“ನ್ಯಾಯದ ದಾರಿಯಲ್ಲಿದ್ದುಕೊಂಡು ಲೋಕಾನುಬವವನ್ನು ಸ್ವಾನುಬವವಾಗಿಸಿಕೊಂಡು ಸ್ವಾನುಬವಗೊಂಡ ಲೋಕಾನುಬವವನ್ನು ಲೋಕಕ್ಕೆ ಬೇಕಾಗಿಸಿ ಲೋಕವಾಗುವುದು.” mobile-ನಡೆ ಉಲಿ: 9035911023
ವಿದ್ಯೆಯ ಪಡೆಯುತ ವಿದ್ಯೆಯ ಹಂಚುತ
|ಪ| ವಿದ್ಯೆಯ ಪಡೆಯುತ ವಿದ್ಯೆಯ ಹಂಚುತ
ಬೇದವ ಮಾಡದೆ, ಎರಡನು ಬಗೆಯದೆ
ಜನರೊಳು ಬೆರೆಯುವೆ, ನಿನ್ನಲಿ ಸೇರುವೆ
|1| ಕಶ್ಟವೆ ಅಪ್ಪಲಿ ನಿನ್ನೊಳು ಇರುವೆನು
ಸುಕವೆ ತಬ್ಬಲಿ ನಿನ್ನೊಳು ಇರುವೆನು
ನೆಮ್ಮದಿ ಬದುಕಿಗೆ ಜಗಳವ ಆಡೆನು
ತಾಳ್ಮೆಯ ತಂತಿಯ ಮೇಲೆಯೆ ಇರುವೆನು
|2| ದುಡ್ಡಿನ ಕಾಲಿಗೆ ಬೀಳದೆ ಬದುಕುವೆ
ಸುಗುಣದ ನೆರಳಲಿ ಅನುದಿನ ಬದುಕುವೆ
ಲೋಕದ ನೆನಪಲಿ ಅಳಿಯದೆ ಉಳಿಯುವೆ
ನಿನ್ನಯ ಊರಿಗೆ ನಲಿವಲಿ ಸೇರುವೆ
Subscribe to:
Posts (Atom)