ಅಂಧತ್ವ ನಿವಾರಣಾ ಆಂದೋಲನ ಹಾಗೂ ತೊಡಕುರಹಿತ ಸಮಾಜದ ನಿರ್ಮಾಣಕ್ಕೆ ಕೆಲವು ಸಲಹೆಗಳು


ಮಾನ್ಯರೇ,

ಅಂಧತ್ವ ನಿವಾರಣೆಯ ಆಂದೋಲನ ಹಾಗೂ ತೊಡಕುರಹಿತ ಸಮಾಜದ ನಿರ್ಮಾಣಕ್ಕೆ ಈ ಸಲಹೆ ಅನುವಾಗಬಹುದು. ಹಾಗಾಗಿ ಅರಿವು ಮೂಡಿಸುವ ಸಾಕ್ಷ್ಯ ಚಿತ್ರವೊಂದು ಸಿದ್ಧಪಡಿಸಬೇಕಾಗಿದೆ. ಸಾಹಿತ್ಯ ಸಿದ್ಧವಾದರೆ, ಎಲ್ಲದಕ್ಕೂ ಅನುಕೂಲವಾಗುವುದು. ಅದಕ್ಕಾಗಿಯೇ ಒಂದಷ್ಟು ಪ್ರಶ್ನೆಗಳನ್ನು ಇಲ್ಲಿ ಹಾಕಲಾಗಿದೆ.

ಜ್ಞಾನದ ಮೂಲಕ ತಾವು ನೆರವಾಗುವುದರ ಜೊತೆಗೆ ಅಥವಾ ಅನಿಸಿಕೆಯನ್ನು ಹಂಚಿಕೊಳ್ಳುವುದರ ಜೊತೆಗೆ, ಇದಕ್ಕೆ ಸ್ಪಂದಿಸಬಲ್ಲ ಅಥವಾ ಮಾಹಿತಿ ನೀಡಬಲ್ಲ ವ್ಯಕ್ತಿ ಇದ್ದರೆ ಅಂತವರನ್ನು ಸೂಚಿಸಿದರೆ, ಎಲ್ಲರು ಸೇರಿ ಈಗಿರುವ ಸ್ಪಂದನಾಶೀಲ ಸಮಾಜವನ್ನು ಇನ್ನಷ್ಟು ಉತ್ತಮಪಡಿಸೋಣ.

1. ಅಂಧತ್ವದ ವಿಧಗಳು ಎಷ್ಟು?

2. ಈ ಪ್ರತಿಯೊಂದೂ ವಿಧದ ಅಂಧತ್ವಕ್ಕೆ ಕಾರಣಗಳೇನು?

3. ಈ ರೀತಿಯ ಅಂಧತ್ವದಿಂದ ಬಳಲುವ ಅಂಧ ವ್ಯಕ್ತಿಗಳ ತಳಮಳ, ಸಂವಹನ ಮತ್ತು ಹಾವಭಾವ ಹೇಗಿರುತ್ತವೆ?

4. ಈ ವಿಧದ ಅಂಧತ್ವದಲ್ಲಿ ಬಳಲುವ ಅಂಧ ವ್ಯಕ್ತಿಗಳ ತೊಡಕುಗಳ ನಿವಾರಣೆಗೆ ಇರುವ ವೈದ್ಯಕೀಯ-ತಾಂತ್ರಿಕ ಪರಿಹಾರಗಳು ಯಾವುವು?

5. ದೃಷ್ಟಿಯುಳ್ಳ ವ್ಯಕ್ತಿಗಳು ಈ ಬಗೆಯ ಅಂಧತ್ವದ ಸ್ವರೂಪವನ್ನು ಅರಿತುಕೊಂಡು ಅಂಧರಲ್ಲಿ ಅಂತರ್ಗತಗೊಂಡಿರುವ ಕೌಶಲ್ಯವನ್ನು ಹೇಗೆಲ್ಲಾ ಗುರುತಿಸಬಹುದು?

6. ದೈನಂದಿನ ಕಛೇರಿ ಕೆಲಸಗಳನ್ನು ಅಂಧತ್ವದ ಸ್ವರೂಪಕ್ಕೆ ತಕ್ಕಂತೆ ನಿಯೋಜಿಸಿ ಸಾರ್ವಜನಿಕರ ಸೇವೆಯಲ್ಲಿ ಅಂಧ ನೌಕರರನ್ನು ಹೇಗೆಲ್ಲಾ ಸಕ್ರೀಯರನ್ನಾಗಿಸಬಹುದು?

---

ಈ ಪ್ರಶ್ನೆಗಳಿಗೆ ಕಣ್ಣಿನ ವೈದ್ಯರು, ಮನೋತಜ್ಞರು ಮತ್ತು ಸಂವಹನ ತಜ್ಞರ ಅವಶ್ಯಕತೆ ಇರುತ್ತದೆ. ಹಾಗೆಯೇ ಈ ಕ್ಷೇತ್ರದಲ್ಲಿ ಅನುಭವ ಹೊಂದಿರುವವರ ನೆರವು ಅವಶ್ಯವಿರುತ್ತದೆ. ಇಂತವರಲ್ಲಿ ನೀವೂ ಒಬ್ಬರಾಗಿದ್ದರೆ ಅಥವಾ ಈ ಕುರಿತು ಸಂಶೋಧನೆ ಅಥವಾ ವಿಶ್ಲೇಷಣೆ ಮಾಡುವ ಆಸಕ್ತಿ ಹೊಂದಿರುವವರು ನೆರವಾಗಬಹುದು.

