ನ್ಯಾಯವಾದಿಗಳೆಲ್ಲ ನ್ಯಾಯವಾದಿಗಳೇ?

ಅನ್ಯಾಯ-ಅಸತ್ಯದ ಮಾರ್ಗದಲ್ಲಿ ನಡೆಯುವವರು ಉತ್ತಮರು
ನ್ಯಾಯ-ಸತ್ಯದ ಮಾರ್ಗದಲ್ಲಿ ನಡೆಯುವವರು ಅಧಮರು
ನ್ಯಾಯ-ಅನ್ಯಾಯ ಹಾಗೂ ಸತ್ಯ-ಅಸತ್ಯ ಮಾರ್ಗಗಳೆರಡರಲ್ಲಿ ನಡೆಯುವವರು ಮಧ್ಯಮರು

ಮಧ್ಯಮರು ಬಲು ಜಾಣರೂ, ಅಂಟಿಕೊಳ್ಳದಿದ್ದರೂ ಅಂಟದಂತೆ ಇರುವವರು
ಅಧಮರು ಬಲು ಅಲ್ಪರೂ, ತೂ ಚೇಚೇ ಎಂದೆನಿಸಿಕೊಳ್ಳುವವರು
ಉತ್ತಮರು ಬಲು ಆಪ್ತರೂ, ಅಪ್ಪಿದ ಮೇಲೆ ಇದ್ದುದ್ದನ್ನು ಹೀರಿಕೊಂಡು ಸಿಪ್ಪೆ ಮಾಡಿ ಬೇರೆಯವರ ಮೇಲೆ ತಮ್ಮ ಎಂಜಲನ್ನು ಹಾಕಿ ತಮ್ಮದಲ್ಲ ಈ ಎಂಜಲು ಎಂದು ಸಮಾಜದ ಕನ್ನಡಿಗೆನೆ ಕಣ್ಣೊಡೆದು ತಮ್ಮ ಮೋಹಕ್ಕೆ ಬೀಳಿಸಿಕೊಳ್ಳುವವರು

ಈ ಸಧ್ಯದ ಪರಿಸ್ಥಿತಿಯಲ್ಲಿ ಈ ಮೇಲಿನ ಹೇಳಿಕೆ ನಿಮಗೆ ಸರಿ ಹಾಗೂ ಒಪ್ಪತಕ್ಕದ್ದು ಎಂದು ಅನಿಸಿಯೇ ಇದೆ ಅಲ್ಲವೆ?
ನಿಮಗೆ ತಿಳಿದಿರುವಂತೆ ಬಹುತೇಕ ರಾಜಕಾರಣಿಗಳು ಕಾನೂನು ಶಿಕ್ಷಣವನ್ನು ಪಡೆದವರೇ ಆಗಿರುತ್ತಾರೆ. ಅಂತೆಯೇ ನಮ್ಮ ದೇಶದ ಬಹುತೇಕ ರಾಜಕೀಯ ಪಕ್ಷಗಳಲ್ಲಿ ಕಾನೂನು ವೃತ್ತಿಯಲ್ಲಿರುವ ಮತ್ತು ನ್ಯಾಯವಾದಿಗಳೆಂದು ಹಾ, ನ್ಯಾಯವಾದಿಗಳೆಂದು ತಿರುಗಾಡುವ ಮೊಂಡುವಾದ ಮಾಡುವ ಮಾನವ ಗೋಸಂಬಿಗಳು ಇದ್ದೇ ಇದ್ದಾರೆ. ಕೊಂಚ ನೀವು ಕುಳಿತು ಯೋಚಿಸಿ ನೋಡಿ. ರಾಜಕೀಯ ಪಕ್ಷಗಳೊಳಗಿರುವ ನ್ಯಾಯವಾದಿಗಳು ಕೇವಲ ಪಕ್ಷಕ್ಕೆ ಸಂಬಂಧಪಟ್ಟಂತೆ ತಮ್ಮ ಸ್ವಾ-ಹಿತಾಸಕ್ತಿಗೋಸ್ಕರ ವಾದಮಾಡಲು ಅನ್ಯಾಯವನ್ನು ನ್ಯಾಯವಾಗಿಸುವ ಪರಿವರ್ತಕರಾಗಿ ಕಾರ್ಯವನ್ನೆಸಗುತ್ತಿದ್ದಾರೆ.

ವಿವಿಧ ರಾಜಕೀಯ ಪಕ್ಷಗಳು ಮಾಡುತ್ತಿರುವ ಅನ್ಯಾಯವನ್ನು ತಡೆಯಲಿಕ್ಕಾಗದೆ ಕೇವಲ ತಮ್ಮ ಸ್ವಾರ್ಥಕ್ಕಾಗಿ "ನಮ್ಮ ಪಕ್ಷ ಪ್ರಜಾ ಮುಖಿ, ನಾವು ಮಾತ್ರ ದೇಶವನ್ನು ಆಳಲು ಮತ್ತು ಬಡವರನ್ನು ಸಲಹಲು ಶಕ್ತರು" ಎಂದು ಬೀಗಲಿಕ್ಕೆ ಎಷ್ಟು ಬೇಕೋ ಅಷ್ಟು ದೋಚಿಕೊಂಡು ಹಗರಣಗಳನ್ನು ಮಾಡಿಕೊಂಡು ಅಧಿಕೃತವಾಗಿ ದೇಶಕ್ಕೆ ಒಳ್ಳೆಯದನ್ನು ಮಾಡದೆ ತಮಗೋಸ್ಕರ ಬೇಕಾದ್ದನ್ನು ಮಾಡಿಕೊಂಡು ಆ ಮೂತಿಗಿಷ್ಟು ಈ ಮೂತಿಗಿಷ್ಟು ಎಂದು ಒಳಗೊಳಗೆ ಕಿತ್ತಾಡಿಕೊಂಡು ಲಂಚದ ಕಿಡಿಯನ್ನು ತಾವು ಮಾತ್ರ ಹಾಕಿಕೊಳ್ಳದೆ ದೇಶಕ್ಕೂ ಹಾಕುತಾ ಇರುತ್ತಾರೆ.
ನೈಜ ನ್ಯಾಯಕ್ಕಾಗಿ ಹೋರಾಡುವವರು ನ್ಯಾಯಾಲಯಗಳಲ್ಲಿ ಇಂತಹ ಪಕ್ಷಗಳ ಹಗರಣಗಳಿಗೆ ಸಂಬಂಧಪಟ್ಟಂತಹ ದಾವೆಯನ್ನು ಹಾಕಿದಾಗ "ನಾನು ಸರಿ, ಅವರು ಸರಿ ಇಲ್ಲ ಅಥವಾ ನಮ್ಮ ಪಕ್ಷ ಸರಿಯಾಗಿಯೇ ಇದೆ" ಎಂದು ಮೊಂಡುವಾದ ಮಾಡಿಕೊಂಡು ನ್ಯಾಯದ ವ್ಯಾಪ್ತಿಯನ್ನು ಸಂಕುಚಿತಗೊಳಿಸುವ ಹಾಗೂ ನ್ಯಾಯದ ಸಾರವನ್ನು ಹೀರಿಕೊಂಡು ತಮ್ಮ ಸಾರವೇ ನ್ಯಾಯವೆಂದು ವಾದ ಮಾಡುವಂತಹ ತಮ್ಮದೇ ನ್ಯಾಯವಾದಿಗಳನ್ನು ನ್ಯಾಯಾಲಯಕ್ಕೆ ಅಟ್ಟುವ ಮೂಲಕ ತಮ್ಮ ನಡೆಯೇ ನ್ಯಾಯೋಚಿತವೆಂದು ಜನರಿಗೆ ಹೇಳಿ ಹೇಳಿ ಈ ರಾಜಕೀಯ ವ್ಯವಸ್ಥೆಯ ಮೇಲೆ ಜನರಿಗೆ ಜಿಗುಪ್ಸೆ ಬರುವ ಹಾಗೆ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ಇದರಲ್ಲಿ ಕೇವಲ ಆಯಾ ರಾಜಕೀಯ ಪಕ್ಷಗಳ ಪರವಾಗಿರುವ ನ್ಯಾಯವಾದಿಗಳಷ್ಟೇ ಇದ್ದಾರೆಂದು ಭಾವಿಸಿದರೆ ತಪ್ಪು ಇವರೊಂದಿಗೆ ದೇಶದ ರಾಜಕೀಯ ವ್ಯವಸ್ಥೆಯನ್ನು ತಮಗಿಷ್ಟ ಬಂದಂತೆ ತಮ್ಮ ಪಕ್ಷದವರ ಅಸ್ತಿತ್ವಕ್ಕನುಗುಣವಾಗಿ ಕಾರ್ಯಕ್ರಮವನ್ನು ಸಿದ್ಧಪಡಿಸಿ ಪ್ರಸಾರ ಮಾಡುವ ಅಥವಾ ವರದಿಯನ್ನು ಸಿದ್ಧಪಡಿಸಿ ಜನರು ಅದನ್ನು ಒಪ್ಪಿಕೊಳ್ಳುವಂತಹ ಮನೋಭಾವಕ್ಕೆ ತಳ್ಳುತ್ತಿರುವ ಸುದ್ದಿ ವಾಹಿನಿಗಳೂ ಹಾಗೂ ಪತ್ರಿಕೆಗಳು ಇವೆ. ಇದೂ ಅಲ್ಲದೆ, ಎಲ್ಲಾ ರೀತಿಯ ನ್ಯಾಯಾಲಯಗಳಲ್ಲಿ ಕಾರ್ಯನಿರ್ವಹಿಸಿದ ಕೆಲವು ನ್ಯಾಯಮೂರ್ತಿಗಳು ಹಾಗೂ ನ್ಯಾಯಾಧೀಶರೂ ಸಹ ಒಂದು ರಾಜಕೀಯ ಪಕ್ಷದವರ ಚಿಂತನೆಗೆ ಒಳಗಾಗಿರುತ್ತಾರೆ. ಅಂತೆಯೇ ಅವರು ಆ ಪಕ್ಷ ಸಂಕಷ್ಟಕ್ಕೆ ಈಡಾದಾಗ ಅವರು ಮೊಂಡುವಾದವನ್ನು ಮಾಡುವ ಮೂಲಕ ತಾನು ಸಂಪಾದಿಸಿದ್ದ ಗೌರವವನ್ನೂ ಸಹ ಕಳೆದುಕೊಳ್ಳುತ್ತಾರೆ. ಇಂತವರಿಗೆ ಹಣ ಮುಖ್ಯವೇ ಹೊರತು ಅವರು ಗಳಿಸಿದ ಗೌರವ ಮುಖ್ಯವಾಗಿರುವುದಿಲ್ಲ.

ನ್ಯಾಯವು ಅರಣ್ಯದಿಂದ ಹೊಮ್ಮುವ ಆಂಬ್ಲಜನಕವಿದ್ದಂತೆ.
ಅದರಲ್ಲಿ ಘಮಘಮವಾಗಲಿ ಅಥವಾ ಅಸಹ್ಯಕರ ವಾಸನೆಯಾಗಲಿ ಇರುವುದಿಲ್ಲ.
ಆದರೆ,
ಅನ್ಯಾಯವು ಘಮಘಮದಿಂದ ಹಾಗೂ ಅಸಹ್ಯಕರ ವಾಸನೆಯಿಂದ ಕೂಡಿರುತ್ತದೆ. ಮೋಸ ಮಾಡುವಂತಹ ಹಣವಿದ್ದವರಿಗೆ ಇದು ಸುಲಭವಾಗಿ ದೊರಕುತ್ತದೆ. ಇದರಿಂದಾಗಿ ನೊಂದವರು ಕಾನೂನಿಗೆ ವಿಮುಖಿಗಳಾಗಿ ಉಗ್ರವಾದಿಗಳಾಗುತ್ತಿದ್ದಾರೆ.

ನಮ್ಮ ದೇಶದ ಸಂಸದರೂ ಹಾಗೂ ಶಾಸಕರೂ ಒಂದಲ್ಲಾ ಒಂದು ರೀತಿಯಲ್ಲಿ ಅಪರಾಧಕೃತ್ಯವನ್ನು ಮಾಡಿದ್ದರೂ ಜನರಿಂದ ಆಯ್ಕೆಯಾಗಿದ್ದು ಹೇಗೆ?
ಅದು ಹೀಗೆ. ಹೇಗೆಂದರೆ, ನ್ಯಾಯವಾದಿಗಳು ನ್ಯಾಯವಾದಿಗಳಾಗದೆ ಅನ್ಯಾಯವನ್ನು ನ್ಯಾಯವಾಗಿ ಪರಿವರ್ತಿಸಿ ತಮ್ಮ ಪಕ್ಷದವರು ಮಾಡುವ ಅನ್ಯಾಯವನ್ನು ನ್ಯಾಯವೆಂದು ವಾದಿಸಿ ಅವರಿಗೆ ಜಯತಂದು ಕೊಡುವಂತಹ ನ್ಯಾಯದಮ್ಮಳನ್ನು ಕೊಲೆ ಮಾಡುತ್ತಿರುವ ಕೊಲೆಗೆಡುಕರ ಬೆಂಬಲದಿಂದ. ಇಂತವರನ್ನು ಇಲ್ಲವಾಗಿಸಲು ಹೇಗೆ ಸಾಧ್ಯ? ಅದೂ ಅಲ್ಲದೆ ನ್ಯಾಯದ ಅರ್ಥವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ತಿರಿಚಿಕೊಂಡಿದ್ದಾರಲ್ಲಾ?
ಇಂತವರು ಯಾವಾಗ ಅಳಿಯುತ್ತಾರೋ ಯಾರು ಬಲ್ಲರು?

ಸರ್ವೋಚ್ಛ ನ್ಯಾಯಾಲಯ ಪದೇ ಪದೇ "ವ್ಯಾಜ್ಯಗಳು ವಿಪರೀತವಾಗಿವೆ ಅವನ್ನು ಇತ್ಯರ್ಥಪಡಿಸುವಲ್ಲಿ ವಿಳಂಬವಾಗುತ್ತಿದೆ" ಎಂದು ಹೇಳುತ್ತಾ ಇದೆ. ಆದರೆ ಅದು ವಿವಿಧ ಪಕ್ಷಗಳ ಪರವಾಗಿರುವ ನ್ಯಾಯವಾದಿಗಳ ನಡತೆಗೆ ಸಂಬಂಧಿಸಿದಂತೆ ಮತ್ತು ವಿವಿಧ ಪಕ್ಷಗಳ ಪರವಾಗಿರುವ ನ್ಯಾಯವಾದಿಗಳು ಹೊಂದಿರುವ ಕಾನೂನು ಅರಿವಿಗೆ ಸಂಬಂಧಿಸಿದಂತೆ ಯಾವ ಕ್ರಮಗಳನ್ನೂ ಸಹ ಕೈಗೊಂಡಿಲ್ಲ ಎನಿಸುತ್ತದೆ. ಇದರಿಂದಾಗಿಯೂ ಸಹ ನ್ಯಾಯದ ಪ್ರಕ್ರಿಯೆಗೆ ತೊಡಕಾಗಿದೆ ಎನ್ನಬಹುದು.
ಓದುಗರೆ ನೀವು ನಿಮ್ಮಷ್ಟಕ್ಕೇನೆ ಯೋಚಿಸಿ ನೋಡಿ
ನ್ಯಾಯವಾದಿಗಳೆಲ್ಲಾ ನ್ಯಾಯವಾದಿಗಳೆ?
ಎಂದು.

ಹಿಗ್ಗಬೇಕು ಭಾರತ ಹಿಗ್ಗಿ ನಲಿಯಬೇಕು ಭಾರತ


ಹಿಗ್ಗಬೇಕು ಭಾರತ, ಹಿಗ್ಗಿ ನಲಿಯಬೇಕು ಭಾರತ
ನ್ಯಾಯ- ನೀತಿಯ ಸಾರವಾಗಿ
ರೈತರು ಹೊಂದುವ ಖುಷಿಯಾಗಿ
ಸಃಹೃದಯಿಗಳ ನಾಡಾಗಿ
ಹಿಗ್ಗಬೇಕು ಭಾರತ, ಹಿಗ್ಗಿ ನಲಿಯಬೇಕು ಭಾರತ.

ಹಿಗ್ಗಬೇಕು ಭಾರತ, ಹಿಗ್ಗಿ ನಲಿಯಬೇಕು ಭಾರತ
ಭಕ್ಷಕರೆಲ್ಲ ಇಲ್ಲವಾಗಿ
ಶ್ರಮ ಜೀವಿಗಳ ಶ್ರಮದ ಫಲವಾಗಿ
ರಾಜಕರಣಿಗಳ ಹುಸಿ  ಮಾತು ಇಲ್ಲವಾಗಿ
ಹಿಗ್ಗಬೇಕು ಭಾರತ, ಹಿಗ್ಗಿ ನಲಿಯಬೇಕು ಭಾರತ.

ಹಿಗ್ಗಬೇಕು ಭಾರತ, ಹಿಗ್ಗಿ ನಲಿಯಬೇಕು ಭಾರತ
ಅನಕ್ಷರಸ್ಥರು ಅಕ್ಷರಸ್ಥರಾಗಿ
ಶಿಕ್ಷಣವೆ ನಮ್ಮೆಲ್ಲರ ಹುಸಿರಾಗಿ
ಅನ್ಯಾಯದ ವಿರುದ್ಧ ನ್ಯಾಯದ ಗುಂಡಾಗಿ
ಇಲ್ಲದವರು ಉಳ್ಳವರಂತಾಗಿ
ಸ್ವಾತಂತ್ರದ ಗುಟುಕಿಗೆ ಭಾವೈಕ್ಯತೆಯ ನಾಡಾಗಿ
ಹಿಗ್ಗಬೇಕು ಭಾರತ, ಹಿಗ್ಗಿ ನಲಿಯಬೇಕು ಭಾರತ.

--------
ವಿವರಣೆ:
ಹಿಗ್ಗೋಕೆ ಭಾರತ, ಕುಗ್ಗೋಕೆ ಭಾರತವೇನು ರಬ್ಬರ್ ಅಲ್ಲ.
ಶತ್ರುತ್ವವು ಕುಗ್ಗಿದಾಗ
ಮಿತ್ರುತ್ವವು ಹಿಗ್ಗುವುದು.
ಶಾಂತಿ, ಸಹನೆ, ಅಹಿಂಸೆಗಳ ಮೈಗೊಡವುತ್ತಾ
 ಶಿಕ್ಷಣದ ದೀಪದ ಮೂಲಕ ಕತ್ತಲ ಹೊಡೆದು
ಹಿಗ್ಗುವುದು ಭಾರತ.
ಿದಕ್ಕಾಗಿ ನಾವು ಕಂಕಣ ಭದ್ದರಾಗೋಣ; ನಾಳೆಯ ದಿನಗಳಿಗೆ
ಕಾಯೋದು ಬೇಡವೇಬೇಡ.

ಸಮಾಜ ಕಾರ್ಯಕರ್ತರ ರಾಷ್ಟ್ರೀಯ ಸಂಘದ ನೀತಿ ಸಂಹಿತೆ

(ಸೂಚನೆ)
ಈ ಸಮಾಜ ಕಾರ್ಯಕರ್ತರ ರಾಷ್ಟ್ರೀಯ ಸಂಘದ ನೀತಿ ಸಂಹಿತೆಯು ಕನ್ನಡಕ್ಕೆ ಆಂಗ್ಲ ಭಾಷೆಯಿಂದ ಅನುವಾದಿಸಲ್ಪಟ್ಟಿದೆ. ಇದನ್ನು ಅಧಿಕೃತವಾಗಿ ಪುಸ್ತಕದ ರೂಪದಲ್ಲಿ ತರಲು $1500 ರಷ್ಟು ತಗಲುವುದರಿಂದ ಅಸಮರ್ಥನಾಗಿ ಈ ಪ್ರತಿಯನ್ನು ಬ್ಲಾಗ್ನಲ್ಲಿ ಹಾಕಲು ಮನಸ್ಸು ಮಾಡಿದ್ದೇನೆ.
ನಿಮಗೆ ಆಂಗ್ಲ ಪ್ರತಿ ಬೇಕಾಗಿದ್ದಲ್ಲಿ National Association of Social Workers ರವರ
http://www.naswdc.org/
ಅಂತರ್ಜಾಲಕ್ಕೆ ಭೇಟಿ ನೀಡಿ.
ಅಥವಾ ಅವರನ್ನು ಪತ್ರದ ಮೂಲಕ ಸಂಪರ್ಕಿಸುವಿರಾದರೆ,
750 First Street, NE, Suite 700, Washington DC 20002 U. S. A.
ವಿಳಾಸಕ್ಕೆ ಪತ್ರ ಬರೆಯಿರಿ.

ಅನುವಾದದಲ್ಲಿ ತಪ್ಪುಗಳು ಕಂಡುಬಂದಲ್ಲಿ ನನ್ನ ಗಮನಕ್ಕೆ ತನ್ನಿ. ಅಂತೆಯೆ  ಕ್ಷಮೆ ಇರಲಿ.
-----

ಸಮಾಜ ಕಾರ್ಯಕರ್ತರ ರಾಷ್ಟ್ರೀಯ ಸಂಘದ ನೀತಿ ಸಂಹಿತೆಯು
(೧೯೯೬ರ ಸಂಘದ ಪ್ರತಿನಿಧಿ ಸಭೆಯಿಂದ ಅನುಮೋದಿಸಿ ೨೦೦೮ರ ಪ್ರತಿನಿಧಿ ಸಭೆಯಲ್ಲಿ ಪರಿಷ್ಕರಿಸಲ್ಪಟ್ಟಿದೆ)

