bookworm ocr ತಂತ್ರಾಂಶ

"ದುಡ್ಡು ನೀಡಬೇಕಾಗಿಲ್ಲ, ಅಕ್ಷರದ ದುನಿಯ ನಮ್ಮದೆ"

 "Blind Pandas Team" ಈ ತಂಡವು ಚಿತ್ರ ಸ್ವರೂಪದ ಅಕ್ಷರಗಳನ್ನು ಸಂಪದನಾಯೋಗ್ಯ ಪಠ್ಯಕ್ಕೆ ಪರಿವರ್ತಿಸುವ OCR ಮುಕ್ತ ಪರವಾನಗಿ ತಂತ್ರಾಂಶವನ್ನು ಅಭಿವೃದ್ಧಿಪಡಿಸಿ ಅಸ್ತಿತ್ವಗೊಳಿಸಿದೆ.

 Blind Pandas Team ತಂಡವು ಮುಕ್ತ ಪರವಾನಗಿ ತಂತ್ರಾಂಶವನ್ನು ಬೆಂಬಲಿಸುವ ಹಾಗೂ ಪ್ರೋತ್ಸಾಹಿಸುವ ಜಗತ್ತಿನ ಅಂಧ ಸಮುದಾಯದ ತಂತ್ರಜ್ಞರನ್ನು ಒಳಗೊಂಡ ನುರಿತ ತಂಡವಾಗಿದೆ. ತಂತ್ರಾಂಶಗಳನ್ನು ಹೆಚ್ಚು ಸುಗಮ್ಯಗೊಳಿಸುವ ಹಾಗೂ ಅಂಧರಿಂದಲೂ ಬಳಸಲ್ಪಡುವಂತೆ ವಿನ್ಯಾಸಗೊಳಿಸುವ ಕಾರ್ಯಗಳನ್ನು ಈ ತಂಡವು ಕೈಗೊಂಡಿದೆ.

Tesseract OCR ಅನ್ವೈಕೆ ತಂತ್ರಾಂಶವನ್ನು Bookworm ತಂತ್ರಾಂಶದಲ್ಲಿ ಅಳವಡಿಸಿ ಚಿತ್ರ ಸ್ವರೂಪದ ಕಡತಗಳನ್ನು ಪಠ್ಯ ಕಡತಗಳಿಗೆ ಪರಿವರ್ತಿಸಲು ಈ ತಂಡವು ಪ್ರಸ್ತುತ ನಿರತವಾಗಿದ್ದು, Bookworm 0.4 ಆವೃತ್ತಿಯನ್ನು ಬಿಡುಗಡೆಗೊಳಿಸಿದೆ.

GUI ವ್ಯವಸ್ಥೆಯ Bookworm ತಂತ್ರಾಂಶವು windows ಕಾರ್ಯಾಚರಣೆಯ ಆಧಾರಿತವಾಗಿದೆ ಮತ್ತು ಈ ತಂತ್ರಾಂಶವು ಮೂರು ಆವೃತ್ತಿಗಳಲ್ಲಿ ಲಭ್ಯವಿದೆ.

• 32-bit installer for computers running a 32-bit or 64-bit variant of Windows

• 64-bit installer for computers running a 64-bit variant of Windows

• Portable version for running from a USB thumb drive

ಯಾರಿಗೆ ಉಪಯೋಗ?

ವಿದ್ಯಾರ್ಥಿಗಳಿಗೆ, ಸರ್ಕಾರಿ ನೌಕರರಿಗೆ, ಸಂಶೋಧಕರಿಗೆ, ಪತ್ರಕರ್ತರಿಗೆ, ತಂತ್ರಜ್ಞರಿಗೆ, ಹವ್ಯಾಸಿ ಓದುಗರಿಗೆ ಮತ್ತಿತರರಿಗೆ ಈ ತಂತ್ರಾಂಶವು ನೆರವಾಗಬಲ್ಲದು.

ಹೆಚ್ಚಿನ ವಿವರಗಳಿಗೆ ಈ ಜಾಲತಾಣಕ್ಕೆ ಭೇಟಿ ನೀಡಿ!

https://getbookworm.com/

ಈ ತಂತ್ರಾಂಶಕ್ಕೆ ತಾಂತ್ರಿಕ ಕೊಡುಗೆ ನೀಡಲು!

https://github.com/blindpandas/bookworm