ಮನವನರಿಯದ ಮೂಢ


ಮರುಕಲೆತ್ನಿಸಲೊಲ್ಲ, ಮರೆಯಲೆತ್ನಿಸಲೊಲ್ಲ,
ಮರಳದಾಮೂಡಣವ ಮುಸುಕಲೆತ್ನಿಸಲೊಲ್ಲ,
 ಆ ತಿರುಕನೊಳಗುದುಗಿರುವ ತಿಳಿಯ ತಳೆಯಲೊಲ್ಲ,
ಸಂಧಿಗ್ಧ ಸಂಜೆಯಲಿ ಸಾಲ ಸರಣಿಯಲಿ ಸುಳಿಯೊ ಮನವನರಿಯದ ಮೂಢ

ತನುಗಾಲ ತುಮುಲಲವ ಮುನಿಜಾಲ ಮೊನೆಯಲವ ತುಸು ತನುವನೆತ್ನಿಸದೆ ಮನಗೆದ್ದು ಮನ್ನಿಸದೆ ನಡೆಗೆ ನಿಗೂಢವನುಳ್ಳ ಮೆರಗು ಮಾತಿನ ಮಲ್ಲ ಮತ್ತೊಂದು ಮುತ್ಸಂಜೆ ಮನಕೆ ಮರಳಲಿ ಎನ್ನುವ ಮನವನರಿಯದ ಮೂಢ

ಮೊದಲ ಯತ್ನಕೆ ಮೆರೆದು ಮರಳಿಯತ್ನವ ಮುರಿದು,
ವಿಜಯ-ಯತ್ನದ ವಿರಹಿ ತನು ಮನದಿ ಹನಿಸುರಿದು
ಗ್ರಹಿಕೆ ಗರಿಯಲಿ ಗತಿಸಲೆತ್ನಿಸಿ,
ಮರುಳ-ಮರೆಯಲಿ ಅರಿತು ಬಳವುವ ಮನವನರಿಯದ ಮೂಢ

ಮರುಕಲೆತ್ನಿಸಿ
ಮುರಿದು ಮರೆಯಲೆತ್ನಿಸಿ
ಮಡಿದು ಮಗದೊಂದು ಮೂಡಣವ ತಾನೆ ಪುಷ್ಟಿಸುತ
ತರಕನಳವಿರುವ ತೇಜಸ್ವಿಯ ಕರೆದು
ಸನ್ನದ್ಧ ಸಂಜೆಗೆ ಸಾಲುಶರ ನಿಜಬಳಸೊ ಮನವನರಿಯೋ  ಮೂಢ.

ಬರೆದವರು--ಅಶೋಕ.ಕೆ
e-mail: ashoktejasvi.557@gmail.com