ವೈಶಿಷ್ಟ್ಯದಿಂದ ಕೂಡಿದ ವಿಶಿಷ್ಟ ಚೇತನರ ವಿಶ್ವವಿದ್ಯಾಲಯ:


ಭಾರತದ ಪ್ರಥಮ ವಿಶೇಷ ಚೇತನರ ವಿಶ್ವವಿದ್ಯಾಲಯ Jagadguru Rambhadracharya Handicapped University (JRHU) ಇದು ಚಿತ್ರಕೂಟ, ಉತ್ತರ ಪ್ರದೇಶ ರಾಜ್ಯದಲ್ಲಿದೆ. ಈ ವಿಶ್ವವಿದ್ಯಾಲಯವು ೨೭/ಸೆಪ್ಟೆಂಬರ್/೨೦೦೧ರಲ್ಲಿ ಆರಂಭವಾಯಿತು.
"ಸೇವಾ ಕರ್ತವ್ಯವು ಬಹು ಕಠಿಣವಾದದ್ದು" ಇದರ ಧ್ಯೇಯವಾಕ್ಯವಾಗಿದೆ.
ಖಾಸಗಿ ವಿಶ್ವವಿದ್ಯಾಲಯವಾಗಿರುವ ಇದು‌, ಶ್ರೀ ಜಗದ್ಗುರು ರಾಮಭದ್ರಾಚಾರ್ಯ ರವರು ಇದರ ಅಧ್ಯಕ್ಷರು. ಈ ವಿಶ್ವವಿದ್ಯಾಲಯವು "ಜಗದ್ಗುರು ರಾಮ್ಭದ್ರಾಚಾರ್ಯ ವಿಕಲಾಂಗ ಶಿಕ್ಷಣ ಸಂಸ್ಥಾನ" ಎಂಬ ಟ್ರಸ್ಟಿನ ಮೂಲಕ ಅರಿವನ್ನು ಹಂಚುತ್ತಿದೆ ಮತ್ತು ವಿಶ್ವವಿದ್ಯಾಲಯದ ಎಲ್ಲಾ ಯೋಜನೆಗಳ ವ್ಯವಹಾರದ ಹೊಣೆಯನ್ನು ಹೊತ್ತಿದೆ).
ಅಂಗವಿಕಲ ವ್ಯಕ್ತಿಗಳ ಕಾಯ್ದೆಯಲ್ಲಿ ಉಲ್ಲೇಖಿಸಿರುವ ದೃಷ್ಟಿ-ಶ್ರವಣ-ಚಲನ-ಮನೋ ಸವಾಲುಳ್ಳ ವಿಶೇಷ ಚೇತನರು ಮಾತ್ರ ಇಲ್ಲಿ ಪ್ರವೇಶವನ್ನು ಹೊಂದಲು ಅವಕಾಶವಿದೆ. ತರಗತಿಗಳು, ಊಟದ ಸ್ಥಳ, ಮಲಗುವ ಕೋಣೆ, ಪ್ರಯೋಗಶಾಲೆ, ಗ್ರಂಥಾಲಯ ಮತ್ತು ಹೊರಾಂಗಣ-ಒಳಾಂಗಣ ವಾತಾವರಣವು ವಿಶೇಷ ಚೇತನರ ಸ್ನೇಹಿಯಾಗಿದೆ.
ವಿಶ್ವವಿದ್ಯಾಲಯ ಅನುಧಾನ ಆಯೋಗ (UGC) ಮತ್ತು ಭಾರತೀಯ ವಿಶ್ವವಿದ್ಯಾಲಯಗಳ ಸಂಘ (AIU) ಇವುಗಳೊಂದಿಗೆ ಈ ವಿಶ್ವವಿದ್ಯಾಲಯವು ಸಂಯೋಜಿತಗೊಂಡಿದೆ. ವಿಶ್ವವಿದ್ಯಾಲಯ ಅನುಧಾನ ಆಯೋಗದಿಂದ ಬಿ ದರ್ಜೆ ಮಾನ್ಯತೆಯನ್ನು ಪ್ರಸ್ತುತ ಇದು ಹೊಂದಿದೆ.
