ದೃಷ್ಟಿ ಸವಾಲುಳ್ಳವರ ಪೊರೆವ ಲೂಯಿ ಬ್ರೈಲ್

youtube link:

https://www.youtube.com/watch?v=S4PXzq02-Mc

ನಿರೂಪಣೆ: ಮೇಘನಾ ಕೆ.ಟಿ, ಕರ್ನಾಟಕ ಆಡಳಿತ ಸೇವೆ ಅಧಿಕಾರಿ ಹಾಗೂ ಶ್ರೀನಿವಾಸ್ಹೆಚ್.ಕೆ, ಗ್ರಾಹಕ ಸಹಾಯಕರು, s.b.i ಬ್ಯಾಂಕ್.

ಸಾಹಿತ್ಯ ರಚನೆ: ರಾಜಕುಮಾರ ವಿ ಕುಲಕರ್ಣಿ, ಗ್ರಂಥಪಾಲಕರು, ಎಸ್ನಿಜಲಿಂಗಪ್ಪ ವೈದ್ಯಕೀಯ ಮಹಾ ವಿದ್ಯಾಲಯ, ಬಾಗಲಕೋಟೆ.

ದ್ವನಿ ಸಂಕಲನ: ಡಾ. ನಾರಾಯಣ ಬಿ ರಾಯ್ಕರ್‌, ಸಂಸ್ಕೃತ ಅತಿಥಿ ಉಪನ್ಯಾಸಕರು ಹಾಗೂ ವಿಲೇಶ್‌, ಕಂಪ್ಯೂಟರ್ಶಿಕ್ಷಕರು, ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಮಹಾ ಸ್ವಾಮಿಜಿ ರವರ ಅಂಧ ವಿದ್ಯಾರ್ಥಿಗಳ ವಸತಿಯುತ ಶಾಲೆ.

ದೃಷ್ಯ ಸಂಕಲನ: ನಿರಂಜನ ಭಟ್‌, ದ್ವಿತೀಯ ಬಿ. ವಿದ್ಯಾರ್ಥಿ, ರಾಜೀವ್ಗಾಂಧಿ ಸಂಸ್ಕೃತ ಮಹಾವಿದ್ಯಾಲಯ, ಶೃಂಗೇರಿ ಹಾಗೂ ಮಂಜುನಾಥ ಹೆಗ್ಡೆ, ಅಂತಿಮ ಬಿ. ವಿದ್ಯಾರ್ಥಿ, ರಾಜೀವ್ಗಾಂಧಿ ಸಂಸ್ಕೃತ ಮಹಾವಿದ್ಯಾಲಯ, ಶೃಂಗೇರಿ.

 

ದೃಷ್ಟಿನಷ್ಟವು ಬದುಕಿನ ವಿಸ್ಮಯ ಮತ್ತು ಸವಾಲಿನ ಏಣಿಯಂತೆ. ಬದುಕಿನಲ್ಲಿ ಎಷ್ಟೋ ತೊಡಕುಗಳು ಬರುತ್ತಲೇ ಇರುತ್ತವೆ ಮತ್ತು ಸಂವೇದನೆಯುಳ್ಳ ಜನರ ಮೂಲಕ ನೆರವು ದೊರೆಯುತ್ತಲೇ ಇರುತ್ತದೆ. ಹೀಗೆ ದೃಷ್ಟಿ ಸವಾಲುಳ್ಳವರಲ್ಲೂ ಸಾಧನೆಯ ಶಿಖರವನ್ನೇರುವವರು ಇದ್ದಾರೆ. ಅಸಹಾಯಕರಾಗಿ ದಾರಿ ಕಾಣದೆ ವೇದನೆಯಲ್ಲಿ ಬಳಲುವ ದೃಷ್ಟಿ ಸವಾಲುಳ್ಳವರೂ ಇದ್ದಾರೆ. ನಾವು ಉನ್ನತಿ ಸಾಧಿಸಬೇಕೆಂದರೆ ವೇದನೆಯ ಮೂಲಕ ಸಾಧನೆಯ ಪಥವನ್ನು ಏರಿದವರ ಬದುಕನ್ನೇ ಮಾರ್ಗದರ್ಶನವೆಂದು ಭಾವಿಸಿ ರೀತಿಯ ವ್ಯಕ್ತಿತ್ವವನ್ನು ನಮ್ಮ ಬದುಕಿನಲ್ಲಿ ರೂಢಿಸಿಕೊಂಡು ನಮ್ಮ ಬದುಕಿನ ಶೈಲಿಯನ್ನು ಸಕಾರಾತ್ಮಕ ಬೆಳಕಿಗೆ ತೆರೆದಿಡಬೇಕು. ಆಗ ಮಾತ್ರ ನಾವು ಸಾಧನಾ ಪಥವನ್ನು ಏರಲು ಸಾಧ್ಯ.

 ದೃಷ್ಟಿಯನ್ನು ಕಳೆದುಕೊಂಡು ಬದುಕುವುದೆಂದರೆ ನಿಜಕ್ಕೂ ಅದೊಂದು ಹೋರಾಟದ ಬದುಕೇ ಸರಿ. ಎಲ್ಲ ಅಂಗಗಳು ಸರಿಯಿದ್ದೂ ಸಮಾಜಕ್ಕೆ ಹೊರೆಯಾಗಿ ಬದುಕುವವರ ನಡುವೆ ದೃಷ್ಟಿ ಸವಾಲುಳ್ಳವರು ಇಂದು ಸಮಾಜದಿಂದ ಯಾವುದೇ ರೀತಿಯ ಅನುಕಂಪ ನಿರೀಕ್ಷಿಸದೆ ಸಹಜ ರೀತಿಯಿಂದ ಬದುಕು ನಡೆಸುತ್ತಿದ್ದಾರೆ; ತಮ್ಮ ದೃಷ್ಟಿನಷ್ಟವನ್ನು ಮರೆತು ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮೆರೆಯುತ್ತಿದ್ದಾರೆ. ಬದುಕು ಅವರಿಗೆ ಎಂದಿಗೂ ಹೊರೆ ಎನಿಸಲೇ ಇಲ್ಲ. ಅಮೇರಿಕ ದೇಶದ ಲೇಖಕಿ ಹೆಲನ್ ಕೆಲ್ಲರ್, ತನ್ನ 43 ನೇ ವಯಸ್ಸಿನಲ್ಲಿ ಅಂಧನಾದ ಕವಿ ಜಾನ್ ಮಿಲ್ಟನ್, ಕಾರ್ಟೂನಿಸ್ಟ್ ಜೆಮ್ಸ್ ಟರ್ಬರ್, ಜನ್ಮತಃ ದೃಷ್ಟಿಸವಾಲಿಗರಾಗಿ ಸಂಗೀತ ಕ್ಷೇತ್ರದಲ್ಲಿ ಅಪೂರ್ವ ಸಾಧನೆಗೈದ ಶ್ರೀ ಪುಟ್ಟರಾಜ ಗವಾಯಿಗಳು ಎಲ್ಲ ಮಹನೀಯರು ತಮ್ಮ ದೈಹಿಕ ವೈಕಲ್ಯವನ್ನು ಮರೆತು ಮಾಡಿದ ಸಾಧನೆ ಮತ್ತು ಪಡೆದ ಯಶಸ್ಸು ಅಪಾರ. ದೃಷ್ಟಿ ಸವಾಲುಳ್ಳವರ ಬದುಕಿನ ಇಂದಿನ ಆತ್ಮವಿಶ್ವಾಸ ಮತ್ತು ಅವರ ಸಾಧನೆಗಳ ಹಿಂದೆ ಲೂಯಿ ಬ್ರೈಲ್ ಎನ್ನುವ ಸಾಧಕನ ಪರಿಶ್ರಮವಿದೆ. ಅವರ ಬದುಕು ಮತ್ತು ಮಾಡಿದ ಸಾಧನೆ, ಅದೊಂದು ಯಶೋಗಾಥೆ.

 ತನ್ನ ಅಂಗವೈಕಲ್ಯತೆಯನ್ನು ಮೆಟ್ಟಿ ನಿಂತು ಆತ ಮಾಡಿದ ಸಾಧನೆ ಅನೇಕ ದೃಷ್ಟಿ ಸವಾಲಿಗರ ಬದುಕಿಗೆ ಸ್ಪೂರ್ತಿಯ ಸೆಲೆಯಾಗಿದೆ. ಲುಯಿ ಬ್ರೈಲ್ ರವರು ಅಂಧರಿಗೆ ಬೆಳಕಾಗಲು ಕ್ರಮಿಸಿದ ಹಾದಿಯು ವೇದನಾಮಯವೂ, ಸಾಧನಾಮಯವೂ ಆಗಿತ್ತು. ಅವರ ಸಾಧನೆ ಮತ್ತು ಅವರು ಅನುಭವಿಸಿದ ವೇದನೆ ಇವುಗಳನ್ನು ತಮಗೆ ತಿಳಿಸುವುದರ ಜೊತೆಗೆ ಅವರಿಗೆ ನೆರವಾದ ಕೆಲವು ಉತ್ತಮ ವ್ಯಕ್ತಿಗಳನ್ನು ಸಾಕ್ಷ್ಯಚಿತ್ರದಲ್ಲಿ ತಿಳಿಯಪಡಿಸಲು ಪ್ರಯತ್ನಿಸಲಾಗಿದೆ.

 

ಬಾಲ್ಯ ಮತ್ತು ಎದುರಿಸಿದ ಸಂಕಷ್ಟ :

ಜನವರಿ 4, 1809 ರಂದು ಪ್ಯಾರಿಸ್ ಪೂರ್ವಕ್ಕೆ 20 ಮೈಲು ದೂರದಲ್ಲಿರುವ ಕೂಪ್ವ್ರೆ ಎಂಬ ಗ್ರಾಮದಲ್ಲಿ ಜನಿಸಿದ ಲೂಯಿ ಬ್ರೈಲ್ ಜನ್ಮತಹ ದೃಷ್ಟಿ ಸವಾಲಿಗನಾಗಿರಲಿಲ್ಲ. ಜನಿಸಿದಾಗ ಅವನು ಸಾಮಾನ್ಯ ಮಕ್ಕಳಂತೆಯೇ ಇದ್ದ. ಅವರದು ತಂದೆ ಸೈಮನ್ ರಿನೆ ಬ್ರೈಲ್, (Simon-René) ತಾಯಿ ಮೋನಿಕಾ ಬ್ರೈಲ್ (Monique Braille) ಹಾಗೂ ಮೂವರು ಇತರೆ ಒಡಹುಟ್ಟಿದವರಿಂದ ಕೂಡಿದ ತುಂಬು ಕುಟುಂಬ. ಲೂಯಿಯ ತಂದೆ ಅತ್ಯಂತ ಬಡವನಾಗಿದ್ದು ಕುದುರೆಗಳ ಜೀನನ್ನು ಸಿದ್ಧಪಡಿಸುವ ಚರ್ಮದ ವೃತ್ತಿಯನ್ನು ಅವಲಂಭಿಸಿದ್ದ ಕಾಯಕ ಯೋಗಿ.

