಳ್ಳಿ.  ಬಳಕೆ ಮಾಡುವಾಗ ನಿಮ್ಮ ಸಾಧನದ ಸಮರ್ಪಕ ನೆಲೆಗೊಳಿಸುವಿಕೆಯನ್ನು ತಿಳಿದುಕೊಳ್ಳಲು ಮತ್ತು ನಿರ್ವಹಣೆ ಮಾಡುವುದಕ್ಕಾಗಿ ನಿಮಗೆ ಸಹಾಯಕವಾಗಲು ಹಿಡಿಯು  ಹಿಂಭಾಗದಲ್ಲಿ ತಗ್ಗಿದ ಗುರುತುಗಳನ್ನು ಮತ್ತು ಮುಂಭಾಗದಲ್ಲಿ ಬಾಗಿದ ಮಾರ್ಗದರ್ಶನದ ಸಾಲನ್ನು ಹೊಂದಿರುತ್ತದೆ.
ಈಗ ನಿಮ್ಮ ಸಾಧನವನ್ನು ಆನ್ ಮಾಡಿ. ಸಾಧನವು ಪ್ರಸಕ್ತ ಬ್ಯಾಟರಿ ಪವರ್ ಚಾರ್ಜಿಂಗ್ ಮಟ್ಟ ಹಾಗೂ ಒಳಾಂಗಣ ಅಥವಾ ಹೊರಾಂಗಣದಲ್ಲಿದ್ದರೆ ಕಾರ್ಯಾಚರಣೆಯ ವಿಧಾನವನ್ನು ಸೂಚಿಸುತ್ತಾ ಒಂದು ಅಥವಾ ಹೆಚ್ಚು ಆಡಿಯೊ ಬೀಪ್‌ಗಳ ಶಬ್ಧ ಮಾಡುತ್ತದೆ. ಒಂದು ಚಿಕ್ಕ ಬೀಪ್ ಶಬ್ದವು ಕೇಳಿಸಿದರೆ, ಬ್ಯಾಟರಿ ಪವರ್ ಚಾರ್ಜಿಂಗ್ ಮಟ್ಟವು ೩೦% ಅಥವಾ ಕಡಿಮೆಯಿರುತ್ತದೆ. ಎರಡು ಚಿಕ್ಕ ಬೀಪ್ ಶಬ್ಧಗಳು ಕೇಳಿಸಿದರೆ, ಪವರ್ ಮಟ್ಟವು ೩೦ ರಿಂದ ೭೦% ನಡುವೆ ಇರುತ್ತದೆ. ಮೂರು ಚಿಕ್ಕ ಬೀಪ್ ಶಬ್ಧಗಳು ೭೦-೧೦೦% ನಡುವೆ ಇರಬೇಕಾದ ಬ್ಯಾಟರಿ ಪವರ್ ಚಾರ್ಜಿಂಗ್ ಮಟ್ಟದ ಸೂಚಕಗಳಾಗಿವೆ. ಈ ಒಂದು, ಎರಡು ಅಥವಾ ಮೂರು ಚಿಕ್ಕ ಬೀಪ್ ಶಬ್ಧಗಳು ಒಂದು ದೀರ್ಘ ಬೀಪ್ ಶಬ್ಧದ ನಂತರ ಆಗುತ್ತವೆ, ಇದು ಹೊರಾಂಗಣದಲ್ಲಿ ಕಾರ್ಯಾಚರಣೆಯ ಪ್ರಸಕ್ತ ವಿಧಾನವನ್ನು ನಿಗದಿಪಡಿಸಲಾಗಿದೆ ಎಂಬುದನ್ನು ಸೂಚಿಸುತ್ತದೆ. ಒಂದು, ಎರಡು ಅಥವಾ ಮೂರು ಚಿಕ್ಕ ಬೀಪ್ ಶಬ್ಧಗಳ ನಂತರ ಈ ದೀರ್ಘ ಬೀಪ್ ಶಬ್ದವು ಬರದಿದ್ದರೆ, ಸಾಧನವನ್ನು ಒಳಾಂಗಣ ವಿಧಾನಕ್ಕೆ ನಿಗದಿಪಡಿಸಲಾಗಿರುತ್ತದೆ. ಇದು ಕಾರ್ಯಾಚರಣೆಯ ಪ್ರಸಕ್ತ ವಿಧಾನವು ಯಾವುದು, ಮತ್ತು ಅದನ್ನು ಉಪಯೋಗಿಸುವ ಮೊದಲು ಅದನ್ನು ಬದಲಾಯಿಸಲು ಬಯಸುವಿರೆ ಅಥವಾ ಇಲ್ಲವೆ  ಎಂಬುದನ್ನು ತಿಳಿದುಕೊಳ್ಳಲು ನಿಮಗೆ ಸಹಾಯವಾಗುತ್ತದೆ.
ಆನ್ ಸ್ವಿಚ್ ಚಾಲಿಸಿದ ನಂತರ, ಸಾಧನದ ಸಂವೇದಕ ಬಾಕ್ಸಿನ ಮುಂಭಾಗದಲ್ಲಿ ನಿಮ್ಮ ಕೈ ಇಡುವ ಮೂಲಕ ಸಾಧನದ ಕಾರ್ಯಾಚರಣೆಯನ್ನು ಪರೀಕ್ಷಿಸಿ. ಸಾಧನದ ಒಂದು ಸಮರ್ಪಕ ಕಾರ್ಯನಿರ್ವಹಿಸುವಿಕೆಯು ಒಂದು ಅಡೆತಡೆಯಾಗಿ ನಿಮ್ಮ ಕೈಯನ್ನು ಪತ್ತೆಹಚ್ಚುತ್ತದೆ ಮತ್ತು ನಿಮಗೆ ಕಂಪನಗಳ ಅನುಭವವಾಗುತ್ತದೆ.
ಈಗ ಸಂವೇದಕದ ಸರಿಯಾದ ಸ್ಥಾನಕ್ಕೆ ಸಂವೇದಕ ಕೋನವನ್ನು ನಿಗದಿಪಡಿಸಿ. ನಿಮಗೆ ಹಿತಕರವೆನಿಸುವ ಒಂದು ಹಿಡಿಯೊಂದಿಗೆ ಸ್ಮಾರ್ಟ್‌ಕೇನ್ ಸಾಧನವನ್ನು ಹಿಡಿದುಕೊಳ್ಳುವಾಗ ಖಾತರಿಪಡಿಸಿಕೊಳ್ಳುವ ಮೂಲಕ ಇದನ್ನು ಮಾಡಬಹುದು, ನಿಮ್ಮ ಮುಂಭಾಗದಲ್ಲಿ ನಿಂತಿರುವ ವ್ಯಕ್ತಿಯ ಎದೆಯ ಕಡೆಗೆ ಸಂವೇದಕವು ಹತ್ತಿರದಲ್ಲಿ ಗುರಿಯಾಗಿರಬೇಕು. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ, ಹೆಚ್ಚು ಕರಾರುವಕ್ಕಾಗಿ ಹೊಂದಿಕೆಯ ಈ ಕೋನವನ್ನು ನೀವು ಆಯ್ಕೆಮಾಡುವುದಕ್ಕಾಗಿ ಇದು ಸಾಧ್ಯವಾಗದಿರಬಹುದು. ಸರಿಹೊಂದಿಕೆಯ ಮೂರು ಸಂಭವನೀಯ ಸಾಧ್ಯತೆಗಳಿರುವುದರಿಂದ, ಈ ಅಗತ್ಯತೆಯನ್ನು ಉತ್ತಮವಾಗಿ ಪೂರೈಸುವ ಒಂದನ್ನು ಆಯ್ಕೆಮಾಡಿ.

. ಬ್ಯಾಟರಿ ಸ್ಥಿತಿ ಮತ್ತು ವಿಧಾನಗಳನ್ನು ತಿಳಿದುಕೊಳ್ಳಲು ಬೀಪ್ ಶಬ್ಧ ಮಾದರಿಗಳು

ಸಾಧನವನ್ನು ಆನ್ ಮಾಡಿದಾಗ, ಬೀಪ್‍ಗಳ ಒಂದು ಒಂದು ಸರಣಿಯು ಉತ್ಪತ್ತಿಯಾಗುತ್ತದೆ. ಇವುಗಳು ಬ್ಯಾಟರಿ ಚಾರ್ಜ್ ಮಟ್ಟವನ್ನು ಹಾಗೂ ಸಾಧನವು ಒಳಾಂಗಣ ಅಥವಾ ಹೊರಾಂಗಣ ವಿಧಾನದಲ್ಲಿದೆಯೆ ಎಂಬುದನ್ನು ಸೂಚಿಸುತ್ತವೆ. ಒಂದು, ಎರಡು ಅಥವಾ ಮೂರು ಚಿಕ್ಕ ಬೀಪ್‌ಗಳ ಕೇಳಿಸಿಕೊಳ್ಳುವಿಕೆಯು ಬ್ಯಾಟರಿ ಮಟ್ಟವು ೩೦% ಗಿಂತಲೂ ಕಡಿಮೆಯಿದೆ, ೩೦-೭೦% ನಡುವೆ, ಮತ್ತು ೭೦-೧೦೦% ನಡುವೆ ಇದೆ ಎಂಬುದನ್ನು ತಿಳಿಸುತ್ತದೆ. ಈ ಚಿಕ್ಕ ಬೀಪ್‌ಗಳನ್ನು ಅನುಸರಿಸುವುದರಿಂದ, ಹೊರಾಂಗಣ ವಿಧಾನಕ್ಕೆ ವಿಧಾನವನ್ನು ನಿಗದಿಪಡಿಸಿದ್ದರೆ ಒಂದು ದೀರ್ಘ ಬೀಪ್ ಕೂಡ ಉತ್ಪಾದಿತವಾಗುತ್ತದೆ. ವಿಧಾನವು ಒಳಾಂಗಣದಲ್ಲಿದ್ದರೆ ದೀರ್ಘ ಬೀಪ್ ಉಪಸ್ಥಿತಿಯಲ್ಲಿರುವುದಿಲ್ಲ.

ಆದುದರಿಂದ, ಆನ್ ಮಾಡುವ ಹಂತದಲ್ಲಿ ಬೀಪ್‌ಗಳನ್ನು ಕೇಳಿಸಿಕೊಳ್ಳುವಿಕೆಯ ಮೂಲಕ, ಒಬ್ಬ ವ್ಯಕ್ತಿಯು ಬ್ಯಾಟರಿ ಸ್ಥಿತಿಯನ್ನು ಮತ್ತು ಸಾಧನದ ವಿಧಾನವನ್ನು ತಿಳಿದುಕೊಳ್ಳುವನು. ಇವುಗಳು ಮುಂದೆ ಕಾಣುವ ಪಟ್ಟಿಯಲ್ಲಿ ಸಾರಾಂಶಗೊಳಿಸಲ್ಪಟ್ಟಿವೆ.