ಪೀಠಿಕೆ
ಸಾಮಾಜಿಕ ವೃತ್ತಿಯ ಮೂಲಭೂತ ಉದ್ದೇಶವು ಮಾನವರ ಜೀವನಮಟ್ಟವನ್ನು ಹೆಚ್ಚಿಸುವುದು ಮತ್ತು ಎಲ್ಲ ಮಾನವರ ಮೂಲಭೂತ ಅವಶ್ಯಕತೆಗಳನ್ನು ಪೂರೈಸುವುದು, ಅದರಲ್ಲೂ ವಿಶೇಷವಾಗಿ ಯಾರು ನೊಂದಿರುವರೋ, ಯಾರು ತುಳಿತಕ್ಕೆ ಒಳಗಾಗಿರುವರೋ ಮತ್ತು ಬಡವರೋ ಅಂತಹವರ ಬಗ್ಗೆ ಕಾಳಜಿವಹಿಸಿ ಅವರನ್ನು ಸಶಕ್ತಗೊಳಿಸುವುದು. ಸಾಮಾಜಿಕ ಹಿನ್ನೆಲೆಯಲ್ಲಿ ವ್ಯಕ್ತಿಯ ಒಳಿತು ಹಾಗೂ ಸಾಮಾಜಿಕ ಸ್ವಾಸ್ಥ್ಯದ ಬಗ್ಗೆ ಹೆಚ್ಚು ಒತ್ತು ನೀಡುವುದು ಸಮಾಜ ಕಾರ್ಯದ ಐತಿಹಾಸಿಕ ಮತ್ತು ವ್ಯಾಕ್ಯಾತ್ಮಕ ಲಕ್ಷಣ. ಮೂಲಭೂತವಾಗಿ ಸಮಾಜ ಕಾರ್ಯವೆಂದರೆ ಜೀವಿಗಳಿಗೆ ಉದ್ಭವಿಸುವ, ಉಂಟಾಗಬಹುದಾದ ತೊಂದರೆಗಳ ಬಗ್ಗೆ ಗಮನ ನೀಡುವುದು ಮತ್ತು ಆ ಸಮಸ್ಯೆಗಳಿಗೆ ಸ್ಪಂದಿಸುವುದು.
ಸಮಾಜ ಕಾರ್ಯಕರ್ತರು “ಅರ್ಥಿ”ಗಳ ಸಾಮಾಜಿಕ ನ್ಯಾಯ ಮತ್ತು ಸಾಮಾಜಿಕ ಬದಲಾವಣೆಗಳನ್ನು “ಅರ್ಥಿ”ಗಳ ಪರವಾಗಿ ಪ್ರಚುರಪಡಿಸುತ್ತಾರೆ. ವ್ಯಕ್ತಿಗಳು, ಕುಟುಂಬಗಳು, ಗುಂಪುಗಳು, ಸಂಸ್ಥೆಗಳು ಮತ್ತು ಸಮುದಾಯಗಳನ್ನೆಲ್ಲ ಒಟ್ಟುಗೂಡಿಸಿ “ಅರ್ಥಿ”ಗಳೆಂದು ಕರೆಯುತ್ತಾರೆ. ಸಮಾಜ ಕಾರ್ಯಕರ್ತರು ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ವೈವಿಧ್ಯತೆಯೆಡೆ ಸೂಕ್ಷ್ಮತೆಯನ್ನು ಹೊಂದಿದ್ದು, ತಾರತಮ್ಯ, ತುಳಿತ, ಬಡತನ ಮತ್ತಿತರ ಸಾಮಾಜಿಕ ಅನ್ಯಾಯಗಳನ್ನು ಕೊನೆಗಾಣಿಸಲು ದುಡಿಯುತ್ತಾರೆ. ಈ ಚಟುವಟಿಕೆಗಳು ನೇರವಾದ ಅನುಷ್ಠಾನ, ಸಮುದಾಯ ಸಂಘಟನೆ, ದೇಖರೈಖಿ ನೋಡಿಕೊಳ್ಳುವಿಕೆ, ಸಹಯೋಗ, ಪ್ರಬಂಧತ್ವ, ವಕಾಲತ್ತು, ಸಾಮಾಜಿಕ ಮತ್ತು ರಾಜಕೀಯ ಕ್ರಿಯೆ, ಕಾನೂನು ಅಭಿವೃದ್ಧಿ ಮತ್ತು ಅಳವಡಿಕೆ, ಶಿಕ್ಷಣ, ಸಂಶೋಧನೆ ಮತ್ತು ತಪಾಸಣೆಗಳನ್ನೊಳಗೊಂಡಿರುತ್ತವೆ. ಜೊತೆಗೆ ಜನರು ತಮ್ಮ ವೈಯಕ್ತಿಕ ಬೇಡಿಕೆಗಳನ್ನು ತಾವೇ ಪೂರೈಸಿಕೊಳ್ಳುವ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಸಮಾಜ ಕಾರ್ಯಕರ್ತರು ಒತ್ತು ನೀಡುತ್ತಾರೆ. ವ್ಯಕ್ತಿಗಳ ಅವಶ್ಯಕತೆಗಳು ಮತ್ತು ಸಾಮಾಜಿಕ ಸಮಸ್ಯೆಗಳಿಗೆ ಸಂಸ್ಥೆಗಳ, ಸಮುದಾಯಗಳ ಮತ್ತು ಇತರ ಸಾಮಾಜಿಕ ಸಂಸ್ಥೆಗಳ ಜವಾಬ್ದಾರಿಯನ್ನು ಹೆಚ್ಚಿಸಲೂ ಸಹ ಸಮಾಜ ಕಾರ್ಯಕರ್ತರು ಕೆಲಸ ಮಾಡುತ್ತಾರೆ.
ಸಮಾಜ ಕಾರ್ಯಕ್ಷೇತ್ರದ ಬೇರು ಮೂಲ ಮೌಲ್ಯಗಳಲ್ಲಿದೆ. ಈ ಮೂಲ ಮೌಲ್ಯಗಳು ಈ ಕ್ಷೇತ್ರದ ಇತಿಹಾಸದ ಉದ್ದಕ್ಕೂ ಸಮಾಜ ಕಾರ್ಯಕರ್ತರಿಂದ ಎತ್ತಿಹಿಡಿಯಲ್ಪಟ್ಟಿವೆ. ಜೊತೆಗೆ ಸಮಾಜ ಕಾರ್ಯದ ವಿಭಿನ್ನ ಉದ್ದೇಶ ಮತ್ತು ದೃಷ್ಟಿಕೋನದ ಬುನಾದಿಯಾಗಿವೆ.
·    ಸೇವೆ
·    ಸಾಮಾಜಿಕ ನ್ಯಾಯ
·    ವ್ಯಕ್ತಿಯ ಅಸ್ತಿತ್ವ ಮತ್ತು ಘನತೆ
·    ಮಾನವ ಸಂಬಂಧಗಳ ಮಹತ್ವ
·    ಪ್ರಾಮಾಣಿಕತೆ/ಋಜುತ್ವ
·    ಅರ್ಹತೆ/ದಕ್ಷತೆ
ಸಮಾಜ ಕಾರ್ಯಕ್ಷೇತ್ರದ ವೈಶಿಷ್ಟ್ಯವನ್ನು ಈ ಮೂಲ ಮೌಲ್ಯಗಳೆಂಬ ನಕ್ಷತ್ರ ಸಮೂಹ ಪ್ರತಿಬಿಂಬಿಸುತ್ತದೆ. ಮೂಲ ಮೌಲ್ಯಗಳು ಮತ್ತು ಅವುಗಳಿಂದ ಹೊರಹೊಮ್ಮುವ ಸೈದ್ಧಾಂತಿಕ ಕಿರಣಗಳು ಸಂಕೀರ್ಣವಾದ ಮಾನವೀಯ ಅನುಭವಗಳು ಹಾಗೂ ಸಮತೋಲಿತ ಸಂದರ್ಭದೊಳಗೇ ಇರಬೇಕು.
NASW ನೀತಿಸಂಹಿತೆಯ ಉದ್ದೇಶ :
ವೃತ್ತಿ ಧರ್ಮ ಸಮಾಜ ಕಾರ್ಯದ ತಳಪಾಯದಲ್ಲಿದೆ. ಈ ಕ್ಷೇತ್ರವು ತನ್ನ ಮೂಲಭೂತ ತತ್ತ್ವಗಳಿಗೆ, ನೈತಿಕ ಸಿದ್ಧಾಂತಗಳಿಗೆ ಮತ್ತು ನೈತಿಕ ಮಟ್ಟಗಳಿಗೆ ಸ್ಪಷ್ಟತೆಯನ್ನು ನೀಡುವ ಜವಾಬ್ದಾರಿಯನ್ನು ಹೊಂದಿದೆ. ಸಮಾಜ ಕಾರ್ಯಕರ್ತರ ರಾಷ್ಟ್ರೀಯ ಸಂಘದ ನೀತಿಸಂಹಿತೆಯು ಈ ಮೌಲ್ಯಗಳು, ತತ್ತ್ವಗಳು ಮತ್ತು ನಿಯಮಗಳನ್ನು ರೂಪಿಸುವುದರ ಮೂಲಕ ಸಮಾಜ ಕಾರ್ಯಕರ್ತರ ನಡವಳಿಕೆಗಳನ್ನು ನಿರ್ದೇಶಿಸುತ್ತದೆ. ಈ ನೀತಿ ಸಂಹಿತೆ ಎಲ್ಲ ಸಮಾಜ ಕಾರ್ಯಕರ್ತರಿಗೆ ಮತ್ತು ಸಾಮಾಜಿಕ ಕಾರ್ಯದ ವಿದ್ಯಾರ್ಥಿಗಳಿಗೆ ಅವರು ಮಾಡುವ ವೃತ್ತಿಪರ ಕೆಲಸ ಯಾವುದೇ ಇರಲಿ, ಯಾವುದೇ ರೀತಿಯ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರಲಿ ಸಂಬಂಧಪಟ್ಟಿರುತ್ತದೆ.
NASW ನೀತಿಸಂಹಿತೆಯು ಆರು ಮುಖ್ಯ ಕಾರಣಗಳಿಗಾಗಿ ಕೆಲಸ ಮಾಡುತ್ತದೆ.
೧. ಯಾವ ಉದ್ದೇಶಕ್ಕಾಗಿ ಸಾಮಾಜಿಕ ಕಾರ್ಯ ಸಂಸ್ಥೆಯು ಇರುವುದೋ, ಅದರ ಮೂಲ ಮೌಲ್ಯಗಳನ್ನು ನೀತಿ ಸಂಹಿತೆ ಗುರುತಿಸುತ್ತದೆ.
೨. ನೀತಿಸಂಹಿತೆಯು ವೃತ್ತಿಯ ಮೂಲ ಮೌಲ್ಯಗಳನ್ನು ಪ್ರತಿಬಿಂಬಿಸುವ ವಿಶಾಲವಾದ ನೈತಿಕ ತತ್ತ್ವಗಳನ್ನು ಕ್ರೋಢೀಕರಿಸುತ್ತದೆ ಮತ್ತು ಸಾಮಾಜಿಕ ಕಾರ್ಯ ನಿರ್ವಹಣೆಯಲ್ಲಿ ಬಳಸಲೇಬೇಕಾದ ನಿರ್ದಿಷ್ಟ ನೈತಿಕ ನಿಯಮಗಳ ಪಟ್ಟಿಯನ್ನು ರೂಪಿಸುತ್ತದೆ.
೩. ಸಮಾಜ ಕಾರ್ಯಕರ್ತರಿಗೆ ವೃತ್ತಿಪರ ಕರ್ತವ್ಯಗಳ ಸಮಸ್ಯೆ ಅಥವ ನೈತಿಕ ಅನಿರ್ದಿಷ್ಟತೆಗಳು ಉದ್ಭವವಾದಾಗ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯವಾಗುವಂತೆ ಈ ನೀತಿಸಂಹಿತೆಯನ್ನು ವಿನ್ಯಾಸಗೊಳಿಸಲಾಗಿದೆ.
೪. ಈ ನೀತಿಸಂಹಿತೆಯು ಸಾಮಾನ್ಯ ಜನರು ಸಮಾಜ ಕಾರ್ಯಕ್ಷೇತ್ರವನ್ನು ಪರಿಗಣಿಸುವಂತಹ ನೈತಿಕ ನಿಯಮಗಳನ್ನು ಒದಗಿಸುತ್ತದೆ.
೫. ನೀತಿಸಂಹಿತೆಯು ಸಾಮಾಜಿಕ ಕಾರ್ಯ ಸಂಸ್ಥೆಗೆ ಹೊಸಬರಾಗಿರುವ ಉದ್ಯೋಗಿಗಳಿಗೆ ಮೌಲ್ಯಗಳು, ನೈತಿಕ ಸಿದ್ಧಾಂತಗಳು ಮತ್ತು ನೈತಿಕ ನಿಯಮಗಳನ್ನು ಪರಿಚಯಿಸುತ್ತದೆ.
೬. ಸಮಾಜ ಕಾರ್ಯಕರ್ತರು ಅನೈತಿಕ ಚಟುವಟಿಕೆಗಳಲ್ಲಿ ತೊಡಗಿದ್ದಾರೋ ಇಲ್ಲವೋ ಎಂಬುದನ್ನು ಪರೀಕ್ಷಿಸಲು ಉಪಯೋಗವಾಗುವಂತೆ ಸ್ವತಃ ಸಮಾಜ ಕಾರ್ಯಕ್ಷೇತ್ರಕ್ಕೇ ನಿಯಮಗಳನ್ನು ನೀತಿ ಸಂಹಿತೆ ಸ್ಪಷ್ಟಪಡಿಸುತ್ತದೆ.
ಸಮಾಜ ಕಾರ್ಯಕರ್ತರ ರಾಷ್ಟ್ರೀಯ ಸಂಘವು ತನ್ನ ಸದಸ್ಯರ ವಿರುದ್ಧ ದಾಖಲಾದ ನೈತಿಕ ದೂರುಗಳನ್ನು ವಿಚಾರಿಸಲು ಸಾಮಾನ್ಯ ಪ್ರಕ್ರಿಯೆಗಳನ್ನು ಹೊಂದಿದೆ.* ಈ ನಿಯಮಗಳನ್ನು ಅಂಗೀಕರಿಸಲು ಸಮಾಜ ಕಾರ್ಯಕರ್ತರು ನಿಯಮಗಳನ್ನು ಜಾರಿಗೆ ತರಲು ಸಹಕರಿಸಬೇಕು, ಸಂಘದ ವಿಚಾರಣೆಯ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು ಮತ್ತು ಈ ನಿಯಮಗಳನ್ವಯ ಸಂಘ ಜರುಗಿಸುವ ಶಿಸ್ತಿನ ಕ್ರಮಗಳು ಅಥವಾ ತೀರ್ಪುಗಳಿಗೆ ಬದ್ಧವಾಗಿರಬೇಕು.  
ನೈತಿಕ ಪ್ರಕರಣಗಳು ಎದುರಾದಾಗ ನಿರ್ಧಾರಗಳನ್ನು ಮಾಡಲು ಮತ್ತು ಮಾರ್ಗದರ್ಶನ ನೀಡಲು ಈ ಸಂಹಿತೆ ಮೌಲ್ಯಗಳು, ತತ್ತ್ವಗಳು ಮತ್ತು ನಿಯಮಗಳ ಪಟ್ಟಿಯನ್ನು ನೀಡುತ್ತದೆ. ಸಮಾಜ ಕಾರ್ಯಕರ್ತರು ಎಲ್ಲಾ ಸನ್ನಿವೇಶಗಳಲ್ಲಿ ಹೀಗೇ ವರ್ತಿಸಬೇಕು ಎಂಬುದನ್ನು ಈ ಸಂಹಿತೆ ಕಾನೂನು ಮಾಡಿರುವುದಿಲ್ಲ. ವಿಶೇಷ ಸಂದರ್ಭಗಳಲ್ಲಿ ಸಮಸ್ಯೆಯ ಸಾಧ್ಯತೆ ಹಾಗೂ ಸಂಹಿತೆಯ ಯಾವ ಮೌಲ್ಯಗಳು, ತತ್ತ್ವಗಳು ಮತ್ತು ನಿಯಮಗಳು ಅನ್ವಯಿಸುತ್ತವೆ ಎಂಬುದನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕು. ನೈತಿಕ ಜವಾಬ್ದಾರಿಗಳು ವೈಯಕ್ತಿಕ ಮತ್ತು ಕುಟುಂಬದಿಂದ ಸಾಮಾಜಿಕ ಮತ್ತು ವೃತ್ತ್ಯಾತ್ಮಕವಾದ ಎಲ್ಲ ಮಾನವಸಂಬಂಧಗಳಿಂದ ಹರಿಯುತ್ತವೆ/ಉಂಟಾಗುತ್ತವೆ.
ಸಮಾಜ ಕಾರ್ಯಕರ್ತರ ರಾಷ್ಟ್ರೀಯ ಸಂಘದ ನೀತಿ ಸಂಹಿತೆಯು ಯಾವ ಮೌಲ್ಯಗಳು, ತತ್ತ್ವಗಳು ಮತ್ತು ನಿಯಮಗಳು ಅತಿ ಹೆಚ್ಚು ಪ್ರಮುಖ ಎಂದಾಗಲೀ ಮತ್ತು ಒಂದಕ್ಕೊಂದು ವೈರುಧ್ಯಗಳಿದ್ದಾಗ ಯಾವುದು ಹೆಚ್ಚು ತೂಗುತ್ತದೆ ಎಂದಾಗಲೀ ಉಲ್ಲೇಖಿಸುವುದಿಲ್ಲ. ಮೌಲ್ಯಗಳು, ನೈತಿಕ ತತ್ತ್ವಗಳು ಮತ್ತು ನೈತಿಕ ನಿಯಮಗಳಿಗೆ ಸಂಬಂಧಿಸಿದಂತೆ ಸಮಾಜ ಕಾರ್ಯಕರ್ತರಲ್ಲಿ ಸಕಾರಣವಾದ ಭಿನ್ನಾಭಿಪ್ರಾಯಗಳು ತಲೆದೋರುತ್ತವೆ. ಆಗ ಆ ಅಭಿಪ್ರಾಯಗಳ ವೈರುಧ್ಯಕ್ಕೆ ತಕ್ಕಂತೆ ಪ್ರಾಮುಖ್ಯತೆಯನ್ನು ನೀಡಬೇಕು. ಸಂದರ್ಭ ಬಂದಾಗ ನೈತಿಕ ನಿರ್ಧಾರ ತೆಗೆದುಕೊಳ್ಳುವ ಮೊದಲು ಸಂಬಂಧಿಸಿದ ಸಮಾಜ ಕಾರ್ಯಕರ್ತ/ರ್ತೆ ನಿಗೆ ತೀರ್ಪಿನ ಬಗ್ಗೆ ಮಾಹಿತಿ ನೀಡಬೇಕು. ಜೊತೆಗೆ ವೃತ್ತಿಯ ಯಾವ ನೈತಿಕ ನಿಯಮಗಳು ಅನ್ವಯಿಸುತ್ತವೆಯೆಂದು ಪರಾಮರ್ಶಿಸಿ ತೀರ್ಪು ನೀಡಬಹುದು ಎಂಬುದನ್ನು ಪರಿಗಣಿಸಬೇಕು.
ನೈತಿಕ ನಿರ್ಧಾರ ಮಾಡುವುದೊಂದು ಪ್ರಕ್ರಿಯೆ. ಬಹಳ ಸಲ ಸಮಾಜ ಕಾರ್ಯದ ಕ್ಲಿಷ್ಟವಾದ ನೈತಿಕ  ಪ್ರಕರಣಗಳ ಸರಳವಾದ ಉತ್ತರಗಳು ಸಿಗುವುದಿಲ್ಲ. ನೈತಿಕ ತೀರ್ಪಿನ ಮಾಹಿತಿ ನೀಡಿದ ಯಾವುದೇ ಸಂದರ್ಭದಲ್ಲಿ ಸಮಾಜ ಕಾರ್ಯಕರ್ತರು ಈ ಸಂಹಿತೆಯ ಎಲ್ಲ ಮೌಲ್ಯಗಳು, ತತ್ತ್ವಗಳು ಮತ್ತು ನಿಯಮಗಳನ್ನು ಪರಿಗಣಿಸಬೇಕು. ಸಮಾಜ ಕಾರ್ಯಕರ್ತರ ನಿರ್ಧಾರಗಳು ಮತ್ತು ಕ್ರಿಯೆಗಳು ಆತ್ಮದಿಂದ ಅಚಲವಾಗಿರಬೇಕು ಮತ್ತು ಈ ನೀತಿಸಂಹಿತೆಗೆ ಬದ್ಧವಾಗಿರಬೇಕು. 
ನೈತಿಕ ನಿಯಮಗಳಿಗೆ ಸಂಬಂಧಿಸಿದಂತೆ ಈ ಸಂಹಿತೆಯ ಜೊತೆಗೆ ಉಪಯುಕ್ತ ಬೇರೆ ಮಾಹಿತಿ ಮೂಲಗಳೂ ಇವೆ. ಸಮಾಜ ಕಾರ್ಯಕರ್ತರು ಈ ನೈತಿಕ ಸಿದ್ಧಾಂತಗಳು ಮತ್ತು ತತ್ತ್ವಗಳನ್ನು ಸಾಮಾನ್ಯವೆಂದು ಪರಿಗಣಿಸಬೇಕು. ಸಾಮಾಜಿಕ ಕಾರ್ಯ ಸಿದ್ಧಾಂತ ಮತ್ತು ಸಂಶೋಧನೆ, ಕಾನೂನುಗಳು, ನಿರ್ಣಯಗಳು, ಒಕ್ಕೂಟಗಳ ನಿಯಮಗಳು ಮತ್ತು ಇತರ ನೈತಿಕ ಸಂಬಂಧಿತ ಸಂಹಿತೆಗಳ ಮಧ್ಯೆ ಸಮಾಜ ಕಾರ್ಯಕರ್ತರು ಸಮಾಜ ಕಾರ್ಯಕರ್ತರ ರಾಷ್ಟ್ರೀಯ ಸಂಘದ ನೀತಿ ಸಂಹಿತೆಯನ್ನು ಪ್ರಾಥಮಿಕ ಆಕರವಾಗಿ ಪರಿಗಣಿಸತಕ್ಕದ್ದು. ಸಮಾಜ ಕಾರ್ಯಕರ್ತರು ಅವರ ಅರ್ಥಿಗಳ ನೈತಿಕ ನಿರ್ಧಾರ ಮಾಡುವಿಕೆ ಮತ್ತು ಅವರ ಸ್ವಂತ ವೈಯಕ್ತಿಕ ಮೌಲ್ಯಗಳು ಮತ್ತು ಸಾಂಸ್ಕೃತಿಕ ಮತ್ತು ಧಾರ್ಮಿಕ ನಂಬಿಕೆಗಳು ಮತ್ತು ರೂಢಿಗಳ ಮೇಲಿನ ಪರಿಣಾಮಗಳ ಅರಿವನ್ನು ಹೊಂದಿರಬೇಕು. ಯಾವುದೇ ವೈಯಕ್ತಿಕ ಮತ್ತು ವೃತ್ತ್ಯಾತ್ಮಕ ಮೌಲ್ಯಗಳ ನಡುವಿನ ಸಂಘರ್ಷಗಳ ಬಗ್ಗೆ ಅವರಿಗೆ ಅರಿವಿರಬೇಕು ಮತ್ತು ಅವುಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೇಕು. ಹೆಚ್ಚುವರಿ ಮಾರ್ಗದರ್ಶನಕ್ಕಾಗಿ ಸಮಾಜ ಕಾರ್ಯಕರ್ತರು ವೃತ್ತ್ಯಾತ್ಮಕ ತತ್ತ್ವಗಳು ಮತ್ತು ನೈತಿಕ ನಿರ್ಧಾರ ಮಾಡುವಿಕೆಯ ಬಗೆಗಿನ ಸೂಕ್ತ ಸಾಹಿತ್ಯವನ್ನು ಸಂಪರ್ಕಿಸಬೇಕು ಮತ್ತು ನೈತಿಕ ಗೊಂದಲಗಳು ಎದುರಾದಾಗ ಸೂಕ್ತ ಆಪ್ತಸಮಾಲೋಚನೆಯನ್ನು ಹುಡುಕಬೇಕು. ಇದು ಕೇಂದ್ರೀಯ ತಳಹದಿಯಿರುವ ಅಥವಾ ಸಾಮಾಜಿಕ ಕಾರ್ಯ ಸಂಘಸಂಸ್ಥೆಯ ನೈತಿಕ ಸಮಿತಿ, ನಿಯಂತ್ರಣಾಂಗ, ಜ್ಞಾನಶಕ್ತ ಸಹೋದ್ಯೋಗಿಗಳು, ಮೇಲ್ವಿಚಾರಕರು ಅಥವಾ ಕಾನೂನು ಪರಿಷತ್ತುಗಳನ್ನು ಒಳಗೊಳ್ಳಬಹುದು.
ಸಮಾಜ ಕಾರ್ಯಕರ್ತರ ನೈತಿಕ ಕಟ್ಟುಪಾಡುಗಳು ಸಂಘದ ನಿಯಮಗಳು ಅಥವಾ ಸಂಬಂಧಿಸಿದ ಕಾನೂನುಗಳು ಅಥವಾ ನಿರ್ಣಯಗಳ ಜೊತೆಗೆ ಸಮಸ್ಯೆ ಉದ್ಭವಿಸುವ ಸಂದರ್ಭವೂ ಬರಬಹುದು. ಅಂತಹ ಸಂದರ್ಭ ಬಂದಾಗ ಸಮಾಜ ಕಾರ್ಯಕರ್ತರು ಈ ಸಂಹಿತೆಯಲ್ಲಿ ಉಲ್ಲೇಖಿಸಿರುವ ಮೌಲ್ಯಗಳು, ತತ್ತ್ವಗಳು ಮತ್ತು ನಿಯಮಗಳಿಗೆ ಅನುಸಾರವಾಗಿಯೇ ಸಮಸ್ಯೆಯನ್ನು ಪರಿಹರಿಸುವ ಜವಾಬ್ದಾರಿಯುತ ಪ್ರಯತ್ನವನ್ನು ಮಾಡಬೇಕು. ಒಂದು ವೇಳೆ ಸಮಸ್ಯೆಯ ಸರಿಯಾದ ನಿರ್ಣಯ ಸಾಧ್ಯವಿಲ್ಲವೆಂದು ತೋರಿದಲ್ಲಿ, ನಿರ್ಧಾರ ತೆಗೆದುಕೊಳ್ಳುವ ಮೊದಲು ಸಮಾಜ ಕಾರ್ಯಕರ್ತರು ಸೂಕ್ತ ಸಲಹೆಯನ್ನು ಪಡೆಯತಕ್ಕದ್ದು. 
ಸಮಾಜ ಕಾರ್ಯಕರ್ತರ ರಾಷ್ಟ್ರೀಯ ಸಂಘದ ನೀತಿ ಸಂಹಿತೆಯನ್ನು ಸಂಘ ಮತ್ತು ವ್ಯಕ್ತಿಗಳು, ಕೇಂದ್ರಗಳು, ಸಂಸ್ಥೆಗಳು ಮತ್ತು ಅಂಗಗಳು (ಪರವಾನಿಗೆ ಮತ್ತು ನಿಯಂತ್ರಣ ಮಂಡಳಿಗಳು, ವೃತ್ತ್ಯಾತ್ಮಕ ಸಿಂಧುವಾದ ಒದಗಿಸುವವರು, ನ್ಯಾಯಾಲಯಗಳು, ನಿರ್ದೇಶಕರ ಕೇಂದ್ರೀಯ ಮಂಡಳಿಗಳು, ಸರ್ಕಾರಿ ಸಂಸ್ಥೆಗಳು ಮತ್ತು ಇತರ ವೃತ್ತ್ಯಾತ್ಮಕ ಗುಂಪುಗಳು) ಅಳವಡಿಸಿಕೊಳ್ಳಬಹುದು ಅಥವಾ ಪರಾಮರ್ಶೆಗೆ ಬಳಸಿಕೊಳ್ಳಬಹುದು. ಈ ಸಂಹಿತೆಯ ನಿಯಮಗಳ ಉಲ್ಲಂಘನೆಯು ಕಾನೂನು ಸಿಂಧುವಾಗುವಿಕೆ ಅಥವಾ ಕಾನೂನು ಉಲ್ಲಂಘನೆಯಾಗುವುದಿಲ್ಲ. ಕೇವಲ ಕಾನೂನು ಮತ್ತು ನ್ಯಾಯ ತೀರ್ಮಾನ ಪ್ರಕ್ರಿಯೆಯಲ್ಲಿ ಮಾತ್ರ ಅಂತಹ ಒಂದು ನಿರ್ಧಾರವನ್ನು ಮಾಡಬಹುದು. ಈ ಸಂಹಿತೆಯ ಉದ್ದೇಶಪೂರ್ವಕ ಉಲ್ಲಂಘನೆಯಾದಲ್ಲಿ ಅದು ಕೂಲಂಕುಷ ಪರಿಶೀಲನೆಯ ಪ್ರಕ್ರಿಯೆಗೆ ಒಳಪಡಬೇಕಾಗುತ್ತದೆ. ಈ ರೀತಿಯ ಪ್ರಕ್ರಿಯೆಗಳು ಸಾಮಾನ್ಯವಾಗಿ ಕಾನೂನು ಅಥವಾ ಆಡಳಿತಾತ್ಮಕ ಕ್ರಮಗಳಿಗೆ ಹೊರತಾಗಿರುತ್ತದೆ ಮತ್ತು ಕಾನೂನು ಪರಿಶೀಲನೆ ಅಥವಾ ಸಲಹಾ ವೃತ್ತಿ ಮತ್ತು ಸಂಸ್ಥೆಯು ತನ್ನ ಸದಸ್ಯರ ಮೇಲೆ ಶಿಸ್ತು ಕ್ರಮ ಜರುಗಿಸುವುದರಿಂದ ಮುಕ್ತವಾಗಿರುತ್ತದೆ.  
ನೀತಿಸಂಹಿತೆಯು ನೈತಿಕ ವರ್ತನೆಗೆ ಖಾತರಿ ಒದಗಿಸುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ, ಈ ನೀತಿ ಸಂಹಿತೆಯು ಎಲ್ಲ ನೈತಿಕ ಸಮಸ್ಯೆಗಳು ಅಥವಾ ಜಗಳಗಳು ಅಥವಾ ನೈತಿಕ ಸಮುದಾಯದ ಒಳಗೆ ಜವಾಬ್ದಾರಿಯುತ ಆಯ್ಕೆಗಳನ್ನು ಮಾಡುವ ಪ್ರಕ್ರಿಯೆಯಲ್ಲಿ ಇರಬಹುದಾದ ಶ್ರೀಮಂತಿಕೆ ಮತ್ತು ಕ್ಲಿಷ್ಟತೆಯ ಗ್ರಹಿಕೆಯನ್ನು ಪರಿಹರಿಸುವುದಿಲ್ಲ. ಬದಲಾಗಿ ವೃತ್ತಿಕಾರರು ಹೊಂದಲು ಇಚ್ಛೆಪಡುವ ಮತ್ತು ಅದರಿಂದ ಅವರ ಕ್ರಿಯೆಗಳನ್ನು ನಿರ್ಧಾರ ಮಾಡಬಹುದಾದ ಮೌಲ್ಯಗಳು, ನೈತಿಕ ತತ್ತ್ವಗಳು ಮತ್ತು ನೈತಿಕ ನಿಯಮಗಳನ್ನು ಮುಂದಿಡುತ್ತದೆ. ಸಮಾಜ ಕಾರ್ಯಕರ್ತರ ನೈತಿಕ ವರ್ತನೆಯು ನೈತಿಕತೆಯ ಅಭ್ಯಾಸದಲ್ಲಿ ಅವರ ವೈಯಕ್ತಿಕ ಬದ್ಧತೆಯ ಫಲಿತಾಂಶವಾಗಬೇಕು. ಸಮಾಜ ಕಾರ್ಯಕರ್ತರ ರಾಷ್ಟ್ರೀಯ ಸಂಘದ ನೀತಿಸಂಹಿತೆಯು ಈ ವೃತ್ತಿಯ ಮೌಲ್ಯಗಳನ್ನು ಎತ್ತಿಹಿಡಿಯುವ ಮತ್ತು ನೈತಿಕವಾಗಿ ನಡೆದುಕೊಳ್ಳುವ ಎಲ್ಲಾ ಸಮಾಜ ಕಾರ್ಯಕರ್ತರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ನೈತಿಕ ಪ್ರಶ್ನೆಗಳಿಗೆ ಉತ್ತರಿಸಬೇಕಾದ ಮತ್ತು ಸೂಕ್ತ ನೈತಿಕ ನಿರ್ಣಯಗಳನ್ನು ಮಾಡಬೇಕಾದ ಉತ್ತಮ ವಿಶ್ವಾಸ ಮತ್ತು ಉತ್ತಮ ವ್ಯಕ್ತಿತ್ವವುಳ್ಳ ವ್ಯಕ್ತಿಗಳು ತತ್ತ್ವಗಳು ಮತ್ತು ಸಿದ್ಧಾಂತಗಳನ್ನು ಅಳವಡಿಸಿಕೊಳ್ಳಬೇಕು.
ನೈತಿಕ ತತ್ತ್ವಗಳು
ಈ ಕೆಳಗಿನ ವಿಶಾಲವಾದ ನೈತಿಕ ತತ್ತ್ವಗಳು ಸಮಾಜ ಕಾರ್ಯದ ಮೂಲ ಮೌಲ್ಯಗಳಾದ ಸೇವೆ, ಸಾಮಾಜಿಕ ನ್ಯಾಯ, ವ್ಯಕ್ತಿಯ ಘನತೆ ಮತ್ತು ಅಸ್ತಿತ್ವ, ಮಾನವ ಸಂಬಂಧಗಳ ಪ್ರಾಮುಖ್ಯತೆ, ಪ್ರಾಮಾಣಿಕತೆ ಮತ್ತು ಅರ್ಹತೆಗಳ ಮೇಲೆ ನಿಂತಿವೆ. ಈ ತತ್ತ್ವಗಳು ಎಲ್ಲಾ ಸಮಾಜ ಕಾರ್ಯಕರ್ತರು ಹೊಂದಲೇಬೇಕಾದ ಆದರ್ಶಗಳನ್ನು ಒತ್ತಿಹೇಳುತ್ತವೆ.
ಮೌಲ್ಯ : ಸೇವೆ