 ಇವರ ಒಂದು ಸಣ್ಣ ಅಂಗಡಿಯೇ ಕುಟುಂಬದ ಜೀವನ ನಿರ್ವಹಣೆಗೆ ಆಧಾರ. ಓಡಾಡಲು ಕಲಿತ ಮಗು ಲೂಯಿ ತನ್ನ ದಿನದ ಬಹುಪಾಲು ಸಮಯವನ್ನು ತಂದೆಯ ಪುಟ್ಟ ಅಂಗಡಿಯಲ್ಲೇ ಕಳೆಯುತ್ತಿದ್ದ. ಪ್ರತಿಯೊಂದು ವಸ್ತುಗಳನ್ನು ಬಿರುಗಣ್ಣಿನಿಂದ ನೋಡುತ್ತಾ, ಹಿಡಿಯುತ್ತಾ ಪ್ರಪಂಚದ ವಸ್ತುಗಳ ಪರಿಚಯ ಮಾಡಿಕೊಳ್ಳುತ್ತಿದ್ದ ಹಸುಗೂಸು ಲೂಯಿಗೆ ತನ್ನ ತಂದೆಯ ಕಮ್ಮಟವೇ ಆಟದ ಹಾಗೂ ಕುತೂಹಲದ ಚಟುವಟಿಕೆಗಳ ಕೇಂದ್ರವಾಗಿತ್ತು.

 ಬದುಕಿನಲ್ಲಿ ನಡೆಯುವ ಆಕಸ್ಮಿಕ ಘಟನೆಗಳು ಬದುಕಿನ ದಿಕ್ಕನ್ನೇ ಬದಲಿಸುವಂತೆ ಲೂಯಿ ಬ್ರೈಲ್ ಚಿಕ್ಕವನಾಗಿದ್ದಾಗ ನಡೆದ ಅದೊಂದು ಘಟನೆ ಶಾಶ್ವತವಾಗಿ ಆತ ತನ್ನ ದೃಷ್ಟಿಯನ್ನೇ ಕಳೆದುಕೊಳ್ಳುವಂತೆ ಮಾಡಿತು. ತನ್ನ ಮೂರನೇ ವರ್ಷದಲ್ಲಿ ಒಂದು ಮುಂಜಾನೆ ಲೂಯಿ ಆಟದ ಚಟುವಟಿಕೆಗಳಲ್ಲಿ ತೊಡಗಿದ್ದಾಗ, ತಂದೆಯ ಅಂಗಡಿಯಲ್ಲಿ ಓರಣವಾಗಿ ಜೋಡಿಸಿಟ್ಟ ಉಪಕರಣಗಳಲ್ಲಿ ಒಂದಾದ ಉದ್ದನೆಯ ಹರಿತವಾದ ಚಾಕುವೊಂದನ್ನು ಕೈಗೆತ್ತಿಕೊಂಡು, ಚರ್ಮದ ತುಂಡಿಗೆ ತಂದೆ ರಂದ್ರಗಳನ್ನು ಮಾಡುತ್ತಿದ್ದಂತೆ ತಾನೂ ರಂದ್ರಗಳನ್ನು ಮಾಡಬೇಕೆಂದು ಅದರ ಮೇಲೆ ಚಾಕುವನ್ನು ಊರಿ ಬಲವನ್ನೆಲ್ಲ ಹಾಕಿ ಪ್ರಯತ್ನಿಸಿದ. ಚರ್ಮದ ತುಂಡು ೊರಟಾಗಿದ್ದರಿಂದ ಹರಿತವಾದ ಚಾಕು ಕೈಯಿಂದ ಜಾರಿ ಅವನ ಒಂದು ಕಣ್ಣಿಗೆ ಚುಚ್ಚಿಕೊಂಡಿತು. ಇದರಿಂದ ಎಳೆಯ ಮಗುವಿನ ಕಣ್ಣಿಗೆ ಆಳವಾದ ಗಾಯವಾಯಿತು.

 ಸ್ಥಳೀಯ ವೈದ್ಯರ ಚಿಕಿತ್ಸೆಯ ನಂತರವೂ ಗಾಯ ಗುಣವಾಗುವ ಲಕ್ಷಣ ಕಂಡುಬರಲಿಲ್ಲ. ಒಂದು ಕಣ್ಣಿಗೆ ಆದ ಗಾಯದ ಸೋಂಕು ಮತ್ತೊಂದು ಕಣ್ಣಿಗೂ ತಗುಲಿತು. ಪರಿಣಾಮವಾಗಿ ಲೂಯಿ ಬ್ರೈಲ್ ತನ್ನ ಎರಡೂ ಕಣ್ಣುಗಳ ದೃಷ್ಟಿಯನ್ನು ಕಳೆದುಕೊಂಡ.

 ಹೀಗೆ ದೃಷ್ಟಿಹೀನನಾದ ಲೂಯಿಗೆ ಆಗಿನ್ನೂ ಕೇವಲ ಐದು ವರ್ಷ ವಯಸ್ಸು. ಪಾಲಕರಿಗೆ ಲೂಯಿಯ ಬದುಕು ಒಂದು ಸಮಸ್ಯೆಯಾಗಿ ಕಾಡತೊಡಗಿತು. ಆತನನ್ನು ಬೇರೆ ಮಕ್ಕಳಂತೆ ಶಾಲೆಗೆ ಕಳುಹಿಸಲಾಯಿತಾದರೂ, ಅಲ್ಲಿ ಅನೇಕ ಸಮಸ್ಯೆಗಳು ಎದುರಾದವು. ಶಿಕ್ಷಕರಿಗೂ ಅಂಧ ಮಗುವಿಗೆ ಪಾಠ ಮಾಡುವುದೇ ದೊಡ್ಡ ಸವಾಲಾಗಿ ಪರಿಣಮಿಸಿತು. ಅಂಥ ಸಮಸ್ಯೆಗಳ ನಡುವೆಯೂ ಲೂಯಿ ಬ್ರೈಲ್ ಕೂಪ್ವ್ರೆ ಗ್ರಾಮದ ಒಂದು ಶಾಲೆಯಲ್ಲಿ 10ನೇ ವಯಸ್ಸಿನವರೆಗೆ ಅಭ್ಯಾಸ ಮಾಡಿದ. ಆದರೆ ಶಾಲೆಯಲ್ಲಿ ಅಂಧ ಮಕ್ಕಳಿಗಾಗಿ ಓದಲು ಪುಸ್ತಕಗಳಿರಲಿಲ್ಲ. ತನ್ನ ಅಂಧತ್ವದಿಂದಾಗಿ ಲೂಯಿಗೆ ಶಾಲೆಯಲ್ಲಿ ಏನನ್ನೂ ಕಲಿಯಲು ಸಾಧ್ಯವಾಗಲಿಲ್ಲ. ಇನ್ನು ಅದೇ ಶಾಲೆಯಲ್ಲಿ ಮುಂದುವರಿದರೆ ಶಿಕ್ಷಣ ಪಡೆಯುವುದು ಅಸಾಧ್ಯ ಎಂದರಿತ ಲೂಯಿಯ ತಂದೆ ತನ್ನ ಮಗನಿಗಾಗಿ ಹೊಸ ಶಾಲೆಯನ್ನು ಹುಡುಕತೊಡಗಿದರು.

 

ಪ್ಯಾರಿಸ್ಸಿನೆಡೆಗೆ ಪಯಣ:

ಲೂಯಿಗೆ ಉತ್ತಮ ಶಿಕ್ಷಣ ಒದಗಿಸಿ ಆತನನ್ನು ಸ್ವಾವಲಂಬಿಯಾಗಿಸಬೇಕೆನ್ನುವುದು ಆತನ ತಂದೆಯ ಬಯಕೆಯಾಗಿತ್ತು. ದಿನಗಳಲ್ಲಿ ಅಂಧ ಮಕ್ಕಳು ಪ್ಯಾರಿಸ್ ಬೀದಿಗಳಲ್ಲಿ ಬಿಕ್ಷೆ ಬೇಡುವುದು ಸಾಮಾನ್ಯ ದೃಶ್ಯವಾಗಿತ್ತು. ಲೂಯಿ ಬ್ರೈಲ್ ತಂದೆಗೆ ತನ್ನ ಮಗ ಬಿಕ್ಷೆ ಬೇಡುವ ಚಿತ್ರವನ್ನು ಕಲ್ಪಿಸಿಕೊಳ್ಳುವುದೂ ಕಷ್ಟದ ಸಂಗತಿಯಾಗಿತ್ತು. ಸ್ವತಹ ಅಕ್ಷರಸ್ಥನಾದ ಲೂಯಿಯ ತಂದೆಗೆ ಶಿಕ್ಷಣದ ಮಹತ್ವದ ಅರಿವಿದ್ದ ಕಾರಣ ಆತ ತನ್ನ ಅಂಧ ಮಗನ ಭವಿಷ್ಯವನ್ನು ಉಜ್ವಲಗೊಳಿಸಲು ಶಿಕ್ಷಣದ ಮೊರೆ ಹೋದ.

 ಸಾಮಾನ್ಯ ಮಕ್ಕಳ ಶಾಲೆಯಲ್ಲಿ ಲೂಯಿಗೆ ಸಮಸ್ಯೆ ಎದುರಾದಾಗ ಜಾಕ್ ಪೆಲ್ವಿ ಎಂಬ ಪಾದ್ರಿ ಲುಯಿಯನ್ನು ಪ್ಯಾರಿಸ್ನಲ್ಲಿರುವ ದೃಷ್ಟಿ ಸವಾಲುಳ್ಳವರ ಶಾಲೆಗೆ ಸೇರಿಸುವಂತೆ ಅವನ ತಂದೆಗೆ ತಿಳಿಸಿದರು. ಆತನ ತಂದೆ ಅವನನ್ನು ಪ್ಯಾರಿಸ್ ನಲ್ಲಿರುವ ವಿಶ್ವದ ಪ್ರಥಮ ದೃಷ್ಟಿ ಸವಾಲುಳ್ಳವರ ಶಾಲೆಯಾದ 'ರಾಯಲ್ ಇನ್ಸ್ಟಿಟ್ಯೂಟ್ ಫ಼ಾರ್ಬ್ಲೈಂಡ್ ಯುಥ್' ಎನ್ನುವ ದೃಷ್ಟಿ ಸವಾಲುಳ್ಳವರ ಶಾಲೆಗೆ 15/02/1819ರಲ್ಲಿ ಸೇರಿಸಿದರು.

ಲೂಯಿ ಬ್ರೈಲ್ ಗೆ ಬೇರೆ ಆಯ್ಕೆಯೇ ಇರಲಿಲ್ಲ. ಉತ್ತಮ ಶಿಕ್ಷಣ ಪಡೆಯಬೇಕೆನ್ನುವ ಅವನೊಳಗಿನ ಮಹತ್ವಾಕಾಂಕ್ಷೆ ಆತನನ್ನು ಪ್ಯಾರಿಸ್ ನಲ್ಲಿರುವ ದೃಷ್ಟಿ ಸವಾಲುಳ್ಳವರ ಶಾಲೆಗೆ ಕರೆದೊಯ್ಯಿತು. ಪ್ಯಾರಿಸ್ಸಿನೆಡೆಗಿನ ಪಯಣ ನಂತರದ ದಿನಗಳಲ್ಲಿ ಲೂಯಿ ಬ್ರೈಲ್ ಬದುಕಿನ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿತು.