ಬೀಪ್ ಮಾದರಿಗಳು
ಬ್ಯಾಟರಿ ಸ್ಥಿತಿ
ವಿಧಾನ
೧ ಕಡಿಮೆ ಮತ್ತು ೧ ದೀರ್ಘ  
೩೦% ಗಿಂತಲೂ ಕಡಿಮೆ
ಹೊರಾಂಗಣ
೨ ಕಡಿಮೆ ಮತ್ತು ೧ ದೀರ್ಘ
೩೦% - ೭೦%
ಹೊರಾಂಗಣ
೩ ಕಡಿಮೆ ಮತ್ತು ೧ ದೀರ್ಘ
೭೦% - ೧೦೦%
ಹೊರಾಂಗಣ
೧ ಕಡಿಮೆ ಮತ್ತು ೦ ದೀರ್ಘ
೩೦% ಗಿಂತಲೂ ಕಡಿಮೆ
ಒಳಾಂಗಣ
೨ ಕಡಿಮೆ ಮತ್ತು ೦ ದೀರ್ಘ
೩೦% ಮತ್ತು ೦ ದೀರ್ಘ
ಒಳಾಂಗಣ
೩ ಕಡಿಮೆ ಮತ್ತು ೦ ದೀರ್ಘ
೭೦% - ೧೦೦%
ಒಳಾಂಗಣ

. ತ್ವರಿತವಾಗಿ ಸಮೀಪಿಸುತ್ತಿರುವ ಅಡೆತಡೆ

ಕಾರ್ಯನಿರ್ವಹಿಸುವಾಗ, ಒಂದು ಕಾರು, ಬಸ್ಸು, ಬೈಸಿಕಲ್ ಅಥವಾ ವೇಗವಾಗಿ ನಡೆಯುತ್ತಿರುವ ವ್ಯಕ್ತಿಯಂತಹ ತ್ವರಿತವಾಗಿ ಸಮೀಪಿಸುತ್ತಿರುವ ಅಡೆತಡೆಗಳನ್ನು ಸ್ಮಾರ್ಟ್‌ಕೇನ್ ಸಾಧನವು ಎದುರಿಸಿದರೆ, ಅಡೆತಡೆಯು ವ್ಯಾಪ್ತಿಯೊಳಗೆ ಇರುವವರೆಗೆ ಒಂದು ನಿರಂತರವಾದ ಬೀಪ್ ಉತ್ಪಾದಿತವಾಗುತ್ತದೆ. ಈ ಬೀಪ್ ಬ್ಯಾಟರಿ ಮಟ್ಟ ಮತ್ತು ಹೊರಾಂಗಣ ವಿಧಾನವನ್ನು ಸೂಚಿಸುತ್ತಿರುವ ಬೀಪ್‌ಗೆ ಹೆಚ್ಚುವರಿಯಾಗಿರುತ್ತದೆ. ಅಡೆತಡೆಯು ೩ ಮೀಟರ್‌ಗಳ ವ್ಯಾಪ್ತಿಯೊಳಗೆ ಪತ್ತೆಹಚ್ಚಲ್ಪಟ್ಟಿದ್ದರೆ ಮಾತ್ರ, ಎಚ್ಚರಿಕೆಯ ಬೀಪ್ ಒಂದು ತಕ್ಷಣದ ರಕ್ಷಣಾತ್ಮಕ ಮತ್ತು ಪ್ರತಿಫಲಿತ ಕ್ರಮವನ್ನು ತೆಗೆದುಕೊಳ್ಳುವುದಕ್ಕಾಗಿ ಮಾತ್ರ ಬಳಕೆದಾರನನ್ನು ಅನುಮತಿಸಬಹುದು. ಆದಾಗ್ಯೂ, ಹಲವಾರು ಬಳಕೆದಾರರು ಇದು ಎಚ್ಚರಿಕೆಯನ್ನು ನೀಡದೆ ತ್ವರಿತವಾಗಿ ಸಮೀಪಿಸುತ್ತಿರುವ ಅಡೆತಡೆಗಳೊಂದಿಗೆ ತಕ್ಷಣದ ಡಿಕ್ಕಿ ಹೊಡೆಯುವಿಕೆಯನ್ನು ತಡೆಯುವುದರಿಂದ ಈ ವೈಶಿಷ್ಟ್ಯತೆಯು ಪ್ರಯೋಜನಕಾರಿಯಾಗಿರಬಹುದು ಎಂಬುದನ್ನು ಉಲ್ಲೇಖಿಸಿರುವರು.

. ಸ್ಮಾರ್ಟ್ಕೇನ್ ಸಾಧನವನ್ನು ಸರಿಯಾಗಿ ಮತ್ತು ಪರಿಣಾಮಕಾರಿಯಾಗಿ ಉಪಯೋಗಿಸುವುದು

ಗೊತ್ತಿರದ ಪರಿಸರಗಳಲ್ಲಿ ಸ್ಮಾರ್ಟ್‌ಕೇನ್ ಸಾಧನವನ್ನು ಉಪಯೋಗಿಸುವ ಮೊದಲು, ಸಾಧನದೊಂದಿಗೆ ಪೂರ್ಣವಾಗಿ ಪರಿಚಯವನ್ನು ಪಡೆಯಲು ಗೊತ್ತಿರುವ ಅಡೆತಡೆಗಳನ್ನು ಹೊಂದಿರುವ ಪರಿಸರಗಳಲ್ಲಿ ಇದನ್ನು ಉಪಯೋಗಿಸಲು ಸಲಹೆ ಮಾಡಲಾಗಿದೆ. ಈ ಕೆಳಗಿನ ವಿಭಾಗಗಳು ಈ ಸಾಧನದಿಂದ ಹೆಚ್ಚಿನದನ್ನು ಪಡೆದುಕೊಳ್ಳಲು ಸ್ಮಾರ್ಟ್‌ಕೇನ್ ಸಾಧನವನ್ನು ಸರಿಯಾಗಿ ಮತ್ತು ಪರಿಣಾಮಕಾರಿಯಾಗಿ ಉಪಯೋಗಿಸುವುದು ಹೇಗೆ ಎಂಬುದನ್ನು ನಿಮಗೆ ಹೇಳುತ್ತದೆ. ಸ್ಮಾರ್ಟ್‌ಕೇನ್ ಸಾಧನವನ್ನು ಮೊಣಕಾಲಿನ ಮಟ್ಟ ಅಥವಾ ಕೆಳಭಾಗವರೆಗಿನ ಅಡೆತಡೆಗಳನ್ನು ಪತ್ತೆಹಚ್ಚಲು ಅಗತ್ಯವಾಗಿರುವ ವ್ಹೈಟ್ ಕೇನ್‌ನೊಂದಿಗೆ  ಉಪಯೋಗಿಸಬೇಕಾದ ಅಗತ್ಯತೆಯಿದೆ ಎಂಬುದನ್ನು ದಯವಿಟ್ಟು ಗಮನಿಸಿ.

ಹಂತ ೧
ಸ್ಮಾರ್ಟ್‌ಕೇನ್ ಸಾಧನದೊಂದಿಗೆ ಒಂದು ಗೋಡೆಯಿಂದ ೩-೪ ಮೀಟರ್‌ಗಳ ಅಂತರದಲ್ಲಿ ನಿಂತುಕೊಳ್ಳಿರಿ. ಹೊರಾಂಗಣ ವಿಧಾನದಲ್ಲಿ ಸಾಧನವನ್ನು ಆನ್ ಮಾಡಿರಿ. ನಿಮ್ಮ ದಾರಿಯಲ್ಲಿ ಯಾವುದೇ ಇತರ ಅಡೆತಡೆಗಳಿಲ್ಲ ಎಂಬುದನ್ನು ಖಾತರಿಪಡಿಸಿಕೊಳ್ಳಿರಿ. ಈಗ ನೀವು ಸಾಗುವ ಮೊದಲು, ಸಾಧನವನ್ನು ಸರಿಯಾಗಿ ಹಿಡಿಕೊಳ್ಳಲಾಗಿದೆ ಮತ್ತು ಸಂವೇದಕ ಬಾಕ್ಸ್ ಅನ್ನು ಈ ಮೊದಲೇ ಉಲ್ಲೇಖಿಸಲಾದಂತೆ ಸರಿಯಾದ ನೆಲೆಗೊಳಿಸುವಿಕೆಗೆ ಸರಿಹೊಂದಿಲಾಗಿದೆ ಎಂಬುದನ್ನು ಖಾತರಿಪಡಿಸಿಕೊಳ್ಳಿರಿ. ಈಗ ಪುಟ್ಟ ಹೆಜ್ಜೆಗಳನ್ನು ಇಡುತ್ತಾ ಗೋಡೆಯತ್ತ ನಿಧಾನವಾಗಿ ನಡೆಯಲು ಪ್ರಾರಂಭಿಸಿ. ನಡೆಯುತ್ತಾ ಕೆಲವು ಹೆಜ್ಜೆಗಳನ್ನು ಇಟ್ಟ ನಂತರ, ಗೋಡೆಯು ೩ ಕ್ಕಿಂತಲೂ ಕಡಿಮೆ ಮೀಟರ್‌ಗಳ ಅಂತರದಲ್ಲಿರುವಾಗ, ನೀವು ನಿಮ್ಮ ಸಾಧನದಿಂದ ಮೃದುವಾದ ಕಂಪನದ ಅನುಭವವನ್ನು ಪಡೆಯುವಿರಿ. ಒಂದು ಕ್ಷಣ ನಿಂತುಕೊಳ್ಳಿರಿ ಮತ್ತು ಕಂಪನದ ಮಾದರಿಯನ್ನು ಗ್ರಹಿಸಿರಿ. ಕಂಪನವು ಶ್ರವಣಾತೀತ ತರಂಗಗಳನ್ನು ಉಪಯೋಗಿಸಿ ಗೋಡೆಯನ್ನು ಸ್ಪರ್ಶಿಸದೆ ಅದನ್ನು ಪತ್ತೆಹಚ್ಚಿದೆ ಎಂಬುದನ್ನು ಕಂಪನವು ಸೂಚಿಸುತ್ತದೆ.

೧ನೇ ಕಂಪನದ ಮಾದರಿ: ೨ -೩ ಮೀಟರ್
೨ನೇ ಕಂಪನದ ಮಾದರಿ: ೧ -೨ ಮೀಟರ್
೩ನೇ ಕಂಪನದ ಮಾದರಿ: ಅರ್ಧ - ೧ ಮೀಟರ್
೪ನೇ ಕಂಪನದ ಮಾದರಿ: ಅರ್ಧ ಮೀಟರ್‌ವರೆಗೆ

