ಮದುವೆಯಾಗುತ್ತಿರುವ ಹೆಣ್ಣು ಮತ್ತು ಗಂಡು ಮಾಡಬೇಕಾಗಿರುವ ಪ್ರಮಾಣವಚನದ ನಮೂನೆ

ಕುವೆಂಪು ರವರು ಬರೆದ ಮಂತ್ರ ಮಾಂಗಲ್ಯವನ್ನು ಓದಿದ ಬಳಿಕ ನಾ ಬರೆದಿರುವ
---
ಮದುವೆಯಾಗುತ್ತಿರುವ ಹೆಣ್ಣು ಮತ್ತು ಗಂಡು ಮಾಡಬೇಕಾಗಿರುವ ಪ್ರಮಾಣವಚನದ ನಮೂನೆ:
“- ಎಂಬ ಹೆಸರಿನ ನಾನು,
ಸಾಮಾಜಿಕ ಜೀವಿಯಾಗಿದ್ದು ಕಾನೂನಿನ ಮೂಲಕ ನೆಲೆಗೊಳಿಸಲ್ಪಟ್ಟಿರುವ ಸಾಮಾಜಿಕ ನಿಯಮಗಳ ವಿಶಯದಲ್ಲಿ ನಿಜವಾದ ಶ್ರದ್ದೆ ಮತ್ತು ನಿಶ್ಟೆಯನ್ನು ಹೊಂದಿರುತ್ತೇನೆಂದೂ;
ನಾನು ಪ್ರಾಕ್ರುತಿಕ ವಯ್ವಿದ್ಯತೆಗೆ ಮತ್ತು ಸಮನ್ವಯತೆಗೆ ದಕ್ಕೆ ತರುವುದಿಲ್ಲವೆಂದೂ;
ಹುಟ್ಟು-ಸಾವು ಇವುಗಳ ನಡುವಿನ ಜೀವಿತದ ದಿನಗಳನ್ನು ಸಂಗಾತಿಯೊಡನೆ ಸಮನ್ವಯದಲ್ಲಿ ನಾನು ಬಾಳುತ್ತೇನೆಂದೂ;
ಮಾನವೀಯ ಮವ್ಲ್ಯಗಳನ್ನು ಎಂತದ್ದೇ ಪರಿಸ್ತಿತಿಯಲ್ಲೂ ನಾನು ಎತ್ತಿ ಹಿಡಿಯುತ್ತೇನೆಂದೂ;
ಯುಕ್ತವಾಗಿ, ಶ್ರದ್ದಾಪೂರ‍್ವಕವಾಗಿ ಮತ್ತು ನನ್ನ ಸಾಮರ‍್ತ್ಯ, ತಿಳುವಳಿಕೆ ಮತ್ತು ವಿವೇಚನೆ ಯಶ್ಟರಮಟ್ಟಿಗೆ
- ಎಂಬ ಸಂಗಾತಿಯೊಡನೆ ಸಾಮಾಜಿಕ ಮತ್ತು ಸಾಂಸಾರಿಕ ಕರ‍್ತವ್ಯಗಳನ್ನು ತಾರತಮ್ಯಮಾಡದೆ, ದ್ವೇಶವಿಲ್ಲದೆ, ಕೇಡನ್ನು ಬಯಸದೆ ನೆರವೇರಿಸುತ್ತೇನೆಂದೂ;
ಈ ನಮ್ಮ ದೇಶದ ಸಂವಿದಾನವನ್ನು ಮತ್ತು ಕಾನೂನುಗಳನ್ನು ಪಾಲಿಸುತ್ತೇನೆಂದೂ;
ನಿಮ್ಮೆಲ್ಲರ ಸಮಕ್ಶಮದಲ್ಲಿ
ಪ್ರಮಾಣ ಮಾಡುತ್ತೇನೆ, ಶ್ರದ್ದಾಪೂರ‍್ವಕವಾಗಿ ಪ್ರತಿಜ್ನೆ ಮಾಡುತ್ತೇನೆ”.

ಪ್ರಮಾಣವಚನವಾದ ಬಳಿಕ ಇಬ್ಬರು ಒಟ್ಟಿಗೆ ಹೇಳುವಂತಹ ದ್ರುಡತೆಯ, ಬದ್ದತೆಯ ಮಾತು:
ಈಗಶ್ಟೇ ನಾವು ಸ್ವೀಕರಿಸಿದ ಪ್ರಮಾಣವಚನಕ್ಕನುಸಾರ
೧. ನಮ್ಮಿಂದಾಗುವ ಅನಿರೀಕ್ಶಿತ ತಪ್ಪುಗಳನ್ನು ಸುಳ್ಳು ಹೇಳದೆ ಒಪ್ಪಿಕೊಳ್ಳುತ್ತೇವೆ ಮತ್ತು ನಿರ‍್ಬೀತಿಯಿಂದ ವಾಸ್ತವ ಸ್ತಿತಿಯನ್ನು ಅರಿತು ತಪ್ಪುಗಳನ್ನು ತಿದ್ದುಕೊಂಡು ಬಾಳುತ್ತೇವೆಂದು
 ನಾವು ನಮ್ಮ ಬದ್ದತೆಯನ್ನು ಮತ್ತು ದ್ರುಡತೆಯನ್ನು ನಿಮ್ಮೆಲ್ಲರ ಸಮಕ್ಶಮದಲ್ಲಿ ವ್ಯಕ್ತಪಡಿಸುತ್ತಿದ್ದೇವೆ.
೨. ಪರವಂಚನೆ ಮತ್ತು ಆತ್ಮವಂಚನೆಯನ್ನು ಯಾವುದೇ ಕಾರಣಕ್ಕು ಮಾಡಿಕೊಳ್ಳುವುದಿಲ್ಲವೆಂದು
ನಾವು ನಮ್ಮ ಬದ್ದತೆಯನ್ನು ಮತ್ತು ದ್ರುಡತೆಯನ್ನು ನಿಮ್ಮೆಲ್ಲರ ಸಮಕ್ಶಮದಲ್ಲಿ ವ್ಯಕ್ತಪಡಿಸುತ್ತಿದ್ದೇವೆ.
೩. ಮೇಲು-ಕೀಳು, ಶ್ರೇಶ್ಟ-ಕನಿಶ್ಟ ಎನ್ನುವ ಪರಿಕಲ್ಪನೆಗಳನ್ನು ನಾವಿಬ್ಬರು ಬದುಕಿರುವಶ್ಟು ದಿನ ಯಾರೊಬ್ಬರಿಗೂ ಬಳಸುವುದಿಲ್ಲವೆಂದು
 ನಾವು ನಮ್ಮ ಬದ್ದತೆಯನ್ನು ಮತ್ತು ದ್ರುಡತೆಯನ್ನು ನಿಮ್ಮೆಲ್ಲರ ಸಮಕ್ಶಮದಲ್ಲಿ ವ್ಯಕ್ತಪಡಿಸುತ್ತಿದ್ದೇವೆ.

--
ತಿದ್ದುಪಡಿ ಮಾಡಬೇಕೆ?
ನಿಮ್ಮ ಅನಿಸಿಕೆಯನ್ನು ನೀಡಿ ದಯವಿಟ್ಟು.