ನೈತಿಕ ತತ್ತ್ವ : ಸಮಾಜ ಕಾರ್ಯಕರ್ತರ ಪ್ರಾಥಮಿಕ ಗುರಿಯೇ ನೊಂದ ಜನರಿಗೆ ಸಹಾಯ ಮಾಡುವುದು ಮತ್ತು ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವುದು. ಸಮಾಜ ಕಾರ್ಯಕರ್ತರು ಉಳಿದವರ ಸೇವೆಯನ್ನು ಸ್ವ‌ಆಸಕ್ತಿಗಿಂತ ಹೆಚ್ಚಾಗಿ ಪರಿಗಣಿಸುವರು. ಸಮಾಜ ಕಾರ್ಯಕರ್ತರು ತಮ್ಮ ಜ್ಞಾನ, ಮೌಲ್ಯ ಮತ್ತು ಕೌಶಲ್ಯಗಳನ್ನು ಅವಶ್ಯಕತೆಯಿರುವ ಜನರಿಗೆ ಸಹಾಯ ಮಾಡಲು ಮತ್ತು ಸಾಮಾಜಿಕ ಸಮಸ್ಯೆಗೆ ಸ್ಪಂದಿಸಲು ಉಪಯೋಗಿಸುತ್ತಾರೆ. ಸಮಾಜ ಕಾರ್ಯಕರ್ತರು ತಮ್ಮ ವೃತ್ತಿಪರ ಕೌಶಲ್ಯದ ಕೆಲವು ಭಾಗವನ್ನು ಯಾವುದೇ ಅರ್ಹ ಆರ್ಥಿಕ ಫಲಾಪೇಕ್ಷೆಯಿಲ್ಲದೇ ಸ್ವಯಂ ಸೇವೆ ಸಲ್ಲಿಸುವಂತೆ ಹುರಿದುಂಬಿಸಲಾಗುತ್ತದೆ.
ಮೌಲ್ಯ : ಸಾಮಾಜಿಕ ನ್ಯಾಯ
ನೈತಿಕ ತತ್ತ್ವ : ಸಮಾಜ ಕಾರ್ಯಕರ್ತರು ಸಾಮಾಜಿಕ ಅನ್ಯಾಯಕ್ಕೆ ಸವಾಲೊಡ್ಡುತ್ತಾರೆ.
ಸಮಾಜ ಕಾರ್ಯಕರ್ತರು ವಿಶೇಷವಾಗಿ ಹೀನಾಯ ಸ್ಥಿತಿಯಲ್ಲಿರುವ ಮತ್ತು ತುಳಿತಕ್ಕೆ ಒಳಗಾದ ವ್ಯಕ್ತಿಗಳು ಮತ್ತು ಜನರ ಗುಂಪುಗಳ ಸಾಮಾಜಿಕ ಬದಲಾವಣೆಯನ್ನು ಸಾಧಿಸುತ್ತಾರೆ. ಸಮಾಜ ಕಾರ್ಯಕರ್ತರು ಸಾಮಾಜಿಕ ಬದಲಾವಣೆ ಮಾಡುವ ಪ್ರಾರಂಭಿಕ ಹಂತದಲ್ಲಿ ಬಡತನ, ನಿರುದ್ಯೋಗ, ತಾರತಮ್ಯ ಮತ್ತಿತರ ಸಾಮಾಜಿಕ ಅನ್ಯಾಯಗಳ ಬಗ್ಗೆಯೇ ಹೆಚ್ಚು ಗಮನ ನೀಡುತ್ತಾರೆ.
ಮೌಲ್ಯ : ವ್ಯಕ್ತಿಯ ಘನತೆ ಮತ್ತು ಅಸ್ತಿತ್ವ
ನೈತಿಕ ತತ್ತ್ವ : ಸಮಾಜ ಕಾರ್ಯಕರ್ತರು ವ್ಯಕ್ತಿಯೊಳಗಿರುವ ಘನತೆ ಮತ್ತು ಅಸ್ತಿತ್ವವನ್ನು ಗೌರವಿಸುತ್ತಾರೆ.
ಸಮಾಜ ಕಾರ್ಯಕರ್ತರು ವೈಯಕ್ತಿಕ ಭಿನ್ನತೆ ಹಾಗೂ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ವೈವಿಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಪ್ರತಿಯೊಬ್ಬರನ್ನೂ ಕಾಳಜಿ ಹಾಗೂ ಗೌರವದಿಂದ ನೋಡಿಕೊಳ್ಳುತ್ತಾರೆ. ಸಮಾಜ ಕಾರ್ಯಕರ್ತರು ಅರ್ಥಿಗಳ ಜವಾಬ್ದಾರಿಯುತ ಸಾಮಾಜಿಕ ಸ್ವದೃಢತೆಯನ್ನು ಹೆಚ್ಚಿಸುತ್ತಾರೆ. ಸಮಾಜ ಕಾರ್ಯಕರ್ತರು ಅರ್ಥಿಗಳ ಸಾಮರ್ಥ್ಯ, ಬದಲಾವಣೆಗೆ ಅವಕಾಶ ಕಲ್ಪಿಸುವುದರ ಜೊತೆಗೆ ಅವರು ತಮ್ಮ ಅವಶ್ಯಕತೆಗಳಿಗೆ ಸ್ಪಂದಿಸುವಿಕೆಯನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಸಮಾಜ ಕಾರ್ಯಕರ್ತರು ಅರ್ಥಿಗಳಿಗೆ ಮತ್ತು ವಿಶಾಲವಾದ ಸಮಾಜದೆಡೆಗೆ ಇರುವ ತಮ್ಮ ಎರಡೆರಡು ಜವಾಬ್ದಾರಿಯ ಸಂಪೂರ್ಣ ಅರಿವನ್ನು ಹೊಂದಿರುತ್ತಾರೆ. ಅವರು ಅರ್ಥಿಗಳ ಆಸಕ್ತಿಗಳು ಮತ್ತು ವಿಶಾಲವಾದ ಸಮಾಜದ ಆಸಕ್ತಿಗಳ ಮಧ್ಯದ ಘರ್ಷಣೆಯನ್ನು ವೃತ್ತಿಯ ಮೌಲ್ಯಗಳು, ನೈತಿಕ ತತ್ತ್ವಗಳು ಮತ್ತು ನೈತಿಕ ನಿಯಮಗಳ ಪ್ರಕಾರ ಸಾಮಾಜಿಕ ಜವಾಬ್ದಾರಿಯಿಂದ ಪರಿಹರಿಸುತ್ತಾರೆ.
ಮೌಲ್ಯ : ಮಾನವ ಸಂಬಂಧಗಳ ಪ್ರಾಮುಖ್ಯತೆ
ನೈತಿಕ ತತ್ತ್ವ : ಸಮಾಜ ಕಾರ್ಯಕರ್ತರು ಮಾನವ ಸಂಬಂಧಗಳ ಕೇಂದ್ರ ಪ್ರಾಮುಖ್ಯತೆಯನ್ನು ಗುರುತಿಸುತ್ತಾರೆ.
ಸಮಾಜ ಕಾರ್ಯಕರ್ತರು ಜನರ ನಡುವಿನ ಮತ್ತು ಮಧ್ಯದಲ್ಲಿನ ಸಂಬಂಧಗಳು ಬದಲಾವಣೆಯ ಪ್ರಮುಖ ದಾರಿಗಳೆಂಬುದನ್ನು ಅರ್ಥಮಾಡಿಕೊಳ್ಳುತ್ತಾರೆ. ಸಮಾಜ ಕಾರ್ಯಕರ್ತರು ಜನರನ್ನು ಸಹಾಯ ಮಾಡುವ ಪ್ರಕ್ರಿಯೆಯಲ್ಲಿ ಪಾಲುದಾರರನ್ನಾಗಿ ನೇಮಿಸುತ್ತಾರೆ. ಸಮಾಜ ಕಾರ್ಯಕರ್ತರು ವ್ಯಕ್ತಿಗಳ, ಕುಟುಂಬಗಳ, ಸಾಮಾಜಿಕ ಗುಂಪುಗಳ, ಸಂಸ್ಥೆಗಳ ಮತ್ತು ಸಮುದಾಯಗಳ ಒಳಿತನ್ನು ವೃದ್ಧಿಗೊಳಿಸಲು, ಪುನಃಸ್ಥಾಪಿಸಲು, ನೋಡಿಕೊಳ್ಳಲು ಮತ್ತು ಹೆಚ್ಚಿಸಲು ಉದ್ದೇಶಪೂರ್ವಕ ಪ್ರಯತ್ನದಿಂದ ಜನರಲ್ಲಿ ಸಂಬಂಧಗಳನ್ನು ಬಲಗೊಳಿಸಲು ಇಚ್ಛಿಸುತ್ತಾರೆ.
ಮೌಲ್ಯ : ಪ್ರಾಮಾಣಿಕತೆ
ನೈತಿಕ ತತ್ತ್ವ : ಸಮಾಜ ಕಾರ್ಯಕರ್ತರು ವಿಶ್ವಾಸಾರ್ಹ ರೀತಿಯಲ್ಲಿ ವರ್ತಿಸುತ್ತಾರೆ.
ಸಮಾಜ ಕಾರ್ಯಕರ್ತರು ಯಾವಾಗಲೂ ತಮಗೆ ಸಂಬಂಧಪಟ್ಟ ರೀತಿಯಲ್ಲಿ ವೃತ್ತಿಯ ಉದ್ದೇಶ, ಮೌಲ್ಯಗಳು, ನೈತಿಕ ತತ್ತ್ವಗಳು ಮತ್ತು ನೈತಿಕ ನಿಯಮಗಳ ಬಗ್ಗೆ ಜಾಗೃತರಾಗಿರುತ್ತಾರೆ. ಸಮಾಜ ಕಾರ್ಯಕರ್ತರು ಪ್ರಾಮಾಣಿಕವಾಗಿ ಮತ್ತು ಜವಾಬ್ದಾರಿಯುತವಾಗಿ ವರ್ತಿಸುತ್ತಾರೆ. ಅವರು ಯಾವ ಸಂಸ್ಥೆಗೆ ಸೇರಿರುತ್ತಾರೋ ಆ ಸಂಸ್ಥೆಯಲ್ಲಿ ನೈತಿಕ ಅಭ್ಯಾಸಗಳನ್ನು ಬೆಳೆಸುತ್ತಾರೆ.
ಮೌಲ್ಯ : ಅರ್ಹತೆ
ನೈತಿಕ ತತ್ತ್ವ : ಸಮಾಜ ಕಾರ್ಯಕರ್ತರು ತಮ್ಮ ಅರ್ಹತೆಯ ಕ್ಷೇತ್ರದಲ್ಲಿ ದುಡಿಯುತ್ತಾರೆ ಮತ್ತು ಅವರ ವೃತ್ತಿಪರ ಪರಿಣತಿಯನ್ನು ಹೆಚ್ಚಿಸಿಕೊಂಡು ಅಭಿವೃದ್ಧಿ ಹೊಂದುತ್ತಾರೆ.
ಸಮಾಜ ಕಾರ್ಯಕರ್ತರು ಅವರ ವೃತ್ತಿಪರ ಜ್ಞಾನ ಮತ್ತು ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲು ಹಾಗೂ ಅವುಗಳನ್ನು ನಿತ್ಯ ಅಳವಡಿಸಿಕೊಳ್ಳಲು ಸದಾ ಶ್ರಮಿಸುತ್ತಾರೆ. ಸಮಾಜ ಕಾರ್ಯಕರ್ತರು ವೃತ್ತಿಯ ಜ್ಞಾನದ ಬುನಾದಿಗೆ ಬಲ ನೀಡಲು ಉತ್ಸಾಹ ಹೊಂದಿರತಕ್ಕದ್ದು.
ನೈತಿಕ ನಿಯಮಗಳು
ಈ ಕೆಳಗಿನ ನೈತಿಕ ನಿಯಮಗಳು ಎಲ್ಲಾ ಸಮಾಜ ಕಾರ್ಯಕರ್ತರ ವೃತ್ತ್ಯಾತ್ಮಕ ಚಟುವಟಿಕೆಗಳಿಗೆ ಸಂಬಂಧಪಟ್ಟಿರುತ್ತವೆ. ಈ ನಿಯಮಗಳು (೧) ಅರ್ಥಿಗಳೆಡೆ ಸಮಾಜ ಕಾರ್ಯಕರ್ತರ ನೈತಿಕ ಜವಾಬ್ದಾರಿಗಳು (೨) ಸಹೋದ್ಯೋಗಿಗಳೆಡೆ ಸಮಾಜ ಕಾರ್ಯಕರ್ತರ ನೈತಿಕ ಜವಾಬ್ದಾರಿಗಳು (೩) ಸೇವಾ ಸಂಸ್ಥೆಗಳಲ್ಲಿ ಸಮಾಜ ಕಾರ್ಯಕರ್ತರ ನೈತಿಕ ಜವಾಬ್ದಾರಿಗಳು (೪) ವೃತ್ತಿಕಾರರಾಗಿ ಸಮಾಜ ಕಾರ್ಯಕರ್ತರ ಜವಾಬ್ದಾರಿಗಳು (೫) ಸಮಾಜ ಸೇವಾ ಕ್ಷೇತ್ರದಲ್ಲಿ ಸಮಾಜ ಕಾರ್ಯಕರ್ತರ ನೈತಿಕ ಜವಾಬ್ದಾರಿಗಳು ಮತ್ತು (೬) ವಿಶಾಲವಾದ ಸಮಾಜದಲ್ಲಿ ಸಮಾಜ ಕಾರ್ಯಕರ್ತರ ಜವಾಬ್ದಾರಿಗಳನ್ನು ಪರಿಗಣಿಸುತ್ತವೆ.
ಕೆಳಗಿರುವ ಕೆಲವು ನಿಯಮಗಳು ವೃತ್ತಿಯ ನಡತೆಗಾಗಿ ಹೇರಲೇಬೇಕಾದ ಮಾರ್ಗದರ್ಶಿ ಸೂತ್ರಗಳು ಮತ್ತು ಕೆಲವು ಐಚ್ಛಿಕವಾದವು. ಪ್ರತಿ ನಿಯಮದ ಕಟ್ಟುನಿಟ್ಟಾದ ಜಾರಿಯು ನೈತಿಕ ನಿಯಮಗಳ ಉದ್ದೇಶಪೂರ್ವಕ ಉಲ್ಲಂಘನೆಯಾದಾಗ ಪರಿಶೀಲಿಸುವ ಜವಾಬ್ದಾರಿ ಹೊಂದಿದವರ ವೃತ್ತ್ಯಾತ್ಮಕ ತೀರ್ಪನ್ನು ಅವಲಂಬಿಸಿರುತ್ತದೆ.
1. ಅರ್ಥಿಗಳೆಡೆ ಸಮಾಜ ಕಾರ್ಯಕರ್ತರ ನೈತಿಕ ಜವಾಬ್ದಾರಿಗಳು
೧.೦೧ . ಅರ್ಥಿಗಳಿಗೆ ಬದ್ಧವಾಗಿರಬೇಕು
ಅರ್ಥಿಗಳ ಜೀವನಮಟ್ಟವನ್ನು ಹೆಚ್ಚಿಸುವುದೇ ಸಮಾಜ ಕಾರ್ಯಕರ್ತರ ಪ್ರಾಥಮಿಕ ಜವಾಬ್ದಾರಿ. ಸಹಜವಾಗಿ ಹೇಳುವುದಾದರೆ, ಅರ್ಥಿಗಳ ಹಿತಾಸಕ್ತಿಯೇ ಮೊದಲ ಆದ್ಯತೆ. ಆದರೂ ಕೆಲವೊಮ್ಮೆ ಸಮಾಜ ಕಾರ್ಯಕರ್ತರ ಸಮಾಜದೆಡೆಗಿನ ದೊಡ್ಡ ಜವಾಬ್ದಾರಿ ಅಥವಾ ನಿರ್ದಿಷ್ಟ ಕಾನೂನು ಕಟ್ಟುಪಾಡುಗಳಿಂದಾಗಿ ಅರ್ಥಿಗಳೆಡೆಗಿನ ನಿಷ್ಠೆಗೆ ಚ್ಯುತಿಬರಬಹುದು. ಅಂತಹ ಸಂದರ್ಭದಲ್ಲಿ ಈ ಕುರಿತು ಅರ್ಥಿಗಳಿಗೆ ತಿಳಿಸಬೇಕು. (ಉದಾಹರಣೆಗೆ ಅರ್ಥಿಯು ಮಗುವನ್ನು ಬಲಾತ್ಕಾರ ಮಾಡಿದ ಅಥವಾ ತನಗೆ ತಾನು ಅಥವಾ ಬೇರೆಯವರಿಗೆ ತೊಂದರೆ ಮಾಡುವ ಹೆದರಿಕೆ ಇದ್ದಾಗ ಆ ಬಗ್ಗೆ ಕಾನೂನು ಸಮಾಜ ಕಾರ್ಯಕರ್ತ/ರ್ತೆ ವರದಿ ನೀಡಬೇಕಾಗುತ್ತದೆ)
1.02. ಸ್ವ ನಿರ್ಧಾರ
ಸಮಾಜ ಕಾರ್ಯಕರ್ತರು ಅರ್ಥಿಗಳು ಸ್ವ ನಿರ್ಧಾರ ತೆಗೆದುಕೊಳ್ಳುವ ಹಕ್ಕನ್ನು ಗೌರವಿಸುತ್ತಾರೆ ಮತ್ತು ಅದನ್ನು ಬಲಗೊಳಿಸುತ್ತಾರೆ. ಜೊತೆಗೆ ಅರ್ಥಿಗಳು ತಮ್ಮ ಗುರಿಯನ್ನು ಗುರುತಿಸುವ ಪ್ರಯತ್ನದಲ್ಲಿ ಸಹಾಯ ಮಾಡುತ್ತಾರೆ ಮತ್ತು ಉದ್ದೇಶವನ್ನು ಸ್ಪಷ್ಟಪಡಿಸುತ್ತಾರೆ. ಸಮಾಜ ಕಾರ್ಯಕರ್ತರ ವೃತ್ತ್ಯಾತ್ಮಕ ತೀರ್ಪು, ಅರ್ಥಿಗಳು ತಮಗೆ ಅಥವಾ ಇತರರಿಗೆ ಗಂಭೀರವಾದ, ಮೊದಲೇ ತಿಳಿದುಕೊಳ್ಳಬಹುದಾದ (ದೂರದೃಷ್ಟಿ ಇರುವ) ಮತ್ತು ತತ್‌ಕ್ಷಣದ ತೊಂದರೆ ಉಂಟುಮಾಡುವ ಕ್ರಿಯೆ ಅಥವಾ ತೀವ್ರ ತೊಂದರೆ ಮಾಡಿದ ಸಂದರ್ಭದಲ್ಲಿ ಸಮಾಜ ಕಾರ್ಯಕರ್ತರು ಅರ್ಥಿಗಳ ಸ್ವ ನಿರ್ಧಾರದ ಹಕ್ಕನ್ನು ಸೀಮಿತಗೊಳಿಸಬಹುದು.
1.03. ತಿಳಿಸಿದ ಒಪ್ಪಿಗೆ/ ತಿಳಿಸಿದ ಒಪ್ಪಂದ
(ಅ) ಸಮಾಜ ಕಾರ್ಯಕರ್ತರು ಅರ್ಥಿಗಳ ಜೊತೆಗೆ ವೃತ್ತ್ಯಾತ್ಮಕ ಸಂಬಂಧದ ಮೇಲೆ, ಸೂಕ್ತವಾಗಿದ್ದಲ್ಲಿ ಸರಿಯಾದ ಮಾಹಿತಿ ನೀಡಿ ಅವರ ಒಪ್ಪಿಗೆ ತೆಗೆದುಕೊಂಡ ಸಂದರ್ಭದಲ್ಲಿ ಮಾತ್ರ ಅರ್ಥಿಗಳಿಗೆ ಸೇವೆಯನ್ನು ಒದಗಿಸತಕ್ಕದ್ದು. ಸಮಾಜ ಕಾರ್ಯಕರ್ತರು ಅರ್ಥಿಗಳಿಗೆ ಸೇವೆಗಳ ಉದ್ದೇಶ, ಸೇವೆಗಳಿಗೆ ಸಂಬಂಧಿಸಿದ ತೊಂದರೆಗಳು, ಹಣ ಕೊಡುವ ಮೂರನೆಯ ವ್ಯಕ್ತಿಯ ಅವಶ್ಯಕತೆಗಳು, ಸಂಬಂಧಿಸಿದ ಬೆಲೆ, ಸೂಕ್ತ ಬದಲಾವಣೆಗಳು, ಅರ್ಥಿಗಳ ಒಪ್ಪಿಗೆ ತಿರಸ್ಕರಿಸುವ ಅಥವಾ ಹಿಂತೆಗೆದುಕೊಳ್ಳುವ ಹಕ್ಕು ಮತ್ತು ಒಪ್ಪಿಗೆಯ ಅವಧಿಗಳಿಂದಾಗಿ ಉಂಟಾಗುವ ಸೇವೆಗಳ ಸೀಮಿತತೆಯನ್ನು ಸ್ಪಷ್ಟವಾದ ಮತ್ತು ಅರ್ಥವಾಗುವ ಭಾಷೆಯಲ್ಲಿ ತಿಳಿಸಿಕೊಡಬೇಕು. ಸಮಾಜ ಕಾರ್ಯಕರ್ತರು ಅರ್ಥಿಗಳಿಗೆ ಪ್ರಶ್ನೆ ಕೇಳುವ ಅವಕಾಶವನ್ನು ಕಲ್ಪಿಸತಕ್ಕದ್ದು.
(ಬ) ಅರ್ಥಿಗಳು ಅಕ್ಷರಸ್ಥರಲ್ಲದಿದ್ದಲ್ಲಿ ಅಥವಾ ಸಂಸ್ಥೆಯಲ್ಲಿ ಬಳಸುವ ಭಾಷೆಯನ್ನು ಅರ್ಥಮಾಡಿಕೊಳ್ಳಲು ಕಷ್ಟಪಡುತ್ತಿದ್ದಲ್ಲಿ ಸಮಾಜ ಕಾರ್ಯಕರ್ತರು ಅರ್ಥಿಗಳ ವಿಷಯ ಗ್ರಹಣಕ್ಕೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳತಕ್ಕದ್ದು. ಇದು ಅರ್ಥಿಗಳಿಗೆ ವಿಷದವಾದ ಮಾತಿನ ವಿವರಣೆ ಒದಗಿಸುವುದು ಅಥವಾ ಸಾಧ್ಯವಾದಾಗಲೆಲ್ಲ ದುಭಾಷಿ ಅಥವಾ ಭಾಷಾಂತರಕಾರರನ್ನು ನೇಮಿಸಿಕೊಳ್ಳುವುದನ್ನು ಒಳಗೊಂಡಿರಬಹುದು.
(ಕ) ಅರ್ಥಿಗಳು ತಿಳಿಸಿದ ಒಪ್ಪಿಗೆ ನೀಡುವ ಸಾಮರ್ಥ್ಯ ಹೊಂದದೇ ಇದ್ದಲ್ಲಿ ಸಮಾಜ ಕಾರ್ಯಕರ್ತರು ಸೂಕ್ತವಾದ ಮೂರನೇ ವ್ಯಕ್ತಿಯಿಂದ ಒಪ್ಪಿಗೆ ತೆಗೆದುಕೊಂಡು ಅರ್ಥಿಗಳ ಗ್ರಹಿಕೆಯ ಸಾಮರ್ಥ್ಯಕ್ಕೆ ತಕ್ಕಂತೆ ಆಗಾಗ ಮಾಹಿತಿ ನೀಡುವುದರ ಮೂಲಕ ಅವರ ಹಿತಾಸಕ್ತಿಯನ್ನು ಕಾಪಾಡತಕ್ಕದ್ದು. ಇಂತಹ ಸಂದರ್ಭಗಳಲ್ಲಿ ಸಮಾಜ ಕಾರ್ಯಕರ್ತರು ಮೂರನೇ ವ್ಯಕ್ತಿಯು ಅರ್ಥಿಗಳ ಆಶಯ ಮತ್ತು ಹಿತಾಸಕ್ತಿಗಳಿಗೆ ತಕ್ಕಂತ ರೀತಿಯಲ್ಲಿ ವರ್ತಿಸುವುದನ್ನು ಖಾತ್ರಿಗೊಳಿಸಬೇಕು.
(ಡ) ಅರ್ಥಿಗಳು ಸೇವೆಗಳನ್ನು ಉಚಿತವಾಗಿ ಪಡೆಯುತ್ತಿದ್ದಲ್ಲಿ ಸಮಾಜ ಕಾರ್ಯಕರ್ತರು ಸೇವೆಗಳ ಸ್ವರೂಪ ಮತ್ತು ವ್ಯಾಪ್ತಿ ಹಾಗೂ ಅರ್ಥಿಗಳ ಸೇವೆ ತಿರಸ್ಕರಿಸುವ ಹಕ್ಕಿನ ಬಗ್ಗೆ ಮಾಹಿತಿಯನ್ನು ಒದಗಿಸತಕ್ಕದ್ದು.
(ಇ) ವಿದ್ಯುನ್ಮಾನ ಮಾಧ್ಯಮಗಳ ಮೂಲಕ (ಕಂಪ್ಯೂಟರ್, ದೂರವಾಣಿ, ರೇಡಿಯೋ ಮತ್ತು ದೂರದರ್ಶನದಂತಹ) ಸೇವೆಗಳನ್ನು ಒದಗಿಸುವ ಸಮಾಜ ಕಾರ್ಯಕರ್ತರು ಆ ರೀತಿಯ ಸೇವೆಗಳ ಸೀಮಿತತೆ ಮತ್ತು ಅವುಗಳಿಗೆ ಸಂಬಂಧಿಸಿದ ತೊಂದರೆಗಳ ಬಗ್ಗೆ ಸ್ವೀಕೃತಿದಾರರಿಗೆ ಮಾಹಿತಿ ನೀಡತಕ್ಕದ್ದು.
(ಈ) ಸಮಾಜ ಕಾರ್ಯಕರ್ತರು ಅರ್ಥಿಗಳ ಧ್ವನಿ ಅಥವಾ ದೃಶ್ಯ ಚಿತ್ರೀಕರಣ ಮಾಡುವ ಮೊದಲು ಅಥವಾ ಅವರಿಗೆ ಸಲ್ಲಿಸುವ ಸೇವೆಗಳನ್ನು ಮೂರನೇ ವ್ಯಕ್ತಿ ಗಮನಿಸಲು ಅವಕಾಶಕೊಡುವಂತಿದ್ದರೆ ಮೊದಲು ಅರ್ಥಿಗಳ ತಿಳಿಸಿದ ಒಪ್ಪಿಗೆಯನ್ನು ತೆಗೆದುಕೊಳ್ಳತಕ್ಕದ್ದು.
1.04 ಅರ್ಹತೆ
(ಅ) ಸಮಾಜ ಕಾರ್ಯಕರ್ತರು ತಮ್ಮ ವಿದ್ಯಾರ್ಹತೆ, ತರಬೇತಿ, ಪರವಾನಿಗೆ, ಪ್ರಮಾಣಪತ್ರ, ಪಡೆದ ಸಲಹೆ, ಅನುಭವ ಅಥವಾ ಇತರ ವೃತ್ತ್ಯಾತ್ಮಕ ಅನುಭವದ ಮಿತಿಯಲ್ಲಿ ಮಾತ್ರ ಸೇವೆಯನ್ನು ಒದಗಿಸುವುದು ಹಾಗೂ ತಮ್ಮನ್ನು ಅರ್ಹರೆಂದು ಪ್ರತಿನಿಧಿಸತಕ್ಕದ್ದು.
(ಬ) ಸಮಾಜ ಕಾರ್ಯಕರ್ತರು ಸೂಕ್ತವಾದ ಅಧ್ಯಯನ, ತರಬೇತಿ, ಸಲಹೆ ಮತ್ತು  ಮಧ್ಯಸ್ತಿಕೆ ಅಥವಾ ತಂತ್ರಗಾರಿಕೆಯಲ್ಲಿ ಅರ್ಹರಾದ ವ್ಯಕ್ತಿಗಳ ಮೇಲ್ವಿಚಾರಣೆಯಡಿ ತೊಡಗಿಕೊಂಡ ನಂತರವೇ ವಿಶೇಷ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಬೇಕು ಅಥವಾ ಮಧ್ಯಸ್ತಿಕೆಯ ತಂತ್ರಗಳನ್ನು ಅಥವಾ ಹೊಸದಾದ ಮಾರ್ಗಗಳನ್ನು ಬಳಸಬೇಕು.
(ಕ) ಪ್ರಸ್ತುತ ಇರುವ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಾಮಾನ್ಯವಾದ ಮಾನ್ಯತೆ ಇರುವ ನಿಯಮಗಳು ಇಲ್ಲದಿದ್ದಲ್ಲಿ ಸಮಾಜ ಕಾರ್ಯಕರ್ತರು ಎಚ್ಚರಿಕೆಯಿಂದ ತೀರ್ಪನ್ನು ಕೈಗೊಳ್ಳಬೇಕು. ಅವರ ಕೆಲಸದ ದಕ್ಷತೆಯನ್ನು ಅನುಮೋದಿಸುವ ಜವಾಬ್ದಾರಿಯುತ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಅರ್ಥಿಗಳನ್ನು ಅಪಾಯದಿಂದ ರಕ್ಷಿಸಬೇಕು.
1.05 ಸಾಂಸ್ಕೃತಿಕ ಅರ್ಹತೆ ಮತ್ತು ಸಾಮಾಜಿಕ ವೈವಿಧ್ಯತೆ
(ಅ) ಸಮಾಜ ಕಾರ್ಯಕರ್ತರು ಎಲ್ಲಾ ಸಂಸ್ಕೃತಿಗಳಲ್ಲೂ ಅಸ್ತಿತ್ವದಲ್ಲಿರುವ ಶಕ್ತಿಯನ್ನು ಅರ್ಥಮಾಡಿಕೊಂಡು ಸಂಸ್ಕೃತಿ ಹಾಗೂ ಮಾನವ ವರ್ತನೆ ಮತ್ತು ಸಮಾಜದಲ್ಲಿ ಅದರ ಕೆಲಸವನ್ನು  ಅರ್ಥಮಾಡಿಕೊಳ್ಳತಕ್ಕದ್ದು.
(ಬ) ಸಮಾಜ ಕಾರ್ಯಕರ್ತರು ಅವರ ಅರ್ಥಿಗಳ ಸಂಸ್ಕೃತಿಯ ಮೂಲ ಜ್ಞಾನವನ್ನು ಹೊಂದಿರಬೇಕು. ಅರ್ಥಿಗಳ ಸಂಸ್ಕೃತಿ ಮತ್ತು ಜನರು ಹಾಗೂ ಸಾಂಸ್ಕೃತಿಕ ಗುಂಪುಗಳಲ್ಲಿನ ವ್ಯತ್ಯಾಸಗಳ ಸೂಕ್ಷ್ಮತೆಗೆ ತಕ್ಕಂತೆ ಸೇವೆಯಲ್ಲಿ ದಕ್ಷತೆಯನ್ನು ವ್ಯಕ್ತಪಡಿಸಲು ಸಮರ್ಥರಾಗಿರಬೇಕು.
(ಕ) ಸಮಾಜ ಕಾರ್ಯಕರ್ತರು ಬುಡಕಟ್ಟು, ಜನಾಂಗ , ರಾಷ್ಟ್ರೀಯತೆ, ಬಣ್ಣ, ಲಿಂಗ, ಲೈಂಗಿಕ ಮನೋಭಾವ, ಲಿಂಗ ಗುರುತು ಅಥವಾ ಅಭಿವ್ಯಕ್ತಿ, ವಯಸ್ಸು, ವೈವಾಹಿಕ ಸ್ಥಾನಮಾನ, ರಾಜಕೀಯ ನಂಬಿಕೆ, ಮತ, ವಲಸೆ ಸ್ಥಾನಮಾನ ಮತ್ತು ಮಾನಸಿಕ ಅಥವಾ ದೈಹಿಕ ನ್ಯೂನತೆಗೆ ಸಂಬಂಧಿಸಿದಂತೆ ಸಾಮಾಜಿಕ ವೈವಿಧ್ಯತೆಯ ಸ್ವರೂಪದ ಬಗ್ಗೆ ಶಿಕ್ಷಣವನ್ನು ಪಡೆದಿರಬೇಕು ಮತ್ತು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು.
1.06. ಹಿತಾಸಕ್ತಿಯ ವೈರುಧ್ಯ
(ಎ)ಸಮಾಜ ಕಾರ್ಯಕರ್ತರು ವೃತ್ತ್ಯಾತ್ಮಕ ನಿರ್ಧಾರ ಮತ್ತು ನಿಷ್ಪಕ್ಷಪಾತ ತೀರ್ಪನ್ನು ತೆಗೆದುಕೊಳ್ಳುವಾಗ ತಲೆದೋರುವ ಹಿತಾಸಕ್ತಿಯ ವೈರುಧ್ಯದ ಬಗ್ಗೆ ಎಚ್ಚರವಾಗಿರಬೇಕು ಮತ್ತು ಅದನ್ನು ನಿರ್ಲಕ್ಷಿಸಬೇಕು.
(ಬಿ) ಸಮಾಜ ಕಾರ್ಯಕರ್ತರು ಯಾವುದೇ ವೃತ್ತ್ಯಾತ್ಮಕ ಸಂಬಂಧದ ದುರ್ಲಾಭ ಪಡೆಯಬಾರದು ಮತ್ತು ಇತರರ ವೈಯಕ್ತಿಕ, ಮತೀಯ, ರಾಜಕೀಯ ಅಥವಾ ವ್ಯಾವಹಾರಿಕ ಹಿತಾಸಕ್ತಿಯನ್ನು ದುರ್ಬಳಕೆ ಮಾಡಬಾರದು.
(ಸಿ) ಅರ್ಥಿಗಳಿಗೆ ದೌರ್ಜನ್ಯ ಅಥವ ತೊಂದರೆಯಾಗುವ ಸಾಧ್ಯತೆ ಇದ್ದಾಗ ಸಮಾಜ ಕಾರ್ಯಕರ್ತರು ಅರ್ಥಿಗಳು ಅಥವಾ ಹಳೆಯ ಅರ್ಥಿಗಳ ಜೊತೆಗೆ ಎರಡು ಅಥವಾ ಹೆಚ್ಚು ಸಂಬಂಧಗಳನ್ನು ಹೊಂದಿರಬಾರದು. ಎರಡು ಅಥವಾ ಅದಕ್ಕಿಂತ ಹೆಚ್ಚು ಸಂಬಂಧಗಳನ್ನು ಹೊಂದುವುದು ಅನಿವಾರ್ಯವಾದಾಗ, ಸಮಾಜ ಕಾರ್ಯಕರ್ತರು ಅರ್ಥಿಗಳನ್ನು ರಕ್ಷಿಸುವ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಸ್ಪಷ್ಟ, ಸೂಕ್ತ ಮತ್ತು ಸಾಂಸ್ಕೃತಿಕ ಸೂಕ್ಷ್ಮ ಮಿತಿಯನ್ನು ರೂಪಿಸಲು ಅವರು ಜವಾಬ್ದಾರರಾಗಿರುತ್ತಾರೆ. (ಸಮಾಜ ಕಾರ್ಯಕರ್ತರು ವೃತ್ತ್ಯಾತ್ಮಕ, ಸಾಮಾಜಿಕ ಅಥವಾ ವ್ಯಾವಹಾರಿಕವಾಗಿ ಒಂದಕ್ಕಿಂತ ಹೆಚ್ಚು ಸಂಬಂಧಗಳೊಂದಿಗೆ ಸಂಬಂಧ ಹೊಂದಿದ್ದರೆ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಸಂಬಂಧಗಳು ಉಂಟಾಗುತ್ತವೆ. ಎರಡು ಅಥವಾ ಅದಕ್ಕಿಂತ ಹೆಚ್ಚಿನ ಸಂಬಂಧಗಳು ಒಟ್ಟಿಗೆ ಅಥವಾ ಒಂದರ ಹಿಂದೆ ಮತ್ತೊಂದು ಉಂಟಾಗಬಹುದು)
