ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯ ಕುರಿತು ಕಿರು ನಿಬಂಧನೆ


-ಅನಂತ, ಸಮಾಜಕಾರ್ಯ ಪ್ರಶಿಕ್ಷಣಾರ್ಥಿ, ಬೆಂಗಳೂರು ವಿಶ್ವವಿದ್ಯಾಲಯ.

ಅಧ್ಯಾಯ -1 ಪ್ರಸ್ತಾವನೆ
ಪೀಠಿಕೆ
ಕರ್ನಾಟಕ ರಾಜ್ಯದಲ್ಲಿ ನಿರ್ದಿಷ್ಟ ಗುರಿಯುಳ್ಳ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಪಡಿತರ ವಿತರಣಾ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಈ ಯೋಜನೆಯನ್ವಯ ವಿವಿಧ ಮೂಲಗಳಿಂದ ಗುರುತಿಸಲ್ಪಟ್ಟ ದುರ್ಬಲ ವರ್ಗದವರಿಗೆ/ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಿಗೆ ಪಡಿತರ ವಸ್ತುಗಳ ವಿತರಣೆಯನ್ನು ಹಾಗೂ ಇತರೆ ಎಲ್ಲಾ ಕುಟುಂಬಗಳಿಗೆ ಆಹಾರ ಭದ್ರತೆಯನ್ನು ಒದಗಿಸಲು ಇಲಾಖೆಯು ಕಾರ್ಯನಿರ್ವಹಿಸುತ್ತಿದೆ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬಿಡುಗಡೆಯಾಗುತ್ತಿರುವ ಪಡಿತರ ವಸ್ತುಗಳನ್ನು ಫಲಾನುಭವಿ ಕುಟುಂಬಗಳಿಗೆ ಘಟಕಾಧಾರಿತ ಪದ್ಧತಿಯನ್ವಯ ನಿಗದಿತ ಮಾರ್ಗದಲ್ಲಿ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ.
   ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗುವ ಪಡಿತರ ವಸ್ತುಗಳನ್ನು ಇಲಾಖೆಯ ಆಯುಕ್ತರು ಜಿಲ್ಲಾವಾರು ಬೇಡಿಕೆಯನ್ನು ಆಧರಿಸಿ ಹಂಚಿಕೆಯನ್ನು ಮಾಡುತ್ತಾರೆ. ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ನ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು, ತಾಲ್ಲೂಕುವಾರು ಬೇಡಿಕೆಯನ್ನು ಆಧರಿಸಿ ತಾಲ್ಲೂಕು ಪಂಚಾಯತ್ನ ಮುಖ್ಯ ಕಾರ್ಯನಿರ್ವಹಣಾಧಿಕರಿಗಳು ಮತ್ತು ಅನೌಪಚಾರಿಕ ಪಡಿತರ ಅಧಿಕಾರಿಗಳು ನ್ಯಾಯಬೆಲೆ ಅಂಗಡಿವಾರು ಮರು ಹಂಚಿಕೆಯನ್ನು ಮಾಡುವರು.
   ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗುವ ಪಡಿತರ ವಸ್ತುಗಳನ್ನು ಭಾರತ ಆಹಾರ ನಿಗಮದಿಂದ ಸಗಟು ವಿತರಣಾ ಕೇಂದ್ರಗಳಿಗೆ ಹಾಗೂ ಸಗಟು ವಿತರಣಾ ಕೇಂದ್ರದಿಂದ ನ್ಯಾಯಬೆಲೆ ಅಂಗಡಿಯ ಬಾಗಿಲಿಗೆ, ಅಧಿಕೃತ ಸಾಗಾಣಿಕಾ ಗುತ್ತಿಗೇದಾರರ ಮೂಲಕ ತಲುಪಿಸುವ ವ್ಯವಸ್ಥೆ ಜಾರಿಯಲ್ಲಿದೆ. ಸೀಮೆ ಎಣ್ಣೆಯನ್ನು ಸಂಬಂಧಿಸಿದ ತೈಲ ಕಂಪನಿಗಳ ಮುಖಾಂತರ, ಅಧಿಕೃತ ಸಗಟು ಪರವಾನಗಿದಾರರು ಹಾಗೂ ಅಲ್ಲಿಂದ ನ್ಯಾಯಬೆಲೆ ಅಂಗಡಿಗಳಿಗೆ ತಲುಪಿಸುವ ಪಾರದರ್ಶಕ ಪದ್ಧತಿ ಜಾರಿಯಲ್ಲಿದೆ.
   ನ್ಯಾಯಬೆಲೆ ಅಂಗಡಿಗಳು ಫಲಾನುಭವಿ ಕುಟುಂಬಗಳಿಗೆ ಪಡಿತರ ವಸ್ತುಗಳನ್ನು ತಲುಪಿಸುವ ಮುಖ್ಯವಾಹಿನಿಗಳಾಗಿದ್ದು, ನಿಗದಿತ ದರ ಹಾಗೂ ಪ್ರಮಾಣದಲ್ಲಿ ವಿತರಣೆಯ ಉಸ್ತುವಾರಿಗೆ ಸ್ಥಳೀಯ ಕಾರ್ಯಕಾರಿ ಸಿಬ್ಬಂದಿ ಕಾರ್ಯನಿರ್ವಹಿಸುವರು. ಹೆಚ್ಚಿನ ಪಾರದರ್ಶಕ ವಿತರಣೆಗಾಗಿ ನ್ಯಾಯಬೆಲೆ ಅಂಗಡಿವಾರು ಜಾಗೃತ ಸಮಿತಿಗಳನ್ನು ರಚಿಸಲಾಗಿದ್ದು, ಅವರಿಗೂ ಸಹ ನಿರ್ದಿಷ್ಟ ಅಧಿಕಾರವನು ನೀಡಲಾಗಿರುತ್ತದೆ. ಈ ಎಲ್ಲಾ ವಿತರಣಾ ವ್ಯವಸ್ಥೆಯನ್ನು ಕರ್ನಾಟಕ ಅಗತ್ಯ ವಸ್ತುಗಳ (ಸಾ.ವಿ.ಪ) ನಿಯಂತ್ರಣ ಆದೇಶ 1992ರಡಿ ನಿಯಂತ್ರಿಸಲಾಗುತ್ತಿದೆ.

1.ಪಡಿತರ ಚೀಟಿಗಳು
1.ಅಕ್ಷಯ (ಬಿಪಿಎಲ್)
ಗ್ರಾಮೀಣ ಪ್ರದೇಶದಲ್ಲಿ ವಾರ್ಷಿಕ ವರಮಾನ ರೂ. 12,000/- ಹಾಗೂ ಅದಕ್ಕಿಂತ ಕಡಿಮೆ. ಪಟ್ಟಣ ಪ್ರದೇಶಗಳಲ್ಲಿ ವಾರ್ಷಿಕ ವರಮಾನ ರೂ. 17,000/- ಹಾಗೂ ಅದಕ್ಕಿಂತ ಕಡಿಮೆ.
ಅನರ್ಹರು: 1.3 ಹೆಕ್ಟೇರ್ಗಿಂತಲೂ ಹೆಚ್ಚಿಗೆ ಒಣಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿರುವವರು. 2.ಸ್ಥಿರ ದೂರವಾಣಿ ಹೊಂದಿರುವವರು.
3.ಲೂನಾ/ಟಿ.ವಿ.ಎಸ್. ಹೊರತುಪಡಿಸಿ ಸ್ವಂತವಾಗಿ ಯಾವುದೇ ಪೆಟ್ರೋಲ್/ಡೀಸೆಲ್ ಇಂಧನ ಬಳಸುವ ವಾಹನ ಹೊಂದಿರುವವರು.
4.ಬ್ಯಾಂಕ್/ಸಹಕಾರಿ ಸಂಘಗಳಲ್ಲಿ ರೂ. 1 ಲಕ್ಷಕ್ಕೂ ಮೇಲ್ಪಟ್ಟು ಸಾಲ ಪಡೆದಿರುವವರು.
5.ಬೋರ್ವೆಲ್ ಹೊಂದಿ ನೀರಾವರಿ ಸೌಕರ್ಯ ಪಡೆಯುತ್ತಿರುವವರು.
6.ತಿಂಗಳಿಗೆ ರೂ. 1000-00ಕ್ಕಿಂತ ಅಧಿಕ ವೇತನ ಪಡೆಯುತ್ತಿರುವ ಸರ್ಕಾರಿ/ಸರ್ಕಾರೇತರ/ಖಾಸಗಿ ಸಿಬ್ಬಂದಿಗಳು.
7.ಆದಾಯ ತೆರಿಗೆ ಪಾವತಿಸುವವರು.
8.ರಿಜಿಸ್ಟರ್ ಕಂಟ್ರಕ್ಟರ್ಸ್ ಎ.ಪಿ.ಎಂ.ಸಿ ವ್ಯಾಪಾರಸ್ಥರು, ಕಮೀಷನ್ ಎಜೆಂಟರುಗಳು, ಬಿತ್ತನೆ ಬೀಜ/ಗೊಬ್ಬರ ವರ್ತಕರು ಇತ್ಯಾದಿ.
9.ಸಮೀಕ್ಷೆಯ ಸಂದರ್ಭದಲ್ಲಿ ಕುಟುಂಬದ ಜೀವನ ಮಟ್ಟವನ್ನೂ ಪರಿಶೀಲಿಸಿ ನಿರ್ಣಯಿಸಲಾಗುವುದು.
2.ಅನ್ನಪೂರ್ಣ ಯೋಜನೆ: ಆದೇಶ ಸಂಖ್ಯೆ: ಸಿ.ಎಫ್.ಎಸ್.ಸವಿ:115: 04-05. ದಿನಾಂಕ 19-11-2004.
   ಕೇಂದ್ರ ಸರ್ಕಾರದ ಈ ಯೋಜನೆಯಡಿ ಪ್ರತಿ ತಿಂಗಳು 10 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ನೀಡಲಾಗುವುದು.
  65 ವರ್ಷ ಮೀರಿ ವೃದ್ಧಾಪ್ಯ ವೇತನವನ್ನು ಪಡೆಯದೇ ಇರುವ ವ್ಯಕ್ತಿಗಳು ಹಾಗೂ ಯಾವುದೇ ಮೂಲ ಆದಾಯ ಇಲ್ಲದೆ ಇರುವ ವ್ಯಕ್ತಿಗಳು ಅರ್ಹರಾಗಿರುತ್ತಾರೆ.
3.ಅಂತ್ಯೋದಯ ಅನ್ನ ಯೋಜನೆ: ಆದೇಶ ಸಂಖ್ಯೆ:ಸಿ.ಎಫ್.ಎಸ್. ಪಿಡಿ:11-08-2003-04, ದಿನಾಂಕ 29-08-2003.

ಫಲಾನುಭವಿಗಳು
ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಲ್ಲಿ ಕಡುಬಡವರು ಅಂದರೆ
ವಿಧವೆಯರು ಅಂಗವಿಕಲರು ದುರ್ಬಲ ವ್ಯಕ್ತಿಗಳು/ಮಾನಸಿಕ ಅಸ್ವಸ್ಥರು/ಆರ್ಥಿಕ ಸಾಮಾಜಿಕ ಭದ್ರತೆ ಇಲ್ಲದೆ 60 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನವರು.
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ ಕೃಷಿ ಕೂಲಿ ಕಾರ್ಮಿಕರು. ಎಲ್ಲಾ ಗುಡ್ಡಗಾಡು/ಬುಡಕಟ್ಟು ಆದಿವಾಸಿ ಗುಂಪುಗಳು.
4.ಎಪಿಎಲ್ :
ಅಕ್ಷಯ, ಅನ್ನಪೂರ್ಣ, ಅಂತ್ಯೋದಯ ಪಡಿತರ ಚೀಟಿಗಳಿಗೆ ನಿಗದಿಪಡಿಸಿರುವ ಅರ್ಹತೆಗಳಿಗೂ ಮೀರಿ ಆದಾಯ ಹೊಂದಿರುವ ಕುಟುಂಬಗಳು ಎಪಿಎಲ್ ಪಡಿತರ ಚೀಟಿಯನ್ನು ಹೊಂದಬಹುದಾಗಿರುತ್ತದೆ.
ಅಡಿಗೆ ಅನಿಲ ಸಂಪರ್ಕ ಹೊಂದಿಲ್ಲದವರು ಲಭ್ಯತೆಯನುಸಾರ ಸೀಮೆಎಣ್ಣೆ ಹಂಚಿಕೆ ಪಡೆಯಲು ಅರ್ಹರಿರುತ್ತಾರೆ.

 ಪಡಿತರ ಚೀಟಿಗಳನ್ನು ಪಡೆಯುವ ವಿಧಾನ ಮತ್ತು ಒದಗಿಸಬೇಕಾದ ದಾಖಲೆಗಳು:
ಕರ್ನಾಟಕ ರಾಜ್ಯದಲ್ಲಿ ವಾಸಿಸುತ್ತಿರುವ ಪ್ರತಿಯೊಂದು ಕುಟುಂಬವು ಅವರಿಗೆ ಅನ್ವಯಿಸುವ ಒಂದು ಪಡಿತರ ಚೀಟಿಯನ್ನು ಮಾತ್ರ ಪಡೆಯಲು ಅರ್ಹತೆ ಹೊಂದಿರುತ್ತದೆ.
ಗಣಕೀಕೃತ ಪಡಿತರ ಚೀಟಿ ಪಡೆಯಲು ನಮೂನೆಗಳನ್ನು ಸಂಬಂಧ ಪಟ್ಟ ಕಛೇರಿಗಳಲ್ಲಿ ನಿಗದಿತ ಶುಲ್ಕ ಪಾವತಿ ಪಡೆಯಬಹುದಾಗಿರತ್ತದೆ.
ಬೆಂಗಳೂರು ಅನೌಪಚಾರಿಕ ಪಡಿತರ ಪ್ರದೇಶಗಳಿಗೆ ಸಂಬಂಧಿಸಿದಂತೆ ವಲಯಗಳ ಉಪನಿರ್ದೇಶಕರು ಅ.ನಾ.ಸ ಇಲಾಖೆ ರವರಲ್ಲಿ ಅರ್ಜಿ ಸಲ್ಲಿಸಬಹುದು.
ಜಿಲ್ಲಾ ವ್ಯಾಪ್ತಿಯ ಅನೌಪಚಾರಿಕ ಪಡಿತರ ಪ್ರದೇಶಗಳಲ್ಲಿ ಅರ್ಜಿಗಳನ್ನು ಸಂಬಂಧಪಟ್ಟ ಉಪ/ಸಹಾಯಕ ನಿರ್ದೇಶಕರ, ಅ.ನಾ.ಸ. ಇಲಾಖೆ ಅಥವಾ ಸಂಬಂಧಪಟ್ಟ ತಹಶೀಲ್ದಾರ್ರವರಿಗೆ ಸಲ್ಲಿಸಬಹುದು.
ಗ್ರಾಮಾಂತರ ಪ್ರದೇಶಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಸಂಬಂಧಿಸಿದ ಆಯಾ ತಾಲ್ಲೂಕುಗಳ ತಹಶೀಲ್ದಾರ್ರವರಿಗೆ ಸಲ್ಲಿಸಬಹುದು.
ಬೇರೆ ಕಾರ್ಡಿನಿಂದ ಹೆಸರನ್ನು ತೆಗೆದ ದೃಢೀಕರಣ ಪತ್ರ ವಿವಾಹ ದೃಢೀಕರಣ ಪತ್ರ, ಜನನ ಪ್ರಮಾಣ ಪತ್ರ ಮರಣ ಪ್ರಮಾಣ ಪತ್ರ ಕಾರ್ಡ್ ಹಿಂದಿರುಗಿಸಿದ ಅಧ್ಯಕ್ಷರ್ಪಣಾಗಳು ಒದಗಿಸಬಹುದಾದ ಅಗತ್ಯ ದಾಖಲೆಗಳು
ಮಧ್ಯವರ್ತಿಗಳ ಮೂಲಕ ಸಲ್ಲಿಸುವ ಅರ್ಜಿಗಳನ್ನು ಪುರಸ್ಕರಿಸಲಾಗುವುದಿಲ್ಲ.
ವಾಸ ಸ್ಥಳದ ಪುರಾವಣಿಗಾಗಿ ಈ ಕೆಳಕಂಡ ದಾಖಲೆಗಳಲ್ಲಿ ಒಂದನ್ನು ಒದಗಿಸಬಹುದು.
1.ಟೆಲಿಫೋನ್ ಬಿಲ್
2.ವಿಲ್ ಪಿ.ಜಿ ರಶೀದಿ
3.ಡ್ರೈವಿಂಗ್ ಲೈಸನ್ಸ್
4.ಪಾಸ್ ಪೋರ್ಟ್
5.ಸ್ವೀಕೃತಿಯಾದ ಅಂಚೆ ಪತ್ರ
6.ಸರ್ಕಾರಿ / ಸಾರ್ವಜನಿಕ ಉದ್ಯಮ ವಲಯಗಳು ನೀಡಿರುವ ಗುರುತಿನ ಚೀಟಿ
7.ಸ್ವಂತ ಮನೆಯ ತೆರಿಗೆ ಸಂದಾಯ ರಶೀದಿ
8.ಮತದಾರ ಪಟ್ಟಿಯ ಹೆಸರಿನ ದಾಖಲೆ
9.ಬಾಡಿಗೆ ಕರಾರು ಪತ್ರ
10.ವಾಸಸ್ಥಳವನ್ನು ಸಾಬೀತು ಪಡಿಸಬಹುದಾದ ಇತರ ಯಾವುದೇ ದಸ್ತಾವೇಜು
ನಿಗಧಿತ ನಮೂನೆಯ ಅರ್ಜಿ ಹಾಗೂ ಸೂಕ್ತ ದಾಖಲಾತಿಗಳನ್ನು ಪರಿಶೀಲಿಸಿ ಆಹಾರ ನಿರೀಕ್ಷಕರು ಸ್ಥಳ ತನಿಖೆ ಮಾಡಿ ಅರ್ಹತೆಯನ್ನು ಪರಿಶೀಲಿಸಿ ವರದಿ ಸಲ್ಲಿಸುತ್ತಾರೆ.
ಅಧಿಕೃತವಾಗಿ ಕಛೇರಿಯಲ್ಲಿ ನಿರ್ವಹಿಸುತ್ತಿರುವ ಕಾರ್ಯ ನಿಯೋಜನಾ ರಿಜಿಸ್ಟರ್ನಲ್ಲಿ (ಸಹಿ ಪಡೆದು ಕಾರ್ಡನ್ನು ವಿತರಿಸಲಾಗುವುದು.