ಕೋರ್ಸುಗಳು:
ಈ ವಿಶ್ವವಿದ್ಯಾಲಯದಿಂದ ಒಟ್ಟು 26 ರೀತಿಯ ಪದವಿ ಮತ್ತು ಸ್ನಾತಕೋತ್ತರ ಪದವಿ ಹಂತದ ಶೈಕ್ಷಣಿಕ ಕೋರ್ಸುಗಳನ್ನು ನೀಡಲಾಗುತ್ತಿದೆ. ಅವುಗಳಲ್ಲಿ ಕೆಲವುಗಳೆಂದರೆ; ಸಂಸ್ಕೃತ, ಹಿಂದಿ, ಇಂಗ್ಲಿಶ್‌, ಸಮಾಜಶಾಸ್ತ್ರ, ಲಲಿತ ಕಲೆಗಳು, ಇತಿಹಾಸ, ಸಂಸ್ಕೃತಿ-ಪುರಾತತ್ವಶಾಸ್ತ್ರ, ವಿಜ್ಞಾನ, ಕಂಪ್ಯೂಟರ್‌-ಮಾಹಿತಿ ವಿಜ್ಞಾನ, ಪುನರ್ವಸತಿ ಶಿಕ್ಷಣ, ಕಾನೂನು, ಅರ್ಥಶಾಸ್ತ್ರ, ಸಮಾಜ ಕಾರ್ಯ, ಮನಃಶಾಸ್ತ್ರ, ಸಂಗೀತ, ಚಿತ್ರಕಲೆ, ಶ್ರವಣ-ದೃಷ್ಟಿ ಸವಾಲುಳ್ಳವರ B.ED, ಸಾಮಾನ್ಯ B.ED-M.ED ವಾಣಿಜ್ಯ ನಿರ್ವಹಣೆ, ಚಿತ್ರೀಕರಣ, ಮತ್ತು ಇತರೇ.
2007ರಿಂದ ಇಲ್ಲಿಯವರೆಗೆ ಹಲವಾರು ವಿಷಯಗಳ ಮೇಲೆ ಕೆಲವು ಅಭ್ಯರ್ಥಿಗಳು ಪೂರ್ಣಕಾಲಿಕವಾಗಿ ಮತ್ತು ಕೆಲವು ಅಭ್ಯರ್ಥಿಗಳು ಬಾಹ್ಯವಾಗಿ PHD ಮಹಾ ಪ್ರಬಂಧವನ್ನು ಮಂಡಿಸಿ ಈ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್‌ ಪದವಿಯನ್ನು ಪಡೆದಿದ್ದಾರೆ.
ಉದ್ಯೋಗ ಅವಕಾಶ ವೇದಿಕೆಯನ್ನು ಕೂಡ ಈ ವಿಶ್ವವಿದ್ಯಾಲಯವು ಹೊಂದಿದ್ದು, ವಿವಿಧ ಕೋರ್ಸುಗಳಲ್ಲಿ ತೇರ್ಗಡೆ ಹೊಂದಿದವರಿಗೆ ಸೂಕ್ತ ಉದ್ಯೋಗವನ್ನು ಆರಿಸಿಕೊಳ್ಳಲು ಮಾರ್ಗದರ್ಶನ ನೀಡಲಾಗುವುದು.

ಹೆಚ್ಚಿನ ವಿವರಗಳಿಗಾಗಿ ವಿಶ್ವವಿದ್ಯಾಲಯದ ಸಂಪರ್ಕ:-
ಜಾಲತಾಣ: www.jrhu.com
ಮಿನ್ನಂಚೆ: info@jrhu.com , jrhuniversity@yahoo.com
ದೂರವಾಣಿ ಸಂಖ್ಯೆ: +91-(05198)–224413