ಆತ್ಮ ಚರಿತ್ರೆಯ ರೂಪುರೇಷೆ

ಇಲ್ಲಿ ತಿಳಿಸಿರುವ ಆತ್ಮ ಚರಿತ್ರೆಯ ರೂಪುರೇಷೆ ಅಂತಿಮವೆಂದು ತಾವು ಭಾವಿಸಬಾರದೆಂದು ಮನವಿ. ಏಕೆಂದರೆ, ಪ್ರತಿಯೊಬ್ಬರದ್ದೂ ಸ್ವಂತಿಕೆ ಎನ್ನುವುದು ಇರುತ್ತದೆ. ಅದರಂತೆ ಅವರು ಅವರ ಜೀವಿತದ ಕ್ಷಣಗಳನ್ನು ದಾಖಲಿಸುತ್ತಾರೆ. ಈ ಲೇಖನ ಕೇವಲ ಸಾಹಿತ್ಯ ಚಟುವಟಿಕೆಯನ್ನು ಆರಂಭಿಸುವವರಿಗೆ ಮಾತ್ರ ಒಂದು ಕ್ರಮಬದ್ಧತೆ ಇರಲೆಂದು ಈ ರೂಪುರೇಷೆಯನ್ನು ಸಿದ್ಧಪಡಿಸಿದ್ದೇನೆ.

ವಿವಿಧ ಅಧ್ಯಾಯಗಳಿಗೆ ಮತ್ತು ಉಪ ಅಧ್ಯಾಯಗಳಿಗೆ ನಮೂದಿಸಿರುವ ಶೀರ್ಷಿಕೆಗಳನ್ನು ಅಗತ್ಯಾನುಸಾರ ತಾವು ಬದಲಿಸಿಕೊಳ್ಳಬಹುದು. ಈ ಲೇಖನದಲ್ಲಿ ಕೇವಲ ನೆನಪಿನ ಶಕ್ತಿಯನ್ನು ಪುನಶ್ಚೇತನಗೊಳಿಸಲು ಮತ್ತು ಜೀವಿತದ ಪ್ರತಿಯೊಂದೂ ಕ್ಷಣವನ್ನು ದಾಖಲಿಸಲು ಅನುಕೂಲತೆಯನ್ನು ಕಲ್ಪಿಸುವುದಕ್ಕಾಗಿ ಮಾತ್ರ ಒಂದು ಮುನ್ನೂಹೆಯನ್ನು ನೀಡಲು ಪ್ರಯತ್ನಿಸಲಾಗಿದೆ.

ಅಧ್ಯಾಯ1: ೨೦ನೇ ವಯಸ್ಸಿನ ಮುಂಚಿನ ದಿನಗಳು.

1.1. ಮನೆಯ ಪರಿಸ್ಥಿತಿ.

1.2. ಊರಿನ ಆರ್ಥಿಕ, ಸಾಮಾಜಿಕ, ಹಾಗೂ ರಾಜಕೀಯ ಸಂಗತಿಗಳು.

1.೩. ಬಾಲ್ಯದ ಗೆಳೆಯರು-ಗೆಳತಿಯರು.

೧.೪. ಊರಿನ ಮತ್ತು ಶಾಲಾ-ಕಾಲೇಜಿನ ಗುರು-ಹಿರಿಯರು.

1.5. ತುಂಟಾಟಗಳು ಮತ್ತು ಪ್ರಯೋಗಗಳು.

1.6. ಶಿಕ್ಷಣ ಸಂಬಂಧಿತ ಸಂಕಷ್ಟಗಳು ಮತ್ತು ಕಂಡುಕೊಂಡ ಪರಿಹಾರಗಳು.

ಅಧ್ಯಾಯ 2. ವೃತ್ತಿ ಜೀವನದ ನೆನಪುಗಳು.

2.1. ಸಹೋದ್ಯೋಗಿಗಳೊಂದಿಗಿನ ಅನುಭವ.

 2.2. ಸಮಕಾಲೀನ ಜನರೊಂದಿಗಿನ ಅನುಭವ.

2.3. ಪರೋಕ್ಷ ಸಂಗತಿಗಳು ಬೀರಿದ ಪರಿಣಾಮಗಳ ಅನುಭವ.

2.4. ಸಮಾಜ ಸೇವಾ ಅನುಭವದ ಸಂಗತಿಗಳು.

ಅಧ್ಯಾಯ 3. ವಿವಾಹ ಬಂಧನ ಮತ್ತು ಸಾಂಸಾರಿಕ ಜೀವನ.

ಅಧ್ಯಾಯ ೪. ಆಧ್ಯಾತ್ಮಿಕ ನಂಬಿಕೆ ಮತ್ತು ಮನೋರಂಜನಾ ಹವ್ಯಾಸ.

ಅಧ್ಯಾಯ 5. ಹೋರಾಟ ಮತ್ತು ಸಂಘಟನೆ.

ಅಧ್ಯಾಯ 6. ಲೋಕ ಸಂಚಾರದ ಅನುಭವಗಳು.

ಅಧ್ಯಾಯ 7. ರಾಜಕೀಯ ಪರಿಸ್ಥಿತಿಗಳು ಅಂದಿಗೂ, ಇಂದಿಗೂ.

7.1. ಸಾಮಾಜಿಕ ಪರಿಸ್ಥಿತಿಗಳು.

೭.೨. ಶೈಕ್ಷಣಿಕ ಪರಿಸ್ಥಿತಿಗಳು.

7.3. ಆರ್ಥಿಕ ಪರಿಸ್ಥಿತಿಗಳು.

7.4. ಮಾನಸಿಕ ಸ್ಥಿತಿ.

ಅಧ್ಯಾಯ 8. ವೇದನೆ, ಸಾಧನೆ ಮತ್ತು ಪ್ರವೃತ್ತಿ.

ಅಧ್ಯಾಯ 9. ಜೀವಿತದಲ್ಲಿ ಮರೆಯಲಾರದ ಗೆಳೆಯ-ಗೆಳತಿಯರು, ಮಹನೀಯರು ಮತ್ತು ಸಂಗತಿಗಳು.