ಮೊದಲನೇ ಕಂಪನದ ಮಾದರಿಯು ಚಿಕ್ಕ ಪಲ್ಸ್‌ಗಳಂತೆ ಮತ್ತು ದೀರ್ಘ ವಿರಾಮಗಳಂತೆ ಇರುತ್ತದೆ. ಇದು ನೀವು ಗೋಡೆಯಿಂದ ೨-೩ ಮೀಟರ್‌ಗಳಷ್ಟು ದೂರದಲ್ಲಿರುವಿರಿ ಎಂಬುದನ್ನು ತಿಳಿಸುತ್ತದೆ. ಈಗ ಪುನಃ ಕೆಲವು ಹೆಜ್ಜೆಗಳನ್ನಿಡಿ ಮತ್ತು ಕಂಪನದ ಮಾದರಿಯಲ್ಲಿ ಒಂದು ಬದಲಾವಣೆಯ ಅನುಭವವು ನಿಮಗಾದಾಗ ಕಾಯಿರಿ. ಮಾದರಿಯು ಕಡಿಮೆ ಸಮಯದ ವಿರಾಮಗಳೊಂದಿಗೆ ಎರಡು ಯಶಸ್ವಿಯಾದ ಕಡಿಮೆ ಪಲ್ಸ್‌ಗಳನ್ನು ಹೊಂದುತ್ತದೆ. ಇದು ನೀವು ಗೋಡೆಯಿಂದ ೧-೨ ಮೀಟರ್‌ಗಳಷ್ಟು ದೂರದಲ್ಲಿರುವಿರಿ ಎಂಬುದನ್ನು ಸೂಚಿಸುತ್ತದೆ. ನಿಮ್ಮ ಸಾಧನದಿಂದ ಪುನಃ ಕಂಪನದ ಪ್ರತಿಫಲನದಲ್ಲಿ ಒಂದು ಬದಲಾವಣೆಯ ಅನುಭವವನ್ನು ನೀವು ಅನುಭವಿಸಿದಾಗ ಗೋಡೆಯ ಕಡೆಗೆ ಇನ್ನೂ ಕೆಲವು ಹೆಜ್ಜೆಗಳನ್ನಿಡಿ ಮತ್ತು ನಿಲ್ಲಿರಿ. ಕಂಪನದ ಮಾದರಿಯು ಈಗ ಅತ್ಯಂತ ಕಡಿಮೆ ವಿರಾಮಗಳೊಂದಿಗೆ ತ್ವರಿತ ಪಲ್ಸ್‌ಗಳನ್ನು ಹೊಂದುತ್ತದೆ. ಇದು ನೀವು ಗೋಡೆಯಿಂದ ಅರ್ಧದಿಂದ - ೧ ಮೀಟರ್ ದೂರದಲ್ಲಿರುವಿರಿ ಎಂಬುದನ್ನು ಸೂಚಿಸುತ್ತದೆ. ಇನ್ನೂ ಒಂದು ಅಥವಾ ಎರಡು ಹೆಜ್ಜೆಗಳನ್ನು ಇಡುವಿಕೆಯು ಸಾಧನವು ಅತ್ಯಂತ ತೀವ್ರವಾದ ಕಂಪನಗಳನ್ನು ಉತ್ಪಾದಿಸುವಲ್ಲಿ ಪ್ರತಿಫಲಿತವಾಗುತ್ತದೆ. ನೀವೀಗ ಮೇಲ್ತೋಳಿನ ವಿಧಾನವನ್ನು ಉಪಯೋಗಿಸುವ ಅಥವಾ ನಿಮ್ಮ ಕೇನ್ ಅನ್ನು ಚಾಚುವ ಮೂಲಕ ಗೋಡೆಯನ್ನು ಶೋಧಿಸಬಹುದು. ಮೊಣಕಾಲಿನ ಮೇಲಿನ ಅಡೆತಡೆಗಳನ್ನು ಪತ್ತೆಹಚ್ಚಲು ವಿವಿಧ ಸೆಟ್ಟಿಂಗ್‌ಗಳಲ್ಲಿ ಇದೇ ಶೈಲಿಯಲ್ಲಿ ನಿಮ್ಮ ಸಾಧನವನ್ನು ಉಪಯೋಗಿಸಿ.
ಒಳಾಂಗಣ ವಿಧಾನದಲ್ಲಿಯೂ ಗೊತ್ತಿರುವ ಅಡೆತಡೆಗಳೊಂದಿಗೆ ಇದೇ ಕ್ರಮವನ್ನು ಅಭ್ಯಾಸಮಾಡಿ.

ಹಂತ ೨
ನಿಮ್ಮ ಪರಿಸರದ ಆಧಾರದ ಮೇಲೆ ಒಳಾಂಗಣ ಅಥವ ಹೊರಾಂಗಣ ವಿಧಾನದಲ್ಲಿ ಸಾಧನವನ್ನು ಆನ್ ಮಾಡಿ. ಈಗ ನಿಮ್ಮ ಮುಂದೆ ಸ್ವಲ್ಪ ದೂರಲ್ಲಿ ಒಂದು ಅಡೆತಡೆಯಾಗಿ ನಟಿಸುತ್ತಾ ನಿಂತುಕೊಳ್ಳಲು ಯಾರಾದರೂ ಒಬ್ಬರನ್ನು ಕೇಳಿಕೊಳ್ಳಿರಿ.
ಸಾಧನದಾದ್ಯಂತದ ಪ್ರದೇಶವನ್ನು ಸ್ಕ್ಯಾನಿಂಗ್ ಮಾಡುವಾಗ ಕೆಲವು ಮುಂದಿನ ಕ್ರಮಗಳನ್ನು ಕೈಗೊಳ್ಳಿ. ನಿಮ್ಮ ಸಾಧನವು ಅಡೆತಡೆಯ ಉಪಸ್ಥಿತಿಯನ್ನು ಸೂಚಿಸುತ್ತಾ ಕಂಪಿಸಿದಾಗ ನಿಲ್ಲಿರಿ. ಯಾವುದೇ ಒಂದು ದಿಕ್ಕಿನಲ್ಲಿ ನಿಮ್ಮ ಕೇನ್ ಅನ್ನು ಬಾಗಿಸಿರಿ ಮತ್ತು ಸಾಧನವು ಕಂಪಿಸದಿರುವ ದಿಕ್ಕನ್ನು ಗುರುತಿಸಿ. ಅಡೆತಡೆಯನ್ನು ಯಶಸ್ವಿಯಾಗಿ ಮೀರಿ ಅದರ ಸಂಪರ್ಕಕ್ಕೆ ಬಾರದೆ ಆ ದಿಕ್ಕಿನಲ್ಲಿ ಸಾಗಿರಿ. ನೀವು ಒಂದು ಆಲ್ಮೆರಾ, ಒಂದು ವಾಹನ, ಒಂದು ಏಣಿ, ಒಂದು ಮೇಜು ಅಥವಾ ರಸ್ತೆಯಲ್ಲಿರುವ ಒಂದು ಮರದಂತಹ ವಿಭಿನ್ನ ವಸ್ತುಗಳೊಂದಿಗೆ ಇದೇ ಚಟುವಟಿಕೆಯನ್ನು ಅಭ್ಯಾಸ ಮಾಡಬಹುದು.

ಹಂತ ೩
ಒಂದು ಬಾಗಿಲಿನತ್ತ ದಾರಿತೋರುವ ಒಂದು ಉದ್ದವಾದ ಗೋಡೆಯ ಜೊತೆಜೊತೆಗೆ ನಿಂತುಕೊಳ್ಳಿ. ಯಾವುದೇ ಎರಡರ ಒಂದು ವಿಧಾನದಲ್ಲಿ ಸಾಧನದ ಸ್ವಿಚ್ ಆನ್ ಮಾಡಿ. ಗೋಡೆಯ ಕಡೆಗೆ ಸಾಧನವನ್ನು ಸ್ವಲ್ಪ ಬಾಗಿಸುವ ಮೂಲಕ ಗೋಡೆಯನ್ನು ಸ್ಕ್ಯಾನ್ ಮಾಡುತ್ತಿರಿ. ಕೇನ್ ತುದಿ ಅಥವಾ ರಚನೆಯೊಂದಿಗೆ ಸ್ಪರ್ಷಿಸುವುದರ ಬದಲಾಗಿ ಗೋಡೆಯಿಂದ ಒಂದು ಅಂತರವನ್ನು ನಿರ್ವಹಣೆ ಮಾಡಲು ಸಾಧನದಿಂದ ಕಂಪನದ ಚಿಹ್ನೆಗಳನ್ನು ಉಪಯೋಗಿಸಿ. ದ್ವಾರದತ್ತ ತಲುಪುವುದರ ಮೇಲೆ, ಕಂಪನದ ಮಾದರಿಯು ತೆರೆದ ಪ್ರದೇಶದ ಪ್ರಮಾಣ ಮತ್ತು ಇಟ್ಟ ವಸ್ತುಗಳ ಆಧಾರದ ಮೇಲೆ ನಿಂತುಹೋಗುತ್ತದೆ ಅಥವಾ ಬದಲಾಗುತ್ತದೆ. ಈ ಸೂಚನೆಯೊಂದಿಗೆ, ನೀವು ಬಾಗಿಲನ್ನು ಗುರುತಿಸಿರುವಿರಿ ಮತ್ತು ಈಗ ಪ್ರವೇಶಿಸಬಹುದಾಗಿದೆ. ಅನುಬಂಧ ಸಿ ಕೆಲವು ಬಳಕೆದಾರ ಅನುಭವಗಳನ್ನು ಮತ್ತು ಸ್ಮಾರ್ಟ್‌ಕೇನ್ ಸಾಧನವನ್ನು ಉಪಯೋಗಿಸುವಲ್ಲಿ ನಿಮಗೆ ಸಹಾಯಕವಾಗುವ ಕೆಲವು ಚಿತ್ರಣಗಳನ್ನು ನೀಡುತ್ತದೆ ಮತ್ತು ಈ ಸಾಧನವನ್ನು ಉಪಯೋಗಿಸುವಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುವಲ್ಲಿ ಸಹಾಯಕವಾಗುತ್ತದೆ.

. ಸ್ಮಾರ್ಟ್ಕೇನ್ ಸಾಧನವನ್ನು ನಿರ್ವಹಣೆ ಮಾಡುವುದು

ಸ್ಮಾರ್ಟ್ಕೇನ್ ಸಾಧನವು

. ಬ್ಯಾಟರಿ ಮತ್ತು ಚಾರ್ಜಿಂಗ್

ಸ್ಮಾರ್ಟ್‌ಕೇನ್ ಸಾಧನವು ಮೊಬೈಲ್ ಫೋನ್‌ಗಳಿಗಾಗಿ ಉಪಯೋಗಿಸಲಾಗುವಂತೆಯೆ ಒಂದು ರೀಚಾರ್ಜಬಲ್ ಬ್ಯಾಟರಿಯನ್ನು ಹೊಂದಿದೆ. ಬ್ಯಾಟರಿಯನ್ನು ಪ್ಯಾಕೇಜಿನಲ್ಲಿ ಒದಗಿಸಲಾಗಿರುವ ಚಾರ್ಜರ್ ಉಪಯೋಗಿಸಿ ಚಾರ್ಜ್ ಮಾಡಬಹುದು. ಒಮ್ಮೆ ಪೂರ್ಣವಾಗಿ ಚಾರ್ಜ್ ಮಾಡಿದ ನಂತರ, ಸಾಧನವನ್ನು ಸುಮಾರು ೮ ಗಂಟೆಗಳ ಕಾಲ ನಿರಂತರವಾಗಿ ಉಪಯೋಗಿಸಬಹುದು. ಬ್ಯಾಟರಿಯನ್ನು ಚಾರ್ಜ್ ಮಾಡಲು, ನೀವು ನಿಮ್ಮ ಮೊಬೈಲ್ ಫೋನ್ ಅನ್ನು ಚಾರ್ಜ್ ಮಾಡುವಂತೆಯೆ ಅದೇ ರೀತಿಯಲ್ಲಿ ಚಾರ್ಜಿಂಗ್ ಪೋರ್ಟ್‌ಗೆ ಸಾಧನದೊಂದಿಗೆ ಒದಗಿಸಲಾಗಿರುವ ಚಾರ್ಜರ್ ಅನ್ನು ಸಂಪರ್ಕಿಸಿ. ತೆರವು ಮಾಡಿದ ಸ್ಥಿತಿಯಲ್ಲಿ ಸಾಧನವು ಪೂರ್ಣವಾಗಿ ಚಾರ್ಜ್ ಆಗಲು ೨ ೧/೨ ಯಿಂದ ೩ ಗಂಟೆಗಳನ್ನು ಅಗತ್ಯಪಡಿಸುತ್ತದೆ. ವಿಭಿನ್ನ ಸಮಯಗಳಲ್ಲಿ ಚಾರ್ಜ್‌ಗೆ ಹಾಕಿದಾಗ ಸಾಧನದ ಪವರ್ ಮಟ್ಟವು ಈ ಕೆಳಗಿನಂತಿರುತ್ತದೆ:

ಚಾರ್ಜಿಂಗ್ ಸಮಯ
೧ ಗಂಟೆ
೨ ಗಂಟೆಗಳು
೨ ೧/೨-೩ ಗಂಟೆಗಳು
ಸಾಧನದಲ್ಲಿನ ಚಾರ್ಜ್ ಮಟ್ಟ
ಸುಮಾರು ೩೦%
ಸುಮಾರು ೯೦%
೧೦೦%