ನ್ಯಾಯಬೆಲೆ ಅಂಗಡಿ:
ಕರ್ನಾಟಕ ಅಗತ್ಯ ವಸ್ತುಗಳ (ಸಾ.ವಿ.ಪ) ನಿಯಂತ್ರಣಾ ಆದೇಶ 1992 ರಂತೆ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಪಡೆತರ ಆಹಾರ ಧಾನ್ಯಗಳನ್ನು ವಿತರಿಸಲು ನ್ಯಾಯಬೆಲೆ ಅಂಗಡಿಯನ್ನು ಮಂಜೂರು ಮಾಡಿ, ಸದರಿ ನ್ಯಾಯಬೆಲೆ ಅಂಗಡಿಗಳಿಗೆ ಪಡಿತರ ಚೀಟಿಗಳನ್ನು ನಿಯೋಜಿಸಿ ಆಹಾರ ಧಾನ್ಯಗಳ ವಿತರಣೆಯ ಜವಾಬ್ದಾರಿಯನ್ನು ವಹಿಸಲಾಗಿದೆ. ಪ್ರಸ್ತುತ ಪಡಿತರ ವಿತರಣಾ ವ್ಯವಸ್ಥೆಯಡಿಯಲ್ಲಿ ರಾಜ್ಯದಲ್ಲಿ ದಿನಾಂಕ
31-01-2008 ರಲ್ಲಿದ್ದಂತೆ ಹಾಲಿ 20.301 ನ್ಯಾಯಬೆಲೆ ಅಂಗಡಿಗಳು ಹಾಗೂ 27.780 ಚಿಲ್ಲರೆ ಸೀಮೆ ಎಣ್ಣೆ ವಿತರಕರು ಇರುತ್ತಾರೆ. ನ್ಯಾಯಬೆಲೆ ಅಂಗಡಿಯನ್ನು ನ್ಯಾಯಬೆಲೆ ಅಂಗಡಿ ಮಾಲೀಕರು ಬೆಳಿಗ್ಗೆ 8.00 ಗಂಟೆಯಿಂದ 12.00 ಗಂಟೆಯವರೆಗೆ ಹಾಗೂ ಸಂಜೆ 4.00 ಗಂಟೆಯಿಂದ ರಾತಿ 8.00 ಗಂಟೆಯವರೆಗೆ ಕಾರ್ಯ ನಿರ್ವಹಿಸಬೇಕಾಗಿರುತ್ತದೆ. ವಾರದಲ್ಲಿ ಪ್ರತಿ ಮಂಗಳವಾರ ನ್ಯಾಯಬೆಲೆ ಅಂಗಡಿಗಳಿಗೆ ರಜೆಯನ್ನು ಸರ್ಕಾರವು ಘೋಷಿಸಿರುತ್ತದೆ. ಸಮಯಕ್ಕೆ ಸರಿಯಾಗಿ ನ್ಯಾಯಬೆಲೆ ಅಂಗಡಿಗಳನ್ನು ತೆರೆದು ಪಡಿತರ ಚೀಟಿದಾರರಿಗೆ ಪಡಿತರ ಪದಾರ್ಥಗಳನ್ನು ಯಾವುದೇ ದೂರುಗಳಿಗೆ ಆಸ್ಪದ ನೀಡದೆ ವಿತರಿಸಬೇಕಾಗುತ್ತದೆ. ಹಗೂ ನ್ಯಾಯಬೆಲೆ ಅಂಗಡಿ ಮುಂದೆ ಸೂಚನಾ ಫಲಕವನ್ನು ಪ್ರದರ್ಶಿಸಿ ಅದರಲ್ಲಿ ಪಡಿತರ ಪದಾರ್ಥಗಳ ದಾಸ್ತಾನು, ದರ, ಪ್ರಮಾಣ ಇತ್ಯಾದಿ ವಿವರಗಳನ್ನು ನಮೂದಿಸಬೆಕಾಗಿದ್ದು, ತನಿಖಾ ಪುಸ್ತಕವನ್ನು ಇರಿಸಿ ತನಿಖಾಧಿಕಾರಿಗಳಿಗೆ ಸಹಕರಿಸಬೇಕಾಗಿದೆ.

ಆಹಾರ ಭದ್ರತಾ ಸಮಿತಿ
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು, ಜಿಲ್ಲಾ ಪಂಚಾಯತ್ರವರನ್ನು ಒಳಗೊಂಡು ಆಹಾರ ಭದ್ರತಾ ಸಮಿತಿಯನ್ನು ರಚಿಸಲಾಗಿದೆ. ಸದರಿ ಸಮಿತಿಯು ತಿಂಗಳ ಮೊದಲನೇ ಮತ್ತು ಮೂರನೇ ಶನಿವಾರದಂದು ಸಾರ್ವಜನಿಕರ ಕುಂದುಕೊರತೆಗಳನ್ನು ಕೇಳಿ ಸೂಕ್ತ ಪರಿಹಾರ ಒದಗಿಸುತ್ತದೆ.

ಆಹಾರ ಅದಾಲತ್
ಪಡಿತರ ಚೀಟಿದಾರರ ಕುಂದುಕೊರತೆಗಳನ್ನು ನಿವಾರಣೆ ಮಾಡಲು ಆಹಾರ ಅದಾಲತ್ಗಳನ್ನು ನಡೆಸಲು ಅವಕಾಶ ಕಲ್ಪಿಸಲಾಗಿದೆ.

ಆಹಾರ ಖಾತ್ರಿ ಸಮಿತಿ:
ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್ಗಳಲ್ಲಿ ಆಹಾರ ಖಾತ್ರಿ ಸಮಿತಿಯನ್ನು ರಚಿಸಲಾಗಿರುತ್ತದೆ. ಗ್ರಾಮ ಪಂಚಾಯಿತಿಯ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷರು ಆ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಸದರಿ ಸಮಿತಿಯು 2/3 ನೇ (2/3 ರಷ್ಟು ಕೋರಂ) ಇದ್ದಲ್ಲಿ, ಆಹಾರ ನಿರೀಕ್ಷೀಕರು ಮತ್ತು ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳ ಜೊತೆಯಲ್ಲಿ ತನಿಖೆ ಮಾಡಬಹುದು. ನ್ಯಾಯಬೆಲೆ ಅಂಗಡಿಗಳ ದಾಸ್ತಾನು, ಪುಸ್ತಕಗಳು ಮತ್ತು ಲೆಕ್ಕ ಪತ್ರಗಳನ್ನು ಪರಿಶೀಲಿಸಿ ಅಗತ್ಯ ವಸ್ತುಗಳು ಸರಿಯಾಗಿ ಸಾರ್ವಜನಿಕರಿಗೆ ತಲುಪುತ್ತಿರುವ ಬಗ್ಗೆ ತನಿಖೆ ಮಾಡಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲು ಈ ಸಮಿತಿಗೆ ಅವಕಾಶ ಇರುತ್ತದೆ.

ಜಾಗೃತಿ ಸಮಿತಿ:
ಪ್ರತಿ ನ್ಯಾಯಬೆಲೆ ಅಂಗಡಿಯ ವ್ಯಾಪ್ತಿಯಲ್ಲಿ ಜಾಗೃತಿ ಸಮಿತಿ ರಚಿಸಲಾಗಿರುತ್ತದೆ. ಸದರಿ ಸಮಿತಿಯಲ್ಲಿ 7 ಜನ ಸದಸ್ಯರು ಇದ್ದು (50-ಮಹಿಳೆಯರು, 1-ಪರಿಶಿಷ್ಟ ಜಾತಿ 1-ಪರಿಶಿಷ್ಟ ಪಂಗಡ, 2-ಹಿಂದುಳಿದ ವರ್ಗ 1-ಸಾಮಾನ್ಯ ವರ್ಗ 1-ಸ್ಥಳೀಯ ಚುನಾಯಿತ ಸದಸ್ಯರು, ಸ್ತ್ರೀ ಶಕ್ತಿ ಗುಂಪಿನ ಅಧ್ಯಕ್ಷರು ಅಥವಾ ಎನ್.ಜಿ.ಓ ಪ್ರತಿನಿಧಿ ಸದರಿ ಸಮಿತಿಯು ಪ್ರತಿ ಎರಡು ತಿಂಗಳಿಗೊಮ್ಮೆ ಸಭೆ ಸೇರಿ ಪಡಿತರ ಪದಾರ್ಥಗಳ ವಿತರಣೆ ಪರಶೀಲಿಸಿ ವರದಿ ನೀಡಬೇಕಾಗಿರುತ್ತದೆ.

ನಾಗರೀಕ ಸರಬರಾಜು:
ಅಗತ್ಯ ವಸ್ತುಗಳ ಕಾಯ್ದೆ 1955ನ ಕಾಲಂ 3 ರಂತೆ ಈ ಕೆಳಕಂಡ ಆದೇಶಗಳನ್ನು ಹೊರಡಿಸಲಾಗಿದೆ.
1.ಮೋಟಾರ್ ಸ್ಪರಿಟ್ ಅಂಡ್ ಹೈಸ್ಪೀಡ್ ಡೀಸಲ್ (ರೆಗ್ಯುಲೇಷನ್ ಆಫ್ ಸಪ್ಲೈ ಅಂಡ್ ಡಿಸ್ಟ್ರಿಬ್ಯೂಷನ್ ಅಂಡ್ ಪ್ರವಿನ್ಷನ್ ಆಫ್ ಮಾಲ್ ಪ್ರಕ್ಟ್ರೀಸಸ್) ಆದೇಶ 2005.
2.ಲಕ್ವಿಫೈಡ್ ಪೆಟ್ರೊಲಿಯಮ ಗ್ಯಾಸ್ (ರೆಗ್ಯುಲೇಷನ್ ಆಫ್ ಸಪ್ಲೈ ಅಂಡ್ ಡಿಸ್ಟ್ರಿಬ್ಯೂಷನ್) ಆದೇಶ 2000
3.ಎಡಿಬಲ್ ಆಯಿಲ್ ಪ್ಯಾಕೇಜಿಂಗ್ (ರೆಗ್ಯುಲೇಷನ್) ಆದೇಶ 1998.
4.ದಿ ಲ್ಯುಬ್ರಿಕೇಟಿಂಗ್ ಆಯಿಲ್ಸ್ ಅಂಡ್ ಗ್ರೀಸಸ್ (ಪ್ರೊಸೆಸಿಂಗ್, ಆಫ್ ಸಪ್ಲೈ ಅಂಡ್ ಡಿಸ್ಟ್ರಿಬ್ಯೂಷನ್, ರೆಗ್ಯುಲೇಷನ್) ಆದೇಶ 1987.
5.ದಿ ಕೆರೊಸಿನ್ (ರೊಸ್ಟ್ರಿಕ್ಷನ್ ಅನ್ ಯೂಸ್ ಅಂಡ್ ಪಿಕ್ಷೀಷನ್ ಆಫ್ ಸೀಲಿಂಗ್ ಪ್ರೈಸ್) ಆದೇಶ 1993.
6.ನ್ಯಾಪ್ತಾ ಆಕ್ವಿಜೇಷನ್ ಅಂಡ್ ಸ್ಲಾಪ್ (ಆಕ್ವಿಜೇಷನ್, ಸೇಲ್ ಸ್ಟೋರೇಜ್, ಪ್ರಿವನ್ಷನ್ ಆಫ್ ಯೂಸ್ ಇನ್ ಆಟೋಮೊಬೈಲ್ಸ್ ) ಆದೇಶ 2000.
7.ಕರ್ನಾಟಕ ಅಗತ್ಯ ವಸ್ತುಗಳ ಕಾಯ್ದೆ ಲೈಸೆನ್ಸಿಂಗ್, ಆದೇಶ 1986.
8.ಕರ್ನಾಟಕ ಅಗತ್ಯ ವಸ್ತುಗಳ ಕಾಯ್ದೆ (ಮೇಂಟನೆಸ್ ಆಫ್ ಅಕೌಂಟ್ಸ್, ಡಿಸ್ಪ್ಲೆ ಆಫ್ ಪ್ರೈಸಸ್ ಅಂಡ್ ಸ್ಟಾಕ್ಸ್) ಆದೇಶ 1981.
9.ಪೆಟ್ರೋಲಿಯಮ ಪ್ರಾಡಕ್ಟ್ಸ್ (ಮೇಂಟನೆಸ್ ಆಫ್ ಪ್ರೊಡಕ್ಷನ್, ಸ್ಟೋರೇಜ್ ಅಂಡ್ ಸಪ್ಲೈ) ಆದೇಶ 1999.
10.ಕರ್ನಾಟಕ ರೈಸ್ ಮಿಲ್ಲಿಂಗ್ ರೆಗ್ಯುಲೇಷನ್ ಅಂಡ್ ರೈಸ್ ಅಂಡ್ ವ್ಯಾಡಿ ಪ್ರೋಕರ್ಯೂರ್ಮೆಂಟ್ (ಲೆವಿ) ಆದೇಶ 1999.
11. ದಿ ರೈಸ್ (ಸ್ಟಾಕ್ ಡಿಕ್ಲರೇನ್ ಬೈ ಕಂಪನೀಸ್ ಆರ್ ಫರ್ಮ್ ಆರ್ ಇಂಡಿವಿಜಿಯಲ್ಸ್) ಆಡ

ಕನಿಷ್ಟ ಬೆಂಬಲ ಬೆಲೆ ಯೋಜನೆ:
   ಕನಿಷ್ಠ ಬೆಂಬಲ ಬೆಲೆ ಯೊಜನೆಯಡಿಯಲ್ಲಿ ಕೇಂದ್ರ ರಾಜ್ಯ ಸರ್ಕಾರವು ನಿಗಧಿಪಡಿಸುವ ಎಂ.ಎಸ್.ಪಿ ದರದಲ್ಲಿ ಆಹಾರ ಪದಾರ್ಥಗಳನ್ನು ಸಂಗ್ರಹಣೆ ಮಾಡಲಾಗುತ್ತಿದೆ. ಸಂಗ್ರಹಣಾ ಕೇಂದ್ರಗಳಲ್ಲಿ ರೈತರಿಂದ ನೇರವಾಗಿ ಖರೀದಿಸಲಾಗುವುದು ಹಾಗೂ ಮಧ್ಯವರ್ತಿಗಳಿಂದ ಖರೀದಿಸಲು ನಿಷೇಧಿಸಲಾಗಿದೆ.
1.ಗ್ರಾಹಕರ ವ್ಯವಹಾರಗಳು
  ಗ್ರಾಹಕರ ಹಕ್ಕುಗಳು
   ಕೇಂದ್ರ ಸರ್ಕಾರವು 1986ರಲ್ಲಿ ಕೇಂದ್ರ ರಕ್ಷಣಾ ಕಾಯ್ದೆಯನ್ನು ಅನುಷ್ಠನಕ್ಕೆ ತಂದಿದ್ದು ಅದರಲ್ಲಿ ನಮೂದಿಸಿರುವ ಗ್ರಾಹಕರ ಪ್ರಮುಖ ಹಕ್ಕುಗಳು ಕೆಳಕಂಡಂತಿವೆ.
1.ರಕ್ಷಣೆಯ ಹಕ್ಕು
2.ಮಾಹಿತಿ ಪಡೆಯುವ ಹಕ್ಕು
3.ಆಯ್ಕೆಯ ಹಕ್ಕು
4.ದೂರು ನೀಡುವ ಹಕ್ಕು
5.ಪರಿಹಾರ ಪಡೆಯುವ ಹಕ್ಕು
6.ಗ್ರಾಹಕರ ಶಿಕ್ಷಣದ ಹಕ್ಕು

2.ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಮತ್ತು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ:
ಗ್ರಾಹಕರು ಅವರು ಖರೀದಿಸುವ ವಸ್ತುಗಳಲ್ಲಿನ ದೋಷದ ಬಗ್ಗೆ ಹಾಗೂ ವಿವಿಧ ಸೇವೆಗಳಲ್ಲಿನ ನ್ಯೂನತೆಗಳ ಬಗ್ಗೆ ದೂರು ಸಲ್ಲಿಸಲು ಅವಕಾಶವಿರುತ್ತದೆ. ಸದರಿ ದೂರುಗಳನ್ನು ಯಾವುದೇ ವಕೀಲರ ಸಹಾಯವಿಲ್ಲದೇ ಸಾದಾ ಕಾಗದಲ್ಲಿ ಸಲ್ಲಿಸಬಹುದು.
 ರೂ. 20.00 ಲಕ್ಷಗಳ ವರೆಗಿನ ಪರಿಹಾರಕ್ಕಗಿ ಜಿಲ್ಲಾ ವೇದಿಕೆಗಳಿಗೆ ದೂರನ್ನು ಸಲ್ಲಿಸಬಹುದು.
ರೂ. 20.00 ಲಕ್ಷಗಳಿಗಿಂತ ಮೇಲ್ಪಟ್ಟು ರೂ. 10.00 ಲಕ್ಷಗಳವರೆಗೆ ಪರಿಹಾರಕ್ಕಗಿ ರಾಜ್ಯ ಆಯೋಗಕ್ಕೆ ದೂರು ಸಲ್ಲಿಸಬಹುದು.
ರೂ. 100.00 ಲಕ್ಷಗಳಿಗಿಂತ ಮೇಲ್ಪಟ್ಟು ಪರಿಹಾರಕ್ಕಾಗಿ ರಾಷ್ಟ್ರೀಯ ಆಯೋಗಕ್ಕೆ ದೂರು ಸಲ್ಲಿಸಬಹುದು.