 1785 ರಲ್ಲಿ ಸ್ಥಾಪನೆಯಾದ 'ರಾಯಲ್ ಇನ್ಸ್ಟಿಟ್ಯೂಟ್ ಫ಼ಾರ್ಬ್ಲೈಂಡ್ ಯುಥ್' ಶಾಲೆ ಪ್ರಪಂಚದ ಪ್ರಪ್ರಥಮ ಅಂಧ ಮಕ್ಕಳ ಶಾಲೆ ಎಂಬ ಕೀರ್ತಿಗೆ ಪಾತ್ರವಾಗಿದೆ. ಶಾಲೆಯ ಸ್ಥಾಪಕ ವಾಲೆಂಟಿನ್ ಹಾಯ್! ಅಂಧ ಮಕ್ಕಳಿಗೆ ಸಹಾಯ ಮಾಡಬೇಕೆನ್ನುವ ಅವನೊಳಗಿನ ಇಂಗಿತ ಅವನನ್ನು ಅವರಿಗಾಗಿ ಶಾಲೆಯೊಂದನ್ನು ತೆರೆಯಲು ಪ್ರೇರೇಪಿಸಿತು. ಅಂಧನಾಗಿರದ ವಾಲೆಂಟಿನ್ ಗೆ ಅಂಧ ಮಕ್ಕಳ ಸಮಸ್ಯೆಯನ್ನು ಸಹಜವಾಗಿ ಗುರುತಿಸಿ ಅದಕ್ಕೆ ಪರಿಹಾರ ಕಂಡುಹಿಡಿಯುವುದು ಅಸಾಧ್ಯದ ಸಂಗತಿಯಾಗಿತ್ತು. ಅವರು ಓದಲು ಮತ್ತು ಬರೆಯಲು ಸಾಮಾನ್ಯರ ಅಕ್ಷರಗಳನ್ನು ಲೋಹದಲ್ಲಿ ರಚಿಸಿ ಅದರಿಂದ ಅಕ್ಷರ ಕಲಿಸುವ ವಿಧಾನವನ್ನು ಅನುಸರಿಸುತ್ತಿದ್ದ. ಆದರೆ ವಿಧಾನವು ಬಹು ಶ್ರಮದಾಯಕ ಮತ್ತು ಕಠಿಣ ರೂಪದ್ದಾಗಿದ್ದು, ಶಾಲೆಯಲ್ಲಿನ ಪುಸ್ತಕಗಳನ್ನು ಅಂಧ ಮಕ್ಕಳು ಸರಾಗವಾಗಿ ಓದಲು ಸಾಧ್ಯವಾಗುತ್ತಿರಲಿಲ್ಲ. ಜೊತೆಗೆ ಪುಸ್ತಕಗಳ ಗಾತ್ರ ಮತ್ತು ಅವುಗಳ ಭಾರ ಮಕ್ಕಳಿಗೆ ಹೊಂದಾಣಿಕೆಯಾಗುತ್ತಿರಲಿಲ್ಲ. ಇದರಿಂದ ಶಾಲೆಯಲ್ಲಿನ ಅದೆಷ್ಟೋ ಅಂಧ ವಿದ್ಯಾರ್ಥಿಗಳು ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟು ಹೋಗುತ್ತಿದ್ದುದುಂಟು. ಆಗೆಲ್ಲ ಶಾಲೆಯ ಸಂಸ್ಥಾಪಕನಾದ ವಾಲೆಂಟಿನ್ ಹಾಯ್ ಗೆ ನಿರಾಶೆ ಎದುರಾಗುತ್ತಿತ್ತು. ಹಸಿ ಹಾಳೆಯ ಮೇಲೆ ತಾಂಬ್ರದ ತಂತಿಗಳ ಮೂಲಕ ಅಕ್ಷರಗಳನ್ನು ಮೂಡಿಸಿ ಓದುವ ವಿಧಾನದಿಂದ ಕೂಡಿದ್ದ ಹಾಯ್ ಪದ್ಧತಿಯು ಬರೆಯಲು ಅಂಧರಿಗೆ ಕಷ್ಟವಾಗುತ್ತಿತ್ತು ಮತ್ತು ಓದಲು ಕೂಡ ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತಿತ್ತು.

ತನ್ನ ತಂದೆಗೆ ವಿಧಾನದ ಕೆಲವು ಪುಸ್ತಕಗಳನ್ನು ಕಳುಹಿಸುತ್ತಿದ್ದ ಲೂಯಿ ಅಕ್ಷರಗಳನ್ನು ಬಿಡಿ ಬಿಡಿಯಾಗಿ ಸಿದ್ಧಪಡಿಸಿ ಕಳುಹಿಸುವಂತೆ ಕೇಳಿಕೊಳ್ಳುತ್ತಿದ್ದ. ತಂದೆಯು ಕೂಡ ಮಗನ ವಿನಂತಿಯ ಮೇರೆಗೆ ಹಾಯ್ ಪದ್ಧತಿಯಲ್ಲಿ ಸಿದ್ಧವಾದ ಪುಸ್ತಕದಲ್ಲಿದ್ದ ವಾಖ್ಯಗಳನ್ನು ಸ್ಪರ್ಷಿಸಲು ಅನುಕೂಲವಾಗುವಂತೆ ಸಿದ್ಧಪಡಿಸಿ ಮಗನಿಗೆ ಕಳುಹಿಸುತ್ತಿದ್ದ. ಲೂಯಿ ಬ್ರೈಲ್ ಮಾತ್ರ ಎಂಥ ಕಷ್ಟದ ಪರಿಸ್ಥಿತಿಯಲ್ಲೂ ಅತ್ಯಂತ ಶ್ರದ್ಧೆಯಿಂದ ಓದುತ್ತಿದ್ದ. ಶಾಲೆಯಲ್ಲಿದ್ದ ಅಂಧ ಮಕ್ಕಳಿಗೆಂದೇ ಪ್ರಕಟವಾಗಿದ್ದ ಹಾಯ್ ಪದ್ಧತಿಯಲ್ಲಿದ್ದ ಎಲ್ಲ ೧೪ ಪುಸ್ತಕಗಳನ್ನೂ ಓದಿ ಮುಗಿಸಿದ.

 ತನ್ನ ಬದುಕಿಗೆ ಕವಿದ ಕಾರ್ಮೋಡದಿಂದ ಹೊರಬರಬೇಕೆನ್ನುವ ಮಹತ್ವಾಕಾಂಕ್ಷೆ ಆತನದಾಗಿತ್ತು. ಪರೀಕ್ಷೆಯಲ್ಲಿ ಉತ್ತಿರ್ಣನಾದ ಲೂಯಿ ಬ್ರೈಲ್ ತಾನು ಓದಿದ ಶಾಲೆಯಲ್ಲೇ ಶಿಕ್ಷಕನಾಗಿ 1833ರಲ್ಲಿ ವೃತ್ತಿಯನ್ನು ಆರಂಭಿಸಿದ. ಇತಿಹಾಸ, ರೇಖಾಗಣಿತ ಮತ್ತು ಬೀಜಗಣಿತ ವಿಷಯಗಳನ್ನು ಬೋಧಿಸುವ ಜವಬ್ದಾರಿಯನ್ನು ನೀಡಲಾಗಿತ್ತು ಲೂಯಿ ಬ್ರೈಲ್ ರವರಿಗೆ.

ವೃತ್ತಿಯ ಜೊತೆ-ಜೊತೆಗೆ ಜೀನ್-ನಿಕೋಲಸ್ ಎನ್ನುವವರಿಂದ ಪಿಯಾನೋ ಮತ್ತು ಆರ್ಗನ್ ವಾಧ್ಯಗಳನ್ನು ನುಡಿಸಲು ಲುಯಿಬ್ರೈಲ್ ಕಲಿತರು ಮತ್ತು ಪ್ಯಾರಿಸ್ ನಗರದ ಕ್ಯಾಥೊಲಿಕ್ ಚರ್ಚುಗಳಲ್ಲಿ ಅವುಗಳನ್ನು ನುಡಿಸಲು ಆರಂಭಿಸಿದರು. 1834ರಿಂದ 1839 ರವರೆಗೆ ಆರ್ಗನ್ ನುಡಿಸುವ ಪ್ರಮುಖ ವ್ಯಕ್ತಿಗಳಲ್ಲಿ ಇವರು ಕೂಡ ಒಬ್ಬರಾಗಿ Saint-Nicolas-des-Champs ಚರ್ಚಿನಲ್ಲಿ ಪ್ರದರ್ಶನ ನೀಡ ತೊಡಗಿದರು. ಬಳಿಕ Saint-Vincent-de-Paul ಚರ್ಚಿನಲ್ಲಿ ಪ್ರದರ್ಶನ ನೀಡಿದರು.

 

ಬ್ರೈಲ್ ಲಿಪಿಯ ಆವಿಷ್ಕಾರ:

ಅಕ್ಕರದ ಬರಹಕ್ಕೆ ಮೊದಲಿಗನದಾರು? ಎನ್ನುವ ಪ್ರಶ್ನೆಗೆ ದೃಷ್ಟಿ ಸವಾಲುಳ್ಳವರು ಹೇಳುವ ಏಕೈಕ ಹೆಸರೇ ಲುಯಿ ಬ್ರೈಲ್! ಅಂಧ ಮಕ್ಕಳಿಗಾಗಿ ಉಪಯುಕ್ತವಾದ ಏನನ್ನಾದರೂ ಮಾಡಬೇಕೆನ್ನುವ ಆಸೆಯೊಂದಿಗೇ ಲೂಯಿ ಬ್ರೈಲ್ ಶಾಲೆಯಲ್ಲಿ ಶಿಕ್ಷಕರಾಗಿ ಸೇರಿದರು. ಇವರ ಮೊದಲ ಆದ್ಯತೆ ವಿದ್ಯಾರ್ಥಿಗಳು ಸುಲಭವಾಗಿ ಓದಲು ಮತ್ತು ಬರೆಯಲು ಅನುಕೂಲವಾಗುವಂತೆ ಹೊಸ ಲಿಪಿಯ ವಿಧಾನವೊಂದನ್ನು ಕಂಡುಹಿಡಿಯಬೇಕೆನ್ನುವುದಾಗಿತ್ತು. ಶಾಲೆಯಲ್ಲಿ ಅಂಧ ವಿದ್ಯಾರ್ಥಿಗಳಿಗಾಗಿ ಪುಸ್ತಕಗಳಿದ್ದರೂ, ಅಕ್ಷರಗಳನ್ನು ಬೇಗನೆ ಗುರುತಿಸಿ ಸಾಮಾನ್ಯ ಮಕ್ಕಳಂತೆ ವೇಗವಾಗಿ ಓದಲು ಸಾಧ್ಯವಾಗುತ್ತಿರಲಿಲ್ಲ. ಅಕ್ಷರಗಳನ್ನು ಗುರುತಿಸಿ ವಾಕ್ಯಗಳನ್ನು ಓದುವುದು ಕಷ್ಟವಾಗಿತ್ತು. ಆದ್ದರಿಂದ ಅಕ್ಷರಗಳನ್ನು ಬಲುಬೇಗನೆ ಗುರುತಿಸಿ ವೇಗವಾಗಿ ಓದಲು ಸಹಾಯವಾಗುವಂಥ ಲಿಪಿಯನ್ನು ಕಂಡು ಹಿಡಿಯಬೇಕೆನ್ನುವುದು ಲೂಯಿ ಬ್ರೈಲ್ ರವರ ಉದ್ದೇಶವಾಗಿತ್ತು.