ಸಾಧನವು ಆನ್ ಆಗಿದ್ದರೆ ಮತ್ತು ಚಾರ್ಜರ್ ಸಂಪರ್ಕಿಸಲ್ಪಟ್ಟಿದ್ದರೆ, ಸಾಧನವು ಅಡೆತಡೆಯನ್ನು ಪತ್ತೆಹಚ್ಚುವ ಕಾರ್ಯವನ್ನು ನಿಲ್ಲಿಸುತ್ತದೆ ಮತ್ತು ಚಾರ್ಜಿಂಗ್ ಆಗುತ್ತಿದ್ದೆ ಎಂಬುದನ್ನು ಬಳಕೆದಾರನಿಗೆ ತಿಳಿಸಲು ಪ್ರತಿ ೧೦ ಸೆಕೆಂಡುಗಳಲ್ಲಿ ಪುನರಾವರ್ತನೆಯಾಗುವ ಎರಡು ಬೀಪ್‌ಗಳನ್ನು ನೀಡುತ್ತದೆ. ಯಾವುದೇ ಬೀಪ್‌ಗಳು ಬರದಿದ್ದ ಪ್ರಕರಣಗಳಲ್ಲಿ, ಚಾರ್ಜರ್ ಅನ್ನು ಸಮರ್ಪಕವಾಗಿ ಸಂಪರ್ಕಿಸಿಲ್ಲ ಎಂದರ್ಥ. ಬ್ಯಾಟರಿಯು ಒಮ್ಮೆ ಪೂರ್ಣವಾಗಿ ಚಾರ್ಜ್ ಆದ ನಂತರ ಮತ್ತು ಚಾರ್ಜರ್ ಇನ್ನೂ ಸಂಪರ್ಕಿಸಲ್ಪಟ್ಟಿರುವಾಗ, ಸಾಧನವು ಚಾರ್ಜಿಂಗ್ ಪೂರ್ಣಗೊಂಡಿದೆ ಎಂಬುದನ್ನು ತಿಳಿಸುತ್ತಾ ಪ್ರತಿ ೧೦ ಸೆಕೆಂಡುಗಳಿಗೊಮ್ಮೆ ಪುನರಾವರ್ತನೆಯಾಗುವ ೨ ಸೆಕೆಂಡುಗಳ ದೀರ್ಘವಾದ ಬೀಪ್ ನೀಡುವುದನ್ನು ಪ್ರಾರಂಭಿಸುತ್ತದೆ. ಸಾಧನವನ್ನು ಆಫ್ ಮಾಡಿದ ಸ್ಥಿತಿಯಲ್ಲಿ ಬ್ಯಾಟರಿಯನ್ನು ಚಾರ್ಜ್ ಮಾಡಿದಾಗ, ಚಾರ್ಜಿಂಗ್ ಮುಂದುವರಿಯುತ್ತದೆ ಆದರೆ ಸಾಧನವು ಯಾವುದೇ ಬೀಪ್‌ಗಳನ್ನು ನೀಡುವುದಿಲ್ಲ.
ಸಾಧನದ ಸಾಮಾನ್ಯ ಬಳಕೆಯ ಅವಧಿಯಲ್ಲಿ, ಬ್ಯಾಟರಿಯ ಚಾರ್ಜ್ ಮಟ್ಟವು ೩೦% ಗಿಂತ ಕಡಿಮೆಯಾದರೆ, ಸಾಧನವು ಸಾಮಾನ್ಯವಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತದೆ ಮತ್ತು ಅಡೆತಡೆಯ ಅಂತರದ ಮಾಹಿತಿಯನ್ನು ಒದಗಿಸುವುದನ್ನೂ ಮುಂದುವರಿಸುತ್ತದೆ. ಜೊತೆಗೆ, ಇದು ಒಂದು ಬೀಪ್ ಅನ್ನೂ ನೀಡುತ್ತದೆ ಮತ್ತು ಬಳಕೆದಾರನಿಗೆ ಕಡಿಮೆ ಬ್ಯಾಟರಿಯ ಎಚ್ಚರಿಕೆಯನ್ನು ನೀಡುತ್ತಾ ಕಂಪಿಸುತ್ತದೆ. ಬ್ಯಾಟರಿ ಚಾರ್ಜ್ ತುಂಬಾ ಕಡಿಮೆಯಾದಾಗ, ಸಾಧನವು ನಾಲ್ಕು ಚಿಕ್ಕ ಬೀಪ್‌ಗಳನ್ನು ನೀಡಿದ ನಂತರ ಆಫ್ ಆಗುತ್ತದೆ. ಒಮ್ಮೆ ರೀಚಾರ್ಜ್ ಮಾಡಿದ ನಂತರ, ಇದು ಮಾಮೂಲಿನಂತೆ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ.

. ಸಾಧನವನ್ನು ಮಡಿಸುವುದು ಮತ್ತು ಕೊಂಡೊಯ್ಯುವುದು

ವ್ಹೈಟ್ ಕೇನ್ ಮೇಲೆ ಏರಿಸಲಾದ ಸ್ಮಾರ್ಟ್‌ಕೇನ್ ಸಾಧನವನ್ನು ಸಾಮಾನ್ಯವಾದ ವ್ಹೈಟ್ ಕೇನ್ ಅನ್ನು ಹೇಗೆ ಮಡಿಸಲಾಗುತ್ತದೆಯೊ ಹಾಗೆಯೇ ಮಡಿಸಬಹುದಾಗಿದೆ. ಉಪಯೋಗಿಸದಿರುವಾಗ ಒಬ್ಬ ವ್ಯಕ್ತಿಯು ಮಡಿಸುವುದಕ್ಕಾಗಿ ಸಾಧನದಿಂದ ಹೊರಬರುವ ವ್ಹೈಟ್ ಕೇನ್‌ನ ತಂತಿಯನ್ನು ಉಪಯೋಗಿಸಬಹುದು.
ಚಿತ್ರ ೮ Figure-8 - ವ್ಹೈಟ್ ಕೇನ್‍ನಂತೆಯೆ ಸ್ಮಾರ್ಟ್‌ಕೇನ್ ಅನ್ನು ಮಡಿಸುವುದು

ಸಾಧನದೊಂದಿಗೆ ಮೂಲದಲ್ಲಿ ಒದಗಿಸಲಾದ ವ್ಹೈಟ್ ಕೇನ್ ಹಾನಿಗೊಂಡ ಪ್ರಕರಣಗಳಲ್ಲಿ ಅಥವಾ ಕಾರ್ಯನಿರ್ವಹಿಸದಿದ್ದ ಸಂದರ್ಭದಲ್ಲಿ, ಈ ಮೊದಲೇ ವಿವರಿಸಲಾದಂತೆ ಒಬ್ಬ ವ್ಯಕ್ತಿಯು ಕೇನ್‌ನಿಂದ ಸಾಧನವನ್ನು ಸುಲಭವಾಗಿ ತೆಗೆಯಬಹುದು ಮತ್ತು ಹಾನಿಗೊಂಡ ಕೇನ್ ಅನ್ನು ಅಂತಹುದೇ ಮತ್ತೊಂದಕ್ಕೆ ಬದಲಾಯಿಸಬಹುದು. ಸದ್ಯಕ್ಕೆ ನೀವು ಸ್ಮಾರ್ಟ್‌ಕೇನ್ ಸಾಧನದೊಂದಿಗೆ ಬಹಳ ವಿಶ್ವಾಸದಿಂದ ನಾಲ್ಕು ಮತ್ತು ಐದು ಮಡಿಕೆಯ ವ್ಹೈಟ್ ಕೇನ್‌ಗಳನ್ನು ಅಳವಡಿಸಬಹುದು. ಮುಂದುವರಿದ ತಾಂತ್ರಿಕತೆಯಿಂದ ಆರು ಮಡಿಕೆಯ ಕೇನ್ ಅನ್ನೂ ಸಹ ವ್ಹೈಟ್ ಕೇನ್‌ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದ ನಂತರ ಉಪಯೋಗಿಸಬಹುದು.
 
ಚಿತ್ರ ೯ Figure-9 - ವ್ಹೈಟ್ ಕೇನ್ ಅನ್ನು ಬದಲಾಯಿಸಲು ಸ್ಮಾರ್ಟ್‌ಕೇನ್ ಸಾಧನದ ಎರಡು ಹಿಡಿ ಭಾಗಗಳನ್ನು ತೆರೆಯುವಿಕೆ