3.ಗ್ರಾಹಕ ಮಾರ್ಗದರ್ಶಿ ಕೋಶ:
   ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಕೇಂದ್ರ ಕಛೇರಿಯಲ್ಲಿ ಈ ಕೋಶವನ್ನು ತೆರೆಯಲಾಗಿದೆ. ಸದರಿ ಕೋಶದಲ್ಲಿ ಗ್ರಾಹಕರ ಹಕ್ಕುಗಳ ಬಗ್ಗೆ ತಿಳುವಳಿಕೆ, ಕಾನೂನಿನಲ್ಲಿ ಗ್ರಾಹಕರುಗಳಿಗೆ ಒದಗುವ ಸೌಲಭ್ಯಗಳ ಬಗ್ಗೆ ಮಾಹಿತಿ ಹಾಗೂ ಇತರೆ ಗ್ರಾಹಕ ಸಂಬಂಧಿ ವಿಷಯಗಳ ಕುರಿತಾಗಿ ಮಾರ್ಗದರ್ಶನಗಳನ್ನು ನೀಡಲಾಗುತ್ತದೆ.
4.ರಾಜ್ಯ ಗ್ರಾಹಕರ ಕಲ್ಯಾಣ ನಿಧಿ:
ರಾಜ್ಯದಲ್ಲಿ ಕರ್ನಾಟಕ ರಾಜ್ಯ ಗ್ರಾಹಕ ಕಲ್ಯಾಣ ನಿಧಿ ನಿಯಮಗಳು, 2005ನ್ನು ರಚಿಸಿ ಹೊರಡಿಸಲಾಗಿದ್ದು ಇದರಂತೆ ರಾಜ್ಯ ಗ್ರಾಹಕರ ಕಲ್ಯಾಣ ನಿಧಿಯನ್ನು ಸ್ಥಾಪಿಸಲಾಗಿದೆ. ಸದರಿ ನಿಯಮಗಳಂತೆ ರಾಜ್ಯ ಗ್ರಾಹಕ ಕಲ್ಯಾಣ ನಿಧಿ ಸಮಿತಿಯನ್ನು ರಚಿಸಲಾಗಿದ್ದು ಸದರಿ ಸಮಿತಿಯ ಶಿಫಾರಸ್ಸಿನಂತೆ ಗ್ರಾಹಕರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದಲ್ಲದೆ, ವಿವಿಧ ಗ್ರಾಹಕ ಸಂಸ್ಥೆಗಳಿಗೆ ಗ್ರಾಹಕರ ಚಟುವಟಿಕೆಗಳಿಗಾಗಿ ಅನುದಾನ ಬಿಡುಗಡೆ ಮಾಡಲಾಗುವುದು.
5.ರಾಜ್ಯ ಗ್ರಾಹಕ ರಕ್ಷಣಾ ಪರಿಷತ್:
ಗ್ರಾಹಕರ ಹಕ್ಕುಗಳ ಅಭಿವೃದ್ಧಿ ಹಾಗೂ ಸಂರಕ್ಷಣೆಗಾಗಿ, ಕರ್ನಾಟಕ ಗ್ರಾಹಕರ ರಕ್ಷಣಾ ನಿಯಮಾವಳಿಗಳು 1988ರ ನಿಯಮ 2 ಎ ಅಡಿಯಲ್ಲಿ ಕರ್ನಾಟಕ ಸರ್ಕಾರವು ಕರ್ನಾಟಕ ರಾಜ್ಯ ಗ್ರಾಹಕ ರಕ್ಷಣಾ ಪರಿಷತ್ನ್ನು ರಚಿಸಿ ಆದೇಶ ಹೊರಡಿಸಿರುತ್ತದೆ. ಸದರೆ ಪರಿಷತ್ಗೆ ಮಾನ್ಯ ಸಚಿವರು ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯವರು ಅಧ್ಯಕ್ಷರಾಗಿದ್ದು, ವಿಧಾನ ಸಭಾ/ಪರಿಷತ್ ಸದಸ್ಯರು, ಗ್ರಾಹಕರ ಸಂಸ್ಥೆಗಳ ಪ್ರತಿನಿಧಿಗಳು, ಗ್ರಾಹಕರ ಪ್ರೋತ್ಸಾಹಕರು, ಮಹಿಳಾ ಪ್ರತಿನಿಧಿಗಳು, ವಾಣಿಜ್ಯೋಧ್ಯಮಿ ಮತ್ತು ರೈತ ಪ್ರತಿನಿಧಿಗಳು ಅಲ್ಲದೇ ಗ್ರಾಹಕ ಹಿತಾಸಕ್ತಿಗೆ ಸಂಬಂಧಿಸಿದ ರಾಷ್ಟ್ರೀಯ ಹಾಗೂ ಕೇಂದ್ರ ಸರ್ಕಾರದ ಇಲಾಖೆಯ ಪ್ರತಿನಿಧಿಗಳು ಸದಸ್ಯರಾಗಿರುತ್ತಾರೆ.
6.ಜಿಲ್ಲಾ ಗ್ರಾಹಕ ರಕ್ಷಣಾ ಪರಿಷತ್:
ಗ್ರಾಹಕರ ಹಕ್ಕುಗಳ ಅಭಿವೃದ್ಧಿ ಹಾಗೂ ಸಂರಕ್ಷಣೆಗಾಗಿ ಗ್ರಾಹಕರ ರಕ್ಷಣಾ ಕಾಯ್ದೆ 1986 (1986 ಕೇಂದ್ರ ಅಧಿನಿಯಮ ಸಂ.68) ರ ಕಲಂ 30ರ 30ರ (2)ರ ಹಾಗೂ ಕರ್ನಾಟಕ ಗ್ರಾಹಕರ ರಕ್ಷಣಾ ನಿಯಮಾವಳಿಗಳು 1988ರ ನಿಯಮ 2ಸಿ ಅಡಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಯಲ್ಲಿ ಜಿಲ್ಲಾಧಿಕರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಸಕ್ರಿಯ ಗ್ರಾಹಕ ಸಂಸ್ಥೆಗಳು, ಮಹಿಳಾ ಸಹಕಾರಿ ಸಂಘ ಸಂಸ್ಥೆ ರೈತರ ಸಂಘ ಸಂಸ್ಥೆಗಳು ವ್ಯಾಪಾರ/ವಾಣಿಜ್ಯ ವಿಭಾಗ, ಸ್ತ್ರೀ ಶಕ್ತಿ ಸಂಸ್ಥೆಯ ಅಧ್ಯಕ್ಷರು ಯುವಜನ ಸಂಘ ಸಂಸ್ಥೆ ಅಲ್ಲದೇ ಸರ್ಕಾರದಿಂದ ನಾಮಕರಣಗೊಂಡ ಸದಸ್ಯರನ್ನೊಳಗೊಂಡಂತೆ ಜಿಲ್ಲಾ ಗ್ರಾಹಕ ರಕ್ಷಣಾ ಪರಿಷತ್ಗಳನ್ನು ಸ್ಥಾಪಿಸಲಾಗಿದೆ.
7.ವಿಶ್ವ ಗ್ರಾಹಕ ಹಕ್ಕುಗಳ ದಿನಾಚರಣೆ:
ಅಮೇರಿಕಾ ರಾಷ್ಟ್ರದ ಹಿಂದಿನ ಅಧ್ಯಕ್ಷರಾದ ಶ್ರಿಜಾನ್ ಎಫ್ ಕೆನಡಿಯವರು ವಿಶ್ವದ ಎಲ್ಲಾ ಗ್ರಾಹಕರಿಗೆ ಪ್ರಮುಖ ನಾಲ್ಕು ಮೂಲಭೂತ ಹಕ್ಕುಗಳನ್ನು ಘೋಷಣೆ ಮಾಡಿದ ಜ್ಞಾಪಕಾರ್ಥವಾಗಿ ಪ್ರತೀ ವರ್ಷ ಮಾಚರ್್ 15ನ್ನು ವಿಶ್ವದಾದ್ಯಂತ ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ.
8.ರಾಷ್ಟ್ರೀಯ ಗ್ರಾಹಕರ ದಿನಾಚರಣೆ:
ಗ್ರಾಹಕ ರಕ್ಷಣಾ ಆಧಿನಿಯಮ, 1986ನ್ನು ಭಾರತ ದೇಶದಲ್ಲಿ ಅನುಷ್ಠಾನಗೊಳಿಸಿದ ಜ್ಞಾಪಕಾರ್ಥವಾಗಿ ಪ್ರತೀ ವರ್ಷ ಡಿಸೆಂಬರ್ 24ನ್ನು ವಿಶ್ವದಾದ್ಯಂತ ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ.
9.ಶಾಲಾ ಗ್ರಾಹಕರ ಕ್ಲಬ್:
ಪ್ರಾಥಮಿಕ ಹಂತದಲ್ಲಿಯೇ ಮಾಧ್ಯಮಿಕ/ಪ್ರೌಢ ಶಿಕ್ಷಣ ಶಾಲೆಯ ವಿದ್ಯಾರ್ಥಿಗಳಿಗೆ ಗ್ರಾಹಕರಿಗೆ ಲಭ್ಯವಿರುವ ಹಕ್ಕುಗಳ ಬಗ್ಗೆ ತಿಳುವಳಿಕೆ ನೀಡಿ ಜಾಗೃತಗೊಳಿಸಲು ಶಾಲಾ ಗ್ರಾಹಕರ ಕ್ಲಬ್ ಯೋಜನೆಯನ್ನು ಕೇಂದ್ರ ಸರ್ಕಾರದ ಧನಸಹಾಯದೊಂದಿಗೆ ಸ್ಥಾಪಿಸಲಾಗಿದೆ.

10.ಗ್ರಾಹಕರ ಅದಾಲತ್:
ಮುಖ್ಯವಾಗಿ ಗ್ರಾಮೀಣ ಪ್ರದೇಶದ ಹಾಗು ಇತರ ಪ್ರದೇಶದ ಗ್ರಾಹಕರಿಗೆ ಲಭ್ಯವಿರುವ ಹಕ್ಕುಗಳು ಹಾಗೂ ಜವಾಬ್ದಾರಿಗಳ ಬಗ್ಗೆ ತಿಳುವಳಿಕೆ ನೀಡಲು ಗ್ರಾಹಕರ ಹಕ್ಕುಗಳ ಬಗ್ಗೆ ಆಸಕ್ತಿಯಿರುವ ಸ್ವಯಮ್ ಸೇವಾ ಸಂಸ್ಥೆಗಳನ್ನು ಒಳಗೊಂಡ ಗ್ರಾಹಕ ಅದಾಲತ್ಗಳನ್ನು ವಿವಿಧ ಇಲಾಖೆಗಳು, ಜಿಲ್ಲೆ, ತಾಲ್ಲೂಕು, ಹೋಬಳಿ ಹಾಗೂ ಗ್ರಾಮ ಮಟ್ಟದಲ್ಲಿ ನಡೆಸಲಾಗುತ್ತದೆ.

ನಾಗರೀಕ ಸನ್ನದು:
ನಾಗರೀಕ ಸನ್ನದು ಎಲ್ಲಾ ಜಿಲಾಧಿಕಾರಿಗಳ ಕಛೇರಿಗಳಲ್ಲಿ, ಜಿಲ್ಲಾ ಪರಿಷತ್ಗಳಲ್ಲಿ ತಾಲ್ಲೂಕು ಕಛೇರಿಗಳಲ್ಲಿ, ಉಪನಿರ್ದೇಶಕರು, ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಮತ್ತು ಆಯುಕ್ತರ ಕಛೇರಿ, ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಬೆಂಗಳೂರು ಇವರ ಕಛೇರಿಯಲ್ಲಿ ಲಭ್ಯವಿರುತ್ತದೆ.
ಮಾಹಿತಿ ಹಕ್ಕು ಕಾಯ್ದೆಯಡಿ ಇಲಾಖೆಗೆ ಸಂಬಂಧಿಸಿದ ದಾಖಲಾತಿಗಳನ್ನು ಈ ಕೆಳಕಂಡ ಅಧಿಕಾರಿಗಳಿಂದ ಪಡೆಯಬಹುದಾಗಿರುತ್ತದೆ.
ಭಾರತದಲ್ಲಿ ಅಸ್ತಿತ್ವದಲ್ಲಿರುವ ಗುರಿಗೊಳಿಸಲಾದ ಸಾರ್ವಜನಿಕ ವಿತರಣೆ ವ್ಯವಸ್ಥೆಯು ಇಡೀ ಜಗತ್ತಿನಲ್ಲಿಯೇ ಒಂದು ವಿಸ್ತೃತವಾದ ಮತ್ತು ಪ್ರಮುಖವಾದ ಸಾಮಾಜಿಕ ಕಲ್ಯಾಣ ಕಾರ್ಯಕ್ರಮವಾಗಿದೆ. 1997 ಕ್ಕಿಂತ ಮೊದಲು ಅಸ್ತಿತ್ವದಲ್ಲಿದ್ದ ಸಾರ್ವಜನಿಕ ವಿತರಣಾ ವ್ಯವಸ್ಥೆ ಅಗತ್ಯ ಸಾಮಗ್ರಿಗಳಾದ ಅಕ್ಕಿ, ಗೋಧಿ, ಸಕ್ಕರೆ, ಸೀಮೆಎಣ್ಣೆ ಮುಂತಾದವುಗಳನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ಬಡಜನರಿಗೆ ಸಹಾಯ ಧನದ ದರದಲ್ಲಿ ವಿತರಿಸುವ ಉದ್ದೇಶವನ್ನು ಹೊಂದಿತ್ತು. ಆದರೆ ಬಡಜನರ ಆಹಾರ ಭದ್ರತೆಯನ್ನು ಮತ್ತು ಆಹಾರ ಧಾನ್ಯಗಳ ವಿತರಣೆಯಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವಲ್ಲಿ ವಿಫಲವಯಿತು. ಇದರ ಜೊತೆಗೆ ಹೆಚ್ಚು ವ್ಯಾಪಕವಾಗಿರದೇ ನಗರವಾಸಿಗಳ ಪರವಾಗಿತ್ತು. ಈ ಕಾರಣಗಳಿಂದ ಭಾರತ ಸರ್ಕಾರ ಜೂನ್ 1997 ರಂದು ಆಹಾರದ ಅಗತ್ಯವಿರುವ ಅರ್ಹರಾದ ಅತಿ ಕಡು ಬಡಜನರಿಗೆ ಅತ್ಯಂತ ಕಡಿಮೆದರದಲ್ಲಿ ಆಹಾರ ಧಾನ್ಯಗಳನ್ನು ಒದಗಿಸುವ ಮತ್ತು ರಾಷ್ಟ್ರದ ವಿತ್ತೀಯ ಕೊರತೆಯನ್ನು ತಗ್ಗಿಸುವ ಉದ್ದೇಶದೊಂದಿಗೆ ಸಾರ್ವಜನಿಕ ವಿತರಣೆಯನ್ನು ಗುರಿಗೊಳಿಸಲಾದ ಸಾರ್ವಜನಿಕ ಪಡಿತರ ವ್ಯವಸ್ಥೆ ಗು.ಸಾ.ಪ.ವ್ಯ. ಎಂದು ಪರಿಚಯಿಸಿತು. ದೇಶದ ಅತಿ ಕಡುಬಡವರಿಗೆ ಪೌಷ್ಠಿಕಾಂಶದ ಆಹಾರವನ್ನು ಒದಗಿಸುವ ಮೂಲಕ ಅವರ ಬಡತನದ ಸಮಸ್ಯೆಯನ್ನು ನಿರ್ಮೂಲನೆ ಮಾಡುವ, ಹೆಚ್ಚಿನ ಸಹಾಯಧನದ ದರದಲ್ಲಿ ಅತಿ ಕಡುಬಡವ ಕುಟುಂಬಗಳಿಗೆ (ಅಂದರೆ ವಾರ್ಷಿಕ ರೂ.12000ಕ್ಕಿಂತ ಕಡಿಮೆ ಆದಾಯ ಹೊಂದಿರುವ ಕುಟುಂಬಗಳು) ಆಹಾರ ಧಾನ್ಯಗಳನ್ನು ಒದಗಿಸುವುದು ಗುರಿಗೊಳಿಸಲಾದ ಸಾರ್ವಜನಿಕ ವಿತರಣಾ ವ್ಯವಸ್ಥೆ ಗು.ಸಾ.ವಿ.ವ್ಯ.ಯ ಪ್ರಮುಖ ಗುರಿಗಳಾಗಿದ್ದಿತು. ಈ ಉದ್ದೇಶಕ್ಕಾಗಿ ಪ್ರಾರಂಭದಲ್ಲಿ ಸರ್ಕಾರವು 6 ಕೋಟಿ ಕಡುಬಡ ಕುಟುಂಬಗಳನ್ನು ಸೇರಿಸಿಕೊಳ್ಳುವ ಮತ್ತು ವಾರ್ಷಿಕವಾಗಿ 72 ಲಕ್ಷ ಟನ್ಗಳಷ್ಟು ಆಹಾರ ಧಾನ್ಯಗಳನ್ನು ವಿತರಿಸಲು ಮುಂದಾಯಿತು. ಬಡಕುಟುಂಬಗಳಿಗೆ ಈ ಮೊದಲು ಮಾಸಿಕವಾಗಿ ನೀಡುತ್ತಿದ್ದ 10 ಕೆ.ಜಿ.ಗಳಷ್ಟು ಆಹಾರ ಧಾನ್ಯದ ಪ್ರಮಾಣವನ್ನು 35 ಕೆ.ಜಿಗಳಿಗೆ ಹೆಚ್ಚಿಸಲಾಯಿತು. ಅಂತ್ಯೋದಯ ಅನ್ನಯೋಜನತೆಯು ಗು.ಸಾ.ವಿ.ವ್ಯಯ ಒಂದು ಪ್ರಮುಖ ಹಂತವಾಗಿದ್ದು ಬಡಕುಟುಂಬಗಳ ಹಸಿವನ್ನು ನೀಗಿಸುವ ಗುರಿಹೊಂದಿದೆ. ರಾಷ್ಟ್ರೀಯ ಮಾದರಿ ಸಮೀಕ್ಷೆ ಸಂಘಟನೆಯ ಪ್ರಕಾರ. ದೇಶದಲ್ಲಿ ಪ್ರತಿದಿನ ದೇಶದ ಒಟ್ಟು ಜನಸಂಖ್ಯೆಯ ಶೇ. 5 ರಷ್ಟು ಜನರು ಎರಡು ಹೊತ್ತಿನ ಊಟ ಇಲ್ಲದೇ ರಾತ್ರಿ ಕಳೆಯುತ್ತದ್ದಾರೆ. ಈ ರೀತಿಯ 1 ಕೋಟಿಗೂ ಹೆಚ್ಚಿನ ಕುಟುಂಬಗಳಿಗಾಗಿ ಭಾರತ ಸರ್ಕಾರ ಡಿಸೆಂಬರ್ 2000 ದಂದು ಮೇಲೆ ತಿಳಿಸಿದ ಅಂತ್ಯೋದಯ ಅನ್ನ ಯೋಜನೆಯನ್ನು ಪ್ರಾರಂಭಿಸಿತು. ಒಟ್ಟಾರೆ ಗು.ಸಾ.ವಿ.ವ್ಯಯ ಅಡಿಯಲ್ಲಿ ವಾರ್ಷಿಕ ರೂ.12,000 ಕ್ಕಿಂತ ಕಡಿಮೆ ಆದಾಯ ಹೊಂದಿರುವವರನ್ನು ಬಡವರು ಎಂದು ಗುರುತಿಸಿ ಅವರಿಗೆ ಸಹಾಯಧನದ ಬೆಲೆಯಲ್ಲಿ ಅಗತ್ಯ ಸಾಮಗ್ರಿಗಳನ್ನು ಸರಬರಾಜು ಮಾಡುತ್ತಿದೆ.
ಆಹಾರ ಭದ್ರತೆ
ಎಲ್ಲ ಸಮಯದಲ್ಲಿ ಎಲ್ಲಾ ಜನರು ಸಾಕಷ್ಟು ಪ್ರಮಾಣದ ಪೌಷ್ಟಿಕಾಂಶವುಳ್ಳ ಗುಣಾತ್ಮಕ ಪರಿಮಾಣಾತ್ಮಕ ಮತ್ತು ವಿವಿಧ ಮಾದರಿಯ ಆಹಾರ ಧಾನ್ಯಗಳನ್ನು ಪಡೆಯಲು ಪ್ರವೇಶಾಧಿಕಾರವನ್ನು ಕಲ್ಪಿಸುವುದೇ ಆಹಾರ ಭದ್ರತೆ. (ಎಫ್.ಎ.ಓ-1996).
ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆ, (ಎಫ್.ಎ.ಓ) ವಿಶ್ವ ಅಭಿವೃದ್ಧಿ ವರದಿ (1986) ಮತ್ತು ಅಮೇರಿಕಾ ಸಂಯುಕ್ತ ಸಂಸ್ಥಾನದ ಕೃಷಿ ವಿಭಾಗ (ಯು.ಎಸ್.ಡಿ.ಎ) ಗಳು ಆಹಾರ ಭದ್ರತೆಗೆ ಈ ಕೆಳಕಂಡ 3 ರೀತಿಯ ಸಾಮಾನ್ಯ ವ್ಯಾಖ್ಯೆಗಳನ್ನು ನೀಡಿವೆ.
ತವಿಶ್ವ ಆಹಾರ ಮತ್ತು ಕೃಷಿ ಸಂಘಟನೆಯ ಪ್ರಕಾರ ಕ್ರಿಯಾಶೀಲ ಮತ್ತು ಆರೋಗ್ಯವಂತ ಜೀವನಕ್ಕಾಗಿ ಹಾಗೂ ಸಮತೋಲನ ಆಹಾರದ ಅವಶ್ಯಕತೆಗೆ ಎಲ್ಲ ಜನರು, ಎಲ್ಲ ಸಮಯದಲ್ಲೂ ಸಾಕಷ್ಟು ಪೌಷ್ಟಿಕಾಂಶದ ಸುರಕ್ಷಿತ ಆಹಾರ ಪಡೆದಾಗ ಆಹಾರ ಭದ್ರತೆ ಇರುತ್ತದೆ.
ತಆಹಾರ ಭದ್ರತೆಯನ್ನು ಒಂದು ಕುಟುಂಬಕ್ಕೆ ಸಂಬಂಧಿಸಿದಂತೆ ಅರ್ಥೈಸುವುದಾದರೆ, ಕ್ರಿಯಾಶೀಲ ಮತ್ತು ಆರೋಗ್ಯವಂತ ಜೀವನಕ್ಕಾಗಿ ಕುಟುಂಬದ ಎಲ್ಲ ಸದಸ್ಯರು ಎಲ್ಲ ಸಮಯದಲ್ಲೂ ಸಾಕಷ್ಟು ಆಹಾರವನ್ನು ಪಡೆಯಲು ಅರ್ಹವಾಗಿರುವುದು. ಮತ್ತು ಆಹಾರ ಭದ್ರತೆಯು ಕನಿಷ್ಠ ಪೌಷ್ಠಿಕಾಂಶ ಮತ್ತು ಸುರಕ್ಷಿತ ಆಹಾರದ ಲಭ್ಯತೆ ಮತ್ತು ಅದನ್ನು ಕೊಳ್ಳಲು ಆರ್ಥಿಕ ಪ್ರವೇಶಾಧಿಕಾರವನ್ನು ಕಲ್ಪಿಸುವುದು ಎಂಬ ಎರಡು ಅಂಶಗಳನ್ನು ಒಳಗೊಂಡಿದೆ. (ಯು.ಎಸ್.ಡಿ.ಎ)
ಬಡತನದ ಪ್ರಮಾಣ
ಕರ್ನಾಟಕದಲ್ಲಿ ಬಡತನ ದೇಶದಲ್ಲಿರುವಂತೆ ಒಂದು ಜ್ವಲಂತ ಸಮಸ್ಯೆಯಾಗಿದ್ದು ಅದು ರಾಜ್ಯದ ಪರಿಸ್ಥಿತಿಯನ್ನು ಎದುರಿಸುತ್ತಿರುವ ಜನಸಂಖ್ಯೆ ಬಹಳಷ್ಟಿದೆ. ಬಡತನವು ಜನರ ಜೀವನಮಟ್ಟದ ಮೇಲೆ ಮತ್ತು ಅವರ ಆಹಾರ ಭದ್ರತೆಯ ಮೇಲೆ ತೀರಾ ಪರಿಣಾಮ ಬೀರುವುದು.
ಸಾರ್ವಜನಿಕ ವಿತರಣಾ ವ್ಯವಸ್ಥೆಯ ಪ್ರಸ್ತುತ ಸ್ಥಿತಿಗತಿ
ರಾಜ್ಯದಲ್ಲಿ ಗುರಿಗೊಳಿಸಲಾದ ಸಾರ್ವಜನಿಕ ವಿತರಣಾ ವ್ಯವಸ್ಥೆಯು ರಾಜ್ಯಮಟ್ಟ, ಜಿಲ್ಲಾಮಟ್ಟ, ಮತ್ತು ತಾಲ್ಲೂಕು ಮಟ್ಟದಂತಹ 3 ಹಂತಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಆಹಾರ ಧಾನ್ಯಗಳನ್ನು ನೊಂದಾಯಿಸಿದ ಸಗಟುದಾರರು ಭಾರತೀಯ ಆಹಾರ ನಿಗಮದಿಂದ ತೆಗೆದುಕೊಂಡು ನಂತರ ತಾಲ್ಲೂಕು ಮಟ್ಟದ ಕಾಪು ದಾಸ್ತಾನಿನಲ್ಲಿ ಸಂಗ್ರಹಿಸಿಟ್ಟು ನ್ಯಾಯಬೆಲೆ ಅಂಗಡಿಗಳ ಮೂಲಕ ಅವುಗಳನ್ನು ಪಡಿತರ ಚೀಟಿದಾರರಿಗೆ ಸರಬರಾಜು ಮಾಡುತ್ತಾರೆ.
ಫಲಿತಾಂಶಗಳು
1.ರಾಜ್ಯದಲ್ಲಿ ಆಹಾರ ಧಾನ್ಯಗಳ ಉತ್ಪಾದನೆಗೆ ಬಳಸುವ ಭೂ ವಿಸ್ತೀರ್ಣವು ನಿರಂತರವಾಗಿ ವ್ಯತ್ಯಾಸಗೊಳ್ಳುತ್ತಿದ್ದು, ಇದರಿಂದ ಆಹಾರ ಧಾನ್ಯಗಳ ಉತ್ಪಾದನೆಯಲ್ಲೂ ಸಹ ವ್ಯತ್ಯಾಸ ಉಂಟಾಗಿ ಬಡಜನರ ಆಹಾರ ಭದ್ರತೆಯ ಮೇಲೆ ದುಷ್ಪರಿಣಾಮ ಬೀರುತ್ತದೆ.
2.ರಾಜ್ಯದಲ್ಲಿ ಬಡತನದ ಪ್ರಮಾಣ ಶೇ 25 ರಷ್ಟಿದ್ದು, ಅದು ಗ್ರಾಮೀಣ ಪ್ರದೇಶಗಳಲ್ಲಿ ಶೇ. 20.80 ಮತ್ತು ನಗರ ಪ್ರದೇಶಗಳಲ್ಲಿ ಶೇ. 32.60 ರಷ್ಟಿದೆ ರಾಜ್ಯದ ನಗರ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳು ಹೆಚ್ಚು ಇದ್ದರೂ, ಇಲ್ಲಿ ಬಡತನದ ಪ್ರಮಾಣ ಗ್ರಾಮೀಣ ಪ್ರದೇಶಗಳಿಗಿಂತ ಹೆಚ್ಚಾಗಿದೆ. ಇದರಿಂದ ನಗರ ಪ್ರದೇಶದ ಜನರ ಕಂಡುಕೊಳ್ಳುವ ಶಕ್ತಿಯ ಮೇಲೆ ಪರಿಣಾಮ ಉಂಟಾಗುತ್ತದೆ.
3.ರಾಜ್ಯದಲ್ಲಿ ಒಟ್ಟು 1,54,85,363 ಪಡಿತರ ಚೀಟಿದಾರರಿದ್ದು, ನ್ಯಾಯಬೆಲೆ ಅಂಗಡಿಗಳ ಒಟ್ಟು ಸಂಖ್ಯೆ 20,450 ಇದೆ. ಆದರೆ ತುಂಬಾ ಕಡಿಮೆ ಆಗಿದೆ. ಏಕೆಂದರೆ ರಾಜ್ಯ ಸರ್ಕಾರ ಹೇಳುವ ಪ್ರಕಾರ 500 ಪಡಿತರ ಚೀಟಿದಾರರಿಗೆ 1 ನ್ಯಾಯಬೆಲೆ ಅಂಗಡಿ ಇರಬೇಕಾಗಿರುವುದರಿಂದ ರಾಜ್ಯದಲ್ಲಿ 30,000 ದಷ್ಟು ನ್ಯಾಯಬೆಲೆ ಅಂಗಡಿಗಳು ಇರಬೇಕಾಗುತ್ತದೆ.
4.ರಾಜ್ಯದ ಒಟ್ಟು ಪಡಿತರ ಚೀಟಿದಾರರಲ್ಲಿ ಶೇ. 67 ರಷ್ಟು ಬಿ.ಪಿ.ಎಲ್ ಮತ್ತು ಅಂತ್ಯೋದಯ ಕಾರ್ಡುದಾರರಿದ್ದಾರೆ.
ಪಡಿತರ ಅವ್ಯವಹಾರ ತಡೆಗೆ ಸರ್ಕಾರವು ಇತ್ತೀಚಿಗೆ ಕೈಗೊಂಡಿರುವ ಕ್ರಮಗಳು:
1.ಸರ್ಕಾರವು ಪಡಿತರ ಸಾಮಾಗ್ರಿ ಅನರ್ಹರ ಪಾಲಾಗುವುದನ್ನು ತಪ್ಪಿಸಲು ಚೀಟಿ ನೀಡುವ ಸಂದರ್ಭದಲ್ಲಿ ಎಲೆಕ್ಟ್ರಾನಿಕ್ ಯಂತ್ರವನ್ನು ಬಳಸಲು ಮುಂದಾಗಿದೆ.
2.ಒಂದು ಮನೆಗೆ ಒಂದೇ ಪಡಿತರ ಚೀಟಿ ಇರುವಂತೆ ನೋಡಿಕೊಳ್ಳಲು ಇತ್ತೀಚಿಗೆ ರಾಜ್ಯದ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆಯು ಪಡಿತರ ಚೀಟಿದಾರರಿಂದ ವಿದ್ಯುತ್ಚ್ಛಕ್ತಿ ಬಿಲ್ಲುಗಳನ್ನು ಪಡೆದಿದೆ.
3.ಉತ್ತರ ಕರ್ನಾಟಕದ ಹಿಂದುಳಿದ ಪ್ರದೇಶಗಳಲ್ಲಿ ಹೆಚ್ಚು ಪ್ರಮಾಣದ ಅಕ್ಕಿ, ಗೋಧಿ, ಸಕ್ಕರೆಯನ್ನು ಕಡಿಮೆ ಬೆಲೆಯಲ್ಲಿ ಪೂರೈಕೆ ಮಾಡುತ್ತಿದೆ.
4.ಪಡಿತರ ಅವ್ಯವಹಾರ ತಡೆಗೆ ಇ ಆಡಳಿತದ ಮೊರೆ ಹೋಗಿರುವುದು ಇತ್ತೀಚೆಗೆ ಸರ್ಕಾರ ಕೈಗೊಂಡಿರುವ ಒಮದು ಪರಿಣಾಮಕಾರಿ ಕ್ರಮವಾಗಿದೆ. ಪಡಿತರ ಚೀಟಿ ಹೊಂದಿರುವ ಕುಟುಂಬಗಳಿಗೆ ಸಾರ್ವಜನಿಕ ವಿತರಣೆ ವ್ಯವಸ್ಥೆ ಮೂಲಕ ಸೇರಬೇಕಾದ ಅಗತ್ಯ ಸಾಮಾಗ್ರಿಗಳು ಅನರ್ಹರ ಪಾಲಾಗುವುದನ್ನು ತಪ್ಪಿಸಲು ಮುಂದಾಗಿರುವ ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ಬಯೋ ಮೆಟ್ರಿಕ್ ಆಧಾರಿತ ಪಡಿತರ ವಿತರಣಾ ವ್ಯವಸ್ಥೆಯನ್ನು ಜಾರಿಗೊಳಿಸುತ್ತಿದೆ.