 ಅವರು ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ತಮ್ಮ ಶಾಲೆಯಲ್ಲಿ ನಡೆದ ಒಂದು ಘಟನೆ ಲೂಯಿ ಬ್ರೈಲ್ ರವರ ಸಮಸ್ಯೆಗೆ ಶಾಶ್ವತ ಪರಿಹಾರವನ್ನೊದಗಿಸಿತು. ಘಟನೆ ಹೀಗಿದೆ:-

 1821 ಎಪ್ರಿಲ್ ತಿಂಗಳಲ್ಲಿ ಲೂಯಿ ಓದುತ್ತಿದ್ದ ದೃಷ್ಟಿ ಸವಾಲುಳ್ಳವರ ಶಾಲೆಗೆ ಭೇಟಿ ನೀಡಿದ್ದ ಸೈನ್ಯದ ನಿವೃತ್ತ ಅಧಿಕಾರಿ ಚಾರ್ಲ್ಸ್ ಬಾರ್ಬಿಯರ್ ಎಂಬುವವರು ತಾವು ಸೈನ್ಯದಲ್ಲಿ ಗುಪ್ತ ಸಂದೇಶಗಳನ್ನು ರವಾನಿಸಲು ಬಳಸುತ್ತಿದ್ದ ಸೊನೊಗ್ರಫಿ ಅಥವಾ "ನಿಶೆಬರವಣಿಗೆ" [Night Writing] ವಿಧಾನವನ್ನು ದೃಷ್ಟಿ ಸವಾಲುಳ್ಳವರ ಬಳಕೆಗೆ ನೀಡಿದರು. ಬರವಣಿಗೆಯ ವಿಧಾನದಲ್ಲಿ ಚುಕ್ಕಿ ಮತ್ತು ಗೆರೆಗಳಿಂದ ಕೂಡಿದ ಚಿತ್ರಬರಹದ ರೀತಿಯ ವಿನ್ಯಾಸಗಳನ್ನು ಬಳಸಲಾಗುತ್ತಿತ್ತು. ಅದನ್ನು ಸೈನಿಕರು ರಾತ್ರಿಯ ಕತ್ತಲಲ್ಲಿ ನಿಶ್ಯಬ್ಧವಾಗಿ ರಹಸ್ಯ ಸಂದೇಶಗಳನ್ನು ಓದಲು ಬಳಸುತ್ತಿದ್ದರು. night writing ಬರವಣಿಗೆಯನ್ನು ಬರೆಯಲು ಉಪಯೋಗಿಸುತಿದ್ದ ಸಲಕರಣೆಗಳಲ್ಲಿ ಕೊರೆದ ಸಾಲುಗಳುಳ್ಳ ಒಂದು ರೂಲರ್, ಜರುಗಿಸಬಹುದಾದ ಒಂದು ಕ್ಲಿಪ್ಪನ್ನು ಅದಕ್ಕೆ ಅಳವಡಿಸಿ, ಎರಡು ಲಂಬ ಸಾಲುಗಳ ನಡುವೆ 12 ಚುಕ್ಕೆಗಳನ್ನುಸ್ಟೈಲಸ್ಎಂಬ ಸಲಕರಣೆಯ ತುದಿಯ ಮೊಳೆಯಿಂದ ಚುಚ್ಚಿ ಬರೆಯಲಾಗುತ್ತಿತ್ತು.

 ಸೋನೋಗ್ರಫಿ ವಿಧಾನದ ಪ್ರಾತ್ಯಕ್ಷಿಕೆಯು ಲೂಯಿ ಬ್ರೈಲ್ ರವರ ಮೇಲೆ ಪ್ರಭಾವ ಬೀರಿತು. ಆದರೆ, ಲಿಪಿಯ ರಚನೆಗಳು ಚಿತ್ರರೂಪದಲ್ಲಿದ್ದು, ಕೆಲವು ಬೆರಳಿನ ತುದಿಗಿಂತ ಅಗಲವಾಗಿರುತ್ತಿದ್ದವು. ಲೂಯಿ ಸೋನೋಗ್ರಫಿಯ ರಹಸ್ಯವನ್ನು ಗ್ರಹಿಸಿ, ಅದರಲ್ಲಿದ್ದ ಅಪೂರ್ಣತೆಯನ್ನು ಕಂಡುಕೊಂಡರು. ತಮ್ಮ ಸೃಜನಶೀಲತೆಯ ನೆರವಿನಿಂದ ಬಾರ್ಬಿಯರ್ ರವರ ಲಿಪಿಯ ಅಪೂರ್ಣತೆಯನ್ನು ಹಾಗೂ ನ್ಯೂನತೆಯನ್ನು ನಿವಾರಿಸುವ ಒಂದು ಲಿಪಿ ಪದ್ಧತಿಯನ್ನು ರಚಿಸುವುದರಲ್ಲಿ ತಲ್ಲೀನರಾದರು. ಬಾರ್ಬಿಯರ್ ಅಭಿವೃದ್ಧಿಪಡಿಸಿದ್ಧ ವಿಧಾನವನ್ನೇ ತುಸು ಮಾರ್ಪಾಟುಗೊಳಿಸಿದ ಲೂಯಿ ರವರು ದೃಷ್ಟಿ ಸವಾಲುಳ್ಳವರು ಸ್ಟೈಲಸ್ ಹಿಡಿದು ನೇರವಾಗಿ ಪೇಪರ್ ಮೇಲೆ ಚುಕ್ಕಿಗಳನ್ನು ಮೂಡಿಸಲು ಅನುವಾಗುವಂತೆ ಕೋಶ [CELL] ಗಳ ನಡುವೆ ಸಣ್ಣನೆಯ ಸಾಲುಗಳನ್ನು ಸಿದ್ಧಪಡಿಸಿದರು. ಒಂದು ಕೋಶದಲ್ಲಿ ಆರು ಚುಕ್ಕಿಗಳನ್ನು ಮೂಡಿಸಬಲ್ಲ ಮತ್ತು ಒಂದು ಸಾಲಿಗೆ ೨೪ ಕೋಶಗಳುಳ್ಳ ಪಟ್ಟಿಯನ್ನು ಅಭಿವೃದ್ಧಿಪಡಿಸಿದರು. ಲೂಯಿಯವರ ಲಿಪಿಯು ಬೆರಳ ತುದಿಯಿಂದ ಸುಲಭವಾಗಿ ಸ್ಪರ್ಶಿಸಿ ಓದಬಹುದಾಗಿತ್ತು. ಲಿಪಿಯು ಅಂಧ ಮಕ್ಕಳ ಓದಿಗೆ ಅನುಕೂಲವಾಗಬಹುದೆನ್ನುವ ಮಹತ್ವಾಕಾಂಕ್ಷೆ ಅವರಲ್ಲಿ ಚಿಗುರೊಡೆಯಿತು.

 ಹೀಗೆ ಅವರು ತಮ್ಮ ಲಿಪಿಯ ಮೂಲಕ ಬರೆಯುವ ಮತ್ತು ಓದುವ ವಿಧಾನವನ್ನು ಕಂಡು ಹಿಡಿಯಲು ಪ್ರಯತ್ನಿಸಿದರು. ಅದಕ್ಕಾಗಿ ಲೂಯಿ ಹಗಲಿರುಳೆನ್ನದೆ ಶ್ರಮಿಸಿ ಕೊನೆಗೂ ತನ್ನ ಪ್ರಯತ್ನದಲ್ಲಿ ಯಶಸ್ವಿಯಾಗಿ ತಮ್ಮದೇ ಲಿಪಿಯನ್ನು ಅಭಿವೃದ್ಧಿಪಡಿಸಿದರು. ಸತತ ಮೂರು ವರ್ಷಗಳ ದುಡಿಮೆಯ ಫಲ ಅದು! ಲಿಪಿಯನ್ನು ರೂಪಿಸಿದಾಗ ಅವರಿಗೆ ಕೇವಲ 15 ವರ್ಷ ವಯಸ್ಸು. ಲೂಯಿ ಬ್ರೈಲ್ ಪ್ರಾರಂಭದಲ್ಲಿ ಗಣಿತ ಮತ್ತು ಸಂಗೀತ ವಿಷಯಗಳ ಸಂಕೇತಗಳನ್ನು ಕಂಡುಹಿಡಿದರು.

 ಲೂಯಿಯವರ ಸಾಧನೆಯನ್ನು ಮೆಚ್ಚಿ ಬಾರ್ಬಿಯರ್ 1833 ಮಾರ್ಚ್ ತಿಂಗಳಿನಲ್ಲಿ ಅವರಿಗೆ ಬರೆದ ಪತ್ರದಲ್ಲಿ

 "ದೃಷ್ಟಿ ಕಳೆದುಕೊಂಡವರ ಓದು-ಬರಹಕ್ಕಾಗಿ ತಾವು ರಚಿಸಿರುವ ವಿನ್ಯಾಸವನ್ನು ನಾನು ಕುತೂಹಲ ಮತ್ತು ಆಸಕ್ತಿಯಿಂದ ಗಮನಿಸುತ್ತಿದ್ದೇನೆ. ನಿಮ್ಮ ಜೀವನದಲ್ಲಿ ಇಂತಹ ಮಹಾನ್ ಸಾಧನೆಯನ್ನು ಮಾಡಿರುವುದು ಜ್ಞಾನದೀಪ್ತಿಯಾಗಿದೆ. ಅದು ನಿಮ್ಮನ್ನು ಕರೆದೊಯ್ಯುತ್ತಿರುವ ಸನ್ಮಾರ್ಗದ ಸಂಕೇತ. ಇದು ಪ್ರಗತಿಯ ಸೂಚನೆಯಾಗಿದೆಎಂದಿದ್ದರು."

