ಲುಯಿ ಬ್ರೈಲ್ ರವರ ಗುರು ವಾಲೆಂಟಿನ್ ಹಾಯ್

 

 

youtube link: https://www.youtube.com/watch?v=5BJ2y_btwq8

ರಚನೆ: ಶ್ರೀನಿವಾಸಮೂರ್ತಿ, ಪ್ರಥಮ ದರ್ಜೆ ಸಹಾಯಕರು, ಅರಣ್ಯ ಇಲಾಖೆ.

ನಿರೂಪಣೆ: ಲತಾ ಹೆಚ್.ಎನ್, ವಿದ್ಯಾರ್ಥಿನಿ, ಮೈಸೂರು ವಿಶ್ವವಿದ್ಯಾಲಯ.

ಸಂಕಲನ: ಡಾ. ನಾರಾಯಣ ಬಿ ರಾಯ್ಕರ್, ಸಂಸ್ಕೃತ ಅತಿಥಿ ಉಪನ್ಯಾಸಕರು, ಶೃಂಗೇರಿ.

 

 

ಇಂದು ಅಂಧ ವಿದ್ಯಾರ್ಥಿಗಳಿಗೆ ಬಹುತೇಕ ಶಾಲೆಗಳು ವಿಶ್ವದೆಲ್ಲೆಡೆ ಸ್ಥಾಪನೆಯಾಗಿ ಅಂಧರನ್ನು ಸಶಕ್ತಿಕರಣದ ಪ್ರಕ್ರಿಯೆಗೆ ಒಳಪಡಿಸಿ ಸ್ವಾವಲಂಭಿಯನ್ನಾಗಿಸುತ್ತಿವೆ. ಅಂಧರ ಶಾಲೆಯನ್ನು ಸ್ಥಾಪಿಸುವ ಸಂಸ್ಥಾಪಕರಿಗೆ ಶಾಲೆಯನ್ನು ಸ್ಥಾಪಿಸಲು ನೈಜ ಘಟನೆಯೊಂದು ಅವರ ಸಮಕ್ಷಮದಲ್ಲಿ ಜರುಗಿರುತ್ತದೆ. ಸಂವೇದನೆಯ ಮತ್ತು ಅಂತಃಕರಣದ ಗುಣವುಳ್ಳ ವ್ಯಕ್ತಿಗಳು ಶಾಲೆಗಳನ್ನು ಸ್ಥಾಪಿಸುತ್ತಾರೆ.

1785 ರಲ್ಲಿ ಸ್ಥಾಪನೆಯಾದ 'ರಾಯಲ್ ಇನ್ಸ್ಟಿಟ್ಯೂಟ್ ಫ಼ಾರ್ ಬ್ಲೈಂಡ್ ಯುಥ್' ಶಾಲೆಯು ವಾಲೆಂಟಿನ್ ಹಾಯ್! ಎಂಬ ಅಂಧರ ಶಿಕ್ಷಣದ ಪಿತಾಮಹರಿಂದ ಸ್ಥಾಪಿಸಲ್ಪಟ್ಟಿತು. ಶಾಲೆಯಲ್ಲೇ ಅಂಧರ ಸಾಕ್ಷರತಾ ಪಿತಾಮಹ ಮತ್ತು ವಿಜ್ಞಾನಿ ಲುಯಿ ಬ್ರೈಲ್ ರವರು ಶಿಕ್ಷಣ ಪಡೆದಿದ್ದು ಮತ್ತು ಅಂಧರಿಗೆ ಬೆಳಕಾಗಿದ್ದು.

ವಾಲೆಂಟಿನ್ ಹಾಯ್ ರವರು 'ರಾಯಲ್ ಇನ್ಸ್ಟಿಟ್ಯೂಟ್ ಫ಼ಾರ್ ಬ್ಲೈಂಡ್ ಯುಥ್' ಶಾಲೆಯನ್ನು ಸ್ಥಾಪಿಸಿದ ಸಂಗತಿಗಳು ಅಂದಿನ ಅಂಧರ ಸಾಮಾಜಿಕ ಪರಿಸ್ಥಿತಿಯನ್ನು ಸಾರುವಂತಿದೆ ಮತ್ತು ರಾಜಕೀಯ ಸಂಗತಿಗಳು ವಾಲೆಂಟಿನ್ ಹಾಯ್ ರವರನ್ನು ಹೇಗೆಲ್ಲಾ ತುಳಿಯಿತು ಎನ್ನುವುದನ್ನು ದಾಖಲಿಸುವಂತೆ ನಮಗೆಲ್ಲರಿಗೂ ಐತಿಹಾಸಿಕ ಸಂಗತಿಗಳು ತಿಳಿಯಪಡಿಸುತ್ತವೆ.