5.ನ್ಯಾಯಬೆಲೆ ಅಂಗಡಿಗಳಿಗೆ ಬರುವ ವಿವಿಧ ಪಡಿತರ ಸಾಮಾಗ್ರಿಗಳ ಪ್ರಮಾಣ, ಪಡಿತರ ಚೀಟಿ ಹೊಂದಿರುವ ಗ್ರಾಹಕನು ಅಂಗಡಿಯಿಂದ ಖರೀದಿಸುವ ವಸ್ತುಗಳ ಪ್ರಮಾಣ ಎಷ್ಟು ಎಂಬ ವಿವರ ಏಕೀಕೃತ ಸರ್ವರ್ನಲ್ಲಿ ದಾಖಲಾಗುವ ವ್ಯವಸ್ಥೆಯನ್ನು ಇಲಾಖೆಯು ರುಪಿಸಿದೆ. ಎಲೆಕ್ಟ್ರಾನಿಕ್ ತೂಕದ ಯಂತ್ರಗಳನ್ನು ಅಳವಡಿಸುವ ಮೂಲಕ ಪಡಿತರ ಅವ್ಯವಹಾರ ತಡೆಯಲು ಈ ಕಾರ್ಯವನ್ನು ಆನ್ಲೈನ್ ಮೂಲಕ ನಡೆಸಲು ಸಾಧ್ಯ. ಈ ವ್ಯವಸ್ಥೆ ಸಂಪೂರ್ಣವಾಗಿ ಜಾರಿಗೆ ಬಂದ ನಂತರ (ಬಯೋ ಮೆಟ್ಟಿಕ್ ಪದ್ದತಿ ಪ್ರಸ್ತುತ ಬೆಂಗಳೂರಿನ ಮೂರು ನ್ಯಾಯಬೆಲೆ ಅಂಗಡಿಗಳಲ್ಲಿ ಮಾತ್ರ ಇದೆ) ರಾಜ್ಯದ ಪ್ರತಿಯೊಮದು ನ್ಯಾಯಬೆಲೆ ಅಂಗಡಿಯ ವ್ಯವಹಾರವನ್ನು ಇಲಾಖೆಯು ಕಛೇರಿಯಿಂದಲೇ ಗಮನಿಸಬಹುದು. ರಿಯಾಯಿತಿ ದರದಲ್ಲಿ ನೀಡಲಾಗುವ ಪಡಿತರ ಸಾಮಾಗ್ರಿ ವಿತರಣೆಯಲ್ಲಿ ಅವ್ಯವಹಾರಕ್ಕೆ ಆಸ್ಪದವಿಲ್ಲದಂತೆ ನಿಗಾ ವಹಿಸಬಹುದು.
ಹೀಗೆ ಸರ್ಕಾರವು ಮೇಲ್ಕಂಡ ಕ್ರಮಗಳನ್ನು ಕೈಗೊಳ್ಳುವ ಮೂಲಕ ಪಡಿತರ ಅವ್ಯವಹಾರಗಳನ್ನು ತಡೆಯಲು ಪ್ರಯತ್ನಿಸುತ್ತಿದೆ.

ಅಧ್ಯಾಯ -2 ಸಾಹಿತ್ಯ ಪರಾಮರ್ಶೆ
ಸಾಹಿತ್ಯ ಪರಾಮರ್ಶೆ ಎಂದರೆ ಸಂಶೋಧಕನು ಆಯ್ಕೆ ಮಾಡಿಕೊಂಡಂತಹ ಸಂಶೋಧನ ವಿಷಯಕ್ಕೆ ಸಂಬಂಧಿಸಿದಂತೆ ಈ ಹಿಂದೆ ಕೈ ಗೊಂಡು ಸಂಶೋಧನೆಯ ಬಗ್ಗೆ ಇರುವ ಪುಸ್ತಕಗಳು ಲೇಖನಗಳು ಹಾಗು ದಾಖಲೆಗಳನ್ನು ಅಧ್ಯಯನ ಮಾಡಿ ವಿಷಯ ತಿಳಿದು ಅದರ ಫಲಿತಾಂಶವನ್ನು ತಿಳಿಯುವುದಕ್ಕೆ ಸಾಹಿತ್ಯ ಪುನರ್ ವಿಮರ್ಶೆ ಎಂದು ಕರೆಯುತ್ತಾರೆ. ಇದರಿಂದ ಸಂಶೋಧಕನು ಅಧ್ಯಯನ ಗುರಿ ಉದ್ದೇಶ ಪ್ರೇರಣೆ ಸಂಗ್ರಹಿಸಿದ ವಿದಾನ ಇವುಗಳಿಂದ ಹೊರ ಬಂದಂತಹ ಫಲಿತಾಂಶಗಳನ್ನು ತಿಳಿಯಬಹುದು. ಇಂತಹ ಸಾಹಿತ್ಯ ಗುಚ್ಚದಡಿಯಲ್ಲಿ ಗ್ರಂಥಗಳು ದಿನ ಪತ್ರಿಕೆಗಳು ವರದಿಗಳು ಸಂಚಿಕೆಗಳು ದಾಖಲೆಗಳು ಬರುತ್ತದೆ.
ಸಾಹಿತ್ಯ ಮಹತ್ವವನ್ನು ಕುರಿತು ಹಿರಿಯ ಕನ್ನಡ ಸಾಹಿತ್ಯ ವಿದ್ವಾಂಸರು ಹೇಳಿರುವಂತೆ ಸಾಹಿತ್ಯವೆಂದರೆ ಬರೀ ವಿನೋದಕ್ಕಾಗಿ ವಿಲಾಸಕ್ಕಾಗಿ ನಿಜ ಪ್ರಪಂಚದಿಂದ ಮಾಡುವ ಪಲಾಯನವಲ್ಲಿ ಸುತ್ತಮುತ್ತಲೂ ಇರುವ ಜಗದೊಡನೆ ವ್ಯಕ್ತಿಗಾದ ಅನುಭವದಿಂದ ಸಹಜವಾಗಿ ಉಂಟಾದ ಪ್ರಕಾರದ ಇಂಪು ಸಂಪಾದ ವೈಖರಿಯೇ ಸಾಹಿತ್ಯ ಎಂಬುದಾಗಿ ಅಭಿಪ್ರಾಯಿಸಿದ್ದಾರೆ.
ಸಾಹಿತ್ಯದ ಅಡಿಗಳಲ್ಲಿಲ್ಲದ ಸಂಶೋಧನೆ ಅಲ್ಲ ಆದ್ದರಿಂದ ಯಾವುದೇ ವಿಷಯದ ಸಂಶೋಧನೆ ಸಾಹಿತ್ಯ ತಳಪಾಯವಾಗಿದೆ. ಇದರ ಅಧ್ಯಯನವಿಲ್ಲದೆ ಯಾವುದೇ ವಸ್ತು ವಿಷಯದ ಪರಿಚಯ ಅಸಾಧ್ಯ ಆದ್ದರಿಂದ ಸಂಶೋಧನೆ ಮಾಡಲು ಆಳವಾದ ಸಾಹಿತ್ಯಧ್ಯಯನದಿಂದ ಮಾತ್ರ ಸಂಶೋಧನೆ ಮತ್ತು ವಿಷಯದ ಮೇಲೆ ಹಿಡಿತ ಸಾಧಿಸಲು ಸಾಧ್ಯ ಆದ್ದರಿಂದ ಸಂಶೋಧನೆಯಲ್ಲಿ ಸಾಹಿತ್ಯದ ಅಭ್ಯಾಸ ಎಂಬ ಮಹತ್ವದ ಸ್ಥಾನವನ್ನು ಪಡೆದುಕೊಂಡಿದೆ.
ರಾಮಮುರ್ತಿ ಕೆ.ವಿ
ಸಾರ್ವಜನಿಕ ಪಡಿತರ ವ್ಯವಸ್ಥೆ ಒಂದು ಸರಳ ಮಾಹಿತಿ ಕೈಪಿಡಿ ಪುಸ್ತಕ (2010)
ಈ ಪುಸ್ತಕದಲ್ಲಿ ತಿಳಿಸಿರುವ ವಿವಿಧ ಪಡಿತರ ಚೀಟಿಗಳನ್ನು ಪಡೆಯಲು ಇಲಾಖೆಯು ನಿಗದಿಪಡಿಸಿರುವ ಹೊಸ ಮಾನದಂಡಗಳು ಅರ್ಹತೆಗಳು ಪಡಿತರ ವ್ಯವಸ್ಥೆಯಲ್ಲಿ ಯಾವ ಯಾವ ಸೌಲಭ್ಯಗಳಿವೆ.
ಕರ್ನಾಟಕ ಅಗತ್ಯವಸ್ತುಗಳ ಸಾರ್ವಜನಿಕ ವಿತರಣಾ ಪದ್ಧತಿ
ನಿಯಂತ್ರಣ ಆದೇಶ 1992 ಪ್ರಮುಖ ಅಂಶಗಳು

ಸರ್ವೋಚ್ಚ ನ್ಯಾಯಾಲಯದ ತೀರ್ಪು ಮತ್ತು ನ್ಯಾಯ ಬೆಲೆ ಅಂಗಡಿಯ ಕರ್ತವ್ಯಗಳು.
ನ್ಯಾಯಬೆಲೆ ಅಂಗಡಿಯಲ್ಲಿನ ರಿಜಿಸ್ಟರ್ ಪರಿಶೀಲಿಸುವ ಹಕ್ಕು ನಾಗರೀಕರಿಗೆ ಇದೆ.
ಸಾರ್ವಜನಿಕ ಕುಂದುಕೊರತೆಗಳ ವಿಭಾಗ
ಈ ರೀತಿಯಾಗದ ಮಾಹಿತಿಯನ್ನು ರಾಮಮೂರ್ತಿ ಕೆ.ವಿ. ಯವರು ತಿಳಿಸಿರುವ ನೈಜ ಅಂಶಗಳನ್ನು ಈ ಒಂದು ಪ್ರಾಕಲ್ಪನೆಯಂತೆ ಕಿರು ಸಂಶೋಧನೆಯನ್ನು ಕೈಗೊಳ್ಳಲಾಗಿದೆ.
ಆಹಾರ ನಾಗರೀಕ ಸರಬರಾಜು ಗ್ರಾಹಕರ ವ್ಯವಹಾರಗಳ ಇಲಾಖೆ   ಜಾರಿಗೆ ತಂದಿರುವ ನಾಗರೀಕ ಸನ್ನದ್ದು ಪುಸ್ತಕದಲ್ಲಿ ಈ ರೀತಿಯಾದ ಮಾಹಿತಿಗಳನ್ನು ಪಡೆದುಕೊಳ್ಳಲಾಗಿದೆ.  ನ್ಯಾಯಬೆಲೆ ಅಂಗಡಿಯ ಮಾನದಂಡಗಳು
ತಪ್ರತಿಕಾರ್ಡುವಾರು ಮಾಸಿಕ ಹಂಚಿಕೆ ವಿವರ
ತನಾಗರೀಕ ಸರಬರಾಜು
ತಕನಿಷ್ಠ ಬೆಂಬಲ ಬೆಲೆಯೋಜನೆ
ತಗ್ರಾಹಕರ ವ್ಯವಹಾರಗಳು ಈ ಕುರಿತಾದ ವಿಷಯಗಳನ್ನು ಸವಿಸ್ತಾರವಾಗಿ ತಿಳಿಯಲು ಕಿರು ಸಂಶೋಧನೆಯನ್ನು ಕೈಗೊಳ್ಳಲಾಗಿದೆ.
ಆರ್. ರಾಧಾಕೃಷ್ಣ ಮತ್ತು ಕೆ. ಸುಬ್ಬರಾವ್ ಎಸ್. ಇಂದ್ರಕಾಂತ್ ಮತ್ತು ಸಿ. ರವಿ (1997)
ಪ್ರಕಾಶನ, ವಿಶ್ವಬ್ಯಾಂಕ್ ಪಬ್ಲಿಕೇಶನ್
ಬಡತನ ನಿರ್ಮೂಲನೆಯ ಕಾರ್ಯಕ್ರಮಗಳಲ್ಲಿ ಹಾಗೂ ಉದ್ಯೋಗ ಕಲ್ಪಿಸುವ ಕಾರ್ಯಕ್ರಮಗಳು.
ಐ.ಆರ್.ಡಿ.ಪಿ.: ಸಮಗ್ರ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮವು ಡಿ.ಡಬ್ಲ್ಯೂ.ಸಿ.ಆರ್. ಎ.: ಗ್ರಾಮೀಣ ಪ್ರದೇಶದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
ಟಿ.ಆರ್.ವೈ.ಎಸ್.ಇ.ಎಂ.: ಗ್ರಾಮೀಣ ಯುವಕರ ಸ್ವಯಂ ಉದ್ಯೋಗ ತರಬೇತಿ ಯೋಜನೆ
ಜೆ.ಆರ್,ವೈ.: ಜನಹರ್ಲಾಲ್ ರೋಜಗಾರ್ ಯೋಜನೆ
   ಈ ಯೋಜನೆಗಳು ಒಳಗೊಂಡಂತೆ ಸಾರ್ವಜನಿಕ ವಿತರಣೆ ವ್ಯವಸ್ಥೆ ಕೂಡ ಬಡತನ ನಿರ್ಮೂಲನೆಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ಎಂದು ತಿಳಿಸಿದ್ದಾರೆ. ಈ ಕುರಿತು ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆ ಬಗ್ಗೆ ಅಧ್ಯಯನ ನಡೆಸಲು ಸಂಶೋಧಕನು ಕೈಗೊಂಡನು.

