ಹೆಣ್ಣಿನ ಮರು ಮದುವೆಗೆ ಕಡಿವಾಣ ಹಾಕಿದವನು ನೀಚ


ಸಾಮಾಜಿಕವಾಗಿ ಮಾನವ ಸುರಕ್ಶಿತವಾಗಿರಲು ರೂಪಿಸಿಕೊಂಡ ಮದುವೆ ಯಾವತ್ತೂ ಯಾರಿಗೂ ತೊಡಕಾಗಿರಬಾರದು. ಇಬ್ಬರಲ್ಲಿ ಒಬ್ಬರಿಗಾದರೂ ಮನಸ್ತಾಪವಾದರೆ ತ್ಯಜಿಸಿ ಬಾಳ್ವೆ ಮಾಡುವುದು ಒಳಿತು. ಮಗುವನ್ನು ಹೊಂದಿದ್ದರೆ ಸಾಕಲು ಇಶ್ಟವಿರುವವರು ಜೊತೆಗೆ ಇರಿಸಿಕೊಳ್ಳಬೇಕು. ಇಬ್ಬರಿಗೂ ಇಶ್ಟವಿಲ್ಲವೆಂದರೆ ಅವರನ್ನು ಸಾಕುಮನೆಗಳಿಗೆ ಸೇರಿಸಿದರೆ ಇನ್ನೂ ಒಳ್ಳೆದು. ಮದುವೆಯಾದ ಬಳಿಕ ಇಬ್ಬರಿಗೂ ಇಬ್ಬರ ನಿಜ ಸಂಗತಿಗಳು ತಿಳಿಯುತ್ತವೆ. ಆಗ ಜಗಳಗಳು ಉಂಟಾಗಿ ಒಡಕು ಮೂಡುತ್ತದೆ. ಹೀಗಾಗಿ ಇಶ್ಟವಿಲ್ಲದವರು ಮತ್ತೊಬ್ಬರೊಂದಿಗೆ ಬಾಳಲು ಹುಡುಕಾಟ ನಡೆಸುತ್ತಾರೆ. ಕೆಲವರು ಸೋಲುತ್ತಾರೆ. ಕೆಲವರು ಸಾಯುತ್ತಾರೆ. ಗಂಡು ಮರು ಮದುವೆಯಾಗುವುದನ್ನು ಎಲ್ಲರು ಒಪ್ಪಿಬಿಡುತ್ತಾರೆ. ಆದರೆ ಹೆಣ್ಣು ಮರು ಮದುವೆಯಾಗುತ್ತಾಳೆ ಎಂದು ಒಬ್ಬರಿಗೆ ತಿಳಿದರೆ ಸಾಕು ಅವರಲ್ಲಿನ ರಾಕ್ಶಸ ವೇದಾಂತಗಳು ದಡದಡನೆ ಉದುರುತ್ತವೆ. ಈ ವೇದಾಂತದ ಹಿಂದಿನ ಸೂತ್ರದಾರ ಒಬ್ಬ ನೀಚನಾದ ದೀರ್ಘತಮನೆಂಬ ವಿದ್ವಾಂಸ. ಈತನ ಕುರಿತು ಮಹಾಭಾರತದ ಆದಿಪರ್ವದ ೧೦೪ನೇ ಅಧ್ಯಾಯದಲ್ಲಿ ಉಲ್ಲೇಕವಿದೆ. ಬೃಹಸ್ಪತಿಯ ಅಣ್ಣ ಉತಥ್ಯನೆಂಬ ಋಷಿಗೆ ದೀರ್ಘತಮನೆಂಬ ಮಗನಿದ್ದನು. ಅವನು ಹುಟ್ಟು ಕುರುಡ ನಾದರೂ ಮಹಾವಿದ್ವಾಂಸ, ವಿವಾಹಿತನಾಗಿದ್ದರೂ ಅವನು ಪರಸ್ತ್ರೀಯರೊಡನೆ ಸ್ವೇಚ್ಛಾಚಾರದಿಂದ ವರ್ತಿಸುತ್ತಿದ್ದ. ಇದರಿಂದ ಬೇಸತ್ತ ಋಷಿಗಳು ಅವನಿಗೆ ಬಹಿಷ್ಕಾರ ಹಾಕಿದರು. ಅವನ ಮಡದಿಯಾದ ಪ್ರದ್ವೇಷಿಗೆ ಆ ವೇಳೆಗೆ ಮಕ್ಕಳಿದ್ದರು. ದೀರ್ಘತಮನು ಕುರುಡನಾದ್ದರಿಂದ ಅವನಿಗೂ ಅವನ ಮಕ್ಕಳಿಗೂ ಪ್ರದ್ವೇಷಿಯೇ ದುಡಿದು ಹಾಕಬೇಕಾಗಿತ್ತು. ಪತಿಯ ದುವರ್ತನೆಯಿಂದ ಬೇಸತ್ತ ಅವಳು