ಇವರ ಕುರಿತು ಕೆಲವಷ್ಟು ಮಾಹಿತಿಯನ್ನು ಹೊತ್ತಲ್ಲಿ ತಿಳಿಸಬೇಕೆಂದು ನಮಗೆ ಅನಿಸುತ್ತಿದೆ.

 

ವಾಲೆಂಟಿನ್ ಹಾಯ್ ರವರು ನವೆಂಬರ್ 13, 1745 ರಲ್ಲಿ ಫ್ರಾನ್ಸ್ ದೇಶದ Saint-Just en Chaussée (Oise), ಎಂಬಲ್ಲಿ ಜನಿಸಿದರು. 1751ರಲ್ಲಿ ಕುಟುಂಬದ ಸಹಿತ ಪ್ಯಾರಿಸ್ ನಗರಕ್ಕೆ ಬಂದರು. ಇಲ್ಲಿ ಶಾಸ್ತ್ರೀಯ ಶಿಕ್ಷಣವನ್ನು ಪಡೆದರು. ಲ್ಯಾಟಿನ್, ರಶ್ಯನ್, ಗ್ರೀಕ್ ಮತ್ತು ಹೀಬ್ರು ಭಾಷೆಗಳಲ್ಲಿ ಸರಾಗವಾಗಿ ಸಂವಹಿಸಬಲ್ಲ ಕೌಶಲ್ಯವನ್ನು ಹೊಂದಿದರು.

1771 ಸೆಪ್ಟೆಂಬರ್ ತಿಂಗಳ ಒಂದು ಬಾನುವಾರದ ಸಂಜೆ ವಾಲೆಂಟಿನ್ ಹಾಯ್ ರವರು ಸುಮಾರು ಹತ್ತು ಅಂಧ ಸದಸ್ಯರುಳ್ಳ ಒಂದು ತಂಡವನ್ನು ಪ್ಯಾರಿಸ್ ನಗರದಲ್ಲಿ Saint Ovide ಜಾತ್ರೆಯಲ್ಲಿ ನೋಡಿದರು. ತಂಡದ ಸದಸ್ಯರು ಕೊಳಕು ಬಟ್ಟೆಯನ್ನು ಧರಿಸಿದ್ದರು ಮತ್ತು ಭಿಕ್ಷೆ ಬೇಡುವ ರೀತಿಯಲ್ಲಿ ಬೀದಿಯಲ್ಲಿ ಸಂಗೀತ ವಾಧ್ಯಗಳನ್ನು ನುಡಿಸುತ್ತ, ಭಾರಿಸುತ್ತಾ ಮತ್ತು ಹಾಡುತ್ತಾ ಸಾಗುತ್ತಿದ್ದರು. ಬೀದಿಯ ಜನರು ತಂಡಕ್ಕೆ ವೈಲಿನ್, ಚೆಲೋ, ರಿದಮ್ ನುಡಿಸಲು-ಭಾರಿಸಲು ಬರುತ್ತಿಲ್ಲವೆಂದು ಕೆಟ್ಟದಾಗಿ ಬೈಗುಳಗಳನ್ನು ನುಡಿಯುತ್ತಿದ್ದರು, ಲೇವಡಿ ಮಾಡುತ್ತಿದ್ದರು. ಅಂತಃಕರಣದ ವಾಲೆಂಟಿನ್ ಹಾಯ್ ರವರಿಗೆ ಅಂಧರಿಗಾಗಿ ಪ್ರಗತಿದಾಯಕವಾಗಬಲ್ಲ ಕೆಲಸವನ್ನು ಅನುಷ್ಠಾನಗೊಳಿಸಬೇಕೆಂದು ಮನಸ್ಸಿನಲ್ಲಿ ಸಂಕಲ್ಪಿಸಿದರು.