ಅಧ್ಯಾಯ 10. ಇಷ್ಟಪಡುವ ಚಿಂತಕರು, ಕವಿಗಳು ಮತ್ತು ಮಹನೀಯರು.

**

ಈ ಮೇಲೆ ನಮೂದಿಸಿರುವ ಯಾವೆಲ್ಲಾ ಅಂಶಗಳು ನಿಮ್ಮ ಜೀವಿತದ ಚರಿತ್ರೆಯನ್ನು ದಾಖಲಿಸಲು ಸೂಕ್ತವಾಗಿರುವವೋ ಅಂತವುಗಳನ್ನು ಆರಿಸಿಕೊಳ್ಳಿರಿ ಮತ್ತು ಅಗತ್ಯಕ್ಕೆ ತಕ್ಕಂತೆ ನೀವು ಪರಿವರ್ತಿಸಿಕೊಂಡು ನಿಮ್ಮದೇ ಆದ ಚರಿತ್ರೆಯನ್ನು ನೆನಪಾಗಿಸಿರಿ.

ಉದ್ದಿಮೆ ಆರಂಭಕ್ಕೆ ಪ್ರಸ್ಥಾವನೆಯ ರೂಪುರೇಷೆ

1.ಉದ್ದಿಮೆ ಅಥವಾ ಕಂಪನಿಯ ಪರಿಚಯ.

a.ಹೆಸರು.

b. ಸ್ಥಳ.

c. ಸಂಪರ್ಕ ವಿಳಾಸ.

d. ಸೇವಾ ಅನುಭವ.

2.ಉದ್ದಿಮೆ ಅಥವಾ ಕಂಪನಿಯ ಮುನ್ನೋಟದ ಧ್ಯೇಯೋದ್ದೇಶಗಳು.

ಧ್ಯೇಯವು ಕಂಪನಿಯ ಕಾರ್ಯ ಕ್ಷಮತೆಯನ್ನು ಹಾಗೂ ಗ್ರಾಹಕ ಸ್ನೇಹ ಪರತೆಯನ್ನು ಸಾರುವಂತಿರಬೇಕು.

ಮುನ್ನೋಟವು ಕಂಪನಿಯ ವ್ಯವಹಾರದ ದಿಕ್ಸೂಚಿಯನ್ನು ಸಾರುವಂತಿರಬೇಕು.

3.ಉದ್ದಿಮೆ ಅಥವ ಕಂಪನಿಯ ನಿರ್ವಹಣೆಗಾಗಿ ತಂಡ.

a.ತಂಡದ ಹೆಸರುಗಳು-ಭಾವಚಿತ್ರಗಳು.

b. ತಂಡದವರ ಅನುಭವಗಳು..

c. ತಂಡದ ಸದಸ್ಯರು ಹೊಂದಿರುವ ಜ್ಞಾನ ಮತ್ತು ಕೌಶಲ್ಯ.

4.. ಸಮಸ್ಯೆಗಳು.

a. ಯಾವೆಲ್ಲಾ ಸಮಸ್ಯೆಗಳನ್ನು ಗಮನದಲ್ಲಿರಿಸಿಕೊಂಡು ಕಂಪನಿಯು ಆರಂಭವಾಗುತ್ತಿದೆ.

b. ಸಮಸ್ಯೆಯ ತೀವ್ರತೆ.

c. ಕಂಪನಿಯ ಸ್ಥಾಪನೆಯ ಅಗತ್ಯ.

5. ಪರಿಹಾರಗಳು.

a. ಯಾವ ಪರಿಹಾರಗಳನ್ನು ಕಂಡುಕೊಂಡು ಕಂಪನಿಯು ಆರಂಭವಾಗುತ್ತಿದೆ.

b. ಅಸ್ತಿತ್ವದಲ್ಲಿರುವ ಪರಿಹಾರಗಳಿಗಿಂತ ಕಂಪನಿಯ ಪರಿಹಾರಗಳು ಹೇಗೆ ಭಿನ್ನವಾಗಿವೆ.

6. ಉದ್ದಿಮೆ ಅಥವಾ ಕಂಪನಿಯ ಸೇವೆ/ ಉತ್ಪನ್ನಗಳು.

a. ಉತ್ಪನ್ನದ ಗುಣಲಕ್ಷಣಗಳು.

b. ಗ್ರಾಹಕರಿಂದ ಏಕೆ ಇದು ಬಳಸಲ್ಪಡಬೇಕು.

c. ಉತ್ಪನ್ನಗಳ ಪಟ್ಟಿ.

d. ಭವಿಷ್ಯದಲ್ಲಿ ಕಂಪನಿಯ ಉತ್ಪನ್ನಗಳ ಯೋಜನೆಗಳು.

7. ಸಾಮಾಜಿಕ ಮತ್ತು ಮಾರುಕಟ್ಟೆಯ ಅವಕಾಶಗಳು.

a.ವ್ಯವಹಾರದ ಮಾರುಕಟ್ಟೆ.

b. ಕಾರ್ಯ ವ್ಯಾಪ್ತಿ.

c. ಪೂರೈಕೆಯ ತಂತ್ರಗಳು.

8. ಪ್ರಯೋಜನ ಪಡೆಯುವ ವರ್ಗ.

a.ಗ್ರಾಹಕರು ಪಡೆಯುವ ಲಾಭಗಳು.

b. ಬಂಡವಾಳ ಹೂಡುವವರು ಪಡೆಯುವ ಪ್ರಯೋಜನ.

c. ಕಂಪನಿಯ ಗ್ರಾಹಕ ಸ್ನೇಹಿ ನೀತಿ.

