ಮಾನವನಿಂದ ಇದು ಸಾಧ್ಯವೆ?


ಈ ಕೆಳಗೆ ಭವಿಷ್ಯದಲ್ಲಿ ತಲೆದೋರುವ ನೀರಿನ ಸಮಸ್ಯ ಕುರಿತು ತಮಗೆ ಯೋಚಿಸಲು ಪ್ರಶ್ನೆಯನ್ನು ಹಾಕಿದ್ದೇನೆ. ಅದನ್ನು ಯೋಚಿಸಿ. ಅಂತೆಯೆ ಆಗುತ್ತಿರುವ ನೀರಿನ ಅಪವ್ಯಯವನ್ನು ತಡೆಗಟ್ಟಿ.

ಭವಿಷ್ಯದಲ್ಲಿ  ಭೂಮಿಯಲ್ಲಿ ನೀರು ಇಲ್ಲದಾ!ಗ
ಪ್ರಾಣಿ-ಪಕ್ಷಿಗಳಲ್ಲಿ ರಕ್ತ ಇರದಂತಾದಾಗ!
ಮರ-ಗಿಡಗಳ ಬೇರಲ್ಲಿ ತೇವಾಂಶ ಇಲ್ಲದಾಗ!
ಮಳೆರಾಯನ ಮನಸ್ಸು ಕೆಟ್ಟು ಹೋದಾಗ!
ಮಳೆರಾಯನಿಗೆ, ಭೂಮಿ, ಪ್ರಾಣಿ-ಪಕ್ಷಿಗಳಿಗೆ, ಮರ-ಗಿಡಗಳಿಗೆ
ನೀರಿನ ಸಾಲವನ್ನು ಕೊಡಲು ಮಾನವನಿಂದ ಸಾಧ್ಯವೆ?!

ಒಳ್ಳೆಯವರಿಗೆ ಮತಧಾನ ಮಾಡಿದರೂ, ಕೆಟ್ಟವರೇ ನುಸುಳಿ ಗೆಲ್ಲುತ್ತಾರೆ ಅಲ್ಲವೆ?


ಚುನಾವಣೆ ಪ್ರಜಾಪ್ರಭುತ್ವದ ಆಶಯಕ್ಕೆ ಒಳ್ಳೆಯದು. ಆದರೆ ಈ ಪ್ರಕ್ರಿಯೆಯಲ್ಲಿ ಕೆಟ್ಟವರು ಶಕ್ತಿ, ಹಣ ಮತ್ತು ಯುಕ್ತಿಯ ಮೂಲಕ ನುಸುಳಿ ಗೆದ್ದೇ ಬಿಡುತ್ತಾ ಇದ್ದಾರೆ. ದಿನಾಂಕ ೫/೫/೨೦೧೩ ರಂದು ಕರ್ನಾಟಕದಲ್ಲಿ  ರಾಜಕೀಯ ಹಬ್ಬವಿತ್ತು. ಅಂದು ಕರ್ನಾಟಕದ ಜನರೆಲ್ಲ ತಮ್ಮ ನಾಯಕನನ್ನು ಆಯ್ಕೆ ಮಾಡುವ ಸಂತೋಷದಿಂದ ಇದ್ದರು. ದುಡ್ಡು, ಹೆಂಡ ಏನೇನನ್ನೋ ಪಡೆದವರಂತೂ ರಾಜಕೀಯದ ಜಾತ್ರೆಯಲ್ಲಿ ಮಿಂದು ಮಿಂದು ಮತ್ತಿನ ಮುದ್ದೆಯಾಗಿಬಿಟ್ಟಿದ್ದರು. ನಾನು ಮತ ಹಾಕುವ ಮುನ್ನ  ಚುನಾವಣೆಗೆ ನಾನು ಇರುವ ಬೆಂಗಳೂರಿನ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿ ಯಾರು ಯಾರು ಚುನಾವಣಾ ಕಣದಲ್ಲಿ ನಿಂತಿದ್ದಾರೆ ಎಂದು ತಿಳಿದುಕೊಳ್ಳಲು www.myneta.info ಗೆ ಭೇಟಿ ನೀಡಿ ನಾನಿರುವ ಬೆಂಗಳೂರಿನ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ನಿಂತಿರುವವರ ಮಾಹಿತಿಯನ್ನು ಪಡೆದೆ.  ಒಬ್ಬೊಬ್ಬರ ಮಾಹಿತಿಯೂ ಆಶ್ಚರ್ಯವನ್ನುಂಟು ಮಾಡಿತು. ಅಪರಾಧ ಎಸಗಿರುವ, ಹಣದಲ್ಲಿ ತೇಲುವವರ ಮಾಹಿತಿ ಅದಾಗಿತ್ತು. ಈ ಕೆಳಗೆ ಪಡೆದ ಮಾಹಿತಿಯನ್ನು ನೀಡಿದ್ದೇನೆ.