ಸಂಪಾದಕರು ಜಿನ್ಡ್ರೆಜ್ ಮತ್ತು ಅಮೃತ್ಸೇನ್ 1997
ಭಾರತದ ಅಭಿವೃದ್ಧಿ ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಮುದ್ರಣ
ಭಾರತವು ಆರ್ಥಿಕ ಸಾಮಾಜಿಕ ವೈವಿಧ್ಯತೆಯನ್ನು ಹೊಂದಿರುವ ರಾಷ್ಟ್ರವಾಗಿದ್ದು ಗಣರಾಜ್ಯಗಳಾಗಿ ವಿಂಗಡಿಸಲ್ಪಟ್ಟಿದೆ. ಪ್ರತಿಯೊಂದು ರಾಜ್ಯದಲ್ಲಿ ವಿಭಿನ್ನ ರೀತಿಯ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿ ಇದು ಆ ಸ್ಥಿತಿಗತಿ ಬಡತನಕ್ಕೆ ಒಂದು ಪ್ರಮುಖ ಸಮಸ್ಯೆಯಾಗಿದೆ. ಆದ್ದರಿಂದ ಹೊರಬರಲು ಸರ್ಕಾರವು ಅನೇಕ ಕಾರ್ಯ ಯೋಜನೆಗಳನ್ನು ಜಾರಿಗೊಳಸಿವೆ. ಅದರಲ್ಲಿ ಸಾರ್ವಜನಿಕ ವಿತರಣೆ ವ್ಯವಸ್ಥೆ ಮಹತ್ವದ ಪಾತ್ರವನ್ನು ವಹಿಸುತ್ತದೆ.
ಉದಯ್ ಕುಮಾರ್ ಸಿಂಗ್ 1991 ಸಾರ್ವಜನಿಕ ವಿತರಣೆ ವ್ಯವಸ್ಥೆ ಮಿತ್ತಲ್ ಪಬ್ಲಿಕೇಶನ್
ಭಾರತ ಸರ್ಕಾರದ ಆದೇಶದಂತೆ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮಾನದಂಡಗಳನ್ನು ತಿಳಿದು ಕಿರುಸಂಶೋಧನೆಯನ್ನು ಕೈಗೊಳ್ಳಲಾಯಿತು.
ಘನಶಾಮ್ದಾಸ್ ಓಜಾ 1987
ಸಂಘಟನೆ ಮತ್ತು ನಿರ್ವಹಣೆ ಸಾರ್ವಜನಿಕ ವಿತರಣೆ ವ್ಯವಸ್ಥೆ ಮಿತಲ್ ಪಬ್ಲಿಕೇಶನ್
ಸಾರ್ವಜನಿಕ ವಿತರಣಾ ವ್ಯವಸ್ಥೆ ಇಡೀ ಭಾರತದ ಎಲ್ಲಾ ಕಡೆ ಇರುವುದರಿಂದ ವ್ಯವಸ್ಥೆಯ ಬಗ್ಗೆ ಅರ್ಥಪೂರ್ಣವಾಗಿ ಕೊಟ್ಟಿರುವ ವಿಷಯಗಳಿಂದ ಕಿರು ಸಂಶೊಧನೆ ಕೈಗೊಳ್ಳಲು ಅವಕಾಶವಾಯಿತು.
ಕುಲಮತಸಿಂಗ್ ಪತಾನೀಯ (2005)
ಸಾರ್ವಜನಿಕ ವಿತರಣೆ ವ್ಯವಸ್ಥೆ, ಸ್ಥಿತಿಗತಿ ಸವಾಲುಗಳು ಮತ್ತು ಪರಿಹಾರ ತಂತ್ರಗಳು, ಕಾನಿಷ್ಕ ಪಬ್ಲಿಕೇಷನ್ಸ್
ಸಾರ್ವಜನಿಕ ವಿತರಣೆ ವ್ಯವಸ್ಥೆಯಿಂದ ಆಹಾರ ಭದ್ರತೆಯನ್ನು ಕಾಪಾಡುವುದು ಮತ್ತು ಬಡತನ ನಿರ್ಮೂಲನೆಯನ್ನು ಯಾವ ರೀತಿ ಮಾಡಬಹುದು ಎಂಬುದನ್ನು ತಿಳಿದು ಅಧ್ಯಯನ ಮಾಡಲಾಗಿದೆ.
ಯೋಜನಾ ನಿಯತಕಾಲಿಕೆ 2012
ಅದರಲ್ಲಿ ಪ್ರಕಟಿತಗೊಂಡಿರವ ಲೇಖನ ಶಿವಕುಮಾರ ಸ್ವಾಮಿಯವರು ಪ್ರಕಟಿಸಿರುವ ಲೇಖನದಲ್ಲಿ ಭಾರತದ ಆಹಾರ ಭದ್ರತೆ ಹಾಗೂ ಅದರ ಬಡತನದ ಪ್ರಮಾಣ ಮತ್ತು ಇವೆರಡನ್ನು ಸರಿದೂಗಿಸುತ್ತಿರುವ ಸಾರ್ವಜನಿಕ ಪಡಿತರ ವಿತರಣೆ ವ್ಯವಸ್ಥೆಯ ವಾಸ್ತುಸ್ಥಿತಿಯನ್ನು ಸವಿವರವಾಗಿ ಪ್ರಕಟಿಸದು. ಅದರಲ್ಲಿನ ಕೆಲವು ಅಂಕಿ ಅಂಶಗಳಾದ ಬಡತನದ ಪ್ರಮಾಣನಗರ ಭಾಗದಲ್ಲಿ ಶೇ. 32.60% ಹಾಗೂ ಗ್ರಾಮೀಣ ಭಾಗದಲ್ಲಿ 20.80% ರಷ್ಟು ಇದ್ದ ಸಾರ್ವಜನಿಕ ವ್ಯವಸ್ಥೆಯಿಂದ ಲಭಿಸಿರುವ ಆಹಾರ ಧಾನ್ಯಗಳು ಹಾಗೂ ಇತರೆ ಅಗತ್ಯ ವಸ್ತುಗಳ ವಿತರಣೆ ಕುರಿತು ತಿಳಿದುಕೊಳ್ಳಲು ಕಿರುಸಂಶೋಧನೆಯನ್ನು ಕೈಗೊಳ್ಳಲಾಯಿತು.

ಅಧ್ಯಾಯ-3 ಸಂಶೋಧನಾ ವಿಧಾನ
ಭಾರತ ದೇಶದಲ್ಲಿ ಜನರಿಗೆ ಆಹಾರದ ಪದಾರ್ಥಗಳನ್ನು ಜನರಿಗೆ ತಲುಪಿಸಲು ಈ ಒಂದು ಪಡಿತರ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.
 ಈ ರೀತಿಯಲ್ಲಿ ನೋಡಿದಾಗ ಕರ್ನಾಟಕ ರಾಜ್ಯದಲ್ಲಿ ನಿರ್ದಿಷ್ಠಗುರಿಯುಳ್ಳ ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಪಡಿತರ ವಿತರಣಾ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಈ ಯೋಜನೆ ಅನ್ವಯ ವಿವಿಧ ಮೂಲಗಳಿಂದ ಗುರುತಿಸಲ್ಪಟ್ಟ ದುರ್ಬಲವರ್ಗದವರಿಗೆ ಮತ್ತು ಬಡತನ ರೇಖೆಗಿಂತ ಕೆಳಗಿನ ಕುಟುಂಬಳಿಗೆ ಪಡಿತರ ವ್ಯವಸ್ಥೆಗಳ ವಿತರಣೆಯನ್ನು ಹಾಗೂ ಇತರ ಎಲ್ಲಾ ಕುಟುಂಬಳಿಗೆ ಆಹಾರ ಭದ್ರತೆಯನ್ನು ಒದಗಿಸಲು ಇಲಾಖೆ ಕಾರ್ಯನಿರ್ವಹಿಸುತ್ತಿದೆ.
ನ್ಯಾಯಬೆಲೆ ಅಂಗಡಿಗಳು ಫಲಾನುಭವಿ ಕುಟುಂಗಳಿಗೆ ಪಡಿತರ ವಸ್ತುಗಳನ್ನು ತಲುಪಿಸುವ ಮುಖ್ಯ ವಾಹಿನಿಗಳಾಗಿದೆ.
ಈ ಎಲ್ಲಾ ವಿತರಣಾ ವ್ಯವಸ್ಥೆಯನ್ನು ಕರ್ನಾಟಕ ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣಾಪದ್ಧತಿ ನಿಯಂತ್ರಣ ಆದೇಶ. 1992ರಡಿ ನಿಯಂತ್ರಿಸಲಾಗುತ್ತಿದೆ. ಈ ಒಂದು ನ್ಯಾಯಬೆಲೆ ವಿತರಣಾ ವ್ಯವಸ್ಥೆಯಲ್ಲಿ ಈ ರೀತಿಯಾಗಿ ವಿಂಗಡಿಸಲಾಗಿದೆ.
1.ಅಕ್ಷಯ (ಬಿ.ಪಿ.ಎಲ್)
2.ಅನ್ನಪೂರ್ಣ ಯೋಜನೆ
3.ಅಂತ್ಯೋದಯ ಯೋಜನೆ
4.ಎ.ಪಿ.ಎಲ್
ನ್ಯಾಯಬೆಲೆ ಅಂಗಡಿ
ಕರ್ನಾಟಕ ಅಗತ್ಯವಸ್ತುಗಳ ಸಾರ್ವಜನಿಕ ವಿತರಣಾ ಪದ್ಧತಿ ನಿಯಂತ್ರಣಾ ಆದೇಶ 1992ರಂತೆ ರಾಜ್ಯದ ವಿವಿಧ ಪ್ರದೇಶಗಳಲ್ಲಿ ನ್ಯಾಯಬೆಲೆ ಅಂಗಡಿಯು 31/01/2008 ರಲ್ಲಿದ್ದಂತೆ 20.301 ನ್ಯಾಯಬೆಲೆ ಅಂಗಡಿ ಹಾಗೂ 25.780 ಚಿಲ್ಲರೆ ಸೇಮೆಎಣ್ಣೆ ವಿತರಕರು ಇರುತ್ತಾರೆ.
ನ್ಯಾಯಬೆಲೆ ಅಂಗಡಿಯ ವಿತರಣೆ ಸಮಯ
ತಬೆಳಿಗ್ಗೆ 08 ರಿಂದ 12 ಹಾಗೂ ಸಂಜೆ 04 ರಿಂದ 08 ರಾತ್ರಿಯವರೆಗೆ ಕಾರ್ಯನಿರ್ವಹಿಸಬೇಕಾಗಿರುತ್ತದೆ.
ತಮಂಗಳವಾರ ನ್ಯಾಯಬೆಲೆ ಅಂಗಡಿಗಳಿಗೆ ರಜೆಯನ್ನು ಸರ್ಕಾರವು ಘೋಷಿಸಲಾಗಿರುತ್ತದೆ.
ಅಧ್ಯಯನದ ಗುರಿ: ಕರ್ನಾಟಕ ರಾಜ್ಯದಲ್ಲಿ ಸಾರ್ವಜನಿಕ ಪಡಿತರ ವಿತರಣೆ ವ್ಯವಸ್ಥೆಯ ಸ್ಥಿತಿಗತಿಗಳ ಬಗ್ಗೆ ಪ್ರಾಯೋಗಿಕವಾಗಿ ತಿಳಿಯುವುದು.
ಅಧ್ಯಯನದ ಉದ್ದೇಶಗಳು:
1)ಪಡಿತರ ವಿತರಣಾ ವ್ಯವಸ್ಥೆಯ ಸ್ಥಳೀಯ ಸಂಬಂಧಪಟ್ಟ ಜನಸಮುದಾಯದವರಿಗೆ ಸಾರ್ವಜನಿಕ ಪಡಿತರ ವಿತರಣಾ ಪದ್ದತಿಯನ್ವಯ ಯಾವ ರೀತಿ ಸಹಕಾರ ಸಿಗುತ್ತಿದೆ ಹಾಗು ಪಡಿತರ ವಿತರಣೆಯಿಂದ ಆಹಾರ ಸಾಮಾಗ್ರಿಗಳು ಯಾವ ರೀತಿ ವಿತರಣೆ ಮಾಡುತ್ತಿದ್ದಾರೆ ಎಂದು ತಿಳಿಯುವುದು.
2)ಪಡಿತರ ವಿತರಣಾ ವ್ಯವಸ್ಥೆಯಿಂದ ಜನ ಸಾಮಾನ್ಯರಿಗೆ ಸರಿಯಾದ ಸಮಯಕ್ಕೆ ಸರಿಯಾದ ರೀತಿಯಲ್ಲಿ ಸಾಮಾಗ್ರಿಗಳ ದೊರಕುತ್ತಿದೆಯಾ ಎಂಬುದನ್ನು ತಿಳಿಯುವುದು.
ಅಧ್ಯಯನಕ್ಕೆ ಪ್ರೇರಕವಾದ ಅಂಶಗಳು
   ಸಂಶೋಧಕನು ಸ್ನಾತಕೋತ್ತರ ಸಮಾಜಕಾರ್ಯ ವಿದ್ಯಾರ್ಥಿಯಾಗಿದ್ದು ಸಾಮಾಜಿಕ ಅಭಿವೃದ್ದಿ ವಿಶೇಷ ವ್ಯಾಸಂಗ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡಿದ್ದೇನೆ.
   ಈ ಅಧ್ಯಯನ ಮಾಡಲು ನಮ್ಮ ಸ್ಥಳೀಯ ಮಟ್ಟದ ನ್ಯಾಯಬೆಲೆ ಅಂಗಡಿಯ ಕಾರ್ಯ ವೈಖರಿಯಗಳನ್ನು ನೋಡಿ ಈ ಒಂದು ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆ ಬಗ್ಗೆ ಅಧ್ಯಯನ ಮಾಡಲು ಸ್ವಯಂ ಪ್ರೇರಣೆಯಿಂದ ಆಯ್ಕೆ ಮಾಡಲಾಗಿದೆ.
ಪ್ರಾಕ್ ಕಲ್ಪನೆಗಳು
   ಸಮಾಜ ಅಥವಾ ಸಂಶೋಧಕನು ಒಮ್ಮೆ ತನ್ನ ಅಧ್ಯಯನದ ವಿಷಯ ಅಥವಾ ಸಂಶೋಧನಾ ಸಮಸ್ಯೆಯನ್ನು ಆಯ್ಕೆ ಮಾಡಿಕೊಂಡ ಮೇಲೆ ಆ ಸಮಸ್ಯೆಯ ಬಗ್ಗೆ ತಾತ್ಕಾಲಿಕ ಪರಿಹಾರ ಅಥವಾ ಹಿಂದಿನ ಅನುಭವದ ಆಧಾರದ ಮೇಲೆ ಅಥವಾ ಸಿದ್ದಾಂತವನ್ನು ರಚಿಸುತ್ತಾನೆ. ಈ ತಾತ್ಕಾಲಿಕ ಸಿದ್ದಾಂತ ಅಥವಾ ಊಹಾ ಪರಿಹಾರವೇ ಪ್ರಾಕ್ಕಲ್ಪನೆ ಪ್ರಸ್ತುತ ಸಂಶೋಧನೆಯ ಧ್ಯೇಯೋದ್ದೇಶಗಳನ್ನು ಗಮನದಲ್ಲರಿಸಿಕೊಂಡು ಈ ಮುಂದಿನ ಆಧಾರ ಕಲ್ಪನೆಗಳನ್ನು ಅಳವಡಿಸಿಕೊಳ್ಳಲಾಗಿತ್ತು.
ತ ಪ್ರಸ್ತುತ ಅಧ್ಯಯನದಲ್ಲಿ ನ್ಯಾಯಬೆಲೆಯ ಅಂಗಡಿಯ ಮಾಲೀಕರು ಸಕ್ರಿಯವಾಗಿ ಮಾಹಿತಿ ನೀಡುವುದರಲ್ಲಿ ಭಾಗವಹಿಸುತ್ತಾರೆ ಎಂದು ತಿಳಿಸಲಾಗಿದೆ.
ತಸಾರ್ವಜನಿಕರ ವ್ಯವಸ್ಥೆಯಾಗಿರುವುದರಿಂದ ಎಲ್ಲರಿಗೂ ಮುಕ್ತ ಅವಕಾಶವಿರುತ್ತದೆ.
ತಪ್ರಸ್ತುತ ಅಧ್ಯಯನದಲ್ಲಿ ಈ ಒಂದು ಪ್ರಾಕ್ ಕಲ್ಪನೆಯನ್ನು ಅಳವಡಿಸಿಕೊಂಡಿದ್ದೇನೆ ಎಂದು ತಿಳಿಸಲಾಗಿದೆ.
ಸಂಶೋಧನಾ ವಿನ್ಯಾಸ (ನಕ್ಷೆ)
    ಪ್ರಸ್ತುತ ಸಂಶೋಧನೆಯ ಉದ್ದೇಶಗಳು ಪ್ರತಿವಾದಿಗಳ ಸಾಮಾಜಿಕ ಸ್ಥಿತಿ, ಪಡಿತರ ವಿತರಣಾ ವ್ಯವಸ್ಥೆಯ ಬಗ್ಗೆ ಯಾವ ರೀತಿಯಾದ ಹಕ್ಕನ್ನು ಹೊಂದಿದ್ದಾರೆ ಮತ್ತು ಪಡಿತರ ವಿತರಣೆಯ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆಯೇ ಮತ್ತು ಯಾವ ರೀತಿಯಾದ ಸಮಸ್ಯೆಗಳು ಎದುರಾಗುತ್ತಿವೆ ಮಾಲೀಕರು ಯಾವ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂಬುದನ್ನು ಕ್ಷೇತ್ರದ ವ್ಯವಸ್ಥೆ ಸುಧಾರಣೆಗೆ ನೀಡುವ ಸಲಹೆಗಳ ಮುಂತಾದವುಗಳ ಬಗೆಗೆ ಸವಿವರವಾಗಿ ತಿಳಿಯುವ ನಿಟ್ಟಿನಲ್ಲಿ ರೂಪಿತವಾಗಿ ಹಾಗಾಗಿ ಈ ಸಂಶೋಧನೆಯು ವಿವರಣಾತ್ಮಕ ಸಂಶೋಧನಾ ವಿನ್ಯಾಸವನ್ನು ಅನುಸರಿಸಿದೆ.
   ವಿವರಣಾತ್ಮಕ ಸಂಶೋಧನೆಯು ಸರಳವಾಗಿರಬಹುದು. ಅಥವಾ ಸಂಕೀರ್ಣವಾಗಿರಬಹುದು. ಅದನ್ನು ಆಡಳಿತಾತ್ಮಕ ಮತ್ತು ಪುನರ್ವಸತೀಕರಣದ ದೃಷ್ಠಿಯಿಂದ ನಡೆಸುವುದಾಗಿದೆ. ಯಾವುದಾದರೂ ಯೋಜನೆ ಧೋರಣೆ ಸನ್ನಿವೇಶ ಅಥವಾ ಘಟನೆಗೆ ಸಂಬಂಧಿಸಿದ ವಾಸ್ತವಿಕ ಚಿತ್ರಣವನ್ನು ನೀಡುವ ಉದ್ದೇಶದಿಂದ ಕೈಗೊಳ್ಳಲಾದ ಸಂಶೋಧನೆಗಳು ಸಾಮಾನ್ಯವಾಗಿ ವಿವರಣಾತ್ಮಕ ಸ್ವರೂಪದ್ದಾಗಿರುತ್ತದೆ.