9. ತಂತ್ರಜ್ಞಾನ ಮತ್ತು ಜಾಲ ಸಂಪರ್ಕ.

a. ಕಂಪನಿಗೆ ಬೆನ್ನೆಲುಬಾಗಿರುವ ತಂತ್ರಜ್ಞಾನ.

b. ಕಂಪನಿಯ ಬೌದ್ಧಿಕ ಆಸ್ತಿಗಳು.

c. ಇತರರ ತಂತ್ರಜ್ಙಾನಕ್ಕಿಂತ ಹೇಗೆ ಭಿನ್ನವಾಗಿದೆ.

d. ಆರೋಗ್ಯಕರ ಬೆಳವಣಿಗೆಗೆ ಇದು ಹೇಗೆ ಸಹಕಾರಿ.

10. ಸ್ಪರ್ಧೆ.

a. ಕಂಪನಿಯ ಪ್ರತಿಸ್ಪರ್ಧಿ ಯಾರು?

b. ಆರೋಗ್ಯಕರ ಸ್ಪರ್ಧೆಗೆ ಕಂಪನಿಯ ಕೊಡುಗೆ.

c. ಕಂಪನಿಯ ಕಾರ್ಯ ನೀತಿ.

11. ವ್ಯವಹಾರ ಮಾದರಿ.

a. ಕಂಪನಿ ಹೇಗೆ ಲಾಭ ಗಳಿಸಬಲ್ಲದು.

b. ಉತ್ಪನ್ನಕ್ಕೆ ನಿಗದಿಪಡಿಸಿರುವ ಬೆಲೆ.

c. ಸಂಪನ್ಮೂಲ ಸಂಗ್ರಹಣಾ ನೀತಿ.

12. ವ್ಯವಹಾರ ವಿಸ್ತರಣೆಗಾಗಿ ಮಾರುಕಟ್ಟೆ ತಂತ್ರಗಾರಿಕಾ ಯೋಜನೆಗಳು.

a. ಮಾರುಕಟ್ಟೆ ವಿಸ್ತರಣಾ ಮಾರ್ಗಗಳು.

b. ಮಾರುಕಟ್ಟೆಯ ಸವಾಲುಗಳು.

c. ಪ್ರಾಥಮಿಕ ಹಾಗೂ ಮಾಧ್ಯಮಿಕ ಯೋಜನೆಗಳು.

13. ಆರ್ಥಿಕ ಸಂಪನ್ಮೂಲಗಳು.

a. ಪ್ರಸ್ತುತದ ಕಂಪನಿಯ ಸಂಗ್ರಹಿತ ಬಂಡವಾಳ.

b. ಮೂರರಿಂದ ಐದು ವರ್ಷಗಳ ಆರ್ಥಿಕ ವಿಸ್ತರಣಾ ಯೋಜನೆಗಳು.

c. ಕರ್ಚು-ವೆಚ್ಛಗಳು.

d. ಲಾಭವನ್ನು ತೋರಿಸುವ ತಂತ್ರಗಾರಿಕೆಯ ಕೋಷ್ಟಕ.

14. ಮಾನವ ಸಂಪನ್ಮೂಲ.

a.ಹುದ್ದೆವಾರು ಸಿಬ್ಬಂದಿಯ ಕೋಷ್ಟಕ.

b. ಸಿಬ್ಬಂದಿಯಾಗಲು ನಿಗದಿಪಡಿಸಿದ ಕೌಶಲ್ಯಗಳು.

c. ಸಂಬಳ ಸಂಬಂಧಿತ ಮಾಹಿತಿ.

15. ಪ್ರಶ್ನೋತ್ತರಗಳು.

ಕೆಲವು ಪ್ರಶ್ನೆಗಳಿಗೆ ಉತ್ತರಗಳನ್ನು ಒದಗಿಸಬೇಕು.

a. ಕಂಪನಿಯು ಅನುಸರಿಸುವ ಕಾಯ್ದೆ-ನಿಯಮಗಳು ಯಾವುವು?

b. ಕಾನೂನು ಬದ್ಧವಾಗಿ ಪಡೆದುಕೊಂಡ ಅನುಮತಿಯ ವಿವಿಧ ಪ್ರಮಾಣಪತ್ರಗಳು ಯಾವುವು?

c. ಪಾಲುದಾರರೊಂದಿಗಿನ ಕರಾರುಪತ್ರದ ಮಾದರಿ ಎಂತದ್ದು?

d. ಸಂಗ್ರಹಿತ ಬಂಡವಾಳದ ಕೋಷ್ಟಕ ಮತ್ತು ಸಂಪನ್ಮೂಲದ ಸಂಗ್ರಹಣೆಗಾಗಿ ಕಂಡುಕೊಂಡ ವಿವಿಧ ಅವಕಾಶಗಳು ಯಾವುವು?

16. ಮುಕ್ತಾಯ ಹೇಳಿಕೆಗಳು.

ಗ್ರಾಹಕರಿಗೆ ಮತ್ತು ಪಾಲುದಾರರಿಗೆ ಭರವಸೆದಾಯಕವಾಗಬಲ್ಲ ಹೇಳಿಕೆಗಳನ್ನು ಸೇರಿಸಬೇಕು. 

ವೈಶಿಷ್ಟ್ಯದಿಂದ ಕೂಡಿದ ವಿಶಿಷ್ಟ ಚೇತನರ ವಿಶ್ವವಿದ್ಯಾಲಯ:


