ಗ್ರಾಮೀಣ ಪ್ರದೇಶದಲ್ಲಿನ ದಿನಗೂಲಿ ಕೃಷಿ ಕಾರ್ಮಿಕರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಒಂದು ಕಿರು ಅಧ್ಯಯನ


-ಮಲ್ಲಿಕಾರ್ಜುನ, ಸಮಾಜಕಾರ್ಯ ಪ್ರಶಿಕ್ಷಣಾರ್ಥಿ, ಬೆಂಗಳೂರು ವಿಶ್ವವಿದ್ಯಾಲಯ.

ಅಧ್ಯಾಯ - ೧ ಪ್ರಸ್ತಾವನೆ
ಭಾರತದ ಅರ್ಥ ವ್ಯವಸ್ಥೆಯಲ್ಲಿ ಕೃಷಿ ಕಾರ್ಮಿಕರು ಅತ್ಯಧಿಕ ಪ್ರಮಾಣದಲ್ಲಿ ಕಂಡು ಬಂದು ಅವರು ಕಡೆಗಣಿಸಲ್ಪಟ್ಟಿರುವ ಹಾಗೂ ಅಸಂಘಟಿತ ವಲಯದಲ್ಲಿರುವ ಕಾರ್ಮಿಕರಾಗಿದ್ದಾರೆ. ಅವರ ವರಮಾನವು ಬಹಳ ಕಡಿಮೆ ಇದ್ದು ಅದು ಅನಿಶ್ಚಿತವೂ, ಅನಿಯಮಿತವೂ ಆಗಿರುತ್ತದೆ. ಅಲ್ಲದೆ ಅವರು ಅಸಂಘಟಿತರು, ಅವಿದ್ಯಾವಂತರು, ತರಬೇತಿ ಹೊಂದಿಲ್ಲದವರು, ದುರ್ಬಲರು ಹಾಗೂ ನಿರ್ಗತಿಕ ವರ್ಗದವರಾಗಿರುತ್ತಾರೆ. ಇವರಿಗೆ ಸಿಗಬೇಕಾಗಿರುವಂತಹ ಹಕ್ಕುಗಳಿಗೆ ಹೋರಾಡುವ ಸಾಮರ್ಥ್ಯವನ್ನು ಹೊಂದಿರುವುದಿಲ್ಲ. ಈ ಎಲ್ಲಾ ಕಾರಣದಿಂದಾಗಿ ಕೃಷಿ ಕಾರ್ಮಿಕರು ಆರ್ಥಿಕವಾಗಿ ಸಾಮಾಜಿಕವಾಗಿ ಮುಂದುವರೆಯಲು ಸಾಧ್ಯವಾಗದೆ ಹಲವಾರು ರೀತಿಯ ಸಮಸ್ಯೆಯನ್ನು ಎದುರಿಸುತ್ತಿರುವುದು ಕಂಡು ಬರುತ್ತದೆ.
ಭಾರತ ಒಂದು ಕೃಷಿ ಪ್ರಧಾನ ರಾಷ್ಟ್ರವಾಗಿದ್ದು ಶೇ.೬೫% ರಷ್ಟು ಜನರು ಕೃಷಿಯನ್ನೇ ಅವಲಂಭಿಸಿದ್ದಾರೆ. ನಮ್ಮದು ಕೃಷಿಕರ ದೇಶ. ರೈತರೇ ಈ ದೇಶದ ಬೆನ್ನೆಲುಬು ಮಣ್ಣಿನ ಮಕ್ಕಳ ಏಳಿಗೆಯೇ ನಮ್ಮ ಗುರಿ ಇತ್ಯಾದಿ ಹೇಳಿಕೆಗಳು ಕೃಷಿ ಕಾರ್ಮಿಕರ ಜೀವನದಲ್ಲಿ ಕೇವಲ ಹೇಳಿಕೆಗಳಷ್ಟೆ ಅವು ಅವರ ಜೀವನದಲ್ಲಿ ಕಾರ್ಯ ರೂಪಕ್ಕೆ ತಂದಿರುವುದು ಬಹಳ ವಿರಳವಾಗಿದೆ. ಕೃಷಿ ಕಾರ್ಮಿಕರು ಅವರ ಭೂ ಮಾಲಿಕರ ನಿರಂತರ ಶೊಷಣೆಗೆ ಒಳಪಡಿಸುತ್ತಿದ್ದಾರೆ. ಈ ಕೃಷಿ ಕಾರ್ಮಿಕರಲ್ಲಿ ಹೆಚ್ಚು ಗಂಡಸರ ಪ್ರಮಾಣ ಹೆಚ್ಚಾಗಿದ್ದು ಮಹಿಳೆಯರು ಹೆಚ್ಚು ತೋಟದ ಬೆಳೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವುದು ಕಂಡು ಬರುತ್ತದೆ. ಇಲ್ಲಿ ಗಂಡಸರಿಗೆ ಹೆಚ್ಚು ಮತ್ತು ಮಹಿಳೆಯರಿಗೆ ಕಡಿಮೆ ಕೂಲಿಯನ್ನು ನೀಡುತ್ತಿದ್ದು ಇದರಲ್ಲಿಯೂ ತಾರತಮ್ಯ ಇರುವುದನ್ನು ಕಾಣಬಹುದಾಗಿದೆ.
ಗ್ರಾಮೀಣ ಆರ್ಥಿಕ ವ್ಯವಸ್ಥೆಯಲ್ಲಿ ಕೃಷಿ ಕಾರ್ಮಿಕರು ಅತ್ಯಂತ ನಿರ್ಲಕ್ಷ್ಯಯುತ ಹಾಗೂ ಶೋಷಣೆಯುತ ಪಟ್ಟಿಗೆ ಸೇರಿದವರಲ್ಲದೆ ನಿರ್ಗತಿಕ ವರ್ಗಕ್ಕೂ ಸೇರಿದವರಾಗಿದ್ದಾರೆ. ಅವರ ಉದ್ಯೋಗವು ಅಸ್ಥಿರವಾಗಿದ್ದು, ಋತುಕಾಲಿಕವಾಗಿದ್ದು, ಬಹುಪಾಲು ಕೃಷಿ ಕಾರ್ಮಿಕರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗಗಳಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ಅಲ್ಪಸಂಖ್ಯಾತರ ಪಟ್ಟಿಗೆ ಸೇರಿದವರಾಗಿರುತ್ತಾರೆ. ಪ್ರಸ್ತುತ ಭಾರತದಲ್ಲಿ ಏರುತ್ತಿರುವ ಜನಸಂಖ್ಯೆಯ ಪ್ರಭಾವದಿಂದ ಭೂಮಿಯ ಮೇಲಿನ ಅವಲಂಭಿತರ ಸಂಖ್ಯೆ ಅಧಿಕವಾಗುತ್ತಿದೆ. ಭೂಮಿಯ ಸರಾಸರಿ ಇಳುವರಿ ಕಡಿಮೆಯಾಗುತ್ತಿರುವುದಕ್ಕೆ ಭೂ ವಿಭಜನೆ ಮತ್ತು ವಿಕೇಂದ್ರೀಕರಣವು ಕಾರಣವಾಗಿದ್ದು, ಭಾರತದಲ್ಲಿ ಸ್ವತಂತ್ರ ಪೂರ್ವದಿಂದ ಹಿಡಿದು ಪ್ರಸ್ತುತ ಸ್ವತಂತ್ರ ಪಡೆದು ೬೦ ವರ್ಷಗಳಾದರೂ ಯತಾಸ್ಥಿತಿಯಲ್ಲಿರುವುದು ಕಂಡು ಬರುತ್ತದೆ.

ವ್ಯಾಖ್ಯೆಗಳು :
೧೯೫೦-೫೧ ರಲ್ಲಿ ಪ್ರಥಮ ಕೃಷಿ ಕಾರ್ಮಿಕರ ವಿಚಾರಣಾ ಸಮಿತಿಯ ಕೃಷಿ ಕಾರ್ಮಿಕರನ್ನು ಈ ಕೆಳಕಂಡಂತೆ ವ್ಯಾಖ್ಯನಿಸಿದೆ. ಹಿಂದಿನ ವರ್ಷದಲ್ಲಿ ಒಟ್ಟು ಕೆಲಸ ಮಾಡಿದ ದಿನಗಳ ಪ್ರತಿಶತ ೫೦ಕ್ಕಿಂತ ಹೆಚ್ಚು ದಿನಗಳವರೆಗೆ ಕೃಷಿ ಚಟುವಟಿಕೆಯಲ್ಲಿ ಕೂಲಿಯ ಆಳುಗಳಾಗಿ ಕೆಲಸ ಮಾಡಿದವರು ಕೃಷಿ ಕಾರ್ಮಿಕರಾಗಿದ್ದಾರೆ.
೧೯೫೬-೫೭ರ ಎರಡನೆ ಕೃಷಿ ಕಾರ್ಮಿಕರ ವಿಚಾರಣಾ ಸಮಿತಿಯು ಹಿಂದಿನ ವರ್ಷದಲ್ಲಿ ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳಿಂದ ಹೆಚ್ಚಿನ ಪ್ರಮಾಣದ ಆದಾಯ ಪಡೆದವರು ಕೃಷಿ ಕಾರ್ಮಿಕರಾಗಿದ್ದಾರೆ ಎಂದು ವ್ಯಾಖ್ಯಾನಿಸಿದೆ.
ಮೇಲ್ಕಂಡ ವ್ಯಾಖ್ಯೆಗಳ ಪ್ರಕಾರ ಕೃಷಿ ಕಾರ್ಮಿಕರು ತಮ್ಮ ಆದಾಯದ ಬಹುಭಾಗವನ್ನು ಬೇರೆಯವರ ಜಮೀನಿನಲ್ಲಿ ದುಡಿದು ಪಡೆಯುವ ಕಾರ್ಮಿಕರಾಗಿರುತ್ತಾರೆ. ಅವರು ಬೇರೆಯವರ ಜಮೀನಲ್ಲಿ ವರ್ಷದ ಅರ್ಧಕ್ಕಿಂತಲೂ ಹೆಚ್ಚಿನ ಅವಧಿಯವರೆಗೆ ದುಡಿಯುವವರಾಗಿರಬೇಕು ಅವರು ಕೃಷಿ ಕಾರ್ಮಿಕರು ಎಂದು ಪರಿಗಣಿಸಲಾಗಿದೆ.
ಕರ್ನಾಟಕದ ೬ ಕೋಟಿ ಮಂದಿಗಳಲ್ಲಿ ರೈತ ಸಮುದಾಯ ಶೇ.೬೮ ರಷ್ಟು ಜನರು ಕೃಷಿಕರಿದ್ದಾರೆ. ಕರ್ನಾಟಕದ ಯಾವೊಬ್ಬ ರೈತನು ಉನ್ನತ ಸ್ಥಾನಮಾನದಲ್ಲಿ ಇಲ್ಲವಾದರೆ ಕೃಷಿ ಪ್ರಧಾನ ರಾಷ್ಟ್ರವೆಂದು ಕರೆಸಿಕೊಳ್ಳುವ ಪುರುಷಾರ್ಥವೆಂದರೂ ಏಕೆ? ತಮ್ಮನ್ನು ತಾವೇ ರೈತರ ಪರ ಎಂದು ಕರೆದುಕೊಳ್ಳುವ ಸರ್ಕಾರಗಳು, ಜನ ಪ್ರತಿನಿಧಿಗಳು ಕೃಷಿ ಕಾರ್ಮಿಕರನ್ನು ಯಾವ ಮಟ್ಟದಲ್ಲಿ ಕಾಣುತ್ತಿದೆ ಎಂಬುದಕ್ಕೆ ರಕ್ಷಣೆಯಿಲ್ಲದ ರೈತನು ರೈತನನ್ನು ಅವಲಂಭಿಸಿದ ಆ ಕುಟುಂಬವೇ ಇದಕ್ಕೆ ನಿದರ್ಶನ. ಕೇಂದ್ರ ಸರ್ಕಾರ ಕೃಷಿಕ ಸಮುದಾಯವನ್ನು ಸಾಲದ ಹೊರೆಯಿಂದ ಮುಕ್ತಗೊಳಿಸಿ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಸರ್ಕಾರ ವಿಶೇಷ ಕ್ರಮ ಕೈಗೊಳ್ಳಲಿದೆ ಎಂಬ ಆಶ್ವಾಸನೆಗಳ ದಾರಿಯಲ್ಲಿ ನಡೆಯುತ್ತಿದೆ ಎನ್ನುವುದಾದರೆ, ೨೦೦೩ರಿಂದ ೨೦೦೬ರವರೆಗೆ ಕರ್ನಾಟಕದಲ್ಲಿ ಆತ್ಮಹತ್ಯೆ ಮಾಡಿಕೊಂಡವರ ಪೈಕಿ ೪೦೬ ಜನ ಕೃಷಿಯ ಸಾಲ ಭಾದೆಯಿಂದಲೇ ಎಂಬುದು ರುಜುವಾತುವಾಗಿದೆ. ಈ ಕೃಷಿಕ ಕುಟುಂಬಗಳ ರಕ್ಷಣೆ ಯಾರದು? ಎಂಬ ಪ್ರಶ್ನೆ ಕೇಂದ್ರದ ಕೃಷಿ ಅಭಿವೃದ್ಧಿ ಮಂಡಳಿಯ ಜ್ಞಾಪಕಕ್ಕೆ ಬರುತ್ತಿಲ್ಲವೇ? ಕೇಂದ್ರ ಸರ್ಕಾರ ಕಳೆದ ೫ ವರ್ಷಗಳಲ್ಲಿ ಯೋಜನಾ ಆಯೋಗ ನಿಗದಿ ಪಡಿಸಿದ ಗುರಿ ಎಲ್ಲ ರಾಜ್ಯ ಸರ್ಕಾರಗಳು ಯಶಸ್ಸು ಕಂಡಿಲ್ಲ ಎಂಬ ಕೇಂದ್ರ ಅಂಕಿ-ಅಂಶಗಳ ಸಮೀಕ್ಷೆ ದೃಡಪಡಿಸಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಭಾರತ ಕೃಷಿ ಉತ್ಪಾದನಾ ಕ್ಷೇತ್ರ ಅಭಿವೃದ್ಧಿ ಹೊಂದಿಲ್ಲ ಎನ್ನುವುದಾದರೆ ಕೃಷಿ ಕಾರ್ಮಿಕನ ಅಭಿವೃದ್ಧಿ ಸಾಧ್ಯವೇ ಎಂಬ ಮಾತು ಇವತ್ತಿಗೂ ಭಾರತ ನಿರ್ಮಾಣ ಯೋಜನೆ ಐದು ವರ್ಷಗಳಲ್ಲಿ ಕೃಷಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವ ಸಂಬಂಧ ಯಾವ ಯೋಜನೆಗಳನ್ನು ಜಾರಿಗೊಳಿಸಬಹುದು ಎಂಬುದರ ಬಗ್ಗೆ ಕರಡು ಪ್ರತಿ ಸಿದ್ಧಪಡಿಸಲಾಗುತ್ತದೆ. ಆದರೆ ಕೃಷಿಯನ್ನು ಅವಲಂಭಿಸಿದ ಕೃಷಿ ಕಾರ್ಮಿಕರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಅಬಿವೃದ್ಧಿ ಮಾರ್ಗ ಸೂತ್ರಗಳನ್ನು ಏಕೆ ಗಮನಹರಿಸುತ್ತಿಲ್ಲ ಎಂಬುದು ಜಮೀನ್ದಾರ ಕೃಷಿ ರೈತರಿಗೆ ಹೊರತು ಕೃಷಿ ಕಾರ್ಮಿಕರಿಗಲ್ಲ ಎಂಬುದು ತಿಳಿದು ಬರುತ್ತದೆ.

ಕೃಷಿ ಕಾರ್ಮಿಕರ ವಿಧಗಳು :
ಗ್ರಾಮೀಣ ವಲಯದಲ್ಲಿ ಕೃಷಿ ಕಾರ್ಮಿಕರು ಅತ್ಯಂತ ಮುಖ್ಯವಾದ ಒಂದು ವರ್ಗದ ಜನರಿದ್ದಾರೆ. ಇವರೂ ಸಹ ಕೃಷಿಯಲ್ಲಿ ನಿರತರಾಗಿದ್ದ ಜನರಾಗಿರುವವರು. ಕೃಷಿ ಕಾರ್ಮಿಕರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ತೀರಾ ಹಿಂದುಳಿದ ವರ್ಗದವರಾಗಿರುತ್ತಾರೆ. ಇವರು ದಾರುಣ ಬಡತನದಲ್ಲಿ ಜೀವಿಸುತ್ತಿದ್ದು ಗ್ರಾಮೀಣ ಅರ್ಥ ವ್ಯವಸ್ಥೆಯಲ್ಲಿ ನಿರ್ಲಕ್ಷಕ್ಕೆ ಒಳಗಾಗಿರುವವರು. ಕೃಷಿ ಉತ್ಪಾದನೆಗೆ ಕೃಷಿ ಕಾರ್ಮಿಕರು ಅವಶ್ಯಕವಾದ ವರ್ಗದ ಜನರಾಗಿದ್ದಾರೆ.
ಕೃಷಿ ಕಾರ್ಮಿಕರನ್ನು ವಿಶಾಲವಾಗಿ ೪ ವಿಧಗಳಾಗಿ ವಿಂಗಡಿಸಬಹುದು. ಅವುಗಳೆಂದರೆ;
೧.ಭೂ ಮಾಲೀಕರ ಜಮೀನಿನಲ್ಲಿ ಕೆಲಸ ಮಾಡುವಂತಹ ಭೂ ರಹಿತ ಕಾರ್ಮಿಕರು.
೨.ವ್ಯಕ್ತಿ ಗತವಾಗಿ ಸ್ವತಂತ್ರವಾಗಿರುವಂತಹ ಆದರೆ ಸಂಪೂರ್ಣವಾಗಿ ಇತರರಿಗಾಗಿ ಕೆಲಸ ನಿರ್ವಹಿಸುವಂತಹ ಭೂ ರಹಿತ ಕಾರ್ಮಿಕರು.
೩.ಚಿಕ್ಕ ತುಂಡು ಜಮೀನನ್ನು ಹೊಂದಿದ್ದು ಬಹುತೇಕ ಸಮಯ ಬೇರೆಯವರಿಗಾಗಿ ಕೆಲಸ ಮಾಡುವಂತಹ ಅತೀ ಸಣ್ಣ ರೈತರು.
೪.ಆರ್ಥಿಕ ಹಿಡುವಳಿಗಳನ್ನು ಹೊಂದಿರುವ ಆದರೆ ಅವರ ಒಬ್ಬ ಅಥವಾ ಹೆಚ್ಚಿನ ಸಂಖ್ಯೆಯ ಮಕ್ಕಳು ಮತ್ತು ಅವರ ಅವಲಂಭಿಗಳು ಶ್ರೀಮಂತ ರೈತರ ಜಮೀನಿನಲ್ಲಿ ಕೆಲಸ ಮಾಡುವಂತಹ ಕೃಷಿಕನು.
ಮೇಲೆ ನಮುದಿಸಿರುವುಗಳಲ್ಲಿ ಮೊದಲನೇ ವರ್ಗ ಅಂದರೆ ಭೂ ಮಾಲೀಕರ ಜಮೀನಿನಲ್ಲಿ ಕೆಲಸ ಮಾಡುವಂತಹ ಭೂ ರಹಿತ ಕಾರ್ಮಿಕರು ಗುಲಾಮರ ಸ್ಥಿತಿಯಲ್ಲಿದ್ದಾರೆ. ಅವರನ್ನು ಜೀತದಾಳುಗಳು ಎಂತಲೂ ಕರೆಯಲಾಗುತ್ತದೆ. ಇವರಿಗೆ ಕೂಲಿಯನ್ನು ಸಾಮಾನ್ಯವಾಗಿ ನಗದು ಹಣದ ರೂಪದಲ್ಲಿ ಕೊಡದೆ ಧಾನ್ಯದ ರೂಪದಲ್ಲಿ ಕೊಡಲಾಗುತ್ತದೆ. ಮೇಲೆ ನಮೂದಿಸಿರುವದಲ್ಲಿ ಎರಡನೆಯ ಮತ್ತು ಮೂರನೆಯ ವರ್ಗಗಳು ಕೃಷಿ ಕಾರ್ಮಿಕರ ಅತ್ಯಂತ ಪ್ರಮುಖ ವಿಧಗಳಾಗಿವೆ.
ಇದಲ್ಲದೆ ಕೃಷಿ ಕಾರ್ಮಿಕರನ್ನು ಕೆಳಗಿನಂತೆ ವರ್ಗೀಕರಿಸಬಹುದು. ಕೃಷಿ ಕಾರ್ಮಿಕರನ್ನು ಖಾಯಂ ಕಾರ್ಮಿಕರು, ಇವರು ಒಂದು ನಿರ್ದಿಷ್ಟ ಭೂಮಿಯಲ್ಲಿ ಖಾಯಂ ಆಗಿ ಕೆಲಸ ನಿರ್ವಸುವರು. ಹಂಗಾಮಿ ಕಾರ್ಮಿಕರು ಇವರು, ಕೆಲವೇ ತಿಂಗಳು ಅಥವಾ ದಿನಗಳಿಗೆ ಮಾತ್ರ ನೇಮಕವಾಗಿರುತ್ತಾರೆ.
ಯುವ ಪುರುಷ ಕಾರ್ಮಿಕರು, ಯುವ ಮಹಿಳಾ ಕಾರ್ಮಿಕರು ಈ ಎರಡು ವರ್ಗದಲ್ಲಿ ತುಂಬಾ ಚಿಕ್ಕ ವಯಸ್ಸಿನವರು ಕೆಲಸ ನಿರ್ವಹಿಸುತ್ತಾರೆ. ಪುರುಷ ಕಾರ್ಮಿಕರು ಮತ್ತು ಸ್ತ್ರೀ ಕೃಷಿ ಕಾರ್ಮಿಕರು ಇವರು ೨೫ ವರ್ಷ ಮೇಲ್ಪಟ್ಟ ವರ್ಗದವರಾಗಿದ್ದರೆ ದೀರ್ಘಾವಧಿ ಕೃಷಿ ಕಾರ್ಮಿಕರು. ಇವರು ಜೀವನ ಪರ್ಯಂತ ಕೆಲಸ ಮಾಡಲು ನೇಮಕವಾದ ವರ್ಗ ಜೀತದಾಳುಗಳು. ಇವರು ಭೂ ಮಾಲೀಕರ ಹತ್ತಿರ ಜೀತಕ್ಕೆ ಕೆಲಸ ಮಾಡುವವರು ಮತ್ತು ಬಂದಿತ ಕಾರ್ಮಿಕರು ಇವರು ನಾನಾ ಅಪರಾಧ ಮಾಡಿ ಸೆರೆಮನೆಯಲ್ಲಿರುತ್ತಾರೆ. ಇವರಿಗೆ ಅಲ್ಲಿಯೇ ಕೃಷಿಯಲ್ಲಿ ತೊಡಗಲು ಅವಕಾಶವಿದೆ.

ಕೃಷಿ ಕಾರ್ಮಿಕರ ಲಕ್ಷಣಗಳು :
ಭಾರತದಲ್ಲಿ ಕೃಷಿ ಕಾರ್ಮಿಕರು ಕೆಲವು ವಿಶಿಷ್ಟ ಲಕ್ಷಣಗಳನ್ನು ಹೊಂದಿದ್ದಾರೆ. ಅವರು ಕೈಗಾರಿಕಾ ಕಾರ್ಮಿಕರಂತೆ ಸಂಘಟಿತರಾಗಿಲ್ಲ ಆದರೆ ಅವರು ಸುಸಂಘಟಿತರಾಗಲು ಕಾರಣಗಳೂ ಇವೆ. ಅವರು ಕೈಗಾರಿಕಾ ಕಾರ್ಮಿಕರಂತೆ ಒಂದೇ ಸ್ಥಳದಲ್ಲಿ ಕೂಡಿ ಕೆಲಸ ಮಾಡುವುದಿಲ್ಲ. ಅವರು ಬೇರೆ ಬೇರೆ ಸ್ಥಳಗಳಲ್ಲಿರುವ ಬೇರೆ ಬೇರೆಯವರ ಜಮೀನಿನಲ್ಲಿ ಕೆಲಸ ಮಾಡುತ್ತಾರೆ. ಅವರಿಗೆ ಕೈಗಾರಿಕಾ ಕಾರ್ಮಿಕರಂತೆ ಇಡೀ ವರ್ಷ ಕೆಲಸ ಸಿಗುವುದಿಲ್ಲ. ಅವರು ಕೆಲಸ ಮಾಡುವ ಸ್ಥಿತಿಗತಿಗಳು ಬೇರೆ ಸ್ಥಳಗಳಲ್ಲಿ ಬೇರೆ ಬೇರೆಯಾಗಿರುತ್ತದೆ. ಕೃಷಿ ಕಾರ್ಮಿಕರು ಹೆಚ್ಚಾಗಿ ಅವಿದ್ಯಾವಂತರಾಗಿರುತ್ತಾರೆ. ಅವರಿಗೆ ಲೋಕದ ಬಗ್ಗೆ ಕೃಷಿಯ ಬಗ್ಗೆ ಸರಿಯಾದ ಜ್ಞಾನ ಇರುವುದಿಲ್ಲ. ಅವರು ಸಾಮಾನ್ಯವಾಗಿ ತಾವು ಕೈಗೊಳ್ಳುವ ಕೆಲಸದ ಬಗ್ಗೆ ಯಾವುದೇ ತರಬೇತಿಯನ್ನು ಪಡೆದಿರುವುದಿಲ್ಲ. ಅವರು ತಮಗೆ ಇಷ್ಟ ಬಂದ ರೀತಿಯಲ್ಲಿ ಕೃಷಿ ಮಾಡುತ್ತಾರೆ.
ಅವರು ಸಂಚಾರಿ ಸ್ವಭಾವದವರಾಗಿದ್ದಾರೆ. ಸುಗ್ಗಿಯ ಸಮಯದಲ್ಲಿ ಹೆಚ್ಚಿನ ಕೆಲಸ ಸಿಗುತ್ತದೆ. ನಂತರ ಅವರು ಉದ್ಯೋಗ ಅರಸಿ ಬೇರೆ ಕಡೆಗೆ ವಲಸೆ ಹೋಗುತ್ತಾರೆ. ಅವರಿಗೆ ಕೊಡುವ ಕೂಲಿ ದರ ತುಂಬಾ ಕಡಿಮೆ ಇದೆ. ಇದು ಅವರ ಜೀವನ ನಿರ್ವಹಣೆಗೆ ಸಾಲದ ಅವರು ಸಾಲದಲ್ಲಿಯೇ ಮುಳುಗಿರುತ್ತಾರೆ.
ಕಾರ್ಮಿಕರ ಹೆಚ್ಚು ಸಮಯ ದುಡಿಸಿಕೊಂಡು ಅವರಿಗೆ ಕಡಿಮೆ ಕೂಲಿಯನ್ನು ವಿತರಿಸಲಾಗುತ್ತದೆ. ಇದಕ್ಕೆ ಸಂಬಂಧಪಟ್ಟಂತೆ ಯಾವುದೇ ಕಾನೂನುಗಳು ರಚಿಸಲ್ಪಟ್ಟಿಲ್ಲ. ಒಂದು ವೇಳೆ ಇದ್ದರೂ ಅವುಗಳನ್ನು ಪಾಲಿಸುವುದಕ್ಕಿಂತ ಕಡೆಗಣಿಸುವುದು ಹೆಚ್ಚು ಹೆಚ್ಚು ಕೃಷಿ ಕಾರ್ಮಿಕರು ಸಮಾಜದ ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದಾರೆ. ಅವರು ನಿರಂತರ ಶೋಷಣೆಗೆ ಒಳಪಟ್ಟ ಜನಾಂಗದವರಾಗಿದ್ದಾರೆ. ಕೃಷಿ ಕಾರ್ಮಿಕರಿಗೆ ಸಂಬಂಧಿಸಿದಂತೆ ಸರ್ಕಾರ ಜಾರಿಗೆ ತಂದಿರುವ ಕಾಯ್ದೆಗಳ ಬಗ್ಗೆ ಅವರಿಗೆ ಅರಿವೇ ಇರುವುದಿಲ್ಲ. ಅವರಿಗೆ ಅವರ ದುಡಿಮೆಯೇ ಹೊರತು ಬೇರೆ ಯಾವುದೇ ವಿಷಯ ತಿಳಿದಿರುವುದಿಲ್ಲ ಮತ್ತು ಮಾಲೀಕರೊಂದಿಗೆ ಚೌಕಾಶಿ ಮಾಡುವ ಸಾಮರ್ಥ್ಯವಿರುವುದಿಲ್ಲ. ಅವರಿಗೆ ಕೂಲಿಯು ಸಿಗುವುದು ಹಣದ ರೂಪದಲ್ಲಿ, ಕೆಲವೊಂದು ಸರಿ ಅವರಿಗೆ ದವಸ ಧಾನ್ಯಗಳ ರೂಪದಲ್ಲಿ ನೀಡಲಾಗುತ್ತದೆ. ಇದರಿಂದ ಅವರ ಜೀವನ ನಿರ್ವಹಣೆಗೆ ಸ್ವಲ್ಪ ಸಹಾಯವಾಗುತ್ತದೆ. ಜಮೀನ್ದಾರರು ಕೃಷಿ ಕಾರ್ಮಿಕರನ್ನು ನಿರಂತರ ಶೋಷಣೆಗೆ ಗುರಿಪಡಿಸುತ್ತಿದ್ದಾರೆ. ಅವರಿಂದ ಹೆಚ್ಚು ಸಮಯ ದುಡಿಸಿಕೊಂಡು ಕಡಿಮೆ ಕೂಲಿಯನ್ನು ನೀಡುತ್ತಿದ್ದಾರೆ. ಇಲ್ಲಿ ಅವರಿಗೆ ಶ್ರಮಕ್ಕೆ ಸರಿಯಾದ ಪ್ರತಿಫಲ ದೊರೆಯುತ್ತಿಲ್ಲ. ಕೃಷಿಯನ್ನು ಅವಲಂಭಿಸಿರುವ ಸಂಖ್ಯೆ ಅವಲಂಬನೆಗಿಂತ ಹೆಚ್ಚು ಜನರು ಕೃಷಿಯನ್ನು ಅವಲಂಬಿಸಿದರೆ ಕೃಷಿ ಕಾರ್ಮಿಕರು ಅತ್ಯಂತ ನಿಕೃಷ್ಟವಾದ ಮತ್ತು ಅತ್ಯಂತ ಹೀನಾಯ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ.

ಭಾರತದಲ್ಲಿ ಕೃಷಿ ಕಾರ್ಮಿಕರ ಬೆಳವಣಿಗೆ :
ಕೃಷಿ ಕಾರ್ಮಿಕರ ನಿಖರ ಸಂಖ್ಯೆ ಅವರ ಆದಾಯ ಜೀವನ ಮಟ್ಟ ವಿಷಯಗಳ ಬಗೆಗೆ ಅಂಕಿ ಅಂಶಗಳ ಕೊರತೆ ಇದೆ. ಭಾರತದಲ್ಲಿ ಬ್ರಿಟೀಷರ ಕಾಲದಲಿ ಕೃಷಿ ಕಾರ್ಮಿಕರು ಎಂಬ ಪ್ರತ್ಯೇಕವಾದ ವರ್ಗವು ಇದ್ದಂತೆ ಕಾಣುವುದಿಲ್ಲ. ಕೆಲವು ಸಮಿತಿಗಳು ಮತ್ತು ಆಯೋಗಗಳ ವರದಿಗಳ ರೂಪದಲ್ಲಿ ಮಾಹಿತಿ ಲಭ್ಯವಾಗುತ್ತದೆ. ೧೯೬೦ರಲ್ಲಿ ಪ್ರಕಟಿಸಲಾದ ಎರಡನೇ ಕೃಷಿ ಕಾರ್ಮಿಕರ ಪರಿಶೋಧನಾ ಸಮಿತಿ ಪ್ರಕಾರ ಒಟ್ಟು ಗ್ರಾಮೀಣ ಕುಟುಂಬಗಳಲಿ ಶೇ.೨೫ ರಷ್ಟು ಕೃಷಿ ಕಾರ್ಮಿಕರ ಕುಟುಂಬಗಳಿವೆ. ಈ ವರದಿಯ ಮೇರೆಗೆ ಗ್ರಾಮೀಣ ಕೆಲಸಗಾರರಲ್ಲಿ ಶೇ.೮೫% ರಷ್ಟು ಅನಿಯಮಿತ ಕಾರ್ಮಿಕರಾಗಿದ್ದು ತಮ್ಮನ್ನು ನೇಮಿಸಿಕೊಳ್ಳಲು ಇಚ್ಛಿಸುವ ಯಾವುದೇ ಕೃಷಿಕರಿಗಾಗಿ ಕೆಲಸ ಮಾಡುವ ವರ್ಗದವರಾಗಿರುತ್ತಾರೆ. ಶೇ.೧೫% ರಷ್ಟು ಜನರು ಮಾತ್ರ ನಿರ್ದಿಷ್ಟ ಭೂ ಮಾಲಿಕರ ಜಮೀನಿನಲ್ಲಿ ಕೆಲಸ ಮಾಡುತ್ತಾರೆ. ಶೇ.೫೦% ರಷ್ಟು ಜನ ಭೂ ರಹಿತ ಕಾರ್ಮಿಕರು. ಉಳಿದವರು ತುಂಡು ಭೂಮಿಯನ್ನು ಹೊಂದಿರುತ್ತಾರೆ. ಅವರೇ ಪರಿಶಿಷ್ಟ ಜಾತಿ, ಬುಡಕಟ್ಟು ಹಿಂದುಳಿದ ವರ್ಗಗಳಿಗೆ ಸೇರಿದವರಾಗಿರುತ್ತಾರೆ. ವಿಶೇಷವೆಂದರೆ ಶೇ.೭೫% ರಿಂದ ೮೦ ರಷ್ಟು ಕೃಷಿ ಕಾರ್ಮಿಕರು ಪರಿಶಿಷ್ಟ ಜಾತಿಗೆ ಸೇರಿದವರಾಗಿರುತ್ತಾರೆ. ೧೯೮೧ರ ಜನಗಣತಿಯ ಪ್ರಕಾರ ಕೃಷಿ ಕಾರ್ಮಿಕರ ಸಂಖ್ಯೆ ೬೪.೪ ದಶಲಕ್ಷ ಆಗಿತ್ತು. ಆಗ ದೇಶದ ಒಟ್ಟು ಕಾರ್ಮಿಕರ ಸಂಖ್ಯೆ ೨೨೪.೬ ದಶಲಕ್ಷ ಇತ್ತು. ಅಂದರೆ ೧೯೮೧ ರಲ್ಲಿ ಒಟ್ಟು ಕೃಷಿ ಕಾರ್ಮಿಕರ ಪ್ರಮಾಣ ಶೇ.೨೬.೩ ಆಗಿತ್ತು. ೧೯೬೧ ರಲ್ಲಿ ಇವರ ಪ್ರಮಾಣ ೩೧ ದಶಲಕ್ಷ ಆಗಿತ್ತು. ಆದರೆ ೧೯೬೧-೮೧ರ ನಡುವೆ ಈ ಕಾರ್ಮಿಕರ ಸಂಖ್ಯೆ ತೀವ್ರವಾಗಿ ಹೆಚ್ಚಿತ್ತು ಎನ್ನುವುದು ತಿಳಿಯುತ್ತದೆ.
ಗ್ರಾಮೀಣ ಕಾರ್ಮಿಕರ ಮೇಲಿನ ರಾಷ್ಟ್ರೀಯ ಆಯೋಗದ ಅಧ್ಯಯನದಿಂದ ತಿಳಿದು ಬರುವಂತೆ ೧೯೭೦ರ ದಶಕದಲ್ಲಿ ಗ್ರಾಮೀಣ ಜನಸಂಖ್ಯೆಯು ಶೇ.೨ರ ವಾರ್ಷಿಕ ದರದಲ್ಲಿ ಬೆಳೆದರೆ ಕೃಷಿ ಕಾರ್ಮಿಕರ ಸಂಖ್ಯೆಯು ಶೇ.೪.೧ ವಾರ್ಷಿಕ ದರದಲ್ಲಿ ಹೆಚ್ಚಿತ್ತು. ೧೯೮೦ರ ದಶಕದಲ್ಲಿ ಈ ಸಂಖ್ಯೆ ಶೇ.೫.೧ರ ವಾರ್ಷಿಕ ದರದಲ್ಲಿ ಬೆಳೆದರೆ ಕೃಷಿ ಕಾರ್ಮಿಕರ ಸಂಖ್ಯೆಯು ಶೇ.೩ ವಾರ್ಷಿಕ ದರದಲ್ಲಿ ಹೆಚ್ಚಿತ್ತು. ಗ್ರಾಮೀಣ ಜನ ಸಂಖ್ಯೆಯ ಬೆಳವಣಿಗೆಯು ದರಕ್ಕಿಂತ ಹೆಚ್ಚಿನ ದರದಲ್ಲಿ ಕೃಷಿ ಕಾರ್ಮಿಕರ ಸಂಖ್ಯೆಯು ಹೆಚ್ಚಾದುದು ಇದರಿಂದ ಗಮನಕ್ಕೆ ಬರುತ್ತದೆ. ೧೯೯೧ರ ಜನಗಣತಿಯ ಪ್ರಕಾರ ಕೃಷಿ ಕಾರ್ಮಿಕರು ೭೪೭ ದಶಲಕ್ಷಗಳಷ್ಟಿದ್ದರು. ಅಂದರೆ ಕೃಷಿ ಕಾರ್ಮಿಕರ ಒಟ್ಟು ಪ್ರಮಾಣ ೨೪.೫ ರಷ್ಟು ಇತ್ತು. ಇದು ೨೦೦೧ರ ಜನಗಣತಿಯ ಆಧಾರದ ಮೇಲೆ ಕೃಷಿ ಕಾರ್ಮಿಕರು ೮೯೦ ದಶಲಕ್ಷ ಅಂದೇ ಪ್ರತಿಶತ ಪ್ರಮಾಣ ಶೇ.೨೩.೫ ರಷ್ಟು ಇತ್ತು.
ಈ ಮೇಲಿನ ಅಂಕಿ-ಅಂಶಗಳಿಂದ ಕಂಡು ಬರುವುದೇನೆಂದರೆ ಕೃಷಿ ಕಾರ್ಮಿಕರ ಸಂಖ್ಯೆಯು ಸ್ವಾತಂತ್ರ್ಯದ ನಂತರ ವರ್ಷಗಳಲ್ಲಿ ತ್ವರಿತಗತಿಯಲ್ಲಿ ಏರಿದೆ. ೧೯೬೧ ರಿಂದ ೨೦೦೧ರ ನಡುವಿನ ೪೦ ವರ್ಷಗಳ ಅವಧಿಯಲ್ಲಿ ಅದು ಮೂರು ಪಟ್ಟಿಗಿಂತಲೂ ಹೆಚ್ಚು ಏರಿದೆ.
ಕೃಷಿ ಕಾರ್ಮಿಕರ ಸಂಖ್ಯೆಯು ತೀವ್ರಗತಿಯಲ್ಲಿ ಏರಲು ಕಾರಣಗಳು :
ಕೃಷಿ ಕಾರ್ಮಿಕರು ಇಂದು ಭಾರತದಲ್ಲಿ ತೀವ್ರಗತಿಯಲ್ಲಿ ಬೆಳೆಯುತ್ತಿದ್ದಾರೆ. ಅದಕ್ಕೆ ಪ್ರಮುಖ ಕಾರಣ ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿರುವುದು. ಇದು ಮಾತ್ರವಲ್ಲದೆ ಇನ್ನೂ ಅನೇಕ ಕಾರಣಗಳನ್ನು ನೀಡಬಹುದಾಗಿದೆ. ಅವುಗಳೆಂದರೆ ಭಾರತದಲ್ಲಿ ಜನಸಂಖ್ಯೆ ತೀವ್ರಗತಿಯಲ್ಲಿ ಬೆಳೆಯುತ್ತಿದ್ದು ಸುಮಾರು ೧೧೦ ಕೋಟಿ ಮೀರಿದೆ. ಅದರಿಂದ ಹೆಚ್ಚಿನ ಜನರು ಕೃಷಿಯನ್ನೇ ಅವಲಂಭಿಸಿದ್ದಾರೆ. ಕೃಷಿ ಕಾರ್ಮಿಕರು ಹೆಚ್ಚಾಗಿ ಗ್ರಾಮೀಣ ಪ್ರದೇಶದಲ್ಲಿ ನೆಲೆಸಿರುವುದರಿಂದ ಅವರಿಗೆ ಕೃಷಿ ಬಿಟ್ಟು ಇತರೆ ಕಸುಬುಗಳು ಅಧಿಕ ಪ್ರಮಾಣದಲ್ಲಿ ಲಭ್ಯವಾಗುವುದಿಲ್ಲ. ಕೃಷಿ ಕೈಗೊಳ್ಳುವ ಚಿಕ್ಕ ರೈತರನ್ನು ಮತ್ತು ಗೇಣಿದಾರರನ್ನು ಕಡೆಗಣಿಸಲಾಗಿದೆ. ಸಣ್ಣ ಅತಿ ಸಣ್ಣ ಹಿಡುವಳಿಗಳಿಂದ ಆದಾಯ ತುಂಬಾ ಕಡಿಮೆ ಇದ್ದು ಹೆಚ್ಚು ಕಾರ್ಮಿಕರು ಹೆಚ್ಚಾಗಿ ಅವಲಂಭಿಸಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಅತಿ ಚಿಕ್ಕ ರೈತರ ಸಾಲದ ಬಾರವು ಕ್ರಮೇಣ ಅಧಿಕವಾಗುತ್ತಿದ್ದುದರಿಂದ ಅವರ ಕೂಲಿಗಾಗಿ ದುಡಿಯುವ ಅವಶ್ಯಕತೆ ಉಂಟಾಗಿದೆ ಮತ್ತು ವ್ಯವಸಾಯದಲ್ಲಿ ಯಂತ್ರೋಪಕರಣಗಳನ್ನು ಉಪಯೋಗಿಸಿ ಅದನ್ನು ವಾಣಿಜ್ಯದ ದೃಷ್ಠಿಯಿಂದ ಕೈಗೊಳ್ಳುವುದು ಅಧಿಕವಾಗಿದೆ. ಕೃಷಿ ಕಾರ್ಮಿಕರು, ಮಧ್ಯಸ್ಥಗಾರರ ನಿರ್ಮೂಲನಾ ತಾಂತ್ರಿಕ ಸುಧಾರಣೆ, ಯಂತ್ರೋಪಕರಣಗಳ ಉಪಯೋಗ, ಮಾರುಕಟ್ಟೆ ವಿಸ್ತರಣೆ ಸಹಕಾರಿ ಸಂಘಗಳ ಮೂಲಕ ಪತ್ತಿನ ಲಭ್ಯತೆ, ವೈಜ್ಞಾನಿಕ ಬೇಸಾಯ ಇವೇ ಮೊದಲಾದವುಗಳ ಮೂಲಕ ಬಂಡವಾಳ ಪ್ರಭುತ್ವ ವ್ಯವಸ್ಥೆಯು ವ್ಯವಸಾಯದಲ್ಲಿ ಕಂಡು ಬರುತ್ತದೆ.
ಈ ಎಲ್ಲಾ ಕಾರಣಗಳ ಮೂಲಕ ಭೂ ರಹಿತರು ಹಾಗೂ ಅತಿ ಚಿಕ್ಕ ಹಿಡುವಳಿದಾರರು ಕೃಷಿ ಕಾರ್ಮಿಕರಾಗಿ ಪರಿವರ್ತಿಸಲ್ಪಟ್ಟಿದ್ದಾರೆ.

ಕೃಷಿ ಕಾರ್ಮಿಕರ ಬಡತನದ ಪರಿಸ್ಥಿತಿಗೆ ಕಾರಣಗಳು :
ಭಾರತದಲ್ಲಿ ಗ್ರಾಮೀಣ ಪ್ರದೇಶಗಳ ಕಾರ್ಮಿಕರಲ್ಲಿ, ಕೃಷಿ ಕಾರ್ಮಿಕರು ಅತ್ಯಂತ ನಿಕೃಷ್ಟ ಜೀವನ ಸಾಗಿಸುವವರಾಗಿದ್ದಾರೆ. ಅವರು ಅತ್ಯಧಿಕ ಪ್ರಮಾಣದಲ್ಲಿ ಶೋಷಣೆ ಸುಲಿಗೆಗೊಳಗಾದವರು, ಸಾಮಾಜಿಕವಾಗಿ ಹತ್ತಿಕ್ಕಲ್ಪಟ್ಟವರು ಹಾಗೂ ಹಿಂಸಿಸಲ್ಪಟ್ಟವರು ಆಗಿದ್ದಾರೆ. ಅವರು ಬಡವರಲ್ಲಿಯೇ ಬಡವರಾಗಿ ಅಂದರೆ ಕಡುಬಡವರಾಗಿ ಜೀವಿಸುವಂತವರಾಗಿದ್ದಾರೆ. ಭಾರತವು ಸ್ವಾತಂತ್ರ್ಯ ಪಡೆಯುವುದಕ್ಕಿಂತ ಮೊದಲು ಅಂದರೆ ಬ್ರಿಟೀಷ್‌ರ ಕಾಲದಲ್ಲಿ ಅವರು ವಾಸ್ತವಿಕವಾಗಿ ಜೀತದ ಆಳುಗಳೇ ಆಗಿದ್ದರು ಅವರು ತಮ್ಮ ಜಮೀನುದಾರರ ಜಮೀನುಗಳಲ್ಲಿಯಷ್ಟೇ ಅಲ್ಲದೆ ಅವರ ಮನೆಯಲ್ಲಿ ದುಡಿಯುತ್ತಿದ್ದಾರೆ. ಕೃಷಿ ಕಾರ್ಮಿಕರು ಹೆಚ್ಚಾಗಿ ಅನಕ್ಷರಸ್ಥರು ಆಗಿರುವುದರಿಂದ ಅವರಿಗೆ ದುಡಿಯುವುದೊಂದೇ ಗೊತ್ತು ಹೊರತು ಅವರಿಗೆ ತಮ್ಮ ಹಕ್ಕುಗಳ ಅರಿವೇ ಇರುವುದಿಲ್ಲ ಅವರು ಸುಸಂಘಟಿತರಲ್ಲದ ಕಾರಣ ಅವರು ದೇಶದ ವಿವಿಧ ಗ್ರಾಮೀಣ ಭಾಗಗಳಲ್ಲಿ ವಾಸ ಮಾಡುವುದರಿಂದ ಒಂದು ಗೂಡಿ ಸಂಘಗಳನ್ನು ಸ್ಥಾಪಿಸುವುದು ಕಷ್ಟ.
ಅವರಿಗೆ ಸಮಾಜದ ಯಾವ ಸ್ಥಾನಮಾನಗಳೂ ಇದ್ದಿಲ್ಲ. ಅವರನ್ನು ಸಮಾಜದಲ್ಲಿ ಅತ್ಯಂತ ಕೆಳಮಟ್ಟದವರೆಂದು ಪರಿಗಣಿಸಲಾಗುತ್ತಿತ್ತು. ಅವರಿಗೆ ಯಾವುದೇ ವಿಧವಾದ ಆರ್ಥಿಕ ಸಾಮಾಜಿಕ ಸ್ವಾತಂತ್ರ್ಯವಿದ್ದಿಲ್ಲ. ಆದರೆ ಭಾರತವು ಸ್ವಾತಂತ್ರ್ಯವಾದ ನಂತರ ಅವರ ಆರ್ಥಿಕ, ಸಾಮಾಜಿಕ ಪರಿಸ್ಥಿತಿಯನ್ನು ಸುಧಾರಿಸಲು ಸರ್ಕಾರವು ಕ್ರಮ ಕೈಗೊಂಡಿತು. ಆದರೂ ಇಂದಿಗೂ ಅವರ ಪರಿಸ್ಥಿತಿ ಹೇಳಿಕೊಳ್ಳುವಷ್ಟು ಅಥವಾ ನಿರೀಕ್ಷಿಸಿದಷ್ಟು ಸುಧಾರಿಸಿಲ್ಲ. ಈಗಲೂ ಅವರ ಕೂಲಿಯ ದರವು ಬಹಳ ಕಡಿಮೆ ಇದೆ. ಅವರ ಹಿತರಕ್ಷಣೆಗಾಗಿ ಯಾವುದೇ ಕಾನೂನುಗಳಿರುವುದಿಲ್ಲ. ಅವರು ಕೆಲಸ ಮಾಡುವ ಅವಧಿ, ಕೆಲಸದ ಸ್ಥಿತಿಗತಿ ಕೂಲಿಯ ದರ, ಇವೇ ಮೊದಲಾದವುಗಳನ್ನು ನಿರ್ಧರಿಸಲು ಕಾನೂನುಗಳಿರುವುದಿಲ್ಲ. ಕೆಲವು ಕಾನೂನುಗಳು ಇದ್ದರೂ ಅವು ಕೇವಲ ಕಾಗದದಲ್ಲಿಯೇ ಉಳಿದಿದೆ. ಹೀಗಾಗಿ ಇಂದಿಗೂ ಕೃಷಿ ಕಾರ್ಮಿಕರು ಅತ್ಯಂತ ನಿಕೃಷ್ಟವಾದ ಜೀವನವನ್ನು ನಡೆಸುತ್ತಿದ್ದಾರೆ.
ಕೃಷಿ ಕಾರ್ಮಿಕರ ಉದ್ಯೋಗ ಋತುಮಾನದ ಉದ್ಯೋಗವಾಗಿರುವುದರಿಂದ ಅವರಿಗೆ ವರ್ಷವಿಡೀ ಕೆಲಸವಿರುವುದಿಲ್ಲ. ವರ್ಷದಲ್ಲಿ ಕೆಲವೇ ತಿಂಗಳುಗಳವರೆಗೆ ಅವರಿಗೆ ಕೆಲಸ ಸಿಗುತ್ತದೆ. ಅವರಿಗೆ ವರ್ಷದಲ್ಲ ಸರಾಸರಿ ಕೇವಲ ೨೦೦ ದಿನಗಳ ಕೆಲಸ ಸಿಗುತ್ತದೆಮದು ಅಂದಾಜಿಸಲಾಗಿದೆ. ಉಳಿದ ಅವಧಿಯಲ್ಲಿ ಉದ್ಯೋಗ ಇರುವುದಿಲ್ಲ ಬಡತನ ಹೆಚ್ಚಾಗುತ್ತದೆ. ಕೃಷಿಯೇತರ ವಲಯಗಳ ಅಭಾವ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಜನತು ಕೃಷಿಯನ್ನೇ ಅಲಂಭಿಸಿದ್ದಾರೆ. ಅಲ್ಲಿ ಬೇರೆ ವಲಯಗಳು ಬೆಳೆದು ಬಂದಿಲ್ಲ. ಚಿಕ್ಕ ಕೈಗಾರಿಕೆಗಳು ಹಾಗೂ ಕರಕುಶಲ ಕೈಗಾರಿಕೆಗಳು ಸಾಕಷ್ಟು ಪ್ರಮಾಣದಲ್ಲಿ ಬೆಳೆದಿಲ್ಲವಾದ್ದರಿಂದ ಕೃಷಿ ಕಾರ್ಮಿಕರಿಗೆ ಪರ್ಯಾಯ ಕೆಲಸ ಸಿಗದಂತಾಗಿ ತಮಗೆ ಸಿಗುವಷ್ಟು ಕೂಲಿಯಿಂದ ತೃಪ್ತಿ ಹೊಂದಬೇಕಾಗುತ್ತದೆ. ಗ್ರಾಮೀಣ ಸಾಲದ ಭಾರ ಮತ್ತು ಸಮಾಜದಲ್ಲಿ ಅತಿ ಕೆಳಮಟ್ಟದ ಸ್ಥಾನ ಈ ಮೇಲಿನ ಸಂಗತಿಗಳು ಕೃಷಿ ಕಾರ್ಮಿಕರ ಬಡತನದ ಪರಿಸ್ಥಿತಿಗೆ ಪ್ರಮುಖ ಕಾರಣಗಳಾಗಿವೆ.

ಕೃಷಿ ಕಾರ್ಮಿಕರ ಹಿತಕ್ಕಾಗಿ ಸರ್ಕಾರವು ಕೈಗೊಂಡ ಕ್ರಮಗಳು :
ಭಾರತವು ಸ್ವಾತಂತ್ರ್ಯ ಪಡೆದ ನಂತರವೇ ಸರಕಾರವು ಕೃಷಿ ಕಾರ್ಮಿಕರ ಆರ್ಥಿಕ ಸ್ಥಿತಿಗತಿಗಳನ್ನು ಸುಧಾರಿಸಲು ಹಲವಾರು ಕ್ರಮಗಳನ್ನು ಕೈಗೊಂಡಿತು. ಭಾರತದ ಸಂವಿಧಾನದಲ್ಲಿ ಜೀತ ಪದ್ಧತಿಯು ಮಹಾಪರಾಧವೆಂದು ಘೋಷಿಸಿದೆ. ಸರಕಾರವು ಜೀತ ಪದ್ಧತಿಯನ್ನು ನಿರ್ಮೂಲನೆ ಮಾಡಲು ಕ್ರಮ ಕೈಗೊಂಡ ಅದನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದಿದೆ. ಇದರಿಂದ ಅನೇಕ ಜೀತದಾಳುಗಳು ಜೀತ ವಿಮುಕ್ತಿಯಾದ ಅನೇಕ ನಿದರ್ಶನಗಳಿವೆ ಮತ್ತು ಕನಿಷ್ಟ ಕೂಲಿ ಕಾಯಿದೆಯನ್ನು ಜಾರಿಗೆ ತರಲಾಗಿದೆ. ಈ ಕಾಯಿದೆ ಪ್ರಕಾರ ಕೃಷಿ ಕಾರ್ಮಿಕರಿಗೆ ಕೊಡಬೇಕಾದ ಕನಿಷ್ಠ ಕೂಲಿಯನ್ನು ನಿಗದಿಪಡಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡುತ್ತದೆ. ಆ ಪ್ರಕಾರ ಎಲ್ಲ ರಾಜ್ಯಗಳಲ್ಲಿ ಕೃಷಿ ಕಾರ್ಮಿಕರಿಗೆ ಕನಿಷ್ಠ ಕೂಲಿಯ ದರಗಳನ್ನು ನಿಗದಿಪಡಿಸಲಾಗಿದೆ. ಈ ಕೂಲಿಯ ದರಗಳು ಸಮರ್ಪಕವಾಗಿ ಜಾರಿಗೆ ಬಂದಿಲ್ಲ.
ಸರ್ಕಾರವು ಕಾನೂನಿನ ಮೂಲಕ ಕೃಷಿ ಕಾರ್ಮಿಕರ ಹಿತಕ್ಕಾಗಿ ಅನೇಕ ಕಾಯಿದೆ ಕ್ರಮಗಳನ್ನು ಜಾರಿಗೆ ತಂದಿದೆ. ಸರ್ಕಾರವು ಕಾನೂನಿನ ಮೂಲಕ ಜಮೀನುದಾರಿ ಪದ್ಧತಿಯನ್ನು ನಿರ್ಮೂಲನ ಮಾಡಿದೆ. ಅದರೊಂದಿಗೆ ಕೃಷಿ ಕಾರ್ಮಿಕರ ಶೋಷಣೆಯನ್ನು ನಿವಾರಿಸಿದೆ. ಇದೂ ಅಲ್ಲದೆ ಗೇಣಿ ಪದ್ಧತಿಯ ಸುಧಾರಣೆಗಾಗಿ ರಾಜ್ಯ ಸರ್ಕಾರಗಳು ಕಾಯಿದೆಗಳನ್ನು ಪಾಸು ಮಾಡಿದೆ. ಅವುಗಳ ಮೂಲಕ ಗೇಣಿದಾರರ ಹಾಗೂ ಕೃಷಿ ಕಾರ್ಮಿಕರ ಹಿತಾಸಕ್ತಿಗಳನ್ನು ರಕ್ಷಿಸಲು ಕ್ರಮ ಕೈಗೊಳ್ಳಲಾಗಿದೆ. ಕೃಷಿ ಕಾರ್ಮಿಕರ ಅಭಿವೃದ್ಧಿಯ ಕಾರ್ಯಕ್ರಮ, ಚಿಕ್ಕ ರೈತರ ಅಭಿವೃದ್ಧಿ ಕಾರ್ಯಕ್ರಮ ಮೊದಲಾದ ಕೆಲವು ವಿಶೇಷ ಕಾರ್ಯಕ್ರಮಗಳ ಮೂಲಕ ಕೃಷಿ ಕಾರ್ಮಿಕರ ಹಾಗೂ ಚಿಕ್ಕ ರೈತರ ಹಿತಾಸಕ್ತಿಯನ್ನು ರಕ್ಷಿಸಲು ಕ್ರಮ ಕೈಗೊಳ್ಳಲಾಗಿದೆ.
ಕೃಷಿ ಕಾರ್ಮಿಕರಿಗೆ ಸಾಗುವಳಿಗಾಗಿ ಪಾಳು ಭೂಮಿಯ ಉದ್ಯೋಗ ಸಾಕಷ್ಟು ಬಂಜರು ಮತ್ತು ಪಾಳು ಭೂಮಿಯನ್ನು ಸಾಗುವಳಿಗೆ ತರಲಾಗಿದೆ ಮತ್ತು ಅದನ್ನು ಭೂ ರಹಿತರಿಗೆ ಹಂಚಲಾಗಿದೆ. ಗ್ರಾಮೀನ ಉದ್ಯೋಗಾವಕಾಶಗಳ ಕಾರ್ಯಕ್ರಮದಡಿಯಲ್ಲಿ ಪಂಚವಾರ್ಷಿಕ ಯೋಜನೆಗಳ ಪ್ರಕಾರ ಗ್ರಾಮಾಂತರ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಅನೇಕ ಯೋಜನೆಗಳನ್ನು ಅಳವಡಿಸಿಲಾಗಿದ್ದು ನಿರುದ್ಯೋಗಿ ಮತ್ತು ಅರೇ ಉದ್ಯೋಗಿ ಕೃಷಿ ಕಾರ್ಮಿಕರಿಗೆ ಪೂರ್ಣಾವಧಿ ಉದ್ಯೋಗಗಳನ್ನು ಒದಗಿಸುವ ವ್ಯವಸ್ಥೆ ಮಾಡಲಾಗಿದೆ.
೨೦ ಅಂಶಗಳ ಆರ್ಥಿಕ ಕಾರ್ಯಕ್ರಮ ಭಾರತದ ಮಾಜಿ ಪ್ರಧಾನಮಂತ್ರಿ ಶ್ರೀಮತಿ ಇಂದಿರಾಗಾಂಧಿಯವರು ಜುಲೈ ೧೯೭೫ರಲ್ಲಿ ೨೦ ಅಂಶಗಳ ಆರ್ಥಿಕ ಕಾರ್ಯಕ್ರಮವೊಂದನ್ನು ಘೋಷಿಸಿ, ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನದಲ್ಲಿ ತರಲು ಎಲ್ಲಾ ರಾಜ್ಯ ಸರ್ಕಾರಗಳಿಗೆ ಕೇಳಿಕೊಂಡರು. ಅವರು ಈ ಕಾರ್ಯಕ್ರಮವನ್ನು ಜನವರಿ ೧೪, ೧೯೮೧ ರಂದು ಪರಿಷ್ಕರಿಸಿದರು. ಈ ಕಾರ್ಯಕ್ರಮದ ಪ್ರಕಾರ ಭೂ ರಹಿತ ಕೃಷಿ ಕಾರ್ಮಿಕರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ರಾಜ್ಯ ಸರ್ಕಾರಗಳು ಹಲವಾರು ಕ್ರಮಗಳನ್ನು ಕೈಗೊಂಡಿದೆ.
ಒಕ್ಕಲುತನದಲ್ಲಿ ಜೀತ ಪದ್ಧತಿಯು ಬಹಳ ಹಿಂದಿನಿಂದಲೂ ಬಂದ ಪದ್ಧತಿಯಾಗಿದೆ. ಈ ಪದ್ಧತಿಯಲ್ಲಿ ಕೃಷಿ ಕಾರ್ಮಿಕರು ಜೀತದ ಆಳುಗಳಾಗಿ ಗುಲಾಮರಾಗಿ ಬಾಳುತ್ತಾರೆ. ಇದನ್ನು ತಡೆಯಲು ೧೯೭೬ರಲ್ಲಿ ಜೀತ ಪದ್ಧತಿಯು ನಿರ್ಮೂಲನಾ ಕಾಯ್ದೆಯನ್ನು ಜಾರಿಗೆ ತರಲಾಗಿದೆ.
ಇತ್ತೀಚೆಗೆ ಲಭ್ಯವಾದ ಅಂಕಿ ಅಂಶಗಳ ಪ್ರಕಾರ ೩೧ ಮಾರ್ಚ್ ೧೯೯೩ರ ವರೆಗೆ ರಾಜ್ಯ ಸರ್ಕಾರಗಳು ೨,೫೧,೫೦೦ ಜೀತದಾಳುಗಳನ್ನು ಗುರುತಿಸಿ ಅವರನ್ನು ಮುಕ್ತಗೊಳಿಸಿ ಇವರ ಪೈಕಿ ಶೇಕಡ ೮೦%ರಷ್ಟು ಜೀತದಾಳುಗಳಿಗೆ ಅಂದರೆ ೨,೨೭, ೫೦೦ ಜೀತದಾಳುಗಳಿಗೆ ಸ್ವತಂತ್ರವಾಗಿ ಜೀವಿಸಲು ಅವಕಾಶ ಮಾಡಿಕೊಡಲಾಯಿತು. ಇದೂ ಅಲ್ಲದೆ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಜೀತ ಪದ್ಧತಿಯ ನಿರ್ಮೂಲನಕ್ಕಾಗಿ ಹಾಗೂ ಜೀತದಾಳುಗಳ ಪುನರ್ ನೆಲೆಗಾಗಿ ಸಹಾಯ ಧನವನ್ನು ನೀಡುತ್ತಿದೆ. ಪ್ರತಿಯೊಬ್ಬ ಜೀತದಾಳುವಿಗೆ ನೀಡುವ ಸಹಾಯಧನವು ೪,೦೦೦ ರೂ. ಗಳಷ್ಟಿತ್ತು. ಅದನ್ನು ಕೇಂದ್ರ ಸರ್ಕಾರವು ೧ ಫೆಬ್ರವರಿ ೧೯೮೬ ರಿಂದ ೬,೨೫೦ ರೂ. ಗಳಿಗೆ ಏರಿಸಿತು ಹಾಗೂ ೧ ಆಗಸ್ಟ್ ೧೯೯೪ರಿಂದ ಅದನ್ನು ೧೦,೦೦೦ ರೂ.ಗಳಿಗೆ ಏರಿಸಿತು.
ಕೃಷಿ ಕಾರ್ಮಿಕರ ಸುಧಾರನೆಗಾಗಿ ಗ್ರಾಮೀಣ ಶ್ರಮಿಕರ ಬಗೆಗಿನ ರಾಷ್ಟ್ರೀಯ ಆಯೋಗದ
ಶಿಫಾರಸ್ಸುಗಳು :
ಗ್ರಾಮೀಣ ಶ್ರಮಿಕರ ಬಗೆಗಿನ ರಾಷ್ಟ್ರೀಯ ಆಯೋಗವು ಕಾರ್ಮಿಕರ ಸ್ಥಿತಿಗತಿಗಳ ಸುಧಾರಣೆಗಾಗಿ ಕೆಲವು ಮಹತ್ವದ ಶಿಫಾರಸ್ಸುಗಳನ್ನು ಮಾಡಿದೆ. ಸದ್ಯದ ಪರಿಸ್ಥಿತಿಯಲ್ಲಿ ಗ್ರಾಮೀನ ಪ್ರದೇಶಗಳಲ್ಲಿ ಕಂಡುಬರುವ ವ್ಯವಸಾಯ ವ್ಯವಸ್ಥೆಯನ್ನು ಸುಧಾರಿಸಲು ಅಸಾಧ್ಯವಾಗಿದೆ. ಅನೇಕ ಚಿಕ್ಕ ಅಂಚಿನ ರೈತರು ತಮ್ಮ ಅತಿಚಿಕ್ಕ ಭೂ ಹಿಡುವಳಿಗಳನ್ನು ದೊಡ್ಡ ದೊಡ್ಡ ಜಮೀನುದಾರರಿಗೆ ಮಾರಾಟ ಮಾಡಿ ಕೃಷಿ ಕಾರ್ಮಿಕರಾಗುತ್ತಿದ್ದಾರೆ. ಹೀಗಾಗಿ ಕೃಷಿ ಕಾರ್ಮಿಕರ ಸಂಖ್ಯೆ ಅಧಿಕವಾಗುತ್ತಿದೆ. ಹೊಸ ಕೃಷಿ ತಂತ್ರವು ಕೇವಲ ದೊಡ್ಡ ಜಮೀನುದಾರರಿಗೆ ಮಾತ್ರ ಪ್ರಯೋಜನಕಾರಿಯಾಗಿದೆ. ಏಕೆಂದರೆ ಅದು ಮಾರುಕಟ್ಟೆ ಆಧಾರಿತವಾಗಿದ್ದು, ಹೆಚ್ಚು ಬಂಡವಾಳ ಮತ್ತು ಕಡಿಮೆ ಶ್ರಮವನ್ನು ಬಳಸುವಂತಾಗಿದೆ. ಆದ್ದರಿಂದ ಅದು ಚಿಕ್ಕ ರೈತರಿಗೆ ಎಳ್ಳಷ್ಟೂ ಪ್ರಯೋಜನವಾಗಿಲ್ಲ. ಏಕೆಂದರೆ ಅವರಲ್ಲಿ ಹೊಸ ತಂತ್ರವನ್ನು ಬಳಸಲು ಸಾಕಷ್ಟು ಸಂಪನ್ಮೂಲಗಳಿರುವುದಿಲ್ಲ. ಅದರ ಬಗೆಗಿನ ಜ್ಞಾನವು ಅವರಿಗಿರುವುದಿಲ್ಲ. ಅಲ್ಲದೆ ಅದರಿಂದಾಗಬಹುದಾದ ನಷ್ಟ ಭಯವನ್ನು ಎದುರಿಸುವ ಸಾಮರ್ಥ್ಯವೂ ಅವರಿಗಿರುವುದಿಲ್ಲ. ಹೀಗಾಗಿ ಚಿಕ್ಕ ಹಾಗೂ ಅಂಚಿನ ರೈತರು ಸುಧಾರಿತ ರೀತಿಯಲ್ಲಿ ವ್ಯವಸಾಯ ಮಾಡಲು ಅಸಮರ್ಥರಾಗಿದ್ದಾರೆ. ಆದರೆ ಅದೇ ವೇಳೆಗೆ ಸುಧಾರಿತ ಆರ್ಥಿಕ ಕ್ರಮಗಳಿಂದ ಅವರಿಗೆ ತಮ್ಮ ಚಿಕ್ಕ ಹಿಡುವಳಿಗಳನ್ನು ಲಾಭದಾಯಿಕವಾಗಿ ಊಳಲು ಹಾಗೂ ಅವುಗಳಿಂದ ಸಾಕಷ್ಟು ಆದಾಯ ಪಡೆಯಲು ಅಸಾಧ್ಯವಾಗಿದೆ. ಹೀಗಾಗಿ ಅವರು ತಮ್ಮ ಚಿಕ್ಕ ಜಮೀನುಗಳನ್ನು ಮಾರಾಟ ಮಾಡಿ ಕೃಷಿ ಕಾರ್ಮಿಕರಿಗೆ ದುಡಿಯುವುದೇ ಮೇಲು ಎಂಬ ಭಾವನೆ ಅಧಿಕವಾಗುತ್ತಿದೆ. ಆದ್ದರಿಂದಲೇ ಅವರ ಸಂಖ್ಯೆ ಇಂದು ಅಧಿಕವಾಗುತ್ತಿದೆ.
ಸದ್ಯದ ಪರಿಸ್ಥಿತಿಯಲ್ಲಿ ಚಿಕ್ಕ ಹಾಗೂ ಅಂಚಿನ ರೈತರಿಗೆ ಹೆಚ್ಚಿನ ಜಮೀನನ್ನು ಕೊಟ್ಟು ಅವರ ಹಿಡುವಳಿಗಳ ಗಾತ್ರವನ್ನು ಹೆಚ್ಚಿಸಲು ಸಾಧ್ಯವಿಲ್ಲವಾಗಿದ್ದರಿಂದ ಅವರನ್ನು ಹೊಲದೊಡೆಯರನ್ನಾಗಿ ಮಾಡುವುದು ಅವಾಸ್ಥವಿಕವೇ ಆಗಿದೆ. ಆದ್ದರಿಂದ ಕೃಷಿ ಕಾರ್ಮಿಕರ ಸಂಖ್ಯೆಯು ಅಧಿಕವಾಗುತ್ತಿದ್ದು ಅವರ ಪರಿಸ್ಥಿತಿಯು ಭಾರಿ ಕಷ್ಟದಾಯಕವಾಗುತ್ತಿದೆ. ಅವರ ಇಂಥ ಪರಿಸ್ಥಿತಿಯ ಸುಧಾರಣೆಗಾಗಿ ರಾಷ್ಟ್ರೀಯ ಗ್ರಾಮೀಣ ಶ್ರಮಿಕರ ಆಯೋಗವು ಕೆಳಗೆ ಕೊಟ್ಟ ಶಿಫಾರಸ್ಸುಗಳನ್ನು ಮಾಡಿದೆ.
೧.ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಯ ಸುಧಾರಣೆಗಾಗಿ ಬಹುಮುಖ ಕಾರ್ಯಕ್ರಮವನ್ನು ಕೈಗೊಳ್ಳಬೇಕು. ನೀರಾವರಿ, ನೆರೆನಿಯಂತ್ರಣ, ಚರಂಡಿಯ ವ್ಯವಸ್ಥೆ, ಗ್ರಾಮೀಣ ವಿದ್ಯುಚ್ಛಕ್ತಿ, ಒಣಬೇಸಾಯ ಮೊದಲಾದವುಗಳನ್ನು ಕೈಗೊಂಡು ಅವುಗಳ ಮೂಲಕ ಕೃಷಿ ಉತ್ಪಾದನೆಯನ್ನು ಹಾಗೂ ಪ್ರದೇಶಗಳಲ್ಲಿ ಉದ್ಯೋಗವಕಾಶಗಳನ್ನು ಹೆಚ್ಚಿಸಬೇಕು.
೨.ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗವಕಾಶಗಳನ್ನು ನಿರ್ಮಿಸುವ ಹೊಸ ಹೊಸ ಯೋಜನೆಗಳನ್ನು ಕೈಗೊಳ್ಳಬೇಕು. ಅದೇ ವೇಳೆಗೆ ಕನಿಷ್ಟ ಕೂಲಿ ದರಗಳನ್ನು ಹಾಗೂ ಸಾಮಾಜಿಕ ಭದ್ರತೆಯ ಯೋಜನೆಗಳನ್ನು ಜಾರಿಗೊಳಿಸಬೇಕು.
೩.ಕೃಷಿ ಕಾರ್ಮಿಕರಿಗೆ ಮನೆ ಕಟ್ಟಿಕೊಳ್ಳಲು ನಿವೇಶನಗಳನ್ನು ಮತ್ತು ಕಟ್ಟಿದ ಮನೆಗಳನ್ನು ಉಚಿತವಾಗಿ ಇಲ್ಲವೇ ಅತೀ ಕಡಿಮೆ ಬೆಲೆಗೆ ಒದಗಿಸಬೇಕು ಅಲ್ಲದೆ ಅವರು ಕೃಷಿ ಆಧಾರಿತ ಚಟುವಟಿಕೆಗಳಾದ ದನ-ಕರು, ಕೋಳಿ ಸಾಕುವಿಕೆ, ಹೈನೋದ್ಯಮ ಮೊದಲಾದವುಗಳನ್ನು ಕೈಕೊಳ್ಳಲು ಅವರಿಗೆ ಎಲ್ಲಾ ರೀತಿಯಿಂದ ಉತ್ತೇಜನ ನೀಡಬೇಕು.
೪.ಕೇಂದ್ರ ಸರ್ಕಾರವು ಕೃಷಿ ಕಾರ್ಮಿಕರ ರಕ್ಷಣೆಗಾಗಿ ಪ್ರತ್ಯೇಕವಾದ ಕಾನೂನನ್ನು ಪಾಸು ಮಾಡಬೇಕು. ಇದರ ಮೂಲಕ ಅವರ ಯೋಗಕ್ಷೇಮವನ್ನು ಸಾಧಿಸಬಹುದಾಗಿದೆ.
೫.ಕೇಂದ್ರ ಮತ್ತು ರಾಜ್ಯಗಳ ಮಟ್ಟದಲ್ಲಿ ಗ್ರಾಮೀಣ ಕಾರ್ಮಿಕ ಇಲಾಖೆಯೆಂಬ ಪ್ರತ್ಯೇಕ ಇಲಾಖೆಯನ್ನು ಪ್ರಾರಂಭಿಸಬೇಕು. ಅದಕ್ಕೆ ಗ್ರಾಮೀಣ ಕಾರ್ಮಿಕರ ಯೋಗಕ್ಷೇಮವನ್ನು ನೋಡಿಕೊಳ್ಳುವ ಹೊಣೆಗಾರಿಕೆಯನ್ನು ವಹಿಸಿಕೊಡಬೇಕು.
೬.ಗ್ರಾಮೀಣ ಕಾರ್ಮಿಕರು ಕೈಗಾರಿಕಾ ಕಾರ್ಮಿಕರಂತೆ ಕಾರ್ಮಿಕ ಸಂಘಗಳನ್ನು ರಚಿಸಿಕೊಳ್ಳುವಂತೆ ಅವರಿಗೆ ಉತ್ತೇಜನ ಮತ್ತು ಮಾರ್ಗದರ್ಶನ ನೀಡಬೇಕು.
೭.ಗ್ರಾಮೀಣ ಕೃಷಿ ಮಹಿಳಾ ಕಾರ್ಮಿಕರಿಗಾಗಿ ಕೃಷಿ ಕಾರ್ಮಿಕರ ಕಲ್ಯಾಣ ನಿಧಿಯನ್ನು ರಚಿಸಬೇಕೆಂದೂ, ಅದನ್ನು ಗ್ರಾಮೀಣ ಕೃಷಿ ಮಹಿಳಾ ಕಾರ್ಮಿಕರ ಹೆರಿಗೆ, ನಿವೃತ್ತಿ ವೇತನ ಮೊದಲಾದವುಗಳಿಗೆ ಉಪಯೋಗಿಸಬೇಕು. ಈ ನಿಧಿಯ ರಚನೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮ ಪ್ರಮಾಣದಲ್ಲಿ ವಂತಿಗೆಯನ್ನು ಸಲ್ಲಿಸಬೇಕು.
ಒಟ್ಟಿನಲ್ಲಿ ಹೇಳಬೇಕೆಂದರೆ ಗ್ರಾಮೀಣ ಕೃಷಿ ಕಾರ್ಮಿಕರು ಸಮಾಜದ ಅತ್ಯಂತ ಬಡತನದ ವರ್ಗವಾಗಿದ್ದು ಅವರನ್ನು ಬಡತನ ರೇಖೆಯಿಂದ ಮೇಲೆತ್ತಲು ಹಾಗೂ ಅವರ ಸರ್ವಾಂಗೀಣ ಯೋಗಕ್ಷೇಮವನ್ನು ಸಾಧಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಯೋಗವು ಶಿಫಾರಸ್ಸು ಮಾಡಿರುತ್ತದೆ. ಕೇಂದ್ರ ಸರ್ಕಾರವು ಈ ದಿಶೆಯಲ್ಲಿ ಕಾರ್ಯೋನ್ಮುಖವಾಗಿದೆ.