 

ಪುಸ್ತಕ ಪ್ರಕಟಣೆ:-

Alexandre François-René Pignier ರವರು 20 ವರ್ಷಗಳ ಕಾಲ ಶಾಲೆಯ ನಿರ್ದೇಶಕರಾಗಿದ್ದರು ಮತ್ತು ಲೂಯಿ ರವರಿಗೆ ಅಚ್ಚು ಮೆಚ್ಚಿನ ಗುರುಗಳು ಕೂಡ ಆಗಿದ್ದರು. ಇವರ ಪ್ರೋತ್ಸಾಹದಿಂದ ಕೆಲವು ಪುಸ್ತಕಗಳು ಪ್ರಕಟವಾದವು.

 . 1829 ರಲ್ಲಿ ಹೂಯಿ ಪದ್ಧತಿಯಲ್ಲಿ ಪದಗಳನ್ನು ಬರೆಯುವ ಮತ್ತು ಸಂಗೀತ ಟಿಪ್ಪಣಿಯನ್ನು ಬರೆಯುವುದರ ಕುರಿತು ಪ್ರಥಮ ಬಾರಿಗೆ ಪುಸ್ತಕವನ್ನು ಪ್ರಕಟಿಸಲಾಯಿತು. ಇದರ ಎರಡನೇ ಆವೃತ್ತಿಯು 1837ರಲ್ಲಿ ಪ್ರಕಟವಾಯಿತು.

 . ಗಣಿತದ ಮಾರ್ಗದರ್ಶನದ ಬಗ್ಗೆ ಮತ್ತು ಪ್ರಾರಂಭಿಕರಿಗಾಗಿ ಅಂಕ ಗಣಿತದ ಸಾರಾಂಶವುಳ್ಳ ಪುಸ್ತಕವು 1838ರಲ್ಲಿ ಪ್ರಕಟವಾಯಿತು.

 . ಅಕ್ಷರಗಳನ್ನು, ನಕ್ಷೆಗಳನ್ನು , ಜಿಯೋಮೆಟ್ರಿ ಸಂಕೇತಗಳನ್ನು, ಸಂಗೀತ ಚಿನ್ಹೆಗಳನ್ನು ಬಳಸುವುದರ ಕುರಿತು 1839ರಲ್ಲಿ ಇವರ ಹಸ್ತಾಕ್ಷರದ ಮೂಲಕ ಬ್ರೈಲ್ಲಿಪಿಯಲ್ಲಿ ಪುಸ್ತಕ ಪ್ರಕಟವಾಯಿತು.

 

 Decapoint ಪದ್ಧತಿ:

ದೃಷ್ಟಿಯುಳ್ಳವರು ಕೂಡ ಬ್ರೈಲ್ಲಿಪಿಯನ್ನು ಓದುವಂತೆ ಪದ್ಧತಿಯು ಕೆಲವು ನಿಯಮಗಳನ್ನು ಹೊಂದಿತ್ತು. ಇದನ್ನು ೧೮೩೯ರಲ್ಲಿ ಲೂಯಿಸ್ ರವರು ಅಭಿವೃದ್ಧಿಪಡಿಸಿದರು.

 

ರಫಿಗ್ರಫಿಯ ಅಭಿವೃದ್ಧಿ:

ಲೂಯಿ ರವರ ಸ್ನೇಹಿತನಾದ Pierre-François-VictorFoucault ಎಂಬುವವರು ಅಕ್ಷರವನ್ನು ಊಡಬಲ್ಲ “piston board” ಹೆಸರಿನ ಟೈಪ್ರೈಟರ್ರೀತಿಯ ಸಾಧನವನ್ನು ಸಿದ್ಧಪಡಿಸಲು ಆರಂಭಿಸಿರುತ್ತಾರೆ. ಲುಯಿ ರವರು ಸಹಕಾರ ನೀಡುತ್ತಾರೆ. ಇವರು ಕೂಡ ಬ್ರೈಲ್ಅಭಿವೃದ್ಧಿಗಾಗಿ ಲೂಯಿಸ್ರವರೊಂದಿಗೆ ಕೈಜೋಡಿಸಿರುತ್ತಾರೆ. ಸಾಧನವನ್ನು 1855ರಲ್ಲಿ ಪ್ಯಾರಿಸ್ನಲ್ಲಿ ನಡೆದ ಜಾಗತಿಕ ಸಮ್ಮೇಳನದಲ್ಲಿ Pierre-François- ರವರು ಪ್ರದರ್ಶಿಸುತ್ತಾರೆ.

 

ವೇದನೆಯ ಹಾದಿ:-

ಲುಯಿ ರವರನ್ನು ಜನರು ಘನತೆಯಿಂದ ನಡೆಸಿಕೊಳ್ಳುತ್ತಿದ್ದರಾದರೂ, ಅವರು ಅಭಿವೃದ್ಧಿಪಡಿಸಿದ ಲಿಪಿಗೆ ಸೂಕ್ತ ಪ್ರೋತ್ಸಾಹ ನೀಡಲಿಲ್ಲ. ಅವರು ಪಾಠ ಮಾಡುತ್ತಿದ್ದ ಶಾಲೆಯಲ್ಲಿ ವಿದ್ಯಾರ್ಥಿಗಳು ಆಸಕ್ತಿಯಿಂದ ಲೂಯಿ ಲಿಪಿಯನ್ನು ಬಳಸುತ್ತಿದ್ದರೂ. ಅದನ್ನು ಅಧಿಕೃತವಾಗಿ ಬಳಸಲು ಆಡಳಿತ ಮಂಡಳಿಯವರು ಅವಕಾಶ ನೀಡಲಿಲ್ಲ. ಲೂಯಿಗೆ ಪ್ರೋತ್ಸಾಹ ನೀಡುತ್ತಿದ್ದ ವಾಲೆಂಟಿನ್ ಹಾಯ್ 1822ರಲ್ಲಿ ಕಾಲವಾದರು. ಆದಾಗ್ಯೂ ಶಾಲೆಯ ಪ್ರಾಂಶುಪಾಲರಾಗಿದ್ದ Alexandre François-René Pignier ಇತಿಹಾಸದ ಪುಸ್ತಕವೊಂದನ್ನು ಬ್ರೈಲ್ ಲಿಪಿಯಲ್ಲಿ ಪ್ರಕಟಿಸಿದಾಗ ಅವರನ್ನು ಕೆಲಸದಿಂದ ವಜಾ ಮಾಡಲಾಯಿತು. ಮುಂದೆ Pierre-Armand Dufau ನಿರ್ದೇಶಕನಾದಾಗ ಲುಯಿ ರವರ ಪುಸ್ತಕಗಳನ್ನು ೧೮೪೦ರಲ್ಲಿ ನಿಶೇಧಿಸಿದನು ಮತ್ತು ಲೂಯಿ ಬ್ರೈಲ್ ರವರು ತನ್ನ ಊರಿಗೆ ತೆರಳಿದ್ದಾಗ ಬ್ರೈಲ್ ಲಿಪಿಯ ಪುಸ್ತಕಗಳನ್ನು ಸುಟ್ಟುಹಾಕಲು ಆಜ್ಞೆ ಹೊರಡಿಸಿದನು. ಬ್ರೈಲ್ ಲಿಪಿಯ ಬರವಣಿಗೆಗೆ ಬಳಸುತ್ತಿದ್ದ ಪರಿಕರಗಳನ್ನು ಶಾಲೆಯ ವಿದ್ಯಾರ್ಥಿಗಳಿಂದ ವಶಪಡಿಸಿಕೊಂಡನು. ಯಾರಾದರೂ ಬ್ರೈಲ್ ಲಿಪಿಯನ್ನು ಕಲಿಸಲು ಮುಂದಾದರೆ ಅಂತವರಿಗೆ ಛಡಿ ಏಟಿನ ಶಿಕ್ಷೆ ಮತ್ತು ಉಪವಾಸ ಶಿಕ್ಷೆಯನ್ನು ವಿಧಿಸುತ್ತಿದ್ದನು.

  ವಿಚಾರ ಸಂಸ್ಥೆಯ ಮತ್ತೊಬ್ಬ ನಿರ್ದೇಶಕರಾಗಿದ್ದ ಡಾ .ಜೋಸೆಫ್ ಗೋದೆ ರವರಿಗೆ ತಿಳಿಯಿತು. ಡಾ. ಜೋಸೆಫ್ ರವರು ಸ್ವತಃ ಬ್ರೈಲ್ ಲಿಪಿಯನ್ನು ಕಲಿತು, ನಿರ್ದೇಶಕರ ಸಭೆಯಲ್ಲಿ Pierre-Armand Dufau ರವರ ಧೋರಣೆಗಳನ್ನು ಕಟುವಾಗಿ ಖಂಡಿಸಿ ಮತ್ತೆ ಬ್ರೈಲ್ ಲಿಪಿಯನ್ನು ಶಾಲೆಯಲ್ಲಿ ಬಳಸುವಂತೆ ಮನವರಿಕೆ ಮಾಡಿದರು.

 

ನಿರಾಶೆಯ ಕಾರ್ಮೋಡ:-

ಸಾರ್ವಜನಿಕ ಸಮ್ಮೇಳನಗಳಲ್ಲಿ ಬ್ರೈಲ್ ಲಿಪಿ ಪ್ರದರ್ಶಿಸಿದರು ಅಲ್ಲಿಯೂ ಗಣ್ಯರಿಂದ ಮತ್ತು ಸಾಮಾನ್ಯ ಜನರಿಂದ ಪ್ರೋತ್ಸಾಹ ದೊರೆಯಲಿಲ್ಲ. ಅದರಲ್ಲೂ, ಫ್ರಾನ್ಸಿನ ರಾಜ ಲೂಯಿ ಫ಼ಿಲಿಪ್ ರವರಿಂದಲೂ ಮನ್ನಣೆ ದೊರೆಯಲಿಲ್ಲ. ಶಾಲೆಯ ಹೊರಗಿನ ವ್ಯಕ್ತಿಗಳು ಮಾತ್ರವಲ್ಲ, ೊಳಗಿನ ವ್ಯಕ್ತಿಗಳೂ ಕೂಡ ಇವರ ಪ್ರಯೋಗವನ್ನು ಕಂಡು ಅಪಹಾಸ್ಯ ಮಾಡುತ್ತಿದ್ದರು. ಆದರೂ ಲೂಯಿಯವರು ನಿರಾಶರಾಗದೆ, ಬ್ರೈಲ್ ಲಿಪಿಯಲ್ಲಿ ಅನೇಕ ಪುಸ್ತಕಗಳನ್ನು ಪ್ರಕಟಿಸಿ ಮೂಲಕ ದೃಷ್ಟಿ ಸವಾಲುಳ್ಳವರ ಬದುಕಿಗೆ ಬೆಳಕು ನೀಡಲು ಪ್ರಯತ್ನಿಸಿದರು. ಸರ್ಕಾರ ಹಾಗೂ ಜನರ ತಾತ್ಸಾರದಿಂದ ಲೂಯಿಯವರು ಬದುಕಿರುವವರೆಗೂ ಅವರ ಲಿಪಿ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣಲಿಲ್ಲ.

