ಕರ್ನಾಟಕ ರಾಜ್ಯ, ರಾಮನಗರ ಜಿಲ್ಲೆ, ಕನಕಪುರ ತಾಲ್ಲೂಕು, ಉಯ್ಯಂಬಳ್ಳಿ ಹೋಬಳಿ, ಹಾರೋಬಲೆ ಗ್ರಾಮದಲ್ಲಿ ನಿರ್ಮಿಸಿರುವ ಅರ್ಕಾವತಿ ಜಲಾಶಯ ಯೋಜನೆಯ ಬಗ್ಗೆ ಕೈಗೊಂಡಿರುವ ವಿಶೇಷ ಅಧ್ಯಯನ


-ಕಾವ್ಯ, ಸಮಾಜಕಾರ್ಯ ಪ್ರಶಿಕ್ಷಣಾರ್ಥಿನಿ, ಬೆಂಗಳೂರು ವಿಶ್ವವಿದ್ಯಾಲಯ.

ಅದ್ಯಾಯ-೦೧
ಪೀಠೀಕೆ :-
ಅಣೆಕಟ್ಟುಗಳು :-
ಅಣೆಕಟ್ಟುಗಳು ಪೊಲಾಗುತ್ತಿರುವ ನೀರನ್ನು ಒಂದು ಕಡೆ ಸಂಗ್ರಹಿಸುತ್ತದೆ. ಇದರಿಂದ ಕೃಷಿಗೆ ನೀರಾವರಿ ಒದಗಿಸುವುದು. ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೆ ಕುಡಿಯುವ ನೀರಿನ ಪೂರೈಕೆ, ಬೃಹತ್ ಮತ್ತು ಮದ್ಯಮ ಕೈಗಾರಿಕೆಗಳಿಗೆ ನೀರಿನ ಬಳಕೆ ಮುಂತಾದ ವಿವಿದ ಕಾರ್ಯಗಳಿಗೆ ಅಣೆಕಟ್ಟಿನ ನೀರನ್ನು ಉಪಯೋಗಿಸಲಾಗುತ್ತದೆ. ಆದ್ದರಿಂದ ಅಣೆಕಟ್ಟುಗಳನ್ನು ಒಂದು ಸಂಪನ್ಮೂಲವಾಗಿ ಪರಿಗಣಿಸಲಾಗುವುದು. ೧೯೫೫ ರಲ್ಲಿ ಭಾರತದ ಅಂದಿನ ಪ್ರಧಾನಿಯಾಗಿದ್ದ ಜವಾಹರ್‌ಲಾಲ್ ನೆಹರೂ ಅವರು ಅಣೆಕಟ್ಟುಗಳು ಆಧುನಿಕ ಭಾರತದ ದೇವಾಲಯಗಳು ಎಂದು ಕರೆದಿದ್ದರು.
ಅಣೆಕಟ್ಟಿನ ಉದ್ದೇಶವೆಂದರೆ ಇದರಿಂದ ವಿದ್ಯುತ್ ಉತ್ಪಾದನೆ ಮಾಡುತ್ತಾರೆ. ಅಣೆಕಟ್ಟಿನ ನೀರನ್ನು ಕಾಲುವೆಗಳ ಮುಖಾಂತರ ಹರಿಯುವಂತೆ ಮಾಡುವುದು ಮತ್ತು ಬೆಳೆಗೆ ನೀರಾವರಿ ಮತ್ತು ನಗರಕ್ಕೆ ನೀರನ್ನು ಒದಗಿಸುವುದು, ನದಿಗಳಿಂದ ಹರಿಯುವ ನೀರನ್ನು ತಡೆಗಟ್ಟುತ್ತದೆ.
ಅಣೆಕಟ್ಟಿನಿಂದ ಅನುಕೂಲ ಮತ್ತು ಅನಾನುಕೂಲಗಳಿವೆ. ಅನಾನುಕೂಲವೆಂದರೆ ಅಣೆಕಟ್ಟು ನಿರ್ಮಾಣದಲ್ಲಿ ಅಲ್ಲಿನ ಪರಿಸರ ಹಾನಿಯಾಗುತ್ತದೆ. ನದಿಗಳಿಂದ ಹರಿಯುವ ನೀರು ನಿದಾನವಾಗಿ ನೀರಿನಲ್ಲಿ ಇರುವಂತ ಸಾವಯವ ವಸ್ತುಗಳನ್ನು ಮಣ್ಣಿಗೆ ಬರುವ ಹಾಗೆ ತಡೆಗಟ್ಟುತ್ತದೆ. ಸಾವಯವ ವಸ್ತು ಕೆಳಗಿನ ತಳವನ್ನು ಸೇರುತ್ತದೆ. ಅಣೆಕಟ್ಟು ನಿರ್ಮಾಣ ಮಾಡುವ ಸಂದರ್ಭದಲ್ಲಿ ಪ್ರಾಣಿಗಳು ಹಾನಿಗೊಳಗಾಗುತ್ತದೆ. ಏಕೆಂದರೆ ಅರಣ್ಯ ನಾಶವಾಗುತ್ತದೆ.

ಭಾರತದಲ್ಲಿನ ಪ್ರಮುಖ ನೀರಾವರಿ ಯೋಜನೆಗಳು;-
೧)ಬಾಕ್ರಾನಂಗಲ್ - ಸಟ್ಲೇಜ್ ನದಿಗೆ ಬಾಕ್ರಾನಂಗಲ್ ಅಣೆಕಟ್ಟು ಕಟ್ಟಲಾಗಿದೆ.
೨)ದಾಮೋದರ - ದಾಮೋದರ ಎಂಬ ನದಿಗೆ ಈ ಅಣೆಕಟ್ಟು ಕಟ್ಟಲಾಗಿದೆ.
೩)ಕೋಸಿ ಯೋಜನೆ - ಕೋಸಿ ಎಂಬ ನದಿಗೆ ಈ ಅಣೆಕಟ್ಟು ಕಟ್ಟಲಾಗಿದೆ.
೪)ಹಿರಾಕುಡ್ ಯೋಜನೆ - ಇದನ್ನು ಮಹಾನದಿಗೆ ಅಡ್ಡವಾಗಿ ಕಟ್ಟಲಾಗಿದೆ.
೫)ಚಂಬಲ್ ಯೋಜನೆ - ಚಂಬಲ್ ನದಿಗೆ ಅಡ್ಡವಾಗಿ ಕಟ್ಟಲಾಗಿದೆ.
೬)ತುಂಗಾಭದ್ರ ಯೋಜನೆ - ತುಂಗಾಭದ್ರ ನದಿಗೆ ಈ ಅಣೆಕಟ್ಟು ಕಟ್ಟಲಾಗಿದೆ.
೭)ನಾಗಾರ್ಜುನ ಯೋಜನೆ - ಇದನ್ನು ಕೃಷ್ಣ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ.
೮)ಬಾರ್ಗಿ ಯೋಜನೆ - ಇದನ್ನು ಬೀಸ್ ನದಿಗೆ ಕಟ್ಟಲಾಗಿದೆ.
೯)ಬೀಚ್ ಯೋಜನೆ - ಇದನ್ನು ಬೀಸ್ ನದಿಗೆ ಕಟ್ಟಲಾಗಿದೆ.
೧೦) ಇಡಕ್ಕಿ ಯೋಜನೆ - ಪೆರಿಯಾಕ್ ಎಂಬ ನದಿಗೆ ಕಟ್ಟಲಾಗಿದೆ.
೧೧) ಆಲಮಟ್ಟಿ ಯೊಜನೆ - ಕೃಷ್ಣಾನದಿಗೆ ಅಡ್ಡಲಾಗಿ ಅಣೆಕಟ್ಟು ಕಟ್ಟಲಾಗಿದೆ.
೧೨) ಮೆಟ್ಟೂರು ಯೋಜನೆ - ಕಾವೇರಿ ನದಿಗೆ ಈ ಅಣೆಕಟ್ಟು ಕಟ್ಟಲಾಗಿದೆ.
೧೩) ಕೋಯ್ನ ಯೋಜನೆ - ಕೋಯ್ನ ನದಿಗೆ ಈ ಅಣೆಕಟ್ಟನ್ನು ಕಟ್ಟಲಾಗಿದೆ.
೧೪) ಘಂಡಕಿ ಯೋಜನೆ - ಘಂಡಕಿ ನದಿಗೆ ಈ ಅಣೆಕಟ್ಟನ್ನು ಕಟ್ಟಲಾಗಿದೆ.
೧೫) ರಿಹಾಂದ ಯೋಜನೆ - ರಿಹಾಂದ ನದಿಗೆ ಅಡ್ಡಲಾಗಿ ಅಣೆಕಟ್ಟನ್ನು ಕಟ್ಟಲಾಗಿದೆ.

ಕರ್ನಾಟಕ ಪ್ರಮುಖ ನೀರಾವರಿ ಯೋಜನಗೆಳು :-
ಭಾರತದಲ್ಲಿ ನೀರಾವರಿ ಯೋಜನೆಗಳು ಇರುವಂತೆ ಕರ್ನಾಟಕದಲ್ಲಿಯು ಕೆಲವು ನೀರಾವರಿ ಯೋಜನೆಗಳನ್ನು ಕಾಣಬಹುದು. ಈ ಕೆಳಕಂಡಂತೆ ಅವುಗಳನ್ನು ಕಾಣಬಹುದು.
೧)ಕೃಷ್ಣರಾಜ ಸಾಗರ :- ಈ ಜಲಾಶಯವನ್ನು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕನ್ನಂಬಾಡಿ ಬಳಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಈ ಜಲಾಶಯ ಮಂಡ್ಯ ಮತ್ತು ಮೈಸೂರು ಜಿಲ್ಲೆಯ ಸುಮಾರು ೧.೯೫ ಲಕ್ಷ ಹೆಕ್ಟೆರ್ ಭೂಮಿಗೆ ನೀರು ಒದಗಿಸಿದೆ.
೨)ಕೃಷ್ಣಾ ಮೇಲ್ದಂಡೆ ಯೋಜನೆ :- ಈ ಜಲಾಶಯವನ್ನು ಕೃಷ್ಣಾ ನದಿಗೆ ಅಡ್ಡಲಾಗಿ ಆಲಮಟ್ಟಿ ಮತ್ತು ನಾರಾಯಣಪುರಗಳಲ್ಲಿ ನಿರ್ಮಿಸಿದೆ. ಬರಗಾಲ ಪೀಡಿತ ಬಿಜಾಪುರ ಮತ್ತು ಗುಲ್ಬರ್ಗಾ ರಾಯಚೂರು ಜಿಲ್ಲೆಗಳ ೬.೧೭ ಲಕ್ಷ ಹೆಕ್ಟರ್ ಭೂಮಿಗೆ ನೀರನ್ನು ಒದಗಿಸುವ ಗುರಿ ಹೊಂದಿದೆ.
೩)ಮಲಪ್ರಭಾ ಯೋಜನೆ :- ಮಲಪ್ರಭಾ ಯೋಜನೆಯಿಂದ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಬಳಿ ಜಲಾಶಯವನ್ನು ನಿರ್ಮಿಸಲಾಗಿದೆ. ಈ ಯೋಜನೆಯಿಂದ ೨,೨೦,೦೨೮ ಹೆಕ್ಟರ್ ಭೂಮಿಗೆ ನೀರನ್ನು ಒದಗಿಸುವ ಗುರಿ ಇದೆ.
೪)ಭದ್ರಾ ಜಲಾಶಯ :- ಈ ಜಲಾಶಯಗಳನ್ನು ಚಿಕ್ಕಮಂಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿ ಬಳಿ ನಿರ್ಮಿಸಲಾಗಿದ್ದು, ಶಿವಮೊಗ್ಗ, ಚಿತ್ರದುರ್ಗ, ಚಿಕ್ಕಮಂಗಳೂರು ಮತ್ತು ಬಳ್ಳಾರಿ ಜಿಲ್ಲೆಗಳ ೧,೦೫,೫೭೦ ಹೆಕ್ಟರ್ ಭೂಮಿಗೆ ನೀರಾವರಿ ಒದಗಿಸಲಾಗುತ್ತಿದೆ.
೫)ತುಂಗಾಭದ್ರ ಜಲಾಶಯ :- ಈ ಜಲಾಶಯವನ್ನು ಬಳ್ಳಾರಿ ಜಿಲ್ಲೆಯ ಹೊಸಪೇಟಿ ತಾಲ್ಲೂಕಿನ ಮಲ್ಲಾಪುರದ ಬಳಿ ಕರ್ನಾಟಕ ಮತ್ತು ಆಂಧ್ರ ಪ್ರದೇಶದ ರಾಜ್ಯಗಳ ಜಂಟಿ ಯೋಜನೆಯಾಗಿ ತುಂಗಾಭದ್ರ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಈ ಯೋಜನೆಯು ೧೯೪೫ ರಲ್ಲಿ ಪ್ರಾರಂಭವಾಯಿತು. ಈ ಜಲಾಶಯದಿಂದ ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳ ಸುಮಾರು ೩,೬೨,೭೧೫ ಹೆಕ್ಟರ್ ಭೂಮಿಗೆ ನೀರನ್ನು ಒದಗಿಸಲಾಗುತ್ತಿದೆ.
೬)ತುಂಗಾಭದ್ರ ಮೇಲ್ದಂಡೆ ಯೋಜನೆ :- ಈ ಯೋಜನೆಯಡಿ ಈಗ ಶಿವಮೊಗ್ಗ ಬಳಿಯ ತುಂಗಾ ಅಣೆಕಟ್ಟಿಗೆ ಹೊಸರೂಪ ನೀಡಿ ಶಿವಮೊಗ್ಗ ಚಿತ್ರದುರ್ಗ, ದಾರವಾಡ ಜಿಲ್ಲೆಗಳ ಸುಮಾರು ೯೪,೬೬೮ ಹೆಕ್ಟರ್ ಭೂಮಿಗೆ ನೀರನ್ನು ಒದಗಿಸುವ ಗುರಿ ಹೊಂದಲಾಗಿದೆ.
೭)ಹಾರಂಗಿ ಯೋಜನೆ :- ಈ ಯೋಜನೆಯಂತೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಹುಡ್ಗೂರು ಗ್ರಾಮದ ಬಳಿ ಹಾರಂಗಿ ನದಿಗೆ ಅಡ್ಡಲಾಗಿ ಜಲಾಶಯ ನಿರ್ಮಿಸಿ ಕೊಡಗು, ಹಾಸನ ಮತ್ತು ಮೈಸೂರು ಜಿಲ್ಲೆಗಳ ಸುಮಾರು ೪೩,೦೩೬ ಹೆಕ್ಟರ್ ಭೂಮಿಗೆ ನೀರನ್ನು ಒದಗಿಸಿದೆ.

