ದಿವ್ಯನಯನ್ ಇದು ಕಂಪ್ಯೂಟರ್
ಮತ್ತು ಮೊಬೈಲ್ ಸಾಧನಗಳ ಸಹಾಯವಿಲ್ಲದೆ ಮುದ್ರಿತ ಪ್ರತಿಯಲ್ಲಿರುವ ಮಾಹಿತಿಯನ್ನು O C R ಹಾಗೂ TTS ತಂತ್ರಾಂಶಗಳ ನೆರವಿನಿಂದ ಅಂಧರಿಗೆ ವಿದ್ಯುನ್ಮಾನ ಸ್ವರೂಪದಲ್ಲಿ ಮಾಹಿತಿಯನ್ನು ತಲುಪಿಸುವ ವಿಶಿಷ್ಟ ಸಾಧನವಾಗಿದೆ.
ಇದು ಸ್ವಾವಲಂಭನೆಯನ್ನು ಪ್ರೋತ್ಸಾಹಿಸುವ, ಒಂದು ಕಡೆಯಿಂದ ಮತ್ತೊಂದು ಕಡೆಗೆ ಸುಲಭವಾಗಿ ತೆಗೆದುಕೊಂಡು ಹೋಗಬಹುದಾದ, ವೈರ್ಲೆಸ್ ಜಾಲವನ್ನು ಹೊಂದಿರುವ ಸಾಧನವಾಗಿದೆ. ಕಛೇರಿ ಸಿಬ್ಬಂದಿಗಳಿಗೆ,
ವಿದ್ಯಾರ್ಥಿಗಳಿಗೆ ಹಾಗೂ ಪುಸ್ತಕವನ್ನು ಓದುವ ಹವ್ಯಾಸಿ ಅಂಧ ವ್ಯಕ್ತಿಗಳಿಗೆ ಅನುಕೂಲಕ್ಕೆ ಒದಗಬಲ್ಲ ಸಾಧನವಾಗಿದೆ.
ಈ ಸಾಧನದಲ್ಲಿ ಪದದಂತೆ, ವಾಖ್ಯದಂತೆ, ಪ್ಯಾರಗ್ರಾಫ್ನಂತೆ ಹಾಗೂ ಪುಟದಂತೆ ಓದಿಕೊಳ್ಳುವ ಸವಲತ್ತು ಇದೆ. ಪ್ರಸ್ತುತ ಈ ಸಾಧನವು ಬೆಂಗಾಲಿ, ಇಂಗ್ಲಿಷ್ ಹಾಗೂ ಹಿಂದಿ ಭಾಷೆಗಳಿಗೆ ನೆರವಾಗುತ್ತಿದ್ದು,
ಇತರೇ ಭಾರತೀಯ ಭಾಷೆಗಳನ್ನು ಸೇರಿಸಲು ಪ್ರಯತ್ನ ಸಾಗಿದೆ.
ಅಂದಹಾಗೆ ಈ ಸಾಧನವು ಕೇಂದ್ರ ಸರ್ಕಾರದ ಸ್ವಾಯತ್ತ ಸಂಸ್ಥೆಯಾದ Central Scientific Instruments
Organization (CSIO) ರವರಿಂದ ಅನ್ವೇಶಣೆಗೊಂಡು ಅಭಿವೃದ್ಧಿಗೊಳ್ಳುತ್ತಿದೆ.
ವಿನ್ಯಾಸದ ಕಲ್ಪನೆ:
೧. ಈ ಸಾಧನವು ಅಂದಾಜು ಒಂದು ಅಡಿ ಎಡದಿಂದ ಬಲಕ್ಕೆ ಹಾಗೂ ಐದು ಇಂಚು ನಾಲ್ಕು ಮೂಲೆಯ ಸುತ್ತಳತೆಯಿಂದ ಕೂಡಿದೆ. ಸುಳಿವು:
ನಾಲ್ಕು ಮೂಲೆಯ, ಅರ್ಧ ಮೊಳದ ಪೋರ್ಟೇಬಲ್ ಟಾರ್ಚ್ ನೆನಪಿಸಿಕೊಳ್ಳಿರಿ.