RAJARAJESHWARINAGAR:B.B.M.P(CENTRAL) (Comparison Chart of Party Candidates)
Candidate    Party:    Criminal Cases    Education    Age    Total Assets    Liabilities
Dr.Sangamanth.C.Nidugundi    BSRC    0    Graduate Professional    43    Rs 89,30,000    89 Lacs+    Rs 44,00,000    44 Lacs+
K.L.R.Thimmananjaiah    JD(S)    0    10th Pass    43    Rs 5,89,83,222    5 Crore+    Rs 49,91,989    49 Lacs+
K.R.Venkatesh    KJP    1     Graduate Professional    39    Rs 41,30,000    41 Lacs+    Rs 7,50,000    7 Lacs+
M.Srinivas    BJP    0    10th Pass    71    Rs 32,08,25,908    32 Crore+    Rs 1,82,97,761    1 Crore+
Munirathna    INC    1     10th Pass    49    Rs 28,83,01,637    28 Crore+    Rs 0

ಈ ಮೇಲಿನ ಮಾಹಿತಿಯನ್ನು ಓದಿದ ಕೂಡಲೆ ಬಿ.ಎಸ್.ಆರ್ ಪಕ್ಷದ ಪ್ರತಿನಿಧಿಯೇ ಒಳ್ಳೆಯವರೆಂದು ನಿಶ್ಚಯಿಸಿದೆ. ಆದರೆ, ಯಾರೋ ಡಿ.ಎನ್.ಎ ಪತ್ರಿಕೆಯನ್ನು ಓದಿದ ಮೇಲೆ ಬೆಂಗಳೂರಿನ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿ ಡಾ. ಪ್ರಿಯದರ್ಶಿನಿ ಎಂಬುವರು ನಿಂತಿದ್ದಾರೆ. ಅವರು ಐ.ಎ.ಎಸ್ ಅಧಿಕಾರಿಯಾಗಿದ್ದರ ಜೊತೆಗೆ ಎಂ.ಬಿ.ಬಿ.ಎಸ್,  ನ್ಯಾಯ ಸಂಬಂಧಿ  ವಿಜ್ಞಾನ, ಎಲ್.ಎಲ್.ಬಿ, ಎಲ್.ಎಲ್.ಎಂ, ವೈದಕೀಯ ಕಾನೂನು, ಮತ್ತು ಹೀಗೆ ಅನೇಕ ಜ್ಞಾನಾಧಾರಿತ ಕ್ಷೇತ್ರದಲ್ಲಿ ನಿಪುಣರು. ಅಂತೆಯೆ. ಉಚ್ಛ ಹಾಗೂ ಸರ್ವೋಚ್ಛ ನ್ಯಾಯಾಲಯದಲ್ಲಿ ವಕೀಲಿಯಲ್ಲಿದ್ದು ಜೆ.ಡಿ.ಯು ಪಕ್ಷದಿಂದ ನಿಂತಿದ್ದಾರೆ ಎಂದು ತಿಳಿದು ಅವರನ್ನು ಬೆಂಬಲಿಸಿದೆ. ಆದರೆ ಅವರು ಗೆಲ್ಲಲಿಲ್ಲ. ಇದಕ್ಕೆ ಕಾರಣ, ಅವರು ಜನರಿಗೆ ತಿಳಿಯುವ ಹಾಗೆ ತಮ್ಮ ಬಗ್ಗೆ ತಿಳಿಸಲಿಲ್ಲ. ಎಲ್ಲೋ ಕೆಲವೇ ಮಂದಿಗಳಿಗೆ ಅಂತರ್ಜಾಲದ ಮೂಲಕ ತಿಳಿಸಿದರಷ್ಟೆ.
   ಹೀಗೆ ವಿದ್ಯಾವಂತರು ಜನರೊಡನೆ ಬೆರೆಯದೆ ಇದ್ದರೆ ಹಣ, ತೋಳ್ಶಕ್ತಿಗಳು ಸೇರಿ ದೇಶವನ್ನು ನುಂಗುತ್ತವೆ ಅಷ್ಟೆ.
 ಗಾಂಧೀಜಿಯವರ ಹೆಸರನ್ನು ಹೇಳಿಕೊಂಡು ಮತ ಗಿಟ್ಟಿಸುವ ‘ಕಾಂಗ್’ ಹೆಂಡವನ್ನು ನೀಡಿ ಗಾಂಧೀಜಿಯವರ ಸಾರಾಯಿ ವಿರೋಧಿ ನೀತಿಗೆ ಕಿಮ್ಮತ್ತು ನೀಡದೆ ಕುಡುಕರ ಬೆಂಬಲವನ್ನು ಗಳಿಸುವ ಸಲುವಾಗಿ ಸಾರಾಯಿ ವಾರಿಧಿಯಾಗಿಬಿಟ್ಟಿದೆ.
ಅಪರಾಧವನ್ನು ಎಸಗುತ್ತಿರುವವರ  ಪರವಾಗಿ ರಾಧೇಯನಂತೆ ಇದ್ದುಬಿಟ್ಟಿರುವುದು ಅಧರ್ಮದ ಸಂಕೇತವೇ ಆಗಿದೆ. ಇದು ಕೇವಲ ಕಾಂಗ್ ಪಕ್ಷದ ವಿರೋಧಿಯಾಗಿ ಬರೆದಿಲ್ಲ. ಈ ಲೇಖನವನ್ನು ಉಳಿದ ಪಕ್ಷಗಳಿಗೂ  ಅನ್ವೈಸುವುದು ಒಳಿತು.