 

ಅನಾರೋಗ್ಯದ ಪಿಡುಗು:-

ಬಾಲಕ ಲೂಯಿ ಆರಂಭದಿಂದಲೂ ಕೃಶ ದೇಹದಿಂದ ಕೂಡಿದ್ದ. ಶಾಲೆಯಲ್ಲಿನ ಅನಾರೋಗ್ಯಕರ ವಾತಾವರಣ ಮತ್ತು ವೈದ್ಯಕೀಯ ಸವಲತ್ತು ಇಲ್ಲದಿದ್ದರಿಂದ ಲೂಯಿ ರವರು ಕ್ಷಯ ರೋಗಕ್ಕೆ ತುತ್ತಾದರು. ಸುಮಾರು 1835 ರಿಂದಲೇ ಅನಾರೋಗ್ಯ ಅವರ ಬೆನ್ನು ಹತ್ತಿತ್ತು. ಕ್ಷಯ ರೋಗವು ಉಲ್ಬಣಿಸಿದ್ದರಿಂದ 1850 ರಲ್ಲಿ ಶಿಕ್ಷಕ ವೃತ್ತಿಯಿಂದ ಬಿಡುಗಡೆ ಹೊಂದುವುದು ಲುಯಿ ಬ್ರೈಲ್ ರವರಿಗೆ ಅನಿವಾರ್ಯವಾಗಿತ್ತು.

 

ಅಗ್ನಿ ಪರೀಕ್ಷೆ:-

1843 ರಲ್ಲಿ ಶಾಲೆಯ ನವೀಕರಣಗೊಂಡ ಕಟ್ಟಡದ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಬ್ರೈಲ್ ಲಿಪಿಯ ಕುರಿತು ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸುವ ಅಂಶವು ಸೇರ್ಪಡೆಯಾಗಿತ್ತು. ಕಾರ್ಯಕ್ರಮದಲ್ಲಿ "account of the system of writing in raised dots for use by blind" ಎಂಬ ಪ್ರಬಂಧವನ್ನು ಡಾ ಜೋಸೆಫ್ ಗೋದೆ ರವರು ಮಂಡಿಸಿದರು. ಇದು ಬ್ರೈಲ್ ಲಿಪಿಯ ಅಧಿಕೃತ ದಾಖಲಾತಿಯಾಯಿತು. ಬ್ರೈಲ್ ಲಿಪಿಯ ಪ್ರದರ್ಶನವೂ ಶಾಲೆಯ ವಿದ್ಯಾರ್ಥಿನಿಯಿಂದ ಆಯಿತು. ಲಿಪಿಯ ುಪಯುಕ್ತತೆಯನ್ನು ಸಾರ್ವಜನಿಕರು ನಂಬಲಿಲ್ಲ. ಅಂದೇ ಅದರ ುಪಯುಕ್ತತೆಯನ್ನು ಪರಿಶೀಲನೆಗೆ ಒಳಪಡಿಸಿದರು. ಒಬ್ಬರು ಬರೆದಿದ್ದನ್ನು ಮತ್ತೊಬ್ಬರು ಓದಲು ಸಾಧ್ಯವೇ ಎಂದು ಸಾರ್ವಜನಿಕರು ಅಂಧ ವಿದ್ಯಾರ್ಥಿಗಳನ್ನು ಪರೀಕ್ಷಿಸಿದರು. ಎಲ್ಲಾ ಪರಿಕ್ಷೆಗಳನ್ನು ಎದುರಿಸಿ ಬ್ರೈಲ್ಲಿಪಿ ಗೆದ್ದಿತು. ಲೂಯಿ ಸಂತೋಷಪಟ್ಟರು.

 

ಮರಣ ಮತ್ತು ಔದಾರ್ಯ:-

ಹೀಗೆ ಧೀರ್ಘ ಕಾಲದ ಅನಾರೋಗ್ಯದಿಂದ ಬಳಲಿದ ಲೂಯಿಯವರು ಜನವರಿ ೧೮೫೨ ರಲ್ಲಿ ತಮಗೆ ೪೩ ವರ್ಷಗಳು ತುಂಬಿದ ೆರಡು ದಿನಗಳ ನಂತರ ಿಹಲೋಕ ತ್ಯಜಿಸಿದರು. ಅವರು ಮರಣದ ನಂತರ ತನ್ನಲ್ಲಿದ್ದ ಹಣವನ್ನೆಲ್ಲ ದೃಷ್ಟಿ ಸವಾಲುಳ್ಳವರ ಸಂಘಗಳಿಗೆ ದೇಣಿಗೆಯಾಗಿ ನೀಡುವಂಥೆ ಸೂಚಿಸಿದ್ದರು. ಅವರು ಗತಿಸಿದರೂ ತಮ್ಮ ಸಾಧನೆಯ ಮೂಲಕ ಇಂದಿಗೂ ಜಗತ್ತಿನ ದೃಷ್ಟಿ ಸವಾಲಿಗರ ಮನದಲ್ಲಿ ಅಮರರಾಗಿದ್ದಾರೆ.

 

ದೊರೆತ ಗೌರವ:

ಬ್ರೈಲ್ ಲಿಪಿಯ ಉಪಯುಕ್ತತೆ ತಿಳಿದ ರಾಯಲ್ ಶಾಲೆಯ ಅಂಧ ವಿದ್ಯಾರ್ಥಿಗಳ ನಿರಂತರ ೊತ್ತಾಯದ ಫಲವಾಗಿ ಲೂಯಿಯವರ ಮರಣದ ೆರಡು ವರ್ಷಗಳ ನಂತರ ೧೮೫೪ ರಲ್ಲಿ ಅವರು ಓದಿ, ಕರ್ತವ್ಯ ನಿರ್ವಹಿಸಿದ ಸಂಸ್ಥೆಯು ಅಂತಿಮವಾಗಿ ಬ್ರೈಲ್ ಲಿಪಿಯನ್ನು ಅಳವಡಿಸಿಕೊಂಡಿತು. ನಂತರ ಫ್ರೆಂಚ್ ಭಾಷಿಕ ಪ್ರದೇಶಗಳಲ್ಲಿ ಲಿಪಿಯು ಬಹುಬೇಗ ಜನಪ್ರಿಯತೆಯನ್ನು ಪಡೆದರೂ ಯೂರೋಪಿನ ಇತರೆ ಭಾಗಗಳಿಗೆ ವಿಸ್ತರಿಸಲಿಲ್ಲ. ಆದಾಗ್ಯೂ , 1873 ರಲ್ಲಿ ನಡೆದ ಪ್ರಪ್ರಥಮ ಯೂರೋಪಿನ ಅಂಧ ಶಿಕ್ಷಕರ ಸಮ್ಮೇಳನದಲ್ಲಿ ಡಾ. ಥಾಮಸ್ ರೋಡ್ಸ್ ಆರ್ಮಿಟೇಜ್ ಅವರು ಬ್ರೈಲ್ ಲಿಪಿಯ ಮಹತ್ವವನ್ನು ಸಾದರಪಡಿಸಿದಾಗ ಅದರ ಬಳಕೆ ಅಂತರರಾಷ್ಟ್ರೀಯ ಮಟ್ಟಕ್ಕೇರಿತು. 1882 ವೇಳೆಗೆ, ಡಾ. ಆರ್ಮಿಟೇಜ್ ಅವರು ಬರೆದಂತೆ, ನಾಗರೀಕ ಜಗತ್ತಿನಲ್ಲಿ ಉತ್ತರ ಅಮೆರಿಕಾದ ಕೆಲವು ಪ್ರದೇಶಗಳನ್ನು ಹೊರತುಪಡಿಸಿ ಬ್ರೈಲ್ ಲಿಪಿ ಬಳಸದ ದೇಶವೇ ಇಲ್ಲವೆಂದು ತಿಳಿದು ಬರುತ್ತದೆ. ಇದು ಲಿಪಿಯ ಸರಳತೆ ಮತ್ತು ಜನಪ್ರಿಯತೆಗೆ ಹಿಡಿದ ಕೈಗನ್ನಡಿ!.

 ಮುಂದೆ, 1916 ರಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ಬ್ರೈಲ್ ಲಿಪಿಯನ್ನು ದೃಷ್ಟಿ ಸವಾಲುಳ್ಳವರ ಶಾಲೆಗಳಲ್ಲಿ ಅಧಿಕೃತ ಬೋಧನಾ ಲಿಪಿಯನ್ನಾಗಿ ಅಳವಡಿಸಿಕೊಳ್ಳಲಾಯಿತು ಮತ್ತು 1932 ವೇಳೆಗೆ ಏಕರೂಪದ ಇಂಗ್ಲೀಷ್ ಬ್ರೈಲ್ ಪದ್ಧತಿಯನ್ನು ಅಳವಡಿಸಿಕೊಳ್ಳಲಾಯಿತು.

 

ಬ್ರೈಲ್ ವಿಸ್ತರಣೆ:

 ಇಂದು ಜಗತ್ತಿನ ಆಲ್ಬೇನಿಯನ್ (Albanian) ಭಾಷೆಯಿಂದ ಝುಲು (Zulu) ಭಾಷೆಯವರೆಗೆ ಎಲ್ಲ ಭಾಷೆಗಳಲ್ಲಿ ಬ್ರೈಲ್ ಲಿಪಿ ಬಳಕೆಯಲ್ಲಿದೆ. ಅಂಧರೆ ಲಿಪಿ ಇರುವ ಜಗತ್ತಿನ ಯಾವ ಭಾಷೆಗಾದರೂ ಬ್ರೈಲ್ ಲಿಪಿಯನ್ನು ಸುಲಭವಾಗಿ ಅಳವಡಿಸಬಹುದು. Braille computer terminals, RoboBraille email delivery service, and Nemeth Braille, [a comprehensive system for mathematical and scientific notation] ಎಂಬ ಹೊಸ ಪದ್ಧತಿಗಳು ಬ್ರೈಲ್ ಲಿಪಿಯನ್ನು ಆಧರಿಸಿ ಅಭಿವೃದ್ಧಿಗೊಂಡವು. ಬ್ರೈಲ್ಮೂಲಕ ಗಣಕೀಕೃತ ಅಕ್ಷರವನ್ನು ಪರಿವರ್ತಿಸುವ optical braille recognition ತಂತ್ರಾಂಶಗಳು ಅಸ್ತಿತ್ವದಲ್ಲಿವೆ.

 

 

ವಿಶ್ವ ಮನ್ನಣೆ:-

 ನಂತರದ ವರ್ಷಗಳಲ್ಲಿ ಬ್ರೈಲ್ ಲಿಪಿಯ ಯಶಸ್ಸು, ಜನಪ್ರಿಯತೆ ಮತ್ತು ಅದರ ಉಪಯುಕ್ತತೆಯನ್ನು ಪರಿಗಣಿಸಿ ಫ್ರಾನ್ಸ್ ರಾಷ್ಟ್ರದಲ್ಲಿ ಲೂಯಿ ಬ್ರೈಲ್ ರವರಿಗೆ ದೊರೆಯಬೇಕಾದ ಮನ್ನಣೆ ಮತ್ತು ಗೌರವ ದೊರೆತವು.