 ಅಣೆಕಟ್ಟು ಎಂದರೇನು?:-
ಅಣೆಕಟ್ಟು ಎನ್ನುವುದು ಒಂದು ಗೋಡೆಯಿದ್ದಂತೆ. ಬೇರೆ ಬೇರೆ ಕಡೆ ಹರಿಯುವ ನೀರನ್ನು ಒಂದು ಕಡೆ ಸಂಗ್ರಹಣೆ ಮಾಡುವುದನ್ನು ಅಣೆಕಟ್ಟು ಎನ್ನುತ್ತಾರೆ.
೨)ಅಣೆಕಟ್ಟು ಎಂಬದು ಒಂದು ರಚನೆ ಇದ್ದಂತೆ ನೀರನ್ನು ಸಂಗ್ರಹಣೆ ಮಾಡುವುದು ಆ ನೀರನ್ನು ರೈತರ ಬೆಳೆಗಳಿಗೆ ನೀರನ್ನು ಒದಗಿಸುವುದು.
ಅಣೆಕಟ್ಟಿನ ಅಭಿವೃದ್ಧಿಯ ಉದ್ದೇಶಗಳು :-
೧)ವಿದ್ಯುತ್ಛಕ್ತಿ ಉತ್ಪಾದನೆ ಮಾಡುವುದು.
೨)ಕೃಷಿಯನ್ನು ಅಭಿವೃದ್ದಿಗೊಳಿಸುವುದು ಮತ್ತು ಜನರ ಜೀವನ ಮಟ್ಟವನ್ನು ಸುಧಾರಿಸುವುದು.
೩)ನೀರನ್ನು ಕಾಲುವೆಗಳ ಮುಖಾಂತರ ಹರಿಯುವಂತೆ ಮಾಡಿ ರೈತರ ಜಮೀನುಗಳಿಗೆ ನೀರನ್ನು ಒದಗಿಸುವುದು.
೪)ಕೃಷಿ ಅಭಿವೃದ್ದಿಯ ಮೂಲಕ ರಾಷ್ಟ್ರೀಯ ಆದಾಯದಲ್ಲಿ ಹೆಚ್ಚಳವಾಗುವಂತೆ ಮಾಡುವುದು.
೧೯೫೫ ರಲ್ಲಿ ಭಾರತದ ಅಂದಿನ ಪ್ರಧಾನಿಯಾಗಿದ್ದ ಜವಾಹರ್‌ಲಾಲ್ ನೆಹರೂ ಅವರು ಅಣೆಕಟ್ಟುಗಳು ಆಧುನಿಕ ಭಾರತದ ದೇವಾಲಯಗಳು ಎಂದು ಕರೆದಿದ್ದರು. ಇದಕ್ಕೆ ಕಾರಣಗಳು ಇಲ್ಲದಿರಲ್ಲಿಲ್ಲ ಅದು ಆಗ ತಾನೆ ಬ್ರಿಟಿಷರ ಆಡಳಿತದಿಂದ ಭಾರತ ಮುಕ್ತವಾಗಿ ತನ್ನದೇ ಆದ ಆಡಳಿತ ಯಂತ್ರವನ್ನು ರೂಪಿಸಿಕೊಳ್ಳುತ್ತಿದ್ದ ಕಾಲ ಆಧುನಿಕ ಭಾರತದ ರಚನೆಗೆ ಅಗತ್ಯವಾದ ಯೋಜನೆಗಳು ಆಗ ತಾನೆ ರೂಪು ತಳೆಯುತ್ತಿದ್ದವು ಇವು ಪಂಚವಾರ್ಷಿಕ ಯೋಜನೆಗಳ ಹೆಸರಿನಲ್ಲಿ ಜಾರಿಗೆ ಬರತೊಡಗಿದವು. ಈ ಪಂಚವಾರ್ಷಿಕ ಯೋಜನೆಗಳಲ್ಲಿ ಮುಖ್ಯವಾಗಿದ್ದುದು, ಬೃಹತ್ ಅಣೆಕಟ್ಟುಗಳು ಈ ಅಣೆಕಟ್ಟುಗಳು ಉತ್ತರದ ಸಿಂಧೂ ನದಿಯಿಂದ ದಕ್ಷಿಣದ ಕಾವೇರಿಯವರೆಗೆ ಹಬ್ಬಿದವು. ಇವುಗಳ ಉದ್ದೇಶ ಒಂದೆರಡಲ್ಲ ಇವುಗಳನ್ನು ಬಹುಪಯೋಗಿ ಯೋಜನೆಗಳೆಂದೇ ಕರೆಯಲಾಗುತ್ತಿತ್ತು. ಇವುಗಳಿಂದ ಪಟ್ಟಣ ಹಾಗೂ ಹಳ್ಳಿಗಳಿಗೆ ಕುಡಿಯುವ ನೀರು, ಲಕ್ಷಗಟ್ಟಲೆ ಹೆಕ್ಟೆರ್ ಪ್ರದೇಶದಲ್ಲಿನ ಕೃಷಿಗೆ ನೀರಾವರಿ ಇಂಧನಕ್ಕಾಗಿ ಹಾತೊರೆಯುತ್ತಿದ್ದ ಕೈಗಾರಿಕೆಗಳು ಹಾಗೂ ಇತರ ಘಟಕಗಳಿಗೆ ವಿದ್ಯುತ್, ನಿರುದ್ಯೋಗಕ್ಕೆ ಉತ್ತವಾಗಿ ಬೃಹತ್ ಪ್ರಮಾಣದ ಕೆಲಸಗಳು ಒಟ್ಟಾರೆ ಇವೆಲ್ಲ ಕನಸಿನ ಲೋಕದಂತೆ ಕಾಣುತ್ತಿತ್ತು. ಕಾಗದದ ಮೇಲೆ ರೂಪುಗೊಂಡ ಯೋಜನೆಗಳನ್ನು ಅದೇ ರೂಪದಲ್ಲಿ ನೋಡಿದರೆ ಒಂದೊಂದು ಯೋಜನೆಯು ಒಂದೊಂದು ಸ್ವರ್ಗದ ನಿರ್ಮಾಣಕ್ಕೆ ಕಟಿಬದ್ಧವಾದಂತೆ ಕಾಣುತ್ತಿತ್ತು.
ಆದರೆ ವಾಸ್ತವದಲ್ಲಿ ಹೀಗಿರಲಿಲ್ಲ ಮೊದ ಮೊದಲು ಇವು ದೇಶದ ಜನತೆಯಲ್ಲಿ ಪುಳಕ ಎಬ್ಬಿಸಿದ್ದೇನೋ ನಿಜ, ಕೃಷಿ ನೀರಾವರಿ ಹಾಗೂ ವಿದ್ಯುತ್ ಸಮಸ್ಯೆಗೆ ಇವು ಉತ್ತರವಾದದ್ದು ನಿಜ, ಆದರೆ ಯಾರು ಊಹಿಸಿರದಿದ್ದ ಹೊಸ ಸಮಸ್ಯೆಗಳು ಬೇರೆ ರೂಪದಲ್ಲಿ ಗೋಚರಿಸತೊಡಗಿದವು. ಒಂದೊಂದು ಅಣೆಕಟ್ಟು ಕೂಡ ನೀರು ನಿಲ್ಲಿಸಲು ಅಪಾರ ಪ್ರಮಾಣದ ನೆಲವನ್ನು ಬೇಡುತ್ತಿತ್ತು. ಹಳ್ಳಿಗಳ ಮೇಲೆ ಹಳ್ಳಿಗಳು ಅಣೆಕಟ್ಟಿನ ನೀರಿನಡಿಯಲ್ಲಿ ಮುಳುಗಡೆವಾಗುತ್ತಿದ್ದವು. ಹೀಗೆ ಒಂದೂಂದು ಅಣೆಕಟ್ಟು ಸಹ ನೂರಾರು ಹಳ್ಳಿಗಳನ್ನು ಹೀಡಿ ತಾಲ್ಲೂಕುಗಳನ್ನು ನುಂಗುತ್ತಿತ್ತು. ಅಲ್ಲಿನ ಜನ ತಾವು ಹುಟ್ಟಿದ ಊರು ಕಟ್ಟಿಕೊಂಡ ಮನೆ, ದುಡಿಯುತ್ತಿದ್ದ ಜಮೀನು ಹೀಗೆ ಎಲ್ಲವನ್ನು ಬಿಟ್ಟು ಗುಳೆ ಎದ್ದು ಬೇರೆ ಕಡೆ ಹೋಗಬೇಕಾಗುತ್ತಿತ್ತು. ಅವರೊಂದಿಗೆ ಒಂದು ಹಳ್ಳಿ ಒಂದು ಜೀವನ ಪದ್ದತಿ ಒಂದು ಸಂಸ್ಕೃತಿಯೇ ಜಲಸಮಾದಿಯಾಗುತ್ತಿತ್ತು.
ಯೋಜನೆಗಳ ಆರಂಭದಲ್ಲೆ ಇದಕ್ಕೆ ಪ್ರತಿರೋದದ ದನಿ ಬಂತಾದರೂ ಅದು ಕ್ಷೀಣವಾಗಿತ್ತು. ಆಗ ಭಾರತವನ್ನು ಸ್ವಂತತ್ರ ಸ್ವಾವಲಂಬಿ ರಾಷ್ಟ್ರವಾಗಿ ಕಟ್ಟುವ ಚಿಂತನೆಯಿಲ್ಲದ ಚಿಂತಕರು ಇದರ ಬಗ್ಗೆ ಅಷ್ಟೋದೇನೂ ಗಮನ ಹರಿಸಲಿಲ್ಲ ಎನ್ನಬೇಕು, ಆದರೆ ಯೋಜನೆಗಳ ಸಂಖ್ಯೆ ಹೆಚ್ಚುತ್ತಾ ಹೋದಂತೆ ಅವುಗಳಿಗೆ ಪ್ರತಿರೋದವು ಹೆಚ್ಚಾಗ ತೊಡಗಿತು ಹೋರಾಟದ ನದಿಗೆ ನೂರಾರು ತೊರೆಗಳು ಸೇರಿಕೊಂಡಲು ಅನೇಕ ಬಗೆಯ ಸಂತಸ್ಥರು ಸೇರಿಕೊಂಡು ಹೋರಾಟವನ್ನು ಕಟ್ಟ ತೊಡಗಿದರು. ಅವರ ಬೇಡಿಕೆ ಇದ್ದದ್ದು ಇಷ್ಟೆ ನಾವು ಕಳೆದುಕೊಂಡಿದಕ್ಕೆ ಪ್ರತಿಯಾಗಿ ಅಷ್ಟೆ ಮೌಲ್ಯದ ಭೂಮಿ ಅಥವಾ ಜೀನವೋಪಾಯವನ್ನು ನಮಗೆ ಕಲ್ಪಿಸಿಕೊಡಿ, ಆದರೆ ಕೇಂದ್ರ ಸರ್ಕಾರವಾಗಿ ರಾಜ್ಯ ಸರ್ಕಾರಗಳಾಗಲಿ ಇವರ ಮೊರೆಯನ್ನು ಗಂಬೀರವಾಗಿ ಪರಿಗಣಿಸಲು ಸಿದ್ದವಿರಲಿಲ್ಲ. ಅವುಗಳ ಯೋಜನೆಗಳ ಬೃಹತ್ ವೆಚ್ಚ ಹಾಗೂ ಅಂದರಿಂದ ಬರಬಹುದಾದ ಲಾಭದ ಬಗ್ಗೆ ಮಾತ್ರ ತಲೆ ಕೆಡಿಸಿಕೊಂಡಿದ್ದವು, ಹೀಗಾಗಿ ಸಂತಸ್ಥರಿಗೆ ನಾಮಕಾವಸ್ತೆ ಪರಿಹಾರ ನೀಡುವ ಪದ್ದತಿ ರೂಡಿಗೆ ಬಂತು. ಇವರಿಗೆ ಕನಿಷ್ಟ ಪರಿಹಾರ ಮೊತ್ತವನ್ನು ನೀಡಿ ಪ್ರದೇಶದಿಂದಾಚೆಗೆ ಸಾಗ ಹಾಕಿದರೆ ಸರಕಾರಿ ಯಂತ್ರದ ಹೋಣೆಗಾರಿಕೆ ಮುಗಿಯುತ್ತಿತ್ತು. ನಂತರ ಅವರು ಜೀವನಕ್ಕೆ ಏನು ಮಾಡಬೇಕಿತ್ತು ಮುಳುಗಡೆಯಾದ ಪ್ರದೇಶದಲ್ಲಿದ್ದ ಅನನ್ಯ ಜೀವನ ಪದ್ದತಿ ಸಂಸ್ಕೃತಿ ಆಚರಣೆಗಳು ಧಾರ್ಮಿಕ ಮೌಲ್ಯಗಳು ಇವುಗಳೆಲ್ಲವುಗಳಿಗೆ ಯಾವ ಬೆಲೆಯನ್ನು ಸರ್ಕಾರಗಳು ಕಟ್ಟಲು ಸಾಧ್ಯವಿರಲಿಲ್ಲ.
೧೯೫೫ ರಲ್ಲಿ ಅಣೆಕಟ್ಟುಗಲು ಆಧುನಿಕ ಭಾರತದ ದೇವಾಲಯಗಳು ಎಂದಿದ್ದ ನೆಹರೂ ಅವರೇ ೧೯೫೮ ರಲ್ಲಿ ಬೃಹತ್ ಅಣೆಕಟ್ಟುಗಳು ಎಂಬ ಗೀಳು ರೋಗದ ಲಕ್ಷಣ ನಾವು ಇದರಿಂದ ಹಿಂದೆ ಸರಿಯಬೇಕು ಎಂದಿದ್ದರು. ಅಣೆಕಟ್ಟುಗಳು ಹೆಚ್ಚುತ್ತ ಹೋದಂತೆ ಜನರೂ ಕೂಡ ಈ ಬಗ್ಗೆ ಶಿಕ್ಷಿತರಾದ ತೊಡಗಿದರು ಸಾಮಾಜಿಕ ಜೀವನದಲ್ಲಿ ಹೆಚ್ಚು ಹೆಚ್ಚು ಬೆರೆಯ ತೊಡಗಿದರು. ಬುದ್ದಿ ಜೀವಿಗಳು ಚಿಂತಕರು ಈ ಬಗ್ಗೆ ಅರಿವನ್ನು ಮೂಡಿಸತೊಡಗಿದರು.
ಅಣೆಕಟ್ಟುಗಳ ಜೊತೆ ಜೊತೆ ನೀರು ಯಾರಿಗೆ ಸೇರಿದ್ದು ಎಂಬ ಪ್ರಶ್ನೆಯು ಮಹತ್ವನ್ನು ಪಡೆದುಕೊಳ್ಳುತ್ತವೆ. ಪ್ರಾಕೃತಿಕ ಶಕ್ತಿಗಳಾದ ನೀರು, ಗಾಳಿ ಹಾಗೂ ಭೂಮಿ ಸಮುದಾಯದ ಸೊತ್ತು ಎಂಬ ನಂಬಿಕೆ ರೂಡಿ ಮೊದಲಿನಿಂದಲೂ ಇಲ್ಲಿತ್ತು. ಇದರಲ್ಲಿ ಜಮೀನು ವೈಯಕ್ತಿಕ ಸೊತ್ತು ಎಂಬ ರಿವಾಜು ರೂಡಿಗೆ ಬಂದು ಎಷ್ಟೆ ಶತಮಾನಗಳಿದ್ದವು, ಆದರೆ ಈಗಲೂ ಊರಿಗೆ ಅಥವಾ ಸಮುದಾಯಕ್ಕೆ ಸೇರಿದ ಬಾಣೆಗಳು, ಹುಲ್ಲುಗಾವಲುಗಳು ದೇವರ ಕಾಡುಗಳು ಇರುವುದು. ಈ ಜಾಡನ್ನು ಪುಷ್ಟಿಕರಿಸುತ್ತದೆ.
ಕಾಲ ಮುಂದುವರಿದಂತೆ ವೈಯಕ್ತಿಕ ಸೊತ್ತೆಂಬ ದುರಾಸೆ ಅತಿಯಾಗ ತೊಡಗಿತು ಸೊತ್ತಿನ ಮೇಲೆ ಹೆಚ್ಚು ಒತ್ತು ಸಮಾಜವಾದಿ ದೇಶಗಳನ್ನು ಹೊರತು ಪಡಿಸಿ ಜಮೀನ್ದಾರಿಕೆ ಹಾಗೂ ಉಳಿಗಮಾನ್ಯ ಪದ್ದತಿ ಪ್ರಚಲಿತ ದೇಶಗಳಲ್ಲಿ ಸಮಸ್ತವು ಉಳ್ಳವರ ಚಾಣಾಕ್ಷರ ದೈಹಿಕ ಬಲವಿದ್ದವರ ಸ್ವಾಮಕ್ಕೆ ಸೇರ ತೊಡಗಿದವು. ಹೀಗಾಗಿ ಬಡವರು, ದುರ್ಬಲರು ತಮ್ಮ ಪಾಲಿಗೆ ಇದ್ದ ಸಮುದಾಯದ ಸಂಪೂನ್ಮೂಲಗಳನ್ನು ಕಳೆದುಕೊಳ್ಳತೊಡಗಿದರು. ಊರಿನ ಕೆರೆ ಬಾವಿಗಳಿಂದಲೂ ಅಸ್ಪೃಶ್ಯರು ವಂಚಿತರಾಗಿದ್ದು. ಹೀಗೆ ಉಳ್ಳವರು ತೆಗೆದುಕೊಂಡು ಬಿಟ್ಟಿದ್ದನ್ನು ಅವರು ಸ್ವೀಕರಿಸುವಂತಾಗಿ ಬದುಕು ಶ್ರೀಮಂತರ ಕೃಪೆಯಲ್ಲಿರುವಂತಾಗ ತೊಡಗಿತು. ದೇಶದ ಸ್ವಾತಂತ್ರ್ಯದೊಂದಿಗೆ ಆದುನಿಕತೆಯೇನೋ ಬಂತು ಆದರೆ ಅದರ ಜೊತೆಗೆ ಉಳಿಗಮಾನ್ಯ ಹೊಸ ರೂಪದಲ್ಲಿ ಮುಂದುವರಿಯಿತು. ಮೊದಲು ಎರಡು ಮೂರು ದಶಕಗಳಲ್ಲಿ ಕುಂಟುತ್ತಾ ಸಾಗಿದ ಆರ್ಥಿಕ ಅಭಿವೃದ್ದಿ ಅ ಬಳಿಕೆ ಕುದುರೆಯ ವೇಗ ಪಡೆದು ಓಡತೊಡಗಿತು. ರಾಜೀವ್‌ಗಾಂಧಿ, ಪಿ.ವಿ.ನರಸಿಂಹರಾವ್ ಅವರು ಭಾರತದ ಅರ್ಥವ್ಯವಸ್ಥೆಯನ್ನು ಪಲ್ಲಟಗೊಳಿಸುವ ಹಲವಾರು ಒಪ್ಪಂದಗಳನ್ನು ಅಂತರಾಷ್ಟ್ರೀಯ ಸಮುದಾಯದ ಜೊತೆ ಮಾಡಿಕೊಂಡರು. ಇದರ ಫಲವಾಗಿ ಕೋಟ್ಯಾಧೀಶರು ಎಲ್ಲರೂ ಹೇಗೋ ಬಂಡವಾಳ ಹೂಡಬಹುದೆನ್ನುವ ಸನ್ನಿವೇಶ ಸೃಷ್ಟಿಯಾಯಿತು.
ಹಳ್ಳಿಕಾಡುಗಳಲ್ಲಿ ಹರಿಯುವ ಅಲ್ಲಿನ ಜನತೆಯ ಉಸಿರೇ ಆಗಿದ್ದ ನದಿಗಳನ್ನು ತಡೆಹಿಡಿದು ಆ ನೀರನ್ನು ಪಟ್ಟಣಗಳಿಗೆ ಹರಿಸುವ ವಿದ್ಯುತ್ ತಯಾರಿಸಿ ಪೇಟೆಗಳಿಗೆ ರವಾನಿಸುವ ಸರ್ಕಾರಿ ಪ್ರಾಯೋಜಿತ ಬೃಹತ್ ಅಣೆಕಟ್ಟುಗಳು ಬರತೊಡಗಿದವು, ಅದರ ಜೊತೆಗೆ ಬಡವರಿಗೆ ಯಾವ ಉದ್ಯೋಗವನ್ನು ನೀಡುವ ಪಟ್ಟಣಗಳ ಕೊಳ್ಳಬಾಕಾ ಸಂಸ್ಕೃತಿಯನ್ನು ಮತ್ತಷ್ಟು ಪೋಷಿಸುವ ಬೃಹತ್ ಕೈಗಾರಿಕೆಗಳು ಸ್ಥಾಪನೆಯಾಗತೊಡಗಿದವು. ಆದರೆ ಇದರಿಂದ ಸ್ಥಳೀಯರಿಗೆ ಯಾವ ಪ್ರಯೋಜನವಾಯಿತು. ಈ ಬೃಹತ್ ಯೋಜನೆಗಳು ತಮ್ಮ ಜಮೀನು ತಮ್ಮ ನೀರನ್ನು ಅಪಹರಿಸಿ ತಮ್ಮನ್ನು ನಿರ್ಗತಿಕರನ್ನಾಗಿ ಮಾಡುತ್ತಿದೆ ಎಂದು ಅರಿವಾದಗ ಸ್ಥಳೀಯರೆಲ್ಲ ರೊಚ್ಚಿಗೇಳತೊಡಗಿದವರು. ಹೀಗೆ ಸಮುದಾಯದ ಮುಂದಿಗೆ ತಮ್ಮ ಹಕ್ಕುಗಳ ಅರಿವನ್ನು ಮೂಡಿಸಿ ತಮಗೆ ಸಿಗಲೇಬೇಕಾದ್ದರ ಬಗ್ಗೆ ಹಕ್ಕನ್ನು ಒತ್ತಾಯ ಮಂಡಿಸುವಂತೆ ಮಾಡಿದವರಲ್ಲಿ ಮೇಧಾ ಪಾಟ್ಕರ್ ಒಬ್ಬರು. ಈ ಹಕ್ಕು ಒತ್ತಾಯ ಅಹಿಂಸಾತ್ಮಕ ಚಳುವಳಿಯ ರೂಪದಲ್ಲಿ ಪ್ರವಹಿಸುವಂತೆ ಮಾಡಿದ ಹೆಗ್ಗಳಿಕೆಯು ಅವರಿಗೆ ಸೇರುತ್ತದೆ. ರಾಜಕೀಯವಾಗಿ ಹಾಗು ಸಾರ್ವಜನಿಕವಾಗಿ ನಾವು ಅಭಿವೃದ್ದಿಯಾಗಬೇಕಾದರೆ ನಮ್ಮಲ್ಲಿ ಸೂಕ್ಷ್ಮ ಹಂತದಿಂದ ಸ್ಥೂಲ ಹಂತದವರೆಗಿನ ಸಾವಯಾವ ಕೊಂಡಿ ಇರಬೇಕೆಂದು ಮೇಧಾ ಪಾಟ್ಕರ್ ಪ್ರತಿಪಾದಿಸುತ್ತಾರೆ.

ಅಣೆಕಟ್ಟುಗಳ ಪರಿಣಾಮಗಳು :-
ಅಣೆಕಟ್ಟುಗಳು ದೇಶದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಪರಿಣಾಮಕಾರಿಗಳನ್ನುಂಟು ಮಾಡುತ್ತದೆ. ಅಣೆಕಟ್ಟುಗಳು ಪರಿಸರದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.
ಪರಿಸರದ ಮೇಲೆ ಅಣೆಕಟ್ಟುಗಳ ಪರಿಣಾಮಗಳು :-
ಅಣೆಕಟ್ಟುಗಳು ವಿವಿಧ ನದಿಗಳು ಮತ್ತು ನದಿ ತೀರದ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ. ಪರಿಸರದ ಜೈವಿಕ ರಾಸಾಯನಿಕ ಮತ್ತು ಭೌತಿಕ ಗುಣಲಕ್ಷಣಗಳ ಮೇಲೆ ನೇರ ಪರಿಣಾಮವನ್ನುಂಟು ಮಾಡುತ್ತದೆ. ಕೆಲವು ಸಂದರ್ಭದಲ್ಲಿ ಕೆಲವು ಜಾತಿಯ ಮೀನುಗಳು ಮೊಟ್ಟಿಯಿಡುವ ಆವಾಸ ಸ್ಥಾನವನ್ನು ಅಣೆಕಟ್ಟುಗಳು ತಡೆಯುತ್ತವೆ. ಅಣೆಕಟ್ಟುಗಳು ಇವುಗಳ ಪಾಲನೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಅಣೆಕಟ್ಟುಗಳು ಉಷ್ಣತೆಯ ಬದಲಾವಣೆಗಳು ರಾಸಾಯನಿಕ ಸಂಯೋಜನೆ ಕರಗಿದ ಆಮ್ಲಜನಕದ ಮಟ್ಟಗಳು ಮತ್ತು ಜಲಾಶಯ ಭೌತಿಕ ಲಕ್ಷಣಗಳು ಸಾಮಾನ್ಯವಾಗಿ ಒಂದು ನಿರ್ಧಿಷ್ಟ ನದಿ ವ್ಯವಸ್ಥೆಯ ವಿಕಸನಗೊಳ್ಳುವ ಜಲವಾಸಿ ಸಸ್ಯಗಳು ಮತ್ತು ಪ್ರಾಣಿಗಳಿಗೆ ತಕ್ಯವಾದುದಲ್ಲ. ವಾಸ್ತವವಾಗಿ ಜಲಾಶಯಗಳು ಸಾಮಾನ್ಯವಾಗಿ ಹೆಚ್ಚಿನ ಸಸ್ಯಗಳು ಮತ್ತು ಪ್ರಾಣಿಗಳು ನದಿಯ ನೈಸರ್ಗಿಕ ಸಮುದಾಯವನ್ನು ಹಾಳು ಮಾಡುತ್ತದೆ.
ಸಾರಿಗೆ ದಿಕ್ಕಿನಲ್ಲಿಯೂ ಅಣೆಕಟ್ಟುಗಳು ತಮ್ಮದೇ ಆದ ಪರಿಣಾಮವನ್ನು ಬೀರುತ್ತದೆ. ಅಣೆಕಟ್ಟನ್ನು ನಿರ್ಮಾಣ ಮಾಡಲು ಹಲವಾರು ಮೀಟರ್ ಪ್ರದೇಶವನ್ನು ಆಕ್ರಮಿಸಿಕೊಳ್ಳುತ್ತವೆ. ಇದರಿಂದ ಜನರಿಗೆ ಹಾನಿಯುನ್ನುಂಟು ಮಾಡುತ್ತದೆ. ಕಾಡು ಪ್ರದೇಶ ಹಾನಿಕೊಳ್ಳುಗಾಗುತ್ತದೆ. ಜನರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಆನರ ಆಸ್ತಿ ಪಾಸ್ತಿ ನಾಶವಾಗುತ್ತದೆ ಮತ್ತು ಜನರ ಜೀವನ ನಿರ್ವಹಣೆ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.
ಒಟ್ಟಾರೆಯಾಗಿ ಅಣೆಕಟ್ಟುಗಳು ನದಿಗಳ ವಿಶಾಲವಾದ ಪ್ರಕ್ರಿಯೆಗಳ ಮೇಲೆ ಪರಿಣಾಮ ಬೀರುತ್ತವೆ. ವಿಶೇಷವಾಗಿ ಬಹುತೇಕ ಜಲಾಶಯಗಳು ಉಷ್ಣವಲಯದಲ್ಲಿ ಹಸಿರು ಮನೆ ಅನಿಲ ಹೊರಸೂಸುವಿಕೆ ಗಮನಾರ್ಹ ಉತ್ಪಾದಕಗಳು.
ಅಣೆಕಟ್ಟುಗಳು ಅನೇಕ ಮೀನು ಮತ್ತು ಇತರ ಹಕ್ಕಿಗಳ ಕಣ್ಮರೆಗೆ ಮತ್ತು ಅರಣ್ಯ ತೇವಾಂಶಗಳುಳ್ಳ ಮತ್ತು ಕೃಷಿ ಭೂಮಿಯ ದೊಡ್ಡ ನಷ್ಟವನ್ನುಂಟು ಮಾಡುತ್ತದೆ. ಕರಾವಳಿ ನದಿ ಮುಖಜ ಭೂಮಿಗಳಲ್ಲಿ ಸವೆತದ ಮತ್ತು ಅನೇಕ ಇತರ ಪರಿಣಾಮಗಳನ್ನು ಕಾಣಬಾಹುದಾಗಿದೆ.
ಅಣೆಕಟ್ಟುಗಳ ಆರ್ಥಿಕ ಪರಿಣಾಮಗಳು :-
ಅಣೆಕಟ್ಟಿನಿಂದ ಆರ್ಥಿಕವಾಗಿ ಹಲವಾರು ಪರಿಣಾಮಗಳನ್ನು ಕಾಣಬಹುದಾಗಿದೆ. ಅಣೆಕಟ್ಟುನಿಂದ ಜಲಶಕ್ತಿ ಮತ್ತು ನೀರನ್ನು ಸರಬರಾಜು ಮಾಡಬಹುದಾಗಿದೆ. ಸಾರ್ವಜನಿಕ ಸಂಸ್ಥೆಗಳು ಹಿಂದೆ ಕಳಪೆ ಅಣೆಕಟ್ಟನ್ನು ನಿರ್ಮಿಸಿ ಯೋಜನೆಗಳ ಕಾರ್ಯ ನಿರ್ವಹಿಸುತ್ತಿದ್ದರು. ಅಣೆಕಟ್ಟುಗಳು ಸತತವಾಗಿ ಹೆಚ್ಚಿನ ವೆಚ್ಚ ಮತ್ತು ಯೋಜನೆ ನಿರ್ಮಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಸಾಮಾನ್ಯವಾಗಿ ದೊಡ್ಡ ಒಂದು ಹೈಡ್ರೋ ಪ್ರಾಜೆಕ್ಟ್ ಅದರ ನಿರ್ಮಾಣ ವೆಚ್ಚ ಶೇಕಡವಾರು ಲೆಕ್ಕದಲ್ಲಿ ತುಂಬಿರುವುದರಿಂದ ದೊಡ್ಡದಾಗಿದೆ ನಿಜವಾದ ಅಪಾಯಗಳು ಮತ್ತು ಅಣೆಕಟ್ಟುಗಳ ವೆಚ್ಚಗಳ ಅಸ್ಥಿತ್ವದಲ್ಲಿರುವ ಮತ್ತು ಹೊಸ ಯೋಜನೆಗಳಿಗೆ ಖಾಸಗಿ ಹೂಡಿಕೆದಾರರು ಆಕರ್ಷಿಸಲು ಸಾರ್ವಜನಿಕ ಪರಿಶೀಲನೆಗೆ ಮತ್ತು ಪ್ರಯತ್ನಗಳು ಹೆಚ್ಚುತ್ತಿರುವ ಮುಕ್ತ ಕಾರಣ ಒತ್ತಾಯ ಮಾಡಲಾಗುತ್ತಿದೆ.
ವಿಶ್ವ ಆರೋಗ್ಯ ಸರಾಸರಿ ಅಣೆಕಟ್ಟುಗಳು ದೊಡ್ಡ ಅಣೆಕಟುಗಳು ಅತ್ಯುತ್ತಮ ಕಡಿಮೆ ಆರ್ಥಿಕವಾಗಿ ಸಮರ್ಥ ಎಂದು ಕಂಡು ಬಂದಿದೆ. ಅಣೆಕಟ್ಟುಗಳು ತುಂಬಿರುವುದರಿಂದ ಸರಾಸರಿ ವೆಚ್ಚ ೫೬% ಆಗಿದೆ. ಈ ಅಣೆಕಟ್ಟು ಒಂದು (೧) ಬಿಲಿಯನ್ ವೆಚ್ಚ ಅಂದಾಜು ಮಾಡಿದಾಗ ಅದನ್ನು $ ೧.೫೬ ಶತ ಕೋಟಿ ಮೌಲ್ಯದಲ್ಲಿ ಕೊನೆಗೊಳ್ಳುತ್ತದೆಂದು ಯೋಜನೆಯ ತಯಾರಕರು ಒಂದು ಅಚ್ಚುಕಟ್ಟಾದ ಲಾಭ ಮತ್ತು ಅವರ ಸಂಪುಟ ಸೇರಿಸಲು ಮತ್ತೊಂದು ಯೋಜನೆಯಲ್ಲಿ ಹೊರ ನಡೆವ ಸಂದರ್ಭದಲ್ಲಿ ಹಲವಾರು ಸಂದರ್ಭಗಳಲ್ಲಿ ಮಿತವ್ಯಯವಿಲ್ಲದ ಅಣೆಕಟ್ಟುಗಳ ಭಾರವನ್ನು ಒಂದು ದೇಶದ ನಾಗರೀಕರ ಹೆಗಲಾಗಿದೆ. ವಿಶ್ವದ ದೊಡ್ಡ ಅಣೆಕಟ್ಟುಗಳು ಅತ್ಯಂತ ಈಗ ವಿಶ್ವದ ಅತ್ಯಂತ ಬಡ ರಾಷ್ಟ್ರಗಳಿಗೆ ನಿರ್ಮಿಸಲಾಗಿದೆ.
ಮತ್ತೊಂದು ಸಮಸ್ಯೆ ದೊಡ್ಡ ಅಣೆಕಟ್ಟುಗಳು ಸಾಮಾನ್ಯವಾಗಿ ಒಂದು ಅಸಮತೋಲಿತ (ಹವಾಮಾನ - ಅಪಾಯಕಾರಿ) ಶಕ್ತಿ ಸರಬರಾಜು ಕಾರಣವಾಗುವ ಅನೇಕ ಬಡ ರಾಷ್ಟ್ರಗಳಲ್ಲಿ ದೊಡ್ಡ ಶಕ್ತಿ ಅಭಿವೃದ್ದಿ ಆಧುನಿಕ ಶಕ್ತಿ ಬಳಸಿಕೊಳ್ಳುವಲ್ಲಿ ದೇಶಗಳಲ್ಲಿ ಹೆಚ್ಚಿಸಲು ಸಾಮಾನ್ಯವಾಗಿ ಉತ್ಕೃಷ್ಟವಾಗಿ ಪಡೆಯುವ ಸಂದರ್ಭದಲ್ಲಿ ಪ್ರವೃತ್ತಿ ಜಲ ವಿದ್ಯುತ್ ಅವಲಂಬನೆ ಇತರ ರೀತಿಯಲ್ಲಿ ಹೋಗುತ್ತದೆ. ವಿಶ್ವದ ೪೦ ಶ್ರೀಮಂತ ದೇಶಗಳ ಕೇವಲ ಒಂದಕ್ಕಿಂತ ಹೆಚ್ಚು ೯೦% ಹೈಡ್ರೊ ಅವಲಂಬಿತವಾಗಿದೆ. ಹಲವಾರು ಹೈಡ್ರೊ ಅವಲಂಬಿತ ದೇಶಗಳು ಇತ್ತಿಚೀನ ವರ್ಷಗಳಲ್ಲಿ ಬರ ಪ್ರೇರಿತ ಕಡಿತಕ್ಕೆ ಹಾಗೂ ಶಕ್ತಿ ಪಡಿತರ ಅನುಭವಿಸಿದೆ. ಇಂಧನ ಭದ್ರತೆ ಈ ದೇಶಗಳಲ್ಲಿ ಅವುಗಳು ಅವಲಂಬನೆ ಆಳವಾಗಿಸುವುದೇ ಹೆಚ್ಚು ವಿದೇಶ ದೊಡ್ಡ ಹೈಡ್ರೋ ವಿದ್ಯುತ್ ಉತ್ಪಾದನೆ ಹೊರ ಇದ್ದಂತೆ ವಾಯುಗುಣ ಬದಲಾವಣೆಗೆ ಮಳೆ ಮಾದರಿಗಳಲ್ಲಿ ಬದಲಾವಣೆಗಳು ಇವು ವಿಶೇಷವಾಗಿ ನಿರ್ಣಾಯಕ ಮಾಡತ್ತದೆ.