ಕೃಷಿ ಕಾರ್ಮಿಕರ ಕೃಷಿ ಕೂಲಿ :
ಕೂಲಿ ಎಂದರೆ ಆ ದಿನದ ಕೊನೆಯಲ್ಲಿ ಅಥವಾ ವಾರದ ಕೊನೆಯಲ್ಲಿ ಶ್ರಮಿಕನಿಗೆ ಕೊಡುವ ಸಂಭಾವನೆ. ವಸ್ತುಗಳನ್ನು ಉತ್ಪಾದಿಸಲು ಶ್ರಮಕ್ಕೆ ಕೊಡುವ ಪ್ರತಿಫಲವೇ ಕೂಲಿ. ಕಾರ್ಮಿಕರು ತಮ್ಮ ಶಕ್ತಿ ಸಾಮರ್ಥ್ಯಗಳನ್ನು ಮಾಲೀಕನಿಗೆ ಒಪ್ಪಿಸಿ ಅದಕ್ಕೆ ಪ್ರತಿಫಲವಾಗಿ ಸಂಭಾವನೆ ಪಡೆಯುವರು. ಕಾರ್ಮಿಕರ ದುಡಿಮೆಯಿಂದ ಲಭ್ಯವಾದ ಉತ್ಪನ್ನದ ಮೊತ್ತಕ್ಕೆ ಅನುಗುಣವಾಗಿ ಅವರಿಗೆ ಕೂಲಿಯನ್ನು ನಿರ್ಧರಿಸಲಾಗುವುದು. ಕೂಲಿಯನ್ನು ಜೀತ ವೇತನ ಎಂದು ಕರೆಯುತ್ತಾರೆ. ಕೃಷಿ ಕೂಲಿ ಎಂದರೆ ಕೃಷಿ ಕಾರ್ಮಿಕ ತನ್ನ ಶ್ರಮ ಸಲ್ಲಿಸಿದ್ದಕ್ಕಾಗಿ ಪಡೆಯುವ ಸಂಭಾವನೆ.
ಕೃಷಿ ಕೂಲಿಯನ್ನು ಕಾರ್ಮಿಕರುಗಳಿಗೆ ಪಾವತಿ ಮಾಡುವಲ್ಲಿ ೨ ಪದ್ಧತಿಗಳು ಬಳಕೆಯಲ್ಲಿವೆ.
೧.ದಿನಗೂಲಿ : ಕೆಲಸ ಮಾಡುವ ಕಾಲಕ್ಕನುಗುಣವಾಗಿ ಕೊಡುವ ಕೂಲಿ
೨.ಗುತ್ತಿಗೆ ಕೂಲಿ: ಮಾಡಬೇಕಾದ ಕೆಲಸವನ್ನು ಗುತ್ತಿಗೆ ಕೊಟ್ಟು ಅದಕ್ಕೆ ತಕ್ಕಂತೆ ಕೂಲಿಯನ್ನು ಪಾವತಿ ಮಾಡುವುದು.
ಕಾಲಕ್ಕನುಗುಣ ಕೂಲಿ ಪದ್ಧತಿಯಲ್ಲಿ ಕೃಷಿ ಕಾರ್ಮಿಕರನ ಕೂಲಿ ಅವನು ಮಾಡಿದ ಕೆಲಸದ ಪ್ರಯಾಣವನ್ನಾಗಲೀ, ಕೆಲಸದ ಗುಣಮಟ್ಟವನ್ನಾಗಲೀ ಅವಲಂಭಿಸಿರುವುದಿಲ್ಲ. ಇಲ್ಲಿ ಕೃಷಿ ಕೂಲಿ ಕಾರ್ಮಿಕರ ಕೆಲಸದಲ್ಲಿ ನಿರತನಾಗಿದ್ದ ಕಾಲವನ್ನು ಅವಲಂಭಿಸಿರುತ್ತದೆ. ಆದರೆ ಈ ಪದ್ಧತಿಯಲ್ಲಿ ಕಾರ್ಮಿಕನ ಮೇಲೆ ಮೇಲುಸ್ತುವಾರಿ ಅಗತ್ಯ.
ಕೈಗಾರಿಕಾ ಕ್ಷೇತ್ರದಲ್ಲಿ ಕಾರ್ಯವನ್ನು ಕೈಗೊಳ್ಳುವುದು ಸುಲಭ. ಆದರೆ ಕೃಷಿ ಕ್ಷೇತ್ರದಲ್ಲಿ ಇದು ಕಷ್ಟ. ಮುಂದುವರಿದ ರಾಷ್ಟ್ರಗಳಲ್ಲಿ ಕೆಲಸಗಾರರ ನೇಮಕಕ್ಕೆ ಕೃಷಿ ರಂಗವೂ ಇತರ ಉದ್ಯಮ ರಂಗಗಳೊಂದಿಗೆ ಪೈಪೋಟಿ ನಡೆಸಬೇಕಾಗುತ್ತದೆ. ಅಲ್ಲಿ ಕಾರ್ಮಿಕರುಗಳನ್ನು ಕೃಷಿ ರಂಗಕ್ಕೆ ಆಕರ್ಷಿಸಬೇಕಾದರೆ ಹೆಚ್ಚಿನ ಕೂಲಿ ಮರಗಳನ್ನು ನೀಡಬೇಕಾಗುತ್ತದೆ. ಕೆಲವು ಕಾರ್ಯಗಳಲ್ಲಿ ಗುತ್ತಿಗೆ ಕೂಲಿ ವಾಡಿಕೆಯಲ್ಲಿದೆ. ಹತ್ತಿ ಬಿಡಿಸುವುದು, ನೆಲಗಡಲೆ, ಆಲೂಗಡ್ಡೆಗಳನ್ನು ಅಗೆದು ಅದನ್ನು ಬಿಡಿಸುವುದು, ಇಷ್ಟು ಚೀಲ ಹತ್ತಿ ಬಿಡಿಸಿದರೆ ಇಷ್ಟು ಕೂಲಿ ಎಂದು ನಿಗದಿ ಮಾಡಲಾಗಿರುತ್ತದೆ. ಹೆಚ್ಚು ಹತ್ತಿ ಬಿಡಿಸಿದವನು ಹೆಚ್ಚು ಕೂಲಿ ಪಡೆಯುತ್ತಾನೆ. ಇಲ್ಲಿ ಗುತ್ತಿಗೆ ಕೂಲಿ ಕೊಡುವ ಉದ್ದೇಶ ಕೆಲಸದಲ್ಲಿ ಹೆಚ್ಚಿನ ಆಸಕ್ತಿ ತೋರಿಸಲಿ ಎನ್ನುವುದು. ದಿನಗೂಲಿಯ ಮೇಲೆ ನೇಮಕ ಮಾಡಿಕೊಳ್ಳುವ ಕಾರ್ಮಿಕ ಈ ಕಾರ್ಯಗಳಲ್ಲಿ ವಿಶೇಷ ಆಸಕ್ತಿ ತೋರಿಸಲಾರ. ಕೈಗಾರಿಕಾ ಕಾರ್ಮಿಕರಿಗೆ ಹೋಲಿಸಿದರೆ ಕೃಷಿ ಕಾರ್ಮಿಕರು ಪಡೆಯುವ ಕೂಲಿ ಅತಿ ಕಡಿಮೆ. ಬಂಗಾಳದಲ್ಲಿ ಒಬ್ಬ ಕಾರ್ಮಿಕ ೨೬೮ರೂ. ಗಳಿಸಿದರೆ ಕೃಷಿ ಕಾರ್ಮಿಕ ೧೬೦ರೂ. ಗಳಿಸುತ್ತಾನೆ. ಈ ಬಗೆಯ ತಾರತಮ್ಯಕ್ಕೆ ಪ್ರಮುಖ ಕಾರಣಗಳೆಂದರೆ;
೧.ಕೃಷಿ ಕಾರ್ಮಿಕರು ಸಂಘಟನಾ ಶಕ್ತಿ ಪಡೆದಿರುವುದಿಲ್ಲ. ಇದರಲ್ಲಿ ಮುಂದಾಳುತನ ಇಲ್ಲ. ಕಾರ್ಮಿಕ ಸಂಘಗಳನ್ನು ನೇಮಿಸಿಕೊಂಡು ಹಕ್ಕುಗಳ ಈಡೇರಿಕೆಗೆ ಹೊಡೆದಾಡುವುದಿಲ್ಲ.
೨.ಕೃಷಿ ಕಾರ್ಮಿಕರ ಪ್ರಮಾಣ ಹೆಚ್ಚು.
೩.ಕೃಷಿ ಹಿಡುವಳಿಗಳು ದೊಡ್ಡದಾಗಿಲ್ಲದಿರುವುದು.
೪.ಕೃಷಿ ಕಾರ್ಮಿಕರು ಒಂದೆಡೆ ನೆಲಸದೆ ಚೆಲ್ಲಾಪಿಲ್ಲಿಯಾಗಿರುವುದು.
೫.ಮಕ್ಕಳುಗಳನ್ನು ಕೆಲಸಕ್ಕೆ ನೇಮಕ ಮಾಡಿಕೊಳ್ಳುವ ಬಗ್ಗೆ ನಿಯಂತ್ರಣವಿಲ್ಲದಿರುವುದರಿಂದ ಕಾರ್ಮಿಕ ಪೂರೈಕೆ ಅಧಿಕಗೊಂಡು ಕಡಿಮೆ ಕೂಲಿಗೆ ಎಡೆಮಾಡಿ ಕೊಟ್ಟಿದೆ.
೬.ಸಣ್ಣ ಉದ್ದಿಮೆದಾರರು ಎಲ್ಲಾ ಕಾರ್ಯಗಳನ್ನು ಕುಟುಂಬದ ಸದಸ್ಯರುಗಳಿಂದಲೇ ಮಾಡಿ ಮುಗಿಸುತ್ತಾರೆ. ಇದಕ್ಕೆ ಕಾರಣ ಅವರಿಗೆ ಕೂಲಿ ಕೊಡುವ ಸಾಮರ್ಥ್ಯ ಕಡಿಮೆ. ಅಗತ್ಯಬಿದ್ದರೆ ಅವರೇ ಹೆಚ್ಚು ಕಾಲ ದುಡಿಯುತ್ತಾರೆ ಅಥವಾ ಮಯ್ಯಾಳು ಪದ್ಧತಿಯನ್ವಯ ಅಕ್ಕಪಕ್ಕದ ರೈತರ ನೆರವು ಪಡೆಯುತ್ತಾರೆ. ಇಲ್ಲಿ ಕೆಲಸದ ದಕ್ಷತೆಗಿಂತ ಕೆಲಸವನ್ನು ಬೇಗ ಮಾಡಿ ಮುಗಿಸಬೇಕೆನ್ನುವ ಆತುರ ಹೆಚ್ಚು. ಅಸಮರ್ಪಕ ಕೆಲಸ ಕಡಿಮೆ ಉತ್ಪನ್ನಕ್ಕೆ ದಾರಿಯಾಗುವುದು.
೭.ಕೃಷಿ ಕಾರ್ಮಿಕರು ಅವಿದ್ಯಾವಂತರಾಗಿದ್ದು, ಭೂ ಮಾಲೀಕರೊಂದಿಗೆ ಹೆಚ್ಚು ಕೂಲಿ ಪಡೆಯಲು ಚೌಕಾಸಿ ಮಾಡುವ ಶಕ್ತಿ ಇವರಿಗಿರುವುದಿಲ್ಲ.
೮.ಋಣ ಕೂಪದಲ್ಲಿ ಬಿದ್ದು ತೊಳಲಾಡುತ್ತಿರುವ ಕೃಷಿ ಕಾರ್ಮಿಕರು ಭೂ ಮಾಲೀಕರ ಹಂಗಿಗೆ ಒಳಪಡುತ್ತಾರೆ. ಇದರಿಂದಾಗಿ ಮಾಲೀಕರೇ ನಿರ್ಧರಿಸಿದ ಕೂಲಿಗೆ ಅನ್ವಯವಾಗಿ ಅವರು ಕೆಲಸ ಮಾಡಲು ಒಪ್ಪಲೇ ಬೇಕು. ಜೊತೆಗೆ ಭೂ ಮಾಲೀಕರು ಸಮಾಜದ ಮೇಲು ಜಾತಿಗೆ ಸೇರಿದ್ದು, ಕೃಷಿ ಕಾರ್ಮಿಕರುಗಳು ಕೆಳ ಜಾತಿಗೆ ಸೇರಿರುವುದರಿಂದ ಅವರ ಶೋಷಣೆ ಇಲ್ಲಿ ಅತಿ ಸುಲಭ.
ಕೃಷಿ ಕೂಲಿ ಕಡಿಮೆ ಇರಲು ಕಾರ್ಮಿಕರ ಚೌಕಾಸಿಯ ಅಸಾಮರ್ಥ್ಯವೂ ಸಹ ಕಾರಣವಾಗಿ ಪರಿಣಮಿಸುತ್ತದೆ. ಕೃಷಿ ಕಾರ್ಮಿಕರುಗಳಿಗೆ ಬೇಡಿಕೆಯು ದೊಡ್ಡ ಹಿಡುವಳಿದಾರರಿಂದ ಬರಬೇಕು. ಸಣ್ಣ ಹಿಡುವಳಿದಾರರ ಬೇಡಿಕೆ ಬಹಳ ಕಡಿಮೆ. ಏಕೆಂದರೆ ಸಣ್ಣ ಹಿಡುವಳಿದಾರರುಗಳಿಗೆ ಕೂಲಿ ಕೊಡುವ ಶಕ್ತಿಯು ಬಹಳ ಕಡಿಮೆ. ಆದಕಾರಣ ಅವರು ತಮ್ಮ ಕೆಲಸಗಳನ್ನು ಕುಟುಂಬದವರ ಸಹಾಯದಿಂದ ಮಾಡಿಕೊಳ್ಳುತ್ತಾರೆ. ಅಗತ್ಯಬಿದ್ದರೆ ಅವರೇಗಳೇ ಹೆಚ್ಚು ವೇಳೆ ದುಡಿಯುವರು.
ಈ ಅಂಶಗಳು ಕೃಷಿ ಕೂಲಿ ಕಡಿಮೆ ಇರಲು ಕಾರಣವಾಗಿದೆ. ಕೃಷಿ ಕೂಲಿ ಕಾರ್ಮಿಕರ ಬೇಡಿಕೆ ಮತ್ತು ಪೂರೈಕೆಗಳಿಗನುಸಾರವಾಗಿ ನಿರ್ಧಾರವಾದಲ್ಲಿ ಬಡ ಕೃಷಿ ಕಾರ್ಮಿಕರ ಸ್ಥಿತಿಯಲ್ಲಿ ಸುಧಾರಣೆ ಕಾಣಬಹುದು. ಆದರೆ ಕೃಷಿ ಕೂಲಿ ಸಮಪ್ರದಾಯಗಳಿಗನುಸಾರವಾಗಿ ನಿರ್ಧಾರವಾಗುವುದು. ಕೃಷಿ ಕಾರ್ಮಿಕರ ಹೀನ ಸ್ಥಿತಿಗೆ ಅತಿ ಮುಖ್ಯ ಕಾರಣ, ಅಲ್ಲದೆ ಕೃಷಿ ಕಾರ್ಮಿಕರಿಗೆ ಬೇಡಿಕೆಯು ದೊಡ್ಡ ಹಿಡುವಳಿದಾರರಿಂದಲೇ ಬರಬೇಕು. ಆದರೆ ಕೃಷಿ ಯಾಂತ್ರೀಕರಣದಿಂದಾಗಿ ಇತ್ತೀಚೆಗೆ ಈ ಬೇಡಿಕೆ ದುರ್ಬಲಗೊಳ್ಳುತ್ತದೆ. ಇವರ ಜೊತೆಗೆ ಕೃಷಿ ಕಾರ್ಮಿಕರ ಪೂರೈಕೆ ಬೇಡಿಕೆಗಿಂತ ಹೆಚ್ಚುತ್ತಿರುವುದು ಕೂಲಿ ದರದ ಕುಸಿತಕ್ಕೆ ಕಾರಣವಾಗಿ ಪರಿಣಮಿಸಿದೆ.
ಕೃಷಿ ಕೂಲಿ ಕೆಲಸ ಮತ್ತು ಋತುಮಾನಗಳಿಗನುಸಾರವಾಗಿ ಮಾತ್ರವೇ ಅಲ್ಲದೆ ಪ್ರಾಂತ್ಯಕ್ಕೆ ಹೆಚ್ಚು ಕಡಿಮೆ ಇರುತ್ತದೆ. ರಾಜ್ಯದಿಂದ ರಾಜ್ಯಕ್ಕೆ, ರಾಜ್ಯದಲ್ಲೇ ಜಿಲ್ಲೆಯಿಂದ ಜಿಲ್ಲೆಗೆ, ಜಿಲ್ಲೆಯಲ್ಲೇ ಒಂದು ತಾಲ್ಲೂಕಿನಿಂದ ಮತ್ತೊಂದು ತಾಲ್ಲೂಕಿಗೆ ಕೃಷಿ ಕೂಲಿಯಲ್ಲಿ ವ್ಯತ್ಯಾಸ ಕಾಣಬಹುದು. ಭಾರತದಲ್ಲಿ ಕೃಷಿ ವಿಧಾನವು ಎಲ್ಲಾ ಕಡೆ ಒಂದೇ ಬಗೆಯಾಗಿರುವುದರಿಂದ ಕೃಷಿ ಕೂಲಿಯಲ್ಲೂ ಸಮಾನತೆಯನ್ನು ತರುವುದು ಕಷ್ಟ. ಇನ್ನೂ ವಿಚಿತ್ರವೆಂದರೆ ಒಂದೇ ಪ್ರದೇಶದಲ್ಲಿ ಬೇರೆ ಬೇರೆ ಜಾತಿಯವರೆಗೆ ಒಂದೇ ಬಗೆಯ ಕೆಲಸಕ್ಕೆ ಬೇರೆ ಬೇರೆ ಕೂಲಿ ಕೊಡುವ ಪದ್ಧತಿ ಉಂಟು. ಅಲ್ಲದೆ ಗಂಡಾಳುಗಳಿಗೆ ದೊರೆಯುವಷ್ಟು ಕೂಲಿಯು ಹೆಣ್ಣಾಳುಗಳಿಗೆ ಹಾಗೂ ಮಕ್ಕಳಿಗೆ ದೊರೆಯುವುದಿಲ್ಲ. ಗಂಡಾಳುಗಳು ಮಾಡುವ ಕೆಲವು ಕೆಲಸಗಳನ್ನು ಹೆಣ್ಣಾಳುಗಳು ಮಾಡಿದಾಗ್ಯೂಕ ಅವರಿಗೆ ಗಂಡಾಳುಗಳು ಪಡೆಯುವಷ್ಟು ಕೂಲಿ ಸಿಗುವುದಿಲ್ಲ. ಮಕ್ಕಳಿಗ ಇವರಿಬ್ಬರಿಗಿಂತಲೂ ಕೂಲಿ ಕಡಿಮೆ ಇರುತ್ತದೆ. ಕುಟುಂಬದ ವೆಚ್ಚವನ್ನು ಹೊರುವ ಸಲುವಾಗಿ ಸ್ತ್ರೀಯರು ಮತ್ತು ಮಕ್ಕಳು ಅನಿವಾರ್ಯವಾಗಿ ದುಡಿಯುತ್ತಾರೆ. ಯೋಜನೆಗಳ ಪೂರ್ವದ ತನಿಖಾ ಆಯೋಗಗಳ ಪ್ರಕಾರ ೧೯೫೦-೫೧ರಲ್ಲಿ ಸರಾಸರಿ ದಿನ ನಿತ್ಯದ ಗಂಡಾಳುಗಳಿಗೆ ದಿನಕ್ಕೆ ೧೦೯ ಪೈಸೆ ಇದ್ದುದು ೧೯೫೬ರಲ್ಲಿ ೯೬ ಪೈಸೆಗಳಿಗೆ ಇಳಿಯಿತು. ಹೆಣ್ಣಾಳುಗಳಿಗೆ ೬೮ ಪೈಸೆಗಳಿಂದ ೫೯ ಪೈಸೆಗಳಿಗೆ ಇಳಿಯಿತು. ಮಕ್ಕಳಿಗೆ ೭೦ ಪೈಸೆಗಳಿಂದ ೫೩ ಪೈಸೆಗಳಿಗೆ ಇಳಿಯಿತು.

ಕೃಷಿ ಕನಿಷ್ಠ ಕೂಲಿ ಕಾಯ್ದೆ ೧೯೪೮ :
೧೯೪೮ರಲ್ಲಿ ಅನುಷ್ಟಾನಕ್ಕೆ ಬಂದ ಕನಿಷ್ಠ ಕೂಲಿ ಕಾಯಿದೆಯು ಕೂಲಿ ದರಗಳನ್ನು ಕ್ರಮಬದ್ಧ ಪಡಿಸುವ ಹಾದಿಯಲ್ಲಿ ಒಂದು ಮೈಲುಗಲ್ಲಾಗಿ ಪರಿಣಮಿಸಿದೆ. ಕೂಲಿ ದರಗಳು ಕಡಿಮೆ ಇರುವ ಕಾರ್ಮಿಕ ಸಂಘಗಳಿಲ್ಲದ ಕಡೆಗಳಲ್ಲಿ ಕನಿಷ್ಠ ಕೂಲಿ ನಿಗದಿ ಪಡಿಸುವುದು ಅವಶ್ಯಕ. ಈ ಕಾಯ್ದೆ ಪ್ರಕಾರ ಕೃಷಿ ಕಾರ್ಮಿಕರು ಕನಿಷ್ಠ ಕೂಲಿಗೆ ಅರ್ಹರಾಗಿರುತ್ತಾರೆ.
ಕೃಷಿ ಕಾರ್ಮಿಕರಿಗೆ ಕನಿಷ್ಠ ಕೂಲಿಯನ್ನು ನಿಗದಿ ಮಾಡುವಾಗ ಕಾರ್ಮಿಕ ಸಾಮಾನ್ಯ ಜೀವನಮಟ್ಟ ನ್ಯಾಯವಾದ ಕೂಲಿ, ಯಜಮಾನ ಕೊಡಲು ಸಿದ್ಧವಿರುವ ಕೂಲಿದರಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಸಾಮಾನ್ಯವಾಗಿ ಗಂಡಾಳುಗಳಿಗೆ ಕೊಡುವ ಕೂಲಿಯು ಅವನ ಸಂಸಾರದ ಪೋಷಣೆಗೆ ಸಾಕಾಗುವಷ್ಟು ಇರಬೇಕು. ಆದರೆ ಸ್ತ್ರೀ ಕಾರ್ಮಿಕರುಗಳಿಗೆ ಅವರ ಜೀವನಕ್ಕೆ ಸಾಕಾಗುವಷ್ಟರ ಮಟ್ಟಿಗೆ ಕೂಲಿ ಸಿಕ್ಕರೆ ಸಾಕು. ಈ ಅಂಶಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ನಿಗದಿ ಮಾಡಿದ ಕೂಲಿ ದರವನ್ನು ಜಾರಿಗೆ ತರಲು ಜಿಲ್ಲೆ ಮತ್ತು ರಾಜ್ಯ ಮಟ್ಟಗಳಲ್ಲಿ ಕೃಷಿ ಕೂಲಿ ಮಂಡಳಿಗಳನ್ನು ರಚಿಸಬೇಕು. ಕೃಷಿ ಕೂಲಿ ಮಂಡಳಿಗಳಲ್ಲಿ ಕಾರ್ಮಿಕ ಪ್ರತಿನಿಧಿಗಳು, ಜಮೀನು ಹಿಡುವಳಿದಾರರು ಹಾಗೂ ಸರಕಾರಗಳ ಪ್ರತಿನಿಧಿಗಳಿರಬೇಕು. ಈ ಮಂಡಳಿಯು ಪ್ರತಿಯೊಂದು ಜಿಲ್ಲೆಗೂ ಕೃಷಿ ಪ್ರದೇಶಕ್ಕೂ ಕೂಲಿ ದರಗಳನ್ನು ನಿಗದಿ ಮಾಡಿ ಜಾರಿಗೆ ತರಬೇಕು. ಆದರೆ ಕನಿಷ್ಠ ಕೂಲಿಯನ್ನು ನಿಗದಿ ಮಾಡಿ ಜಾರಿಗೆ ತರುವುದು ಸುಲಭವಲ್ಲ. ಇದಕ್ಕೆ ಅನೇಕ ತೊಂದರೆಗಳಿವೆ;
೧.ಕನಿಷ್ಠ ಕೂಲಿಯನ್ನು ನಿಗದಿ ಮಾಡುವುದು ತುಂಬಾ ಪ್ರಯಾಸದ ಕೆಲಸ.
೨.ನಿಗದಿ ಮಾಡಿದ ಕೂಲಿಯನ್ನು ಮಾಲೀಕ ಕೊಡಲು ಶಕ್ತನೇ ಅಲ್ಲವೇ ಎಂಬುದನ್ನು ಗಮನಿಸಬೇಕು.
ಕೃಷಿಕನಿಗೆ ಅವನ ವೃತ್ತಿಯು ಎಷ್ಟರ ಮಟಿಗೆ ಲಾಭದಾಯಕ ಎಂಬ ಪ್ರಶ್ನೆಯನ್ನು ಇದು ಅವಲಂಭಿಸಿದೆ. ಅವನ ಉತ್ಪಾದನಾ ಕಾರ್ಯದ ಆದಾಯ ವೆಚ್ಚಗಳನ್ನು ಇದು ಅವಲಂಭಿಸಿರುವುದು. ಅದನ್ನು ಕಂಡುಹಿಡಿಯ ಬೇಕಾಗುತ್ತದೆ. ಇದು ಅಷ್ಟು ಸುಲಭವಲ್ಲ. ಉತ್ಪಾದನೆಯ ವೆಚ್ಚ ಆ ಪ್ರದೇಶದ ಬೆಳೆಗಳು ಅವುಗಳನ್ನು ಉತ್ಪಾದಿಸಲು ತಗಲುವ ವೆಚ್ಚ, ಉತ್ಪನ್ನದ ಮಟ್ಟ ಅದಕ್ಕೆ ದೊರೆಯಬಹುದಾದ ಬೆಲೆ ಇವುಗಳ ಮೇಲೆ ರೈತನ ಕಸುಬು ಲಾಭದಾಯಕವೇ ಇಲ್ಲವೇ ಎಂಬುದು ನಿರ್ಧಾರವಾಗುತ್ತದೆ. ಕೃಷಿ ಕೂಲಿಯನ್ನು ಹಣ, ಧಾನ್ಯಗಳ ರೂಪದಲ್ಲಿ ಕೊಡುವುದರಿಂದ ಸಮಾನ ಕೂಲಿದರಗಳನ್ನು ನಿಗದಿ ಮಾಡುವುದು ಕಷ್ಟ. ಹೀಗಾಗಿ ಕೂಲಿ ದರವನ್ನು ಯಾವ ಆಧಾರವಿಲ್ಲದೆ ಅಧಿಕ ಮಟ್ಟದಲ್ಲಿ ನಿಗದಿ ಮಾಡಿದರೆ ಕೊನೆಯಲ್ಲಿ ಕಾರ್ಮಿಕರಿಗೆ ಬೇಡಿಕೆ ಕಡಿಮೆಯಾಗಿ ತೊಂದರೆಯಾಗುವುದು. ಎಲ್ಲಕ್ಕೂ ಮೇಲಾಗಿ ಕೃಷಿ ಕಾರ್ಮಿಕರು ಅನಕ್ಷರಸ್ಥರು ಅವರಲ್ಲಿ ಸಂಘಟನಾ ಶಕ್ತಿ ಇಲ್ಲ. ಕನಿಷ್ಠ ಕೂಲಿಯನ್ನು ನಿಗದಿ ಮಾಡಿದರೂ ಅನೇಕ ಕಾರ್ಮಿಕರ ಗಮನಕ್ಕೆ ಬರದಿರಬಹುದು. ಕನಿಷ್ಠ ಕೂಲಿಯನ್ನು ಜಾರಿಗೆ ತಂದು ಮೇಲ್ವಿಚಾರಣೆ ನಡೆಸುವುದು ತುಂಬಾ ಅಗಾಧವಾದ ಕೆಲಸ. ಆದಾಗ್ಯೂ ಸರಕಾರ ಶ್ರದ್ಧೆ ವಹಿಸಿ ಮುಂದೆ ಬಂದು ಅವರ ಹಿತವನ್ನು ರಕ್ಷಿಸಲೇಬೇಕು. ಇದು ಸರಕಾರದ ಕರ್ತವ್ಯವೂ ಹೌದು.

ಅಧ್ಯಾಯ - ೨. ಸಾಹಿತ್ಯ ವಿಮರ್ಶೆ
ಹೊಲ-ಗದ್ದೆಗಳಲ್ಲಿ ಕೂಲಿಗಾಗಿ ದುಡಿಯುವ ಭೂ ರಹಿತ ಕೂಲಿಗಾರರಿಗೆ ಕೃಷಿ ಕಾರ್ಮಿಕರೆಂದು ಅವರ ಸಂಖ್ಯೆಯು ತೀವ್ರಗತಿಯಲ್ಲಿ ಅಧಿಕವಾಗುತಿದ್ದರೂ ಅವರ ಆರ್ಥಿಕ ಸ್ಥಿತಿಯು ಮಾತ್ರ ಶೋಚನೀಯವಾಗುತ್ತಾ ನಡೆದಿದೆ. ಸರ್ಕಾರವು ಬಹು ಕಾಲದಿಂದಲೂ ಕೈಗಾರಿಕಾ ಕಾರ್ಮಿಕರ ಹಿತರಕ್ಷಣೆಗಾಗಿ ಸಾಕಷ್ಟು ಗಮನ ಕೊಟ್ಟು ಹಲವಾರು ಕಾಯ್ದೆಗಳನ್ನು ಪಾಸು ಮಾಡಿತು. ಆದರೆ ಕೃಷಿ ಕಾರ್ಮಿಕ ಸಂಖ್ಯೆಯು ಏರುತ್ತಿದ್ದರೂ ಅವರ ಹಿತರಕ್ಷಣೆಗಾಗಿ ಇತ್ತೀಚಿನವರೆಗೆ ಸರ್ಕಾರವು ಗಮನವನ್ನೇ ಕೊಟ್ಟಿದ್ದಿಲ್ಲ. ಯಾವ ಕಾಯಿದೆಯನ್ನು ಪಾಸು ಮಾಡಿಲ್ಲ ಎಂದು ತಿಳಿಸಿದ್ದಾರೆ. (ಪ್ರೊ.ಕೆ.ಡಿ.ಬಸವ)
ಕೃಷಿ ಕಾರ್ಮಿಕರನ್ನು ಭಯ ರಹಿತ ಕೃಷಿ ಕಾರ್ಮಿಕರು ಮತ್ತು ಅತಿ ಸಣ್ಣ ಭೂ ಹಿಡುವಳಿ ಇರುವ ಕಾರ್ಮಿಕರು ಎಂಬ ೨ ವರ್ಗಗಳಿವೆ. ಭೂ ರಹಿತ ಕೃಷಿ ಕಾರ್ಮಿಕರು ಬೇರೆ ಯಾವುದೇ ಆದಾಯದ ಮೂಲಗಳು ಇಲ್ಲದಿರುವುದರಿಂದ ಅವರು ಕೂಲಿಗಾಗಿ ಸದಾ ಬೇರೆಯವರ ಭೂಮಿಯಲ್ಲಿ ದುಡಿಯುತ್ತಾರೆ. ಆದರೆ ಅತಿ ಸಣ್ಣ ಭೂ ಹಿಡುವಳಿ ಹೊಂದಿರುವ ರೈತರು ತಮ್ಮ ಭೂಮಿಯಿಂದ ಬರುವ ಆದಾಯ ಜೀವನ ಸಾಗಿಸಲು ಸಾಲದೆ ಬರುವುದರಿಂದ ತಮ್ಮ ಬಿಡುವಿನ ವೇಳೆಯಲ್ಲಿ ಬೇರೆಯವರ ಭೂಮಿಯಲ್ಲಿ ದುಡಿಯುತ್ತಾರೆ. ಮೊದಲ ಕೃಷಿ ಕಾರ್ಮಿಕರ ಸಮೀಕ್ಷಾ ಸಮಿತಿ ಭಾರತದಲ್ಲಿ ಕೃಷಿ ಕಾರ್ಮಿಕರನ್ನು (ಅ) ಹೊಂದಿಕೊಂಡ ಕಾರ್ಮಿಕರು (ಆ) ಸಾಂದರ್ಭಿಕ ಕಾರ್ಮಿಕರೆಂದು ೨ ವಿಧಗಳಾಗಿ ವಿಂಗಡಿಸಲಾಗಿದೆ. ಹೊಂದಿಕೊಂಡ ಕೃಷಿ ಕಾರ್ಮಿಕರು ಸಾಮಾನ್ಯವಾಗಿ ಯಾವುದೇ ಮೌಖಿಕ ಅಥವಾ ಲಿಖಿತ ಒಪ್ಪಂದದ ಆಧಾರದ ಮೇಲೆ ಒಬ್ಬ ರೈತರ ಕುಟುಂಬಕ್ಕೆ ಹೊಂದಿಕೊಂಡಿರುತ್ತಾರೆ. ಅವರು ಖಾಯಂ ಸ್ವರೂಪದ ಕಾರ್ಮಿಕರಾಗಿದ್ದು, ವರ್ಷವೆಲ್ಲ ಉದ್ಯೋಗ ಪಡೆಯುತ್ತಾರೆ ಹಾಗೂ ಅವರು ಬೇರೆಯವರ ಹೊಲದಲ್ಲಿ ಕೆಲಸ ಮಾಡುವಂತಿಲ್ಲ. ಅಲ್ಲದೆ ಅವರು ದೀರ್ಘಕಾಲದ ಕೆಲಸ ಮಾಡಬೇಕು. ಹೊಂದಿಕೊಂಡ ಕಾರ್ಮಿಕವರ್ಗವನ್ನು ಹೊರತು ಪಡಿಸಿ ಉಳಿಯುವ ಎಲ್ಲಾ ಕೃಷಿ ಕಾರ್ಮಿಕರು ಸಾಂದರ್ಭಿಕ ಕಾರ್ಮಿಕ ವರ್ಗದಲ್ಲಿ ಬರುತ್ತಾರೆ. ಈ ವರ್ಗದ ಜನರು ತಮಗಿಷ್ಟ ಬಂದವರ ಹೊಲದಲ್ಲಿ ದುಡಿಯುತ್ತಾರೆ ಹಾಗೂ ಪ್ರತಿದಿನದ ಆಧಾರದ ಮೇಲೆ ಕೂಲಿ ಪಡೆಯುತ್ತಾರೆ. (ಪ್ರೊ. ಎಚ್.ಆರ್. ಕೃಷ್ಣಮೂರ್ತಿ)
ಕೂಲಿಗಾಗಿ ದುಡಿಯುವ ಕೃಷಿ ಕಾರ್ಮಿಕರಲ್ಲಿ ೨ ವಿಧಗಳಿವೆ. ಭೂ ರಹಿತ ಮತ್ತು ಸಣ್ಣ ಭೂಮಿ ಇರುವವರು. ಭಾರತದಲ್ಲಿ ಸುಮಾರು ೭೦ ದಶಲಕ್ಷ ಮಂದಿ ಕೃಷಿ ಕಾರ್ಮಿಕರಿದ್ದಾರೆ ಎಂದು ಅಂದಾಜಿಸಲಾಗಿದೆ. ದ್ವಿತೀಯ ಮಹಾಯುದ್ಧದ ಬಳಕೆ ಕೃಷಿ ಕಾರ್ಮಿಕರ ಸಂಖ್ಯೆ ಅಧಿಕವಾಗುವುದಕ್ಕೆ ಜನಸಂಖ್ಯೆ ಹೆಚ್ಚಳ, ತರಬೇತಿ ರಹಿತ ಕಾರ್ಮಿಕರು, ಗೃಹ ಮತ್ತು ಗ್ರಾಮೀಣ ಕೈಗಾರಿಕೆಗಳ ನಾಶ, ಭೂ ವಿಭಜನೆ ಮತ್ತು ವಿಧ್ರೀಕರಣ ಕೂಡು ಕುಟುಂಬಗಳ ಸಂಖ್ಯೆ ಕಡಿಮೆಯಾಗಿರುವುದು ಅನೇಕ ಕಾರಣಗಳನ್ನು ನೀಡಬಹುದಾಗಿದೆ.
ಕೃಷಿ ಕಾರ್ಮಿಕರು ಬಹುತೇಕ ಅನಕ್ಷರಸ್ಥರು ಜಾತಿವ್ಯವಸ್ಥಗೆ ಕಟ್ಟುಬಿದ್ದವರು, ಅಸಂಘಟಿತ ವರ್ಗದವರು, ಬಂಡವಾಳ ಶಾಹಿಗಳ ಶೋಷಣೆಗೆ ಒಳಗಾದವರಾಗಿದ್ದಾರೆ ಮತ್ತು ಕಡಿಮೆ ಸಂಬಳಕ್ಕೆ ಹೆಚ್ಚು ಸಮಯ ದುಡಿಯುವ ವರ್ಗದವರಾಗಿದ್ದಾರೆ. ಕೃಷಿ ಕಾರ್ಮಿಕರ ಸಂಖ್ಯೆ ಅಧಿಕವಾಗುತ್ತಾ ಹೋಗುತ್ತದೆ. ಇವರ ಜೊತೆಗೆ ಕೃಷಿ ಕಾರ್ಮಿಕರ ಆರ್ಥಿಕ ಪರಿಸ್ಥಿತಿ ಮತ್ತು ಸಾಮಾಜಿಕ ಸ್ಥಾನಮಾನ ಕುಸಿಯುತ್ತಿದೆ. ಕೃಷಿಯು ಋತು ಸಂಭವಿಯಿಂದ ಚಟುವಟಿಕೆಯಿಂದಾಗಿರುವುದರಿಂದ ಅಪೂರ್ಣೋದ್ಯೋಗ ಕಡಿಮೆ. ಕೂಲಿ ದೊರೆಯುವುದರಿಂದ ಕನಿಷ್ಟ ಜೀವನ ಮಟ್ಟವನ್ನು ಕೃಷಿ ಕಾರ್ಮಿಕರು ಸಾಗಿಸುತ್ತಿದ್ದಾರೆ.
ಭಾರತದ ಕೃಷಿ ಕಾರ್ಮಿಕರು ಬಹುತೇಕವಾಗಿ ಹರಿಜನ, ಗಿರಿಜನ ಮತ್ತು ಹಿಂದುಳಿದ ವರ್ಗದವರಾಗಿರುವುದರಿಂದ ನಿಕೃಷ್ಟ ಸಾಮೂಹಿಕ ಜೀವನವನ್ನು ಸಾಗಿಸುತ್ತಿದ್ದಾರೆ. ಕೃಷಿ ಕಾರ್ಮಿಕರ ಸ್ಥಿತಿಯ ಸುಧಾರಣೆಗೆ ಸಂಬಂಧ ಪಟ್ಟಂತೆ ಜೀತ ಪದ್ಧತಿ ಕೃಷಿ ಕಾರ್ಮಿಕರಿಗೆ ಪುನರ್ವಸತಿ, ಗೃಹ ಮತ್ತು ಗ್ರಾಮೀಣ ಕೈಗಾರಿಕೆಗಳ ಹೆಚ್ಚಳ, ಸಹಕಾರಿ ಕೃಷಿ ಕ್ರಮವನ್ನು ಅನುಷ್ಠಾನಕ್ಕೆ ತರುವುದು ದುಡಿಮೆಯ ಅವಧಿಯನ್ನು ೮ ಗಂಟೆಗಳಿಗೆ ಸೀಮಿತಗೊಳಿಸುವುದು. ಕನಿಷ್ಠ ವೇತನವನ್ನು ನಿಗಧಿಗೊಳಿಸುವುದರಿಂದ ಅವರ ಪರಿಸ್ಥಿತಿ ಸುಧಾರಿಸಬಹುದು. (ಎಂ.ಎಸ್.ಕಲ್ಲೂರು)
ಗ್ರಾಮೀಣ ವಲಯದಲ್ಲಿ ಕೃಷಿ ಕಾರ್ಮಿಕರು ಅತ್ಯಮತ ಮುಖ್ಯವಾದ ಒಂದು ವರ್ಗದ ಜನರಾಗಿದ್ದಾರೆ. ಇವರೂ ಸಹ ಕೃಷಿಯಲ್ಲಿ ನಿರತರಾಗಿರುವ ಜನರಾಗಿರುವರು. ಕೃಷಿ ಕಾರ್ಮಿಕರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ತೀರಾ ಹಿಂದುಳಿದ ವರ್ಗದವರಾಗಿರುತ್ತಾರೆ. ಇವರು ದಾರುಣ ಬಡತನದಲ್ಲಿ ಜೀವಿಸುತ್ತಿದ್ದು ಗ್ರಾಮೀಣ ಅರ್ಥ ವ್ಯವಸ್ಥೆಯಲ್ಲಿ ನಿರ್ಲಕ್ಷಕ್ಕೆ ಒಳಗಾಗಿರುವವರು ಕೃಷಿ ಉತ್ಪಾದನೆಗೆ ಕೃಷಿ ಕಾರ್ಮಿಕರು ಅವಶ್ಯಕವಾದ ವರ್ಗದ ಜನರಾಗಿರುತ್ತಾರೆ.
ಸಮಸ್ಯೆಯ ತೀವ್ರತೆ ನಿಖರವಾದ ಸಂಖ್ಯೆ ಅವರ ಆದಾಯ ಜೀವನ ಮಟ್ಟ ಮೇಲಾದ ವಿಷಯಗಳ ಬಗೆಗೆ ಅಂಕಿ ಸಂಖ್ಯೆಗಳ ತೀವ್ರ ಕೊರತೆ ಇದೆ. ಕೆಲವು ಸಮಿತಿಗಳು ಅಯೋಗಗಳ ವರದಿಗಳ ರೂಪದಲ್ಲಿ ಸ್ವಲ್ಪ ಮಾಹಿತಿ ಲಭ್ಯವಾಗುತ್ತದೆ. ೧೯೬೦ರಲ್ಲಿ ಪ್ರಕಟಿಸಲಾದ ೨ನೇಯ ಕೃಷಿ ಕಾರ್ಮಿಕರ ಪರಿಶೋಧನಾ ಸಮಿತಿಯ ವರದಿಯ ಪ್ರಕಾರ ಒಟ್ಟು ಗ್ರಾಮೀಣ ಕುಟುಂಬಗಳಲ್ಲಿ ಶೇ.೨೫ರಷ್ಟು ಕೃಷಿ ಕಾರ್ಮಿಕರು ಈ ವರದಿಯ ಮೇರೆಗೆ ಗ್ರಾಮೀಣ ಕೆಲಸಗಾರರಲ್ಲಿ ಶೇ.೮೫ರಷ್ಟು ಅನಿಯಮಿತ ಕಾರ್ಮಿಕರಾಗಿದ್ದು ತಮ್ಮನ್ನು ನೇಮಿಸಿಕೊಳ್ಳಲು ಇಚ್ಛಿಸುವ ಯಾವುದೇ ಕೃಷಿಕರಿಗಾಗಿ ಕೆಲಸ ಮಾಡುವ ವರ್ಗದವರಾಗಿರುತ್ತಾರೆ. ಉಳಿದ ಶೇ.೧೫ರಷ್ಟು ಜನರು ಮಾತ್ರ ನಿರ್ದಿಷ್ಟ ಭೂ ಮಾಲೀಕರ ಜಮೀನಿನಲ್ಲಿ ಕೆಲಸ ಮಾಡುವವರಾಗಿರುತ್ತಾರೆ. ಸುಮಾರು ಶೇ.೫೦ರಷ್ಟು ಜನ ಸ್ವಲ್ಪವೂ ಭೂಮಿಯನ್ನು ಹೊಂದಿರುವುದಿಲ್ಲ. ಉಳಿದ ಕೃಷಿ ಕಾರ್ಮಿಕರು ತೀರಾ ಚಿಕ್ಕ ಪ್ರಮಾಣದ ಜಮೀನನ್ನು ಹೊಂದಿರುತ್ತಾರೆ. ಬಹುತೇಕ ಕೃಷಿ ಕಾರ್ಮಿಕರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೇ ಹಿಂದುಳಿದ ವರ್ಗಗಳಿಗೆ ಸೇರಿದ ಜನರಾಗಿರುತ್ತಾರೆ. ಒಂದು ಅಂದಾಜಿನ ಪ್ರಕಾರ ಶೇ.೭೫ರಿಂದ ೮೦ರಷ್ಟು ಕೃಷಿ ಕಾರ್ಮಿಕರು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದಾರೆ. (ಎಚ್.ಆರ್.ಕೃಷ್ಣಯ್ಯಗೌಡ)
ಕೃಷಿ ಕಾರ್ಮಿಕರ ಕೂಲಿಯ ಮೇಲೆ ಹೆಚ್ಚಿನ ಗಮನ ಹರಿಸಿದ್ದಾರೆ. ಕೂಲಿ ಎಂದರೆ ಆ ದಿನದ ಕೊನೆಯಲ್ಲಿ ಅಥವಾ ವಾರದ ಕೊನೆಯಲ್ಲಿ ಶ್ರಮಿಕನಿಗೆ ಕೊಡುವ ಸಂಭಾವನೆ ವಸ್ತುಗಳ ಉತ್ಪಾದಿಸಲು ಶ್ರಮಕ್ಕೆ ಕೊಡುವ ಪ್ರತಿಫಲವೇ ಕೂಲಿ. ಕಾರ್ಮಿಕರು ತಮ್ಮ ಶಕ್ತಿ, ಸಾಮರ್ಥ್ಯಗಳನ್ನು ಮಾಲಿಕನಿಗೆ ಒಪ್ಪಿಸಿ ಅದಕ್ಕೆ ಪ್ರತಿಫಲವಾಗಿ ಸಂಭಾವನೆ ಪಡೆಯುವರು. ಕಾರ್ಮಿಕರ ದುಡಿಮೆಯಿಂದ ಲಭ್ಯವಾದ ಉತ್ಪನ್ನದ ಮೊತ್ತಕ್ಕೆ ಅನುಗುಣವಾಗಿ ಅವರಿಗೆ ಕೂಲಿಯನ್ನು ನಿರ್ಧರಿಸಲಾಗುವುದು. ಕೂಲಿಯನ್ನು ಜೀತ ವೇತನ ಎಂದು ಕರೆಯುತ್ತಾರೆ. ಕೃಷಿ ಕೂಲಿ ಎಂದು ಕಾರ್ಮಿಕ ತನ್ನ ಶ್ರಮ ಸಲ್ಲಿಸಿದ್ಧಕ್ಕಾಗಿ ಪಡೆಯುವ ಸಂಭಾವನೆ.
ಕೃಷಿ ಕೂಲಿಯನ್ನು ಕಾರ್ಮಿಕರುಗಳಿಗೆ ಪಾವತಿ ಮಾಡುವಲ್ಲಿ ೨ ಪದ್ಧತಿಗಳು ಬಳಕೆಯಲ್ಲಿವೆ.
೧.ದಿನಗೂಲಿ : ಕೆಲಸ ಮಾಡುವ ಕಾಲಕ್ಕನುಗುಣವಾಗಿ ಕೊಡುವ ಕೂಲಿ
೨.ಗುತ್ತಿಗೆ ಕೂಲಿ: ಮಾಡಬೇಕಾದ ಕೆಲಸವನ್ನು ಗುತ್ತಿಗೆ ಕೊಟ್ಟು ಅದಕ್ಕೆ ತಕ್ಕಂತೆ ಕೂಲಿಯನ್ನು ಪಾವತಿ ಮಾಡುವುದು.
ಕಾಲಕ್ಕನುಗುಣ ಕೂಲಿ ಪದ್ಧತಿಯಲ್ಲಿ ಕೃಷಿ ಕಾರ್ಮಿಕರನ ಕೂಲಿ ಅವನು ಮಾಡಿದ ಕೆಲಸದ ಪ್ರಯಾಣವನ್ನಾಗಲೀ, ಕೆಲಸದ ಗುಣಮಟ್ಟವನ್ನಾಗಲೀ ಅವಲಂಭಿಸಿರುವುದಿಲ್ಲ. ಇಲ್ಲಿ ಕೃಷಿ ಕೂಲಿ ಕಾರ್ಮಿಕರ ಕೆಲಸದಲ್ಲಿ ನಿರತನಾಗಿದ್ದ ಕಾಲವನ್ನು ಅವಲಂಭಿಸಿರುತ್ತದೆ. ಆದರೆ ಈ ಪದ್ಧತಿಯಲ್ಲಿ ಕಾರ್ಮಿಕನ ಮೇಲೆ ಮೇಲುಸ್ತುವಾರಿ ಅಗತ್ಯ. (ಡಿ.ವೆಂಕಟರಾವ್)
ಗ್ರಾಮೀಣ ಭಾರತದಲ್ಲಿ ಬಡತನ ಮತ್ತು ಉದ್ಯೋಗ ವರ್ಗಗಳ ಸಂಬಂಧ ವಿಮರ್ಶಾತ್ಮಕ ವಿವರಣೆಯನ್ನು ನೀಡುತ್ತಾರೆ. ಕೃಷಿ ಮತ್ತು ಗ್ರಾಮೀಣ ಉದ್ಯೋಗ ಮಟ್ಟದ ಬೆಳವಣಿಗೆಯು ಹಸಿರು ಕ್ರಾಂತಿಯ ಫಲಿತಾಂಶವಾಗಿದೆ. ೧೯೭೩ರಿಂದ ೭೮ರ ಅವಧಿಯಲ್ಲಿ ಶೇ.೨.೩ ರಷ್ಟಿದ್ದು ಕೃಷಿ ವಾರ್ಷಿಕ ಉದ್ಯೋಗ ಬೆಳವಣಿಗೆ ೧೯೮೩-೮೮ರ ಅವಧಿಗೆ ಶೇ.೦.೭ರಷ್ಟಕ್ಕೆ ಇಳಿಯಿತು. ಗ್ರಾಮೀಣ ಉದ್ಯೋಗ ಬೆಳವಣಿಗೆಯು ಶೇ.೨.೫ರಿಂದ ಶೇ.೧ರಷ್ಟು ೧೯೮೩-೮೮ ಅವಧಿಯಲ್ಲಿ ಇಳಿಯಿತು. ಗ್ರಾಮೀಣ ಉದ್ಯೋಗ ಮಟ್ಟದಲ್ಲಿ ಇಳಿತ ಕಂಡರೂ ನಿರುದ್ಯೋಗಕ್ಕೆ ಸಂಬಂಧಿಸಿದಂತೆ ಬ್ಯಾಕ್‌ಲಾಗ್‌ನ ಮಟ್ಟ ಈ ಅವಧಿಯಲ್ಲಿ ಅಧಿಕವಾಯಿತು. (ಸಿ.ಹೆಚ್.ಹನುಂತರಾವ್)
ಕರ್ನಾಟಕ ರಾಜ್ಯದ ಬೆಳಗಾಂ ಜಿಲ್ಲೆಯಲ್ಲಿ ಅವರು ನಡೆಸಿದ ಕೃಷಿ ಕಾರ್ಮಿಕರು ಮತ್ತು ಉದ್ಯೋಗದ ಮೇಲಿನ ಅಧ್ಯಯನದಲ್ಲಿ ಹೊಸ ಬೆಳೆ ವಿಧಾನಗಳಿಂದ ಕೃಷಿ ಸ್ವರೂಪದಲ್ಲಿ ಗಮನಾರ್ಹವಾದ ಮತ್ತು ಗುರುತಿಸಬಹುದಾದ ಬೆಳವಣಿಗೆಯನ್ನು ತೋರಿಸುತ್ತಾರೆ. ಕಳೆದ ೨ ದಶಕಗಳಿಗಿಂತ ಉದ್ಯೋಗದಲ್ಲಿ ಹೆಚ್ಚಿನ ಬೆಳವಣಿಗೆ ಮತ್ತು ವಿಸ್ತಾರತೆ ಉಂಟಾಗಿದೆ. ಇದನ್ನು ವರ್ಷದ ೨೧೦ ರಿಂದ ೨೫೦ ದಿನಗಳ ಅವಧಿಯಲ್ಲಿ ಗಮನಿಸಬಹುದಾಗಿದೆ. ಉಳುವುದು, ನೀರುಣಿಸುವುದು, ಕಳೆ ತೆಗೆಯುವುದು, ಕೊಯ್ಲಿನ ಸಂದರ್ಭದಲ್ಲಿ ಗಂಡಸರು ಮತ್ತು ಹೆಂಗಸರಿಬ್ಬರು ಕೆಲಸ ಮಾಡುವ ಕಾರ್ಮಿಕರಾಗಿರುತ್ತಾರೆ.
ತಮ್ಮ ಮದ್ರಾಸ್ ಪ್ರಾಂತ್ಯದ ಕೃಷಿ ಕಾರ್ಮಿಕರ ಉದ್ಯೋಗ ಮತ್ತು ನಿವ್ವಳ ಆದಾಯ ಎಂಬ ಅಧ್ಯಯನದಲ್ಲಿ ತಮಿಳುನಾಡಿನ ಕೃಷಿ ಕಾರ್ಮಿಕರ ಉದ್ಯೋಗ ಕೂಲಿಗಳು ಮತ್ತು ಆದಾಯಗಳಿಗೆ ಸಂಬಂಧಿಸಿದಂತೆ ವಿಶ್ಲೇಷಣೆ ಮಾಡುತ್ತಾರೆ. ಕೃಷಿ ಕಾರ್ಯಾಚರಣೆಯಲ್ಲಿ ಮಹಿಳೆಯರು ಮತ್ತು ಮಕ್ಕಳ ಸರಾಸರಿ ಕೂಲಿದರಗಳು ಗಂಡಿಗಿಂತ ಕಡಿಮೆ ಇವೆ. ಕೃಷಿ ಕಾರ್ಯಾಚರಣೆಗೆ ಸಂಬಂಧ ಕೃಷಿ ಕಾರ್ಮಿಕರು ಹೆಚ್ಚಿನ ಕೂಲಿಗಳನ್ನು ಪಡೆಯುತ್ತಾರ. ಕೂಲಿಗಳ ವಿತರಣೆ ಮುಖ್ಯವಾಗಿ ನಗದು ರೂಪದಲ್ಲಿರುತ್ತದೆ. ಕೊಯ್ಲಿನ ಸಂದರ್ಭದಲ್ಲಿ ಕೂಲಿಗಳು ಹಲವು ವಿಧಿಗಳಿಂದ ಪಾವತಿಸಲ್ಪಡುತ್ತವೆ.
೧೯೫೦-೫೧ರಲ್ಲಿ ಪ್ರಥಮ ಕೃಷಿ ಕಾರ್ಮಿಕರ ವಿಚಾರಣಾ ಸಮಿತಿಯು ಕೃಷಿ ಕಾರ್ಮಿಕರ ವ್ಯಾಖ್ಯೆಯನ್ನು ಈ ರೀತಿಯಾಗಿ ನೀಡಿತು. ಹಿಂದಿನ ವರ್ಷದಲ್ಲಿ ಒಟ್ಟು ಕೆಲಸ ಮಾಡಿದ ದಿನಗಳ ಪೈಕಿ ಪ್ರತಿಶತ ೫೦ಕ್ಕಿಂತ ಹೆಚ್ಚು ದಿನಗಳವರೆಗೆ ಕೃಷಿ ಚಟುವಟಿಕೆಯಲ್ಲಿ ಕೂಲಿಯ ಆಳುಗಳಾಗಿ ಕೆಲಸ ಮಾಡಿದವರು ಕೃಷಿ ಕಾರ್ಮಿಕರಾಗಿದ್ದಾರೆ.
೧೯೫೬-೫೭ರ ಕೃಷಿ ಕಾರ್ಮಿಕರ ವಿಚಾರಣಾ ಸಮಿತಿಯು ಆದಾಯದ ಆಧಾರದ ಮೇಲೆ ಕೃಷಿ ಕಾರ್ಮಿಕರನ್ನು ಯಾರೆಂಬುದನ್ನು ಗುರುತಿಸಿತು. ಅದರ ಪ್ರಕಾರ ಹಿಂದಿನ ವರ್ಷದಲ್ಲಿ ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳಿಂದ ಹಚ್ಚಿನ ಪ್ರಮಾಣದ ಆದಾಯ ಪಡೆದವರು ಕೃಷಿ ಕಾರ್ಮಿಕರಾಗಿದ್ದಾರೆ.
೧೯೩೯ರ ಕಾರ್ಮಿಕರ ಕಲ್ಯಾಣ ಸಮಿತಿಯ ಪ್ರಕಾರ ಕೃಷಿ ಹಾಗೂ ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳಿಂದ ಪಡೆಯುವ ಕೂಲಿಯ ಆದಾಯವು ಉಪಜೀವನದ ಮುಖ್ಯ ಸಾಧನವಾಗಿರುವ ಕಾರ್ಮಿಕರೂ ಕೃಷಿ ಕಾರ್ಮಿಕರಾಗಿದ್ದಾರೆ.
ಆದ್ದರಿಂದ ಕೃಷಿ ಕಾರ್ಮಿಕರ ವ್ಯಾಖ್ಯೆಯನ್ನು ಈ ರೀತಿಯನ್ನು ಕೊಡಬಹುದು. ತಮ್ಮ ಆದಾಯದ ಬಹುಭಾಗವನ್ನು ಬೇರೆಯವರ ಜಮೀನಿನಲ್ಲಿ ದುಡಿದು ಪಡೆಯುವ ಕಾರ್ಮಿಕರೆಲ್ಲರೂ ಕೃಷಿ ಕಾರ್ಮಿಕರಾಗಿದ್ದಾರೆ. ಅವರು ಬೇರೆಯವರ ಜಮೀನಿನಲ್ಲಿ ವರ್ಷದಲ್ಲಿ ಅರ್ಧಕ್ಕಿಂತಲೂ ಹೆಚ್ಚಿನ ಅವಧಿಯವರೆಗೆ ದುಡಿಯುವವರಾಗಿರಬೇಕು.

ಅಧ್ಯಾಯ - ೩. ಸಂಶೋಧನಾ ವಿಧಾನ
ಅಧ್ಯಯನ ಶಾಸ್ತ್ರವೆನಿಸಿಕೊಳ್ಳಬೇಕಾರೆ ಅದು ವೈಜ್ಞಾನಿಕ ವಿಧಾನವನ್ನು ಅನುಸರಿಸಬೇಕಾಗುವುದು. ಎ.ಡಬ್ಲ್ಯೂ.ಗಿಲೇನ್ ಹೇಳಿರುವಂತೆ ವಿಜ್ಞಾನವೆಂಬುದು ಸಂಶೋಧನೆಯ ಒಂದು ವಿಧಾನವಾಗಿರುತ್ತದೆ. ವಿಜ್ಞಾನದ ಪರಮಗುರಿ ಸತ್ಯಾನ್ವೇಷಣೆ ಅಥವಾ ಜ್ಞಾನ ಸಂಗ್ರಹಣೆಯಾದರೂ, ಅದನ್ನು ಸಾಧಿಸಲು ನಂಬಲರ್ಹವಾದ ಹಾಗೂ ಕ್ರಮಬದ್ಧವಾದ ವಿಧಾನವನ್ನು ಅನುಸರಿಸುವುದು ಅನಿವಾರ್ಯ ವಿಧಾನವನ್ನು ವೈಜ್ಞಾನಿಕ ವಿಧಾನ ಎಂದು ಕರೆದಿದ್ದಾರೆ.
ಪ್ರಸ್ತುತ ಸಂಶೋಧನಾ ಅಧ್ಯಯನವು ಕೃಷಿ ಕಾರ್ಮಿಕರ ಬಗ್ಗೆ ಕುರಿತಾಗಿದೆ. ಇವನ್ನು ಅಲ್ಲಿನ ಕೃಷಿ ಕಾರ್ಮಿಕರಿಂದಲೇ ಮಾಹಿತಿಯನ್ನು ಪಡೆಯಲಾಗಿದೆ.

ಪ್ರಸ್ತುತ ಅಧ್ಯಯನ :
ಸಂಶೋಧನೆಗೆ ಆಯ್ಕೆ ಮಾಡಿಕೊಂಡಿರುವ ಸ್ಥಳ ಬೆಂಗಳೂರು ದಕ್ಷಿಣ ವಲಯದ ಸೋಮನಹಳ್ಳಿ ಗ್ರಾಮ ಪಂಚಾಯ್ತಿ ಅಡಿಯಲ್ಲಿ ಬರುವ ರಾವುಗೋಡ್ಲು ಗ್ರಾಮದಲ್ಲಿ ಈ ಸಂಶೋಧನೆಯನ್ನು ಮಾಡಲಾಗಿದೆ.

ಅಧ್ಯಯನದ ಗುರಿ :
ಭಾರತ ಕೃಷಿ ಪ್ರಧಾನ ರಾಷ್ಟ್ರವಾದ್ದರಿಂದ ಕೃಷಿ ಕಾರ್ಮಿಕ ಆರ್ಥಿಕ ಸ್ಥಿತಿಗತಿ ಅವರ ಕೂಲಿಗಳ ಬಗ್ಗೆ ಮತ್ತು ಅವರ ಸಮಸ್ಯೆಗಳ ನಿವಾರಣೆಗೆ ಕೈಗೊಂಡ ಕ್ರಮಗಳು ಯಾವುದೆಂಬುದನ್ನು ತಿಳಿಯುವ ಗುರಿ ಹೊಂದಲಾಗಿದೆ.

ಅಧ್ಯಯನದ ಅವಶ್ಯಕತೆ ಮತ್ತು ಮಹತ್ವ :
ಭಾರತ ಭವ್ಯ ಸಂಸ್ಕೃತಿ ಹೊಂದಿದೆ ಮತ್ತು ಕೃಷಿ ಪ್ರಧಾನ ರಾಷ್ಟ್ರವಾಗಿದೆ. ೨೦೧೧ರ ಜನಗಣತಿಯ ಪ್ರಕಾರ ಶೇ.೭೨ ರಷ್ಟು ಜನರು ಕೃಷಿಯನ್ನು ಅವಲಂಭಿಸಿದ್ದಾರೆ. ಕೃಷಿ ಕೈಗೊಳ್ಳುತ್ತಿರುವ ಕೃಷಿ ಕಾರ್ಮಿಕರು ಅವರ ಆರ್ಥಿಕ ಸ್ಥಿತಿಗತಿ ಮತ್ತು ಅವರಿಗೆ ಎಲ್ಲಾ ರೀತಿಯ ಸ್ಥಾನಮಾನಗಳನ್ನು ನೀಡುವುದು ಮತ್ತು ಅವರ ಸಮಸ್ಯೆಗಳಿಗೆ ಪರಿಹಾರ ಹುಡುಕುವಲ್ಲಿ ಈ ಸಂಶೋಧನೆ ಮುಖಾಂತರ ಪ್ರಯತ್ನ ಮಾಡಲಾಗಿದೆ.

ಅಧ್ಯಯನದ ಉದ್ದೇಶಗಳು :
೧.ಕೃಷಿ ಕಾರ್ಮಿಕರ ಆರ್ಥಿಕ ಸಾಮಾಜಿಕ, ಸ್ಥಿತಿಗತಿಗಳನ್ನು ತಿಳಿಯುವುದು.
೨.ಕೃಷಿ ಕಾರ್ಮಿಕರು ಅನುಭವಿಸುತ್ತಿರುವ ವಿವಿಧ ಸಮಸ್ಯೆಗಳನ್ನು ತಿಳಿಯುವುದು.
೩.ಹಳ್ಳಿಗಳಲ್ಲಿ ಬಡತನ ನಿವಾರಣೆಗೆ ಸರ್ಕಾರ ಹಮ್ಮಿಕೊಂಡಿರುವ ವಿವಿಧ ಕಾರ್ಯಕ್ರಮಗಳ ಬಗ್ಗೆ ಕೂಲಿ ಕಾರ್ಮಿಕರಲ್ಲಿರುವ ಜಾಗೃತಿ ಮಟ್ಟವನ್ನು ಅರಿಯುವುದು.
೪.ಕೂಲಿ ತಾರತಮ್ಯದ ಬಗ್ಗೆ ತಿಳಿಯುವುದು.

ಅಧ್ಯಯನಕ್ಕೆ ಪ್ರೇರಣೆ :
ಪ್ರಸ್ತುತ ಕೃಷಿ ಕಾರ್ಮಿಕರು ಅನೇಕ ತೊಂದರೆಗಳನ್ನು ಎದುರಿಸುತ್ತಿದ್ದಾರೆ ಮತ್ತು ಅಸಂಘಟಿತರಾಗಿದ್ದಾರೆ. ಅವರ ಜೀವನ ತುಂಬಾ ಹೀನಾಯ ಸ್ಥಿತಿ ತಲುಪಿದೆ ಮತ್ತು ಅವರು ಕೃಷಿ ಕ್ಷೇತ್ರದ ಒಂದು ಪ್ರಮುಖ ಭಾಗವಾಗಿದ್ದಾರೆ.

ಪ್ರಾಕ್ ಕಲ್ಪನೆ :
ಕಾಫೆರವರ ಪ್ರಕಾರ ಊಹೆಗಳು ಎಂದರೆ ಒಂದು ವಿಷಯದ ಬಗ್ಗೆ ಒಂದು ಘಟನೆಯ ಬಗ್ಗೆ ನಾವು ಯಾವುದೇ ಆಧಾರವಿಲ್ಲದೆ ಹೀಗಿರುವುದು ಹೀಗಾಗಬಹುದು ಎಂದು ಮನಸ್ಸಿನಲ್ಲಿ ಮಾಡಿಕೊಳ್ಳುವುದಕ್ಕೆ ಊಹೆ ಎಂದು ಹೆಸರು ಇದು ಸಂಶೋಧಕನಿಗೆ ತಾತ್ಕಾಲಿಕ ಪರಿಹಾರ ಮಾತ್ರ. ಇದು ಸಂಶೋದನೆಗೆ ಸಹಾಯವಾಗುತ್ತದೆ.
ಸಂಶೋಧನಾ ಅಧ್ಯಯನವನ್ನು ಇನ್ನೂ ಪೂರ್ಣವಾಗಿ ಪುರಸ್ಕರಿಸಲ್ಪಟ್ಟಿರುವುದಕ್ಕೆ ಮೊದಲು ಅದರ ಸತ್ಯಾಸತ್ಯತೆಯ ನಿಷ್ಕರ್ಷ ಇನ್ನೂ ಆಗದೆ ಇರುವುದರಿಂದ ಅದರ ಸತ್ಯಾಂಶವು ಹೀಗಿರಬಹುದೆಂದು ಸಂಶೋಧಕನು ಮಾಡುವ ಒಂದು ಕಲ್ಪನೇ ಪ್ರಾಕ್ ಕಲ್ಪನೆ. ಇದು ತಾತ್ಕಾಲಿಕವಾಗಿ ಒಪ್ಪಿಕೊಂಡು ಹಾಗೂ ಅತಿ ಎಚ್ಚರಿಕೆಯಿಂದ ಸಿದ್ಧಪಡಿಸಿದ ಹೇಳಿಕೆಯಂತಿದ್ದು ಮಾಹಿತಿ ಆಧಾರದ ಮೇಲೆ ಪರೀಕ್ಷೆಗಳಿಗೊಳಪಡಿಸುವುದು ಅದರ ಮಾಹಿತಿಯ ನೆಲೆಯನ್ನು ಪ್ರಾಕ್ ಕಲ್ಪನೆಯು ಪೂರ್ಣವಾಗಿ ಪುರಸ್ಕರಿಸಲ್ಪಟ್ಟು ದೃಢಗೊಳಿಸಬಹುದು.

ಸಂಶೋಧನಾ ವಿನ್ಯಾಸ :
ಸಂಶೋಧನಾ ಕಾರ್ಯದಲ್ಲಿ ಸಂಶೋಧನಾ ವಿನ್ಯಾಸವೆಂಬುದು ಬಹಳ ಮುಖ್ಯವಾದ ಹಂತವಾಗಿರುತ್ತದೆ. ಸಂಶೋಧಕನು ಸಂಶೋಧನೆಯ ಉದ್ದೇಶವನ್ನು ಪೂರೈಸುವುದಕ್ಕೋಸ್ಕರ ತನ್ನ ಸಂಶೋಧನಾ ಪ್ರಕ್ರಿಯೆಯನ್ನು ಸಮಗ್ರವಾಗಿ ಆಲೋಚನೆ ಮಾಡಿ ತಯಾರಿಸಿದ ಯೋಜನೆಯನ್ನು ಸಂಶೋಧನಾ ವಿನ್ಯಾಸವೆಂದು ಕರೆಯಲಾಗುತ್ತದೆ.
ಅಧ್ಯಯನಕ್ಕೆ ಆಯ್ಕೆ ಮಾಡಿದ ವಿಷಯಕ್ಕೆ ಹೊಂದುವಂತಹ ಸಂಶೋಧನಾ ತಂತ್ರಗಳನ್ನು ಬಳಸುವುದಕ್ಕೆ ಸಂಶೋಧನಾ ವಿನ್ಯಾಸವು ಸಹಕಾರಿಯಾಗಿದೆ.
೧.ಸಮಸ್ಯೆಯ ವ್ಯಾಪ್ತಿಯನ್ನು ಮತ್ತು ಸ್ವರೂಪವನ್ನು ಸೃಷ್ಟಿಪಡಿಸುವುದು.
೨.ತರ್ಕಬದ್ಧವಾದಂತಹ ಪ್ರಾಕ್ ಕಲ್ಪನೆಯಿಂದ ಪ್ರಾರಂಭವಾಗುತ್ತದೆ.

ಸಂಶೋಧನಾ ವಿನ್ಯಾಸದ ಪ್ರಕಾರಗಳು :
೧.ಪರಿಶೋಧನಾತ್ಮಕ ಅಧ್ಯಯನಗಳ ಸಂಬಂಧಿಸಿದ ವಿನ್ಯಾಸ :
ಇದರ ಮುಖ್ಯ ಉದ್ದೇಶವೆಂದರೆ ಸಮಸ್ಯೆಯೊಂದರ ಕುರಿತಾಗಿ ಬಹಳ ಆಳವಾದ ಹಾಗೂ ನಿಖರವಾದ ಸಂಶೋಧನೆ ಮಾಡಲು ಅದನ್ನು ಸ್ಪಷ್ಟ ಶಬ್ದಗಳಲ್ಲಿ ಸಾರಿ ಹೇಳುವುದು ಅಥವಾ ಅದಕ್ಕೆ ಸಂಬಂಧಿಸಿದ ಕಾರ್ಯ ನಿರತ ಪ್ರಾಕ್ ಕಲ್ಪೆನಯತ್ತ ಸ್ಥಾಪಿಸುವುದು ಇದರ ಉದ್ದೇಶವಾಗಿದೆ.
೨.ಪ್ರಾಯೋಗಿಕ ಅಧ್ಯಯನ :
ಬದಲಾಗುವ ವಿಷಯಗಳು ಅಸಾಮಾನ್ಯವಾಗಿ ಕಲ್ಪಿತವಾದ ಸಿದ್ಧಾಂತಗಳ ಗುಣಗಳಿಂದ ಅಧ್ಯಯನ ಮಾಡುವ ಕ್ರಮವೇ ಪ್ರಾಯೋಗಿಕ ಅಧ್ಯಯನ. ಇದರಲ್ಲಿ ಸಂಶೋಧನೆಯ ಅಸಾಮಾನ್ಯ ಸಂಬಂಧವನ್ನು ಪರೀಕ್ಷಿಸುವಲ್ಲಿ ಪ್ರಾಯೋಗಿಕವಾಗಿ ಕಂಡುಬಂದಾಗ ಬಹಳ ಪರಿಣಾಮಕಾರಿಯಾಗಿ ಪ್ರಾಯೋಗಿಸಲ್ಪಟ್ಟಿದೆ.
೩.ವಿವರಣಾತ್ಮಕ ಸಂಶೋಧನಾ ವಿನ್ಯಾಸ :
ಇದನ್ನು ಸ್ವಭಾವ ನಿರೂಪಕ ಸಂಶೋಧನಾ ವಿನ್ಯಾಸವೆಂದು ಕರೆಯುತ್ತೇವೆ. ಒಂದು ವಿಷಯದ ಬಗ್ಗೆ ಉದ್ದೇಶಪೂರ್ವಕವಾದ ಸಂಬಂಧವನ್ನು ಸಾಧಿಸುವುದು ನಿಶ್ಚಿತ ಮತ್ತು ಸಂಶೋಧನೆಯನ್ನು ಪಡೆಯುವುದಕ್ಕಾಗಿ ಪೂರ್ವ ಸಿದ್ಧಾಂತಗಳನ್ನು ರಚಿಸಿಕೊಂಡು ಕೈಗೊಳ್ಳುವ ಅಧ್ಯಯನಕ್ಕೆ ವಿವರಣಾತ್ಮಕ ಸಂಶೋಧನಾ ವಿನ್ಯಾಸವೆಂದು ಕರೆಯಲಾಗಿದೆ.

ಪ್ರಸ್ತುತ ಅಧ್ಯಯನದಲ್ಲಿ ವಿವರಣಾತ್ಮಕ ಸಂಶೋಧನಾ ವಿನ್ಯಾಸವನ್ನು ಅಳವಡಿಸಿಕೊಂಡು ಕೃಷಿ ಕಾರ್ಮಿಕರು ಬೆಂಗಳೂರು ದಕ್ಷಿಣ ವಲಯದ ಸೋಮನಹಳ್ಳಿ ಗ್ರಾಮ ಪಂಚಾಯ್ತಿ ಅಡಿಯಲ್ಲಿ ಬರುವ ರಾವುಗೋಡ್ಲು ಗ್ರಾಮದಲ್ಲಿ ಈ ಸಂಶೋಧನೆಯನ್ನು ಮಾಡಲಾಗಿದೆ.

ಮಾದರಿ ಆಯ್ಕೆ ತಂತ್ರಗಳು :
ಮಾದರಿ ವಿಧಾನವು ಸಾಮಾಜಿಕ ಸಂಶೋಧನೆಯಲ್ಲಿ ಅನುಸರಿಸಲಾಗುತ್ತಿರುವ ಮುಖ್ಯ ಕ್ರಮಗಳಲ್ಲೊಂದು. ಸಂಶೋಧನಾ ಕ್ಷೇತ್ರವು ಬಹಳ ವಿಶಾಲವಾದುದರಿಂದ ಅದನ್ನು ಒಂದೇ ಬಾರಿಗೆ ಅಧ್ಯಯನ ಮಾಡುವುದು ಬಹಳ ಕಷ್ಟಕರವಾದ್ದರಿಂದ ಆ ಕ್ಷೇತ್ರದ ಸಾಮಾನ್ಯ ಗುಣಗಳನ್ನು ಹೊಂದಿರುವುದರೊಂದಿಗೆ ಅದನ್ನು ಪ್ರತಿನಿಧಿಸಬಹುದಾದಂತಹ ಅದರ ಭಾಗವೊಂದನ್ನು ಅಧ್ಯಯನ ದೃಷ್ಠಿಯಿಂದ ಆಯ್ದುಕೊಳ್ಳುವುದಕ್ಕೆ ನಮೂನೆಯ ವಿಧಾನವೆಂದಿದ್ದಾರೆ.
ಗೂಡೆ ಮತ್ತು ಹ್ಯಾಟ್ ಎಂಬುವರು ಹೇಳಿರುವಂತ ನಮೂನೆ ಎಂಬುದು ಅದರ ಹೆಸರೇ ಸೂಚಿಸುವಂತೆ ದೊಡ್ಡ ವಸ್ತುವಿನ ಸಣ್ಣ ಪ್ರತಿ ರೂಪವಿದ್ದಂತೆ, ನಮೂನೆಯಲ್ಲಿ ಪ್ರಮುಖವಾಗಿ ೨ ವಿಧಗಳಿವೆ.
೧.ಸಂಭವನೀಯತೆಯ ವಿಧಾನ
೨.ಅಸಂಭವನೀಯತೆಯ ವಿಧಾನ
ಸಂಭವನೀಯತೆಯ ವಿಧಾನ :
ಇದರಲ್ಲಿ ನಮೂನೆಯನ್ನು ಆಯ್ಕೆ ಮಾಡುವಾಗ ಅಂದಾಜಿನಿಂದ ಘಟಕಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಒಂದು ಜನ ಸಮುದಾಯದಿಂದ ನಮೂನೆಯನ್ನು ಆಯ್ಕೆ ಮಾಡುವಾಗ ಆ ಜನ ಸಮುದಾಯವನ್ನು ಅಂದಾಜಿನ ಮೇಲೆ ಅಥವಾ ಸರಾಸರಿ ಪ್ರತಿನಿಧಿಯನ್ನು ಆಯ್ಕೆ ಮಾಡಿಕೊಂಡ ಸಮಸ್ಯೆಯನ್ನು ರೂಪಿಸಬಹುದಾಗಿದೆ.
ಎ) ಸರಳ ಯಾದೃಚ್ಛಿಕ ನಮೂನೆ :
ಈ ಪದ್ಧತಿಯಲ್ಲಿ ನಮೂನೆಯ ಒಂದು ದೊಡ್ಡ ಸಂಗ್ರಹವನ್ನು ಪಡೆದು ಆಯ್ಕೆ ಮಾಡುವುದನ್ನು ಅಂದರೆ ಮಾಹಿತಿಯ ದೊಡ್ಡ ವೃತ್ತದಿಂದ ಚಿಕ್ಕ ವೃತ್ತವನ್ನು ರಚಿಸುವಂತೆ ಹೇಳಬಹುದು. ಇದನ್ನು ಸರಳ ಸಗಟು ನಮೂನೆ ಎಂದು ಕರೆಯುತ್ತೇವೆ. ಇದು ಅತಿ ದೊಡ್ಡ ಸಮುದಾಯಕ್ಕೆ ಉಪಯುಕ್ತವಾಗಿದೆ.
ಬಿ) ವಿಭಾಗಿತ ಯಾದೃಚ್ಛಿಕ ನಮೂನೆ :
ಈ ನಮೂನೆಯಲ್ಲಿ ದೊಡ್ಡ ಪ್ರಮಾಣದ ಆಯ್ಕೆ ಮಾಡಲಾದ ಘಟಕಗಳಾಗಿ ವಿಂಗಡಿಸಬಹುದು. ಪ್ರತಿಯೊಂದು ವಿಂಗಡಿಸಿದ ಚಿಕ್ಕ ಗುಂಪಿನಿಂದ ಪ್ರತ್ಯೇಕವಾಗಿಯೇ ನಮೂನೆಯಾಗಿ ಘಟಕಗಳನ್ನು ಆಯ್ದುಕೊಂಡರೆ ಇದು ವಿಭಾಗಿತ ನಮೂನೆಯಾಗುತ್ತದೆ.
ಸಿ) ಗುಚ್ಛ ನಮೂನೆ :
ಸಂಶೋಧನಾ ಕ್ಷೇತ್ರವು ಬಹಳ ವಿಸ್ತಾರವಾಗಿದ್ದು ಹೆಚ್ಚಿನ ಹಣ, ಸಮಯವನ್ನು ನಿರೀಕ್ಷಿಸುವುದರಿಂದ ಅಧ್ಯಯನ ಮಾಡಿದ ಬಿಡಿ ಭಾಗಗಳನ್ನು ಒಟ್ಟುಗೂಡಿಸಿ ಅಧ್ಯಯನವನ್ನು ಕೈಗೊಳ್ಳುವ ವಿಧಾನಕ್ಕೆ ಗುಚ್ಛ ನಮೂನೆ ಎನ್ನುವರು.
ಡಿ) ಬಹುಸ್ಥರ ನಮೂನೆ :
ಆಯ್ಕೆ ಮಾಡಿದ ಸಂಶೋಧನಾ ಕ್ಷೇತ್ರವನ್ನು ಅನೇಕ ಘಟಕಗಳನ್ನಾಗಿ ವಿಂಗಡಿಸಿದ ಘಟ್ಟಗಳಿಂದ ಮಾದರಿಯನ್ನು ಆಯ್ಕೆ ಮಾಡುವ ಕ್ರಮಕ್ಕೆ ಬಹುಸ್ಥರ ನಮೂನೆ ಎನ್ನುವರು.