ಕೆಲವು ವರ್ಷಗಳ ಬಳಿಕ ವಾಲೆಂಟಿನ್ ಹಾಯ್ ರವರು ಪ್ಯಾರಿಸ್ ನಗರದ ಒಂದು ಚರ್ಚಿನ ಬಳಿ ಬೇಡುತ್ತಿದ್ದ ಯುವ ಅಂಧ ವ್ಯಕ್ತಿಗೆ ಕೆಲವು ನಾಣ್ಯಗಳನ್ನು ನೀಡುತ್ತಾರೆ. ಬೇಡುತ್ತಿದ್ದ ವ್ಯಕ್ತಿ ಕೃಷನಾಗಿದ್ದ ಮತ್ತು ಕೊಳಕು ಬಟ್ಟೆಯನ್ನು ಧರಿಸಿದ್ದ. ವ್ಯಕ್ತಿಯ ಹೆಸರು François Leseuer ಎಂದು. François Leseuer ನಾಣ್ಯಗಳ ಮೇಲೆ ಬೆರಳಾಡಿಸುತ್ತಾ ನಾಣ್ಯಗಳನ್ನು ಗುರುತಿಸುತ್ತಿದ್ದ ರೀತಿಯನ್ನು ಕಂಡ ವಾಲೆಂಟಿನ್ ಹಾಯ್ ರವರು ಅಂಧರಿಗೆ ಸ್ಪರ್ಶ ಯೋಗ್ಯ ಲಿಪಿಯನ್ನು ಕಂಡುಹಿಡಿದರೆ ಅಂಧರ ಬದುಕು ಹಸನಾಗಬಲ್ಲದೆಂದು ಅರಿತು ತಾಂಬ್ರದ ತಂತಿಗಳನ್ನು ಹದಗೊಳಿಸಿ ಹಾಳೆಗಳ ಮೇಲೆ ಅಕ್ಷರಗಳನ್ನು ಉಬ್ಬುವ ವಿಧಾನವನ್ನು ಕಂಡುಹಿಡಿದರು. ಅಂಧರು ಕಣ್ಣುಗಳ ಮೂಲಕ ನೋಡಲಿಕ್ಕಾಗದಿದ್ದರೂ ಬೆರಳ ಮೂಲಕ ನೋಡಬಲ್ಲರೆಂದು ಜಗತ್ತಿಗೆ ಸಾಭೀತುಪಡಿಸಿದರು.

ವಾಲೆಂಟಿನ್ ಹಾಯ್ ರವರು ತತಕ್ಷಣವೇ François ಅಂಧ ಯುವಕನಿಗೆ ಆಶ್ರಯ ನೀಡಿದರು. ಅವರು ಕಂಡುಹಿಡಿದ ಲಿಪಿಯ ಮೂಲಕ ಶಿಕ್ಷಣವನ್ನು ನೀಡಿದರು. ೧೭೮೫ರಲ್ಲಿ 'ಇನ್ಸ್ಟಿಟ್ಯೂಟ್ ಫ಼ಾರ್ ಬ್ಲೈಂಡ್ ಯುಥ್' ಶಾಲೆಯನ್ನು ಸ್ವಂತ ಕರ್ಚಿನಲ್ಲಿ ಸ್ಥಾಪಿಸಿದರು ಮತ್ತು ಶಾಲೆಯ ಪ್ರಥಮ ಶಿಕ್ಷಕನನ್ನಾಗಿ François ರವರನ್ನು ನೇಮಿಸಿ ಸಂಬಳವನ್ನು ನೀಡಿದರು. ವಾಲೆಂಟಿನ್ ಹಾಯ್ ರವರು "Essay on the Education of the blind" ಎನ್ನುವ ಪ್ರಬಂಧವನ್ನು ಮಂಡಿಸಿದರು. ಶಾಲೆಯು ಪ್ರಾನ್ಸ್ ದೇಶದ ರಾಜ ೧೬ನೇ Louis ಮತ್ತು ರಾಣಿ Marie Antoinette ರವರಿಗೆ ಕುತೂಹಲಕರವೆನಿಸಿತು. 1786 ಡಿಸೆಂಬರ್ 26ರಂದು ವಾಲೆಂಟಿನ್ ಹಾಯ್ ರವರಿಗೆ ಕೆಲವು ಅಂಧ ವಿದ್ಯಾರ್ಥಿಗಳನ್ನು Versailles ಅರಮನೆಗೆ ಕರೆತರುವಂತೆ ತಿಳಿಸಿದರು. ಅಂಧ ವಿದ್ಯರ್ಥಿಗಳು ಓದುವ ಮತ್ತು ಬರೆಯುವ ವಿಧಾನವನ್ನು ಪ್ರಸ್ತುತಪಡಿಸಿದರು. ರಾಜ-ರಾಣಿ ಮತ್ತು ನೆರೆದಿದ್ದ ಎಲ್ಲರು ಬೆರಗುಗೊಂಡರು. ಶಾಲೆಗೆ ರಾಜ ೧೬ನೇ Louis ರವರು ದೇಣಿಗೆ ನೀಡಲು ಆರಂಭಿಸಿದರು. ಅಂದಿನಿಂದ ಸದರಿ ಶಾಲೆಯು 'ರಾಯಲ್ ಇನ್ಸ್ಟಿಟ್ಯೂಟ್ ಫ಼ಾರ್ ಬ್ಲೈಂಡ್ ಯುಥ್' ಶಾಲೆ ಎಂಬುದಾಗಿ ಹೆಸರನ್ನು ಉಳಿಸಿಕೊಂಡಿದೆ.