ಭಾರತದ ಪ್ರಥಮ ವಿಶೇಷ ಚೇತನರ ವಿಶ್ವವಿದ್ಯಾಲಯ Jagadguru Rambhadracharya Handicapped University (JRHU) ಇದು ಚಿತ್ರಕೂಟ, ಉತ್ತರ ಪ್ರದೇಶ ರಾಜ್ಯದಲ್ಲಿದೆ. ಈ ವಿಶ್ವವಿದ್ಯಾಲಯವು ೨೭/ಸೆಪ್ಟೆಂಬರ್/೨೦೦೧ರಲ್ಲಿ ಆರಂಭವಾಯಿತು.
"ಸೇವಾ ಕರ್ತವ್ಯವು ಬಹು ಕಠಿಣವಾದದ್ದು" ಇದರ ಧ್ಯೇಯವಾಕ್ಯವಾಗಿದೆ.
ಖಾಸಗಿ ವಿಶ್ವವಿದ್ಯಾಲಯವಾಗಿರುವ ಇದು‌, ಶ್ರೀ ಜಗದ್ಗುರು ರಾಮಭದ್ರಾಚಾರ್ಯ ರವರು ಇದರ ಅಧ್ಯಕ್ಷರು. ಈ ವಿಶ್ವವಿದ್ಯಾಲಯವು "ಜಗದ್ಗುರು ರಾಮ್ಭದ್ರಾಚಾರ್ಯ ವಿಕಲಾಂಗ ಶಿಕ್ಷಣ ಸಂಸ್ಥಾನ" ಎಂಬ ಟ್ರಸ್ಟಿನ ಮೂಲಕ ಅರಿವನ್ನು ಹಂಚುತ್ತಿದೆ ಮತ್ತು ವಿಶ್ವವಿದ್ಯಾಲಯದ ಎಲ್ಲಾ ಯೋಜನೆಗಳ ವ್ಯವಹಾರದ ಹೊಣೆಯನ್ನು ಹೊತ್ತಿದೆ).
ಅಂಗವಿಕಲ ವ್ಯಕ್ತಿಗಳ ಕಾಯ್ದೆಯಲ್ಲಿ ಉಲ್ಲೇಖಿಸಿರುವ ದೃಷ್ಟಿ-ಶ್ರವಣ-ಚಲನ-ಮನೋ ಸವಾಲುಳ್ಳ ವಿಶೇಷ ಚೇತನರು ಮಾತ್ರ ಇಲ್ಲಿ ಪ್ರವೇಶವನ್ನು ಹೊಂದಲು ಅವಕಾಶವಿದೆ. ತರಗತಿಗಳು, ಊಟದ ಸ್ಥಳ, ಮಲಗುವ ಕೋಣೆ, ಪ್ರಯೋಗಶಾಲೆ, ಗ್ರಂಥಾಲಯ ಮತ್ತು ಹೊರಾಂಗಣ-ಒಳಾಂಗಣ ವಾತಾವರಣವು ವಿಶೇಷ ಚೇತನರ ಸ್ನೇಹಿಯಾಗಿದೆ.
ವಿಶ್ವವಿದ್ಯಾಲಯ ಅನುಧಾನ ಆಯೋಗ (UGC) ಮತ್ತು ಭಾರತೀಯ ವಿಶ್ವವಿದ್ಯಾಲಯಗಳ ಸಂಘ (AIU) ಇವುಗಳೊಂದಿಗೆ ಈ ವಿಶ್ವವಿದ್ಯಾಲಯವು ಸಂಯೋಜಿತಗೊಂಡಿದೆ. ವಿಶ್ವವಿದ್ಯಾಲಯ ಅನುಧಾನ ಆಯೋಗದಿಂದ ಬಿ ದರ್ಜೆ ಮಾನ್ಯತೆಯನ್ನು ಪ್ರಸ್ತುತ ಇದು ಹೊಂದಿದೆ.
ಕೋರ್ಸುಗಳು:
ಈ ವಿಶ್ವವಿದ್ಯಾಲಯದಿಂದ ಒಟ್ಟು 26 ರೀತಿಯ ಪದವಿ ಮತ್ತು ಸ್ನಾತಕೋತ್ತರ ಪದವಿ ಹಂತದ ಶೈಕ್ಷಣಿಕ ಕೋರ್ಸುಗಳನ್ನು ನೀಡಲಾಗುತ್ತಿದೆ. ಅವುಗಳಲ್ಲಿ ಕೆಲವುಗಳೆಂದರೆ; ಸಂಸ್ಕೃತ, ಹಿಂದಿ, ಇಂಗ್ಲಿಶ್‌, ಸಮಾಜಶಾಸ್ತ್ರ, ಲಲಿತ ಕಲೆಗಳು, ಇತಿಹಾಸ, ಸಂಸ್ಕೃತಿ-ಪುರಾತತ್ವಶಾಸ್ತ್ರ, ವಿಜ್ಞಾನ, ಕಂಪ್ಯೂಟರ್‌-ಮಾಹಿತಿ ವಿಜ್ಞಾನ, ಪುನರ್ವಸತಿ ಶಿಕ್ಷಣ, ಕಾನೂನು, ಅರ್ಥಶಾಸ್ತ್ರ, ಸಮಾಜ ಕಾರ್ಯ, ಮನಃಶಾಸ್ತ್ರ, ಸಂಗೀತ, ಚಿತ್ರಕಲೆ, ಶ್ರವಣ-ದೃಷ್ಟಿ ಸವಾಲುಳ್ಳವರ B.ED, ಸಾಮಾನ್ಯ B.ED-M.ED ವಾಣಿಜ್ಯ ನಿರ್ವಹಣೆ, ಚಿತ್ರೀಕರಣ, ಮತ್ತು ಇತರೇ.
2007ರಿಂದ ಇಲ್ಲಿಯವರೆಗೆ ಹಲವಾರು ವಿಷಯಗಳ ಮೇಲೆ ಕೆಲವು ಅಭ್ಯರ್ಥಿಗಳು ಪೂರ್ಣಕಾಲಿಕವಾಗಿ ಮತ್ತು ಕೆಲವು ಅಭ್ಯರ್ಥಿಗಳು ಬಾಹ್ಯವಾಗಿ PHD ಮಹಾ ಪ್ರಬಂಧವನ್ನು ಮಂಡಿಸಿ ಈ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್‌ ಪದವಿಯನ್ನು ಪಡೆದಿದ್ದಾರೆ.
ಉದ್ಯೋಗ ಅವಕಾಶ ವೇದಿಕೆಯನ್ನು ಕೂಡ ಈ ವಿಶ್ವವಿದ್ಯಾಲಯವು ಹೊಂದಿದ್ದು, ವಿವಿಧ ಕೋರ್ಸುಗಳಲ್ಲಿ ತೇರ್ಗಡೆ ಹೊಂದಿದವರಿಗೆ ಸೂಕ್ತ ಉದ್ಯೋಗವನ್ನು ಆರಿಸಿಕೊಳ್ಳಲು ಮಾರ್ಗದರ್ಶನ ನೀಡಲಾಗುವುದು.