೨. ಅಸಂಭವನೀಯ ವಿಧಾನ :
ಅಸಂಭವನೀಯತೆಯ ನಮೂನೆಯನ್ನು ನಿರ್ದಿಷ್ಟ ನಮೂನೆಯಂತಲೂ ನಿಕರವಾದ ನಮೂನೆ ಎಂತಲೂ ಕರೆಯುವರು. ಉದ್ದೇಶಿತ ನ್ಯಾಯ ನಿರ್ಧಾರಿತ ಯುಕ್ತ ನಿರ್ಧರಿಸಬಲ್ಲ ಪ್ರಾತಿನಿಧ್ಯದಿಂದ ಕೂಡಿದ ಒಂದು ಸರಿಯಾದ ಅಸಂಭವನೀಯತೆಯ ಪದ್ಧತಿಯಲ್ಲಿ ಪ್ರಮುಖವಾಗಿ ೫ ವಿಧಗಳಿವೆ. ಅವು ಈ ಕೆಳಕಂಡಂತೆ ವಿವರಿಸಲಾಗಿದೆ.
ಎ) ಉದ್ದೇಶಪೂರಿತ ನಮೂನೆ :
ಈ ನಮೂನೆಯನ್ನು ಉದ್ದೇಶಪೂರಿತವಾಗಿ ರಚಿಸಲಾಗಿರುವುದರಿಂದ ಉದ್ದೇಶಪೂರಿತ ನಮೂನೆ ಎನ್ನುವರು.
ಬಿ) ಪಾಲು ನಮೂನೆ :
ಈ ವಿಧಾನದಲ್ಲಿ ಸಂಶೋಧಕನಿಗೆ ಸ್ವಾತಂತ್ರ್ಯವಿರುತ್ತದೆ. ಇಲ್ಲಿ ನಮೂನೆಯನ್ನು ಪಡೆಯಲು ಇಡೀ ಜನಸಮುದಾಯಕ್ಕೆ ಅನೇಕ ಪದರುಗಳಲ್ಲಿ ವಿಂಗಡಿಸಲಾಗುತ್ತದೆ. ಪ್ರತಿಯೊಂದು ಪದರಿಂದಲೂ ಈ ನಮೂನೆಗಾಗಿ ಇಂತಿಷ್ಟು ಘಟಕಗಳನ್ನು ಅಥವಾ ಪಾಲನ್ನು ತೆಗೆದುಕೊಳ್ಳಬೇಕೆಂದು ಮೊದಲೇ ನಿರ್ಧರಿಸಲಾಗುವುದು.
ಸಿ) ಪ್ರಾತಿನಿಧಕ ನಮೂನೆ :
ಪ್ರಾತಿನಿಧಕ ನಮೂನೆ ಎಂದರೆ ಸಂಶೋಧಕನು ತನ್ನ ಸ್ವಯಂ ಪ್ರತಿಭೆಯಿಂದ ಮತ್ತು ವ್ಯವಹಾರಿಕ ಬುದ್ಧಿಮತ್ತೆಯಿಂದ ಒಂದು ಜನ ಸಮುದಾಯವನ್ನು ಆಯ್ಕೆ ಮಾಡಿಕೊಳ್ಳುವುದಾಗಿದೆ.
ಡಿ) ಯುಕ್ತಾ ಯುಕ್ತಾ ಪರಿಜ್ಞಾನ ನಮೂನೆ :
ಈ ವಿಧಾನದಲ್ಲಿ ಸಮೀಕ್ಷಕರು ಅಥವಾ ಸಂಶೋಧಕರು ಒಂದು ಜನ ಸಮುದಾಯದಿಂದ ಬೇರೆ ಬೇರೆ ಘಟಕಗಳನ್ನು ಅಂದರೆ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಳ್ಳುವರು. ಆಯ್ದ ಘಟಕಗಳಲ್ಲಿ ಅವುಗಳ ಯುಕ್ತಾ ಯುಕ್ತಗಳನ್ನು ಸರಿಯಾಗಿ ಪರಿಶೀಲಿಸಿ ಈ ಆಯ್ದ ಘಟಕಗಳಲ್ಲಿ ಯುವ ಘಟಕಗಳಿಗೆ ನಮಗೆ ಯೋಗ್ಯವಾಗಿದೆ ಎಂಬುದನ್ನು ಪರೀಕ್ಷಿಸುವರು. ಈ ರೀತಿ ಸಿದ್ಧಪಡಿಸಿದ ನಮೂನೆಗೆ ಯುಕ್ತಾ ಯುಕ್ತ ಪರಿಜ್ಞಾನ ನಮೂನೆ ಎಂದು ಕರೆಯುತ್ತಾರೆ.
ಇ) ಆಕಸ್ಮಿಕ ನಮೂನೆ :
ಈ ಆಕಸ್ಮಿಕ ವಿಧಾನದಲ್ಲಿ ಸಂಶೋಧಕನು ನಮೂನೆಗಳಿಗೆ ಘಟಕಗಳನ್ನು ಆರಿಸುವಾಗ ತಾನು ನೋಡಿದ ಪ್ರತ್ಯಕ್ಷ, ಘಟನೆಗಳ ಸಾಕ್ಷಾಧಾರಗಳನ್ನು ಪ್ರತ್ಯಕ್ಷದರ್ಶಿಗಳಿಂದ ನೇರವಾಗಿ ಪಡೆದು ನಮೂನೆಗಾಗಿ ಘಟಕಗಳನ್ನು ಹುಟ್ಟುಹಾಕುತ್ತಿರುವಾಗ ಆಕಸ್ಮಿಕವಾಗಿ ಬಂದರೆ ತಮ್ಮ ವಿಷಯಕ್ಕೆ ಸಂಬಂಧಿಸಿದ ಸಂಗತಿಗಳು ಕಂಡುಬಂದರೆ ಅದನ್ನೇ ತೆಗೆದುಕೊಳ್ಳುವರು.
ಪ್ರಸ್ತುತ ಅಧ್ಯಯನದಲ್ಲಿ ಸಂಶೋಧಕನು ಸರಳ ಯಾದೃಚ್ಛಿಕ ನಮೂನೆಯನ್ನು ಬಳಸಿಕೊಂಡಿದ್ದಾನೆ. ಅಂದರೆ ತನ್ನ ಸಂಶೋಧನೆಗೆ ಸಂಬಂಧಪಟ್ಟಂತೆ ಕೃಷಿ ಕಾರ್ಮಿಕರಲ್ಲಿ ೩೦ ಪ್ರತಿವಾದಿಗಳನ್ನು ಆಯ್ಕೆ ಮಾಡಿಕೊಂಡು ಪ್ರಸ್ತುತ ಅಧ್ಯಯನ ನಡೆಸಲಾಗಿದೆ.
ಪ್ರಸ್ತುತ ಅಧ್ಯಯನದಲ್ಲಿ ಸಂಶೋಧಕನು ಸರಳ ಯಾದೃಚ್ಛಿಕ ವಿಧಾನವನ್ನು ಬಳಸಿಕೊಂಡಿದ್ದಾನೆ. ಪ್ರಸ್ತುತ ಅಧ್ಯಯನದಲ್ಲಿ ಕೃಷಿ ಕಾರ್ಮಿಕರ ಪೂರ್ವ ಚಿತ್ರಣ ಇರುವುದನ್ನು ಸ್ಮರಿಸಬಹುದು.

ಮಾಹಿತಿ ಸಂಗ್ರಹಣೆಯ ಮೂಲಗಳು :
ಮಾಹಿತಿ ಸಂಗ್ರಹಣೆಯಲ್ಲಿ ಪ್ರಮುಖವಾಗಿ ೨ ವಿಧ ಅವುಗಳೆಂದರೆ;
೧.ಪ್ರಾಥಮಿಕ ಮಾಹಿತಿ ಸಂಗ್ರಹಣೆ
೨.ಮಾಧ್ಯಮಿಕ ಮಾಹಿತಿ ಸಂಗ್ರಹಣೆ

ಸಂದರ್ಶನ ವಿಧಾನ :
ಸಂದರ್ಶನ ಎಂಬುದು ಮುಖಾ ಮುಖಿಯಾದ ಒಂದು ಸಂಭಾಷಣೆ. ಇದರಲ್ಲಿ ಸಂದರ್ಶಕನು ಮಾಹಿತಿದಾರರಿಂದ ಯಾವುದೇ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ಪಡೆಯುವ ಪ್ರಯತ್ನವಿರುತ್ತದೆ. ಅಕ್ಷರಸ್ಥರಲ್ಲದೆ ಅನಕ್ಷರಸ್ಥರಿಂದಲೂ ಮಾಹಿತಿಯನ್ನು ಸಂಗ್ರಹಿಸಲು ಹಾಗೂ ಕೆಲವು ಪ್ರಚಲಿತ ಸಮಸ್ಯೆಗಳ ಬಗ್ಗೆ ಜನರ ಪ್ರತಿಕ್ರಿಯೆಗಳನ್ನು ತಿಳಿದುಕೊಳ್ಳಲು ವ್ಯಕ್ತಿಯೊಬ್ಬನಿಗೆ ಸಂಬಂಧಿಸಿದ ಗತಕಾಲದ ಘಟನೆಗಳನ್ನು ಹಾಗೂ ಅನುಭವಗಳನ್ನು ತಿಳಿದುಕೊಳ್ಳಲು ಸಂದರ್ಶನ ವಿಧಾನ ಬಳಸಿಕೊಳ್ಳಲಾಗುತ್ತದೆ.
ಅವಲೋಕನ :
ಪಿ.ವಿ.ಯಂಗ್ ಪ್ರಕಾರ ತಾನೇತಾನಾಗಿ ಸಂಭವಿಸುವ ಘಟನೆಗಳನ್ನು ಅವು ಘಟಿಸುವ ಸಮಯದಲ್ಲಿಯೇ ನೇರವಾಗಿ ತಮ್ಮ ಕಣ್ಣುಗಳ ಮೂಲಕ ವೀಕ್ಷಿಸುವ ಕ್ರಮಬದ್ಧವಾಗಿ ಹಾಗೂ ಉದ್ದೇಪೂರ್ವಕವಾಗಿ ಅಧ್ಯಯನ ಮಾಡುವ ಕ್ರಮವನ್ನು ಅವಲೋಕನ ಎನ್ನಬಹುದು. ಸಾಮಾನ್ಯವಾಗಿ ಪ್ರತ್ಯೇಕವಾಗಿ ಪರಿಶೀಲನೆ ಮಾಡುವುದರ ಮೂಲಕ ಮಾಹಿತಿ ಸಂಗ್ರಹಿಸುವುದಕ್ಕೆ ಅವಲೋಕನ ಎಂದು ಕರೆಯುತ್ತಾರೆ.
ಸಹಭಾಗಿತ್ವ :
ತೀವ್ರವಾದ, ತೀಕ್ಷ್ಣವಾದ ಸಾಮಾಜಿಕ ವಿಷಯಗಳ ಕ್ರಿಯೆ ಮತ್ತು ಅಂತರ ಕ್ರಿಯೆಗಳನ್ನು ಸಂಶೋಧಿಸಿ ಪರಿಶೋಧಕರನ್ನು ಆ ಸಮಾಜದ ಒಳಹೊಕ್ಕು ಅದರ ಸದಸ್ಯನಾಗಿದ್ದುಕೊಂಡು ಅಂಕಿ-ಅಂಶಗಳನ್ನು ಕಲೆ ಹಾಕುವುದಕ್ಕೆ ಸಂಪೂರ್ಣವಾಗಿ ಪಾಲ್ಗೊಂಡು ವೀಕ್ಷಿಷಿಸುವುದು ಎನ್ನುತ್ತಾರೆ.
ಪ್ರಸ್ತುತ ಅಧ್ಯಯನದಲ್ಲಿ ಪ್ರತಿವಾದಿಗಳಿಂದ ನಡೆದ ಅನುಸೂಚಿಯ ಉತ್ತರಗಳನ್ನು ಕೋಡಿಂಗ್ / ಡಿಕೋಡಿಂಗ್ ಮಾಡಿ ಅದನ್ನೆಲ್ಲಾ ಮಾಸ್ಟರ್ ಷೀಟ್‌ನಲ್ಲಿ ಕ್ರೋಢಿಕರಿಸಿ ಒಟ್ಟು ಉತ್ತರಗಳನ್ನು ಕಂಡು ದತ್ತಾಂಶ ವಿಶ್ಲೇಷಣೆ ಮಾಡಲಾಗಿದೆ.
೨. ಮಾಧ್ಯಮಿಕ ಮಾಹಿತಿ ಸಂಗ್ರಹಣೆ :
ಮಾಧ್ಯಮಿಕ ಮಾಹಿತಿ ಸಂಗ್ರಹಣೆ ಎಂದರೆ ಗ್ರಂಥಾಲಯಗಳಲ್ಲಿ ಲಭ್ಯವಿರುವ ಪುಸ್ತಕಗಳು, ದಿನಪತ್ರಿಕೆಗಳು, ವಾರ ಮತ್ತು ಮಾಸ ಪತ್ರಿಕೆಗಳು ಕೃಷಿ ಕಛೇರಿಗಳಲ್ಲಿ ಲಭ್ಯವಿರುವ ಅಂಕಿ ಅಂಶಗಳು ಇಲ್ಲಿ ಬರುತ್ತದೆ.

ಅಧ್ಯಯನದ ಇತಿಮಿತಿಗಳು :
ಪ್ರತಿಯೊಂದು ಸಾಮಾಜಿಕ ಸಂಶೋಧನೆಯಲ್ಲಿ ಅನುಕೂಲ ಮತ್ತು ಅನಾನುಕೂಲಗಳು ಇರುವುದು ಸಹಜವಾಗಿದೆ. ಅವುಗಳು ಒಂದೇ ನಾಣ್ಯದ ೨ ಮುಖಗಳಿದ್ದಂತೆ ಎನ್ನಬಹುದು. ಪ್ರಸಕ್ತ ಅಧ್ಯಯನದಲ್ಲಿ ಹಲವಾರು ಇತಿಮಿತಿಗಳಿವೆ.
೧.ಸಂಶೋಧನೆ ಮಾಡಲು ಕೆಲ ಪ್ರತಿವಾದಿಗಳು ಸೂಕ್ತ ಹಾಗೂ ಸರಿಯಾದ ಮಾಹಿತಿ ನೀಡುತ್ತಿರಲಿಲ್ಲ.
೨.ಪ್ರತಿವಾದಿಗಳಲ್ಲಿ ಕೆಲವರು ಸ್ಪಷ್ಟ ಮಾಹಿತಿ ನೀಡದಿರುವುದು ಉದಾಸೀನವಾಗಿ ಉತ್ತರಿಸಿದ್ದರಿಂದ ಹೆಚ್ಚಿನ ವಿವರಗಳು ಪಡೆಯಲು ಸಾಧ್ಯವಾಗಿಲ್ಲ.
೩.ಸಂಶೋಧಕನು ವಿದ್ಯಾರ್ಥಿ ಆಗಿರುವುದರಿಂದ ಹೆಚ್ಚಿನ ವಿಷಯದ ಸಂಗ್ರಹಣೆಗೆ ಅನುಭವದ ಕೊರತೆ ಇತ್ತು.
೪.ಸಂಶೋಧಕನು ಕಡಿಮೆ ಅವಧಿಯಲ್ಲಿ ಮಾಹಿತಿ ಸಂಗ್ರಹಿಸಿದ್ದು ಅವಸರದ ಅಣಿಯಾಗಿದೆ.

ಅಧ್ಯಾಯ - ೪. ಮಾಹಿತಿ ವಿಶ್ಲೇಷಣೆ ಮತ್ತು ದತ್ತಾಂಶ ವರ್ಗೀಕರಣ
ಸಂಶೋಧನೆಯಲ್ಲಿ ಪ್ರಸ್ತಾವನೆ, ಅಧ್ಯಯನದ ವಿಧಾನ ಎಷ್ಟು ಮುಖ್ಯವೋ ಅದೇ ರೀತಿಯಾಗಿ ಮಾಹಿತಿ ವರ್ಗೀಕರಣ ಮತ್ತು ದತ್ತಾಂಶ ವಿಶ್ಲೇಷಣೆ ಸಂಶೋಧನೆಯಲ್ಲಿ ಅಷ್ಟೇ ಪ್ರಾಮುಖ್ಯತೆಯನ್ನು ಹೊಂದಿದೆ. ಪ್ರಸ್ತುತ ಅಧ್ಯಯನದಲ್ಲಿ ಫಲಾನುಭವಿಗಳಿಂದ ಹೊಂದಿದೆ. ಪ್ರಸ್ತುತ ಅಧ್ಯಯನದಲ್ಲಿ ಫಲಾನುಭವಿಗಳಿಂದ ಸಂಗ್ರಹಿಸಲಾದ ಮಾಹಿತಿ ದತ್ತಾಂಶಗಳನ್ನು ಅಧ್ಯಯನ ಸಮಯದಲ್ಲಿ ಅವಲೋಕಿಸಿದಂತಹ ವಿಷಯಗಳನ್ನು ಪಟ್ಟಿಗಳಿಂದ ವಿವರಿಸಲಾಗಿದೆ.
ವಿಶ್ಲೇಷಣೆ ಎಂಬುದಕ್ಕೆ ವಿಭಜನೆ ಅಥವಾ ವಿಂಗಡಿಸುವಿಕೆ ಎಂದು ಅರ್ಥ. ಸಂಶೋಧಕನು ಸಂಶೋಧನಾ ವಿಷಯಕ್ಕೆ ಸಂಬಂಧಿಸಿದಂತೆ ದೊರೆತ ಎಲ್ಲಾ ಮಾಹಿತಿಗಳನ್ನು ಕಲೆ ಹಾಕುತ್ತಾ ಬರುವನು. ಈ ಕ್ರೂಢೀಕೃತವಾದ ಎಲ್ಲಾ ಅಂಶಗಳನ್ನು ಕ್ರಮಬದ್ಧವಾಗಿ ಮತ್ತು ಕಾರ್ಯಕಾರಣಗಳನ್ನು ಪರಸ್ಪರ ಸಂಬಂಧ ವಿಶ್ಲೇಷಣೆಯಾಗಿದೆ.
ಅಂಕಿ ಅಂಶಗಳನ್ನು ಸರಿಯಾಗಿ ವಿಶ್ಲೇಷಿಸುವುದು ಮತ್ತು ವಿಶ್ಲೇಷಣೆಯಿಂದ ಬಂದ ಪರಿಣಾಮಗಳನ್ನು ಅರ್ಥೈಸುವುದು ಸಂಶೋಧನೆಯಲ್ಲಿ ಅತ್ಯಂತ ಪ್ರಮುಖ ಕಾರ್ಯವಾಗಿದೆ. ಆದುದರಿಂದ ಅಂಕಿ ಅಂಶಗಳ ವಿಶ್ಲೇಷಣೆ ಮತ್ತು ಅರ್ಥೈಸುವಿಕೆ ಇವುಗಳು ಒಂದೇ ನಾಣ್ಯದ ೨ ಮುಖಗಳಿದ್ದಂತೆ ಎಂದು ಹೇಳಿದರೆ ತಪ್ಪಾಗಲಾರದು.

ಸಂಶೋಧನಾ ಫಲ ಮತ್ತು ಸಲಹೆಗಳು
ಗ್ರಾಮೀಣ ಪ್ರದೇಶದಲ್ಲಿನ ದಿನಗೂಲಿ ಕೃಷಿ ಕಾರ್ಮಿಕರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಒಂದು ಕಿರು ಅಧ್ಯಯನ ಈ ವಿಷಯ ಕುರಿತು ಬೆಂಗಳೂರು ದಕ್ಷಿಣ ವಲಯದ ಸೋಮನಹಳ್ಳಿ ಗ್ರಾಮ ಪಂಚಾಯಿತಿ ಅಡಿಯಲ್ಲಿನ ರಾವುಗೋಡ್ಲು ಗ್ರಾಮದಲ್ಲಿ ಕೃಷಿ ಕಾರ್ಮಿಕರು ೫೦ ಪ್ರತಿವಾದಿಗಳನ್ನಾಗಿಸಿಕೊಂಡು ಪ್ರಸ್ತುತ ಅಧ್ಯಯನದಿಂದ ಹೊರ ಬಂದಿರುವ ಫಲಿತಾಂಶಗಳು ಈ ಮುಂದಿನಂತಿವೆ.
೧.ಮಹಿಳೆಯರಿಗಿಂತ ಪುರುಷರು ಕೃಷಿಯಲ್ಲಿ ತೊಡಗಿಕೊಂಡಿರುವುದು ಕಂಡು ಬರುತ್ತದೆ.
೨.ಕೃಷಿ ಕಾರ್ಮಿಕರು ಹೆಚ್ಚಿನವರು ಅವಿದ್ಯಾವಂತರಾಗಿದ್ದಾರೆ ಎಂದು ತಿಳಿದು ಬಂದಿದೆ.
೩.ಪ್ರತಿವಾದಿಗಳು ಹೆಚ್ಚಿನವರು ೪೬ರಿಂದ ೬೦ವಯಸ್ಸಿನವರು ಕೃಷಿ ಕಾರ್ಮಿಕರಾಗಿರುವುದು ಕಂಡು ಬರುತ್ತದೆ.
೪.ಪ್ರತಿವಾದಿಗಳು ಹೆಚ್ಚಿನವರು ಒಕ್ಕಲಿಗ ಜಾತಿಯವರು ಎಂದು ತಿಳಿದು ಬಂದಿದೆ.
೫.ದಿನಗೂಲಿ ಕೆಲಸದಲ್ಲಿ ಹೆಚ್ಚಿನ ಪ್ರತಿವಾದಿಗಳು ವಿವಾಹಿತರು ಎಂದು ತಿಳಿದು ಬಂದಿದೆ.
೬.ದಿನಗೂಲಿ ಕೆಲಸದಲ್ಲಿ ತೊಡಗಿಕೊಂಡಿರುವವರು ಹೆಚ್ಚಿನವರು ಅವಿಭಕ್ತ ಕುಟುಂಬದವರಾಗಿದ್ದಾರೆ.
೭.ಬಹುತೇಕ ದಿನಗೂಲಿ ಕೃಷಿ ಕಾರ್ಮಿಕರ ವಾರ್ಷಿಕ ವರಮಾನವು ೯,೦೦೦ ರಿಂದ ೧೦,೦೦೦ರೂ.ಗಳಾಗಿವೆ ಎಂದು ತಿಳಿದು ಬಂದಿದೆ.
೮.ಶೇ.೧೦೦ರಷ್ಟು ಪ್ರತಿವಾದಿಗಳು ಮನೆಯನ್ನು ಹೊಂದಿರುವುದು ವ್ಯಕ್ತವಾಗಿದೆ.
೯.ಪ್ರತಿವಾದಿಗಳು ಹೆಚ್ಚಿನವರು ಸ್ವಂತ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
೧೦.ಶೇ.೫೪ರಷ್ಟು ಪ್ರತಿವಾದಿಗಳು ಗುಡಿಸಲು ಮನೆಯಲ್ಲಿ ವಾಸಮಾಡುತ್ತಿರುವುದು ತಿಳಿದು ಬಂದಿದೆ.
೧೧.ಪ್ರತಿವಾದಿಗಳು ಹೆಚ್ಚಿನವರು ಸರ್ಕಾರದ ವಸತಿ ಸೌಲಭ್ಯವನ್ನು ಪಡೆದುಕೊಂಡಿಲ್ಲ ಎಂಬುದು ವ್ಯಕ್ತವಾಗಿದೆ.
೧೨.ಕೃಷಿ ಕಾರ್ಮಿಕರ ಮನೆಯಲ್ಲಿ ಮೂಲ ಸೌಕರ್ಯವು ಚೆನ್ನಾಗಿರುವುದು ತಿಳಿದು ಬಂದಿದೆ.
೧೩.ಹೆಚ್ಚಿನ ಪ್ರತಿವಾದಿಗಳು ಯಾವುದೇ ರೀತಿಯಾದ ದುಶ್ಚಟಗಳಿಗೆ ದಾಸರಾಗಿರುವುದಿಲ್ಲ.
೧೪.ಮಧ್ಯಪಾನ ಮಾಡುವ ಹೆಚ್ಚಿನ ಪ್ರತಿವಾದಿಗಳು ಮಧ್ಯಪಾನ ಮಾಡುವುದರ ಕಾರಣ ರೂಢಿಯಾಗಿರುವುದಾಗಿದೆ.
೧೫.ಬಹುಪಾಲು ಪ್ರತಿವಾದಿಗಳು ಸ್ವಂತ ಭೂಮಿಯನ್ನು ಹೊಂದಿರುವುದು ತಿಳಿದು ಬಂದಿದೆ.
೧೬.ಹೆಚ್ಚಿನ ಪ್ರತಿವಾದಿಗಳು ಕೃಷಿ ಕೂಲಿ ಸಮಯ ಹೆಚ್ಚಿಗೆ ಇರುವುದನ್ನು ಸೂಚಿಸುತ್ತದೆ.
೧೭.ಪ್ರತಿವಾದಿಗಳಿಗೆ ನೀಡುವ ಕೂಲಿಯು ಕಡಿಮೆಯಾಗಿದ್ದು ಆದರೆ ಹೆಚ್ಚು ಕಾಲ ದುಡಿಮೆ ಮಾಡಿಸಿಕೊಳ್ಳುತ್ತಿದ್ದಾರೆ ಎಂಬುದು ತಿಳಿದು ಬಂದಿದೆ.
೧೮.ಪ್ರತಿವಾದಿಗಳ ಮನೆಯ ಸದಸ್ಯರು ಹೆಚ್ಚಿನವರು ಬೇರೆ ಯಾವುದೇ ಕೆಲಸಕ್ಕೆ ಹೋಗುತ್ತಿಲ್ಲ ಎಂಬುದು ತಿಳಿದು ಬಂದಿದೆ.
೧೯.ಬಹುತೇಕ ಪ್ರತಿವಾದಿಗಳಿಗೆ ದಿನಗೂಲಿ ಕೆಲಸವು ತೃಪ್ತಿಯನ್ನು ತಂದುಕೊಟ್ಟಿಲ್ಲ ಎಂಬುದನ್ನು ವ್ಯಕ್ತಪಡಿಸಿದ್ದಾರೆ.
೨೦.ಪ್ರತಿವಾದಿಗಳು ಹೆಚ್ಚಿನವರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ ಎಂಬುದು ತಿಳಿದು ಬಂದಿದೆ.
೨೧.ಪ್ರತಿವಾದಿಗಳು ಜಾತಿ ವ್ಯವಸ್ಥೆಯನ್ನು ಮುಂದುವರೆಸುತ್ತಿರುವುದು ಕಂಡುಬರುತ್ತದೆ.
೨೨.ಪ್ರತಿವಾದಿಗಳ ಕೂಲಿ ನಿರ್ಧಾರಗಳಲ್ಲಿ ಪ್ರತಿವಾದಿಗಳ ಯಾವುದೇ ಮನ್ನಣೆ ಇಲ್ಲ ಎಂಬುದು ತಿಳಿದು ಬರುತ್ತದೆ.
೨೩.ಪ್ರತಿವಾದಿಗಳ ಸಮಸ್ಯೆಗಳ ನಿವಾರಣೆಗೆ ಸರ್ಕಾರ ತೆಗೆದುಕೊಂಡ ಕ್ರಮಗಳು ಸಮರ್ಪಕ ರೀತಿಯಲ್ಲಿ ಇಲ್ಲ ಎಂಬುದು ವ್ಯಕ್ತವಾಗಿದೆ.
೨೪.ಸಾಮಾಜಿಕ, ಸಮಾನತೆ, ಸಾಮಾಜಿಕ ನ್ಯಾಯ, ಪುರುಷರಿಗೆ ಸಮನಾಗಿ ಮಹಿಳೆಯರು ದುಡಿದರು ಅವರಿಗೆ ಕಡಿಮೆ ಕೂಲಿ ವಿತರಿಸಲಾಗುತ್ತಿದೆ ಎಂಬುದು ಪ್ರತಿವಾದಿಗಳ ಅಭಿಮತ.
೨೫.ಪ್ರತಿವಾದಿಗಳಿಗೆ ಸಮಾಜದಲ್ಲಿ ಸಮಾನ ಸ್ಥಾನಮಾನ ದೊರೆತಿಲ್ಲ ಎಂಬುದು ವ್ಯಕ್ತವಾಗಿದೆ.
೨೬.ಪ್ರತಿವಾದಿಗಳ ಕೆಲಸವು ಋತುಮಾನದ ಕಸುಬು ಆಗಿರುವುದರಿಂದ ಅವರಿಗೆ ವರ್ಷದಲ್ಲಿ ಕೆಲವೇ ತಿಂಗಳು ಕೆಲಸ ಸಿಗುತ್ತದೆ ಎಂಬುದು ತಿಳಿದು ಬರುತ್ತದೆ.
ಈ ಮೇಲಿನ ಎಲ್ಲಾ ಅಂಶಗಳು ಸಂಶೋಧಕನ ಅಧ್ಯಯನದಿಂದ ಹೊರಬಂದ ಅಂಶವಾಗಿದೆ. ಇದರಿಂದ ದಿನಗೂಲಿ ಕೃಷಿ ಕಾರ್ಮಿಕರ ಸಾಮಾಜಿಕ ಆರ್ಥಿಕ ಸ್ಥಿತಿಗತಿಗಳು ಮತ್ತು ಕೂಲಿ ತಾರತಮ್ಯ ಹೆಚ್ಚಾಗಿ ಕಂಡು ಬರುತ್ತದೆ. ಈ ಎಲ್ಲಾ ಸಮಸ್ಯೆಗೆ ಸರ್ಕಾರದ ಕಾರ್ಯಕ್ರಮಗಳು ಯೋಜನೆಗಳು ಸರಿಯಾದ ರೀತಿಯಲ್ಲಿ ರೂಪಿಸಬೇಕು ಮತ್ತು ಕಾರ್ಯರೂಪಕ್ಕೆ ಬರಬೇಕು ಎಂಬುದನ್ನು ತಿಳಿಸುತ್ತದೆ.

ಸಲಹೆಗಳು :
ಭಾರತ ಒಂದು ಕೃಷಿ ಪ್ರಧಾನ ರಾಷ್ಟ್ರವಾಗಿದೆ ಬಹುಪಾಲು ಜನರು ಕೃಷಿಯನ್ನೇ ಅವಲಂಭಿಸಿದ್ದಾರೆ. ಕೃಷಿ ಕೆಲಸದಲ್ಲಿ ತೊಡಗಿರುವವರನ್ನು ಕೃಷಿ ಕಾರ್ಮಿಕರು ಎಂದು ಕರೆಯಲಾಗುತ್ತದೆ. ಅವರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು ಅವುಗಳ ನಿವಾರಣೆಗೆ ಅನೇಕ ಸಲಹೆಗಳನ್ನು ನೀಡಬಹುದಾಗಿದೆ.
೧.ಕೃಷಿ ಕಾರ್ಮಿಕರು ಮಾಡುವ ಕೆಲಸಕ್ಕೆ ಸರಿಯಾದ ಕೂಲಿಯನ್ನು ವಿತರಿಸಬೇಕು
೨.ಕೃಷಿ ಕೂಲಿ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು
೩.ಕೃಷಿಯ ಮೇಲಿನ ಅವಲಂಬನೆ ಮಾಡಲು ಗೃಹ ಮತ್ತು ಸಣ್ಣ ಕೈಗಾರಿಕೆಗಳನ್ನು ಹೆಚ್ಚಿಸುವುದು.
೪.ಭೂ ರಹಿತ ಕೃಷಿ ಕಾರ್ಮಿಕರಿಗೆ ಪುನರ್ವಸತಿ ಸೌಲಭ್ಯ ಒದಗಿಸಬೇಕು
೫.ಸರ್ಕಾರದ ಕಾರ್ಯಕ್ರಮಗಳನ್ನು ಸಮರ್ಪಕ ರೀತಿಯಲ್ಲಿ ಜಾರಿಗೆ ತರಬೇಕು
೬.ಕೂಲಿ ವಿತರಣೆಯಲ್ಲಿ ಲಿಂಗ ತಾರತಮ್ಯ ಇಲ್ಲದಂತೆ ನೋಡಿಕೊಳ್ಳಬೇಕು
೭.ಹಣಕಾಸು ಸೌಲಭ್ಯಗಳನ್ನು ವಿಸ್ತರಿಸಿ ಕೃಷಿ ಕಾರ್ಮಿಕರಿಗೆ ಕಡಿಮೆ ದರದಲ್ಲಿ ಸಾಲದ ಸೌಲಭ್ಯಗಳನ್ನು ನೀಡಬೇಕು.
೮.ಕೃಷಿ ಕಾರ್ಮಿಕರು ಹಕ್ಕು ಬಾಧ್ಯತೆಗಳ ಬಗ್ಗೆ ಅವರಿಗೆ ಸರಿಯಾದ ಮಾಹಿತಿ ನೀಡಬೇಕು.
೯.ಕೃಷಿ ಕಾರ್ಮಿಕರ ದುಡಿಮೆಯ ಅವಧಿಯನ್ನು ೮ ಗಂಟೆಗಳಿಗೆ ಸೀಮಿತಗೊಳಿಸಬೇಕು.
೧೦.ಕೃಷಿ ಕಾರ್ಮಿಕರು ಹೆಚ್ಚಾಗಿ ಅವಿದ್ಯಾವಂತರಾಗಿರುವುದರಿಂದ ಅವರಿಗೆ ತಾಂತ್ರಿಕ ಮತ್ತು ವೃತ್ತಿ ಪರ ಶಿಕ್ಷಣ ನೀಡಬೇಕು.
೧೧.ಕೃಷಿ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಗಳನ್ನು ಒದಗಿಸಬೇಕು
೧೨.ಕೃಷಿಯಲ್ಲಿ ಬಾಲ ಕಾರ್ಮಿಕರು ಇರದಂತೆ ನೋಡಿಕೊಳ್ಳಬೇಕು.
೧೩.ಕೃಷಿ ಬದಲಾಗಿ ಪರ್ಯಾಯ ಉದ್ಯೋಗವನ್ನು ಕಲ್ಪಿಸಬೇಕು.
೧೪.ಸಹಕಾರಿ ಕೃಷಿ ಕ್ರಮವನ್ನು ಜಾರಿಗೆ ತರುಬೇಕು.

ಉಪಸಂಹಾರ :
ಕೃಷಿ ಕಾರ್ಮಿಕರು ಎಂಬ ಆರ್ಥಿಕ ಪರಿಕಲ್ಪನೆ ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಜಗತ್ತಿನ ಅಭಿವೃದ್ಧಿ ಹೊಂದಿದ ರಾಷ್ಟ್ರವಾದ ಅಮೇರಿಕವು ಈ ಸಮಸ್ಯೆಯಿಂದ ಹೊರತಾಗಿಲ್ಲ. ಇಂದು ಶೇ.೮೫ರಷ್ಟು ಜನತೆ ಭೂ ರಹಿತರಾಗಿದ್ದಾರೆ. ಭಾರತದಲ್ಲಿ ಕೃಷಿ ಕಾರ್ಮಿಕರು ಆರ್ಥಿಕವಾಗಿ, ಸಾಮಾಜಿಕವಾಗಿ, ತುಂಬಾ ಹಿಂದುಳಿದಿದ್ದು ಅವರು ತುಂಬಾ ನಿಕೃಷ್ಟವಾದ ಜೀವನ ಮಟ್ಟವನ್ನು ಸಾಗಿಸುತ್ತಿದ್ದಾರೆ. ಭಾರತದಲ್ಲಿ ಕೃಷಿ ಕಾರ್ಮಿಕರು ಮೂಲೆ ಗುಂಪಾಗಿದ್ದು ಸಂಘಟನೆ ಎಂಬ ಪರಿಕಲ್ಪನೆಯ ಅರ್ಥವೇ ತಿಳಿಯದ ಈ ಜನ ಭಾರತದ ಅರ್ಥ ವ್ಯವಸ್ಥೆಗೆ ಸ್ಥಿತಿಯಲ್ಲಿ ಇವರ ಪಾಲು ಶೋಷಿತರ ಪಾಲಿಗಿಂತ ಹೊರತಾಗಿಲ್ಲ ಹಸಿವು ಬಡತನ ಕಿತ್ತು ತಿನ್ನುವ ಇಂದಿನ ಸಮಾಜದ ಆಡಂಬರದ ಬದುಕಿನಲ್ಲಿ ಕೃಷಿ ಕಾರ್ಮಿಕರು ಯಾವ ವರ್ಗಕ್ಕೆ ಬರುತ್ತಾರೆಂಬುದೇ ವಿವಾದವಾಗಿದೆ. ಭಾರತ ಸರ್ಕಾರ ಕನಿಷ್ಠ ಕೂಲಿ ಕಾಯಿದೆಯನ್ನು ಜಾರಿಗೆ ತಂದಿದ್ದರು. ಅದು ಸರಿಯಾದ ರೀತಿಯಲ್ಲಿ ಅನುಷ್ಠಾನಕ್ಕೆ ಬಾರದಿರುವುದು ಇಲ್ಲಿ ಕಂಡು ಬರುತ್ತದೆ. ಭಾರತ ಸರ್ಕಾರದ ಯೋಜನೆಗಳು ಸರ್ಕಾರದ ಕಾನೂನು ಕಾಯಿದೆಗಳು ಜಮೀನ್ದಾರ ಕೃಷಿಕರಿಗೆ ಹೊರತು ಕೃಷಿಯನ್ನು ಮಾಡುವ ಕೃಷಿ ಕಾರ್ಮಿಕರಿಗಲ್ಲ. ಇವರಿಗೆ ಭದ್ರತೆಯಿಲ್ಲದ ಬಂಗಲೆಯಲ್ಲಿ ಬಂಜರಾಗಿ ನಿಂತಿದ್ದಾನೆ. ಕೃಷಿ ಕಾರ್ಮಿಕರು ಭಾರತದಲ್ಲಿ ಒಂದು ಪ್ರಮಾಣ ಸಂಪನ್ಮೂಲ ಇವರು ಸಮರ್ಪಕವಾಗಿ ಕೃಷಿ ಚಟುವಟಿಕೆಗಳನ್ನು ಕೈಗೊಂಡಾಗ ಮಾತ್ರ ದೇಶದ ಆದಾಯದ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗುತ್ತದೆ. ಕೃಷಿ ಕಾರ್ಮಿಕರ ಸಂಖ್ಯೆ ತೀವ್ರ ಗತಿಯಲ್ಲಿ ಬೆಳೆಯುತ್ತಿದೆ. ಅವರ ಸಂಖ್ಯೆ ಹೆಚ್ಚಾದಂತೆಲ್ಲಾ ಹೆಚ್ಚು ಸಮಸ್ಯೆಗಳು ಇರುವುದು ಕಂಡು ಬರುತ್ತದೆ. ಅವರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಉತ್ತಮವಾದ ಸೌಲಭ್ಯವನ್ನು ಕಲ್ಪಿಸಬೇಕಾಗಿದೆ. ಕೃಷಿ ಕಾರ್ಮಿಕರು ತಮ್ಮ ದಿನನಿತ್ಯದ ಬದುಕಿನಲ್ಲಿ ಕನಿಷ್ಟ ಅವಶ್ಯಕತೆಗಳನ್ನು ತಾವೇ ಅಲೆಮಾರಿಗಳಾಗಿ ಪಡೆಯುತ್ತಿರುವುದರಿಂದ ಜನ್ಮ ನೀಡಿದ ಈ ಭೂಮಿಯ ಋಣ ತೀರಿಸಲೆಂದೇ ಹುಟ್ಟಿದ್ದೇವೆ ಎಂಬ ನಿರ್ಧಾರಕ್ಕೆ ಬಂದಿರುವುದು ಕೃಷಿಯಿಂದ ವಲಸೆ ಹೋಗುವುದು ನಿಂತು ನೆಲೆಯಾಗಲು ಪ್ರಯತ್ನಿಸುತ್ತಿದ್ದಾರೆ.

ಆಧಾರ ಗ್ರಂಥಗಳು
೧. ಡಿ. ವೆಂಕಟರಾವ್: ಕೃಷಿ ಅರ್ಥಶಾಸ್ತ್ರ, ಲಕ್ಷ್ಮಿ ಪ್ರಿಂಟಿಂಗ್ ಅಂಡ್ ಪಬ್ಲಿಷಿಂಗ್
 ಹೌಸ್, ಮೈಸೂರು, ಪ್ರಥಮ ಮುದ್ರಣ ೨೦೦೦.
 ಪು. ಸಂ. ೨೨೦
೨. ಎಂ.ಎಸ್. ಕಲ್ಲೂರು: ಕೃಷಿ ಅರ್ಥಶಾಸ್ತ್ರ, ಕಲಾ ಪ್ರಕಾಶನ, ಬೆಂಗಳೂರು
 ಪ್ರಥಮ ಮುದ್ರಣ ೨೦೦೦, ಪು.ಸಂ. ೫೩೬
೩. ಹೆಚ್. ಆರ್. ಕೃಷ್ಣಯ್ಯ ಗೌಡ: ಭಾರತದ ಆರ್ಥಿಕ ವ್ಯವಸ್ಥೆ ಸಮಸ್ಯ,
 ಲಕ್ಷ್ಮಿ ಪ್ರಿಂಟಿಂಗ್ ಅಂಡ್ ಪಬ್ಲಿಕೇಷನ್ ಹೌಸ್, ಮೈಸೂರು
 ಪ್ರಥಮ ಮುದ್ರಣ ೧೯೯೯, ಪು.ಸಂ ೨೪೦
೪. ಹೆಚ್. ಆರ್. ಕೃಷ್ಣಯ್ಯ ಗೌಡ: ಭಾರತದ ಆರ್ಥಿಕ ವ್ಯವಸ್ಥೆ ಸಮಸ್ಯ,
 ಚೇತನ್ ಬುಕ್ ಹೌಸ್,
 ಪ್ರಥಮ ಮುದ್ರಣ ೧೯೯೫, ಪು.ಸಂ ೪೪೨
೫. ಕೆ.ಡಿ. ಬಸವ: ಭಾರತದ ಅರ್ಥವ್ಯವಸ್ಥೆಯ ಪರಿಚಯ
೬. ಶರಣಪ್ಪ: ಭಾರತದ ಆರ್ಥಿಕ ಸಮಸ್ಯೆಗಳು,
ಚೇತನ್ ಬುಕ್ ಹೌಸ್, ಪು.ಸಂ. ೧೯೮
೭. ಪ್ರಭಾಕರ ಶಿಶಿಲ: ಆಧುನಿಕ ಬಾರತದ ಆರ್ಥಿಕ ಸಮಸ್ಯೆಗಳು
 ಸುಧಾ ಪಬ್ಲಿಕೇಷನ್ಸ್, ಬೆಂಗಳೂರು.
೮. ಕರ್ನಾಟಕ ರಾಜ್ಯ ಕೃಷಿ: ರೈತ ಸಂಜೀವಿನಿ ಅಪಘಾತ, ವಿಮಾ ಯೋಜನೆ,
 ಮಾರಾಟ ಮಂಡಳಿ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ
 ಮುದ್ರಣಾಲಯ, ವಿದ್ಯಾನಗರ, ಹುಬ್ಬಳ್ಳಿ.
೯. ನಾರಾಯಣ ಎಂ.: ಸಾಮಾಜಿಕ ಸಂಶೋಧನೆ,
 ಲಕ್ಷ್ಮಿ ಪ್ರಿಂಟಿಂಗ್ ಪಬ್ಲಿಷಿಂಗ್ ಹೌಸ್, ಮೈಸೂರು.

ಪ್ರಶ್ನಾವಳಿ
ಗ್ರಾಮೀಣ ಪ್ರದೇಶದಲ್ಲಿನ ದಿನಗೂಲಿ ಕೃಷಿ ಕಾರ್ಮಿಕರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಒಂದು ಕಿರು ಅಧ್ಯಯನ
೧.ಪ್ರತಿವಾದಿಗಳ ವೈಯಕ್ತಿಕ ಮಾಹಿತಿ
೧. ಹೆಸರು:
೨. ಲಿಂಗ: ಎ) ಸ್ತ್ರೀ ಬಿ) ಪುರುಷ
೩. ವಯಸ್ಸು: ಎ) ೨೫ರಿಂದ ೩೫ ಬಿ) ೩೬ ರಿಂದ ೪೫
 ಸಿ) ೪೬ ರಿಂದ ೬೦ ಡಿ) ೬೧ಕ್ಕೂ ಮೇಲ್ಪಟ್ಟು
೪.ವಿದ್ಯಾರ್ಹತೆ: ಎ) ಅನಕ್ಷರಸ್ಥರು ಬಿ) ಪ್ರಾಥಮಿಕ ಸಿ) ಪ್ರೌಢ ಡಿ) ಪದವಿ
೫.ಜಾತಿ: ಎ) ಒಕ್ಕಲಿಗ ಬಿ) ಎಸ್.ಸಿ. ಸಿ) ಎಸ್.ಟಿ. ಡಿ) ಇತರೆ
೬.ವೈವಾಹಿಕ ಸ್ಥಿತಿ: ಎ) ಅವಿವಾಹಿತ ಬಿ) ವಿವಾಹಿತ ಸಿ) ವಿಧುರ/ ವಿಧವೆ
 ಡಿ) ವಿಚ್ಛೇದನ
೭.ಧರ್ಮ: ಎ) ಹಿಂದೂ ಬಿ) ಮುಸ್ಲಿಂ ಸಿ) ಕ್ರೈಸ್ತ ಡಿ) ಇತರೆ
೮.ಕುಟುಂಬದ ಸ್ವರೂಪ ಎ) ಅವಿಭಕ್ತ ಕುಟುಂಬ () ಬಿ) ವಿಭಕ್ತ ಕುಟುಂಬ()
೯.ಉದ್ಯೋಗ ಎ) ಕೃಷಿ ಕೂಲಿ ಕಾರ್ಮಿಕರು () ಬಿ) ವ್ಯವಸಾಯ ಸಿ) ಇತರೆ()
೧೦.ವೈಯಕ್ತಿಕ ವಾರ್ಷಿಕ ವರಮಾನ ಎ) ೭೦೦೦ -೮೦೦೦ ಬಿ) ೯೦೦೦ ೧೦೦೦೦ (ಸಿ) ೧೧೦೦೦ ೧೨೦೦೦ () ಡಿ)೧೨೦೦೦ಕ್ಕೂ ಮೇಲ್ಪಟ್ಟು ()

ಕುಟುಂಬದಲ್ಲಿನ ಸದಸ್ಯರ ವಿವರ
 ಕ್ರ.ಸಂಹೆಸರುಸಂಬಂಧಲಿಂಗವಯಸ್ಸುವಿದ್ಯಾರ್ಯತೆವೃತ್ತಿ

 ೨.ಕೃಷಿ ಕಾರ್ಮಿಕರ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿ
೧೧.ನೀವು ಮನೆಯನ್ನು ಹೊಂದಿರುವಿರಾ? ಎ) ಹೌದು () ಬಿ) ಇಲ್ಲ()
೧೨.ಹೌದು ಎನ್ನುವುದಾದರೆ ಯಾವ ರೀತಿಯ ಮನೆಯನ್ನು ಹೊಂದಿದ್ದೀರಿ? ಎ) ಸ್ವಂತ ಮನೆ ಬಿ) ಬಾಡಿಗೆ ಮನೆ()
೧೩.ನೀವು ಸ್ವಂತ ಮನೆಯಲ್ಲಿ ವಾಸಿಸುತ್ತಿದ್ದರೆ ಮನೆಯ ವಿಧ ಯಾವುದು? ಎ) ಗುಡಿಸಲು ಬಿ) ಹೆಂಚಿನ ಮನೆ () ಸಿ) ಶೀಟಿನ ಮನೆ (ಡಿ) ಆರ್.ಸಿ.ಸಿ. ಕಟ್ಟಡ ಇ) ಇತರೆ()
೧೪.ಈ ಕೆಳಕಂಡ ಸರ್ಕಾರದ ಯಾವುದಾದರೂ ಯೋಜನೆಯಡಿಯಲ್ಲಿ ವಸತಿ ಸೌಲಭ್ಯವನ್ನು ಹೊಂದಿದ್ದೀರಾ? ಎ) ಆಶ್ರಯ ಯೋಜನೆ () ಬಿ) ಇಂದಿರಾ ಆವಾಸ್ ಯೋಜನೆ() ಸಿ) ಅಂಬೇಡ್ಕರ್ ವಸತಿ ಯೋಜನೆಡಿ) ಬಸವ ಯೋಜನೆ()
೧೫.ನಿಮ್ಮ ಮನೆಯಲ್ಲಿ ಈ ಕೆಳಕಂಡ ಯಾವುದಾದರೂ ವಸ್ತುಗಳನ್ನು ಹೊಂದಿರುವಿರಾ? ಎ) ಹೌದು () ಬಿ) ಇಲ್ಲ()
೧.ಟೆಲಿಫೋನ್
 ೨.ದೂರದರ್ಶನ
೩.ರೇಡಿಯೋ
೪.ಸಿ.ಡಿ., ಡಿ.ವಿ.ಡಿ., ವಿ.ಸಿ.ಆರ್.
೫.ಮೋಟಾರು ವಾಹನಗಳು
೧೬. ನಿಮ್ಮ ಮನೆಯಲ್ಲಿ ಈ ಕೆಳಕಂಡ ಮೂಲ ಸೌಕರ್ಯಗಳನ್ನು ಹೊಂದಿದ್ದೀರಾ? ಎ) ಅಡುಗೆ ಕೋಣೆ () ಬಿ) ಮಲಗುವ ಕೋಣೆ (ಸಿ) ಸ್ನಾನದ ಗೃಹ/ ಶೌಚಾಲಯ() ಡಿ) ಮೇಲಿನ ಎಲ್ಲವೂ
೧೭.ನೀವು ಈ ಕೆಳಕಂಡ ಯಾವುದಾದರೂ ದುಶ್ಚಟಗಳಿಗೆ ದಾಸರಾಗಿದ್ದೀರಾ? ಎ) ಮಧ್ಯಪಾನ ಬಿ) ದೂಮಪಾನ () ಸಿ) ತಂಬಾಕು () ಡಿ) ಯಾವುದು ಇಲ್ಲ
೧೮.ನೀವು ಮಧ್ಯಪಾನ ಅಥವಾ ಧೂಮಪಾನ ಮಾಡುತ್ತೀರಾ? ಎ) ಹೌದು ಬಿ) ಇಲ್ಲ
೧೯.ಮಧ್ಯಪಾನ ಮಾಡುವುದಾದರೆ ಕಾರಣ ಎ) ಕೆಲಸದ ಆಯಾಸ (ಬಿ) ರೂಢಿಯಾಗಿರುವುದು ಸಿ) ಇತರೆ()
೨೦.ಸ್ವಂತ ಭೂಮಿಯನ್ನು ಹೊಂದಿರುವಿರಾ? ಎ) ಹೌದು () ಬಿ) ಇಲ್ಲ()
೨೧.ದಿನದಲ್ಲಿ ಎಷ್ಟು ಘಂಟೆ ಕೂಲಿ ಕೆಲಸ ಮಾಡುತ್ತೀರಾ? ಎ) ೫ (ಬಿ) ೬ ಸಿ) ೮ () ಡಿ) ೧೦ ()
೨೨. ನೀವು ದಿನವೊಂದಕ್ಕೆ ಪಡೆಯುವ ಕೂಲಿ ಎಷ್ಟು ಎ) ೧೦೦ ಬಿ) ೧೨೫ ಸಿ) ೧೫೦ ಡಿ) ೨೦೦
೨೩.ನಿಮ್ಮ ಮನೆಯ ಇತರೆ ಸಧಸ್ಯರು ಬೇರೆ ಯಾವುದಾದರೆ ಕೆಲಸಕ್ಕೆ ಹೋಗುತಿದ್ಧಾರಾ? ಎ) ಹೌದು ಬಿ) ಇಲ್ಲ
೨೪.ನೀವು ಮಾಡುತ್ತಿರುವ ಕೆಲಸವು ನಿಮಗೆ ತೃಪ್ತಿಯನ್ನು ನೀಡುತ್ತಿದೆಯೇ? ಎ) ಹೌದು ಬಿ) ಇಲ್ಲ
೨೫. ನೀವು ಈ ಕೆಳಕಂಡ ಯಾವ ಸ್ಥಳಗಳಲ್ಲಿ ಆರೋಗ್ಯ ಚಿಕಿತ್ಸೆ ಪಡೆಯುತ್ತೀರಿ?
ಎ) ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಸರ್ಕಾರಿ ಆಸ್ಪತ್ರೆ() ಬಿ) ಖಾಸಗಿ ಆಸ್ಪತ್ರೆಸಿ) ಮನೆ ಮದ್ದು ಅಥವಾ ಮಾಟ ಮಂತ್ರಾ() ಡಿ) ಕ್ಲೀನಿಕ್ (ಇ) ಆಯುರ್ವೇದಿಕ್()
೨೬. ನಿಮ್ಮ ಊರಿನಲ್ಲಿ ಸಾಮಾನ್ಯವಾಗಿ ಆಚರಿಸುವ ಹಬ್ಬ ಯಾವುದು?
 ಎ) ಯುಗಾದಿ ಬಿ) ಸಂಕ್ರಾಂತಿ ಸಿ) ಗಣೇಶ ಚತುರ್ಥಿ ಡಿ) ಎಲ್ಲಾ ಹಬ್ಬಗಳು
೨೭. ನೀವು ಹಬ್ಬ ಹರಿದಿನಗಳಲ್ಲಿ ಅಥವಾ ಜಾತ್ರೆಯಲ್ಲಿ ಬೇರೆ ಜಾತಿಯವರೊಡನೆ ಬೆರೆಯುತ್ತೀರಾ? ಎ) ಹೌದು ಬಿ) ಇಲ್ಲ
೨೮. ಕೂಲಿ ನಿರ್ಧಾರದಲ್ಲಿ ನಿಮ್ಮ ತೀರ್ಮಾನಕ್ಕೆ ಮನ್ನಣೆ ಇದೆಯೇ? ಎ) ಹೌದು ಬಿ) ಇಲ್ಲ
೨೯. ಸರ್ಕಾರ ನಿಮ್ಮ ಸಮಸ್ಯೆಗಳ ನಿವಾರಣೆಗೆ ಯಾವುದಾದರೂ ಕ್ರಮ ಕೈಗೊಂಡಿದೆಯೇ? (ಎ) ಹೌದು ಬಿ) ಇಲ್ಲ
೩೦. ಹೌದು ಆಗಿದ್ದಲ್ಲಿ ಯಾವ ಕ್ರಮಗಳನ್ನು ಕೈಗೊಂಡಿದೆ? ಎ) ಕೂಲಿಗಾಗಿ ಕಾಳು ಯೋಜನೆ ಬಿ) ಉದ್ಯೋಗ ಖಾತರಿ ಯೋಜನೆ (ಸಿ) ಕನಿಷ್ಠ ಕೂಲಿ()ಡಿ) ಭೂ ಸುಧಾರಣೆ ಕ್ರಮಗಳು()
೩೧. ಸಮಸ್ಯೆಗಳ ನಿವಾರಣೆಗೆ ನೀವು ಸ್ವ-ಸಹಾಯ ಗುಂಪಿನ ರಚನೆ ಮಾಡಿಕೊಂಡಿದ್ದೀರಾ? ಎ) ಹೌದು ಬಿ) ಇಲ್ಲ
೩೨. ನೀವು ಮಾಡಿಕೊಂಡಿರುವ ಸ್ವ-ಸಹಾಯ ಗುಂಪಿನಿಂದ ನಿಮ್ಮ ಸಮಸ್ಯೆಗೆ ಪರಿಹಾರ ದೊರಕಿದೆಯೇ? ಎ) ಹೌದು ಬಿ) ಇಲ್ಲ
೩೩. ದಿನಗೂಲಿ ಕೆಲಸವನ್ನು ಬಿಟ್ಟು ನೀವು ಬೇರೆಯಾವುದಾದರೂ ಕುಲ ಕಸುಬನ್ನು ಮಾಡುತ್ತಿದ್ದೀರಾ? ಎ) ಹೌದು ಬಿ) ಇಲ್ಲ

ಕರ್ನಾಟಕ ರಾಜ್ಯದ ಸಕಾಲ ಕಾರ್ಯಕ್ರಮದ ಬಗ್ಗೆ ಗ್ರಾಮ ಪಂಚಾಯಿತಿ ಸದಸ್ಯರಿಗೆ ಇರುವ ಅರಿವನ್ನು ಕುರಿತು ಒಂದು ಅಧ್ಯಯನ


ವಿಶೇಷವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಸಾಧಲಿ ಹೋಬಳಿಯ ಗ್ರಾಮ ಪಂಚಾಯ್ತಿಗಳಿಗೆ ಸಂಬಂಧಿಸಿದಂತೆ.

-ನಾರಾಯಣ ಸ್ವಾಮಿ, ಪ್ರಶಿಕ್ಶಣಾರ್ಥಿ, ಸಮಾಜಕಾರ್ಯ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ.

ಅಧ್ಯಾಯ-೧. ಪ್ರಸ್ತಾವನೆ
ಸರ್ಕಾರದ ಆಡಳಿತದಲ್ಲಿ ಸುಧಾರಣೆ ಅಥವಾ ಆಡಳಿತದಲ್ಲಿ ದಕ್ಷತೆ, ಪಾರದರ್ಶಕತೆ, ಪ್ರಾಮಾಣಿಕತೆ ಮತ್ತು ಸೇವಾ ನಿಷ್ಠೆ ಹೆಚ್ಚಿಸುವುದರ ಜೊತೆಗೆ ನಾಗರಿಕರಿಗೆ ನಿಗದಿತ ಸಮಯದಲ್ಲಿ ನಾಗರಿಕ ಸೇವೆಗಳನ್ನು ಒದಗಿಸಿಕೊಡುವುದಕ್ಕಾಗಿ ರಾಜ್ಯ ಸರ್ಕಾರವು ದಿನಾಂಕ:-೦೨ ಏಪ್ರಿಲ್ ೨೦೧೨ರಂದು ಮಹಾತ್ವಾಕಾಂಷೆಯ ನಾಗರಿಕ ಸೇವಾ ಖಾತರಿ ಕಾಯಿದೆ ರಾಜ್ಯದೆಲ್ಲೆಡೆ ಪ್ರಾಮಾಣಿಕವಾಗಿ ಅನುಷ್ಠಾನಗೊಂಡಲ್ಲಿ ನಾಗರಿಕರ ಜೀವನದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ನಾಂದಿಯಾಗುತ್ತದೆ.
 ಕರ್ನಾಟಕ ನಾಗರಿಕ ಸೇವೆಗಳ ಖಾತರಿ ಅಧಿನಿಯಮ-೨೦೧೧, ಇದು ನಾಗರಿಕರಿಗೆ ಮೂಲಭೂತ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ದಕ್ಷತೆ ಪಾರದರ್ಶಕತೆ ಕಾಲಬದ್ದತೆ ಮತ್ತು ಜವಾಬ್ದಾರಿಯನ್ನು ಖಚಿತಪಡಿಸುವ ದೃಡ ಬದ್ದತೆಯನ್ನು ಸೂಚಿಸುತ್ತದೆ. ಈ ಅದ್ಯಯನ ಕೈಗೊಳ್ಳುವಾಗ ಸದರಿ ಕಾಯ್ದೆಯಲ್ಲಿ ೩೦ ಇಲಾಖೆಗಳು ೨೬೫ ಸೇವೆಗಳು ಒಳಪಟ್ಟಿದ್ದು ರಾಜ್ಯದಾದ್ಯಂತ ಈ ಕಾಯಿದೆಯನ್ನು ಸೂಚಿತ ಎಲ್ಲಾ ಇಲಾಖೆಗಳಲ್ಲಿಯು ಜಾರಿಗೆ ತರಲಾಗಿದೆ. ಸರ್ಕಾರಿ ಯೋಜನೆಗಳ ಫಲಾನುಭವಿಗಳಿಗೆ ಸಕಾಲದಲ್ಲಿ ದೊರೆಯಬೇಕು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಪ್ರಯೋಜನ ದೊರೆಯಬೇಕು.ಅಭಿವೃದ್ದಿಯ ವೇಗ ಹೆಚ್ಚಿಸುವುದರ ಜೊತೆಗೆ ಎಲ್ಲಾರನ್ನೂ ಒಳಗೊಂಡ ಅಭಿವೃದ್ಧಿ ಸಾಧ್ಯವಾಗಬೇಕು ಅಭಿವೃದ್ಧಿ ಕೇಂದ್ರಿತ ಆಡಳಿತದ ಜೊತೆಗೆ ಕೆಂಪು ಪಟ್ಟಿಗೆ ಅವಕಾಶವಿಲ್ಲದ ಪಾರದರ್ಶಕ ಆಡಳಿತ ನಮ್ಮ ಗುರಿಯಾಗಿದೆ.ನಮ್ಮ ಈ ಧ್ಯೇಯವನ್ನು ಸಾಕಾರಗೊಳಿಸಲು ಆಡಳಿತ ಶೈಲಿಯಲ್ಲಿ ಬದಲಾವಣೆ ಅನಿವಾರ್ಯ ಸರ್ಕಾರದ ಯಾವುದೇ ಒಂದು ಜನಪರ ಯೋಜನೆ ಯಶಸ್ಸು ಸಾಧಿಸಬೇಕಾದರೆ ಸರ್ಕಾರಿ ನೌಕರರು ಪ್ರಾಮಾಣಿಕವಾಗಿ ಸ್ವಂದಿಸಬೇಕಾಗಿರುವುದು ಮೊದಲು ಅವಶ್ಯಕತೆ ಅಂತೆಯೇ ನಾಗರಿಕರು ಅಂದರೆ ಸಾಮಾನ್ಯ ಜನರು ನಾಗರಿಕ ಸೇವಾ ಖಾತರಿ ಕಾಯಿದೆಯನ್ನು ಸರಿಯಾಗಿ ತಿಳಿದುಕೊಂಡು ಕಾನೂನಿನ ಉಪಯೋಗ ಪಡೆದುಕೊಳ್ಳಬೇಕಾದುದು ಅಷ್ಟೇ ಅವಶ್ಯಕವಾದ ಹೆಜ್ಜೆಯಾಗಿದೆ.
ನಾಗರಿಕರು ಏನು ಮಾಡುವ ಪರಿಸ್ಥಿತಿಯಲ್ಲಿರಲಿಲ್ಲ ನಿಸ್ಸಹಾಯಕರಾಗಿ ನೌಕರರು ಕೆಲಸ ಮಾಡಿಕೊಡುವವರೆಗೆ ಕಾಯಬೇಕಿತ್ತು ಆದರೆ ಈಗ ಅದೆಲ್ಲಾ ಬದಲಾಗಿದೆ. ಸರ್ಕಾರಿ ಕಛೇರಿಗಳಿಗೆ ಭೇಟಿ ನೀಡುವ ಸಾರ್ವಜನಿಕರಿಗೆ ಯಾವುದೇ ಸರ್ಕಾರಿ ಅಧಿಕಾರಿ ಅಥವಾ ಸಿಬ್ಬಂದಿ ಇಂದು ನಾಳೆ ಎನ್ನುವಂತಿಲ್ಲ.ಃಏಳಿದ ಸಮಯಕ್ಕೆ ಸೇವೆ ಮತ್ತು ಸವಲತ್ತುಗಳನ್ನು ಒದಗಿಸುವುದು ಕಡ್ಡಾಯವಾಗಿರುತ್ತದೆ.

ಸಕಾಲ ಕಾರ್ಯಕ್ರಮದ ಅರ್ಥ:-
ಒಟ್ಟಾರೆಯಾಗಿ ನಾಗರಿಕರ ಸೇವೆಗಳ ಖಾತರಿ ಕಾಯಿದೆಯನ್ನು ಹಾಗೂ ಅದರ ಪ್ರಕ್ರಿಯೆಯನ್ನು ಪರಿಗಣಿಸಿದರೆ ಒಂದು ನಿರ್ಧಿಷ್ಟ ಕಾಲಮಿತಿಯಲ್ಲಿ ಸೇವೆಯನ್ನು ಒದಗಿಸಲು ಒತ್ತು ಕೊಡಲಾಗಿದೆ.ಅಂದರೆ ನಾಗರಿಕರಿಗೆ ಸಕಾಲದಲ್ಲಿ ಸೇವೆ ಪಡೆದುಕೊಳ್ಳವುದು ನಾಗರಿಕರ ಹಕ್ಕು ಆಗಿರುತ್ತದೆ ಎಂಬುದು ಸರ್ಕಾರದ ಆಶಯ ಮತ್ತು ನೀತಿಯಾಗಿರುತ್ತದೆ.ಆದ್ದರಿಂದ ಕರ್ನಾಟಕ ಸರ್ಕಾರ ಈ ಕಾಯ್ದೆಯನ್ವಯ ಸೇವಾ ಯೋಜನೆಯನ್ನು ಸಕಾಲ ಎಂದು ಹೆಸರಿಸಿದೆ.
ಸರ್ಕಾರ ಅಂಗೀಕರಿಸಿರುವ ಯೋಜನೆಯ ಲಾಂಛನ ಮತ್ತು ಘೋಷ ವಾಕ್ಯಗಳು ನಾಗರಿಕರ ಸೇವೆಗಳ ಖಾತರಿ ಯೋಜನೆಯನ್ನು ಹಿಡಿದಿಟ್ಟಿವೆ.ಲಾಂಛನ ಗಡಿಯಾರ (ಸಮಯ)ವನ್ನು ಪ್ರತಿನಿಧಿಸುತ್ತದೆ.
ಇಂದು ನಾಳೆ ಇನ್ನಿಲ್ಲ ಹೇಳಿದ ಸಮಯಕ್ಕೆ ತಪ್ಪೀಲ್ಲ ಎಂಬುದು ಧ್ಯೇಯ(ಘೋಷ) ವಾಕ್ಯಗಳಾಗಿವೆ.

ಸಕಾಲ : ಹಿನ್ನೆಲೆ ಮತ್ತು ಉದ್ದೇಶ :-
 ಭಾರತದ ಸಂವಿಧಾನ ಪ್ರಜಾಪ್ರಭುತ್ವ ವ್ಯವಸ್ಥೆಯ ಜೀವಾಳವಾಗಿದು, ಎಲ್ಲವೂ ಸಂವಿಧಾನ ಸೂಚಿಸಿದಂತೆ ನಡೆಯಬೇಕು. ಎಲ್ಲಾ ಸಂಸ್ಥೆಗಳು ಎಲ್ಲಾ ಪ್ರಜೆಗಳು ಸಂವಿಧಾನಕ್ಕೆ ಬದ್ದರಾಗಿರಬೇಕು. ಈ ನಿಟ್ಟಿನಲ್ಲಿ ದೇಶದ ವ್ಯವಹಾರಗಳನ್ನು ನಿಭಾಯಿಸಲು ಸಂವಿಧಾನ ನಿರ್ದೇಶಿಸಿದಂತೆ ಶಾಸಕಾಂಗ ಕಾರ್ಯಾಂಗ ಮತ್ತು ನ್ಯಾಯಾಂಗ ವ್ಯವಸ್ಥೆಗಳು ಜಾರಿಯಲ್ಲಿವೆ.
 ಪ್ರಜಾಪ್ರಭುತ್ವ ವ್ಯವಸ್ಥೆ ತನ್ನ ಮೂಲಭೂತ ಆಶಯ ಮತ್ತು ತತ್ವಗಳಿಗನುಗುಣವಾಗಿ ಕೆಲಸ ಮಾಡಿದರೆ ಎಲ್ಲವೂ ಸುಲಲಿತ ಮತ್ತು ಸುಮಧುರವಾಗಿರುತ್ತದೆ. ಆದರೆ ಸಮಸ್ಯೆ ಪ್ರಾರಂಭವಾಗುವುದು ಚುನಾವಣೆಗಳ ನಂತರವೇ! ಸರ್ಕಾರ ರಚನೆಯಾಗಿ ಆಡಳಿತ ಕೈಗೆ ಬರುತ್ತಿದ್ದಂತೆ ಜನ ಪ್ರತಿನಿಧಿಗಳ ವರ್ತನೆ ಬದಲಾಗಿ ಬಿಡುತ್ತದೆ ಅವರು ಪ್ರಭುಗಳಾಗಿ ಬಿಡುತ್ತಾರೆ ಅವರು ಆಳಿ ದ ಹಾಗೆ ಜನ ಆಳಿಸಿ ಕೊಳ್ಳಬೇಕಾಗುತ್ತದೆ ಸರ್ಕಾರವನ್ನು ರಚಿಸುವ (ಪರೋಷವಾಗಿ) ಅಧಿಕಾರ ಜನರಿಗಿದ್ದರೂ, ಸರ್ಕಾರದ ಮಂತ್ರಿ/ನೌಕರರ ಮೇಲೆ ಜನರಿಗೆ ಯಾವುದೇ ನಿಯಂತ್ರಣ ಇರುವುದಿಲ್ಲ ಹಾಗಾಗಿ ದಿನನಿತ್ಯದ ವ್ಯವಹಾರಗಳಲ್ಲಿ ಸರ್ಕಾರಿ ಆಡಳಿತದಲ್ಲಿ ಸಾಮಾನ್ಯ ಜನರು ದಿನಗಟ್ಟಲೆ ಕಛೇರಿಗಳಿಗೆ ಅಲೆದಾಡಬೇಕಾದ , ಸರ್ಕಾರಿ ನೌಕರರ ಮರ್ಜಿಗೆ ಕಾಯಬೇಕಾಗಿ ಬಂದಿರುವ ಪರಿಸ್ಥಿತಿ ಉದ್ಭವವಾಗಿದೆ.
ಅದಕ್ಷ ಹಾಗೂ ಭ್ರಷ್ಟ ಆಡಳಿತ ಏರ್ಪಟ್ಟಾಗ ಜನರಿಗೆ ಕಷ್ಟ ನಷ್ಟ ಕಟ್ಟಿಟ್ಟ ಬುತ್ತಿ ಇದು ಅಸಹನೆ, ಅಸಮಧಾನ ಹಾಗೂ ಅಂತಿಮವಾಗಿ ಜನರ ಪ್ರತಿರೋದಕ್ಕೆ ದಾರಿಮಾಡಿಕೊಡುತ್ತದೆ. ಈ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಎಚ್ಚೆತ್ತು ಕೆಲವು ರಚನಾತ್ಮಕ ಕ್ರಮಗಳನ್ನು ತೆಗೆದುಕೊಂಡಿದೆ. ಅದರಲ್ಲಿ ಬಹಳ ಮುಖ್ಯವಾದ್ದು ನಾಗರಿಕ ಸನ್ನದು ಅಥವಾ ನಾಗರಿಕ ಸೇವೆಗಳ ಖಾತರಿ ಎಂಬ ಜನಪರ ಸುಧಾರಣೆ ಅಗತ್ಯವಾದ ನಾಗರಿಕ ಸೇವೆಗಳನ್ನು ಜನರಿಗೆ ಸಕಾಲದಲ್ಲಿ ಒದಗಿಸುವುದು ಈ ಸುಧಾರಣೆಯ ಸರಳ ಉದ್ದೇಶ ಬಿಹಾರ ಮಧ್ಯಪ್ರದೇಶ ದೆಹಲಿ ಸೇರಿದಂತೆ ಕೆಲವು ರಾಜ್ಯಗಳು ಮೊದಲ ಹೆಜ್ಜೆ ತೆಗೆದು ಕಾಯಿದೆ ರೂಪದಲ್ಲಿ ನಾಗರಿಕ ಸೇವೆಗಳ ಸುಧಾರಣೆಯನ್ನು ಜಾರಿಗೆ ತಂದವು ಈಗ ಕರ್ನಾಟಕ ಸರ್ಕಾರ ನಾಗರಿಕರಿಗೆ ಸೇವೆಗಳ ಖಾತರಿ ಕಾಯಿದೆ ಜಾರಿಗೊಳಿಸಿ ರಾಜ್ಯದ ಜನತೆಗೆ ಉತ್ತಮವಾದ ಸೇವೆ ಸಲ್ಲಿಸಲು ಮುಂದಾಗಿದೆ.
ನಾಗರಿಕರಿಗೆ ಸೇವೆಗಳ ಖಾತರಿ ಕಾಯಿದೆಯ ಪ್ರಮುಖ ಅಂಶಗಳು:-
ಈ ಕಾಯಿದೆ ಅನ್ವಯ ಸರ್ಕಾರ ೩೦ ಇಲಾಖೆಗಳನ್ನು ಗುರುತಿಸಿದ್ದು ಈ ೩೦ ಇಲಾಖೆಗಳೂ ಒದಗಿಸುವ ಸೇವೆಗಳ ಪೈಕಿ ಒಟ್ಟು ೨೬೫ ಸೇವೆಗಳನ್ನು ಖಾತ್ರಿಗೊಳಿಸಿದೆ.
    ಈ ಕಾಯಿದೆಯನ್ವಯ ನಾಗರಿಕರು ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ.
    ಪ್ರತಿ ಇಲಾಖೆಯಲ್ಲಿ ಯಾವ ಅಧಿಕಾರಿಗೆ ಅರ್ಜಿ ಸಲ್ಲಿಸಬೇಕು ಮತ್ತು ಅರ್ಜಿ ಸ್ವೀಕರಿಸಿದೆ ಎಷ್ಟು ಕಲಾವಧಿಯಲ್ಲಿ (ದಿನಗಳಲ್ಲಿ) ಸೇವೆಯನ್ನು ಒದಗಿಸಬೇಕು ಎಂಬುದನ್ನು ನಿಗದಿಪಡಿಸಲಾಗಿದೆ(ಅರ್ಜಿಯನ್ನು ತಿರಸ್ಕರಿಸುವ ಸಂದರ್ಭಗಳಲ್ಲಿ ನಿಯೋಜಿತ ಅಧಿಕಾರಿಯು ತಿರಸ್ಕಾರಕ್ಕೆ ಕಾರಣಗಳನ್ನು ಬರವಣಿಗೆಯಲ್ಲಿ ಕೊಡಬೇಕಾಗುತ್ತದೆ)
    ಅರ್ಜಿದಾರ ನಾಗರಿಕನಿಂದ ಅರ್ಜಿ ಸ್ವೀಕರಿಸಿದ್ದಕ್ಕೆ ಸ್ವೀಕೃತಿಯನ್ನು ಕೊಡಬೇಕಾಗುತ್ತದೆ.
    ನಿರ್ದಿಷ್ಟ ಕಲಾವಧಿಯಲ್ಲಿ ಸೇವೆಯನ್ನು ಒದಗಿಸಬೇಕಾದ ಅಧಿಕಾರಿಯು ಸೇವೆಯನ್ನು ಒದಗಿಸದಿದ್ದರೆ ಅರ್ಜಿದಾರರು ಮೊದಲ ಮನವಿ ಸಲ್ಲಿಸಬಹುದು.
    ಅರ್ಜಿದಾರರು ಮೊದಲ ಮನವಿ ಸಲ್ಲಿಸಬೇಕಾದ ಅಧಿಕಾರಿಯನ್ನು ನಿಗದಿಪಡಿಸಲಾಗಿದ್ದು ಹೀಗೆ ನಿಗದಿತವಾದ ಅಧಿಕಾರಿಗೆ ಅರ್ಜಿದಾರರು ಮೊದಲ ಮನವಿ ಸಲ್ಲಿಸಬೇಕಾಗುತ್ತದೆ.
    ಮೊದಲ ಮನವಿಯಲ್ಲಿ ಅರ್ಜಿದರರಿಗೆ ಸೋಲುಂಟಾದರೆ ಮೇಲ್ಮನವಿ ಸಲ್ಲಿಸಬುದಾಗಿದೆ. ಯಾವ ಅಧಿಕಾರಿಗೆ ಮೇಲ್ಮನವಿ ಸಲ್ಲಿಸಬೇಕಾಗುತ್ತದೆ ಎಂಬುದನ್ನು ಸೂಚಿಸಲಾಗಿರುತ್ತದೆ. ಮೊದಲ ಹಾಗೂ ಮೇಲ್ಮನವಿಗಳನ್ನು ಇಂತಿಷ್ಟು ದಿನಗಳಲ್ಲಿ ವಿಲೇವಾರಿ ಮಾಡಬೇಕೆಂದು ಕಾಲಮಿತಿ ನಿಗದಿಪಡಿಸಲಾಗಿದೆ.
    ನಿಗದಿತ ಕಾಲಾವಧಿಯಲ್ಲಿ ಅರ್ಜಿದಾರ ನಾಗರಿಕರಿಗೆ ಖಾತ್ರಿಗೊಳಿಸಿದ ಸೇವೆಯನ್ನು ಒದಗಿಸಲಾಗಿದಿದ್ದ ಪಕ್ಷದಲ್ಲಿ ಅರ್ಜಿದಾರರಿಗೆ ಸರ್ಕಾರ ನಿಗದಿಗೊಳಿಸಿರುವ ಪರಿಹಾರ ಮೊತ್ತವನ್ನು ಕೊಡಬೇಕಾಗುತ್ತದೆ.
    ಕಾಲಮಿತಿಯೊಳಗೆ ಸೇವೆ ಸಲ್ಲಿಸಲು ವಿಫಲವಾದ ಅಧಿಕಾರಿ ಅಥವಾ ನೌಕರರಿಗೆ ಸರ್ಕಾರ ದಂಡ ವಿಧಿಸಬಹುದು ಮತ್ತು ಪ್ರಕರಣವನ್ನು ಕಪ್ಪು ಚುಕ್ಕೆಯಾಗಿ ಅಧಿಕಾರಿ/ನೌಕರನ ಸೇವಾ ದಾಖಲೆಗಳಲ್ಲಿ ನಮೂದಿಸಬಹುದು.