. ಸ್ಮಾರ್ಟ್ಕೇನ್ ಸಾಧನವನ್ನು ಉಪಯೋಗಿಸುವಲ್ಲಿ ಮುನ್ನೆಚ್ಚರಿಕೆಗಳು

ಇಲ್ಲಿ ಸ್ಮಾರ್ಟ್‌ಕೇನ್ ಸಾಧನದ ಬಳಕೆದಾರನು ಅನುಸರಿಲೇಬೇಕಾದ ಕೆಲವು ಮುಖ್ಯವಾದ ಮುನ್ನೆಚ್ಚರಿಕೆಗಳನ್ನು ನೀಡಲಾಗಿದೆ:
ಈ ಮೊದಲೇ ಉಲ್ಲೇಖಿಸಲಾದಂತೆ, ಸಾಧನವನ್ನು ಯಾವಾಗಲೂ ವ್ಹೈಟ್ ಕೇನ್ ಮೇಲೆ ಸಮರ್ಪಕವಾಗಿ ಅಳವಡಿಸಿದಾಗ ಉಪಯೋಗಿಸಬೇಕು. ಎಡ ಮತ್ತು ಬಲ ಬದಿಗಳ ಮೇಲೆ ತಟ್ಟುವಿಕೆ, ನೆಲಕ್ಕೆ ಹತ್ತಿರವಿರುವ ಕೇನ್ ತುದಿಯನ್ನು ಗುಡಿಸುವಿಕೆ ಇತ್ಯಾದಿಗಳನ್ನು ಒಳಗೊಂಡಂತೆ ಸ್ಟಾಂಡರ್ಡ್ ವ್ಹೈಟ್ ಕೇನ್ ಚಲನಶೀಲತೆಯ ವಿಧಾನಗಳನ್ನು ಅನುಸರಿಸಿ.
ಸಾಧನವನ್ನು ಸರಿಯಾದ ಸಂವೇದಕ ಕೋನವನ್ನು ನಿಗದಿಪಡಿಸಿದ ನಂತರವಷ್ಟೇ ಉಪಯೋಗಿಸಬೇಕು. ಈ ಮೊದಲೇ ಉಲ್ಲೇಖಿಸಲಾದಂತೆ, ಕೇನ್ ಅನ್ನು ಹಿಡಿದುಕೊಂಡಿರುವಾಗ, ಸಂವೇದಕ ದಿಕ್ಕು ಎದುರಿನಲ್ಲಿ ನಿಂತಿರುವ ಒಬ್ಬ ವ್ಯಕ್ತಿಯ ಎದೆಯತ್ತ ಗುರಿ ಮಾಡಲ್ಪಟ್ಟಿರಬೇಕು.
ಪ್ರಯಾಣವನ್ನು ಪ್ರಾರಂಭಿಸುವ ಮೊದಲು, ಸಾಧನವು ಚಾರ್ಜ್ ಆಗಿದೆಯೆ ಎಂಬುದನ್ನು ಪರೀಕ್ಷಿಸಿ. ಪ್ರತಿ ೨-೩ ದಿನಗಳಿಗೊಮ್ಮೆ ಕಾಲಾನುಸಾರವಾಗಿ ಸಾಧನವನ್ನು ಚಾರ್ಜ್ ಮಾಡಲಾಗಿದೆ ಎಂಬುದನ್ನು ದಯವಿಟ್ಟು ಖಾತರಿಪಡಿಸಿಕೊಳ್ಳಿರಿ. ಬಳಕೆಯು ಪ್ರತಿದಿನ ೨.೫ ಗಂಟೆಗೂ ಹೆಚ್ಚು ಕಾಲ ಆಗಿದ್ದರೆ ಪದೇಪದೇ ಚಾರ್ಜಿಂಗ್ ಅಗತ್ಯವಾಗಬಹುದು. ಬ್ಯಾಟರಿಯು ಒಮ್ಮೆ ಪೂರ್ಣವಾಗಿ ಚಾರ್ಜ್ ಆದ ನಂತರ, ಸಾಧನವು ಹೆಚ್ಚು ಉಪಯೋಗದ ಕನಿಷ್ಟ ೮ ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.
ಕಂಪನಗಳ ಸಂವೇದನೆಯಾಗುವ ಸಂವೇದಕಗಳ ಮುಂಭಾಗದಲ್ಲಿ ನಿಮ್ಮ ಕೈಯನ್ನಿಡುವ ಮೂಲಕ ಸಾಧನವು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ದಯವಿಟ್ಟು ಖಾತರಿಪಡಿಸಿಕೊಳ್ಳಿರಿ. ನೀವು ಒಳಾಂಗಣದಲ್ಲಿರುವಿರಾ ಅಥವಾ ಹೊರಾಂಗಣದಲ್ಲಿರುವಿರಾ ಎಂಬುದರ ಆಧಾರದ ಮೇಲೆ ವಿಧಾನದ ಸ್ವಿಚ್ ಅನ್ನು ಸರಿಯಾಗಿ ನಿಗದಿಪಡಿಸಿ.
ದಯವಿಟ್ಟು ಸಂವೇದಕವು ಶುಷ್ಕವಾಗಿರುವಾಗ ಮಾತ್ರ ಸಾಧನವನ್ನು ಉಪಯೋಗಿಸಿ. ಸಂವೇದಕವು ಒದ್ದೆಯಾಗಿದ್ದರೆ, ಉದಾಹರಣೆಗೆ ಮಳೆ ಅಥವಾ ಚೆಲ್ಲುವಿಕೆಯ ಕಾರಣದಿಂದ, ಸಾಧನವು ತಾತ್ಕಾಲಿಕವಾಗಿ ಕಾರ್ಯನಿರ್ವಹಿಸದಿರಬಹುದು, ಅಥವಾ ತಪ್ಪಾಗಿ ಕಾರ್ಯನಿರ್ವಹಿಸಬಹುದು ಅಥವಾ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಬಹುದು. ನೀವು ನಿಮ್ಮ ಮೊಬೈಲ್ ಫೋನ್ ಅನ್ನು ನಿರ್ವಹಣೆ ಮಾಡುವಂತೆಯೆ, ದಯವಿಟ್ಟು ಸಾಧನವನ್ನು ನೀರಿಗೆ ಅಥವಾ ಇತರ ಒದ್ದೆಯಾಗಿರುವ ಪರಿಸರಗಳಿಗೆ ಒಡ್ಡದಿರಿ. ಸಾಧನವು ಎರಚು ನಿರೋಧಕವಾಗಿರುತ್ತದೆ ಮತ್ತು ಸ್ವಲ್ಪ ದ್ರವ ಚೆಲ್ಲುವಿಕೆ ಅಥವಾ ನೀರಿನ ಎರಚುವಿಕೆ ಅಥವಾ ಇತರ ದ್ರವಗಳನ್ನು ತಡೆದುಕೊಳ್ಳಲು ಸಾಧ್ಯ. ಸಾಧನವನ್ನು ಪರೀಕ್ಷಿಸುವ ಮತ್ತು ಉಪಯೋಗಿಸುವ ಮೊದಲು ಸಂವೇದಕದ ಪ್ರದೇಶದಲ್ಲಿ ನೀರನ್ನು ಅನುಮತಿಸಿ. ನೀರು ಅಥವಾ ದ್ರವದಲ್ಲಿ ಸಾಧನವನ್ನು ಎಂದಿಗೂ ಮುಳುಗಿಸದಿರಿ, ಇದರಿಂದಾಗಿ ಸಾಧನಕ್ಕೆ ಶಾಶ್ವತ ಹಾನಿಯುಂಟಾಗಬಹುದು.
ಸ್ಮಾರ್ಟ್‌ಕೇನ್ ಅನ್ನು ಒಂದು ಗೋಡೆಯ ವಿರುದ್ಧವಾಗಿ ಬಾಗಿಸಿದ ವ್ಹೈಟ್ ಕೇನ್‌ನೊಂದಿಗೆ ಅಳವಡಿಸುವುದನ್ನು ತಪ್ಪಿಸಿ, ಇದು ಸಾಧನಕ್ಕೆ ಹಾನಿಯುಂಟುಮಾಡಿ ಜಾರಬಹುದು ಮತ್ತು ಬಿದ್ದುಹೋಗಬಹುದು.
ಬಳಕೆಯಲ್ಲಿರದಿರುವಾಗ ಎಲಾಸ್ಟಿಕ್ ತಂತಿಯನ್ನು ಉಪಯೋಗಿಸಿ ಕೇನ್‌ನೊಂದಿಗೆ ದಯವಿಟ್ಟು ಸಾಧನವನ್ನು ಮಡಿಸಿರಿ.

ಎಚ್ಚರಿಕೆ
ಈ ಸಾಧನದ ಆಂತರಿಕ ಘಟಕಗಳನ್ನು ಒಡ್ಡುವ ಅಥವಾ ತೆರೆಯಲು ಪ್ರಯತ್ನಿಸದಿರಿ (ಕೇನ್ ಅನ್ನು ಸೇರಿಸಲು ಅಥವಾ ಬಿಚ್ಚಲು ಹಿಡಿಯನ್ನು ತೆರೆಯುವುದಕ್ಕಾಗಿ ಹೊರತುಪಡಿಸಿ). ಇದು ಎಲೆಕ್ಟ್ರಾನಿಕ್ ಅಥವಾ ಮೆಕ್ಯಾನಿಕಲ್ ಘಟಕಗಳಿಂದ ಉದ್ಭವಿಸುವ ಅಪಾಯಗಳಿಗೆ ನಿಮ್ಮನ್ನು ಒಡ್ಡಬಹುದು. ರಿಪೇರಿ ಅಥವಾ ಸರ್ವೀಸಿಂಗ್ ಅಗತ್ಯವಿರುವ ಪ್ರಕರಣದಲ್ಲಿ, ದಯವಿಟ್ಟು ಸಂಬಂಧಿಸಿದ ವ್ಯಕ್ತಿಗಳನ್ನು ಸಂಪರ್ಕಿಸಿ.

. ಸಂಪರ್ಕ ಮಾಹಿತಿ

ಸ್ಮಾರ್ಟ್‌ಕೇನ್ ಸಾಧನಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿಗಾಗಿ, ಬಳಕೆದಾರರು ಸಕ್ಷಮ್ ಟ್ರಸ್ಟ್, ನವದೆಹಲಿ, ಇವರನ್ನು ಸಂಪರ್ಕಿಸಬಹುದು. ಸಂಪರ್ಕ ವಿವರವು ಈ ಕೆಳಗಿನಂತಿದೆ.

ಸಕ್ಷಮ್ ಟ್ರಸ್ಟ್

೪೮೬, ಡಬಲ್ ಸ್ಟೋರಿ, ನ್ಯೂ ರಾಜೆಂದರ್ ನಗರ್,
ನವದೆಹಲಿ - ೧೧೦೦೬೦

ದೂರವಾಣಿ: ೦೧೧-೬೪೬೫೦೬೫೫
ಇಮೇಲ್: -------------

೧೦. ಅನುಬಂಧ : ತಾಂತ್ರಿಕ ವಿವರಣೆಗಳು


೧೦.. ಭೌತಿಕ ವಿವರಣೆಗಳು

ವಿಸ್ತೀರ್ಣಗಳು (ಹೆಚ್*ಡಬ್ಲ್ಯು*ಡಿ)         : (೨೪೦*೫೩*೩೨) ಮಿಮೀ
ಹಿಡಿಯ ಎತ್ತರ                             : ೧೯೦ ಮಿಮೀ
ಹಿಡಿಯ ಪರಿಧಿ                             : ೩೨.೫ ಮಿಮೀ (ಗರಿಷ್ಠ)
ಸಂವೇದಕ ಕೋಣದ ಸೆಟ್ಟಿಂಗ್ಸ್          : ೩ ಸೆಟ್ಟಿಂಗ್ಸ್ (೦, ೧೭.೮ ಮತ್ತು ೩೫.೬)
ಬ್ಯಾಟರಿಯೊಂದಿಗೆ ಸಾಧನದ ತೂಕ     : ೧೩೬ ಗ್ರಾಂ
ಸಾಮಗ್ರಿ                                   : ಪಾಲಿಕಾರ್ಬೊನೇಟ್ - ಎಬಿಎಸ್ ಪ್ಲಾಸ್ಟಿಕ್

೧೦. ಪರಿಸರಾತ್ಮಕ ವಿವರಣೆ

ಕಾರ್ಯಾಚರಣೆಯ ತಾಪಮಾನ         : -೧೦ ರಿಂದ ೫೦ ಸೆಲ್ಸಿಯಸ್
ಸ್ಟೋರೇಜ್ ತಾಪಮಾನ                  : -೨೫ ರಿಂದ -೭೦ ಸೆಲ್ಸಿಯಸ್
ಸಂಬಂಧಿತ ಆರ್ದ್ರತೆಯ ವ್ಯಾಪ್ತಿ          : ೧೫ ರಿಂದ ೯೩% (ಆರ್‌ಹೆಚ್)
ಬಾರೊಮೀಟರಿನ ಒತ್ತಡದ ವ್ಯಾಪ್ತಿ       : ೭೦ ರಿಂದ ೧೦೬ ಕಿಲೊಪಾಸ್ಕಲ್

೧೦. ಬ್ಯಾಟರಿ ವಿವರಣೆಗಳು

ವಿಧ                                        : ರೀಚಾರ್ಜಬಲ್ ಲಿ-ಪಾಲಿಮರ್
ರೇಟಿಂಗ್                                   : ೩.೭ವಿ; ೪೦೦ ಎಂಎ
ಗಾತ್ರ (ಎಲ್*ಬಿ*ಡಬ್ಲ್ಯು)                  : ೪೨.೬*೬.೨*೧೭.೩ ಮಿಮೀ
ತೂಕ                                       : ೧೦ ಗ್ರಾಂ
ಕಾರ್ಯಾಚರಣೆಯ ಸಮಯ             : ನಿರಂತರವಾದ ಬಳಕೆಯ ಗರಿಷ್ಠ ೮ ಗಂಟೆಗಳು
ಚಾರ್ಜಿಂಗ್ ಸಮಯ                      : ೨ ಗಂಟೆ ೩೦ ನಿಮಿಷಗಳು

೧೦. ಚಾರ್ಜರ್ ವಿವರಣೆಗಳು

ವಿಧ                                        : ಟ್ರಾವೆಲ್ ಚಾರ್ಜರ್
ಪವರ್ ಜಾಕ್                              : ೩.೫ ಮಿಮೀ (ಒಳಾಂಗಣ), ೭.೮ ಮಿಮೀ (ಹೊರಾಂಗಣ)
ಇನ್‌ಪುಟ್ ರೇಟಿಂಗ್                      : ೧೧೦-೨೩೦ವಿ, ೫೦-೬೦ ಹರ್ಟ್ಜ್
ಔಟ್‌ಪುಟ್ ರೇಟಿಂಗ್                      : ೫.೫ವೋಲ್ಟ್, ೬೦೦ ಎಂಎ, ೩.೫ ವ್ಯಾಟ್