ಮಾದರಿ ವಿಧಾನ:
   ಪ್ರಸ್ತುತ ಅಧ್ಯಾಯವನ್ನು ಬೆಂಗಳೂರು ಜಿಲ್ಲೆ ತಾವರೆಕೆರೆ ಹೋಬಳಿ ಚಿಕ್ಕನಹಳ್ಳಿ ಗ್ರಾಮದ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ನ್ಯಾಯಬೆಲೆ ಅಂಗಡಿಗಳನ್ನು ಸರಳ ಯದೃಚ್ಚಿಕ ವಿಧಾನದ ಮೂಲಕ ಆಯ್ಕೆ ಮಾಡಿಕೊಳ್ಳಲಾಯಿತು.
   ಈ ಒಂದು ಪಟ್ಟಿಯಲ್ಲಿ 10 ನ್ಯಾಯಬೆಲೆ ಅಂಗಡಿ ಮತ್ತು 40 ಫಲಾನುಭವಿಗಳನ್ನು ಉದ್ದೇಶದ ಪೂರ್ವಕವಾಗಿ ಆಯ್ಕೆ ಮಾಡಲಾಯಿತು.

ಅವಶ್ಯಕತೆ ಮತ್ತು ಪ್ರಾಮುಖ್ಯತೆ
1.ಸಾರ್ವಜನಿಕ ಪಡಿತರ ವ್ಯವಸ್ಥೆ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಣೆ ಮಾಡುವುದು ಮತ್ತು ಸ್ಥಳೀಯ ಸಮುದಾಯದವರಿಗೆ ಅನುಕೂಲ ರೀತಿಯಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮಾಹಿತಿ ಕೈಗೆಟುಕುವಂತೆ ವರದಿ ಮಾಡುವುದು ಈ ಅಧ್ಯಯನದ ಮಹತ್ವ.
2.ಕೇಂದ್ರ ಮಟ್ಟದಿಂದ ಸ್ಥಳೀಯ ಸಮುದಾಯದ ಜನರಿಗೆ ಯಾವ ರೀತಿ ವಿತರಣಾ ವ್ಯವಸ್ಥೆ ಇದೆ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕುವುದು

ಮಾಹಿತಿ ಸಂಗ್ರಹಣೆ ವಿಧಾನ:
  ಪ್ರಸ್ತುತ ಸಂಶೋಧನೆಯು ಪ್ರಾಥಮಿಕ ಮಾಹಿತಿಯನ್ನು ಆಧರಿಸಿ ಮುನ್ನಡೆದಿನ ಇದರಲ್ಲಿ ಸಂಶೋಧಕನು ಪ್ರತಿವರ್ತಿಗಳನ್ನು ನೇರವಾಗಿ ಬೇಟಿ ಮಾಡಿ ಸಂದರ್ಶಿಸಿ ಅವರಿಂದ ಅಧ್ಯಯನ ವಿಷಯಕ್ಕೆ ಸಂಬಂಧಿಸಿದ ಉತ್ತರಗಳನ್ನು ಪಡೆಯುತ್ತಾನೆ. ಅನುಸೂಚಿಯಲ್ಲಿ ಕೇಳುವ ಪ್ರಶ್ನೆಗಳನ್ನು ಮೊದಲೇ ತಯಾರಿಸಿ ಪಟ್ಟಿಮಾಡಿಕೊಂಡು ಉಪಯೋಗಿಸಿದರೆ ಸಂದರ್ಶನದಲ್ಲಿ ಸ್ಥಳದಲ್ಲೇ ಸ್ವಯಂ ಪ್ರೇರಿತ ಪ್ರಶ್ನೆಗಳನ್ನು ಕೇಳಲಾಗುವುದು. ಈ ವಿಧಾನದಿಂದ ವಿಷಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ನೇರವಾಗಿ ಪಡೆಯಬಹುದು.
    ಬೆಂಗಳೂರು ಜಿಲ್ಲೆ ತಾವರೆಕೆರೆ ಹೋಬಳಿ ಚಿಕ್ಕನಹಳ್ಳಿ ಗ್ರಾಮದ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ನ್ಯಾಯಬೆಲೆ ಅಂಗಡಿಗಳನ್ನು ಮತ್ತು ಅದರ ಫಲಾನಭವಿಗಳನ್ನು ಸಂಶೋಧನೆಯ ಪ್ರತಿವಾದಿಗಳಾಗಿ ಸ್ವೀಕರಿಸಲಾಗಿದೆ. ಈ ಸಂಶೊಧನೆಯ ಧ್ಯೇಯೋದ್ದೇಶಗಳು, ಆಧಾರ ಕಲ್ಪನೆಗಳು ಇವೆ ಮುಂತಾದವುಗಳನ್ನು ಗಮನದಲ್ಲಿಟ್ಟುಕೊಂಡು ಸಂಶೋಧನೆಗೆ ಅಗತ್ಯವಾದ ಮಾಹಿತಿಯನ್ನು ಪ್ರಾಥಮಿಕ ಮೂಲ ಎಂದರೆ 10 ನ್ಯಾಯಬೆಲೆ ಅಂಗಡಿ ಮಾಲೀಕರು ಮತ್ತು ಅದರ ಫಲಾನುಭವಿಗಳಾದ 40 ಸದಸ್ಯರು ಸಂದರ್ಶನದ ವಿಧಾನದ ಮೂಲಕ ಸಂಗ್ರಹಿಸಲಾಯಿತು. ಈ ಮಾಹಿತಿಯನ್ನು ಸಂದರ್ಶನದ ಅನುಸೂಚಿ ಮೂಲಕ ಸಂಗ್ರಹಿಸಲಾಗಿತು. ಇದು ಪ್ರತಿವಾದಿಗಳ ಸಾಮಾಜಿಕ ಸ್ಥಿತಿ ಮತ್ತು ಅವರ ಆಹಾರದ ಭದ್ರತೆ ತಮ್ಮ ಹಕ್ಕುಗಳನು ಯಾವ ರೀತಿಯಲ್ಲಿ ಉಪಯೋಗಿಸಿಕೊಳ್ಳುತ್ತಾರೆ. ಸರ್ಕಾರದ ಸೌಲಭ್ಯಗಳನ್ನು ಪಡೆಯುವುದರಲ್ಲಿ ಯಾವ ರೀತಿ ಸನ್ನದರಾಗಿದ್ದಾರೆ. ಈ ವಿಷಯಗಳ ಬಗ್ಗೆ ಪ್ರಶ್ನೆಗಳು ಕೂಡಿತ್ತು.
   ಈ ಅಧ್ಯಯನದಲ್ಲಿ ಸಂಶೋಧಕನು ಸಂದರ್ಶನದ ಅನುಸೂಚಿಯನ್ನು ಬಳಸಲಾಯಿತು.
ಅಧ್ಯಯನದ ಅನುಸೂಚಿಯನ್ನು ತಯಾರಿಸುವ ನಂತರ ಅದರ ಪ್ರಾಯೋಗಿತ್ವವನ್ನು ತಿಳಿಯಲು ಪೂರ್ವ ಪರೀಕ್ಷೆಯನ್ನು 1. ನ್ಯಾಯಬೆಲೆ ಅಂಗಡಿ ಮತ್ತು 5 ಫಲಾನುಭವಿಗಳನ್ನು ಅಧ್ಯಯನ ನಡೆಸಲಾಯಿತು. ನಂತರ ಕೆಲವೊಂದು ಬದಲಾವಣೆಯಗಳನ್ನು ಮಾಡಲಾಯಿತು.
ಸಂದರ್ಶನದ ಅನುಸೂಚಿಯಲ್ಲಿ ಈ ಕೆಳಕಂಡ ಮಾಹಿತಿಯನ್ನು ಒಳಗೊಂಡಿತ್ತು.
ತ ನ್ಯಾಯಬೆಲೆ ಅಂಗಡಿಯ ಮಾನದಂಡಗಳನ್ನು ತಿಳಿಯುವುದು
ತಮಲೀಕರು ಕರ್ತವ್ಯಗಳನ್ನು ತಿಳಿಯುವುದು
ತಫಲಾನುಭವಿಗಳ ಸಲಹೆ ಮತ್ತು ಅವರ ಆಹಾರ ಭದ್ರತೆಯ ವಿವರಗಳು
ತಪಡಿತರ ವ್ಯವಸ್ಥೆ ಯಾವ ರೀತಿಯಲ್ಲಿ ಅನುಕೂಲಕರವಾಗಿದೆ ಎಂದು ತಿಳಿಯುವುದು.

ದತ್ತಾಂಶ ವಿಶ್ಲೇಷಣೆ ಮತ್ತು ಮಾಹಿತಿ ವರ್ಗೀಕರಣ:
   ಸಂಗ್ರಹಿಸಿದ ಮಾಹಿತಿಯನ್ನು ಗಣಕಗಳ ವರ್ಗೀಕರಣ ಮಾಡಿ ತಪಾಶೀಲು ಪಟ್ಟಿಗೆ ಹಾಕಲಾಯಿತು  ತಪಾಶೀಲು ಪಟ್ಟಿಯಿಂದ ವರ್ಗೀಕರಣ ಮಾಡಿ ವಿಶ್ಲೇಷಣೆ ಮಾಡಲಾಯಿತು ನಂತರ ವರ್ಗೀಕರಣ ಮಾಡಿದ ದತ್ತಾಂಶವನ್ನು ಬಳಸಿಕೊಂಡು ದತ್ತಾಂಶ ಪಟ್ಟಿಯನ್ನು ತಯಾರಿಸಲಾಯಿತು.
   ವಿವರಣಾತ್ಮಕ ಸಂಖ್ಯಾಶಾಸ್ತ್ರ ಬಳಸಿ ಮಾಹಿತಿಯನ್ನು ವಿಶ್ಲೇಷಿಸಲಾಯಿತು. ಇದರಲ್ಲಿ ಸರಾಸರಿ ಮಧ್ಯಾಂಕ ಆವೃತಿಯನ್ನು ಬಳಸಲಾಯಿತು.

ಪ್ರಸ್ತುತ ಅಧ್ಯಯನದ ಇತಿಮಿತಿಗಳು
   ಪ್ರಸ್ತುತ ಅಧ್ಯಯನದಲ್ಲಿ ನ್ಯಾಯಬೆಲೆ ಅಂಗಡಿ ಮಾಲೀಕರು ಮತ್ತ್ತು ಅದರ ಫಲಾನುಭವಿಗಳ ಪಡಿತರ ವ್ಯವಸ್ಥೆಯನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬ ಅಂಶಗಳನ್ನು ಮಾತ್ರ ಅಧ್ಯಯನ ಮಾಡಿದೆ.
ಮಾಲೀಕರು ಮತ್ತು ಫಲಾನುಭವಿಗಳನ್ನು ಮಾತ್ರ ಅಧ್ಯಯನ ಮಾಡಿದೆ.

ಉಪಸಂಹಾರ:
ಪ್ರಸ್ತುತ ಅಧ್ಯಯನದಲ್ಲಿ ಸಂಶೋಧನಾ ವಿಧಾನವನ್ನು ಬಳಸಿಕೊಂಡಿರುವುದಕ್ಕೆ ಸಂಶೋಧಕನಿಗೆ ಸಂಶೋಧನೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಿದೆ. ಪ್ರಾಕ್ಕಲ್ಪನೆ ಮಾದರಿ ವಿಧಾನಗಳು ಮಾಹಿತಿ ಸಂಗ್ರಹಣೆಯ ಸಂದರ್ಶನ ಪ್ರಶ್ನಾವಳಿ ವಿಧಾನದ ಮೂಲಕ ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆ ಮತ್ತು ಫಲಾನುಭವಿಗಳ ಸ್ಥಿತಿಗತಿಗಳು ಅಧ್ಯಯನಕ್ಕೆ ಸಹಾಯಕವಾಗಿದೆ.


ಅಧ್ಯಾಯ-4 ಮಾಹಿತಿ ವಿಶ್ಲೇಷಣೆ
ಸಂಗ್ರಹಿಸಿದ ಮಾಹಿತಿಗಳನ್ನು ಕೋಷ್ಠಕ ರೂಪದಲ್ಲಿ ನಿರೂಪಿಸಿ ಅವುಗಳನ್ನು ವಿಶ್ಲೇಷಿಸುವುದು ಸಂಶೋಧನ ವಿಧಾನದಲ್ಲಿ ಪ್ರಮುಖವಾದ ಹಂತವಾಗಿದೆ. ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯು, ಫಲಾನುಭವಿಗಳಿಗೆ ಯಾವ ರೀತಿ ಅನುಕೂಲವಾಗಿದೆ ಮತ್ತು ಅಲ್ಲಿರುವ ತೊಂದರೆಗಳು ಹಾಗೂ ನ್ಯಾಯಬೆಲೆ ಅಂಗಡಿಯು ಯಾವ ರೀತಿ ಕಾರ್ಯ ನಿರ್ವಹಿಸುತ್ತಿದೆ ಎಂಬುದನ್ನು ಭೇಟಿ ನೀಡುವುದರ ಮೂಲಕ ತಿಳಿಯಲಾಗಿದೆ.
ಸಂಶೋಧನ ಕಾರ್ಯದ ಮೂಲಕ ಬೇಕಾದಷ್ಟು ಮಾಹಿತಿಗಳನ್ನು ಸಂಗ್ರಹಿಸಿದ್ದು ಹಾಗೂ ಸಮರ್ಪಕವಾಗಿ ಎಂದು ಕಂಡುಬಂದಿದ್ದರೂ ಅಂತಹ ಮಾಹಿತಿಗಳು ತಾವಾಗಿಯೇ ಏನನ್ನು ಹೇಳಲಾರವು ಈ ಮಾಹಿತಿಗಳನ್ನು ಕ್ರಮಬದ್ಧವಾಗಿ ಕ್ರೋಢಿಕರಣ ಮಾಡಿ, ವರ್ಗೀಕರಣ ಹಾಗೂ ಪಟ್ಟಿಮಾಡಿ ಅವುಗಳಿಗೆ ಯಥೋಚಿತವಾದ ವ್ಯಾಖ್ಯಾನವನ್ನು ನೀಡಿದಾಗ ಮಾತ್ರ ಸಂಶೋಧನಾ ಕಾರ್ಯವು ಏನನ್ನ ಸಾಧಿಸಿದೆ ಎಂಬುದು ತಿಳಿದು ಬರುವುದು. ಆದ್ದರಿಂದ ಸಂಶೋಧನಾ ಕಾರ್ಯದಲ್ಲಿ ಮಾಹಿತಿಯ ವಿಶ್ಲೇಷಣೆ, ಅರ್ಥ, ನಿರೂಪಣೆ, ಹಾಗೇ ವರದಿ ತಯಾರಿಸುವಿಕೆ ಬಹಳಷ್ಟು ಮಹತ್ವವಿದೆ.

ಕೋಷ್ಠಕ 1
ಹೆಚ್ಚಿನ ಪಡಿತರ ಕಾರ್ಡ್ಗಳು ಪುರುಷರ ಹೆಸರಿನಲ್ಲಿ ಇರುವುದನ್ನು ಕಾಣಬಹುದಾಗಿದೆ. ಪಡಿತರ ಕಾರ್ಡ್ಗಳು 93% ಪುರುಷರ ಹೆಸರಿನಲ್ಲಿದ್ದು 7% ಮಹಿಳೆಯರ ಹೆಸರಿನಲ್ಲಿವೆ.
ಪಡಿತರ ಕಾರ್ಡ್ಗಳ ಹಂಚಿಕೆಯು ಲಿಂಗದಾರದ ಮೇಲೆ ಬಹಳಷ್ಟು ವ್ಯತ್ಯಾಸದಿಂದ ಕೂಡಿದೆ.

ಕೋಷ್ಠಕ 2
5% ಪಡಿತರ ಕಾರ್ಡ್ಗಳು 20ರಿಂದ 30 ವರ್ಷ ವಯಸ್ಸುಳ್ಳುವವರಿಗೆ ಹಂಚಿಕೆಯಾಗಿವೆ. 53% ಪಡಿತರ ಕಾರ್ಡ್ಗಳು 30 ರಿಂದ 40 ವರ್ಷ ವಯಸ್ಸುವುಳ್ಳವವರಿಗೆ ಹಂಚಿಕೆಯಾಗಿದೆ. 40% ಪಡಿತರ ಕಾರ್ಡ್ಗಳು 40 ರಿಂದ 60 ವರ್ಷ ವಯಸ್ಸುಳ್ಳವವರಿಗೆ ಹಂಚಿಕೆಯಾಗಿವೆ. ಕೇವಲ 2% ಕಾರ್ಡ್ಗಳು ಮಾತ್ರ 60 ವರ್ಷ ಮೇಲ್ಪಟ್ಟ ವಯಸ್ಸಾಗಿರುವವರ ಹೆಸರಿಗೆ ಹಂಚಿಕೆಯಾಗಿವೆ.

ಕೋಷ್ಠಕ 3
ಕೇವಲ 2% ಫಲಾನುಭವಿಗಳು ಮಾತ್ರ ಪದವಿ ಪೂರ್ವ ಮತ್ತು ಪದವಿ ಶಿಕ್ಷಣವನ್ನು ಮುಗಿಸಿದ್ದಾರೆ. ಮಾಧ್ಯಮಿಕ ಶಿಕ್ಷಣವನ್ನು 37% ಫಲಾನುಭವಿಗಳು ಮುಗಿಸಿದ್ದಾರೆ. 28% ಫಲಾನುಭವಿಗಳು ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ್ದಾರೆ. 33% ಫಲಾನುಭವಿಗಳು ಅನಕ್ಷರಸ್ಥರು.

ಕೋಷ್ಠಕ 4
ಈ ಒಂದು ಪಡಿತರ ಚೀಟಿಯನ್ನು ಕುಟುಂಬದ ಆರ್ಥಿಕತೆಯನ್ನು ಆಧಾರವಾಗಿಟ್ಟುಕೊಂಡು ವಿಂಗಡಿಸಲಾಗಿದೆ. 22% ಫಲಾನುಭವಿಗಳು ಎ.ಪಿ.ಎಲ್ ಪಡಿತರ ಚೀಟಿಯನ್ನು ಹೊಂದಿದ್ದಾರೆ. 18% ಫಲಾನುಭವಿಗಳು ಅಂತ್ಯೋದಯ ಪಡಿತರ ಚೀಟಿಯನ್ನು ಹೊಂದಿದ್ದಾರೆ 60% ಫಲಾನುಭವಿಗಳು ಬಿ.ಪಿ.ಎಲ್ ಪಡಿತರ ಚೀಟಿಯನ್ನು ಹೊಂದಿದ್ದಾರೆ. ಯಾರು ಸಹ ಅನ್ನಪೂರ್ಣ ಕಾರ್ಡ್ಗಳನ್ನು ಹೊಂದಿಲ್ಲ ಎಲ್ಲಾರು ಸಹ ಮೇಲಿನ ಯಾವುದಾದರು ಒಂದು ರೀತಿಯ ಕಾರ್ಡನ್ನು ಹೊಂದಿರುವುದನ್ನು ಕಾಣಬಹುದಾಗಿದೆ.

ಕೋಷ್ಠಕ 5
60% ಫಲಾನುಭವಿಗಳಿಗೆ ಸರ್ಕಾರದಿಂದ ಎಷ್ಟು ಆಹಾರ ಸಾಮಗ್ರಿ ಸಿಗಬೇಕು ಎಂಬ ಮಾಹಿತಿ ಗೊತ್ತಿದೆ ಆದರೆ 40% ಫಲಾನುಭವಿಗಳಿಗೆ ಈ ಮಾಹಿತಿ ಗೊತ್ತಿಲ್ಲ.

ಕೋಷ್ಠಕ 6
ಸ್ಥಳೀಯ ನ್ಯಾಯಬೆಲೆ ಅಂಗಡಿ ಮತ್ತು ಫಲಾನುಭವಿಗಳ ಮಧ್ಯೆ ಇರುವ ಸಂಬಂಧ 10% ಅತ್ಯುತ್ತಮವಾಗಿದ್ದಾರೆ 63% ಉತ್ತಮವಾಗಿದೆ. 27% ಸಾಧಾರಣವಾಗಿದೆ.