ಯೋಜನೆಯ ಸಂಕ್ಷಿಪ್ತ ಇತಿಹಾಸ:-
ನಾಗರಿಕ ಸನ್ನದು ಅಂದರೆ ನಾಗರಿಕರು ಪಡೆಯಬೇಕಾದ ಸೇವೆ ಮತ್ತು ಹಕ್ಕು ಈ ಪರಿಕಲ್ಪನೆ ಮೊದಲು ಮೂಡಿ ಬಂದಿದ್ದು ಬ್ರಿಟನ್ ದೇಶದಲ್ಲಿ ಇದು ಸಹಜವೂ ಆಗಿತ್ತು. ಏಕೆಂದರೆ ವಿಶ್ವದ ಮೊತ್ತ ಮೊದಲ ಪ್ರಜಾಪ್ರಭುತ್ವ ವ್ಯವಸ್ಥೆ ರೂಪು ತಾಳಿದ್ದು ಬ್ರಿಟನ್ನಿನಲ್ಲೇ ಪ್ರಜಾಪ್ರಭುತ್ವದಲ್ಲಿ ಸರ್ಕಾರದ ಆಡಳಿತ ತೆರೆದ ಪುಸ್ತಕವಾಗಿರಬೇಕು. ಅಂದರೆ ಸಂಪೂರ್ಣ ಪಾರದರ್ಶಕತೆ ಹೊಣೆಗಾರಿಕೆ (ಉತ್ತರದಾಯಿತ್ವ) ಹಾಗೂ ಸಹ್ನದಯ ಸ್ವಂದನ ಆಡಳಿತದಲ್ಲಿ ಹಾಸು ಹೊಕ್ಕಾಗಿರಬೇಕು ಎಂಬುದು ಜಗತ್ತು ಒಪ್ಪಿರುವ ಸಿದ್ದಾಂತವಾಗಿದೆ ೧೯೯೧ ರಲ್ಲಿ ಅಂದಿನ ಬ್ರಿಟಿಷ್ ಪ್ರಧಾನಮಂತ್ರಿ ಜಾನ್ ಮೇಜರ್ ರವರು ಪ್ರಪ್ರಥಮವಾಗಿ ಇಂತಹ ಒಂದು ನಾಗರಿಕ ಸನ್ನದನ್ನು ಜಾರಿಗೊಳಿಸಿದರು. ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ಕಾಲಕಾಲಕ್ಕೆ ತಕ್ಕಂತೆ ಯೋಜನೆಯನ್ನು ಪರಿಶ್ಕರಿಸಿ ಅನುಶ್ಟಾನಗೊಳಿಸುತ್ತಿವೆ.
ಬ್ರಿಟನ್ ದೇಶದ ನಾಗರಿಕ ಸನ್ನದು ಪರಿಕಲ್ಪನೆ ಕ್ರಮೇಣ ವಿಶ್ವದಲ್ಲಿ ವ್ಯಾಪಿಸಿಕೊಂಡಿತು.ಕಾಮನ್ ವೆಲ್ತ್ ರಾಷ್ಟ್ರಗಳು ತಮ್ಮ ಸನ್ನಿವೇಶಕ್ಕೆನುಗುಣವಾಗಿ ನಾಗರಿಕ ಸನ್ನದು ಯೋಜನೆಗಳನ್ನು ಜಾರಿಗೊಳಿಸಿದವು.ಭಾರತವೂ ಹಿಂದೆ ಬೀಳಲಿಲ್ಲ ! ೧೯೯೭ ರಮೇ ತಿಂಗಳನಲ್ಲಿ ಅಂದಿನ ಪ್ರಧಾನ ಮಂತ್ರಿಗಳ ಅಧ್ಯಕ್ಷತೆಯಲ್ಲಿ ಜರುಗಿದ ಮುಖ್ಯಮಂತ್ರಿಗಳ ಸಮ್ಮೇಳನದಲ್ಲಿ ಪರಿಣಾಮಕಾರಿ ಹಾಗೂ ಸಂವೇದನಾಶೀಲ ಸರ್ಕಾರ ಎಂಬ ಕಾರ‍್ಯ ಯೋಜನೆಯನ್ನು ಸಿದ್ದಪಡಿಸಲು ತೀರ್ಮಾನಿಸಲಾಯಿತು. ಹೆಸರು ಬದಲಾಗಿದ್ದರೂ ಇದು ಕೊಡ ನಾಗರಿಕರಿಗೆ ಉತ್ತಮ ಸೇವೆ ಒದಗಿಸುವ ನಾಗರಿಕ ಸನ್ನದು.ಕಾರ್ಯಕ್ರಮವಾಗಿತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅನೇಕ ಇಲಾಖೆಗಳು ಹಾಗೂ ಸರ್ಕಾರಿ ಸಂಸ್ಥೆಗಳು ನಾಗರಿಕ ಸನ್ನದು ಬಿಡುಗಡೆಗೊಳಿಸಿದವು.ಆದರೆ ಇದು ಯಾವುದೂ ಜನಕ ಗಮನ ಸೆಳೆಯಲಿಲ್ಲ ನಾಗರಿಕ ಸನ್ನದು ಕಾರ್ಯಕ್ರಮ ಒಂದು ಕಾಟಚಾರದ ಪ್ರಕ್ರಿಯೆಯಾಗಿ ವ್ಯರ್ಥವಾಯಿತು. ಇದೆಲ್ಲ ನಡೆದದ್ದು ಸುಮಾರು ೧೫ ವರ್ಷಗಳ ಹಿಂದೆ,ಆದರೆ ಈಗ ಹಾಗಿಲ್ಲ ಈ ಅವಧಿಯಲ್ಲಿ ಕಾಲ ಬದಲಾಗಿದೆ.ಜನ ಜಾಗ್ನತಿಯ ಪ್ರಮಾಣ ಮತ್ತು ವೇಗ ಪ್ರತಿ ವರ್ಷವೂ ಹೆಚ್ಚಾಗುತ್ತಿದೆ. ಮೌನವಾಗಿ ಸಹಿಸಿಕೊಂಡು ಆಳಿಸಿಕೊಳ್ಳಲು ಈಗ ಜನ ಸಿದ್ದರಿಲ್ಲ ಎಂಬುದು ರಾಜಕಾರಣಿಗಳಿಗೆ ಮತ್ತು ಅಧಿಕಾರಿಗಳಗೆ ಮನವರಿಕೆಯಾಗಿದೆ.

 ಆದ್ದರಿಂದ ಸರ್ಕಾರಗಳು ನಾಗರಿಕ ಸೇವೆಗಳ ಪಟ್ಟಿ ಮಾಡಿ ಪ್ರಚಾರಕ್ಕಾಗಿ ಬಿಡುಗಡೆ ಮಾಡುತ್ತಿಲ್ಲ ಬದಲಾಗಿ ಸಂವಿಧಾನಕ್ಕೆನುಗುಣವಾಗಿ ಕಾನೂನು ರಚಿಸಿ ಅನುಪ್ಠಾನಗೊಳಿಸುತ್ತಿವೆ. ಈನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಜಾರಿಗೊಳಿಸಿರುವ ನಾಗರಿಕರ ಸೇವೆಗಳ ಖಾತರಿ ಯೋಜನೆ ಸದುದ್ದೇಶದಿಂದ ಕೊಡಿದೆ ಮತ್ತು ಪರಿಣಾಮಕಾರಿಯಾಗಿದೆ.ನಾಗರಿಕರು (ಜನತೆ) ಮಾಡಬೇಕಾದ್ದು ಇಷ್ಠೆ.ಕಾನೂನಿನ ಅಂಶಗಳನ್ನು ಸರಿಯಾಗಿ ತಿಳಿದುಕೊಂಡು ಅದರಂತೆ ಸೇವೆ ಪಡೆದುಕೊಳ್ಳಲು ಕಾರ್ಯೋನ್ಮುಖರಾಗುವುದು.

 ೨೦೧೧ ರಲ್ಲಿ ಜನಲೋಕಪಾಲ ಪರ ಹೋರಾಟ ನಡೆಸಿದ್ದ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರ ಬೇಡಿಕೆಗಳಲ್ಲಿ ನಾಗರಿಕ ಸನ್ನದು ಕೊಡ ಒಂದಾಗಿತ್ತು. ಬಿಹಾರ ಮಧ್ಯಪ್ರದೇಶ ಮುಂತಾದ ರಾಜ್ಯಗಳು ಕೇಂದ್ರಕ್ಕಿಂತಲೂ ಮೊದಲೇ ನಾಗರಿಕ ಸನ್ನದು ಅಳವಡಿಸಿಕೊಂಡಿದ್ದವು.ವಿವಿಧ ರಾಜ್ಯಗಳ ಮಾದರಿ ಬಗ್ಗೆ ಅಧ್ಯಯನ ನಡೆಸಿದ್ದ ಡಿ.ವಿ.ಸದಾನಂದಗೌಡರ ನೇತ್ನತ್ವದ ಸರ್ಕಾರ ೨೦೧೨ ಏಪ್ರಿಲ್ ೦೨ ರಂದು ಸಕಾಲ ಯೋಜನೆ ಜಾರಿಗೆ ತಂದರು ಇದು ಯಶಸ್ವಿಯಾಗಿ ಮುಂದುವರಿಯುತ್ತಿದೆ.

 ಮಸೂದೆ ವಿಶೇಷ:-
    ಎಲ್ಲ ರಾಜ್ಯಗಳೂ ಇಂಥ ಸೌಲಭ್ಯ ಜಾರಿಗೊಳಿಸುವುದು ಕಡ್ಡಾಯ.
    ಈ ಮಸೂದೆಯಿಂದ ರಾಜ್ಯಗಳ ಅಧಿಕಾರಕ್ಕೆ ದಕ್ಕೆ ಬಿಜೆ.ಪಿ. ವಿರೋಧ.
    ಕಾಲಮಿತಿಯೊಳಗೆ ಸರ್ಕಾರಿ ಸೇವೆ ಒದಗಿಸುವ ಕಲ್ಪನೆ ಬ್ರಿಟನ್ ದು ೧೯೧೯ ರಲ್ಲಿ ಮೊದಲಬಾರಿಗೆ ಅಲ್ಲಿ ಇದು ಜಾರಿಗೆ ಬಂದಿತ್ತು.
    ವಿಧೇಯಕ ಕಾಯ್ದೆಯಾದ ಬಳಿಕ ಕೇಂದ್ರ ಸರ್ಕಾರದ ನಾಗರಿಕ ಸನ್ನದಿನಲ್ಲಿರುವಂತೆ ಎಲ್ಲ ರಾಜ್ಯಗಳೂ ವಿವಿಧ ಸರ್ಕಾರಿ ಸೇವೆಗಳನ್ನು ಕಾಲಮಿತಿಯೊಳಗೆ ಒದಗಿಸಬೇಕಾಗುತ್ತದೆ.
    ಪಾಸ್ ಪೋರ್ಟ್,ಪಿಂಚಣಿ,ಜನನ-ಮರಣ ಪ್ರಮಾಣ ಪತ್ರ, ತೆರಿಗೆ ರೀಫಂಡ್, ಜಾತಿ ಪ್ರಮಾಣಪತ್ರ ಮುಂತಾದ ಸರ್ಕಾರಿ ಸೇವೆಗಳು ಇದರಡಿ ಬರುತ್ತವೆ.
    ಸೇವೆ ನೀಡಲು ಉದ್ದೇಶ ಪೂರ್ವಕವಾಗಿ ವಿಳಂಬ ಮಾಡುವ ಅಧಿಕಾರಿಗೆ ದಿನಕ್ಕೆ ೨೫೦ ರೂ ಅಥವಾ ಗರಿಷ್ಠ ೫೦ ಸಾವಿರರೂವರೆಗೂ ದಂಡ ವಿಧಿಸುವ ಅವಕಾಶವುಂಟು ಅಲ್ಲದೇ, ಭ್ರಷ್ಟಾಚಾರ ಕುರಿತು ತನಿಖೆ ಹಾಗೂ ಶಿಸ್ತು ಕ್ರಮ ಜರುಗಿಸುವ ಅವಕಾಶವಿದೆ.
    ವಿಧೇಯಕ ಕಾಯ್ದುಯಾದ ಬಳಿಕ ಕೇಂದ್ರ ಮಟ್ಟದಿಂದ ಪಂಚಾಯಿತಿವರೆಗೂ ದೂರು ಇತ್ಯರ್ಥ ಅಧಿಕಾರಿಗಳನ್ನು ನೇಮಿಸಬೇಕಾಗುತ್ತದೆ.
    ಕಾಲಮಿತಿಯೊಳಗೆ ಸೇವೆ ಒದಗಿಸಬೇಕಾದಾದ ಸಾರ್ವಜನಿಕ ಸಂಸ್ಥೆಗಳ ಪಟ್ಟಿಯಲ್ಲಿ ಸಚಿವಾಲಯಗಳು, ಖಾಸಗಿ, ಸಾರ್ವಜನಿಕ ಸಹಭಾಗಿತ್ವದ ಯೋಜನೆಗಳು ಸರ್ಕಾರದ ಅನುದಾನ ಪಡೆದಿರುವ (ಎನ್.ಜಿ.ಓ) ಸರ್ಕಾರಕ್ಕೆ ಹೊರಗುತ್ತಿಗೆ ಸೇವೆ ಒದಗಿಸುತ್ತಿರುವ ಖಾಸಗಿ ಕಂಪನಿಗಳು ಸೇರಿವೆ.
    ಅಣ್ಣಾ ಹಜಾರೆ ಅವರ ಪ್ರಮುಖ ಬೇಡಿಕೆಗಳಲ್ಲಿ ಕಾಲಮಿತಿಯ ಸೇವೆಯೂ ಒಂದಾಗಿತ್ತು.
    ಲೋಕ ಸಭೆಯಲ್ಲಿ ೨೦೧೧ ರ ಡಿಸೆಂಬರ್ ನಲ್ಲಿ ಈ ಮಸೂದೆ ಮಂಡನೆಯಾಗಿತ್ತು. ಇದೀಗ ೧೫ ತಿಂಗಳ ಬಳಿಕ ಸಂಪುಟದ ಮುಂದಿಟ್ಟು ಅನುಮತಿ ಪಡೆಯಲಾಗಿದೆ.

ಅಧ್ಯಾಯ-೦೨     ಸಾಹಿತ್ಯ ಪರಾಮರ್ಶೆ
೧)    ವೇದ ಮೂರ್ತಿ :- ನಾಗರಿಕ ಸೇವೆಗಳ ಖಾತರಿ ಕಾಯದೆಯನ್ನು ಹಾಗೂ ಅದರ ಪ್ರಕ್ರಿಯೆಯನ್ನುಪರಿಗಣಿಸಿದರೆ ಒಂದು ನಿರ್ದಿಷ್ಟ ಕಾಲಮಿತಿಯಲ್ಲಿ ಸೇವೆಯನ್ನು ಒದಗಿಸಲು ಇತ್ತು ಕೊಡಲಾಗಿದೆ.ಅಂದರೆ ನಾಗರಿಕರಿಗೆ ಸಕಾಲದಲ್ಲಿ ಸೇವೆ ಪಡೆದುಕೊಳ್ಳವುದು ನಾಗರಿಕ ಹಕ್ಕು ಆಗಿರುತ್ತದೆ ಎಂಬುದು ಸರ್ಕಾರದ ಆಶಯ ಮತ್ತು ನೀತಾಯಾಗಿರುತ್ತದೆ,ಆದ್ದರಿಂದ ಕರ್ನಾಟಕ ಸರ್ಕಾರ ಈ ಕಾಯ್ದೆಯನ್ವಯ ಸೇವಾ ಯೋಜನೆಯನ್ನು ಸಕಾಲ ಎಂದು ಹೆಸರಿಸಿದೆ.
೨)    ಬಿ.ವಿ. ಚಂದ್ರಖೇಖರ್ .ಎಂ.ಎ.ಎಲ್.ಎಲ್.ಎಂ :- ನಿವೃತ್ತ ನ್ಯಾಯಾಧೀಶರು (ಸುಪ್ರೀಂಕೋರ್ಟ್) ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ನಾಗರಿಕ ಸೇವಾ ಖಾತರಿ ಕಾಯಿದೆ ರಾಜ್ಯಾದ್ಯಂತ ಜಾರಿಗೆ ಬಂದಿದ್ದು ಸರ್ಕಾರದ ಆಡಳಿತದಲ್ಲಿ ಸುಧಾರಣೆ ಮತ್ತು ನಾಗರಿಕರ ಜೀವನದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ನಾಂದಿಯಾಗಿದೆ.ಈ ಕಾಯಿದೆ ರಾಜ್ಯದೆಲ್ಲೆಡೆ ಪ್ರಾಮಾಣಿಕವಾಗಿ ಅನುಷ್ಠಾನಗೊಂಡಲ್ಲಿ ಸಾರ್ವಜನಿಕ ಜೀವನದಲ್ಲಿ ಒಂದು ಕ್ರಾಂತಿ ಜರುಗಿ ಆಡಳಿತದಲ್ಲಿ ದಕ್ಷತೆ,ಪಾರದರ್ಶಕತೆ.ಪ್ರಾಮಾಣಿಕತೆ ಮತ್ತು ಸೇವಾ ನಿಷ್ಠೆ ಹೆಚ್ಚಾಗುವುದರಲ್ಲಿ ಎರಡು ಮಾತಿಲ್ಲ.
೩)    ಡಿ.ವಿ. ಸದಾನಂದಗೌಡ:- ಮಾಜಿ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ ಸರ್ಕಾರಿ ಯೋಜನೆಗಳ ಫಲ ಫಲಾನುಭವಿಗಳಿಗೆ ವ್ಯಕ್ತಿಗೆ ಪ್ರಯೋಜನ ದೊರೆಯಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಪ್ರಯೋಜನ ದೊರೆಯಬೇಕು.ಅಭಿವೃದ್ಧಿಯ ವೇಗ ಹೆಚ್ಚಿಸುವುದರ ಜೊತೆಗೆ ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ ಸಾಧ್ಯಾವಾಗಬೇಕು ನಮ್ಮ ಈ ಧ್ಯೇಯವನ್ನು ಸಾಕಾರಗೊಳಿಸಲು ಆಡಳಿತ ಶೈಲಿಯಲ್ಲಿ ಬದಲಾವಣೆ ಅನಿವಾರ್ಯ ಆದ್ದರಿಂದ ಕರ್ನಾಟಕ ಸರ್ಕಾರ ನಾಗರಿಕ ಸೇವಾ ಖಾತರಿ ಕಾಯಿದೆಯನ್ನು ಜಾರಿಗೆ ತರಲಾಗಿದೆ ಇದರಿಂದ ಸರ್ಕಾರಿ ಕಛೇರಿಗಳಿಗೆ ಭೇಟಿ ನೀಡುವ ಸಾರ್ವಜನಿಕರಿಗೆ ಯಾವುದೇ ಸರ್ಕಾರಿ ಅಧಿಕಾರಿ ಆಥವಾ ಸಿಬ್ಬಂದಿ ಇಂದು ನಾಳೆ ಎನ್ನುವಂತಿಲ್ಲ.ಹೇಳಿದ ಸಮಕ್ಕೆ ಸೇವೆ ಮತ್ತು ಸವಲತ್ತುಗಳನ್ನು ಒದಗಿಸುವುದು ಕಡ್ಡಾಯ
೪)     ಸ್ವರ್ಧಾ ಸ್ವೂರ್ತಿ :- ಏಪ್ರಿಲ್ -೨೦೧೩
ಕರ್ನಾಟಕದಲ್ಲಿ ಭರ್ಜರಿ ಯಶಸ್ಸುಗಳಿಸಿರುವ ಸಕಾಲ ಮಾದರಿ ಯೋಜನೆಯನ್ನು ಇದೀಗ ಕೇಂದ್ರ ಸರ್ಕಾರವು ಜಾರಿಗೆ ತರಲು ಮುಂದಾಗಿದೆ.

ಅಧ್ಯಾಯ-೦೩. ಸಂಶೋಧನ ವಿಧಾನ:-
 ಪೀಠಿಕೆ
ಯಾವುದೇ ವಿಷಯ ಅಥವಾ ವಸ್ತುವಿನ ಬಗ್ಗೆ ವಿಮಶ್ಮಾತ್ಮಕವಾಗಿ ವಿಚಾರಣೆ ಮಾಡುವುದು. ಹೊಸ ಸಿದ್ದಾಂತಗಳನ್ನು ಬೆಳಕಿಗೆ ತರುವಂತಹ ಪ್ರಕ್ರಿಯೆಯೇ ಸಂಶೋಧನೆ ಅಧ್ಯಯನಕ್ಕಾಗಿ ಆಯ್ಕೆ ಮಾಡಿದ ವಿಷಯದ ಬಗ್ಗೆ ಪ್ರತಿಯೊಂದು ಮೂಲದಿಂದಲೂ ದೊರೆಯತಕ್ಕಂತಹ ಮಾಹಿತಿಯನ್ನು ಸಂಗ್ರಹಿಸುವುದು. ಸಂಶೋಧನೆಯ ಮೊದಲ ಧ್ಯೇಯವಾಗಬೇಕು ಚಲನೆಯಲ್ಲಿರುವ ಸಿದ್ಧಾಂತಗಳನ್ನು ಪ್ರಾಯೋಗಿಕವಾಗಿ ಗುರಿಗಳಲ್ಲಿ ಮುಖ್ಯವಾದವು.

ಸಂಶೋಧನೆ ಎಂಬ ಪದದ ಸೂಕ್ತ ಅರ್ಥ:-
    ಪೆಂಡ್ಲಟನ್ ಹೆರಿಂಗ್ ರವರ ಪ್ರಕಾರ ಸಂಶೋಧನೆಯು ಸ್ಪಷ್ಟವಾದ ಕ್ರಿಯೆ ಈಗಾಗಲೇ ಇರುವ ಜ್ಞಾನ ಭಂಡಾರಕ್ಕೆ ಹೆಚ್ಚು ಜ್ಞಾನವನ್ನು ಕೊಡಿಸುವುದೇನೂ ಸರಿ ಆದರೆ,ನಮ್ಮ ಮನಸ್ಸು ಆವರಿಸಿರುವ ಮತ್ತು ಉಪಯುಕ್ತವಲ್ಲದ ಸಿದ್ಧಾಂತಗಳನ್ನು ಶುದ್ಧಿ ಆಡಲು ಸಂಶೋಧನೆಯು ಒಂದು ಒಗ್ಗೂಡಿಸುವ ಪ್ರಕ್ರಿಯೆಯಾಗಿದ್ದು ನಿರಾಕರಿಸುವ ಪ್ರಕ್ರಿಯೆಯು ಹೌದು ಎಂದು ವಿವರಿಸಿದ್ದಾರೆ.
    ರೆಡೆ ಮೆನ್ ಮತ್ತು ಮಾರೆರವರ ಪ್ರಕಾರ ಹೊಸ ಜ್ಞಾನವನ್ನು ಪಡೆಯಲು ಕೈಗೊಂಡ ವ್ಯವಸ್ಥಿತ ಪ್ರಯತ್ನವೇ ಸಂಶೋಧನೆ ಎಂದಿದ್ದಾರೆ.

ಸಾಮಾಜಿಕ ಜೀವನದ ವಿವಿಧ ಮುಖಗಳು ಮಾನವ ಸಮಾಜದಲ್ಲಿ ಆಗಿರುತಕ್ಕಂತಹ ಆಗುತ್ತಿರುವ ಅಭಿವೃದ್ಧಿ ಕಾರ್ಯಗಳ ಸಮಾಜದ ವಿವಿಧ ಸಂಸ್ಥೆಗಳಲ್ಲಿ ನಡೆಯುವ ಕಾರ್ಯಚಟುವಟಿಕೆಗಳು ಸಮಾಜದಲ್ಲಿರುವ ಸಮಸ್ಯೆಗಳಿಗೆ ಕಾರಣಗಳನ್ನು ಕಂಡು ಹಿಡಿಯುವುದು. ಅವುಗಳಿಗೆ ಸೂಕ್ತ ಪರಿಹಾರಗಳನ್ನು ಹುಡುಕುವುದು ಇನ್ನು ಮುಂತಾದವು ಸಾಮಾಜಿಕ ಸಂಶೋಧನೆಯ ವಿಷಯಗಳಾಗಿರುತ್ತವೆ.

ಸಂಶೋಧನೆಯ ವಿಶ್ವ:-
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಹೋಬಳಿಯ ಗ್ರಾಮ ಪಂಚಾಯಿತಿಗಳು ಪ್ರಸುತ್ತ ಸಂಶೋಧನೆಯ ಆಧ್ಯಯನ ಜಗತ್ತಾಗಿದೆ.

 ಭೌಗೋಳಿಕ ವಿವರ:-
ಸಾದಲಿ ಹೋಬಳಿ ಶಿಡ್ಲಘಟ್ಟ ತಾಲ್ಲೂಕಿ ಕೇಂದ್ರಕ್ಕೆ ಸುಮಾರು ೨೬ ಕಿ.ಮೀ.ಅಂತರದಲ್ಲಿದೆ ಸಾದಲಿ ಹೋಬಖಳಿ ರಾಜ್ಯದ ರಾಜಧಾನಿ ಬೆಂಗಳೂರು ನಗರದಿಂದ ಸುಮಾರು ೮೬ ಕಿ.ಮೀ ದೂರದಲ್ಲಿದೆ.ಭೌಗೋಳಿಕ ಹೋಬಳಿಯು ಸುಮಾರು ೧೯೦೯೫ ಹೆಕ್ಟೇರ್ ವಿಸ್ತೀರ್ಣದಲ್ಲಿ ವ್ಯಾಪಿಸಿದ್ದು ಹೆಚ್ಚಾಗಿ ಬೆಟ್ಟ ಗುಡ್ಡಗಳಿಂದ ಕೂಡಿದೆ.

ಸಾಮಾಜಿಕ ವಿವರ:-
ಸಾದಲಿ ಹೋಬಳಿಯಲ್ಲಿ ೦೪ ಗ್ರಾಮ ಪಂಚಾಯಿತಿಗಳು ಕಾರ್ಯೊಚರಣೆಯಲ್ಲಿದೆ ೦೪ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಗೆ ಸುಮಾರು ೬೦ ಗ್ರಾಮ ಸಮುದಾಯಗಳು ಸೇರುತ್ತವೆ ಪ್ರತಿಯೊಂದು ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿರುವ ಗ್ರಾಮಗಳು ಮತ್ತು ವಿಸ್ತೀರ್ಣತೆ ಹಾಗೂ ಸಾಂಸ್ಕತಿಕವಾಗಿ ಭಿನ್ನತೆಯಿಂದ ಕೂಡಿದರೂ ಕೆಲವುಗಳಲ್ಲಿ ಸ್ವಾಮ್ಯತೆಯನ್ನು ಕಾಣಬಹುದಾಗಿದೆ. ಬೆಟ್ಟಗುಡ್ಡಗಳಿಂದ ಮಳೆಗಾಲದಲ್ಲಿ ನೀರು ಹರಿದು ಕೆರೆಗಳಲ್ಲಿ ನೀರು ಶೇಖರಣೆಯಾಗುತ್ತದೆ.ಈ ಭಾಗದ ಮರುಳು ಮತ್ತು ಬಂಡೆಗಳು ಜನತೆಗೆ ಹೆಚ್ಚು ಆರ್ಥಿಕವಾಗಿ ಲಾಭ ದೊರೆಯುವುದು.ವ್ಯವಸಾಯದಿಂದ ಇಲ್ಲ ರೇಷ್ಮ ಬಾಳೆ ತರಕಾರಿ ಬೆಳೆಗಳು ಹೆಚ್ಚಾಗಿ ಬೆಳೆಯುವರು ಗ್ರಾಮ ಸಮುದಾಯದಲಿ ಪ್ರತಿ ವಾರಕೋಮ್ಮ ಒಂದು ದಿನ (ಶನಿವಾರ ) ಸಂತೆ ನಡೆಯುತ್ತದೆ. ಶೈಕಷಣಿಕವಾಗಿಯೂ ಸ್ವಲ್ಪ ಮಟ್ಟಿಗೆ ಹೋಬಳಿಯೂ ಪ್ರಸಿದ್ದಿ ಪಡೆದಿದೆ.
 ಸಾದಲಿ ಹೋಬಳಿಯ ಜನತೆಯು ಕನ್ನಡವನ್ನು ಮಾತೃಭಾಷಯಾಗಿ ಬಳಸುತ್ತಿದದ್ದರೂ ಅಲ್ಪಸ್ವಲ್ಪ ತೆಲುಗು ,ಉರ್ದು, ಭಾಷಯಾಗಿ ಮಾಎನಾಡುತ್ತಾರೆ ಇದರಲ್ಲಿ ತೆಲುಗು ಭಾಷೆ ಹೆಚ್ಚಾಗಿ ಮಾತನಾಡುತ್ತಾರೆ ಎಲ್ಲಾ ಜಾತಿಯ ಜನರು ಸಹ ಇದ್ದು ಸೌಹಾರ್ದಯುತವಾಗಿ ಬಾಳುತ್ತಿದ್ದು ಅಭಿವೃದ್ದಿ ಕಾರ್ಯಗಳಲ್ಲಿ ಪ್ರಗತಿಪರವಾಗಿ ಭಾಗವಹಿಸುತ್ತಿದ್ದಾರೆ.

ಸಾಮಾಜಿಕ ಸಂಶೋಧನೆಯ ಮುಖ್ಯ ಗುರಿಗಳು :-
ವ್ಯವಸ್ಥಿತ ಸಮಾಜವು ಸಾಮಾಜಿಕ ಸಂಸ್ಥೆಗಳ ರಚನೆ ಹಾಗೂ ಕಾರ್ಯಗಳ, ಸಾಮಾಜಿಕ ಜೀವನ-ಗುರಿ ಹಾಗೂ ಸಾಮಾಜಿಕ ಗುಂಪುಗಳ ನಡುವೆ ಇರುವ ಸಂಬಂಧಗಳ ಬಗ್ಗೆ ಮೂಲ ಸಾಮಾಜಿಕ ಸಿದ್ಧಾಂತಗಳನ್ನು ರಚಿಸಿರುವುದರ ಮೂಲಕ ವ್ಯವಸ್ಥಿತ ಜ್ಞಾನವನ್ನು ವೃದ್ಧಿಸುವುದು.ಸಮಾಜವನ್ನು ಕಾಡುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆ ವೈಜ್ಞಾನಿಕ ಅಧ್ಯಯನವನ್ನು ಕೈಗೊಂಡು ಅಧ್ಯಯನಗಳ ಆಧಾರದ ಮೇಲೆ ಸಾಮಾಜಿಕ ಸಮಸ್ಯೆಗಳ ನಿವಾರಣೆಗೆ ಕ್ರಿಯಾತ್ಮಕವಾದ ಸಿದ್ಧಾಂತಗಳನ್ನು ನವ್ಯ ಸಿದ್ಧಾಂತಗಳ ಸಹಾಯದಿಂದ ಪರೀಕ್ಷಿಸುವುದು.ಪರಿಶೀಲಿಸುವುದು ಹೊಸ ಹೊಸ ಸಂಶೋಧನಾ ತಂತ್ರಗಳನ್ನು, ಭಾವನೆಗಳನ್ನು ರೂಪಿಸುವುದು ಮತ್ತು ಮುಂದಿನ ಸಂಶೋಧಕರ ಪೀಳಿಗೆಗೆ ಮಾರ್ಗದರ್ಶನ ನೀಡುವುದು.
ಯಾವುದೇ ಸಂಶೋಧನಾ ಕಾರ್ಯವು ಒಂದು ಕ್ರಮಬದ್ದ ರೀತಿಯಲ್ಲಿ ಕೈಗೊಳ್ಳಬೇಕಾದಾಗ ಅದನ್ನು ಅನೇಕ ಹಂತಗಳನ್ನಾಗಿ ವಿಂಗಡಿಸಿ.ಪ್ರತಿಯಾಂದು ಹಂತದಲ್ಲಿಯೂ ವಿಶಿಷ್ಟವಾದ ಶ್ರಮ ಹಾಗೂ ಶ್ರದ್ದೆಯನ್ನು ವಹಿಸಿ ಸಂಶೋಧಕರು ಕಾರ್ಯನಿರ್ವಹಿಸಬೇಕಾಗುತ್ತದೆ.
ಸಮಾಜ ಕಾರ್ಯ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿಯಾದ ನಾನು ಸಾಮಾಜಿಕ ಅಭ್ಯುದಯ ಕ್ಷೇತ್ರವನ್ನು ಅಧ್ಯಾಯನ ಮಾಡುತ್ತಿರುವ ವಿದ್ಯಾರ್ಥಿಯಾಗಿರುತ್ತೇನೆ.ಸಾಮಾಜಿಕ ಸಂಶೋಧನೆ ಕೈಗೊಳ್ಳಲು ಯಾವುದಾದರೂ ಒಂದು ಸಾಮಾಜಿಕ ಸಮಸ್ಯೆಗಳನ್ನು ಅಧ್ಯಯನ ಮಾಡುವ ಕುರಿತು ಪ್ರಥಮವಾಗಿ ನನ್ನ ಮನಸ್ಸಿಗೆ ಬಂದಿತು. ಆದರೆ ನಾನು ಸಮಾಜ ಕಾರ್ಯ ವಿಭಾಗದಲ್ಲಿ ಪ್ರಥಮ ಮತ್ತು ದ್ವಿತೀಯ ವರ್ಷದಲ್ಲಿ ಸಮುದಾಯದಲ್ಲಿ ಕ್ಷೇತ್ರ ಕಾರ್ಯ ನಿರ್ವಹಿಸಿರುವುದರಿಂದ ಸಮುದಾಯದ ಜನರ ಸಮಸ್ಯೆಗಳ ಬಗ್ಗೆ ನಮ್ಮಗೆ ಅರಿವುವಾಯಿತು. ಇಂತಹ ಸಮಸ್ಯೆಗಳನ್ನು ಸರ್ಕಾರದ ಅಧಿಕಾರಿಗಳು ಪರಿಹಾರ ನೀಡುತ್ತಿಲ್ಲ ಇದರಿಂದ ಜನರು ಹೆಚ್ಚು ತೊಂದರೆಗೆ ಒಳಗಾಗಿದ್ದಾರೆ.ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಸಕಾಲ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತಂದು ಜನರ ಸಮಸ್ಯೆಗಳಿಗೆ ಅಥವಾ ನಾಗರಿಕ ಸೇವೆಗಳನ್ನು ನಿಗಧಿತ ಸಮುಯದಲ್ಲಿ ಒದಗಿಸಲಾಗುತ್ತದೆ.ಆದರಿಂದಾಗಿ ಸರ್ಕಾರದ ಸಕಾಲ ಕಾರ್ಯಕ್ರಮದ ಬಗ್ಗೆ ಗ್ರಾಮೀಣ ಜನರಿಗೆ ಅರಿವು ಇದೆಯೇ ಎಂಬುವುದರ ಬಗ್ಗೆ ತಿಳಿಯಲು ಸಂಶೋಧನೆಯನ್ನು ಕೈಗೊಳ್ಳಲಾಗಿದೆ.
ಸಾಮಾಜಿಕ ಸಂಶೋಧನೆ ಮೊದಲ ಹಂತವೇ ಅಧ್ಯಯನಕ್ಕೆ ವಿಷಯದ ಆಯ್ಕೆ ಮಾಡುವುದು.ಈ ಅಧ್ಯಯನಕ್ಕೆ ಕೆಲವು ಗುರಿಗಳು ಮತ್ತು ಉದ್ದೇಶಗಳನ್ನು ಸಂಶೋಧನೆಗೆ ಆಧಾರ ಕಲ್ಪನೆಗಳು ಅಥವಾ ಪೂರ್ವ ಸಿದ್ಧಾಂತ, ಸಂಶೋಧನೆಯ ವಿಶ್ವ ಸಂಶೋಧನೆಯ ವಿನ್ಯಾಸ .ಮಾಹಿತಿ ಸಂಗ್ರಹ ಮತ್ತು ವಿಧಾನ-ತಂತ್ರಗಳನ್ನು ಬಳಸಿ ಕೊಳ್ಳುವುದು ಉಪಯುಕ್ತವೆನಿಸುತ್ತದೆ.ಆದ್ದರಿಂದ ಪ್ರಧಮವಾಗಿ ಅಧ್ಯಯನ ಅಧ್ಯಯನ ವಿಷಯವನ್ನು ಆಯ್ಕೆ ಮಾಡಿಕೊಂಡು ಧ್ಯೇಯೋದ್ದೇಶಗಳನ್ನು ಇಟ್ಟುಕೊಂಡು ಸಂಶೋಧನೆಯ ವಿಶ್ವ ಮತ್ತು ಸಂಶೋಧನೆಯ ವಿನ್ಯಾಸವನ್ನುಇ ರಚಿಸಿ ಕೆಲವು ಪ್ರಮೇಯಗಳನ್ನು ಅಥವಾ ಪೂರ್ವ ಸಿದ್ಧಾಂತ ಆಯ್ಕೆ ಮಾಡಿಕೊಂಡು ಪ್ರಶ್ನಾವಳಿಯನ್ನು ರಚಿತ ಸಂಶೋಧನಾ ಕಾರ್ಯದಲ್ಲಿ ಅನುಸರಿಸಿ ಮತ್ತು ಸಂದರ್ಶನದ ತಂತ್ರವನ್ನು ಬಳಸಿಕೊಂಡು ಮಾಹಿತಿ ಸಂಗ್ರಹಿಸಿದೆನು.

ಅಧ್ಯಯನ ಪ್ರೇರಣೆ:-
ಸಂಶೋಧನೆಯ ಪ್ರಸ್ತುತ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿಯಾಗಿದ್ದು ; ಸಾಮಾಜಿಕ ಅಭ್ಯುದಯ ಕ್ಷೇತ್ರದಲ್ಲಿ ವಿಶೇಷ ಆಸಕ್ತನಾಗಿದ್ದು ಸಮುದಾಯ ಅಭಿವೃದ್ಧಿ ಮತ್ತು ಸಾಮಾಜಿಕ ಅಭ್ಯುದಯಕ್ಕೆ ಸಂಬಂಧಿಸಿದಂತೆ ವಿಶೇಷ ವಿಷಯವನ್ನಾಗಿ ಅಭ್ಯಾಸ ಮಾಡುತ್ತಿರುವುದು. ಗ್ರಾಮ ಸಮುದಾಯ ಪ್ರದೇಶದಲ್ಲಿ ಹುಟ್ಟಿ ಪ್ರಾಥಮಿಕ, ಪೌಢ್ರಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿ,ನಂತರ ಹೆಚ್ಚಿನ ವ್ಯಾಸಂಗ ಮಾಡಿದರೂ ಸಹ ಕ್ಟೇತ್ರ ಕಾರ್ಯ ಅಧ್ಯಯನಕ್ಕಾಗಿ ಸಮುದಾಯಗಳನ್ನು ಆಯ್ಕೆ ಮಾಡಿಕೊಂಡು ತಿಳಿದುಕೊಳ್ಳಲಾಯಿತು. ನಾಗರಿಕ ಸೇವೆಗಳನ್ನು ನಾಗರಿಕರಿಗೆ ನಿಗಧಿತ ಸಮಯದಲ್ಲಿ ಒದಗಿಸಿಕೊಡುವುದಕ್ಕಾಗಿ ಕರ್ನಾಟಕ ಸರ್ಕಾರವು ಸಕಾಲ ಕಾರ್ಯಕಜ್ರಮವನ್ನು ಜಾರಿಗೆ ತಂದಿದೆ.ಇದರಿಂದಾಗಿ ನಾಗರಿಕರು ತಮ್ಮ ಸೇವೆಯನ್ನು ಪಡೆಯಲು ಸುಲಭವಾಯಿತು ಹಾಗೂ ಸಮಯ ಉಳಿತಾಯವಾಗುತ್ತದೆ. ಆದರೂ ಸಹ ಈ ಕಾರ್ಯ ಕ್ರಮದ ಬಗ್ಗೆ ಗ್ರಾಮೀಣ ಜನರಿಗೆ ಅರಿವು ಇದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ತಿಳಿಯಲು ಸಂಶೋಧನೆಯನ್ನು ಕೈಗೊಳ್ಳಲಾಯಿತಿ.ಇದರಿಂದಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಬಶೆಟ್ಟಹಳ್ಳಿ ಹೋಬಳಿಯ ಗ್ರಾಮ ಪಂಚಾಯ್ತಿಗಳೋಂದಿಗೆ ನಿರಂತರ ಸಂಪರ್ಕ ಹೊಂದಿ ಪಂಚಾಯ್ತಿಯ ಸದಸ್ಯರಿಗೆ ಸಕಾಲ ಕಾರ್ಯಕ್ರಮದ ಬಗ್ಗೆ ಅರಿವು ಇದೆಯೇ ಎಂಬುವುದರ ಬಗ್ಗೆ ತಿಳಿಯಲು ಪ್ರಶ್ನಾವಳಿ ಮುಖಾಂತ ಅವರಿಗೆ ತಿಳಿದ ವಿಚಾರಗಳನ್ನು ಅಧ್ಯಯನ ಮಾಡಲಾಯಿತು. ಬಶೆಟ್ಟಹಳ್ಳಿ ಹೋಬಳಿಯ ಗ್ರಾಮ ಪಂಚಾಯ್ತಿಗಳೊಂದಿಗೆ ನಿರಂತರ ಸಂಪರ್ಕ ಹೊಂದಿರುವುದರಿಂದ ಪ್ರಸ್ತುತ ಅಧ್ಯಯನ ಕೈಗೊಳ್ಳಲು ಪ್ರೇರಣೆ ನೀಡಿದೆ.

ಅಧ್ಯಯನ ಧ್ಯೇಯೋದ್ದೇಶಗಳು:-
ಅಭ್ಯುದಯ:- ಕರ್ನಾಟಕ ರಾಜ್ಯದ ಸಕಾಲ ಕಾರ್ಯಕ್ರಮದ ಬಗ್ಗೆ ಗ್ರಾಮ ಪಂಚಾಯ್ತಿ ಸದಸ್ಯರಿಗೆ ಇರುವ ಅರಿವನ್ನು ಕುರಿತು ಒಂದು ಅಧ್ಯಯನ ವಿಶೇಷವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಬಶೆಟ್ಟಹಳ್ಳಿ ಹೋಬಳಿಯ ಗ್ರಾಮ ಪಂಚಾಯ್ತಿ ಸದಸ್ಯರ ಕುರಿತು ಅಧ್ಯಯನದ ಧ್ಯೇಯೋದ್ದೇಶಗಳು.
೧)    ಸಕಾಲ ಕಾರ್ಯಕ್ರಮದ ಬಗ್ಗೆ ಗ್ರಾಮೀಣ ಜನರಿಗೆ ಇರುವ ಅರಿವನ್ನು ತಿಳಿಯುವುದು.
೨)    ಸಕಾಲ ಕಾರ್ಯಕ್ರಮದ ಬಗ್ಗೆ ಇರುವ ಮಾಹಿತಿಯನ್ನು ಗ್ರಾಮೀಣ ಜನರು ಹೇಗೆ ತಿಳಿದುಕೊಂಡಿದ್ದಾರೆ ಎಂಬುವುದರ ಬಗ್ಗೆ ತಿಳಿಯುವುದು.
೩)    ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಗ್ರಾಮೀಣ ಜನರಿಗೆ ಅರಿವುವಿದೆಯೇ ಎಂಬುವುದರ ಬಗ್ಗೆ ತಿಳಿಯುವುದು.
೪)     ಸಕಾಲ ಕಾರ್ಯಕ್ರಮದಿಂದ ಗ್ರಾಮೀಣ ಜನರಿಗೆ ಆಗುವ ಅನುಕೂಲಗಳನ್ನು ತಿಳಿಯುವುದು.
೫)    ನಾಗರಿಕ ಸೇವೆಗಳ ಖಾತರಿ ಅಧಿನಿಯಮಗಳ ಬಗ್ಗೆ ಗ್ರಾಮೀಣ ಜನರಿಗೆ ಇರುವ ಅರಿವುವನ್ನು ತಿಳಿಯುವುದು.
೬)    ಮಾಹಿತಿ ಹಕ್ಕುನ ಕಾಯ್ದೆ ಬಗ್ಗೆ ಗ್ರಾಮೀಣ ಜನರಿಗೆ ಅರಿವು ಇದೆಯೇ ಎಂಬುವುದರ ಬಗ್ಗೆ ತಿಳಿಯುವುದು.
೭)    ವೃತ್ತಿಪರ ಸಮಾಜಕಾರ್ಯದ ಬಗ್ಗೆ ಮಾಹಿತಿದಾರರಿಗೆ ಇರುವ ಅರಿವು ಮತ್ತು ಅನಿಸಿಕೆಗಳನ್ನು ತಿಳಿಯುವುದು.

ಪ್ರಮೇಯ ಅಥವಾ ಪೂರ್ವಸಿದ್ಧಾಂತ:-
 ಸಾಮಾಜಿಕ ಸಂಶೋಧಕರು ಒಮ್ಮೆ ತನ್ನ ಅಧ್ಯಯನ ವಿಷಯ ಆಯ್ಕೆ ಮಾಡಿದ ಮೇಲೆ ಆ ವಿಷಯದ ಬಗ್ಗೆ ತಾತ್ಕಾಲಿಕ ಆಧಾರ ಪರಿಕಲ್ಪನೆಗಳನ್ನು ರಚಿಸುತ್ತಾನೆ.ಪ್ರಮೇಯ ಸಂಶೋಧನೆಯ ದಾರಿ ದೀಪ ಎನ್ನಬಹುದು.

ವ್ಯಾಖ್ಯೆಗಳು:-
೧)    ಲುಂಡ್‌ಬರ್ಗ್ ಅವರು ಸತ್ಯಾಸತ್ಯತೆಯನ್ನು ಪರೀಕ್ಷಿಸಿಕೊಳ್ಳಬೇಕಾಗಿರುವ ತಾತ್ಕಾಲಿಕ ಸಮರ್ಥನೆಯೇ ಪ್ರಾಕ್ ಕಲ್ಪನೆ ಎಂದು ವ್ಯಾಖ್ಯಾನಿಸಿದ್ದಾರೆ.
೨)     ಗೂಡ್ ಅಂಡ್ ಹ್ಯಾಟ್ ಅವರು ಸಾಮಾನ್ಯ ತಿಳುವಳಿಕೆಗೆ ಪೂರಕವಾಗಿ ಅಥವಾ ವಿರುದ್ದಸವಾಗಿರುವ ಮತ್ತು ಸಪ್ರಮಾಣತೆಯನ್ನು ನಿರ್ಧರಿಸಲು ಪರೀಕ್ಷೆಗೊಳಪಡಬೇಕಾದ ಒಂದು ಹೇಳಿಕೆಯೇ ಪ್ರಮೇಯ ಎಂದು ವ್ಯಾಖ್ಯಾನಿಸಿದ್ದಾರೆ.

ಪ್ರಸ್ತುತ ಸಂಶೋಧನೆಯ ಪ್ರಮೇಯಗಳು:
೧)     ಕರ್ನಾಟಕ ಸರ್ಕಾರದ ಸಕಾಲ ಕಾರ್ಯಕ್ರಮ ಬಗ್ಗೆ ಗ್ರಾಮೀಣ ಎಲ್ಲಾ ಜನರಿಗೆ ತಿಳುವಳಿಕೆ ಇರುತ್ತದೆ.
೨)     ಈ ಕಾರ್ಯಕ್ರಮದಿಂದ ಜನರಿಗೆ ಹೆಚ್ಚು ಅನುಕೂಲುಗಳು ಆಗುತ್ತದೆ.
೩)     ಈ ಕಾರ್ಯಕ್ರಮದಿಂದ ನಾಗರಿಕರಿಗೆ ನಾಗರಿಕ ಸೇವೆಗಳು ನಿಗಧಿತ ಕಾಲಾವಧಿಯಲ್ಲಿ ಸೇವೆಗಳು ದೊರಕುತ್ತಿರುತ್ತದೆ.
೪)     ಸಕಾಲ ಕಾರ್ಯಕ್ರಮವು ಜನರಿಗೆ ಸರ್ಕಾರ ತಲುಪಿಸಲು ವಿವಿಧ ರೀತಿಯ ಜಾಹೀರಾತುಗಳು ಮತ್ತು ವೃತ್ತ ಪ್ರತಿಕೆಗಳು ಅಥವಾ ಮಾಧ್ಯಮಗಳು ಮೂಲಕ ಮಾಹಿತಿಯನ್ನು ಹರಡಿಸುತಿದೆ,
೫)     ಈ ಕಾರ್ಯಕ್ರಮದಿಂದ ಸರ್ಕಾರದ ಆಡಳಿತದ ಸುಧಾರಣೆ ಮತ್ತು ಜನರಿಗೆ ನಿಗಧಿತ ಸಮಯದಲ್ಲಿ ಸೇವೆ ಪಡೆಯುತ್ತಿದ್ದಾರೆ.
೬)    ವೃತ್ತಾತ್ಮಕ ಸಮಾಜ ಕಾರ್ಯಕತರ ಬಗ್ಗೆ ಗ್ರಾಮ ಪಂಚಾಯಿತಿ ಸದಸ್ಯರಿಗೆ ಅಲ್ಪಸ್ವಲ್ಪ ತಿಳಿದಿರುತ್ತದೆ.

ಸಂಶೋಧನಾ ವಿನ್ಯಾಸ:-
ಸಂಶೋಧಕರು ತನ್ನ ಸಂಶೋಧನೆಗಾಗಿ ಆಯ್ಕೆ ಮಾಡಲಾಗಿರುವ ಕ್ಷೇತ್ರ ಮತ್ತು ಕ್ಷೇತ್ರಕ್ಕೆ ಅನುಗುಣವಾದ ಮಾದರಿ ಅಥವಾ ನಮೂನೆ ಜೊತೆಗೆ ಮಾಹಿತಿ ಸಂಗ್ರಹಣೆಗಾಗಿ ಬಳಸಲಾಗಿರುವ ಉಪಕರಣಗಳು, ಸಂಶೋಧನೆಗಾಗಿ ಬೇಕಾದ ವೆಚ್ಚ ಮತ್ತು ಸಮಯವನ್ನು ನಿರ್ಧಿರಿಸಿ, ಸಂಶೋಧನಾ ಕಾರ್ಯವನ್ನು ಪ್ರಾರಂಭಿಸಲು ಮಾಡಿಕೊಳ್ಳವ ಯೋಜನೆಯನ್ನು ಸಂಶೋಧನೆ ವಿನ್ಯಾಸ ಎಂದು ಕರೆಯುಲಾಗುವುದು.
 ಯಾವುದೇ ಒಂದು ಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸಬೇಕಾದರೆ ಅದಕ್ನೊಂದು ಪೂರ್ವಯೋಜನೆ ಅತ್ಯವಶ್ಯ.ಈ ಪೂರ್ವ ಯೋಜನೆಯನ್ನು ಸಂಶೋಧನಾ ವಿನ್ಯಾಸ ಒಳಗೊಂಡಿರುತ್ತದೆ. ಈ ಸಂಶೋಧನಾ ವಿನ್ಯಾಸದ ಮುಖ್ಯ ಉದ್ದೇಶವನ್ನು ಸಾಧಿಸಲು ಸಕ್ರಮವಾಗಿ ಸಂಶೋಧನೆಯನ್ನು ನಡೆಸಬೇಕಾಗುತ್ತದೆ.
ಸಮಗ್ರವಾಗಿ ಪರಿಶೋಧಿಸುವ ಸಂಶೋಧನಾ ವಿನ್ಯಾಸ ಎಂದರೆ ಒಂದು ಅಗೋಚರವಾದ ಸಂಗತಿಯ ಬಗ್ಗೆ ಅಮೂಲ್ಯವಾಗಿ ಶೋಧನೆಯನ್ನು ನಡೆಸಿ ಸೂಕ್ಷ್ಮತೆ ಸೂಕ್ಷ್ಮ ಸಂಗತಿಗಳನ್ನು ಅಧ್ಯಯನ ಮಾಡಿ ಸತ್ಯಾನ್ನೇಷಣೆ ಮಾಡುವುದು.ಇದೇ ಅದರ ಗುರಿಯು ಆಗಿರುತ್ತದೆ ಈ ವಿನ್ಯಾಸದ ಮಾರ್ಗವನ್ನು ಅನುಸರಿಸಿ ಸಂಶೋಧನೆಯ ಹಂತವನ್ನು ಪ್ರಾರಂಭಿಸಲಾಗಿದೆ.

ಮಾದರಿ (ನಮೂನೆ) ವಿಧಾನ:-
ಸಾಮಾಜಿಕ ಸಂಶೋಧನಾ ವಿಧಾನಗಳಲ್ಲಿ ಮಾದರಿ ವಿಧಾನವು ಜನಪ್ರಿಯಾಗೊಳ್ಳತ್ತದೆ.ಇದು ಸಂಶೋಧಕನು ತನ್ನ ಸಂಶೋಧನೆಯಲ್ಲಿ ಅನುಕರಿಸುತ್ತಿರುವ ಮುಖ್ಯ ಕ್ರಮಗಳಲ್ಲೊಂದು ಸಂಶೋಧನೆಯಲ್ಲಿ ಕ್ಷೇತ್ರವು ತುಂಬಾ ವಿಶಾಲವಾದದು.ಅದನ್ನು ಒಂದೇ ಬಾರಿಗೆ ಅಧ್ಯಯನ ಮಾಡಲು ಬಹಳ ಕಷ್ಟ ಆದ್ದರಿಂದ ಆ ಕ್ಷೇತ್ರದ ಸಾಮಾನ್ಯ ಗುಣಗಳನ್ನು ಹೊಂದಿರುವುದರೊಂದಿಗೆ ಅದನ್ನು ಪ್ರತಿನಿಧಿಸಬಹುದಾದಂತಹ ಅದರ ಭಾವೊಂದನ್ನು ಅಧ್ಯಯನ ದೃಷ್ಠಿಯಿಂದ ಆಯ್ದುಕೊಳ್ಳವುದಕ್ಕೆ ಮಾದರಿ ವಿಧಾನ ಎಂದು ಕರೆಯುತ್ತಾರೆ.

ವ್ಯಾಖ್ಯೆಗಳು:-
೧)    ಕಾಲ್ವಿನ್ ಪ್ರಕಾರ ಮಾದರಿಯ ಆಯ್ಕೆ ಮಾಡಿದ ಸಮಗ್ರ ಗುಂಪಿನ ಒಂದು ಕಿರುಚಿತ್ರವೇ ವಿಭಜಿಸಿದ ಭಾಗ
೨)    ಗೂಡ್ ಮತ್ತು ಹ್ಯಾಟ್ ಮಾದರಿಯು ವಿಶಾಲ ಕ್ಷೇತ್ರದ ಪ್ರಾತಿನಿಧಿಕ ಘಟಕ ಎಂದು ವ್ಯಾಖ್ಯಾನಿಸಿದ್ದಾರೆ
೩)    ಸಾಮಾನ್ಯವಾದ ಅರ್ಧದಲ್ಲಿ ಕಠಿಣವಾದ ಕೆಲಸವನ್ನು ಸರಳವಾಗಿ ಸಾಧಿಸುವ ಪ್ರಯತ್ನ ಎನ್ನಬಹುದು

ಮಾದರಿ ವಿಧಾನ :-
ಪ್ರಸ್ತುತ ಸಂಶೋಧನೆಯ ಅಧ್ಯಯನ ಜಗತ್ತು ಸಾದಲಿ ಹೋಬಳಿಯ ಗ್ರಾಮ ಪಂಚಾಯಿತಿಗಳು ಒಟ್ಟು ೦೪ ಗ್ರಾಮ ಪಂಚಾಯಿತಿಗಳಲ್ಲಿ ಚುನಾಯಿತ ಸದಸ್ಯರ ೧೧೦ ಪ್ರತಿಯೊಂದು ಗ್ರಾಮ ಪಂಚಾಯ್ತಿಗಳಿಗೆ ಭೇಟಿ ನೀಡಿ ಸದಸ್ಯರ ಸಂಖ್ಯೆ ಹೆಸರು ಪಡೆದುಕೊಂಡು ಒಟ್ಟಿಗೆ ಸೇರಿಸಲಾಯಿತು.ಈ ೧೧೦ ರಲ್ಲಿ ೫೦ ಸದಸ್ಯರುನ್ನು ಯಾದ್ನಚ್ವಿಕ ಮಾದರಿ ವಿಧಾನವನ್ನು ಅನುಸರಿಸಿ ,ಲಾಟರಿ ವಿಧಾನ ( ಐoಣಣeಡಿಥಿ ಒeಣhoಜ ) ಬಳಸಲಾಯಿತು. ಈ ವಿಧಾನದ ಮೂಲಕ ೪ ಗ್ರಾಮ ಪಂಚಾಯ್ತಿಗೆ ಸೇರಿದ ೧೧೦ ಪ್ರತಿಯೊಬ್ಬ ಸದಸ್ಯರ ಹೆಸರನ್ನ ಮತ್ತು ಸಂಖ್ಯೆಯನ್ನು ಒಂದೇ ಬಣ್ಣದ ಚೀಟಿಯಲ್ಲಿ ಬರೆದು ಒಂದೇ ಆಕಾರದಲ್ಲಿ ಸುತ್ತಿ ಒಂದು ಡಬ್ಬಗೆ ಹಾಕಿ ಚನ್ನಾಗಿ ಕಲಕಲಾಯಿತು. ನಂತರ ಒಂದೊಂದಾಗಿ ತೆಗೆದು ಹೆಸರನ್ನು ಮತ್ತು ಸಂಖ್ಯೆಯನ್ನು ಬರೆದು ಕೊಂಡು ಡಬ್ಬದಿಂದ ಹೊರಗಿಡಲಾಯಿತು. ೦೪ ಗ್ರಾಮ ಪಂಚಾಯ್ತಿ ಚುನಾಇತ್ ಸದಸ್ಯರಲ್ಲಿ ೩೦ ಪುರುಷರು ೨೦ ಮಹಿಳಾ ಸದಸ್ಯರನ್ನು ಮಾಹಿತಿದಾರರಾಗಿ ಮಾದರಿ ರಚಿಸಲಾಯಿತು. ಹೀಗೆ ಒಟ್ಟು ೫೦ ಸದಸ್ಯರನ್ನು ಆಯ್ಕೆ ಮಾಡಿಕೊಳ್ಳಲಾಯಿತು.

ಮಾಹಿತಿ ಸಂಗ್ರಹಣೆಯ ಸಾಧನಗಳು:-
ಸಂಶೋಧನೆಯ ಧ್ಯೇಯೋದ್ದೇಶಗಳ ಮತ್ತು ಪ್ರಮೇಯಗಳನ್ನು ಗಮನದಲ್ಲಿರಿಸಿಕೊಂಡು ಮಾಹಿತಿ ಸಂಗ್ರಹಣೆ ಸಾಧನೆಗಳನ್ನು ರಚಿಸಲಾಯಿತು.
 ಸಂಶೋಧನೆಯಲ್ಲಿ ನಂಬಲಾರ್ಹವಾದ ಮಾಹಿತಿ ಸಂಗ್ರಹಣೆಯ ಅತ್ಯಂತ ತ್ರಾಸದಾಯಕವಾದ ಆದರೆ ಅಷ್ಟೇ ಮಹತ್ವಪೂರ್ಣವಾದ ಕಾರ್ಯವಾಗಿರುತ್ತದೆ.ಕ್ಷೇತ್ರ ಕಾರ್ಯದ ಮೂಲಕ ಸಾಮಾಜಿಕ ಸಂಶೋಧಕನು ಮಾಹಿತಿ ಸಂಗ್ರಹಣೆಗಾಗಿ ಬಳಸಕೊಳ್ಳುವ ತಂತ್ರ ಸಾಧನಗಳಲ್ಲಿ ಬಹಳ ಮುಖ್ಯವಾದವುಗಳೆಂದರೆ.
೧)    ಅವಲೋಕನ
೨)    ಸಂದರ್ಶನ
೩)    ಪ್ರಶ್ನಾವಳಿ
ಇವುಗಳ ಉಪಯೋಗದಿಂದ ಪ್ರಾಥಮಿಕ ಅಕರವನ್ನು ಪಡೆಯಲಾಯಿತು.ಉಳಿದಂತೆ ಲಭ್ಯವಿರುವ ಸಾಹಿತ್ಯ ಸಕಾಲ ಕಾರ್ಯಕ್ರಮದ ವಿಷಯಗಳು ಮತ್ತು ಪ್ರಕಟಣೆಗಳು ಹಾಗೂ ನಾಗರಿಕ ಸೇವಾ ಕಾಯ್ದೆಯ ಅಧಿನಿಯಮಗಳು ಆಕರವೆಂದು ಪರಿಗಣಿಸಲಾಯಿತು.

ಸಂಶೋಧನೆಯ ಮಿತಿಗಳು:-
ಪ್ರಸ್ತುತ ಸಂಶೋಧನೆಯು ವೈಜ್ಞಾನಿಕವಾಗಿ ರೂಪಗೊಂಡು ವ್ಯವಸ್ಥಿತವಾಗಿ ಮುಂದುವರೆದಿದ್ದಗ್ಯೂ ಕೆಲವು ಅನಿವಾರ್ಯ ಮಿತಿಗಳನ್ನು ಸಂಶೋಧನೆಯಲ್ಲಿ ಅನುಭವಿಸಲಾಯಿತು.
ಕೆಲವು ಈ ಕೆಳಗಿನಂತಿವೆ.
೧)    ಸರ್ಕಾರದ ಸಕಾಲ ಕಾರ್ಯಕ್ರಮದ ಬಗ್ಗೆ ಗ್ರಾಮ ಪಂಚಾಯಿ ಸದಸ್ಯರಿಗೆ ಹೆಚ್ಚಿನ ತಿಳುವಳಿಕೆ ಇಲ್ಲ ಆದರು ಸಹ ಸಂಶೋಧನೆ ಕೈಗೊಳ್ಳಲಾಯಿದೆ.
೨)    ಗ್ರಾಮ ಪಂಚಾಯಿತಿ ಸದಸ್ಯರಿಂದ ಸಕಾಲ ಕಾರ‍್ಯಕ್ರಮದ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿಲ್ಲ.

 ಅಧ್ಯಾಯ:-೦೪ ಮಾಹಿತಿಯ ವರ್ಗೀಕರಣ ಮತ್ತು ವಿಶ್ಲೇಷಣೆ
ಮುನ್ನುಡಿ:-
 ಸಂಶೋಧನೆಯಲ್ಲಿ ಅಂಕಿ-ಅಂಶಗಳನ್ನು ಕಲೆಹಾಕುವುದರ ಸಲುವಾಗಿ ಯೋಜನೆಯನ್ನು ಸಿದ್ದಪಡಿಸುವುದು ಸಿದ್ದಪಡಿಸಿದ ಯೋಜನೆಗನುಗುಣವಾಗಿ ಅಂಕಿ-ಅಂಶಗಳನ್ನು ಕಲೆಹಾಕಲಾಗುವುದು ಇಷ್ಟರಿಂದಲೇ ನಿರೀಷತ ಉತ್ತರ ದೊರೆಯಲಾರದು. ಆದುದ್ದರಿಂದ ಕಲೆ ಹಾಕಿದ ಅಂಕಿ-ಅಂಶ ಮತ್ತು ಮಾಹಿತಿಯನ್ನು ವಿಶ್ಲೇಷಿಸುವುದು ಅತ್ಯಗತ್ಯವಾಗುತ್ತದೆ. ಸಂಗ್ರಹಿಸಿ ಮಾಹಿತಿಯನ್ನು ಸೂಕ್ತವಾಗಿ ವಿಶ್ಲೇಷಿಸುವುದು ಈ ವಿಶ್ಲೇಷಣೆಯಿಂದ ಬಂದ ಪರಿಣಾಮಗಳನ್ನು ಸರಿಯಾಗಿ ಅರ್ಥೈಸುವಿಕೆ-ಇವುಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ.

ವ್ಯಾಖ್ಯೆಗಳು :-
೧)    ಗೂಡ್ ಮತ್ತು ಹ್ಯಾಟ್ ಅವರು ಯಾವ ಸಂಶೋಧಕನು ತನ್ನ ಸಂಶೋಧನೆಯ ವಿಷಯವನ್ನು ಸಾಕಷ್ಟು ತಿಳಿದು ಕೊಂಡಿರುವನ್ನೋ ಅಂತಹ ವ್ಯಕ್ತಿಗೆ ತಾನು ಸ್ವಂತ ಕಲೆಹಾಕಿದ ವಿಷಯವನ್ನು ವಿಶ್ಲೇಷಿಸಲು ಕಠಿಣವೆನಿಸಲಾರದು ಎಂದು ವಿಶ್ಲೇಷಣೆಯ ಬಗ್ಗೆ ವ್ಯಾಖ್ಯಾನಿಸಿದ್ದಾರೆ.
೨)    ಜೆ.ಹೆನ್ರಿ ಪೇನ್ ಕೇರ್ ಅವರು ಪಡೆದ ಸತ್ಯಾಂಶಗಳನ್ನು ಸರಿಯಾಗಿ ವಿಶ್ಲೇಷಿಸುವುದೇ ಸಂಶೋಧನೆ ಎಂದು ಕರೆದಿದ್ದಾರೆ.

ಸಂಶೋಧನೆಗಾಗಿ ಸಂಗ್ರಹಿಸಿದ ಮಾಹಿತಿಯನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿದ ಹೊರತು ಸಂಶೋಧನೆಯ ಧೈಯೋದ್ದೇಶಗಳನ್ನು ಈಡೇರಿಸಲಾಗದು ಮತ್ತು ಸಂಋಓಧನೆಯ ಫಲಿತಾಂಶಗಳು ಹೊರ ಬರುವುದಿಲ್ಲ ಫಲಿತಾಂಶ ಹೊರೆ ಬರದೆಯೇ ಸಲಹೆ -ಸೂಚನೆಗಳನ್ನು ಕೊಡುವುದು ಅಸಾಧ್ಯ ಅಂದರೆ ಸಂಶೋಧನೆಗೆ ಸಂಗ್ರಹಿಸಿದ ಮಾಹಿತಿಯ ವೈಜ್ಞಾನಿಕ ವರ್ಗೀಕರಣ ಮತ್ತು ವಿಶ್ಲೇಷಣೆ ಇಡೀ ಸಂಶೋಧನೆಗೆ ಒಂದು ನಿರ್ಧಿಷ್ಟ ಆಕಾರವನ್ನು ನೀಡುತ್ತಾರೆ.
ಈ ಅಧ್ಯಯನದಲ್ಲಿ ಮಾಹಿತಿದಾರ ಮತ್ತು ಆತನ ಕುಟುಂಬದ ಸದಸ್ಯರು ವಯಕ್ತಿಕ ಮಾಹಿತಿದಾರರ ಕುಟುಂಬ ಹೊಂದಿರುವ ವಸತಿ ಸೌಲಭ್ಯ, ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿ ಪಂಚಾಯಿತಿ ರಾಜ್ ವ್ಯವಸ್ಥ, ಚುನಾವಣೆ ಕರ್ತವ್ಯ ಹಾಗೂ ಜವಾಬ್ದಾರಿ ಸರ್ಕಾರ ಯೋಜನೆಗಳ ಬಗ್ಗೆ ತಿಳುವಳಿಕೆ ಮತ್ತು ರಾಜಕೀಯ ಮಹಾತ್ವಾಕಾಂಕೆಗಳ ಬಗ್ಗೆ ಅರಿಯಲು ಸಂಶೋಧಕರನು ಪ್ರಶ್ನಾವಳಿಯನ್ನು ರಚಿತ ಸಂದರ್ಶನದ ಮೂಲಕ ೫೦ ಮಾಹಿತಿದಾರರಿಂದ ಸಂಗ್ರಹಿಸಿದ ಮಾಹಿತಿಯನ್ನು ವರ್ಗೀಕರಿಸಿ ವಿಶ್ಲೇಷಿಸಲಾಗಿದೆ.

ಸಂಶೋಧನಾ ಫಲ ಮತ್ತು ಸಲಹೆಗಳು ಹಾಗೂ ಉಪಸಂಹಾರ:-
ಸಂಶೋಧನಾ ಫಲ
ಅಭ್ಯುದಯ: ಕರ್ನಾಟಕ ರಾಜ್ಯದ ಸಕಾಲ ಕಾರ್ಯಕ್ರಮದ ಗ್ಗೆ ಗ್ರಾಮ ಪಂಚಾಯಿತಿ ಸದಸ್ಯರಿಗೆ ಇರುವ ಅರಿವನ್ನು ಕುರಿತು ಒಂದು ಅಧ್ಯಯನ ವಿಶೇಷವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲ?ಊಕಿನ ಸಾದಲಿ ಹೋಬಳಿಯ ಗ್ರಾಮ ಪಂಚಾಯಿತಿ ಸದಸ್ಯರನ್ನು ಅನ್ವಯಿಸಿ ಗ್ರಾಮ ಪಂಚಾಯಿತಿ ೫೦ ಚುನಾಯಿತ ಪ್ರತಿನಿಧಿಗಳನ್ನು ಮಾಹಿತಿದಾರರನ್ನಾಗಿಸಿಕೊಂಡು ಕೈಗೊಂಡು ಪ್ರಸ್ತುತ ಅಧ್ಯಾಯನದಿಂದ ಹೊರಬಂದಿರುವ ಫಲತಾಂಶಗಳನ್ನು ಈ ಅಧ್ಯಾಯನದಲ್ಲಿ ನೀಡಲಾಗಿದೆ.

ಮಾಹಿತಿದಾರರು:-
೧)    ಸಂಶೋಧನೆಯಲ್ಲಿ ಮಾಹಿತಿದಾರರಾಗಿ ಪಾಲ್ಗೊಂಡಿರುವ ೫೦-ಗ್ರಾಮ ಪಂಚಾಯಿತ್ ಚುನಾಯಿತ ಪ್ರತಿನಿಧಿಗಳಲ್ಲಿ ಶೇ೬೦ ಪುರುಷರು ಮತ್ತು ಶೇ೪೦ ಮಹಿಳೆಯರು ಸೇರಿದ್ದು ಎಲ್ಲಾ ಮಾಹಿತಿದಾರರು ವಿವಾಹಿತರಾಗಿದ್ದಾರೆ.
೨)    ಶೇ ೨೮.೪೮ಮತು ೨೪ ಮಾಹಿತಿದಾರರು ೨೦,೩೫,೫೦ ಮತ್ತು ೫೧-೬೫ ವರ್ಷಗಳ ವಯಸ್ಸಿನ ಗುಂಪುಗಳಲ್ಲಿ ಹಂಚಿಕೆಯಿದ್ದು ಶೇ ೨೮ ಮಾಹಿತಿದಾರರು ಯುವಕ ಗುಂಪುನ್ನು ಪ್ರತಿನಿಧಿಸಿದ್ದಾರೆ
೩)    ಮಾಹಿತಿದಾರರಲ್ಲಿ ಹೆಚ್ಚಾಗಿ ಅನಕ್ಷರಸ್ಥರು ಪ್ರಾತಿನಿಧ್ಯವಿದಾಗ್ಯೂ ಪ್ರಾಥಮಿಕ ಮಾಧ್ಯಮಿಕ ಪ್ರೌಡ ಮತ್ತು ಶಿಕ್ಷಣಕ್ಕೆ ಮೇಲ್ಪಟ್ಟ ಶಿಕ್ಷಣ ಪಡೆದವರೂ ಸಹ ಚುನಾಯಿತಿ ಪ್ರತಿನಿಧಿಗಳಾಗಿರುವುದು
೪)    ಶೇ ೯೮ ಮಾಹಿತಿದಾದರು ಹಿಂದೂ ಧರ್ಮ ಅನುಯಾಯಿಗಳಾದ್ದು ಶೇ ೦೫ ಮಾಹಿತಿದಾರರು ಇಸ್ಲಾಂ ಧರ್ಮದವರು ಪ್ರತಿನಿಧಿಸಿದ್ದಾರೆ.
೫)    ಶೇ ೮೫ ಮಾಹಿತಿದಾರರ ಮಾತೃಭಾಷೆ ಕನ್ನಡ ಆಗಿದೆ,
೬)    ಮಾಹಿತಿದಾರರಲ್ಲಿ ೧೧ ಜಾತಿಗಳಿಗೆ ಸೇರಿದವರಾಗಿದ್ದು ಪ್ರತಿನಿಧಿಸಿದ್ದು ಶೇ ೧೪ ಮಾಹಿತಿದಾರರು ಪರಿಶಿಷ್ಟ ಪಂಗಡವನ್ನು ಪ್ರತಿನಿಧಿಸಿದ್ದಾರೆ.

ಕೌಟುಂಬಿಕ ವಿವರ :
೧)    ಅವಿಭಕ್ತ ಮತ್ತು ವಿಭಕ್ತ ಮಾದರಿ ಕುಟುಂಬಗಳನ್ನು ಅನುಕ್ರಮವಾಗಿ ಶೇ ೨೨ ಮತ್ತು ಶೇ ೭೮ ಮಾಹಿತಿದಾರರು ಪ್ರತಿನಿಧಿಸಿದ್ದಾರೆ.
೨)    ಶೇ ೫೮ ಮಾಹಿತಿದಾರರು ಕುಟುಂಬದ ಮುಖ್ಯಸ್ಥರಾಗಿದ್ದಾರೆ.
ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿ:-
೧)    ಶೇ ೯೮ ಮಾಹಿತಿದಾರರು ಗ್ರಾಮೀಣ ಪ್ರದೇಶದವರಾಗಿದ್ದು ಗ್ರಾಮ ಪಂಚಾಯಿತ್ ಯ ಸದಸ್ಯರಾಗಿರುವುದು.
೨)    ಶೇ ೯೮ ಮಾಹಿತಿದಾರರು ಸ್ವಂತ ವಾಸದ ಮನೆಯನ್ನು ಹೊಂದಿದ್ದಾರೆ ಶೇ ೮೮ ಮಾಹಿತಿದಾರರ ಕುಟುಂಬದ ಉದ್ಯೋಗ ಕೃಷಿಯನ್ನು ಆಧರಿಸಿದೆ.
೩)    ಮಾಹಿತಿದಾರರು ಕೃಷಿ ಕೂಲಿ ವ್ಯಾಪಾರ ಗ್ರಾಮ ಪಂಚಾಯಿಒತ್ ಕಾಮಗಾರಿ ಗುತ್ತಿಗೆ ಕೃಷಿ ಮತ್ತು ವ್ಯಾಪಾರ ಮತ್ತು ನಿರುದ್ಯೋಗ ಗೃಹಿಣಿ ಇವುಗಳನ್ನು ಅನುಕ್ರಮವಾಗಿ ಶೇ ೫೬,೧೬,೧೨ ಮತ್ತು ೦೨ ರ ಪ್ರಮಾಣದಲ್ಲಿ ಉದ್ಯೋಗಕ್ಕಾಗಿ ಆಶ್ರಯಿಸಿದ್ದಾರೆ.
೪)    ಶೇ ೪೬ ಮಾಹಿತಿದಾರರು ಗ್ರಾಮ ಪಂಚಾಯಿತಿ ಸದಸ್ಯತ್ವ ದೊರೆತ ನಂತರದಲ್ಲಿ ತಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿಯಲ್ಲಿ ಪ್ರಗತಿಯಾಗಿರುವುದುನ್ನು ಗುರುತಿಸಿರುವರಾದರೂ, ಪ್ರಗತಿಗೆ ಕಾರಣಗಳನ್ನು ಪ್ರಗತಿಪರ ಕೃಷಿ ಮತ್ತು ವ್ಯಾಪಾರದಲ್ಲಿ ಮುನ್ನಡೆ ಮತ್ತು ಕಾರಣಗಳನ್ನು ಮುಂದೂ ಮಾಡಿದ್ದಾರೆ.