೧೦. ಪತ್ತೆಹಚ್ಚುವ ಗುಣಲಕ್ಷಣಗಳು

ಸಂವೇದಕದ ವಿಧ                         : ೪೦ ಕಿಲೊಹರ್ಟ್ಜ್ ಶ್ರವಣಾತೀತ
ಕೋನಾತ್ಮಕ ಕವರೇಜ್                   : ೪೫ (ಗರಿಷ್ಠ)
ರೆಸಲ್ಯೂಶನ್                                      : ೩ ಮೀಟರ್‌ನಲ್ಲಿ ೩ ಸೆಂಮೀ
ಒಳಾಂಗಣ ವ್ಯಾಪ್ತಿ                        : ೦.೦೩ - ೧.೮ ಮೀ
ಹೊರಾಂಗಣ ವ್ಯಾಪ್ತಿ                              : ೦.೦೩ - ೩.೦ ಮೀ

೧೦. ಕಂಪನದ ಗುಣಲಕ್ಷಣಗಳು

ಕಂಪನದ ತೀವ್ರತೆ                        : ೦.೮ ಮೀ/ಸೆಕೆಂಡ್೨ (ಸರಾಸರಿ)
                                             ೦.೬ ಮೀ/ಸೆಕೆಂಡ್೨ (ಕನಿಷ್ಠ)
                                             ೧.೩ ಮೀ/ಸೆಕೆಂಡ್೨ (ಗರಿಷ್ಠ)

೧೦.. ವ್ಹೈಟ್ ಕೇನ್ ವಿವರಣೆಗಳು

ಮಡಿಕೆಗಳ ಸಂಖ್ಯೆ                        : ೪-೬ ಮಡಿಕೆ
ಉದ್ದ                                       : ೧.೧೯ ಮೀ
ಪರಿಧಿ                                      : ೧೨.೮೦ ಮಿಮೀ (ಕನಿಷ್ಠ) ಮತ್ತು ೧೩.೦೪ ಮಿಮೀ (ಗರಿಷ್ಠ)

೧೦.. ಪ್ರಾಮಾಣೀಕರಿಸಿದ ಉಪಕರಣಗಳು

ಚಾರ್ಜರ್                                  : ಟ್ರಾವೆಲ್ ಚಾರ್ಜರ್
ವ್ಹೈಟ್ ಕೇನ್                               : ವರ್ತ್ ಟ್ರಸ್ಟ್‌ನಿಂದ ೪, ೫ ಅಥವಾ ೬ ಮಡಿಕೆ


೧೧. ಅನುಬಂಧ ಬಿ: ಪದೇಪದೇ ಕೇಳಲಾಗುವ ಪ್ರಶ್ನೆಗಳು


ಪ್ರ ೧. ಸ್ಮಾರ್ಟ್‌ಕೇನ್ ಸಾಧನವು ವಸ್ತುಗಳನ್ನು ಸ್ಪರ್ಶಿಸದೆ ಅವುಗಳನ್ನು ಹೇಗೆ ಪತ್ತೆಹಚ್ಚುತ್ತದೆ?
ಸ್ಮಾರ್ಟ್‌ಕೇನ್ ಸಾಧನವು ಶ್ರವಣಾತೀತ ಸಂವೇದಕವಾಗಿದ್ದು ಶಬ್ಧ ತರಂಗಗಳಾಗಿರುವ ಶ್ರವಣಾತೀತ ಕಿರಣಗಳನ್ನು ಸ್ವೀಕರಿಸುತ್ತದೆ. ಒಂದು ಅಡೆತಡೆಯು ಈ ಕಿರಣಗಳ ದಾರಿಯಲ್ಲಿ ಬಂದಾಗ, ಅವುಗಳು ಪುನಃ ಪ್ರತಿಫಲಿಸುತ್ತವೆ ಮತ್ತು ಸಂವೇದಕದಿಂದ ಪತ್ತೆಹಚ್ಚಲ್ಪಡುತ್ತವೆ. ಯಾವುದೇ ಅಡೆತಡೆಯನ್ನು ಪತ್ತೆಹಚ್ಚುವುದರ ಮೇಲೆ, ಇದು ಅಡೆತಡೆಯ ಉಪಸ್ಥಿತಿಯನ್ನು ಸೂಚಿಸಲು ಕಂಪನಗಳನ್ನು ಉಂಟುಮಾಡುತ್ತದೆ.

ಪ್ರ ೨. ಸ್ಮಾರ್ಟ್‌ಕೇನ್ ಸಾಧನದಲ್ಲಿ ಲಭ್ಯವಿರುವ ಪತ್ತೆಹಚ್ಚುವಿಕೆಯ ಎರಡು ವಿಧಾನಗಳು (ಒಳಾಂಗಣ ಮತ್ತು ಹೊರಾಂಗಣ ವಿಧಾನಗಳು) ಏಕಿರುತ್ತವೆ?
ಸಾಮಾನ್ಯವಾಗಿ ಒಳಾಂಗಣ ಪರಿಸರದಲ್ಲಿ, ಒಬ್ಬ ವ್ಯಕ್ತಿಯು ಬಳಕೆದಾರನಿಗೆ ಗೊತ್ತಿರುವ ಎಲ್ಲಾ ಹಲವಾರು ವಸ್ತುಗಳನ್ನು ಕಂಡುಕೊಳ್ಳುವನು. ಹೊರಾಂಗಣ ಪರಿಸರದಲ್ಲಿ, ವಸ್ತುಗಳು ಬಹು ದೂರದಲ್ಲಿದ್ದು ಪತ್ತೆಹಚ್ಚುವಿಕೆಗಾಗಿ ದೂರದ ವ್ಯಾಪ್ತಿಯು ಪ್ರಯೋಜನಕಾರಿಯಾಗಿರುತ್ತದೆ. ಆದುದರಿಂದ, ಅಂತಹ ಪರಿಸ್ಥಿತಿಗಳಲ್ಲಿ, ಸಾಧನವನ್ನು ಹೊರಾಂಗಣ ವಿಧಾನದಲ್ಲಿ ನಿಗದಿಪಡಿಸಬೇಕು. ಸಮರ್ಪಕವಾದ ಉಪಯುಕ್ತತೆಗಾಗಿ ಸೂಕ್ತವಾದ ವಿಧಾನವನ್ನು ಆಯ್ಕೆಮಾಡುವುದು ಮುಖ್ಯವಾಗಿರುತ್ತದೆ. ಉದಾಹರಣೆಗೆ, ಹೊರಾಂಗಣ ವಿಧಾನದಲ್ಲಿ ನಿಗದಿಪಡಿಸಿದ ಸಾಧನದೊಂದಿಗೆ ಒಳಾಂಗಣ ಪರಿಸರದಲ್ಲಿ ಸುತ್ತಾಡುತ್ತಿದ್ದರೆ, ಸಾಧನವು ಹತ್ತಿರದಲ್ಲಿರುವ ಹಲವಾರು ಅಡೆತಡೆಗಳ ಕಾರಣದಿಂದಾಗಿ ನಿರಂತರವಾಗಿ ಕಂಪಿಸುತ್ತಿರುತ್ತದೆ. ಅದೇರೀತಿಯಾಗಿ, ಹೊರಾಂಗಣದಲ್ಲಿ ಸುತ್ತಾಡುತ್ತಿದ್ದರೆ ಮತ್ತು ಸಾಧನವನ್ನು ಒಳಾಂಗಣ ವಿಧಾನಕ್ಕೆ ನಿಗದಿಪಡಿಸಿದ್ದರೆ, ಅಂತಹ ಸಂದರ್ಭದಲ್ಲಿ ನೀವು ಯಾವುದೇ ಅಡೆತಡೆಯ ೧.೫ ಅಥವಾ ಕಡಿಮೆ ಅಂತರಕ್ಕೆ ಬರುವುದರ ಮೇಲೆ ಅದರ ಉಪಸ್ಥಿತಿಯನ್ನು ಎದುರಿಸುವಿರಿ.

ಪ್ರ ೩. ಏಕೆ ಸಂವೇದಕಗಳ ಕೋನಗಳನ್ನು ನಿಗದಿಪಡಿಸುವುದು ಮುಖ್ಯವಾಗಿರುತ್ತದೆ?
ಕೋನವನ್ನು ಹೊಂದಿಸುವಿಕೆಯು ಉಂಟಾಗುವ ಶ್ರವಣಾತೀತ ಕಿರಣಗಳ ಕೋನ ದಿಕ್ಕನ್ನು ನಿರ್ದಿಷ್ಟಪಡಿಸುತ್ತದೆ. ಕೋನ ಕೆಳಮುಖವಾಗಿದ್ದರೆ, ಅದು ನಿರಂತರವಾಗಿ ನೆಲವನ್ನು ಪತ್ತೆಹಚ್ಚುತ್ತದೆ ಮತ್ತು ಹಾಗೆಯೇ, ಕೋನ ಅನ್ನು ಮೇಲ್ಮುಖವಾಗಿ ನಿರ್ದೇಶಿಸಲ್ಪಟ್ಟಿದ್ದರೆ, ಅದು ಸೊಂಟದಿಂದ ಎತ್ತರಲ್ಲಿರುವ ಅಡೆತಡೆಗಳನ್ನು ಪತ್ತೆಹಚ್ಚಲು ಶಕ್ತವಾಗಿರುವುದಿಲ್ಲ. ಆದುದರಿಂದ, ಸಂವೇದಕ ಕೋನವನ್ನು ನಿಮ್ಮ ಎದುರಿನಲ್ಲಿ ನಿಂತಿರುವ ಒಬ್ಬ ವ್ಯಕ್ತಿಯ ಎದೆಯ ಕಡೆಗೆ ತೋರಿಸುವಂತಹ ಒಂದು ಸ್ಥಾನದಲ್ಲಿ ನಿಗದಿಪಡಿಸುವುದು ಅವಶ್ಯಕವಾಗಿರುತ್ತದೆ. ಇದನ್ನು ಮಾಡುವಿಕೆಯು ನಿಮ್ಮ ಮೊಣಕಾಲಿನಿಂದ ತಲೆಯ ಎತ್ತರದವರೆಗೆ ಇರುವ ವಸ್ತುಗಳನ್ನು ಪತ್ತೆಹಚ್ಚಲು ನಿಮಗೆ ಸಹಾಯಕವಾಗುತ್ತದೆ.

ಪ್ರ ೪. ಸ್ಮಾರ್ಟ್‌ಕೇನ್ ಸಾಧನವು ವ್ಹೈಟ್ ಕೇನ್‌ಗೆ ಬದಲಿಯಾದುದೆ?
ಸ್ಮಾರ್ಟ್‌ಕೇನ್ ಸಾಧನವು ನಿಮ್ಮ ವ್ಹೈಟ್ ಕೇನ್‌ಗಾಗಿ ಒಂದು ಬದಲಿಯಾದುದಲ್ಲ. ಬದಲಾಗಿ, ಇದು ಎತ್ತರದ ಅಡೆತಡೆಗಳನ್ನು ಪತ್ತೆಹಚ್ಚುವ ಮೂಲಕ ಅದರ ಉಪಯೋಗವನ್ನು ಪೂರೈಸುತ್ತದೆ ಮತ್ತು ಹೆಚ್ಚಿಸುತ್ತದೆ, ಇದರಿಂದಾಗಿ ಸುರಕ್ಷತೆಯನ್ನು ಹೆಚ್ಚಿಸುತ್ತದೆ. ಕೇನ್ ಅನ್ನು ತಟ್ಟುವಿಕೆಯು ನೆಲಮಟ್ಟದ ಅಡೆತಡೆಗಳ ಪತ್ತೆಹಚ್ಚುವಿಕೆಗಾಗಿ ಮುಂದುವರಿದಿರಬೇಕು.