(ಡಿ) ಸಮಾಜ ಕಾರ್ಯಕರ್ತರು ಒಬ್ಬರಿಗೊಬ್ಬರು ಸಂಬಂಧವಿರುವ ಎರಡು ಅಥವಾ ಹೆಚ್ಚಿನ ಜನರಿಗೆ ಸೇವೆ ಒದಗಿಸುವ ಸಂದರ್ಭ ( ಉದಾ: ದಂಪತಿ, ಕುಟುಂಬದ ಸದಸ್ಯರು)ದಲ್ಲಿ ವ್ಯಕ್ತಿಯನ್ನು ಅರ್ಥಿಗಳೆಂದು ಪರಿಗಣಿಸುವ ಬಗ್ಗೆ ಮತ್ತು ಸೇವೆ ಸ್ವೀಕರಿಸುವ ವಿವಿಧ ವ್ಯಕ್ತಿಗಳೆಡೆಗೆ ಸಮಾಜ ಕಾರ್ಯಕರ್ತರ ವೃತ್ತ್ಯಾತ್ಮಕ ಕಟ್ಟುಪಾಡುಗಳ ಸ್ವರೂಪದ ಬಗ್ಗೆ ಸ್ಪಷ್ಟಪಡಿಸಬೇಕು. ಸೇವೆಗಳನ್ನು ಸ್ವೀಕರಿಸುವ ವ್ಯಕ್ತಿಗಳ ನಡುವೆ ಹಿತಾಸಕ್ತಿಯ ವೈರುಧ್ಯ ಇದ್ದಾಗ ಅಥವಾ ಘನವಾದ ವೈರುಧ್ಯದ ಪಾತ್ರವನ್ನು ನಿರ್ವಹಿಸುವ ಸಂದರ್ಭವಿದ್ದಾಗ ಸಮಾಜ ಕಾರ್ಯಕರ್ತರು ಪಕ್ಷದಾರರಿಗೆ  ತಮ್ಮ ಪಾತ್ರದ ಬಗ್ಗೆ ಸ್ಪಷ್ಟಪಡಿಸಬೇಕು. ಜೊತೆಗೆ ಯಾವುದೇ ಹಿತಾಸಕ್ತಿಯ ವೈರುಧ್ಯವನ್ನು ಕಡಿಮೆ ಮಾಡಲು ಸೂಕ್ತ ಕ್ರಮವನ್ನು ತೆಗೆದುಕೊಳ್ಳಬೇಕು.
1.07. ಖಾಸಗಿತನ ಮತ್ತು ಗೌಪ್ಯತೆ
(ಎ) ಸಮಾಜ ಕಾರ್ಯಕರ್ತರು ಅರ್ಥಿಗಳ ಖಾಸಗಿತನದ ಹಕ್ಕನ್ನು ಗೌರವಿಸಬೇಕು. ಸೇವೆ ಸಲ್ಲಿಸಲು ಅಥವಾ ಸಮಾಜ ಕಾರ್ಯದ ತಪಾಸಣೆ ನಡೆಸಲು ಅಥವಾ ಸಂಶೋಧನೆಗೆ ಅವಶ್ಯಕತೆಯಿಲ್ಲದಿದ್ದರೆ ಸಮಾಜ ಕಾರ್ಯಕರ್ತರು ಅರ್ಥಿಗಳ ಖಾಸಗಿ ಮಾಹಿತಿಯನ್ನು ಕೆದಕಬಾರದು.
(ಬಿ)ಅರ್ಥಿಗಳ ಸೂಕ್ತ ನ್ಯಾಯಸಮ್ಮತ ಒಪ್ಪಿಗೆಯಿದ್ದಾಗ ಅಥವಾ ಅರ್ಥಿಗಳ ಪರವಾಗಿ ಕಾನೂನು ಪ್ರಕಾರ ಒಪ್ಪಿಗೆ ನೀಡಲು ಕಾನೂನು ಪ್ರಕಾರ ಅಧಿಕೃತರಾದ ಬೇರೆ ವ್ಯಕ್ತಿ ಇದ್ದಾಗ ಸಮಾಜ ಕಾರ್ಯಕರ್ತರು ಗೌಪ್ಯವಾದ ಮಾಹಿತಿಯನ್ನು ಬಹಿರಂಗಪಡಿಸಬಹುದು.
(ಸಿ) ಬಲವಾದ ವೃತ್ತಿಪರ ಕಾರಣಗಳ ಹೊರತಾಗಿ ವೃತ್ತ್ಯಾತ್ಮಕ ಸೇವೆ ಒದಗಿಸುವಲ್ಲಿ ಲಭ್ಯವಾಗುವ ಎಲ್ಲ ಮಾಹಿತಿಗಳ ಗೌಪ್ಯತೆಯನ್ನು ಸಮಾಜ ಕಾರ್ಯಕರ್ತರು ರಕ್ಷಿಸಬೇಕು. ಸಾಮಾನ್ಯವಾದ ನಿರೀಕ್ಷೆಯೆಂದರೆ ಅರ್ಥಿಗಳಿಗೆ ಅಥವಾ ಇತರ ಗುರುತಿಸಬಹುದಾದ ವ್ಯಕ್ತಿಗಳನ್ನು ಗಂಭೀರ, ಸಂಭಾವ್ಯ ಮತ್ತು ತತ್‌ಕ್ಷಣದ ಅಪಾಯದಿಂದ ರಕ್ಷಿಸುವ ಅವಶ್ಯಕತೆಯ ಹೊರತಾಗಿ ಸಮಾಜ ಕಾರ್ಯಕರ್ತರು ಮಾಹಿತಿಯನ್ನು ಗೌಪ್ಯವಾಗಿಡಬೇಕು. ಎಲ್ಲ ಸಂದರ್ಭಗಳಲ್ಲಿ ಸಮಾಜ ಕಾರ್ಯಕರ್ತರು ನಿರೀಕ್ಷಿಸಿದ ಉದ್ದೇಶದ ಈಡೇರಿಕೆಗೆ ಬೇಕಾದಷ್ಟೇ ಸ್ವಲ್ಪ ಮಾತ್ರದ ಗೌಪ್ಯ ಮಾಹಿತಿಯನ್ನು ಬಹಿರಂಗಗೊಳಿಸಬೇಕು. ಅದೂ ಬಹಿರಂಗಗೊಳಿಸಿದ ಉದ್ದೇಶಕ್ಕೆ ನೇರವಾಗಿ ಸಂಬಂಧಿಸಿದಷ್ಟೇ ಮಾಹಿತಿಯನ್ನು ಬಿಟ್ಟುಕೊಡಬೇಕು. 
(ಡಿ) ತೀರ ಅವಶ್ಯಕವಿದ್ದಾಗ ಬಹಿರಂಗಗೊಳಿಸುವ ಮೊದಲು ಅರ್ಥಿಗಳಿಗೆ ಎಷ್ಟು ಸಾಧ್ಯವೋ ಅಷ್ಟು ಗೌಪ್ಯ ಮಾಹಿತಿ ಮತ್ತು ಅದರ ಸಾಧಕ ಬಾಧಕಗಳ ಬಗ್ಗೆ ತಿಳಿಸತಕ್ಕದ್ದು. ಕಾನೂನಿನ ಅವಶ್ಯಕತೆ ಇದ್ದಾಗ ಮಾತ್ರವಾಗಲೀ ಅಥವಾ ಅರ್ಥಿಯ ಒಪ್ಪಿಗೆಯ ಮೇರೆಗೆ ಸಮಾಜ ಕಾರ್ಯಕರ್ತರು ಗೌಪ್ಯ ಮಾಹಿತಿಯನ್ನು ಬಹಿರಂಗಗೊಳಿಸಲಿ, ಇದು ಅನ್ವಯವಾಗುತ್ತದೆ.
(ಇ) ಗೌಪ್ಯತೆಯ ಸ್ವರೂಪ ಮತ್ತು ಅರ್ಥಿಗಳ ಗೌಪ್ಯತೆಯ ಹಕ್ಕಿನ ಸೀಮಿತತೆಯ ಕುರಿತು ಸಮಾಜ ಕಾರ್ಯಕರ್ತರು ಅರ್ಥಿಗಳೊಂದಿಗೆ ಮತ್ತು ಇತರ ಆಸಕ್ತ ಜನರೊಂದಿಗೆ ಚರ್ಚಿಸಬೇಕು. ಎಲ್ಲಿ ಗೌಪ್ಯ ಮಾಹಿತಿಗಾಗಿ ವಿನಂತಿ ಬರುತ್ತದೆ ಮತ್ತು ಎಲ್ಲಿ ಕಾನೂನಿನನ್ವಯ ಗೌಪ್ಯ ಮಾಹಿತಿಯನ್ನು ಬಹಿರಂಗಗೊಳಿಸಬಹುದು ಎಂಬುದನ್ನು ಸಮಾಜ ಕಾರ್ಯಕರ್ತರು ಅರ್ಥಿಗಳ ನೆಲೆಯಲ್ಲಿ ಅವಲೋಕಿಸಬೇಕು. ಈ ಚರ್ಚೆಯು ಸಮಾಜ ಕಾರ್ಯಕರ್ತ/ರ್ತೆ ಮತ್ತು ಅರ್ಥಿಯ ಸಂಬಂಧದಲ್ಲಿ ಮತ್ತು ಇಡೀ ಸಂಬಂಧ ಇರುವವರೆಗೂ ಅವಶ್ಯಕವಿದ್ದಾಗಲೆಲ್ಲ ಸಾಧ್ಯವಾದಷ್ಟು ಬೇಗ ಸಂಭವಿಸಬೇಕು.
(ಎಫ್) ಸಮಾಜ ಕಾರ್ಯಕರ್ತರು ಕುಟುಂಬಗಳಿಗೆ, ದಂಪತಿಗಳಿಗೆ ಅಥವಾ ಗುಂಪುಗಳಿಗೆ ಆಪ್ತಸಲಹೆ ಮಾಡುವ ಸಂದರ್ಭದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಗೌಪ್ಯತೆಯ ಹಕ್ಕನ್ನು ಪರಿಗಣಿಸಿ ಮತ್ತು ಇತರರಿಂದ ಪಡೆದ ಮಾಹಿತಿಯ ಗೌಪ್ಯತೆಯನ್ನು ಕಾಪಾಡುವ ಕಟ್ಟುಪಾಡಿಗಾಗಿ ಎಲ್ಲ ಪಕ್ಷದಾರರ ನಡುವೆ ಒಪ್ಪಂದ ಮಾಡಿಸಬೇಕು. ಈ ರೀತಿಯ ಒಪ್ಪಂದವನ್ನು ಎಲ್ಲಾ ಅರ್ಥಿಗಳೂ ಗೌರವಿಸುವ ಖಾತ್ರಿಯಿಲ್ಲ ಎಂಬುದನ್ನು ಸಮಾಜ ಕಾರ್ಯಕರ್ತರು ಕುಟುಂಬದವರು, ದಂಪತಿಗಳು ಅಥವಾ ಗುಂಪು ಆಪ್ತಸಲಹೆಯಲ್ಲಿ ಭಾಗವಹಿಸುವವರಿಗೆ ತಿಳಿಸತಕ್ಕದ್ದು.
(ಜಿ) ಸಮಾಜ ಕಾರ್ಯಕರ್ತರು ಗೌಪ್ಯ ಮಾಹಿತಿಯನ್ನು ಬಹಿರಂಗಗೊಳಿಸುವ ಬಗ್ಗೆ ಸಮಾಜ ಕಾರ್ಯಕರ್ತರ, ಕೆಲಸದಾತರ ಮತ್ತು ಸಂಸ್ಥೆಯ ಧೋರಣೆ ಏನು ಎಂಬುದನ್ನು ಕುಟುಂಬ, ದಂಪತಿ, ವೈವಾಹಿಕ ಅಥವಾ ಗುಂಪು ಆಪ್ತಸಲಹೆಯಲ್ಲಿ ಭಾಗಿಯಾಗುವ ಅರ್ಥಿಗಳಿಗೆ ತಿಳಿಸಬೇಕು.
(ಎಚ್) ಅರ್ಥಿಗಳು ಒಪ್ಪಿಗೆ ನೀಡುವ ಅಧಿಕಾರ ನೀಡಿದ ಸಂದರ್ಭ ಹೊರತುಪಡಿಸಿ ಸಮಾಜ ಕಾರ್ಯಕರ್ತರು ಮೂರನೇ ವ್ಯಕ್ತಿಗೆ ಗೌಪ್ಯ ಮಾಹಿತಿಯನ್ನು ಬಿಟ್ಟುಕೊಡಬಾರದು.
(ಐ) ಸಮಾಜ ಕಾರ್ಯಕರ್ತರು ಖಾಸಗಿ ಸ್ಥಳವಲ್ಲದೇ ಬೇರೆಲ್ಲೂ ಸಹ ಗೌಪ್ಯ ಮಾಹಿತಿಯನ್ನು ಚರ್ಚಿಸಬಾರದು. ಸಮಾಜ ಕಾರ್ಯಕರ್ತರು ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ದಾರಿ, ನಿರೀಕ್ಷಣಾ ಕೊಠಡಿ, ಲಿಫ್ಟ್ ಮತ್ತು ರೆಸ್ಟೊರೆಂಟ್‌ಗಳಂತಹ ಅರೆ ಸಾರ್ವಜನಿಕ ಸ್ಥಳಗಳಲ್ಲಿ ಗೌಪ್ಯ ಮಾಹಿತಿಯನ್ನು ಚರ್ಚಿಸಬಾರದು.
(ಜೆ) ಕಾನೂನು ವಿಚಾರಣೆ ನಡೆಯುವಾಗ ಸಮಾಜ ಕಾರ್ಯಕರ್ತರು ಕಾನೂನು ಅವಕಾಶ ಕೊಟ್ಟಷ್ಟು ಅರ್ಥಿಗಳ ಗೌಪ್ಯತೆಯನ್ನು ಕಾಪಾಡಬೇಕು. ನ್ಯಾಯಾಲಯದಲ್ಲಿ ಅಥವಾ ಕಾನೂನು ಅಧಿಕಾರವಿರುವ ಇತರ ಸಂಸ್ಥೆಗಳು ಗೌಪ್ಯ ಅಥವಾ ಸಂರಕ್ಷಿತ ಮಾಹಿತಿಯನ್ನು ಅರ್ಥಿಗಳ ಒಪ್ಪಿಗೆಯಿಲ್ಲದೆ ಬಹಿರಂಗಗೊಳಿಸಲು ಸಮಾಜ ಕಾರ್ಯಕರ್ತರಿಗೆ ಆದೇಶಿಸಬಹುದು. ಇದು ಅರ್ಥಿಗಳಿಗೆ ಅಪಾಯ ಉಂಟುಮಾಡಬಹುದು. ಅಂತಹ ಸಂದರ್ಭದಲ್ಲಿ ಸಮಾಜ ಕಾರ್ಯಕರ್ತರು ಆದೇಶವನ್ನು ಹಿಂದೆ ಪಡೆಯುವಂತೆ ಅಥವಾ ಎಷ್ಟು ಸಾಧ್ಯವೋ ಅಷ್ಟು ಸೂಕ್ಷ್ಮವಾಗಿ ಆದೇಶವನ್ನು ಸೀಮಿತಗೊಳಿಸುವಂತೆ ನ್ಯಾಯಾಲಯಕ್ಕೆ ವಿನಂತಿಸಬೇಕು ಅಥವಾ ಸಾರ್ವಜನಿಕ ತಪಾಸಣೆಗೆ ನಿಲುಕದಂತೆ ಮುಚ್ಚಿದ ದಾಖಲೆಯಲ್ಲಿ ನಿರ್ವಹಿಸಬೇಕು.
(ಕೆ) ಸಮಾಜ ಕಾರ್ಯಕರ್ತರು ಮಾಧ್ಯಮದ ಸದಸ್ಯರ ವಿನಂತಿಗೆ ಪ್ರತಿಕ್ರಿಯಿಸುವಾಗ ಅರ್ಥಿಗಳ ಗೌಪ್ಯತೆಯನ್ನು ಕಾಪಾಡಬೇಕು.
(ಎಲ್) ಸಮಾಜ ಕಾರ್ಯಕರ್ತರು ಅರ್ಥಿಗಳ ಲಿಖಿತ ಮತ್ತು ವಿದ್ಯುನ್ಮಾನ ದಾಖಲೆಗಳು ಹಾಗೂ ಇತರ ಸೂಕ್ಷ್ಮ ಮಾಹಿತಿಗಳ ಗೌಪ್ಯತೆಯನ್ನು ಕಾಪಾಡಬೇಕು. ಅರ್ಥಿಗಳ ದಾಖಲೆಗಳು ಭದ್ರವಾದ ಸ್ಥಳದಲ್ಲಿ ಶೇಖರಿಸಿಟ್ಟಿರುವುದು ಮತ್ತು ಅನಧಿಕೃತ ವ್ಯಕ್ತಿಗಳಿಗೆ ಅರ್ಥಿಗಳ ದಾಖಲೆಗಳು ಲಭ್ಯವಾಗದೇ ಇರುವುದನ್ನು ಖಚಿತಗೊಳಿಸಲು ಸೂಕ್ತಕ್ರಮಗಳನ್ನು ತೆಗೆದುಕೊಳ್ಳಬೇಕು.
(ಎಮ್) ಕಂಪ್ಯೂಟರ್, ಇ-ಮೇಲ್, ಫಾಕ್ಸ್, ದೂರವಾಣಿ ಮತ್ತು ದೂರವಾಣಿ ಉತ್ತರಿಸುವ ಉಪಕರಣ ಹಾಗೂ ಇತರ ವಿದ್ಯುನ್ಮಾನ ಅಥವಾ ಕಂಪ್ಯೂಟರ್ ತಂತ್ರಜ್ಞಾನದ ಮೂಲಕ ಇತರರಿಗೆ ವರ್ಗಾಯಿಸಿದ ಮಾಹಿತಿಯ ಗೌಪ್ಯತೆಯನ್ನು ನಿರ್ವಹಿಸಬೇಕು ಮತ್ತು ಅದನ್ನು ಖಾತ್ರಿಗೊಳಿಸಲು ಎಚ್ಚರಿಕೆ ವಹಿಸಬೇಕು.
(ಎನ್) ಸಮಾಜ ಕಾರ್ಯಕರ್ತರು ಅರ್ಥಿಗಳ ದಾಖಲೆಗಳನ್ನು ಅವರ ಗೌಪ್ಯತೆಯನ್ನು ಕಾಪಾಡುವ ರೀತಿಯಲ್ಲಿ ವರ್ಗಾಯಿಸಬೇಕು ಅಥವಾ ವಜಾಗೊಳಿಸಬೇಕು. ಇದು ಸರ್ಕಾರಿ ದಾಖಲೆಗಳು ಮತ್ತು ಸಮಾಜ ಕಾರ್ಯದ ಪರವಾನಿಗೆಯಡಿ ಸಮಂಜಸವಾಗಿರುತ್ತದೆ.
 (ಒ) ಸಮಾಜ ಕಾರ್ಯಕರ್ತ/ರ್ತೆ ಕೆಲಸ ಬಿಟ್ಟಾಗ, ಕೆಲಸ ಮಾಡಲು ಸಾಧ್ಯವಿಲ್ಲದಿದ್ದಾಗ ಅಥವಾ ಅವರ ಸಾವು ಸಂಭವಿಸಿದಾಗ ಅರ್ಥಿಗಳ ಗೌಪ್ಯತೆಯನ್ನು ರಕ್ಷಿಸಲು ಸಮಾಜ ಕಾರ್ಯಕರ್ತರು ಸೂಕ್ತ ಎಚ್ಚರಿಕೆಯನ್ನು ವಹಿಸಬೇಕು.
(ಪಿ) ಸಮಾಜ ಕಾರ್ಯಕರ್ತರು ಗೌಪ್ಯ ಮಾಹಿತಿಯ ಬಹಿರಂಗಕ್ಕೆ ಅರ್ಥಿಗಳ ಒಪ್ಪಿಗೆ ಇದ್ದ ಸಂದರ್ಭ ಹೊರತುಪಡಿಸಿ ಅರ್ಥಿಗಳಿಗೆ ಶಿಕ್ಷಣ ಅಥವ ತರಬೇತಿ ನೀಡುವ ಸಂದರ್ಭದಲ್ಲಿ ಗುರುತಿಸುವ ಮಾಹಿತಿಯನ್ನು ಬಹಿರಂಗಗೊಳಿಸಕೂಡದು.
(ಕ್ಯು)ಸಮಾಜ ಕಾರ್ಯಕರ್ತರು ಗೌಪ್ಯ ಮಾಹಿತಿಯ ಬಹಿರಂಗಕ್ಕೆ ಅರ್ಥಿಗಳ ಒಪ್ಪಿಗೆ ಇದ್ದಲ್ಲಿ ಅಥವಾ ಬಹಿರಂಗಪಡಿಸಲು ಬಲವಾದ ಕಾರಣವಿರುವ ಸಂದರ್ಭ ಹೊರತುಪಡಿಸಿ ಆಪ್ತಸಮಾಲೋಚಕರೊಂದಿಗೆ ಅರ್ಥಿಗಳ ಜೊತೆ ಚರ್ಚಿಸುವಾಗ ಗುರುತಿಸುವ ಮಾಹಿತಿಯನ್ನು ಬಹಿರಂಗಗೊಳಿಸಕೂಡದು.
(ಆರ್) ಸಮಾಜ ಕಾರ್ಯಕರ್ತರು ಕಾಯಿಲೆ ಪೀಡಿತರಾದ ಅರ್ಥಿಗಳ ಗೌಪ್ಯತೆಯನ್ನು ಮುಂಚಿನ ನಿಯಮಗಳನ್ವಯ ರಕ್ಷಿಸಬೇಕು.
1.08 ದಾಖಲೆಗಳ ಲಭ್ಯತೆ
ಅ) ಸಮಾಜ ಕಾರ್ಯಕರ್ತರು ಅರ್ಥಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸೂಕ್ತ ರೀತಿಯಲ್ಲಿ ಅವರಿಗೆ  ಒದಗಿಸಬೇಕು.  ಅರ್ಥಿಗಳಿಗೆ ಅವರ ದಾಖಲೆಗಳು ಲಭ್ಯವಾದರೆ ಗಂಭೀರವಾದ ತಪ್ಪುಕಲ್ಪನೆಗಳು ಉಂಟಾಗಬಹುದು ಅಥವಾ ಅರ್ಥಿಗಳಿಗೆ ಹಾನಿಯಾಗಬಹುದು ಎಂದು ಸಮಾಜ ಕಾರ್ಯಕರ್ತರು ಭಾವಿಸಿದಲ್ಲಿ ಅರ್ಥಿಗಳು ಅವರ ದಾಖಲೆಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮತ್ತು ಸಮಾಲೋಚನೆಯನ್ನು ಒದಗಿಸತಕ್ಕದ್ದು. ಅರ್ಥಿಗಳಿಗೆ ಗಂಭೀರವಾದ ಆಪತ್ತು/ಹಾನಿ ಉಂಟಾಗುವ ಬಗ್ಗೆ ಬಲವಾದ ಸಾಕ್ಷ್ಯವಿರುವ ಸಂದರ್ಭದಲ್ಲಿ ಮಾತ್ರ ಸಮಾಜ ಕಾರ್ಯಕರ್ತರು ಅರ್ಥಿಗಳಿಗೆ ಸಂಬಂಧಪಟ್ಟ ದಾಖಲೆಗಳು ಅಥವಾ ದಾಖಲೆಯ ಭಾಗದ ಲಭ್ಯತೆಯನ್ನು ನಿಯಂತಿಸತಕ್ಕದ್ದು. ಅರ್ಥಿಗಳ ವಿನಂತಿಪತ್ರ ಮತ್ತು ದಾಖಲೆಯ ಎಲ್ಲ ಅಥವಾ ಕೆಲವು ಭಾಗವನ್ನು ಒದಗಿಸಿದೇ ಇರುವ ಬಗ್ಗೆ ಕಾರಣಗಳ ವಿವರಣೆಯನ್ನು ಅರ್ಥಿಗಳ ಕಡತದಲ್ಲಿ ದಾಖಲಿಸತಕ್ಕದ್ದು.
ಬ) ಅರ್ಥಿಗಳಿಗೆ ಅವರ ದಾಖಲೆಗಳನ್ನು ಒದಗಿಸುವ ಸಂದರ್ಭದಲ್ಲಿ ಸಮಾಜ ಕಾರ್ಯಕರ್ತರು ಆ ದಾಖಲೆಗಳಲ್ಲಿ ಗುರುತಿಸಲಾದ ಅಥವಾ ಚರ್ಚಿಸಲಾದ ಇತರ ವ್ಯಕ್ತಿಗಳ ಗೌಪ್ಯತೆಯನ್ನು ಕಾಪಾಡುವ ಕ್ರಮಗಳನ್ನು ತೆಗೆದುಕೊಳ್ಳಬೇಕು.
1.09  ಲೈಂಗಿಕ ಸಂಬಂಧಗಳು
ಅ) ಸಮಾಜ ಕಾರ್ಯಕರ್ತರು ಒಪ್ಪಿಗೆಯಿರಲಿ ಅಥವಾ ಬಲವಂತವಾಗಿರಲಿ ಯಾವ ಸಂದರ್ಭದಲ್ಲೂ ಪ್ರಸ್ತುತದ ಅರ್ಥಿಗಳೊಂದಿಗೆ ಲೈಂಗಿಕ ಚಟುವಟಿಕೆಗಳು ಅಥವಾ ಲೈಂಗಿಕ ಸಂಪರ್ಕದಲ್ಲಿ ತೊಡಗಬಾರದು.
ಬ) ಅರ್ಥಿಗೆ ದೌರ್ಜನ್ಯ ಅಥವಾ ಬಲವಾದ ಹಾನಿಯಾಗುವ ಸಂಭವವಿದ್ದಾಗ ಅರ್ಥಿಗಳ ಸಂಬಂಧಿಗಳು ಅಥವಾ ಅವರು ನಿಭಾಯಿಸುವ ಅತ್ಯಂತ ವೈಯಕ್ತಿಕ ಸಂಬಂಧವುಳ್ಳ ಇತರರೊಂದಿಗೆ ಸಮಾಜ ಕಾರ್ಯಕರ್ತರು ಲೈಂಗಿಕ  ಚಟುವಟಿಕೆಗಳು ಅಥವಾ ಲೈಂಗಿಕ ಸಂಪರ್ಕದಲ್ಲಿ ತೊಡಗಕೂಡದು. ಅರ್ಥಿಗಳ ಸಂಬಂಧಿಕರೊಂದಿಗೆ ಅಥವಾ ಅವರು ನಿಭಾಯಿಸುವ ವೈಯಕ್ತಿಕ ಸಂಬಂಧಿಗಳ ಜೊತೆಗಿನ ಲೈಂಗಿಕ ಚಟುವಟಿಕೆ ಅಥವಾ ಲೈಂಗಿಕ ಸಂಬಂಧ ಅರ್ಥಿಗಳಿಗೆ ಹಾನಿಕಾರಕವಾಗಬಲ್ಲದು ಮತ್ತು ಸಮಾಜ ಕಾರ್ಯಕರ್ತರು ಮತ್ತು ಅರ್ಥಿಗಳಿಗೆ ಸೂಕ್ತವಾದ ವೃತ್ತಿಪರ ಚೌಕಟ್ಟನ್ನು ನಿಭಾಯಿಸಲು ತೊಂದರೆ ಉಂಟುಮಾಡಬಹುದು.
ಕ) ಅರ್ಥಿಗೆ ಬಲವಾದ ಹಾನಿ ಉಂಟಾಗಬಹುದಾದ್ದರಿಂದ ಹಳೆಯ ಅರ್ಥಿಗಳೊಂದಿಗೂ ಸಮಾಜ ಕಾರ್ಯಕರ್ತರು ಲೈಂಗಿಕ ಚಟುವಟಿಕೆಗಳು ಅಥವಾ ಲೈಂಗಿಕ ಸಂಪರ್ಕದಲ್ಲಿ ತೊಡಗುವಂತಿಲ್ಲ. ಒಂದುವೇಳೆ ಸಮಾಜ ಕಾರ್ಯಕರ್ತರು ಈ ನಿಷೇಧಗೆ ವಿರುದ್ಧವಾದ ನಡತೆಯಲ್ಲಿ ತೊಡಗಿದರೆ ಅಥವಾ ಈ ನಿಷೇಧದಿಂದ ತಾನು ಹೊರತೆಂದು ಹೇಳಿಕೊಂಡಲ್ಲಿ ಅಸಾಮಾನ್ಯ ಪರಿಸ್ಥಿತಿಯಿಂದಾಗಿ ಹಳೆಯ ಅರ್ಥಿಯನ್ನು ಬಳಸಿಕೊಂಡಿಲ್ಲ, ಬಲವಂತಮಾಡಿಲ್ಲ ಅಥವಾ ಉದ್ದೇಶಪೂರ್ವಕವಾಗಿ ಅಥವಾ ಉದ್ದೇಶವಿಲ್ಲದೇ ಹುಟ್ಟುಹಾಕಿಲ್ಲ ಎಂದು ಸಾಬೀತುಮಾಡುವ ಪೂರ್ತಿ ಜವಾಬ್ದಾರಿ ಸಂಬಂಧಪಟ್ಟ ಸಮಾಜ ಕಾರ್ಯಕರ್ತನದ್ದು/ಯದ್ದೇ ಹೊರತು ಅವರ ಅರ್ಥಿಗಳ ಜವಾಬ್ದಾರಿಯಲ್ಲ.
ಡ) ಸಮಾಜ ಕಾರ್ಯಕರ್ತರು ಹಿಂದೆ ಲೈಂಗಿಕ ಸಂಬಂಧ ಹೊಂದಿರಬಹುದಾದ ವ್ಯಕ್ತಿಗಳಿಗೆ ಚಿಕಿತ್ಸಕ ಸೇವೆಗಳನ್ನು ಒದಗಿಸಕೂಡದು. ಹಳೆಯ ಲೈಂಗಿಕ ಸಂಬಂಧಿಗೆ ಚಿಕಿತ್ಸಕ ಸೇವೆಗಳನ್ನು ಒದಗಿಸುವುದು ವೈಯಕ್ತಿಕವಾಗಿ ಹಾನಿಮಾಡಬಲ್ಲದು ಹಾಗೂ ಸಮಾಜ ಕಾರ್ಯಕರ್ತ/ರ್ತೆ ಮತ್ತು ವ್ಯಕ್ತಿಗೆ ಸೂಕ್ತ ವೃತ್ತ್ಯಾತ್ಮಕ ಚೌಕಟ್ಟನ್ನು ನಿರ್ವಹಿಸಲು ಕಷ್ಟವುಂಟಾಗುವ ಸಾಧ್ಯತೆ ಇದೆ.
1.10 ದೈಹಿಕ ಸಂಪರ್ಕ
ಸಂಪರ್ಕದಿಂದಾಗಿ ಅರ್ಥಿಗೆ ಮಾನಸಿಕವಾಗಿ ತೊಂದರೆಯುಂಟಾಗುವ ಸಾಧ್ಯತೆ (ಅರ್ಥಿಗೆ ಕಚಗುಳಿಯಿಡುವ ಅಥವಾ ಸವರುವಿಕೆ)ಯಿದ್ದಾಗ ಸಮಾಜ ಕಾರ್ಯಕರ್ತರು ಅರ್ಥಿಗಳ ಜೊತೆಗೆ ದೈಹಿಕ ಸಂಪರ್ಕದಲ್ಲಿ ಭಾಗಿಯಾಗುವಂತಿಲ್ಲ. ಅರ್ಥಿಗಳೊಂದಿಗೆ ಸೂಕ್ತ ದೈಹಿಕ ಸಂಪರ್ಕ ಮಾಡುವ ಸಂದರ್ಭದಲ್ಲಿ ಸ್ಪಷ್ಟ, ಸೂಕ್ತ ಮತ್ತು ಸಾಂಸ್ಕೃತಿಕವಾದ ಸೂಕ್ಷ್ಮ ಮಿತಿಯೊಳಗೆ ಅಂತಹ ದೈಹಿಕ ಸಂಪರ್ಕ ಇರತಕ್ಕದ್ದು.
1.11 ಲೈಂಗಿಕ ದೌರ್ಜನ್ಯ
ಸಮಾಜ ಕಾರ್ಯಕರ್ತರು ಅರ್ಥಿಗಳಿಗೆ ಲೈಂಗಿಕ ದೌರ್ಜನ್ಯವುಂಟುಮಾಡಬಾರದು. ಲೈಂಗಿಕ ದೌರ್ಜನ್ಯವು ಲೈಂಗಿಕ ಪ್ರಚೋದನೆಗಳು, ಲೈಂಗಿಕವಾಗಿ ಮುಂದುವರಿಯುವುದು, ಲೈಂಗಿಕ ಲಾಭಕ್ಕಾಗಿ ವಿನಂತಿಸುವುದು ಮತ್ತು ಇತರ ಲೈಂಗಿಕ ಸ್ಪರೂಪದ ವಾಚಿಕ ಅಥವಾ ದೈಹಿಕ ನಡೆಯನ್ನು  ಒಳಗೊಳ್ಳುತ್ತದೆ.
1.12 ಹೀನಾಯ /ಅವ್ಯಾಚ್ಯ ಭಾಷೆ
1.12 ಸಮಾಜ ಕಾರ್ಯಕರ್ತರು ಅರ್ಥಿಗಳಿಗೆ ಅಥವಾ ಅವರ ಬಗ್ಗೆ ಲಿಖಿತ ಅಥವಾ ವಾಚಿಕ ಸಂವಹನದಲ್ಲಿ ಅವ್ಯಾಚ್ಯ ಭಾಷೆಯನ್ನು ಬಳಸಬಾರದು. ಸಮಾಜ ಕಾರ್ಯಕರ್ತರು ಅರ್ಥಿಗಳಿಗೆ ಮತ್ತು ಅರ್ಥಿಗಳಿಗೆ ಸಂಬಂಧಿಸಿದ ಎಲ್ಲ ಸಂವಹನಗಳಲ್ಲಿ ಸರಿಯಾದ ಮತ್ತು ಗೌರವಯುತವಾದ ಭಾಷೆಯನ್ನು ಬಳಸತಕ್ಕದ್ದು.
1.13  ಸೇವೆಗಳಿಗೆ ಶುಲ್ಕ ಪಾವತಿ
ಅ) ಸಮಾಜ ಕಾರ್ಯಕರ್ತರು ಒದಗಿಸಿದ ಸೇವೆಗಳಿಗೆ ಸಂಬಂಧಿಸಿದಂತೆ ಶುಲ್ಕ ನಿಗದಿಗೊಳಿಸುವಾಗ ಅದು ಸೂಕ್ತ, ಸಮಂಜಸ ಮತ್ತು ಅನುಗುಣವಾಗಿರಬೇಕು. ಗ್ರಾಹಕರ ಪಾವತಿಸುವ ಸಾಮರ್ಥ್ಯಕ್ಕೆ ಹೆಚ್ಚು ಗಮನ ನೀಡಬೇಕು.