ಅಣೆಕಟ್ಟುಗಳ ಪ್ರಯೋಜನಗಳು:-
 ಮನರಂಜನೆಗಾಗಿ ಅಣೆಕಟ್ಟುಗಳು ಉದ್ದೇಶದ ೧ ಬಳಕೆ (೩೮.೪%) ಪ್ರವಾಹ ನಿಯಂತ್ರಣ (೧೭.೭%) ಪೈಕಿ ಹಾಗೂ ಪಾರ್ಮ್ ಕೊಳಗಳು (೧೭.೧%) ನೀರಾವರಿ (೧೦.೦%) ಉಳಿಕೆಗಳನ್ನು ಇತರೆ (೮.೦%)ನ ಸ್ಥಗಿತ ತೋರಿಸುವ ಒಂದು ಪೈಚಾರ್ಟ್ (೨೦.೯%) ಜಲ ವಿದ್ಯುತ್ (೩.೮%) ಅನಿರ್ಧಾರಿತ ಶಿಲಾಖಂಡರಾಶಿಗಳ ಕಂಟ್ರೋಲ್ (೦.೮%) ಸಂಚಾರ (೦.೪%) ಅಣೆಕಟ್ಟುಗಳು ರಾಷ್ಟ್ರೀಯ ಇನೈಂಟಿರ ಫೆಬ್ರವರಿ ೨೦೦೫ ಡ್ಯಾಮ್ಸ್ ಮನರಂಜನಾ ಪ್ರವಾಹ ನಿಯಂತ್ರಣ ನೀರಿನ ಪೂರೈಕೆ ಜಲವಿದ್ಯುತ್ ಶಕ್ತಿ ತ್ಯಾಜ್ಯ ನಿರ್ವಹಣೆ ನದಿ ಸಂಚರಣೆ ಮತ್ತು ವನ್ಯ ಜೀವಿ ಸೇರಿದಂತೆ ಆರ್ಥಿಕ ಪರಿಸರೀಯ ಮತ್ತು ಸಾಂಸ್ಕೃತಿಕ ಪ್ರಯೋಜನಗಳು ಬಂದು ಶ್ರೇಣಿಯನ್ನು ಒದಗಿಸುತ್ತವೆ.
ಆಟಪಾಟ :-
 ಅಣೆ ಕಟ್ಟುಗಳು ಯೂನೈಟೆಡ್ ಸ್ಟೇಟ್ಸ್ ಉದ್ದಕ್ಕೂ ಪ್ರಧಾನ ಮನರಂಜನಾ ಸೌಲಭ್ಯಗಳು ಒದಗಿಸಲು ಬೋಟಿಂಗ್, ಸ್ವಿಮಿಂಗ್, ಕ್ಯಾಪಿಂಗ್, ಪಿಕ್ಕಿಕ್ ಪ್ರದೇಶಗಳು ಮತ್ತು ದೋಣಿ ಬಿಡುಗಡೆ ಸೌಲಭ್ಯಗಳನ್ನು ಎಲ್ಲಾ ಅಣೆಕಟ್ಟುಗಳನ್ನು ಬೆಂಬಲಿತವಾಗಿದೆ.
ಪ್ರವಾಹ ನಿಯಂತ್ರಣ :-
 ಅಣೆಕಟ್ಟುಗಳು ರೈತರ ಜೀವನ ಹಾಗೂ ಪ್ರವಾಹದಿಂದ ಉಂಟಾದ ಆಸ್ತಿ ನಷ್ಟ ತಡೆಯಲು ಸಹಾಯ ಜೊತೆಗೆ ಪ್ರವಾಹ ನಿಯಂತ್ರಣ ಶತಮಾನಗಳಿಂದಲೂ ಜನರು ಪ್ರವಾಹ ನಿಯಂತ್ರಣ ವಿದ್ವಂಸಕರಾಗಿ ಅಣೆಕಟ್ಟುಗಳನ್ನು ಕಟ್ಟಿದರು.
ವಾಟರ್ ಸ್ಟೋರೇಜ್ (ನೀರು ಸಂಗ್ರಹಣೆ) :-
 ಅಣೆಕಟ್ಟುಗಳು ಪೂರೈಕೆ ನೀರಿನ ಕೈಗಾರಿಕೆ ಪುರಸಭಾ ಮತ್ತು ಕೃಷಿ ಸೇರಿದಂತೆ ಅನೇಕ ಉಪಯೋಗಗಳು ಯುನೈಟೆಡ್ ಸ್ಟೇಟ್ಸ್‌ನ ಜಲಾಶಯ ರಚಿಸಲು.
ನೀರಾವರಿ:-
 ಅಮೇರಿಕನ್ ಕ್ರಾಪ್ ಲ್ಯಾಂಡ್‌ನಲ್ಲಿ ತಡೆದಿದ್ದರಲ್ಲಿ ಹತ್ತು ಶೇಕಡಾ ಅಣೆಕಟ್ಟುಗಳ ಹಿಂದಿನ ಸಂಗ್ರಹಿದ ನೀರನ್ನು ಬಳಸಿಕೊಂಡು ನೀರಾವರಿ ಇದೇ ಉದ್ಯೋಗಗಳು ಸಾವಿರಾರು ನೀರಾವರಿ ನೀರಿನಿಂದ ಬೆಳೆದ ಬೆಳೆಗಳನ್ನು ಉತ್ಪಾದಿಸುವ ಪಟ್ಟಿ ಇದೆ.
ಮೈನ್ ಉಳಿಕೆಗಳನ್ನು:-
 ಪರಿಸರ ಸಂರಕ್ಷಿಸುವುದರ ಜೊತಗೆ ಕಲ್ಲಿದ್ದಲು ಹಾಗೂ ಇತರ ಪ್ರಮುಖ ಖನಿಜಗಳ ಗಣಿಗಾರಿಕೆ ಮತ್ತು ಪ್ರಕ್ರಿಯೆಗೆ ಅವಕಾಶ ಎಂದು ಯುನೈಟೆಡ್ ಸ್ಟೇಟ್ಸ್ ಹೆಚ್ಚು ೧.೩೦೦ ಗಣಿ ಉಳಿಕೆಗಳ ಸ್ವತ್ತು ಇದೆ.
ವಿದ್ಯುತ್ ಉತ್ಪಾದನೆ :-
 ಯುನೈಟೆಡ್ ಸ್ಟೇಟ್ಸ್ ಕೆನಡಾ ಮಾತ್ರ ಎರಡನೇ ವಿಶ್ವದ ಹೈಡ್ರೊ ಪವರ್ ಅತಿದೊಡ್ಡ ತಯಾರಕರಲ್ಲಿ ಒಂದಾಗಿದೆ, ಅಣೆಕಟ್ಟು ನವೀಕರಿಸಬಹುದಾದ ವಿದ್ಯೂತ್ ೧೦೩.೮೦೦ ಪ್ರತಿ ಮೆಗಾವ್ಯಾಟ್‌ಗಳಷ್ಟು ಉತ್ಪಾದಿಸಿ ನೇಶನ್ಸ್ ವಿದ್ಯುತ್ ಅಗತ್ಯಗಳು ೮ ರಿಂದ ೧೨ ರಷ್ಟು ಬೇಡಿಕೆ ಇದ್ದು, ಜಾಗತಿಕ ತಾಪಮಾನ ವಾಯು ಮಾಲಿನ್ಯ ಆಮ್ಲ ಮಳೆ ಅಥವಾ ಓಝೋನ್ ಸವಕಳಿಗೆ ಕಾರಣವಾಗುವುದಿಲ್ಲ ಏಕೆಂದರೆ ಜಲಕ್ಲೀನ್ ಪರಿಗಣಿಸಲಾಗುತ್ತದೆ.
ಶಿಲಾರಾಶಿಗಳ ಕಂಟ್ರೋಲ್ (ನಿಯಂತ್ರಣ) :-
 ಕೆಲವು ನಿದರ್ಶನಗಳಲ್ಲಿ ಅಣೆಕಟ್ಟುಗಳು ಅಂತಹ ಅಪಾಯಕರ ವಸ್ತುಗಳ ಮತ್ತು ಹಾನಿಕರ ಶೇಖರಣೆಯ ತುಂಬುವ ಮಾಹಿತಿ ವರ್ದಿತ ಪರಿಸರ ರಕ್ಷಣೆ ನೀಡುತ್ತದೆ.
ಒಳನಾಡಿನ ಸಾರಿಗೆಗೆ ಅನುಕೂಲಕರ ಮೀನುಗಾರಿಕೆಗೆ ಅನೂಕೂಲಕರವಾಗಿದೆ ವ್ಯವಸಾಯ ಕೈಗಾರಿಕೆ ಉಪಯುಕ್ತವಾಗಿದೆ.