ಪ್ರ ೫. ಸ್ಮಾರ್ಟ್‌ಕೇನ್ ಸಾಧನವನ್ನು ಮೆಟ್ಟಿಲು ಅಥವಾ ಮುಖ್ಯ ಸಭಾಂಗಣಗಳಂತಹ ಮೇಲ್ಭಾಗಗಳ ಮಟ್ಟದಲ್ಲಿ ಪತ್ತೆಹಚ್ಚುವಿಕೆಯ ಬದಲಾವಣೆಯಲ್ಲಿ ಉಪಯೋಗಿಸಲು ಸಾಧ್ಯವೆ?
ಸ್ಮಾರ್ಟ್‌ಕೇನ್ ಸಾಧನವು ಮೊಣಕಾಲಿನಿಂದ ಮೇಲಿನ ಅಡೆತಡೆಗಳನ್ನು ಪತ್ತೆಹಚ್ಚುತ್ತದೆ ಎಂಬುದನ್ನು ಈ ಮೊದಲೇ ಉಲ್ಲೇಖಿಸಿದಂತೆ, ಸಾಧನವನ್ನು ಮೆಟ್ಟಿಲುಗಳು, ಮುಖ್ಯ ಸಭಾಂಗಣಗಳು ಇತ್ಯಾದಿಗಳಂತಹ ಮೇಲ್ಮಟ್ಟದಲ್ಲಿನ ಪತ್ತೆಹಚ್ಚುವಿಕೆಯ ಬದಲಾವಣೆಗಾಗಿ ಉಪಯೋಗಿಸಲು ಸಾಧವಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಸ್ಮಾರ್ಟ್‌ಕೇನ್ ಸಾಧನಕ್ಕಿಂತಲೂ ವ್ಹೈಟ್ ಕೇನ್ ವಿಧಾನವು ಹೆಚ್ಚು ಪ್ರಯೋಜನಕಾರಿಯಾಗಿರುತ್ತದೆ.

ಪ್ರ ೬. ಇದಕ್ಕೆ ವ್ಹೈಟ್ ಕೇನ್ ಅನ್ನು ಸೇರಿಸದೆ ನಾನು ಸ್ಮಾರ್ಟ್‌ಕೇನ್ ಸಾಧನವನ್ನು ಉಪಯೋಗಿಸಲು ಸಾಧ್ಯವೆ?
ಹೌದು, ನೀವು ಸಾಮಾನ್ಯವಾಗಿ ವ್ಹೈಟ್ ಕೇನ್ ಅನ್ನು ಉಪಯೋಗಿಸದಿರುವ ನಿಮಗೆ ಪರಿಚಯವಿರುವ ಯಾವುದೇ ಸ್ಥಳದಲ್ಲಿ ನೀವು ನಡೆದುಕೊಂಡು ಹೋಗುತ್ತಿದ್ದರೆ ಅದನ್ನು ಒಂದು ವ್ಹೈಟ್ ಕೇನ್‌ಗೆ ಸೇರಿಸದೆ ಸಾಧನವನ್ನು ಉಪಯೋಗಿಸಬಹುದಾಗಿದೆ. ಆಗಲೂ ಸಾಧನವು ಕಾರ್ಯನಿರ್ವಹಿಸುತ್ತದೆ ಮತ್ತು ಮೊಣಕಾಲಿನಿಂದ ಮೇಲ್ಮಟ್ಟದ ಅಡೆತಡೆಗಳನ್ನು ಪತ್ತೆಮಾಡಲು ನಿಮಗೆ ಸಹಾಯಕವಾಗುತ್ತದೆ.

ಪ್ರ ೭. ನಾನು ನನ್ನ ಸಾಧನವನ್ನು ಆನ್ ಮಾಡಿದಾಗ ಅದು ಏಕೆ ಹಲವಾರು ಬಾರಿ ಬೀಪ್ ಶಬ್ಧವನ್ನು ಮಾಡುತ್ತದೆ?
ಆರಂಭಿಕ ಬೀಪ್‌ಗಳು ಬ್ಯಾಟರಿಯಲ್ಲಿ ಉಳಿದಿರುವ ಚಾರ್ಜ್ ಮಟ್ಟವನ್ನು ಸೂಚಿಸುತ್ತವೆ. ಒಂದೇ ಬೀಪ್ ಬ್ಯಾಟರಿ ಕಡಿಮೆಯಿದೆ (೩೦% ಗಿಂತಲೂ ಕಡಿಮೆ) ಎಂಬುದನ್ನು ಸೂಚಿಸುತ್ತದೆ; ಎರಡು ಬೀಪ್‌ಗಳು ಬ್ಯಾಟರಿ ಸುಮಾರಾಗಿ ಚಾರ್ಜ್ ಆಗಿದೆ (೩೦-೭೦%) ಎಂಬುದನ್ನು ಸೂಚಿಸುತ್ತವೆ ಮತ್ತು ಮೂರು ಬೀಪ್‌ಗಳು ಸಾಧನವು ಪೂರ್ಣವಾಗಿ ಚಾರ್ಜ್ ಆಗಿದೆ (೭೦% - ೧೦೦%) ಎಂಬುದನ್ನು ಸೂಚಿಸುತ್ತವೆ. ಸಾಧನವನ್ನು ಹೊರಾಂಗಣಕ್ಕೆ ನಿಗದಿಪಡಿಸಲಾಗಿದ್ದರೆ, ಕೊನೆಯಲ್ಲಿ ಒಂದು ಹೆಚ್ಚುವರಿಯಾದ ದೀರ್ಘ ಬೀಪ್ ಉಂಟಾಗುತ್ತದೆ.

ಪ್ರ ೮. ಸಾಧನವು ಪೂರ್ಣವಾಗಿ ಚಾರ್ಜ್ ಆಗಿದ್ದರೆ, ಚಾರ್ಜಿಂಗ್ ಅನ್ನು ಅಗತ್ಯಪಡಿಸುವ ಮೊದಲು ಅದು ಎಷ್ಟು ಕಾಲ ಕಾರ್ಯನಿರ್ವಹಿಸಬಹುದು?
ಪೂರ್ಣವಾಗಿ ಚಾರ್ಜ್ ಮಾಡಿದ ಬ್ಯಾಟರಿಯು ನಿರಂತರವಾಗಿ ಉಪಯೋಗಿಸಿದರೆ, ೮ ಗಂಟೆಗಳ ಕಾಲ ಬರುತ್ತದೆ. ಉದಾಹರಣೆಗೆ, ಒಬ್ಬ ವ್ಯಕ್ತಿಯು ಪ್ರತಿದಿನ ಈ ಸಾಧನವನ್ನು ಸುಮಾರು ೧.೫ ಗಂಟೆಗಳ ಕಾಲ ಉಪಯೋಗಿಸಿದರೆ, ಅಂತಹ ಪ್ರಕರಣದಲ್ಲಿ, ಸಾಧನವನ್ನು ಚಾರ್ಜ್ ಮಾಡದೇ ಒಂದು ವಾರದವರೆಗೆ ಉಪಯೋಗಿಸಬಹುದು. ಸಾಧನವನ್ನು ಪೂರ್ಣವಾಗಿ ಚಾರ್ಜ್ ಮಾಡಲು ೨.೫ ಗಂಟೆಗಳ ಸಮಯ ಹಿಡಿಯುತ್ತದೆ ಎಂಬುದನ್ನು ಗಮನಿಸಿ.

ಪ್ರ ೯. ಬ್ಯಾಟರಿಗಳು ಡಿಸ್ಚಾರ್ಜ್ ಆದ ಪ್ರತಿ ಬಾರಿಯೂ ನಾನು ಅವುಗಳನ್ನು ಬದಲಾಯಿಸಬೇಕೆ?
ನೀವು ಬ್ಯಾಟರಿಗಳನ್ನು ಬದಲಾಯಿಸಬೇಕಾಗಿಲ್ಲ. ಮೊಬೈಲ್ ಫೋನ್‌ಗಳಲ್ಲಿ ಉಪಯೋಗಿಸಲಾಗುವ ರೀತಿಯಲ್ಲಿಯೇ ಸಾಧನವು ಒಂದು ರೀಚಾರ್ಜ್ ಮಾಡಬಹುದಾದ ಬ್ಯಾಟರಿಯನ್ನು ಉಪಯೋಗಿಸುತ್ತದೆ. ಇದನ್ನು ಸರಳವಾಗಿ ಚಾರ್ಜರ್ ಅನ್ನು ಸಂಪರ್ಕಿಸುವ ಮೂಲಕ ಚಾರ್ಜ್ ಮಾಡಬಹುದಾಗಿದೆ. ಇದನ್ನು ಎರಡು ವರ್ಷಗಳ ಬಳಕೆಯ ನಂತರವಷ್ಟೇ ಬದಲಾಯಿಸಬೇಕಾಗಬಹುದು.

ಪ್ರ ೧೦. ನನ್ನ ಕೇನ್ ಮುರಿದುಹೋದರೆ ಅಥವಾ ನಾನು ನನ್ನ ಕೇನ್ ಅನ್ನು ಬದಲಾಯಿಸಲು ಬಯಸಿದರೆ, ನಾನು ಒಂದು ಹೊಸ ಸ್ಮಾರ್ಟ್‌ಕೇನ್ ಸಾಧನವನ್ನು ಖರೀದಿಸದೆ ಅದನ್ನು ಬದಲಾಯಿಸಬಹುದೆ?
ಹೌದು, ಹಳೆಯ ಕೇನ್ ಅನ್ನು ಸಾಧನದಿಂದ ಸುಲಭವಾಗಿ ಬಿಚ್ಚಬಹುದು ಮತ್ತು ಅದೇ ಪ್ರಕಾರದ ಒಂದು ಹೊಸ ಕೇನ್ ಅನ್ನು ಆ ಸ್ಥಾನದಲ್ಲಿ ಸೇರಿಸಬಹುದು.

ಪ್ರ ೧೧. ರಸ್ತೆಯಲ್ಲಿ ಬರುವಾಗ ನನ್ನ ಸಾಧನವು ಏಕೆ ಸಾಂದರ್ಭಿಕವಾಗಿ ಬೀಪ್ ಶಬ್ಧವನ್ನು ಮಾಡುತ್ತದೆ?
ಬಳಕೆದಾರನ ಎಡ ಅಥವಾ ಬಲ ಬದಿಯಿಂದ ವೇಗವಾಗಿ ಚಲಿಸುವ ವಸ್ತುಗಳು ಸಾಗಿದಾಗ ಸಾಧನವು ಬೀಪ್ ಶಬ್ಧವನ್ನು ಮಾಡುತ್ತದೆ. ಆ ವಸ್ತುವು ಕಾರು, ಬೈಸಿಕಲ್ ಅಥವಾ ಟ್ರಕ್ ಆಗಿರಬಹುದು.