೨. ಸಾಧನದ ಮೇಲ್ಭಾಗದ ಎಡಕ್ಕೆ ಸ್ಪೀಕರ್, ಅದರ ಪಕ್ಕ ಡಿಪ್ಯಾಡ್,
ಅದರ ಪಕ್ಕ ಸ್ಪೀಕರ್, ಅದರ ಪಕ್ಕ ಕೀಪ್ಯಾಡ್ ಇವೆ.
೩. ಸಾಧನದ ಎಡ ಪಕ್ಕದಲ್ಲಿ ಚಾರ್ಜಿಂಗ್
ಹಾಗೂ
head phone ಹಾಕಲು ಅವಕಾಶವಿದೆ.
೪. ಸಾಧನದ ಬಲ ಪಕ್ಕದಲ್ಲಿ ಎರಡು USB ಪೋರ್ಟ್
ಹಾಗೂ
LAN ಸಂಪರ್ಕಕ್ಕೆ ಅವಕಾಶವಿದೆ.
5. ಸಾಧನದ ಕೆಳಭಾಗದ ಮುಂಬಾಗದಲ್ಲಿ ಎಡದಿಂದ ಬಲಕ್ಕೆ ಅಂದಾಜು ಒಂದು ಇಂಚಿನ ಅಗಲದ ಸ್ಕ್ಯಾನಿಂಗ್
ಲೆನ್ಸ್
ಚಾಚಿಕೊಂಡಿದೆ.
ಸುಳಿವು ದೊಡ್ಡ ಡೈರಿಮಿಲ್ಕ್
ಚಾಕಲೇಟ್.
೬. ಸ್ಕ್ಯಾನಿಂಗ್ ಲೆನ್ಸ್ ಕೆಳಗೆ ಐದು ರೋಲರ್ಗಳಿವೆ.
ಪುಸ್ತಕದ ಮೇಲೆ ನಾವು ಈ ಸಾಧನವನ್ನು ಮೇಲಿಂದ ಕೆಳಕ್ಕೆ ಅಥವಾ ಎಡದಿಂದ ಬಲಕ್ಕೆ ಎಳೆದಾಗ ಈ ರೋಲಿಂಗ್ಗಳು ತಿರುಗುತ್ತವೆ ಮತ್ತು ಸ್ಕ್ಯಾನಿಂಗ್ ಲೆಂಸ್ಗಳು ಸಕ್ರೀಯವಾಗುವುದರೊಂದಿಗೆ ಮುದ್ರಿತ ಮಾಹಿತಿಯನ್ನು ಸೆರೆಹಿಡಿಯುತ್ತದೆ.
೭. ಹದಿನೈದು ನಿಮಿಷಗಳ ಕಾಲ ಬಳಕೆದಾರರು ಇದನ್ನು ಬಳಸದಿದ್ದಲ್ಲಿ,
ಸಾಧನವು ಬೀಪ್ ಹಾಗೂ ಧ್ವನಿಯ ಸೂಚನೆಯೊಂದಿಗೆ ಶಟ್ ಡೌನ್
ಆಗುತ್ತದೆ.
ಗುಣಲಕ್ಷಣಗಳು:
೧. ಬಳಕೆದಾರರಿಗಾಗಿ 32 GB ಆಂತರಿಕ ಸಂಗ್ರಹ.
2. ತಂತ್ರಾಂಶ ಹಾಗೂ ಫ಼ರ್ಮ್ ವೇರ್ಗಾಗಿ 8GB.
3. ವೈರ್ಲೆಸ್ ಸಂಪರ್ಕವಿದೆ. LAN, Wi-Fi IEEE 802.11, Bluetooth 4.1.
4. ಎರಡು USB ಮೂಲಕ ವಿದ್ಯುನ್ಮಾನ ಮಾಹಿತಿಯನ್ನು ವರ್ಗಾಯಿಸಿಕೊಳ್ಳುವ ಸವಲತ್ತು.
