“ನ್ಯಾಯದ ದಾರಿಯಲ್ಲಿದ್ದುಕೊಂಡು ಲೋಕಾನುಬವವನ್ನು ಸ್ವಾನುಬವವಾಗಿಸಿಕೊಂಡು ಸ್ವಾನುಬವಗೊಂಡ ಲೋಕಾನುಬವವನ್ನು ಲೋಕಕ್ಕೆ ಬೇಕಾಗಿಸಿ ಲೋಕವಾಗುವುದು.” mobile-ನಡೆ ಉಲಿ: 9035911023
fly-by-night ಹಗರಣಗಳು ಹೆಚ್ಚಾಗುತ್ತಿವೆ ಮೋಸ ಹೋಗದಿರಿ!
ಸಕರಾತ್ಮಕತೆಯಿಲ್ಲದ ವ್ಯವಹಾರ ಪದ್ಧತಿ ಸುರಕ್ಷಿತವಲ್ಲ:
ಯಾವುದೇ ಒಂದು ಕಂಪನಿಯ ವ್ಯವಹಾರವು ಹೂಡಿಕೆದಾರರಿಗೂ ಮತ್ತು ಗ್ರಾಹಕರಿಗೂ ಭರವಸೆಯಾಗಿರಬೇಕು ಮತ್ತು ತನ್ನ ಆರ್ಥಿಕ ಚಟುವಟಿಕೆಗಳಲ್ಲಿ ವಿಶ್ವಾಸರ್ಹತೆಯನ್ನು ಉಳಿಸಿಕೊಳ್ಳಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ online ಮೂಲಕ ಜನರಿಂದ ಹಣ ಪಡೆದು ವಂಚಿಸುವ ಜಾಲ ಸಕ್ರೀಯವಾಗುತ್ತಿದೆ.
6000000000 ರೂಗಳಷ್ಟು ಹಣವನ್ನು ಹೂಡಿಕೆದಾರರಿಂದ ಪಡೆದು ಅಂದಾಜು ೨ಲಕ್ಷ ಹೂಡಿಕೆದಾರರಿಗೆ ವಂಚಿಸಿ ಕಣ್ಮರೆಯಾದ Adooye.com, ಮೂರು ಲಕ್ಷ ಹೂಡಿಕೆದಾರರಿಗೆ ಮೋಸಗೊಳಿಸಿದ Hoshisms.com, hitasiaonline ಮತ್ತು ಬಲೂ ಚಿಪ್ಸ್ ಕಂಪನಿ ಎಂದು ವಂಚಿಸಿದ EPC Wallet (Easy Pay Cash) ರೀತಿಯ ವೆಬ್ ಆಧಾರಿತ ಜಾಲಗಳು ಇಂತಹ ಘಟನೆಗಳಿಗೆ ಸಾಕ್ಷಿಯಾಗಿವೆ ಮತ್ತು fly-by-night ಎಂಬ ಹಗರಣಗಳು ಹೆಚ್ಚುತ್ತಿವೆ.
ಈ ನೋಂದಾಯಿತವಲ್ಲದ ಕಂಪನಿಗಳ ವಿರುದ್ಧ ಪೋಲಿಸ್ ದೂರು ದಾಖಲಾಗಿದ್ದರೂ, ವಂಚನೆಗೆ ಒಳಗಾದವರಿಗೆ ಪರಿಹಾರ ದೊರೆತಿಲ್ಲ. ಈ ಮಧ್ಯೆ ಇತ್ತೀಚಿನ ದಿನಗಳಲ್ಲಿ ಮತ್ತೊಂದು fly-by-night ಹಗರಣವಾಗಬಲ್ಲ ಲಕ್ಷಣವುಳ್ಳ ಜಾಲವೊಂದು ಸಕ್ರೀಯವಾಗಿದೆ. ಅದೇ Crowd1.com ಜಾಲತಾಣ.
ಕ್ರೌಡ್೧ ಸ್ವೀಡನ್ ಮೂಲದ ಕಂಪನಿ. ಹೂಡಿಕೆದಾರರಿಂದ ಪಡೆದ ಹಣವನ್ನು online ಆಧಾರಿತ ಜೂಜಾಟಗಳಿಗೆ ವಿನಿಯೋಗಿಸುತ್ತಿದೆ.