ಬ) ಸಮಾಜ ಕಾರ್ಯಕರ್ತರು ವೃತ್ತ್ಯಾತ್ಮಕ ಸೇವೆಗಳಿಗೆ ಅರ್ಥಿಗಳಿಂದ ವಸ್ತುಗಳು ಅಥವಾ ಸೇವೆಗಳನ್ನು ಶುಲ್ಕವಾಗಿ ಪಡೆದುಕೊಳ್ಳಬಾರದು. ವಸ್ತುಗಳ ಬದಲಾವಣೆ ಅದರಲ್ಲೂ ಸೇವೆಗಳನ್ನು ಒಳಗೊಂಡಂತೆ ಇದ್ದಲ್ಲಿ ಅದು ಸಮಾಜ ಕಾರ್ಯಕರ್ತರ ಅರ್ಥಿಗಳೊಂದಿಗಿನ ಸಂಬಂಧದಲ್ಲಿ ಹಿತಾಸಕ್ತಿಯ ವೈರುಧ್ಯ, ದುರ್ಬಳಕೆ ಮತ್ತು ಅಸೂಕ್ತ ಚೌಕಟ್ಟಿನ ಸಡಿಲಿಕೆಯನ್ನು ಸೃಷ್ಟಿಸಬಹುದು. ಸ್ಥಳೀಯ ಸಮುದಾಯದಲ್ಲಿ ವೃತ್ತಿಕಾರರಲ್ಲಿ ಒಪ್ಪಿತವಾದ ರೂಢಿಯಾಗಿದ್ದರೆ, ಸೇವೆಗಳಿಗೆ ಅವಶ್ಯಕವೆಂದು ಪರಿಗಣಿಸಲ್ಪಟ್ಟಿದ್ದರೆ, ಯಾವುದೇ ಭಿನ್ನಮತವಿಲ್ಲದೆ ಚೌಕಾಸಿ ಮಾಡಲ್ಪಟ್ಟಿದ್ದರೆ, ಅರ್ಥಿಯೇ ಮೊದಲು ಅವಕಾಶ ಕೊಟ್ಟಿದ್ದರೆ ಮತ್ತು ಅರ್ಥಿಯ ತಿಳಿಸಿದ ಒಪ್ಪಿಗೆಯಿದ್ದರೆ ಅಂತಹ ಸೀಮಿತ ಸಂದರ್ಭಗಳಲ್ಲಿ ಮಾತ್ರ ಸಮಾಜ ಕಾರ್ಯಕರ್ತರು ವಸ್ತು ಬದಲಾವಣೆಯನ್ನು ಕಂಡುಕೊಳ್ಳಬಹುದು ಅಥವಾ ಪಾಲ್ಗೊಳ್ಳಬಹುದು. ವೃತ್ತ್ಯಾತ್ಮಕ ಸೇವೆಗಳಿಗೆ ಶುಲ್ಕವಾಗಿ ಅರ್ಥಿಗಳಿಂದ ವಸ್ತುಗಳು ಅಥವಾ ಸೇವೆಗಳನ್ನು ಪಡೆದುಕೊಳ್ಳುವ ಸಮಾಜ ಕಾರ್ಯಕರ್ತರು ಈ ವ್ಯವಸ್ಥೆಯು ಅರ್ಥಿಗೆ ಅಥವಾ ವೃತ್ತ್ಯಾತ್ಮಕ ಸಂಬಂಧಕ್ಕೆ ಹಾನಿಯುಂಟುಮಾಡದು ಎಂಬುದನ್ನು ತೋರಿಸಿಕೊಡುವ ಸಂಪೂರ್ಣ ಹೊರೆಯನ್ನು ಹೊರಬೇಕಾಗುತ್ತದೆ.
ಸಿ) ಸಮಾಜ ಕಾರ್ಯಕರ್ತರು ತಮ್ಮ ಉದ್ಯೋಗದಾತ ಅಥವಾ ಸಂಸ್ಥೆಯ ಮೂಲಕ ಅರ್ಥಿಗಳಿಗೆ ಒದಗಿಸುವ ಸೇವೆಗಳಿಗೆ ಪ್ರತ್ಯೇಕ ಶುಲ್ಕ ಅಥವ ಇತರ ಭತ್ಯೆಯನ್ನು ಪಡೆಯುವಂತಿಲ್ಲ.
1.14 ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವಿಲ್ಲದ ಅರ್ಥಿಗಳು
ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವಿಲ್ಲದ ಅರ್ಥಿಗಳ ಪರವಾಗಿ ಕೆಲಸ ಮಾಡಬೇಕಾದ ಸಂದರ್ಭದಲ್ಲಿ ಸಮಾಜ ಕಾರ್ಯಕರ್ತರು ಆ ಅರ್ಥಿಗಳ ಹಿತಾಸಕ್ತಿ ಮತ್ತು ಹಕ್ಕುಗಳನ್ನು ರಕ್ಷಿಸಲು ಸೂಕ್ತವಾದ ಕ್ರಮಗಳನ್ನು ತೆಗೆದುಕೊಳ್ಳತಕ್ಕದ್ದು.
1.15 ಸೇವೆಗಳ ಕಡಿತ
ಸಮಾಜ ಕಾರ್ಯಕರ್ತರು ಅಲಭ್ಯತೆ, ಸ್ಥಳ ಬದಲಾವಣೆ, ಅನಾರೋಗ್ಯ, ಅಸಾಮರ್ಥ್ಯ/ಅಂಗವಿಕಲತೆ ಅಥವಾ ಸಾವಿನಂತಹ ಕಾರಣಗಳಿಂದ ಸೇವೆಗಳಲ್ಲಿ ಕಡಿತ ಉಂಟಾದ ಸಂದರ್ಭದಲ್ಲಿ ಆ ಸೇವೆಗಳನ್ನು ಮುಂದುವರಿಸುವುದಕ್ಕೆ ಸೂಕ್ತ ಪ್ರಯತ್ನವನ್ನು ಮಾಡತಕ್ಕದ್ದು.
1.16 ಸೇವೆಗಳ ಅವಧಿ
ಎ) ಸಮಾಜ ಕಾರ್ಯಕರ್ತರು ಅರ್ಥಿಗಳಿಗೆ ಅವಶ್ಯಕವಿಲ್ಲದಿದ್ದಲ್ಲಿ ಅಥವಾ ಅರ್ಥಿಗಳ ಹಿತಾಸಕ್ತಿಗೆ ಪೂರಕವಾಗಿರದಿದ್ದಲ್ಲಿ ಅಂತಹ ಸೇವೆಗಳು ಮತ್ತು ವೃತ್ತಿಪರ ಸಂಬಂಧಗಳನ್ನು ನಿಲ್ಲಿಸಬೇಕು.
ಬಿ) ಸಮಾಜ ಕಾರ್ಯಕರ್ತರು ಇನ್ನೂ ಸೇವೆಯ ಅವಶ್ಯಕತೆಯಿರುವ ಅರ್ಥಿಗಳನ್ನು ಮಧ್ಯದಲ್ಲೇ ಕೈಬಿಡುವುದನ್ನು ತಪ್ಪಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅಸಾಮಾನ್ಯ ಸಂದರ್ಭಗಳಲ್ಲಿ ಸಂದರ್ಭದ ಎಲ್ಲಾ ಸಾಧ್ಯತೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಮತ್ತು ಉಂಟಾಗಬಹುದಾದ ಪ್ರತಿಕೂಲ ಪರಿಣಾಮಗಳನ್ನು ಕಡಿಮೆಮಾಡಲು ಕಾಳಜಿವಹಿಸಿದ ನಂತರವೇ ಸಮಾಜ ಕಾರ್ಯಕರ್ತರು ಸೇವೆಗಳನ್ನು ಹಿಂದಕ್ಕೆ ಪಡೆಯಬೇಕು. ಸಮಾಜ ಕಾರ್ಯಕರ್ತರು  ಅವಶ್ಯಕವಿದ್ದಾಗ ಸೇವೆಗಳನ್ನು ಮುಂದುವರಿಸಲು ಸೂಕ್ತ ವ್ಯವಸ್ಥೆಮಾಡಲು ಸಹಾಯಮಾಡಬೇಕು.
ಸಿ) ಸಮಾಜ ಕಾರ್ಯಕರ್ತರು ಅರ್ಥಿಗಳಿಗೆ ಪ್ರಸ್ತುತದ ಆರ್ಥಿಕ ಒಪ್ಪಂದ ವ್ಯವಸ್ಥೆಯ ಬಗ್ಗೆ ಸ್ಪಷ್ಟಪಡಿಸಿದ್ದಾಗ, ಅರ್ಥಿಗಳು ತಮಗೆ ಅಥವಾ ಇತರರಿಗೆ ತತ್‌ಕ್ಷಣದ ಅಪಾಯಮಾಡುವ ಸಾಧ್ಯತೆ ಇಲ್ಲದಾಗ ಮತ್ತು ಪ್ರಸ್ತುತ ಶುಲ್ಕ ಪಾವತಿ ಮಾಡದಿದ್ದುದರ ಚಿಕಿತ್ಸಕ ಮತ್ತು ಇತರ ಪರಿಣಾಮಗಳನ್ನು ಅರ್ಥಿಗಳೊಂದಿಗೆ ಚರ್ಚಿಸಿರುವಾಗ ಶುಲ್ಕ ಬಾಕಿ ಉಳಿಸಿಕೊಂಡಿರುವ ಅರ್ಥಿಗಳ ಸೇವೆಯನ್ನು ನಿಲ್ಲಿಸಬಹುದು.
ಡಿ) ಅರ್ಥಿಗಳೊಂದಿಗೆ ಸಾಮಾಜಿಕ, ಆರ್ಥಿಕ ಅಥವಾ ಲೈಂಗಿಕ ಸಂಬಂಧ ಸಾಧಿಸಲು ಸಮಾಜ ಕಾರ್ಯಕರ್ತರು ಸೇವೆಗಳನ್ನು ನಿಲ್ಲಿಸಬಾರದು.
ಇ) ಸಮಾಜ ಕಾರ್ಯಕರ್ತರು ಸೇವೆಗಳನ್ನು ನಿಲ್ಲಿಸುವಾಗ ಅಥವಾ ಕಡಿತಗೊಳಿಸುವಾಗ ಅರ್ಥಿಗಳಿಗೆ ಸ್ಪಷ್ಟವಾಗಿ ತಿಳಿಸಬೇಕು ಹಾಗೂ ಅರ್ಥಿಗಳ ಅವಶ್ಯಕತೆಗಳು ಮತ್ತು ಅಗತ್ಯತೆಗಳಿಗೆ ಸಂಬಂಧಪಟ್ಟಂತೆ ಸೇವೆಗಳ ವರ್ಗಾವಣೆ, ಹಸ್ತಾಂತರ ಅಥವಾ ಮುಂದುವರಿಕೆಯ ಬಗ್ಗೆ ಅವಲೋಕಿಸಬೇಕು.
ಎಫ್) ಉದ್ಯೋಗದಲ್ಲಿರುವ ಸಮಾಜ ಕಾರ್ಯಕರ್ತರು ಕೆಲಸ ಬಿಡುವಾಗ ಸೇವೆ ಮುಂದುವರಿಕೆಗೆ ಇರುವ ಸೂಕ್ತ ಆಯ್ಕೆಗಳು ಹಾಗೂ ಅದರಿಂದಾಗಬಹುದಾದ ಲಾಭ ಮತ್ತು ತೊಂದರೆಗಳ ಬಗ್ಗೆ ಅರ್ಥಿಗಳಿಗೆ ಮಾಹಿತಿ ನೀಡತಕ್ಕದ್ದು.
2.  ಸಹೋದ್ಯೋಗಿಗಳೆಡೆ ಸಮಾಜ ಕಾರ್ಯಕರ್ತರ ನೈತಿಕ ಜವಾಬ್ದಾರಿಗಳು
2.01 ಗೌರವ
ಅ) ಸಮಾಜ ಕಾರ್ಯಕರ್ತರು ಸಹೋದ್ಯೋಗಿಗಳನ್ನು ಗೌರವದಿಂದ ಕಾಣಬೇಕು. ಸಹೋದ್ಯೋಗಿಗಳ ಅರ್ಹತೆಗಳು, ದೃಷ್ಟಿಕೋನ ಮತ್ತು ಕಟ್ಟುಪಾಡುಗಳನ್ನು ನಿರ್ದಿಷ್ಟವಾಗಿ ಮತ್ತು ನಿಷ್ಪಕ್ಷಪಾತವಾಗಿ ಪ್ರತಿನಿಧಿಸಬೇಕು.
ಬ) ಸಮಾಜ ಕಾರ್ಯಕರ್ತರು ಅರ್ಥಿಗಳು ಅಥವಾ ಇತರ ವೃತ್ತಿಕಾರರೊಂದಿಗಿನ ಸಂವಹನಗಳಲ್ಲಿ ಸಹೋದ್ಯೋಗಿಗಳ ಬೇಡದ ಋಣಾತ್ಮಕ ವಿಮರ್ಶೆಯನ್ನು ಮಾಡಬಾರದು. ಬೇಕಿಲ್ಲದ ಋಣಾತ್ಮಕ ವಿಮರ್ಶೆಯು ಸಹೋದ್ಯೋಗಿಯ ದಕ್ಷತೆಯ ಮಟ್ಟ ಅಥವಾ ವ್ಯಕ್ತಿಗತ ಬುಡಕಟ್ಟು, ಜನಾಂಗ, ರಾಷ್ಟ್ರೀಯ ಮೂಲ, ಬಣ್ಣ, ಲಿಂಗ, ಲೈಂಗಿಕ ಮನೋಭಾವ, ಲಿಂಗ ಗುರುತು ಅಥವಾ ಅಭಿವ್ಯಕ್ತಿ, ವಯಸ್ಸು, ವೈವಾಹಿಕ ಸ್ಥಾನಮಾನ, ರಾಜಕೀಯ ನಂಬಿಕೆ, ಮತ, ವಲಸೆ ಸ್ಥಾನಮಾನ ಮತ್ತು ಮಾನಸಿಕ ಅಥವಾ ದೈಹಿಕೆ ನ್ಯೂನತೆಗಳನ್ನು ಹೀಗಳೆಯುವ ಮಾತುಗಳನ್ನು ಒಳಗೊಳ್ಳುತ್ತದೆ.
ಕ) ಸಮಾಜ ಕಾರ್ಯಕರ್ತರು ಸಹಕಾರದಿಂದ ಅರ್ಥಿಗಳಿಗೆ ಒಳ್ಳೆಯದಾಗುವಂತಿದ್ದಾಗ ಸಾಮಾಜಿಕ ಕಾರ್ಯ ಮತ್ತು ಇತರ ವೃತ್ತಿಗಳ ಸಹೋದ್ಯೋಗಿಗಳೊಂದಿಗೆ ಸಹಕರಿಸಬೇಕು.
2.02 ಗೌಪ್ಯತೆ
ಸಮಾಜ ಕಾರ್ಯಕರ್ತರು ವೃತ್ತ್ಯಾತ್ಮಕ ಸಂಬಂಧಗಳು ಮತ್ತು ವ್ಯವಹಾರಗಳಲ್ಲಿ ಸಹೋದ್ಯೋಗಿಗಳು ಹಂಚಿಕೊಂಡ ಗೌಪ್ಯವಾದ ಮಾಹಿತಿಯನ್ನು ಗೌರವಿಸಬೇಕು. ಗೌಪ್ಯತೆಯನ್ನು ಗೌರವಿಸುವ ಸಮಾಜ ಕಾರ್ಯಕರ್ತರ ಈ ರೀತಿಯ ಕಟ್ಟುಪಾಡುಗಳು ಮತ್ತು ಅದಕ್ಕೆ ಹೊರತಾದ ಸನ್ನಿವೇಶಗಳನ್ನು ಆ ಸಹೋದ್ಯೋಗಿಗಳು ಅರ್ಥಮಾಡಿಕೊಳ್ಳುತ್ತಾರೆ ಎಂಬುದನ್ನು ಸಮಾಜ ಕಾರ್ಯಕರ್ತರು ಖಾತ್ರಿಗೊಳಿಸಬೇಕು.
2.03 ಆಂತರಿಕಶಿಸ್ತಿನ ಸಹಯೋಗ
ಅ) ಆಂತರಿಕಶಿಸ್ತು ತಂಡದ ಸದಸ್ಯರಾಗಿರುವ ಸಮಾಜ ಕಾರ್ಯಕರ್ತರು ಸಾಮಾಜಿಕ ಕಾರ್ಯ ವೃತ್ತಿಯ ದೃಷ್ಟಿಕೋನ, ಮೌಲ್ಯಗಳು ಮತ್ತು ಅನುಭವದ ಆಧಾರದ ಮೇಲೆ ಅರ್ಥಿಗಳ ಒಳಿತಿಗೆ ಕಾರಣವಾಗುವ ನಿರ್ಧಾರಗಳಲ್ಲಿ ಭಾಗವಹಿಸಬೇಕು ಮತ್ತು ಸಹಾಯ ಒದಗಿಸಬೇಕು. ಆಂತರಿಕಶಿಸ್ತು ತಂಡದ ಒಟ್ಟು ಹಾಗೂ ಅದರ ಸದಸ್ಯರ ವೃತ್ತ್ಯಾತ್ಮಕ ಮತ್ತು ನೈತಿಕ ಕಟ್ಟುಪಾಡುಗಳನ್ನು ಸ್ಪಷ್ಟವಾಗಿ ರೂಪಿಸತಕ್ಕದ್ದು.
ಬ) ತಂಡದ ನಿರ್ಧಾರವು ನೈತಿಕ ಪ್ರಶ್ನೆಯನ್ನು ಹುಟ್ಟುಹಾಕಿದರೆ ಸಮಾಜ ಕಾರ್ಯಕರ್ತರು ಸೂಕ್ತ ರೀತಿಯಲ್ಲಿ ಅಸಮ್ಮತಿಯನ್ನು ಬಗೆಹರಿಸಲು ಪ್ರಯತ್ನಿಸಬೇಕು. ಒಂದುವೇಳೆ ಅಸಮ್ಮತಿಯನ್ನು ಬಗೆಹರಿಸಲು ಆಗದಿದ್ದರೆ ಸಮಾಜ ಕಾರ್ಯಕರ್ತರು ಅರ್ಥಿಗಳ ಒಳಿತಿಗಾಗುವ ಇತರ ಮಾರ್ಗಗಳನ್ನು ಅನುಸರಿಸಬೇಕು.
2.04 ಸಹೋದ್ಯೋಗಿಗಳನ್ನು ಒಳಗೊಂಡ ಜಗಳಗಳು
ಅ) ಸಮಾಜ ಕಾರ್ಯಕರ್ತರು ಸ್ಥಾನವನ್ನು ಗಳಿಸಲಾಗಲೀ ಅಥವಾ ಸಮಾಜ ಕಾರ್ಯಕರ್ತರ ಸ್ವ ಹಿತಾಸಕ್ತಿಗಾಗಲೀ ಸಹೋದ್ಯೋಗಿ ಮತ್ತು ಉದ್ಯೋಗಾಧಿಪತಿಗಳ ನಡುವಿನ ಜಗಳದ ಲಾಭ ಪಡೆಯಬಾರದು.
ಬ) ಸಮಾಜ ಕಾರ್ಯಕರ್ತರು ಸಹೋದ್ಯೋಗಿಗಳ ಜೊತೆಯ ಜಗಳದಲ್ಲಿ ಅರ್ಥಿಗಳ ದುರ್ಬಳಕೆ ಅಥವಾ ಸಮಾಜ ಕಾರ್ಯಕರ್ತರು ಮತ್ತು ಅವರ ಸಹೋದ್ಯೋಗಿಗಳ ನಡುವಿನ ಜಗಳದ ಸೂಕ್ತವಲ್ಲದ ಚರ್ಚೆಯಲ್ಲಿ ಅರ್ಥಿಗಳನ್ನು ತೊಡಗಿಸಬಾರದು.
2.05 ಆಪ್ತ ಸಮಾಲೋಚನೆ
ಅ) ಅರ್ಥಿಗಳ ಹಿತಾಸಕ್ತಿಯನ್ನು ಕಾಪಾಡಲು ಉತ್ತಮವೆಂದು ಅನಿಸಿದ ಸಂದರ್ಭದಲ್ಲಿ ಸಮಾಜ ಕಾರ್ಯಕರ್ತರು ಸಹೋದ್ಯೋಗಿಗಳ ಸಲಹೆ ಮತ್ತು ಆಪ್ತಸಮಾಲೋಚನೆಯನ್ನು ಪಡೆಯಬೇಕು.
ಆ) ಸಮಾಜ ಕಾರ್ಯಕರ್ತರು ಅವರ ಸಹೋದ್ಯೋಗಿಗಳ ಪರಿಣತಿ ಇರುವ ಕ್ಷೇತ್ರ ಮತ್ತು ಅರ್ಹತೆಗಳ ಬಗ್ಗೆ ಮಾಹಿತಿಯನ್ನು ಹೊಂದಿರಬೇಕು. ಸಮಾಜ ಕಾರ್ಯಕರ್ತರು ಆಪ್ತಸಮಾಲೋಚನೆಗೆ ಸಂಬಂಧಿಸಿದ ವಿಷಯದಲ್ಲಿ ಉತ್ತಮ ಜ್ಞಾನ, ಪರಿಣತಿ ಮತ್ತು ಅರ್ಹತೆಯನ್ನು ಹೊಂದಿದ ಸಹೋದ್ಯೋಗಿಗಳಿಂದ ಮಾತ್ರ ಸಲಹೆಯನ್ನು ಪಡೆಯಬೇಕು.
ಇ) ಅರ್ಥಿಗಳ ಕುರಿತು ಸಹೋದ್ಯೋಗಿಗಳೊಂದಿಗೆ ಸಮಾಲೋಚಿಸುವಾಗ ಸಮಾಜ ಕಾರ್ಯಕರ್ತರು ಆಪ್ತಸಮಾಲೋಚನೆಯ ಉದ್ದೇಶವನ್ನು ಸಾಧಿಸಲು ಅವಶ್ಯಕವಿರುವಷ್ಟೆ ಮಾಹಿತಿಯನ್ನು ಬಹಿರಂಗಪಡಿಸಬೇಕು.
2.06 ಸೇವೆಗಾಗಿ ಶಿಫಾರಸು
ಅ) ಅ) ಸಮಾಜ ಕಾರ್ಯಕರ್ತರು ಅರ್ಥಿಗಳಿಗೆ ಸೇವೆ ಒದಗಿಸಲು ಇತರ ವೃತ್ತಿಕಾರರ ವಿಶೇಷ ಜ್ಞಾನ ಅಥವಾ ಪರಿಣತಿ ಅವಶ್ಯವಿದ್ದರೆ ಪೂರ್ತಿ ಅಥವಾ ಅರ್ಥಿಗಳಲ್ಲಿ ಪರಿಣಾಮಕಾರಿ ಅಥವಾ ಸೂಕ್ತ ಪ್ರಗತಿ ಆಗುತ್ತಿಲ್ಲವೆಂದು ಭಾವಿಸಿದಲ್ಲಿ ಹೆಚ್ಚುವರಿ ಸೇವೆಗಾಗಿ ಇತರ ವೃತ್ತಿಕಾರರನ್ನು ಶಿಫಾರಸುಮಾಡಬೇಕು.
ಆ) ಸಮಾಜ ಕಾರ್ಯಕರ್ತರು ಅರ್ಥಿಗಳನ್ನು ಇತರ ವೃತ್ತಿಕಾರರಿಗೆ ಶಿಫಾರಸು ಮಾಡುವಾಗ ಜವಾಬ್ದಾರಿಯ ಕ್ರಮಬದ್ಧ ವರ್ಗಾವಣೆಗೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳತಕ್ಕದ್ದು. ಸಮಾಜ ಕಾರ್ಯಕರ್ತರು ಅರ್ಥಿಗಳನ್ನು ಇತರ ವೃತ್ತಿಕಾರರಿಗೆ ಶಿಫಾರಸು ಮಾಡುವಾಗ ಅರ್ಥಿಗಳ ಒಪ್ಪಿಗೆ ಪಡೆದು ಎಲ್ಲ ಅಗತ್ಯವಿರುವ ಮಾಹಿತಿಗಳನ್ನು ಹೊಸ ಸೇವೆ ಒದಗಿಸುವವರಿಗೆ ಬಹಿರಂಗಗೊಳಿಸಬೇಕು.
ಇ) ಸಮಾಜ ಕಾರ್ಯಕರ್ತರು ವೃತ್ತ್ಯಾತ್ಮಕ ಸೇವೆಯನ್ನು ಒದಗಿಸಿಲ್ಲದಿದ್ದಲ್ಲಿ ಕೇವಲ ಶಿಫಾರಸ್ಸಿಗಾಗಿ ಶುಲ್ಕ ಕೊಡುವುದು ಅಥವಾ ತೆಗೆದುಕೊಳ್ಳುವುದನ್ನು ಪ್ರತಿಬಂಧಿಸಲಾಗಿದೆ.
2.07 ಲೈಂಗಿಕ ಸಂಬಂಧಗಳು
ಅ) ಮೇಲ್ವಿಚಾರಕರಾಗಿ ಅಥವಾ ಶಿಕ್ಷಕರಾಗಿ ವೃತ್ತ್ಯಾತ್ಮಕ ಅಧಿಕಾರವನ್ನು ಕಾರ್ಯನಿರ್ವಹಿಸುತ್ತಿರುವ ಸಮಾಜ ಕಾರ್ಯಕರ್ತರು ಮೇಲ್ವಿಚಾರಕಿಯರು, ವಿದ್ಯಾರ್ಥಿಗಳು, ಶಿಬಿರಾರ್ಥಿಗಳು ಅಥವಾ ಇತರ ಸಹೋದ್ಯೋಗಿಗಳೊಂದಿಗೆ ಲೈಂಗಿಕ ಚಟುವಟಿಕೆಗಳು ಅಥವಾ ಸಂಪರ್ಕದಲ್ಲಿ ತೊಡಗಬಾರದು.
ಬ)ಸಮಾಜ ಕಾರ್ಯಕರ್ತರು ಹಿತಾಸಕ್ತಿಯ ವೈರುಧ್ಯದ ಸಂಭವವಿದ್ದಾಗ ಸಹೋದ್ಯೋಗಿಗಳೊಂದಿಗೆ ಲೈಂಗಿಕ ಸಂಬಂಧಗಳಲ್ಲಿ ತೊಡಗುವುದನ್ನು ತಪ್ಪಿಸಬೇಕು. ಸಮಾಜ ಕಾರ್ಯಕರ್ತರು ಸಹೋದ್ಯೋಗಿಯೊಂದಿಗೆ ಲೈಂಗಿಕ ಸಂಬಂಧದಲ್ಲಿ ಭಾಗಿಯಾಗಿದ್ದರೆ ಅಥವಾ ಭಾಗಿಯಾಗಿರುವ ನಿರೀಕ್ಷೆಯಿದ್ದರೆ ಅಂತಹವರು ಅವಶ್ಯಕವಿದ್ದಾಗ ಹಿತಾಸಕ್ತಿಯ ವೈರುಧ್ಯವನ್ನು ತಪ್ಪಿಸಲು ವೃತ್ತಿಪರ ಜವಾಬ್ದಾರಿಗಳನ್ನು ವರ್ಗಾಯಿಸುವ ಕರ್ತವ್ಯವನ್ನು ಹೊಂದಿರುತ್ತಾರೆ.
2.08 ಲೈಂಗಿಕ ಶೋಷಣೆ
ಸಮಾಜ ಕಾರ್ಯಕರ್ತರು ಮೇಲ್ವಿಚಾರಕಿಯರು, ವಿದ್ಯಾರ್ಥಿಗಳು, ಶಿಬಿರಾರ್ಥಿಗಳು ಅಥವಾ ಸಹೋದ್ಯೋಗಿಗಳ ಲೈಂಗಿಕ ಶೋಷಣೆ ಮಾಡಬಾರದು. ಲೈಂಗಿಕ ಶೋಷಣೆಯು ಲೈಂಗಿಕ ಮುಂಗಡಗಳು, ಲೈಂಗಿಕವಾಗಿ ಮುಂದುವರಿಯುವಿಕೆ, ಲೈಂಗಿಕ ಲಾಭಕ್ಕಾಗಿ ವಿನಂತಿಗಳು ಮತ್ತು ಇತರ ವಾಚಿಕ ಅಥವಾ ದೈಹಿಕವಾದ ಲೈಂಗಿಕ ಲಕ್ಷಣದ ನಡುವಳಿಕೆಗಳನ್ನು ಒಳಗೊಳ್ಳುತ್ತದೆ.
2.09 ಸಹೋದ್ಯೋಗಿಗಳ ಹಾನಿ
ಅ) ಸಮಾಜ ಕಾರ್ಯಕರ್ತರು ವೈಯಕ್ತಿಕ ಸಮಸ್ಯೆಗಳು, ಮನೋಸಾಮಾಜಿಕ ತೊಂದರೆ, ಬಲವಾದ ಹಲ್ಲೆ ಅಥವಾ ಮಾನಸಿಕ ಆರೋಗ್ಯದ ಕಷ್ಟಗಳು ಮತ್ತು ಅಭ್ಯಾಸದ ಪರಿಣಾಮದ ಜೊತೆಗಿನ ಅಡತಡೆಗಳಿಂದಾಗಿ ಸಾಮಾಜಿಕ ಕಾರ್ಯದ ಸಹೋದ್ಯೋಗಿಯ ಹಾನಿಯ ನೇರ ಅರಿವು ಇದ್ದಾಗ ಆ ಸಹೋದ್ಯೋಗಿಯನ್ನು ಸಾಧ್ಯವಾದಾಗ ಭೇಟಿಮಾಡಿ ಪರಿಹಾರಾತ್ಮಕ ಕ್ರಮ ತೆಗೆದುಕೊಳ್ಳುವಲ್ಲಿ ನೆರವಾಗಬೇಕು.
ಬ) ಸಾಮಾಜಿಕ ಕಾರ್ಯದ ಸಹೋದ್ಯೋಗಿಯ ಹಾನಿ ರೂಢಿಗತ ಪರಿಣಾಮಕ್ಕೆ ಅಡ್ದಿ ಮಾಡುತ್ತದೆ ಎಂದು ನಂಬಿದಲ್ಲಿ ಮತ್ತು ಆ ಸಹೋದ್ಯೋಗಿಯು ಹಾನಿಯ ಪರಿಹಾರಕ್ಕೆ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳದಿದ್ದಾಗ ಸಮಾಜ ಕಾರ್ಯಕರ್ತರು ಉದ್ಯೋಗಾಧಿಪತಿಗಳು, ಕಾರ್ಯಾಲಯ, ಸಮಾಜ ಕಾರ್ಯಕರ್ತರ ರಾಷ್ಟ್ರೀಯ ಸಂಘ, ಪರವಾನಿಗೆ ಮತ್ತು ನಿಯಂತ್ರಣ ಅಂಗಗಳು ಮತ್ತು ಇತರ ವೃತ್ತ್ಯಾತ್ಮಕ ಸಂಸ್ಥೆಗಳು ರೂಪಿಸಿರುವ ಸೂಕ್ತ ಮಾರ್ಗಗಳ ಮೂಲಕ ಕ್ರಮತೆಗೆದುಕೊಳ್ಳಬೇಕು.
2.10 ಸಹೋದ್ಯೋಗಿಗಳ ಅದಕ್ಷತೆ
ಅ) ಸಮಾಜ ಕಾರ್ಯಕರ್ತರು ಸಾಮಾಜಿಕ ಕಾರ್ಯ ಸಹೋದ್ಯೋಗಿಯ ಅದಕ್ಷತೆಯ ನೇರ ಅರಿವು ಹೊಂದಿದಾಗ ಸೂಕ್ತ ಸಂದರ್ಭದಲ್ಲಿ ಆ ಸಹೋದ್ಯೋಗಿಯನ್ನು ಸಂಪರ್ಕಿಸಬೇಕು ಮತ್ತು ಪರಿಹಾರಾತ್ಮಕ ಕ್ರಮವನ್ನು ತೆಗೆದುಕೊಳ್ಳಲು ಆ ಸಹೋದ್ಯೋಗಿಗೆ ಸಹಾಯ ಮಾಡಬೇಕು.
ಆ) ಸಾಮಾಜಿಕ ಕಾರ್ಯ ಸಹೋದ್ಯೋಗಿಯು ಅದಕ್ಷ/ಅದಕ್ಷೆಯೆಂದು ನಂಬಿದಲ್ಲಿ ಮತ್ತು ಆತ ಅದಕ್ಷತೆಯ ಉತ್ತರಿಸಲು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳದಿದ್ದಲ್ಲಿ ಸಮಾಜ ಕಾರ್ಯಕರ್ತರು ಉದ್ಯೋಗಾಧಿಪತಿಗಳು, ಸಂಸ್ಥೆಗಳು, ಸಮಾಜ ಕಾರ್ಯಕರ್ತರ ರಾಷ್ಟ್ರೀಯ ಸಂಘ, ಪರವಾನಿಗೆ ಮತ್ತು ನಿಯಂತ್ರಣ ಅಂಗಗಳು ಮತ್ತು ಇತರ ವೃತ್ತ್ಯಾತ್ಮಕ ಸಂಸ್ಥೆಗಳು ರೂಪಿಸಿರುವ ಸೂಕ್ತ ಮಾರ್ಗಗಳ ಮೂಲಕ ಕ್ರಮತೆಗೆದುಕೊಳ್ಳಬೇಕು.
2.11 ಸಹೋದ್ಯೋಗಿಯ ಅನೈತಿಕ ನಡುವಳಿಕೆ
ಅ) ಸಮಾಜ ಕಾರ್ಯಕರ್ತರು ಸಹೋದ್ಯೋಗಿಗಳ ಅನೈತಿಕ ನಡುವಳಿಕೆಯನ್ನು ವಿರೋಧಿಸಲು, ತಪ್ಪಿಸಲು, ಬಹಿರಂಗಪಡಿಸಲು ಮತ್ತು ಸರಿಮಾಡಲು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳತಕ್ಕದ್ದು.
ಬ) ಸಹೋದ್ಯೋಗಿಗಳ ಅನೈತಿಕ ವರ್ತನೆಗೆ ಸಂಬಂಧಪಟ್ಟು ನಿಭಾಯಿಸುವ ರೂಪಿತ ಧೋರಣೆಗಳು ಮತ್ತು ಪ್ರಕ್ರಿಯೆಗಳ ಬಗ್ಗೆ ಸಮಾಜ ಕಾರ್ಯಕರ್ತರು ಜ್ಞಾನ ಹೊಂದಿರತಕ್ಕದ್ದು. ಸಮಾಜ ಕಾರ್ಯಕರ್ತರು ನೈತಿಕ ದೂರುಗಳನ್ನು ನಿಭಾಯಿಸುವುದಕ್ಕಾಗಿ ಇರುವ ರಾಷ್ಟ್ರೀಯ, ರಾಜ್ಯ ಮತ್ತು ಸ್ಥಳೀಯ ಪ್ರಕ್ರಿಯೆಗಳನ್ನು ಅರಿತಿರಬೇಕು. ಇದು ಸಮಾಜ ಕಾರ್ಯಕರ್ತರ ರಾಷ್ಟ್ರೀಯ ಸಂಘ, ಪರವಾನಿಗೆ ಮತ್ತು ನಿಯಂತ್ರಣ ಅಂಗಗಳು, ಉದ್ಯೋಗಾಧಿಪತಿಗಳು, ಸಂಸ್ಥೆಗಳು ಮತ್ತು ಇತರ ವೃತ್ತ್ಯಾತ್ಮಕ ಸಂಸ್ಥೆಗಳು ರೂಪಿಸಿದ ನಿಲುವುಗಳು ಮತ್ತು ಪ್ರಕ್ರಿಯೆಗಳನ್ನು ಒಳಗೊಂಡಿದೆ.
ಕ) ಸಹೋದ್ಯೋಗಿ ಅನೈತಿಕವಾಗಿ ವರ್ತಿಸಿದ್ದಾನೆ/ಳೆ ಎಂದು ಸಮಾಜ ಕಾರ್ಯಕರ್ತರಿಗೆ ಅನ್ನಿಸಿದರೆ ಆ ಸಹೋದ್ಯೋಗಿಯ ಬಗೆಗೆ ತಮಗಿರುವ ಕಾಳಜಿಯನ್ನು ಸೂಕ್ತ ಸಮಯದಲ್ಲಿ ಚರ್ಚಿಸುವುದರ ಮೂಲಕ ಮತ್ತು ಅಂತಹ ಚರ್ಚೆಯು ಪ್ರಯೋಜನಕಾರಿಯಾಗಿದ್ದಲ್ಲಿ ಸಮಾಜ ಕಾರ್ಯಕರ್ತರು ಠರಾವು ಪಡೆಯಬೇಕು.