ಅರ್ಕಾವತಿ ಜಲಾಯನ ಯೋಜನೆಯಲ್ಲಿ ಹಾರೊಬಲೆ ಡ್ಯಾಂ:-
 ನಂದಿ ಬೆಟ್ಟದ ನೈರುತ್ಯ ಭಾಗದಲ್ಲಿ ಜನಿಸುವ ಅರ್ಕಾವತಿ ದೇಶದ ಇತರಗಳಂತಲ್ಲದೆ ಬಲು ವಿಶಿಷ್ಟ ಕಾರಣಗಳಿಗಾಗಿ ತನ್ನತನ ಕಾಯ್ದುಕೊಂಡವಳು ನಂದಿಬೆಟ್ಟವಲ್ಲದೆ ಚೆನ್ನಗಿರಿ ಬೆಟ್ಟ ಹುಲುಕುಡಿ ಬೆಟ್ಟ ಮುದುರೆ ಮತ್ತು ಸೊಣ್ಣೆನಹಳ್ಳಿ ದಿಬ್ಬಗಳು ಸಹ ಈ ನದಿಯ ಮೂಲಗಳಾಗಿವೆ. ಹೆಸರುಘಟ್ಟದವರೆಗೆ ಗುಪ್ತಗಾಮಿನಿಯಾಗಿ ಹರಿಯುವ ಈ ನದಿಗೆ ಕಳ್ಳ ಹೊಳೆ ಎನ್ನುವ ಅಡ್ಡ ಹೆಸರು ಉಂಟು.
 ಉಗಮ ಸ್ಥಾನದಿಂದ ಹೆಸರುಘಟ್ಟದವರೆಗೆ ಬಾಯ್ದೆರೆದು ನಿಂತ ಸಾವಿರಾರು ಸಾಲು ಕೆರೆಗಳ ಒಡಲು ತುಂಬಿಸುತ್ತಾ ಅವುಗಳಲ್ಲೆ ತನ್ನ ಅಸ್ಥಿತ್ವ ಕಂಡುಕೊಂಡವಳು ಅರ್ಕಾವತಿ.
 ಈ ನದಿ ಕನಕಪುರ ತಾಲ್ಲೂಕಿನ ಸಂಗಮವನ್ನು (ಕಾವೇರಿ ಅರ್ಕಾವತಿ ಸಂಗಮ) ಸೇರುವ ಮೊದಲು ಕೋಲಾರ ಹಾಗೂ ರಾಮನಗರ ಜಿಲ್ಲೆಗಳಲ್ಲಿ ಸುಮಾರು ೧೫೪.೫ ಕಿಲೋ ಮೀಟರ್ ಹರಿಯುತ್ತದೆ. ಜಲಾನಯನ ಪ್ರದೇಶದ ವಿಸ್ತೀರ್ಣವು ೩೫೦೦ ಚದರ ಕಿ.ಮೀಟರ್‌ಗಳಿದ್ದು, ವಾರ್ಷಿಕ ಸರಾಸರಿ ೫೦೦ ರಿಂದ ೬೫೦ ಕಿ.ಮೀಟರ್ ಮಳೆಯಾಗುತ್ತದೆ. ಈ ನದಿಯಲ್ಲಿ ೮.೮೬೫ ಟಿ.ಎಂ.ಸಿ.ಗಳಷ್ಟು ಸರಾಸರಿ ನೀರಿನ ಪ್ರಮಾಣವು ದೊರೆಯುವುದೆಂದು ಅಂದಾಜಿಸಲಾಗಿದೆ. ಕನಕಪುರ ತಾಲ್ಲೂಕು ಮಳೆ ಬೀಳದ ಆಗಾಗ್ಗೆ ಬರಪಡಿತ ಪ್ರದೇಶವಾಗಿದ್ದು ಮಳೆಯ ಕೊರತೆಯಿಂದ ಈ ಪ್ರದೇಶದ ಜನರು ಬೇಸಾಯ ಮಾಡಲಾಗದೆ ತೊಂದರೆಗೀಡಾಗುತ್ತಿದ್ದಾರೆ. ಈ ಪ್ರದೇಶದ ಭೂಮಿಯು ಫಲವತ್ತಾಗಿದ್ದರೂ ಸಹ ಇಲ್ಲಿಯ ಜನರು ಪ್ರತಿ ವರ್ಷವು ಬರಗಾಲ ಪರಿಸ್ಥಿತಿಯನ್ನು ಎದುರಿಸುತ್ತಿರುವುದರಿಂದಲೂ ಹಾಗೂ ಸಮೀಪದಲ್ಲೆಲ್ಲಾ ನೀರಾವರಿ ಯೋಜನೆಗಳು ಇಲ್ಲದಿರುವುದರಿಂದಲೂ ಅರ್ಕಾವತಿ ನದಿಯ ನೀರನ್ನು ಉಪಯೋಗಿಸಿಕೊಂಡು ನೀರಾವರಿ ಸೌಲಭ್ಯವನ್ನು ಕನಕಪುರ ತಾಲ್ಲೂಕಿಗೆ ಒದಗಿಸಿಕೊಡುವುದಕ್ಕೆ ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ ಅರ್ಕಾವತಿ ನದಿಗೆ ಅಡ್ಡಲಾಗಿ ರಾಮಗನರ ಜಿಲ್ಲೆಯ ಕನಕಪುರ ತಾಲ್ಲೂಕಿನ ಸಾತನೂರು ವಿಧಾನ ಸಭೆಯ ವ್ಯಾಪ್ತಿಯ ಹಾರೋಬಲೆ ಗ್ರಾಮದ ಬಳಿ ಅರ್ಕಾವತಿ ಜಲಾಶಯವನ್ನು ನಿರ್ಮಿಸಲಾಗುತ್ತಿದೆ. ಈ ಜಲಾಶಯವು ಕನಕಪುರ ಪಟ್ಟಣದಿಂದ ೨೨ ಕಿ.ಮೀಟರ್ ದೂರದಲ್ಲಿದೆ. ಈ ಅಣೆಕಟ್ಟು ಮಿಶ್ರರೂಪದ ಅಣೆಕಟ್ಟೆಯಾಗಿರುತ್ತದೆ. ಜಲಾಶಯದ ಎರಡು ದಂಡೆಯಿಂದ ೨೨.೫ ಕಿಲೋ ಮೀಟರ್ ಉದ್ದದ ನೀರಾವರಿ ನಾಲೆಗಳು ಮತ್ತು ಎರಡು ದಂಡೆಗಳಲ್ಲಿ ಏಕ ನೀರಾವರಿ ನಾಲೆಗಳ ಸೌಲಭ್ಯ ವಿರುತ್ತದೆ.
ಹಾರೋಬೆಲೆ ಡ್ಯಾಂ ಯೋಜನೆಯ ರೂಪು ರೇಶೆಗಳು:-
 ಹಾರೋಬೆಲೆ ಡ್ಯಾಂ ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಹಾರೋಬೆಲೆ ಎಂಬ ಗ್ರಾಮದಲ್ಲಿ ಕನಕಪುರದಿಂದ ೨೦ ಕಿಲೋ ಮೀಟರ್ ದೂರದಲ್ಲ್ಲಿದೆ. ಇದರ ಒಟ್ಟು ನೀರಾವರಿ ಸಾಮರ್ಥ್ಯ ೬೨೩೨ ಹೆಕ್ಟರ್ ಪ್ರದೇಶವನ್ನು ಒಳಗೊಂಡಿದೆ, ಮಾರ್ಚ್ ೨೦೦೭ ರವರೆಗೆ ಘೋಷಿಸಿರುವ ನೀರಾವರಿ ಸಾಮರ್ಥ್ಯ ೩೦೩೫ ಹೆಕ್ಟರ್‌ಗಳಷ್ಟಿವೆ, ನೀರಾವರಿ ಸಾಮರ್ಥ್ಯವನ್ನು ಘೋಷಿಸಲು ಬಾಕಿ ಉಳಿದಿರುವ ಪ್ರದೇಶ ೩೧೯೭ ಹೆಕ್ಟರ್‌ಗಳಷ್ಟು ಈ ಅಣೆಕಟ್ಟಿನ ಯೋಜನೆ ಪ್ರಾರಂಭವಾದ ವರ್ಷ ೧೯೮೪-೯೫ ರಲ್ಲಿ ಈ ಅಣೆಕಟ್ಟನ್ನು ಪ್ರಾರಂಭ ಮಾಡಲಾಯಿತು ಇದರ ಆರಂಭದ ಅಂದಾಜು ವೆಚ್ಚ ರೂ.೨,೨೨,೫೦೦ ಲಕ್ಷಗಳು (೧೯೮೩-೮೪ನೇ ಸಾಲಿನಲ್ಲಿ) ಇದರ ಪರಿಷ್ಕೃತ ಅಂದಾಜು ವೆಚ್ಚ ರೂ.೧೧,೦೦೦ ಲಕ್ಷಗಳಷ್ಟು ಈ ವರೆಗೆ ಖರ್ಚಿನ ಮೊತ್ತ ರೂ.೧೧,೫೦೦,೨೬ ಲಕ್ಷಗಳು (ಮೇ ೨೦೦೭) ರ ಅಂತ್ಯಕ್ಕೆ.
ಮುಂದೆ ಬೇಕಾಗಿರುವ ಹಣಕಾಸಿನ ವಿವರ :-
೧)೨೦೦೭-೦೮ನೇ ಸಾಲಿಗೆ ರೂ.೨೫೦೦,೦೦೦ ಲಕ್ಷಗಳು
೨)ಪೂರ್ಣಗೊಳಿಸಲು ಬಾಕಿ ರೂ.೪೫,೦೦,೦೦೦ ಲಕ್ಷಗಳು ಬೇಕಾಗಿರುವುದು. (೨೦೦೭-೦೮ ರ ಅನುದಾನ ಹೊರತುಪಡಿಸಿ)
ಅರ್ಕಾವತಿ ಜಲಾಶಯ ಯೋಜನೆಯು ೧೯೮೪-೮೫ರಲ್ಲಿ ಪ್ರಾರಂಭವಾಯಿತು ಮೂಲ ಅಂದಾಜು ರೂ.೨,೨೨,೫೦೦ ಲಕ್ಷಗಳಿಗೆ ಮಂಜೂರಾಗಿದ್ದು, ಪರಿಷ್ಕೃತ ಅಂದಾಜನ್ನು ರೂ.೧೧,೦೦೦ ಲಕ್ಷಗಳಿಗೆ ೧೯೯೬-೯೭ನೇ ಸಾಲಿನ ದರ ಪಟ್ಟಿಗಳನ್ನು ಅಳವಡಿಸಿಕೊಂಡು ತಯಾರಿಸಿ ಅನುಮೋದನೆಗಾಗಿ ಸಲ್ಲಿಸಲಾಗಿದು, ಈ ಯೋಜನೆಯ ಎಲ್ಲಾ ಕಾಮಗಾರಿಗಳು ಪೂರ್ಣಗೊಂಡ ಬಳಿಕ ಪುನರ್ ಪರಿಷ್ಕೃತ ಅಂದಾಜನ್ನು ತಯಾರಿಸಿ ಸಲ್ಲಿಸಬೇಕಾಗಿದೆ.
 ಈ ಅಣೆಕಟ್ಟನ್ನು ನೀರಾವರಿಯ ಉದ್ದೇಶಕ್ಕಾಗಿ ಕಟ್ಟಲಾಗಿದೆ, ಇದು ೩೫೦೦ ಚದರ ಕಿಲೋ ಮೀಟರ್ (೧೩೭೫ ಚದರ ಮೈಲಿಗಳಷ್ಟು) ವ್ಯಾಪಿಸಿದ ಒಟ್ಟು ಶೇಖರಣಾ ಸಾಮಾರ್ಥ್ಯ ೪೪.೯೪ ದಶಲಕ್ಷ ಘನ ಮೀಟರ್ (೧೫೮೭ ಟಿ.ಎಂ.ಸಿ) ವಿಸ್ತರಿಸಿದೆ ಒಟ್ಟು ಜಲಾವೃತ್ತ ಪ್ರದೇಶ ೬೬೮.೧೦ ಹೆಕ್ಟರ್ (೧೬೩೬ ಎಕರೆಗಳು) ಪ್ರದೇಶವನ್ನು ಆಕ್ರಮಿಸಿಕೊಂಡಿದೆ ಇವರ ಗರಿಷ್ಠ ಪ್ರವಾಹದ ಅಂದಾಜು ಪರಿಣಾಮ ೫೯೪೬.೫೪ ಕ್ಯೂಮೆಕ್ಸ್ (೨,೧೦,೦೦೦ ಕ್ಯೂಸೆಕ್) ಗಳಷ್ಟಿದೆ ಅಣೆಕಟ್ಟಿನ ಮಾದರಿಯಲ್ಲಿ ಇದು ಮಿಶ್ರ ಮಾದರಿಯಾಗಿದ್ದು, ಬಲಭಾಗದಲ್ಲಿ ಕೋಟಿಗಾಗಿ ಕ್ರೆಸ್ಟ್‌ಗಟ್ ಅಳವಡಿಸಿದೆ, ಕಾಂಕ್ರಿಟಿನ ಭಾಗವಿದು ಉಳಿದಿದ್ದ ಭಾಗ ಮಣ್ಣಿನ ಏರಿಯನ್ನು ಹೊಂದಿದೆ ಇದರ ಅಣೆಕಟ್ಟಿನ ಎತ್ತರ ೭೨೦ ಮೀಟರ್‌ಗಳಿಷ್ಟಿದ್ದು, (೨೩೬೨ ಅಡಿಗಳಿದೆ) ಈ ಅಣೆಕಟ್ಟಿನ ಎತ್ತರ ೨೬೬೮೫ ಮೀಟರ್ (೯೭ ಅಡಿ ಇದೆ) ಇದರ ನಿರುಪಯುಕ್ತ ಶೇಕರಣ ಸಾಮರ್ಥ್ಯ ಮಟ್ಟ ೫೯೪೦೫೫ ಮೀಟರ್ (೧೯೪೯ ಅಡಿಗಳಿಷ್ಟಿದೆ) ಇದರ ಜಲಾಶಯದ ಪೂರ್ಣ ಮಟ್ಟ ೬೦೫.೦೨೮ ಮೀಟರ್ (೧೯೮೫ ಅಡಿಗಳಿಷ್ಟಿದೆ). ಇದರ ಕೋಡಿಯ ನೆತ್ತ ಅಂದರೆ ಕ್ರೆಸ್ಟ್ ಮಟ್ಟ ೫೯೩.೦೨೮ ಮೀಟಿರ್ (೧೯೪೬ ಅಡಿ) ಇದೆ ಇದರ ನೀರಿನ ಗರಿಷ್ಟ ಮಟ್ಟ ೬೦೬.೭೬೧ ಮೀಟಿರ್ ೧೯೯೧ ಅಡಿಗಳಿಷ್ಟಿದೆ. ಈ ಅಣೆಕಟ್ಟುಗಳಿಗೆ ಕೋಡಿ ಬಾಗಿಲುಗಳಿವೆ. ರೇಡಿಯಲ್ ಗೇಟುಗಳು (೧೪.ಮೀ, ೧೨ಮೀ) ಇವೆ. ನಾಲೆಯ ತೂಬಿನ ಮಟ್ಟ ೫೯೪.೦೫೫ ಮೀಟರ್ (೧೯೪೯ ಅಡಿಇದೆ) ಅಣೆಕಟ್ಟಿನ ಏರಿಯ ಮಟ್ಟ ೬೦೮.೬೮೫ ಮೀಟರ್ (೧೯೯೭ಅಡಿ) ಇದೆ ಇದರ ಉಪಯುಕ್ತ ಶೇಖರಣಾ ಸಾಮರ್ಥ್ಯ ೪೦.೭೪ ದಶಲಕ್ಷ ಘನ ಕಿ.ಮೀ ೧.೪೩೦.ಟಿ.ಎಂ.ಸಿ. ಇದೆ.
ಈ ಅಣೆಕಟ್ಟು ನಾಲೆಗಳನ್ನು ಒಳಗೊಂಡಿದೆ :-
೧)ಎಡದಂಡೆ ನಾಲೆ - ಇದರ ಉದ್ದ ೨೩ ಕಿ.ಮೀ ಇದ್ದು, ೧೮೨೦ ಹೆಕ್ಟೆರ್ (೪೫೦೦ ಎಕರೆ) ಅಚ್ಚುಕಟ್ಟು ಪ್ರದೇಶ ಹೊಂದಿದೆ.
೨)ಬಲದಂಡೆ ನಾಲೆ - ಇದರ ಉದ್ದ ೨೨ ಕಿ.ಮೀ ೧೨೧೪ ಹೆಕ್ಟೆರ್ (೩೦೦೦ ಎಕರೆ) ಅಚ್ಚುಕಟ್ಟು ಪ್ರದೇಶವನ್ನು ಒಳಗೊಂಡಿದೆ.
ನಾಲೆಗಳನ್ನು ಇದು ಒಳಗೊಂಡಿದ್ದು, ಈ ಕೆಳಕಂಡಂತೆ ತಿಳಿಸಲಾಗಿದೆ. ಎಡದಂಡೆ ನಾಲೆ ೧೮ಕಿ.ಮೀ ೧೪೫೭ ಹೆಕ್ಟೆರ್ (೩೬೦೦) ಎಕರೆ ಪ್ರದೇಶ ಒಳಗೊಂಡಿದೆ. ಬಲದಂಡೆ ನಾಲೆ-೩೪.ಕಿ.ಮೀ ೧೭೪೦ ಹಕ್ಟೆರ್ (೪೩೦೦) ಎಕರೆ ಪ್ರವೇಶ ಒಳಗೊಂಡಿದೆ. ಈ ಅಣೆಕಟ್ಟಿನ ಒಟ್ಟು ಬಳಕೆಯ ಪರಿಣಾಮ ೮೦೯೯ ದಶಕ್ಷ ಘನ ಮೀ. ೨.೮೬ ಟಿ.ಎಂ.ಸಿ ನೀರನ್ನು ಒಳಗೊಂಡಿದೆ. ಇದರ ಉಪಯುಕ್ತ ಶೇಖರಣಾ ಸಾಮರ್ಥ್ಯ ೪೦೪೭ ದಶಲಕ್ಷ ಘನ ಕಿ.ಮೀ. ೧೪೩೦ ಟಿ.ಎಂ.ಸಿ ನೀರನ್ನು ಒಳಗೊಂಡಿದೆ. ಒಟ್ಟು ಅಚ್ಚುಕಟ್ಟು ಬೆಳೆಯ ವಿಸ್ತೀರ್ಣ ೬೨೩೨ ಹೆಕ್ಟರ್ (೧೫೪೦೦ ಎಕರೆ) ಪ್ರದೇಶವನ್ನು ಒಳಗೊಂಡಿದೆ.
ಈ ಅಣೆಕಟ್ಟಿನಿಂದಾಗಿ ಮಳುಗಡೆಯಾಗುವ ಪ್ರದೇಶಗಳು :-
ಒಟ್ಟು ವಿಸ್ತೀರ್ಣ ೬೬೫೧೦ ಹೆಕ್ಟರ್
ಖಾಸಗಿ ಹಿಡುವಳಿ೫೧೩.೫೪ ಹೆಕ್ಟರ್
ಸರ್ಕಾರಿ ಹಿಡುವಳಿ೧೫೧.೫೬ ಹೆಕ್ಟರ್
ಮುಳುಗಡೆಯಾಗುವ ಒಟ್ಟು ಹಳ್ಳಿಗಳು :-
೧)ಹೊನ್ನಗಾನಹಳ್ಳಿ
೨)ಮಾರ್ಗದತ್ತಯ್ಯನಗುಂದಿ
೩)ಮಾರೇಗೌಡನಹಳ್ಳಿ
೪)ಕೂತಗಾಳೆ
೫)ಮಾರಸಂದ್ರ
 ಇನ್ನು ಮೊದಲಾದ ಹಳ್ಳಿಗಳು ಈ ನೀರಾವರಿ ಯೋಜನೆಯಿಂದ ಮುಳುಗಡೆಯನ್ನು ಹೊಂದುತ್ತದೆ. ಮುಳುಗಡೆಯಾಗುವ ಒಟ್ಟು ಮನೆಗಳು ೩೯೨ ಮನೆಗಳಿಗೆ ಹಾನಿಯನ್ನುಂಟು ಮಾಡುತ್ತದೆ. ಪ್ರತಿ ಹೆಕ್ಟರ್‌ಗೆ ಆಗುವ ವೆಚ್ಚ ೨೭೬,೫೦೮೦೦ ಹಾಗೂ ಪ್ರತಿ ಎಕರೆಗೆ ಆಗುವ ವೆಚ್ಚ ೭೧,೪೨೯,೦೦ ರಷ್ಟು ಈ ಅಣೆಕಟ್ಟಿನ ವೆಚ್ಚ ಮೇ ೨೦೦೭ ರವರೆಗೆ ರೂ. ೧೧೫೦೦,೨೬ ಲಕ್ಷಗಳಷ್ಟಾಗಿತ್ತು ಇದರಿಂದ ಪ್ರಯೋಜನ ಪಡೆಯುವ ತಾಲ್ಲೂಕುಗಳು ಕನಕಪುರ ಇಲ್ಲಿ ಬೆಳೆಯುವ ಬೆಳೆಗಳ ಮಾದರಿ ಅರೆ ನೀರಾವರಿ ಮಿಶ್ರ ಬೆಳೆಗಳು ಈ ಅಣೆಕಟ್ಟಿನ ಹಾನಿಯಿಂದ ಪುನರ್ವಸತಿ ಒದಗಿಸುವ ಕಾಲೋನಿಗಳು ಮರಿಗೌಡನದೊಡ್ಡಿ ಮತ್ತು ಪಿಳ್ಳೇಗೌಡನದೊಡ್ಡಿಯಲ್ಲಿ ಪುನರ್ವಸತಿ ಕಾಲೋನಿಯಗಳನ್ನು ಒದಗಿಸಲಾಗಿದೆ.
ಯೋಜನೆಯ ಪ್ರಸ್ತುತ ಸ್ಥಿತಿ :-
ಯೋಜನೆಯು ೧೯೮೪-೮೫ ರಲ್ಲಿ ಪ್ರಾರಂಭವಾಗಿದ್ದರು ಇದು ಇನ್ನು ಪ್ರಗತಿಯಲ್ಲಿದೆ. ಕಾಮಾಗಾರಿಗಳ ಹಂತ ದಿನಾಂಕ ೩೧-೦೫-೨೦೦೭ ರಂತೆ
೧)ಅಣೆಕಟ್ಟು ಕಾಮಗಾರಿ :-
ಎ) ಮಣ್ಣುಏರಿ ಮತ್ತು ಕಾಂಕ್ರಿಟ್ ಕೋಡಿ ಅಣೆಕಟ್ಟು ಪೂರ್ಣಗೊಂಡಿದೆ
ಬಿ) ರೇಡಿಯಲ್ ಗೇಟ್ ಕಾಮಗಾರಿಯು ಮುಕ್ತಾಯದ ಹಂತದಲ್ಲಿದೆ. ಗ್ಯಾಂಟ್ರಿ ಕ್ರೇಸ್ ಕಾಮಗಾರಿಗಳು ಪೂರ್ಣಗೊಂಡಿದ್ದು ಸ್ಟಡ್‌ಲಾಗ್ ಗೇಟ್‌ನ ಕೆಲವು ಬಿಡಿ ಭಾಗಗಳ ಅಳವಡಿಕೆ ಕೆಲವು ಪ್ರಗತಿಯಲ್ಲಿದ್ದು, ಜುಲೈ ೨೦೦೭ರ ಅಂತ್ಯಕ್ಕೆ ಪೂರ್ಣಗೊಳಿಸಲಾಗುವುದು.
೨)ಬಲದಂಡೆ ನಾಲೆ :- ಬಲದಂಡೆ ಹರಿ ಕಾಲುವೆ ೨೨೦೦೦ ಕಿ.ಮೀ ಉದ್ದವಿದೆ. ೦ ಕಿ.ಮೀ ಯಿಂದ ೨೨ನೇ ಕಿ.ಮೀಟರ್‌ವರೆಗೂ ಎಲ್ಲಾ ಮುಖ್ಯ ಕಾಲುವೆಯ ಅಗೆತ ಹಾಗೂ ಅಡ್ಡ ಮೋರಿಗಳ ಕೆಲಸವು ಮುಗಿದಿರುತ್ತದೆ. ೦ಕಿ.ಮೀಟರ್ ನಿಂದ ೧೫ನೇ ಕಿ.ಮೀಟರ್ ವರೆಗೆ ಬರುವ ಎಲ್ಲಾ ವಿತರಣಾ ನಾಲೆಗಳ ಕೆಲಸವು ಮುಗಿದಿದ್ದು ನೀರನ್ನು ಸಹ ಬಡಿಲಾಗಿದೆ ೧೬ನ ಕಿ.ಮೀಟರ್ ನಿಂದ ೨೨ನೇ ಕಿ.ಮೀಟರ್‌ವರೆಗೆ ಬರುವ ವಿತರಣಾ ನಾಲೆಗಳ ಕೆಲಗಳು ಪ್ರಗತಿಯಲ್ಲಿದೆ ಪ್ರಸ್ತುತ ವರ್ಷ ಎಲ್ಲಾ ಕಾಮಗಾರಿಗಳು ಮುಗಿಸಲು ಉದ್ದೇಶಿಸಲಾಗಿದೆ. ಹಾಗೂ ಅಚ್ಚುಕಟ್ಟು ೧೨೧೪.೦೦ ಹೆಕ್ಟರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಲಾಗಿದೆ.
೩)ಎಡದಂಡೆ ನಾಲೆ :- ಎಡದಂಡೆ ಹರಿ ಕಾಲುವೆ ೨೩.೦೦ ಕಿ.ಮೀ ಉದ್ದವಿದೆ ೦ ಕಿ.ಮೀನಿಂದ ೨೨ನೇ ಕಿ.ಮೀಟರ್‌ವರೆಗೂ ಎಲ್ಲಾ ಮುಖ್ಯ ಕಾಲುವೆಯ ಅಗೆತ ಹಾಗೂ ಅಡ್ಡ ಮೋರಿಗಳ ಕೆಲಸವು ಮುಗಿದಿರುತ್ತದೆ. ೦.ಕಿ.ಮೀನಿಂದ ೧೫ನೇ ಕಿ.ಮೀವರೆಗೆ ಬರುವ ಎಲ್ಲಾ ವಿತರಣಾ ನಾಲೆಗಳ ಕೆಲಸವು ಮುಗಿದಿದ್ದು ನೀರನ್ನು ಸಹ ಬಿಡಿಸಲಾಗಿದೆ. ೧೬ನೇ ಕಿ.ಮೀನಿಂದ ೨೨ನೇ ಕಿ.ಮೀವೆರೆಗೆ ಬರುವ ವಿತರಣಾ ನಾಲೆಗಳ ಕೆಲಸಗಳು ಪ್ರಗತಿಯಲ್ಲಿದ್ದು, ಪ್ರಸ್ತುತ ವರ್ಷ ಎಲ್ಲ ಕಾಮಗಾರಿಗಳು ಮುಗಿಸಲು ಉದ್ದೇಶಿಸಲಾಗಿದೆ. ಹಾಗೂ ಅಚ್ಚುಕಟ್ಟು ೧೮೨೧.೦೦ ಹೆಕ್ಟರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಿಗಿಸಲಾಗಿದೆ.
೪)ಎಡದಂಡೆ ಏಕ ನೀರಾವರಿ ಯೋಜನೆ :-
ಎ) ಎಡದಂಡೆ ಏಕ ನೀರಾವರಿ ಹೆಡ್‌ವರ್ಕ್ಸ್ ಸಿವಿಲ್ ಕಾಮಗಾರಿಗಳಾದ ಜಾಕ್‌ವೆತ್ ಮತ್ತು ಪಂಪು ಮನೆ ನಿರ್ಮಾಣ ಹಾಗೂ ಸ್ವಿಚ್ ಬೋರ್ಡ್ ರೂಂ ನಿರ್ಮಾಣದ ಕಾಮಗಾರಿಗಳು ಪೂರ್ಣಗೊಂಡಿದೆ ಪಂಪು ಯಂತ್ರೋಪಕರಣಗಳು ಸರಬರಾಜು ಮತ್ತು ಜೋಡಣೆ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಜೂನ್ ೨೦೦೭ರ ಅಂತ್ಯಕ್ಕೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಹಾಗೂ ಪ್ರಾರಂಭ ಮಾಡಲು ಇನ್ಸ್‌ಪೆಕ್ಟರೇಟ್ ಆಫ್ ಎಲೆಕ್ಟ್ರಿಕಲ್‌ರವರಿಗೆ ಪತ್ರ ವ್ಯವಹಾರ ಮಾಡಲಾಗಿದ್ದು ಮೀಟರ್ ಅಳವಡಿಸಬೇಕಾಗಿರುತ್ತದೆ.
ಬಿ) ಎಡದಂಡೆ ಏಕ ನೀರಾವರಿ ಕಾಲುವೆ - ಈ ಕಾಲುವೆ ಉದ್ದ ೨೧ ಕಿ.ಮೀ (೧೮೧೩ ರಿಸರ್ವ್ ಕಾಲುವೆ) ಇದ್ದು, ಪೂರ್ಣಗೊಂಡಾಗ ೧೪೫೭ ಹೆಕ್ಟರ್‌ಗೆ ನೀರಾವರಿ ಸಾಮರ್ಥ್ಯ ಕಲ್ಪಿಸಲಾಗುವುದು, ಕಾಲುವೆಯ ಮಣ್ಣು ಅಗೆತದ ಕೆಲಸ ೦-೧೭ನೇ ಕಿ.ಮೀ ವರೆಗೆ ಕೈಗೊಳ್ಳಲಾಗಿದ್ದು, ಕೆಲವು ಸ್ಥಳಗಳಲ್ಲಿ ಹೊರತು ಪಡಿಸಿ ಬಹುತೇಕ ಪೂರ್ಣಗೊಂಡಿದೆ. ಸುಮಾರು ವರ್ಷಗಳಿಂದ ಕುಂಠಿತಗೊಂಡಿರುವ ಕೆಲವು ಲೈನಿಂಗ್ ಮೇಲ್ಛಾವಣೆ ಮತ್ತು ಅಡ್ಡ ಮೋರಿ ಕೆಲಸಗಳು ವಿವಿಧ ಹಂತದಲ್ಲಿದ್ದು ಪ್ರಸ್ತುತ ವರ್ಷದಲ್ಲಿ ಅವುಗಳನ್ನು ಮತ್ತು ಉಳಿದ ಕಾಮಗಾರಿಗಳನ್ನು ಉಳಿದ ಕಾಮಗಾರಿಯನ್ನು ಪೂರ್ಣಗೊಳಿಸಲು ಕಾರ್ಯಕ್ರಮವನ್ನು ಹಕಿಕೊಳ್ಳಲಾಗಿದೆ ಈ ಭಾಗದಲ್ಲಿ ಬರುವ ವಿತರಣಾ ನಾಲೆಯ ಕಾಮಗಾರಿಗಳು ಆರಂಭಗೊಂಡಿದ್ದು, ಮಾರ್ಚ್ ೨೦೦೮ ರ ಅಂತ್ಯಕ್ಕೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ.
ಸಿ) ಬಲದಂಡೆ ಏಕ ನೀರಾವರಿ ಯೋಜನೆ :
೧)ಬಲದಂಡೆ ಏಕ ನೀರಾವರಿ ಹೆಡ್‌ವರ್ಕ್ ಸಿವಿಲ್ ಕಾಮಗಾರಿಗಳಾದ ಜಾಕ್‌ವೆಡ್ ಮತ್ತು ಪಂಪು ಮನೆ ನಿರ್ಮಾಣ ಹಾಗೂ ಸ್ಚಿಚ್ ಬೋರ್ಡ್ ರೂಂ ನಿರ್ಮಾಣದ ಕಾಮಾಗರಿಗಳು ಪೂರ್ಣಗೊಂಡಿವೆ. ಪಂಪು ಮತ್ತು ಯಂತ್ರೋಪಕರಣಗಳು ಸರಬರಾಜು ಮತ್ತು ಜೋಡಣೆ ಕಾಮಗಾರಿಯ ಡಿ.ಟಿ.ಎಸ್.ನ ಪ್ರಸ್ತಾವನೆಯನ್ನು ವ್ಯವಸ್ಥಾಪಕ ನಿರ್ದೇಶಕರ ಕಛೇರಿ ಸಲ್ಲಿಸಿದ್ದು ಅದಕ್ಕೆ ತಾಂತ್ರಿಕ ಉಪ ಸಮಿತಿಯಿಂದ ಅನುಮೋದನೆಯನ್ನು ನಿರೀಕ್ಷಿಸಲಾಗಿದೆ. ಈ ಕಾಮಾಗಾರಿಯನ್ನು ೨೦೦೭-೦೮ ನೇ ವರ್ಷದಲ್ಲಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ.
೨)ಬಲದಂಡೆ ಏಡ ನೀರಾವರಿ ಕಾಲುವೆ:
ಈ ಕಾಲುವೆ ಉದ್ದ ೩೪ ಕಿ.ಮೀಟರ್ ಇದ್ದು, ಪೂರ್ಣಗೊಂಡಾಗ ೧೭೪೦ ಹೆಕ್ಟರ್‌ಗೆ ನೀರಾವರಿ ಸಾಮರ್ಥ್ಯ ಕಲ್ಪಿಸಲಾಗುವುದು ೦.೨ಕಿ.ಮೀಟರ್ ವರೆಗೆ ಮಣ್ಣು ಅಗೆತದ ಕಲಸವು ಪೂರ್ಣಗೊಂಡಿದೆ ಪ್ರಸ್ತುತ ವರ್ಷದಲ್ಲಿ ೩೪ನೇ ಕಿ.ಮೀ ವರೆಗೆ ಮಣ್ಣು ಅಗೆತ ಕೆಲಸ ಲೈನಿಂಗ್ ಮತ್ತು ಅಡ್ಡ ಮೋರಿ ಕೆಲಸಗಳನ್ನು ಹಾಗೂ ವಿತರಣಾ ನಾಲೆಗಳ ಕಾಮಾರಿಗಳನ್ನು ಪೂರ್ಣಗೊಳಿಸಲು ಪ್ರಸ್ತುತ ವರ್ಷದಲ್ಲಿ ಕಾರ್ಯಕ್ರಮವನ್ನು ಹಾಕಿಕೊಳ್ಳಲಾಗಿದೆ.
ಅಚ್ಚುಕಟ್ಟು ಘೋಷಣೆ
ಹರಿಯುವ ನಾಲೆ
ಒಟ್ಟು ಅಚ್ಚುಕಟ್ಟು
ಘೋಷಣೆ
ಮಾರ್ಚ್ ೨೦೦೮ ಅಂತ್ಯಕ್ಕೆ ಘೋಷಣೆ ಮಾಡಬೇಕಾಗಿರುವುದು
ಎಡದಂಡೆ ಯಿಂದ ೨೩. ಕಿ.ಮೀ
೧೮೨೧ಹೆ
೧೮೨ಹೆ
-
ಬಲದಂಡೆ ಯಿಂದ ೨೧ಕಿ.ಮೀ
೧೨೧೪ಹೆ.
೧೨೧೪ಹೆ-ಒಟ್ಟು ೩೦೩೫ಹೆ.
೩೦೩೫(ಮಾರ್ಚ್೨೦೦೭ಅಂತ್ಯಕ್ಕೆ)-
ಎಡದಂಡೆ ಎಡ ನೀರಾವರಿ(೦ಯಿಂದ ೧೮ಕಿ.ಮೀ.
೧೪೫೭ಹೆ. ಇರುವುದಿಲ್ಲ
೧೪೫೭ಹೆ.
ಬಲದಂಡೆ ಎಡ ನೀರಾವರಿ ೦ಯಿಂದ೩೪.ಕಿ.ಮೀ.
೧೭೪೦ಹೆ. ಇರುವುದಿಲ್ಲ
೧೭೪೦ಹೆ. ಒಟ್ಟು
೩೧೯೭ಹೆ - ೩೧೯೭ಹೆ.
ನಿವ್ವಳ ೬೨೩೨ಹೆ. ೩೦೩೫ ೩೧೯೭ಹೆ.