ಪ್ರಾನ್ಸ್ ಮಹಾ ಕ್ರಾಂತಿಯ ಅವಧಿಯಲ್ಲಿ ಫ್ರಾನ್ಸಿನ ಬಹುತೇಕ ಸಂಸ್ಥೆಗಳು ರಾಷ್ಟ್ರೀಕೃತಗೊಳ್ಳುತ್ತಿದ್ದವು. ಜುಲಾಯ್ 28, 1791ರಲ್ಲಿ ಶಾಲೆಯು ರಾಷ್ಟ್ರೀಕೃತಗೊಂಡು ಸಾರ್ವಜನಿಕ ಶಿಕ್ಷಣ ಇಲಾಖೆಗೆ ಅಂಧ ವಿದ್ಯಾರ್ಥಿಗಳ ಜೊತೆಗೆ ವಾಕ್-ಶ್ರವಣ ಸವಾಲಿನ ವಿದ್ಯಾರ್ಥಿಗಳಿಗೂ ಶಿಕ್ಷಣದ ವ್ಯವಸ್ಥೆಯನ್ನು ಕಲ್ಪಿಸುವಂತೆ ಜವಬ್ದಾರಿಯನ್ನು ವಹಿಸಲಾಯಿತು. ಶಾಲೆಯಲ್ಲಿ ೩೦ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣ ಹಾಗೂ ಸಂಗಿತದ ಜೊತೆಗೆ ಸಾಮಾನ್ಯ ಶಿಕ್ಷಣವನ್ನು ಬೋಧಿಸಲು ಆರಂಭಿಸಲಾಯಿತು.

October 1800ರಲ್ಲಿ ಶಾಲೆಯ ಆರ್ಥಿಕ ಪರಿಸ್ಥಿತಿಯು ಹದಗೆಟ್ಟಿತು. ಶಾಲೆಗೆ ಸರ್ಕಾರದಿಂದ ನೇಮಕವಾಗಿದ್ದ ಮುಖ್ಯ ಶಿಕ್ಷಕ ಅಂಧರ ಪ್ರಗತಿಗೆ ಶ್ರಮಿಸಲಾರದ್ದನ್ನು ಮತ್ತು ಅಂಧರನ್ನು ಲೋಹದ ಶೀಟುಗಳನ್ನು ತಯಾರಿಸುವ ಮತ್ತು ಬಟ್ಟೆಯನ್ನು ತಯಾರಿಸುವ ಕಾರ್ಖಾನೆಗಳಲ್ಲಿ ದುಡಿಸಲು ಆಡಳಿತ ಮಂಡಲಿಯು ತೀರ್ಮಾನಿಸಿದ್ದನ್ನು ಗಮನಹರಿಸಿದ್ದ ವಾಲೆಂಟಿನ್ ಹಾಯ್ ರವರು ಮರುಗಿದರು. ವಾಲೆಂಟಿನ್ ಹಾಯ್ ಪ್ರತಿಕೂಲ ಪರಿಸ್ಥಿತಿಯಿಂದ ನೊಂದುಕೊಂಡರು ಮತ್ತು ಫ಼ೆಬ್ರುವರಿ 12 1802ರಲ್ಲಿ ಶಾಲೆಯ ನಿರ್ದೇಶಕ ಸ್ಥಾನಕ್ಕೆ ಸ್ವಯಂ-ನಿವೃತ್ತಿ ಘೋಷಿಸಿದರು.