ಸಕಾಲ ಕಾರ್ಯಕ್ರಮ ಮತ್ತು ಮಾಹಿತಿದಾರ :
೧)    ಕರ್ನಾಟಕ ಸರ್ಕಾರದ ಸಕಾಲ ಕಾರ್ಯಕ್ರಮ ಬಗ್ಗೆ ತಿಳಿದಿರುವವರು ಶೇ ೭೦೧ ರ ಪ್ರಮಾಣದಲ್ಲಿದೆ.
೨)    ಪಂಚಾಯಿತ್ ರಾಜ್ ವ್ಯವಸ್ಥೆಯಲ್ಲಿನ ಮೀಸಲಾತಿಯ ಸವಿವರಗಳನ್ನು ಶೇ ೪೮ ಮಾಹಿತಿದಾರರು ಮಾತ್ರ ತಿಳಿದಿದ್ದಾರೆ.
೩)    ಸಕಾಲ ಕಾರ್ಯಕ್ರಮವು ಜನರಿಗೆ ಹೇಗೆ ಉಪಯೋಗವಾಗುತ್ತದೆ. ಎಂಬುವುದರ ಬಗ್ಗೆ ತಿಳಿದಿವರು ಶೇ ೬೦ ರಷ್ಟು ಸದಸ್ಯರು.
೪)    ನಾಗರಿಕ ಸೇವಾ ಕಾಯಿದೆಗಳ ಬಗ್ಗೆ ತಿಳಿವಳಿಕೆ ಇರುವರು ಶೇ ೪೦ ರಷ್ಟುರಿದ್ದಾರೆ.
೫)    ಈ ಕಾರ್ಯಕ್ರಮವು ಇವರಿಗೆ ಹೆಚ್ಚಿನ ಅನುಕೂಲವಾಗಿದೆ.
೬)    ಸಕಾಲ ಕಾರ್ಯಕ್ರಮದ ಬಗ್ಗೆ ಪಂಚಾಯಿತ್ ಜನರಿಗೆ ತಲುಪಲು ಶೇ ೫೦ ರಷ್ಟು ಸದಸ್ಯರು ಪ್ರಯತ್ನಸಿದ್ದಾರೆ.

ಸಲಹೆ:-
೧)    ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಕಾಲ ಕಾರ್ಯಕ್ರಮದ ಬಗ್ಗೆ ತಿಳುವಳಿಕೆ ನೀಡಬೇಕು.
೨)    ಅಭ್ಯರ್ಥಿಗಳಿಗೆ ಕನಿಷ್ಠಿ ಶಿಕ್ಷಣ ಮಟ್ಟವನ್ನು ನಿಗಧಿಪಡಿಸುವ ಅವಶ್ಯಕತೆ ಇದೆ.
೩)    ಚುನಾಯಿತಿ ಸದಸ್ಯರಿಗೆ ವಿವಿಧ ವಿಚಾರಗಳ್ಲಿ ಆಗಾಗ್ಗೆ ತರಬೇತಿ ಮತ್ತು ಪುನರ್ ಮನನ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಮತ್ತು ಸದಸ್ಯರ ಭಾಗವಹಿಸುವಿಕೆಯನ್ನು ಶಾಸನಬದ್ದವಾಗಿ ಕಡ್ಡಾಯಗೊಳಿಸಬೇಕು
೪)    ಪಂಚಾಯಿತಿಯ ಎಲ್ಲಾ ಸರ್ವಸದಸ್ಯರ ಸಭೆಗಳಲೂ ಹಾಜರಾತಿ ಮತ್ತು ಪೂರ್ಣ ಪ್ರಮಾಣದ ಭಾಗವಹಿಸುವಿಕೆಯನ್ನು ಕಡ್ಡಾಯಗೊಳಿಸಬೇಕು
೫)    ಸರ್ಕಾರಿದಿಂದ ಹೊಸ ಕಾರ್ಯಕ್ರಮಗಳು ಅನುಷ್ಠಾನುವಾದಾಗ ಅದರ ಬಗ್ಗೆ ಪಂಚಾಯಿತಿಯ ಸದಸ್ಯರಿಗೆ ಮತ್ತು ಜನರಿಗೆ ತಿಳುವಳಿಕೆ ನೀಡಬೇಕು ಹಾಗೂ ಅದರ ಬಗೆ ಚರ್ಚಿಸಬೇಕು.
೬)    ಪಂಚಾಯಿತಿಯ ಕಾರ್ಯಕ್ರಮಗಳಲ್ಲಿ ಜನರನ್ನು ಭಾಗವಹಿಸಬೇಕಾಗಿದೆ.
೭)    ಪಂಚಾಯಿತಿಯ ಜನರಿಗೆ ನಾಗರಿಕ ಸೇವೆಗಳನ್ನು ನಿಗಧಿತ ಸಮಯದಲ್ಲಿ ಪೊರೃಸಲು ಪ್ರಯತ್ನಸಬೇಕು
೮)    ಸಕಾಲ ಕಾರ್ಯಕ್ರಮದ ಬಗ್ಗೆ ಜನರಿಗೆ ತಿಳುವಳಿಕೆ ನೀಡುವುದಕ್ಕಾಗಿ ಒಂದು ಸಮತಿಯನ್ನು ಪಂಚಾಯಿತಿಯಲ್ಲಿ ಸೇಮಿಸಬೇಕು.
೯)    ಸಕಾಲ ಕಾರ್ಯಕ್ರಮವು ಯಶಸ್ವಿಗೊಳಿಸಲು ಗ್ರಾಮೀಣ ಮಟ್ಟದಿಂದ ಪ್ರಯತ್ನಸಬೇಕಾಗಿದೆ.
೧೦)    ಮಹಿಳಾ ಸದಸ್ಯರುಗಳು ಕ್ರಮೇಣವಾದರು ಪುರುಷರು ಮುಷ್ಠಿಯಿಂದ ಹೊರಬಂದು ಸ್ವಂತ ಅಭಿಪ್ರಾಯಗಳನ್ನು ವ್ಯಕ್ತಿ ಪಡಿಸುವ ಮತ್ತು ನಿರ್ಧಾರಗಳನ್ನು ಕೈಗೊಳ್ಳವತ್ತ ಮುನ್ನೆಡೆಯಬೇಕು.
೧೧)    ತ್ವರಿತ ಮತ್ತು ಪರಿಣಾಮಕಾರಿಯಾದ ಅಭ್ಯದಯ ಕಾರ್ಯಕ್ರಮ ಗಳ ಅನುಷ್ಠಾನದಲ್ಲಿ ಪಂಚಾಯಿತಿ ಸಂಸ್ಥೆಗಳು ಸ್ವಯಂ ಸೇವಾ ಸಂಸ್ಥೆಗಳೊಡನೆ ಕೈ ಜೋಡಿಸಲು ಮುಂದಾಗಬೇಕು.
೧೨)    ಸಕಾಲ ಕಾರ್ಯಕ್ರಮ ಬಗ್ಗೆ ಗ್ರಾಮೀಣ ಜನರಿಗೆ ತಿಳಿಸುವುದಕ್ಕಾಗಿ ವಿವಿಧ ರೀತಿಯ ವಿಧಾನಗಳನ್ನು ಅನುಸರಿಸಬೇಕಾಗಿದೆ.

ಈ ಅಧ್ಯಯನದಲ್ಲಿ ಮಾಹಿತಿದಾರರಾಗಿ ಪಾಲ್ಗೊಂಡಿರುವ ೫೦ ಗ್ರಾಮ ಪಂಚಾಯ್ತಿ ಸದಸ್ಯರನ್ನು ಅವರ ವಯೋಮಾನಕ್ಕೆ ಅನುಗುಣವಾಗಿ ವಯಸ್ಸಿನ ಗುಂಪುಗಳಾಗಿ ವಿಭಾಗಿಸಲಾಗಿದೆ.ಈ ಮೂರು ವಯಸ್ಸಿನ ಗುಂಪುಗಳೆಂದೆರೆ ೨೦-೩೫,೩೬-೫೦,೫೧-೬೫,ಒಳಗೊಂಡ ಗುಂಪು .ಈ ಮೂರು ವಯಸ್ಸಿನ ಗುಂಪುಗಳಲ್ಲಿ ಮಾಹಿತಿದಾರು ಅನುಕ್ರಮವಾಗಿ ಶೇಕಡಾ ೨೮,೪೮ ಹಾಗೂ ೨೪ ರ ಪ್ರಮಾಣದಲ್ಲಿ ಶೇಕಡಾ ಅನ್ವಯ ಪ್ರಾತಿನಿಧ್ಯ ಪಡೆದಿರುವುದು ಮೇಲಿನ ಪಟ್ಟಿಯಲ್ಲಿ ಕಾಣಬಹುದಾಗಿದೆ. ಬಹು ಸಂಖ್ಯೆಲ್ಲದಿದ್ದರೂ ಹಂಚಿಕೆ ಶೇ ೨೮ ಸದಸ್ಯರು ಕಡಿಮೆ ವಯಸ್ಸಿನ ಗುಂಪುನಲ್ಲಿ ಅಂದರೆ ೨೦-೩೫ ವರ್ಷಗಳ ವಯಸ್ಸಿನ ಗುಂಪುನಲ್ಲಿ ಕಂಡು ಬರುವುದು ಯುವ ಶಕ್ತಿ ರಾಜಕೀಯ ಹಾಗೂ ಅಭ್ಯದಯ ಪ್ರಕ್ರಿಯೆಯಲ್ಲಿ ಮಹತ್ವ ಪೂರ್ಣ ವಹಿಸುತ್ತಿದ್ದಾರೆ.
ಸೂಚಿಸಿರುವಂತೆ ಕರ್ನಾಟಕ ರಾಜ್ಯದ ಸಕಾಲ ಕಾರ್ಯಕ್ರಮದ ಬಗ್ಗೆ ೩೫ (೭೦%) ಪ್ರತಿವಾದಿಗೆ ಈ ಕಾರ್ಯಕ್ರಮದ ಬಗ್ಗೆ ಅರಿವುವಿದೆ ಹಾಗೂ ಈ ಕಾರ್ಯಕ್ರಮದ     ಬಗ್ಗೆ ೧೫ (೩೦) ರಷ್ಟು ಪ್ರತಿವಾದಿಗಳಿಗೆ ಅರಿವುವಿಲ್ಲ ಎಂಬುದಾಗಿ ತಿಳಿದು ಬಂದಿದೆ. ಬಹು ಪ್ರಾತಿವಾದಿಗಳಗೆ ಕರ್ನಾಟಕ ರಾಜ್ಯದ ಸಕಾಲ ಕಾರ್ಯಕ್ರಮದ ಬಗ್ಗೆ ಅರಿವು ವಿದೆ. ಎಂಬುವುದು ಈ ಮೇಲಿನ ಪಟ್ಟಿಯಿಚಿದ ತಿಳಿದು ಬರುತ್ತದೆ.

ಸಕಾಲ ಕಾರ್ಯಕ್ರಮದ ಬಗ್ಗೆ ಮಾಹಿತಿದಾರ ಕುಡುಂಬಗಳಿಗೆ ಸಕಾಲ ಕಾರ್ಯಕ್ರಮದ ಬಗ್ಗೆ ಅರಿವುವಿದೆ ಎಂಬುದಾಗಿ ೩೪% ರಷ್ಟು ಮಾಹಿತಿದಾರು ತಿಳಿಸಿದ್ದಾರೆ. ಅದೇ ರೀತಿ ಈ ಕಾರ್ಯಕ್ರಮದ ಬಗ್ಗೆ ೬೬% ಪ್ರತಿವಾದಿ ಕುಟುಂಬಗಳಿಗೆ ಅರಿವುವಿಲ್ಲ.
ಬಹು ಪ್ರಾತಿವಾದಿಗಳ ಕುಟುಂಬಗಳಿಗೆ ( ೬೦%) ಈ ಸಕಾಲ ಕಾರ್ಯಕ್ರಮದ ಬಗ್ಗೆ ಅರಿವುದಿಲ್ಲ.

 ಬೆಂಗಳೂರು ವಿಶ್ವವಿದ್ಯಾನಿಲಯ ಬೆಂಗಳೂರು ಸಮಾಜ ಕಾರ‍್ಯಯ ವಿಭಾಗ
 ಪ್ರಶ್ನಾವಳಿ:-

 ವಿಷಯ:- ಕರ್ನಾಟಕ ರಾಜ್ಯದ ಸಕಾಲ ಕಾರ್ಯಕ್ರಮದ ಬಗ್ಗೆ ಗ್ರಾಮ ಪಂಚಾಯ್ತಿ ಸದಸ್ಯರಿಗೆ ಇರುವ ಅರಿವನ್ನು ಕುರಿತು ಒಂದು ಅಧ್ಯಯನ ವಿಶೇಷವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಹೋಬಳಿಯ ಗ್ರಾಮ ಪಂಚಾಯಿತಿಗಳಗೆ ಸಂಬಂಧಿಸಿದಂತೆ.
ಸಂಧರ್ಶನದ ಮಾರ್ಗಸೂಚಿ-ಗ್ರಾಮ ಪಂಚಾಯ್ತಿ ಸದಸ್ಯರಿಗೆ
ಸದಸ್ಯರ ವೈಯಕ್ತಿಕ ಮಾಹಿತಿ:-
೧)    ಸದಸ್ಯರ ಹೆಸರು:-
೨)    ಲಿಂಗ ಎ) ಸ್ರ್ತೀ ಬಿ) ಪುರುಷ:-
೩)    ವಯಸ್ಸು:- ಎ) ೨೫ ರಿಂದ ೩೦ ಬಿ) ೩೦ರಿಂದ ೩೫ ಸಿ) ೩೫ ರಿಂದ ೪೦ ಡಿ) ೪೦ ಮೇಲ್ಪಟ್ಟು
೪)    ವಿದ್ಯಾರ್ಹತೆ:- ಎ) ಪ್ರಾಥಮಿಕ ಬಿ )ಮಾಧ್ಯಮಿಕ ಸಿ) ಪ್ರೌಢ ಡಿ) ಉನ್ನತ
೫)    ಧರ್ಮ:- ಎ) ಹಿಂದೂ ಬಿ) ಮುಸ್ಲಿಂ ಸಿ)ಕ್ರೈಸ್ಥ         ಡಿ)ಇತರೆ
೬)    ತಿಳಿದಿರುವ ಭಾಷೆ ಎ) ಕನ್ನಡ ಬಿ) ಹಿಂದಿ ಸಿ) ಇಂಗ್ಲೀಷ್ ಡಿ) ಇತರೆ
೭)     ಉದ್ಯೋಗ:- ಎ)ವ್ಯವಸಾಯ ಬಿ) ವಾಣಿಜ್ಯ ಸಿ)ಖಾಸಿಗಿ ಡಿ) ಇತರೆ
೮)    ವೈವಾಹಿಕ ಸ್ಥಿತಿ:- ಎ) ಅವಿವಾಹಿತ ಬಿ) ವಿವಾಹಿತ ಸಿ) ವಿಧವೆ ಡಿ )ವಿಚ್ಛೇಧನ
೯)    ವಾರ್ಷಿಕ ಆದಾಯ:- ಎ) ೧೦೦೦೦ ಬಿ)೨೦೦೦೦ ಸಿ)೩೦೦೦೦ ಡಿ)೫೦೦೦೦
೧೦)    ಕುಟುಂಬದ ಮಾದರಿ :- ಎ) ಅವಿಭಕ್ತ ಬಿ)ವಿಭಕ್ತ
೧೧)    ಕುಟುಂಬದ ಇತರೇ ಸದಸ್ಯರು ವಿವರ :-

ಕ್ರ.ಸಂ    ಹೆಸರು    ಸಂಬಂಧ    ವಯಸ್ಸು    ವಿದ್ಯಾರ್ಹತೆ    ಉದ್ಯೋಗ   
೦೧                       
೦೨                       
೦೩                       
೦೪                       
೦೫                       
ಸಕಾಲ ಕಾರ‍್ಯಕ್ರಮದ ಬಗ್ಗೆ ಗ್ರಾಮ ಪಂಚಾಯ್ತಿ ಸದಸ್ಯರಿಗೆ ಇರುವ ಅರಿವನ್ನು ತಿಳಿಯುವುದು.   

೧)    ಕರ್ನಾಟಕ ರಾಜ್ಯದ ಸಕಾಲ ಕಾರ್ಯಕ್ರಮದ ಬಗ್ಗೆ ನಿಮಗೆ ಅರಿವಿದೆಯೇ ? ಅ) ಹೌದು         ಬಿ) ಇಲ್ಲ
 ೨) ಈ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದವರು ಯಾರು ?
 ಅ) ಗ್ರಾಮ ಪಂಚಾಯಿತಿಯ ಕಾರ್ಯದರ್ಶಿಗಳು
 ಆ) ಗ್ರಾಮ ಪಂಚಾಯಿತಿಯ ಅಧ್ಯಕ್ಷರು   
 ಇ) ವಾರ್ತಾ ಪತ್ರಿಕೆಗಳು
 ಈ) ಮೇಲಿನ ಎಲ್ಲಾವೂ   
 ೩) ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಕುಟುಂಬದವರಿಗೆ ಅರಿವು ಇದೆಯೇ ?
 ಅ) ಹೌದು ಆ) ಇಲ್ಲ
 ೪) ಸಕಾಲ ಕಾರ್ಯಕ್ರಮದ ಬಗ್ಗೆ ನಿಮ್ಮ ಪಂಚಾಯಿತಿಯ ಜನರಿಗೆ ಅರಿವು ಇದೆಯೇ ?
 ಅ) ಹೌದು ಆ) ಇಲ್ಲ
ಸಕಾಲ ಕಾರ್ಯಕ್ರಮದ ಬಗ್ಗೆ ಇರುವ ಮಾಹಿತಿಯನ್ನು ಜನರು ಹೇಗೆ ತಿಳಿದು ಕೊಂಡಿದ್ದಾರೆ ಎಂಬುದರ ಬಗ್ಗೆ ತಿಳಿಯುವುದು.
೫)     ಸಕಾಲ ಕಾರ್ಯಕ್ರಮದ ಬಗ್ಗೆ ಇರುವ ಮಾಹಿತಿಯನ್ನು ನಿಮ್ಮ ಪಂಚಾಯ್ತಿಯ ಜನರಿಗೆ ತಿಳುವಳಿಕೆ ನೀಡಲು ಪ್ರಯತ್ನಸಿದ್ದಿರ?
 ಅ) ಹೌದು ಆ) ಇಲ್ಲ
 ೬) ಸಕಾಲ ಕಾರ್ಯಕ್ರಮ ಬಗ್ಗೆ ಇರುವ ಮಾಹಿತಿಯನ್ನು ಗ್ರಾಮ ಪಂಚಾಯತ್ ಸೂಚನಾ ಫಲಕದಲ್ಲಿ
 ಹಾಕಿದ್ದೀರ ? ಅ) ಹೌದು ಆ) ಇಲ್ಲ   
 ೭) ಸಕಾಲ ಕಾರ್ಯಕ್ರಮದ ಬಗ್ಗೆ ಇರುವ ಮಾಹಿತಿಯನ್ನು ಜನರು ಹೇಗೆ ತಿಳಿದುಕೊಂಡಿದ್ದಾರೆ ?
 ಅ) ಮಾಧ್ಯiಗಳ ಮೂಲಕ
 ಆ) ಗ್ರಾಮ ಪಂಚಾಯಿತ್ ಸೂಚನ ಫಲಕದ ಮೂಲಕ
 ಇ) ಸರ್ಕಾರದ ಜಾಹೀರಾತುಗಳ ಮೂಲಕ
 ಈ) ಮೇಲಿನ ಎಲ್ಲವೂ
೮) ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಪಂಚಾಯ್ತಿಯ ಜನರಿಗೆ ತಿಳುವಳಿಕೆ ನೀಡಿದ್ದೀರಾ?
 ಅ) ಹೌದು ಆ) ಇಲ್ಲ   
೯) ಸಕಾಲ ಕಾರ್ಯಕ್ರಮದ ಬಗ್ಗೆ ಪಂಚಾಯ್ತಿಯ ಜನರಿಗೆ ತಿಳುವಳಿಕೆ ನೀಡಲು ಪಂಚಾಯಿತ್ ಕಡೆಯಿಂದ
 ಯಾವುದಾದರೂ ಕಾರ್ಯಕ್ರಮ ಹಮ್ಮಿ ಕೊಂಡಿದ್ದೀರಾ ?
 ಅ) ಹೌದು ಆ) ಇಲ್ಲ   
೧೦ ) ಈ ಕಾರ್ಯಕ್ರಮದ ಬಗ್ಗೆ ತಿಳಿಯಲು ಜನರು ಆಸಕ್ತಿ ವಹಿಸುತ್ತಿದ್ದಾರೆಯೇ ?
 ಅ) ಹೌದು ಆ) ಇಲ್ಲ
ಸಕಾಲ ಕಾರ್ಯಕ್ರಮದ ಬಗ್ಗೆ ಪಂಚಾಯಿತ್ ಸದಸ್ಯರಿಗೆ ಯಾವವ ವಿಚಾರಗಳಲ್ಲಿ ತಿಳುವಳಿಕೆವಿದೆ ಎಂಬುವುದರ ಬಗ್ಗೆ ತಿಳಿಯುವುದು
೧೧) ನಿಮ್ಮ ಪಂಚಾಯ್ತಿಯ ವ್ಯಾಪ್ತಿಗೆ ಬರುವ ನಾಗರಿಕ ಸೇವೆಗಳಿಗೆ ಯಾರು ಪರಿಹಾರ ನೀಡುತ್ತಾರೆ ?
 ಅ) ಪಂಚಾಯತ್ ಅಭಿವೃದ್ಧಿ ಅಧಿಕಾರಿ/ ಕಾರ್ಯದರ್ಶಿ
 ಆ) ಪಂಚಾಯತ್ ಅಧ್ಯಕ್ಷರು
 ಇ) ಕಾರ್ಯ ನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ
 ಈ) ಪಂಚಾಯತ್ ಸದಸ್ಯರುಗಳು
೧೨) ಸಕಾಲ ಕಾರ್ಯಕ್ರಮ ವ್ಯಾಪ್ತಿಗೆ ಎಷ್ಟು ಇಲಾಖೆಗಳು ಬರುತ್ತವೆ ?
 ಅ) ೩೦ ಆ) ೨೮ ಇ) ೩೩ ಈ) ೨೬
೧೩ ) ಈ ಕಾರ್ಯಕ್ರಮ ವ್ಯಾಪ್ತಿಗೆ ಎಷ್ಟು ಸೇವೆಗಳು ಬರುತ್ತವೆ?
 ಅ) ೩೦೦ ಆ) ೨೬೫ ಇ) ೨೫೦ ಈ) ೩೫೦
೧೪) ನಿಮ್ಮ ಪಂಚಾಯಿತಿಗೆ ಸಂಬಂಧಪಟ್ಟ ನಾಗರೀಕ ಸೇವೆಗಳ ಬಗ್ಗೆ ನಿಮಗೆ ಅರಿವಿದೆಯೇ ?
 ಅ) ಹೌದು ಆ) ಇಲ್ಲ
೧೫) ಬೇರೆ ಇಲಾಖೆಗಳಲ್ಲಿ ಇರುವ ನಾಗರೀಕ ಸೇವೆಗಳ ಬಗ್ಗೆ ತಿಳುವಳಿಕೆ ಇದೆಯೇ ?
 ಅ) ಹೌದು ಆ) ಇಲ್ಲ
 ೧೬) ನಾಗರಿಕರ ಸೇವೆಗಳನ್ನು ನಿಗಧಿತ ಸಮಯದಲ್ಲಿ ಪೊರೈಸದಿದ್ದಲ್ಲಿ ಪ್ರತಿದಿನಕ್ಕೆ ಎಷ್ಟುರಿಂದ ಮತ್ತು ಎಷ್ಟುರವರೆಗೆ ಪರಿಹಾರ ಧನವನ್ನು ಸಂಬಂಧಪಟ್ಟ ಅಧಿಕಾರಿ ನಾಗರಿಕನಿಗೆ ನೀಡುತ್ತಾರೆ ?
ಅ) ೨೦ ರಿಂದ ೫೦೦
ಆ) ೧೦ ರಿಂದ ೩೦೦
ಇ) ೩೦ ರಿಂದ ೨೬೦
ಈ) ೪೦ ರಿಂದ ೬೦೦
೧೭ ) ಈ ಕಾರ್ಯಕ್ರಮವು ಯಾರಿಗೆ ಅನುಕೂಲವಾಗುತ್ತಿದೆ?
 ಅ) ಬಡವರಿಗೆ      ಆ) ಹಿಂದುಳಿದ ವರ್ಗದವರಿಗೆ
 ಇ) ಶ್ರೀಮಂತರಿಗೆ ಈ) ಮೇಲಿನ ಎಲ್ಲಾರಿಗೂ
೧೮) ಕರ್ನಾಟಕ ನಾಗರಿಕ ಸೇವೆಗಳ ಖಾತರಿ ಅಧಿನಿಯಮದ ಬಗ್ಗೆ ತಿಳುವಳಿಕೆ ಇದೀಯೇ ?
 ಅ) ಹೌದು ಆ) ಇಲ್ಲ
೧೯) ಮಾಹಿತಿ ಹಕ್ಕು ಕಾಯ್ದೆ (ಆರ್.ಟಿ.ಐ) ಬಗ್ಗೆ ತಿಳುವಳಿಕೆ ಇದೆಯೇ ?
 ಅ) ಹೌದು ಆ) ಇಲ್ಲ
೨೦) ಸಕಾಲ ಕಾರ್ಯಕ್ರಮದ ಧ್ಯೇಯ (ಘೋಷ) ವಾಕ್ಯ ಯಾವುದು ?
 ಅ) ಇಂದು ನಾಳೆ ಇನ್ನಿಲ್ಲ ಹೇಳಿದ ಸಮಯಕ್ಕೆ ತಪ್ಪೂಲ್ಲ
 ಆ) ಅತಿ ಬೇಗನೆ ನಾಗರೀಕರಿಗೆ ಸೇವೆ ಒದಗಿಸುವುದು
 ಇ) ನಾಗರಿಕರಿಗೆ ನಿಗಧಿತ ಸಮಯದಲ್ಲಿ ಮಾಹಿತಿ ನೀಡುವುದು
 ಈ) ಮೇಲಿನ ಎಲ್ಲಾವೂ
೨೨) ಸಕಾಲ ಕಾರ್ಯಕ್ರಮ ಯಾವಾಗ ಜಾರಿಗೆ ಬಂದಿತು ?
 ಅ) ೦೨-೦೪-೨೦೧೨ ಆ) ೦೨-೦೩-೨೦೧೨
 ಇ) ೦೨-೦೫-೨೦೧೨ ಈ) ೦೫-೦೪-೨೦೧೨
 ೨೩) ಜಾತಿ ಪ್ರಮಾಣ ಪತ್ರಗಳು ಯಾರು ನೀಡುತ್ತಾರೆ ?
 ಅ) ತಹಿಸೀಲ್ದಾರ್      ಆ) ಜಿಲ್ಲಾಧಿಕಾರಿ ಇ) ಪ್ರಾದೇಶಿಕ ಆಯುಕ್ತರು ಈ) ಪಂಚಾಯಿತಿಯ ಕಾರ್ಯದರ್ಶಿಗ
 ೨೪) ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರಗಳು ಎಷ್ಟು ದಿನಗಳ ಒಳಗೆ
 ಸಂಬಂಧಪಟ್ಟ ಅಧಿಕಾರಿ ನಾಗರಿಕರಿನಿಗೆ ಕೊಡುತ್ತಾರೆ ?   
 ಅ) ೧೫ ದಿನಗಳ ಒಳಗೆ       
 ಆ) ೨೧ ದಿನಗಳ ಒಳಗೆ
 ಇ) ೩೦ ದಿನಗಳ ಒಳಗೆ
 ಈ) ೧೮ ದಿನಗಳ ಒಳಗೆ
೨೫) ನಿರುದ್ಯೋಗ ಪ್ರಮಾಣ ಪತ್ರ ಯಾರು ನೀಡುತ್ತಾರೆ ?
 ಅ) ಗ್ರಾಮ ಲೆಕ್ಕಿಗ
 ಆ) ಪಂಚಾಯ್ತಿ ಕಾರ್ಯದರ್ಶಿಗಳು
 ಇ) ತಹಿಸೀಲ್ದಾರ್
 ಈ) ಜಿಲ್ಲಾಧಿಕಾರಿ
೨೬) ಖಾತಾ ಬದಲಾವಣೆ ಯಾರು ಮಾಡುತ್ತಾರೆ ?
 ಅ) ಗ್ರಾಮ ಲೆಕ್ಕಿಗ
 ಆ) ಪಂಚಾಯ್ತಿ ಕಾರ್ಯದರ್ಶಿಗಳು
 ಇ) ತಹಿಸೀಲ್ದಾರ ಈ) ಜಿಲ್ಲಾಧಿಕಾರಿ
    
೨೭) ಕಟ್ಟಡ ಪರವನಾಗಿ ನೀಡುವರು ಯಾರು ?
 ಅ) ಗ್ರಾಮ ಪಂಚಾಯ್ತಿ ಕಾರ್ಯದರ್ಶಿ
 ಆ) ಗ್ರಾಮ ಲೆಕ್ಕಿಗ
 ಇ) ತಹಿಸೀಲ್ದಾರ್
 ಈ) ಜಿಲ್ಲಾಧಿಕಾರಿ
೨೮) ಕುಡಿಯುವ ನೀರಿನ ನಿರ್ವಹಣೆ ಮತ್ತು ಸಣ್ಣ ಪ್ರಮಾಣದ ರಿಪೇರಿಗಳು ಯಾರು ಹತೋಟಿಗೆ
 ಬರುತ್ತದೆ ?
 ಅ) ಗ್ರಾಮ ಪಂಚಾಯ್ತಿ ಕಾರ್ಯದರ್ಶಿ   
 ಆ) ತಹಿಸೀಲ್ದಾರ್
 ಇ) ಜಿಲ್ಲಾಧಿಕಾರಿ
 ಈ) ಎಲ್ಲಾರು
೨೯) ಮಹಾತ್ಮಾಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕಾಮಗಾರಿಗಳಲ್ಲಿ ಕೆಲಸ ಮಾಡಲು ಅರ್ಜಿ ಸಲ್ಲಿಸಿದ ನಿರುದ್ಯೋಗ ಕಾರ್ಮಿಕರ ನೋಂದಣಿ ಮತ್ತು ಉದ್ಯೋಗ ಚೀಟಿಗಳನ್ನು ನೀಡುವರು ಯಾರು ?
 ಅ) ಪಂಚಾಯಿತ್ ಅಭಿವೃದ್ಧಿ ಅಧಿಕಾರಿ
 ಆ) ಶಾಲೆಯ ಮುಖ್ಯೋಪಾಧ್ಯಾಯರು
 ಇ) ತಹಿಸೀಲ್ದಾರ್     ಈ) ಎಲ್ಲಾರು
   
೩೦) ಅಂಗನವಾಡಿ ಕೇಂದ್ರಗಳಲ್ಲಿ ೦-೦೬ ವಯಸ್ಸಿನ ಮಕ್ಕಳ ನೊಂದಣಿ ಯಾರು ಮಾಡುತ್ತಾರೆ ?   
 ಅ) ಮಕ್ಕಳ ಅಭಿವೃದ್ಧಿ ಕಾರ್ಯಕ್ರಮ ಅಧಿಕಾರಿ
 ಆ) ಉಪ ನಿರ್ದೇಶಕರು
 ಇ) ಶಾಲಾ ಮುಖ್ಯೋಪಾದ್ಯಾರು
 ಈ) ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳ
 ೩೧) ಭೂ ರಹಿತ ಪ್ರಮಾಣ ಪತ್ರ ಯಾರು ನೀಡುತ್ತಾರೆ ?
 ಅ) ತಹಿಸೀಲ್ದಾರ್
 ಆ) ಸಹಾಯಕ ಕಂದಾಯ ಅಧಿಕಾರಿ
 ಇ) ಜಿಲ್ಲಾಧಿಕಾರಿ ಈ) ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು
೩೨) ವಿಧವಾ ವೇತನ ಅರ್ಜಿ ಅನುಮೋದನೆ ಮಾಡುವರು ಯಾರು ?
 ಅ) ಜಿಲ್ಲಾಧಿಕಾರ                 ಆ) ತಹಿಸೀಲ್ದಾರ್       
 ಇ) ಸಹಾಯಕ ಕಂದಾಯ ಅಧಿಕಾರಿ ಈ) ಗ್ರಾಮ ಪಂಚಾಯಿತಿ ಕಾರ್ಯದರ್ಶಿ

ಉಪಸಂಹಾರ
ಅಭ್ಯುದಯ:-
ಕರ್ನಾಟಕ ರಾಜ್ಯದ ಸಕಾಲ ಕಾರ್ಯಕ್ರಮದ ಬಗ್ಗೆ ಗ್ರಾಮ ಪಂಚಾಯಿತಿ ಸದಸ್ಯರಿಗೆ ಇರುವ ಅರಿವನ್ನು ಕುರಿತು ಒಂದು ಅಧ್ಯಯನ ವಿಶೇಷವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಹೋಬಳಿಯ ಗ್ರಾಮ ಪಂಚಾಯಿತಿಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಸಕಾಲ ಕಾರ್ಯಕ್ರಮವು ಯಶಸ್ವಿಯಾಗಿ ಮುಂದುವರಿಯುತ್ತದೆ. ಇದರಿಂದಾಗಿ ಜನ ಸಾಮಾನ್ಯರಿಗೆ ಹೆಚ್ಚು ಅನುಕೂಲವಾಗಿದು ನಾಗರಿಕ ಸೇವೆಗಳನ್ನು ನಿಗಧಿತ ಸಮಯದಲ್ಲಿ ಪಡೆಯುತ್ತಿದ್ದಾರೆ.ಆದರೆ ಗ್ರಾಮೀಣ ಜನರಿಗೆ ಇದರ ಬಗ್ಗೆ ತಿಳುವಳಿಕೆ ಇಲ್ಲದಿರುವುದು ದುರದೃಷ್ಠಕರ ಸಂಗತಿಯಾಗಿದೆ.
ಸಂಶೋಧನೆಯನ್ನು ಕೈಗೊಂಡಾಗ ಗ್ರಾಮೀಣ ಜನರು ಪಂಚಾಯಿತ್ತಿಯಲ್ಲಿ ಯಾವ ರೀತಿಯಲ್ಲಿ ತಮ್ಮ ಅಧಿಕಾರ ಚಲಾಯಿಸುತ್ತಾರೆ ಮತ್ತು ಅವರ ಹಕ್ಕುಗಳು ಕರ್ತವ್ಯಗಳ ಬಗ್ಗೆ ಹಾಗೂ ಸರ್ಕಾರ ಜಾರಿಗೆ ತರುವ ವಿವಿಧ ರೀತಿಯ ಕಾರ್ಯಕ್ರಮಗಳ ಬಗ್ಗೆ ತಿಳುವಳಿಕೆ ಹೊಂದಿರುತ್ತಾರೆ.ಇದರಿಂದಾಗಿ ಗ್ರಾಮೀಣ ಜನರ ಸಮಸ್ಯೆಗಳಿಗೆ ಬೇಗನೇ ಪರಿಹಾರ ನೀಡಲು ಅನುಕೂಲವಾಗುತ್ತದೆ. ಸಕಾಲ ಕಾರ್ಯಕ್ರಮದಿಂದ ಗ್ರಾಮೀಣ ಜನರಿಗೆ ಹೆಚ್ಚು ಅನುಕೂಲವಾಗಿದೆ ಎಂಬುದಾಗಿ ಹೇಳಬಹುದು.

ಶ್ರವಣ ನ್ಯೂನ್ಯತೆವುಳ್ಳ ಹದಿಹರೆಯ ವಿದ್ಯಾರ್ಥಿಗಳ ಮನೋಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ, ಕಾನೂನು- ಹಕ್ಕುಗಳು ಮತ್ತು ಸೌಲಭ್ಯಗಳ ಬಗೆಗಿನ ಅರಿವು ...ಒಂದು ಅಧ್ಯಯನ.


ಬೆಂಗಳೂರು ವಿಶ್ವವಿದ್ಯಾಲಯ, ಸಮಾಜಕಾರ್ಯ ವಿಭಾಗ, ಜ್ಞಾನಭಾರತಿ ಆವರಣ

ಸಮಾಜಕಾರ್ಯ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯ ಅಗತ್ಯ ಭಾಗಶಃ ಪೂರೈಕೆಗಾಗಿ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿರುವ ಒಂದು ಕಿರು ನಿಬಂಧ.

ಸಂಶೋಧಕ: ರಮೇಶ ಎಚ್, ನಾಲ್ಕನೇ ಸೆಮಿಸ್ಟರ್ ಸಮಾಜಕಾರ್ಯ ವಿದ್ಯಾರ್ಥಿ

ಮಾರ್ಗದರ್ಶಕರು: ರವಿಕುಮಾರ್ ಬಿ. ಎಸ್, ಅಥಿತಿ ಉಪನ್ಯಾಸಕರು, ಸಮಾಜಕಾರ್ಯ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ

ಅಧ್ಯಾಯ - ೧ ಪೀಠಿಕೆ
 Helen Keller was both blind and deaf. When asked by someone what could be worse that being blind in this world, she replied “having eyes but not having a vision”
ಪ್ರಸ್ತುತ ಸನ್ನಿವೇಶದಲ್ಲಿ ಭಾರತದಲ್ಲಿ ೩. ೨೫ ದಶಲಕ್ಷ ಮಕ್ಕಳು ಶ್ರವಣದೋಷದ ತೊಂದರೆಯಿಂದ ಬಳಲುತ್ತಿದ್ದಾರೆ. ಈ ರೀತಿಯ ಶ್ರವಣದೋಷದ ನ್ಯೂನ್ಯತೆಯಿಂದ ಬಳಲುತ್ತಿರುವಂತಹ ಹದಿಹರೆಯದ ಮಕ್ಕಳಲ್ಲಿ ಹಲವಾರು ರೀತಿಯ ಸಮಸ್ಯೆಗಳು ಎದ್ದು ಕಾಣುತ್ತವೆ. ಇವರು ಮುಖ್ಯವಾಗಿ ಸಂವಹನದ ಸಂಧರ್ಭದಲ್ಲಿ ಮಾತುಗಾರಿಕೆಯು ಕೇಳಿಸದೇ ಇಲ್ಲದಿರುವುದರಿಂದ ಹೆಚ್ಚಿನದಾಗಿ ಮಾತನಾಡುವ ವ್ಯಕ್ತಿಯ ತುಟಿಯನ್ನೇ ಅತಿ ಸೂಕ್ಷ್ಮವಾಗಿ ಈ ನ್ಯೂನ್ಯತೆಯಿಂದ ಬಳಲುತ್ತಿರುವ ಮಕ್ಕಳು ಗಮನಿಸುತ್ತಾರೆ. ಒಂದು ವೇಳೆ ಮಾತನಾಡುವ ವ್ಯಕ್ತಿಯ ತುಟಿಯು ಬೇರೆ ಕಡೆ ತಿರುಗಿ ಮಾತನಾಡಿದರೆ ಶ್ರವಣದೋಷದ ನ್ಯೂನ್ಯತೆವುಳ್ಳ ಮಕ್ಕಳ ಗಮನ ಬೇರೆ ಕಡೆ ಸೆಳೆಯುತ್ತದೆ ಇದರಿಂದ ಅ ಮಕ್ಕಳಲ್ಲಿ ಸಂವಹನದ ಪ್ರಕ್ರಿಯೆಯಲ್ಲಿ ಮಾತುಗಾರಿಕೆ ಪರಿಣಾಮಕಾರಿಯಾಗಿ ಕೇಳಿಸುವುದಿಲ್ಲ. ಇದರಿಂದ ಮಕ್ಕಳಲ್ಲಿನ ಮಾತುಗಾರಿಕೆಯ ಕೌಶಲ್ಯವು ಅಭಿವೃದ್ದಿಯಾಗದೆ ತನ್ನ ಜ್ಞಾನವೃದ್ದಿಯಲ್ಲಿಯೂ ಕ್ಷೀಣನಾಗುತ್ತಾನೆ.
ಇತಂಹ ಹದಿಹರೆಯ ಮಕ್ಕಳು ಸಮುದಾಯದಲ್ಲಿಯೂ, ಶಾಲೆಯಲ್ಲಿಯೂ, ಹಾಗೂ ಕುಟುಂಬದಲ್ಲಿಯು ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಇದರಿಂದ ಶ್ರವಣದೋಷವುಳ್ಳ ಮಕ್ಕಳಲ್ಲಿ ಕಾಲಕ್ರಮೇಣ ಖಿನ್ನತೆಯ ಮನೋಭಾವನೆ ಬೆಳೆಯಲಿಕ್ಕೆ ಕಾರಣವಾಗುತ್ತೆ. ಆಗ ಮಕ್ಕಳು ಯಾರ ಜೊತೆಯಲ್ಲಿಯು ಬೇರೆಯಲು ಇಚ್ಚೆಪಡದೆ ದೂರ ಸರಿಯುತ್ತಾರೆ , ಇಂತಹ ಶ್ರವಣದೋಷವುಳ್ಳ ಮಕ್ಕಳನೊಡನೆ ಪ್ರತಿಯೊಂದು ಸಮುದಾಯ ವರ್ಗವು ಅಂದರೆ ಶಾಲಾ ಶಿಕ್ಷಕರು, ಪೋಷಕರು, ಸ್ನೇಹಿತರು , ಹಾಗೂ ನೆರೆಹೊರೆಯವರು ಇವರನ್ನು ತುಂಬಾ ಪ್ರೀತಿಯಿಂದ ಸಹನೆಯಿಂದ ಹಾಗೂ ಸಂಯಮದಿಂದ ಆತನಿಗೆ ಕೇಳಿಸುವಂತಹ ರೀತಿಯಲ್ಲಿ ಆತನು ಕೂಡ ನನ್ನಂತೆಯೆ ಎಂಬ ಭಾವನೆಯನ್ನು ಇಟ್ಟುಕೊಂಡು ಮಾತಾನಾಡಿಸಬೇಕು.
 ಕೀವುಡುತನ ಒಂದು ಅಗೋಚರ ಅಂಗವಿಕಲತೆ, ಕೀವುಡುತನಕ್ಕಿಂತ ಕೀವುಡುತನದ ಪರಿಣಾಮ ಅಗೋಚರವಾದುದು ಹಾಗೂ ಭಯಂಕರವಾದುದು. ಶೈಶವಾಸ್ಥೆಯಲ್ಲಿಯೇ ದೃಷ್ಟಿದೋಷಕ್ಕೂ ಶ್ರವಣದೋಷಕ್ಕೂ ಬಲಿಯಾದ ಹೆಲನ್‌ಕೆಲ್ಲರ್ ಆತ್ಮಕಥೆಯಲ್ಲಿ ಒಂದೆಡೇ ಹೀಗೆ ಹೇಳಿಕೊಂಡಿದ್ದಾರೆ. ಕುರುಡುತನವು ನನ್ನನ್ನು ನನ್ನ ಸುತ್ತಮುತ್ತಲಿನ ವಸ್ತುಗಳಿಂದ ಬೇರ್ಪಡಿಸಿದರೆ, ಕಿವಿಡುತನವು ನನ್ನನ್ನು ನನ್ನ ಸಹಜೀವಿಗಳಿಂದಲೇ ಬೇರ್ಪಡಿಸಿದೆ. ಈ ಒಂದು ಮಾತನ್ನು ಅರ್ಥೈಸಿಕೊಂಡರೆ ಸಾಕು ನಮಗೆ ಕಿವುಡುತನದ ಕಠೋರತೆಯು ಅರಿವಾಗುತ್ತದೆ.
 ಶ್ರವಣದೋಷ ಎಂದರೆ ಯಾವ ಮಕ್ಕಳಿಗೆ ಶೇ. ೫೦ ರಷ್ಟು ಡೆಸಿಬಲ್‌ಗಿಂತ ಕೇಳಿಸದ ಸಾಮಾರ್ಥ್ಯಕ್ಕಿಂತ ಹೆಚ್ಚಾಗಿರುತ್ತದೋ ಅಂತಹ ನ್ಯೂನ್ಯತೆಯನ್ನು ಶ್ರವಣದೋಷ ಎಂದು ಕರೆಯುತ್ತಾರೆ.
 ಅಥವಾ ಮಕ್ಕಳು ಹುಟ್ಟಿದಾಗಿನಿಂದ ಯಾವುದಾದರು ಸೊಂಕು ತಗುಲಿದ್ದು, ಹಾಗೂ ಸೋರುವಿಕೆಯಿಂದ ಕಿವಿಯ ತಮಟೆ ಸಮಸ್ಯೆಯಿಂದ ಬಳಲುತ್ತಿದ್ದರೇ ಕೇಳಿಸುವ ಸಾಮರ್ಥ್ಯ ಕ್ಷೀಣವಾದರೇ ಅದನ್ನು ಶ್ರವಣದೋಷವೆಂತಲು ಕರೆಯುವರು. ಇದನ್ನು ಆಂಗ್ಲಭಾಷೆಯಲ್ಲಿ Hearing impairment ಅಥವಾ Hearing loss ಎಂತಲೂ ಕರೆಯುವರು.

ಕಿವಿಯ ರಚನೆ ಮತ್ತು ಅದರ ಕಾರ್ಯಗಳು:
ನಮ್ಮ ಐದು ಪಂಚೇಂದ್ರಿಯಗಳಲ್ಲಿ ಕಿವಿಯೂ ಸಹ ಒಂದು. ಅದ್ದರಲ್ಲಿ ಕಣ್ಣಿಗೆ ಕಾಣುವಂತಹ ಹಾಗೂ ಕಾಣದಂತಹ ಅನೇಕ ಭಾಗಗಳಿವೆ. ಶಬ್ಧಗಳನ್ನು ಕೇಳಿಸಿಕೊಳ್ಳುವುದು, ಮೆದುಳಿಗೆ ರವಾನಿಸುವುದು ಹಾಗೂ ದೇಹದ ಸಮತೋಲನ ಸ್ಥಿತಿಯನ್ನು ಕಾಪಾಡುವುದು ಕಿವಿಯ ಮುಖ್ಯವಾದ ಕೆಲಸ.

‘ಶ್ರವಣ + ದೋಷ’
ಶ್ರವಣ ಎಂದರೆ ಕಿವಿ ಎಂದರ್ಥ ಇದರಲ್ಲಿ ೩ ರೀತಿಯವು ಇವೆ. ಹೊರ ಕಿವಿ, ನಡು ಕಿವಿ, ಹಾಗೂ ಒಳ ಕಿವಿ.
ಹೊರಕಿವಿ : ಹೊರಕಿವಿಯಲ್ಲಿ ಮುಖ್ಯವಾಗಿ ಬರುವ ಭಾಗಗಳೆಂದರೆ ಕಿವಿಯ ಹಾಲೆ (ಪಿನ್ಯಾ) ಮತ್ತು ಕರ್ಣನಾಳ. ಇದು ಕಿವಿಯ ಹಾಲೆಯಿಂದ ಕಿವಿಯ ತಮಟೆಯವರೆಗೆ ಆವರಿಸಿದೆ. ಪರಿಸರದಲ್ಲಿ ಉಂಟಾಗುವ ಶಬ್ಧಗಳನ್ನು ನಮ್ಮ ಹೊರಕಿವಿಯನ್ನು ಮೊದಲು ತಲುಪುತ್ತವೆ. ಹೊರಕಿವಿಯ ವಿಶಿಷ್ಟ ಆಕಾರದಿಂದ ಶಬ್ಧ ಶೇಖರಣೆ ಸಹಾಯವಾಗಿತ್ತದೆ. ಹೊರಕಿವಿಯ ಹಾಲೆ ಮತ್ತು ನಾಳ, ಶಬ್ಧವನ್ನು ಶೇಖರಿಸಿ ಮಧ್ಯಕಿವಿಗೆ ವರ್ಗಾಹಿಸುತ್ತದೆ. ಇದಲ್ಲದೆ ಹೊರಕಿವಿಯ ನಾಳದಲ್ಲಿರುವ ಗ್ರಂಥಿಗಳು ನೀರು, ಕ್ರಿಮಿ- ಕೀಟಗಳು ಮುಂತಾದವುಗಳು ಮಧ್ಯಕಿವಿಯನ್ನು ತಲುಪದ ಹಾಗೆ ತಡೆಯುತ್ತದೆ. ಅದಲ್ಲದೆ ಸೂಕ್ಷ್ಮ ರೋಮಗಳು ಗುಗ್ಗಿಯ ರೂಪದಲ್ಲಿ ಹೊರತಳ್ಳುತ್ತವೆ. ಇದರಿಂದಾಗಿ ಕಿವಿಯು ತನ್ನಿಂದ ತಾನೇ ಶುಚಿಯಾಗುತ್ತದೆ. ಹೊರಕಿವಿಯಿಂದ ಹಾಯ್ದು, ಶಬ್ಧದ ಅಲೆಗಳು ಕಿವಿಯ ತಮಟೆಯನ್ನು ಮುಟ್ಟಿದಾಗ ಕಿವಿಯ ತಮಟೆಯ ಚಲನೆ ಸೂಕ್ಷ್ಮವಾಗಿರುತ್ತದೆ ಹಾಗೂ ಜೋರಾದ ಶಬ್ಧಗಳಿಗೆ ತಮಟೆಯ ಚಲನೆ ಹೆಚ್ಚಿನ ಪ್ರಮಣದ್ದಾಗಿರುತ್ತದೆ. ಈ ತಮಟೆ ಪದರಗಳಿಂದ ಕೂಡಿರುತ್ತದೆ.
ಮಧ್ಯಕಿವಿ : ಮಧ್ಯಕಿವಿಯು ತಮಟೆಯ ಹೊರ ಹಾಗೂ ಮಧ್ಯಕಿವಿಯನ್ನು ಬೇರ್ಪಡಿಸುತ್ತದೆ. ತಮಟೆ ಬಂದು ತಲುಪಿದ ಶಬ್ಧ ಅದರ ಚಲನೆಯಿಂದ ತಮಯೆಗೆ ಹುದುಗಿಸಿಕೊಂಡಿರುವ ಮೂಳೆಗಳಿಗೆ ವರ್ಗಾವಣೆ ಆಗುತ್ತದೆ. ಆ ಮೂಳೆಗಳು ಕ್ರಮವಾಗಿ ಇಂಕಸ್ ,ಮ್ಯಾಲಿಯಸ್, ಸ್ಟೆಪಿಸ್ ಮೂಲಕ ಶಬ್ಧಗಳನ್ನು ರವಾನಿಸುತ್ತದೆ. ಈ ಮೂರು ಮೂಳೆಗಳಲ್ಲಿ ದೊಡ್ಡದಾದದ್ದು ಕಿವಿಯ ತಮಟೆಯಲ್ಲಿ ಹುದುಗಿದ್ದರೆ, ಚಿಕ್ಕದು ಒಳಕಿವಿಯೊಂದಿಗೆ ಸಂಪರ್ಕ ಸ್ಥಾಪಿಸುತ್ತದೆ. ಸ್ಟೆಪಿಸ್ ನಮ್ಮ ದೇಹದ ಅತ್ಯಂತ ಚಿಕ್ಕ ಮೂಳೆಯಾಗಿದೆ.
ಒಳಕಿವಿ : ಒಳಕಿವಿಗೆ ಚಕ್ರವ್ಯೂಹ ಎಂದು ಕರೆಯುತ್ತಾರೆ. ಒಳಕಿವಿ ಒಂದು ಬಟಾಣಿ ಕಾಳಿನ ಗಾತ್ರದಷ್ಟಿರುತ್ತದೆ. ಇದು ಅತೀ ತೊಡಕಾದ ಕಾರ್ಯ ವ್ಯಾಪ್ತಿಯನ್ನು ಹೊಂದಿದೆ. ಇದರ ಕಾರ್ಯದ ದೃಷ್ಟಿಯಿಂದ ಒಳಕಿವಿಯನ್ನು ೨ ಭಾಗಗಳಾಗಿ ವಿಂಗಡಿಸಬಹುದು.
ಅವುಗಳು ಅ) ಕಾಕ್ಲಿಯ. ಬ) ವೆಸ್ಟಬ್ಯುಲಾರ್ ಮೆಕಾನಿಸಂ.
ಅ) ಕಾಕ್ಲಿಯ: ಕೇಳಿಸಿಕೊಳ್ಳುವಲ್ಲಿ ಅತೀ ಪ್ರಮುಖ ಪಾತ್ರವಹಿಸುವ ಅಂಗ ಕಾಕ್ಲಿಯಾ. ಇದು ಒಳಕಿವಿಯ ಕೆಳಭಾಗದಲ್ಲಿದ್ದು ಬಸವನ ಹುಳುವಿನ ಆಕಾರವನ್ನು ಹೊಂದಿದೆ ಮತ್ತು ೨. ೧/೨ ಸುತ್ತುಗಳನ್ನು ಹೊಂದಿದೆ.
ಆ) ವೆಸ್ಟ ಬ್ಯುಲಾರ್ ಮೆಕಾನಿಸಂ: ಮಧ್ಯಕಿವಿಯಿಂದ ಒಳಕಿವಿಗೆ ಸಂಪರ್ಕ ಹೊಂದಿದೆ. ಇ ಭಾಗದಲ್ಲಿ ಸಮತೋಲನದ ಅಂಗಗಳಾದ ಅರ್ಧ ಚಂದ್ರಾಕಾರದ ನಾಳೆ (ಸೆಮಿ- ಸರ್ಕ್ಯಲರ್ ಕೆನಾಲ್) ಇವೆ. ಇದು ಕಿವಿಯ ಒಳಭಾಗದಲ್ಲಿ ಇರುತ್ತದೆ. ಇದು ನಮ್ಮ ದೇಹದ ಸಮತೋಲನವನ್ನು ಕಾಪಾಡುತ್ತಿರುತ್ತದೆ. ಪೋಷಕರು ತಮಗೆ ತಿಳಿಯದೇ ಮಕ್ಕಳ ಕೆನ್ನೆಯ ಭಾಗದ ಮೇಲೆ ಜೋರಾದ ಏಟು/ ಒತ್ತಡ ಬೀಳುವುದು ಅಪಾಯಕಾರಿ. ಆದುದರಿಂದ ಕಿವಿಯ ಕಾರ್ಯಕ್ಕೆ ತಡೆಯುಂಟಾಗುತ್ತದೆ.
 ಹದಿಹರೆಯದ ವಿದ್ಯಾರ್ಥಿಗಳಲ್ಲಿ ಈ ೩ ಭಾಗಗಳು ಕ್ಷೀಣವಾದರೆ ಶ್ರವಣತೆಯಲ್ಲಿ ನ್ಯೂನ್ಯತೆ ಅಥವಾ ದೋಷವಾಗಿದೆ ಎಂದರ್ಥ.

ಕಿವಿಯ ಕಾರ್ಯಗಳು:
ಕಿವಿಯು ಶಬ್ಧದ ತರಂಗಗಳನ್ನು ಸಂಗ್ರಹಿಸಿ ಹೊರ ಕಿವಿಯ ನಾಳದಲ್ಲಿ ಹಾದು ಹೋಗುವಂತೆ ಮಾಡುತ್ತದೆ. ಈ ಶಬ್ಧ ತರಂಗಗಳು ಕಿವಿಯ ತಮಟೆಯ ಹೊಡೆದು ತಮಟೆಯು ಕಂಪಿಸುತ್ತದೆ. ಈ ತಮಟೆಯ ಅಂಟಿಕೊಂಡಿರುವ ಮಧ್ಯಕಿವಿಯ ೩ ಮೂಳೆಗಳ ಸರಪಳಿಯು ಈ ಕಂಪನವನ್ನು ಒಳಕಿವಿಗೆ ಸಾಗಿಸುತ್ತದೆ. ಈ ಕಂಪನಗಳು ಕಾಕ್ಲಿಯಾದ ಸುತ್ತಲಿರುವ ಪೆರಿಲಿಂಪ್ ದ್ರವವನ್ನು ಚೇತನಗೊಳಿಸಿ ಅದರಲ್ಲಿ ಕಂಪನಗಳನ್ನು ಉಂಟುಮಾಡುತ್ತದೆ. ಇದರಿಂದ ಕಾಕ್ಲಿಯಾದ ಒಳಗಿರುವ ಎಂಡೋಲಿಂಫ್ ದ್ರವದಲ್ಲಿ ಕಂಪನಗಳು ಉತ್ಪನ್ನವಾಗಿ ಕಾಟಿ ಅಂಗವನ್ನು ಪ್ರಚೋದಿಸುತ್ತದೆ. ಈ ಪ್ರಚೋದನೆಗಳನ್ನು ಕಾಟಿ ಅಂಗದಲ್ಲಿರುವ ಗ್ರಾಹಕಗಳು ಸ್ವೀಕರಿಸಿ ಶ್ರವಣ ನರಗಳ ಮೂಲಕ ಮೆದುಳಿಗೆ ಕಳಿಸುತ್ತದೆ. ಮೆದುಳಿನಲ್ಲಿರುವ ಈ ಸಂದೇಶಗಳನ್ನು ಅರ್ಥೈಯಿಸಲ್ಪಟ್ಟಾಗ ನಮಗೆ ಶಬ್ಧ ಕೇಳುತ್ತದೆ. ಹೀಗೆ ಅತೀ ಕಡಿಮೆ ಅವಧಿಯಲ್ಲಿ ಕೇಳಿಸಿಕೋಳ್ಳುವ ಕ್ರಿಯೆ ಪೂರ್ಣವಾಗುತ್ತದೆ.

 ಶ್ರವಣದೋಷ ಉಂಟಾಗಲು ಕಾರಣಗಳು:
ರಕ್ತಸಂಬದದಲ್ಲಿನ ಮದುವೆ: ಶ್ರವಣದೋಷವುಂಟಾಗಲು ಪ್ರಮುಖ ಕಾರಣಗಳಲ್ಲಿ ರಕ್ತಸಂಬಂದದ ಮದುವೆಗಳು ಸಹ ಒಂದು.
ಹಲವರಿಗೆ ಈ ವಿಷಯ ಅಶ್ಚರ್ಯಕರವೂ! ನಾನು ನಮ್ಮ ಸೋದರತ್ತೆಯ ಮಗಳನ್ನೆ ಮದುವೆಯಾಗಿರುವುದು, ನಮ್ಮ ಮಗುವಿಗೆ ಯಾವುದೇ ತೊಂದರೆಗಳಿಲ್ಲ ಎಂದು ಹೇಳುವವರು ಇದ್ದಾರೆ.
ಆದರೆ ಇದು ಸತ್ಯದ ಸಂಗತಿ ವಿಜ್ಞಾನದ ವರದಿಯಂತೆ ಶ್ರವಣದೋಷಕ್ಕೆ ಪ್ರಮುಖ ಕಾರಣ ರಕ್ತ ಸಂಬಂದದ ಮದುವೆಗಳಿಂದಲೇ ಎಂಬುದು ತಿಳಿದು ಬಂದಿದೆ.
ಬಾಲ್ಯವಿವಾಹ: ಹೆಚ್ಚಿನ ರೀತಿಯಲ್ಲಿ ಹದಿಹರೆಯದಕ್ಕಿಂತ ಮುಂಚೆ ಅ ಮಕ್ಕಳ ಅಂಗಾಗಗಳು ಸರಿಯಾಗಿ ಸ್ಥಿರಗೊಂಡಿರುವುದಿಲ್ಲ, ಅಪ್ರಾಪ್ತ ವಯಸ್ಸಿನಲ್ಲಿಯೇ ಮದುವೆ ಮಾಡುವುದರಿಂದ ಏನು ಅರಿಯದ ಹುಟ್ಟಿದ ಮಕ್ಕಳಿಗೆ ಶ್ರವಣದೋಷ ಉಂಟಾಗುತ್ತದೆ. ಕಾರಣ ಎಳೆ ವಯಸ್ಸಿನಲ್ಲೆ ಗರ್ಭಿಣಿಯಾಗಿರುವುದರಿಂದ ಹೇರಿಗೆ ಕಷ್ಟಕರವಾಗಬಹುದು. ಹೆರಿಗೆ ಸಮಯದಲ್ಲಿ ಮಗುವಿಗೆ ಮತ್ತು ತಾಯಿಗೂ ಅಪಾಯ ಉಂಟಾಗುತ್ತದೆ. ಇದರಿಂದ ಹುಟ್ಟಿದ ಮಗುವಿಗೆ ಶ್ರವಣನ್ಯೂನ್ಯತೆಯುಂಟಾಗುವ ಸಾಧ್ಯತೆಯು ಇದೆ.
ಕಲುಷಿತ ವಾತಾವರಣ: ಕಲುಷಿತ ವಾತಾವರಣ ಶ್ರವಣದೋಷ ಉಂಟಾಗಲು ಪ್ರಮುಖ ಕಾರಣವಾಗಿದೆ. ಕಲುಷಿತ ವಾತಾವರಣ, ಮೂಲಭೂತ ಸೌಕರ್ಯಯಗಳನ್ನು ಮನುಷ್ಯನಿಗೆ ಅತಿಮುಖ್ಯ ಅಂದರೇ ಕಾರ್ಖಾನೆ ಮತ್ತು ಕೈಗಾರಿಕೆಯ ಶಬ್ಧ ಮತು ಮಾಲಿನ್ಯತೆ, ವಾಹನದ ಶಬ್ಧಗಳು, ಧ್ವನಿವರ್ಧಕಗಳು ಇವು ಕಿವಿಯ ಮೇಲೆ ದುಷ್ಪರಿಣಾಮ ಬೀರುತ್ತದೆ.
ಉದಾ: ಕೈಗಾರಿಕೆ ಮತ್ತು ಕಾರ್ಖಾನೆಯಿಂದ ಹೋರ ಬಂದ ವಿಷಗಾಳಿಯ ಸೇವನೆಯಿಂದ (ಭೂಪಾಲ್ ಅನಿಲ ದುರಂತ) ಅನೇಕ ಜನರು ಸಾವನ್ನಪ್ಪಿದರೆ, ಇನ್ನು ಕೆಲವರು ಶ್ರವಣನ್ಯೂನ್ಯತೆ ಮತ್ತು ಅಂಗವೈಕಲ್ಯತೆಗೆ ಒಳಗಾಗಿದ್ದಾರೆ.
ಗರ್ಭಿಣಿಯರಿಗೆ ಸರಿಯಾದ ಆರೈಕೆ ಇಲ್ಲದಿರುವುದು: ಶ್ರವಣದೋಷದ ನ್ಯೂನ್ಯತೆಯು ಉಂಟಾಗಲು ಪ್ರಮುಖ ಕಾರಣ ಗರ್ಭಿಣಿಯ ಹಾರೈಕೆ ಸರಿಯಾಗಿಲ್ಲದಿರುವುದು, ಯಾವುದೇ ಮಗು ಆರೋಗ್ಯವಾಗಿ ಜನಿಸಬೇಕಾದರೆ ಗರ್ಭಿಣಿಯ ಪಾತ್ರ ಮುಖ್ಯವಾಗಿದೆ. ಅನೇಕ ಮಕ್ಕಳು ಹುಟ್ಟಿದ ತಕ್ಷಣ ಸಾಯುತ್ತಿದ್ದಾರೆ, ಹುಟ್ಟಿದ ವರ್ಷದ ಒಳಗೆ ಸಾವನ್ನಪ್ಪುವ ಮಕ್ಕಳು ಹಲವಾರು, ಭಾರತದಲ್ಲಿಹುಟ್ಟಿದ ಪ್ರತಿ ಸಾವಿರ ಮಕ್ಕಳಲ್ಲಿ ೮೫ ಮಕ್ಕಳು ಒಂದು ವರ್ಷದ ಒಳಗಾಗಿ ಸಾಯುತ್ತಿದಾರೆ. ಮಗು ಗರ್ಭದಲ್ಲಿದಾಗ ಗರ್ಭಿಣಿಯ ಹಾರೈಕೆ ಸರಿಯಾಗಿ ಇಲ್ಲದಿರುವುದು ಕಂಡುಬರುತ್ತದೆ. ಗರ್ಭಿಣಿ ಸ್ತ್ರೀ ಸರಿಯಾದ ಮುನ್ನೇಚ್ಚರಿಕೆ ಕ್ರಮಗಳನ್ನು ವಹಿಸಿರುವುದಿಲ್ಲ. ಗರ್ಭಾವಸ್ಥೆಯಲ್ಲಿ ಪೌಷ್ಟಿಕ ಆಹಾರ ಸೇವನೆ ಅತ್ಯಗತ್ಯ, ಅಲ್ಲದೆ ಸಮಯಕ್ಕೆ ಸರಿಯಾಗಿ ವೈದ್ಯಕೀಯ ಪರೀಕ್ಷೆ, ಕಬ್ಬಿಣಾಂಶ ಮಾತ್ರೆಗಳ ಸೇವನೆ, ಮಾನಸಿಕ ಆರೋಗ್ಯವನು ಕಾಪಾಡಿಕೊಳ್ಳುವುದು, ಗರ್ಭಿಣಿಯು ಹೆಚ್ಚು ತೂಕ ಹೊಂದಿರುವಂತಹ ಹಲವಾರು ಕ್ರಮಗಳು ಗರ್ಭಿಣಿ ಸ್ತ್ರೀಯು ಪಾಲಿಸಬೇಕು.
ಆದರೆ ಹಲವಾರು ಕಡೆ ಇಂತಹ ಸೌಲಭ್ಯಗಳಿಂದ ವಂಚಿತರಾಗಿದ್ದರೆ. ಹಳ್ಳಿಗಳಲ್ಲಿಯೂ ಇದರ ಸ್ಥಿತಿ ತೀರಾ ಗಂಭೀರವಾಗಿರುತ್ತದೆ. ಅದರಿಂದ ಅವರಿಗೆ ಹುಟ್ಟುವ ಮಗುವಿಗೆ ಬೆಳವಣಿಗೆಯಲ್ಲಿ ಕುಂಠಿತ ಕಾಣಬಹುದು, ಇದರಿಂದ ಕೇವಲ ಮಗುವಿಗೆ ಮಾತ್ರ ಹಾನಿಯಲ್ಲ ತಾಯಿಗೂ ಸಹ ಹಾನಿವುಂಟಾಗುತ್ತದೆ ಹಾಗೂ ಹೆರಿಗೆ ಕಷ್ಟಕರವಾಗಬಹುದು. ಕೆಲವೊಮ್ಮೆ ಹೆರಿಗೆ ಸಮಯದಲ್ಲೆ ಮರಣ ಹೊಂದಬಹುದು, ಹೆರಿಗೆಯ ನಂತರ ತಾಯಿ ನಿಶಕ್ತಳಾಗಬಹುದು, ಅದರಿಂದ ಗರ್ಭಿಣಿ ಸ್ತ್ರೀಯ ಆರೈಕೆ ಅತಿ ಮುಖ್ಯವಾಗಿದೆ.
ಅಸುರಕ್ಷಿತ ಹೆರಿಗೆ: ಶ್ರವಣದೋಷನ್ಯೂನ್ಯತೆಗೆ ಮಾತ್ತೋಂದು ಕಾರಣ ಅಸುರಕ್ಷಿತ ಹೆರಿಗೆ, ಆಸ್ಪತ್ರೆಗಳು ಇಲ್ಲದ ಕಾರಣ ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ಅನುಭವ ಇಲ್ಲದಿರುವುದರಿಂದ ಹೆರಿಗೆ ಮಾಡಿಸುವುದು ಹಾಗೂ ಹೆರಿಗೆಯ ಸಮಯದಲ್ಲಿ ಸುರಕ್ಷಿತ ಮತ್ತು ಶುಚಿತ್ವ ವಹಿಸದೇ ಇರುವುದರಿಂದ ಎಷ್ಟೋ ಮಕ್ಕಳು ಹೆರಿಗೆಯ ಸಮಯದಲ್ಲೆ ಅಸುನೀಗಿರುವುದು ಕಾಣಬಹುದು, ಅಸುರಕ್ಷಿತ ಹೆರಿಗೆಯಿಂದ ಮಗುವಿಗೆ ತಲೆಗೆ ಪೆಟ್ಟು ಬಿದ್ದು ಬುದ್ಧಿಮಾಂದ್ಯತೆ, ಮಾನಸಿಕ ಅಸ್ವಸ್ಥತೆ, ಹಾಗೂ ಶ್ರವಣದೋಷದ ನ್ಯೂನ್ಯತೆಗೆ ಕಾರಣವಾಗಬಹುದು.
ಯುದ್ಧಗಳು: ಇತ್ತೀಚಿನ ದಿನಗಳಲ್ಲಿ ಶ್ರವಣದೋಷಕ್ಕೆ ಕಾರಣವಾಗುತ್ತಿರುವ ಅಂಶಗಳಲ್ಲಿ ಪ್ರಮುಖವಾದುದು. ಯುದ್ಧಗಳು ಮತ್ತು ಮತಗಲಭೆಗಳು ಯಾರದೋ ಸ್ವಾರ್ಥಭಾವನೆಗಳಿಗೆ ಅಮಾಯಕರು ತೊಂದರೆಗಳಿಗೆ ತುತ್ತಾಗುತ್ತಿದ್ದಾರೆ ಇಂತಹ ಯುದ್ಧಗಳಿಂದ ಎಷ್ಟೋ ಜನರ ಪ್ರಾಣಹಾನಿ ಉಂಟಾಗುತ್ತಿದೆ. ಅನೇಕ ಜನ ಶ್ರವಣದೋಷ ಹಾಗೂ ಇನ್ನಿತರ ಅಂಗವೈಕಲ್ಯತೆಗೆ ತುತ್ತಾಗುತ್ತಿದಾರೆ, ಅಲ್ಲಿ ಉಪಯೋಗಿಸುವ ರಾಸಾಯನಿಕ ಬಾಂಬ್‌ಗಳು ಮತ್ತು ಶಸ್ತ್ರಾಸ್ತ್ರಗಳಿಂದ ಆ ಪ್ರದೇಶ ವಾತಾವರಣ ಹದಗೆಡುತ್ತಿದೆ, ಇದರಿಂದ ಇಲ್ಲಿ ಹುಟ್ಟುವ ಮಕ್ಕಳು ಹಲವಾರು ನ್ಯೂನ್ಯತೆಯಂತಹ ತೊಂದರೆಗಳಿಗೆ ಒಳಗಾಗುತ್ತಿದ್ದಾರೆ.
ಇದಕ್ಕೊಂದು ಉತ್ತಮ ಉದಾಹರಣೆ ಎಂದರೆ ೨ನೇ ಜಾಗತಿಕ ಮಹಾಯುದ್ಧದಲ್ಲಿ ಅಮೇರಿಕಾ ಜಪಾನಿನ ಮುಖ್ಯ ನಗರಗಳಾದ ಹಿರೋಷಿಮಾ ಮತ್ತು ನಾಗಸಾಕಿಯ ಮೇಲೆ ಅಣುಬಾಂಬ್ ಹಾಕಿದಾಗ ಲಕ್ಷಗಟ್ಟಲೆ ಜನ ಸಾವನ್ನಪ್ಪಿದರು. ಅಳಿದುಳಿದವರು ವಿವಿಧ ರೀತಿಯ ನ್ಯೂನ್ಯತೆಗೆ ಒಳಗಾಗಿದ್ದರು. ಹುಟ್ಟುತಿರುವ ಮಕ್ಕಳ ಮೇಲೂ ವ್ಯತಿರಿಕ್ತ ಪ್ರಭಾವವಾಗಿದೆ.
 ಮಕ್ಕಳಿಗೆ ಸರಿಯಾದ ಸಮಯಕ್ಕೆ ಚುಚ್ಚುಮದ್ದುಗಳು ಹಾಗೂ ಲಸಿಕೆ ಕೊಡಿಸದೇ ಇರುವುದು: ಒಂದು ಮಗು ಆರೋಗ್ಯಯುತವಾಗಿ ಬೆಳೆಯಬೇಕಾದರೆ ಮಗು ಹುಟ್ಟಿದಾಗಿನಿಂದ ಐದು ವರ್ಷದವರೆಗೂ ಅನೇಕ ಲಸಿಕೆ ಮತ್ತು ಚುಚ್ಚುಮದ್ದುಗಳನ್ನು ಕೊಡಿಸಬೇಕು. ಹುಟ್ಟಿದ ವಾರದೊಳಗೆ ಬಿ. ಸಿ. ಜಿ ಹಾಕಿಸಬೇಕು. ಇದು ಬಾಲಕ್ಷಯರೋಗವನ್ನು ತಡೆಯುತ್ತದೆ. ಅದೇ ರೀತಿ ೩ ತಿಂಗಳು ತುಂಬಿದ ಮೇಲೆ ಡಿ. ಪಿ. ಟಿ ಚುಚ್ಚುಮದ್ದು ಹಾಕಿಸಬೇಕು. ಇದು ಗಂಟಲು ಮಾರಿ ಮತ್ತು ನಾಯಿ ಕೆಮ್ಮು ರೋಗವನ್ನು ತಡೆಯುತ್ತದೆ, ೯ ತಿಂಗಳು ತುಂಬಿದಾಗ ದಡಾರ ರೋಗ ನಿಯಂತ್ರಣಕ್ಕಾಗಿ ಮೀಸಲ್ಸ್ನ್ನು ಕೊಡಬೇಕಾಗುತ್ತದೆ. ಅಲ್ಲದೆ ಐದು ವರ್ಷದವರೆಗೂ ವರ್ಷಕ್ಕೆ ಎರಡು ಬಾರಿ ಪೋಲೀಯೋ ಲಸಿಕೆ ನೀಡಬೇಕು, ಇವೆಲ್ಲಾ ಮಕ್ಕಳ ಆರೋಗ್ಯಯುತ ಜೀವನಕ್ಕೆ ಅತೀ ಅವಶ್ಯಕ.
ಸರಿಯಾದ ರೀತಿಯಲ್ಲಿ ಚುಚ್ಚುಮದ್ದು ಲಸಿಕೆಗಳನ್ನು ಕೊಡಿಸುವುದರಿಂದ ಮಕ್ಕಳು ಶ್ರವಣದೋಷದ ಮತ್ತು ಇತರೆ ಅಂಗವೈಕಲ್ಯತೆಯಿಂದ ತಡೆಯಿಡಿಯಬಹುದು, ಇದಕ್ಕೊಂದು ಉತ್ತಮ ಉದಾಹರಣೆ ಎಂದರೆ : ೧೯೫೧ ರಲ್ಲಿ ೨೯೭೦೯ ಪೋಲೀಯೋ ಪ್ರಕರಣ ದಾಖಲಾಗಿತ್ತು. ಇದು ೧೯೮೧ ರ ವೇಳೆಗೆ ೨೨೫ ಕ್ಕೆ ಇಳಿದಿದ್ದು ೨೦೦೩ ಕ್ಕೆ ೨೧೪ಕ್ಕೆ ಇಳಿದಿರುವುದು ಒಂದು ಸಾಧನೆ ಎಂದು ಹೇಳಬಹುದು.
ಮೂಢನಂಬಿಕೆಗಳು: ಇದು ಸಹ ಶ್ರವಣ ನ್ಯೂನ್ಯತೆಗೆ ಪ್ರಮುಖ ಕಾರಣ, ದೊಡ್ಡವರ ಯಾವುದೋ ಆಚಾರ-ವಿಚಾರಗಳಿಗೆ ಮತ್ತು ಅವರ ಸಿದ್ಧಾಂತಗಳಿಗೆ ಮಕ್ಕಳು ಬಲಿಪಶುಗಳಾಗುತ್ತಿದಾರೆ.
ಮಗು ಯಾವುದೊ ತೊಂದರೆಗೆ ಸಿಲುಕಿದರೇ ಕಾಯಿಲೆಗೆ ತುತ್ತಾಗಿದ್ದರೆ ಅಥವ ಕಿವಿಯ ಸೋರುವಿಕೆಗೆ ಒಳಗಾಗಿದ್ದರೆ ತಮ್ಮ ಮೂಢನಂಬಿಕೆಗಳಿಂದ ಇದೆಲ್ಲಾ ದೇವರ ಶಾಪ, ಕೋಪ, ಕೂದಲು ಬಲಿಕೊಡುವಿಕೆ, ಪೂಜೆ ಮಾಡಿಸುವುದರಿಂದ ಸರಿಹೋಗುತ್ತದೆ, ಎಂದೆಲ್ಲಾ ತಿಳಿದು ಇವೆಲ್ಲಾ ಮಾಡುಸುವಷ್ಟರಲ್ಲಿ ಆ ಕಾಯಿಲೆಗೆ ತುತ್ತಾಗಿರುವ ಮಕ್ಕಳ ತಲೆಬುರುಡೆಯಲ್ಲಿ ಕಿವಿಸೋರುವಿಕೆಯಿಂದ ಕೊಳೆಯುವುದಕ್ಕೆ ಪ್ರಾರಂಭಿಸುತ್ತದೆ, ಇದರಿಂದ ಶ್ರವಣದಲ್ಲಿನ ತಮಟೆ ಅರಿಯಲ್ಲಿಕ್ಕೆ ಪ್ರಾರಂಭಿಸಿ ತಮಟೆ ತೂತು ಬಿದ್ದು ಕಿವಿ ಕೇಳಿಸದಂತೆ ಆಗುತ್ತದೆ.
ಬಡತನ: ಬಡತನದಿಂದ ಮನುಷ್ಯ ಅಪೌಷ್ಟಿಕತೆಯನ್ನು ಅನುಭವುಸುತ್ತಾನೆ, ಇದರಿಂದ ಅವನ ಜೀವನ ಗುಣಮಟ್ಟ ಕಡಿಮೆಯಾಗಿರುತ್ತದೆ, ಅಪಾಯಕಾರಿ ಕೆಲಸಗಳಲ್ಲಿ ತೊಡಗಿ ಶ್ರವಣದೋಷಕ್ಕೆ ಒಳಗಾಗಿ ಇಂತಹ ನ್ಯೂನ್ಯತೆಯಿಂದ ಹೊರಬರಲ್ಲಿಕ್ಕೆ ಆರ್ಥಿಕ ಸಮಸ್ಯೆ ಎಂಬುದು ಎದ್ದು ಕಾಣುತ್ತದೆ, ಇದರಿಂದ ಶಸ್ತ್ರಚಿಕಿತ್ಸೆಗೂ ಹಣ ಒದಗಿಸಲಾಗದೆ, ಜೀವನ ಪೂರ್ತಿ ಶ್ರವಣದೋಷದ ಸಮಸ್ಯೆಯಿಂದಲೇ ಬಳಲುತ್ತಾನೆ.