5. .pdf ಹಾಗೂ .docx ಕಡತಗಳಿಗೆ ಪಡೆದ ಮಾಹಿತಿಯನ್ನು ಪರಿವರ್ತಿಸುವ ಸವಲತ್ತು.
6. ಮೂರು ಘಂಟೆಗಳ ಕಾಲ ಕಾರ್ಯನಿರ್ವಹಿಸುವಂತಹ,
ರಿಚಾರ್ಜ್
ಮಾಡಿಕೊಳ್ಳಬಹುದಾದ ಬ್ಯಾಟರಿ ಇದು ಹೊಂದಿದೆ.
7. ಎರಡು ಸ್ಪೀಕರ್ಗಳು ಮತ್ತು ಹೆಡ್ ಫೋನ್
ಸಂಪರ್ಕ.
9. 5(D-Pad)+12(Key-Pad).
ಅ. ಡಿ ಪ್ಯಾಡ್ನಲ್ಲಿ...
ನಾವಿಗೇಷನ್
ಕೀಗಳಾದ
up, down, right, left ಹಾಗೂ ಓ.ಕೆ ಕೀಲಿಗಳು.
ಆ. ಕೀಪ್ಯಾಡ್ನಲ್ಲಿ... 1, 2, 3, 4, 5, 6, 7, 8, 9, *, 0,#
ಕೀಲಿಗಳು.
10. ಈ ಸಾಧನವು
tesseract ಎನ್ನುವ O C R ತಂತ್ರಾಂಶದ ನೆರವಿನಿಂದ ಮುದ್ರಿತ ಅಕ್ಷರವನ್ನು ವಿದ್ಯುನ್ಮಾನಕ್ಕೆ ಪರಿವರ್ತಿಸುತ್ತದೆ.
೧೧. Nuance vocalizer expressive TTS ತಂತ್ರಾಂಶವಿದೆ.
೧೨. 350 ಗ್ರಾಮ್ ತೂಕವಿದೆ.
13. ಈ ಸಾಧನದ ಮೊತ್ತ 15000 ರೂಗಳು. SBI collect ಮೂಲಕ ಪಾವತಿಸಬೇಕಿದೆ.
14. online ಮೂಲಕ ಸಾಧನವನ್ನು ಸಂಪರ್ಕಿಸಿದ್ದಲ್ಲಿ ಹಲವಾರು ಭಾಷೆಗಳು ಒಂದು ಪುಟದಲ್ಲಿದ್ದರೂ ವಿದ್ಯುನ್ಮಾನ ಅಕ್ಷರಗಳಿಗೆ ಪರಿವರ್ತಿಸುತ್ತದೆ.
offline ಮೂಲಕವಾದರೆ, ಪ್ರಾಥಮಿಕ ಭಾಷೆಯನ್ನು ಮಾತ್ರ ಪರಿವರ್ತಿಸುತ್ತದೆ.
೧೫. 10 ಗಾತ್ರದ ಫಾಂಟಿನ ಅಕ್ಷರಗಳನ್ನು ನಿಖರವಾಗಿ ಪರಿವರ್ತಿಸುತ್ತದೆ. 9 ಗಾತ್ರದ ಫಾಂಟಿನ ಅಕ್ಷರಗಳ ಕುರಿತು ಗಮನಹರಿಸುವುದಾಗಿ ಅಭಿವೃದ್ಧಿಗಾರರು ತಿಳಿಸಿರುತ್ತಾರೆ.
16. ಈ ಸಾಧನವನ್ನು ಕೊಳ್ಳಬಯಸುವವರು ಮೊದಲು ಈ ಜಾಲತಾಣದ ಕೊಂಡಿಯ ಮೂಲಕ ನೋಂದಾಯಿಸಿಕೊಳ್ಳಬೇಕು.
https://divyanayan.csio.res.in/registration.php
೧೭. online ಮೂಲಕ ಕೊಳ್ಳುವವರು ಈ ಜಾಲತಾಣಕ್ಕೆ ಭೇಟಿ ನೀಡಿರಿ.