ಡ) ಸಹೋದ್ಯೋಗಿಯು ಅನೈತಿಕವಾಗಿ ವರ್ತಿಸಿದ್ದಾನೆಂದು ಸಮಾಜ ಕಾರ್ಯಕರ್ತರು ಭಾವಿಸಿದಲ್ಲಿ ಅವಶ್ಯಕತೆಯಿದ್ದಾಗ ಸೂಕ್ತ ಸಾಂಪ್ರದಾಯಿಕ ಮಾರ್ಗಗಳ (ತಪಾಸಣೆಗಾಗಿ ರಾಜ್ಯ ಪರವಾನಿಗೆ ಮಂಡಳಿ ಅಥವಾ ನಿಯಂತ್ರಣಾಂಗ, ಸಮಾಜ ಕಾರ್ಯಕರ್ತರ ರಾಷ್ಟ್ರೀಯ ಸಂಘದ ಸಮಿತಿ ಅಥವಾ ಇತರ ವೃತ್ತ್ಯಾತ್ಮಕ ನೈತಿಕ ಸಮಿತಿಯನ್ನು ಸಂಪರ್ಕಿಸುವುದು ) ಮೂಲಕ ಕ್ರಮಗಳನ್ನು ತೆಗೆದುಕೊಳ್ಳಬೇಕು.
ಇ) ಸಮಾಜ ಕಾರ್ಯಕರ್ತರು ಅನ್ಯಾಯವಾಗಿ ಅನೈತಿಕ ವರ್ತನೆಯ ಆರೋಪಕ್ಕೆ ಒಳಗಾದ ಸಹೋದ್ಯೋಗಿಗಳನ್ನು ಸಮರ್ಥಿಸಿಕೊಳ್ಳಬೇಕು ಮತ್ತು ಅವರಿಗೆ ಸಹಾಯ ಮಾಡಬೇಕು.
3. ಸಂಸ್ಥೆಗಳಲ್ಲಿ ಸಮಾಜ ಕಾರ್ಯಕರ್ತರ ನೈತಿಕ ಜವಾಬ್ದಾರಿಗಳು
3.01 ಮೇಲ್ವಿಚಾರಿಕೆ ಮತ್ತು ಸಮಾಲೋಚನೆ
ಅ) ಮೇಲ್ವಿಚಾರಣೆ ಅಥವಾ ಆಪ್ತಸಮಾಲೋಚನೆ ಒದಗಿಸುವ ಸಮಾಜ ಕಾರ್ಯಕರ್ತರು ಅವಶ್ಯವಿರುವ ಜ್ಞಾನವನ್ನು ಮತ್ತು ಮೇಲ್ವಿಚಾರಿಕೆಯ ಅಥವಾ ಸರಿಯಾಗಿ ಸಮಾಲೋಚಿಸುವ ಕೌಶಲ್ಯ ಹೊಂದಿರತಕ್ಕದ್ದು ಹಾಗೂ ತಮಗೆ ತಿಳಿದಿರುವ ಮತ್ತು ಅರ್ಹತೆಯುಳ್ಳ ಕ್ಷೇತ್ರದೊಳಗೇ ಸೇವೆ ಸಲ್ಲಿಸತಕ್ಕದ್ದು.
ಬ) ಮೇಲ್ವಿಚಾರಣೆ ಮತ್ತು ಆಪ್ತಸಮಾಲೋಚನೆ ಒದಗಿಸುವ ಸಮಾಜ ಕಾರ್ಯಕರ್ತರು ಸ್ಪಷ್ಟ, ಸರಿಯಾದ ಮತ್ತು ಸಾಂಸ್ಕೃತಿಕವಾದ ಸೂಕ್ಷ್ಮ ಚೌಕಟ್ಟನ್ನು ರೂಪಿಸಲು ಜವಾಬ್ದಾರರಾಗಿರುತ್ತಾರೆ.
ಕ) ಮೇಲ್ವಿಚಾರಕರ ದುರ್ಬಳಕೆಯ ಅಪಾಯ ಅಥವಾ ಅವರಿಗೆ ಹಾನಿಯುಂಟುಮಾಡಬಲ್ಲ ಸಂಭವವಿರುವುದರಿಂದ ಸಮಾಜ ಕಾರ್ಯಕರ್ತರು ಮೇಲ್ವಿಚಾರಕರೊಂದಿಗೆ ಯಾವುದೇ ಎರಡು ಅಥವಾ ಹೆಚ್ಚಿನ ಸಂಬಂಧಗಳನ್ನು ಹೊಂದುವಂತಿಲ್ಲ.
ಡ) ಮೇಲ್ವಿಚಾರಣೆಯನ್ನು ಒದಗಿಸುವ ಸಮಾಜ ಕಾರ್ಯಕರ್ತರು ಮೇಲ್ವಿಚಾರಕರ ಕೆಲಸವನ್ನು ನಿಷ್ಪಕ್ಷಪಾತವಾಗಿ ಮತ್ತು ಗೌರವಯುತವಾಗಿ ಮೌಲ್ಯಮಾಪನ ಮಾಡಬೇಕು.
3.02 ಶಿಕ್ಷಣ ಮತ್ತು ತರಬೇತಿ
ಅ) ಸಮಾಜ ಕಾರ್ಯಕರ್ತರು ವಿದ್ಯಾರ್ಥಿಗಳಿಗೆ ಶಿಕ್ಷಕರಾಗಿ, ಕ್ಷೇತ್ರ ನಿರ್ದೇಶಕರಾಗಿ ಅಥವಾ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿರುವವರು ತಮ್ಮ ಅರಿವಿನ ಮತ್ತು ಅರ್ಹತೆಯ ವ್ಯಾಪ್ತಿಯೊಳಗೆ ಮಾತ್ರ ಮಾರ್ಗದರ್ಶನ ಮಾಡತಕ್ಕದ್ದು. ವೃತ್ತಿಯಲ್ಲಿ ಲಭ್ಯವಿರುವ ಇತ್ತೀಚಿನ ಮಾಹಿತಿ ಮತ್ತು ಜ್ಞಾನದ ಆಧಾರದ ಮೇಲೆ ಮಾರ್ಗದರ್ಶನ ಮಾಡಬೇಕು.
ಬ) ವಿದ್ಯಾರ್ಥಿಗಳಿಗೆ ಶಿಕ್ಷಕರಾಗಿ ಅಥವಾ ಕ್ಷೇತ್ರ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ಸಮಾಜ ಕಾರ್ಯಕರ್ತರು ವಿದ್ಯಾರ್ಥಿಗಳ ಕೆಲಸವನ್ನು ನಿಷ್ಪಕ್ಷಪಾತವಾಗಿ ಮತ್ತು ಗೌರವಯುತವಾಗಿ ಮೌಲ್ಯಮಾಪನ ಮಾಡಬೇಕು.
ಕ) ವಿದ್ಯಾರ್ಥಿಗಳಿಗೆ ಶಿಕ್ಷಕರಾಗಿ ಅಥವಾ ಕ್ಷೇತ್ರ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ಸಮಾಜ ಕಾರ್ಯಕರ್ತರು ವಿದ್ಯಾರ್ಥಿಗಳಿಂದ ಸೇವೆ ಒದಗಿಸುತ್ತಿರುವಾಗ ಆ ಬಗ್ಗೆ ಅರ್ಥಿಗಳಿಗೆ ಕಾಲಕಾಲಕ್ಕೆ ತಿಳಿಸಲಾಗುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಕಾರಣವಾದ ಕ್ರಮಗಳನ್ನು ತೆಗೆದುಕೊಳ್ಳಬೇಕು.
ಡ) ವಿದ್ಯಾರ್ಥಿಗಳಿಗೆ ಶಿಕ್ಷಕರಾಗಿ ಅಥವಾ ಕ್ಷೇತ್ರ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ಸಮಾಜ ಕಾರ್ಯಕರ್ತರು ವಿದ್ಯಾರ್ಥಿಯ ದುರ್ಬಳಕೆಯಾಗುವ ಮತ್ತು ಆತ/ಕೆಗೆ ಬಲವಾದ ಹಾನಿಯಾಗುವ ಸಂಭವವಿರುವುದರಿಂದ ಯಾವುದೇ ಎರಡು ಅಥವ ಹೆಚ್ಚಿನ ಸಂಬಂಧವನ್ನು ಆ ವಿದ್ಯಾರ್ಥಿಯೊಂದಿಗೆ ಹೊಂದುವಂತಿಲ್ಲ. ಸಾಮಾಜಿಕ ಕಾರ್ಯ ಶಿಕ್ಷಕರು ಮತ್ತು ಕ್ಷೇತ್ರ ನಿರ್ದೇಶಕರು ಸ್ಪಷ್ಟ, ಸರಿಯಾದ ಮತ್ತು ಸಾಂಸ್ಕೃತಿಕವಾಗಿ ಸೂಕ್ಷ್ಮ ಚೌಕಟ್ಟನ್ನು ರೂಪಿಸಲು ಜವಾಬ್ದಾರರಾಗಿರುತ್ತಾರೆ.
3.03 ಮೌಲ್ಯಮಾಪನ ಪ್ರಕ್ರಿಯೆ
ಇತರರ ಕೆಲಸವನ್ನು ಮೌಲ್ಯಮಾಪನ ಮಾಡುವ ಜವಾಬ್ದಾರಿ ಹೊಂದಿರುವ ಸಮಾಜ ಕಾರ್ಯಕರ್ತರು ಅಂತಹ ಜವಾಬ್ದಾರಿಯನ್ನು ನಿಷ್ಪಕ್ಷಪಾತವಾಗಿ, ಪರಿಗಣಿಸುವ ರೀತಿಯಲ್ಲಿ ಮತ್ತು ಸ್ಪಷ್ಟವಾಗಿ ತಿಳಿಸಿದ ಆಯ್ಕೆಗಳ ಆಧಾರದ ಮೇಲೆ ಪೂರ್ಣಗೊಳಿಸಬೇಕು.
3.04 ಅರ್ಥಿಗಳ ದಾಖಲೆಗಳು
ಅ) ಸಮಾಜ ಕಾರ್ಯಕರ್ತರು ದಾಖಲೆಗಳಲ್ಲಿ ಕರಾರುವಾಕ್ಕಾಗಿ ದಾಖಲಾಗಿದೆ ಮತ್ತು ಅದು ಒದಗಿಸಿರುವ ಸೇವೆಗಳನ್ನು ಪ್ರತಿಬಿಂಬಿಸುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
ಬ) ಸಮಾಜ ಕಾರ್ಯಕರ್ತರು ಭವಿಷ್ಯದಲ್ಲಿ ಅರ್ಥಿಗಳಿಗೆ ಸೇವೆಗಳನ್ನು ತಲುಪಿಸಲು ಸುಲಭವಾಗಲು ಮತ್ತು ಒದಗಿಸಿರುವ ಸೇವೆಗಳ ಮುಂದುವರಿಕೆಯನ್ನು ಖಚಿತಪಡಿಸಿಕೊಳ್ಳಲು ಬೇಕಾದಷ್ಟನ್ನು ಸೇರಿಸಿಕೊಳ್ಳಬೇಕು ಮತ್ತು ಸಕಾಲಕ್ಕೆ ದಾಖಲೆಗಳಲ್ಲಿ ದಾಖಲುಮಾಡಬೇಕು.
ಕ) ಸಮಾಜ ಕಾರ್ಯಕರ್ತರ ದಾಖಲಾತಿಯು ಸಾಧ್ಯವಾದಷ್ಟು ಮಿತಿಯಲ್ಲಿ ಅರ್ಥಿಗಳ ಖಾಸಗಿತನವನ್ನು ರಕ್ಷಿಸಬೇಕು, ಸೂಕ್ತವಾಗಿರಬೇಕು ಮತ್ತು ಸೇವೆಗಳ ಸಲ್ಲಿಕೆಗೆ ನೇರವಾಗಿ ಸಂಬಂಧಪಟ್ಟ ಮಾಹಿತಿಯನ್ನು ಮಾತ್ರ ಒಳಗೊಂಡಿರಬೇಕು.
ಡ) ಸಮಾಜ ಕಾರ್ಯಕರ್ತರು ಸೇವೆಗಳನ್ನು ನಿಲ್ಲಿಸಿದ ನಂತರ ಭವಿಷ್ಯದಲ್ಲಿ ಸಕಾರಣ ಲಭ್ಯತೆಯ ಖಚಿತತೆಗೆ ದಾಖಲೆಗಳನ್ನು ಸಂಗ್ರಹಿಸಿಡಬೇಕು. ಸರ್ಕಾರಿ ದಾಖಲೆಗಳು ಅಥವಾ ಸಂಬಂಧಿಸಿದ ಒಪ್ಪಂದಗಳಿಗೆ ಬೇಕಾಗುವಷ್ಟು ವರ್ಷಗಳ ಕಾಲ ದಾಖಲೆಗಳನ್ನು ನಿರ್ವಹಿಸಬೇಕು.
3.05 ಬಿಲ್ಲು ಬರೆಯುವಿಕೆ
ಸಮಾಜ ಕಾರ್ಯಕರ್ತರು ಬಿಲ್ಲು ಬರೆಯುವ ಅಭ್ಯಾಸವನ್ನು ಪ್ರಾರಂಭಿಸಿ, ನಿರ್ವಹಿಸಬೇಕು. ಅದು ಒದಗಿಸಿದ ಸೇವೆಗಳ ಸ್ವರೂಪ ಮತ್ತು ಮಿತಿಯನ್ನು ಪ್ರತಿಬಿಂಬಿಸುತ್ತದೆ ಹಾಗೂ ಸಂಸ್ಥೆಯಲ್ಲಿ ಯಾರು ಆ ಸೇವೆಯನ್ನು ಒದಗಿಸಿದ್ದು ಎಂಬುದನ್ನು ಗುರುತಿಸುತ್ತದೆ.
3.06 ಅರ್ಥಿಗಳ ವರ್ಗಾವಣೆ
ಅ) ಮತ್ತೊಂದು ಕಾರ್ಯಾಲಯ ಅಥವಾ ಸಹೋದ್ಯೋಗಿಯಿಂದ ಸೇವೆಗಳನ್ನು ಪಡೆಯುತ್ತಿರುವ ವ್ಯಕ್ತಿಯು ಸಮಾಜ ಕಾರ್ಯಕರ್ತ/ರ್ತೆಯನ್ನು ಸೇವೆಗಳಿಗಾಗಿ ಸಂಪರ್ಕಿಸಿದಾಗ, ಆತನು ಸೇವೆಗಳನ್ನು ಒದಗಿಸಲು ಒಪ್ಪಿಕೊಳ್ಳುವ ಮುಂಚೆ ಅರ್ಥಿಯ ಅವಶ್ಯಕತೆಯನ್ನು ಎಚ್ಚರಿಕೆಯಿಂದ ಆಲೋಚಿಸಬೇಕು.
ಬ) ಒಂದುವೇಳೆ ಹೊಸ ಅರ್ಥಿಯು ಮತ್ತೊಂದು ಕಾರ್ಯಾಲಯ ಅಥವಾ ಸಹೋದ್ಯೋಗಿಯಿಂದ ಸೇವೆ ಪಡೆದಿದ್ದರೆ ಸಮಾಜ ಕಾರ್ಯಕರ್ತರು ಆ ಅರ್ಥಿಯೊಂದಿಗೆ ಹಿಂದಿನ ಸೇವಾದಾರರೊಂದಿಗಿನ ಸಮಾಲೋಚನೆ ಅರ್ಥಿಯ ಉತ್ತಮ ಹಿತಾಸಕ್ತಿಯಂತೆಯೇ ಇತ್ತೇ ಎಂಬುದನ್ನು ಚರ್ಚಿಸಬೇಕು.
3.07 ಆಡಳಿತ
ಅ) ಸಾಮಾಜಿಕ ಕಾರ್ಯದ ಆಡಳಿತಗಾರರು ಅವರ ಕಾರ್ಯಾಲಯದೊಳಗೆ ಮತ್ತು ಹೊರಗೆ ಅರ್ಥಿಗಳ ಅವಶ್ಯಕತೆಗಳನ್ನು ಪೂರೈಸಲು ಬೇಕಾಗುವಷ್ಟು ಸಂಪನ್ಮೂಲಕ್ಕಾಗಿ ವಕಾಲತ್ತು ನಡೆಸಬೇಕು.
ಬ)ಸಮಾಜ ಕಾರ್ಯಕರ್ತರು ಮುಕ್ತ ಮತ್ತು ನಿಷ್ಪಕ್ಷಪಾತವಾದ ಸಂಪನ್ಮೂಲ ಹಂಚಿಕೆ ಪ್ರಕ್ರಿಯೆಗಾಗಿ ನ್ಯಾಯ ಸಮರ್ಥನೆ ನಡೆಸಬೇಕು. ಅರ್ಥಿಗಳ ಎಲ್ಲ ಅವಶ್ಯಕತೆಗಳನ್ನೂ ಪೂರೈಸಲು ಸಾಧ್ಯವಿಲ್ಲದಾಗ ತಾರತಮ್ಯವಿಲ್ಲದ, ಸೂಕ್ತವಾದ ಮತ್ತು ಒಂದು ನಿಗದಿತ ಅನ್ವಯಿಕ ತತ್ವಗಳ ಆಧಾರದ ಮೇಲೆ ಹಂಚಿಕೆಯ ಪ್ರಕ್ರಿಯೆಯನ್ನು ಅಭಿವೃದ್ಧಿಪಡಿಸಬೇಕು.
ಕ) ಆಡಳಿತಗಾರರಾದ ಸಮಾಜ ಕಾರ್ಯಕರ್ತರು ಸೂಕ್ತ ಸಿಬ್ಬಂದಿ ಮೇಲ್ವಿಚಾರಣೆಯನ್ನು ಒದಗಿಸಲು ಸಾಕಾಗುವಷ್ಟು ಕಾರ್ಯಾಲಯ ಅಥವಾ ಸಂಸ್ಥೆಯ ಸಂಪನ್ಮೂಲಗಳು ಲಭ್ಯವಿದೆಯೆಂಬುದನ್ನು ಖಚಿತಪಡಿಸಿಕೊಳ್ಳಲು ಸಕಾರಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸಾಮಾಜಿಕ ಕಾರ್ಯದ ಆಡಳಿತಗಾರರು ತಮ್ಮ ಸಂಸ್ಥೆಯಲ್ಲಿ ನೀತಿಸಂಹಿತೆಯನ್ನು ಉಲ್ಲಂಘಿಸುವ, ಹಸ್ತಕ್ಷೇಪಮಾಡುವ ಅಥವಾ ಅದರ ಪಾಲನೆಯನ್ನು ವಿರೋಧಿಸುವ ಯಾವುದೇ ಪರಿಸ್ಥಿತಿಯನ್ನು ತೊಡೆದುಹಾಕಲು ಸೂಕ್ತಕ್ರಮವನ್ನು ಕೈಗೊಳ್ಳಬೇಕು.
3.08 ಶಿಕ್ಷಣ ಮತ್ತು ಸಿಬ್ಬಂದಿ ಅಭಿವೃದ್ಧಿಯ ಮುಂದುವರಿಸುವಿಕೆ
ಸಾಮಾಜಿಕ ಕಾರ್ಯದ ಆಡಳಿತಗಾರರು ಮತ್ತು ಮೇಲ್ವಿಚಾರಕರು ತಾವು ಜವಾಬ್ದಾರರಾಗಿರುವ ಎಲ್ಲ ಸಿಬ್ಬಂದಿಯ ಶಿಕ್ಷಣ ಮತ್ತು ಸಿಬ್ಬಂದಿ ಅಭಿವೃದ್ಧಿಯ ಮುಂದುವರಿಸುವಿಕೆಯನ್ನು ಒದಗಿಸಲು ಅಥವಾ ಅಣಿಗೊಳಿಸಲು ಸಕಾರಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ಶಿಕ್ಷಣ ಮತ್ತು ಸಿಬ್ಬಂದಿ ಅಭಿವೃದ್ಧಿಂii ಮುಂದುವರಿಸುವಿಕೆಯು ಸಾಮಾಜಿಕ ಕಾರ್ಯ ರೂಢಿ ಮತ್ತು ನೈತಿಕತೆಗೆ ಸಂಬಂಧಿಸಿದ ಪ್ರಸ್ತುತ ಅರಿವು ಮತ್ತು ಇತ್ತೀಚಿನ ಹೊಸ ವಿಚಾರಗಳಿಗೆ ಸಂಬೋಧಿಸಬೇಕು.
3.09 ಉದ್ಯೋಗಾಧಿಪತಿಗಡೆಗೆ ಬದ್ಧತೆ
ಎ) ಸಮಾಜ ಕಾರ್ಯಕರ್ತರು ಸಾಮಾನ್ಯವಾಗಿ ಉದ್ಯೋಗಾಧಿಪತಿಗಳು ಮತ್ತು ಉದ್ಯೋಗಕೊಟ್ಟ ಸಂಸ್ಥೆಗಳೆಡೆ ಮಾಡಿದ ಬದ್ಧತೆಗೆ ಬದ್ಧವಾಗಿರಬೇಕು.
ಬಿ) ಸಮಾಜ ಕಾರ್ಯಕರ್ತರು ಔದ್ಯೋಗಿಕ ಕಾರ್ಯಾಲಯದ ಧೋರಣೆಗಳು, ಪ್ರಕ್ರಿಯೆಗಳು, ದಕ್ಷತೆ ಮತ್ತು ಅವರ ಸೇವೆಗಳ ಪರಿಣಾಮವನ್ನು ಉತ್ತಮಗೊಳಿಸಲು ಕೆಲಸ ಮಾಡಬೇಕು.
ಸಿ) ಸಮಾಜ ಕಾರ್ಯಕರ್ತರು ಉದ್ಯೋಗಾಧಿಪತಿಗಳು ಸಮಾಜ ಕಾರ್ಯಕರ್ತರ ರಾಷ್ಟ್ರೀಯ ಸಂಘದ ನೀತಿ ಸಂಹಿತೆ ರೂಪಿಸಿರುವ ಸಮಾಜ ಕಾರ್ಯಕರ್ತರ ನೈತಿಕ ಕಟ್ಟುಪಾಡುಗಳು ಮತ್ತು ಸಾಮಾಜಿಕ ಕಾರ್ಯ ರೂಢಿಯಲ್ಲಿ ಆ ಕಟ್ಟುಪಾಡುಗಳ ಒಳಾರ್ಥದ ಅರಿವು ಹೊಂದಿರುವುದನ್ನು ಖಚಿತಪಡಿಸಿಕೊಳ್ಳಲು ಸಕಾರಣ ಕ್ರಮಗಳನ್ನು ತೆಗೆದುಕೊಳ್ಳಬೇಕು.
ಡ) ಸಮಾಜ ಕಾರ್ಯಕರ್ತರು ಅವರ ಉದ್ಯೋಗಾಧಿಪತಿಗಳ ಸಂಸ್ಥೆಯ ಕಾರ್ಯನೀತಿಗಳು, ಪ್ರಕ್ರಿಯೆಗಳು, ಗೊತ್ತುವಳಿಗಳು ಅಥವಾ ಆಡಳಿತಾತ್ಮಕ ಆದೇಶಗಳು ತಮ್ಮ ಸಾಮಾಜಿಕ ಕಾರ್ಯದ ನೈತಿಕ ರೂಢಿಯಲ್ಲಿ ಹಸ್ತಕ್ಷೇಪ ಮಾಡಲು ಬಿಡಬಾರದು.ಸಮಾಜ ಕಾರ್ಯಕರ್ತರು ಅವರ ಉದ್ಯೋಗದಾತ ಸಂಸ್ಥೆಯ ಅಭ್ಯಾಸಗಳು ರಾಷ್ಟ್ರೀಯ ಸಂಘದ ನೀತಿಸಂಹಿತೆಗೆ ಹೊಂದಿಕೊಳ್ಳುವುದನ್ನು ಖಾತ್ರಿಪಡಿಸಲು ಸಕಾರಣ ಕ್ರಮಗಳನ್ನು ತೆಗೆದುಕೊಳ್ಳಬೇಕು.
3.10 ಕಾರ್ಮಿಕ ವ್ಯವಸ್ಥಾಪಕರ ಜಗಳ
ಅ) ಅರ್ಥಿಗಳೆಡೆಗೆ ಸೇವೆಗಳನ್ನು ಮತ್ತು ಕೆಲಸದ ಪರಿಸ್ಥಿತಿಯನ್ನು ಉತ್ತಮಗೊಳಿಸಲು ಸಮಾಜ ಕಾರ್ಯಕರ್ತರು ಕಾರ್ಮಿಕರ ಸಂಘ ಸ್ಥಾಪನೆ ಮತ್ತು ಅದರಲ್ಲಿ ಪಾಲ್ಗೊಳ್ಳುವಿಕೆ ಸೇರಿದಂತೆ ಸಂಘಟಿತ ಕಾರ್ಯಗಳಲ್ಲಿ ತೊಡಗಬಹುದು.
ಬ) ಕಾರ್ಮಿಕ ವ್ಯವಸ್ಥಾಪಕರ ಜಗಳಗಳಲ್ಲಿ, ಕಾರ್ಯಕ್ರಮಗಳಲ್ಲಿ ಅಥವಾ ಕಾರ್ಮಿಕರ ಮುಷ್ಕರದಲ್ಲಿ ಭಾಗಿಯಾಗಿರುವ ಸಮಾಜ ಕಾರ್ಯಕರ್ತರ ಕ್ರಿಯೆಗಳು ವೃತ್ತ್ಯಾತ್ಮಕ ಮೌಲ್ಯಗಳು, ನೈತಿಕ ತತ್ತ್ವಗಳು ಮತ್ತು ನೈತಿಕ ನಿಯಮಗಳಿಂದ ಮಾರ್ಗದರ್ಶಿತವಾಗಿರಬೇಕು. ವಾಸ್ತವವಾಗಿ ಅಥವಾ ಕಾರ್ಮಿಕರ ಬೆದರಿಕೆಯ ಮುಷ್ಕರ ಅಥವಾ ಕಾರ್ಯ ಕ್ರಮಗಳು ನಡೆಯುವಾಗ ವೃತ್ತಿಕಾರರಾಗಿ ಅವರ ಪ್ರಾಥಮಿಕ ಕಟ್ಟುಪಾಡಿಗೆ ಸಂಬಂಧಿಸಿ ಸಮಾಜ ಕಾರ್ಯಕರ್ತರ ಮಧ್ಯೆ ಸಕಾರಣವಾದ ಭಿನ್ನಾಭಿಪ್ರಾಯ ಉದ್ಭವವಾಗುತ್ತದೆ. ಇದರ ಬಗ್ಗೆ ತೆಗೆದುಕೊಳ್ಳುವ ಕ್ರಮಗಳನ್ನು ನಿರ್ಧರಿಸುವ  ಮೊದಲು ಸಮಾಜ ಕಾರ್ಯಕರ್ತರು ಸಂಬಂಧಪಟ್ಟ ವಿಷಯಗಳು ಮತ್ತು ಅರ್ಥಿಗಳ ಮೇಲೆ ಅವುಗಳ ಪರಿಣಾಮದ ಸಾಧ್ಯತೆಗಳನ್ನು ಪರಿಶೀಲಿಸಬೇಕು.
4. ವೃತ್ತಿಕಾರರಾಗಿ ಸಮಾಜ ಕಾರ್ಯಕರ್ತರ ನೈತಿಕ ಜವಾಬ್ದಾರಿಗಳು
ಅ) ಪ್ರಸ್ತುತ ಇರುವ ಅರ್ಹತೆ ಅಥವಾ ಅವಶ್ಯವಿರುವ ಅರ್ಹತೆಯನ್ನು ಗಳಿಸುವ ಉದ್ದೇಶದ ಆಧಾರದ ಮೇಲೆ ಮಾತ್ರ ಸಮಾಜ ಕಾರ್ಯಕರ್ತರು ಜವಾಬ್ದಾರಿ ಅಥವಾ ಉದ್ಯೋಗವನ್ನು ಒಪ್ಪಿಕೊಳ್ಳಬೇಕು.
ಬ) ಸಮಾಜ ಕಾರ್ಯಕರ್ತರು ವೃತ್ತ್ಯಾತ್ಮಕ ಅಭ್ಯಾಸದಲ್ಲಿ ಮತ್ತು ವೃತ್ತ್ಯಾತ್ಮಕ ಕಾರ್ಯಕ್ರಮಗಳ ಕೆಲಸದಲ್ಲಿ ಪರಿಣತರಾಗಲು ಅಥವಾ ಪರಿಣತರಾಗಿಯೇ ಉಳಿಯಲು ಶ್ರಮಿಸಬೇಕು. ಸಮಾಜ ಕಾರ್ಯಕ್ಕೆ ಸಂಬಂಧಿಸಿ ಹೊರಹೊಮ್ಮುವ ಜ್ಞಾನವನ್ನು ವಿಮರ್ಶಾತ್ಮಕವಾಗಿ ಪರೀಕ್ಷಿಸಬೇಕು ಮತ್ತು ಚಾಲ್ತಿಯಿಡಬೇಕು. ಸಮಾಜ ಕಾರ್ಯಕರ್ತರು ವೃತ್ತ್ಯಾತ್ಮಕ ಸಾಹಿತ್ಯವನ್ನು ದಿನನಿತ್ಯ ಅವಲೋಕಿಸಬೇಕು ಮತ್ತು ಸಾಮಾಜಿಕ ಕಾರ್ಯಾಭ್ಯಾಸ ಮತ್ತು ಸಾಮಾಜಿಕ ಕಾರ್ಯನೀತಿಶಾಸ್ತ್ರಕ್ಕೆ ಸಂಬಂಧಿಸಿದ ಶಿಕ್ಷಣ ಮುಂದುವರಿಕೆಯಲ್ಲಿ ಪಾಲ್ಗೊಳ್ಳಬೇಕು.
ಕ) ಸಮಾಜ ಕಾರ್ಯಕರ್ತರು ಸಾಮಾಜಿಕ ಕಾರ್ಯ ಮತ್ತು ಸಾಮಾಜಿಕ ಕಾರ್ಯನೀತಿಶಾಸ್ತ್ರಕ್ಕೆ ಸಂಬಂಧಿಸಿದ ತಿಳುವಳಿಕೆಯ ಆಧಾರದ ಜ್ಞಾನವನ್ನು ಒಳಗೊಂಡ ಮಾನ್ಯತೆ ಪಡೆದ ಜ್ಞಾನದ ಮೇಲೆ ಮೂಲ ಅಭ್ಯಾಸವನ್ನು ಮಾಡಬೇಕು.
4.02 ತಾರತಮ್ಯ
ಸಮಾಜ ಕಾರ್ಯಕರ್ತರು ಬುಡಕಟ್ಟು, ಜನಾಂಗ, ರಾಷ್ಟ್ರೀಯ ಮೂಲ, ಬಣ್ಣ, ಲಿಂಗ, ಲೈಂಗಿಕ ಮನೋಭಾವ, ಲಿಂಗ ಗುರುತು ಅಥವಾ ಅಭಿವ್ಯಕ್ತಿ, ವಯಸ್ಸು, ವೈವಾಹಿಕ ಪರಿಸ್ಥಿತಿ, ರಾಜಕೀಯ ನಂಬಿಕೆ, ಮತ, ವಲಸೆ ಪರಿಸ್ಥಿತಿ ಮತ್ತು ಮಾನಸಿಕ ಅಥವಾ ದೈಹಿಕ ನ್ಯೂನತೆಯ ಆಧಾರದ ಮೇಲೆ ಯಾವುದೇ ರೀತಿಯ ತಾರತಮ್ಯವನ್ನು ಅಭ್ಯಾಸ ಮಾಡುವುದಾಗಲೀ, ಕ್ಷಮಿಸುವುದಾಗಲೀ, ಸುಲಭಗೊಳಿಸುವುದಾಗಲೀ ಅಥವಾ ಸಹಕರಿಸುವುದಾಗಲೀ ಮಾಡಬಾರದು.
4.03 ಖಾಸಗಿ ನಡವಳಿಕೆ
ಸಮಾಜ ಕಾರ್ಯಕರ್ತರು ತಮ್ಮ ಖಾಸಗಿ ನಡವಳಿಕೆಯು ತಮ್ಮ ವೃತ್ತ್ಯಾತ್ಮಕ ಜವಾಬ್ದಾರಿಗಳನ್ನು ಪೂರ್ತಿಗೊಳಿಸುವ ಸಾಮರ್ಥ್ಯದೊಂದಿಗೆ ಹಸ್ತಕ್ಷೇಪ ಮಾಡಲು ಬಿಡಬಾರದು.
4.04 ಅಪ್ರಾಮಾಣಿಕತೆ, ವಂಚನೆ ಮತ್ತು ಮೋಸ
ಸಮಾಜ ಕಾರ್ಯಕರ್ತರು ಅಪ್ರಾಮಾಣಿಕತೆ, ವಂಚನೆ ಅಥವಾ ಮೋಸದಲ್ಲಿ ಭಾಗಿಯಾಗುವುದಾಗಲೀ, ಅವಕಾಶ ಕೊಡುವುದಾಗಲೀ ಅಥವಾ ಸೇರುವುದಾಗಲೀ ಮಾಡಬಾರದು.
4.05 ಹಾನಿ
ಅ) ಸಮಾಜ ಕಾರ್ಯಕರ್ತರು ತಮ್ಮ ಸ್ವಂತ ವೈಯಕ್ತಿಕ ಸಮಸ್ಯೆಗಳು, ಮನೋಸಾಮಾಜಿಕ ತೊಂದರೆ, ಕಾನೂನು ಸಮಸ್ಯೆಗಳು, ಬಲವಾದ ಹಲ್ಲೆ ಅಥವಾ ಮಾನಸಿಕ ಆರೋಗ್ಯ ತೊಂದರೆಗಳು ತಮ್ಮ ವೃತ್ತ್ಯಾತ್ಮಕ ತೀರ್ಪು ಮತ್ತು ಕೆಲಸ ಅಥವಾ ಯಾರಿಗೆ ಅವರು ವೃತ್ತ್ಯಾತ್ಮಕ ಜವಾಬ್ದಾರಿಯನ್ನು ಹೊಂದಿದ್ದಾರೋ ಆ ಜನರ ಅತ್ಯುತ್ತಮ ಹಿತಾಸಕ್ತಿಯ ಕಾಪಾಡುವಿಕೆಗೆ ಅಡ್ಡಿಮಾಡಲು ಬಿಡಬಾರದು.
ಬ) ಯಾವ ಸಮಾಜ ಕಾರ್ಯಕರ್ತರ ವೈಯಕ್ತಿಕ ಸಮಸ್ಯೆಗಳು, ಮನೋಸಾಮಾಜಿಕ ತೊಂದರೆ, ಕಾನೂನು ಸಮಸ್ಯೆಗಳು, ಬಲವಾದ ಹಲ್ಲೆ ಅಥವಾ ಮಾನಸಿಕ ಆರೋಗ್ಯ ತೊಂದರೆಗಳು ಅವರ ವೃತ್ತ್ಯಾತ್ಮಕ ತೀರ್ಪು ಮತ್ತು ಕೆಲಸಕ್ಕೆ ಅಡ್ಡಿಯಾಗುತ್ತಿದೆಯೋ ಅಂತಹವರು ಆ ಕೂಡಲೇ ಆಪ್ತಸಮಾಲೋಚಕರನ್ನು ಕಾಣಬೇಕು ಮತ್ತು ವೃತ್ತಿಕಾರರ ಸಹಾಯವನ್ನು ತೆಗೆದುಕೊಳ್ಳುವುದು, ಕಾರ್ಯಬಾಹುಳ್ಯದಲ್ಲಿ ಹೊಂದಾಣಿಕೆ ಮಾಡುವುದು, ಕೆಲಸವನ್ನು ನಿಲ್ಲಿಸುವುದು ಅಥವಾ ಅರ್ಥಿಗಳ ಹಾಗೂ ಇತರರನ್ನು ಕಾಪಾಡುವ ಇತರ ಸೂಕ್ತ ಪರಿಹಾರಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು.