 ನಾನು ದುಡಿದು ಹಾಕುವುದಿಲ್ಲ. ನೀನು ಮನ ಬಂದಲ್ಲಿಗೆ ಹೋಗು. ನಾನು ಮತ್ತೊಬ್ಬ ಗಂಡನನ್ನು ಮಾಡಿಕೊಳ್ಳುವೆ" ಎಂದು ಹೇಳಿದಳು. ಇದನ್ನು ಕೇಳಿದ ದೀರ್ಘತಮನು ಕೆರಳಿ "ಸ್ತ್ರೀಗೆ ಜೀವನಪರ್‍ಯಂತ ಒಬ್ಬನೇ ಗಂಡನಿರಬೇಕು. ಅವನು ಸತ್ತಿರಲಿ, ಬದುಕಿರಲಿ ಸ್ತ್ರೀಯು ಮತ್ತೊಬ್ಬ ಗಂಡನನ್ನು ಮಾಡಿಕೊಳ್ಳಕೂಡದೆಂದು ಇಂದಿನಿಂದ ನಾನು ಶಾಸನ ಮಾಡುತ್ತೇನೆ" ಎಂಬುದಾಗಿ ಗುಡುಗಿದ. ಅವನು ವಿದ್ವಾಂಸನಾದುದರಿಂದ ಅಂತಹ ಶಾಸನವನ್ನೂ ಮಾಡಿದ. ಅಂದಿನಿಂದ ಹೆಣ್ಣಿಗೆ ಮರು ಮದುವೆಯಾಗಲು ತೊಡಕಾಗಿದೆ ಎನ್ನಬಹುದು. ರುಶಿಗಳು ದೀರ್ಘತಮನನ್ನು ಹೊರಹಾಕಿದಂತೆ ನಾವು ಈ ರೀತಿಯ ಗೊಡ್ಡುಗಳನ್ನು ಹೊರಹಾಕಬೇಕು. ಗಂಡನನ್ನು ಕಳೆದುಕೊಂಡವರು/ಗಂಡನ ಕಿರುಕುಳಕ್ಕೆ ಒಳಗಾದವರು ಹೊರಬಂದು ಉತ್ತಮ ಬಾಳ್ವೆ ನಡೆಸಲು ಅನುವಾಗಲು ಅವಕಾಶಗಳು ತೆರೆದಿರಬೇಕು. ಹೀಗಾಗಿ ದೀರ್ಘವಾಗಿರುವ ಈ ತಮವನ್ನು ಇಲ್ಲವಾಗಿಸಬೇಕು.
ಮರು ಮದುವೆಗೆ ಕಡಿವಾಣ ಹಾಕಿದ ಈತ ಈ ವಿಶಯದಲ್ಲಿ ನೀಚ ಎಂದು ನನಗೆ ಅನಿಸಿದೆ. ಹಿಂದಿನಿಂದ ಇಲ್ಲಿಯ ತನಕ, ಈಗಲೂ, ಮತ್ತು ಮುಂದೆಯೂ ಇವನನ್ನು ಸದರಿ ವಿಶಯದಲ್ಲಿ ಬೆಂಬಲಿಸುವವರು ನೀಚರು. ಅಂತೆಯೆ, ಕುರುಡರಾಗಿರುವವರೆಲ್ಲ ನೀಚರೆಂದು ಅಂದುಕೊಳ್ಳುವವರೂ ನೀಚರು. ಜಾನ್ಮಿಲ್ಟನ್ ಎಲ್ಲಾ ಮಂದಿಗಳಿಗೂ ತಮ್ಮ ಅನಿಸಿಕೆಗಳನ್ನು ಹೇಳಲು ತೆರೆದ ಅವಕಾಶವಿರಬೇಕೆಂದು ಹೇಳಿದ ಜಗತ್ತಿನ ಮೊದಲ ವ್ಯಕ್ತಿ. ಹಾಗಂತ ಅವರನ್ನು ದೀರ್ಗತಮನೆಂದು ಬಾವಿಸಲಾಗದು ಅಲ್ಲವೆ? ಗಂಡು ಯಾವಾಗಲು ಕೂಡಿಯೇ ಇರಬೇಕು ಮತ್ತು  ಅವನು ಸ್ವಾವಲಂಬಿಯಾಗಿ ಬಾಳ್ವೆ ಮಾಡಬೇಕು ಹೆಣ್ಣು ಮಾತ್ರ ಹಾಗೆ ಇರಬಾರದು ಎಂಬುವುದು ಯಾವ ಸಯ್ಪು ಹೇಳಿ? ಗಂಡ ಸತ್ತಾಗ ಹೆಣ್ಣು ಮರು ಮದುವೆಯಾಗದಂತೆ ಕಡಿವಾಣ ಹಾಕಿದರೆ ಹೆಣ್ಣು ಪ್ರತೀ ಕ್ಶಣಕ್ಕೂ ಸತ್ತಂತೆ ಆಗುವುದಿಲ್ಲವೆ?

ಹೆಣ್ಣಿನ ಮರು ಮದುವೆಯ ನಿಶೇದದ ಕುರಿತು ಹೆಚ್ಚಿನದಕ್ಕೆ
www.vicharamantapa.net/content/node/53
ಗೆ ಬೇಟಿ ನೀಡಿ.

No comments:

Post a Comment