ಅದ್ಯಾಯ-೦೨
ಸಾಹಿತ್ಯ ಪುನರ್‌ವಿಮರ್ಶೆ
ಮರೆಯಾದ ಸೌಜನ್ಯ ಮರೆಯುವ ಮಾಲಿನ್ಯ :
ಅರ್ಕಾವತಿ ನದಿ ಅಂಗಳದಲ್ಲಿಯೇ ಆಡಿ ಬೆಳೆದ ಸಿ. ನಾರಾಯಣಸ್ವಾಮಿ ರವರು ಅತ್ಯಂತ ಬೇಸರದಿಂದ ಈ ಮಾತು ಹೇಳಿರುತ್ತಾರೆ. ನಮ್ಮನ್ನು ಕಾಪಾಡುವ ತಾಯಿಯನ್ನು ನಾವು ಸಂರಕ್ಷಿಸಬೇಕು ಎನ್ನುವ ಸೌಜನ್ಯ ಕಾಳಜಿ ಮರೆಯಾಗಿದೆ. ಆದ್ದರಿಂದಲೇ ಎಲ್ಲೆಡೆ ಮಾಲಿನ್ಯ ತಾಂಡವಾಡುತ್ತಿದೆ. ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಇತ್ತಿಚೀನ ಸರ್ವೆ ಇಲಾಖೆ ವರದಿ ಪಾತ್ರದ ಸಮೀಕ್ಷೆ ನಡೆಸಿದ ಅದರ ವರದಿ ಬಂದ ಬಳಿಕ ನದಿ ಪಾತ್ರ ಎಲ್ಲೆಲ್ಲಿ ಒತ್ತುವರಿಯಾಗಿದೆ ಎನ್ನುವುದು ನಿಖರವಾಗಿ ಗೊತ್ತಗಲಿದೆ.
ಕಾವೇರಿ ನೀರಾವರಿ ನದಿ ಪಾತ್ರದ ಕೈಗಳನ್ನು ಪರೀಕ್ಷೀಸಿದೆ. ಅದರ ಪ್ರಕಾರ ಬಹುತೇಕ ಅಂಶಗಳು ಒತ್ತು ವರಿಯಾಗಿದೆ. ಅರಳು ಮಲ್ಲಿಗೆ, ದೊಡ್ಡ ತುಮಕೂರು, ಮಜರಾ, ಹೊಸಹಳ್ಳಿ ಮತ್ತು ತಲಗವಾರ ಕೆರೆಗಳ ಅಂಗಳದಲ್ಲಿ ಅಂತರ್ಜಲ ಹೀರುವ ನೀಲಗಿರಿ ಕ್ಯಾಸುರಿನಾದಂತಹ ಮರಳಗನ್ನು ಬೆಳಸಲಾಗಿದೆ. ರಾಮನಗರದಲ್ಲಿ ರೇಷ್ಮೆ ಕೈಗಾರಿಕಾ ಉದ್ಯಮಗಳು ರಾಸಾಯನಿಕ ತ್ಯಾಜ್ಯವನ್ನು ನದಿ ಪಾತ್ರಕ್ಕೆ ಹೊಂದಿಕೊಂಡ ಜಮೀನಿಗೆ ಹರಿಸುತ್ತಿದೆ. ಇದರಿಂದ ಅರ್ಕಾವತಿ ಕಾಲುವೆಗೂ ತ್ಯಾಜ್ಯ ಹರಿದು ಬರುತ್ತಿದೆ.
ನೆಲಮಂಗಲ, ತಾವರೆಕರೆ, ಮಾಗಡಿ ನಡುವಿನ ಸೊಂಡೆಕೊಪ್ಪ, ವರ್ತೂರು ಕೋಡಿ ಭಾಗಗಳಲ್ಲಿ ಮರಳು ಗಣಿಗಾರಿಕೆ ವ್ಯಾಪಕವಾಗಿದೆ. ಮಂಚನ ಬೆಲೆ ಜಲಾಶಯದ ೩೪ ಕಿ.ಮೀ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಮರಳು ಗಣಿಗಾರಿಕೆ ನಡೆಯುತ್ತಿದೆ. ಆಗಲಹಳ್ಳಿ, ರಾಮಪುರ, ಲಿಂಗನೂರು ನದಿ ಪಾತ್ರದ ಉದ್ದಕ್ಕೂ ನಡೆಯುತ್ತಿದೆ. ಇತ್ತಿಚೀನ ಮಂಚನ ಬೆಲೆ ಜಲಾಶಯದ ಏರಿಯು ಪಕ್ಕದುದ್ದಕ್ಕೂ ಮರಳು ತೆಗೆಯುತ್ತಿದೆ. ಹೀಗೆ ಮುಂದುವರೆದರೆ ಭವಿಷ್ಯದಲ್ಲಿ ಜಲಾಶಯದ ಏರಿಯೂ ಸಡಿಲವಾಗಿ ಬಿರುಕು ಬಿಡುವ ಸಾಧ್ಯತೆ ಇದೆ ಎನ್ನುತಾರೆ. ನದಿ ಪಾತ್ರದ ಗದಗಯ್ಯನದೊಡ್ಡಿ ಕೃಷಿಕ ಶಿವರಾಜೇಗೌಡ.
ಶಿವದಾಸ್
 ಹಾರೋಬೆಲೆ ಅಣೆಕಟ್ಟನ್ನು ಕಟ್ಟಲು ಹೆಚ್ಚು ಸಮಯವನ್ನು ತೆಗೆದುಕೊಂಡಿತ್ತು, ಇದು ಅರ್ಕಾವತಿ ನದಿಯ ಕಟ್ಟ ಕಡೆಯ ಡ್ಯಾಂ ಆಗಿದ್ದು, ನೀರಾವರಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ.


ಕೆರೆಗಳಿಗೆ ಜೀವ ತುಂಬಿದ ಅಂತರಗಂಗೆ
ನಂದಿ ಬೆಟ್ಟದ ನೈರುತ್ಯ ಭಾಗದಲ್ಲಿ ಜನಿಸುವ ಅರ್ಕಾವತಿ ದೇಶದ ಇತರ ನದಿಗಳಂತಲ್ಲದೆ ಬಲು ವಿಶಿಷ್ಟ ಕಾರಣಗಳಿಗಾಗಿ ತನ್ನತನ ಕಾಯ್ದುಕೊಂಡವಳು. ನಂದಿ ಬೆಟ್ಟವಲ್ಲದ ಚೆನ್ನಗಿರಿ ಬೆಟ್ಟ ಹುಲುಕಡಿ ಬೆಟ್ಟ ಮದುರೆ ಮತ್ತು ಸೊಣ್ಣೆನಹಳ್ಳಿ ದಿಬ್ಬಗಳು ಸಹ ಈ ನದಿಯ ಮೂಲಗಳಾಗಿವೆ. ಹೆಸರುಘಟ್ಟದವರೆಗೆ ಗುಪ್ತಗಾಮಿನಿಯಾಗಿ ಹರಿಯುವ ಈ ನದಿಗೆ ಕಳ್ಳಹೊಳೆ ಎಂದು ಅಡ್ಡ ಹೆಸರು ಉಂಟು.
ನಂದಿಬೆಟ್ಟದ ಸಂಗಮದವರೆಗೆ ಅರ್ಕಾವತಿ ೧೦೯ ಕಿ.ಮೀಟರ್ ಉದ್ದ ಚಲಿಸುತ್ತಾಳೆ. ಆಗಿನ ದಿನಗಳಲ್ಲಿ ಈ ನದಿಯ ಮೂಲ ಪ್ರದೇಶದ ದೊಡ್ಡರಾಯಪ್ಪನಹಳ್ಳಿ, ಚಿಕ್ಕರಾಯಪ್ಪನಹಳ್ಳಿ, ಸೀಗೆಹಳ್ಳಿ, ಚೆನ್ನಾಪುರ, ಹೆಗ್ಗಡಿಹಳ್ಳಿ ಗ್ರಾಮಗಳು ಮಲೆನಾಡಿನ ಪ್ರತಿಬಿಂಬದಂತೆ ಗೊಚರಿಸುತ್ತಿದ್ದವು. ಕಾಡು ತೊರೆಗಳು ಪುಟ್ಟ ಜಲಪಾತಗಳು ಹಸಿರು ಮರುಕಳಿಸುವ ಮರಗಳು ತುಂಬಿ ತುಳುಕುತ್ತಿದ್ದವು. ಶಿವಮೊಗ್ಗದ ಚಳಿಯನ್ನು ಹೆಗ್ಗಡ ಹಳ್ಳಿಯಲ್ಲೇ ಅಸ್ವಾದಿಸಬಹುದಿತ್ತು, ನವಿಲುಗಳು ಸಹ ಇಲ್ಲಿ ಹೇರಳವಾಗಿದ್ದವು, ಕಾಡು ಪ್ರಾಣಿಗಳಿಗೂ ಅರ್ಕಾವತಿ ಒದಗಿಸಿದ್ದಳು.
ದಕ್ಷಿಣ ಪ್ರಸ್ಥ ಭೂಮಿಯಲ್ಲೇ ಎತ್ತರವಾಗಿರುವ ಸಮುದ್ರಮಟ್ಟದಿಂದ ೪೮೫೨ ಮೀಟರ್ ಎತ್ತರ ಪಂಚಗಿರಿ ಶ್ರೇಣಿಗಳಲ್ಲಿ ಜನಿಸುವ ಈ ನದಿ ಉತ್ತರ ದಕ್ಷಿಣಾಭಿಮುಖವಾಗಿ ಹರಿಯುತ್ತದೆ. ಆಂಧ್ರಪ್ರದೇಶದ ಪಾಲಾಕ ಮತ್ತು ಪೆನ್ನಾರ್ ನದಿಗಳಿಗೂ ಈ ಗಿರಿಶ್ರೇಣಿಯೇ ಮೂಲವಾಗಿದೆ.
ಅರ್ಕಾವತಿ ನದಿ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಮತ್ತು ರಾಮನಗರ ಜಿಲ್ಲೆಗಳ ವ್ಯಾಪ್ತಿಯನ್ನು ಒಳಗೊಂಡಿದೆ. ಈ ನಾಲ್ಕು ಜಿಲ್ಲೆಗಳ ನಾಗರೀಕತೆ ಮತ್ತು ಸಂಸ್ಕೃತಿಗಳ ಉತ್ಪನಕ್ಕೆ ಆಕೆ ನೀರೆರೆದು ಕರುಣಿಸಿದ್ದಾಳೆ.
ನೀರಿಗೆ ಬಿದ್ದ ವಿಷ ನದಿ ಮೇಲೆ ಸಮಾದಿ :-
ಅರ್ಕಾವತಿ ನದಿ ಪಾತ್ರದಲ್ಲಿ ೧೭೭೫ ಕೆರೆಗಳು ಇದ್ದವೆಂದರೆ, ಈಗ ಯಾರು ನಂಬುವುದಿಲ್ಲ. ಕೆಲವೇ ವರ್ಷಗಳ ಅವಧಿಯಲ್ಲಿ ಸಾವಿರದ ಬದಲಿಗೆ ಅವುಗಳ ಸಂಖ್ಯೆ ನೂರಕ್ಕೆ ಕುಸಿದುಬಿಟ್ಟಿದೆ. ಜನವಸತಿ ಪ್ರದೇಶದ ಕೆರೆಗಳು ಕಸದ ತೊಟ್ಟಿಗಳಾಗಿವೆ ಎಂದು ನದಿ ಪುನರ್‌ಶ್ಚೇತನಕ್ಕೆ ಹೋರಾಡುತ್ತಿರುವ ತಂಡದ ಸದಸ್ಯ ದೊಡ್ಡಿ ಶಿವಾರಂ ವಿಷಾದದಿಂದ ಹೇಳಿದ್ದಾರೆ. ದೊಡ್ಡಬಳ್ಳಾಪುರ ಹೊರವಲಯದಲ್ಲಿ ೨೦೦ಕ್ಕೂ ಅಧಿಕ ಕೈಗಾರಿಕೆಗಳು ಠಿಕಾಣಿ ಹೂಡಿವೆ. ಅವುಗಳು ವಿಷಯುಕ್ತ ನೀರನ್ನು ನದಿ ಪಾತ್ರದಲ್ಲಿಯೆ ಹರಿಯಲು ಬಿಡತ್ತಿವೆ. ೨೦ ವರ್ಷಗಳ ಹಿಂದೆ ಅರ್ಕಾವತಿ ದಂಡೆ ಮೇಲಿನ ಪ್ರತಿ ಗ್ರಾಮವು ಸ್ವಂತದೊಂದು ಕೆರೆ ಹೊಂದಿ ಜಲ ಸಂಮೃದ್ದಿಯಿಂದ ನಳನಳಿಸುತ್ತಿತ್ತು. ನೀರಾವರಿಗು ಕೆರೆ ನೀರೆ ಬಳಕೆ ಆಗುತ್ತಿತ್ತು. ಉತ್ತಮ ಫಸಲಿನೊಂದಿಗೆ ಜನಜೀವನ ನೆಮ್ಮದಿಯಿಂದ ಇತ್ತು.
ನೀರಿಗೆ ವಿಷ ಬೆರತ ಮೇಲೆ ಇಂದಿನ ವ್ಯವಸಾಯದ ದಕ್ಕೆ ಬದಲಾಯಿತು. ಅದು ಜನಜೀವನದ ಮೇಲು ನೇರ ಪರಿಣಾಮಬೀರಿತು. ತರಕಾರಿಗಳ ಮೂಲಕ ಊಟದ ತಟ್ಟೆಯಲ್ಲೂ ವಿಷದ ಆಗಮನ ಆಯಿತು. ರೋಗಗಳು ಉಲ್ಬಣಗೊಂಡವು. ಚರ್ಮದ ತುರಿಕೆ ಸಮಸ್ಸೆ ಬೆನ್ನಿಗೆ ಅಂಟಿಕೊಂಡಿತು. ಈ ರೋಗಗಳ ಸರಣಿಗೆ ಇನ್ನು ಕೊನೆ ಎಂಬುದೇ ಇಲ್ಲ ಎನ್ನುತ್ತಾರೆ ಭೂ ವಿಜ್ಞಾನಿ ಡಾ|| ಎಲೆ ಲಿಂಗರಾಜು.