4.06 ತಪ್ಪು ಪ್ರಾತಿನಿಧ್ಯ
ಅ) ಸಮಾಜ ಕಾರ್ಯಕರ್ತರು ಖಾಸಗಿ ವೈಯಕ್ತಿಕವಾಗಿ ಮತ್ತು ಸಾಮಾಜಿಕ ಕಾರ್ಯ ಕ್ಷೇತ್ರದ ಪ್ರತಿನಿಧಿಯಾಗಿ, ಸಾಮಾಜಿಕ ಕಾರ್ಯ ಸಂಸ್ಥೆಯ ಅಥವಾ ಸಮಾಜ ಕಾರ್ಯಕರ್ತರ ಉದ್ಯೋಗಾಧಿಪತಿಗಳ ಕಾರ್ಯಾಲಯದ ವೃತ್ತಿಕಾರರಾಗಿ ಮಾಡಿದ ಹೇಳಿಕೆಗಳು ಮತ್ತು ತೊಡಗಿರುವ ಕ್ರಿಯೆಗಳ ಮಧ್ಯದ ವ್ಯತ್ಯಾಸವನ್ನು ಸ್ಪಷ್ಟಪಡಿಸತಕ್ಕದ್ದು.
ಬ) ವೃತ್ತ್ಯಾತ್ಮಕ ಸಾಮಾಜಿಕ ಕಾರ್ಯ ಸಂಸ್ಥೆಯ ಪರವಾಗಿ ಮಾತಾಡುವ ಸಮಾಜ ಕಾರ್ಯಕರ್ತರು ಅಧಿಕಾರಿಗಳನ್ನು ಮತ್ತು ಸಂಸ್ಥೆಯ ಅಧಿಕೃತ ಹುದ್ದೆಗಳನ್ನು ಸರಿಯಾಗಿ ಪ್ರತಿನಿಧಿಸಬೇಕು
ಕ) ಸಮಾಜ ಕಾರ್ಯಕರ್ತರು ಅರ್ಥಿಗಳು, ಕಾರ್ಯಾಲಯಗಳು, ವೃತ್ತಿಶಿಕ್ಷಣದ ಜನರು, ಶಿಕ್ಷಣ, ಅರ್ಹತೆ, ಮಾನ್ಯತೆಗಳು ಮತ್ತು ಒದಗಿಸಿದ ಸೇವೆಗಳು ಅಥವಾ ಸಾಧಿಸಬೇಕಾದ ಫಲಿತಾಂಶಗಳು ನಿಖರವಾಗಿರಬೇಕು.
4.07 ಕೋರಿಕೆಗಳು
ಅ) ಸಮಾಜ ಕಾರ್ಯಕರ್ತರು ಪರಿಸ್ಥಿತಿಗಳು, ಅನುಚಿತ ಪ್ರಭಾವ, ದುರುಪಯೋಗಪಡಿಸಿಕೊಳ್ಳುವಿಕೆ ಅಥವಾ ಬಲವಂತದಿಂದಾಗಿ ಸೆಳೆಯುವ ಸಾಮರ್ಥ್ಯವುಳ್ಳ ಅರ್ಥಿಗಳ ಆಹ್ವಾನವಿಲ್ಲದ ಕೋರಿಕೆಗಳಲ್ಲಿ ನಿರತರಾಗಬಾರದು.
ಬ) ಸಮಾಜ ಕಾರ್ಯಕರ್ತರು ಪ್ರಸ್ತುತ ಅರ್ಥಿಗಳು ಅಥವಾ ನಿರ್ದಿಷ್ಟ ಪರಿಸ್ಥಿತಿಗಳಿಂದಾಗಿ ಅನುಚಿತ ಪ್ರಭಾವಕ್ಕೆ ದುರ್ಬಲರಾಗಿರುವ ಇತರ ಜನರಿಂದ ಯೋಗ್ಯತಾಪತ್ರದ ಹಿಂಬರಹಗಳ (ಅರ್ಥಿಯ ಮೊದಲ ಹೇಳಿಕೆಯನು ಅರ್ಹತಾಪತ್ರದ ಹಿಂಬರಹವೆಂದು ಬಳಸಲು ಒಪ್ಪಿಗೆಯ ಕೋರಿಕೆಯನ್ನು ಒಳಗೊಂಡು) ಕೋರಿಕೆಗಳಲ್ಲಿ ತೊಡಗಬಾರದು.
4.08 ಮನ್ನಣೆ ಗುರುತಿಸುವುದು
ಅ) ಸಮಾಜ ಕಾರ್ಯಕರ್ತರು ಜವಾಬ್ದಾರಿ ಹಾಗೂ ವಾಸ್ತವವಾಗಿ ನಿರ್ವಹಿಸಿದ ಮತ್ತು ನೆರವು ನೀಡಿದ ಕೆಲಸಕ್ಕೆ ಮಾತ್ರ ಮನ್ನಣೆ (ಮುಂದಾಳತ್ವ/ಸ್ಥಾಪನೆಯ ಗೌರವವೂ ಸೇರಿದಂತೆ) ಯನ್ನು ತೆಗೆದುಕೊಳ್ಳಬೇಕು.
ಆ) ಸಮಾಜ ಕಾರ್ಯಕರ್ತರು ಇತರರು ಮಾಡಿದ ಕೆಲಸ ಮತ್ತು ನೆರವನ್ನು ಪ್ರಾಮಾಣಿಕವಾಗಿ ಗುರುತಿಸಬೇಕು.
5. ಸಮಾಜ ಕಾರ್ಯಕ್ಷೇತ್ರದೆಡೆಗೆ ಸಮಾಜ ಕಾರ್ಯಕರ್ತರ ನೈತಿಕ ಜವಾಬ್ದಾರಿಗಳು
5.01 ವೃತ್ತಿಯ ಘನತೆ
ಅ) ಕಾರ್ಯದ ಅತ್ಯುನ್ನತ ಮಟ್ಟದ ನಿರ್ವಹಣೆ ಮತ್ತು ಬೆಳೆಸುವಿಕೆಗೆ ಸಮಾಜ ಕಾರ್ಯಕರ್ತರು ಕೆಲಸ ಮಾಡಬೇಕು.
ಬ) ಸಮಾಜ ಕಾರ್ಯಕರ್ತರು ವೃತ್ತಿಯ ಮೌಲ್ಯಗಳು, ನೀತಿಗಳು, ಜ್ಞಾನ ಮತ್ತು ಉದ್ದೇಶಗಳನ್ನು ಎತ್ತಿಹಿಡಿದು ಬೆಳೆಸಬೇಕು. ಸೂಕ್ತ ಅಧ್ಯಯನ ಮತ್ತು ಸಂಶೋಧನೆ, ಜಾಗೃತ ಚರ್ಚೆಗಳು ಹಾಗೂ ವೃತ್ತಿಯ ಜವಾಬ್ದಾರಿಯುತ ವಿಮರ್ಶೆಯ ಮೂಲಕ ವೃತ್ತಿಯ ಘನತೆಯನ್ನು ಕಾಪಾಡಬೇಕು, ಅಭಿವೃದ್ಧಿಪಡಿಸಿ ಬೆಳೆಸಬೇಕು.
ಕ) ಸಮಾಜ ಕಾರ್ಯಕರ್ತರು ಸಮಾಜ ಕಾರ್ಯಕ್ಷೇತ್ರದ ಮೌಲ್ಯ, ಘನತೆ ಮತ್ತು ಅರ್ಹತೆಯ ಗೌರವವನ್ನು ಹೆಚ್ಚಿಸುವ ಚಟುವಟಿಕೆಗಳಿಗೆ ಸಮಯ ಮತ್ತು ವೃತ್ತ್ಯಾತ್ಮಕ ಪರಿಣತಿಯನ್ನು ನೀಡಬೇಕು. ಇದು ಶಿಕ್ಷಣ ನೀಡುವುದು, ಸಂಶೋಧನೆ, ಸಮಾಲೋಚನೆ, ಸೇವೆ, ಶಾಸನ ಸಭೆ  ಮತ್ತು ಸಮುದಾಯದಲ್ಲಿ ಪ್ರತಿಪಾದನೆ ಹಾಗೂ ಅವರ ವೃತ್ತ್ಯಾತ್ಮಕ ಸಂಸ್ಥೆಗಳಲ್ಲಿ ಭಾಗವಹಿಸುವಿಕೆಯನ್ನು ಒಳಗೊಂಡಿರುತ್ತದೆ.
ಡ) ಸಮಾಜ ಕಾರ್ಯಕರ್ತರು ಸಾಮಾಜಿಕ ಕಾರ್ಯದ ಜ್ಞಾನದ ಬುನಾದಿಗೆ ಕೊಡುಗೆ ನೀಡಬೇಕು ಮತ್ತು ಅವರ ಅಭ್ಯಾಸ, ಸಂಶೋಧನೆ ಮತ್ತು ನೀತಿಗಳಿಗೆ ಸಂಬಂಧಿಸಿದ ಜ್ಞಾನವನ್ನು ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳಬೇಕು. ಸಮಾಜ ಕಾರ್ಯಕರ್ತರು ವೃತ್ತಿಯ ಸಾಹಿತ್ಯಕ್ಕೆ ಕೊಡುಗೆಯನ್ನು ನೀಡಬೇಕು ಹಾಗೂ ವೃತ್ತ್ಯಾತ್ಮಕ ಸಭೆಗಳು ಮತ್ತು ಸಮಾವೇಶಗಳಲ್ಲಿ ಅವರ ಜ್ಞಾನವನ್ನು ಹಂಚಿಕೊಳ್ಳಬೇಕು.
ಇ) ಸಮಾಜ ಕಾರ್ಯಕರ್ತರು ಸಾಮಾಜಿಕ ಕಾರ್ಯದ ಅನಧಿಕೃತ ಮತ್ತು ಅನರ್ಹತೆಯ ಕೆಲಸವನ್ನು ಪ್ರತಿಬಂಧಿಸುವ ಕಾರ್ಯಮಾಡಬೇಕು.
5.02 ಮೌಲ್ಯಮಾಪನ ಮತ್ತು ಸಂಶೋಧನೆ
ಎ) ಸಮಾಜ ಕಾರ್ಯಕರ್ತರು ಕಾರ್ಯನೀತಿಗಳು, ಕಾರ್ಯಕ್ರಮಗಳ ಜಾರಿಯನ್ನು ನೋಡಿಕೊಳ್ಳಬೇಕು ಮತ್ತು ಮೌಲ್ಯಮಾಪನ ಮಾಡಬೇಕು. ಜೊತೆಗೆ ಮಧ್ಯಪ್ರವೇಶವನ್ನು ರೂಢಿಸಿಕೊಳ್ಳಬೇಕು.
ಬಿ) ಸಮಾಜ ಕಾರ್ಯಕರ್ತರು ಜ್ಞಾನದ ಅಭಿವೃದ್ಧಿಗೆ ಕೊಡುಗೆ ನೀಡುವುದಕ್ಕೋಸ್ಕರ ಮೌಲ್ಯಮಾಪನ ಮತ್ತು ಸಂಶೋಧನೆಯನ್ನು ಬೆಳೆಸಬೇಕು ಮತ್ತು ಸರಳಗೊಳಿಸಬೇಕು.
ಸಿ) ಸಮಾಜ ಕಾರ್ಯಕರ್ತರು ಸಮಾಜ ಕಾರ್ಯಕ್ಕೆ ಸಂಬಂಧಿಸಿದ ಆವಿರ್ಭವಿಸಿದ ಜ್ಞಾನವನ್ನು ವಿಮರ್ಶಾತ್ಮಕವಾಗಿ ಪರೀಕ್ಷಿಸಬೇಕು ಮತ್ತು ಅದರೊಂದಿಗೆ ಒಡನಾಟವಿಟ್ಟುಕೊಂಡಿರಬೇಕು. ಮೌಲ್ಯಮಾಪನ ಮತ್ತು ಸಂಶೋಧನೆಯ ಸಾಕ್ಷ್ಯಗಳನ್ನು ಅವರ ವೃತ್ತ್ಯಾತ್ಮಕ ಅಭ್ಯಾಸದಲ್ಲಿ ಪೂರ್ತಿ ಬಳಸಬೇಕು.
ಡಿ) ಮೌಲ್ಯಮಾಪನ ಮತ್ತು ಸಂಶೋಧನೆಯಲ್ಲಿ ತೊಡಗಿರುವ ಸಮಾಜ ಕಾರ್ಯಕರ್ತರು ಸಂಭವನೀಯ ಸಾಧ್ಯತೆಗಳನ್ನು ಕಾಳಜಿಯಿಂದ ಲೆಕ್ಕಕ್ಕೆ ತೆಗೆದುಕೊಳ್ಳಬೇಕು. ಜೊತೆಗೆ ಮೌಲ್ಯಮಾಪನ ಮತ್ತು ಸಂಶೋಧನೆಯಲ್ಲಿ ಪಾಲ್ಗೊಳ್ಳುವವರ ರಕ್ಷಣೆಗಾಗಿ ಅಭಿವೃದ್ಧಿಪಡಿಸಿರುವ ಮಾರ್ಗದರ್ಶಿಸೂತ್ರಗಳನ್ನು ಅನುಸರಿಸಬೇಕು.
ಇ) ಮೌಲ್ಯಮಾಪನ ಮತ್ತು ಸಂಶೋಧನೆಯಲ್ಲಿ ತೊಡಗಿರುವ ಸಮಾಜ ಕಾರ್ಯಕರ್ತರು ಭಾಗವಹಿಸುವವರಿಂದ ಸ್ವ‌ಇಚ್ಛೆಯಿಂದ ನೀಡಿದ ಲಿಖಿತ ತಿಳಿಸಿದ ಒಪ್ಪಿಗೆಯನ್ನು ಪಡೆಯಬೇಕು. ಇದನ್ನು ಸೂಕ್ತವಾದ ಸಂದರ್ಭದಲ್ಲಿ, ಯಾವುದೇ ಒತ್ತಡ ಅಥವಾ ವಾಸ್ತವಿಕ ಹೇರುವಿಕೆ ಅಥವಾ ಭಾಗವಹಿಸುವಿಕೆಯ ನಿರಾಕರಣೆಗಾಗಿ ದಂಡ ವಿಧಿಸದೇ, ಭಾಗವಹಿಸುವವರ ಉತ್ತಮ ಜೀವನ, ಖಾಸಗಿತನ ಮತ್ತು ಘನತೆಗೆ ಧಕ್ಕೆ ಬರದಂತೆ ಮತ್ತು ಭಾಗವಹಿಸಲು ಬಲವಂತಮಾಡದೇ ನೆರವೇರಿಸಬೇಕು. ತಿಳಿಸಿದ್ದ ಒಪ್ಪಿಗೆಯು ವಿನಂತಿಸಿದ ಪಾಲ್ಗೊಳ್ಳುವಿಕೆಯ ಸ್ವರೂಪ, ವಿಸ್ತಾರ ಮತ್ತು ಅವಧಿ ಹಾಗೂ ಸಂಶೋಧನೆಯಲ್ಲಿ ಪಾಲ್ಗೊಳ್ಳುವಿಕೆಯ ನಷ್ಟಗಳು ಮತ್ತು ಲಾಭಗಳನ್ನು ಬಹಿರಂಗಗೊಳಿಸುವ ಕುರಿತು ಮಾಹಿತಿಯನ್ನು ಒಳಗೊಂಡಿರಬೇಕು.
ಎಫ್) ಮೌಲ್ಯಮಾಪನ ಅಥವಾ ಸಂಶೋಧನೆಯಲ್ಲಿ ಭಾಗವಹಿಸುವವರು ತಿಳಿಸಿದ ಒಪ್ಪಿಗೆಯನ್ನು ಕೊಡಲು ಅಸಮರ್ಥರಾದಾಗ, ಸಮಾಜ ಕಾರ್ಯಕರ್ತರು ಅವರಿಗೆ ಸೂಕ್ತ ವಿವರಣೆಯನ್ನು ಒದಗಿಸಿ ಅವರಿಂದ ಎಷ್ಟು ಸಾಧ್ಯವೋ ಅಷ್ಟು ಒಪ್ಪಿಗೆಯನ್ನು ಪಡೆಯಬೇಕು. ಜೊತೆಗೆ ಸೂಕ್ತ ಬದಲೀ ವ್ಯಕ್ತಿಗಳಿಂದ ಲಿಖಿತ ಒಪ್ಪಿಗೆಯನ್ನು ಪಡೆಯಬೇಕು.
ಜಿ) ಸಮಾಜ ಕಾರ್ಯಕರ್ತರು ಭವಿಷ್ಯದ ವೈಜ್ಞಾನಿಕ, ಶೈಕ್ಷಣಿಕ ಅಥವಾ ಅನ್ವಯಿಕ ಮೌಲ್ಯದ ಕಾರಣದಿಂದಾಗಿ ಸಂಶೋಧನೆಯ ಕಟ್ಟುನಿಟ್ಟಾದ ಮತ್ತು ಜವಾಬ್ದಾರಿಯುತ ಅವಲೋಕನವನ್ನು ಸಮರ್ಥಿಸಿಕೊಳ್ಳಬಹುದೆಂದು ಕಂಡುಬಂದರೆ ಮತ್ತು ಅಸಾಧ್ಯವಾದ ಒಪ್ಪಿಗೆಯ ಮನ್ನಾವನ್ನು ಒಳಗೊಳ್ಳದ ಸಮನಾದ ಪರಿಣಾಮಾತ್ಮಕ ಬದಲಿ ಪ್ರಕ್ರಿಯೆಗಳಿರುವ ಸಂದರ್ಭವಿದ್ದರೆ ಸಹಜವಾಗಿರುವ ಗಮನಿಸುವಿಕೆಯ ಕೆಲವು ವಿಧಗಳು ಮತ್ತು ಕಲೆಹಾಕುವ ಸಂಶೋಧನೆಯಂತಹ ಒಪ್ಪಿಗೆಯ ಪ್ರಕ್ರಿಯೆಗಳನ್ನು ಬಳಸದಿರುವ ಮೌಲ್ಯಮಾಪನ ಅಥವಾ ಸಂಶೋಧನೆಯನ್ನು ವಿನ್ಯಾಸಗೊಳಿಸುವುದು ಅಥವಾ ಆಯೋಜಿಸುವುದನ್ನು ಯಾವತ್ತೂ ಮಾಡಬಾರದು.
ಎಚ್) ಸಮಾಜ ಕಾರ್ಯಕರ್ತರು ಮೌಲ್ಯಮಾಪನ ಮತ್ತು ಸಂಶೋಧನೆಯಿಂದ ದಂಡವಿಲ್ಲದೇ ಯಾವಾಗ ಬೇಕಾದರೂ ಹಿಂದೆ ಸರಿಯಬಹುದಾದ ಹಕ್ಕಿನ ಬಗ್ಗೆ ಭಾಗವಹಿಸುವವರಿಗೆ ತಿಳಿಸತಕ್ಕದ್ದು.
ಐ) ಸಮಾಜ ಕಾರ್ಯಕರ್ತರು ಮೌಲ್ಯಮಾಪನ ಮತ್ತು ಸಂಶೋಧನೆಯಲ್ಲಿ ಭಾಗವಹಿಸುವವರಿಗೆ ಸೂಕ್ತ ಪೂರಕ ಸೇವೆಗಳು ಲಭ್ಯವಿರುವುದನ್ನು ಖಾತ್ರಿಪಡಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು.
ಜೆ) ಮೌಲ್ಯಮಾಪನ ಮತ್ತು ಸಂಶೋಧನೆಯಲ್ಲಿ ತೊಡಗಿರುವ ಸಮಾಜ ಕಾರ್ಯಕರ್ತರು ಭಾಗವಹಿಸುವವರನ್ನು ಅನಿರೀಕ್ಷಿತ ದೈಹಿಕ ಅಥವಾ ಮಾನಸಿಕ ತೊಂದರೆ, ಹಾನಿ, ಅಪಾಯ ಅಥವಾ ನಷ್ಟದಿಂದ ರಕ್ಷಿಸಬೇಕು.
ಕೆ) ಸೇವೆಗಳ ಮೌಲ್ಯಮಾಪನದಲ್ಲಿ ನಿರತರಾಗಿರುವ ಸಮಾಜ ಕಾರ್ಯಕರ್ತರು ಸಂಗ್ರಹಿಸಿದ ಮಾಹಿತಿಯನ್ನು ವೃತ್ತ್ಯಾತ್ಮಕ ಉದ್ದೇಶಗಳಿಗಾಗಿ ಮಾತ್ರ ಮತ್ತು ಈ ಮಾಹಿತಿಗೆ ವೃತ್ತಿಯಿಂದ ಸಂಬಂಧಪಟ್ಟ ಜನರೊಂದಿಗೆ ಮಾತ್ರ ಚರ್ಚಿಸತಕ್ಕದ್ದು.
ಎಲ್) ಮೌಲ್ಯಮಾಪನ ಮತ್ತು ಸಂಶೋಧನೆಯಲ್ಲಿ ತೊಡಗಿರುವ ಸಮಾಜ ಕಾರ್ಯಕರ್ತರು ಭಾಗವಹಿಸುವವರ ಮತ್ತು ಅವರಿಂದ ಪಡೆದ ಮಾಹಿತಿಯ ಅನಾಮಿಕತೆ ಅಥವಾ ಗೌಪ್ಯತೆಯನ್ನು ಖಾತ್ರಿಪಡಿಸಿಕೊಳ್ಳಬೇಕು. ಸಮಾಜ ಕಾರ್ಯಕರ್ತರು ಭಾಗವಹಿಸುವವರಿಗೆ ಗೌಪ್ಯತೆಯ ಯಾವುದೇ ಮಿತಿಗಳು, ಗೌಪ್ಯತೆಯ ಖಾತ್ರಿಗೆ ತೆಗೆದುಕೊಳ್ಳುವ ಕ್ರಮಗಳು ಮತ್ತು ಸಂಶೋಧನೆಯ ಮಾಹಿತಿಗಳನ್ನು ಹೊಂದಿದ ಯಾವುದೇ ದಾಖಲೆಗಳನ್ನು ಯಾವಾಗ ನಾಶಪಡಿಸಲಾಗುವುದು ಎಂಬುದರ ಬಗ್ಗೆ ತಿಳಿಸಬೇಕು.
ಎಮ್) ಮೌಲ್ಯಮಾಪನ ಮತ್ತು ಸಂಶೋಧನೆಯ ಫಲಿತಾಂಶವನ್ನು ವರದಿ ಮಾಡುವ ಸಮಾಜ ಕಾರ್ಯಕರ್ತರು ಅಧಿಕೃತವಾಗಿ ಬಹಿರಂಗಗೊಳಿಸಲು ಸರಿಯಾದ ಒಪ್ಪಿಗೆ ಪಡೆದ ಸಂದರ್ಭವನ್ನು ಹೊರತುಪಡಿಸಿ ಉಳಿದ ಗುರುತಿನ ಮಾಹಿತಿಯನ್ನು ಬಿಟ್ಟು ಭಾಗವಹಿಸುವವರ ಗೌಪ್ಯತೆಯನ್ನು ಕಾಪಾಡತಕ್ಕದ್ದು.
ಎನ್) ಸಮಾಜ ಕಾರ್ಯಕರ್ತರು ಮೌಲ್ಯಮಾಪನ ಮತ್ತು ಸಂಶೋಧನೆಯಲ್ಲಿ ಕಂಡುಕೊಂಡವುಗಳನ್ನು ನಿಖರವಾಗಿ ವರದಿ ಮಾಡಬೇಕು. ಅವರು ಫಲಿತಾಂಶವನ್ನು ಸೃಷ್ಟಿಸುವುದು ಅಥವಾ ತಪ್ಪಾಗಿ ನಿರೂಪಿಸುವುದು ಮಾಡಬಾರದು. ಉತ್ತಮ ಗುಣಮಟ್ಟದ ಪ್ರಕಟಣೆಯ ವಿಧಾನವನ್ನು ಬಳಸಿ ಪ್ರಕಟಗೊಂಡ ಮಾಹಿತಿಯಲ್ಲಿ ಆ ನಂತರ ಕಂಡುಬಂದ ಯಾವುದೇ ತಪ್ಪುಗಳನ್ನು ಸರಿಮಾಡಲು ಕ್ರಮಗಳನ್ನು ಕೈಗೊಳ್ಳಬೇಕು.
ಒ) ಮೌಲ್ಯಮಾಪನ ಮತ್ತು ಸಂಶೋಧನೆಯಲ್ಲಿ ನಿರತರಾಗಿರುವ ಸಮಾಜ ಕಾರ್ಯಕರ್ತರು ಹಿತಾಸಕ್ತಿಯ ವೈರುಧ್ಯ ಮತ್ತು ಭಾಗವಹಿಸುವವರ ಜೊತೆ ಎರಡು ಅಥವಾ ಹೆಚ್ಚಿನ ಸಂಬಂಧಗಳ ಬಗ್ಗೆ ಎಚ್ಚರವಾಗಿರಬೇಕು ಮತ್ತು ಅವುಗಳನ್ನು ತಪ್ಪಿಸಬೇಕು. ಅಲ್ಲದೇ ಭಾಗವಹಿಸುವವರಿಗೆ ಯಾವಾಗ ನೈಜವಾದ ಅಥವಾ ಬಲವಾದ ಹಿತಾಸಕ್ತಿಯ ವೈರುಧ್ಯವೇಳುತ್ತದೆ ಎಂಬುದನ್ನು ತಿಳಿಸಬೇಕು ಮತ್ತು ಭಾಗವಹಿಸುವವರ ಹಿತಾಸಕ್ತಿಯನ್ನು ಮೊದಲು ಪರಿಗಣಿಸುವ ರೀತಿಯಲ್ಲಿ ವಿಷಯ ಇತ್ಯರ್ಥಗೊಳಿಸಲು ಕ್ರಮ ತೆಗೆದುಕೊಳ್ಳಬೇಕು.
ಪಿ) ಸಮಾಜ ಕಾರ್ಯಕರ್ತರು ಜವಾಬ್ದಾರಿಯುತ ಸಂಶೋಧನಾ ಅಭ್ಯಾಸಗಳ ಬಗ್ಗೆ ಅವರನ್ನು, ಅವರ ವಿದ್ಯಾರ್ಥಿಗಳನ್ನು ಮತ್ತು ಅವರ ಸಹೋದ್ಯೋಗಿಗಳನ್ನು ಶಿಕ್ಷಿತಗೊಳಿಸಬೇಕು.
6. ವಿಶಾಲವಾದ ಸಮಾಜದೆಡೆಗೆ ಸಮಾಜ ಕಾರ್ಯಕರ್ತರ ಜವಾಬ್ದಾರಿಗಳು
6.01 ಸಾಮಾಜಿಕ ಕಲ್ಯಾಣ
ಸಮಾಜ ಕಾರ್ಯಕರ್ತರು ಸ್ಥಳೀಯದಿಂದ ಜಾಗತಿಕಮಟ್ಟದವರೆಗೆ ಸಮಾಜದ ಸಾಮಾನ್ಯ ಕಲ್ಯಾಣವನ್ನು ಮತ್ತು ಜನರ, ಅವರ ಸಮುದಾಯಗಳ ಮತ್ತು ಅವರ ವಾತಾವರಣಗಳ ಅಭಿವೃದ್ಧಿಗೆ ಒತ್ತುನೀಡಬೇಕು. ಸಮಾಜ ಕಾರ್ಯಕರ್ತರು ಮೂಲಭೂತ ಮಾನವ ಅವಶ್ಯಕತೆಗಳನ್ನು ಪೂರ್ತಿಗೊಳಿಸಲು ಪೂರಕವಾದ ಜೀವನ ಪರಿಸ್ಥಿತಿಗಾಗಿ ಹೋರಾಡಬೇಕು. ಸಾಮಾಜಿಕ ನ್ಯಾಯದ ನನಸಿಗೆ ಹೊಂದುವಂತೆ ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ಮೌಲ್ಯಗಳು ಹಾಗೂ ಸಂಸ್ಥೆಗಳನ್ನು ಬೆಳೆಸಬೇಕು.
6.02 ಸಾರ್ವಜನಿಕ ಪಾಲ್ಗೊಳ್ಳುವಿಕೆ
ಸಾಮಾಜಿಕ ಕಾರ್ಯನೀತಿಗಳು ಮತ್ತು ಸಂಸ್ಥೆಗಳನ್ನು ರೂಪಿಸುವಲ್ಲಿ ಸಾರ್ವಜನಿಕರಿಂದ ತಿಳಿದ ಸಹಭಾಗಿತ್ವವನ್ನು ಸುಲಭಗೊಳಿಸಬೇಕು.
6.03 ಸಾರ್ವಜನಿಕ ತುರ್ತುಪರಿಸ್ಥಿತಿಗಳು
ಸಾರ್ವಜನಿಕ ತುರ್ತುಪರಿಸ್ಥಿತಿಗಳಲ್ಲಿ ಸಮಾಜ ಕಾರ್ಯಕರ್ತರು ಎಷ್ಟು ಹೆಚ್ಚು ಸಾಧ್ಯವೋ ಅಷ್ಟು ಸೂಕ್ತ ವೃತ್ತ್ಯಾತ್ಮಕ ಸೇವೆಗಳನ್ನು ಒದಗಿಸಬೇಕು.
6.04 ಸಾಮಾಜಿಕ ಮತ್ತು ರಾಜಕೀಯ ಕ್ರಿಯೆ
ಅ) ಸಮಾಜ ಕಾರ್ಯಕರ್ತರು ಎಲ್ಲ ಜನರು ತಮ್ಮ ಮೂಲಭೂತ ಮಾನವ ಅವಶ್ಯಕತೆಗಳ ಪೂರೈಕೆಗೆ ಮತ್ತು ಪೂರ್ಣ ಅಭಿವೃದ್ಧಿಗೆ ಬೇಕಾದ ಸಂಪನ್ಮೂಲಗಳು, ಉದ್ಯೋಗ, ಸೇವೆಗಳು ಮತ್ತು ಅವಕಾಶಗಳನ್ನು ಸಮಾನವಾಗಿ ಹೊಂದುವುದನ್ನು ಖಾತ್ರಿಪಡಿಸುವ ಸಾಮಾಜಿಕ ಮತ್ತು ರಾಜಕೀಯ ಕ್ರಿಯೆಗಳಲ್ಲಿ ತೊಡಗಿಕೊಳ್ಳಬೇಕು. ಸಮಾಜ ಕಾರ್ಯಕರ್ತರು ರೂಢಿಯಲ್ಲಿರುವ ರಾಜಕೀಯ ಅಖಾಡ ಪರಿಣಾಮದ ಅರಿವನ್ನು ಹೊಂದಿರಬೇಕು. ಮೂಲಭೂತ ಮಾನವ ಅವಶ್ಯಕತೆಗಳ ಪೂರೈಕೆಗೆ ಮತ್ತು ಸಾಮಾಜಿಕ ನ್ಯಾಯದ ಬೆಳೆವಣಿಗೆಗೆ ಸಾಮಾಜಿಕ ಪರಿಸ್ಥಿತಿಯನ್ನು ಉತ್ತಮಗೊಳಿಸಲು ಕಾರ್ಯನೀತಿ/ಪಾಲಿಸಿಯಲ್ಲಿ ಮತ್ತು ಶಾಸನದಲ್ಲಿ ಬದಲಾವಣೆಗಾಗಿ ವಕಾಲತ್ತು ಮಾಡಬೇಕು.
ಬ) ಸಮಾಜ ಕಾರ್ಯಕರ್ತರು ಆಯ್ಕೆಗಳು ಮತ್ತು ಎಲ್ಲ ಜನರಿಗೂ ಅದರಲ್ಲೂ ವಿಶೇಷವಾಗಿ ದೀನರ, ದುರ್ಬಳಕೆಮಾಡಲ್ಪಟ್ಟ, ತುಳಿತಕ್ಕೆ ಒಳಗಾದವರ ಮತ್ತು ಶೋಷಿತ ಜನರು ಹಾಗೂ ಗುಂಪುಗಳಿಗೆ ಅವಕಾಶ ವಿಸ್ತರಿಸಲು ಕೆಲಸಮಾಡಬೇಕು.
ಕ) ಸಮಾಜ ಕಾರ್ಯಕರ್ತರು ಸಂಯುಕ್ತ ರಾಜ್ಯಗಳೊಳಗೆ ಮತ್ತು ಜಾಗತಿಕವಾಗಿ ಸಾಂಸ್ಕೃತಿಕ ಮತ್ತು ಸಾಮಾಜಿಕ ವೈವಿಧ್ಯತೆಯೆಡೆಗಿನ ಗೌರವವನ್ನು ಹೆಚ್ಚಿಸುವ ಪರಿಸ್ಥಿತಿಗೆ ಒತ್ತುಕೊಡಬೇಕು. ಸಮಾಜ ಕಾರ್ಯಕರ್ತರು ವೈವಿಧ್ಯತೆಯೆಡೆಗಿನ ಗೌರವವನ್ನು ಪ್ರಮಾಣೀಕರಿಸುವ ಕಾರ್ಯನೀತಿಗಳು ಮತ್ತು ಅಭ್ಯಾಸಗಳನ್ನು ಬೆಳೆಸಬೇಕು. ಸಾಂಸ್ಕೃತಿಕ ಜ್ಞಾನ ಮತ್ತು ಸಂಪನ್ಮೂಲಗಳ ವಿಸ್ತರಣೆಗೆ ಸಹಕರಿಸಬೇಕು. ಸಾಂಸ್ಕೃತಿಕ ಅರ್ಹತೆಯನ್ನು ವ್ಯಕ್ತಪಡಿಸುವ ಕಾರ್ಯಕ್ರಮಗಳು ಮತ್ತು ಸಂಸ್ಥೆಗಳ ಪರ ವಕಾಲತ್ತುವಹಿಸಬೇಕು. ಎಲ್ಲ ಜನರ ಹಕ್ಕುಗಳನ್ನು ರಕ್ಷಿಸುವ, ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಖಾತ್ರಿಗೊಳಿಸುವ ಕಾರ್ಯನೀತಿಗಳನ್ನು ಬೆಳೆಸಬೇಕು.
ಡ) ಸಮಾಜ ಕಾರ್ಯಕರ್ತರು ಬುಡಕಟ್ಟು, ಜನಾಂಗ, ರಾಷ್ಟ್ರೀಯ ಮೂಲ, ಬಣ್ಣ, ಲಿಂಗ, ಲೈಂಗಿಕ ಮನೋಭಾವ, ಲಿಂಗ ಗುರುತು ಅಥವಾ ಅಭಿವ್ಯಕ್ತಿ, ವಯಸ್ಸು, ವೈವಾಹಿಕ ಸ್ಥಾನಮಾನ, ರಾಜಕೀಯ ನಂಬಿಕೆ, ಮತ, ವಲಸೆ ಸ್ಥಾನಮಾನ ಅಥವಾ ಮಾನಸಿಕ ಅಥವಾ ದೈಹಿಕ ನ್ಯೂನತೆಯ ಆಧಾರದ ಮೇಲೆ ಯಾವುದೇ ವ್ಯಕ್ತಿ, ಗುಂಪು ಅಥವಾ ವರ್ಗವನ್ನು ನಿಯಂತ್ರಿಸುವುದು, ಶೋಷಿಸುವುದು ಮತ್ತು ತಾರತಮ್ಯ ಎಸಗುವುದನ್ನು ವಿರೋಧಿಸಲು ಮತ್ತು ತೊಡೆದುಹಾಕಲು ಕಾರ್ಯನಿರ್ವಹಿಸಬೇಕು.