 ವಿಪರ್ಯಾಸದ ಸಂಗತಿ ಎಂದರೆ ಹೊತ್ತಿಗೆ ಪ್ರಶಸ್ತಿ ಪುರಸ್ಕಾರಗಳನ್ನು ಸ್ವೀಕರಿಸಲು ಲೂಯಿ ಬ್ರೈಲ್ ರವರು ಬದುಕಿರಲಿಲ್ಲ. ಬದುಕಿನುದ್ದಕ್ಕೂ ಸಂಕಷ್ಟಗಳ ಮಧ್ಯೆಯೇ ಜೀವನ ಸಾಗಿಸಿದ ಲೂಯಿ ಬ್ರೈಲ್ ರವರು ಸಾವಿನ ನಂತರವೂ ನೆನಪಿನಲ್ಲುಳಿಯುವಂಥ ಮಹತ್ವದ ಕಾಣಿಕೆಯನ್ನು ಪ್ರಪಂಚಕ್ಕೆ ನೀಡಿ ಫ್ರಾನ್ಸ್ ದೇಶದ ಅಂಧರಿಗಷ್ಟೇ ಅಲ್ಲ, ವಿಶ್ವದ ದೃಷ್ಟಿ ಸವಾಲುಳ್ಳವರ ಬಾಳಿಗೇ ಬೆಳಕಾದರು. ಲುಯಿ ರವರ ಸಾವಿನ ನೂರು ವರ್ಷಗಳ ನಂತರ ಅವರು ಜನಿಸಿದ ಮನೆಯನ್ನು ಐತಿಹಾಸಿಕ ಸ್ಥಳವನ್ನಾಗಿ ಪರಿವರ್ತಿಸಲಾಯಿತು. ಲೂಯಿ ಬ್ರೈಲ್ ರವರ ಸಮಾಧಿಯನ್ನು ಫ್ರಾನ್ಸ್ ದೇಶದ ರಾಷ್ಟ್ರೀಯ ನಾಯಕರ ಸಮಾಧಿ ಸ್ಥಳವಾದ ಪ್ಯಾಂಥೆನ್ (Pantheon) ರುದ್ರಭೂಮಿಗೆ ಸ್ಥಳಾಂತರಿಸಿ ಅವರ ಸಾಧನೆಯನ್ನು ಗೌರವಿಸಲಾಯಿತು.

 ಲೂಯಿ ಬ್ರೈಲ್ ರವರ ೨೦೦ನೇ ಜನ್ಮದಿನದ ಸ್ಮರಣಾರ್ಥ ಅಮೇರಿಕ, ಭಾರತ, ಇಟಲಿ ಮತ್ತು ಬೆಲ್ಜಿಯಂ ದೇಶಗಳಲ್ಲಿ ಲೂಯಿ ಚಿತ್ರವಿರುವ ನಾಣ್ಯಗಳನ್ನು ಹೊರತರಲಾಯಿತು. ಜರ್ಮನ್ ರಾಷ್ಟ್ರವು ಲೂಯಿ ಬ್ರೈಲ್ ಭಾವಚಿತ್ರವಿರುವ ಅಂಚೆ ಚೀಟಿಯನ್ನು ಬಿಡುಗಡೆಮಾಡಿ ಸಾಧಕನನ್ನು ಗೌರವಿಸಿತು. ಜೊತೆಗೆ ಲೂಯಿ ಬ್ರೈಲ್ ಸಾಧನೆ ಕುರಿತು ಅನೇಕ ಭಾಷೆಗಳಲ್ಲಿ ಮಕ್ಕಳ ಪುಸ್ತಕಗಳು ಪ್ರಕಟವಾಗಿವೆ.

 

 ಭಾರತದಲ್ಲಿ ಬ್ರೈಲ್ ಬಳಕೆ:-

ಭಾರತದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿಯೇ ಬ್ರೈಲ್ ಲಿಪಿಯನ್ನು ೧೧ ವಿವಿಧ ಭಾಷೆಗಳಿಗೆ ಅಳವಡಿಸುವ ಕಾರ್ಯ ಆರಂಭವಾಗಿತ್ತು. ಹಿಂದಿ ಹಾಗೂ ಉರ್ದು ಭಾಷೆಗೆ ಶರೀಫ್, ತಮಿಳಿಗೆ ಆಸ್ಕ್ವಿಟ್, ಮರಾಠಿಗೆ ನೀಲಕಂಠರಾಯ್, ಬೆಂಗಾಳಿ ಹಾಗೂ ಗುಜರಾತಿ ಭಾಷೆಗಳಿಗೆ ಓರಿಯಂಟಲ್ ಎಂಬ ಹೆಸರುಗಳಲ್ಲಿ ಬ್ರೈಲ್ ಲಿಪಿ ಅಸ್ತಿತ್ವಕ್ಕೆ ಬಂದವು.

 ಕನ್ನಡ ಬ್ರೈಲ್ ಲಿಪಿಗೆ ಮೈಸೂರು ಬ್ರೈಲ್ ಎಂಬ ಹೆಸರು ಚಾಲ್ತಿಯಲ್ಲಿತ್ತು. ಜೊತೆಗೆ, ಒಂದೇ ಭಾಷೆಯಲ್ಲಿ ಬೇರೆ-ಬೇರೆ ಬ್ರೈಲ್ ಬರವಣಿಗೆಯ ಪದ್ಧತಿಗಳನ್ನು ಬಳಸುತ್ತಿದ್ದರಿಂದ ಆಯಾ ಭಾಷೆಗಳ ಪುಸ್ತಕಗಳನ್ನು ಯಾವ ಪದ್ಧತಿಯಲ್ಲಿ ಮುದ್ರಿಸಬೇಕು ಎಂಬ ಗೊಂದಲ ೆದುರಾಯಿತು.

  ಸಮಸ್ಯೆಯನ್ನು ಬಗೆಹರಿಸಲು 1941ರಲ್ಲಿ ತಜ್ಞರ ಸಮಿತಿಯೊಂದನ್ನು ರಚಿಸಲಾಯಿತು. ಸಮಿತಿಯು ೧೯೪೩ರಲ್ಲಿ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತು. ಸದರಿ ವರದಿಯನ್ನು ಆಧರಿಸಿ ಅಂದಿನ ಕೇಂದ್ರ ಶಿಕ್ಷಣ ಿಲಾಖೆಯ ಜಂಟಿ ಕಾರ್ಯದರ್ಶಿಗಳಾಗಿದ್ದ ಶ್ರೀ ಹುಮಾಯುನ್ ಕಬೀರ್ ಅವರು ೧೯೪೯ರಲ್ಲಿ ಯುನೆಸ್ಕೋ ಮಂಡಲಿಯ ಮಹಾನಿರ್ದೇಶಕರಿಗೆ ವರದಿಯಲ್ಲಿನ ಶಿಫಾರಸ್ಸುಗಳನ್ನು ಭಾರತದ ಎಲ್ಲಾ ಭಾಷೆಗಳಿಗೂ ಅಳವಡಿಸುವಂತೆ ಮತ್ತು ಅದನ್ನು ವಿಶ್ವ ಮಾನ್ಯಗೊಳಿಸುವಂತೆ ಪತ್ರವನ್ನು ಬರೆದರು. ವಿಷಯವು ಬಹು ಸಂಕೀರ್ಣವಾಗಿದ್ದರಿಂದ ಯುನೆಸ್ಕೋ ಮಂಡಲಿಯ ಮಹಾ ನಿರ್ದೇಶಕರು ಕ್ಲಥ ಮೆಕೆಂಜ಼ಿ ರವರ ಅಧ್ಯಕ್ಷತೆಯಲ್ಲಿ ವರದಿಯ ಪರಿಶೀಲನೆಗಾಗಿ ಸಮಿತಿಯೊಂದನ್ನು ರಚಿಸಿದರು. ಸಮಿತಿಯು ಭಾರತದ 14 ಭಾಷೆಗಳಿಗೂ ಹೊಂದಿಕೆಯಾಗಬಲ್ಲ ಬ್ರೈಲ್ ಲಿಪಿಯ ನಿಯಮಾವಳಿಗಳನ್ನು ರೂಪಿಸಿತು. ನಿಯಮಾವಳಿಗಳಿಗೆ 1951ರಲ್ಲಿ ಲೆಬೆನಾನ್ ರಾಜಧಾನಿ ಬೇರುತ್ನಲ್ಲಿ ಅಧಿಕೃತ ಮನ್ನಣೆ ನೀಡಿ, ಭಾರತ, ಶ್ರೀಲಂಕ ಮತ್ತು ಪಾಕಿಸ್ಥಾನಗಳು ತಮ್ಮ ದೇಶದ ಭಾಷೆಗಳಿಗೆ ಬ್ರೈಲ್ ಲಿಪಿಯನ್ನು ಆಯಾ ಭಾಷೆಗಳ ಉಚ್ಛಾರಣೆಯನ್ನು ಆಧರಿಸಿ ಬರವಣಿಗೆ ಪದ್ಧತಿಯನ್ನು ಅಳವಡಿಸಿಕೊಳ್ಳಲು ಸಭೆಯು ಅನುಮೋದನೆ ನೀಡಿತು.

 ತದನಂತರ ೧೯೫೨ರಿಂದ ಭಾರತದಲ್ಲಿ ಬಳಕೆಯಾಗುವ ಬ್ರೈಲ್ ಲಿಪಿಗೆ "ಭಾರತಿ ಬ್ರೈಲ್" ಎಂಬ ಹೆಸರು ಬಳಕೆಯಲ್ಲಿದ್ದು, ಗಣಿತದ ಸಂಕೇತಗಳಿಗಾಗಿಭಾರತದ ಬ್ರೈಲ್ ಗಣಿತ ಚಿನ್ಹೆಗಳುಎಂಬ ಏಕರೂಪದ ಪದ್ಧತಿಯನ್ನೂ ಸಹಾ ಅಳವಡಿಸಿಕೊಳ್ಳಲಾಗಿದೆ.

 

ಬ್ರೈಲ್ ಲಿಪಿಯ ಮಾದರಿ:

ಬ್ರೈಲ್ ಲಿಪಿಯು ಒಂದು ಕೋಶದಲ್ಲಿ [Cell] ಒಂದು ಅಕ್ಷರವನ್ನು ಬರೆಯಬಲ್ಲ ಒಟ್ಟು 63 ಮೂಲ ಸಂಯೋಜನೆಗಳ ರೂಪದಲ್ಲಿ ಜಗತ್ತಿನ ಎಲ್ಲಾ ಭಾಷೆಗಳ ಅಕ್ಷರವನ್ನು ಹೊಂದಿರುತ್ತದೆ. ಹಾಗಾಗಿ ಎಲ್ಲಾ ಭಾಷೆಗಳನ್ನು ಸುಲಭವಾಗಿ ಬರೆದು ಓದಬಹುದು. ಇತ್ತೀಚಿನ ದಿನಗಳಲ್ಲಿ ಆಧುನಿಕ ತಂತ್ರಾಂಶ ಆಧಾರಿತ ಯಂತ್ರಗಳ ನೆರವಿನಿಂದ ಸ್ಪರ್ಶಯೋಗ್ಯ ಚಿತ್ರಗಳನ್ನು ಕೂಡ ರಚಿಸಲಾಗುತ್ತಿದೆ.