ಅದ್ಯಾಯ-೦೩
ಸಂಶೋದನಾ ವಿಧಾನ
ಒಂದು ವಸ್ತು ಅಥವಾ ಸಂಗತಿಯನ್ನು ಆಳವಾಗಿ ನಿಶ್ಚಿತವಾಗಿ ಕುರಿತು ಅಧ್ಯಯನವ ಮಾಡಿ ಮತ್ತಷ್ಟು ಹೊಸ ಸಂಗತಿಗಳನ್ನು ಅಥವಾ ವಿಚಾರಗಳನ್ನು ತಿಳಿಸುವ ಕಾರ್ಯ ಸಂಶೋಧನೆ.
ಯಾವುದೇ ಸಾಮಾಜಿಕ ಸಂಶೋಧನೆಯು ತನ್ನ ಮೂಲಭೂತ ಉದ್ದೇಶಗಳನ್ನು ಯಶಸ್ವಿಯಾಗಿ ಪೂರೈಸಬೇಕಾದರೆ ವೈಜ್ಞಾನಿಕ ಸಂಶೋಧನಾ ಪದ್ದತಿಯು ಪ್ರಮುಖ ಪಾತ್ರ ವಹಿಸಿದ್ದು ವೈಜ್ಞಾನಿಕ ರೀತಿಯಲ್ಲಿ ಸಂಶೋಧನೆಯನ್ನು ಪೂರ್ಣಗೊಳಿಸುತ್ತದೆ. ಪ್ರಸ್ತುತ ಆಧ್ಯಯನವು ಈ ಸಂಶೋದನೆಯಲ್ಲಿ ಅಳವಡಿಸಿಕೊಂಡಿರುವ ಸಂಶೋದನಾ ಪದ್ದತಿಗಳ ಬಗ್ಗೆ ವಿವರವಾದ ಮಾಹಿತಿಯನ್ನು ಒದಗಿಸುತ್ತದೆ.
ವೆಬ್‌ಸ್ಟರ್ ರವರು ಸಂಶೋಧನೆಯು ಒಂದು ಜಾಗರೂಕತಾ ವಿಮರ್ಶಾತ್ಮಕ ವಿಚಾರಣೆ ಆಥವಾ ವಸ್ತವಾಂಶವನ್ನು ಹುಡುಕುವ ಪರಿಕ್ಷೆ ಅಥವಾ ತತ್ವಗಳು ಮತ್ತು ಯಾವುದೇ ಒಂದು ಅಂಶವನ್ನು ತಿಳಿಯಲು ಇರುವ ವ್ಯಾಸಾಂಗದ ಅನ್ವೇಷಣೆ.
ಪಾಲಿನಿ.ವಿ.ಯಂಗ್‌ ಪ್ರಕಾರ- ಸಾಮಾಜಿಕ ಸಂಶೋದನೆಯು ಸತ್ಯಾಂಶಗಳನ್ನು ಶೋದಿಸುವ ಮತ್ತು ಹಳೆ ಸಂಗತಿಗಳನ್ನು ಪರೀಕ್ಷಿಸುವ ಅವುಗಳನ್ನು ಅನುಕ್ರಮ ಅಂತರ ಸಂಬಂಧಕಾರಣಿಗಳ ವಿವರಣೆಗಳು ಮತ್ತು ಪ್ರಾಕೃತಿಕ ನಿಯಮಗಳನ್ನು ಶೋಧಿಸುವ ಪದ್ದತಿ.

ಅಧ್ಯಯನ ಗುರಿ:
"ಆರ್ಥಿಕ- ಸಾಮಾಜಿಕ - ಸಾಂಸ್ಕೃತಿಕ ಪರಿಣಾಮಗಳು"
ಕರ್ನಾಟಕ ರಾಜ್ಯ, ರಾಮನಗರ ಜಿಲ್ಲೆ, ಕನಕಪುರ ತಾಲ್ಲೂಕು, ಉಯ್ಯಂಬಳ್ಳಿ ಹೋಬಳಿ, ಹಾರೋಬಲೆ ಗ್ರಾಮದಲ್ಲಿ ನಿರ್ಮಿಸಿರುವ ಅರ್ಕಾವತಿ ಜಲಾಶಯ ಯೋಜನೆಯ ಬಗ್ಗೆ ಕೈಗೊಂಡಿರುವ ಬಗ್ಗೆ ವಿಶೇಷ ಅಧ್ಯಯನ
ಅಧ್ಯಯನದ ಉದ್ದೇಶಗಳು
೧)ಅರ್ಕಾವತಿ ಜಲಾಶಯ ಯೋಜನೆಯು ಜನರ ಜೀವನ ಮಟ್ಟದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಕುರಿತು ಅಧ್ಯಯನ ಮಾಡುವುದು.
೨)ಈ ಯೋಜನೆಯ ಕೃಷಿಯ ಮೇಲೆ ಯಾವ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ಅಧ್ಯಯನ ಮಾಡುವುದು.
೩)ಈ ಯೋಜನೆಯಿಂದ ಜನರ ಮೇಲೆ ಆರ್ಥಿಕವಾಗಿ ಸಾಮಾಜಿಕವಾಗಿ ಸಾಂಸ್ಕೃತಿಕವಾಗಿ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಕುರಿತು ಅಧ್ಯಯನ ಮಾಡುವುದು.
ಅಧ್ಯಯನಕ್ಕೆ ದೊರೆತ ಪ್ರೇರಣೆ:
ಅಣೆಕಟ್ಟಿನ ಅಭಿವೃದ್ದಿಯ ಪ್ರಸ್ತುತ ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಕೃಷಿ ಚಟುವಟಿಕೆಯ ಅಭಿವೃದ್ದಿಯಲ್ಲಿ ಈ ಯೋಜನೆಯು ಪ್ರದಾನ ಪಾತ್ರವಹಿಸಿದ್ದು ಈ ಯೋಜನೆಯು ಜನರ ಮೇಲೆ ಯಾವ ರೀತಿ ಪರಿಣಾಮವನ್ನು ಬೀರುತ್ತಿದೆ ಎಂದು ಮತ್ತು ಇದರ ಮಹತ್ವವನ್ನು ತಿಳಿಯಲು ಪ್ರಸ್ತುತ ವಿಷಯದ ಮೇಲೆ ಸಂಶೋದನೆ ಕೈಗೊಳ್ಳಲು ಪ್ರೇರಣೆಯಾಯಿತು

ಪರಿಕಲ್ಪನೆಗಳು:
ಸಾಮಾಜಿಕ ಸಂಶೋಧಕನು ಒಂದು ವಿಷಯವನ್ನು ವಿಚಾರ ಮಾಡುವಲ್ಲಿ ಅವರ ತದಾಂತರ ನಿಷ್ಕರ್ಷಯಿಲ್ಲದಿರುವುದರಿಂದ ಈ ತದಾಂಶವು ಹೇಗಿರಬಹುದೆಂದು ಊಹಿಸಿ ಮಾಡಿದ ಅಥವಾ ವಿಚಾರ ಮಾಡಲು ಆಧಾರವಾಗಿದ್ದುಕೊಂಡ ಒಂದು ಊಹೆ ಕಲ್ಪನೆ ಪರಿಕಲ್ಪನೆ ಆಧಾರ ಕಲ್ಪನೆ ಊಹಾ ಪ್ರತಿಜ್ಞೆಯನ್ನು ಪರಿಕಲ್ಪನೆ ಎನ್ನುತ್ತೇವೆ.
ರ‍್ಯಾಪಂ ಹೌಸ್ ಡಿಕ್ಷನರಿಯ ಪ್ರಕಾರ ಪರಿಕಲ್ಪನೆಯು ನಿರ್ದಿಷ್ಠ ಘಟನಾವಳಿಗಳ ಜರಗುವಿಕೆಗೆ ಸಂಬಂದಸಿದಂತೆ ಅಧ್ಯಯನಕ್ಕೆ ಮಾರ್ಗದರ್ಶನ ಮಾಡಲು ಪ್ರತಿಪಾದಿಸಲಾದ ಕೇವಲ ಒಂದು ತಾತ್ಕಾಲಿಕ ಊಹೆಯಾಗಿರುವುದು.
ಪ್ರಸ್ತುತ ಸಂಶೋದನೆಯಲ್ಲಿ ರಚಿಸಿಕೊಂಡಿರುವ ಪರಿಕಲ್ಪನೆಗಳು:
೧)ಅಣೆಕಟ್ಟು ನಿರ್ಮಾಣ ಮಾಡಿರುವುದರಿಂದ ಇದೇ ಗ್ರಾಮೀಣ ಪ್ರದೇಶದಲ್ಲಿ ಜನರ ಮೇಲೆ ಆರ್ಥಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಬದಲಾವಣೆಗೆ ಆಧಾರವಗಿರುತ್ತದೆ.
೨)ಅಣೆಕಟ್ಟು ನಿರ್ಮಾಣದ ಯೋಜನೆಯಿಂದ ನೀರಾವರಿಗೆ ಪ್ರಯೋಜನಕಾರಿಯಾಗಿದೆ.
೩)ಅಣೆಕಟ್ಟು ನಿರ್ಮಾಣದಿಂದಾಗಿ ಜನರ ಜೀವನ ಮಟ್ಟದಲ್ಲಿ ಬದಲಾವಣೆಯಾಗಿದೆ.
೪)ಕೃಷಿ ಅಭಿವೃದ್ದಿಯನ್ನು ಹೊಂದುತ್ತದೆ ಇದರಿಂದ ಜನರ ಮೇಲೆ ಆರ್ಥಿಕವಾಗಿ ಅಭಿವೃದ್ದಿ.

ಸಂಶೋದನಾ ವಿನ್ಯಾಸ
ಸಂಶೋದನಾ ವಿನ್ಯಾಸವೆಂದು ಸಂಶೋದನಾ ಕಾರ್ಯದಲ್ಲಿನ ಬಹಳ ಮುಖ್ಯವಾದ ಹಂತವಾಗಿರುತ್ತದೆ. ಅಂತೆಯೇ ಸಂಶೋದಕನು ತನ್ನ ಸಂಶೋದನೆಗಾಗಿ ಅಯ್ಕೆ ಮಾಡಲಾಗಿರುವ ಕ್ಷೇತ್ರ ಮತ್ತು ಆ ಕ್ಷೇತ್ರದಿಂದ ಅರಿಸಲ್ಪಡುವ ನಮೂನೆ ಅಥವಾ ಮಾದರಿ ಮಾಹಿತಿಯ ಸಂಗ್ರಹಣೆಗಾಗಿ ಬಳಸಲಾಗಿರುವ ಉಪಕರಣಗಳು ಸಂಶೋದನೆಗಾಗಿ ತಗಲುವ ವೆಚ್ಚ ಇದೇ ಮೊದಲಾದ ವಿಷಯಗಳ ಬಗ್ಗೆ ಒಂದು ಸ್ಪಷ್ಟವಾದ ಚಿತ್ರಣವನ್ನು ಹೊಂದಿ ಸಂಶೋದನಾ ಕಾರ್ಯವನ್ನು ಪ್ರಾರಂಬಿಸಲು ಮಾಡಿಕೊಳ್ಳುವ ಯೋಜನೆಯೊಂದನ್ನು ಸಂಶೋದನಾ ವಿನ್ಯಾಸ ಎಂದೆನ್ನಬಹದು.
ಕ್ಲೇರ್ - ಸಂಶೋದನಾ ಉದ್ದೇಶಕ್ಕೆ ಸುಸಂಗವೆನಿಸಿದ ಮತ್ತು ವಿಧಾನದಲ್ಲಿ ಮಿತವ್ಯಯ ಸಾದಿಸಲು ಅನುವಾಗುವಂತೆ ಮಾಹಿತಿಗಳ ಸಂಗ್ರಹಣೆ ಹಾಗೂ ವಿಶ್ಲೇಷಣೆಯ ಕಾರ್ಯಕ್ಕಾಗಿ ಸಂಬಂದಿಸಿದ ಪರಿಸ್ಥಿತಿಗಳನ್ನು ಏರ್ಪಾಡು ಮಾಡಿಕೊಳ್ಳವುದಕ್ಕೂ ಸಂಶೋದನಾ ವಿನ್ಯಾಸ ಎನ್ನುತ್ತೇವೆ.

ಸಂಶೋದನಾ ವಿನ್ಯಾಸದ ಪ್ರಕಾರ:-
ಪ್ರಸ್ತುತ ಸಂಶೋದನೆಗೆ ವಿಶ್ಲೇಷಣಾತ್ಮಕ ಸಂಶೋದನಾ ವಿನ್ಯಾಸವನ್ನು ಅಳವಡಿಸಿಕೊಳ್ಳಲಾಗಿದ್ದು ಅಣೆಕಟ್ಟಿನ ಪರಿಣಾಮಗಳು ಅದರಿಂದುಂಟಾಗುವ ಪರಿಣಾಮಗಳ ಜೋತೆಗೆ ಜನರ ಜೀವನದ ಮೇಲೆ ಆಗಿರುವ ಪರಿಣಾಮಗಳನ್ನು ವಿವರವಾಗಿ ವಿಶ್ಲೇಷಣೆಗೊಳಪಡಿಸುವ ಉದ್ದೇಶಗಳೊಂದಿಗೆ ಈ ಸಂಶೋದನಾ ವಿನ್ಯಾಸವನ್ನು ಆಯ್ಕೆ ಮಾಡಲಾಗಿದೆ.
ಈ ಯೋಜನೆಯಲ್ಲಿ ಅಧ್ಯಯನದ ಅನುಕೂಲತೆಯ ದೃಷ್ಠಿಯಿಂದ ೨ ಹಳ್ಳಿಗಳಿಂದ ೫೦ ಜನರಿಂದ ಮಾಹಿತಿಯನ್ನು ಸಂಗ್ರಹಿಸಲಾಗುವುದು

ಮಾದರಿ ನಮೂನೆ:-
ಒಂದು ದೊಡ್ಡ ವಸ್ತುವಿನ ಸಣ್ಣ ಪ್ರತಿನಿದಿಯನ್ನು ಮಾದರಿ ಎನ್ನುತ್ತೇವೆ. ದೊಡ್ಡ ಮೊತ್ತದ ಚಿಕ್ಕ ಪ್ರಮಾಣ ಮಾದರಿ ಎನಿಸುವುದೇ ಸಾಮಾಜಿಕ ಸಂಶೋದನೆಯ ಕ್ಷೇತ್ರ ಬಹಳ ಮಟ್ಟಿಗೆ ವಿಶಾಲವಾದ್ದದರಿಂದ ಇವರ ಪ್ರತಿಯೊಂದು ಅಂಶವನ್ನು ಅಧ್ಯಯನ ಮಾಡುವುದು ಕಷ್ಟ ಸಾಧ್ಯವಾದುದರಿಂದ ಜೋತೆಗೆ ಕಾಲ ಹಾಗೂ ಹಣದ ಅಪವ್ಯಯಕ್ಕೆ ಹಾದಿ ಮಾಡುವುದು ಈ ಕಾರಣದಿಂದಾಗಿಯೂ ಬೇಗ ಫಲಿತಾಂಶವನ್ನು ಪಡೆಯುವ ಸದುದ್ದೇಶದಿಂದಲೂ ಮಾದರಿ ವಿನ್ಯಾಸವನ್ನು ಹೆಚ್ಚು ಹೆಚ್ಚಾಗಿ ಸಾಮಾಜಿಕ ಸಂಶೋದನೆಯಲ್ಲಿ ಉಪಯೋಗಿಸಲಾಗುತ್ತದೆ.
ಮಾದರಿ ವಿಧಾನಗಳು:
೧)ಸಂಭವನೀಯ ಮಾದರಿ.
೨)ಅಸಂಭವನೀಯ ಮಾದರಿ.

ಮಾಹಿತಿ ಸಂಗ್ರಹಣೆ ವಿಧಾನಗಳು:
ಮನೆ ಬೇಟಿ - ಸಂಶೋಧನಾ ವಿಷಯದ ಬಗ್ಗೆ ಮನೆಯ ಬೇಟಿ ಮಾಡುವ ಮೂಲಕ ಜನರಿಂದ ಮಾಹಿತಿಯನ್ನು ಸಂಗ್ರಹಣೆಯನ್ನು ಮಾಡಲಾಗುತ್ತದೆ. ಇದರಿಂದ ಪ್ರತಿವಾದಿಗಳ ಕುಟುಂಬದ ಬಗ್ಗೆ ಅಲ್ಲಿನ ವಾತಾವರಣದ ಮತ್ತು ಸಾಮಾಜಿಕ ಆರ್ಥಿಕ ಶ್ಲಕ್ಷಣಿಕ ಹಿನ್ನೆಲೆಯ ಬಗ್ಗೆ ಒಂದು ಸ್ಪಷ್ಟವಾದ ಚಿತ್ರಣ ದೊರೆಯುತ್ತದೆ.
ಈ ಒಂದು ಸಂಶೋದನೆಯಲ್ಲಿ ಮೇಲಿನ ಎಲ್ಲಾ ವಿಧಾನಗಳಿಂದ ಮಾಹಿತಿಯನ್ನು ಸಂಗ್ರಹಿಸಲಾಗಿದೆ.

ಮಾಹಿತಿ ಸಂಗ್ರಹಣೆಯ ಸಾಧನಗಳು:
ಪ್ರಾಥಮಿಕ ಮೂಲಗಳು:-
ಸಂಶೋದಕನು ತಾನು ಸಂಶೋದನೆ ನಡೆಸುವ ಕ್ಷೇತ್ರದಿಂದ ತಾನೇ ನೇರವಾಗಿ ಇಲ್ಲದೇ ತನ್ನ ಸಿಬ್ಬಂದಿ ವರ್ಗದವರ ಮೂಲಕ ತನ್ನ ಸಂಶೋದನ ವಿಷಯಕ್ಕೆ ಸಂಬಂದಿಸಿದ ವಸ್ತು ನಿಷ್ಟ ಮಾಹಿತಿಗಳನ್ನು ಸಂಗ್ರಹಿಸುತ್ತಾನೆ. ಪ್ರತಿವರ್ತಿಗಳಿಂದ ಮೊದಲನೇ ಬಾರಿಗೆ ಸಂಶೋದಕನು ನೇರವಾಗಿ ಪಡೆಯುವ ಮಾಹಿತಿಯಾಗಿದೆ.

ಸಂದರ್ಶನ:
ಸಂದರ್ಶನ ವಿಧಾನವು ಮಾಹಿತಿ ಸಂಗ್ರಹಣೆ ಒಂದು ಪ್ರಾಥಮಿಕ ಮೂಲ

ಅದ್ಯಾಯ-೪: ಸಂಶೋದನೆ ವಿಶ್ಲೇಷಣೆ:-
ಸಂಗ್ರಹಿಸಿದ ಮಾಹಿತಿಗಳನ್ನು ಕೋಷ್ಠಕ ರೂಪದಲ್ಲಿ ನಿರೂಪಿಸಿ ಅವುಗಳನ್ನು ವಿಶ್ಲೇಷಿಸುವುದು ಸಂಶೋದನಾ ವಿದಾನದಲ್ಲಿ ಪ್ರಮುಖವಾದ ಹಂತವಾಗಿದ್ದು ಈ ಸಂಶೋದನೆಯಲ್ಲಿ ಹಾರೋಬಲೆ ಡ್ಯಾಂ ನಿರ್ಮಾಣದಿಂದ ಜನರ ಮೇಲೆ ಆರ್ಥಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಯಾವ ರೀತಿ ಪರಿಣಾಮ ಬೀರುತ್ತಿದೆ ಎಂಬುದಕ್ಕೆ ಸಂಬಂದಿಸಿದಂತೆ ಮಾಹಿತಿಯನ್ನು ವಿವಿಧ ದೃಷ್ಠಿಕೋನಗಳಿಂದ ಸಂಗ್ರಹಿಸಲಾಗಿದೆ. ಹಾರೋಬಲೆ ಡ್ಯಾಂ ಯಾವ ರೀತಿ ಪರಿಣಾಮ ಬೀರುತ್ತಿದೆ ಎಂಬ ಮಾಹಿತಿಯನ್ನು ಪಡೆಯಲು ಪ್ರಶ್ನಾವಳಿ ರಚಿತ ಅನುಸೂಚಿಯನ್ನು ಬಳಸಿಕೊಂಡು ಹಾರೋಬಲೆ ಮತ್ತು ನಲ್ಲಹಳ್ಳಿ ಎಂಬ ಗ್ರಾಮಕ್ಕೆ ಭೇಟಿ ನೀಡಿ ಸಂದರ್ಶನ ಮಾಡುವುದರ ಮೂಲಕ ಅವಲೋಕಿಸಿ ಅದ್ಯಯನಕ್ಕೆ ಸಂಬದಿಸಿದ ಮಾಹಿತಿಯನ್ನು ಸಂಗ್ರಹಿಸಲಾಗಿದೆ.

ಕೊಷ್ಠಕ-೦೧:
೪೨% ರಷ್ಟು ಪುರುಷರಿದ್ದು ಉಳಿದ ೫೮% ರಷ್ಟು ಮಹಿಳೆಯರಿದ್ದಾರೆ

ಕೊಷ್ಠಕ-೦೨
ಬಹುತೇಕ ಅಂದರೆ ಶೇಕಡಾವರು ೩೪% ಪ್ರತಿವಾದಿಗಳು ೫೧-೬೦ ವಯಸ್ಸಿನವರಾಗಿದು. ನಂತರ ೧೬% ಪ್ರತಿವಾದಿಗಳು ೨೦-೩೦ ವಯಸ್ಸಿನವರಾಗಿದ್ದು. ನಂತರ ೨೪% ಪ್ರತಿವಾದಿಗಳು ೪೧-೫೦ ವಯಸ್ಸಿನವರಾಗಿದು. ನಂತರ ಉಳಿದ ೨೬% ಪ್ರತಿವಾದಿಗಳು ೩೧-೪೦ ವಯಸ್ಸಿನವರಾಗಿದ್ದಾರೆ.

ಕೊಷ್ಠಕ-೦೩
ಬಹುತೇಕ ಅಂದರೆ ಶೇಕಡಾವರು ೮೬% ಪ್ರತಿವಾದಿಗಳು ನಂತರ ಉಳಿದ ಪ್ರತಿವಾದಿಗಳು ೨೮% ಇತರೆ ಭಾಷೆಗಳನ್ನು ಮಾತನಾಡುತ್ತಾರೆ.

ಕೊಷ್ಠಕ-೦೪
೩೮% ಪ್ರತಿವಾದಿಗಳು ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ್ದಾರೆ. ಶೇ ೨೪% ರಷ್ಟು ಪ್ರತಿವಾದಿಗಳು ಮಾದ್ಯಮಿಕ ಶಿಕ್ಷಣವನ್ನು ಮುಗಿಸಿದ್ದಾರೆ. ಶೇ ೧೪% ರಷ್ಟು ಪ್ರತಿವಾದಿಗಳು ಪಧವಿಯನ್ನು ಮತ್ತು ಶೇ ೦೪% ರಷ್ಟು ಪ್ರತಿವಾದಿಗಳು ಸ್ನಾತಕೋತ್ತರ ಪಧವಿ ಮತ್ತು ಇನ್ನುಳಿದ ಶೇ ೨೦% ರಷ್ಟು ಪ್ರತಿವಾದಿಗಳು ಅನಕ್ಷರಸ್ತರು ಆಗಿದ್ದಾರೆ.

ಕೊಷ್ಠಕ-೦೫
೩೮% ಪ್ರತಿವಾದಿಗಳು ಹಿಂದೂ ಧರ್ಮಿಯರಾಗಿರುವುದನ್ನು ತಿಳಿಯಬೇಕಾಗಿದೆ. ಇನ್ನುಳಿದ ೬೨% ರಷ್ಠು ಕ್ರೈಸ್ತ ಧರ್ಮಿಯರಾಗಿದ್ದಾರೆ. ಎಂದು ತಿಳಿಯಬಹುದಾಗಿದೆ.


