ಮರೆಯಲಾಗದ ದೃಷ್ಯ


ನಾವು ಕ್ರಿಕೇಟ್ ಆಡೋದಿಕ್ಕಾಗಿ ಎರಡು ಗುಂಪುಗಳನ್ನ ಮಾಡಿಕೊಂಡು ಮೈದಾನಕ್ಕೆ ಹೋದೆವೂ. ನಮ್ಮಲ್ಲೊಬ್ಬ ಟಾಸ್ ಹಾಕಿದ. ನಾವು ಟಾಸ್ ಸೋತು ಬೌಲಿಂಗ್ ಮಾಡಲು ಅಣಿಯಾದೆವು. ಮತ್ತೊಂದು ಗುಂಪು
ಬ್ಯಾಟಿಂಗ್ ಮಾಡಲು ಸಿದ್ಧವಾಯಿತು. ಬೌಲಿಂಗ್ ಮಾಡುತ್ತಿರುವ ತಂಡಕ್ಕೆ ಹೆಚ್.ಎನ್ ನಾಗರಾಜ್ ನಾಯಕ ಹಾಗು ಬ್ಯಾಟಿಂಗ್ ಮಾಡುತ್ತಿರುವ ತಂಡಕ್ಕೆ ಟಿ.ಕೆ ರವಿ ನಾಯಕ.

ಮೊದಲು ಬ್ಯಾಟಿಂಗ್ ಮಾಡಲು ಟಿ.ಕೆ ರವಿ ಬ್ಯಾಟ್ ಹಿಡಿದು ಫೀಲ್ಡಗೆ ಬಂದ. ನಾಗರಾಜ್ ರವಿಗೆ ಗ್ರೇಸ್ ಬಾಲ್ ಹಾಕಿದ. ಬಾಲು ರವಿ ಕಡೆಗೇನೆ ಉರುಲ್ಕೊಂಡು ಸೀದ ಬೋರ್ಡ್ಗೆ ಹೊಡಿತು. ಬೋರ್ಡ್ ಠಳ್ಳುಕ್
ಅಂತು. ರವಿ ಬೀಸಿದ ಬ್ಯಾಟ್ನಿಂದ ವಷ್ ಶಬ್ದ ಹೊರಬಂತು.
ಮೊದಲನೆ ಒವರ್ನ ಮೊದಲೆರಡು ಬಾಲ್ಗಳ್ಗೆ ಬ್ಯಾಟ್ನಿಂದ ಮುತ್ತುಕೊಟ್ಟ ಅಷ್ಟೆ. ನಾವು ಔಟ್ಆಗ್ತಾನೇನೊ ಅಂದುಕೊಂಡಿದ್ರೆ ಅದು ಸುಳ್ಳಾಯಿತು.

ನಾಗರಾಜ ಮೂರನೆ ಬಾಲ್ನ ಹಾಕ್ದ. ಈ ಸಲ ರವಿ ಬಾಲ್ನ ಬೌಂಡ್ರಿ ಕಡೆಗೆ ಹೊಡ್ದ. ನಮ್ಮಲ್ಲಿದ್ದೊಬ್ಬ ಆ ಬಾಲನ್ನ ನಾಗರಾಜನ ಕಡೆಗೆ ಎಸ್ದ.

ನಾಗ ನಾಲ್ಕನೆ ಬಾಲ್ನ ಹಾಕೋಕು ಮುನ್ನ ಒಂದು ಕರಡಿ ಬಂದು, "ನನ್ನನ್ನು ಈ ಆಟಕ್ಕೆ ಸೇರಿಸಿಕೊಳ್ಳಿ" ಎಂದು ನಾಗರಾಜ್ನನ್ನು ಕೇಳಿಕೊಂಡಿತು. ನಾಗ ನಮ್ಮಲ್ಲಿದ್ದೊಬ್ಬನನ್ನ ತೆಗೆದು ಅವನ ಜಾಗಕ್ಕೆ ಕರಡಿಯನ್ನು ನಿಲ್ಲಿಸಿದ. ರವಿ ನಾಗ ಹಾಕಿದ ಬಾಲನ್ನ
ಕರಡಿಯ ಕಡೆಗೆ ಹೊಡ್ದ. ಕರಡಿ ಆ ಬಾಲನ್ನ ನಮಗಿಂತ್ಲು ಚೆನ್ನಾಗಿ ಹಿಡಿದು ನಾಗನ ಜೇಬಿಗೆ ದೂರ್ದಿಂದ್ಲೆ ಹಾಕಿತು.