 ಬ್ರೈಲ್ ಲಿಪಿಯನ್ನು ಬರೆಯಲು ಸ್ಟೈಲಸ್, ಸ್ಲೇಟ್ ಹಾಗೂ ತುಸು ದಪ್ಪನೆಯ ಹಾಳೆಗಳ ಅವಶ್ಯವಿದೆ. ಬರೆಯುವಾಗ ಬಲದಿಂದ ಎಡಕ್ಕೆ ಬರೆದು, ಓದುವಾಗ ಎಡದಿಂದ ಬಲಕ್ಕೆ ಕೈ ಚಲನೆಯಾಗುತ್ತದೆ. ಏಕೆಂದರೆ, ಸ್ಟೈಲಸ್ ಮೂಲಕ ಚುಚ್ಚಿದ ಅಕ್ಷರಗಳು ಕೆಳಮುಖವಾಗಿ ಉಬ್ಬಿರುತ್ತವೆ ಮತ್ತು ಬರೆಯುವ ವೇಳೆ ಅಕ್ಷರಗಳು ಸ್ಪರ್ಶಕ್ಕೆ ಸಿಗುವುದಿಲ್ಲ. ನಂತರ ಬರೆದ ಹಾಳೆಯನ್ನು ಮೇಲ್ಮುಖವಾಗಿ ಹಿಡಿದು ಓದುವಾಗ ಮಾತ್ರ ಅಕ್ಷರಗಳು ಸ್ಪರ್ಷಕ್ಕೆ ದೊರೆಯುತ್ತವೆ.

 ಪ್ರಾಥಮಿಕ ಶಿಕ್ಷಣದ ಒಂದು ಮತ್ತು ಎರಡನೇ ತರಗತಿಗಳಲ್ಲಿ ಅಂಧ ವಿದ್ಯಾರ್ಥಿಗಳಿಗೆ ಪ್ರಥಮ ಹಂತದಲ್ಲಿ ಮೌಖಿಕವಾಗಿ ಬ್ರೈಲ್ ಲಿಪಿಯಲ್ಲಿರುವ ಮಾತೃ ಭಾಷೆಯ ಮತ್ತು ಪಠ್ಯಕ್ರಮದಲ್ಲಿ ಅಳವಡಿಸಿಕೊಂಡ ಇತರೇ ಭಾಷೆಗಳ ಅಕ್ಷರಗಳಿಗೆ ನಿಗದಿಯಾಗಿರುವ ಚುಕ್ಕಿಗಳ ಸಂಯೋಜನೆಯನ್ನು ಖಂಟಪಾಟ ಮಾಡಿಸಲಾಗುತ್ತದೆ. ವಿದ್ಯಾರ್ಥಿ ನೆನಪಿಟ್ಟುಕೊಂಡಿರುವುದನ್ನು ಖಚಿತಪಡಿಸಿಕೊಂಡು ಶಿಕ್ಷಕರು ಬ್ರೈಲ್ ಚುಕ್ಕೆಯ ಗಾತ್ರ ಮತ್ತು ಅದರ ಸ್ವರೂಪವನ್ನು ಕೆಲವು ಮಾದರಿಗಳನ್ನು ತೋರಿಸಿ ಅರ್ಥೈಸುತ್ತಾರೆ. ಅದಾದ ಬಳಿಕವೇ ಬರೆಯುವ ವಿಧಾನವನ್ನು ಕಲಿಸಲಾಗುತ್ತದೆ.

 ಬ್ರೈಲ್ ಲಿಪಿಯನ್ನು ಈಗ ವಿವಿಧ ಸ್ವರೂಪಗಳಲ್ಲಿ ನೋಡಬಹುದಾಗಿದೆ ಮತ್ತು ಲಿಪಿಯನ್ನು ಪ್ರೋತ್ಸಾಹಿಸಲು ವಿವಿಧ ಆಧುನಿಕ ತಂತ್ರಾಂಶಗಳು ಮತ್ತು ತಂತ್ರಜ್ಞಾನಗಳು ಆವಿಶ್ಕಾರಗೊಳ್ಳುತ್ತಲೇ ಇವೆ. ದೈನಂದಿನ ಕೆಲಸಗಳಲ್ಲಿ, ಕಛೇರಿ ನಿರ್ವಹಣೆಯಲ್ಲಿ, ಶಾಲಾ ಅವಧಿಯಲ್ಲಿ ಒಟ್ಟಾರೆ ದೃಷ್ಟಿ ಸವಾಲುಳ್ಳವರ ಜೀವನದ ಎಲ್ಲಾ ಸನ್ನಿವೇಶದಲ್ಲೂ ತೊಡಕಿಲ್ಲದೆ ದೃಷ್ಟಿ ಸವಾಲುಳ್ಳವರನ್ನು ಲೂಯಿ ಬ್ರೈಲ್ ರವರು ಬ್ರೈಲ್ ಲಿಪಿಯ ಮೂಲಕ ಸಲಹುತ್ತಿದ್ದಾರೆ.

 ಬ್ರೈಲ್ ಲಿಪಿಗೆ ಬೆಂಬಲಿತವಾಗಿ typewriter 1867 ರಲ್ಲಿ ರೂಪಿತವಾದಂದಿನಿಂದ ಇಲ್ಲಿಯವರೆಗೂ ವಿವಿಧ ಸ್ವರೂಪಗಳಲ್ಲಿ ವಿವಿಧ ಬಗೆಯ ಆಧುನಿಕ ತಂತ್ರೋಪಕರಣಗಳಲ್ಲಿ ಬ್ರೈಲ್ ಲಿಪಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ದೃಷ್ಟಿ ಸವಾಲುಳ್ಳವರ ಶಿಕ್ಷಣದ ಭರವಸೆಯಾಗಿದೆ. ವಿಶ್ವ ಸಂಸ್ಥೆಯು ಸಾಧಕನ ನೆನಪಿಗಾಗಿ ನವೆಂಬರ್ ತಿಂಗಳ ೨೦೧೮ರಲ್ಲಿ ಜನವರಿ ೪ನೇ ದಿನಾಂಕವನ್ನು ವಿಶ್ವ ಬ್ರೈಲ್ ದಿನವೆಂದು ಘೋಷಿಸಿರುವುದು ಅಂಧರಿಗೆ ಮತ್ತಷ್ಟು ಉಲ್ಲಾಸವನ್ನು ತಂದಿದೆ. ದಿನವು ದೃಷ್ಟಿ ಸವಾಲುಳ್ಳವರ ಸಡಗರ ಮತ್ತು ಸಮರ್ಪಣಾ ಭಾವವನ್ನು ವ್ಯಕ್ತಪಡಿಸುವ ಸಂಕೇತವೂ ಆಗಿದೆ.

 

 ಕೊನೆಯ ಮಾತು:

178 ರಲ್ಲಿ ವಾಲೆಂಟಿನ್ ಹಾಯ್ ರವರಿಂದ ಪ್ಯಾರಿಸ್ ನಲ್ಲಿ ಸ್ಥಾಪನೆಯಾದ ವಿಶ್ವದ ಪ್ರಪ್ರಥಮ ದೃಷ್ಟಿ ಸವಾಲುಳ್ಳವರ 'ರಾಯಲ್ ಇನ್ಸ್ಟಿಟ್ಯೂಟ್ ಫ಼ಾರ್ಬ್ಲೈಂಡ್ ಯುಥ್' ಶಾಲೆಯ ಮೂಲಕ ಲುಯಿ ಬ್ರೈಲ್ ಅಂಧರಿಗೆ ಬೆಳಕಾದಂದಿನಿಂದ, ವಿಶ್ವದೆಲ್ಲೆಡೆ ದೃಷ್ಟಿ ಸವಾಲುಳ್ಳವರಲ್ಲಿ ಭರವಸೆ ಚಿಗುರೊಡೆಯಿತು.

 1887 ರಲ್ಲಿ ಮಿಸ್ ಅನ್ನಿ ಶಾರ್ಪ್ ರವರು ಭಾರತದಲ್ಲಿ ಮೊದಲ ದೃಷ್ಟಿ ಸವಾಲುಳ್ಳವರ ವಸತಿಯುತ ಶಾಲೆಯನ್ನು ಅಮೃತಸರದಲ್ಲಿಯೂ ಮತ್ತು 1901 ರಲ್ಲಿ ಕರ್ನಾಟಕದ ಮೈಸೂರಿನಲ್ಲಿ ಶ್ರೀಯುತ ಎಮ್. ಎಮ್ ಶ್ರೀನಿವಾಸ್ ರವರು ಅಂಧ ಮತ್ತು ಶ್ರವಣ ದೋಷ ಮಕ್ಕಳ ವಸತಿಯುತ ಶಾಲೆಯನ್ನು ಆರಂಭಿಸಿದಂದಿನಿಂದ ನಮ್ಮ ದೇಶದಲ್ಲಿ ಸುಮಾರು 300ಕ್ಕೂ ಹೆಚ್ಚು ಶಾಲೆಗಳು ಅಸ್ತಿತ್ವದಲ್ಲಿದ್ದು, ತನ್ಮೂಲಕ ಸುಮಾರು 20000ಕ್ಕೂ ಹೆಚ್ಚು ಅಂಧ ಮಕ್ಕಳಿಗೆ ವಿದ್ಯೆಯ ಜ್ಯೋತಿಯನ್ನು ಬೆಳಗುತ್ತಿವೆ.

 ಬ್ರೈಲ್ ಮೂಲಕ ಇಂದು ದೃಷ್ಟಿ ಸವಾಲುಳ್ಳವರ ಬದುಕು ಹಸನಾಗಿದೆ. ಮುಂದೆಯೂ ಬ್ರೈಲ್ ಬೆಳಕಾಗಲಿದೆ. ನಮ್ಮ ದೇಶದ ದೃಷ್ಟಿ ಸವಾಲುಳ್ಳವರಲ್ಲಿ ಸಾಕ್ಷರತಾ ಪ್ರಮಾಣವೂ ಹೆಚ್ಚಾಗುತ್ತಿದೆ. ನಾವು ನಮ್ಮವರಿಗಾಗಿ ಬೆಳಕಾಗಬೇಕಿದೆ.

  ಎಲ್ಲ ಯಶೋ ಪಥದವರನ್ನು ಓದಿಕೊಂಡಾಗ, ಅವರ ಮಾತನ್ನು ಆಲಿಸಿದಾಗ "ನಾವು ನಮ್ಮವರಿಗಾಗಿ ಬೆಳಕಾಗಬೇಕಿದೆ, ಲೋಕವಾಗಬೇಕಿದೆ" ಎನ್ನುವ ಆತ್ಮವಿಶ್ವಾಸ ನಮ್ಮಲ್ಲಿ ಮೂಡುವುದು ಅಲ್ಲವೆ?

 * *

No comments:

Post a Comment