ಕೋಷ್ಠಕ 7
98% ಫಲಾನುಭವಿಗಳು ಆಹಾರ ಸಾಮಗ್ರಿಯನ್ನು ಪಡೆಯಲು ಬೆಳಿಗ್ಗೆ ಸಮಯದಲ್ಲಿ ಹೋದರೆ 2% ಫಲಾನುಭವಿಗಳು ಸಂಜೆ ಸಮಯದಲ್ಲಿ ಹೋಗುತ್ತಾರೆ.

ಕೋಷ್ಠಕ 8
ಆಹಾರ ವಿತರಣಾ ಸಮಯದಲ್ಲಿ ಮೋಸವಾದರೆ 25% ಫಲಾನುಭವಿಗಳು ಪಂಚಾಯ್ತಿ ಸದಸ್ಯರಿಗೆ ದೂರು ನೀಡಿದರೆ 20% ಫಲಾನುಭವಿಗಳು ಆಹಾರ ಸರಬರಾಜು ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದರೆ, 55% ಫಲಾನುಭವಿಗಳು ಹೆಚ್ಚಾಗಿ ಸ್ಥಳೀಯ ಮುಖಂಡರುಗಳಿಗೆ ದೂರು ನೀಡುತ್ತಾರೆ.

ಕೋಷ್ಠಕ 9
ಕೆಲವೊಂದು ಹಳ್ಳಿಗಳಲ್ಲಿ 58% ಫಲಾನುಭವಿಗಳ ಪ್ರಕಾರ ವಾರದಲ್ಲಿ 3 ದಿನಗಳು ನ್ಯಾಯಬೆಲೆ ಅಂಗಡಿಯು ತೆಗೆದಿರುತ್ತದೆ ಬೇರೆ ಹಳ್ಳಿಗಳಲ್ಲಿ 15% ಫಲಾನುಭವಿಗಳ ಪ್ರಕಾರ 4 ದಿನ ತೆಗೆದಿರುತ್ತದೆ. ಇನ್ನು ಕೆಲವು ಹಳ್ಳಿಗಳಲ್ಲಿ 27% ಫಲಾನುಭವಿಗಳ ಪ್ರಕಾರ ವಾರದಲ್ಲಿ ಕೇವಲ 2 ದಿನಗಳು ಮಾತ್ರ ನ್ಯಾಯಬೆಲೆ ಅಂಗಡಿಯು ತೆರೆದಿರುತ್ತದೆ.

ಕೋಷ್ಠಕ 10
ಕೇವಲ 17% ಫಲಾನುಭವಿಗಳ ಪ್ರಕಾರ ನ್ಯಾಯಬೆಲೆ ಅಂಗಡಿಯಿಂದ ಆಹಾರ ಸಾಮಗ್ರಿಗಳ ವಿತರಣೆಯಿಂದ ಆಹಾರ ಭದ್ರತೆಯನ್ನು ನೀಗಿಸಿಕೊಳ್ಳಬಹುದು ಎಂದಿದ್ದಾರೆ. ಉಳಿದ 83% ಫಲಾನುಭವಿಗಳು ಇಲ್ಲ ಎಂದಿದ್ದಾರೆ.

ಕೋಷ್ಠಕ 11
45% ಫಲಾನುಭವಿಗಳು ವ್ಯವಸಾಯವನ್ನು ಮಾಡುತ್ತಿದ್ದಾರೆ. 10% ಫಲಾನುಭವಿಗಳು ಕೂಲಿಯನ್ನು ಮಾಡುತ್ತಿದ್ದಾರೆ. 28% ಫಲಾನುಭವಿಗಳು ಹೈನುಗಾರಿಕೆ ಮಾಡುತ್ತಿದ್ದಾರೆ. 17% ಫಲಾನುಭವಿಗಳು ಸರ್ಕಾರಿ ಕೆಲಸದಲ್ಲಿದ್ದಾರೆ ಎಂಬುದನ್ನು ತಿಳಿಯಬಹುದಾಗಿದೆ.

ನ್ಯಾಯಬೆಲೆ ಅಂಗಡಿಯ ಮಾಲೀಕರಿಗೆ ಸಂಬಂಧಿಸಿದ
ವಿಭಾಗ - ಬಿ
ಕೋಷ್ಠಕ 1
ಗ್ರಾಮ ಪಂಚಾಯಿತಿ ಮತ್ತು ಸ್ಥಳೀಯ ಸಾರ್ವಜನಿಕ ಪಡಿತರ ವ್ಯವಸ್ಥೆ ನಡುವೆ ಯಾವ ರೀತಿ ಸಂಬಂಧವಿದೆ ಎಂಬುದನ್ನು ನೋಡಿದಾಗ 10% ನ್ಯಾಯಬೆಲೆ ಅಂಗಡಿಯ ಮಾಲೀಕರ ಪ್ರಕಾರ ಅತ್ಯುತ್ತಮವಾಗಿದೆ. 90% ನ್ಯಾಯಬೆಲೆ ಅಂಗಡಿಯ ಮಾಲೀಕರ ಪ್ರಕಾರ ಉತ್ತಮವಾಗಿದೆ ಎಂದಿದ್ದಾರೆ ಯಾರು ಸಹ ಸಾಧಾರಣ ಮತ್ತು ಕೆಳಮಟ್ಟ ಎಂದು ತಿಳಿಸಿಲ್ಲ.

ಕೋಷ್ಠಕ 2
100% ನ್ಯಾಯಬೆಲೆ ಅಂಗಡಿಯ ಮಾಲೀಕರು ಆಹಾರ ಜಾಗೃತ ಸಮಿತಿ ಇದೆ ಎಂದು ತಿಳಿಸಿದ್ದಾರೆ.

ಕೋಷ್ಠಕ 3
ನಾಗರೀಕ ಸನ್ನದು ಕೂಡ 100% ನ್ಯಾಯಬೆಲೆ ಅಂಗಡಿಯ ಮಾಲೀಕರು ಇದೆ ಎಂದು ತಿಳಿಸಿದ್ದಾರೆ ಯಾರು ಸಹ ಇಲ್ಲ ಎಂದಿಲ್ಲ.

ಕೋಷ್ಠಕ 4
10% ನ್ಯಾಯಬೆಲೆ ಅಂಗಡಿಯ ಮಾಲೀಕರ ಪ್ರಕಾರ 15 ದಿನಗಳಿಗೊಮ್ಮೆ ಮೇಲ್ವಿಚಾರಕರು ಭೇಟಿ ನೀಡುತ್ತಾರೆ ಎಂದಿದ್ದಾರೆ 70% ನ್ಯಾಯಬೆಲೆ ಅಂಗಡಿಯ ಮಾಲೀಕರ ಪ್ರಕಾರ ತಿಂಗಳಿಗೊಮ್ಮೆ ಮೇಲ್ವಿಚಾರಕರು ಭೇಟಿ ನೀಡುತ್ತಾರೆ ಎಂದಿದ್ದಾರೆ. 20% ನ್ಯಾಯಬೆಲೆ ಅಂಗಡಿಯ ಮಾಲೀಕರ ಪ್ರಕಾರ 3 ತಿಂಗಳಿಗೊಮ್ಮೆ ಮೇಲ್ವಿಚಾರಕರು ಭೇಟಿ ನೀಡುತ್ತಾರೆ ಎಂದು ತಿಳಿಸಿದ್ದಾರೆ.

ಕೋಷ್ಠಕ 5
100% ನ್ಯಾಯಬೆಲೆ ಅಂಗಡಿಯ ಮಾಲೀಕರು ತಮ್ಮ ವೃತ್ತಿಯ ಬಗ್ಗೆ ತಮಗೆ ತೃಪ್ತಿ ಇದೆ ಎಂದು ತಿಳಿಸಿದ್ದಾರೆ ಯಾರು ಕೂಡ ಇಲ್ಲ ಎಂದು ತಿಳಿಸಿಲ್ಲ.

ಅಧ್ಯಾಯ -5 ಸಂಶೋಧನೆಯ ವಿಶ್ಲೇಷಣೆ
ಸಮಗ್ರ ಸಂಶೋಧನೆಯ ಸಾರಾಂಶವನ್ನು ಈ ಕೆಳಕಂಡಂತೆ ವಿವರಿಸಲಾಗಿದೆ. ಪಡಿತರ ಚೀಟಿಯು ಅಮೂಲ್ಯ ಅಗತ್ಯತೆಯಲ್ಲಿ ಒಂದಾಗಿದೆ. ಆಹಾರದ ಅಗತ್ಯಗಳನ್ನು ಸರ್ಕಾರದ ವತಿಯಿಂದ ಸರ್ಕಾರವೇ ನ್ಯಾಯಬೆಲೆ ಅಂಗಡಿಯ ಮುಖಾಂತರ ವಿತರಿಸುತ್ತಿದೆ.
ಅಭಿವೃದ್ದಿಶೀಲ ರಾಷ್ಟ್ರಗಳಲ್ಲಿ ಒಂದಾಗಿರುವ ಭಾರತವು ಫಲಾನುಭವಿಗಳಿಗೆ ಆಹಾರಧಾನ್ಯಗಳ ನ್ಯಾಯಬೆಲೆ ಅಂಗಡಿಗಳಲ್ಲಿ ನೀಡುತ್ತಿರುವುದು ಪ್ರಶಂಸನೀಯವಾಗಿದೆ. ಆದರೆ ದುರದೃಷ್ಟವಶಾತ್ ಅದು ತಲುಪಬೇಕಾಗಿರುವವರಿಗೆ ತಲುಪುತ್ತಿಲ್ಲ ಚಿಕ್ಕನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಅಧ್ಯಯನ ಮಾಡಿದಾಗ ತಿಳಿದು ಬಂದ ಅಂಶಗಳೆಂದರೆ, 93% ಪಡಿತರ ಚೀಟಿಗಳು ಪುರುಷರ ಹೆಸರಿನಲ್ಲಿವೆ 53% ಪಡಿತರ ಚೀಟಿಗಳು 30 ರಿಂದ 40 ವರ್ಷ ವಯಸ್ಸುಳ್ಳವವರ ಹೆಸರಿನಲ್ಲಿವೆ 37% ಫಲಾನುಭವಿಗಳು ಮಾಧ್ಯಮಿಕ ಶಿಕ್ಷಣವನ್ನು ಮುಗಿಸಿದರೆ 33% ಫಲಾನುಭವಿಗಳು ಅನಕ್ಷರಸ್ಥರಾಗಿದ್ದಾರೆ 60% ಫಲಾನುಭವಿಗಳು ಬಿ.ಪಿ.ಎಲ್. ಕಾರ್ಡನ್ನು ಹೊಂದಿದ್ದಾರೆ. ಆಹಾರ ಸಾಮಗ್ರಿಗಳ ಬಗ್ಗೆ ಮಾಹಿತಿ ಗೊತ್ತಿದೆ ಎಂದು 60% ಫಲಾನುಭವಿಗಳು ತಿಳಿಸಿದರೆ ಉಳಿದವರು ಇಲ್ಲ ಎಂದಿದ್ದಾರೆ. 63% ಫಲಾನುಭವಿಗಳು ಮಾತ್ರ ನ್ಯಾಯಬೆಲೆ ಅಂಗಡಿಯ ನಡುವೆ ಉತ್ತಮ ಸಂಬಂಧವಿದೆ ಎಂದು ತಿಳಿಸಿದ್ದಾರೆ. ನ್ಯಾಯಬೆಲೆ ಅಂಗಡಿಯ ಮಾಲೀಕರು ಫಲಾನುಭವಿಗಳಿಗೆ ಮೋಸ ಮಾಡಿದ್ದರೆ 55% ಫಲಾನುಭವಿಗಳು ಸ್ಥಳೀಯ ಮುಖಂಡರುಗಳಿಗೆ ದೂರು ನೀಡುತ್ತೇವೆ ಎಂದು ತಿಳಿಸಿದ್ದಾರೆ. 58% ಫಲಾನುಭವಿಗಳು ತಿಳಿಸಿರುವಂತೆ ವಾರದಲ್ಲಿ 3 ದಿನ ನ್ಯಾಯಬೆಲೆ ಅಂಗಡಿಯ ತೆಗೆದಿರುತ್ತದೆ ಎಂದು ತಿಳಿಸಿದ್ದಾರೆ. 83% ಫಲಾನುಭವಿಗಳು ತಿಳಿಸಿರುವಂತೆ ನ್ಯಾಯಬೆಲೆ ಅಂಗಡಿಯಿಂದ ದೊರೆಯುವ ಆಹಾರ ಪದಾರ್ಥಗಳಿಂದ ಆಹಾರ ಭದ್ರತೆಯನ್ನು ನೀಗಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ 45% ಫಲಾನುಭವಿಗಳು ವ್ಯವಸಾಯವನ್ನು ಮಾಡುತ್ತಿದ್ದಾರೆ. ಉಳಿದವರು ಹೈನುಗಾರಿಕೆ ಹಾಗೂ ಸರ್ಕಾರಿ ಮತ್ತು ಸರ್ಕಾರೇತರ ಕೆಲಸಗಳನ್ನು ಮಾಡುತ್ತಿದ್ದಾರೆ.
ನ್ಯಾಯಬೆಲೆ ಅಂಗಡಿಯ ಮಾಲೀಕರು ತಿಳಿಸಿರುವಂತೆ ಗ್ರಾಮಪಂಚಾಯಿತಿ ಮತ್ತು ಸ್ಥಳೀಯ ಸಾರ್ವಜನಿಕ ಪಡಿತರ ವ್ಯವಸ್ಥೆ ನಡುವೆ ಉತ್ತಮ ಸಂಬಂಧವಿದೆ ಎಂದಿದ್ದಾರೆ ಚಿಕ್ಕನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲೂ ಆಹಾರ ಜಾಗೃತ ಸಮಿತಿಯನ್ನು ಮತ್ತು ನಾಗರೀಕ ಸನ್ನದು ಇವುಗಳನ್ನು ಹೊಂದಿದ್ದಾರೆ. ತಿಂಗಳಿಗೊಮ್ಮೆ ಮೇಲ್ವಿಚಾರಕರು ಭೇಟಿ ನೀಡುತ್ತಾರೆ ಎಂದು 70% ನ್ಯಾಯಬೆಲೆ ಅಂಗಡಿಯ ಮಾಲೀಕರು ತಿಳಿಸಿದ್ದಾರೆ ಚಿಕ್ಕನಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ನ್ಯಾಯಬೆಲೆ ಅಂಗಡಿಯ ಮಾಲೀಕರು ತಮ್ಮ ವೃತ್ತಿಯ ಬಗ್ಗೆ ತಮಗೆ ತೃಪ್ತಿ ಇದೆ ಎಂದು ತಿಳಿಸಿದ್ದಾರೆ. ತಮ್ಮನ್ನು ಸರ್ಕಾರಿ ಕೆಲಸದವರನ್ನಾಗಿ ನೇಮಕ ಮಾಡಿಕೊಂಡು ವೇತನ ನೀಡಬೇಕು, ಇಲ್ಲವಾದ್ದಲ್ಲಿ ಆರ್ಥಿಕವಾಗಿ ಕೊಡುತ್ತಿರುವ ಸಹಾಯಧನವನ್ನು ಹೆಚ್ಚು ಮಾಡಬೇಕು ಎಂದು ತಿಳಿಸಿದ್ದಾರೆ. ಆದರೆ ಪ್ರಸ್ತುತವಾಗಿ ಕೆಲವು ನ್ಯಾಯಬೆಲೆ ಅಂಗಡಿಯ ಮಾಲೀಕರು ಸರ್ಕಾರಕ್ಕೆ ಮತ್ತು ಫಲಾನುಭವಿಗಳಿಗೆ ಮೋಸಮಾಡುತ್ತಿರುವುದು ಕಂಡು ಬರುತ್ತಿದೆ.

ಅಧ್ಯಾಯ-6 ಸಲಹೆಗಳು
ಪ್ರಸ್ತುತ ಸಂಶೋಧಕನು ಕೈಗೊಂಡಂತಹ ಫಲಿತಾಂಶವನ್ನು ನೋಡಿದರೆ ನಂತರ ಇದಕ್ಕೆ ಕೆಲವೊಂದು ಸಲಹೆಗಳನ್ನು ಸಹ ನೀಡಿದ್ದಾನೆ. ಅವುಗಳೆಂದರೆ ಈ ಕೆಳಕಂಡಂತಿವೆ.
1.ಆಹಾರ ಪದಾರ್ಥಗಳು ನ್ಯಾಯಬೆಲೆ ಅಂಗಡಿಯಲ್ಲಿ ತಿಂಗಳಿನ ಎಲ್ಲಾ ದಿನದಲ್ಲಿ ದೊರೆಯುವ ರೀತಿಯಲ್ಲಿ ಫಲಾನುಭವಿಗಳಿಗೆ ತಿಳಿಸುವಂತೆ ಮಾಡುವುದು.
2.ಆಹಾರ ಪದಾರ್ಥಗಳು ವಿತರಣೆ ಸಮಯದಲ್ಲಿ ಮೋಸವಾದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕೂಡಲೆ ದೂರು ದಾಖಲಿಸುವಂತೆ ಫಲಾನುಭವಿಗಳಿಗೆ ತಿಳಿಸಿಕೊಡಬೇಕು.
3.ಈ ಒಂದು ವ್ಯವಸ್ಥೆಯ ಮೂಲಕ ಇತ್ತೀಚಿನ ಪರಿಸ್ಥಿತಿಗೆ ಅನ್ವಯ ಇನ್ನೂ ಹೆಚ್ಚಿನ ರೀತಿ ಆಹಾರ ಪದಾರ್ಥಗಳನ್ನು ವಿತರಣೆ ಮಾಡಲು ಸರ್ಕಾರ ಯೋಜಿಸಬೇಕಾಗಿದೆ.
4.ಪ್ರತಿ ನ್ಯಾಯಬೆಲೆ ಅಂಗಡಿಯಲ್ಲಿ ವಿವಿಧ ರೀತಿಯ ಕಾರ್ಡ್ ಹಂಚಿಕೆಯಾಗಿರುವಂತೆ ಅವರಿಗೆ ಆಯಾ ಕಾರ್ಡ್ಗೆ ದೊರೆಯಬೇಕಾದ ಆಹಾರ ಪದಾರ್ಥಗಳ ಬಗ್ಗೆ ಪೂರ್ಣವಾಗಿ ತಿಳಿಸಿಕೊಡಲಿ.
5.ಸಾರ್ವಜನಿಕ ನ್ಯಾಯಬೆಲೆ ಅಂಗಡಿಯೂ ಸರಿಯಾಗಿ ಕಾರ್ಯನಿರ್ವಹಿಸಬೇಕಾದರೆ ಅದರಲ್ಲಿ ಬರುವ ಸಮಿತಿಗಳ ರಚನೆ ಕಡ್ಡಾಯವಾಗಿರಬೇಕಾಗುತ್ತದೆ.
6.ಸರ್ಕಾರ ಪಡಿತರ ಚೀಟಿ ಹಂಚಿಕೆಯ ವಿಷಯದಲ್ಲಿ ಸರ್ಕಾರದ ಮಾನದಂಡಗಳನ್ನು ಅನುಕರಣೆ ಮಾಡುವಂತೆ ತಿಳಿಸಬೇಕು.
7.ಒಂದು ಮನೆಗೆ ಒಂದೇ ಪಡಿತರ ಚೀಟಿ ಇರುವಂತೆ ನೋಡಿಕೊಳ್ಳಲು ಇತ್ತೀಚೆಗೆ ರಾಜ್ಯದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯು ಪಡಿತರ ಚೀಟಿದಾರರಿಂದ ವಿದ್ಯುತ್ಚ್ಛಕ್ತಿ ಬಿಲ್ಲುಗಳನ್ನು ಪಡೆಯುವುದು.
8.ನ್ಯಾಯಬೆಲೆ ಅಂಗಡಿಯಲ್ಲಿ ಆಹಾರ ಪದಾರ್ಥಗಳು ವಿತರಣೆ ಸಮಯದಲ್ಲಿ ತೂಕದಲ್ಲಿ ಮೋಸವಾಗುವುದನ್ನು ತಡೆಗಟ್ಟಲು ಎಲೆಕ್ಟ್ರಾನಿಕ್ ತೂಕದ ಯಂತ್ರವನ್ನು ಅಳವಡಿಸಬಹುದು.
9.ಅಗತ್ಯ ಆಹಾರ ಸಾಮಗ್ರಿಗಳು ಅನರ್ಹರ ಪಾಲಾಗುವುದನ್ನು ತಪ್ಪಿಸಲು ಮುಂದಾಗಿರುವ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಬಯೋಮೆಟ್ಟಿಕ್ ಆಧಾರಿತ ಪಡಿತರ ವಿತರಣಾ ವ್ಯವಸ್ಥೆಯನ್ನು ಜಾರಿಗೊಳಿಸಬೇಕು.
10.ನ್ಯಾಯಬೆಲೆ ಅಂಗಡಿಯ ಮಾಲೀಕರಿಗೆ ಸರ್ಕಾರ ನೀಡುವ ಆರ್ಥಿಕ ಸಹಾಯ ಹೆಚ್ಚಿಸಬೇಕು.
11.ನ್ಯಾಯಬೆಲೆ ಅಂಗಡಿಗೆ ದಾಸ್ತಾನುದಿಂದ ಆಹಾರ ಪದಾರ್ಥಗಳನ್ನು ಸರಬರಾಜು ಮಾಡುವಾಗ ಅಧಿಕಾರಿಗಳ ವೀಕ್ಷಣೆ ಮಾಡಬೇಕು.