1806ರಲ್ಲಿ ಫ್ರಾನ್ಸ್ ದೇಶವನ್ನು ತೊರೆದು ರಶ್ಯಕ್ಕೆ ತೆರಳಿದರು. ರಷ್ಯಾದ ದೊರೆ ಒಂದನೇ Czar Alexander ರವರು ವಾಲೆಂಟಿನ್ ಹಾಯ್ ರವರಿಗೆ ಅಂಧರ ಶಾಲೆಯನ್ನು ಸ್ಥಾಪಿಸಲು ಆಮಂತ್ರಣ ನೀಡಿದರು. ವಾಲೆಂಟಿನ್ ಹಾಯ್ ರವರು ರಷ್ಯಾದಲ್ಲಿಯೂ ಶಾಲೆಯನ್ನು ಆರಂಭಿಸಿದರು. ಇಂಗ್ಲ್ಯಾಂಡ್, ಆಶ್ಟ್ರಿಯಾ, ಜರ್ಮನಿ, ಹಾಲೆಂಡ್, ರಷ್ಯಾ, ಸ್ವಿಟ್ಜರ್ಲ್ಯಾಂಡ್ ಮತ್ತು ಡೆನ್ಮಾರ್ಕ್ ದೇಶಗಳ ಜೊತೆಗೆ ಯೂರೋಪ್ ಖಂಡದಲ್ಲಿ ಇವರು ಅಂಧರ ಶಿಕ್ಷಣಕ್ಕಾಗಿ ಶ್ರಮಿಸಿದರು. ೧೮೧೭ರ ವರೇಗೆ ವಾಲೆಂಟಿನ್ ಹಾಯ್ ರವರು ಪ್ರಾನ್ಸ್ ದೇಶಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಫ್ರಾನ್ಸ್ ದೇಶದ ರಾಜ ೧೮ನೇ Louis ರವರು ವಾಲೆಂಟಿನ್ ಹಾಯ್ ರವರನ್ನು ಮತ್ತೊಮ್ಮೆ ಶಾಲೆಯ ಮುಖ್ಯಸ್ಥರನ್ನಾಗಿ ನೇಮಿಸುವ ತೀರ್ಮಾನ ಕೈಗೊಂಡರು. ಆಗಸ್ಟ್ 21 1821 ಶಾಲೆಯ ಬೀಳ್ಕೊಡುಗೆಯ ಸಮಾರಂಭದಲ್ಲಿ ವಾಲೆಂಟಿನ್ ಹಾಯ್ ರವರು ಪಾಲ್ಗೊಂಡರು. ಇದು ಭಾವನಾತ್ಮಕ ಮತ್ತು ಹೃದಯ ಸ್ಪರ್ಶಿ ಕಾರ್ಯಕ್ರಮವಾಗಿತ್ತು.

ಸಮಾರಂಭವಾದ ೭ತಿಂಗಳ ಬಳಿಕ ಮಾರ್ಛ್ 18 1822ರಲ್ಲಿ ವಾಲೆಂಟಿನ್ ಹಾಯ್ ರವರು ಮರಣವಾದರು.

ಲುಯಿ ಬ್ರೈಲ್ ರವರು ವಾಲೆಂಟಿನ್ ಹಾಯ್ ರವರ ಬೀಳ್ಕೊಡುಗೆ ಸಮಾರಂಭದಲ್ಲಿ ಅಪ್ಪಿಕೊಂಡಿದ್ದರು ಮತ್ತು ವಾಲೆಂಟಿನ್ ಹಾಯ್ ರವರಿಂದ ಆಶಿರ್ವಾದವನ್ನು ಪಡೆದಿದ್ದರು. ಇದು ಲುಯಿ ರವರ ಸಾಧನೆಗೆ ಬೆಳಕಾಯಿತು.


No comments:

Post a Comment