ಈ ಭಾರಿ ನಾಗ ಐದನೆ ಬಾಲ್ನ ಹಾಕೋಕು ಮೊದ್ಲೆ ಒಂದು ನಾಯಿ ಲೆಗ್ ಹಂಪೈರ್ ನಿಲ್ಲುವ ಜಾಗಕ್ಕೆ ಬಂದು ನಿಂತಿತು. ರವಿ ಬ್ಯಾಟ್ನಿಂದ ನಾಯಿಗೆ ಹೊಡ್ದ. ಆ ನಾಯಿಯೋ ಹೋಗಿ ಅದರ ಸ್ನೇಹಿತರನ್ನು ನಾವಿದ್ದಲ್ಲಿಗೆ ಕರೆತಂತು. "ನಮಗೆ ಬಾಲ್, ಬ್ಯಾಟ್ ಕೊಡಿ; ನಾವು ಆಟ್ವಾಡಿ ಕೊಡ್ತೀವಿ. ಒಂದ್ ವೇಳೆ ನೀವು ಕೊಡ್ದಿದ್ದಲ್ಲಿ" ನಾವು ನಿಮ್ಮನ್ನ ಆಟ್ವಾಡಲು ಬಿಡೋದಿಲ್ಲ." ಅಂತ ಹೇಳಿದವು. ಆಗ ರವಿ ನಾಯಿಗಳನ್ನ ಹೊಡೆಯಲು ಮುಂದಾದಾಗ ಕರಡಿ "ಜೈಲು ಅಧಿಕಾರಿಗಳು ನೀವು ಆಟವಾಡೊ ಕ್ರಿಕೇಟ್ನ ತೋರ್ಸ್ತೀವಿ ಅಂತ ಹೇಳಿ ನಮ್ಮನ್ನ ಇಲ್ಲಿಗೆ ಕರ್ಕೊಂಡ್ಬಂದ್ರು. ನಮಗೆ ಈ ಆಟವನ್ನ ನೋಡಲು ಇಷ್ಟವಾಗೋದ್ರು ಜೊತೆಗೆ ಆಟವಾಡಬೇಕೆಂದೆನಿಸಿತು. ಅದಕ್ಕಾಗಿ ಈ ನಾಯಿ ಬ್ಯಾಟ್, ಬಾಲ್ನ ಕೇಳ್ದ್ರೆ ಬ್ಯಾಟಿನಿಂದ ಹೊಡಿತೀರ?" ಎಂದು ನಾಯಿಗಳಿಗೆ ನಮ್ಮನ್ನು ಕಚ್ಚಲು ಹೇಳಿತು.

ಆಗ ಒಂದೇ ಬಾಲನ್ನು ಉಳಿಸಿ ಶ್ಟಂಪ್, ಬಾಲ್, ಬ್ಯಾಟ್ಗಳೊಂದಿಗೆ ಪ್ರಾಣಿ-ಪಕ್ಷಿಗಳು ಮತ್ತು ಕ್ರಿಕೇಟ್ ಆಡುತ್ತಿದ್ದ ಎರಡು ತಂಡಗಳು ಮೆಜಸ್ಟಿಕ್ನ ಕೆ.ಎಸ್.ಆರ್.ಟಿ.ಸಿ ಯ ಬಸ್ ನಿಲ್ದಾಣದಿಂದ ಮಾಯವಾದವು.
ನಾನೊಂತು ಮಾಯವಾಗಿ ನಾನು ಮಲಗಿದ್ದ ಮಂಚದ ಮೇಲೆ ಬಿದ್ದಿದ್ದೆ.
ನಾವು ಕ್ರಿಕೇಟ್ ಆಡುವಾಗ ಬಂದಿದ್ದ ಕರಡಿ ಮತ್ತು ನಾಯಿಗಳ ದೇಹ ರಚನೆ ಅವುಗಳಂತೆನೆ ಇದ್ದರೂ ಅವುಗಳಾಡುತ್ತಿದ್ದ ಮಾತು ನಮ್ಮಂತೇನೆ ಇತ್ತು.
--
"ಅಂಧರಿಗೆ ಕನಸು ಬೀಳುವುದೇ ಇಲ್ಲ" ಎಂದು ದೃಷ್ಟಿ ಇರುವವರು ಮಾತನಾಡಿಕೊಳ್ಳುವುದನ್ನು ನಾನು ಕೇಳಿದ್ದೇನೆ. ಕೆಲವು ಮಾಧ್ಯಮಗಳಲ್ಲಿಯೂ ಈ ವಿಷಯವಾಗಿ ಕೆಲವರು ಪ್ರಶ್ನೆಗಳನ್ನು ಕೇಳಿದ್ದಿದೆ. ಇಲ್ಲಿ ನನಗೆ ಬಿದ್ದ ಕನಸನ್ನು ಬರೆದಿದ್ದೇನೆ. ಇಂದು ನಾವು ಇತರೆ ಪ್ರಾಣಿ-ಪಕ್ಷಿಗಳನ್ನು ದೂರ ಮಾಡುತ್ತಿದ್ದೇವೆ. ಖಂಡಿತವಾಗಿಯೂ ಇದು ನಮ್ಮ ಕೆಟ್ಟ ವರ್ತನೆಯಾಗಿದೆ.
ಸಮಾಜವೆಂದರೆ ಕೇವಲ ಮಾನವನ ಸಮಾಜವೇನು?
ಪ್ರಾಣಿಗಳೊಂದಿಗೆ ಕೂಡಿ ಬಾಳುವ ಸಮಾಜ ನೈಜ ಸಮಾಜ ಎಂದು ನನ್ನ ಅನಿಸಿಕೆ.*

No comments:

Post a Comment