ಜಾತ್ಯತೀತ ನಾಡಿಗೆ ಪ್ರಜ್ಞಾಪೂರ್ವಕ ನಡಿಗೆ_

ಭಾರತವು ವಿವಿಧ ಧರ್ಮಗಳ ಮತ್ತು ಜಾತಿಗಳ ಆಗರವಾಗಿರುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ನಾನು ನಿಮಗೆ ವಿನೂತನ ಚಿಂತನೆಯನ್ನು ತಿಳಿಸುವ ಪ್ರಯತ್ನವನ್ನು ಮಾಡಿದ್ದೇನೆ. ಅದೇನೆಂದರೆ, ಬಹುತೇಕ ಧರ್ಮಗಳ ಮತ್ತು ಜಾತಿಗಳ ಪದಗಳಲ್ಲಿ ಸಮಾಜವನ್ನು ಬೆಸೆಯುವ ಸಾರವಿರುತ್ತದೆ. ಅದನ್ನು ಅರಿತುಕೊಳ್ಳುವ ಪ್ರಯತ್ನವನ್ನು ಇಂದು ಎಲ್ಲರು ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಈ ಕೆಳಗೆ ವಿವಿಧ ಧರ್ಮಗಳ ಹಾಗೂ ಜಾತಿಗಳ ಪದಗಳ ಒಳ ಸಾರವನ್ನು ನಾವು ಹೇಗೆ ಗ್ರಹಿಸಿ ಸಮಾಜವನ್ನು ನೋಡಬೇಕೆಂಬ ಅನ್ವೈಕೆಯ ದೃಷ್ಟಿಕೋನವನ್ನು ತಿಳಿಸಲು ಪ್ರಯತ್ನಿಸಿದ್ದೇನೆ.

1. ಇಸ್ಲಾಮ್ ಎಂಬ ಅರಬಿ ಪದದ ಅರ್ಥ ‘ಶಾಂತಿ’, ‘ಸಮರ್ಪಣೆ’ ಎಂದಾಗಿದೆ.
ನಾವೆಲ್ಲರು ಸಮಾಜದ ಶಾಂತಿಗಾಗಿ ಸಮರ್ಪಿತರಾಗಿರುವುದರಿಂದ ನಾವೂ ಸಹ ಮುಸಲ್ಮಾನರು.

2. ವೀರಶೈವ ಅಥವಾ ಲಿಂಗಾಯತ ಎಂದರೆ ಜ್ಞಾನದಲ್ಲಿ ರಮಿಸುವ ಶಿವಭಕ್ತ ಎಂದು.
ನಾವೂ ಸಹ  ಜ್ಞಾನದಲ್ಲಿ ರಮಿಸುವ  ಸಮಾಜಶಿವನ ಭಕ್ತರು.

3. ‘ಹೊಲೆಯ’ ಎಂಬ ಪದದ ಮೂಲ ‘ಹೊಲ’ವೇ ಹೊರತು ಹೊಲಸು ಎಂದಲ್ಲ. ಇದಕ್ಕೆ ಸಾಕ್ಷಿಯಾಗಿ ಕರ್ನಾಟಕ ಗೆಜೆಟಿಯರ್ (vol 3, Castes and tribes in mysore) ನಲ್ಲಿ Holeya means owner of land ಎಂದಿದೆ. ಅಲ್ಲದೆ 1901 ರ ಜನಗಣತಿ ವರದಿ ಹೀಗೆ ಹೇಳುತ್ತದೆ, HOLA is the canarese name for a dry crop field and HOLEYA means man of such field!
ಸಾಮಾಜಿಕ ಹೊಲದ  ನಿವಾಸಿಗಳಾಗಿರುವ ನಾವೂ ಸಹ ಹೊಲೆಯರು.

4. ಕುರುಬ ಎಂದರೆ ಹುಡುಕುವ ಅಥವ ಪಡೆಯುವ ಎಂದಾಗುತ್ತದೆ.
ಮೂಲಭೂತ ಅವಶ್ಯಕತೆಗಳಿಗಾಗಿ ಮತ್ತು ಜ್ಞಾನಕ್ಕಾಗಿ ಸದಾ ಹುಡುಕಾಡುವ ನಾವೂ ಸಹ ಕುರುಬರು.

5. ಜೈನ ಎಂದರೆ 'ಜಿನ'ಎಂಬ  ಶಬ್ದವಾಗಿದ್ದು ಜಿನ ಎಂದರೆ' ಗೆದ್ದವನು' ಎಂದು ಹೇಳಬಹುದು. ಕರ್ಮದ ಕಟ್ಟನ್ನು ಮುರಿದು ಸಂಸಾರವನ್ನು ದಾಟಿ ಮುಕ್ತಿಯನ್ನು ಪಡೆಯುವ ಮಾರ್ಗವೇ ಜೈನವಾಗಿದೆ.
ಸಮ ಸಮಾಜದ ಒಳಿತಿಗಾಗಿ ಪೂರ್ವಾಪರವಿಲ್ಲದೆ ಶ್ರಮವಹಿಸುತ್ತಿರುವ ನಾವೂ ಸಹ ಜೈನರು.
----------
ಇನ್ನೂ ಬಹುತೇಕ ಜಾತಿಗಳ ಹಾಗೂ ಧರ್ಮಗಳ ಪದಗಳ ಒಳ ಸಾರವನ್ನು ಅರಿತುಕೊಳ್ಳಬೇಕಾಗಿರುವುದರಿಂದ ತಾವೆಲ್ಲರು ಈ ನಿಟ್ಟಿನಲ್ಲಿ ಯೋಚಿಸಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ. ಅಂತೆಯೆ ಈ ದೃಷ್ಟಿಕೋನಕ್ಕೆ ಸಂಬಂಧಪಟ್ಟಂತೆ ಸಲಹೆಯನ್ನು ನೀಡಬೇಕೆಂದು ಸಹ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ.

---ಶ್ರೀನಿವಾಸಮೂರ್ತಿ ಬಿ.ಜಿ