ಹೆಚ್ಚಿನ ವಿವರಗಳಿಗಾಗಿ ವಿಶ್ವವಿದ್ಯಾಲಯದ ಸಂಪರ್ಕ:-
ಜಾಲತಾಣ: www.jrhu.com
ಮಿನ್ನಂಚೆ: info@jrhu.com , jrhuniversity@yahoo.com
ದೂರವಾಣಿ ಸಂಖ್ಯೆ: +91-(05198)–224413

ಬ್ರೈಲ್‌ ಲಿಪಿಯ ಪಠ್ಯವನ್ನು ಗಣಕೀಕೃತಗೊಳಿಸುವ ತಂತ್ರಜ್ಞಾನ

ದಿನ ಲುಯಿ ಬ್ರೈಲ್ಮಹಾತ್ಮನ ಹುಟ್ಟಿದ ದಿನ ಹಾಗೂ ವಿಶ್ವ ಬ್ರೈಲ್ದಿನ. ದಿನ ವಿಶ್ವದೆಲ್ಲೆಡೆ ಬ್ರೈಲ್ಲಿಪಿಯನ್ನು ಇನ್ನಷ್ಟು ಜನಪ್ರಿಯಗೊಳಿಸುವುದು ಹೇಗೆ? ಬ್ರೈಲ್ಲಿಪಿಯನ್ನು ತಂತ್ರಾಂಶದ ಮೂಲಕ ಬಳಸುವುದು ಹೇಗೆ" ಎಂಬೆಲ್ಲಾ ಚರ್ಚೆಗಳು ನಡೆಯುತ್ತವೆ. ದಿನದಂದು ಆರಂಭಗೊಳ್ಳುವ ಚರ್ಚೆಗಳು ಮುಂದಿನ ವರ್ಷದ ಹೊತ್ತಿಗೆ ಫಲ ಬಿಡಲು ಆರಂಭವಾಗುತ್ತವೆ.

ದೃಷ್ಟಿಯುಳ್ಳವರು ಬ್ರೈಲ್ಲಿಪಿಯ ಜ್ಞಾನವಿಲ್ಲದಿದ್ದರೂ, ಬ್ರೈಲ್ಪುಸ್ತಕಗಳನ್ನು ಗಣಕೀಕೃತಗೊಳಿಸಬಹುದು. ಅಂತಹ ತಂತ್ರಜ್ಞಾನ ಅಸ್ತಿತ್ವದಲ್ಲಿದೆ. ಕುರಿತು ಲೇಖನದಲ್ಲಿ ತಿಳಿಸಲಾಗುವುದು.

ದೃಷ್ಟಿಯುಳ್ಳವರು ಬರೆದ ಅಕ್ಷರಗಳನ್ನು ಗಣಕೀಕರಣಗೊಳಿಸುವ Optical character recognition ತಂತ್ರಜ್ಞಾನಗಳು ಅಸ್ತಿತ್ವದಲ್ಲಿವೆ. OCR ತಂತ್ರಾಂಶಗಳು ಬಹುತೇಕ ಭಾಷೆಗಳಿಗೂ ಬೆಂಬಲ ನೀಡುತ್ತವೆ. ಮಾಹಿತಿ ಹಲವರಿಗೆ ತಿಳಿದಿದೆ. ಆದರೆ, OBR ತಂತ್ರಜ್ಞಾನದ ಬಗ್ಗೆ ದೃಷ್ಟಿಯುಳ್ಳವರಿಗೆ ಮತ್ತು ಅಂಧರಿಗೂ ತಿಳಿದಿರುವ ಪ್ರಮಾಣ ಕಡಿಮೆ.

ಅಂಧರು ಬರೆದ ಬ್ರೈಲ್ಲಿಪಿಯ ಅಕ್ಷರಗಳನ್ನು ಕೂಡ ಕಂಪ್ಯೂಟರ್ಗೆ ಊಡಿಸಬಹುದು. ತಂತ್ರಜ್ಞಾನ ಕೂಡ ಅಸ್ತಿತ್ವದಲ್ಲಿದೆ. ದೃಷ್ಟಿಯುಳ್ಳವರು ಹಾಳೆಗಳ ಮೇಲೆ ಬರೆದ ಅಕ್ಷರಗಳನ್ನು ಗಣಕೀಕರಣಗೊಳಿಸುವ ವಿಧಾನದಂತೆಯೇ ಬ್ರೈಲ್ಹಾಳೆಗಳನ್ನು ಸ್ಕ್ಯಾನರ್ಮೇಲೆ ಇಟ್ಟು Optical braille recognition ತಂತ್ರಜ್ಞಾನ ಆಧಾರಿತ ತಂತ್ರಾಂಶಗಳ ಮೂಲಕ ಬ್ರೈಲ್ಪಠ್ಯವನ್ನು ಗಣಕೀಕೃತ ಪಠ್ಯಕ್ಕೆ ಪರಿವರ್ತಿಸಬಹುದಾಗಿದೆ.