 ಇತರೆ ಈ ಕೆಳಗಿನ ಅಂಶಗಳು ಶ್ರವಣನ್ಯೂನ್ಯತೆಗೆ ಪ್ರಮುಖ ಕಾರಣಗಳಾಗಿವೆ.
ಗರ್ಭಿಣಿಗೆ ಸೋಂಕು ರೋಗಗಳು ಬರುವುದರಿಂದ
ಜರ್ಮೆನ್, ದಡಾರ, ಮೀಸಲ್ಸ್ ಎಂಬ ಜ್ವರಗಳಿಂದ
ಮೆದುಳು ಜ್ವರದಿಂದ
ಕ್ಷ-ಕಿರಣಗಳಿಂದ
ಪೌಷ್ಟಿಕ ಆಹಾರದ ಕೊರತೆಯಿಂದ
ತಾಯಿ ಮತ್ತು ಮಗುವಿನಲ್ಲಿ ರಕ್ತದ ಗುಂಪುಗಳು ಒಂದೇ ಇರುವುದರಿಂದ
ಪದೇ ಪದೇ ಗರ್ಭಪಾತ ಮಾಡಿಸಿಕೊಳ್ಳುವುದರಿಂದ
ರಕ್ತ ಸಂಬಂದದಲ್ಲಿ ಮದುವೆ ಆಗುವುದರಿಂದ
ವೈದ್ಯರ ಸಲಹೆ ಇಲ್ಲದೆ ಔಷಧಿಗಳನ್ನು ಬಳಸುವುದರಿಂದ
ಹುಟ್ಟಿದ ತಕ್ಷಣ ಮಗುವಿನ ಆಮ್ಲಜನಕ ಕೊರತೆ ಉಂಟಾದಲ್ಲಿ
ಮಗು ಹುಟ್ಟಿದ ತಕ್ಷಣ ಅಳದಿರುವುದು
ಅವಧಿಗೆ ಮುನ ಮಗು ಜನಿಸುವುದರಿಂದ
ಮಗುವಿನ ೧ ಕೆ ಜಿ ಗಿಂತ ಕಡಿಮೆ ತೂಕ ಇದ್ದಲ್ಲಿ
ಹೆರಿಗೆ ಸಮಯದಲ್ಲಿ ಸ್ವಚ್ಚತೆ ಇಲ್ಲದೆ ವೈದ್ಯಕೀಯ ಉಪಕರಣಗಳನ್ನು ಬಳಕೆ ಮಾಡುವುದರಿಂದ
ಮೆದಳು ಜ್ವರ . ಕಾಮಾಲೆ ರೋಗ (ಜಾಂಡೀಸ್) ಇತ್ಯಾದಿಗಳಿಂದ
ಪದೇ ಪದೇ ಕಿವಿ ಸೋರುವಿಕೆಯಿಂದ
ಮೆದಳು ಜ್ವರ ,ಟೈಫಾಯಿಡ್ ಜ್ವರ ಮತ್ತು ಜಾಂಡೀಸ್ ಮೊದಲಾದವುಗಳಿಂದ
ಅಪಘಾತಕ್ಕೆ ಒಳಗಾಗಿ ಕಿವಿಯ ಅಂಗಗಳಿಗೆ ತೊಂದರೆಗಳಾಗುವುದರಿಂದ

ಶ್ರವಣದೋಷವುಳ್ಳ ಮಕ್ಕಳ ಡೆಸಿಬಲ್‌ಗಳ ಮಟ್ಟ:
 ಜೀವನ ನಿರ್ವಹಣೆಗೆ ಬೇಕಾಗಿರುವ ಶ್ರವಣಸಾಮಾರ್ಥ್ಯ ಇಲ್ಲದವರು ಶ್ರವಣದೋಷವುಳ್ಳವರು.
ಅವರಿಗೆ ಶಬ್ಧವನ್ನು ಹೆಚ್ಚಿಸುವ ಯಂತ್ರವನ್ನು ಕೊಟ್ಟರೂ ಶಬ್ಧದ ಪರಿಚಯ ಆಗುವುದಿಲ್ಲ, ಶ್ರವಣ ಸಾಮರ್ಥ್ಯವನ್ನು ( ಕೀಳಿಸಿಕೊಳ್ಳುವ ಮಟ್ಟವನ್ನು ) ಡೆಸಿಬಲ್‌ಗಳೆಂದು ಅಳೆಯುತ್ತಾರೆ . ೬೦ ಡೆಸಿಬಲ್‌ಗಿಂತ ಹೆಚ್ಚಾಗಿ ಕೇಳಿಸುವಿಕೆಯ ನಷ್ಟವಿದ್ದರೆ ಮಾತು ಕೇಳುವುದಿಲ್ಲ.
ಶ್ರವಣ ಪರೀಕ್ಷೆಯ ಆಧಾರದ ಮೇಲೆ ಶ್ರವಣದೋಷವಿರುವ ಮಕ್ಕಳನ್ನು ಈ ಕೆಳಗಿನಂತೆ ವರ್ಗಿಕರಿಸಬಹುದು.

ಕೇಳಿಸಿಕೊಳ್ಳುವ ಮಟ್ಟ (ಡೆಸಿಬಲ್‌ಗಳಲ್ಲಿ)
ಕೇಳುವ ಶಕ್ತಿಯ ಕೊರತೆ/ದೋಷ ೦-೨೫
ಸಾಮಾನ್ಯ ೨೬-೪೦
ಲಘು ೪೧-೫೫
ಸುಮಾರು ೫೬-೭೦
ಸುಮಾರಾಗಿ ತೀವ್ರ ೭೧-೯೦
ತೀವ್ರ ೯೧ ಕ್ಕಿಂತ ಹೆಚ್ಚಿದ್ದರೆ
ನಿಮ್ಮಮಗುವಿನಲ್ಲಿ ಈ ಕೆಳಗಿನ ಲಕ್ಷಣಗಳು ಕಂಡುಬರುತ್ತವೆಯೇ ಗಮನಿಸಿ
 ಲಘುಯಿಲ್ಲದ ಜೋರಾದ ಶಬ್ಧಕ್ಕೆ ಸ್ಪಲ್ಪ ಮಟ್ಟಿನ ಪ್ರತಿಕ್ರಿಯೆ ಅಥವಾ ಪ್ರತಿಕ್ರಿಯಿಸದೇ ಇರುವುದು
 ೬-೮ ತಿಂಗಳ ತೊದಲನ್ನು ನಿಲ್ಲಿಸದಿರುವುದು
ಶಬ್ಧ ಮಡುವ ಆಟಿಕೆಗಳೊಂದಿಗೆ ಆಡಲು ಇಷ್ಟಪಡದೇ ಇರುವುದು.
ಸನ್ನೆ ಮಾಡದೆ ಬರೀ ಮಾತಿನಿಂದ ಹೇಳಿದರೆ ಅರ್ಥ ಮಡಿಕೊಳ್ಳಲು ಕಷ್ಟಪಡುವುದು
 ನೋಡಿ ಗ್ರಹಿಸುವ ಸಂಧರ್ಭವಿಲ್ಲದಿದ್ದರೆ ಇದನ್ನು ಅರ್ಥ ಮಾಡಿಕೊಳ್ಳದಿರುವುದು.
 ೫-೧೦ ಅಡಿಗಳ ಅಂತರದಿಂದ ಕಳೆದರೇ ಪ್ರತಿಕ್ರಿಯಿಸದಿರುವುದು .
ದೂರದರ್ಶನ ರೇಡಿಯೊ ಕೇಳುವಾಗ ಅದರ ಶಬ್ಧವನ್ನು ಹೆಚ್ಚಿಸುವುದು.
ಉಚ್ಚಾರಣೆ ಮತ್ತು ಸ್ವರದಲ್ಲಿ ಸಮಸ್ಯೆ ತೋರಿಸುವುದು.
ಇವುಗಳಲ್ಲಿ ಮೂರಕ್ಕಿಂತ ಹೆಚ್ಚು ಸಮಸ್ಯೆಗಳು ಕಂಡು ಬಂದರೆ ಆ ಮಗುವಿನ ಶ್ರವಣ ನ್ಯೂನ್ಯತೆ ಇರಬಹುದು

ಮಕ್ಕಳಲ್ಲಿ ಶ್ರವಣದೋಷವಿರುವುದನ್ನು ಪತ್ತೆಹಚ್ಚುವ ತಪಶೀಲು ಪಟ್ಟಿ
ವಯಸ್ಸು    ಪ್ರತಿಕ್ರಿಯೆ
೦-೩ ತಿಂಗಳು. ಜೋರಾದ ಶಬ್ಧ ಗಡಿಯಾರದ ಅಲಾರಾಂ, ಚಪ್ಪಾಳೆಗೆ ನಿದ್ದೆಯಿಂದ ಎಚ್ಚರಗೊಳ್ಳುವುದು.
೬-೯ ತಿಂಗಳು. ಶಬ್ಧಬಂದ ದಿಕ್ಕಿಗೆ ತಿರುಗಿ ನೋಡುವುದು.
೯-೧೮ ತಿಂಗಳು. ಬೇಡ ಎಂಬುದಕ್ಕೆ ಅರ್ಥ ತಿಳಿದಿರುವುದು . ಜೊತೆಗೆ ಬಾ-ಹೋಗು, ನಿಲ್ಲು- ಕೂರು, ತಗೋ-ಕೋಡು, ಇಂತಹ ಸರಳ ಮಾತುಗಳನ್ನು ಅರ್ಥ ಮಾಡಿಕೊಂಡು ಅದಕ್ಕೆ ತಕ್ಕದಾಗಿ ವರ್ತಿಸುವುದು.
೧೮ ತಿಂಗಳ ಮೇಲೆ. ಸರಳ ವಾಕ್ಯಗಳನ್ನು ತಿಳಿದುಕೊಂಡು ಅದರಂತೆ ನಡೆಯುವುದು, ಉದಾಹರಣೆ, ಆ ಪುಸ್ತಕ ಕೊಡು.
೫ ವರ್ಷ ೦೮ ತಿಂಗಳು ನಿಂದ ೧೧ ವರ್ಷ. ಈ ವಯಸ್ಸಿನಲ್ಲಿ ಮಕ್ಕಳು ತಮ್ಮ ನೆರೆಹೊರೆಯ ಜನರ ಹೆಸರು ಪ್ರಕೃತಿಯಲ್ಲಿ ಕಾಣುವಂತಹ ಚಿತ್ರಗಳ ಕಲ್ಪನೆ, ಸ್ವಾಭಾವಿಕವಾಗಿ ನೈಜ ವಸ್ತುಗಳ ಮನನ ಮಾಡಿಕೊಳ್ಳುವಿಕೆ ಹಾಗೂ ಕ್ಷಣದಲ್ಲಿ ಪ್ರತಿಕ್ರಿಯಿಸುವಿಕೆ. ಉದಾಹರಣೆ ತಂದೆಯನ್ನು ಕರೆದುಕೊಂಡು ಬಾ, ಒಂದು ಕೆ. ಜಿ ಉಪ್ಪನ್ನು ಅಂಗಡಿಯಿಂದ ತೆಗೆದುಕೊಂಡು ಬಾ.
೧೧ ವರ್ಷದಿಂದ ೧೬ ವರ್ಷ. ಈ ಒಂದು ಹಂತದಲ್ಲಿ ಕಲಿಕಾ ಪ್ರಗತಿ ಹೆಚ್ಚಾಗಿದ್ದು ಸಾಮಾನ್ಯ ಮಕ್ಕಳಂತೆಯೇ ಪ್ರತಿಕ್ರಿಯೆ ನೀಡುವುದರಲ್ಲಿ ಮುಂದಾಗುತ್ತಿರುತ್ತಾರೆ. ಉದಾಹರಣೆ ಪ್ರಶ್ನೆಗೆ ಉತ್ತರ ಬರೆಯುವುದು, ಕೊಟ್ಟ ಕೆಲಸವನ್ನು ನಿಷ್ಠೆಯಿಂದ ಮಾಡುವುದು.
೧೬ ವರ್ಷದಿಂದ ೨೦ ವರ್ಷ. ಈ ವಯಸ್ಸಿನಲ್ಲಿ ಶ್ರವಣ ನ್ಯೂನ್ಯತೆ ಇರುವುದಕ್ಕೆ ಪ್ರಮುಖ ಕಾರಣ ಏನೆಂಬುದನ್ನು ಅರಿಯುತ್ತಾರೆ. ತನ್ನ ಪಾತ್ರ ಸಮಾಜದಲ್ಲಿ ಏನಿರಬಹುದು ಎಂಬುದನ್ನು ಅರಿಯುತ್ತಾನೆ, ಎಲ್ಲರಂತೆ ತಾನು ಸಮಾನವಾಗಿ ಬದುಕಬೇಕು ಎಂಬ ಭಾವನೆ, ಕಲಿಕೆಯಲ್ಲಿ ಮುನ್ನೆಡೆ ಹಾಗೂ ವೃತ್ತಿಪರತೆಯಲ್ಲಿ ಸಂಸಾರದ ಜವಾಬ್ದಾರಿಯಲ್ಲಿ, ಸಾಧನೆಗೈಯುವಂತನಾಗುತ್ತಾನೆ.

ಶ್ರವಣದೋಷವುಳ್ಳ ಮಕ್ಕಳಿಗೆ ಸಂವಿಧಾನಬದ್ಧವಾಗಿ ನೀಡಲ್ಪಟ್ಟಿರುವ ಹಕ್ಕುಗಳು:
ವಿಶ್ವಸಂಸ್ಥೆಯು ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದಂತೆ ೧ ರಿಂದ ೫೪ ಪರಿಚ್ಛೇದಗಳನ್ನು ಒಳಗೊಂಡಿದ್ದು, ಶ್ರವಣದೋಷವುಳ್ಳ ಮಕ್ಕಳಿಗೆ ಹಕ್ಕುಗಳಲ್ಲಿ ಸಮಾನತೆಯನ್ನು ನೀಡಿದೆ, ಇದು ೧೯೮೯ ರಲ್ಲಿ ಈ ಹಕ್ಕುಗಳು ಜಾರಿಗೆ ಬಂದವು.
ಪರಿಚ್ಛೇದ-೦೨: ಮಕ್ಕಳ ನಡುವೆ ತಾರತಮ್ಯ/ ಭೇದಭಾವ ಇರಬಾರದು.
ಸಮುದಾಯದಲ್ಲಿ, ಮನೆಯಲ್ಲಿ, ಶಾಲೆಯಲ್ಲಿ, ಮಕ್ಕಳನ್ನು ಹಳ್ಳಿಗಾಡಿನವ, ನಗರದವ, ಶ್ರವಣನ್ಯೂನ್ಯತೆಯಿರುವವ ಹಾಗೂ ಜಾತಿ, ಬಣ್ಣ ಇತ್ಯಾದಿಗಳಿಂದ ಭೇದಭಾವ ಮಾಡಬಾರದು, ಎಲ್ಲರನ್ನು ಸಮಾನತೆಯಿಂದ ಕಾಣಬೇಕು.
ಪರಿಚ್ಛೇದ-೦೬: ಎಲ್ಲಾ ಮಕ್ಕಳಿಗೂ ಜೀವಿಸುವ ಹಕ್ಕು ಇದೆ.
ಮಕ್ಕಳಿಗೆ ಬದುಕುವ ಹಕ್ಕು ಇದೆ. ಯಾವುದೇ ಮಗು ಅಸ್ವಾಭಾವಿಕ ಸಾವಿಗೆ ಗುರಿಯಾಗದಂತೆ, ಸಮುದಾಯ ವ್ಯವಸ್ಥೆ ನೋಡಿಕೊಳ್ಳಬೇಕು. ಇದರಲ್ಲಿ ಯಾವುದೇ ಕಾರಣಕ್ಕೂ ಶ್ರವಣನ್ಯೂನ್ಯತೆ ಮಕ್ಕಳನ್ನು ನಿರ್ಲಕ್ಷಿಸುವಂತಿಲ್ಲ.
ಪರಿಚ್ಛೇದ-೦೮: ಮಕ್ಕಳ ವ್ಯಕ್ತಿತ್ವಕ್ಕೆ ಧಕ್ಕೆ ಬರಬಾರದು.
ಇಲ್ಲಿ ಪ್ರತಿಯೊಂದು ಮಗುವು ದೇಶದ ಪ್ರಜೆಯೇ ಆಗಿರುವುದರಿಂದ ಆತನ ಜಾತಿ, ಧರ್ಮ,ವರ್ಗ, ಭಾಷೆ, ಅಂಗವೈಕಲತೆಯ ಬಗ್ಗೆ ಧಕ್ಕೆ ಬರಬಾರದು.
ಪರಿಚ್ಛೇದ-೧೨: ಮಕ್ಕಳ ವಿಚಾರಣೆಗೆ ಸಂಬಂಧಿಸಿದ ಪ್ರತಿಯೊಂದರ ಬಗ್ಗೆ ಅಭಿಪ್ರಾಯ ತಿಳಿಸುವ ಹಕ್ಕು ಸಾಮಾನ್ಯ ಮಕ್ಕಳಂತೆಯೇ ಶ್ರವಣದೋಷ ಮಕ್ಕಳಿಗೂ ಇದೆ. ಈ ಅಭಿಪ್ರಾಯವನ್ನು ವಯಸ್ಕರು ಆಲಿಸಿ ಚರ್ಚಿಸಬೇಕು. ತಮಗೆ ಬೇಕಾದ ಅಭಿಪ್ರಾಯಗಳನ್ನು ವಯಸ್ಕರು ಬಲವಂತವಾಗಿ ಮಕ್ಕಳಿಗೆ ಹೊರಿಸುವುದು ತಪ್ಪು, ಅಡ್ಡಿ, ಭಯ, ಆತಂಕ, ಒತ್ತಡವಿಲ್ಲದ ವಾತಾವರಣದಲ್ಲಿ ಸಾಮಾನ್ಯ ಮಕ್ಕಳ ಮಾತಿನಂತೆ ಶ್ರವಣದೋಷ ಮಕ್ಕಳ ಮಾತನ್ನು ಕೇಳಬೇಕು.
ಪರಿಚ್ಛೇದ-೧೮: ಮಕ್ಕಳ ಒಳಿತು ಪೋಷಕರ ಜವಾಬ್ದಾರಿ
ಮಕ್ಕಳ ಆರೈಕೆ ಲಾಲನೆ ಪಾಲನೆ ರಕ್ಷಣೆ ನೀಡುವುದರಲ್ಲಿ ಪೋಷಕರದ್ದೇ ಮೊದಲ ಪಾತ್ರ. ಸರ್ಕಾರ, ಸಮುದಾಯ, ಶಾಲೆ, ಮತ್ತಿತರೆ ವ್ಯವಸ್ಥೆಗಳೂ ಕೂಡ ಶ್ರವಣದೋಷ ಮಕ್ಕಳ ಹಾಗೂ ಸಾಮಾನ್ಯ ಮಕ್ಕಳು ಎಂಬ ಭೇದವಿಲ್ಲದೆ ಎಲ್ಲರನ್ನು ಪ್ರೀತಿಯಿಂದ ಪೋಷಕರು ಪೋಷಿಸಬೇಕು.
ಪರಿಚ್ಛೇದ-೨೩: ಶ್ರವಣದೋಷ ಇರುವ ಮಕ್ಕಳಿಗೆ ರಕ್ಷಣೆ ನೀಡಬೇಕು.
ಯಾವುದೇ ರೀತಿಯ ಶ್ರವಣದೋಷ ಮಕ್ಕಳಿಗೆ ಇದ್ದರೂ ಅವರನ್ನು ಎಲ್ಲ ಮಕ್ಕಳಂತೆಯೇ ನೋಡಿಕೊಳ್ಳಬೇಕು. ಶ್ರವಣದೋಷತೆಯಿಂದಾಗಿ ಮಕ್ಕಳು ಹಿಂದುಳಿಯುವಂತಾಗಬಾರದು, ಮಕ್ಕಳಗೌರವಳಿಗೆ ತೊಂದರೆಯಾಗದಂತೆ ಶುಲ್ಕರಹಿತ ಶಿಕ್ಷಣ, ಆರೋಗ್ಯ ವ್ಯವಸ್ಥೆ, ಸಾಧನ ಸಲಕರಣೆಗಳ ಸರಬರಾಜು ವಿಶೇಷ ಶಿಕ್ಷಣ ತರಬೇತಿ, ಆಟೋಟಗಳಿಗೆ ಅವಕಾಶ, ಮುಂದೆ ಉದ್ಯೋಗವಕಾಶಕ್ಕೆ ಸಿದ್ಧತೆ ನೀಡಬೇಕು. ಶ್ರವಣದೋಷ ಇರುವ ಮಕ್ಕಳಿಗೆ ಶಾಲೆಯೂ ಸೇರಿದಂತೆ ಎಲ್ಲೆಡೆ ಮೂಲಭೂತ ವ್ಯವಸ್ಥೆಗಳು ಇರಬೇಕು.
ಪರಿಚ್ಛೇದ-೨೪: ಎಲ್ಲಾ ಮಕ್ಕಳಿಗೆ ಮೂಲಸೇವೆಗಳನ್ನು ಒದಗಿಸಬೇಕು.
ಪ್ರತಿಯೊಂದೂ ಮಗುವಿಗೂ ಶುದ್ಧ ಕುಡಿಯುವ ನೀರು, ಚುಚ್ಚುಮದ್ದುಗಳ ಸೌಲಭ್ಯ, ಪೌಷ್ಠಿಕ ಆಹಾರ ಮುಂತಾದವುಗಳು ಸ್ಥಳೀಯವಾಗಿ ದೊರೆಯುವಂತೆ ಮಾಡುವುದು. ಅದರಂತೆ ವಿಶೇಷವಾಗಿ ಶ್ರವಣದೋಷ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿಯನ್ನು ವಹಿಸಬೇಕು.
ಪರಿಚ್ಛೇದ-೨೬: ಎಲ್ಲಾ ಮಕ್ಕಳಿಗೂ ಸಾಮಾಜಿಕ ಭದ್ರತೆಯನ್ನು ನೀಡಬೇಕು.
ಮಕ್ಕಳೆಂದರೆ ಕೇವಲ ದೊಡ್ಡವರ ಭಾಷಣದ ವಸ್ತುಗಳಲ್ಲ ಅಥವ ಯೋಜನೆಗಳಲ್ಲಿ ಬಂದು ಹೋಗುವ ಫಲಾನುಭವಿಗಳಲ್ಲ, ಅಂದರೆ ಶ್ರವಣದೋಷ ಮಕ್ಕಳಿಗೆ ಸರ್ಕಾರದಿಂದ ಸಿಗಬೇಕಾದ ಎಲ್ಲಾ ರೀತಿಯ ಸೌಲಭ್ಯ ದೊರಕಿಸಿಕೊಟ್ಟು ಅವರ ಬದುಕನ್ನು ಉತ್ತಮಗೊಳಿಸುವುದು.
ಪರಿಚ್ಛೇದ-೨೮,೨೯: ಎಲ್ಲ ಮಕ್ಕಳಿಗೆ ತಾರತಮ್ಯವಿಲ್ಲದ ಶಿಕ್ಷಣ ಪಡೆಯುವ ಹಕ್ಕು ಇದೆ.
ಸ್ವಾತಂತ್ರ್ಯ ನಮ್ಮ ಜನ್ಮಸಿದ್ಧ ಹಕ್ಕು, ಈ ಸ್ವಾತಂತ್ರ್ಯವನ್ನು ಅರ್ಥಬದ್ಧವಾಗಿ ಉಳಿಸಿ ಬೆಳಿಸಿ ಹಂತಹಂತವಾಗಿ ಮಕ್ಕಳು ಎಲ್ಲರೊಡನೆ ಬೆಳೆಯಬೇಕೆಂದರೆ ಎಲ್ಲಾ ಮಕ್ಕಳಿಗೆ ಸಮಾನ ಶಿಕ್ಷಣ ದೊರೆಯಬೇಕು. ೧೯೯೨ ರಲ್ಲಿ ಸರ್ವೋಚ್ಚನ್ಯಾಯಾಲಯದ ನ್ಯಾಯಮೂರ್ತಿ ಜೀವನ್‌ರೆಡ್ಡಿಯವರು ಹೇಳಿರುವಂತೆ ನಮಗೆ ಜೀವಿಸುವ ಹಕ್ಕು ( ವಿಧಿ ೨೧) ಇದೆ ಎಂದರೆ ಶಿಕ್ಷಣದ ಹಕ್ಕು ಇದೆ ಎಂದರ್ಥ, ಇಲ್ಲಿ ಎಲ್ಲಾ ಮಕ್ಕಳಂತೆಯೂ ಶ್ರವಣದೋಷವುಳ್ಳ ಮಕ್ಕಳು ಸಮಾನ ಶಿಕ್ಷಣ ಪಡೆಯಲು ಅರ್ಹರಾಗಿರುತ್ತಾರೆ.

ಶ್ರವಣನ್ಯೂನ್ಯತೆಗೆ ಸಂಬಂಧಿಸಿದಂತೆ ಕಾರ್ಯಾನಿರ್ವಹಿಸುತ್ತಿರುವ ಸರ್ಕಾರೇತರ ಸಂಸ್ಥೆಗಳು:
ಕ್ರ. ಸಂ     ಸಂಸ್ಥೆಯ ಹೆಸರು     ವಿಳಾಸ ಸಂಪರ್ಕದ ವಿವರ
೧.
 ದಿ ಅಸೋಸಿಯೇಷನ್ ಅಫ್ ಪೀಪಲ್ ವಿತ್ ಡಿಸೆಬಿಲಿಟಿ (ಎ. ಪಿ. ಡಿ) ೬ನೇ ಅಡ್ಡರಸ್ತೆ, ಹಚ್ಚಿನ್ಸ್‌ರಸ್ತೆ, ಹೆಣ್ಣೂರು ಮುಖ್ಯರಸ್ತೆ, ಸಂತಥಾಮಸ್‌ಟೌನ್ ಅಂಚೆ, ಲಿಂಗರಾಜಪುರಂ ಬೆಂಗಳೂರು.
೨. ಸಂವಾದ ಇನ್ಸಿಟಿಟ್ಯೂಟ್ ಅಫ್ ಸ್ಪೀಚ್ ಆಂಡ್ ಹಿಯರಿಂಗ್
 ೩. ಡಾ. ಚಂದ್ರಶೇಖರ್ ವಾಕ್ ಮತ್ತು ಶ್ರವಣ ಸಂಸ್ಥೆ ಹೆಣ್ಣೂರು ಮುಖ್ಯರಸ್ತೆ, ಕರಿಯಣ್ಣನ ಪಾಳ್ಯ ಲಿಂಗರಾಜಪುರಂ, ಬೆಂಗಳೂರು.
೪. ಶೀಲಾ ಕೋತ್ತವಾಲ ವಾಕ್ ಮತ್ತು ಶ್ರವಣ ಮಕ್ಕಳ ಶಾಲೆ, ರುಸ್ತುಂ ಭಾಗ್, ಮಣಿಪಾಲ್ ಆಸ್ಪತ್ರೆ ಹಿಂಭಾಗ, ಹಳೇ ಹೆಚ್. ಎ. ಎಲ್. ರಸ್ತೆ, ಬೆಂಗಳೂರು.
೫. ರಾಷ್ಟ್ರೀಯ ಕಿವುಡ ಮತ್ತು ಮೂಕ ಮಕ್ಕಳ ಶಾಲೆ, ಸಿ. ಎ-೬ ಮಿನಿ ಬಾಲ ಭವನ ಹಿಂಭಾಗ ,ಜೀವನ್‌ಭೀಮಾನಗರ ಬೆಂಗಳೂರು
೬. ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ಮಾನಸ ಗಂಗೋತ್ರಿ ವಾಕ್ ಮತ್ತು ಶ್ರವಣ ಸಂಸ್ಥೆ ತಿಲಕ್ ನಗರ ಮೈಸೂರು.
೭. ಸಾಯಿರಂಗ ವಿದ್ಯಾಸಂಸ್ಥೆ ಕಿವುಡ ಗಂಡು ಮಕ್ಕಳ ವಸತಿ ಶಾಲೆ, ೭೬೪/ಎ. ಬಿ ಲೇಔಟ್, ಬಿನ್ನಿ ಮಂಟಪ ,ಮೈಸೂರು.
೮. ತಶೃಂಗ ವಿಧ್ಯಾ ಸಂಸ್ಥೆ, ಶ್ರೀ ಸಾಯಿ ಸ್ನೇಹ ಧರ್ಮ ಹಿರಿಯ ನಾಗರೀಕರ ಸಂಸ್ಥೆ ,ಮಾಗಡಿ ಮುಖ್ಯರಸ್ತೆ,ಕಾಮಾಕ್ಷಿಪಾಳ್ಯ ಬೆಂಗಳೂರು
೯. ಶ್ರೀಮತಿ ಪುಟ್ಟುವೀರಮ್ಮ ಕಿವುಡಹೆಣ್ಣು ಮಕ್ಕಳ ವಸತಿಯುತ ಶಾಲೆ, ಬಿಸಿಲು ಮಾರಮ್ಮ ದೇವಸ್ಥಾನದ ಹತ್ತಿರ, ವಾಗ್ದೇವಿ ನಗರ ,ತೊಳಸಿ ಕೊಪ್ಪಲು, ಮೈಸೂರು.
 ೧೦. ಸರ್ಕಾರಿ ಕಿವುಡ ಮಕ್ಕಳ ಶಾಲೆ, ಪುಲಕೇಶಿ ರಸ್ತೆ , ತಿಲಕ್‌ನಗರ, ಮೈಸೂರು.
೧೧. ಜೈಭಾರತ್ ಕಿವುಡ ಮತ್ತು ಮೂಕ ಮಕ್ಕಳ ಶಾಲೆ, ಬಸ್‌ನಿಲ್ದಾಣದ ಹತ್ತಿರ ,ಶ್ರೀನಿವಾಸಪುರ ಟೌನ್, ಕೋಲಾರ ಜಿಲ್ಲೆ.

 ಶ್ರವಣನ್ಯೂನ್ಯತೆವುಳ್ಳ ಮಕ್ಕಳಿಗೆ ಲಭ್ಯವಿರುವ ಸೌಲಭ್ಯಗಳು:
ಅಂಗವಿಕಲರ (ಸಮಾನ ಅವಕಾಶ , ಹಕ್ಕುಗಳ ಸಂರಕ್ಷಣೆ ಮತ್ತು ಪೂರ್ಣ ವಿಕಾಸ ) ಕಾಯಿದೆ ೧೯೯೫ ಪ್ರಕಾರ ಶೇ. ೪೦ ಅಥವಾ ಹೆಚ್ಚಿನ ಪ್ರಮಾಣದಲ್ಲಿ ಶ್ರವಣದೋಷ ಹೊಂದಿರುವ ಪ್ರಮಾಣ ಪತ್ರವನ್ನು ಸರ್ಕಾರಿ ವೈದ್ಯಾಧಿಕಾರಿಯಿಂದ ಪಡೆದಿರುವ ಮಕ್ಕಳನ್ನು ಶ್ರವಣದೋಷ ಮಕ್ಕಳು ಎಂದು ಪರಿಗಣಿಸಲಾಗುತ್ತದೆ. ಅಂತಹ ಮಕ್ಕಳು ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.

ಶ್ರವಣನ್ಯೂನ್ಯತೆವುಳ್ಳ ಮಕ್ಕಳಿಗಿರುವ ಸೌಲಭ್ಯಗಳು:
ಶ್ರವಣನ್ಯೂನ್ಯತೆವುಳ್ಳ ಮಕ್ಕಳು ಯಾವುದಾದರು ಒಂದು ಭಾಷೆಯಲ್ಲಿ ಕಲಿಯಬಹುದು.
೧೦ನೇ ತರಗತಿಯಲ್ಲಿ ನಾಲ್ಲು ವಿಷಯಗಳಲ್ಲಿ ತೇರ್ಗಡೆ ಹೊಂದಿದರೆ ಸಾಕು.
ಪರೀಕ್ಷೆ ಬರೆಯುವಾಗ ಹೆಚ್ಚಿನ ಕಾಲವಾಕಾಶ ನೀಡಲಾಗುತ್ತದೆ.
ಉತ್ತರ ಪತ್ರಿಕೆಯಲ್ಲಿ ವ್ಯಾಕರಣಗಳ ಸಡಿಲಿಕೆ ನೀಡಲಾಗಿದೆ (ಹಸಿರು ಬಣ್ಣದ ಸ್ಟಿಕ್ಕರ್ ಹಚ್ಚಬೇಕು)
ಶ್ರವಣ ಸಾಧನವನ್ನು ಸರ್ಕಾರದಿಂದ ಉಚಿತವಾಗಿ ಪಡೆಯಬಹುದು.
ರಿಯಾಯಿತಿಯಲ್ಲಿ ೧೦೦ ಕಿಲೊ ಮೀಟರ್ ವ್ಯಾಪ್ತಿಯಲ್ಲಿ ಪ್ರಯಣಿಸಲು ಬಸ್ ಪಾಸ್ ದೊರೆಯುತ್ತದೆ.
ಪ್ರತಿ ತಿಂಗಳೂ ಮಾಶಾಸನ ಪಡೆಯಬಹುದು (೪೦%ರಿಂದ ೭೫% ರವರೆಗೆ ೪೦೦ ರೂ ಮತ್ತು ೭೫% ಮೇಲ್ಪಟ್ಟವರಿಗೆ ೧೦೦೦ ರೂ)
ಒಂದನೇ ತರಗತಿಯಿಂದ ಸ್ನಾತ್ತಕೋತ್ತರ ಶಿಕ್ಷಣದವರೆಗೆ ವಿದ್ಯಾರ್ಥಿ ವೇತನ ಪಡೆಯಬಹುದು.
ವೃತ್ತಿಪರ ,ತಾಂತ್ರಿಕ ಮತ್ತು ಉನ್ನತ ಶಿಕ್ಷಣದಲ್ಲಿ ಪ್ರವೇಶಕ್ಕಾಗಿ ಮೀಸಲಾತಿ.
ಉಚಿತ ಮತ್ತು ಕಡ್ಡಾಯ ಶಿಕ್ಷಣ
ಸರ್ವಶಿಕ್ಷಣ ಅಭಿಯಾನದಿಂದ ಶಾಲೆಗೆ ಹೋಗುವ ಮಕ್ಕಳಿಗೆ ಪ್ರತಿ ವರ್ಷ ಪ್ರವಾಸ ಭತ್ಯೆ ಹಾಗೂ ಶ್ರವಣ ಸಾಧನ.
ಪ್ರತಿ ವರ್ಷ ಆರೋಗ್ಯ ತಪಾಸಣೆ ಸರ್ವ ಶಿಕ್ಷಣ ಅಭಿಯಾನದ ವತಿಯಿಂದ
ಉದ್ಯೋಗದಲ್ಲಿ ಮೀಸಲಾತಿ

ಶ್ರವಣನ್ಯೂನ್ಯತೆಗೆ ಕಾರಣಗಳು, ಲಕ್ಷಣಗಳು ಮತ್ತು ಪತ್ತೆ ಹಚ್ಚುವ ವಿಧಾನಗಳು:
ನಮ್ಮ ಪಂಚೇಂದ್ರಿಯಗಳಲ್ಲಿ ಅತೀಮುಖ್ಯವಾದ ಅಂಗಗಳಲ್ಲೊಂದು ಕಿವಿ. ಈ ಕಿವಿಯು ಮಗುವಿನ ವಿಕಾಸನ ಮತ್ತು ಭಾಷಾ ಬೆಳವಣಿಗೆಗೆ ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ . ದೂರದ ವಿಷಯಗಳನ್ನು ಕೇಳಿಸಿಕೋಳ್ಳುವುದರ ಮೂಲಕ ಭಾಷೆ ಬೆಳವಣಿಗೆಯಾಗುತ್ತದೆ. ಇದು ಬೇರೆಯವರೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ.
 ಈ ರೀತಿಯ ಸಂವಹನದ ಅಡತಡೆ ಪ್ರಮುಖವಾಗಿ ಮೂರು ಕಾರಣಗಳಿವೆ. ಜನನ ಪೂರ್ವ ,ಜನನ ಸಮಯ ಮತ್ತು ಜನನದ ನಂತರದಲ್ಲಿನ ಕೆಲವು ಕಾರಣಗಳಿಂದಾಗಿ ಶ್ರವಣದೋಷ ಉಂಟಾಗಬಹುದು. . ಈ ನ್ಯೂನ್ಯತೆಯ ಯಾವುದೇ ವಯಸ್ಸಿನಲ್ಲಿಯಾದರು ನಮ್ಮನ್ನು ಕಾಡಬಹುದು.
ಈ ಮೇಲಿನ ಎಲ್ಲಾ ಕಾರಣಗಳಿಂದಾಗಿ ಮಗುವಿನಲ್ಲಿ ಶ್ರವಣದೋಷ ಉಂಟಾಗಿ ಭಾಷೆ ಬೆಳವಣಿಗೆಗೆ ತಡೆವುಂಟಾಗುತ್ತದೆ. ಆದುದರಿಂದಾಗಿ ಮಗುವಿನ ಕಲಿಕೆಯ ಕಿವಿಯ ಪಾತ್ರ ಬಹಳ ಮುಖ್ಯ ಪಾತ್ರವಹಿಸುತ್ತದೆ.

ಲಕ್ಷಣಗಳು ಮತ್ತು ಪತ್ತೆಹಚ್ಚುವ ವಿಧಾನಗಳು:
ಮಗುವಿನಲ್ಲಿ ಶ್ರವಣದೋಷವಿದ್ದಲ್ಲಿ ಒಂದೇ ಒಂದು ಶಬ್ದದ ಉಚ್ಚಾರಣೆಯೂ ಇರುವುದಿಲ್ಲ. ಕೆಲವೊಮ್ಮೆ ದೋಷಬದ್ದ ಉಚ್ಚಾರಣೆಯ ಕಂಡುಬರುತ್ತದೆ ಅಥವಾ ಸೌಮ್ಯ ಶ್ರವಣದೋಷವಿದ್ದಲ್ಲಿ ಮಗುವು ಜೋರು ಧ್ವನಿಯಲ್ಲಿ ಮಾತನಾಡುತ್ತದೆ . ಅವರು ಇತರ ಮಕ್ಕಳಂತೆ ಕುಂಟುಬದಲ್ಲಿಯಾಗಲಿ, ನೆರೆ-ಹೊರೆಯಲ್ಲಾಗಲಿ ಎಲ್ಲರೊಡನೆ ಬೆರೆಯದೆ ದೂರ ಉಳಿಯುತ್ತಾರೆ. ಈ ರೀತಿಯ ದೋಷವಿರುವಂತಹ ಮಗುವನ್ನು ಪತ್ತೆ ಹಚ್ಚಲು ಈ ಕೆಳಕಂಡ ಲಕ್ಷಣಗಳು ಇವೆಯೇ ಎಂದು ಪರೀಕ್ಷಿಸಬೇಕಾಗುತ್ತದೆ. ಅವುಗಳೆಂದರೆ:

ಕೇಳುವಿಕೆಯ ಮಟ್ಟ    ಲಕ್ಷಣಗಳು
ಸೌಮ್ಯ: ೨೫-೪೦ ಡೆಸಿಬಲ್. ಮಗುವು ಸ್ಪಷ್ಟವಾಗಿ ಮಾತನಾಡಲು ಬರುವುದಿಲ್ಲ. ಮಗುವು ಪ್ರಶ್ನೆಗಳಿಗೆ ಬೇಗ ಪ್ರತಿಕ್ರಿಯಿಸುವುದಿಲ್ಲ. ಮಾತನಾಡುವಾಗ ಮುಖವನ್ನೇ ದಿಟ್ಟಿಸಿ ನೋಡುವುದು. ಅತೀ ಕಡಿಮೆ ಶಬ್ಧ ಮತ್ತು ದೂರದಿಂದ ಬಂದಂತಹ ಶಬ್ಧವನ್ನು ಕೇಳಿಸಿಕೊಳ್ಳುವಲ್ಲಿ ತೊಂದರೆ. ಮಾತು ಮತ್ತು ಭಾಷೆಯ ಬೆಳವಣಿಗೆ ಹೆಚ್ಚು ಕಡಿಮೆ ಸಾಮನ್ಯ ಸ್ಥಿತಿಯಲ್ಲಿ ಇರುತ್ತದೆ. ವಿಷಯಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ತೊಂದರೆ ಅನುಭವಿಸುತ್ತಾರೆ. ಶಬ್ಧವನ್ನು ಆಲಿಸಲು ಕಿವಿಯನ್ನು ಪಕ್ಕಕ್ಕೆ ತಿರುಗಿಸುತ್ತಾರೆ.
ಸಾಧಾರಣೆ: ೪೧-೭೦. ಸಂಭಾಷಣೆಯನ್ನು ಕಷ್ಣಪಟ್ಟು ಅರ್ಥಮಾಡಿಕೊಳ್ಳುವುದು . ಜೋರು ಶಬ್ಧ ಬಂದ ಕಡೆಗೆ ತಲೆ ತಿರುಗಿಸುವುದು. ಮಾತನಾಡುವವರ ಮುಖವನ್ನೇ ದಿಟ್ಟಿಸಿ ನೋಡಿ ಮಾತನಾಡುವುದು. ಪದಗುಚ್ಚಗಳಲ್ಲಿ ವ್ಯಂಜನಗಳನ್ನು ಬಿಟ್ಟು ಮಾತನಾಡುವುದು. ನಿರಂತರವಾಗಿ ಏನು‘ ಎಂದು ಪ್ರಶ್ನೆ ಕೇಳುವುದು ಯಾವಾಗಲೂ ಕಿವಿ ನೋವು ಎಂದು ಹೇಳುವುದು, ಉಚ್ಚಾರಣೆಯಲ್ಲಿ ಮಾತು ಸ್ಪಷ್ಟವಾಗಿರುವುದಿಲ್ಲ, ಒತ್ತಕ್ಷರಗಳನ್ನು ಬಿಟ್ಟು ಮಾತನಾಡುವುದು.
ತೀವ್ರ: ೭೧-೯೦. ಮಾತನಾಡಲು ಬರುವುದಿಲ್ಲ . ಸಂಜ್ಞಾ, ಹಾವ-ಭಾವಗಳನ್ನು ಬಳಸುವುದು. ಅತೀ ಜೋರಾದ ಶಬ್ಧಗಳಿಗೆ ಮಾತ್ರ ಪ್ರತಿಕ್ರಿಯಿಸುತ್ತಾರೆ. ಎತ್ತರದ ಧ್ವನಿಯಲ್ಲಿ ಮಾತನಾಡುವುದು. ಭಾಷಾ ಬೆಳವಣಿಗೆಯಲ್ಲಿ ತೊಂದರೆ ಅನುಭವಿಸುವುದು. ಏರಿಳಿತವಿಲ್ಲದ ಧ್ವನಿಗಳನ್ನು ಬಳಸಿ ಮಾತನಾಡುತ್ತಾರೆ . ಮಾತನಾಡಲು ಹೆಚ್ಚು ಹಾವ-ಭಾವಗಳನ್ನು ಬಳಸುತ್ತಾರೆ
ಅತೀ ತೀವ್ರ: ೯೦ಕ್ಕಿಂತ ಹೆಚ್ಚು ಡೆಸಿಬಲ್. ಮಾತನಾಡಲು ಬರುವುದಿಲ್ಲ. ಸಂಜ್ಞಾ,ಹಾವ-ಭಾವಗಳನ್ನು ಬಳಸುತ್ತಾರೆ. ಯಾವುದೇ ಶಬ್ಧಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ ತೀವ್ರ ಶಬ್ಧಗಳಿಗೆ ಪ್ರತಿಕ್ರಿಯೆ (ರಾಕೇಟ್,ಸಿಡಿಲು) ನೀಡಬಹುದು.
ಕೇಳಿಸಿಕೊಳ್ಳಲು ವಿಫಲರಾಗುತ್ತಾರೆ. ಸಂವಹನಕ್ಕಾಗಿ ಸಂಜ್ಞಾ ಭಾಷೆಯನ್ನು ಬಳಸುತ್ತಾರೆ . ಭಾಷೆ ಬೆಳವಣಿಗೆ ಇರುವುದಿಲ್ಲ.

ಶ್ರವಣನ್ಯೂನ್ಯತೆವುಳ್ಳ ಮಕ್ಕಳ ಮತ್ತು ಪೋಷಕರ ಸಮನ್ವಯ ಕಾರ್ಯಕ್ರಮ:
 ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ (ಎ. ಪಿ. ಡಿ) ಒಂದು ಸ್ವಯಂ ಸೇವಾ ಸಂಸ್ಥೆಯಾಗಿದ್ದು, ವಿಕಲಚೇತನ ಮಕ್ಕಳ ಮತ್ತು ಅವರ ಸ್ನೇಹಿತರು ಸೇರಿ ವಿಕಲಚೇತನರು ಕೂಡ ಸಮಾಜದ ಮುಖ್ಯವಾಹಿನಿಯಲ್ಲಿ ಸ್ವಾವಲಂಬನೆಯ ಜೀವನ ನಿರ್ವಹಿಸಲು ಸಾಧ್ಯಾವಿದೆಯೆಂದು ತೋರಿಸುವ ನಿಟ್ಟಿನಲ್ಲಿ ೧೯೫೯ರಲ್ಲಿ ಸಂಸ್ಥೆಯನ್ನು ಆರಂಭಿಸಿದರು. ಸಂಸ್ಥೆಯು ಸಹಭಾಗಿಗಳ ಸಾಮರ್ಥ್ಯವರ್ಧನೆ ಮತ್ತು ಸಬಲೀಕರಣದ ಮೂಲಕ ಅವಕಾಶಗಳನ್ನು ದೊರಕಿಸಿಕೊಡುವುದು, ಸಮನ್ವಯಕ್ಕೆ ಉತ್ತೇಜನ ನ್ಯಾಯ ಬದ್ಧ ಹಕ್ಕು ಮತ್ತು ಸೌಲಭ್ಯಗಳನ್ನು ಹೊಂದುವ ಉದ್ದೇಶವನ್ನು ಈಡೇರಿಸಲು ವೈದ್ಯಕೀಯ ಪುನರ್ವಸತಿ, ಶಿಕ್ಷಣ, ತರಬೇತಿ ಮತ್ತು ಉದ್ಯೋಗ, ಜನಸಂಘಟನೆ ಮತ್ತು ವಕಾಲತಿ, ಸಂಪನ್ಮೂಲ ಕ್ರೂಢೀಕರಣ ಹಾಗೂ ಸಾಂಸ್ಥಿಕ ಅಭಿವೃದ್ಧಿ ಕ್ಷೇತ್ರದ ಅಡಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಎ. ಪಿ. ಡಿ ಸಂಸ್ಥೆಯು ನಗರ ಮತ್ತು ಗ್ರಾಮೀಣ ಸಮುದಾಯಗಳಲ್ಲಿ ಹಾಗೂ ಸಂಸ್ಥೆ ಆಧಾರಿತ ಕಾರ್ಯಾಕ್ರಮದಡಿಯಲ್ಲಿ ಸುಮಾರು ೩೦,೦೦೦ಕ್ಕೂ ಹೆಚ್ಚು ವಿಕಲಚೇತನ ಮಕ್ಕಳೊಂದಿಗೆ ತನ್ನ ಸೇವ ಸೌಲಭ್ಯಗಳನ್ನು ಒದಗಿಸಿದೆ. ಸಂಸ್ಥೆಯು ಪ್ರಸ್ತುತ ಬೆಂಗಳೂರು, ಚಿಕ್ಕಬಳ್ಳಾಪುರ, ದಾವಣಗೆರೆ ಮತ್ತು ಬಿಜಾಪುರ ಜಿಲ್ಲೆಗಳಲ್ಲಿ ತನ್ನ ಕಾರ್ಯಾವ್ಯಾಪ್ತಿಯನ್ನು ನೇರವಾಗಿ ವಿಸ್ತರಿಸಿದ್ದು, ಇದರೊಡನೆ ಇತರೆ ೧೦ ಸ್ವಯಂ ಸೇವ ಸಂಸ್ಥೆಗಳಿಗೆ ಅಂಗವಿಕಲತೆಯ ಕ್ಷೇತ್ರದ ಕೆಲಸಗಳಿಗೆ ಸಹಕರಿಸುತ್ತದೆ.
 ನಮ್ಮ ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ. ೫-೬ ರಷ್ಟು ವಿಕಲಚೇತನರಿದ್ದು ಭೌಗೋಳಿಕವಾಗಿ ಹೆಚ್ಚು ಹಳ್ಳಿಗಳಿಂದ ಕೂಡಿದ ನಮ್ಮ ನಾಡಿನಲ್ಲಿ ಶೇ. ೬೫ ಕ್ಕೂ ಜನರು ಗ್ರಾಮೀಣ ಪ್ರದೇಶಗಳಲ್ಲಿಯೇ ಇರುವರು . ನಮ್ಮ ದೇಶದ ವಿಕಲಚೇತನರ ಏಳಿಗೆಗಾಗಿ ಸರ್ಕಾರ ಹಲವಾರು ಕಾನೂನು, ಕಾಯಿದೆಗಳನ್ನು ಜಾರಿಗೆತಂದ್ದಿದರೂ ಸಹ ವಿಕಲಚೇತನರ ಜೀವನದಲ್ಲಿ ಹೇಳಿಕೊಳ್ಳುವಂತಹ ಯಾವುದೆ ಬದಲಾವಣೆಗಳು ಕಾಣುತ್ತಿಲ್ಲ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಈ ಕಾನೂನು, ಕಾಯ್ದೆಗಳನ್ನು ಅನುಷ್ಟಾನಕ್ಕೆ ತರುವಲ್ಲಿ ಹೆಚ್ಚಿನ ಕೆಲಸಗಳು ಆಗಬೇಕಾಗಿವೆ.
 ಸಮಾಜದಲ್ಲಿರುವ ಪ್ರಸ್ತುತ ಧೋರಣೆ, ವ್ಯವಹಾರಿಕ ಜೀವನದಲ್ಲಿ ಅನುಭವಿಸುವ ಅಡೆತಡೆಗಳು, ಹಕ್ಕು ಮತ್ತು ಕರ್ತವ್ಯಗಳನ್ನು ಪಡೆದುಕೊಳ್ಳುವಲ್ಲಿ ವಿಕಲಚೇತನರು ವಿಫಲರಾಗುತ್ತಿರುವುದು, ಅದರಲ್ಲೂ ಬಡತನ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿರುವ ಜನರಿಗೆ ವಿಕಲತೆಯ ಕುರಿತು ಇರುವ ಅಲ್ಪ ಅರಿವಿನಿಂದಾಗಿ ಅಗ್ಯತ್ಯವಾದ ವಿದ್ಯಾಭ್ಯಾಸ, ಉದ್ಯೋಗ, ಕೌಟುಂಬಿಕ ಜೀವನ , ವಯಸ್ಸಿನ ಮತ್ತು ಪರಿಸ್ಥಿತಿಗಳಿಗೆ ಅನುಗುಣವಾಗಿ ಸಿಗಬೇಕಾದ ಸೌಲಭ್ಯಗಳು, ಮಾಹಿತಿಗಳು ದೊರಕುತ್ತಿಲ್ಲ. ಇದರ ಜೊತೆಗೆ ಶ್ರವಣ ನ್ಯೂನ್ಯತೆವುಳ್ಳವರ ಒಂಟಿತನ ಹಾಗೂ ಸಂವಹನದ ಅಂತರವೂ ಪ್ರಮುಖ ಸಮಸ್ಯೆಯಾಗಿದ್ದು, ಇವೆಲ್ಲವುಗಳ ನಿವಾರಣೆಗಾಗಿ ಆಗಬೇಕಾದ ಕೆಲಸಗಳ ಬಗ್ಗೆ ಚರ್ಚಿಸಲು ರಾಷ್ಟ್ರಮಟ್ಟದ ವೇದಿಕೆಯ ಅಗತ್ಯತೆಯನ್ನು ಮನಗಂಡು ರಾಜ್ಯ ಮಟ್ಟದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮೂರನೇ ಬಾರಿಗೆ ಈ ಕಾರ್ಯಕ್ರಮವನ್ನು ಕ್ರೈಸ್ಟ್ ಕನ್ನಡ ಪ್ರಾಥಮಿಕ ಶಾಲೆ, ೧ನೇ ಮುಖ್ಯ ರಸ್ತೆ, ೫ನೇ ಅಡ್ಡ ರಸ್ತೆ , ಭಾರತಿ ಬಡಾವಣೆ, ಸುದ್ದಗುಂಟೆ ಪಾಳ್ಯ, ಧರ್ಮಾವರಂ ಕಾಲೇಜು ಅಂಚೆ, ಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಉದ್ದೇಶಗಳು:
ಶ್ರವಣ ನ್ಯೂನ್ಯತೆವುಳ್ಳ ಮಕ್ಕಳ ಸಾಮರ್ಥ್ಯವನ್ನು ವೃಧಿಗೊಳಿಸಿ ಸ್ವ ವಕಾಲಾತಿಯ ಮೂಲಕ ಸ್ಫರ್ಧಾತ್ಮಕ ಜೀವನದ ಆಯ್ಕೆ, ಸಂವಹನದ ಅಭಿವೃದ್ಧಿ ಮತ್ತು ಸ್ವ ಗೌರವವನ್ನು ಹೆಚ್ಚಿಸುವುದು.
ಶ್ರವಣ ನ್ಯೂನ್ಯತೆವುಳ್ಳ ಮಕ್ಕಳ ಮತ್ತು ಪೋಷಕರ ನಾಯಕತ್ವ ಗುಣವನ್ನು ಅಭಿವೃಧಿಪಡಿಸುವುದು.
ಜಾಗೃತಿ ಮತ್ತು ಸ್ವೀಕಾರ ಮನೋಭಾವದ (ಒಪ್ಪಿಕೊಳ್ಳುವುದರ ) ಮೂಲಕ ಸಮಾಜದಲ್ಲಿ ಶ್ರವಣ ನ್ಯೂನ್ಯತೆವುಳ್ಳ ಮಕ್ಕಳು ಕ್ರಿಯಾಶೀಲ ಭಾಗವಹಿಸುವುದನ್ನು ಖಾತರಿಗೊಳಿಸುವುದು.
ಎಲ್ಲಾ ಕ್ಷೇತ್ರಗಳಲ್ಲಿ ಶ್ರವಣ ನ್ಯೂನ್ಯತೆವುಳ್ಳ ಮಕ್ಕಳು ಸಮಾಜದ ಮುಖ್ಯವಾಹಿನಿಗೆ ಬರುವುದಾಗಿ ಉತ್ತೇಜಿಸುವುದು.

ಹಲವಾರು ವಿಧದ ಶ್ರವಣದೋಷಗಳು ಇವೆ. ಅದನ್ನೆಲ್ಲ ನೀವು ಶ್ರವಣದೋಷದ ಬಗೆಗಿನ ಪುಸ್ತಕದಲ್ಲಿ ತಿಳಿದುಕೊಳ್ಳಬಹುದು. ಮಕ್ಕಳಲ್ಲಿ ಶ್ರವಣ ಸಮಸ್ಯೆಗಳೇನಾದರೂ ಇದ್ದರೆ , ಅದನ್ನು ಕಂಡುಹಿಡಿಯಲು ಪೋಷಕರಿಗೆ ತಿಳಿದಿರಬೇಕು. ಪುಟ್ಟ ಮಕ್ಕಳು ಶಬ್ಧಕ್ಕೆ ಪ್ರತಿಕ್ರಿಯಿಸದಿದ್ದರೆ ಬರೀ ಮಾತಿನಿಂದ ಹೇಳಿದ್ದನ್ನು ಅರ್ಥಮಾಡಿಕೊಳ್ಳದಿದ್ದರೆ ತೊದಲು ನುಡಿಯದಿದ್ದರೆ ೬-೮ ತಿಂಗಳಿಗೆ ಸ್ವರ ಉಚ್ಚಾರಣೆಯಲ್ಲಿ ಯಾವುದೇ ಸಮಸ್ಯೆಯಿದ್ದರೆ ಶ್ರವಣದೋಷವಿದೆ ಎಂದು ಊಹಿಸಬಹುದು.

ಅಧ್ಯಾಯ- ೨ ಸಾಹಿತ್ಯ ಪುನರ್ ವಿಮರ್ಶೆ
ಶ್ರವಣದೋಷವು ಅನಾದಿ ಕಾಲದಿಂದಲು ಮಾನವನನ್ನು ತೀವ್ರವಾಗಿ ಕಾಡುತ್ತಿರುವ ಒಂದು ಸಮಸ್ಯೆಯಾಗಿದೆ. ವಿಶ್ವದ ಎಲ್ಲಾ ಭಾಗಗಳಲ್ಲೂ ಶ್ರವಣದೋಷದ ಪಾಪದ ಫಲ ಎಂದು ಭಾವಿಸಿಕೊಂಡು ಶ್ರವಣನ್ಯೂನ್ಯತೆಯಿರುವವರನ್ನು ಕನಿಕರ ದೃಷ್ಟಿಯಿಂದಲು, ಅವರ ಪಾಲನೆ, ಪೋಷಣೆಯನ್ನು ಬಹುತೇಕ ಅದೇ ದೃಷ್ಟಿಯಿಂದಲೂ ಪರಿಗಣಿಸಲಾಗಿತ್ತು. ಹೆತ್ತವರು ತಮಗೆ ಶ್ರವಣ ನ್ಯೂನ್ಯತೆಯ ಮಕ್ಕಳು ಹುಟ್ಟಿರುವುದು ಒಂದು ಶಾಪವೆಂದೇ ಪರಿಗಣಿಸಿದರು. ವಿಜ್ಞಾನದ ಹೊಸ -ಹೊಸ ಆವಿಷ್ಕಾರಗಳು ಸಂಶೋಧನೆ ಸಮ್ಮೇಳನಗಳು ಹಾಗೂ ಅಂತರಾಷ್ಟ್ರೀಯ ತಡೆಗಟ್ಟುವಿಕೆ ಮತ್ತು ಶ್ರವಣದೋಷದ ಪುನಃಶ್ಚೇತನದಲ್ಲಿ ಕ್ರಾಂತಿಯನ್ನೇ ಹುಟ್ಟಿಹಾಕಿದೆ. ಈ ಒಂದು ಶ್ರವಣದೋಷಕ್ಕೆ ಸಂಬಂಧಿಸಿದಂತೆ ಹಲವು ಸಾಹಿತ್ಯಿಕ ಪುರಾವೆಗಳು ಲಭ್ಯವಾಗಿವೆ. ಈ ಪುರಾವೆಗಳು ತಮ್ಮದೆ ಆದ ನಿರ್ದಿಷ್ಟ ವಿಷಯವನ್ನು ಒಳಗೊಂಡಂತಹ ಆಕಾರಗಳಾಗಿವೆ, ಅವುಗಳೆಂದರೆ
ಕೆ. ಕೆ ಶ್ರೀನಿವಾಸ್ ರವರು ಬರೆದಿರುವ ‘ಶ್ರವಣ ಕಿರಣ
ಶ್ರವಣದೋಷ ಯಾವ ರೀತಿಯಲ್ಲಿ ಉಂಟಾಗುತ್ತದೆ. ಉಂಟಾದ ನಂತರ ಅವರ ಪ್ರಾರಂಭದಲ್ಲಿ ಅವರಿಗೆ ಕಲಿಕೆಯ ಅಥವಾ ಸಂವಹನ ಪ್ರಕ್ರಿಯೇಯನು ಯಾವ ರೀತಿಯಲ್ಲಿ ಕಲಿಯಬೇಕು ಏಂಬುದನ್ನು ತಿಳಿಸುತ್ತದೆ. ಹಾಗೂ ಯಾವ ವಯಸ್ಸೀನಲ್ಲಿ ಸಂವಹನ ಪ್ರೌಢತೆಯನ್ನು ಹೊಂದುವರು ಎಂಬುವಂತಹ ಮಾಹಿತಿ ಇದರಲ್ಲಿ ಅಡಗಿದೆ.
೨. ಬೆಳೆಯುತ್ತಿರುವ ಮಕ್ಕಳಲ್ಲಿ ಕಂಡುಬರುವ ನ್ಯೂನತೆಗಳು-ಒಂದು ಪರಿಚಯ, ಲೇಖಕರು ಡಾII ಮ. ಜಯರಾಂ
ಈ ಒಂದು ವರದಿಯಲ್ಲಿ ಈ ಮೇಲಿನ ಲೇಖಕರು ತಿಳಿಸಿರುವಂತೆ ತಾಯಿಯ ಗರ್ಭವ್ಯವಸ್ಥೆಯಲ್ಲಿ ಆಗುವ ತೊಂದರೆಗಳು, ಅನುವಂಶಿಯತೆಯಿಂದ ,ಮದುವೆಯಿಂದ ಆಗುವಂತಹ ಘಟನೆಗಳು, ಬೆಳೆದಂತೆ ಮಗುವಿಗೆ ಉತ್ತಮ ಆಹಾರದ ಸೌಲಭ್ಯ ಇಲ್ಲದೇ ಇರುವುದು, ಇಷ್ಟೇಲ್ಲವುಗಳಿಂದ ಮಗುವಿನ ದೇಹದಲ್ಲಿ ಆಗುವಂತಹ ವಿವಿಧ ರೀತಿಯ ನ್ಯೂನತೆಯ ಬಗ್ಗೆ ಇವರು ತಿಳಿಸಿದ್ದಾರೆ.
ಉದಾಹರಣೆ. ಶ್ರವಣದೋಷ , ಬುದ್ಧಿಮಾಂದ್ಯತೆ.
೩. ಅಂಗವಿಕಲತೆ ಮತ್ತು ಕಾನೂನು (ಹೆಚ್. ಆರ್. ಎಲ್. ಎನ್): ಹ್ಯೂಮನ್ ರೈಟ್ಸ್ ಲಾ ನೆಟ್‌ವರ್ಕ್
 ಇಂದು ನ್ಯಾಯಾಧೀಶರು ರಚಿಸಿಕೊಂಡಿರುವಂತಹ ಸಮೂಹವಾಗಿದ್ದು, ಈ ನ್ಯಾಯಾಧೀಶರೇ ಇದರಲ್ಲಿ ಅಂಗವಿಕಲರಿಗೆ ಆಗುತ್ತಿರುವ ಅನ್ಯಾಯವನ್ನು ತಡೆಯುವುದರ ಮೂಲಕ ನ್ಯಾಯ ಧೊರಕಿಸಿಕೊಡುವುದರ ಜೊತೆಯಲ್ಲಿಯೇ ಹೊಸ ಕಾನೂನುಗಳನ್ನು ರೂಪಿಸುವುದು ಇವರ ಮುಖ್ಯ ಧ್ಯೇಯವಾಗಿದೆ. ಇದರಲ್ಲಿ ಅಂಗವಿಕಲರು ಪ್ರತಿಯೊಂದು ಕ್ಷೇತ್ರದಲ್ಲಿ ಮುಂದುವರಿಯುವಂತೆ ಮೀಸಲಾತಿಯನ್ನು ನೀಡುವುದರ ಮೂಲಕ ಅವರ ಭವಿಷ್ಯಕ್ಕೆ ಸಹಾಕಾರಿಯಾಗಿದ್ದಾರೆ.
ಮಗುವಿನ ಭಾಷಾ ಕಲಿಕೆಯಲ್ಲಿ ಫೋಷಕರ ಪಾತ್ರ(ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೇಬಿಲಿಟಿ)
ಇದರಲ್ಲಿ ಸಾಮಾನ್ಯ ವಯಸ್ಕರಲ್ಲಿನ ಶ್ರವಣದೋಷದ ಸಮಸ್ಯೆಗೆ ಕಾರಣಗಳ ಪರಿಣಾಮಗಳನ್ನು ತಿಳಿಸಿದೆ. ಶ್ರವಣದೋಷದ ನ್ಯೂನತೆಗೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಯಾವ- ಯಾವ ಸಂಸ್ಥೆಗಳು ದುಡಿಯುತ್ತಿದ್ದಾರೆ ಎಂಬುದನ್ನು ತಿಳಿಸಿದೆ. ಹಾಗೂ ಹುಟ್ಟಿದಾಗಲೇ ಶ್ರವಣದೋಷ ಯಾವ ರೀತಿಯಲ್ಲಿ ಉಂಟಾಗುತ್ತದೆ ಎಂಬುದನ್ನು ತಿಳಿಯಪಡಿಸಿದ್ದಾರೆ.
೫. ಮಕ್ಕಳಿಗಾಗಿ ಮಕ್ಕಳ ಹಕ್ಕುಗಳು: (ವಾಸುದೇವ್ ಶರ್ಮ)
ಇದರಲ್ಲಿ ಪ್ರತಿಯೊಂದು ಸಮಾಜದ ಮಕ್ಕಳಿಗೆ ಮೂಲಭೂತ ಹಕ್ಕುಗಳು ಇವೆ. ಇದರಲ್ಲಿ ಶೋಷಣೆಗೆ, ದೌರ್ಜನ್ಯಕ್ಕೆ, ಲೈಂಗಿಕತೆಗೆ, ತಾರತಮ್ಯಕ್ಕೆ ಹಾಗೂ ಇತರ ಅಂಶಗಳಿಂದ ಹೀನ ಸ್ಥಿತಿಗೆ ಒಳಗಾದರೇ ಅಂತಹ ಮಕ್ಕಳಿಗೆ ನ್ಯಾಯ ದೊರಕಿಸಿಕೊಡುವುದು. ಅಂಗವಿಕಲ ಮಕ್ಕಳಿಗೆ ಹಾಗೂ ಎಲ್ಲಾ ಮಕ್ಕಳಿಗೂ ಸಮಾನವಾಗಿ ಜೀವಿಸುವ ಹಕ್ಕನ್ನು ನೀಡಿದೆ.
ದಿನಪತ್ರಿಕೆ, ವಾರಪತ್ರಿಕೆ ಹಾಗೂ ಶ್ರವಣ ಸಾಧನ ದೊರಕಿಸಿಕೊಡುವಂತಹ ಸಂಸ್ಧೆಯಿಂದ ಹೋರ ತಂದ ಮ್ಯಾಗ್‌ಝ್ಹಿನ್
ಪುಸ್ತಕಗಳು:
ಇದರಲ್ಲಿ ಶ್ರವಣ ಸಾಧನಕ್ಕೆ ಸಂಬಂಧಿಸಿದಂತೆ ಕಿವಿಯ ಆಕಾರ,ಗಾತ್ರಕ್ಕೆ ಅನುಗುಣವಾಗಿ ಶ್ರವಣ ಸಾಧನೋಪಕರಣದ ಬಗ್ಗೆ ಮತ್ತುಆಡಿಯೋಗ್ರಮ್ ಮಾಡುವ ರೀತಿಯ ಬಗ್ಗೆ ವಿಷಯ ಸಂಗ್ರಹ ಇದೆ.

ಅಧ್ಯಾಯ - ೩. ಸಂಶೋಧನ ವಿಧಾನ:-
All power is within you, you can do any thing and everything, believe in that, and do not believe that you are week. Stand up and express divinity within you.
Swamy vivekananda
ಗುರಿ ಮತ್ತು ಉದ್ದೇಶಗಳು:
ಶ್ರವಣದೋಷವುಳ್ಳ ಮಕ್ಕಳ ಸಂವಹನದ ಸಮಸ್ಯೆಯನ್ನು ತಿಳಿಯಬಹುದು.
ಶ್ರವಣದೋಷವುಳ್ಳ ಮಕ್ಕಳು ಕಲಿಕಾ ತೊಂದರೆಯನ್ನು ತಿಳಿಯಬಹುದು.
ಶ್ರವಣದೋಷವುಳ್ಳ ಮಕ್ಕಳು ಶಾಲಾ ತರಗಿತಿಯೊಂದಿಗೆ ಹಾಗೂ ಶಿಕ್ಷಕರೊಂದಿಗೆ ಮತ್ತು ಸಮುದಾಯದೊಂದಿಗೆ ಯಾವ ರೀತಿಯ ಸಂಬಂದ ಹೊಂದಿದ್ದಾರೆ ಎಂಬುದನ್ನು ತಿಳಿಯಬಹುದು.
ಎಚ್. ಅರ್ ಚಂದ್ರಶೇಖರ್ ವಾಕ್ ಮತ್ತು ಶ್ರವಣ ಸಂಸ್ಥೆಯವರು ಶ್ರವಣದೋಷವುಳ್ಳ ಮಕ್ಕಳಿಗೆ ತೆಗೆದುಕೊಂಡಿರುವ ಕಾರ್ಯಯೋಜನೆಗಳ ಬಗ್ಗೆ ತಿಳಿಯುವುದು.
ಈ ಸಂಸ್ಥೆಯಲ್ಲಿ ಶ್ರವಣದೋಷವುಳ್ಳ ಮಕ್ಕಳಿಗೆ ವಿಶೇಷ ಬೋದನಾ ವಿಧಾನದಲ್ಲಿ ಪ್ರಕ್ರಿಯೆಯನ್ನು ಅರಿಯುವುದು.
ಶ್ರವಣದೋಷವುಳ್ಳ ಮಕ್ಕಳ ಹಕ್ಕುಗಳನ್ನು ಅರಿಯುವುದು.
ಶ್ರವಣದೋಷವುಳ್ಳ ಮಕ್ಕಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಕೊಡಲ್ಪಟ್ಟಿರುವ ಸವಲತ್ತುಗಳನ್ನು ಅರಿಯುವುದು.
ಶ್ರವಣದೋಷವುಳ್ಳ ಮಕ್ಕಳಿಗೆ ಸಂವಿಧಾನಬದ್ದವಾಗಿ ನೀಡಲ್ಪಟ್ಟಿರುವ ಕಾನೂನುಗಳನ್ನು ತಿಳಿಯುವುದು.

ಸಂಶೋಧನೆಯ ವಿನ್ಯಾಸ:
 ಸಂಶೋಧಕನು ಸಂಶೋಧನೆಯ ವಿಧಾನ ಮಾಡಿದ ನಂತರ ಸಂಶೋಧನೆಗೆ ಮುಖ್ಯ ತಯಾರಿಯನ್ನು ಮಾಡಿಕೊಂಡನು. ಈ ಸಂಶೋಧನಾ ವಿನ್ಯಾಸ ಸಂಶೋಧನೆಗೆ ನೀಲಿ ನಕಾಶೆ ಇದ್ದಂತೆ.
ಸಂಶೋಧನೆಯು ಶ್ರವಣದೋಷವುಳ್ಳ ಮಕ್ಕಳನ್ನು ಕುರುತುದಾಗಿದೆ.
ಈ ಸಂಶೋಧನೆಯನ್ನು ಬೆಂಗಳೂರು ನಗರದ ಕ್ಷೇತ್ರದಲ್ಲಿ ಎಸ್. ಅರ್. ಚಂದ್ರಶೇಕರ್ ವಾಕ್ ಮತ್ತು ಶ್ರವಣ ಸಂಸ್ಥೆಯ ಕಾರ್ಯವ್ಯಾಪ್ತಿ ಅಡಿಯಲ್ಲಿ ಕೈಗೊಳ್ಳಲಾಯಿತು.
ಸಂಶೋಧನೆಗೆ ಬೇಕಾದ ಮಾಹಿತಿಯನ್ನು ಮಕ್ಕಳ ಮತ್ತು ಪೋಷಕರ ಮೂಲಕ ತಿಳಿದುಕೊಳ್ಳಲಾಯಿತು.
ಈ ಸಂಶೋಧನೆಗೆ ಕಾಲಾವದಿ ೪೦ ದಿನಗಳಾದ್ದಾಗಿರುತ್ತದೆ.
ಮಾಹಿತಿ ಸಂಗ್ರಹಣೆಗೆ ಪ್ರಶ್ನಾವಳಿ ಅನುಸೂಚಿಯನ್ನು ಬಳಸಲಾಗುತ್ತದೆ.
ಈ ಸಂಶೋಧನೆಯಲ್ಲಿ ಶ್ರವಣದೋಷವುಳ್ಳ ಮಕ್ಕಳ ಸಮಸ್ಯೆಗಳು , ಅಭಿಪ್ರಾಯ, ದೃಷ್ಠಿಕೋನ, ಕಾನೂನು ಹಕ್ಕುಗಳ ಮತ್ತು ಪರಿಣಾಮ ಕುರಿತು ಅಧ್ಯಯನ ಮಾಡುವುದಾಗಿದೆ.
ಸಂಶೋಧಕನು ಸಂಶೋಧನೆಯನ್ನು ಕೈಗೊಳ್ಳಬೇಕಾದರೆ ಸಂಶೋಧನೆಯ ವಿನ್ಯಾಸವೆಂಬುದು ಅತ್ಯವಶ್ಯಕ. ಈ ಒಂದು ವಿಧಾನದ ಮೂಲಕ ಸಂಶೋಧಕನು ಸಂಶೋಧನೆಯನ್ನು ಕೈಗೊಳ್ಳುವುದ್ದಕ್ಕೆ ಸಹಾಯಕ.

ಸಂಶೋಧನೆಯ ವಿನ್ಯಾಸದ ವಿಧಗಳು
ವಿವರಣಾತ್ಮಕ ಅಧ್ಯಯನ:
ಈ ಅಧ್ಯಯನದಲ್ಲಿಸಂಶೋಧಕನು ಕೈಗೊಳ್ಳುವಂತಹ ವಿಷಯದ ಬಗ್ಗೆ ಮಕ್ಕಳಲ್ಲಿ ಮನವರಿಕೆಯನ್ನು ಮಾಡಿಕೊಡುವುದರ ಮೂಲಕ ಮಾಹಿತಿಯನ್ನು ಪಡೆಯುವುದು. ಇದರಲ್ಲಿ ಸಂಶೋಧನೆಯಲ್ಲಿ ಕೈಗೊಳ್ಳುತ್ತಿರುವ ಅಂಶಗಳನ್ನು ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಹೇಳಬೇಕು.
ವಿಶ್ಲೇಷಣಾತ್ಮಕ ವಿಧಾನ:
ಇದರಲ್ಲಿ ಸಂಶೋಧಕನು ಕೈಗೊಂಡಿರುವ ಪ್ರಮುಖವಾದ ವಿಷಯಾಂಶಗಳನ್ನುವಿಶ್ಲೇಷಣಾತ್ಮಕ ರೀತಿಯಲ್ಲಿ ತಿಳಿಯಪಡಿಸುವುದು. ಇದರಿಂದ ಸಂಪೂರ್ಣವಾಗಿ ಮಾಹಿತಿಯನ್ನು ನೀಡುವುದಾಗಿದೆ.
ಪ್ರಯೋಗಾತ್ಮಕ ವಿಧಾನ:
ಈ ಒಂದು ವಿಧಾನದಲ್ಲಿ ಕಲೆಹಾಕಿದ ಮಾಹಿತಿಯನ್ನು ಪ್ರಯೋಗಾತ್ಮಕ ಒಳಪಡಿಸಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವುದು. ಇದರಿಂದ ಮಾಹಿತಿಯನ್ನು ನಿರ್ದಿಷ್ಠತೆಯಿಂದ ಹಾಗೂ ನಿಖರತೆಯಿಂದ ಕ್ರೂಢೀಕರಿಸಿದಂತೆ ಆಗುತ್ತದೆ.
ಈ ಸಂಶೋಧನೆಯ ಮೂರು ವಿಧಾನಗಳಲ್ಲಿ ಆಯ್ಕೆಮಾಡಿಕೊಂಡಿರುವಂತಹ ವಿಧಾನ ವಿವರಣಾತ್ಮಕ ಅಧ್ಯಯನ ವಾಗಿದೆ.
ಮಾಹಿತಿ ಸಂಗ್ರಹಣೆಯ ವಿಧಾನ:
ಸಂಶೋಧಕನು ಸಂಶೋಧನೆಗೆ ಬೇಕಾದ ಮಾಹಿತಿಯನ್ನು ಪ್ರಶ್ನಾವಳಿ ವಿಧಾನದ ಮೂಲಕ ಮಾಹಿತಿ ಸಂಗ್ರಹಿಸಿದನು.
 ಮಾಹಿತಿ ಸಂಗ್ರಹಣಾ ವಿಧಾನದಲ್ಲಿ ಪ್ರಶ್ನಾವಳಿ ಅನುಸೂಚಿಯ ವಿಧಾನವನ್ನು ಅನುಸರಿಸಿದನು.