ಕೊಷ್ಠಕ-೦೬
ಶೇ ೩೬% ರಷ್ಟು ಪ್ರತಿವಾದಿಗಳು ೧೦ ರಿಂದ ೨೦ ಸಾವಿರ ರೂ ಗಳನ್ನು ಅದಾಯವನ್ನು ಹೊಂದಿದ್ದಾರೆ. ನಂತರ ಶೇ ೫೪% ರಷ್ಟು ಪ್ರತಿವಾದಿಗಳು ೦೫ ರಿಂದ ೧೦ ಸಾವಿರ ರೂ ಗಳನ್ನು ಅದಾಯವನ್ನು ಹೊಂದಿದ್ದಾರೆ. ನಂತರ ಶೇ ೦೮% ರಷ್ಟು ಪ್ರತಿವಾದಿಗಳು ೨೦ ರಿಂದ ೨೫ ಸಾವಿರ ರೂ ಗಳನ್ನು ಅದಾಯವನ್ನು ಹೊಂದಿದ್ದಾರೆ. ಇನ್ನುಳಿದ ಶೇ ೦೨% ರಷ್ಟು ಪ್ರತಿವಾದಿಗಳು ೨೫ ಸಾವಿರಕ್ಕೂ ಹೆಚ್ಚು ಅದಾಯವನ್ನು ಹೊಂದಿದ್ದಾರೆ.

ಕೊಷ್ಠಕ-೦೭
ಶೇ ೪೪% ರಷ್ಟು ಪ್ರತಿವಾದಿಗಳು ಗೃಹಿಣಿಯರಾಗಿದ್ದಾರೆ. ನಂತರ ಶೇ ೩೬% ರಷ್ಟು ಪ್ರತಿವಾದಿಗಳು ಹೈನುಗಾರಿಕೆಯಲ್ಲಿ ತೊಡಗಿದ್ದಾರೆ. ನಂತರ ಶೇ ೨೦% ರಷ್ಟು ಪ್ರತಿವಾದಿಗಳು ವ್ಯಾಪರ ವೃತ್ತಿಯಲ್ಲಿ ಇರುವುದನ್ನು ತಿಳಿಯಬಹುದಾಗಿದೆ.

ಕೊಷ್ಠಕ-೦೮
ಶೇ ೩೪% ರಷ್ಟು ಪ್ರತಿವಾದಿಗಳು ಸ್ವಲ್ಪಮಟ್ಟಿಗೆ ಅನುಕೂಲವಾಗಿದೆ ಎಂದು ತಿಳಿಸಿದ್ದಾರೆ. ನಂತರ ಶೇ ೩೪% ರಷ್ಟು ಪ್ರತಿವಾದಿಗಳು ಹೌದು ಎಂದು ತಿಳಿಸಿದ್ದಾರೆ, ನಂತರ ಶೇ ೨೮% ರಷ್ಟು ಪ್ರತಿವಾದಿಗಳು ಬಹಳ ಮಟ್ಟಿಗೆ ಅನುಕೂಲವಾಗಿದೆ ಎಂದು ತಿಳಿಸಿದ್ದಾರೆ, ಉಳಿದ ಶೇ ೦೪% ರಷ್ಟು ಪ್ರತಿವಾದಿಗಳು ಇಲ್ಲ ಎಂದು ತಿಳಿಸಿದ್ದಾರೆ.

ಕೊಷ್ಠಕ-೦೯
ಶೇ ೮೬% ರಷ್ಟು ಪ್ರತಿವಾದಿಗಳು ಪಕ್ಕಾ ಮನೆಯಲ್ಲಿ ವಾಸವಾಗಿದ್ದು ಇನ್ನುಳಿದ ಶೇ ೧೪% ಪ್ರತಿವಾದಿಗಳು ಕಚ್ಚಾ ಮನೆಯಲ್ಲಿ ವಾಸವಾಗಿರುವುದು ತಿಳಿದು ಬರುತ್ತದೆ.

ಕೊಷ್ಠಕ-೧೦
ಶೇ ೩೪% ರಷ್ಟು ಪ್ರತಿವಾದಿಗಳು ಹೌದು ಎಂದು ಹೇಳಿದ್ದಾರೆ. ನಂತರ ಶೇ ೨೪% ರಷ್ಟು ಪ್ರತಿವಾದಿಗಳು ಬಹಳ ಮಟ್ಟಿಗೆ ಎಂದು ಹೇಳಿದ್ದಾರೆ. ನಂತರ ಶೇ ೦೪% ರಷ್ಟು ಪ್ರತಿವಾದಿಗಳು ಇಲ್ಲ ಎಂದು ಹೇಳಿದ್ದಾರೆ. ಶೇ ೧೮% ರಷ್ಟು ಪ್ರತಿವಾದಿಗಳು ಸ್ವಲ್ಪಮಟ್ಟಿಗೆ ಕೃಷಿಯಲ್ಲಿನ ಬದಲಾವಣೆಯಾಗಿದೆ ಎಂದು ಈ ಪಟ್ಟಿಯು ತಿಳಿಸುತ್ತದೆ.

ಕೊಷ್ಠಕ-೧೧
ಶೇ ೫೬% ರಷ್ಟು ಪ್ರತಿವಾದಿಗಳು ವಿಭಕ್ತ ಕುಟುಂಬಕ್ಕೆ ಸೆರಿದವರಾಗಿರುತ್ತಾರೆ. ಹಾಗು ಉಳಿದ ೪೪% ಪ್ರತಿವಾದಿಗಳು ಅವಿಭಕ್ತ ಕುಟುಂಬಕ್ಕೆ ಸೆರಿದವರಾಗಿರುತ್ತಾರೆ.

ಕೊಷ್ಠಕ-೧೨
ಶೇ ೪೪% ರಷ್ಟು ಪ್ರತಿವಾದಿಗಳು ೧ ರಿಂದ ೨ ಎಕರೆ ಜಮೀನನ್ನು ಹೊಂದಿದ್ದಾರೆ. ಶೇ ೪೬% ರಷ್ಟು ಪ್ರತಿವಾದಿಗಳು ೨ ರಿಂದ ೫ ಎಕರೆ ಜಮೀನನ್ನು ಹಾಗು ಶೇ ೪೪% ರಷ್ಟು ಪ್ರತಿವಾದಿಗಳು ೫ ರಿಂದ ೧೦ ಎಕರೆ ಜಮೀನನ್ನು ಹೊಂದಿದ್ದಾರೆ. ಶೇ ೨% ರಷ್ಟು ೧೦ ಕ್ಕೂ ಹೆಚ್ಚು ಭೂಮಿ ಹೊಂದಿದ್ದಾರೆ.

ಕೊಷ್ಠಕ-೧೩
ಶೇ ೭೬% ರಷ್ಟು ಪ್ರತಿವಾದಿಗಳು ಬೋರ್‌ವೆಲ್ ನೀರನ್ನು, ಶೇ ೨೦ ರಷ್ಟು ಪ್ರತಿವಾದಿಗಳು ಬಾವಿ ನೀರನ್ನು ಹಾಗು ಶೇ ೦೨ ರಷ್ಟು ಪ್ರತಿವಾದಿಗಳು ಕೆರೆ ನೀರನ್ನು ಉಪಯೋಗಿಸುತ್ತಿದ್ದರು.

 ಕೊಷ್ಠಕ-೧೪
ಶೇ ೭೦% ರಷ್ಟು ಪ್ರತಿವಾದಿಗಳು ಸ್ವಲ್ಪ ಮಟ್ಟಿಗೆ ಜೀವನದಲ್ಲಿ ಬದಲಾವಣೆಯಾಗಿದೆ ಎಂದು ಹೇಳಿದ್ದಾರೆ. ಶೇ ೧೬% ರಷ್ಟು ಬಹಳ ಮಟ್ಟಿಗೆ ಜೀವನದಲ್ಲಿ ಬದಲಾವಣೆಯಾಗಿದೆ ಎಂದು ಹೇಳಿದ್ದಾರೆ. ಶೇ ೧೨% ರಷ್ಟು ಪ್ರತಿವಾದಿಗಳು ಇಲ್ಲ ಎಂದು ತಿಳಿಸಿದ್ದಾರೆ. ಉಳಿದ ಶೇ ೦೨ ರಷ್ಟು ಪ್ರತಿವಾದಿಗಳು ಇಲ್ಲವೆ ಇಲ್ಲ ಎಂದು ತಿಳಿಸಿದ್ದಾರೆ.

ಕೊಷ್ಠಕ-೧೫
ಶೇ ೪೬% ರಷ್ಟು ಪ್ರತಿವಾದಿಗಳು ಸ್ವಲ್ಪ ಮಟ್ಟಿಗೆ ಹೆಚ್ಚಳವಾಗಿದೆ ಎಂದು ತಿಳಿಸಿದ್ದಾರೆ. ಶೇ ೨೮% ರಷ್ಟು ಪ್ರತಿವಾದಿಗಳು ಬಹಳ ಮಟ್ಟಿಗೆ ಹೆಚ್ಚಳವಾಗಿದೆ ಎಂದು ತಿಳಿಸಿದ್ದಾರೆ. ಶೇ ೪೬% ರಷ್ಟು ಪ್ರತಿವಾದಿಗಳು ಇಲ್ಲ ಎಂದು ತಿಳಿಸಿದ್ದಾರೆ.

ಕೊಷ್ಠಕ-೧೭
ಶೇ ೩೮% ರಷ್ಟು ಪ್ರತಿವಾದಿಗಳು ಸ್ವಲ್ಪ ಮಟ್ಟಿಗೆ ಅನುಕೂಲವಾಗಿದೆ. ಹಾಗು ಶೇ ೨೪% ರಷ್ಟು ಪ್ರತಿವಾದಿಗಳು ಬಹಳ ಮಟ್ಟಿಗೆ ಅನುಕೂಲವಾಗಿದೆ ಎಂದು ತಿಳಿಸಿದ್ದಾರೆ. ಶೇ ೩೮% ರಷ್ಟು ಪ್ರತಿವಾದಿಗಳು ಇಲ್ಲ ಎಂದು ತಿಳಿಸಿದ್ದಾರೆ.

ಕೊಷ್ಠಕ-೧೯
ಶೇ ೭೦% ರಷ್ಟು ಪ್ರತಿವಾದಿಗಳು ಕೃಷಿ ಕ್ಷೇತ್ರದಲ್ಲಿ ದುಡುಯುತ್ತಿದ್ದಾರೆ. ನಂತರ ಶೇ ೧೨% ರಷ್ಟು ಪ್ರತಿವಾದಿಗಳು ಕೂಲಿಕಾರ್ಮಿಕರಾಗಿದ್ದಾರೆ. ಶೇ ೮%ರಷ್ಟು ಮನೆ ಕೆಲಸದಲ್ಲಿದ್ದಾರೆ. ಉಳಿದ ಇತರೆ ಕಸುಬುಗಳನ್ನು ಮಾಡುತ್ತೆವೆ ಎಂದು ತಿಳಿಸಿದ್ದಾರೆ.

ಕೊಷ್ಠಕ-೨೦
ಶೇ ೭೦% ರಷ್ಟು ಪ್ರತಿವಾದಿಗಳು ಆಶುದ್ಧ ಎಂದು ತಿಳಿಸಿದ್ದಾರೆ. ಶೇ ೧೨% ರಷ್ಟು ಪ್ರತಿವಾದಿಗಳು ಸ್ವಲ್ಪ ಮಟ್ಟಿಗೆ ಕಲುಷಿತ ಎಂದು ತಿಳಿಸಿದ್ದಾರೆ. ಶೇ ೦೬% ರಷ್ಟು ಪ್ರತಿವಾದಿಗಳು ಶುದ್ಧ ಎಂದು ತಿಳಿಸಿದ್ದಾರೆ. ಉಳಿದ ಶೇ ೧೨% ರಷ್ಟು ಪ್ರತಿವಾದಿಗಳು ತುಂಬಾ ಕಲುಷಿತ ಎಂದು ತಿಳಿಸಿದ್ದಾರೆ.

ಕೊಷ್ಠಕ-೨೧
ಶೇ ೬೪% ರಷ್ಟು ಪ್ರತಿವಾದಿಗಳು ಫಲವತ್ತಾದ ಭೂಮಿಯನ್ನು ಹೊಂದಿದ್ದಾರೆ. ಶೇ ೩೬% ರಷ್ಟು ಪ್ರತಿವಾದಿಗಳು ಬಂಜರು ಭೂಮಿಯನ್ನು ಹೋಂದಿದ್ದಾರೆ ಎಂದು ತಿಳಿಸುತ್ತದೆ.

ಕೊಷ್ಠಕ-೨೨
ಶೇ ೯೦% ರಷ್ಟು ಪ್ರತಿವಾದಿಗಳು ನೀರನ್ನು ಕೃಷಿಗೆ ಬಳಸಿಕೋಳ್ಳಲಾಗುತ್ತಿದೆ ಹಾಗು ಉಳಿದ ಶೇ ೧೦ ರಷ್ಟು ಇತರೆಗೆ ಬಳಸಿಕೋಳ್ಳುತ್ತಾರೆ ಎಂದು ತಿಳಿಸಲಾಗಿದೆ.

ಕೊಷ್ಠಕ-೨೩
ಶೇ ೪೮% ರಷ್ಟು ಪ್ರತಿವಾದಿಗಳು ಎಕದಳ ಧಾನ್ಯಗಳನ್ನು ಬೆಳೆಯುತ್ತಾರೆ. ಶೇ ೩೮% ರಷ್ಟು ಪ್ರತಿವಾದಿಗಳು ದ್ವಿದಳ ಧಾನ್ಯಗಳನ್ನು ಬೆಳೆಯುತ್ತಾರೆ. ಉಳಿದ ಶೇ ೧೨% ರಷ್ಟು ಪ್ರತಿವಾದಿಗಳು ತರಕಾರಿ ಬೆಳೆಗಳನ್ನು ಬೆಳೆಯುತ್ತಾರೆ.

ಕೊಷ್ಠಕ-೨೪
ಶೇ ೩೫ ರಷ್ಟು ಪ್ರತಿವಾದಿಗಳು ೬೬% ರಷ್ಟು ನೀರನ್ನು ಬಳಸಿಕೋಳ್ಳುತಿದ್ದಾರೆ ಹಾಗು ಶೇ ೫೦% ರಷ್ಟು ಪ್ರತಿವಾದಿಗಳು ೨೬% ರಷ್ಟು ನೀರನ್ನು ಬಳಸಿಕೋಳ್ಳುತಿದ್ದಾರೆ ಉಳಿದ ಶೇ ೭೫% ರಷ್ಟು ಪ್ರತಿವಾದಿಗಳು ೦೮% ರಷ್ಟು ನೀರನ್ನು ಬಳಸಿಕೋಳ್ಳುತಿದ್ದಾರೆ.

 ಕೊಷ್ಠಕ-೨೭
ಶೇ ೩೨% ರಷ್ಟು ಪ್ರತಿವಾದಿಗಳು ಉತ್ತಮವಾಗಿದೆ ಎಂದು ತಿಳಿಸಿದ್ದಾರೆ. ಶೇ ೪೨% ರಷ್ಟು ಪ್ರತಿವಾದಿಗಳು ಸಾಧಾರಣವಾಗಿದೆ ಎಂದು ತಿಳಿಸಿದ್ದಾರೆ ಹಾಗು ಶೇ ೧೪% ರಷ್ಟು ಪ್ರತಿವಾದಿಗಳು ಸ್ವಲ್ಪಮಟ್ಟಿಗೆ ಎಂದು ತಿಳಿಸಿದ್ದಾರೆ. ಉಳಿದ ಶೇ ೧೨% ರಷ್ಟು ಪ್ರತಿವಾದಿಗಳು ಅತ್ಯುತ್ತಮವಾಗಿದೆ ಎಂದು ತಿಳಿಸಿದ್ದಾರೆ.

ಸಲಹೆಗಳು ಮತ್ತು ಉಪಸಂಹಾರ:-
ಸಲಹೆಗಳು
೧) ಜಲಾಶಯವನ್ನು ನಿರ್ಮಾಣ ಮಾಡುವಾಗ ಅಲ್ಲಿನ ಜನರ ಜೀವನ ಮಟ್ಟವನ್ನು ಆಧಾರವಾಗಿಟ್ಟುಕೊಂಡು ರೂಪಿಸಬೇಕು.
೨) ಜಲಾಶಯವನ್ನು ನಿರ್ಮಾಣ ಮಾಡುವುದರಿಂದ ಅಲ್ಲಿನ ಸುತ್ತಮುತ್ತಲಿನ ಪರಿಸರ ಬಗ್ಗೆ ಹೆಚ್ಚು ತಿಳಿದಿರಬೆಕು.
೩) ವಿಶಾಲವಾದಂತಹ ಭೂಮಿ ಇರುವ ಕಡೆಗಳಲ್ಲಿ ಜಲಾಶಯ ಯೋಜನೆಯನ್ನು ನಿರ್ಮಾಣ ಮಾಡಬೇಕು.
೪) ಜಲಾಶಯ ಯೋಜನೆಯನ್ನು ಕೈಗೊಳ್ಳುವುದರ ಮೂಲಕ ಕೃಷಿ ಭೂಮಿಗಳಿಗೆ ನೀರನ್ನು ಒದಗಿಸುವುದು.
೫) ಜಲಾಶಯ ಯೋಜನೆಯನ್ನು ಅಭಿವೃದ್ದಿಪಡಿಸುವುದರ ಮೂಲಕ ಆ ಬಾಗದ ಜನರ ಜೀವನ ಮಟ್ಟದಲ್ಲಿ ಬದಲಾವಣೆ ತರುವುದು.
೬)ಜನರ ಆರ್ಥಿಕ ಜೀವನ ಉತ್ತಮವಾಗಿರುವಂತೆ ಮಾಡುವುದು.
೭) ಜಲಾಶಯವನ್ನು ನಿರ್ಮಾಣ ಮಾಡುವುದರಿಂದ ಹೆಚ್ಚು ನೀರನ್ನು ಶೇಖರಣೆ ಮಾಡಿ ಆ ನೀರನ್ನು ಬರಗಾಲದಲ್ಲಿ ಜನರ ವ್ಯವಸಾಯ ಭೂಮಿಗೆ ಕಾಲುವೆಗಳ ಮುಖಾಂತರ ನೀರನ್ನು ಬಿಡುಗಡೆ ಮಾಡುವುದು.
೮) ಜಲಾಶಯದ ಸ್ಥಳದಲ್ಲಿ ಅಕ್ಕ ಪಕ್ಕದಲ್ಲಿ ಮನೆಗಳು ಇರಬಾರದು.
೯) ಜನರ ಆಸ್ತಿ-ಪಾಸ್ತಿ ನಷ್ಟವಾಗದ ರೀತಿಯಲ್ಲಿ ಜಲಾಶಯವನ್ನು ನಿರ್ಮಾಣ ಮಾಡಬೇಕು.
೧೦) ಜಲಾಶಯ ನಿರ್ಮಾಣ ಮಾಡಿದ ನಂತರ ಜನರಿಗೆ ಇದು ಅನುಕೂಲವಾಗಿದೆಯೇ ಅಥವಾ ಇಲ್ಲವೇ ಎಂದು ಅದರ ಸುತ್ತಮುತ್ತಲಿನ ಹಳ್ಳಿಗಳಿಗೆ ಭೇಟಿ ನೀಡಿ ಸಮೀಕ್ಷೆ ಮಾಡಬೇಕು.