ನೀಡಲಾದ ಕೆಲವು ಸಲಹೆಗಳು:
ದಿನಾಂಕ: 19/01/2020ರಂದು ಆಯೋಜನೆಗೊಂಡಿದ್ದ ಪ್ರಾತ್ಯಕ್ಷಿಕೆಯಲ್ಲಿ ವ್ಯಕ್ತವಾದ ಸಲಹೆಗಳು ಇಂತಿವೆ...
೧. ಸಾಧನವನ್ನು ವಾಟರ್ ಪ್ರೂಫ್ಗೆ ಪರಿವರ್ತನೆಗೊಳಿಸಬೇಕಿದೆ.
೨. ವಯೋಮಾನಕ್ಕನುಗುಣವಾಗಿ ಅಥವಾ ಹಸ್ತದ ಅಳತೆಗನುಗುಣವಾಗಿ ಅಥವಾ ಬಲಗೈ ಹಾಗೂ ಎಡಗೈ ಬಳಕೆದಾರರನ್ನು ಗಮನದಲ್ಲಿರಿಸಿಕೊಂಡು ಸಾಧನವನ್ನು ವಿನ್ಯಾಸಗೊಳಿಸಬೇಕಿದೆ.
೩. ಮುದ್ರಿತ ಪ್ರತಿಯಲ್ಲಿರಬಹುದಾದ ಫ಼ಾರ್ಮ್ಯಾಟ್ಗಳನ್ನು ಇರುವ ಹಾಗೆಯೇ ಸೆರೆಹಿಡಿದು ಡಿಜಿಟಲ್ಗೆ ಪರಿವರ್ತಿಸಬೇಕಿದೆ.
(ಪ್ಯಾರಾಗ್ರಾಫ಼್,
ಹೆಡಿಂಗ್,
ಟೇಬಲ್,
ಅಲೈನ್ಮೆಂಟ್
ಹೀಗೆ).
೪. ಸಾಧನಕ್ಕೆ ಕನ್ನಡವನ್ನು ಅಳವಡಿಸುವ ಕಾರ್ಯ ಪ್ರಯೋಗದ ಹಂತದಲ್ಲಿದ್ದು,
ಆದಷ್ಟು ತ್ವರಿತವಾಗಿ ಬಳಕೆಗೆ ಅನುಷ್ಠಾನಗೊಳಿಸಬೇಕಿದೆ.
5. ಮುದ್ರಿತ ಪ್ರತಿಯ ಮೇಲಿಂದ ಕೆಳಕ್ಕೆ ಸಾಧನವನ್ನು ಎಳೆಯುವಾಗ
tts ತಂತ್ರಾಂಶವು ಓದುವ ಹಾಗೆ ಸವಲತ್ತನ್ನು ಅಳವಡಿಸಬೇಕಿದೆ.
ಅಂದರೆ,
Instant performance ಸವಲತ್ತನ್ನು ಒದಗಿಸಬೇಕಿದೆ.
6. ಸಾಧನದ ಗಾತ್ರ ಹಾಗೂ ಮೊತ್ತ ಕಡಿಮೆಯಾಗಬೇಕಿದೆ.
೭. ಸ್ಕ್ಯಾನ್ ಮಾಡಿದ ಚಿತ್ರವು
online ಹಾಗೂ offline ಈ ಎರಡೂ ವಿಧಾನದಲ್ಲಿ ಅಕ್ಷರಕ್ಕೆ ಪರಿವರ್ತನೆಗೊಳ್ಳುವುದರಲ್ಲಿ ಪ್ರಸ್ತುತ ವೆತ್ಯಾಸಗಳಿದ್ದು, ಎಲ್ಲವನ್ನು ಒಂದೇ ಕ್ಷಮತೆಯ ಪ್ರಕ್ರಿಯೆಗೆ ಒಳಪಡಿಸಬೇಕಿದೆ.
No comments:
Post a Comment