ಉಪ ಸಂಹಾರ
ಸಂಶೋಧಕರು ಬೆಂಗಳೂರು ಜಿಲ್ಲೆ ಬೆಂಗಳೂರು ದಕ್ಷಿಣ ತಾಲ್ಲೂಕು ತಾವರೆಕೆರೆ (ಹೋ) ಚಿಕ್ಕನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ 10 ನ್ಯಾಯಬೆಲೆ ಅಂಗಡಿಗಳ ಕುರಿತು ಕಿರು ಸಂಶೋಧನೆ ಕೈಗೊಂಡಿದ್ದು, ಅಲ್ಲಿ ನ್ಯಾಯಬೆಲೆ ಅಂಗಡಿ ಮಾಲೀಕರು ಸಕ್ರೀಯವಾಗಿ ಮಾಹಿತಿ ನೀಡುವುದರಲ್ಲಿ ಭಾಗವಹಿಸುತ್ತಾರೆ ಎಂದು ತಿಳಿಯಲಾಗಿತ್ತು.  ಫಲಾನುಭವಿಗಳು ಸರ್ಕಾರದಿಂದ ದೊರೆಯುವ ಅನೇಕ ಯೋಜನೆಗಳ ಕುರಿತು ಜ್ಞಾನವನ್ನು ಹೊಂದಿರದ ಕಾರಣ ಪ್ರತಿ ಹಂತದಲ್ಲೂ ತಮಗೆ ಅರಿವಿಲ್ಲದಂತೆಯೇ ಶೋಷಣೆಗೆ ಒಳಪಡುತ್ತಿದ್ದರೆ, ಫಲಾನುಭವಿಗಳು ತಮಗೆ ಆಗುವ ನ್ಯಾಯವನ್ನು ಎದುರಿಸುವ ಪ್ರಯತ್ನಕ್ಕೆ ಮುಂದಾದರೆ ಅವರನ್ನು ಮಾಲೀಕರು ಆರ್ಥಿಕ ಬಲ ರಾಜಕೀಯ ಬಲ ಇತರೆ ಪ್ರಭಾವವನ್ನು ಬೀರಿ ಫಲಾನುಭವಿಗಳನ್ನು ಮಟ್ಟ ಹಾಕುವುದು ಸಾಮಾನ್ಯವಾಗಿರುವುದು ಕಂಡು ಬಂದಿದೆ.
ನ್ಯಾಯಬೆಲೆ ಅಂಗಡಿ ಸಕ್ರೀಯವಾಗಿ ಕಾರ್ಯನಿರ್ವಹಿಸದೆ ಇರಲು ಕೇವಲ ಸ್ಥಳೀಯ ಮಟ್ಟದ ಅಧಿಕಾರಿಗಳಿಂದ ಅಲ್ಲದೆ ಸಂಬಂಧಪಟ್ಟ ಮೇಲಾಧಿಕಾರಿಗಳು ತಿಳಿದು ತಿಳಿಯದವರಂತೆ ವರ್ತಿಸುತ್ತಿರುವುದು ಒಂದು ಮುಖ್ಯ ಕಾರಣವಾಗಿದೆ.
ಸರ್ಕಾರದ ಯೋಜನೆಯಾದ ಸಾರ್ವಜನಿಕ ವಿತರಣೆ ವ್ಯವಸ್ಥೆ ಹಾಗೂ ಅದರ ಫಲಾನುಭವಿಗಳ ನಡುವೆ ಸಂಪರ್ಕದ ಕೊರತೆಯಿದ್ದು ಜನರಿಗೆ ಲಭಿಸುತ್ತಿರುವ ಸೇವೆಗಳನ್ನು ಪಡೆಯುವಲ್ಲಿ ಗೊಂದಲಗಳನ್ನು ಎದುರಿಸುತ್ತಿರುವುದು ಮನಗಣಲಾಯಿತ್ತು. ಸರ್ಕಾರಿ ಅಥವಾ ಸರ್ಕಾರೇತರ ಸಂಸ್ಥೆಗಳು ಜನಸಾಮಾನ್ಯರಿಗೆ ಸಾರ್ವಜನಿಕ ವಿತರಣೆ ವ್ಯವಸ್ಥೆಯ ಮಾನದಂಡಗಳನ್ನು ಜನರಿಗೆ ತಿಳಿಸಿ ಅವರನ್ನು ಈ ವಿಚಾರವಾಗಿ ಸುಶಿಕ್ಷಿತರನ್ನಾಗಿ ಸಾರ್ವಜನಿಕ ವಿತರಣಾ ವ್ಯವಸ್ಥೆಯಿಂದ ತಮಗೆ ದೊರೆಯಬೇಕಾದ ಸೇವೆಗಳನ್ನು ತಾವೇ ಪಡೆದುಕೊಳ್ಳುವಂತೆ ಪ್ರೇರೆಪಿಸಲು ಅಗತ್ಯತೆ ಇರುವುದಾಗಿ ಅಭಿಪ್ರಾಯ ವ್ಯಕ್ತಪಡಿಸಬಹುದು.

ಪರಾಮರ್ಶಿತ ಗ್ರಂಥಗಳು
1.ರಾಧಾಕೃಷ್ಣ ಆರ್. ಮತ್ತು ಸುಬ್ಬರಾವ್, ಸಾರ್ವಜನಿಕ ವಿತರಣೆ ವ್ಯವಸ್ಥೆ, ಪ್ರಕಾಶನ ವಿಶ್ವಬ್ಯಾಂಕ್ ಪಬ್ಲಿಕೇಷನ್ -1997.
2.ಉದಯ್ಕುಮಾರ ಸಿಂಗ್, ಸಾರ್ವಜನಿಕ ವಿತರಣೆ ವ್ಯವಸ್ಥೆ, ಮಿತ್ತಲ್ ಪಬ್ಲಿಕೇಷನ್ 1991
3.ಜಿನ್ ಡ್ರೆಜ್ ಮತ್ತು ಅಮೃತ್ಸೇನ್, ಭಾರತ ಅಭಿವೃದ್ಧಿ ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಮುದ್ರಣ 1997
4.ಶಿವಕುಮಾರಸ್ವಾಮಿ, ಯೋಜನಾ ನಿಯತಕಾಲಿಕೆ -2012.
5.ರಾಮಮೂರ್ತಿ ಕೆ.ವಿ.ಸಿವಿಕ್, ಸಾರ್ವಜನಿಕ ಪಡಿತರ ವ್ಯವಸ್ಥೆ ಒಂದು ಸರಳ ಮಾಹಿತಿ ಕೈಪಿಡಿ-2010.
6.ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಕರ್ನಾಟಕ ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣಾಪದ್ಧತಿ-1992.

ಪ್ರಶ್ನಾವಳಿ: ಸಮುದಾಯಕ್ಕೆ ಕೇಳುವ ಪ್ರಶ್ನೆಗಳು
1.ಹೆಸರು
2.ಲಿಂಗ
 ಅ. ಗಂಡು. ಆ. ಹೆಣ್ಣು.
3. ವಯಸ್ಸು:
ಅ)20 ರಿಂದ 30 ಆ)30 ರಿಂದ 40 ಇ)40 ರಿಂದ 60 ಈ)60 ರಿಂದ ಮೇಲ್ಪಟ್ಟು
4. ಶಿಕ್ಷಣ:
ಅ. ಪ್ರಾಥಮಿಕ  ಆ. ಮಾಧ್ಯಮಿಕ  ಇ. ಪದವಿಪೂರ್ವ ಮತ್ತು ಪದವಿ  ಈ. ಅನಕ್ಷರಸ್ಥರು
5. ನಿಮ್ಮ ಕುಟುಂಬ ಯಾವ ಕಾರ್ಡ್ ಹೊಂದಿದೆ?
ಅ. ಎ.ಪಿ.ಎಲ್  ಆ. ಅಂತ್ಯೋದಯ  ಇ. ಬಿ.ಪಿ.ಎಲ್  ಈ. ಅನ್ನಪೂರ್ಣ  ಉ. ಯಾವುದೇ ಕಾರ್ಡನ್ನು ಹೊಂದಿಲ್ಲ.
6. ನಿಮಗೆ ತಿಂಗಳಿಗೆ ಎಷ್ಟು ಕೆ.ಜಿ. ಆಹಾರ ಸಾಮಗ್ರಿ ಸಿಗುತ್ತಿದೆ? ಅದಕ್ಕೆ ನೀವು ಕೊಡುತ್ತಿರುವ ಬೆಲೆ ಎಷ್ಟು?
 ಕ್ರ ಸಂಆಹಾರ ಸಾಮಗ್ರಿಗಳೂಕೆ.ಜಿ ಗಳಲ್ಲಿಬೆಲೆಗಳಲ್ಲಿ 
1ಅಕ್ಕಿ   2ಗೋಧಿ   3ಸಕ್ಕರೆ   4ಸೀಮೆ ಎಣ್ಣೆ   5ಬೆಳೆ   6ಸೋಪು
7. ಸರ್ಕಾರದಿಂದ ನಿಮಗೆ ಎಷ್ಟು ಆಹಾರ ಸಾಮಗ್ರಿ ಸಿಗಬೇಕು ಎಂಬ ಮಾಹಿತಿ ಇದೆಯೇ?
ಅ. ಹೌದು  ಆ. ಇಲ್ಲ
8. ಸ್ಥಳೀಯ ನ್ಯಾಯಬೆಲೆ ಅಂಗಡಿ ಮತ್ತು ನಿಮ್ಮ ಮಧ್ಯೆ ಇರುವ ಸಂಬಂಧವೇನು?
ಅ. ಅತ್ಯುತ್ತಮ  ಆ. ಸಾಧಾರಣ  ಇ. ಉತ್ತಮ  ಈ. ಕೆಳಮಟ್ಟದ
9. ನೀವು ಯಾವ ಸಮಯದಲ್ಲಿ ನ್ಯಾಯಬೆಲೆ ಅಂಗಡಿಗೆ ಹೋಗುತ್ತೀರಿ?
ಅ. ಬೆಳಿಗ್ಗೆ  ಆ. ಮಧ್ಯಾಹ್ನ  ಇ. ಸಂಜೆ  ಈ. ರಾತ್ರಿ
10. ಆಹಾರ ವಿತರಣಾ ಸಮಯದಲ್ಲಿ ನಿಮಗೆ ಮೋಸವಾದರೆ ಯಾರಿಗೆ ದೂರು ನೀಡುತೀರಾ?
ಅ. ಪಂಚಾಯಿತಿ ಸದಸ್ಯರು  ಆ. ಆಹಾರ ಸರಬರಾಜು ಇಲಾಖೆ ಅಧಿಕಾರಿಗಳು ಇ. ಸ್ಥಳೀಯ ಮುಖಂಡರು  ಈ. ಯಾರಿಗೂ ಇಲ್ಲ.
11. ನ್ಯಾಯಬೆಲೆ ಅಂಗಡಿಯು ವಾರದಲ್ಲಿ ಎಷ್ಟು ದಿನ ತೆಗೆದಿರುತ್ತದೆ?
ಅ. ಪ್ರತಿದಿನವೂ  ಆ. 3 ದಿನಗಳು  ಇ. 4 ದಿನಗಳು  ಈ. ಯಾರಿಗೂ ಇಲ್ಲ ಉ. 6 ದಿನಗಳು  ಊ. 1 ತಿಂಗಳಿಗೆ ಅಥವಾ 2 ದಿನ ಮಾತ್ರ
12. ನ್ಯಾಯಬೆಲೆ ಅಂಗಡಿ ಉತ್ತಮವಾಗಿ ಕಾರ್ಯನಿರ್ವಹಿಸಲು ನಿಮ್ಮ ಸಲಹೆಗಳೇನು?
13. ನ್ಯಾಯಬೆಲೆ ಅಂಗಡಿಯಲ್ಲಿ ನಿಗಧಿತ ವೇಳೆಯಲ್ಲಿ ಆಹಾರ ಪದಾರ್ಥಗಳು ವಿತರಣೆಯಾಗದಿದ್ದಾಗ ನಿಮ್ಮ ಮುಂದಿನ ನಡೆಯೇನು?
14. ನ್ಯಾಯಬೆಲೆ ಅಂಗಡಿಯಿಂದ ಆಹಾರ ಸಾಮಗ್ರಿಗಳ ವಿತರಣೆಯಿಂದ ಆಹಾರ ಭದ್ರತೆಯನ್ನು ನೀಗಿಸಿಕೊಳ್ಳುತೀರಾ?
ಅ. ಹೌದು  ಆ. ಇಲ್ಲ
15. ಯಾವ ವೃತ್ತಿಯನ್ನು ನೀವು ಮಾಡುತ್ತೀರಾ?
ಅ. ವ್ಯವಸಾಯ  ಆ. ಕೂಲಿ.  ಇ. ಹೈನುಗಾರಿಕೆ  ಈ. ಸರ್ಕಾರಿ

ನ್ಯಾಯಬೆಲೆ ಅಂಗಡಿಗೆ ಕೇಳುವ ಪ್ರಶ್ನೆಗಳು
1.ಗ್ರಾಮ ಪಂಚಾಯಿತಿ ಮತ್ತು ಸ್ಥಳೀಯ ಸಾರ್ವಜನಿಕ ಪಡಿತರ ವ್ಯವಸ್ಥೆಯ ನಡುವೆ ಎಂತಹ ಸಂಬಂಧವಿದೆ?
ಅ. ಅತ್ಯುತ್ತಮ  ಆ. ಉತ್ತಮ  ಇ. ಸಾಧಾರಣ  ಈ. ಕೆಳಮಟ್ಟದ
2. ಆಹಾರ ಜಾಗೃತ ಖಾತ್ರಿ ಸಮಿತಿ ಇದೆಯೇ?
ಅ. ಹೌದು  ಆ. ಇಲ್ಲ
3. ನಿಮ್ಮ ನ್ಯಾಯಬೆಲೆ ಅಂಗಡಿ ವ್ಯಾಪ್ತಿಗೆ ಬರುವ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಸಂಖ್ಯೆ ಎಷ್ಟು?
4. ನಿಮ್ಮ ನ್ಯಾಯಬೆಲೆ ಅಂಗಡಿಗೆ ಸರ್ಕಾರದಿಂದ ತಿಂಗಳಿಗೆ ಎಷ್ಟು ದಾಸ್ತಾನು ಬರುತ್ತಿದೆ?
5. ನಿಮ್ಮ ನ್ಯಾಯಬೆಲೆ ಅಂಗಡಿಯಲ್ಲಿ ನಾಗರೀಕ ಸನ್ನದು ಇದೆಯೇ?
ಅ. ಹೌದು  ಆ. ಇಲ್ಲ
6. ಅಂತ್ಯೋದಯ ಪಡಿತರ ಚೀಟಿ ಹೊಂದಿರುವ ಕುಟುಂಬಕ್ಕೆ ನೀವು ತಿಂಗಳಿಗೆ ಎಷ್ಟು ಅಕ್ಕಿ, ಗೋಧಿ, ಸೀಮೆಎಣ್ಣೆ ಮತ್ತು ಸಕ್ಕರೆ ನೀಡುತ್ತೀರಾ? ಎಷ್ಟು ದರದಲ್ಲಿ?
 ಕ್ರ ಸಂಆಹಾರ ಸಾಮಗ್ರಿಗಳೂಕೆ.ಜಿ ಗಳಲ್ಲಿಬೆಲೆಗಳಲ್ಲಿ 
1ಅಕ್ಕಿ   2ಗೋಧಿ   3ಸಕ್ಕರೆ   4ಸೀಮೆ ಎಣ್ಣೆ   5ಬೆಳೆ   6ಸೋಪು
7. 5 ಜನ ಇರುವ ಎ.ಪಿ.ಎಲ್. ಕುಟುಂಬಕ್ಕೆ ನೀವು ತಿಂಗಳಿಗೆ ಎಷ್ಟು ಅಕ್ಕಿ, ಗೋಧಿ, ಸೀಮೆಎಣ್ಣೆ ಮತ್ತು ಸಕ್ಕರೆ ನೀಡುತ್ತೀರಾ? ಅದಕ್ಕೆ ಎಷ್ಟು ದರಗಳಲ್ಲಿ?
 ಕ್ರ ಸಂಆಹಾರ ಸಾಮಗ್ರಿಗಳೂಕೆ.ಜಿ ಗಳಲ್ಲಿಬೆಲೆಗಳಲ್ಲಿ 
1ಅಕ್ಕಿ   2ಗೋಧಿ   3ಸಕ್ಕರೆ   4ಸೀಮೆ ಎಣ್ಣೆ   5ಬೆಳೆ   6ಸೋಪು
8. 5 ಜನ ಇರುವ ಬಿ.ಪಿ.ಎಲ್ ಕುಟುಂಬಕ್ಕೆ ನೀವು ತಿಂಗಳಿಗೆ ಎಷ್ಟು ಗೋಧಿ, ಸೀಮೆಎಣ್ಣೆ ಮತ್ತು ಸಕ್ಕರೆ ನೀಡುತ್ತೀರಾ? ಎಷ್ಟು ದರದಲ್ಲಿ?
 ಕ್ರ ಸಂಆಹಾರ ಸಾಮಗ್ರಿಗಳೂಕೆ.ಜಿ ಗಳಲ್ಲಿಬೆಲೆಗಳಲ್ಲಿ 
1ಅಕ್ಕಿ   2ಗೋಧಿ   3ಸಕ್ಕರೆ   4ಸೀಮೆ ಎಣ್ಣೆ   5ಬೆಳೆ   6ಸೋಪು
9. ನ್ಯಾಯಬೆಲೆ ಅಂಗಡಿಯು ಎಷ್ಟು ಸಮಯದಿಂದ ಎಷ್ಟು ಸಮಯದವರೆಗೆ ಕಾರ್ಯನಿರ್ವಹಿಸುತ್ತದೆ?
10. ನಿಮಗೆ ಸರ್ಕಾರದಿಂದ ಯಾವ ರೀತಿ ಆರ್ಥಿಕ ಸಹಾಯ ಸಿಗುತ್ತದೆ?
11. ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆ ಉತ್ತಮವಾಗಿ ಕಾರ್ಯನಿರ್ವಹಿಸಲು ನಿಮ್ಮ ಸಲಹೆಗಳೇನು?
12. ನಿಮ್ಮ ನ್ಯಾಯಬೆಲೆ ಅಂಗಡಿಗೆ ಮೇಲ್ವಿಚಾರಕರು ಎಷ್ಟು ದಿನಗಳಿಗೊಮ್ಮೆ ಭೇಟಿ ನೀಡುತ್ತಾರೆ?
ಅ. 15 ದಿನಗಳಿಗೊಮ್ಮೆ  ಆ. ತಿಂಗಳಿಗೊಮ್ಮೆ  ಇ. 3 ತಿಂಗಳಿಗೊಮ್ಮೆ  ಈ. 6 ತಿಂಗಳಿಗೊಮ್ಮೆ
13. ನಿಮ್ಮ ವೃತ್ತಿಯ ಬಗ್ಗೆ ನಿಮಗೆ ತೃಪ್ತಿ ಇದಯೇ?
ಅ. ಹೌದು  ಇ. ಇಲ್ಲ
 

No comments:

Post a Comment