 ಉಪಸಂಹಾರ:
ಈ ಸಂಶೋದನಾ ಅಧ್ಯಯನವನ್ನು ಪರಿವರ್ತನಾ ಸಂಸ್ಥೆಯ ಕಾರ್ಯ ವ್ಯಾಪ್ತಿಯಲ್ಲಿ ಬರುವ ಹಾರೋಬಲೆ ಮತ್ತು ನಲ್ಲಹಳ್ಳಿ ಗ್ರಾಮಗಳ ಮೇಲೆ ಅರ್ಕಾವತಿ ಜಲಾಶಯ ಯೋಜನೆಯಿಂದ ಜನರ ಮೇಲೆ ಯಾವ ರೀತಿಯ ಪರಿಣಾಮವನ್ನು ಉಂಟುಮಾಡಿದೆ ಎಂಬ ಅಂಶಗಳ ಮೇಲೆ ಕೇಂದ್ರೀಕರಿಸಲಾಗಿದೆ.
ಭಾರತವು ವೈವಿದ್ಯತೆಯ ಆಗಾರ ಅತೀ ಪ್ರಾಚಿನ ನಾಗರಿಕತೆಯುಳ್ಳ ಭಾರತವು ನೆಲ, ಜಲ, ಸಸ್ಯ, ಖನಿಜ ಮತ್ತು ಇತರೆ ಸಂಪನ್ಮೂಲಗಳ ಸಂಮೃದ್ದ ದೇಶವಾಗಿದೆ. ಆದರೆ ಎಲ್ಲ ಖನಿಜ ಸಂಪತ್ತು ಮತ್ತು ಸಂಪನ್ಮೂಲಗಳನ್ನು ಹೋಂದಿದ್ದು ಆದರೆ ಸರಿಯಾಗಿ ಬಳಸಿಕೋಳ್ಳದೆ ಅದು ವ್ಯಯವಾಗುತ್ತಿರುವುದನ್ನು ನೋಡಬಹುದು. ಅದೇ ರೀತಿ ಜಲವು ಸಹ ನಮ್ಮ ದೇಶದಲ್ಲಿ ಸಂಮೃದ್ದವಾಗಿದ್ದು ಅದರ ಸಂಪೂರ್ಣವಾದ ಬಳಕೆಯಾಗದೆ ಅದು ಪೊಲಾಗುತ್ತಿರುವುದನ್ನು ನೋಡಬಹುದು.
ಈ ಸಂಶೋದನೆಯಲ್ಲಿ ಅತ್ಯುತ್ತಮವಾದ ಫಲಿತಾಂಶಗಳು ಹೊರ ಹೊಮ್ಮಿದ್ದು ಜಲಾಶಯ ಯೋಜನೆ ಪರಿಣಾಮಕಾರಿ ರೂಪುರೇಷೆಗಳು ವಿವಿಧ ಹಂತಗಳ ಹಾಗು ಸಂಬಂದಿತ ವಿಷಯಗಳ ಮೇಲೆ ಬೆಳಕು ಚೆಲ್ಲಿರುತ್ತದೆ. ಅರ್ಕಾವತಿ ಜಲಾಶಯ ಯೋಜನೆ ಅಲ್ಲಿನ ಸುತ್ತ ಮುತ್ತಲ ಜನರ ಮೆಲೆ ಯಾವ ರೀತಿ ಪರಿಣಾಮವನ್ನು ಬೀರುತ್ತದೆ ಎಂಬುದರ ಮೇಲೆ ಬೆಳಕು ಚೆಲ್ಲಿದೆ.
 ಪ್ರಸ್ತುತ ಸಂಶೋದನೆಯ ಫಲಿತಾಂಶಗಳು ಅಲ್ಲಿನ ಜನರ ವೃತ್ತಿಯ ಕುಟುಂಬಗಳಿಗೆ ಅರ್ಕಾವತಿ ಜಲಾಶಯವು ಹೆಚ್ಚು
ಅನೂಕೂಲಕರವಾಗಿರುವುದರಿಂದ ಇಂತಹ ಜಲಾಶಯ ಯೋಜನೆಯನ್ನು ಮತ್ತಷ್ಟು ಬಲಪಡಿಸಿ ಅ ಮೂಲಕ ಗ್ರಾಮಿಣ ಜನರ ಜೀವನ ಮಟ್ಟದಲ್ಲಿ ಅಭಿವೃದ್ದಿಯ ಮಟ್ಟವನ್ನು ಹೆಚ್ಚಿಸಲು ಪ್ರಸ್ತುತ ಸಂಶೋದನೆಯ ಫಲಿತಾಂಶ ಪೂರಕವಾಗಿದೆ.
ಸಮುದಾಯದ ಜನರಿಗೆ ಇಂತಹ ಜಲಾಶಯ ಯೋಜನೆಗಳು ನಿರ್ಮಾಣ ಮಾಡುವುದರಿಂದ ಅಲ್ಲಿನ ಜನರಿಗೆ ಈ ನೀರಿನ ಮೂಲಕ ಹೆಚ್ಚು ಉಪಯುಕ್ತವಾಗಿದೆ. ಬರಗಾಲ ಪೀಡಿತ ಪ್ರದೇಶಗಳಿಗೆ ಈ ನೀರನ್ನು ಶೇಖರಣೆ ಮಾಡಿ ಅಲ್ಲಿನ ಜನರಿಗೆ ಉಪಯೋಗವಾಗುವಂತೆ ಮಾಡುವುದರಿಂದ ಈ ಜಲಾಶಯ ಹೆಚ್ಚು ಅನೂಕೂಲವಾಗಿದೆ.
ಜಲಾಶಯವನ್ನು ನಿರ್ಮಾಣ ಮಾಡಬೇಕಾದರೆ ಮೊದಲಿಗೆ ವಿಶಾಲವಾದ ಭೂ ಪ್ರದೇಶವನ್ನು ಅಯ್ಕೆ ಮಾಡಿಕೊಂಡು ಜನರಿಗೆ ಇದರಿಂದ ಯಾವುದೆ ಕುಂದು ಕೊರತೆ ಉಂಟಾಗದಂತೆ ಇಂತಹ ಯೊಜನೆಗಳನ್ನು ರೂಪಿಸಬೇಕು. ಇದರಿಂದ ಲಕ್ಷಾಂತರ ಜನರಿಗೆ ಉಪಯೋಗ ವಾಗುವಂತೆ ಮಾಡಬೇಕು. ಅಲ್ಲಿನ ಸುತ್ತಮುತ್ತಲಿನ ಜನರ ಅಭಿಪ್ರಾಯಗಳನ್ನು ತಿಳಿದು ಇಂತಹ ಯೋಜನೆಗಳನ್ನು ಜಾರಿಗೆ ತರುವುದರಿಂದ ಜನರಿಗೆ ಇಂತಹ ಯೋಜನೆಗಳ ಬಗ್ಗೆ ಒಲವು ಇರುತ್ತದೆ.
 ಈ ಅರ್ಕಾವತಿ ಜಲಾಶಯವು ಈ ಭಾಗದ ಜನರಿಗೆ ಹೆಚ್ಚು ಉಪಯುಕ್ತವಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಜನರು ಎಕದಳ ಮತ್ತು ಹೈನುಗಾರಿಯಲ್ಲಿ ತೊಡಗಿದ್ದಾರೆ. ಇವರ ವಾರ್ಷಿಕ ಆದಾಯ ಈ ಜಲಾಶಯ ಯೋಜನೆ ಕೈಗೊಂಡ ನಂತರ ಹೆಚ್ಚಾಗಿದೆ.
ಅರ್ಕಾವತಿ ಜಲಾಶಯ ಯೋಜನೆಯು ಎಷ್ಟರ ಮಟ್ಟಿಗೆ ಜನರ ಮೇಲೆ ಪರಿಣಾಮ ಬೀರುತ್ತಿದೆ ಎಂಬುದನ್ನು ತಿಳಿಯಲು ಅನೇಕ ವಿದಿ ವಿದಾನಗಳನ್ನು ಕೈಗೊಂಡಿದ್ದು ಅದರಿಂದ ಸಂಶೋದಕನಿಗೆ ಸಮಾದಾನವನ್ನು ತಂದಿದೆ. ಅದನ್ನು ವಿಶ್ಲೇಷಿಸಿದಾಗ ಜನರ ಅನೇಕ ಅಭಿಪ್ರಾಯಗಳನ್ನು ತಿಳಿದುಕೊಂಡರು. ಈ ಯೋಜನೆಯು ಅಲ್ಲಿನ ಗ್ರಾಮೀಣ ಜನರಿಗೆ ಹೆಚ್ಚು ಅನುಕೂಲವಾಗಿದೆ ಎಂದು ತಿಳಿದುಕೊಂಡರು.
ಈ ಜಲಾಶಯ ಯೋಜನೆಯು ಪ್ರಾರಂಭವಾಗುವುದಕ್ಕಿಂತ ಮೊದಲು ಜನರು ನೀರಿಗಾಗಿ ತುಂಬಾ ಕಷ್ಟವನ್ನು ಅನುಭವಿಸುತ್ತಿದ್ದರು. ಕೆರೆ ಮತ್ತು ಬೋರ್‌ವೆಲ್‌ಗಳಿಂದ ನೀರನ್ನು ಉಪಯೋಸುತ್ತಿದ್ದರು. ಅವರ ಜೀವನ ಮಟ್ಟದಲ್ಲಿ ಯಾವುದೇ ಬದಲಾವಣೆಯಾಗಿರಲಿಲ್ಲ. ಈ ಯೋಜನೆಯು ಪ್ರಾರಂಭವಾಗಿ ಜನರಿಗೆ ನೀರನ್ನು ಒದಗಿಸಿದ್ದರಿಂದ ಅಲ್ಲಿನ ಜನರ ಅದಾಯದಲ್ಲಿ ಹೆಚ್ಚಳವಾಗಿ ಅವರ ಜೀವನಮಟ್ಟ ಉತ್ತಮವಾಗಿದೆ ಎಂದು ತಿಳಿದು ಬರುತ್ತದೆ.
ಈ ಯೋಜನೆಯಿಂದ ಕೃಷಿ ಕ್ಷೇತ್ರದಲ್ಲಿ ಹಾಗೂ ಅರ್ಥಿಕ ಕ್ಷೇತ್ರ, ಸಮಾಜಿಕ ಕ್ಷೇತ್ರದಲ್ಲಿ ಬದಲಾವಣೆಯಾಗಿ ಅವರ ಜೀವನ ಶೈಲಿಯಲ್ಲಿ ಸ್ವಲ್ಪಮಟ್ಟಿಗೆ ಬದಲಾವಣೆ ಅಗಿರುವುದನ್ನು ಕಾಣಬಹುದು. ಒಟ್ಟಾರೆ ಹೇಳಬೇಕಾದರೆ ಇಂತಹ ಜಲಾಶಯ ಯೋಜನೆಗಳಿಂದ ಜನರಿಗೆ ಹೆಚ್ಚು ಅನುಕೂಲವಾಗಿದೆ. ಬರಗಾಲದ ಸಂದರ್ಭದಲ್ಲಿ ನೀರನ್ನು ಶೇಖರಣೆ ಮಾಡಿ ಕೃಷಿ ಭೂಮಿಗೆ ಕಾಲುವೆಗಳ ಮುಖಾಂತರ ಬಿಡುವುದರಿಂದ ಜನರು ವ್ಯವಸಾಯದಲ್ಲಿ ಹೆಚ್ಚು ಅಸಕ್ತಿ ತೋರಿಸಿ ಅವರ ಜೀವನಮಟ್ಟ ಹೆಚ್ಚಿ ಅವರು ಅರ್ಥಿಕವಾಗಿ, ಸಾಮಾಜಿಕವಾಗಿ ಅಭಿವೃದ್ದಿ ಹೊಂದಿದ್ದಾರೆ ಎಂದು ತಿಳಿದುಬಂದಿದೆ.

 ಪ್ರಶ್ನಾವಳಿ:-
ವೈಯಕ್ತಿಕ ವಿವರ:
(೧) ಹೆಸರು
(೨) ವಯಸ್ಸು
(ಅ) ೨೦-೩೦ ವರ್ಷ (ಆ) ೩೧-೪೦ ವರ್ಷ
(ಇ) ೪೧-೫೦ ವರ್ಷ(ಈ) ೫೧-೬೦ ವರ್ಷ
(೩) ಲಿಂಗ
ಅ) ಪುರುಷಆ) ಮಹಿಳೆ.
(೪) ಬಲ್ಲ ಭಾಷೆಗಳು
(ಅ) ಕನ್ನಡ(ಆ) ಹಿಂದಿ
(ಇ) ಇಂಗ್ಲೀಷ್(ಈ) ಇತರೆ
(೫) ವಿದ್ಯಾರ್ಹತೆ
(ಅ) ಪ್ರಾಥಮಿಕ(ಆ) ಮಾದ್ಯಮಿಕ
(ಇ) ಪಧವಿ (ಈ) ಸ್ನಾತಕೋತ್ತರ ಪದವಿ
(೬) ಧರ್ಮ.
(ಅ) ಹಿಂದೂ (ಆ) ಮುಸ್ಲಿಂ
(ಇ) ಕ್ರಿಸ್ಚಿಯನ್ (ಈ) ಇತರೆ
(೭) ನಿಮ್ಮ ಕುಟುಂಬದ ವಾರ್ಷಿಕ ಆದಾಯ ವೆಚ್ಚ
(ಅ) ೫,೦೦೦ ರಿಂದ ೧೦,೦೦೦
(ಆ) ೧೦,೦೦೦ ರಿಂದ ೨೦,೦೦೦
(ಇ) ೨೦,೦೦೦ ರಿಂದ ೨೫,೦೦೦
(ಈ) ೨೫,೦೦೦ ಕ್ಕಿಂತ ಹೆಚ್ಚು
(೮) ವೃತ್ತಿ
(ಅ) ವ್ಯಾಪರ(ಆ) ಹೈನುಗಾರಿಕೆ
(ಇ) ಗೃಹಿಣಿ (ಈ) ಸರ್ಕಾರಿ ಉದ್ಯೊಗ
(೯) ಈ ಅಣೆಕಟ್ಟಿನಿಂದಾಗಿ ನಿಮಗೆ ಅನುಕೂಲವಾಗಿದೆಯೇ?
(ಅ) ಹೌದು (ಆ) ಇಲ್ಲ
(ಇ) ಬಹಳ ಮಟ್ಟಿಗೆ (ಈ) ಸ್ವಲ್ಪ ಮಟ್ಟಿಗೆ
(೧೦) ಈ ನೀರಾವರಿ ಯೋಜನೆಯಿಂದ ಕೃಷಿಯಲ್ಲಿ ಬದಲಾವಣೆ ಆಗಿದೆಯಾ?
(ಅ) ಹೌದು(ಆ) ಇಲ್ಲ
(ಇ) ಬಹಳ ಮಟ್ಟಿಗೆ (ಈ) ಸ್ವಲ್ಪ ಮಟ್ಟಿಗೆ
(೧೧) ಮನೆಯ ವಿಧ?
(ಅ) ಪಕ್ಕಾಮನೆ (ಆ) ಕಚ್ಚಾಮನೆ
(೧೨) ಯಾವ ರೀತಿಯ ಕುಟುಂಬ ವ್ಯವಸ್ಥೆ?
(ಅ) ವಿಭಕ್ತ ಕುಟುಂಬ (ಆ) ಅವಿಭಕ್ತ ಕುಟುಂಬ
(೧೩) ನೀವು ಎಷ್ಟು ಜಮೀನನ್ನು ಹೊಂದಿದ್ದಿರಾ?
(ಅ) ೧-೨ ಎಕರೆ(ಆ) ೨-೫ ಎಕರೆ
(ಇ) ೫-೧೦ ಎಕರೆ (ಈ) ೧೦ ಕ್ಕೂ ಹೆಚ್ಚು
(೧೪) ಈ ಜಲಾಶಯ ಬರುವುದಕ್ಕಿಂತ ಮುಂಚೆ ಯಾವ ರೀತಿಯ ನೀರನ್ನು ಉಪಯೋಗಿಸುತ್ತಿದ್ದರು?
(ಅ) ಕೆರೆ (ಆ) ಬಾವಿ (ಇ) ಬೋರ್‌ವೆಲ್
(೧೫) ನಿಮ್ಮ ಜೀವನ ಮಟ್ಟದಲ್ಲಿ ಬದಲಾವಣೆ ಅಗಿದೆಯಾ?
(ಅ) ಸ್ವಲ್ಪ ಮಟ್ಟಿಗೆ (ಆ) ಬಹಳ ಮಟ್ಟಿಗೆ (ಇ) ಇಲ್ಲ (ಈ) ಇಲ್ಲವೇ ಇಲ್ಲ
(೧೬) ಕೃಷಿ ಇಳುವರಿಯಲ್ಲಿ ಹೆಚ್ಚಳವಾಗಿದೆಯೇ?
(ಅ) ಸ್ವಲ್ಪ ಮಟ್ಟಿಗೆ (ಆ) ಬಹಳ ಮಟ್ಟಿಗೆ (ಇ) ಇಲ್ಲ (ಈ) ಇಲ್ಲವೇ ಇಲ್ಲ
(೧೭) ಕೃಷಿಯೇತರ ಚಟುವಟಿಕೆಗಳಲ್ಲಿ ಅಸಕ್ತಿ ಬಂದಿದೆಯೇ?
(ಅ) ಸ್ವಲ್ಪ ಮಟ್ಟಿಗೆ (ಆ) ಬಹಳ ಮಟ್ಟಿಗೆ (ಇ) ಇಲ್ಲ (ಈ) ಇಲ್ಲವೇ ಇಲ್ಲ
(೧೮) ಈ ನೀರಾವರಿ ವಾಣಿಜ್ಯ ಬೆಳೆಗಳಿಗೆ ಅನುಕೂಲವಾಗಿದೆಯೇ?
(ಅ) ಸ್ವಲ್ಪ ಮಟ್ಟಿಗೆ (ಆ) ಬಹಳ ಮಟ್ಟಿಗೆ (ಇ) ಇಲ್ಲ (ಈ) ಇಲ್ಲವೇ ಇಲ್ಲ
(೧೯) ಯೋಜನಾ ಪೂರ್ವ ಜೀವನ ಮಟ್ಟಕ್ಕೂ ಯೋಜನಾ ಅನುಷ್ಟಾನ ನಂತರ ಜೀವನ ಮಟ್ಟಕ್ಕೂ
 ಬದಲಾವಣೆಯಾಗಿದೆಯಾ?
(ಅ) ಸ್ವಲ್ಪ ಮಟ್ಟಿಗೆ (ಆ) ಬಹಳ ಮಟ್ಟಿಗೆ (ಇ) ಇಲ್ಲ (ಈ) ಇಲ್ಲವೇ ಇಲ್ಲ
(೨೦) ನಿಮ್ಮ ಹಬ್ಬ ಹರಿದಿನಗಳಲ್ಲಿ ಆಚರಣೆಯಲ್ಲಿ ಬದಲಾವಣೆ ಆಗಿದೆಯೆ?
(ಅ) ಸ್ವಲ್ಪ ಮಟ್ಟಿಗೆ (ಆ) ಬಹಳ ಮಟ್ಟಿಗೆ (ಇ) ಇಲ್ಲ (ಈ) ಇಲ್ಲವೇ ಇಲ್ಲ
(೨೧) ಈ ಜಲಾಶಯ ನೀರು ಶುದ್ದವಾಗಿದೆಯಾ ಅಥವಾ ಕಲುಷಿತವಾಗಿದೆಯಾ?
(ಅ) ಶುದ್ಧ ಆ) ಅಶುದ್ಧ (ಇ) ಸ್ವಲ್ಪ ಮಟ್ಟಿಗೆ ಕಲುಷಿತ (ಈ) ತುಂಬಾ ಕಲುಷಿತ
(೨೨) ಈ ನೀರಾವರಿ ಬಳಸಿಕೊಂಡು ಎಷ್ಟು ಶೇಕಡವಾರು ಬೆಳೆಗಳಿಂದ ಲಾಭ ಪಡೆಯುತ್ತೀರಾ?
(ಅ) ೩೫%(ಆ) ೫೦%
(ಇ) ೬೦%(ಈ) ೭೦%
(೨೩) ಎಂತಹ ಭೂಮಿ?
(ಅ) ಫಲವತ್ತಾದ ಭೂಮಿ (ಆ) ಬಂಜರು ಭೂಮಿ
(೨೪) ಈ ಜಲಾಶಯದ ನೀರನ್ನು ಹೆಚ್ಚು ಯಾವುದಕ್ಕೆ ಬಳಸಿಕೊಳ್ಳುತ್ತೀದ್ದಿರಾ?
(ಅ) ಕೃಷಿಗೆ (ಇ) ಮನೆಗೆ (ಇ) ಇತರೆ
(೨೫) ಈ ಜಲಾಶಯದಿಂದ ಎಷ್ಟು ಶೇಕಡಾವಾರು ನೀರನ್ನು ಬಳಸಿಕೊಳ್ಳುತ್ತಿದ್ದಿರಾ?
(ಅ) ೩೫%(ಆ) ೫೦%
(ಇ) ೭೫%(ಈ) ೧೦೦%
(೨೬) ಕುಟುಂಬದ ಮುಖ್ಯ ಕಸುಬು
(ಅ) ಕೃಷಿ ಕ್ಷೇತ್ರದಲ್ಲಿ ದುಡಿಯುವುದು. (ಆ) ಕೂಲಿ ಕಾರ್ಮಿಕಾರಗಿ ದುಡಿಯುವುದು.
(ಇ) ಮನೆಯ ಕೆಲಸ ಮಾಡುವುದು. (ಈ) ಇತರೆ
(೨೭) ನೀವು ಹೆಚ್ಚಾಗಿ ಯಾವ ಬೆಳೆಯಿಂದ ಲಾಭವನ್ನು ಪಡೆಯುತ್ತಿರಿ?
(ಅ) ಎಕದಳ (ಆ) ದ್ವಿದಳ (ಇ) ತರಕಾರಿ (ಈ) ಎಣ್ಣೆ ಕಾಳುಗಳು
(೨೮) ನಿಮಗೆ ಆರ್ಥಿಕವಾಗಿ ಸಾಮಾಜಿಕವಾಗಿ ಮುಂದುವರಿಯಲು ಸಹಾಯಕವಾಗಿದೆಯೇ?
(ಅ) ಸ್ವಲ್ಪ ಮಟ್ಟಿಗೆ (ಆ) ಬಹಳ ಮಟ್ಟಿಗೆ (ಇ) ಇಲ್ಲ (ಈ) ಇಲ್ಲವೇ ಇಲ್ಲ
(೨೯) ವಾರ್ಷಿಕವಾಗಿ ಎರಡು ಬೆಳೆ ಬೆಳೆಯುವಿರಾ?
(ಅ) ಸ್ವಲ್ಪ ಮಟ್ಟಿಗೆ (ಆ) ಬಹಳ ಮಟ್ಟಿಗೆ
(ಇ) ಇಲ್ಲ (ಈ) ಇಲ್ಲವೇ ಇಲ್ಲ
(೩೦) ಕೃಷಿಯಿಂದಾಗಿ ನಿಮ್ಮ ಅರ್ಥಿಕ ಸ್ಥಿತಿ ಹೇಗಿದೆ?
(ಅ) ಉತ್ತಮವಾಗಿದೆಯೆ (ಆ) ಅತ್ಯುತ್ತಮವಾಗಿದೆಯೆ (ಇ) ಸಾಧಾರಣವಾಗಿದೆಯೆ (ಈ) ಸ್ವಲ್ಪಮಟ್ಟಿಗೆ

ಗ್ರಂಥಋಣ:
ಲೇಖಕರು - ಹರೀಶ್‌ಕೇರ, ವರ್ಷ - ೨೦೧೧, ವಿಖ್ಯಾತರ ವ್ಯಕ್ತಿಚಿತ್ರ ಮಾಲೆ, ಮೇದಾಪಾಟ್ಕರ್. ಪುಟಸಂಖ್ಯೆ - ೭ ರಿಂದ ೧೨
ಪ್ರಧಾನ ಸಂಪಾದಕರು ವಿ.ಅರ್. ಲಕ್ಷ್ಮಣ್, ವರ್ಷ ೨೦೧೨, ಸ್ಪರ್ಧಾಸ್ಪೂರ್ತಿ, ಡಿಸೆಂಬರ್ - ೨೦೧೨, ಪುಟಸಂಖ್ಯೆ - ೮೫-೮೯
ಲೇಖಕರು - ಪ್ರವಿಣ್ ಕುಲಕರ್ಣಿ, ವರ್ಷ-೨೦೧೩, ಕರೆಗಳಿಗೆ ಜೀವ ತುಂಬಿದ ಅಂತರಗಂಗೆ, ವಾರ - ಬುಧವಾರ
ಪತ್ರಿಕೆ - ಪ್ರಜಾವಾಣಿ, ಪುಟಸಂಖ್ಯೆ - ೨
ಕಾವೇರಿ ನೀರಾವರಿ ನಿಗಮ ನಿಯಮಿತ ಕರ್ನಾಟಕ ಸರ್ಕಾರದ ಉದ್ಯಮ

No comments:

Post a Comment