ಆದಾಯ ತರಬಲ್ಲ ಯೋಜನೆಗಳು ಇವೆ ಎಂದು ಸದಸ್ಯತ್ವ ನೋಂದಣಿಗೆ ಅವಕಾಶವನ್ನು ಕಲ್ಪಿಸಿ ಶ್ರೇಣಿಕೃತ ಮಾದರಿಯಲ್ಲಿ (pyramid structure) ಲಾಭವನ್ನು ನೀಡುತ್ತೇವೆ ಎಂದು ಘೋಷಿಸಿಕೊಂಡಿದೆ. ಅದಾಗ್ಯೂ, ಭಾರತದಲ್ಲಿ ನೋಂದಾಯಿತವಲ್ಲದ, ರಿಸರ್ವ್ ಬ್ಯಾಂಕ್ ಮೂಲಕ ಮಾನ್ಯತೆ ಪಡೆಯದ ಯಾರೊಬ್ಬರಿಗೂ ಖಾತ್ರಿ ನೀಡಲಾರದ ಕಂಪನಿಗೆ ಹಣವನ್ನು ಹಾಕಬಾರದು. ಈಗಾಗಲೇ ವಿದೇಶಗಳಲ್ಲಿ ಈ ಕಂಪನಿಯನ್ನು ಉತ್ತೇಜಿಸಿದ್ದಕ್ಕಾಗಿ ಕೆಲವರನ್ನು ಪೋಲಿಸರು ಬಂಧಿಸಿದ್ದಾರೆ. bitcoin ಮಾದರಿಯಲ್ಲಿ ಇದರ ಹಣದ ಚಲಾವಣೆ ನಡೆಯುತ್ತದೆ. ನಮ್ಮ ರಾಜ್ಯದ ಜನರು ಕೂಡ ಈಗಾಗಲೇ ಹಣವನ್ನು ಹೂಡಿದ್ದಾರೆ, ವಿನಿಯೋಗಿಸುವಂತೆ ಮತ್ತೊಬ್ಬರಿಗೂ ಪ್ರೇರಣೆ ನೀಡುತ್ತಿದ್ದಾರೆ. ದಯವಿಟ್ಟು ಕಂಪನಿಯ ಅಸಲಿಯನ್ನು ಕಂಡು ಬಳಿಕವೇ ಹಣವನ್ನು ವಿನಿಯೋಗಿಸಿರಿ.
ಕೆಲವು ಪ್ರಶ್ನೆಗಳಿಗೆ ಉತ್ತರ ಪಡೆಯಬೇಕಿದೆ!
ಈ ಕಂಪನಿಯನ್ನು ಉತ್ತೇಜಿಸುವವರೂ ಇರುವಂತೆ ನಿಂದಿಸುವವರೂ ಇದ್ದಾರೆ. ಆದರೆ ಹೂಡಿಕೆದಾರರು ಈ ಕೆಲವು ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಬೇಕಿದೆ. ಅವು ಯಾವವೆಂದರೆ,
೧. ಕಂಪನಿಯ ಸೇವೆಗಳು-ಉತ್ಪನ್ನಗಳು ಸಮಾಜಕ್ಕೆ ಹಿತಕರವಾಗಿವೆಯೆ?
೨. ಹೂಡಿಕೆಯಾದ ಹಣವು ಸಕರಾತ್ಮಕ ಮತ್ತು ನೈತಿಕ ಮೌಲ್ಯದ ಚೌಕಟ್ಟಿನಲ್ಲಿ ಬಳಕೆಯಾಗುತ್ತವೆಯೆ?
೩. ಗ್ರಾಹಕರ ಮತ್ತು ಹೂಡಿಕೆದಾರರ ಕುಂದು-ಕೊರತೆಗಳನ್ನು ನಿವಾರಿಸಲು ನಮ್ಮ ದೇಶದಲ್ಲಿ ಕಛೇರಿ ಇವೆಯೆ?
೪. ಸರ್ಕಾರದಿಂದ ಪರವಾನಗಿ ಪಡೆದಿದೆಯೆ?
೫. ನಾವು ಹಾಕುವ ಹಣವು ಜಮೆಯಾಗುವ ಬ್ಯಾಂಕ್ ವಿವರಗಳು ನಮಗೆ ಎಲ್ಲಿ ದೊರೆಯುತ್ತವೆ?
೬. ಕಂಪನಿಯ ಸಂಸ್ಥಾಪಕ ಹಾಗೂ ಕಂಪನಿಯ ಆಡಳಿತ ಸದಸ್ಯರ ವಾಸದ ಸ್ಥಳ ಯಾವುದು?
ನಿರ್ದಾರ ನಿಮಗೆ:
ಈ ಕಂಪನಿಯ ಮೇಲೆ ಹಣವನ್ನು ಹೂಡುವ ಕಡೆಯ ತೀರ್ಮಾನ ನಿಮ್ಮದೇ ಆಗಿದೆ. ಅದಾಗ್ಯೂ ಎಚ್ಚರವಹಿಸಬೇಕೆಂಬ ಕಾಳಜಿ ಮಾತ್ರ ಇಲ್ಲಿ ವ್ಯಕ್ತಪಡಿಸಲಾಗಿದೆ.
ಹೆಚ್ಚಿನ ವಿವರಗಳಿಗೆ:
1. ಈ ಕಂಪನಿಯನ್ನು ಉತ್ತೇಜಿಸುವ ಜಾಲತಾಣ: https://www.heroesmind.com/crowd1-review/
೨. ಈ ಕಂಪನಿಯ ನೈಜತೆಗಾಗಿ: https://www.quora.com/Is-Crowd1-business-a-scam
3. ಈ ಕಂಪನಿಯ ಆದಾಯ ನೀತಿಯನ್ನು ತಿಳಿದುಕೊಳ್ಳಲು ಕಂಪನಿಯ ಜಾಲತಾಣವನ್ನು ನೋಡಿರಿ. https://crowd1.com/income-disclaimer
Subscribe to:
Posts (Atom)