ಮಾಹಿತಿ ಸಂಗ್ರಹಣೆಯ ತಂತ್ರಗಳು :
ಅವಲೋಕನ : ಸಂಶೋಧಕನು ಸಂಶೋಧನೆಗೆ ಬೇಕಾದ ಮಾಹಿತಿಯನ್ನು ಸಂಗ್ರಹಿಸುವಲ್ಲಿ ಅವಲೋಕನ ವಿಧಾನವನ್ನು ಅನುಸರಿಸಿದನು. ಆ ಅವಲೋಕನ ವಿಧಾನದಲ್ಲಿ ನಿಯಂತ್ರಿಕ ಸಹಭಾಗಿಯಾಗಿ ಅವಲೋಕನ ವಿಧಾನವನ್ನು ಅನುಸರಿಸಲಾಗಿದೆ. ಸಂಶೋಧಕನು ಸ್ವತಃ ಭಾಗಿಯಾಗಿ ಅ ಸನ್ನಿವೇಶದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿದನು.
ಸಂದರ್ಶನ ಅನುಸೂಚಿ: ಸಂಶೋಧಕನು ಸಂಶೋಧನಾ ಶೀರ್ಷಿಕೆಯನ್ನು ಆಯ್ಕೆಮಾಡಿದ ನಂತರ ಅದಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ರಚಿಸಲಾಯಿತು. ಸಂಶೋಧಕನು ತನ್ನ ಸಂಶೋಧನೆಗೆ ಆಯ್ಕೆ ಮಾಡಿದ ವ್ಯಕ್ತಿಗಳಿಗೆ ಸಂದರ್ಶನ ಅನುಸೂಚಿಯನ್ನು ತನ್ನೊಂದಿಗೆ ತೆಗೆದುಕೊಂಡು ಹೋಗಿ ಅದರಲ್ಲಿ ಪಟ್ಟಿ ಮಾಡಿದ ಕ್ರಮದಲ್ಲಿಯೇ ಪ್ರಶ್ನೆಗಳನ್ನು ಮಾಹಿತಿದಾರರಿಗೆ ಸ್ವತಃ ಕೇಳಿ ಪ್ರತಿಕ್ರಿಯೆಗಳನ್ನು ಪ್ರತ್ಯೇಕವಾಗಿ ಕಾಗದದಲ್ಲಿ ಭರ್ತಿಮಾಡಿಕೊಂಡನು.
ಪಶ್ನಾವಳಿ ವಿಧಾನ:
ಪ್ರಶ್ನಾವಳಿ ಸಾಮಾಜಿಕ ಸಂಶೋಧನಾ ಕ್ಷೇತ್ರದಲ್ಲಿ ಮಾಹಿತಿಯನ್ನು ಸಂಗ್ರಹಿಸಲು ಬಹಳ ಪರಿಣಾಮಕಾರಿಯಾದ ವಿಧಾನವಾಗಿರುವುದರಿಂದ ಸಂಶೋಧಕನು ಪ್ರಶ್ನಾವಳಿ ವಿಧಾನವನ್ನು ಸಂಶೋಧನೆಗೆ ಮಾಹಿತಿ ಪಡೆಯಲು ಬಯಸಿದನು.
ಸಂಶೋಧನೆಗೆ ಆಯ್ಕೆಯಾದ ಮಕ್ಕಳೊಂದಿಗೆ ಸಂಭಾಷಣೆ ಮಾಡುವ ಮೂಲಕ ಅಭಿಪ್ರಾಯಗಳನ್ನು ತೆಗೆದುಕೊಳ್ಳಲಾಯಿತು.

ಪ್ರಶ್ನಾವಳಿಯ ಉದ್ದೇಶ:
ಸಂಶೋಧಕನು ಶ್ರವಣದೋಷವುಳ್ಳ ಮಕ್ಕಳ ಕಲಿಕಾ ಪ್ರಗತಿ, ಮನೋಭವ, ದೃಷ್ಠಿಕೋನ ಬದಲಾವಣೆಯ ಪರಿಣಾಮಗಳನ್ನು ಅರ್ಥಮಾಡಿಕೊಳ್ಳುವುದಾಗಿತ್ತು.
ಶ್ರವಣದೋಷವು ಅಂಗವಿಕಲತೆಯ ಭಾಗವಾಗಿದ್ದು ಸರ್ಕಾರವು ಇವರಿಗೆ ನೀಡಿರುವ ಸವಲತ್ತುಗಳ ಬಗ್ಗೆ ಅರಿವು ಇದೇಯೇ ಇಲ್ಲವೋ ಎಂಬುದನ್ನು ತಿಳಿಯುವುದಾಗಿತ್ತು.
ಶ್ರವಣದೋಷವುಳ್ಳ ಮಕ್ಕಳ ವಿಚಾರಗಳು , ಅನುಭವಗಳನ್ನು ವಿನಿಮಯ ಮಾಡಿಕೊಳ್ಳುವುದ್ದಾಗಿತ್ತು.

ಪ್ರಶ್ನಾವಳಿಯ ಪ್ರಕ್ರಿಯೆ:
ಸಂಶೋಧಕನು ಮಕ್ಕಳಿಗೆ ಸಂಶೋಧನಾ ವಿಷಯದ ಪರಿಚಯಮಾಡಿಕೊಟ್ಟು ಅವರ ವಿಶ್ವಾಸಗೊಳಿಸಿದನು.
ಸಂಶೋಧಕನು ಸ್ವರೂಪ ಮತ್ತು ಉದ್ದೇಶಗಳನ್ನು ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ವಿವರಿಸಿ ಅವರ ಮನಸ್ಸಿನಲ್ಲಿ ಉಂಟಾಗಬಹುದಾದ ಸಂಶಯವನ್ನು ನಿವಾರಿಸಿದನು.
ಸಂಶೋಧನೆ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುವಾಗ ಅವರಿಗೆ ಅರ್ಥವಾಗುವಂತೆ, ಸೂಕ್ತ ಶಬ್ಧಗಳನ್ನು ಉಪಯೋಗಿಸಲಾಯಿತ್ತು.
ಸಂಶೋಧನಾ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಬಂದ ಪ್ರತಿಕ್ರಿಯೆಗಳನ್ನು ದಾಖಲಿಸಿಕೊಂಡನು.
ಸಂಶೋಧನಾ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರವನ್ನು ಮುಕ್ತವಾಗಿ ನೀಡಬೇಕೆಂದು ಪ್ರೋತ್ಸಾಹಿಸಿದ್ದೇನು.
ಪ್ರಶ್ನಾವಳಿಯನ್ನು ಅಂತ್ಯಗೊಳಿಸುವಾಗ ಸಂಶೋಧಕನು ಮಕ್ಕಳ ಶ್ರವಣದೋಷದ ಸಮಸ್ಯೆಗಳ ಕುರಿತು ಸಂದರ್ಭದಲ್ಲಿ ಇನ್ನೇನಾದರೂ ಅನಿಸಿಕೆ ಇದೆಯೇ ಎಂದು ಕೇಳಿ ತನ್ನೊಂದಿಗೆ ಸಂಶೋಧನಾ ಮಾಹಿತಿ ಸಂಗ್ರಹಣೆಗೆ ಸಹಕರಿಸಿದ್ದಕ್ಕಾಗಿ ಧನ್ಯವಾದ ಹೇಳಿದನು.
ಒಟ್ಟಾರೆಯಾಗಿ ಶ್ರವಣದೋಷವುಳ್ಳ ಮಕ್ಕಳ ಸಮಸ್ಯೆಯನ್ನು ಹೊಂದಿದ್ದಾರೆ, ಹಾಗೂ ಈ ಸಮಸ್ಯೆಯಿಂದ ಹೋರಬಂದು ಸ್ನೇಹಿತರೊಂದಿಗೆ, ಪೋಷಕರೊಂದಿಗೆ, ಸೂಕ್ತವಾದುದು ಎಂದು ಹೇಳುವಲ್ಲಿ ಸಂಶಯವಿಲ್ಲ.

ಅಧ್ಯಾಯ - ೪. ಮಾಹಿತಿ ವರ್ಗೀಕರಣ ಮತ್ತು ವಿಶ್ಲೇಷಣೆ
 ಮಾಹಿತಿ ಸಂಗ್ರಹಣೆಯ ಮೂಲಗಳು:
ಪ್ರಾಥಮಿಕ ಮೂಲಗಳು
ಮಾಧ್ಯಮಿಕ ಮೂಲಗಳು

ಮಾಹಿತಿ ಸಂಗ್ರಹಣೆಯ ವಿಧಾನಗಳು:
ಸಂಶೋಧಕನು ಶ್ರವಣದೋಷವುಳ್ಳ ಮಕ್ಕಳ ಸಮಸ್ಯೆಗಳು ಕುರಿತಂತೆ ಪ್ರಶ್ನಾವಳಿ ಅನುಸೂಚಿಯನ್ನು ಸಿದ್ಧಪಡಿಸಿ ಪ್ರಶ್ನೆಗಳನ್ನು ಮಕ್ಕಳಿಗೆ ಕೇಳಿ ಉತ್ತರಗಳನ್ನು ದಾಖಲೆ ಮಾಡಿಕೊಳ್ಳುವುದರ ಮೂಲಕ ಮಾಹಿತಿ ಸಂಗ್ರಹಿಸದೇನು.
ಅನುಷಾಂಗಿಕ ಮೂಲಗಳು : ಶ್ರವಣದೋಷವುಳ್ಳ ಮಕ್ಕಳ ಸಮಸ್ಯೆಗಳನ್ನು ಕುರಿತು ಮಾಹಿತಿಯನ್ನು ಎಸ್. ಅರ್. ಚಂದ್ರಶೇಖರ್ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ಪ್ರಕಟಿಸಿದ ಪ್ರಕಾಶಿತ ದಾಖಲೆಗಳಿಂದ ಸಂಗ್ರಹಿಸಲಾಯಿತು ಮತ್ತು ಜಾಲ ಸಂಪರ್ಕಗಳು.
ಅಧ್ಯಯನದ ಸಮಸ್ಯೆಗಳು
ಅ) ಸಮಯದ ಅಭಾವ ಆ) ಸಾರಿಗೆ ಸಂಪರ್ಕದ ಕೊರತೆ
ಇ) ಸಂಶೋಧಕನ ಪರಿಚಯವಿಲ್ಲದಿರುಕೆ
ಈ) ಭಾಷೆ ಸಮಸ್ಯೆಯ ತೊಡಕು
ನಮೂನೆ:
ನಮೂನೆಯಲ್ಲಿ ಎರಡು ವಿಧ
ಸಂಭವನೀಯತೆ ಮಾದರಿ.
ಸಂಭವನೀಯತೆ ಇಲ್ಲದ ಮಾದರಿ.

ಸಂಭವನೀಯತೆ ಮಾದರಿಯಲ್ಲಿ ೪ ವಿಧಗಳು.
ಸರಳ ಯಾದೃಚ್ಛಿಕ ಮಾದರಿ
ವಿಂಗಡಣೆಯಾದ ಮಾದರಿ
ವ್ಯವಸ್ಥಿತ ಮಾದರಿ
ಬಹುಹಂತದ ಮಾದರಿ

ಸಂಶೋಧಕನು ಸಂಶೋಧನೆಯ ನಮೂನೆಯಲ್ಲಿ ಮೊದಲನೆಯ ವಿಧವಾದ ಸರಳ ಯಾದೃಚ್ಛಿಕ ಮಾದರಿ ಯನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ ಲಾಟರಿ ವಿಧಾನ ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆಮಾಡಿಕೊಳ್ಳುವುದಾಗಿದೆ, ಎಸ್. ಅರ್ ಚಂದ್ರಶೇಖರ್ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ೧೦೫ ವಿದ್ಯಾರ್ಥಿಗಳಿದ್ದು ಇದರಲ್ಲಿ ಲಾಟರಿ ಮಾದರಿ ವಿಧಾನದ ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವುದಾಗಿದೆ. ಇದಕ್ಕೆ ಸೀಮಿತವಾಗಿಯೇ ೫೦ ವಿದ್ಯಾರ್ಥಿಗಳನು ಆಯ್ಕೆ ಮಾಡಿಕೊಳ್ಳಲಾಯಿತ್ತು.

ಕೋಷ್ಟಕ ಸಂಖ್ಯೆ - ೧
ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಪುರುಷ ಪ್ರಾಧಾನ್ಯತೆಯಿದೆ. ಲಿಂಗ ಸೂಕ್ಷ್ಮತೆ ಮತ್ತು ಮಹಿಳಾ ಸಬಲೀಕರಣದಂತಹ ಅಂದೋಲನಗಳಲ್ಲಿ ಅಪಾರವಾದುದನ್ನು ಸಾದಿಸಿದ್ದಾರೆ. ತಮ್ಮ ಊನ ಶಕ್ತತೆಯೊಂದಿಗೂ ಉನ್ನತ ಶಿಕ್ನಣವನ್ನು ಪಡೆದುಕೊಳ್ಳುವ ಪ್ರಯತ್ನದಲ್ಲಿರುವುದು ಅಭಿವೃದ್ದಿಯ ಸೂಚಕವಾಗಿದೆ. ಪ್ರತಿವಾದಿಗಳಲ್ಲಿ ಗಂಡು ಮತ್ತು ಹೆಣ್ಣೆನ ಪ್ರಾತಿನಿದ್ಯಗಳು ಅನುಕ್ರಮವಾಗಿ ಶೇಕಡಾ ೫೪ ಮತ್ತು ೪೬ ರ ಪ್ರಮಾಣದಲ್ಲಿರುವುದನ್ನು ಕೋಷ್ಟಕದ ಅs ಕೋಷ್ಟಕ ಸಹಾಯದಿಂದ ತಿಳಿಯಬಹುದಾಗಿದೆ.

ಆ ಕೋಷ್ಟಕ ಮಾತೃಭಾಷೆ
 ವ್ಯಕ್ತಿಯ ಅಭಿವ್ಯಕ್ತಿಗೆ ಭಾಷೆಯು ಒಂದು ಸಾಧನ. ಭಾರತವು ವಿವಿಧತೆಯಲ್ಲಿ ವೈವಿಧ್ಯತೆಯೊಂದಿಗೆ ಐಕ್ಯತೆಯನ್ನು ಹೊಂದಿರುವ ಒಂದು ಬೃಹತ್ ರಾಷ್ಟ್ರವಾಗಿದೆ, ಹಿಂದಿ ಭಾಷೆಯು ನಮ್ಮ ರಾಷ್ಟ್ರದ ನುಡಿಯಾಗಿದೆ. ಬೆಂಗಳೂರು ನಗರದಲ್ಲಿ ಭಾರತದ ಹಲವಾರು ರಾಜ್ಯಗಳಿಂದ ಬಂದು ನೆಲೆಸಿರುವ ಜನರಿದ್ದು ವ್ಯವಹಾರಿಕವಾಗಿ ಕನ್ನಡ , ತೆಲುಗು, ತಮಿಳು ಮತ್ತು ಆಂಗ್ಲಭಾಷೆಗಳು ಬಳಕೆಯಾಗುತ್ತವೆ.
ಶೇಕಡ ೮೬ ರಷ್ಟು ಪ್ರಮಾಣದಲ್ಲಿ ಪ್ರತಿವಾದಿಗಳು ಕನ್ನಡ ಮಾತೃ ಭಾಷಿಗಳಾಗಿರುವುದನ್ನು ಕೋಷ್ಟಕದ ಆ ವಿಭಾಗದಲ್ಲಿನ ಅಂಕಿ ಅಂಶಗಳಿಂದ ತಿಳಿಯಬಹುದಾಗಿದೆ, ಉಳಿದಂತೆ ಹಿಂದಿ ಮತ್ತು ತೆಲುಗು ಭಾಷಿಗರ ಪ್ರತಿನಿಧ್ಯವಿದೆ. ಹಿಂದಿ ತೆಲುಗು ಮತ್ತು ತಮಿಳು ಪ್ರತಿವಾದಿಗಳಿಗೆ ತಿಳಿದಿರುವ ಇತರೆ ಭಾಷೆಗಳಿವೆ.

ಕೋಷ್ಟಕ - ೨: ಮಾಧ್ಯಮ ಮತ್ತು ಧರ್ಮನುಸಾರ ಪ್ರತಿವಾದಿಗಳ ಪ್ರತಿವಾದಿಗಳ ವಿಂಗಡಣೆ.
ಕರ್ನಾಟಕದಲ್ಲಿ ವಿವಿಧ ರೀತಿಯ ಶಾಲೆಗಳು ಮಕ್ಕಳ ಶಿಕ್ಷಣದ ಕಲಿಕಾ ಅಭಿವೃದ್ಧಿಗೆ ವಿವಿಧ ಮಾದರಿಯ ಶಾಲೆಗಳು ಕಾಣುತ್ತವೆ. ಆದರೆ ಇಂತಹ ಶಾಲೆಗಳಲ್ಲಿ ಮಕ್ಕಳಿಗೆ ಕಲಿಸುವಂತಹ ಭಾಷೆಯ ಮಾಧ್ಯಮ ವಿವಿಧ ರೀತಿಯಲ್ಲಿ ಇರುತ್ತದೆ. ಈ ಒಂದು ಸಂಸ್ಥೆಯಲ್ಲಿ ಕನ್ನಡ ಮಾಧ್ಯಮ ಶೇಕಡಾ ೨೮ % ರಷ್ಟು ಇದ್ದರೆ ಇಂಗ್ಲೀಷ್ ಮಾಧ್ಯಮ ಶೇಕಡಾ ೭೨ % ಇದೆ. ಇದರಿಂದ ಕರ್ನಾಟಕದಲ್ಲಿ ಬರುವಂತಹ ಜನತೆಗೆ ಭಾಷಾ ಸಮಸ್ಯೆಯು ಕಾಣಿಸಿಕೊಳ್ಳುತ್ತದೆ.

ಆ ಕೋಷ್ಟಕ ಧರ್ಮಗಳ ವಿಂಗಡಣೆ
 ಪ್ರಪಂಚದ್ಯಾಂತ ಜನರು ಒಂದಲ್ಲೊಂದು ಧರ್ಮದ ಅನುಯಾಯಿಗಳಾಗಿದ್ದಾರೆ. ಹಿಂದೂ ಧರ್ಮಾನುಯಾಯಿಗಳ ಸಂಖ್ಯೆಯ ಅತಿ ಹೆಚ್ಚು ನಂತರದ ಸ್ಥಾನದಲ್ಲಿ ಕ್ರೈಸ್ತ ಹಾಗೂ ಧರ್ಮಾನುಯಾಯಿಗಳಾಗಿದ್ದಾರೆ. ಭಾರತವು ಹಿಂದೂ ದೇಶವೆಂದು ಕರೆಯಲ್ಪಡುತ್ತಿದ್ದು, ಭಾರತದಲ್ಲಿ ಹಿಂದೂ ಧರ್ಮಾನುಯಾಯಿಗಳು ಅಪಾರ ಸಂಖ್ಯೆಯಲ್ಲಿದ್ದಾರೆ. ಪ್ರಸಕ್ತ ಸಂಶೋಧಕನು ಪ್ರತಿವಾದಿಗಳಲ್ಲಿ ಶೇ. ೮೬ ರಷ್ಟು ಪ್ರಾತಿನಿಧ್ಯದೊಂದಿಗೆ ಹಿಂದೂ ಧರ್ಮಾನುಯಾಯಿಗಳು ಮೊದಲಸ್ಥಾನದಲ್ಲಿದ್ದು, ಆ ನಂತರದಲ್ಲಿ ಅನುಕ್ರಮವಾಗಿ ಮುಸ್ಲಿಂ ಮತ್ತು ಕ್ರೈಸ್ತ ಧರ್ಮದವರಾಗಿದ್ದಾರೆ.

ಕೋಷ್ಟಕ ಸಂಖ್ಯೆ -೦೩: ಪ್ರತಿವಾದಿಯ ಕುಟುಂಬದ ಮಾದರಿ ಮತ್ತು ವಾಸ್ತವ್ಯ ಪ್ರದೇಶ .
ಅ ಕೋಷ್ಟಕ ಕುಟುಂಬದ ಮಾದರಿ
 ಕುಟುಂಬದ ಮಾದರಿ ಹಾಗೂ ಕುಟುಂಬವು ವಾಸ್ತವ್ಯ ಹೂಡಿರುವ ಸ್ಥಳ ಇವುಗಳು ವ್ಯಕ್ತಿ ಹಾಗೂ ಕುಟುಂಬಗಳ ಸರ್ವಾಂಗೀಣ ಬದುಕಿನಲ್ಲಿ ತಮ್ಮ ಪ್ರಭಾವವನ್ನು ಹೊಂದಿರುತ್ತವೆ. ಅವಿಭಕ್ತ ಕುಟುಂಬಗಳು ಅಸ್ತಿತ್ವದಲ್ಲಿದ್ದು, ಬಹುತೇಕ ಕಣ್ಮರೆಯಾಗಿದ್ದು ವಿಸ್ತೃತ ಕುಟುಂಬಗಳು ಅಸ್ತಿತ್ವದಲ್ಲಿದ್ದು ವಿಭಕ್ತ ಕುಟುಂಬಗಳು ಇಂದಿನ ಸಾಮಾಜಿಕ ಸಂಸ್ಥೆಗಳಾಗಿವೆ. ಕೋಷ್ಟಕ ಅ ಕೋಷ್ಟಕದಲ್ಲಿ ಕಂಡುಬಂದಿರುವಂತೆ ಪ್ರತಿವಾದಿ ಕುಟುಂಬಗಳ ಮಾದರಿ ೨ ಗುಂಪುಗಳಾಗಿ ವಿಂಗಡಣೆಯಾಗಿದ್ದು ಶೇ. ೮೨ ರಷ್ಟು ಪ್ರಮಾಣದಲ್ಲಿ ವಿಭಕ್ತ ಕುಟುಂಬಗಳಿದ್ದರೆ , ಶೇ. ೧೮ ರಷ್ಟು ಪ್ರಮಾಣದಲ್ಲಿ ಅವಿಭಕ್ತ ಕುಟುಂಬಗಳು ಕಂಡುಬರುತ್ತವೆ.

ಆ ಕೋಷ್ಟಕ ಕುಟುಂಬದ ವಾಸ್ತವ್ಯ ಸ್ಥಳ
 ಅದೇ ರೀತಿಯಾಗಿ ಪ್ರತಿವಾದಿಗಳ ವಾಸ್ತವ್ಯ ಪ್ರದೇಶವನ್ನು ಪರಿಗಣಿಸಿದಾಗ ಅತೀ ಹೆಚ್ಚಿನದಾಗಿ ನಗರ ಭಾಗದಲ್ಲಿಯೇ ಇದ್ದು ವಿದ್ಯಾಭ್ಯಾಸವನ್ನು ಈ ಸಂಸ್ಥೆಯಲ್ಲಿ ಕೈಗೊಳ್ಳುತ್ತಿದ್ದಾರೆ. ಶೇ ೧೦ ರಷ್ಟು ಗ್ರಾಮ ವಾಸ್ತವ್ಯದಿಂದ ಬಂದರೆ, ಹೋಬಳಿ ಮತ್ತು ತಾಲ್ಲೂಕು ಕೇಂದ್ರಗಳಿಂದ ಶೇ. ೬ ರಷ್ಟು ಹಾಗೂ ನಗರ ಭಾಗದಲ್ಲಿಯೇ ಶೇ ೮೪ ರಷ್ಟು ಪ್ರಮಾಣದಲ್ಲಿ ಮಕ್ಕಳು ಶ್ರವಣ ನ್ಯೂನ್ಯತೆಯ ಸಮಸ್ಯೆಯಿಂದ ಇಲ್ಲಿಗೆ ಬಂದು ಶಿಕ್ಷಣವನ್ನು ಪಡೆಯುತ್ತಾರೆ. ಅತೀ ಹೆಚ್ಚಿನದಾಗಿ ನಗರ ಭಾಗದಲ್ಲಿ ವಾಸ್ತವ್ಯಹೊಡಿರುವವರು ಅಧಿಕ ಸಂಖ್ಯೆಯಲ್ಲಿದ್ದಾರೆ.

ಕೋಷ್ಟಕ- ೦೪: ಪ್ರತಿವಾಗಳು ಮತ್ತು ಶ್ರವಣ ನ್ಯೂನ್ಯತೆ ( ಡೆಸಿಬಲ್‌ಗಳ ಮಟ್ಟ)
ಅ ಕೋಷ್ಟಕ ಶ್ರವಣ ನ್ಯೂನ್ಯತೆ ಉಂಟಾಗಲು ಕಾರಣ
ಶ್ರವಣ ನ್ಯೂನ್ಯತೆ ಎಂಬುದು ವಿವಿಧ ರೀತಿಯ ಕಾರಣಗಳಿಂದ ಉಂಟಾಗುತ್ತದೆ. ಇಂತಹ ಕಾರಣಗಳಿಂದ ಮಕ್ಕಳು ವಿವಿಧ ರೀತಿಯ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ, ಇಂತಹ ಶ್ರವಣ ನ್ಯೂನ್ಯತೆ ಯಾವ ಕಾರಣಕ್ಕೆ ಉಂಟಾಯಿತು ಎಂಬುದು ಅ ಇಲ್ಲಿ ಅನುವಂಶೀಯತೆಯಿಂದ ಶೇ. ೪, ದೈತ್ಯ ಶಬ್ಧದಿಂದ ಶೇ ೫೨, ಕಿವಿಸೋರುವಿಕೆಯಿಂದ ಶೇ ೧೨ ಹಾಗೂ ಇತರೆ ಕಾರಣಗಳಿಂದ ಶೇ ೧೨ ರಷ್ಟು ಶ್ರವಣ ನ್ಯೂನ್ಯತೆಗೆ ಕಾರಣವಾಗಿದೆ.

ಆ ಕೋಷ್ಟಕ ಶ್ರವಣ ನ್ಯೂನ್ಯತೆಯಲ್ಲಿನ ಡೆಸಿಬಲ್ ಪ್ರಮಾಣ
ಶ್ರವಣ ನ್ಯೂನ್ಯತೆಯಿದೆ ಎಂಬುದನ್ನು ಗುರುತಿಸುವುದಕ್ಕೆ ಎಷ್ಟು ಪ್ರಮಾಣದ ಡೆಸಿಬಲ್ ಇದ್ದರೇ ಅತನು ಶ್ರವಣ ನ್ಯೂನ್ಯತೆಗೆ ಒಳಾಗಾಗಿದ್ದಾನೆ ಎಂಬುದನ್ನು ತಿಳಿಯಲು ಸಹಾಯಕ. ಶೇ ೨೪ ರಷ್ಟು ಪ್ರತಿವಾದಿಗಳ ಪ್ರಕಾರ ೪೦ ಡೆಸಿಬಲ್‌ಗಳು ಶೇ ೧೨ ರಷ್ಟು ಪ್ರತಿವಾದಿಗಳ ಪ್ರಕಾರ ೫೫ ಶೇ ೦ ಡೆಸಿಬಲ್‌ಗೆ ೧೨ರಷ್ಟು ಪ್ರತಿವಾದಿಗಳ ಪ್ರಕಾರ ೩೦ ಡೆಸಿಬಲ್‌ಗಳು ಎಂದು ಪ್ರತಿವಾದಿಯು ಗುರ್ತಿಸಿದ್ದಾನೆ. ಇದರಲ್ಲಿ ಶ್ರವಣ ನ್ಯೂನ್ಯತೆ ಉಂಟಾಗಲ್ಲಿಕ್ಕೆ ಶೇ. ೫೦ಡೆಸಿಬಲ್ ಗಿಂತ ಹೆಚ್ಚಿದರೆ ಶ್ರವಣ ನ್ಯೂನ್ಯತೆ ಉಂಟಾಗಿದೆ ಎಂದು ಪ್ರತಿವಾದಿಯೂ ಹೆಚ್ಚಿನದ್ದಾಗಿ ಗುರ್ತಿಸಿದ್ದಾರೆ.

 ಇ ಕೋಷ್ಟಕ ಮಕ್ಕಳು ಶ್ರವಣ ನ್ಯೂನ್ಯತೆಯಲಿದ್ದು ಅವರಿಗೆ ಇರುವ ಡೆಸಿಬಲ್ ಪ್ರಮಾಣ
 ಪ್ರತಿವಾದಿಯು ತನ್ನಲ್ಲಿರುವಂತಹ ಶ್ರವಣ ನ್ಯೂನ್ಯತೆಯ ಪ್ರಮಾಣವನ್ನು ವೈದ್ಯರು ಗುರ್ತಿಸಿದ ಡೆಸಿಬಲ್ ಪ್ರಮಾಣವನ್ನು ತೋರಿಸಿದ್ದಾರೆ. ಇದರಲ್ಲಿ ಪ್ರತಿವಾದಿಗಳು ಹೆಚ್ಚಿನದಾಗಿ ಅವರಲ್ಲಿನ ಶ್ರವಣ ನ್ಯೂನ್ಯತೆಯ ಡೆಸಿಬಲ್ ಪ್ರಮಾಣ ಶೇ. ೯೦ ಕ್ಕಿಂತ ಹೆಚ್ಚಿರುವವರ ಪ್ರಮಾಣವಿದೆ. ಇದರಲ್ಲಿ ಶೇ. ೫೦ ರಷ್ಟು ಅಂತಹ ಮಕ್ಕಳಿದ್ದಾರೆ ಉಳಿದಂತೆ ಶೇ ೪೦, ೬ ಮತ್ತು ೪ ರಷ್ಟು ಪ್ರಮಾಣದಲ್ಲಿ ಪ್ರತಿವಾದಿಗಳು ಕಂಡುಬರುತ್ತಾರೆ.

ಕೋಷ್ಟಕ ಸಂಖ್ಯೆ - ೦೫ : ಪ್ರತಿವಾದಿಗಳ ಶ್ರವಣ ನ್ಯೂನ್ಯತೆ ಸ್ಥಿತಿಗೆ ಸಂಬಂಧಿಸಿದ ಮನೋವಿಭಾಗ
ಅ ಕೋಷ್ಟಕ
ಕ್ರ. ಸಂ     ಮನೋಭಾವ    ಪ್ರತಿವಾದಿಗಳ ಪ್ರಾತಿನಿಧ್ಯ    ಸಂಖ್ಯಾವಾರು    ಶೇಕಡಾವಾರು
೦೧. ಕೀಳರಿಮೆ ಇದೆ ೧೮ . ೩೬%
೦೨     ಕೀಳರಿಮೆ ಇಲ್ಲ . ೩೨ . ೬೪%

ಅ ಕೋಷ್ಟಕ : ಕೀಳರಿಮೆ ಇಲ್ಲದುದರ ಕಾರಣಗಳು:
ನಮ್ಮ ಶ್ರವಣ ನ್ಯೂನ್ಯತೆಗೆ ವೈಯಕ್ತಿಕ ಹೊಣೆಗಾರರಲ್ಲ
ಸಮಾಜವು ನಮ್ಮೊಂದಿಗೆ ಭಿನ್ನವಾಗಿ ವರ್ತಿಸುತ್ತಿದೆ.
ನಮ್ಮ ಜವಾಬ್ದಾರಿ-ಹೊಣೆಗಾರಿಕೆಗಳನ್ನು ಶ್ರವಣ ನ್ಯೂನ್ಯತೆಯವರೊಂದಿಗೆ ಸರಿಸಮನಾಗಿ ನಿಭಾಯಿಸಲಾಗುತ್ತಿದೆ.
ನಮ್ಮ ಶ್ರವಣ ನ್ಯೂನ್ಯತೆಯ ಪರಿಣಾಮಗಳನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸಲಾಗಿದೆ.
ನಮ್ಮ ಸಾಧನೆಗಳು ಕೀಳರಿಮೆಯ ಮನೋಭಾವದಿಂದ ದೂರವಿರಲು ಸಾಧ್ಯವಾಗಿದೆ.
ಮಕ್ಕಳ ಎಲ್ಲಾ ಯಶಸ್ಸಿನ ಹಿಂದೆ ಪ್ರೇರಣೆಯಾಗಿ ಕಾರ್ಯ ನಿರ್ವಹಿಸುವ ಪ್ರಮುಖವಾದ ಅಂಶ ಆಶಾಭಾವನೆ ತಾನು ಹೊಂದಿರುವ ಸಮಸ್ಯೆಯಿಂದ ಮಕ್ಕಳು ಹೊರಬರುವ ಸಮಸ್ಯೆಯ ಬಗೆಗಿನ ಕೀಳರಿಮೆಯಿಂದ ಹೊರಬರುವುದೇ ಆಗಿರುತ್ತದೆ. ಈ ವಿಚಾರಗಳು ಅಂಗವಿಕಲರ ಕಲ್ಯಾಣ ಮತ್ತು ಪುನರ್ವಸತಿಯ ನಿಟ್ಟಿನಲ್ಲಿ ಹೆಚ್ಚುಅನ್ವಯಿಕವಾದವುಗಳಾಗಿವೆ ತಮ್ಮ ಶ್ರವಣ ನ್ಯೂನ್ಯತೆಯ ಬಗ್ಗೆ ಶೇ. ೬೪ ಪ್ರತಿವಾದಿಗಳು ಯಾವುದೇ ಕೀಳರಿಮೆಯನ್ನು ಹೊಂದಿಲ್ಲದಿರುವುದು ಒಂದು ಆಶಾದಾಯಕ ಅಂಶವಾಗಿದೆ.
 ತಮ್ಮ ಆಶಾದಾಯಕ ಮನೋಭಾವನೆಗೆ ಪ್ರತಿವಾದಿಗಳು ನೀಡಿರುವ ಕಾರಣಗಳನ್ನು ಕೋಷ್ಟಕ ಅ ಕೋಷ್ಟಕದಲ್ಲಿ ದಾಖಲಿಸಲಾಗಿದೆ. ಹಾಗೇಯೇ ಶೇ. ೩೬ ಪ್ರತಿವಾದಿಗಳು ಶ್ರವಣಾ ನ್ಯೂನ್ಯತೆಯ ಬಗ್ಗೆ ಕೀಳರಿಮೆಯನ್ನು ಹೊಂದಿದ್ದು ತಮ್ಮ ಮನೋಭಾವನೆಗೆ ಗುರ್ತಿಸಿರುವ ಅಂಶಗಳನ್ನು ಕೋಷ್ಟಕದ ಆ ದಲ್ಲಿ ನೀಡಲಾಗಿದೆ.

ಕೋಷ್ಟಕ ಸಂಖ್ಯೆ-೦೬ : ಪ್ರತಿವಾದಿಗಳು ಕನಸು ಕಟ್ಟಿಕೊಂಡಿರುವ ಸುಂದರ ಬದುಕು.
ಗುಣಮಟ್ಟದ ಶಿಕ್ಷಣ ವ್ಯಕ್ತಿಯ ಮನೋಭಾವನೆ, ಆತ್ಮಸೆರ್ಯ ಹಾಗೂ ಅವಕಾಶಗಳನ್ನು ಪೂರೈಸುವ ಒಂದು ಸಾಧನ, ವಿದ್ಯಾರ್ಜನೆಯ ಮೂಲ ಉದ್ದೇಶ ಜ್ಞಾನಾರ್ಜನೆ, ಜಾಗತಿಕ ವಿದ್ಯಮಾನಗಳಾದ ಉದಾರೀಕರಣ ಮತ್ತು ಆರ್ಥಿಕತೆ ಹಾಗೂ ಜಾಗತೀಕರಣದ ಸಂದರ್ಭದಲ್ಲಿ ಶಿಕ್ಷಣವು ಜೀವನದ ಆಗು-ಹೋಗುಗಳನ್ನು ನಿರ್ಧರಿಸುವ ಅಂಶವಾಗಿ ಪರಿಗಣಿಸಲ್ಪಟ್ಟಿದೆ, ಶ್ರವಣ ನ್ಯೂನ್ಯತೆಯ ಹೊರತಾಗಿಯೂ ಶಿಕ್ಷಣವನ್ನು ಪೂರೈಸಿಕೊಳ್ಳುವ ಗುರಿಯತ್ತ ಯಶಸ್ವಿಯಾಗಿ ಸಾಗಿರುವ ಪ್ರತಿವಾದಿಗಳಲ್ಲಿ ಉತ್ತಮ ಆಶಾಭಾವನೆಯೂ ಇದೆ. ಅವರ ಆಶಾಭಾವನೆಯಂತೆ ಹೆತ್ತವರೊಡಗೂಡಿ ಜೀವನ ನಡೆಸುವುದಕ್ಕೆ ಪ್ರತಿವಾದಿಯೂ ಶೇ. ೬೪ ರಷ್ಟು ಇಚ್ಚೆವುಳ್ಳವನಾಗಿದ್ದಾನೆ. ಇನ್ನು ಉಳಿದಂತೆ ಅಂಗವಿಕಲರ ಪುನರ್‌ವಸತಿ ಸ್ಥಾಪನೆಗೆ ಶೇ. ೧೨ ರಷ್ಟು ಹಾಗೂ ಸಮಾಜಸೇವಾ ಕಾರ್ಯದಲ್ಲಿ ಶೇ. ೨೪ ರಷ್ಟು ತಮ್ಮ ಬದುಕನ್ನು ಸುಂದರಗೊಳಿಸುತ್ತದೆ ಎಂದು ಆಶಿಸಿದ್ದಾರೆ.

ಕೋಷ್ಟಕ ಸಂಖ್ಯೆ -೦೭: ಕುಟುಂಬದಲ್ಲಿನ ನಿರ್ಧಾರಕ್ಕೆ ಅವಕಾಶ, ಸಮುದಾಯದಲ್ಲಿನ ಸಹಕಾರ, ಮತ್ತು ವಾಸ್ತವ್ಯದ ಸ್ಥಳ
ಅಕೋಷ್ಟಕ ಕುಟುಂಬದಲ್ಲಿ ನಿರ್ಧಾರ ತೆಗೆದುಕೊಳ್ಳಲು ಅವಕಾಶ
ಪ್ರತಿಯೊಂದು ಕುಟುಂದಲ್ಲಿಯೂ ತಂದೆಯದೇ ವೇದ ವಾಕ್ಯವಾಗಿರುತ್ತದೆ. ಇದರಿಂದ ತಂದೆಯ ಮಾತಿನಂತೆ ಮನೆಯವರು ನಡೆದುಕೊಳ್ಳಬೇಕಾಗುತ್ತದೆ. ಅನಂತರದಲ್ಲಿ ತಾಯಿ ಹಾಗೂ ಮನೆಯ ಇನ್ನಿತರ ಹಿರಿಯ ಸದಸ್ಯರ ಮಾತನ್ನು ಮನೆಯವರೆಲ್ಲ ಕೇಳಬೇಕಾಗುತ್ತದೆ. ಆದರೆ ಇಲ್ಲಿ ಮಕ್ಕಳ ನಿರ್ಧಾರಕ್ಕೆ ಕುಟುಂಬದಲ್ಲಿ ಅವಕಾಶ ಕಲ್ಪಿಸಲಾಗಿದೆ. ಈ ಅಧ್ಯಯನದಲ್ಲಿ ಪ್ರತಿವಾದಿಯು ತಮ್ಮ ನಿರ್ಧಾರಕ್ಕೆ ಸಲ್ಪಮಟ್ಟಿಗಾದರು ಅವಕಾಶ ಕಲ್ಪಿಸುತ್ತಾರೆ ಎಂದು ಶೇ. ೭೨ ರಷ್ಟು ಗುರ್ತಿಸಿದರೆ ಇನ್ನುಳಿದ ಕುಟುಂಬಗಳಲ್ಲಿ ಶೇ. ೨೬ ರಷ್ಟು ಮಕ್ಕಳಿಗೆ ನಿರ್ಧಾರಕ್ಕೆ ಅವಕಾಶ ಕಲ್ಪಿಸಿಲ್ಲ ಎಂಬುದನ್ನು ತಿಳಿಯಬಹುದು.

ಆಕೋಷ್ಟಕ ಸಮುದಾಯದಲ್ಲಿನ ಸಹಕಾರ
ಅದೇ ರೀತಿಯಾಗಿ ಶ್ರವಣ ನ್ಯೂನ್ಯತೆಯಿರುವಂತಹ ಮಕ್ಕಳ ಸಹಕಾರಕ್ಕೆ ಸಮುದಾಯದ ಜನತೆ ಶೇ. ೭೦ ರಷ್ಟು ಸಹಕರಿಸುತ್ತಾರೆ ಹಾಗೂ ಶೇ. ೩೦ ರಷ್ಟು ಸಮುದಾಯದ ಜನತೆ ತಮ್ಮಂತಹ ಮಕ್ಕಳಿಗೆ ಸಹಕಾರ ನೀಡುವುದಿಲ್ಲಎಂದು ಹೇಳಿದ್ದಾರೆ.

ಇ ಕೋಷ್ಟಕ ವಾಸ್ತವ್ಯವಿರುವ ಸ್ಥಳ
ಮಕ್ಕಳು ತಮ್ಮ ತಮ್ಮ ತಂದೆ ತಾಯಿಯರ ಆಶ್ರಯದಲ್ಲಿದ್ದು ಅವರ ಸಲಹೆಯಂತೆ ಬೆಳೆಯುತ್ತಾರೆ, ಹೆತ್ತವರೊಂದಿಗೆ ಇರುವಂತಹ ಮಕ್ಕಳ ಪ್ರಮಾಣ ಶೇ. ೪೮ ರಷ್ಟು ಹಾಗೂ ಸಂಬಂಧಿಕರೊಂದಿಗೆ, ಬಾಡಿಗೆ ಕೊಠಡಿಯಲ್ಲಿ ಇರುವವರ ಪ್ರಮಾಣ ತಲಾ ಶೇ. ೧ ರಷ್ಟು ಇದೆ.

ಕೋಷ್ಟಕ-೦೮: ಶ್ರವಣ ನ್ಯೂನ್ಯತೆ ಹುಟ್ಟಿನಿಂದಲೂ ಇರುವ ಸಾಧ್ಯತೆಯ ಪ್ರಮಾಣ ಹಾಗೂ ಶಿಕ್ಷಕ ಸಹಕಾರದ ರೂಪ
ಅಕೋಷ್ಟಕ ಶ್ರವಣ ನ್ಯೂನ್ಯತೆ ಹುಟ್ಟಿನಿಂದ ಇರುವ ಸಾಧ್ಯತೆ
ವಿದ್ಯಾರ್ಥಿಗಳಲ್ಲಿ ಶ್ರವಣದೋಷದ ಸಮಸ್ಯೆಯು ಹುಟ್ಟಿದಾಗಿನಿಂದಲೂ ಇತ್ತು ಎಂಬುದಕ್ಕೆ ಪ್ರತಿವಾದಿಯು ಶೇ. ೩೮ ರಷ್ಟು ಒಪ್ಪಿಗೆ ನೀಡಿದರೆ ಶ್ರವಣದೋಷದ ಸಮಸ್ಯೆಯು ಹುಟ್ಟಿದಾಗಿನಿಂದಲು ಇರಲಿಲ್ಲ ಇದು ವಿವಿಧ ರೀತಿಯ ಕಾರಣಗಳಿಂದ ಉಂಟಾಯಿತು ಎಂದು ಶೇ. ೬೪ ರಷ್ಟು ಪ್ರತಿವಾದಿಯು ತಿಳಿಸಿದ್ದಾನೆ.

ಆಕೋಷ್ಟಕ ಶ್ರವಣ ನ್ಯೂನ್ಯತೆ ಅನಂತರದಲ್ಲಿ ಹೇಗೆ ಉಂಟಾಯಿತು
ಪ್ರತಿವಾದಿಗೆ ಶ್ರವಣದೋಷ ಎಂಬುದು ಅಪಘಾತದಿಂದ ಉಂಟಾಯಿತು ಎಂದು, ಶೇ. ೪ ರಷ್ಟು ಪ್ರತಿವಾದಿಯು ತಿಳಿಸಿದ್ದು, ಧೀರ್ಘಾಕಾಲಿನ ಅನಾರೋಗ್ಯದಿಂದ ಉಂಟಾಗಿದೆ ಎಂದು, ಶೇ. ೨೪ ರಷ್ಟು ಶಬ್ಧದಿಂದ ಉಂಟಾಗಿದೆ ಎಂದು ಮತ್ತು ಶೇ. ೨೦ ರಷ್ಟು ಇತರೆ ಕಾರಣಗಳಿಂದ ಹಾಗೂ ಶೇ. ೨೮ ರಷ್ಟು ಶ್ರವಣದೋಷಕ್ಕೆ ಕಾರಣವಾಯಿತು ಎಂದು ಪ್ರತಿವಾದಿಯು ತಿಳಿಯಪಡಿಸಿದ್ದಾನೆ.

ಇಕೋಷ್ಟಕ ಶಿಕ್ಷಕರ ಸಹಕಾರದ ರೂಪ
ಇತಂಹ ಶ್ರವಣದೋಷವುಳ್ಳ ಮಕ್ಕಳಿಗೆ ಎಸ್. ಆರ್. ಚಂದ್ರಶೇಖರ್ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ಶಿಕ್ಷಕರ ಸಹಕಾರದ ರೂಪದಲ್ಲಿ ವಿಶೇಷ ಕಾಳಜಿಗೆ ಪ್ರತಿವಾದಿಯು ಶೆ. ೫೮ ರಷ್ಟು ಮೆಚ್ಚಿಗೆ ವ್ಯಕ್ತಪಡಿಸಿದರೆ ಉಳಿದಂತೆ ಪಠ್ಯಪುಸ್ತಕ ಒದಗಿಸುವಿಕೆ ಶೇ. ೨೨ ರಷ್ಟು ಅಪ್ತಸಮಾಲೋಚನೆ ಮತ್ತು ಸಂವಾದಕ್ಕೆ ಅವಕಾಶ ಶೇ. ೬ ರಷ್ಟು ಹಾಗೂ ಇತರೆ ಸಹಕಾರದ ರೂಪಕ್ಕೆ ಶೇ. ತಲಾ ೧ ರಂತೆ ಸೂಚಿಸಿದ್ದು ಪ್ರತಿವಾದಿಯು ಶಿಕ್ಷಕರು ಪ್ರತಿಯೊಂದು ಹಂತದಲ್ಲಿಯೂ ತೋರುವಂತಹ ಕಾಳಜಿಯ ಬಗ್ಗೆ ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.

ಕೋಷ್ಟಕ ಸಂಖ್ಯೆ-೦೯ ಸಂಸ್ಥೆಯ ಗುಣಗಳು ಮತ್ತು ಕಲಿಕೆಯ ವಿಧಾನ
ಅ ಕೋಷ್ಟಕ -ಸಂಸ್ಥೆಯ ಸಹಕಾರದ ರೂಪ
ಎಸ್. ಅರ್. ಚಂದ್ರಶೇಖರ್ ವಾಕ್ ಮತ್ತು ಶ್ರವಣ ಸಂಸ್ಥೆ ವಿದ್ಯಾರ್ಥಿಗಳ ಸಮಸ್ಯೆಯನ್ನು ಬಗೆಹರಿಸುವಲ್ಲಿ ಹಾಗೂ ಪರಿಹಾರವನ್ನು ಒದಗಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ. ಇಲ್ಲಿ ಅಧ್ಯಯನ ಮಾಡುವಂತಹ ವಿದ್ಯಾರ್ಥಿಗಳು ಶೇ. ೯೨ ರಷ್ಟು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಇನ್ನುಳಿದಂತೆ ಸಂಸ್ಥೆಯ ಸಹಕಾರಕ್ಕೆ ಮಕ್ಕಳು ಯಾವುದೇ ಮೆಚ್ಚುಗೆ ಒದಗಿಸಿಲ್ಲ ಇದಕ್ಕೆ ಸಂಬಂಧಿಸಿದಂತೆ ಪ್ರತಿವಾಧಿಗಳು ಶೇ. ೮ ರಷ್ಟು ನಿಸ್ಸಾಹಾಯಕರಾಗಿ ತಿಳಿಸಿದ್ದಾರೆ. .

ಆಕೋಷ್ಟಕ ಸಂಸ್ಥೆಯ ಕಾರ್ಯವೈಖರಿಯಿಂದ ಮಕ್ಕಳಲ್ಲಿ ಅದ ಗುಣಗಳು
ಸಂಸ್ಥೆಯಲ್ಲಿನ ಕಾರ್ಯವೈಖರಿಯಿಂದ ಮಕ್ಕಳು ಉತ್ತಮ ರೀತಿಯ ಗುಣಗಳನ್ನು ಕಂಡುಕೊಂಡಿದ್ದಾರೆ ಇದರಲ್ಲಿ ಹೆಚ್ಚಿನದಾಗಿ ಸಹಾಯ ಮಾಡುವ ಗುಣವನ್ನು ಮಕ್ಕಳು ಮೈಗೊಡಿಸಿಕೊಂಡಿದ್ದಾರೆ ಎಂಬುದನ್ನು ಅರಿಯಬಹುದು, ಇದಕ್ಕೆ ಸಂಬಂಧಿಸಿದಂತೆ ಪ್ರತಿವಾದಿಯು ಶೇ. ೩೮ ರಷ್ಟು ಆಸಕ್ತಿ ವಹಿಸಿದ್ದಾರೆ. ಉಳಿದಂತೆ ನಾಯಕತ್ವ ಗುಣ ಶೇ. ೧೮ ರಷ್ಟು, ಸಂವಹನದ ಕೌಶಲ್ಯ ಶೇ. ೧೦ ರಷ್ಟು ಹಾಗೂ ಈ ಮೇಲಿನ ಎಲ್ಲಾ ಗುಣಗಳನ್ನು ಅಳವಡಿಸಿಕೊಂಡಿದ್ದೇನೆ ಎಂಬುದಕ್ಕೆ ಶೇ. ೩೪ ರಷ್ಟು ಪ್ರತಿವಾದಿಯು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾನೆ.

ಇಕೋಷ್ಟಕ ಸಂವಹನದ ಕಲಿಕೆಯ ವಿಧಾನ
ಭಾಷಾ ಸಂವಹನದ ಕಲಿಕಾ ವಿಧಾನದಲ್ಲಿ ವಿದ್ಯಾರ್ಥಿಗಳು ಸಂವಹನದ ವಿಧಾನದಿಂದ ಕಲಿಕೆಯ ಪ್ರಮಾಣ ಹೆಚ್ಚಿದೆ ಎಂದು ಶೇ. ೬೨ ರಷ್ಟು ಆಸಕ್ತಿಯನ್ನು ತೋರಿಸಿದ್ದಾರೆ , ಇನ್ನುಳಿದಂತೆ ಮೌಖಿಕ ವಿಧಾನಕ್ಕೆ ಶೇ. ೬೨ ರಷ್ಟು , ಲಿಖಿತ ವಿಧಾನಕ್ಕೆ ಶೇ. ೩೬ ರಷ್ಟು ಪ್ರತಿವಾದಿಯು ಪ್ರತಿಕ್ರಿಯಿಸಿದ್ದಾರೆ .

ಕೋಷ್ಟಕ ಸಂಖ್ಯೆ - ೧೦: ಪ್ರತಿಭೆ ಅನಾವರಣ, ಓದುವ ಆಸಕ್ತಿ ಮತ್ತು ಸಂಸ್ಥೆಯಿಂದ ವಿದ್ಯಾರ್ಥಿಗಳಲ್ಲಿ ಆದಂತಹ ಬದಲಾವಣೆಗಳು
ಅ ಕೋಷ್ಟಕ ಸಂಸ್ಥೆಯು ವಿದ್ಯಾರ್ಥಿಗಳಲ್ಲಿನ ಪ್ರತಿಭೆಯ ಅನಾವರಣ
ಎಸ್. ಆರ್. ಚಂದ್ರಶೇಖರ್ ವಾಕ್ ಮತ್ತು ಶ್ರವಣ ಸಂಸ್ಥೆ ಪ್ರತಿಭೆಯ ಅನಾವರಣಕ್ಕೆ ತುಂಬಾ ಸಹಾಯಕವಾಗಿದೆ ಎಂದು ಮಕ್ಕಳು ತಿಳಿಸಿದ್ದು, ಇದರಲ್ಲಿ ಹೆಚ್ಚಿನದಾಗಿ ಸಂಸ್ಥೆಯಿಂದ ಪ್ರತಿಭೆಯ ಅನಾವರಣಕ್ಕೆ ಹೆಚ್ಚು ಸಹಕಾರಿಯಾಗಿದೆ. ಮುಕ್ತ ಅವಕಾಶ, ಮಕ್ಕಳ ಹಿತಾಶಕ್ತಿಗೆ ಶೇ. ೪೦ ರಷ್ಟು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಅನಂತರದಲ್ಲಿ ಅಭಿಪ್ರಾಯ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಶೇ. ೧೧, ಪಠ್ಯೇತರ ಚಟುವಟಿಕೆಗಳಿಗೆ ಶೇ. ೫ ರಷ್ಟು ಹಾಗೂ ಇವುಗಳೆಲ್ಲದರ ಮೇಲೆ ಶೇ. ೨೮ ರಷ್ಟು ಆಸಕ್ತಿ ವಹಿಸಿದ್ದಾರೆ.

ಆಕೋಷ್ಟಕ ಶ್ರವಣದೋಷ ಸಮಸ್ಯೆಯಿಂದಲು ಓದುವ ಆಸಕ್ತಿ
ಶ್ರವಣದೋಷದ ಸಮಸ್ಯೆಯಿದ್ದರು ಸಹ ಈ ಮಕ್ಕಳು ಓದುವ ಆಸಕ್ತಿಯನ್ನು ಕಳೆದುಕೊಂಡಿಲ್ಲ, ಇದರಲ್ಲಿ ಓದುವ ಆಸಕ್ತಿಯ ಪ್ರಮಾಣ ವಿದ್ಯಾರ್ಥಿಗಳಲ್ಲಿ ಶೇ. ೪೬ ರಷ್ಟು ಇದ್ದು, ಉಳಿದಂತೆ ಓದುವ ಆಸಕ್ತಿಯಿಲ್ಲದಿರುವವರ ಪ್ರಮಾಣ ಶೇ. ೮ ರಷ್ಟು ಪ್ರತಿವಾದಿಯು ಗುರ್ತಿಸಿದ್ದಾನೆ.

 ಇ ಕೋಷ್ಟಕ ಸಂಸ್ಥೆಯಿಂದ ಮಕ್ಕಳಲ್ಲಿ ಬದಲಾವಣೆ
ಎಸ್. ಆರ್. ಚಂದ್ರಶೇಖರ್ ವಾಕ್ ಮತ್ತು ಶ್ರವಣ ಸಂಸ್ಥೆಯಿಂದ ವಿದ್ಯಾರ್ಥಿಗಳಲ್ಲಿ ಯಾವ ರೀತಿಯ ಬದಲಾವಣೆಗಳಾಗಿವೆ ಎಂಬುದನ್ನು ವಿದ್ಯಾರ್ಥಿಗಳು ಎಲ್ಲಾ ವಿಷಯದಲ್ಲಿಯೂ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಇದರಲ್ಲಿ ಸಂವಹನದಲ್ಲಿ ಬದಲಾವಣೆ ಶೇ. ೧೨, ವರ್ತನೆಯಲ್ಲಿ ಸುಧಾರಣೆ ಶೇ. ೧೫ ರಷ್ಟು ಮತ್ತು ಕ್ರಿಯಾಶೀಲತೆಯಲ್ಲಿ ಶೇ ೬ರಷ್ಟು ಆದರೆ ಎಲ್ಲಾ ವಿಷಯಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಿನದಾಗಿ ಶೇ. ೫೨ ರಷ್ಟು ಮೆಚ್ಚಿಗೆಯನ್ನು ವ್ಯಕ್ತಪಡಿಸಿದ್ದಾರೆ.

ಕೋಷ್ಟಕ ಸಂಖ್ಯೆ-೧೧
ಸಹಪಾಠಿಗಳ ಸಹಕಾರ, ಉಚಿತಶಿಕ್ಷಣ, ಮತ್ತು ಶ್ರವಣ ನ್ಯೂನ್ಯತೆಯ ಸಮಸ್ಯೆಯಿಂದಲು ಇತರೆ ಶಬ್ಧಗಳಿಗೆ ಪ್ರತಿಕ್ರಿಯೆ ಕಷ್ಟವಾಗಿದೆಯೇ.
ಅಕೋಷ್ಟಕ ಸಹಪಾಠಿಗಳ ಸಹಕಾರದ ಸ್ವರೂಪ
ಶಾಲೆಯಲ್ಲಿ ಸಹಪಾಠಿಗಳು ವಿದ್ಯಾರ್ಥಿಗಳ ಸಮೂಹದಲ್ಲಿ ಯಾವ ರೀತಿಯಲ್ಲಿ ಸಹಕರಿಸುತ್ತಾರೆ ಎಂಬುದಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಸ್ನೇಹಿತರು ಪ್ರತಿಯೊಂದು ಹಂತದಲ್ಲಿಯು ಸಹಾಯದ ಮಾನೋಭಾವನೆಯನ್ನು ಹೊಂದಿದ್ದು, ಇದರಲ್ಲಿ ಹೆಚ್ಚಿನದಾಗಿ ಎಲ್ಲರೊಂದಿಗೆ ವಿಶೇಷ ಕಾಳಜಿಯನ್ನು ಶೇ. ೭೨ ರಷ್ಟು ಆಸಕ್ತಿಯನ್ನು ಹೊಂದಿರುವರಾಗಿರುತ್ತಾರೆ. ಉಳಿದಂತೆ ಅಧ್ಯಯನಕೆ ಶೇ. ೨೪, ಕೇಳಿಸಿಕೊಳ್ಳುವುದಕ್ಕೆ ನೆರವು ತಲಾ ಶೇ. ೧ ಇತರೆ ಶೇ. ೧ ರಷ್ಟು ಸಹಪಾಠಿಗಳು ವಿವಿಧ ರೀತಿಯಲ್ಲಿ ಸಹಕರಿಸುವರು ಎಂದು ಹೇಳಿದ್ದಾರೆ.

ಆಕೋಷ್ಟಕ ಶ್ರವಣ ನ್ಯೂನ್ಯತೆ ವಿದ್ಯಾರ್ಥಿಗಳಿಗೆ ಎಷ್ಟನೇ ವಯಸ್ಸಿಗೆ ಉಚಿತ ಶಿಕ್ಷಣ
ಶ್ರವಣ ನ್ಯೂನ್ಯತೆವುಳ್ಳ ವಿದ್ಯಾರ್ಥಿಗಳಿಗೆ ಎಲ್ಲಿಯವರೆಗೆ ಶಿಕ್ಷಣವನ್ನು ನೀಡುತ್ತಾರೆ ಎಂಬುದರ ಬಗ್ಗೆ ಮಕ್ಕಳಿಗೆ ಅರಿವಿದ್ದು ಪ್ರತಿವಾದಿಯು ಇದಕ್ಕೆ ಸಂಬಂಧಿಸಿದಂತೆ ಶೇ. ೫೨ ರಷ್ಟು ಗುರ್ತಿಸಿದ್ದು ಉಳಿದಂತೆ ೨೧ ವರ್ಷಕ್ಕೆ ಶೇ. ೩೪, ೨೫ ವರ್ಷಕ್ಕೆ ಶೇ. ೮ ಅತೀ ಹೆಚ್ಚಿನದಾಗಿ ೧೮ ವರ್ಷದವರೆಗೆ ಶಿಕ್ಷಣವನ್ನು ನೀಡುತ್ತಾರೆ ಎಂಬುದಕ್ಕೆ ಪ್ರತಿವಾದಿಯು ಶೇ. ೫೨ ರಷ್ಟು ಗುರ್ತಿಸಿದ್ದಾರೆ. .

ಇ ಕೋಷ್ಟಕ ಶಬ್ಧಗಳಿಗೆ ಪ್ರತಿಕ್ರಿಯಿಸಲು ಕಷ್ಟವಾಗುವಿಕೆ
ಶ್ರವಣ ನ್ಯೂನ್ಯತೆಯುಳ್ಳ ಮಕ್ಕಳು ಕೆಲವು ಶಬ್ಧಗಳಿಗೆ ಪ್ರತಿಕ್ರಿಯಿಸಲು ಕಷ್ಟಪಡುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ಪ್ರತಿವಾದಿಯು ಶೆ. ೮೮ ರಷ್ಟು ಪ್ರತಿಕ್ರಿಯಿಸಿದ್ದು ಇತರೆ ವಿದ್ಯಾರ್ಥಿಗಳು ಪ್ರತಿಕ್ರಿಯಿಸಲು ಸಾಧ್ಯತೆಯಿದೆ ಎಂದು ಶೇ. ೧೨ ರಷ್ಟು ವಿದ್ಯಾರ್ಥಿಗಳು ತಿಳಿಸಿದ್ದಾರೆ.

ಕೋಷ್ಟಕ ಸಂಖ್ಯೆ-೧೨: ಉದ್ಯೋಗದಲ್ಲಿನ ಮೀಸಲಾತಿ, ಉಚಿತ ಬಸ್ ವ್ಯವಸ್ಥೆ ಮತ್ತು ಕ್ರೀಡಾಕೂಟಗಳಲ್ಲಿ ಭಾಗವಹಿಸುವಿಕೆಗೆ ಸಂಬಂಧಿಸಿದಂತೆ
ಅ ಕೋಷ್ಟಕ ಶ್ರವಣ ನ್ಯೂನ್ಯತೆ ವಿದ್ಯಾರ್ಥಿಗಳಿಗೆ ಉದ್ಯೋಗದಲ್ಲಿನ ಮೀಸಲಾತಿ ಪ್ರಮಾಣ
ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರ ಶ್ರವಣ ನ್ಯೂನ್ಯತೆವುಳ್ಳವರಿಗೆ ಉದ್ಯೋಗದಲ್ಲಿ ಶೇ. ೩ ರಷ್ಟು ಮೀಸಲಾತಿಯನ್ನು ನೀಡಿದೆ. ಇದಕ್ಕೆ ಸಂಬಂಧಿಸಿದಂತೆ ಎಸ್. ಆರ್. ಚಂದ್ರಶೇಖರ್ ವಾಕ್ ಮತ್ತು ಶ್ರವಣ ಸಂಸ್ಥೆಯ ಮಕ್ಕಳು ಹೆಚ್ಚಿನದ್ದಾಗಿ ಶೇ. ೬೨ ರಷ್ಟು ಗುರ್ತಿಸಿದ್ದಾರೆ. ಇದರಿಂದ ಹದಿಹರೆಯ ಮಕ್ಕಳಿಗೆ ಮೀಸಲಾತಿಯ ಪ್ರಮಾಣ ಅರಿವಿದೆ ಎಂದು ತಿಳಿಯಬಹುದು.

ಆಕೋಷ್ಟಕ ರಾಜ್ಯಸರ್ಕಾರ ಎಷ್ಟು ಕಿ. ಮೀ ವರೆಗೆ ಉಚಿತ ಬಸ್‌ಪಾಸ್ ವ್ಯವಸ್ಥೆ ಕಲ್ಪಿಸಿದೆ
ನಮ್ಮ ಕರ್ನಾಟಕ ಸರ್ಕಾರ ಎಲ್ಲಾ ಶ್ರವಣ ನ್ಯೂನ್ಯತೆವುಳ್ಳ ಮಕ್ಕಳಿಗೆ ೧೦೦ ಕಿ. ಮೀ ವರೆಗೆ ಉಚಿತ ಬಸ್‌ಪಾಸ್ ವ್ಯವಸ್ಥೆಯನ್ನು ಕಲ್ಪಿಸಿದೆ. ಇದರಿಂದ ಬಹಳಷ್ಟು ಮಕ್ಕಳಿಗೆ ತುಂಬ ಸಹಕಾರಿಯಾಗಿದೆ. ಇದಕ್ಕೆ ಪ್ರತಿವಾದಿಯು ಶೇ. ೬೬ ರಷ್ಟು ಗುರ್ತಿಸಿದ್ದು ಇದರಲ್ಲಿ ಪ್ರತಿವಾದಿಯು ಇದರ ಸದೂಪಯೋಗವನ್ನು ಪಡೆಯುತ್ತಿದ್ದಾನೆ ಎಂಬುದನ್ನು ಅರಿಯಬಹುದು.

ಕೋಷ್ಟಕ ಸಂಖ್ಯೆ-೧೪ : ಸ್ವಯಂ ಸೇವ ಸಂಸ್ಥೆಂii ನೆರವು, ತರಗತಿಯಲ್ಲಿನ ಕಲಿಕೆಯ ನಿಧಾನಗತಿಗೆ ಕಾರಣಗಳು.
ಅಕೋಷ್ಟಕ ವಿದ್ಯಾಭ್ಯಾಸದ ಸಲುವಾಗಿ ಸ್ವಯಂ ಸೇವ ಸಂಸ್ಥೆಯ ನೆರವು
ಎಸ್. ಆರ್. ಚಂದ್ರಶೇಖರ್ ವಾಕ್ ಮತ್ತು ಶ್ರವಣ ಸಂಸ್ಥೆಯೂ ಒಂದು ಸರ್ಕಾರೇತರ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದು ನಮ್ಮಂತಹ ಶ್ರವಣ ನ್ಯೂನ್ಯತೆವುಳ್ಳ ಮಕ್ಕಳಿಗೆ ಸ್ಥಳೀಯ ಪ್ರಾಧಿಕಾರಗಳು ಮತ್ತು ವಿದೇಶಿ ಉದ್ಯಮ ಸಂಸ್ಥೆಗಳು ಸಹಾಯ ಧನವನ್ನು ನೀಡಿ ಉಚಿತ ಪಠ್ಯಪುಸ್ತಕ, ಹಾಲು, ಊಟದ ವ್ಯವಸ್ಥೆಯನ್ನು ಕಲ್ಪಿಸಿದೆ ಎಂದು ಹೆಚ್ಚಿನದಾಗಿ ಪ್ರತಿವಾದಿಯು ಶೇ. ೯೪ ರಷ್ಟು ಗುರ್ತಿಸಿದ್ದು ಇನ್ನುಳಿದಂತೆ ಸಹಾಯವಿಲ್ಲ ಎಂಬುದಕ್ಕೆ ಪ್ರತಿವಾದಿಯು ಶೇ. ೬ ರಷ್ಟು ಗುರ್ತಿಸಿದ್ದಾರೆ.

ಆ ಕೋಷ್ಟಕ ತರಗತಿಯಲ್ಲಿ ನಿಧಾನವಾಗಿ ಉತ್ತರಿಸಲು ಕಾರಣ
ಶ್ರವಣ ನ್ಯೂನ್ಯತೆವುಳ್ಳ ಮಕ್ಕಳು ತರಗತಿಯಲ್ಲಿ ವಿವಿಧ ರೀತಿಯಲ್ಲಿ ಕಲಿಕೆಯ ಸಮಸ್ಯೆಯನ್ನು ಎದುರಿಸುತ್ತಾರೆ. ಇದನ್ನು ಈ ಮಕ್ಕಳು ಕೇಳಿಸುವಿಕೆಯಲ್ಲಿ ಅಸಹಾಯಕತೆ ಮತ್ತು ಸಾಧರಣತೆ ಎಂಬುದನ್ನು ಪ್ರತಿಕ್ರಿಯಿಸಿದ್ದು ಇದರಲ್ಲಿ ಅಸಹಾಯಕತೆಗೆ ಶೇ. ೪೪ ರಷ್ಟು ಮತ್ತು ಸಾಧಾರಣತೆಗೆ ಶೇ. ೨೨ ರಷ್ಟು ತಿಳಿಸಿದ್ದು ಉಳಿದಂತೆ ಕಲ್ಪನೆಯಲ್ಲಿ ಮುಳುಗುವಿಕೆ ಮತ್ತು ವಿವಿಧ ಕಾರಣಗಳನ್ನು ಸೂಚಿಸಿದ್ದಾರೆ.

ಕೋಷ್ಟಕ ಸಂಖ್ಯೆ-೧೫: ಅಂಗವಿಕಲತೆ ಕಾಯ್ದೆಯ ಬಗೆಗಿನ ಅರಿವು ಮತ್ತು ಮೀಸಲಾತಿ.
ಅ ಕೋಷ್ಟಕ ಅಂಗವಿಕಲತೆಯ ಕಾಯ್ದೆ-‘೧೯೯೫ ಬಗೆಗಿನ ಅರಿವು
ಶ್ರವಣ ನ್ಯೂನ್ಯತೆಯು ಅಂಗವಿಕಲತೆಯ ಒಂದು ಭಾಗವಾಗಿದ್ದು ಇದರಲ್ಲಿ ವಿದ್ಯಾರ್ಥಿಗಳಿಗೆ ಇದರ ಬಗ್ಗೆ ಅರಿವಿದೆಯೇ (ಆ ಕಾಯ್ದೆಯ ಯೋಜನೆಗಳನ್ನು ಸದುಪಯೋಗ ಪಡೆಯುತ್ತಿದ್ದಾರೆ ಎಂಬುದನ್ನು ತಿಳಿಯುವುದಕ್ಕೆ ಕೇಳಲಾಯಿತು) ಎಂಬುದನ್ನು ತಿಳಿಯಲು ಕೇಳಿದ್ದು ಇದರಲ್ಲಿ ಪ್ರತಿವಾದಿಯು ಅಂಗವಿಕಲತೆಯ ಕಾಯ್ದೆ ೧೯೯೫ ಅರಿವಿದೆ, ಎಂಬುದಕ್ಕೆ ಶೇ. ೩೦ ರಷ್ಟು ಗುರ್ತಿಸಿದ್ದು ಇದರ ಬಗ್ಗೆ ಅರಿವು ಇಲ್ಲ ಎಂಬುದಕ್ಕೆ ಪ್ರತಿವಾದಿಯು ಶೇ, ೭೦ ರಷ್ಟು ಗುರ್ತಿಸಿರುವುದು ಕಾಣಬಹುದಾಗಿದೆ.

ಆಕೋಷ್ಟಕ ಉನ್ನತ ಶಿಕ್ಷಣಕ್ಕೆ ಮೀಸಲಾತಿ
 ಶ್ರವಣ ನ್ಯೂನ್ಯತೆವುಳ್ಳ ಮಕ್ಕಳು ಉತ್ತಮ ಶಿಕ್ಷಣವನ್ನು ಪಡೆದ ನಂತರ ಉನ್ನತ ಶಿಕ್ಷಣವನ್ನು ಪಡೆಯುವಾಗ ಅಂಗವಿಕಲತೆಯ ಭಾಗವಾಗಿರುವ ಶ್ರವಣದೋಷವುಳ್ಳವರಿಗೂ ಶೇ. ೩ ರಷ್ಟು ಮೀಸಲಾತಿಯನ್ನು ನೀಡುವರು ಎಂಬುದರ ಬಗ್ಗೆ ಪ್ರತಿವಾದಿಗೆ ಅರಿವಿರುವುದು ತಿಳಿದುಬರುತ್ತದೆ. ಇದಕ್ಕೆ ಪ್ರತಿವಾದಿಯು ಶೇ. ೭೨ ರಷ್ಟು ಗುರ್ತಿಸಿರುವುದು ಈ ಮೇಲಿನ ವಿಭಾಗದಲ್ಲಿ ತೋರಿಸಲಾಗಿದೆ.