ಪ್ರ ೧೨. ಸ್ಮಾರ್ಟ್‌‍ಕೇನ್ ಸಾಧನವು ವಸ್ತುಗಳು ಮತ್ತು ಹೆಗ್ಗುರುತುಗಳನ್ನು ಗುರುತಿಸುತ್ತದೆಯೆ?
ಇಲ್ಲ, ಸ್ಮಾರ್ಟ್‌ಕೇನ್ ಸಾಧನದ ಉದ್ದೇಶವು ಒಂದು ಸುರಕ್ಷಿತ ಅಂತರದಿಂದ ಪತ್ತೆಹಚ್ಚುವಿಕೆಯಾಗಿದೆ. ಸಾಧನದ ಕಂಪನಗಳನ್ನು ಉಪಯೋಗಿಸಿ ಅಡೆತಡೆಗಳನ್ನು ಪತ್ತೆಹಚ್ಚಲು ಮತ್ತು ಅದು ಹೆಗ್ಗುರುತು ಆಗಿದ್ದರೆ ವ್ಹೈಟ್ ಕೇನ್ ಸಹಾಯದಿಂದ ಅಡೆತಡೆಯನ್ನು ಗುರುತಿಸಬೇಕೆಂದು ನಾವು ಬಳಕೆದಾರನನ್ನು ಪ್ರೋತ್ಸಾಹಿಸುತ್ತೇವೆ.

ಪ್ರ ೧೩. ನಾನು ಮಳೆಯ ಸಂದರ್ಭದಲ್ಲಿ ಸ್ಮಾರ್ಟ್‌ಕೇನ್ ಸಾಧನವನ್ನು ಉಪಯೋಗಿಸಬಹುದೆ?
ಸ್ಮಾರ್ಟ್‌ಕೇನ್ ಸಾಧನವು ಶ್ರವಣಾತೀತ ತರಂಗಗಳನ್ನು ಉಪಯೋಗಿಸುತ್ತದೆ, ಹಾಗಾಗಿ ಮಳೆಯ ಹನಿಗಳನ್ನೂ ಸಹ ಪತ್ತೆಹಚ್ಚುತ್ತದೆ. ಆದುದರಿಂದ ಮಳೆ ಬರುವಾಗ ಇದು ಸಮಾನವಾಗಿ ಕಂಪಿಸುವುದರಿಂದ ಸಾಧನವನ್ನು ಉಪಯೋಗಿಸದಿರಲು ಶಿಫಾರಸು ಮಾಡಲಾಗಿದೆ. ಆದರೂ ಮಳೆ ನಿಂತ ನಂತರ ಅದು ಕಾರ್ಯನಿರ್ವಹಣೆಯನ್ನು ಮರಳಿ ಪಡೆಯುತ್ತದೆ.

೧೨. ಅನುಬಂಧ ಸಿ: ಸ್ಮಾರ್ಟ್ಕೇನ್ ಸಾಧ ಬಗ್ಗೆ ಜನರು ಏನು ಹೇಳುತ್ತಾರೆ.


ವಿಭಿನ್ನ ಪರಿಸ್ಥಿತಿಗಳಲ್ಲಿ ಸಾಧನದ ಉಪಯೋಗದ ಬಗ್ಗೆ ಅವರ ಅನುಭವಗಳ ಬಗ್ಗೆ ಜನರು ಏನು ಹೇಳುತ್ತಾರೆ ಎಂಬುದನ್ನು ತಿಳಿದುಕೊಳ್ಳುವುದಕ್ಕಾಗಿ ಈ ಕೆಳಗಿನ ವಿಭಾಗಗಳನ್ನು ಓದಿರಿ. ಈ ಕೆಳಗಿನ ಪಠ್ಯದಲ್ಲಿ ಹೆಸರುಗಳನ್ನು ಬದಲಾಯಿಸಲಾಗಿದೆ.

ಒಂದು ಉದ್ಯಾನವನದಲ್ಲಿ ಸಾಗುವುದು: ೧೭ ವರ್ಷದ ಯುವತಿಯಾದ ಸ್ನೇಹ ಹೀಗೆ ಹೇಳುವರು: “ಸಾಧನವನ್ನು ಉಪಯೋಗಿಸಿ ನನಗೆ ಆನಂದವಾಗುತ್ತಿದೆ. ಈಗ ನಾನು ಉದ್ಯಾನವನದಲ್ಲಿ ಸುತ್ತಾಡಲು ಶಕ್ತಳಾಗಿದ್ದೇನೆ, ಏಕೆಂದರೆ ಈ ಮೊದಲು ವ್ಹೈಟ್ ಕೇನ್‌ನೊಂದಿಗೆ ಪತ್ತೆಹಚ್ಚಲು ಸಾಧ್ಯವಿರದಿದ್ದ ಬೆಂಚುಗಳು ಮತ್ತು ಮರದ ಕೊಂಬೆಗಳ ಬಗ್ಗೆ ಸ್ಮಾರ್ಟ್‍ಕೇನ್ ಸಾಧನವು ನನಗೆ ಹೇಳುತ್ತದೆ”.

ಜನರ ನಡುವೆ ದಾರಿಯನ್ನು ಕಂಡುಕೊಳ್ಳುವುದು: ಸಾಧನದಲ್ಲಿನ ವೇಗದ ಚಲನೆಯ ವಸ್ತುವಿನ ಪತ್ತೆಹಚ್ಚುವಿಕೆಯ ಲಕ್ಷಣವು ಮೌಲ್ಯಯುತವಾದುದು ಮತ್ತು ಢಿಕ್ಕಿಹೊಡೆಯುವುದನ್ನು ತಡೆಯಲು ಶೀಘ್ರವಾದ ಪ್ರತಿಕ್ರಿಯೆಯನ್ನು ನೀಡುತ್ತದೆ. ಇದು ಜನರ ಮಧ್ಯೆ ದಾರಿಯನ್ನು ಕಂಡುಕೊಳ್ಳುವಲ್ಲಿ ಬಹಳಷ್ಟು ಪ್ರಯೋಜನಕಾರಿಯಾಗಿದೆ ಎಂದು ನಿತಿನ್ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾರೆ.

ಜನಸಂದಣಿಯ ಸ್ಥಳಗಳಲ್ಲಿ ಚಲನೆ: ಪ್ರಭಾಕರ್ ಹೀಗೆ ಹೇಳುವರು. ನಾನು ಸಾಮಾನುಗಳನ್ನು ತುಂಬಾ ಸುಲಭವಾಗಿ ಪತ್ತೆಹಚ್ಚಿದೆ ಮತ್ತು ರೈಲಿನ ನೆಲಹಾಸಿನ ಮೇಲೆ ಉರುಳುವುದರಿಂದ ತಡೆಯಿತು. ಈ ಸಾಧನವನ್ನು ಉಪಯೋಗಿಸಿ ನಾನು ಕೇರಳಕ್ಕೆ ಸುರಕ್ಷಿತವಾಗಿ ಪ್ರಯಾಣಿಸಿದೆನು.

ಹೆಚ್ಚಿದ ಆತ್ಮವಿಶ್ವಾಸ: ದೆಹಲಿಯ ೧೫ ವರ್ಷದ ಹುಡುಗಿಯೊಬ್ಬಳು ಹೀಗೆ ಹೇಳುವರು, “ನಾನು ನನ್ನ ಕೈಯಲ್ಲಿ ಸ್ಮಾರ್ಟ್‌ಕೇನ್ ಅನ್ನು ಹೊಂದಿದ್ದಾಗ, ನನಗೆ ಆತ್ಮವಿಶ್ವಾಸವಿರುತ್ತದೆ, ನಾನು ಯಾರೊಬ್ಬರ ಸಹಾಯವೂ ಇಲ್ಲದೆ ಒಬ್ಬಳೆ ನಡೆಯಲು ಸಾಧ್ಯ ಎಂಬ ಭಾವನೆಯು ಮೂಡುತ್ತದೆ”. ದೆಹಲಿಯ ಮತ್ತೊಬ್ಬರು ಹೀಗೆ ಹೇಳುವರು, “ಇದು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ, ಈಗ ನಾವು ನಡೆದುಕೊಂಡು ಹೋಗುವಾಗ ಜನರಿಗೆ ಢಿಕ್ಕಿ ಹೊಡೆಯುವ ಮುಜುಗರದ ಸಂದರ್ಭಗಳನ್ನು ಎದುರಿಸಬೇಕಾದ ಸಂದರ್ಭಗಳಿಲ್ಲ”.

ಹೆಚ್ಚಿದ ಸುರಕ್ಷತೆ: ಅಹ್ಮದಾಬಾದಿನ ಮಹಿಳಾ ಬಳಕೆದಾರರೊಬ್ಬರು ಹೀಗೆ ಹೇಳುವರು, “ಈ ಸಾಧನದ ಉಪಯೋಗದೊಂದಿಗೆ, ನಮ್ಮ ದಾರಿಯಲ್ಲಿ ಎದುರಾಗುವ ಯಾವುದೇ ಅಡೆತಡೆಯನ್ನು ನಾವು ತಿಳಿದುಕೊಳ್ಳುತ್ತೇವೆ ಮತ್ತು ಆದುದರಿಂದ ನಾವು ದಿಕ್ಕನ್ನು ಬದಲಾಯಿಸುತ್ತೇವೆ ಮತ್ತು ಯಾವುದೇ ಹಸ್ತಕ್ಷೇಪವಿಲ್ಲದೆ ನಡೆಯುತ್ತೇವೆ”.

ತುಂಬಾ ಸುಲಭವಾಗಿ ಪತ್ತೆಹಚ್ಚಲು ಸಾಧ್ಯವಿರದಿದ್ದ ಅಡೆತಡೆಗಳ ಪತ್ತೆಹಚ್ಚುವಿಕೆ: ಈ ಸಾಧನವು ಒಂದು ಟ್ರಕ್, ಬಸ್ಸುಗಳಂತಹ ವಾಹನಗಳ ಕೆಳಬದಿಗಳನ್ನು; ಒಂದು ಗೇಟ್; ಕಾರಿಡಾರ್‌ಗಳ ಮೇಲಿನ ಹೊರಚಾಚಿದ ಏರ್ ಕಂಡೀಶನರ್ ಅಥವಾ ತೆರೆದ ವಿಂಡೊ ಪೇನ್‌ಗಳು; ನೆಲಹಾಸುಗಳ ಮೇಲಿನ ಹೋರ್ಡಿಂಗ್ ಅಥವಾ ಬ್ಯಾನರ್; ಮತ್ತು ಹಲವು ಚಿಕ್ಕಪುಟ್ಟ ಹಾಗೂ ಕೆಲವೊಮ್ಮೆ ಗಂಭೀರ ಹಾನಿಗಳಿಗೆ ಕಾರಣವಾಗುವ ಇನ್ನೂ ಹೆಚ್ಚಿನವುಗಳನ್ನು ಪತ್ತೆಹಚ್ಚುವಲ್ಲಿ ಸಹಾಯಕವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವರು.

ಹೆಚ್ಚಿದ ಭಾಗವಹಿಸುವಿಕೆ ಮತ್ತು ಅಂತರ್ವೇಶನ: ಬೇರೆಯವರ ಮೇಲೆ ಅವಲಂಬಿತವಾಗುವುದು ಕಡಿಮೆಯಾಗಿದೆ ಎಂದೂ ಸಹ ಜನರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿರುವರು. ಸಾಧನವು ಅವರ ಆತ್ಮಗೌರವವನ್ನು ಹೆಚ್ಚಿಸಿದೆ. ಏಕೆಂದರೆ, ಅವರೀಗ ಸಮುದಾಯದೊಂದಿಗೆ ಮತ್ತು ಇತರ ಔಪಚಾರಿಕ ಸಮಾರಂಭಗಳಲ್ಲಿ ಮುಕ್ತವಾಗಿ ಭಾಗವಹಿಸಬಹುದು.
************