ಕರೆಗೆ ಓಗೊಟ್ಟು, ನಿನ್ನ ಶರತ್ತಿಗೆ ಒಳಪಟ್ಟು


ಕರೆಗೆ ಓಗೊಟ್ಟು, ನಿನ್ನ ಶರತ್ತಿಗೆ ಒಳಪಟ್ಟು
ನಿನ್ನಂತೆಯೇ ನಾನಾಗಲು ಯತ್ನಿಸಿ, ಲೋಕವಾಗುವೆ ದೇವಾ.
|
ಎಲ್ಲವು ನನ್ನದೇ ಎಂಬ ಸೋಗಿನೊಳಗೆ ನೊಂದು ಸೋತಿಹೆನು
ನೆಮ್ಮದಿಯ ಬಾಳಿಗೆ ಈ ಸೋಗು-ಸೋಪಾನ ಬೇಕಾಗಿಲ್ಲ ದೇವಾ.
ನೊಂದವರ ನೋಂದಣಿಗೆ ನೀನು ಕರೆಯೋಲೆ ನೀಡದಿದ್ದರೂ
ನಿನ್ನ ಕರೆಯೋಲೆ ನನಗೂ ಇರುವುದೆಂದು ತಿಳಿದು, ನಿನ್ನ ಶರತ್ತಿಗೆ ಒಳಪಟ್ಟು
 ನನ್ನ ಅಹಂಕಾರವ ಕೊನೆಗೊಳಿಸಿ
ಬರವಸೆಯ ಓಂಕಾರವ ಪಸರಿಸುವೆ ದೇವಾ.
|
ದಯೆಗೆ ಸಾವಿಲ್ಲ, ಸಾವಿಗೆ ಬೇದವಿಲ್ಲ ಇದು ನೀ ಹೆಣೆದ ಜಾಲ
ನೀ ಬಿತ್ತರಿಸುವ ದಯೆಯ ಬೆಳಕಿಗೆ ನನ್ನನ್ನು ಹಣತೆಯನ್ನಾಗಿಸಿದರೆ ದೇವಾ
ನಿನ್ನ ಶರತ್ತಿಗೆ ಒಳಪಟ್ಟು, ತನು-ಮನವನ್ನೇ ಹಣತೆಯಾಗಿಸಿ
ದಯೆಯೊಳು ವಿಶ್ವಾಸವನ್ನೇ ಉಸಿರಾಗಿಸಲು, ಮುಳ್ಳುನಗೆಯ ತೊರೆದು
ಈಗಲೇ ಮುಗುಳುನಗೆಯ ಬೀರುವೆ ದೇವ.