ಅಧ್ಯಾಯ -೫
ಸಂಶೋಧನಾ ಫಲ, ಸಲಹೆಗಳು ಮತ್ತು ಉಪಸಂಹಾರ
ಸಂಶೋಧನಾ ಫಲ:

ಸಂಶೋಧನೆಗಾಗಿ ಪ್ರಾಥಮಿಕ ಮಾಹಿತಿಯನ್ನು ಒದಗಿಸಿದವರು ಎಸ್. ಆರ್. ಚಂದ್ರಶೇಖರ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಹದಿಹರೆಯದ ವಿದ್ಯಾರ್ಥಿಗಳು, ಇವರಲ್ಲಿ ಗಂಡು ೨೭ ಮತ್ತು ಹೆಣ್ಣು ೨೩ ಪ್ರಾತಿನಿಧ್ಯವು ಅನುಕ್ರಮವಾಗಿ ಶೇ. ೫೪ ಮತ್ತು ಶೇ. ೪೬ ರ ಪ್ರಮಾಣದಲ್ಲಿದೆ.
ಶೇ. ೨೮ ಪ್ರಾತಿವಾಧಿಗಳು ಕನ್ನಡ ಮಾಧ್ಯಮದವರಾದ್ದು, ಇನ್ನುಳಿದಂತೆ ಶೇ. ೭೨ ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಕೆಯನ್ನು ಮುಂದುವರಿಸಿದ್ದಾರೆ.
ಶೇ. ೮೬, ೮ ಹಾಗೂ ಶೇ . ೬ ರ ಪ್ರಮಾಣದಲ್ಲಿ ಪ್ರತಿವಾದಿಗಳು ಅನುಕ್ರಮವಾಗಿ ಹಿಂದೂ ,ಮುಸ್ಲಿಂ ಹಾಗೂ ಕ್ರೈಸ್ತ ಧರ್ಮದಲ್ಲಿ ಹಂಚಿಕೆಯಾಗಿದ್ದಾರೆ.
ಶೆ. ೩೨ ರಷ್ಟು ಕನ್ನಡ ಮಾತೃಭಾಷಿಗರು ಇದ್ದು ಇತರರೂ ಶೇ. ೧ ಮತ್ತು ೮ ರ ಪ್ರಮಾಣದಲ್ಲಿ ಹಿಂದಿ ಮತ್ತು ತೆಲುಗು ಭಾಷಿUರಿದ್ದಾರೆ, ಹಾಗೂ ಉಳಿದಂತೆ ಈ ಮೇಲಿನ ಎಲ್ಲಾ ಭಾಷೆಯನ್ನು ಬಲ್ಲವರು ಶೇ. ೫೦ ರಷ್ಟು ಇದ್ದಾರೆ.
ಶೇ. ೮೨ ರಷ್ಟು ವಿಭಕ್ತ ಕುಟುಂಬದಲ್ಲಿನ ಸದಸ್ಯರಾಗಿದ್ದು, ಕುಟುಂಬದಲ್ಲಿನ ಸದಸ್ಯರ ಸಂಖ್ಯೆಯೂ ಕನಿಷ್ಠ ೨ ರಿಂದ ಗರಿಷ್ಠ ೫ ಕ್ಕಿಂತಲೂ ಕಡಿಮೆಯಿದ್ದು ಅವಿಭಕ್ತ ಕುಟುಂಬದಲ್ಲಿ ಶೇ. ೧೮ ರಷ್ಟು ಪ್ರತಿವಾದಿಯು ಇರುವುದು ಕಂಡುಬರುತ್ತದೆ.
ಪ್ರತಿವಾದಿಗಳ ಕುಟುಂಬಗಳು ತಮ್ಮ ವಾಸ್ತವ್ಯ ಸ್ಥಳಗಳ ಅನುಸಾರ ನಗರ, ಗ್ರಾಮ ಮತ್ತು ಹೋಬಳಿಯ ಕೇಂದ್ರ ಸ್ಥಾನಗಳನ್ನು ಪ್ರತಿನಿದಿಸಿವೆ. ನಗರಗಳಲ್ಲಿ ವಾಸ್ತವ್ಯವಿರುವ ಕುಟುಂಬಗಳ ಪ್ರತಿನಿಧ್ಯವು ಶೇ. ೮೪ ರ ಪ್ರಮಾಣದಲ್ಲಿದೆ.
ಶ್ರವಣದೋಷದ ಸಮಸ್ಯೆಯಿಂದ ಬಳಲುತ್ತಿರುವಂತಹ ಮಕ್ಕಳು ಶ್ರವಣದೋಷ ಉಂಟಾಗಲು ಪ್ರಮುಖ ಕಾರಣಗಳಲ್ಲಿ ದೈತ್ಯಶಬ್ಧಗಳಿಂದ ಉಂಟಾಯಿತು ಎಂದು ಶೇ ೫೨ ರಷ್ಟು ತಿಳಿಸಿದ್ದು ಉಳಿದಂತೆ ಅನುವಂಶೀಯತೆ ಮತ್ತು ಕಿವಿಸೋರುವಿಕೆ ಹಾಗು ಇತರೆ ಸೋಂಕುಗಳ ತಗುಲುವಿಕೆಯಿಂದ ಉಂಟಾಯಿತು ಎಂಬುದನ್ನು ತಿಳಿಯಬಹುದು.
ಎಸ್. ಆರ್. ಚಂದ್ರಶೇಖರ ವಾಕ್ ಮತ್ತು ಶ್ರವಣ ಸಂಸ್ಥೆಯು ಇಂತಹ ಶ್ರವಣ ನ್ಯೂನ್ಯತೆವುಳ್ಳ ಮಕ್ಕಳಿಗೆ ಶ್ರಮಿಸುತ್ತಿರುವ್ಯದರಿಂದ, ಈ ಮಕ್ಕಳು ಸಂಸ್ಥೆಯ ಕಾರ್ಯವೈಖರಿಯನ್ನು ಮನಗಂಡು ಸಹಾಯ ಮಾಡುವ ಗುಣಕ್ಕೆ ಶೇ. ೩೮ ರಷ್ಟು ಪ್ರೇರೆಪಿತರಾಗಿದ್ದಾರೆ. ಉಳಿದಂತೆ ನಾಯಕತ್ವ ಗುಣ ಮತ್ತು ಸಂವಹನ ಕೌಶಲ್ಯವನ್ನು ಅಳವಡಿಸಿಕೊಂಡಿರುವುದು ಕಂಡುಬರುತ್ತದೆ.
ಶ್ರವಣ ನ್ಯೂನ್ಯತೆವುಳ್ಳ ಮಕ್ಕಳು ಈ ಒಂದು ಸಂಸ್ಥೆಯಲ್ಲಿ ಭಾಷೆಯನ್ನು ಕಲಿಯುವುದಕ್ಕೆ ಹೆಚ್ಚಿನದಾಗಿ ಸಂವಹನ ವಿಧಾನ ಅಳವಡಿಸಿಕೊಂಡಿದ್ದು ಶೇ. ೬೨ ರಷ್ಟು ಪ್ರತಿವಾದಿಯು ತಿಳಿಸಿದ್ದು ಉಳಿದಂತೆ ಮೌಖಿಕ ಮತ್ತು ಲಿಖಿತ ವಿಧಾನದ ಮುಲಕ ಭಾಷೆಯನ್ನು ಕಲಿಕೆಯ ವಿಧಾನವಾಗಿ ರೂಡಿಸಿಕೊಂಡಿರುವುದು ತಿಳಿದುಬರುತ್ತದೆ.
ಭಾಷೆಯು ಮಕ್ಕಳಲ್ಲಿನ ಪ್ರತಿಭೆಯ ಅನಾವರಣಕ್ಕೆ ಹೆಚ್ಚಿನದಾಗಿ ಮುಕ್ತ ಅವಕಾಶ, ಮಕ್ಕಳ ಹಿತಾಸಕ್ತಿಗೆ ಹೆಚ್ಚಿನ ಪ್ರಮುಖ್ಯತಯನ್ನು ನೀಡುತ್ತಿದೆ ಎಂಬುದನ್ನು ತಿಳಿಯಬಹುದು. ಇದರಿಂದ ಪ್ರತಿವಾದಿಗಳಿಗೆ ಸಹಾಯಕವಾಗುತ್ತಿದ್ದು ಶೇ. ೪೦ ರಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದು ಉಳಿದಂತೆ ಅಭಿಪ್ರಾಯ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಅವಕಾಶವಿದೆ ಎಂಬುದನ್ನು ತಿಳಿಯಬಹುದು.
ಶ್ರವಣದೋಷದಂತಹ ಸಮಸ್ಯೆಯಿದ್ದರೂ ನಮ್ಮಲ್ಲಿ ಓದುವಂತಹ ಆಸಕ್ತಿಯೂ ಅಧಿಕ ಪ್ರಮಾಣದಲ್ಲಿದ್ದು ಇದಕ್ಕೆ ಪ್ರತಿವಾದಿಯು ಶೆ. ೯೨ ರಷ್ಟು ಆಸಕ್ತಿಯಿರುವುದು ತಿಳಿಯಬಹುದು. ಹಾಗೂ ಇಂತಹ ಮಕ್ಕಳ ನಿರ್ಧಾರಕ್ಕೆ ಕುಟುಂಬದಲ್ಲಿ ಅವಕಾಶವನ್ನು ನೀಡುತ್ತಾರೆ ಎಂದು ಶೇ. ೭೨ ರಷ್ಟು ತಿಳಿಸಿದ್ದು ಇಂತಹ ಮಕ್ಕಳ ಮಾತಿಗೂ ಮನ್ನಣೆಯಿದೆ ಎಂಬುದನ್ನು ತಿಳಿಯಬಹುದು.
ಶ್ರವಣ ನ್ಯೂನ್ಯತೆವುಳ್ಳ ಮಕ್ಕಳು ಅವರದೇಯಾದಂತಹ ಆಸೆ ಆಕಾಂಕ್ಷೆಗಳು ಇದ್ದೆ ಇರುತ್ತವೆ. ಇದರಲ್ಲಿ ಪ್ರತಿವಾದಿಯೂ ತಾವು ಕಟ್ಟಿಕೊಂಡಿರುವ ಸುಂದರ ಬದುಕಿನ ಬಗ್ಗೆ ಆಸಕ್ತಿವಹಿಸಿರುವುದು ಕಂಡುಬರುತ್ತದೆ. ಇದರಲ್ಲಿ ಪ್ರತಿವಾದಿಯು ಶೇ. ೬೪ ರಷ್ಟು ಹೆತ್ತವರೊಡಗೂಡಿ ವೈವಾಹಿಕ ಜೀವನ ನಡೆಸುವುದಕ್ಕೆ ಆಸಕ್ತಿ ತೋರಿಸಿದರೆ ಉಳಿದಂತೆ ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳುವುದು ಮತ್ತು ಅಂಗವಿಕಲರಿಗೆ ಪುನರ್‌ವಸತಿಗಾಗಿ ಸಂಘಟನೆಯನ್ನು ಸ್ಥಾಪಿಸುವುದಾಗಿದೆ. ಇದರಲ್ಲಿ ತಮ್ಮಂತಹವರಿಗೆ ಸಹಕರಿಸಿದರೆ ಉತ್ತಮ ಬದುಕನ್ನು ರೂಢಿಸಿಕೊಂಡಿದ್ದಾರೆ.
ನಿಮ್ಮ ಸಮುದಾಯದಲ್ಲಿನ ಜನತೆ ಮತ್ತು ಶಾಲೆಯಲ್ಲಿನ ಸಹಪಾಠಿಗಳು ನಿಮ್ಮ ಸಹಕಾರಕ್ಕೆ ಧಾವಿಸುತ್ತಾರೆ ಎಮ್ಬುದಕ್ಕೆ ಪ್ರತಿವಾದಿಯು ಶೇ. ೭೦ ರಷ್ಟು ಮತ್ತು ಶೇ. ೯೮ ರಷ್ಟು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದು ಇದರಲ್ಲಿ ಪ್ರತಿಯೊಂದು ಹಂತದಲ್ಲಿಯು ಸಹಕಾರ ನೀಡಿರುವುದು ಎಂಬುದನ್ನು ತಿಳಿಸಿದ್ದು ಇದರಿಂದ ಸಮಾಜದಲ್ಲಿ ಕಟ್ಟಕಡೆಯ ಪ್ರತಿಯೊಂದು ಸೂಕ್ತವಾದ ಸ್ಥಾನ-ಮಾನವಿದೆ ಎಂಬುದನ್ನು ತಿಳಿಯಬಹುದು.
ಎಸ್. ಆರ್. ಚಂದ್ರಶೇಖರ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ಅಧ್ಯಯನ ಮಾಡುವಂತಹ ಈ ಮಕ್ಕಳಲ್ಲಿ ಕೆಲವೊಂದು ವೈಯಕ್ತಿಕವಾಗಿ ಬದಲಾವಣೆಯನ್ನು ಕಾಣಬಹುದಾಗಿದೆ. ಇದರಲ್ಲಿ ಪ್ರತಿವಾದಿಯು ಶೇ. ೩೦ ರಷ್ಟು ವರ್ತನೆಯಲ್ಲಿ ಬದಲಾವಣೆಯಾದರೆ ಉಳಿದಂತೆ ಸಂವಹನದಲ್ಲಿ, ಕ್ರಿಯಾಶೀಲತೆಯಲ್ಲಿ ಹಾಗೂ ಮೇಲಿನ ಅಂಶಗಳಿಂದಲೂ ಬದಲಾವಣೆಯಾಗಿದೆ ಎಂದು ಪ್ರತಿವಾದಿಯ ವೈಯಕ್ತಿಕ ಅನಿಸಿಕೆ ಮತ್ತು ಅಭಿಪ್ರಾಯವನ್ನು ತಿಳಿಯಬಹುದಾಗಿದೆ.
ಶ್ರವಣ ನ್ಯೂನ್ಯತೆವುಳ್ಳ ಮಕ್ಕಳಲ್ಲಿ ಈ ಒಂದು ನ್ಯೂನ್ಯತೆಯಿಂದ ನಿಮ್ಮಲ್ಲಿ ಕೀಳರಿಮೆಯ ಮನೋಭವನೆಯಿದೆ ಎಂಬುದಕ್ಕೆ ಪ್ರತಿವಾದಿಯು ಹೌದು ಎಂದು ಸೂಚಿಸಿರುವ್ಯದರಿಂದ ವಿದ್ಯಾರ್ಥಿಗಳಲ್ಲಿ ನಾವುಗಳು ಇತರೆ ಮಕ್ಕಳಿಗಿಂತ ತಾವು ಭಿನ್ನವಾಗಿದ್ದೆವೆ ಎಂಬ ಮನೋಭವನೆ ಇರುವುದು ಕಂಡುಬರುತ್ತದೆ. ಇದಕ್ಕೆ ಪ್ರತಿವಾದಿಯು ಶೇ. ೬೪ ರಷ್ಟು ನಿಸ್ಸಾಹಾಯಕರಾಗಿ ತೋರಿಸಿರುವ ಅಂಕಿ ಆಂಶದಿಂದ ತಿಳಿಯಬಹುದಾಗಿದೆ.
ಶ್ರವಣ ನ್ಯೂನ್ಯತೆವುಳ್ಳ ಮಕ್ಕಳು ಸಮಾಜಕ್ಕೆ ಮತ್ತು ಕುಟುಂಬಕ್ಕೆ ತಲೆನೋವಾಗಿ ಪರಿಗಣಿಸಲ್ಪಟ್ಟಿದ್ದರೆ ಸಹ ಪ್ರೀತಿ, ಮಮತೆ ಎಂಬುದು ಯಾರನ್ನು ಬಿಟ್ಟಿಲ್ಲ, ಆದ ಕಾರಣ ಕುಟುಂಬದವರ ಆಶ್ರಯದಲ್ಲಿಯೇ ಇದ್ದು ಕೊಂಡೆ ಶೇ. ೯೬ ರಷ್ಟು ಮಕ್ಕಳು ಶಿಕ್ಷಣವನ್ನು ಪಡೆಯುತ್ತಿದ್ದಾರೆ, ಉಳಿದಂತೆ ಸಂಬಂಧಿಕರೊಂದಿಗೆ ಬಾಡಿಗೆ ಮನೆಯಿಂದ ಪ್ರತಿವಾದಿಯು ಬಂದು ಶಿಕ್ಷಣ ಪಡೆಯುತ್ತಾರೆ.
ಈ ಒಂದು ಸಂಸ್ಥೆಯಲ್ಲಿ ಅಧ್ಯಯನ ನಡೆಸುತ್ತಿರುವಂತಹ ಶ್ರವಣ ನ್ಯೂನ್ಯತೆವುಳ್ಳ ಮಕ್ಕಳ ಡೆಸಿಬಲ್‌ಗಳ ಪ್ರಮಾಣ ೯೦ ಕ್ಕಿಂತಲೂ ಮೇಲ್ಪಟ್ಟರೆ ಸಂಪೂರ್ಣ ಕೀವುಡರಾಗಿದ್ದಾರೆ. ಇದರ ಜೋತೆಯಲ್ಲಿಯೂ ಅವರ ಕಲಿಕೆಯಲ್ಲಿನ ಆಸಕ್ತಿ ಮತ್ತು ಕ್ರೀಡಾ ಕ್ಷೇತ್ರದಲ್ಲಿನ ಆಸಕ್ತಿಯನ್ನು ಮೆಚ್ಚುವಂತಹದ್ದಾಗಿದೆ . ಇದಕ್ಕೆ ಸಂಬಂಧಿಸಿದಂತೆ ಪ್ರತಿವಾದಿಯು ಅಂತರ್‌ಶಾಲಾ ಮಟ್ಟದಲ್ಲಿ ಭಾಗವಹಿಸಿ ವಿವಿಧ ರೀತಿಯ ಪ್ರಶಸ್ತಿಗಳನ್ನು ಪಡೆದಿರುವುದು ನೋಡಿದರೆ, ಈ ಮಕ್ಕಳು ಇತರೆ ಮಕ್ಕಳಂತೆಯೇ ಸರಿಸಮಾನರೆಂಬುದನ್ನು ತಿಳಿಯಬಹುದು.
ಶ್ರವಣ ನ್ಯೂನ್ಯತೆವುಳ್ಳಂತಹ ಮಕ್ಕಳಿಗೆ ಕೆಲವೊಂದು ಹಕ್ಕುಗಳ ಬಗ್ಗೆ ಸೌಲಭ್ಯಗಳ ಬಗ್ಗೆ ಅರಿವಿರುವುದು ತಿಳಿದುಬರುತ್ತದೆ. ಇದರಿಂದ ಪ್ರತಿವಾದಿಯು ೧೮ ವರ್ಷದವರೆಗೆ ಉಚಿತ ಶಿಕ್ಷನಕ್ಕೆ ಸಂಬಂಧಿಸಿದಂತೆ ಶೇ. ೫೨, ಉದ್ಯೋಗದಲ್ಲಿನ ಮೀಸಲಾತಿಗೆ ಶೇ. ೬೨, ಉಚಿತ ಬಸ್‌ಪಾಸ್ ವ್ಯವಸ್ಥೆಗೆ ಶೇ. ೬೬, ಅಂಗವಿಕಲರ ಕಾಯ್ದೆ ಶೇ. ೩೦ ಮತ್ತು ಉನ್ನತ ಶಿಕ್ಷಣಕ್ಕೆ ಮೀಸಲಾತಿಗೆ ಸಂಬಂಧಿಸಿದಂತೆ ಶೇ. ೭೨ ರಷ್ಟು ಗುರ್ತಿಸಿರುವುದನ್ನು ನೋಡಿದರೆ ಹದಿಹರೆಯದ ಮಕ್ಕಳಲ್ಲಿ ಈ ಸೌಲಭ್ಯಗಳ ಬಗ್ಗೆ ಅರಿವಿದೆ ಎಂಬುದನ್ನು ತಿಳಿಯಬಹುದು.
ಇಂತಹ ಮಕ್ಕಳಿಗೆ ತರಗತಿಯಲ್ಲಿ ಕಲಿಯಲ್ಲಿಕ್ಕೆ ವಿವಿಧ ರೀತಿಯ ಸಮಸ್ಯೆಗಳು ಸಾಮಾನ್ಯ ಮಕ್ಕಳಿಗಿಂತಲು ಭಿನ್ನವಾಗಿರುತ್ತದೆ, ಆದರೆ ಇವರಿಗೆ ಸಂವಹನ ಮತ್ತು ಮೌಖಿಕ ವಿಧಾನದ ಮೂಲಕ ಕಲಿಕೆಯನ್ನು ನೀಡುತ್ತಾರೆ ಆದರೆ ಈ ಕಲಿಕೆ ಮಕ್ಕಳಿಗೆ ತೊಡಕುಗಳು ಉಂಟುಮಾಡುತ್ತದೆ ಕಾರಣ ಅವರಲ್ಲಿನ ಅಸಹಾಯಕತೆ ಮತ್ತು ಕೇಳಿಸುವಿಕೆಯಲ್ಲಿನ ಸಾಧಾರಣತೆ ಎಂಬುದನ್ನು ಪ್ರತಿವಾದಿಯು ತಿಳಿಸಿರುವುದು ನೋಡಿದರೆ ಸ್ವಲ್ಪಮಟ್ಟಿಗೆ ಜೀವನದಲ್ಲಿ ಜಿಗುಪ್ಸೆ ಇರಬಹುದು ಎಂಬುದನ್ನು ತಿಳಿಯಬಹುದು.
ಆದರೆ ಈ ಮಕ್ಕಳು ಇತರೆ ಮಕ್ಕಳಂತೆಯೇ ಮನರಂಜನೆಯನ್ನು ಹೊಂದುವುದಕ್ಕೆ ಆಟ-ಕ್ವಿಜ್, ಟಿ. ವಿ- ಚಿತ್ರಕಲೆ, ಪ್ರಬಂದ, ನೃತ್ಯದಲ್ಲಿ ಭಾಗವಹಿಸುವುದು ಪ್ರತಿವಾದಿಯು ಶೇ. ೧೦೦ ರಷ್ಟು ಆಸಕ್ತಿ ವಹಿಸಿರುವುದನ್ನು ಗಮನಿಸಿದರೆ ಅವರಲ್ಲಿ ಸಾಧನೆಯ ಮನೋಭಾವನೆ ಇರುವುದು ಕಂಡುಬರುತ್ತದೆ.
ವಿಶೇಷವಾದ ಕಾಳಜಿ ಪಠ್ಯಪುಸ್ತಕ, ಟಿಪ್ಪಣಿಗಳನ್ನು ಒದಗಿಸುವಿಕೆ, ಆಪ್ತ ಸಮಾಲೋಚನೆ ಮತ್ತು ಸಂವಾದಕ್ಕೆ ಅವಕಾಶ, ಇವುಗಳನ್ನು ಶಿಕ್ಷಕರು ತಮಗೆ ನೀಡಿರುವ ಸಹಕಾರದ ಸ್ವರೂಪವಾಗಿ ಪ್ರತಿವಾದಿಗಳು ಗುರ್ತಿಸಿದ್ದಾರೆ.

ಸಲಹೆಗಳು:
ಶ್ರವಣನ್ಯೂನ್ಯತೆವುಳ್ಳ ಹದಿಹರೆಯ ಮಕ್ಕಳ ಮನೋಸಾಮಾಜಿಕ- ಶೈಕ್ಷಣಿಕ ಸ್ಥಿತಿಗತಿ, ಕಾನೂನು- ಹಕ್ಕುಗಳು ಮತ್ತು ಸೌಲಭ್ಯಗಳ ಬಗೆಗಿನ ಅರಿವು ಒಂದು ಅಧ್ಯಯನ. ಈ ವಿಷಯದಲ್ಲಿ ಎಸ್. ಆರ್. ಚಂದ್ರಶೇಖರ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ಅಭ್ಯಾಸ ನಿರತರಾಗಿರುವ ಶ್ರವಣ ನ್ಯೂನ್ಯತೆ ವಿದ್ಯಾರ್ಥಿಗಳ ಕುರಿತು ನಡೆಸಿದ ಅಧ್ಯಯನದಿಂದ ಹೋರಬಂದಿರುವ ಫಲಿತಾಂಶಗಳು ಮತ್ತು ಸಂಶೋಧಕನು ಶ್ರವಣ ನ್ಯೂನ್ಯತೆವುಳ್ಳ ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದ ಹಾಗು ಸಂಶೋಧಕನು ಸ್ವಯಂ ಶ್ರವಣ ನ್ಯೂನ್ಯತೆವುಳ್ಳವನಾಗಿ ಅನುಭವ ವೇದ್ಯ ಪಡಿಸಿಕೊಂಡ ವಿಚಾರಗಳು ಹಾಗೂ ಸಂಗತಿಗಳ ಅಧಾರದಿಂದ ಈ ಮುಂದಿನ ಸಲಹೆಗಳನ್ನು ನೀಡಬಯಸಿದ್ದಾನೆ.
 ಸರ್ಕಾರ ಮತ್ತು ಸರ್ಕಾರೇತರ ಸಂಘ- ಸಂಸ್ಥೆಗಳು ಶ್ರವಣದೋಷವುಳ್ಳ ವಿದ್ಯಾರ್ಥಿಗಳ ಕಾನೂನು ಅರಿವು ಸೌಲಭ್ಯಗಳ ಅರಿವು ಹಾಗೂ ಅವರ ಪಾಲ್ಗೋಳ್ಳುವಿಕೆ ಇವುಗಳ ಸಂಬಂಧ ನೆರವಾಗಲು ಎಲ್ಲಾ ಶಾಲಾ-ಕಾಲೇಜುಗಳಲ್ಲಿ ವಿಕಲಚೇತನರ ಕೋಶವೊಂದನ್ನು ರಚಿಸಬೇಕು. ಈ ಕೋಶದ ವತಿಯಿಂದ ಶ್ರವಣ ನ್ಯೂನ್ಯತೆವುಳ್ಳ ವಿದ್ಯಾರ್ಥಿಗಳಲ್ಲಿ ಅವರ ಸಮಸ್ಯೆಗಳ ಬಗ್ಗೆ ಮತ್ತು ಪ್ರೋತ್ಸಾಹ , ಪುನಶ್ಚೇತನ ಸಂಬಂಧದ ಅರಿವು ಮತ್ತು ಪುರ್ನಮನನ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು.
ತರಗತಿಗಳ ಕೊಠಡಿ, ವಿದ್ಯಾರ್ಥಿನಿಲಯ, ಗ್ರಂಥಾಲಯ, ಬಸ್‌ನಿಲ್ದಾಣ, ಕ್ಯಾಂಟಿನ ಮೊದಲಾದ ಪ್ರಮುಖ ಸ್ಥಳಗಳಲ್ಲಿ ಶ್ರವಣ ನ್ಯೂನ್ಯತೆವುಳ್ಳ ವಿದ್ಯಾರ್ಥಿಗಳಿಗಾಗಿ ಸೂಕ್ತ ಮುನ್ನೆಚರಿಕೆಯ ಸೌಲಭ್ಯವಾದ ಶ್ರವಣೋಪಕರಣಗಳನ್ನು ದೊರಕಿಸಿಕೋಡಬೇಕು.
ಶ್ರವಣ ನ್ಯೂನ್ಯತೆಯಂತಹ ಸಮಸ್ಯೆಯಿಂದಲು ಸಾಧನೆಯನ್ನು ಮಾಡಿದಂತಹ ವಿದ್ಯಾರ್ಥಿಗಳನ್ನು ಪೋಷಕರ ಸಮುಖದಲ್ಲಿಯೇ ಸನ್ಮಾನಿಸುವುದರಿಂದ ಇಡೀ ಶ್ರವಣ ನ್ಯೂನ್ಯತೆವುಳ್ಳ ಸಮುದಾಯವೇ ಪ್ರೇರಣೆಗೊಳ್ಳಲು ಸಹಕಾರಿಯಾಗುತ್ತದೆ. ಇವರಿಗೆ ಸೂಕ್ತ ಸನ್ನಿವೇಶಕ್ಕೆ ತಕ್ಕಂತೆ ಶಾಲಾ-ಕಾಲೇಜುಗಳ ಮತ್ತು ಸಮಾಜಕಲ್ಯಾಣ ವತಿಯಿಂದ ವಿದ್ಯಾರ್ಥಿವೇತನ ನಗದು ಬಹುಮಾನ ಮುಂತಾದ ಪ್ರೋತ್ಸಾಹದಾಯಕ ಯೋಜನೆಗಳನ್ನು ರೂಪಿಸಬೇಕು.
ಶ್ರವಣ ನ್ಯೂನ್ಯತೆವುಳ್ಳ ಸಮುದಾಯದ ಗಾತ್ರನುಸಾರ ಉನ್ನತ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಪ್ರಮಾಣವನ್ನು ಶೇ. ೩ ರಿಂದ ಕನಿಷ್ಠ ೧೦ ರ ಪ್ರಮಾಣದಲ್ಲಿ ಏರಿಕೆಯಾಗಬೇಕು. ಹಾಗೆಯೇ ಶ್ರವಣ ನ್ಯೂನ್ಯತೆವುಳ್ಳವರು ಎಂದು ಗುರ್ತಿಸಲು ನಿಗದಿಪಡಿಸಿರುವ ಶೇ. ೪೦ಕ್ಕಿಂತಲೂ ಹೆಚ್ಚು ವಿಕಲತೆಯ ಪ್ರಮಾಣವನ್ನು ಹೊಂದಿರುವವರು ಶ್ರವಣ ನ್ಯೂನ್ಯತೆವುಳ್ಳವರಿಗಾಗಿನ ಮೀಸಲಾತಿ ಪ್ರಯೋಜನವನ್ನು ದುರುಪಯೋಗ ಪಡಿಸಿಕೋಳ್ಳದಂತೆ ಕಠಿಣ ಕಾನೂನು ಕ್ರಮಗಳನ್ನು ಜಾರಿಗೊಳಿಸಬೇಕು.
ಪಂಚಾಯತ್ ರಾಜ್ ವ್ಯವಸ್ಥೆಯ ಎಲ್ಲಾ ಮೂರು ಹಂತಗಳಲ್ಲಿ ಕೆಲವು ಸ್ಥಾನಗಳನ್ನು ಸಮುದಾಯಕ್ಕೆ ಮೀಸಲಿಡುವುದರಿಂದ ಗ್ರಾಮೀಣ ಅಭಿವೃಧಿ ಪ್ರಕ್ರಿಯೆಯಲ್ಲಿ ಅದರಲ್ಲೂ ಶ್ರವಣ ನ್ಯೂನ್ಯತೆವುಳ್ಳವರಿಗಾಗಿ ಸಮುದಾಯದಾರಿತ ಪುನಶ್ಚೇತನ ಕಾರ್ಯಕ್ರಮವು ಮತ್ತಷ್ಟು ಬಲವನ್ನು ಹೊಂದಲು ಸಾಧ್ಯವಾಗುತ್ತದೆ.
ಪ್ರತಿಯೊಂದು ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಜನೆಯಲ್ಲಿ ತೊಡಗಿರುವ ಶ್ರವಣ ನ್ಯೂನ್ಯತೆಯುಳ್ಳವರಿಗೆ ಪ್ರತಿಯೊಂದು ಸರ್ಕಾರ ಮತ್ತು ಸರ್ಕಾರೇತರ ಸಂಘ-ಸಂಸ್ಥೆಗಳು, ಜೀವನ ಮಾರ್ಗದರ್ಶನ ಕಾರ್ಯಕ್ರಮಗಳನ್ನು ರೂಪಿಸಿ ನೆರವಾಗಬೇಕು. ಶ್ರವಣ ನ್ಯೂನ್ಯತೆಯ ಸಮಸ್ಯೆಯನ್ನು ತಡೆಗಟ್ಟುವಿಕೆ ಹಾಗೂ ಪುನರ್ ವಸತಿಗೆ ಸಂಬಂಧಿಸಿದಂತೆ ವಿಶೇಷ ಕಾರ್ಯಕ್ರಮಗಳನ್ನು ರೂಪಿಸುವ ಹೊಣೆಗಾರಿಕೆಯನ್ನು ಸಮಾಜಕಾರ್ಯ ವಿಭಾಗವು ನಡೆಸಿಕೊಡಬೇಕು.

ಉಪಸಂಹಾರ:
ಶ್ರವಣ ನ್ಯೂನ್ಯತೆಯು ಒಂದು ಸಾಮಾಜಿಕ ಸಮಸ್ಯೆಯಾಗಿದೆ. ಸರ್ಕಾರ ಮತ್ತು ನಾಗರೀಕ ಸಮಾಜವು ಸಮಸ್ಯೆಯನ್ನು ತಡೆಗಟ್ಟಲು ಮತ್ತು ಶ್ರವಣ ನ್ಯೂನ್ಯತೆವುಳ್ಳವರ ಪುರ್ನವಸತಿಗೆ ಕ್ರೀಯಾಶೀಲವಾಗಿದೆ. ಶ್ರವಣ ನ್ಯೂನ್ಯತೆವುಳ್ಳ ಸಮುದಾಯವು ತಮ್ಮ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಸ್ಪಷ್ಟವಾದ ಅರಿವನ್ನು ಹೊಂದಿರುವುದರೊಂದಿಗೆ ಶ್ರವಣ ನ್ಯೂನ್ಯತೆವುಳ್ಳವರ ಪುನಶ್ಚೇತನ ಆಂದೋಲನದಲ್ಲಿ ತಾವು ಭಾಗವಹಿಸಿದಂತಾಗುತ್ತದೆ. ಶಿಕ್ಷಣ ಹಾಗೂ ಉದ್ಯೋಗದಲ್ಲಿ ದೊರೆಯುತ್ತಿರುವ ಮೀಸಲಾತಿಯೂ ಶ್ರವಣದೋಷವುಳ್ಳ ಸಮುದಾಯಕ್ಕೆ ಅವಕಾಶವನ್ನಷ್ಟೆ ನೀಡದೆ ಸ್ಪೂರ್ತಿಯ ಸೆಲೆಯಾಗಿ ಹೊರಹೊಮ್ಮಿದೆ. ಶ್ರವಣ ನ್ಯೂನ್ಯತೆಯ ಸಮುದಾಯವು ಅವರ ಸಾಧನೆಗಳನ್ನು ಗಮನಿಸಿದಾಗ ಪ್ರತಿಭಾ ಕಾರಂಜಿಯಂತೆ ಕಂಗೋಳಿಸುತ್ತಿದೆ. ಶ್ರವಣ ನ್ಯೂನ್ಯತೆವುಳ್ಳವರು ತಮ್ಮ ಸಮುದಾಯದ ಪುನಶ್ಚೇತನಕ್ಕಾಗಿ ಸ್ವಯಂ ಸೇವಾ ಸಂಸ್ಥೆಗಳನ್ನು ಸ್ಥಾಪಿಸಿ ಪರಿಣಾಮಕಾರಿಯಾಗಿ ಮುನ್ನೆಡೆದಿದ್ದಾರೆ. ಶ್ರವಣ ನ್ಯೂನ್ಯತೆವುಳ್ಳವರಿಗೆ ಬೇಕಾಗಿರುವುದು ಸ್ಫೂರ್ತಿ, ಪ್ರೇರಣೆ ಮತ್ತು ಸಮಕಾಲೀನ ನೆರವು ಮಾತ್ರ, ಶ್ರವಣ ನ್ಯೂನ್ಯತೆವುಳ್ಳವರ ಸಮಸ್ಯೆಯನ್ನು ವ್ಶೆಜ್ಞಾನಿಕ ದೃಷ್ಠಿಕೋನದಿಂದ ಹಾಗೂ ಮಕ್ಕಳ ಹಕ್ಕುಗಳ ಸಮರ್ಪಕ ಜಾರಿಯ ಹಿನ್ನೆಲೆಯಲ್ಲಿ ಪರಿಶೀಲಿಸಿ ಮುನ್ನೆಡೆಯ ಬೇಕಿದೆ.

ಅನುಬಂಧ-೧: ಕೇಂದ್ರ ಸಮನ್ವಯ ಸಮಿತಿ
ಕೇಂದ್ರ ಸರ್ಕಾರ, ಸಮಾಜಕಲ್ಯಾಣ ಸಚಿವ್ರ ನೇತೃತ್ವದಲ್ಲಿ ಒಂದು ಕೇಂದ್ರ ಸಮನ್ವಯ ಸಮಿತಿಯನ್ನು ರಚಿಸಿದೆ. ಈ ಸಮಿತಿಯಲ್ಲಿ ೩೯ ಸದಸ್ಯರು ಇದ್ದಾರೆ ಇವರಲ್ಲಿ ೩೪ ಸದಸ್ಯರು ಸರ್ಕಾರಿ ಅಧಿಕಾರಿಗಳಾಗಿದ್ದು, ಮಿಕ್ಕ ೫ ಸದಸ್ಯರು, ಸರ್ಕಾರೇತರ, ಅಂಗವಿಕಲರ ಸೇವಾಸಂಸ್ಥೆಗಳ ಪ್ರತಿನಿಧಿಗಳಾಗಿದ್ದು ಇವರನ್ನು ಸರ್ಕಾರ ನೇಮಕ ಮಾಡಿರುವುದು. ಈ ಐವರಲ್ಲಿ ಕನಿಷ್ಟ ಒಬ್ಬ ಮಹಿಳೆ ಮತ್ತು ಒಬ್ಬರು ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗಕ್ಕೆ ಸೇರಿದವರಿರಬೇಕು. ಈ ಎಲ್ಲರ ಸದ್ಯಸ್ಯತ್ವದ ಅವಧಿ ಮೂರು ವರ್ಷಗಳು.
ಕೇಂದ್ರ ಕಾರ್ಯಕಾರಿ ಸಮಿತಿ
 ಈ ಸಮಿತಿಯಲ್ಲಿ ೨೩ ಸದಸ್ಯರು ಇದ್ದಾರೆ. ಇ ಸಮಿತಿಯಲ್ಲೂ ೫ ಜನ ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳಿದ್ದಾರೆ. ಅಂಗವಿಕಲರ ಬಗ್ಗೆ ರಾಷ್ಟ್ರೀಯ ನೀತಿ, ಯೋಜನೆ ಮತ್ತು ಕಾರ್ಯಕ್ರಮಗಳನ್ನು ರೂಪಿಸುವುದು ಮತ್ತು ಸರ್ಕಾರಕ್ಕೆ ಸಲಹೆ ನೀಡುವುದು ಈ ಸಮಿತಿಯ ಕರ್ತವ್ಯ.

ಅನುಬಂಧ-೨: ರಾಜ್ಯ ಸಮನ್ವಯ ಸಮಿತಿ
ಕೇಂದ್ರ ಸಮನ್ವಯ ಸಮಿತಿಯ ರೀತಿಯಲ್ಲೇ, ರಾಜ್ಯ ಸರ್ಕಾರಗಳು ರಾಜ್ಯ ಸಮನ್ವಯ ಸಮಿತಿಯನ್ನು ರಚಿಸುವವು. ಈ ಸಮಿತಿಯಲ್ಲಿ ೨೩ ಸದಸ್ಯರು ಸರ್ಕಾರಿ ಅಧಿಕಾರಿಗಳಾಗಿದ್ದು, ೫ ಇತರ ಸದಸ್ಯರಿದ್ದಾರೆ. ರಾಜ್ಯ ಕಾರ್ಯಕಾರಿ ಸಮಿತಿಯನ್ನು ಕೇಂದ್ರ ಕಾರ್ಯಕಾರಿ ಸಮಿತಿಯಂತೆಯೇ ರಚಿಸಲಾಗಿದೆ.

ಅನುಬಂಧ-೩: ರಾಷ್ಟ್ರೀಯ ಟ್ರಸ್ಟ್ ಕಾಯಿದೆ
ತಮ್ಮ ಹಿತಾಸಕ್ತಿಗಳನ್ನು ಸ್ವತಃ ನೋಡಿಕೊಳ್ಳಲು ಅಸಮರ್ಥರಾಗಿರುವಂತಹ, ಗಂಭೀರ ಶ್ರವಣನ್ಯೂನ್ಯತೆಯಿರುವವರ ರಕ್ಷಣೆಗಾಗಿ ೧೯೯೯ ರಲ್ಲಿ ಕೇಂದ್ರ ಸರ್ಕಾರ ಒಂದು ರಾಷ್ಟ್ರೀಯ ಟ್ರಸ್ಟ್ [ನ್ಯಾಸ] ಕಾಯಿದೆಯನ್ನು ಹೋರಡಿಸಿದೆ. ಈ ಕಾಯಿದೆ ಈ ಕೆಳಕಂಡತೆ ರೀತಿಯ ಅಂಗವಿಕಲರಿಗೆ ಅನ್ವಯಿಸುತ್ತದೆ.
ಮಂಡಳಿಯ ರಚನೆ
ಈ ರಾಷ್ಟ್ರೀಯ ಟ್ರಸ್ಟ್‌ನ ಮುಖ್ಯ ಕಛೇರಿ ದೆಹಲಿಯಲ್ಲಿದು ಅಗತ್ಯವಿದ್ದಲ್ಲಿ ಕೇಂದ್ರ ಸರ್ಕಾರದ ಅನುಮತಿಯನ್ನು ಪಡೆದು ಇತರ ಊರುಗಳಲ್ಲಿ ಉಪಕಛೇರಿಗಳನ್ನು ಸ್ಥಾಪಿಸಬಹುದು. ಟ್ರಸ್ಟ್‌ಗೆ ಒಬ್ಬ ಅಧ್ಯಕ್ಷರು ಇರುತ್ತಾರೆ. ಇತರ ಸದಸ್ಯರು ಈ ಕೆಳಕಂಡಂತೆ ಇದ್ದಾರೆ. ೯ ಜನ ಟ್ರಸ್ಟ್‌ನ ಅನ್ವಯ ನೋಂದಯಿಸಲ್ಪಟ್ಟಿರುವ ಸ್ವಯಂ ಸೇವಾ ಸಂಸ್ಥೆಯ ಪ್ರತಿನಿದಿಗಳಾಗಿರುತ್ತಾರೆ. ಇದರಲ್ಲಿ ವಿಕಲತೆಯುಳ್ಳವರ ಸಂಘ ಅಥವಾ ಅವರ ಪಾಲಕರ ಸಂಘಗಳ ಸದಸ್ಯರಾಗಿರಬೇಕು. ಸರ್ಕಾರದ ನಾನಾ ಇಲಾಖೆಗಳ ಅಧಿಕಾರಿಗಳು ೮ ಜನ ಸಮಾಜ ಸೇವೆಯಲ್ಲಿ ನಿರತರಾಗಿರುವ ಉದ್ದಿಮೆ/ ವ್ಯಾಪಾರಸ್ಥರ ಪೈಕಿ ಮೂವರೂ ಮತ್ತು ಸರ್ಕಾರದ ಜಂಟಿ ಕಾರ್ಯದರ್ಶಿ ನಿರ್ವಾಹಕರು.
 ಟ್ರಸ್ಟ್‌ನ ಲಕ್ಷಣಗಳು ಹೀಗಿವೆ;
. ಶ್ರವಣನ್ಯೂನತೆ ಸಾಧ್ಯವಾದಷ್ಟು ಸ್ವತಂತ್ರರಾಗಿ ಮತ್ತು ಸ್ವವಲಂಬಿಗಳಾಗಿ ತಮ್ಮ ಸಮುದಾಯದಲ್ಲಿ, ತಮ್ಮ ಊರುಗಳಲ್ಲಿ ಅಥವಾ ಹತ್ತಿರದಲ್ಲೇ ನೆಲೆಸುವಂತೆ ಅನುಕೂಲ ಮಾಡುವುದು.
. ಶ್ರವಣನ್ಯೂನ್ಯತೆ ತಮ್ಮ ಕುಟುಂಬದೊಡನೆಯೇ ಇರಲು ಅನುಕೂಲವಾಗುವಂತೆ ಸೌಕರ್ಯಗಳನ್ನು ಒದಗಿಸುವುದು.
 . ಈ ಕಾಯಿದೆಯಡಿ ನೋಂದಯಿಸಿಕೊಂಡಿರುವ ಸಂಸ್ತೆಗಳು, ಶ್ರವಣನ್ಯೂನ್ಯತೆ ಕುಟುಂಬಗಳಿಗೆ ಬಿಕ್ಕಟ್ಟಿನ ಸಮಯದಲ್ಲಿ ಅಗತ್ಯವಾದ ಸಹಾಯ ನೀಡಲು ಅನುವು ಮಾಡಿಕೊಡುವುದು.
. ಕುಟುಂಬದ ಅಥವಾ ಪರಿವಾರದ ನೆರವಿಲ್ಲದ ಶ್ರವಣನ್ಯೂನ್ಯತೆ ಸಮಸ್ಯೆಗಳನ್ನು ಪರಿಹರಿಸುವುದು.
. ಶ್ರವಣನ್ಯೂನ್ಯತೆ ವ್ಯಕ್ತಿಯ ತಂದೆ ಅಥವಾ ತಾಯಿ, ಪಾಲಕರು ತೀರಿಕೊಂಡಾಗ ಅವರ ರಕ್ಷಣೆ ಪಾಲನೆಗೆ ಸೂಕ್ತ ಏರ್ಪಾಟು ಮಾಡುವುದು.
 . ಶ್ರವಣ ನ್ಯೂನ್ಯತೆವುಳ್ಳವರಿಗೆ ಸಮಾನ ಅವಕಾಶಗಳನ್ನು ದೊರಕಿಸಿಕೊಡುವುದು, ಅವರ ಹಕ್ಕುಗಳನ್ನು ಕಾಪಾಡಿ ಅವರು ಸಮಾಜದಲ್ಲಿ ಪೂರ್ಣವಾಗಿ ಭಾಗವಹಿಸುವುದಕ್ಕೆ ಅನುವು ಮಾಡಿಕೊಡುವುದು. ಈ ಮೇಲೆ ಹೇಳಿದ ಉದ್ದೇಶಗಳ ಪೂರೈಕೆಗೆ ಅಗತ್ಯವಾದ ಕೆಲಸಗಳನ್ನು ಮಾಡುವುದು.
 ರಾಷ್ಟ್ರೀಯ ಅಂಗವಿಕಲರ ಹಣಕಾಸು ಮತ್ತು ಅಭಿವೃದ್ಧಿ ನಿಗಮ
ಅಂಗವಿಕಲರು ಆರಂಭಿಸಿರುವ ಆರ್ಥಿಕ ಮತ್ತು ಆಭಿವೃದ್ಧಿ ಚಟುವಟಿಕೆಗಳನ್ನು ಉತ್ತೇಜಿಸಲು ರಾಷ್ಟ್ರೀಯ ಅಂಗವಿಕಲರ ಹಣಕಾಸು ಮತ್ತು ಅಭಿವೃದ್ಧಿ ನಿಗಮ ಪ್ರಾರಂಭವಾಗಿದೆ.
ಗುರಿ ಮತ್ತು ಉದ್ದೇಶಗಳು
 ಶ್ರವಣ ನ್ಯೂನ್ಯತೆವುಳ್ಳವರಿಗೆ ಪ್ರಯೋಜನವಾಗುವಂತೆ ಅವರ ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸುವುದು.
 ಶ್ರವಣ ನ್ಯೂನ್ಯತೆವುಳ್ಳವರಿಗೆ ಪುನರ್ವಸತಿ ಕಲ್ಪಿಸಲು ಸಹಾಯಕವಾಗುವಂತೆ ಸ್ವಯಂ ಉದ್ಯೋಗವನ್ನು ಪ್ರೋತ್ಯಾಹಿಸುವುದು.
 ಶ್ರವಣ ನ್ಯೂನ್ಯತೆವುಳ್ಳವರಿಗೆ ಉನ್ನತ ವ್ಯಾಸಂಗ ಕೈಗೊಳ್ಳಲು ಮತ್ತು ವೃತ್ತಿಪರ ಶಿಕ್ಷಣ ಪಡೆಯುವುದಕ್ಕೆ ಸಹಯವಾಗಲು ಸಾಲವನ್ನು ನೀಡುವುದು.
 ಉತ್ಪಾದನಾ ಕೇಂದ್ರಗಳು ಉತ್ತಮ ರೀತಿಯಲ್ಲಿ ಕೆಲಸ ಮಾಡಲು ಸಹಾಯವಾಗುವಂತೆ ಶ್ರವಣನ್ಯೂನ್ಯತೆ ವುಳ್ಳವರಿಗೆ ತಾಂತ್ರಿಕ ಮತ್ತು ಉದ್ಯಮ ಶೀಲತೆಯ ಕೌಶಲ್ಯಗಳನ್ನು ಹೆಚ್ಚಿಸುವುದು.
 ಸ್ವಯಂ ಉದ್ಯೋಗ ಕೈಗೊಂಡ ಶ್ರವಣ ನ್ಯೂನ್ಯತೆವುಳ್ಳವರಿಗೆ /ನೋಂದಯಿತ ಅಂಗವಿಕಲರ ಕಾರ್ಖಾನೆ/ ಸಂಸ್ಥೆ /ಸಹಕಾರ ಸಂಘಗಳಲ್ಲಿ ತಯಾರಿಸಿದ ವಸ್ತುಗಳಿಗೆ ಮಾರುಕಟ್ಟೆ ಸೌಲಭ್ಯ ಮತ್ತು ಅವರು ಕಚ್ಚಾ ಸಾಮಗ್ರಿಗಳನ್ನು ಪಡೆಯಲು ಸಹಾಯ ಮಾಡುವುದು.

ಅನುಬಂಧ-೪: ಸಾರ್ವಜನಿಕರ ಮತ್ತು ಸಂಘ ಸಂಸ್ಥೆಗಳ ಹೊಣೆ
ಶ್ರವಣನ್ಯೂನ್ಯತೆ ವುಳ್ಳವರಿಗೆ ಕಾನೂನಿನ ಮೂಲಕ ಸಲ್ಲಬೇಕಾದ ಸೌಲಭ್ಯ ಮತ್ತು ಸೌಕರ್ಯಗಳನ್ನು ಅವರಿಗೆ ತಲುಪಿಸಬೇಕದದ್ದು ಸರ್ಕಾರದ ಹೊಣೆ ಮಾತ್ರವೇ ಅಲ್ಲ, ಈ ಸಮಾಜದ ಸದಸ್ಯರಾಗಿರುವ ನಮ್ಮೆಲ್ಲರ ಹೊಣೆಯೂ ಹೌದು. ನಾವು ಈ ಕೆಳಗಿನ ಪ್ರಯತ್ನಗಳನ್ನು ಮಾಡಬಹುದು.
 ಪ್ರತಿಯೊಂದು ಮಗುವಿನ ಜನನ ಒಳ್ಳೆಯ, ಸುರಕ್ಷಿತ ಹಾಗೂ ಶುದ್ಧ ವಾತಾವರಣದಲ್ಲಿ ಆಗುವಂತೆ ನೋಡಿಕೊಳ್ಳಬೇಕು.
 ಮಕ್ಕಳ ತಂದೆ-ತಾಯಂದಿರು ಅಥವಾ ಪೋಷಕರು ರೋಗ ನಿರೋಧಕ ಲಸಿಕೆ/ ಚುಚ್ಚುಮದ್ದುಗಳನ್ನು ಮಕ್ಕಳಿಗೆ ತಪ್ಪಿಸದೆ ಹಾಕಿಸಬೇಕು.
 ನಿಮ್ಮ ಶ್ರವಣ ನ್ಯೂನ್ಯತೆವುಳ್ಳ ಮಗುವಿಗೆ ಯಾವುದಾದರು ವೃತ್ತಿಪರ ತರಭೇತಿಯನ್ನು ಕೊಡಿಸಿ.
 ಶ್ರವಣ ನ್ಯೂನ್ಯತೆವುಳ್ಳವರೊಂದಿಗೆ ಸೌಜನ್ಯದಿಂದ ವರ್ತಿಸುವುದು.
 ಅವರ ದೋಷದ ಹೆಸರಿಟ್ಟು ಕರೆಯದೆ ಅವರ ಹೆಸರಿನಿಂದ ಕರೆಯುವುದು.
 ಆಟ, ಮನರಂಜನೆ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಶ್ರವಣನ್ಯೂನ್ಯತೆ ವುಳ್ಳವರನ್ನು ಸೇರಿಸಿಕೊಳ್ಳುವುದು.
 ಶ್ರವಣ ನ್ಯೂನ್ಯತೆವುಳ್ಳವರಿಗೆ ಹಕ್ಕುಗಳು ಮತ್ತು ಆಗತ್ಯಗಳ ಬಗ್ಗೆ ಸಮುದಾಯದಲ್ಲಿ ಅರಿವು ಮೂಡಿಸಿ ಅವರಿಗೆ ಕಲಿಯಲು ಮತ್ತು ಹಣ ಸಂಪಾದಿಸಲು ಅವಕಾಶ ದೊರಕಿಸಿಕೊಡುವುದು.
 ಸಂಸ್ಥೆಗಳಲ್ಲಿ, ಸಮಿತಿ, ಮುಂತಾದವುಗಳಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಮಟ್ಟದಲ್ಲಿ ಶ್ರವಣನ್ಯೂನ್ಯತೆ ವುಳ್ಳವರನ್ನು ಪಾಲ್ಗೊಳ್ಳುವಂತೆ ಮಾಡುವುದು.

ಅನುಬಂಧ-೫: ಅಂಗವಿಕಲರ [ಸಮಾನ ಅವಕಾಶ, ಹಕ್ಕುಗಳ ಸಂರಕ್ಷಣೆ ಮತ್ತು ಪೂರ್ಣ ವಿಕಾಸ] ಕಾಯಿದೆ ೧೯೯೫.
ಕಾನೂನಿನ ಉದ್ದೇಶ
ಶ್ರವಣ ನ್ಯೂನ್ಯತೆವುಳ್ಳವರ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹೊಣೆಯನ್ನು ನಿಗದಿಪಡಿಸಿ ಸರ್ಕಾರಗಳು ತಮ್ಮ ಶಕ್ತ್ಯಾನುಸಾರ ಶ್ರವಣ ನ್ಯೂನ್ಯತೆವುಳ್ಳವರಿಗೆ ವಿವಿಧ ಸೇವೆಗಳನ್ನು ಒದಗಿಸಿ ಮತ್ತು ಸೌಲಭ್ಯಗಳನ್ನು ಕಲ್ಪಿಸಿ ಅವರು ಎಲ್ಲಾ ಕ್ಷೇತ್ರಗಳಲ್ಲೂ ಭಾಗವಹಿಸುವಂತೆ ಮಾಡಲು ನೆರವು ನೀಡುವುದು. ಮೇಲ್ಕಂಡ ಉದ್ದೇಶಗಳನ್ನು ಕಾರ್ಯರೂಪಕ್ಕೆ ತರಲು ಸರ್ಕಾರಗಳು ಜವಾಬ್ಧಾರಿಯನ್ನು ನಿಗದಿಪಡಿಸಲು ಈ ಕಾಯಿದೆ ಶ್ರವಣ ನ್ಯೂನ್ಯತೆವುಳ್ಳವರಿಗೆ ವಿವಿಧ ಹಕ್ಕುಗಳನ್ನು ನೀಡಿದೆ. ಕಾಯಿದೆ ಅನ್ವಯ ಕಾರ್ಯಕ್ರಮಗಳನ್ನು ರೂಪಿಸಲು ಕರ್ನಾಟಕ ಸರ್ಕಾರ ರಾಜ್ಯ ಸಂಯೋಜನ ಸಮಿತಿ ಹಾಗೂ ರಾಜ್ಯ ಕಾರ್ಯಕಾರಿ ಸಮಿತಿಯನ್ನು ರಚಿಸಿದೆ ಮತ್ತು ಹೊಣೆ ನಿರ್ವಹಿಸಲು ಒಬ್ಬ ಆಯುಕ್ತರನ್ನು ನೇಮಿಸಿದೆ. ಶ್ರವಣ ನ್ಯೂನ್ಯತೆವುಳ್ಳವರಿಗೆ ರೂಪಿಸಿರುವ ಕಾರ್ಯಕ್ರಮಗಳ ಸಂಯೋಜನೆ ಅವುಗಳಿಗೆ ನಿಗದಿಪಡಿಸಿರುವ ಹಣದ ಬಳಕೆಯ ನಿರ್ವಹಣೆಯಲ್ಲದೆ ಶ್ರವಣ ನ್ಯೂನ್ಯತೆವುಳ್ಳವರಿಗೆ ಅವರ ಹಕ್ಕುಗಳ ಮತ್ತು ಸೌಲಭ್ಯಗಳು ತಲುಪುವಂತೆ ನೋಡಿಕೊಳ್ಳುವುದು ಆಯುಕ್ತರ ಕರ್ತವ್ಯವಾಗಿದೆ.

ಶಿಕ್ಷಣ
ವಿಶೇಷ ಶಾಲೆಗಳಲ್ಲಿ ವೃತ್ತಿಪರ ತರಬೇತಿಗಳಿಗೆ ಸೌಲಭ್ಯವನ್ನು ಒದಗಿಸಬೇಕು.
 ಶ್ರವಣನ್ಯೂನ್ಯತೆವುಳ್ಳ ವಿದ್ಯಾರ್ಥಿ ವೇತನವನ್ನು ನೀಡಬೇಕು.
ಶ್ರವಣನ್ಯೂನ್ಯತೆವುಳ್ಳವರ ಶಿಕ್ಷಣಕ್ಕೆ ಬೇಕಾಗುವ ಸಾಧನ ಸಾಮಗ್ರಿಗಳ ಬಗ್ಗೆ ಸಂಶೋಧನೆ ಮಾಡುವ
ಪ್ರಯತ್ನಗಳಿಗೆ ಪ್ರೋತ್ಸಾಹವನ್ನು ನೀದಬೇಕು.
ವಿಶೇಷ ಶಾಲೆಗಳು ಮತ್ತು ಸಮನ್ವಯ ಶಿಕ್ಷಣವನ್ನು ಉತ್ತೇಜಿಸಬೇಕು.
ಶ್ರವಣ ನ್ಯೂನ್ಯತೆವುಳ್ಳವರಿಗೆ ಸಾರ್ವಾಜನಿಕ ರಸ್ತೆಗಳ ವಾಹನ ದಟ್ಟನೆಯ ಸನ್ನಿವೇಶದಲ್ಲಿ ಸಹಾಯ
ಮಾಡುವುದು.
ಉದ್ಯೋಗ
ಸರ್ಕಾರ ಶ್ರವಣ ನ್ಯೂನ್ಯತೆವುಳ್ಳವರಿಗೆ ಮೀಸಲಿಡಬಹುದಾದಂತಹ ಉದ್ಯೋಗ ಮತ್ತು ಹುದ್ದೆಗಳನ್ನು ಗುರ್ತಿಸಬೇಕು. ಹಾಗೂ ಉದ್ಯೋಗವಕಾಶ ಕಲ್ಪಿಸುವಂತಹ ಯೋಜನೆಗಳನ್ನು ರೂಪಿಸಬೇಕು.
ಇವು ಕನಿಷ್ಟ ಪಕ್ಷ ಒಟ್ಟು ಹುದ್ದೆಯ ಶೇ. ೩ ರಷ್ಟಿರಬೇಕು. ಇದರಲ್ಲಿ ಶೇ. ೧ ರಷ್ಟು ಅಂಧರಿಗೆ ಅಥವಾ ಮಂದದೃಷ್ಟಿಯವರಿಗೆ ಶೇ. ೧, ಶ್ರವಣದೋಷವುಳ್ಳವರಿಗೆ ಶೇ. ೧, ಹಾಗೂ ಚಕನೆಯಲ್ಲಿ ನ್ಯೂನ್ಯತೆ ಅಥವಾ ಮೆದುಳು ವಾತದವರಿಗೆ ಮೀಸಲು. ಬಡತನ ನಿವಾರಣ ಯೋಜನೆಯಲ್ಲಿ ಶೇ. ೩ ರಷ್ಟು ಶ್ರವಣ ನ್ಯೂನ್ಯತೆವುಳ್ಳವರಿಗೆ ಮೀಸಲಿಡಬೇಕು.
ಕೆಲಸದ ನಿಮಿತದಲ್ಲಿ ಶ್ರವಣದೋಷ ಉಂಟಾದಾಗ ಯಾವುದೇ ನೌಕರನಿಗೆ ಬಡ್ತಿಯನ್ನು ನಿರಾಕರಿಸಲಾಗದು ಮತ್ತು ಕೆಲಸದಿಂದ ತೆಗೆದು ಹಾಕಲಾಗದು ಅವನಿಗೆ ಪರ್ಯಾಯವಾದ ಕೆಲಸವನ್ನು ಕೊಡಬೇಕು.

ಸಕಾರಾತ್ಮಕ ಕ್ರಮ
ಸರ್ಕಾರ ಶ್ರವಣ ನ್ಯೂನ್ಯತೆವುಳ್ಳವರಿಗೆ ರಿಯಾಯಿತಿ ದರದಲ್ಲಿ ಶ್ರವಣೋಪಕರಣಗಳನ್ನು ಒದಗಿಸುವುದು ಮತ್ತು ರಿಯಾಯಿತಿ ದರದಲ್ಲಿ ಭೂಮಿಯನ್ನು ಕೊಡುವುದು.

ಸಾಮಾಜಿಕ ಭದ್ರತೆ
ಸರ್ಕಾರವು ತನ್ನ ಹಣಕಾಸಿನ ಶಕ್ತಿಗೆ ಅನುಸಾರವಾಗಿ ಪ್ರತಿಯೊಬ್ಬನ ಪುನರ್‌ವಸತಿಗೆ ವ್ಯವಸ್ಥೆ ಮಾಡುವುದು.
ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ ನೊಂದಾಯಿಸಿ ಎರಡು ವ ಶಿಕ್ಷಣಕ್ಕೆಗಳಾದರೂ ನೌಕರಿ ದೊರಕದಿರುವ ಶ್ರವಣ ನ್ಯೂನ್ಯತೆವುಳ್ಳವರಿಗೆ ನಿರುದ್ಯೋಗ ಭತ್ಯೆಯನ್ನು ನೀಡಲಾಗುವುದು.
ಉದ್ಯೋಗಸ್ಥ ಶ್ರವಣ ನ್ಯೂನ್ಯತೆವುಳ್ಳವರಿಗೆ ಅಗತ್ಯವಿದಲ್ಲಿ ನಿರುದ್ಯೋಗಿಗಳಿಗೂ ಅನ್ವಯಿಸುವ ವಿಮಾ ಯೋಜನೆಗಳನ್ನು ರೂಪಿಸುವುದು.

ಅಧಿಕಾರಿಗಳು ಮತ್ತು ಸಮಿತಿಗಳು
ಕಾಯಿದೆಯನ್ನು ಅನುಷ್ಟಾನಗೊಳಿಸಲು ಸರ್ಕಾರ ರಚಿಸಿರುವ ಸಮಿತಿಗಳ ವಿವರ ಹೀಗಿದೆ.
ಕೇಂದ್ರ ಸಮನ್ವಯ ಸಮಿತಿ
ಕೇಂದ್ರ ಕಾರ್ಯಕಾರಿ ಸಮಿತಿ
ರಾಜ್ಯ ಸಮನ್ವಯ ಸಮಿತಿ
ಆಯುಕ್ತರು

 ಆಧಾರ ಗ್ರಂಥಗಳು:
ಕಾಂಪೋಡಿಯಂ -ಕರ್ನಾಟಕ ಸರ್ಕಾರ (ಕರ್ನಾಟಕ ಸರ್ಕಾರದ ಅಂಗವಿಕಲರಿಗಾಗಿನ
೨೦೦೮ ಯೋಜನೆಗಳು ಮತ್ತು ಕಾರ್ಯಕ್ರಮಗಳು
ವಾರ್ಷಿಕ ವರದಿ-(ಕರ್ನಾಟಕ ಸರ್ಕಾರ,೨೦೦೮) (ಹಿರಿಯ ನಾಗರಿಕ ಮತ್ತು ಅಂಗವಿಕಲರಕಲ್ಯಾಣ ಇಲಾಖೆ)
Who is disabled-Ali kawaj Spandana publications (2007)
Indian social problems-Madan Chetana publication (2001)
ಅಂಗವಿಕಲರು ಮತ್ತು ಕಾನೂನು- A. D. D India samooha publication 1999
ಪ್ರಸಕ್ತ ವರ್ಷದ ದಿನ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳು
ಅಂತರ್ಜಾಲ ಮಾಹಿತಿ

ವಿಷಯ : ಶ್ರವಣನ್ಯೂನ್ಯತೆವುಳ್ಳ ಹದಿಹರೆಯ ವಿದ್ಯಾರ್ಥಿಗಳ ಮನೋಸಾಮಾಜಿಕ- ಶೈಕ್ಷಣಿಕ ಸ್ಥಿತಿಗತಿ, ಕಾನೂನು- ಹಕ್ಕುಗಳ ಮತ್ತು ಸೌಲಭ್ಯಗಳ ಬಗೆಗಿನ ಅರಿವು ಒಂದು ಅಧ್ಯಯನ.
ಪ್ರಶ್ನಾವಳಿ
ಪ್ರತಿವಾದಿಯ ವೈಯಕ್ತಿಕ ಮಾಹಿತಿ
ಹೆಸರು: ----------------
ಲಿಂಗ : ಅ) ಗಂಡು ಆ) ಹೆಣ್ಣು
ತರಗತಿ : ______
ಮಾಧ್ಯಮ: ಅ) ಕನ್ನಡ ಆ) ಇಂಗ್ಲೀಷ್
 ಇ) ಇತರೆ
 ಧರ್ಮ :ಅ) ಹಿಂದೂ ಆ) ಮುಸ್ಲಿಂ, ಇ) ಕ್ರೈಸ ಈ) ಇತರೆ
ಮಾತೃ ಭಾಷೆ : ಅ) ಕನ್ನಡ ಆ) ಹಿಂದಿ, ಇ) ತೆಲುಗು ಈ) ಇತರೆ
ಕುಟುಂಬದ ಮಾದರಿ: ಅ) ವಿಭಕ್ತ ಆ) ಅವಿಭಕ್ತ
ಕುಟುಂಬದ ಪ್ರಸ್ತುತ ವಾಸ್ತವ್ಯ ಪ್ರದೇಶ?
ಅ) ಗ್ರಾಮ ಆ) ಹೋಬಳಿ ಕೇಂದ್ರ ಸ್ಥಾನ. ಇ) ತಾಲ್ಲೂಕು ಕೇಂದ್ರ ಸ್ಥಾನ ಈ) ನಗರ
 ೯. ನಿಮಗೆ ಕುಟುಂಬದಲ್ಲಿ ನಿರ್ಧಾರ ತೆಗೆದುಕೊಳ್ಳುವ ಅವಕಾಶ ಕಲ್ಪಿಸಲಾಗಿದೆಯೇ? ಅ) ಹೌದು ಆ) ಇಲ್ಲ
 ೧೦. ನಿಮ್ಮ ಸಮುದಾಯದಲ್ಲಿ ಶ್ರವಣದೋಷವುಳ್ಳ ಮಕ್ಕಳ ತೊಂದರೆಗಳಿಗೆ ಸಹಕರಿಸುವರೇ? ಅ) ಹೌದು ಆ) ಇಲ್ಲ
 ೧೧. ನಿಮಗೆ ಶ್ರವಣದೋಷ ಉಂಟಾಗಲು ಕಾರಣಗಳೇನು? ಅ) ಅನುವಂಶೀಯತೆ ಆ) ದೈತ್ಯ ಶಬ್ದದಿಂದ. . . ಇ) ಕಿವಿ ಸೋರುವಿಕೆಯಿಂದ ಈ) ಇತರೆ
೧೨. ಎಸ್. ಅರ್. ಚಂದ್ರಶೇಖರ್ ವಾಕ್ ಮತ್ತು ಶ್ರವಣ ಸಂಸ್ಥೆ ನಿಮ್ಮ ಸಮಸ್ಯೆಯನ್ನು
 ಬಗೆಹರಿಸುವಲ್ಲಿ ಹಾಗೂ ಪರಿಹಾರ ಒದಗಿಸುವಲ್ಲಿ ಸಹಾಯಕವಾಗಿದೆಯೇ? ಅ) ಹೌದು ಆ) ಇಲ್ಲ
 ೧೩. ನಿಮ್ಮ ಸಂಸ್ಥೆಯ ಕಾರ್ಯವೈಖರಿಯಿಂದ ನೀವು ಕಂಡುಕೊಂಡ ಗುಣಗಳು ಯಾವುವು? ಅ) ನಾಯಕತ್ವ ಗುಣ ಆ) ಸಂವಹನ ಕೌಶಲ್ಯ ಇ) ಸಹಾಯ ಮಾಡುವ ಗುಣ ಈ) ಮೇಲಿನ ಎಲ್ಲಾವು
 ೧೪. ನಿಮ್ಮ ಭಾಷಾ ಸಂವಹನದ ಕಲಿಕೆಯ ವಿಧಾನ ಯಾವುದು? ಅ) ಮೌಖಿಕ ವಿಧಾನ ಆ) ಲಿಖಿತ ವಿಧಾನ ಇ) ಸಂವಹನ ವಿಧಾನ ಈ) ಇತರೆ
 ೧೫. ನಿಮ್ಮ ಪ್ರತಿಭೆಯ ಅನಾವರಣಕ್ಕೆ ಎಸ್. ಅರ್. ಚಂದ್ರಶೇಖರ್ ವಾಕ್ ಮತ್ತು ಶ್ರವಣ ಸಂಸ್ಥೆ
 ಯಾವ ರೀತಿ ಸಹಾಯಕವಾಗಿದೆ? ಅ) ಮುಕ್ತ ಅವಕಾಶ, ಮಕ್ಕಳ ಹಿತಾಶಕ್ತಿ ಆ) ಅಭಿಪ್ರಾಯ ಅಭಿವ್ಯಕ್ತಿ ಸ್ವಾತಂತ್ರ್ಯ ಇ) ಪಠ್ಯೇತರ ಚಟುವಟಿಕೆಗಳು ಈ) ಮೇಲಿನ ಎಲ್ಲವು.
 ೧೬. ಶ್ರವಣದೋಷ ಸಮಸ್ಯೆ ಇದ್ದರೂ ನಿಮ್ಮಲ್ಲಿ ಓದುವ ಆಸಕ್ತಿ ಹೆಚ್ಚಿದೆಯೇ? ಅ) ಹೌದು ಆ) ಇಲ್ಲ
 ೧೭. ಶ್ರವಣದೋಷವುಳ್ಳ ಮಕ್ಕಳು ಎಂದು ನಿರ್ಧರಿಸುವುದಕ್ಕೆ ಎಷ್ಟು ಡೆಸಿಬಲ್‌ಗಳಷ್ಟು ಇರಬೇಕು? ಅ) ೪೦ ಡೆಸಿಬಲ್ ಆ) ೫೦ ಡೆಸಿಬಲ್ ಇ) ೫೫ ಡೆಸಿಬಲ್ ಈ) ೩೦ ಡೆಸಿಬಲ್
೧೮. ಎಸ್. ಅರ್. ಚಂದ್ರಶೇಖರ್ ವಾಕ್ ಮತ್ತು ಶ್ರವಣ ಸಂಸ್ಥೆಯಿಂದ ನಿಮ್ಮಲ್ಲಿ ಆದ
 ಬದಲಾವಣೆಗಳೇನು? ಅ)ಸಂವಹನದಲ್ಲಿ ಬದಲಾವಣೆ ಆ) ವರ್ತನೆಯಲ್ಲಿ ಸುಧಾರಣೆ ಇ) ಕ್ರಿಯಾಶೀಲತೆ ಈ) ಮೇಲಿನ ಎಲ್ಲಾವು.
 ೧೯. ನೀವು ಯಾವುದಾದರು ಇತರೆ ಶಬ್ದಗಳಿಗೆ ಪ್ರತಿಕ್ರಿಯಿಸಲು ಕಷ್ಟಪಡುತ್ತಿರಾ? ಅ)ಹೌದು ಆ)ಇಲ್ಲ
 ೨೦. ಶ್ರವಣದೋಷದಿಂದ ನಿಮ್ಮಲ್ಲಿ ಕೀಳುಹಿರಿಮೆಯ ಮನೋಭಾವ ಇದೆಯೇ? ಅ)ಹೌದು ಆ)ಇಲ್ಲ
 ೨೧. ವೈದ್ಯರು ಅಥವಾ ಸಂಬಂಧಿಸಿದ ಪ್ರಾಧಿಕಾರ ಗುರುತಿಸಿರುವ ನಿಮ್ಮ ಶ್ರವಣದೋಷದ ಶೇಖಡವಾರು ಪ್ರಮಾಣವನ್ನು ತಿಳಿಸಿರಿ?
 ೨೨. ನಿಮ್ಮಲ್ಲಿ ಶ್ರವಣದೋಷ ಹುಟ್ಟಿನಿಂದಲೂ ಇದೆಯೇ? ಅ)ಹೌದು ಆ) ಇಲ್ಲ ಇಲ್ಲವಾದರೆ ಅನಂತರದಲ್ಲಿ ಹೇಗೆ ಉಂಟಾಯಿತು? ಅ) ಅಪಘಾತ ಆ)ಧೀರ್ಘಾಕಾಲಿನ ಅನಾರೋಗ್ಯ ಇ) ಶಬ್ಧದಿಂದ ಈ) ಇತರೆ
 ೨೩. ನೀವು ಕನಸು ಕಟ್ಟಿಕೊಂಡಿರುವ ಸುಂದರ ಬದುಕು ಯಾವುದು? ಅ) ಹೆತ್ತವರೋಡಗೂಡಿ ಜೀವನ ನಡೆಸುವುದು. ಆ) ಅಂಗವಿಕಲರ ಪುನರ್ವಸತಿಗಾಗಿ ಸಂಘಟನೆಯ ಸಂಸ್ಥಾಪನೆ. ಇ) ಅವಿವಾಹಿತರಾಗಿದ್ದುಕೊಂಡು ಸಮಾಜ ಸೇವೆ ಸಮಾಜಕಾರ್ಯದಲ್ಲಿ ತೊಡಗಿಸಿಕೊಳ್ಳುವುದು. ಈ) ಯಾವುದೇ ನಿಶ್ಚಿತ ಸುಂದರ ಬದುಕನ್ನು ಕಲ್ಪಿಸಿಕೊಂಡಿಲ್ಲ.
 ೨೪. ನೀವು ಪ್ರಸ್ತುತ ವಾಸ್ತವ್ಯವಿರುವ ಸ್ಥಳ ಯಾವುದು? ಅ) ಹೆತ್ತವರೊಂದಿಗೆ ಆ)ಸಂಬಂಧಿಕರೊಂದಿಗೆ ಇ) ಬಾಡಿಗೆ ಕೊಠಡಿ ಈ) ಅಂಗವಿಕಲರ ವಿದ್ಯಾರ್ಥಿನಿಲಯ
 ೨೫. ನಿಮ್ಮ ವಿಭಾಗಗಳಲ್ಲಿನ ಶಿಕ್ಷಕರು ನಿಮಗೆ ವಿಶೇಷವಾಗಿ ಸಹಕರಿಸುತ್ತಿರುವರೇ? ಅ) ಹೌದು ಆ) ಇಲ್ಲ
 ಹೌದಾದರೆ ಸಹಕಾರದ ರೂಪವನ್ನು ಗುರ್ತಿಸಿರಿ ಅ) ವಿಶೇಷವಾದ ಕಾಳಜಿ ಆ) ಪಠ್ಯಪುಸ್ತಕ/ ಟಿಪ್ಪಣಿಗಳನ್ನು ಒದಗಿಸುವುದು ಇ) ಅಪ್ತಸಮಾಲೋಚನೆ ಮತ್ತು ಸಂವಾದಕ್ಕೆ ಅವಕಾಶ ಈ) ಇತರೆ ಸ್ಪಷ್ಟಪಡಿಸಿ
 ೨೬. ನಿಮ್ಮ ಸಹಪಾಠಿಗಳು ನಿಮಗೆ ವಿಶೇಷವಾಗಿ ಸಹಕರಿಸುತ್ತಿರುವರೇ? ಅ) ಹೌದು ಆ)ಇಲ್ಲ
 ಹೌದಾದರೆ ಸಹಕಾರದ ಸ್ವರೂಪವನ್ನು ಗುರ್ತಿಸಿರಿ? ಅ) ಅಧ್ಯಯನಕ್ಕೆ ಪ್ರೋತ್ಸಾಹ ಆ) ವಿಶೇಷ ಕಾಳಜಿ ಇ) ಕೇಳಿಸಿಕೊಳ್ಳುವುದಕ್ಕೆ ನೆರವು ಈ) ಇತರೆ
 ೨೭. ಶ್ರವಣನ್ಯೂನ್ಯತೆವುಳ್ಳ ವಿಧ್ಯಾರ್ಥಿಗಳಿಗೆ ಎಷ್ಟನೇ ವಯಸ್ಸಿನವರಗೆ ಉಚಿತ ಶಿಕ್ಷಣವನ್ನು
 ನೀಡಬೇಕಿದೇ ? ಅ) ೧೮ ವರ್ಷ ಆ) ೨೧ ವರ್ಷ ಇ) ೨೫ ವರ್ಷ ಈ) ಇತರೆ
 ೨೮. ಶ್ರವಣನ್ಯೂನ್ಯತೆವುಳ್ಳ ವಿಧ್ಯಾರ್ಥಿಗಳಿಗೆ ಉದ್ಯೋಗದಲ್ಲಿ ಮೀಸಲಾಗಿರುವ ಶೇಕಾಡವಾರು
 ಪ್ರಮಾಣ ಎಷ್ಟು? ಅ) ಶೇ. ೧ ಆ)ಶೇ. ೨ ಇ) ಶೇ. ೩ ಈ) ಇತರೆ
 ೨೯. ಶ್ರವಣನ್ಯೂನ್ಯತೆವುಳ್ಳ ಮಕ್ಕಳಿಗೆ ರಾಜ್ಯ ಸರ್ಕಾರ ಎಷ್ಟು ಕಿಲೋಮೀಟರ್‌ವರೆಗೆ ಉಚಿತ ಬಸ್
 ಪಾಸ್ ವ್ಯವಸ್ಥೆ ಕಲ್ಪಿಸಿದೆ? ಅ) ೫೦ ಕಿ. ಮೀ ಆ) ೧೦೦ ಕಿ. ಮೀ ಇ) ೧೫೦ ಕಿ. ಮೀ ಈ) ೨೦೦ ಕಿ. ಮೀ
 ೩೦. ನೀವು ಶ್ರವಣನ್ಯೂನ್ಯತೆವುಳ್ಳ ಸಹಪಾಠಿಗಳೊಂದಿಗೆ ಕ್ರೀಡಾಕೂಟಗಳಲ್ಲಿ
 ಭಾಗವಹಿಸುತ್ತಿರುವಿರಾ? ಅ) ಹೌದು ಆ) ಇಲ್ಲ
 ಹೌದಾದರೆ ನೀವು ಇದುವರೆಗೆ ಭಾಗವಹಿಸಲು ಸಾಧ್ಯವಾಗಿರುವ ಮಟ್ಟವನ್ನು ಗುರ್ತಿಸಿರಿ ಅ) ಶಾಲಾ ಮಟ್ಟದಲ್ಲಿ ಆ) ಅಂತರ್‌ಶಾಲಾ ಮಟ್ಟದಲ್ಲಿ ಇ) ರಾಜ್ಯಮಟ್ಟದಲ್ಲಿ ಈ) ರಾಷ್ಟ್ರಮಟ್ಟದಲ್ಲಿ
 ೩೧. ನಿಮಗೆ ತಿಳಿದಿರುವಂತೆ ಶಾಲೆಯಲ್ಲಿ ಶ್ರವಣನ್ಯೂನ್ಯತೆಯುಳ್ಳವರೊಂದಿಗೆ ಕ್ರೀಡೆ ಮತ್ತು ಸಾಂಸ್ಕ್ರತಿಕ
 ಕಾರ್ಯಕ್ರಮದಲ್ಲಿ ಸಾಧೆನೆ ಮಾಡಿ ಗೆದ್ದ ಪ್ರಶಸ್ತಿಗಳನ್ನು ಪಟ್ಟಿ ಮಾಡಿರಿ?
 ೩೨. ನೀವು ಸಾಂಸ್ಕ್ರತಿಕ ಚಟುವಟಿಕೆಗಳಲ್ಲಿ ಆಸಕ್ತರಾಗಿರುವಿರಾ? ಅ) ಹೌದು ಆ) ಇಲ್ಲ
೩೩. ಇಲ್ಲವಾದರೆ ಕಾರಣಗಳೇನು? ಅ) ಶ್ರವಣನ್ಯೂನ್ಯತೆಯ ಪರಿಣಾಮ ಆ) ಪ್ರಯೋಜನಗಳ ಮನವರಿಕೆ ಆಗದಿರುವುದು ಇ) ಪ್ರೋತ್ಸಾಹ ದೊರೆಯದಿರುವುದು ಈ) ಇತರೆ
 ೩೪. ಮನರಂಜನೆ ಹೊಂದಲು ಏನು ಮಾಡುತ್ತಿರಾ? ಅ) ಆಟ , ಕ್ವಿಜ್ ಆ) ಟಿ. ವಿ ,ಚಿತ್ರಕಲೆ ಇ) ಪ್ರಬಂಧ, ನೃತ್ಯ ಈ) ಮೇಲಿನ ಎಲ್ಲವು
೩೫. ಶ್ರವಣದೋಷದ ಸಮಸ್ಯೆಯಿಂದಲೂ ನೀವು ಮಾಡಿದ ಸಾಧನೆಯ ಕ್ಷೇತ್ರ ಯಾವುದು? ಅ) ಕ್ರೀಡೆ ಆ)ಸಾಹಿತ್ಯ ಇ)ಚಿತ್ರಕಲೆ ಈ) ಇತರೆ
 ೩೬. ನಿಮಗೆ ವಿಧ್ಯಾಭ್ಯಾಸದ ಸಲುವಾಗಿ ಸ್ವಯಂ ಸೇವಾ ಸಂಸ್ಥೆಗಳಿಂದ ನೆರವು ದೊರೆತಿದೆಯೇ? ಅ) ಹೌದು ಆ) ಇಲ್ಲ
 ೩೭. ಅಂಗವಿಕಲತೆಯ ಕಾಯ್ದೆ -೧೯೯೫ ರ ಬಗ್ಗೆ ನಿಮಗೆ ಅರಿವಿದೆಯೇ? ಅ) ಹೌದು ಆ) ಇಲ್ಲ
 ೩೮. ತರಗತಿಯಲ್ಲಿ ಕೇಳಿದ ಪ್ರಶ್ನೆಗಳಿಗೆ ನಿಧಾನಗತಿಯಲ್ಲಿ ಉತ್ತರಿಸಲು ಕಾರಣಗಳೇನು? ಅ) ಕೇಳಿಸುವಿಕೆಯಲ್ಲಿ ಸಾಧಾರಣತೆ ಆ) ಅಸಹಾಯಕತೆ ಇ) ಕಲ್ಪನೆಯಲ್ಲಿ ಮುಳುಗುವಿಕೆಈ) ಯಾವುದು ಇಲ್ಲ.
೩೯. ಎಸ್. ಅರ್. ಚಂದ್ರಶೇಖರ್ ವಾಕ್ ಮತ್ತು ಶ್ರವಣ ಸಂಸ್ಥೆ ಶ್ರವಣದೋಷವುಳ್ಳ ಮಕ್ಕಳಿಗೆ
ಶ್ರಮಿಸುತ್ತಿರುವುದರಿಂದ ನಿಮ್ಮ ಹಕ್ಕುಗಳ ಬಗ್ಗೆ ಅರಿವಾಗಿದೆಯೇ? ಅ) ಹೌದುಆ) ಇಲ್ಲ
 ೪೦. ಉನ್ನತ ಶಿಕ್ಷಣದಲ್ಲಿ ಶ್ರವಣ ನ್ಯೂನ್ಯತೆವುಳ್ಳವರಿಗೆ ಮೀಸಲಾಗಿರುವ ಶೇಕಡವಾರು ಪ್ರಮಾಣವೇಷ್ಟು? ಅ) ಶೇಕಡ ೫ % ಆ) ಶೇಕಡ ೩ % ಇ) ಶೇಕಡ ೨ % ಈ) ಇತರೆ