ತಂತ್ರಜ್ಞಾನದ ಬೆಳವಣಿಗೆಯ ಕುರಿತು ತಿಳಿಸುವುದಾದರೆ,

1984ರಲ್ಲಿ Delft ವಿಶ್ವವಿದ್ಯಾಲಯದ ತಂತ್ರಜ್ಞಾನ ತಂಡವು ಬ್ರೈಲ್ ಲಿಪಿಯನ್ನು ಸಹಜ ಭಾಷಾ ಅಕ್ಷರಗಳಿಗೆ ಪರಿವರ್ತಿಸಲು ಮೊದಲ ಪ್ರಯತ್ನ ಮಾಡಿತು. 1988ರಲ್ಲಿ Lille ವಿಶ್ವವಿದ್ಯಾಲಯದ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಫ್ರೆಂಚ್ಸಂಶೋಧಕರು ಬ್ರೈಲ್ಲಿಪಿಯ ಪಠ್ಯಗಳನ್ನು ಗಣಕೀಕೃತಗೊಳಿಸುವ ಪ್ರೋಗ್ರಾಮಿಂಗ್ಬರೆದರು. ಇದಕ್ಕೆ "Lectobraille" ಎಂಬ ಹೆಸರಿಟ್ಟರು. Lectobraille ತಂತ್ರವು ಯಶಸ್ವಿಯಾಯಿತಾದರೂ, ಬ್ರೈಲ್ ಲಿಪಿಯಲ್ಲಿ ಬರೆದ ಪಠ್ಯದ ಒಂದು ಸಾಲನ್ನು ಗುರುತಿಸಿ ಗಣಕೀಕೃತಗೊಳಿಸಲು 7ಕ್ಷಣಗಳನ್ನು ತೆಗೆದುಕೊಳ್ಳುತ್ತಿತ್ತು.

1993ರಲ್ಲಿ Katholieke ವಿಶ್ವವಿದ್ಯಾಲಯದ ಸಂಶೋದನಾ ತಂಡವು ಅಧಿಕೃತವಾಗಿ OBR ತಂತ್ರಜ್ಞಾನವನ್ನು ವಾಣಿಜ್ಯ ದೃಷ್ಟಿಯಿಂದ ಬಿಡುಗಡೆಗೊಳಿಸಿತು. ಇದರಲ್ಲಿಯೂ ಕೆಲವು ಲೋಪಗಳಿದ್ದುದ್ದರಿಂದ OBR ತಂತ್ರಜ್ಞಾನ ಜನಪ್ರಿಯವಾಗಲಿಲ್ಲ.

1999ರಲ್ಲಿ Hong Kong Polytechnic ವಿಶ್ವವಿದ್ಯಾಲಯದ ಒಂದು ತಂಡವು optical braille recognition ತಂತ್ರವನ್ನು ಇಂಗ್ಲಿಶ್ಹಾಗೂ ಚೈನಾ ಭಾಷೆಗಳ ಬ್ರೈಲ್ಪಠ್ಯವನ್ನು ಗಣಕೀಕೃತಗೊಳಿಸಲು edge detection ವಿಧಾನವನ್ನು ಬಳಸಿಕೊಂಡು ಅಭಿವೃದ್ಧಿಪಡಿಸಿತು.

2001ರಲ್ಲಿ Murray and Dais ಎನ್ನುವವರು handheld recognition ಪದ್ಧತಿಯ ಮೂಲಕ ಸಣ್ಣ ಬ್ರೈಲ್ಪಠ್ಯಗಳನ್ನು ಸಹಜ ಲಿಪಿಗೆ ಪರಿವರ್ತಿಸಲು ಪ್ರಯತ್ನಿಸಿದರು.

2003ರಲ್ಲಿ Morgavi and Morando ಎನ್ನುವವರು artificial neural networks ಮೂಲಕ ಬ್ರೈಲ್ಲಿಪಿಯನ್ನು ಸಹಜ ಲಿಪಿಗೆ ಪರಿವರ್ತಿಸಲು ವಿನ್ಯಾಸಗೊಳಿಸಿದರು. ವಿಧಾನವು ಮುಂಚಿನ ಪ್ರಯತ್ನಗಳಿಗಿಂತ ಯಶಸ್ವಿಯಾಯಿತು.

ಪ್ರಸ್ತುತ ತಂತ್ರಜ್ಞಾನ ಆಧಾರಿತ ತಂತ್ರಾಂಶಗಳು ಇಂಗ್ಲಿಶ್‌, ಅರಬಿಕ್‌, ಫ್ರೆಂಚ್ಮತ್ತು ಇತರೇ ಅಂತರರಾಷ್ಟ್ರೀಯ ಭಾಷೆಗಳಲ್ಲಿ ಲಭ್ಯವಿವೆ.

ಮುಖ್ಯವಾಗಿ OBR Braille Scanning ತಂತ್ರಾಂಶಗಳಲ್ಲಿ ಹೆಚ್ಚು ಬಳಕೆಯಲ್ಲಿರುವುದು NEOVISION ಕಂಪನಿಯು ಅಭಿವೃದ್ಧಿಪಡಿಸಿರುವ ತಂತ್ರಾಂಶವಾಗಿದೆ. ತಂತ್ರಾಂಶವನ್ನು ಭಾರತದಲ್ಲಿ ಕರಿಶ್ಮಾ ಉದ್ಯಮ ಸಂಸ್ಥೆಯು ಮಾರಾಟಮಾಡುತ್ತಿದೆ.

OBR ತಂತ್ರಾಂಶದ ಕುರಿತು ನೀವು ಮಾಹಿತಿಯನ್ನು ಪಡೆಯಬಯಸಿದಲ್ಲಿ, ನಿಮಗೆ

https://www.techno-vision.co.uk/ ಜಾಲತಾಣ ಸಹಕಾರಿಯಾಗಲಿದೆ.

ಭಾರತಿಯ ಭಾಷೆಗಳಲ್ಲಿ OBR:

ತಂತ್ರಜ್ಞಾನವು ಭಾರತೀಯ ಭಾಷೆಗಳಿಗೆ ಇನ್ನೂ ಅಳವಡಿಕೆಯಾಗಿಲ್ಲ. ಅದಾಗ್ಯೂ ಸಂಶೋಧನಾ ಮಹಾ ಪ್ರಬಂಧಗಳು ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ಮತ್ತು ವಿಚಾರ ಸಂಕೀರ್ಣಗಳಲ್ಲಿ ಪ್ರಕಟವಾಗಿವೆ.

 2018ರಲ್ಲಿ ನಡೆದ ಎಲೆಕ್ಟ್ರಾನಿಕ್‌, ಮಾಹಿತಿ-ತಂತ್ರಜ್ಞಾನ-ಸಂವಹನ ಕುರಿತ ನಾಲ್ಕನೇ ಅಂತರರಾಷ್ಟ್ರಿಯ ಸಮ್ಮೇಳನದಲ್ಲಿ ಜಿ ಗಾಯಿತ್ರಿ ಹಾಗೂ ಜಿ ಸತ್ಯನಾರಾಯಣನ್ರವರುಗಳು ದಕ್ಷಿಣ ಭಾರತ ಭಾಷೆಗಳಲ್ಲಿ OBR ತಂತ್ರಜ್ಞಾನ ಅಳವಡಿಕೆಯ ಕುರಿತು ಪ್ರಬಂಧವನ್ನು ಮಂಡಿಸಿದರು. mBraille ಹೆಸರಿನ ತಂತ್ರಾಂಶವು ಹಿಂದಿ, ಬೆಂಗಾಳಿ, ತಮಿಳ್‌, ಒಡಿಯ, ಚೈನೀಸ್‌, ತೆಲುಗು, ಕನ್ನಡ ಮತ್ತು ಮಲೆಯಾಳಮ್ಭಾಷೆಗಳಲ್ಲಿ ಬರೆದ ಬ್ರೈಲ್ಪಠ್ಯವನ್ನು ಗಣಕೀಕೃತ ಪಠ್ಯಕ್ಕೆ ಪರಿವರ್ತಿಸುವ ಸಾಮರ್ಥ್ಯ ಹೊಂದಿರುವಂತೆ ವಿನ್ಯಾಸಗೊಳಿಸಲಾಗಿದೆ.

೨೦೧೯ರ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಕನ್ನಡ ಭಾಷೆಯಲ್ಲಿ ಬ್ರೈಲ್ಲಿಪಿಯಲ್ಲಿ ಬರೆದ ಪಠ್ಯವನ್ನು ಸಹಜ ಲಿಪಿಗೆ ಮತ್ತು ಸಹಜ ಲಿಪಿಯಿಂದ ಬ್ರೈಲ್ಲಿಪಿಗೆ ಪರಿವರ್ತಿಸುವ ತಂತ್ರದ ಕುರಿತು ಸರಿತಶೆಟ್ಟಿ, ಕರುಣಪಂಡಿತ್ಮತ್ತು ಸಾರಿಕ ಹೆಗ್ಗಡೆ ರವರು ಪ್ರಬಂಧವನ್ನು ಮಂಡಿಸಿದರು.

ಮೈಸೂರಿನ ಜೆ.ಎಸ್‌.ಎಸ್ಕಾಲೇಜಿನ ಕಂಪ್ಯೂಟರ್ವಿಭಾಗದ ಶ್ರೀನಾಥ್ಹಾಗೂ ಸಿ.ಎನ್ರವಿಕುಮಾರ್ರವರುಗಳು ಕೂಡ ಕನ್ನಡದಲ್ಲಿ ಬರೆದ ಬ್ರೈಲ್ಲಿಪಿಯ ಪಠ್ಯವನ್ನು ಸಹಜ ಲಿಪಿಗೆ ಪರಿವರ್ತಿಸುವ ವಿಧಾನದ ಕುರಿತು ೨೦೧೫ರಲ್ಲಿ ಪ್ರಬಂಧವನ್ನು ಮಂಡಿಸಿದರು.

ಸವಾಲುಗಳು:

. ಹೀಗೆ ಹಲವಾರು ಸಂವೇದನೆಯ ವ್ಯಕ್ತಿಗಳಿಂದ OBR ತಂತ್ರಜ್ಞಾನವು ಅಭಿವೃದ್ಧಿಗೊಳ್ಳುತ್ತಿದ್ದರೂ, ಬ್ರೈಲ್ಸ್ಲೇಟು, ಬರೆಯಲು ಬಳಸುವ ಹಾಳೆಗಳಲ್ಲಿ ಮತ್ತು ಚುಕ್ಕಿಗಡ್ಡಿ (STYLUS) ವಿನ್ಯಾಸದಲ್ಲಿ ವಿಭಿನ್ನತೆ ಇರುವುದರಿಂದ ಮತ್ತು ಇವುಗಳಿಗೆ ತಕ್ಕಂತೆ ಚುಕ್ಕಿಗಳು ಉಬ್ಬುವುದಿಂದ ಸ್ಕ್ಯಾನಿಂಗ್ಲೆನ್ಸ್ಗಳಿಗೆ ಚುಕ್ಕಿಗಳ ಗೋಚರತೆಯು ಅಸ್ಪಷ್ಟತೆಯಿಂದ ಕೂಡಿರುತ್ತವೆ.

2. ಬ್ರೈಲ್ಲಿಪಿ ಮೂಲಕ ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ಬರೆದಾಗ ಗಣಕೀಕರಣಗೊಳಿಸುವಾಗ ಭಾಷೆಗಳ ಗುರುತಿಸುವಿಕೆಗೆ ತೊಡಕಾಗಿದೆ.

ಮೇಲೆ ತಿಳಿಸಿದ ಸವಾಲುಗಳ ಜೊತೆಗೆ ತಾಂತ್ರಿಕ ಸವಾಲುಗಳನ್ನು ನಿವಾರಿಸಿಕೊಂಡು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಬೇಕಿದೆ.